ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-4 ಸಂಸ್ಕೃತಿ ಮತ್ತು ಸಾಮಾಜೀಕರಣ ನೋಟ್ಸ್‌ | 1st PUC Sociology Chapter 4 Question Answer

ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-4 ಸಂಸ್ಕೃತಿ ಮತ್ತು ಸಾಮಾಜೀಕರಣ ನೋಟ್ಸ್‌, 1st PUC Sociology Chapter 4 Question Answer Mcq Notes in Kannada Medium, Kseeb Solution For Class 11 Sociology Chapter 4 Question Answer 1st puc sociology notes in kannada chapter 4, Culture and Socialization Notes in Kannada

 

ಅಧ್ಯಾಯ-4 ಸಂಸ್ಕೃತಿ ಮತ್ತು ಸಾಮಾಜೀಕರಣ ನೋಟ್ಸ್‌

1st PUC Sociology Chapter 4 Question Answer

1st Puc Sociology Notes in Kannada Chapter 4

I. ಒಂದು ಅಂಕದ ಪ್ರಶ್ನೆಗಳು : ( ಒಂದು ವಾಕ್ಯದಲ್ಲಿ ಉತ್ತರಿಸಿ )

1 ) “ ಸಂಸ್ಕೃತಿ ” ಪದದ ನಿಷ್ಪತ್ತಿ ತಿಳಿಸಿ .

“ ಸಂಸ್ಕೃತಿ ” ಎಂಬ ಪದಕ್ಕೆ ತತ್ಸಮಾನವಾದ ಇಂಗ್ಲೀಷ್ ಪದ “ ಕಲ್ಚರ್ ” ಎಂಬ ಪದವು ಲ್ಯಾಟಿನ್ ಭಾಷೆಯ “ ಕೊಲೆರ್ ” ಎಂಬ ಪದದಿಂದ ಬಂದಿದೆ , ಕೊಲೆರ್ ಎಂದರೆ “ ಬೆಳೆಸು ” ಕೃಷಿಮಾಡು ಎಂದರ್ಥವಾಗುತ್ತದೆ .‌

2 ) “ ಸಂಸ್ಕೃತಿ ” ಎಂದರೇನು ?


ಪ್ರಾಣಿ ಸಮಾಜದಿಂದ ಮಾನವ ಸಮಾಜವನ್ನು ಬೇರ್ಪಡಿಸುವ ಮಾನದಂಡ ಅಥವಾ ವಿಶಿಷ್ಟ ಲಕ್ಷಣವೇ “ ಸಂಸ್ಕೃತಿಯಾಗಿದೆ .

ಸಮಾಜದ ಸದಸ್ಯರಾಗಿದ್ದುಕೊಂಡು ವ್ಯಕ್ತಿಗಳು ಕಲಿತಿರುವ ಅಂಶಗಳ ಸಮಸ್ಟಿಗೆ “ ಸಂಸ್ಕೃತಿ ” ಎನ್ನುವರು .

3 ) ಸಂಸ್ಕೃತಿಯು ಜನ್ಮಜಾತವಾದುದೇ ?

ಸಂಸ್ಕೃತಿ ಜನ್ಮಜಾತವಾದುದಲ್ಲ , ಇದು ಅರ್ಜಿತವಾದುದು ಅಥವಾ ಕಲಿಕೆಯಿಂದ ಬರುವಂಥಹುದು .

4 ) ಸಂಸ್ಕೃತಿಯ ಗಳಿಸಿದ ಲಕ್ಷಣವೇನು ?

ಧನ್ಯವಾದ ಸಮರ್ಪಿಸುವುದು , ನಮಸ್ಕರಿಸುವುದು , ಕೈ ಕುಲುಕುವುದು , ನಿರ್ದಿಷ್ಟ ಶೈಲಿಯಲ್ಲಿ ಸೀರೆ ಉಡುವುದು , ಪೂಜೆ ಮಾಡುವುದು , ಇತ್ಯಾದಿಗಳು ಸಂಸ್ಕೃತಿಯು ಗಳಿಸಿದ ಲಕ್ಷಣಗಳಾಗಿವೆ .

5 ) ಸಂಸ್ಕೃತಿಯು ವೈಯಕ್ತಿಕವಾದುದೇ ?

ಸಂಸ್ಕೃತಿಯು ವೈಯಕ್ತಿಕವಾದುದಲ್ಲ ಸ್ವಭಾವತಃ ಸಂಸ್ಕೃತಿ ಸಾಮಾಜಿಕವಾದುದ್ದು .

6 ) ಭೌತ ಸಂಸ್ಕೃತಿಯಲ್ಲಿ ಸೇರ್ಪಡೆಯಾಗುವ ಕೆಲವೊಂದು ಸಂಗತಿಗಳನ್ನು ಹೆಸರಿಸಿ .

 • ಭೌತ ಸಂಸ್ಕೃತಿಯಲ್ಲಿ ಸೇರ್ಪಡೆಯಾಗುವ ಕೆಲವೊಂದು ಸಂಗತಿಗಳೆಂದರೆ ಈ ಸಂಸ್ಕೃತಿಯ ದೃಷ್ಟಿಗೋಚರವಾಗುವಂತಹುದು .
 • ಮಾನವ ನಿರ್ಮಿತವಾದ ಮನೆ , ಕಟ್ಟಡ , ಯಂತ್ರೋಪಕರಣಗಳು , ವಾಹನಗಳು ಇತ್ಯಾದಿ .
 • ಹಣ , ಬ್ಯಾಂಕ್ ಇತ್ಯಾದಿ .

7 ) ಅಭೌತ ಸಂಸ್ಕೃತಿಯಲ್ಲಿ ಸೇರ್ಪಡೆಯಾಗುವ ಕೆಲವೊಂದು ಸಂಗತಿಗಳನ್ನು ಹೆಸರಿಸಿ

ಅಭೌತ ಸಂಸ್ಕೃತಿಯಲ್ಲಿ ಸೇರ್ಪಡೆಯಾಗುವ ಕೆಲವೊಂದು ಸಂಗತಿಗಳೆಂದರೆ “ ಮಾನವನ ಮೌಲ್ಯಗಳ ಭಾವನಾತ್ಮಕ ಮತ್ತು ಮಾನಸಿಕ ಅಂಶಗಳು ಇವು ಸ್ಪರ್ಶ ಸಾಧ್ಯವಿಲ್ಲದ ಎಲ್ಲಾ ವಸ್ತುಗಳನ್ನು ಅಭೌತ ಸಂಸ್ಕೃತಿಯಲ್ಲಿ ಸೇರ್ಪಡೆಗೊಳ್ಳುವ ಸಂಗತಿಗಳಾಗಿವೆ .

8 ) “ ಸಾಂಸ್ಕೃತಿಕ ಹಿಂಬೀಳುವಿಕೆ ” ಕಲ್ಪನೆಯನ್ನು ಪರಿಚಯಿಸಿದವರು ಯಾರು ?

“ ಸಾಂಸ್ಕೃತಿಕ ಹಿಂಬೀಳುವಿಕೆ ” ಕಲ್ಪನೆಯನ್ನು ಪರಿಚಯಿಸಿದವರು * ಆಗ್‌ಬರ್ನ್‌ರವರು .

9 ) ಸಾಮಾಜೀಕರಣ ಎಂದರೇನು ?

ವ್ಯಕ್ತಿಯನ್ನು ಸಾಮಾಜಿಕ ವ್ಯಕ್ತಿಯನ್ನಾಗಿ ಪರಿವರ್ತಿಸುವ ಈ ಪ್ರಕ್ರಿಯೆಯನ್ನು “ ಸಾಮಾಜೀಕರಣ ” ಎಂದು ಕರೆಯುವರು .

10 ) ಸಾಮಾಜೀಕರಣದ ವ್ಯಾಖ್ಯೆ ನೀಡಿ .

 • ಹ್ಯಾರಿ ಎಂ.ಜಾನ್‌ಸನ್ ರವರ ಪ್ರಕಾರ “ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಲು ಪಾತ್ರದಾರಿಯನ್ನು ಸಮರ್ಥನಾಗಿರುವ ಕಲಿಕೆಯೇ ಸಾಮಾಕೀಕರಣ ” ಎಂದಿದ್ದಾರೆ .
 • ಆಗಬರ್ನ್ ಮತ್ತು ನಿಮ್‌ಕಾಫ್ ರವರ ಪ್ರಕಾರ * ವ್ಯಕ್ತಿಯು ಗುಂಪಿನ ಪ್ರಮಾಣಿಕಗಳಿಗೆ ಅನುವರ್ತಿಸುವುದನ್ನು ಕಲಿಯುವ ಪ್ರಕ್ರಿಯೆಗೆ ಸಾಮಾಜೀಕರಣ ” ಎಂದಿದ್ದಾರೆ .
 • ಹೆಚ್.ಟಿ. ಮಂಜುದಾರ್ ರವರ ಪ್ರಕಾರ “ ಮೂಲಭೂತ ಸ್ವಭಾವವು ಮಾನವ ಸ್ವಭಾವವಾಗಿ ಬದಲಾವಣೆಯಾಗುವ ಮತ್ತು ವ್ಯಕ್ತಿಯು ಒಬ್ಬ ಮಾನವನಾಗಿ ಪರಿವರ್ತಿತವಾಗುವ ಪ್ರತೀತಿಯೇ ಸಾಮಾಜಿಕರಣ ”

11 ) ಸಾಮಾಜೀಕರಣ ಒಂದು ಜೈವಿಕ ಪ್ರಕ್ರಿಯೆಯೇ ?

ಜೈವಿಕ ಅರ್ಥದಲ್ಲಿ ಮಾತ್ರ ವ್ಯಕ್ತಿ ಹುಟ್ಟಿನಿಂದ ಮಾನವ ಜೈವಿಕ ಅಗತ್ಯಗಳೊಂದಿಗೆ ಸಮಾಜಜೀವಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಸಾಮಾಜೀಕರಣವಾಗಿದೆ ಅಂದ ಮೇಲೆ ಸಾಮಾಜೀಕರಣವು ಒಂದು ಜೈವಿಕ ಪ್ರಕ್ರಿಯೆಯಾಗಿದೆ .

12 ) ಸಾಮಾಜೀಕರಣ ಒಂದು ಕಲಿಕೆಯ ಪ್ರಕ್ರಿಯೆಯೇ ?

