ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ – 3 ಸಾಮಾಜಿಕ ಪ್ರಕ್ರಿಯೆಗಳು ನೋಟ್ಸ್, 1st Puc Sociology Chapter 3 Question Answer Notes in Kannada Pdf Download Kseeb Solution For Class 11 Sociology Chapter 3 Notes Samajika Prakriyegalu Notes in Kannada 1st Puc Social Process Notes
ಅಧ್ಯಾಯ – 3 ಸಾಮಾಜಿಕ ಪ್ರಕ್ರಿಯೆಗಳು
1st Puc Sociology 3rd Chapter Question Answer
1 ) ಸಾಮಾಜಿಕ ಅಂತಃಕ್ರಿಯೆ ಎಂದರೇನು ?
ಸಮಾಜದ ನಿರ್ಮಿತಿಗೆ ಕಾರಣರಾದ ವ್ಯಕ್ತಿಗಳು ಪರಸ್ಪರ ಒಡನಾಟ ನಡೆಸುವುದನ್ನು ‘ ಸಾಮಾಜಿಕ ಅಂತಃಕ್ರಿಯೆ ‘ ಎನ್ನುತ್ತೇವೆ .
2 ) ಸಾಮಾಜಿಕ ಸಂಪರ್ಕ ಎಂದರೇನು ?
ಸಮಾಜದ ವ್ಯಕ್ತಿಗಳು ಸಂಪರ್ಕದ ಮುಖಾಂತರ ಪರಸ್ಪರ ಹತ್ತಿರಕ್ಕೆ ಬರಲು ಸಾಧ್ಯವಾಗುವುದು . ಇದು ಸಾಮಾಜಿಕ ಸಂಪರ್ಕ ಎನ್ನುವರು .
3 ) ಸಂವಹನ ಎಂದರೇನು ?
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಭಿಪ್ರಾಯ ಹಾಗೂ ಭಾವನೆಗಳನ್ನು ಅರ್ಥೈಸುವ ಸಾಮಾಜಿಕ ಅಂತಃಕ್ರಿಯೆಯ ಮಾಧ್ಯಮವನ್ನು ‘ ಸಂವಹನ ‘ ಎನ್ನುವರು .
4) ಅಂತಃಕ್ರಿಯೆಯ ಯಾವುದಾದರೂ ಒಂದು ಮೂಲಾಂಶವನ್ನು ತಿಳಿಸಿ .
‘ ಸಂಪರ್ಕ ‘ ಅಂತಃಕ್ರಿಯೆಯ ಮೂಲಾಂಶಕ್ಕೆ ಒಂದು ಉದಾಹರಣೆಯಾಗಿದೆ .
5 ) ಸಹಕಾರ ಎಂದರೇನು ?
ಸಾಮಾನ್ಯ ಉದ್ದೇಶಗಳನ್ನು ಸಾಧಿಸಲು ಅಥವಾ ಪರಸ್ಪರ ಹಂಚಿಕೊಳ್ಳಬಹುದಾದ ಪ್ರತಿಫಲಗಳನ್ನು ಪಡೆಯಲು ಜನರು ನಡೆಸುವ ಜಂಟಿ ಪ್ರಯತ್ನವನ್ನು ‘ ಸಹಕಾರ ‘ ಎನ್ನುವರು .
6 ) ಸಹಕಾರದ ಯಾವುದಾದರೂ ಒಂದು ಲಕ್ಷಣವನ್ನು ತಿಳಿಸಿ .
ಸಹಕಾರದ ಒಂದು ಲಕ್ಷಣವೆಂದರೆ – ‘ ಸಹಕಾರವು ಸಾರ್ವತ್ರಿಕವಾದದ್ದು ಮತ್ತು ನಿರಂತರವಾದದ್ದು ‘ .
7 ) ಸಹಕಾರದ ಯಾವುದಾದರೂ ಒಂದು ಪ್ರಕಾರವನ್ನು ತಿಳಿಸಿ .
‘ ಪ್ರತ್ಯಕ್ಷ ಸಹಕಾರ ‘ , ಸಹಕಾರದ ಒಂದು ಪ್ರಕಾರವಾಗಿದೆ .
8 ) ಪ್ರತ್ಯಕ್ಷ ಸಹಕಾರ ಎಂದರೇನು ?
ವ್ಯಕ್ತಿಗಳು ಸಾಮಾನ್ಯವಾಗಿ ಒಂದೇ ಉದ್ದೇಶವನ್ನು ಹೊಂದಿದ್ದು ಅದನ್ನು ಕೈಗೊಳ್ಳಲು ಒಂದೇ ಬಗೆಯ ಕಾರ್ಯದಲ್ಲಿ ಭಾಗವಹಿಸಿ ನಿರ್ವಹಿಸುವ ಕಾರ್ಯವನ್ನು ಪ್ರತ್ಯಕ್ಷ ಸಹಕಾರ ‘ ಎನ್ನುವರು .