ಹೌದು , ಸಾಮಾಜೀಕರಣವು ಕಲಿಕೆಯ ಪ್ರಕ್ರಿಯೆಯಾಗಿದೆ .

13 ) ಪ್ರಾಥಮಿಕ ಗುರುತಿಸುವಿಕೆ ಎಂದರೇನು ?

ಗರ್ಭಾವಸ್ಥೆಯಲ್ಲಿ ಮಗುವಿನ ವ್ಯಕ್ತಿತ್ವದಲ್ಲಿ ಅದರ ಪಾತ್ರ ಮತ್ತು ತಾಯಿಯ ಪಾತ್ರಗಳ ನಡುವೆ ಬಹುಶಃ ಸ್ಪಷ್ಟವಾದ ವ್ಯತ್ಯಾಸ ಗುರುತಿಸಲಾಗದು . ತಾಯಿ ಮತ್ತು ಮಗು ಐಕ್ಯರಾಗಿರುತ್ತಾರೆ . ಈ ಹಂತವನ್ನು “ ಪ್ರಾಥಮಿಕ ಗುರುತಿಸುವಿಕೆ ” ಎನ್ನುವರು .

14 ) “ ಈಡಿಪಲ್ ಕಾಂಪ್ಲೆಕ್ಸ್ ” ಎಂದರೇನು ?

ಮಗುವು ಕುಟುಂಬದ ಪೂರ್ಣ ಪ್ರಮಾಣದ ಸದಸ್ಯನಾಗುವ ಹಂತವೆಂದರೆ ನಾಲ್ಕನೇ ವರ್ಷದಿಂದ ಹರೆಯದವರೆಗಿನ ಅಂದರೆ ಸುಮಾರು 12 ರಿಂದ 13 ನೇ ವರ್ಷದವರೆಗೆ ಇರುವ ಹಂತವನ್ನು ಈಡಿಪಲ್‌ಕಾಂಪ್ಲೆಕ್ಸ್ ಎನ್ನುವರು .

15 ) “ ಎಲೆಕ್ಟ್ರಾ ಕಾಂಪ್ಲೆಕ್ಸ್ ” ಎಂದರೇನು ?

ಈಡಿಪಲ್ ಪ್ರವೃತ್ತಿ ಎಂಬುದು ತಾಯಿಗಾಗಿ ಆದ ಪೈಪೋಟಿಯಲ್ಲಿ , ಮಗನಾದವನಿಗೆ ತಂದೆಯ ಮೇಲೆ ಬರುವ ಈರ್ಷ್ಯೆ , ಹುಡುಗಿಗೆ “ ಎಲೆಕ್ಟ್ರಾ ಪ್ರವೃತ್ತಿ ” ಅಥವಾ “ ಎಲೆಕ್ಟ್ರಾ ಕಾಂಪ್ಲೆಕ್ಸ್ * ಎನ್ನುವರು .

16 ) ಸಾಮಾಜೀಕರಣದ ಯಾವುದಾದರೂ ಎರಡು ನಿಯೋಗಗಳನ್ನು ಹೆಸರಿಸಿ .

ಸಾಮಾಜೀಕರಣದ ಎರಡು ನಿಯೋಗಿಗಳೆಂದರೆ

1. ಔಪಚಾರಿಕ ನಿಯೋಗಿಗಳು 2. ಅನೌಪಚಾರಿಕ ನಿಯೋಗಿಗಳು

17 ) ಶಾಲೆಯು ಔಪಚಾರಿಕ ಸಾಮಾಜೀಕರಣದ ನಿಯೋಗಿಯೇ ?

ಹೌದು , ಶಾಲೆಯು ಔಪಚಾರಿಕ ಸಾಮಾಜೀಕರಣವಾಗಿದೆ .

18 ) ಸಮವಯಸ್ಕರು ಎಂದರೆ ಯಾರು ?

ಸಾಮಾಜೀಕರಣದ ನಿಯೋಗಿಗಳಲ್ಲಿ ಸಮವಯಸ್ಕರು ಕುಟುಂಬದ ನಂತರದ ಸ್ಥಾನದಲ್ಲಿ ಬರುವವರಾಗಿದ್ದಾರೆ . ಮಗುವಿನ ಸಮವಯಸ್ಸಿನವರು , ಜೊತೆ ಆಟಗಾರರು , ಸಮಾನ ಅಂತಸ್ತು ಹೊಂದಿದವರು , ನಿಕಟ ಸ್ನೇಹಿತರು ಒಂದು ತರಗತಿಯಲ್ಲಿ ಓದುತ್ತಿರುವವರನ್ನು ಸಮವಯಸ್ಕರು ಎನ್ನುವರು .

1st Puc Samskruthi Mattu Samajikarana Notes in Kannada

II . ಎರಡು ಅಂಕದ ಪ್ರಶ್ನೆಗಳು : ( 2-3 ವಾಕ್ಯದಲ್ಲಿ ಉತ್ತರಿಸಿ )

1 ) ಸಂಸ್ಕೃತಿಯನ್ನು ವ್ಯಾಖ್ಯಾನಿಸಿ .

‘ ಮ್ಯಾಲಿನಾಯ್ಕ ‘ ರವರು ಮಾನವ ತನ್ನ ಜೀವಿತದ ಗೊತ್ತುಗುರಿಗಳನ್ನು ಈಡೇರಿಸಿಕೊಳ್ಳಲು ಮಾನವನೇ ನಿರ್ಮಿಸಿಕೊಂಡಂತಹ ಸಾಧನಗಳೇ ಸಂಸ್ಕೃತಿ ” ಎಂದು ಹೇಳಿದ್ದಾರೆ .

“ ಎಡ್ವರ್ಡ್ ಬಿ ಟೈಲರ್ ” , ಎಂಬುವರು ‘ ಜ್ಞಾನ , ನಂಬಿಕೆ , ಕಲೆ , ಕಾನೂನು ನೈತಿಕ ನಿಯಮ , ರೂಢಿ ಮತ್ತು ಮಾನವನು ತನ್ನ ಸಮಾಜದ ಸದಸ್ಯನಾಗಿದ್ದುಕೊಂಡು ಸಾಧಿಸಿದ ಇನ್ನುಳಿದ ಸಾಮರ್ಥ್ಯಗಳನ್ನು ನೈಋಣ್ಯಗಳನ್ನು ಒಳಗೊಂಡಿರುವ ಅಖಂಡವಾದ ಒಂದು ಸಂಕೀರ್ಣ ವ್ಯವಸ್ಥೆ ” ಎಂದಿದ್ದಾರೆ .

‘ ರಾಬರ್ಟ್‌ ಬೈರ್ಸ್ಮೈಡ್ ರವರ ಪ್ರಕಾರ “ ಸಂಸ್ಕೃತಿಯು ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಅದು ನಾವು ಯೋಚಿಸುವ ನಿರ್ವಹಿಸುವ ಹಾಗೂ ನಾವು ಹೊಂದಿದ ಎಲ್ಲಾ ಸಂಗತಿಗಳನ್ನು ಒಳಗೊಂಡಿದೆ .

2 ) ಸಂಸ್ಕೃತಿಯ ಯಾವುದಾದರೊಂದು ಲಕ್ಷಣವನ್ನು ವಿವರಿಸಿ .

ಸಂಸ್ಕೃತಿಯ ಒಂದು ಲಕ್ಷಣವೆಂದರೆ ಸಂಸ್ಕೃತಿ ಅರ್ಜಿತವಾದುದು ಅಥವಾ ಕಲಿಕೆಯಿಂದ ಬರುವಂತಹುದು : ಸಂಸ್ಕೃತಿ ಹುಟ್ಟಿನಿಂದ ಬರುವ ಸಂಗತಿಯಲ್ಲ . ಇದನ್ನು ಕಲಿತುಕೊಳ್ಳಲಾಗಿದೆ ಅಥವಾ ಸಾಮಾಜೀಕರಣದಲ್ಲಿ ಕಲಿತುಕೊಂಡಿದ್ದು ಏನಿದೆಯೋ ಅದುವೇ ಸಂಸ್ಕೃತಿ , ಹಾಗಾಗಿ ಕೈಕಾಲಿರುವುದು , ಧನ್ಯವಾದ ಸಮರ್ಪಿಸುವುದು , ನಿರ್ದಿಷ್ಟ ಶೈಲಿಯಲ್ಲಿ ಸೀರೆ ತೊಡುವುದು , ಪೂಜೆ ಮಾಡುವುದು ಇತ್ಯಾದಿ ಎಲ್ಲವೂ ಗಳಿಸಿದವು , ಹಾಗಾಗಿ ಇವೆಲ್ಲವೂ ಸಾಂಸ್ಕೃತಿಕವಾದವು .

3 ) ಸ್ವಭಾವತಃ ಸಂಸ್ಕೃತಿ ಸಾಪೇಕ್ಷವಾದುದೇ ?

ಹೌದು , ಸ್ವಭಾವತಃ ಸಂಸ್ಕೃತಿ ಸಾಪೇಕ್ಷವಾದುದಾಗಿದೆ “ ಸಂಸ್ಕೃತಿಗೆ ಕಾಲದಿಂದ ಕಾಲಕ್ಕೆ ಮತ್ತು ಸಮಾಜದಿಂದ ಸಮಾಜಕ್ಕೆ ವ್ಯತ್ಯಾಸವಾಗುತ್ತದೆ . ಕೆಲವೊಂದು ಸಾಂಸ್ಕೃತಿಕ ಸಾರ್ವತ್ರಿಕಗಳು ಕಂಡು ಬರಬಹುದಾದರೂ ಸಮಾಜದಿಂದ ಸಮಾಜಕ್ಕೆ ಸಂಸ್ಕೃತಿಯಲ್ಲಿ

ವ್ಯತ್ಯಾಯಾಸಗಳು ಕಂಡುಬರುತ್ತವೆ . ಸಂಪ್ರದಾಯ , ನೈತಿಕ ನಿಯಮ , ಲೋಕರೂಢಿ , ಕಲಾಪ್ರಕಾರಗಳು , ಊಟೋಪಚಾರದ ವಿಧಾನಗಳು , ಮೌಲ್ಯವ್ಯವಸ್ಥೆ , ಸಂಸ್ಥೆಗಳು ಇತ್ಯಾದಿಗಳಲ್ಲಿ ಕುತೂಹಲಕಾರಿ ವ್ಯತ್ಯಾಸಗಳನ್ನು ಸಂಸ್ಕೃತಿಗಳೊಳಗೆ ಕಾಣಬಹುದಾಗಿದೆ . ಸಂಸ್ಕೃತಿ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ . ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ .

4 ) ಭೌತ ಸಂಸ್ಕೃತಿ ಎಂದರೇನು ?

ಮಾನವನು ತನ್ನ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸೃಷ್ಟಿಸಿರುವ ಭೌತವಸ್ತುಗಳಿಗೆಲ್ಲಾ ‘ ಭೌತ ಸಂಸ್ಕೃತಿ ‘ ಎನ್ನುವರು . ಮಾನವನು ರೂಪಿಸಿದ ಎಲ್ಲಾ ದೃಶ್ಯ ಹಾಗೂ ಸ್ಪರ್ಶ ಸಾಧ್ಯ ವಸ್ತುಗಳನ್ನು ಭೌತ ಸಂಸ್ಕೃತಿ ಎಂದು ಕರೆದಿದ್ದಾರೆ .

5 ) ಅಭೌತ ಸಂಸ್ಕೃತಿ ಎಂದರೇನು ?

ದೃಶ್ಯ ಹಾಗೂ ಸ್ಪರ್ಶ ಸಾಧ್ಯವಾಗದ ವಸ್ತುಗಳನ್ನು ಅಭೌತ ಸಂಸ್ಕೃತಿ ಎಂದು ಕರೆದಿದ್ದಾರೆ , ಭಾಷೆ , ನಂಬಿಕೆ , ಮೌಲ್ಯಗಳು , ಹವ್ಯಾಸಗಳು , ಸಂಸ್ಕಾರಗಳು ಮತ್ತು ಆಚರಣೆಗಳು , ಆಲೋಚನೆಗಳು ಮತ್ತು ಆದರ್ಶಗಳು ಅಭೌತ ಸಂಸ್ಕೃತಿಗಳಾಗಿವೆ . ಅಭೌತ ಸಂಸ್ಕೃತಿಯು ಮಾನವನ ಮೌಲ್ಯಗಳ ಭಾವನಾತ್ಮಕ ಮತ್ತು ಮಾನಸಿಕ ಅಂಶಗಳನ್ನು ಒಳಗೊಂಡಿರುತ್ತದೆ .

6 ) ಸಾಂಸ್ಕೃತಿಕ ಹಿಂಬೀಳುವಿಕೆ ಎಂದರೇನು ?

ಭೌತ ಮತ್ತು ಅಭೌತ ಸಂಸ್ಕೃತಿಗಳ ನಡುವಿನ ಕಂದಕವನ್ನು ಸೂಚಿಸಲು “ ಸಾಂಸ್ಕೃತಿಕ ಹಿಂಬೀಳುವಿಕೆ ” ಎನ್ನುವರು . “ ಆಗ್‌ಬರ್ಗ್ ” ರವರ ಮಾತುಗಳಲ್ಲಿ ಹೇಳುವುದಾದರೆ “ ಅಸಮ ವೇಗದಲ್ಲಿ ಬದಲಾಗುವ ಸಂಸ್ಕೃತಿಯು ಪರಸ್ಪರ ಸಂಬಂಧಿತ ಭಾಗಗಳ ನಡುವೆ ಇರುವ ಪ್ರಯಾಸವನ್ನು ಸಾಂಸ್ಕೃತಿಕ ಹಿಂಬೀಳುವಿಕೆ ” ಎಂದು ಅರ್ಥೈಸಬಹುದಾಗಿದೆ .

7 ) ಸಾಮಾಜೀಕರಣ ಎಂದರೇನು ?

ಜೈವಿಕ ಜೀವಿಯನ್ನು ಸಮಾಜಜೀವಿಯಾಗಿ , ವ್ಯಕ್ತಿಯನ್ನು ಸಾಮಾಜಿಕ ವ್ಯಕ್ತಿಯನ್ನಾಗಿ ಬದಲಿಸುವ ಈ ಪ್ರಕ್ರಿಯೆಯನ್ನು “ ಸಾಮಾಜೀಕರಣ ” ಎಂದು ಅರ್ಥೈಸಬಹುದು . ಹೆಚ್.ಬಿ. ಮಂಜುದಾರ್ ರವರು ಹೇಳಿರುವಂತೆ “ ಮೂಲಭೂತ ಸ್ವಭಾವವು ಮಾನವ ಸ್ವಭಾವವಾಗಿ ಬದಲಾವಣೆಯಾಗುವ ಮತ್ತು ವ್ಯಕ್ತಿಯು ಒಬ್ಬ ಮಾನವನಾಗಿ ಪರಿವರ್ತಿತವಾಗುವ ಪ್ರಕ್ರಿಯೆಯೇ ” ಸಾಮಾಜೀಕರಣವಾಗಿದೆ .

8 ) ಸಾಮಾಜೀಕರಣ ಒಂದು ಪ್ರಕ್ರಿಯೆ ಹೇಗೆ ?

ಹೌದು , ಸಾಮಾಜಿಕರಣ ಒಂದು ಪ್ರಕ್ರಿಯೆಯಾಗಿದೆ ವ್ಯಕ್ತಿಯನ್ನು , ಸಾಮಾಜಿಕ ವ್ಯಕ್ತಿಯನ್ನಾಗಿ ಬದಲಾಯಿಸುವ ಪ್ರಕ್ರಿಯೆಯಾಗಿದೆ , ಆದ್ದರಿಂದ ಸಾಮಾಜೀಕರಣ ಒಂದು ಪ್ರಕ್ರಿಯೆಯಾಗಿದೆ .

9 ) ಸಾಮಾಜೀಕರಣದ ಹಂತಗಳನ್ನು ಹೆಸರಿಸಿ .

ಸಾಮಾಜೀಕರಣದಲ್ಲಿ ನಾಲ್ಕು ಹಂತಗಳಿವೆ ಅವುಗಳೆಂದರೆ 1. ಮೌಖಿಕ ಹಂತ 2. ಶೌಚ ಹಂತ 3. ಈಡಿಪಲ್ ಹಂತ 4. ಕಿಶೋರಾವಸ್ಥೆಯ ಹಂತ

10 ) ಪ್ರಾಥಮಿಕ ಗುರುತಿಸುವಿಕೆ ಎಂದರೇನು ?

ಗರ್ಭಾವಸ್ಥೆಯಲ್ಲಿ ಮಗುವಿನ ವ್ಯಕ್ತಿತ್ವದಲ್ಲಿ ಅದರ ಪಾತ್ರ ಮತ್ತು ತಾಯಿಯ ಪಾತ್ರಗಳ ನಡುವೆ ಬಹುಶಃ ಸ್ಪಷ್ಟವಾದ ವ್ಯತ್ಯಾಸ ಗುರುತಿಸಲಾಗದು . ತಾಯಿ ಮತ್ತು ಮಗು ಐಕ್ಯರಾಗಿರುತ್ತಾರೆ . ಈ ಹಂತವನ್ನು “ ಪ್ರಾಥಮಿಕ ಗುರುತಿಸುವಿಕೆ ” ಎನ್ನುವರು .

11 ) ಮೌಖಿಕ ಬಿಕ್ಕಟ್ಟು ಎಂದರೇನು ?

ಜನನದಿಂದ ಪ್ರಾರಂಭವಾಗಿ ಮಗುವಿಗೆ ವರ್ಷವಾಗುವವರೆಗೆ ಮುಂದುವರಿಯುತ್ತದೆ . ಇದನ್ನು ಮೌಖಿಕ ಹಂತ ಎನ್ನುವರು . ಗರ್ಭದಲ್ಲಿ ಮಗುವು ಭ್ರೂಣರೂಪದಲ್ಲಿ ಬೆಚ್ಚಗೆ ಸುಖವಾಗಿರುತ್ತದೆ . ಜನನದ ನಂತರ ಅದು ಉಸಿರಾಡಲು , ಆಹಾರಕ್ಕಾಗಿ ತೇವಾ ಮತ್ತಿತರ ಸ್ಥಿತಿಗಳಿಗೆ ಅಳುತ್ತದೆ . ಇದನ್ನು ಮಗುವಿನ ಮೊದಲ ಮೌಖಿಕ ಬಿಕ್ಕಟ್ಟು ಎನ್ನುವರು .

12 ) ಶೌಚ ಹಂತದ ಬಿಕ್ಕಟ್ಟು ಎಂದರೇನು ?

ಮೊದಲನೆಯ ವರ್ಷದ ಪ್ರಾರಂಭವಾಗಿ ಮೂರನೆಯ ವರ್ಷದಲ್ಲಿ ಮುಕ್ತಾಯವಾಗುತ್ತದೆ . ಈ ಅವಧಿಯ ಬಿಕ್ಕಟ್ಟನ್ನು “ ಶೌಚ ಬಿಕ್ಕಟ್ಟು ” ಎಂದು ಕರೆಯುವರು .

13 ) ಸಾಮಾಜೀಕರಣದ ಶೌಚ ಹಂತದ ಲಕ್ಷಣಗಳಾವುವು ?

ಸಾಮಾಜೀಕರಣದ ಶೌಚ ಹಂತದ ಲಕ್ಷಣಗಳೆಂದರೆ

 • ಮಗುವು ತನ್ನ ಮತ್ತು ತನ್ನ ತಾಯಿಯ ಎರಡೂ ಪಾತ್ರಗಳನ್ನು ಅಂತರ್ಗತಗೊಳಿಸುತ್ತದೆ , ಇಲ್ಲಿ ಮಗುವು ಪ್ರೀತಿ ಮತ್ತು ಆರೈಕೆಯನ್ನು ಪಡೆಯುವುದರ ಜೊತೆಗೆ ಪ್ರೀತಿಯನ್ನು ನೀಡಲು ಪ್ರಾರಂಭಿಸುತ್ತದೆ .
 • ಈ ಹಂತದಲ್ಲಿ ತಾಯಿಯೇ ಸಾಮಾಜೀಕರಣದ ಮುಖ್ಯ ನಿಯೋಗಿ .

14 ) ಈಡಿಪಲ್ ಕಾಂಪ್ಲೆಕ್ಸ್ ಎಂದರೇನು ?

ಮಗುವು ಕುಟುಂಬದ ಪೂರ್ಣ ಪ್ರಮಾಣದ ಸದಸ್ಯನಾಗುವ ಹಂತವೆಂದರೆನಾಲ್ಕನೇ ವರ್ಷದಿಂದ ಹರೆಯದವರೆಗಿನ ಅಂದರೆ ಸುಮಾರು 12 ರಿಂದ 13 ನೇ ವರ್ಷದವರೆಗೆ ಇರುವ ಹಂತವನ್ನು ಈಡಿಪಲ್ ಕಾಂಪ್ಲೆಕ್ಸ್ ಎನ್ನುವರು .

15 ) ಎಲೆಕ್ಟ್ರಾ ಕಾಂಪ್ಲೆಕ್ಸ್ ಎಂದರೇನು ?

ಈಡಿಪಲ್ ಪ್ರವೃತ್ತಿ ಎಂಬುದು ತಾಯಿಗಾಗಿ ಆದ ಪೈಪೋಟಿಯಲ್ಲಿ , ಮಗನಾದವನಿಗೆ ತಂದೆಯ ಮೇಲೆ ಬರುವ ಈರ್ಷ್ಯ , ಹುಡುಗಿಗೆ “ ಎಲೆಕ್ಟ್ರಾ ಪ್ರವೃತ್ತಿ ” ಅಥವಾ “ ಎಲೆಕ್ಟ್ರಾ ಕಾಂಪ್ಲೆಕ್ಸ್ * ಎನ್ನುವರು .

16 ) ಸಾಮಾಜೀಕರಣದ ಅನೌಪಚಾರಿಕ ನಿಯೋಗಿಗಳನ್ನು ಹೆಸರಿಸಿ .

ಸಾಮಾಜೀಕರಣದ ಅನೌಪಚಾರಿಕ ನಿಯೋಗಿಗಳೆಂದರೆ

1. ಕುಟುಂಬ ಅಥವಾ ಬಂಧು ಸಮೂಹ

2. ಸಮವಯಸ್ಕರು

17 ) ಸಾಮಾಜೀಕರಣದ ಔಪಚಾರಿಕ ನಿಯೋಗಿಗಳನ್ನು ಹೆಸರಿಸಿ .

ಸಾಮಾಜೀಕರಣದ ಔಪಚಾರಿಕ ನಿಯೋಗಿಗಳೆಂದರೆ

1. ಶಾಲೆ

2. ಸಮೂಹ ಮಾಧ್ಯಮಗಳು

3. ರಾಜ್ಯ

III . ಐದು ಅಂಕಗಳ ಪ್ರಶ್ನೆಗಳು , ( 10-15 ವಾಕ್ಯಗಳಲ್ಲಿ ಉತ್ತರಿಸಿ )

1 ) ಸಂಸ್ಕೃತಿಯ ಅರ್ಥವನ್ನು ವಿವರಿಸಿ .

ಪ್ರಾಣಿ ಸಮಾಜದಿಂದ ಮಾನವ ಸಮಾಜವನ್ನು ಬೇರ್ಪಡಿಸುವ ಮಾನದಂಡ ಅಥವಾ ವಿಶಿಷ್ಟ ಲಕ್ಷಣವೇ ಸಂಸ್ಕೃತಿಯಾಗಿದೆ . ಸಂಸ್ಕೃತಿಯು ಮಾನವ ಸಮುದಾಯದ ವಿಶಿಷ್ಟವಾದ ಆಸ್ತಿಯಾಗಿದೆ . ಪ್ರತಿಯೊಬ್ಬ ಮಾನವನು ಸಂಸ್ಕೃತಿಯ ಪ್ರತಿನಿಧಿ ಎನ್ನಬಹುದು , “ ಸಂಸ್ಕೃತಿಯು ಸಾಮಾಜಿಕ ಪರಿವರ್ತನೆಯ ನಿಯೋಗಿಯೂ ಆಗಿದೆ . ‘ ಸಂಸ್ಕೃತಿ ‘ ಎಂಬ ತತ್ಸಮಾನ ಇಂಗ್ಲೀಷ್ ಪದ ‘ ಕಲ್ಚರ್ ‘ ಈ ಪದವು ಲ್ಯಾಟಿನ್ ಭಾಷೆಯ “ ಕೊಲೆರ್ ” ಎಂಬ ಪದದಿಂದ ಬಂದಿದೆ , “ ಕೊಲೆರ್ ” ಎಂದರೆ ಬೆಳೆಸು ಅಥವಾ “ ಕೃಷಿ ಮಾಡು ” ಎಂದರ್ಥವಾಗುತ್ತದೆ . ಆದ್ದರಿಂದ ಸಮಾಜದ ಸದಸ್ಯರಾಗಿದ್ದುಕೊಂಡು ವ್ಯಕ್ತಿಗಳು ಕಲಿತಿರುವ ಅಂಶಗಳ ಸಮಷ್ಟಿಗೆ ಸಂಸ್ಕೃತಿ ಎನ್ನುವರು . ಸಮಾಜಶಾಸ್ತ್ರಜ್ಞರು ‘ ಸಂಸ್ಕೃತಿ’ಯನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ .

‘ ಮ್ಯಾಲಿನಾಸ್ಕಿ ‘ ಯವರ ಪ್ರಕಾರ : ಮಾನವ ತನ್ನ ಜೀವಿತದ ಗೊತ್ತು ಗುರಿಗಳನ್ನು ಈಡೇರಿಸಿಕೊಳ್ಳಲು ಮಾನವನೇ ನಿರ್ಮಿಸಿಕೊಂಡಂತಹ ಸಾಧನಗಳೇ ಸಂಸ್ಕೃತಿ .

‘ ಎಡ್ವರ್ಡ್ ಬಿ ಡೈಲರ್ ” ರವರ ಪ್ರಕಾರ : ಜ್ಞಾನ , ನಂಬಿಕೆ , ಕಲೆ , ನೈತಿಕ ನಿಯಮ , ಕಾನೂನು , ರೂಢಿ ಮತ್ತು ಮಾನವನು ತನ್ನ ಸಮಾಜದ ಸದಸ್ಯನಾಗಿದ್ದುಕೊಂಡು ಸಾಧಿಸಿದ ಇನ್ನುಳಿದ ಸಾಮರ್ಥ್ಯಗಳನ್ನು , ನೈಪುಣ್ಯಗಳನ್ನು ಒಳಗೊಂಡಿರುವ ಅಖಂಡವಾದ ಒಂದು ಸಂಕೀರ್ಣ ವ್ಯವಸ್ಥೆ ” ಯಾಗಿದೆ ಎಂದು ಹೇಳಿದ್ದಾರೆ .

ರಾಬರ್ಟ್‌ ಬೈರ್‌ ಸೈಡ್ ರವರ ಪ್ರಕಾರ : ಸಂಸ್ಕೃತಿಯು ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಅದು ನಾವು ಯೋಚಿಸುವ ನಿರ್ವಹಿಸುವ ಹಾಗೂ ನಾವು ಹೊಂದಿದ ಎಲ್ಲಾ ಸಂಗತಿಗಳನ್ನು ಒಳಗೊಂಡಿದೆ ” ಎಂದು ಹೇಳಿದ್ದಾರೆ‌

2 ) ಸಂಸ್ಕೃತಿಯ ಯಾವುದಾದರೂ ಎರಡು ಲಕ್ಷಣಗಳನ್ನು ವಿವರಿಸಿ .

ಸಂಸ್ಕೃತಿಯ ಲಕ್ಷಣಗಳೆಂದರೆ

ಸಂಸ್ಕೃತಿಯು ಸಾಮಾಜಿಕವಾದುದ್ದು

ಸಂಸ್ಕೃತಿಯು ಹಂಚಿಕೊಳ್ಳಲ್ಪಟ್ಟಿದ್ದು

ಸಂಸ್ಕೃತಿಯು ಸಾಮಾಜಿಕವಾದದ್ದು : ಸ್ವಭಾವತಃ ಸಂಸ್ಕೃತಿಯು ಸಾಮಾಜಿಕವಾದುದು , ಇದು ವ್ಯಕ್ತಿಯ ಸ್ವಂತ ಆಸ್ತಿಯಲ್ಲ ಇದೊಂದು ಜೀವನಕ್ರಮ . ಇದು ಸಾಮಾಜಿಕ ಅನ್ಯೂನ್ಯಕ್ರಿಯೆಯಲ್ಲಿ ಹುಟ್ಟುತ್ತದೆ , ಮತ್ತು ಇದರ ಮೂಲಕವೇ ಮುಂದುವರಿಯುತ್ತದೆ , ಒಂದು ಗುಂಪು ಜನರಿಗೆ ಸಾಮಾನ್ಯವಾದ ಅಸಂಖ್ಯ ವರ್ತನಾ ಪ್ರಕಾರಗಳನ್ನು ಸಂಸ್ಕೃತಿ ಒಳಗೊಳ್ಳುತ್ತದೆ , ಯಾವನೇ ವ್ಯಕ್ತಿಯೊಬ್ಬನಿಗೆ ಸೀಮಿತವಾದ ವರ್ತನಾ ವಿಶೇಷವನ್ನು ಸಂಸ್ಕೃತಿ ಒಳಗೊಳ್ಳುವುದಿಲ್ಲ , ಹಾಗಾಗಿ , ಗುಂಪಿನ ಹೆಚ್ಚಿನ ಸದಸ್ಯರಿಂದ ಹಂಚಿಕೊಳ್ಳಲ್ಪಟ್ಟ ಸಾಮಾಜಿಕ ಉತ್ಪಾದನೆ ಸಂಸ್ಕೃತಿ ,

ಸಂಸ್ಕೃತಿ ಸಂಚಿಕೊಳ್ಳಲ್ಪಟ್ಟಿದ್ದು: ಸಂಸ್ಕೃತಿ ಯಾವುದೇ ವ್ಯಕ್ತಿಯ ಆಸ್ತಿಯಲ್ಲ ಇದು ಸಮೂಹಕ್ಕೆ ಸೇರುತ್ತದೆ , ಭಾಷೆ , ಪದ್ಧತಿ , ನಂಬಿಕೆ , ಭಾವನೆ , ಲೋಕರೂಢಿ , ನೈತಿಕ ನಿಯಮ ಇತ್ಯಾದಿಗಳೆಲ್ಲವನ್ನು ಒಂದು ಗುಂಪಿನ ಜನ ಹಂಚಿಕೊಂಡಿದ್ದಾರೆ ಗುಂಪಿನ ಜನರಿಗೆ ಸಾಮಾನ್ಯವಾಗಿ ಅನ್ವಯವಾಗುವ ಸಂಗತಿಗಳಿವು , ಹಾಗಾಗಿ ಸಂಸ್ಕೃತಿ ವ್ಯಕ್ತಿಯ ಸ್ವಂತದ್ದಲ್ಲ , ಇದು

ಸಾಮಾಜಿಕ , ಸಮೂಹ ಜೀವನದ ಉತ್ಪನ್ನ , ರಾಬರ್ಟ್ ಬಿಯರ್ ಸ್ಪೆಡ್ ಹೇಳುವಂತೆ , ಸಂಸ್ಕೃತಿಯು ಒಂದಕ್ಕಿಂತ ಹೆಚ್ಚು ಜನರು ಅನುಸರಿಸುವ ಅಥವಾ ಹೊಂದಿದ , ನಂಬಿದ , ಬಳಸಿದ , ಅಡಕಗೊಳಿಸಿಕೊಂಡ ಸಂಗತಿಗಳೇ ಆಗಿದೆ , ಇದು ತನ್ನ ಅಸ್ತಿತ್ವಕ್ಕೆ ಸಮೂಹ ಜೀವನವನ್ನು ಅವಲಂಬಿಸಿದೆ . ‌

3 ) ಸಂಸ್ಕೃತಿಯಲ್ಲಿನ ಭೌತ ಮತ್ತು ಅಭೌತ ಭಾಗಗಳನ್ನು ಪ್ರತ್ಯೇಕಿಸಿ .

ಸಂಸ್ಕೃತಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು .

1. ಭೌತ ಸಂಸ್ಕೃತಿ

2. ಅಭೌತ ಸಂಸ್ಕೃತಿ

1 ) ಭೌತ ಸಂಸ್ಕೃತಿ : ಮಾನವನು ತನ್ನ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸೃಷ್ಟಿಸಿರುವ ಭೌತವಸ್ತುಗಳಿಗೆಲ್ಲಾ ಭೌತ ಸಂಸ್ಕೃತಿ ಎನ್ನುವರು . ಇದು ಮಾನವನ್ನು ರೂಪಿಸಿದ ಎಲ್ಲಾ ಸ್ಪರ್ಶ ಸಾಧ್ಯ ವಸ್ತುಗಳನ್ನು ಒಳಗೊಂಡಿದೆ , ಭೌತ ಸಂಸ್ಕೃತಿಯು ದೃಷ್ಟಿಗೆ ಗೋಚರವಾಗುವಂತಹ , ಮೂರ್ತ ಸ್ವರೂಪದ , ಮಾನವ ಬಳಕೆಯ ವಸ್ತುಗಳನ್ನು ಪ್ರತಿಬಿಂಬಿಸುವುದು . ಉದಾ : ಮಾನವ ನಿರ್ಮಿತವಾದ ಮನೆ , ಕಟ್ಟಡ , ಯಂತ್ರೋಪಕರಣಗಳು , ವಾಹನ , ಹಣ , ಬ್ಯಾಂಕು , ವೈಜ್ಞಾನಿಕ ಸಾಧನೆಗಳು ಇತ್ಯಾದಿ . ಭೌತ ಸಂಸ್ಕೃತಿಯನ್ನು ನಾಗರೀಕತೆ ಎಂದು ಕರೆಯಲಾಗಿದೆ . ಮಾನವನ ಜೀವನದ ಮೇಲೆ ಭೌತ ಸಂಸ್ಕೃತಿ ಗಾಢವಾದ ಪ್ರಭಾವವನ್ನು ಬೀರಬಲ್ಲದು .

2 ) ‘ ಅಭೌತ ಸಂಸ್ಕೃತಿ : ಸ್ಪರ್ಶ ಸಾಧ್ಯವಿಲ್ಲದ ಎಲ್ಲಾ ವಸ್ತುಗಳನ್ನು ಅಭೌತ ಸಂಸ್ಕೃತಿ ಎನ್ನಲಾಗಿದೆ . ಆಗ್‌ಬರ್ನ್‌ರವರು ಭಾಷೆ , ನಂಬಿಕೆ , ಮೌಲ್ಯಗಳು , ಹವ್ಯಾಸಗಳು , ಸಂಸ್ಕೃತಿಗಳು ಮತ್ತು ಆಚರಣೆಗಳು ಆಲೋಚನೆಗಳು ಮತ್ತು ಆದರ್ಶಗಳು ಇತ್ಯಾದಿಗಳನ್ನು ಅಭೌತ ಸಂಸ್ಕೃತಿ ಮಾನವನ ಮೌಲ್ಯಗಳ ಭಾವನಾತ್ಮಕ ಮತ್ತು ಮಾನಸಿಕ ಅಂಶಗಳನ್ನು ಒಳಗೊಂಡಿರುತ್ತದೆ . ಅಭೌತ ಸಂಸ್ಕೃತಿಯು ಮಾನವನ ಮೇಲೆ ಬಹಳ ಗಾಢವಾದ ಪ್ರಭಾವ ಬೀರುವುದು .

4 ) ಸಾಂಸ್ಕೃತಿಕ ಹಿಂಬೀಳುವಿಕೆ ಕಲ್ಪನೆಯನ್ನು ವಿವರಿಸಿ .

ಸಾಂಸ್ಕೃತ ಹಿಂಬೀಳುವಿಕೆಯ ಕಲ್ಪನೆಯನ್ನು ಆಗ್‌ಬರ್ನ್ ಪರಿಚಯಿಸಿದ್ದಾರೆ . ಸಾಂಸ್ಕೃತಿಕ ಹಿಂಬೀಳುವಿಕೆಯ ಕಲ್ಪನೆಯು ಸಂಸ್ಕೃತಿಯಲ್ಲಿನ ಒಂದು ಭಾಗಕ್ಕೆ ಹೋಲಿಸಿದಾಗ ಮತ್ತೊಂದು ಭಾಗದಲ್ಲಿನ ಕುಂಠಿತ ಚಲನೆಯನ್ನು ಸೂಚಿಸುತ್ತದೆ . ಭೌತ ಸಂಸ್ಕೃತಿಯಲ್ಲಿನ ತ್ವರಿತ ಅವಿಷ್ಕಾರಗಳಿಗೆ ಅಭೌತ ಸಂಸ್ಕೃತಿ ಕೂಡಲೇ ಪ್ರತಿಕ್ರಿಯಿಸುವುದಿಲ್ಲ . ಭೌತಿಕ ಬದಲಾವಣೆಗಳಿಗೆ ತನ್ನನ್ನು ಹೊಂದಿಕೊಳ್ಳುವುದು ಅಭೌತ ಸಂಸ್ಕೃತಿಗೆ ಸಾಧ್ಯವಾಗದೇ ಇದ್ದಾಗ ಇವೆರೆಡರ ನಡುವೆ ಒಂದು ಅಂತರ ಅಥವಾ ಕಂದಕ ಉಂಟಾಗುತ್ತದೆ ,

ಭೌತ ಮತ್ತು ಅಭೌತ ಸಂಸ್ಕೃತಿಗಳ ನಡುವಿನ ಈ ಕಂದಕವನ್ನು ಸೂಚಿಸಲು “ ಸಾಂಸ್ಕೃತಿಕ ಹಿಂಬೀಳುವಿಕೆ ” ಎಂಬ ಕಲ್ಪನೆಯನ್ನು ಬಳಸಲಾಗಿದೆ . ಅಸಮ ವೇಗದಲ್ಲಿ ಬದಲಾಗುವ ಸಂಸ್ಕೃತಿಯ ಪರಸ್ಪರ ಸಂಬಂಧಿತ ಭಾಗಗಳ ನಡುವೆ ಇರುವ ಪ್ರಯಾಸವನ್ನು “ ಸಾಂಸ್ಕೃತಿಕ ಹಿಂಬೀಳುವಿಕೆ ” ಎಂದು ಅರ್ಥೈಸಬಹುದಾಗಿದೆ . ಭೌತ ಸಂಸ್ಕೃತಿಯಲ್ಲಿ ಉಂಟಾದ ತ್ವರಿತ ಅವಿಷ್ಕಾರಗಳಿಗೆ ತನ್ನನ್ನು ಹೊಂದಿಸಿಕೊಳ್ಳಲು ಅಭೌತ ಸಂಸ್ಕೃತಿ ವಿಫಲಗೊಂಡಾಗ ಇವುಗಳ ನಡುವೆ ಒಂದು ಅಂತರ ಏರ್ಪಡುತ್ತದೆ .

5 ) ಸಾಮಾಜೀಕರಣದ ಕಲ್ಪನೆಯನ್ನು ವಿವರಿಸಿ .

 • ಸಾಮಾಜೀಕರಣ ಎಂಬ ಕಲ್ಪನೆಗೆ ಸರ್ವಸಾಮಾನ್ಯವಾದ ವ್ಯಾಖ್ಯೆಯೊಂದಿಲ್ಲ . ವಿದ್ವಾಂಸರು ಅನೇಕ ವಿವರಣೆಗಳನ್ನು ನೀಡಿದ್ದಾರೆ .
 • ‘ ಹ್ಯಾರಿ ಎಂ ಜಾನ್‌ಸನ್ ‘ ರವರು “ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಲು ಪಾತ್ರದಾರಿಯನ್ನು ಸಮರ್ಥನನ್ನಾಗಿರುವ ಕಲಿಕೆಯೇ ಸಾಮಾಜೀಕರಣ ಎಂದಿದ್ದಾರೆ .
 • ಆಗ್‌ಬರ್ನ್ ಮತ್ತು ನಿಮ್‌ಕಾಫ್ ‘ ವ್ಯಕ್ತಿಯು ಗುಂಪಿನ ಪ್ರಮಾಣಗಳಿಗೆ ಅನುವರ್ತಿಸುವುದನ್ನು ಕಲಿಯುವ ಪ್ರಕ್ರಿಯೆಗೆ ಸಾಮಾಜೀಕರಣ ಎಂದು ಅಭಿಪ್ರಾಯ ಪಡುತ್ತಾರೆ .
 • ‘ ಹೆಚ್ . ಟಿ . ಮಂಜುದಾರ್‌ರವರು ‘ ಮೂಲಭೂತ ಸ್ವಭಾವ ಮಾನವ ಸ್ವಭಾವವಾಗಿ ಬದಲಾವಣೆಯಾಗುವ ಮತ್ತು ವ್ಯಕ್ತಿಯ ಒಬ್ಬ ಮಾನವನಾಗಿ ಪರಿವರ್ತಿತವಾಗುವ ಪ್ರಕ್ರಿಯೆಯೇ ಸಾಮಾಜೀಕರಣ ಎಂದಿದ್ದಾರೆ .
 • ಒಟ್ಟಾರೆ ರೂಪ ಪರಿವರ್ತನೆಯ ಪ್ರಕ್ರಿಯೆಯನ್ನು ಸಾಮಾಜೀಕರಣ ಎನ್ನುತ್ತಾರೆ . ಜೈವಿಕ ಜೀವಿಯನ್ನು ಸಮಾಜ ಜೀವಿಯಾಗಿ , ವ್ಯಕ್ತಿಯನ್ನು ಸಾಮಾಜಿಕ ವ್ಯಕ್ತಿಯನ್ನಾಗಿ ಬದಲಿಸುವ ಪ್ರಕ್ರಿಯೆಯನ್ನು ಸಾಮಾಜೀಕರಣ ಎಂದು ಅರ್ಥೈಸಬಹುದು .

6 ) ಸಾಮಾಜೀಕರಣವನ್ನು ಒಂದು ಕಲಿಕೆಯ ಪ್ರಕ್ರಿಯೆಯಾಗಿ ಪರಿಶೀಲಿಸಿ .

ಜೈವಿಕ ಅಗತ್ಯಗಳೊಂದಿಗೆ ಮಾನವ ಶಿಶು ಈ ಪ್ರಪಂಚಕ್ಕೆ ಬರುತ್ತದೆ . ಕ್ರಮೇಣ ಅವನನ್ನು ಸಮಾಜ ಜೀವಿಯನ್ನಾಗಿ ರೂಪಿಸಲಾಗುತ್ತದೆ ಮತ್ತು ಅವನು ನಡೆದುಕೊಳ್ಳುವ ಮತ್ತು ಆಲೋಚಿಸುವ ಸಾಮಾಜಿಕ ಕ್ರಮಗಳನ್ನು ಕಲಿಯುತ್ತಾನೆ . ಸಮೂಹ ಜೀವನದಲ್ಲಿ ಅವನು ಭಾಗವಹಿಸುತ್ತಾನಾಗಿ ಅವನಲ್ಲಿ ವ್ಯಕ್ತಿತ್ವ ಮೂಡಿಬರುತ್ತದೆ . ಇತರರ ಜೊತೆಗಿನ ಸಂಬಂಧದಲ್ಲಿ ವ್ಯಕ್ತಿ ಆಲೋಚನೆಗಳು , ಹವ್ಯಾಸಗಳು , ಅಭಿವೃತ್ತಿಗಳು , ಪ್ರಮಾಣಕಗಳನ್ನು ಪಡೆದುಕೊಳ್ಳುತ್ತಾರೆ .

‘ ಶಾಲೆ ‘ ಕಲಿಕೆಯ ಪ್ರಕ್ರಿಯೆಯಾಗಿ ಸಾಮಾಜೀಕರಣದ ಬಹು ಮುಖ್ಯ ನಿಯೋಗಿ , ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ನಿರ್ಣಾಯಾತ್ಮಕ ಪಾತ್ರ ವಹಿಸುತ್ತಾರೆ . ಮಗು ಶಾಲೆಯಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಾನೆ , ಇದು ಅವನ ಆಲೋಚನೆಗಳು ಮತ್ತು ಅಭಿವೃತ್ತಿಗಳನ್ನು ರೂಪಿಸಿಕೊಳ್ಳಲು ತಿದ್ದಿಕೊಳ್ಳಲು ಸಹಕರಿಸುತ್ತದೆ . ಶಾಲೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನೂ ವರ್ಗಾಯಿಸುವುದರ ಜೊತೆಗೆ ಸಹಕಾರ , ಶಿಸ್ತು , ದೇಶಭಕ್ತಿ , ಸ್ನೇಹ ಇತ್ಯಾದಿ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುತ್ತದೆ . ಭಾವನಾತ್ಮಕ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಮತ್ತಷ್ಟು ಮುಂದೆ ತೆಗೆದುಕೊಂಡು ಹೋಗಲು ಶಾಲೆ ಸಹಾಯ ಮಾಡುತ್ತದೆ . ಮಗುವನ್ನು ಅಧಿಕಾರಯುಕ್ತವಾಗಿ ಸಾಮಾಜೀಕರಣಗೊಳಿಸುವ ಒಂದು ಔಪಚಾರಿಕ ಕಲಿಕಾ ನಿಯೋಗಿ ಶಾಲೆಯಾಗಿದೆ .

7 ) ಸಾಮಾಜೀಕರಣದ ವಿವಿಧ ಹಂತದ ಸಂಕ್ಷಿಪ್ತ ವಿವರಣೆ ಕೊಡಿ .

ಸಾಮಾಜೀಕರಣದ ವಿವಿಧ ಹಂತಗಳೆಂದರೆ

1. ಮೌಖಿಕ ಹಂತ

2. ಶೌಚ ಹಂತ

3. ಈಡಿಪಲ್ ಹಂತ

4. ಕಿಶೋರಾವಸ್ಥೆಯ ಹಂತ

1 ) ಮೌಖಿಕ ಹಂತ : ಮೌಖಿಕ ಹಂತವು ಜನನದಿಂದ ಪ್ರಾರಂಭವಾಗಿ ಮಗುವಿಗೆ ವರ್ಷವಾಗುವವರೆಗೆ ಮುಂದುವರಿಯುತ್ತದೆ . ಜನನಕ್ಕೆ ಮುಂಚೆ ಮಗುವು ಭ್ರೂಣದ ರೂಪದಲ್ಲಿ ತಾಯಿಯ ಗರ್ಭದಲ್ಲಿ ಬೆಚ್ಚಗೆ ಸುಖವಾಗಿರುತ್ತದೆ . ಜನನದ ನಂತರ ಅದು ಮೊದಲ ಬಿಕ್ಕಟ್ಟನ್ನು ಎದುರಿಸುತ್ತದೆ . ಅದು ಉಸಿರಾಡಬೇಕು , ಆಹಾರ ಸೇವಿಸಬೇಕು ತೇವ ಮತ್ತಿತರ ಅನಾನುಕೂಲ ಸ್ಥಿತಿಗಳಿಗೆ ಒಳಗಾಗಬೇಕು , ಮಗುವು ಪ್ರತಿಯೊಂದಕ್ಕೂ ಸಾಕಷ್ಟು ಅಳುತ್ತದೆ . ಅಳುವ ಮೂಲಕ ಮಗುವು ಮೌಖಿಕ ಅವಲಂಬನೆಯನ್ನು ಸ್ಥಾಪಿಸಿಕೊಳ್ಳುತ್ತದೆ .

2 ) ಶೌಚ ಹಂತ : ಸಾಮಾನ್ಯವಾಗಿ ಮೊದಲನೆಯ ವರ್ಷದ ನಂತರ ಪ್ರಾರಂಭವಾಗಿ ಮೂರನೆಯ ವರ್ಷದಲ್ಲಿ ಮುಕ್ತಾಯವಾಗುತ್ತದೆ . ಈ ಅವಧಿಯ ಬಿಕ್ಕಟ್ಟನ್ನು ಶೌಚ ಬಿಕ್ಕಟ್ಟು ” ಎಂದು ಕರೆಯುವರು .

3 ) ಈಡಿಪಲ್ ( ಬಾಲ್ಯ ) ಹಂತ : ಈ ಹಂತವು ನಾಲ್ಕನೆಯ ವರ್ಷದಿಂದ ಹರೆಯದವರೆ ಅಂದರೆ ಸುಮಾರು 12 ರಿಂದ 13 ನೇ ವರ್ಷದವರೆಗೆ ಇರುತ್ತದೆ . ಈ ಹಂತದಲ್ಲಿ ಮಗುವು ಒಟ್ಟಾರೆ ಕುಟುಂಬದ ಪೂರ್ಣ ಪ್ರಮಾಣದ ಸದಸ್ಯನಾಗುತ್ತಾನೆ , ಈ ಅವಸ್ಥೆಯಲ್ಲಿ ಮಗುವು ಆಧಾರದಲ್ಲಿ ಆರೋಪಿಸಲಾಗಿರುವ ಪಾತ್ರವನ್ನು ಗುರುತಿಸಬೇಕಾಗುತ್ತದೆ , ಈ ಅವಧಿಯ ಬಿಕ್ಕಟ್ಟನ್ನು “ ಈಡಿಪಲ್ ಬಿಕ್ಕಟ್ಟು ” ಎಂದು ಕರೆಯುತ್ತಾರೆ . ಈ ಗುರುತು ಹಿಡಿಯುವುದು ಸಾಮಾಜೀಕರಣದ ಸಾಧನೆ ಎಂಬುದರಲ್ಲಿ ಸಂಶಯವಿಲ್ಲ .

4 ) ಕಿಶೋರಾವಸ್ಥೆಯ ಹಂತ : ಈ ಹಂತವು ಹರೆಯದಿಂದ ಆರಂಭವಾಗುತ್ತದೆ . ಈ ಹಂತದಲ್ಲಿ ಮಕ್ಕಳು ತಮ್ಮ ತಂದೆ – ತಾಯಿಗಳ ನಿಯಂತ್ರಣದಿಂದ ಹೊರಬರಲು ಇಚ್ಚಿಸುತ್ತಾರೆ . ಈ ಅವಧಿಯ ಬಿಕ್ಕಟ್ಟು ಏನೆಂದರೆ ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಬೇಡಿಕೆಯಿಂದಾಗಿ ಉಂಟಾಗುವ ಪ್ರಯಾಸವಾಗಿದೆ . ಈ ಹಂತದಲ್ಲಿ ಒಬ್ಬ ವ್ಯಕ್ತಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ಜೀವನ ನಿರ್ವಹಣೆಗೆ ಸಾಮರ್ಥ್ಯ ನೀಡುವ ಕೌಶಲ್ಯವನ್ನು ಕಲಿಯುತ್ತಾನೆ .

8 ) ಸಾಮಾಜೀಕರಣದ ನಿಯೋಗಿಯಾಗಿ ಕುಟುಂಬದ ವಿವರಣೆ ಕೊಡಿ .

ಮಗುವನ್ನು ಮೊದಲಿಗೆ ಬರಮಾಡಿಕೊಳ್ಳುವುದೇ ಕುಟುಂಬ , ಹಾಗಾಗಿ ಕುಟುಂಬ ಸಾಮಾಜೀಕರಣದ ಅತಿಮುಖ್ಯ ನಿಯೋಗಿ , ಭೌತಿಕ ಸಾಮೀಪ್ಯ , ನಿಕಟ ಸಂಬಂಧ , ಮಗುವಿನ ಮೃದತ್ವ , ಮಗುವಿನ ಮೇಲೆ ಪೋಷಕರಿಗೆ ಇರುವ ಅಧಿಕಾರ ಇತ್ಯಾದಿಗಳು ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಹೆಚ್ಚಿನ ಪ್ರಭಾವ ಹೊಂದಿವೆ . ಕುಟುಂಬದಲ್ಲಿ ಪೋಷಕರ ಪ್ರಭಾವ , ಅದರಲ್ಲಿಯೂ ಮುಖ್ಯವಾಗಿ ತಾಯಿಯ ಪ್ರಭಾವ ಬಹಳ ಮುಖ್ಯವಾದುದು .

ಮಗುವು ಪೋಷಕರಿಂದಲೇ ಮಾತು ಮತ್ತು ಭಾಷೆಯನ್ನು ಕಲಿಯುವುದು , ಅದಕ್ಕೆ ಸಾಮಾಜಿಕ ನೈತಿಕತೆಯನ್ನು ಕಲಿಸಲಾಗುತ್ತದೆ . ಅಧಿಕಾರದಲ್ಲಿನ ವ್ಯಕ್ತಿಗಳಿಗೆ ಗೌರವ ನೀಡುವುದನ್ನು ಕಲಿಯುತ್ತಾರೆ . ಕೆಲವೊಂದು ನಾಗರೀಕ ಮೌಲ್ಯಗಳನ್ನು ಶಿಶುವು ಕುಟುಂಬದಲ್ಲಿ ಕಲಿಯುತ್ತದೆ , ಸಹಕಾರ , ಸಹನೆ , ತ್ಯಾಗ , ಪ್ರೀತಿ ಮತ್ತು ಪ್ರೇಮ ಇತ್ಯಾದಿಗಳನ್ನು ವಿಷಯ ಕುಟುಂಬದಲ್ಲಿ ಆಗುತ್ತದೆ . ವ್ಯಕ್ತಿಯ ಮೊದಲಿನ ಮತ್ತು ಅತಿನಿಕಟವಾದ ಸಂಬಂಧಗಳು ಅವನ ಪೋಷಕರು ಮತ್ತು ಬಂಧುಗಳೊಂದಿಗೆ ಉಂಟಾಗುವಂತಹವು .

ಇವರೊಳಗೆ ಮಗುವಿನ ಮೇಲೆ ಅಧಿಕಾರವೂ ಇದೆ , ಮಗುವಿಗೆ ಇನ್ನು ವಿವೇಚಿಸುವ ಸಾಮಾರ್ಥ್ಯ ವಿಲ್ಲದಿರುವುದರಿಂದ ನೀಡಿದೆಲ್ಲವನ್ನು ಸ್ವೀಕರಿಸುತ್ತ ಬಂಧುಗಳ ಮತ್ತು ಪೋಷಕರ ಜೊತೆ ಮಗುವಿಗೆ ಭಾವನಾತ್ಮಕ ಬೆಸುಗೆ ಇದೆಯಾಗಿ ಸಾಮಾಜೀಕರಣ ಸುಲಭವಾಗುತ್ತದೆ . ಕುಟುಂಬದಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಂಸ್ಕೃತಿಕ ಚಳುವಳಿ ವರ್ಗಾಯಿತವಾಗುತ್ತದೆ .

9 ) ಸಾಮಾಜೀಕರಣದ ನಿಯೋಗಿಯಾಗಿ ಸಮವಯಸ್ಕರ ವಿವರಣೆ ನೀಡಿ .

ಸಾಮಾಜೀಕರಣದ ನಿಯೋಗಿಗಳಲ್ಲಿ ಸಮವಯಸ್ಕರು ಕುಟುಂಬದ ನಂತರದ ಸ್ಥಾನ . ಇದು ಮಗುವಿನ ಸಮವಯಸ್ಕರ ಜೊತೆ ಆಟಗಾರರು , ಸಮಾನ ಅಂತಸ್ತು ಹೊಂದಿದವರು ನಿಕಟ ಸ್ನೇಹಿತರು , ತರಗತಿಯ ಮಿತ್ರರು , ಮೊದಲಾದವರನ್ನು ಒಳಗೊಳ್ಳುತ್ತದೆ . ಸೂಕ್ತ ವರ್ತನೆಗಳನ್ನು ವ್ಯಾಖ್ಯಾನಿಸುವಲ್ಲಿ , ಸೂಕ್ತ ಪಾತ್ರಗಳನ್ನು ಹೊಂದುವಲ್ಲಿ ವರ್ತನೆಗೆ ಆದರ್ಶಗಳನ್ನು ರೂಪಿಸುವಲ್ಲಿ , ಒಂದು ಹಂತದ ವೈಯಕ್ತಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವಲ್ಲಿ ಮತ್ತು ಗುರಿಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಸಮಾನ ಸ್ಕಂದರು ಕೆಲವೊಂದು ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ .

ಪೋಷಕರು ಮತ್ತು ಶಿಕ್ಷಕರಿಂದ ಪಡೆದುಕೊಳ್ಳಲಾಗದ ಕೆಲವೊಂದು ಸಂಗತಿಗಳನ್ನು ಮಗುವು ತನ್ನ ಸ್ನೇಹಿತರು ಮತ್ತು ಜೊತೆ ಆಟಗಾರರಿಂದ ಪಡೆದುಕೊಳ್ಳುತ್ತಾನೆ . ಸಾಮಾನ್ಯವಾಗಿ ಸಮಾನಸ್ಕಂದರ ಸಮೂಹ ಹೆಚ್ಚು ಸಮಾನತೆಯ ಅನುಭವವನ್ನು ನೀಡುತ್ತದೆ . ಈ ಸಮೂಹಗಳಲ್ಲಿ ಮಗುವು ಸಂಸ್ಕೃತಿಯ ಅನೌಪಚಾರಿಕ ಅಂಶಗಳಾದ ಸೊಗಸುಗಾರಿಕೆ , ಗೀಳು , ತೃಪ್ತಿ ಪಡಿಸುವ ಕೆಲವೊಂದು ರಹಸ್ಯ ಕ್ರಮಗಳು ಇತ್ಯಾದಿಗಳನ್ನು ಕಲಿಯುತ್ತಾನೆ , ನಿಷೇದಿತ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೂ ಈ ಸಮೂಹಗಳು ಅವಕಾಶ ನೀಡುತ್ತವೆ . ಉದಾಹರಣೆಗೆ : ಮೊದಲಿನ ಹಂತಗಳಲ್ಲಿ ಹೆಚ್ಚಿನ ಜ್ಞಾನ , ಅದು ಸರಿಯಾಗಿ ಅಥವಾ ತಪ್ಪಾಗಿ ಬಂದಿರಲಿ ಮಗುವಿನ ಸಮಾನ ಸಂದರ ಸಮೂಹದಿಂದ ಬಂದಿರುತ್ತವೆ .

10 ) ಶಾಲೆಯನ್ನು ಸಾಮಾಜೀಕರಣದ ನಿಯೋಗಿಯಾಗಿ ಪರಿಶೀಲಿಸಿ .

ಶಾಲೆಯನ್ನು ಸಾಮಾಜೀಕರಣದ ಔಪಚಾರಿಕ ನಿಯೋಗಿಯಾಗಿದೆ , ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರು ನಿರ್ಣಯಾತ್ಮಕ ಪಾತ್ರ ವಹಿಸುತ್ತಾರೆ . ವಯಸ್ಕ ಪಾತ್ರಗಳಿಗೆ ಮಗುವನ್ನು ಸಿದ್ಧಗೊಳಿಸಲು ಕುಟುಂಬ ತನ್ನಲ್ಲಿಯೇ ಸಕ್ಷಮವಾಗಿಲ್ಲವಾದ್ದರಿಂದ ಶಾಲೆಗೆ ಬಹುಮುಖ್ಯಪಾತ್ರವಿದೆ . ಮಗು ಶಾಲೆಯಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಾನೆ . ಇದು ಅವನ ಆಲೋಚನೆಗಳು ಮತ್ತು ಅಭಿವೃತ್ತಿಗಳನ್ನು ರೂಪಿಸಿಕೊಳ್ಳಲು , ತಿದ್ದಿಕೊಳ್ಳಲು ಸಹಕರಿಸುತ್ತದೆ . ಶಾಲೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ವರ್ಗಾಯಿಸುವುದರ ಜೊತೆಗೆ ಸಹಕಾರ , ಶಿಸ್ತು , ದೇಶಭಕ್ತಿ , ಸ್ನೇಹ , ಇತ್ಯಾದಿ ಮೌಲ್ಯಗಳನ್ನು ಮಕ್ಕಳಿಗೆ ನೀಡುತ್ತದೆ . ಭಾವನಾತ್ಮಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಮತ್ತಷ್ಟು ಮುಂದೆ ತೆಗೆದುಕೊಂಡು ಹೋಗಲು ಶಾಲೆ ಸಹಾಯ ಮಾಡುತ್ತದೆ . ಮಗುವನ್ನು ಅಧಿಕಾರಯುಕ್ತವಾಗಿ ಸಾಮಾಜೀಕರಣಗೊಳಿಸುವ ಒಂದು ಔಪಚಾರಿಕ ನಿಯೋಗಿ ಶಾಲೆಯಾಗಿದೆ .

11 ) ಸಾಮಾಜೀಕರಣದಲ್ಲಿ ಸಮೂಹ ಮಾಧ್ಯಮದ ಪಾತ್ರವನ್ನು ವಿವರಿಸಿ .

ಮಗುವಿನ ಸಾಮಾಜೀಕರಣದಲ್ಲಿ ಸಂವಹನದ ಮುದ್ರಣ ಮಾಧ್ಯಮ ಮತ್ತು ದೃಶ್ಯ – ಶ್ರವಣ ಮಾಧ್ಯಮಗಳು ಬಹು ಮುಖ್ಯ ಪಾತ್ರ ನಿರ್ವಹಿಸುತ್ತದೆ . ಸಾಮಾಚಾರ ಪತ್ರಿಕೆಗಳು ಮ್ಯಾಗಜಿನ್‌ಗಳು , ಪುಸ್ತಕಗಳು , ಬಾಗುಲಿ , ದೂರವಾಣಿ , ದೂರದರ್ಶನ , ಮೊಬೈಲ್ , ಇಂಟರ್‌ನೆಟ್ , ಸಾಮಾಜಿಕ ಅಂತರ್ಜಾಲವ್ಯವಸ್ಥೆ ಇತ್ಯಾದಿಗಳ ತಲೆಮಾರಿನಿಂದ ತಲೆಮಾರಿಗೆ ಸಂಸ್ಕೃತಿಯನ್ನು ವರ್ಗಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ , ಸಮೂಹ ಶಿಕ್ಷಣದಲ್ಲಿ ರಾಜ್ಯಪ್ರಮುಖ ಪಾತ್ರ ವಹಿಸುತ್ತದೆ . ಸಮೂಹ ಶಿಕ್ಷಣದಲ್ಲಿ ರಾಜ್ಯ ಕೂಡ ಇವುಗಳನ್ನು ಪ್ರಯತ್ನ ಪೂರ್ವಕವಾಗಿ , ಉದ್ದೇಶಪೂರ್ವಕವಾಗಿ ಬಳಸಿಕೊಳ್ಳದಾಗಿದೆ . ನಿರ್ದಿಷ್ಟ ಮೌಲ್ಯವ್ಯವಸ್ಥೆಯನ್ನು ಬದಲಿಸಲು ಅಥವಾ ಪರಿಚಯಿಸಲು ಇವುಗಳನ್ನು ಬಳಸಿಕೊಳ್ಳಬಹುದಿದೆ . ಸರಳ ಸಾಂಪ್ರದಾಯಿಕ ಸಮಾಜಗಳಲ್ಲಿ ಸಾಮಾಜೀಕರಣದ ನಿಯೋಗಿಗಳು ಸೀಮಿತ ಸಂಖ್ಯೆಯಲ್ಲಿದ್ದು ಮಗುವಿನ ವ್ಯಕ್ತಿತ್ವವನ್ನು ಪ್ರಭಾವಿಸುವಲ್ಲಿ ಅವುಗಳಲ್ಲಿ ಹೊಂದಿಕೆಯಿದೆ ಆದರೆ ಸಂಕೀರ್ಣ ಸಮಾಜಗಳಲ್ಲಿ ಸಾಮಾಜೀಕರಣದ ನಿಯೋಗಿಗಳು ಅನೇಕ ಈ ವಿಭಿನ್ನ ನಿಯೋಗಿಗಳು ಕೆಲವೊಮ್ಮೆ ಪರಸ್ಪರ ವಿರುದ್ಧ ಉದ್ದೇಶಗಳಿಗಾಗಿ ಕಾರ್ಯ ನಿರ್ವಹಿಸಬಹುದು .

1st Puc Sociology Chapter 4 Mcq Questions and Answers

ಹತ್ತು ಅಂಕದ ಪ್ರಶ್ನೆಗಳು ( 30-40 ವಾಕ್ಯಗಳಲ್ಲಿ ಉತ್ತರಿಸಿ)

1 ) ಸಾಮಾಜೀಕರಣವನ್ನು ವ್ಯಾಖ್ಯಾನಿಸಿ ಸಾಮಾಜಿಕರಣದಲ್ಲಿ ಸಂಸ್ಕೃತಿಯ ಪಾತ್ರವನ್ನು ವಿವರಿಸಿ .

ಸಾಮಾಜೀಕರಣವನ್ನು ಹಲವಾರು ವಿದ್ವಾಂಸರು ಈ ಕೆಳಕಂಡತೆ ಅರ್ಥೈಸಿದ್ದಾರೆ .

1. ‘ ಹ್ಯಾರಿ ಎಂ , ಜಾನ್‌ಸನ್ ‘ ರವರು “ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಲು ಪಾತ್ರದಾರಿಯನ್ನು ಸಮರ್ಥನನ್ನಾಗಿರುವ ಕಲಿಕೆಯೇ ಸಾಮಾಜೀಕರಣ ” ಎಂದಿದ್ದಾರೆ .

2. ಆಗ್‌ಬರ್ಗ್ ಮತ್ತು ನಿಮ್ಕಾಫ್ ರವರು “ ವ್ಯಕ್ತಿಯು ಗುಂಪಿನ ಪ್ರಮಾಣಕಗಳಿಗೆ ಅನುವರ್ತಿಸುವುದನ್ನು ಕಲಿಯುವ ಪ್ರಕ್ರಿಯೆಗೆ ಸಾಮಾಜೀಕರಣ ” ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ .

3. ಹೆಚ್ . ಟಿ . ಮಂಜುದಾರ್ “ ಮೂಲಭೂತ ಸ್ವಭಾವವು ಮಾನವ ಸ್ವಭಾವವಾಗಿ ಬದಲಾವಣೆಯಾಗುವ ಮತ್ತು ವ್ಯಕ್ತಿಯು ಒಬ್ಬ ಮಾನವನಾಗಿ ಪರಿವರ್ತಿತವಾಗುವ ಪ್ರಕ್ರಿಯೆಯೇ ಸಾಮಾಜೀಕರಣ ” ಎಂದು ಹೇಳಿದ್ದಾರೆ . ಸಾಮಾಜೀಕರಣದಲ್ಲಿ ಸಂಸ್ಕೃತಿಯ ಪಾತ್ರವನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು .

1 ) ಮಾನವನನ್ನು ಕ್ರಮಬದ್ಧವಾದ ಸಾಮಾಜಿಕ ವ್ಯಕ್ತಿಯನ್ನಾಗಿ ಪರಿವರ್ತಿಸಲು ಸಂಸ್ಕೃತಿಯು ಸಾಮಾಜೀಕರಣ ಕ್ರಿಯೆಗೆ ತಳಹದಿಯನ್ನು ನೀಡುತ್ತದೆ .

2) ವ್ಯಕ್ತಿಗೆ ತನ್ನ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಂಸ್ಕೃತಿಯು ಮಾರ್ಗದರ್ಶನವನ್ನು ನೀಡುತ್ತದೆ . ಇದನ್ನು ವ್ಯಕ್ತಿಯು ಸಾಮಾಜೀಕರಣ ಪ್ರಕ್ರಿಯೆಯಿಂದ ಕಲಿಯುತ್ತಾನೆ .

3 ) ಸಂಸ್ಕೃತಿಯ ಗುಣಗಳಾದ ನೈತಿಕತೆ , ಉತ್ತಮ ನಡವಳಿಕೆ , ಧನಾತ್ಮಕ ದೃಷ್ಟಿಕೋನ , ತತ್ವಗಳು ಮತ್ತು ಮೌಲ್ಯಗಳನ್ನು ಕಲಿಸುವಲ್ಲಿ ಸಾಮಾಜೀಕರಣ ಪ್ರಕ್ರಿಯೆಗೆ ಸಂಸ್ಕೃತಿ ಸಹಾಯ ಮಾಡುತ್ತದೆ .

4 ) ಸಂಸ್ಕೃತಿಯು ವ್ಯಕ್ತಿಗೆ ಸಮಾಜಕ್ಕೆ ಕೊಡುಗೆ ನೀಡಲು ಸಾಮಾಜೀಕರಣದ ಮೂಲಕ ಸಹಾಯ ಮಾಡುತ್ತದೆ .

5 ) ಸಾಮಾಜೀಕರಣದ ಪ್ರಕ್ರಿಯೆಯ ಮೂಲದ ವ್ಯಕ್ತಿಯ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಂಸ್ಕೃತಿಯು ಸಹಾಯಮಾಡುತ್ತದೆ .

6) ಸಂಸ್ಕೃತಿಯು ಸಾಮಾಜೀಕರಣದ ಸಹಾಯದಿಂದ ವಿವಿಧ ಸಾಮಾಜಿಕ ಸನ್ನಿವೇಶಗಳಲ್ಲಿ ವ್ಯಕ್ತಿಗೆ ತನ್ನ ನಡವಳಿಕೆಯ ವಿಧಾನಗಳನ್ನು ಸರಿಯಾಗಿ ಪಾಲಿಸುವಂತೆ ನಿರ್ದೇಶಿಸುತ್ತದೆ .

7) ಸಂಸ್ಕೃತಿಯು ಸಾಮಾಜೀಕರಣ ಪ್ರಕ್ರಿಯೆಯ ಮೂಲಕ ವ್ಯಕ್ತಿಗೆ ಇತರರ ಬಗ್ಗೆ ಸಹಾನುಭೂತಿ , ಅನುಕಂಪವನ್ನು ಬೆಳೆಸಲು ಸಹಾಯ ಮಾಡುತ್ತದೆ .

8) ಸಂಸ್ಕೃತಿಯು ಸಾಮಾಜೀಕರಣದ ಮೂಲಕ ಸಾಮಾಜಿಕ ಕ್ಷೇಮಾಭಿವೃದ್ಧಿಗೆ ದುಡಿಯಲು ಹಾಗೂ ಎಲ್ಲರ ಬಗ್ಗೆ ಧನಾತ್ಮಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ .

FAQ

1 ) “ ಸಂಸ್ಕೃತಿ ” ಎಂದರೇನು ?

ಪ್ರಾಣಿ ಸಮಾಜದಿಂದ ಮಾನವ ಸಮಾಜವನ್ನು ಬೇರ್ಪಡಿಸುವ ಮಾನದಂಡ ಅಥವಾ ವಿಶಿಷ್ಟ ಲಕ್ಷಣವೇ “ ಸಂಸ್ಕೃತಿಯಾಗಿದೆ .

2 ) ಸಾಮಾಜೀಕರಣ ಎಂದರೇನು ?

ವ್ಯಕ್ತಿಯನ್ನು ಸಾಮಾಜಿಕ ವ್ಯಕ್ತಿಯನ್ನಾಗಿ ಪರಿವರ್ತಿಸುವ ಈ ಪ್ರಕ್ರಿಯೆಯನ್ನು “ ಸಾಮಾಜೀಕರಣ ” ಎಂದು ಕರೆಯುವರು .

ಇತರೆ ವಿಷಯಗಳು :

First Puc Political Science Notes

First PUC History Notes 2022

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf 2022

All Subjects Notes

All Notes App

Leave a Reply

Your email address will not be published. Required fields are marked *