ಉದಾ : ರೈತರು ಒಟ್ಟಾಗಿ ಹೊಲ – ಗದ್ದೆಗಳಲ್ಲಿ ದುಡಿಯುವುದು .
9 ) ಪರೋಕ್ಷ ಸಹಕಾರ ಎಂದರೇನು ?
ಒಂದು ಗುರಿಸಾಧನೆಗಾಗಿ ವ್ಯಕ್ತಿಗಳು ವಿವಿಧ ಬಗೆಯ ಕಾರ್ಯಗಳಲ್ಲಿ ಭಾಗಿಗಳಾಗಿ , ವೈಯಕ್ತಿಕ ನೆಲೆಯಲ್ಲಿ ಕೆಲಸ ಮಾಡಿದರು . ಉದ್ದೇಶವು ಒಂದೇ ಆಗಿರುತ್ತದೆ . ಇದನ್ನು ‘ ಪರೋಕ್ಷ ಸಹಕಾರ ‘ ಎನ್ನುವರು .
10 ) ‘ ಸ್ಪರ್ಧೆ ‘ ಎಂದರೇನು ?
ಪರಿಮಿತ ಪ್ರಮಾಣದಲ್ಲಿ ಸಿಗುವ ವಸ್ತುವಿಗಾಗಿ ವ್ಯಕ್ತಿಯೊಳಗೆ ಮತ್ತು ಸಮೂಹಗಳೊಳಗೆ ನಡೆಸುವ ಸತತ ಹೋರಾಟವನ್ನು ‘ ಸ್ಪರ್ಧೆ ‘ ಎನ್ನುವರು .
11 ) ಸ್ಪರ್ಧೆಯ ಒಂದು ಯಾವುದದರೂ ಪ್ರಕಾರವನ್ನು ತಿಳಿಸಿ .
ಆರ್ಥಿಕ ಸ್ಪರ್ಧೆ , ಸ್ಪರ್ಧೆಯ ಒಂದು ಪ್ರಕಾರವಾಗಿದೆ .
12 ) ಸ್ಪರ್ಧೆಯ ಯಾವುದಾದರೂ ಒಂದು ಲಕ್ಷಣವನ್ನು ತಿಳಿಸಿ .
ಸ್ಪರ್ಧೆಯು ನಿರಂತರವಾದುದು , ಸ್ಪರ್ಧೆಯ ಒಂದು ಲಕ್ಷಣವಾಗಿದೆ .
13 ) ಸ್ಪರ್ಧೆಯ ಯಾವುದಾದರೂ ಒಂದು ಪ್ರಾಮುಖ್ಯತೆಯನ್ನು ತಿಳಿಸಿ .
ಸ್ಪರ್ಧೆ ಒಂದು ಪ್ರಾಮುಖ್ಯತೆ ಎಂದರೆ – ‘ ಸ್ಪರ್ಧೆಯು ಕಾರ್ಯದಕ್ಷತೆಯನ್ನು ಹೆಚ್ಚಿಸುವುದು .
14 ) ಸಂಘರ್ಷ ಎಂದರೇನು ?
ಬೇರೆಯವರ ಇಚ್ಚೆಯನ್ನು ಉದ್ದೇಶಪೂರ್ವಕವಾಗಿ ಮತ್ತು ಒತ್ತಾಯ ಪೂರ್ವಕವಾಗಿ ಹತ್ತಿಕ್ಕುವ ಪ್ರಯತ್ನವನ್ನು ಸಂಘರ್ಷ ಎನ್ನುವರು .
15 ) ಸಂಘರ್ಷದ ಯಾವುದಾದರೂ ಒಂದು ಲಕ್ಷಣವನ್ನು ತಿಳಿಸಿ .
ಸಂಘರ್ಷದ ಒಂದು ಲಕ್ಷಣವೆಂದರೆ – ಸಂಘರ್ಷವು ವೈಯಕ್ತಿಕ ಕ್ರಿಯೆಯಾಗಿದೆ ‘ .
16 ) ಸಂಘರ್ಷದ ಒಂದು ಪ್ರಕಾರವನ್ನು ತಿಳಿಸಿ .
ಸಂಘರ್ಷದ ಒಂದು ಪ್ರಕಾರವೆಂದರೆ – ‘ ದಾವೆ ಅಥವಾ ಮೊಕ್ಕದ್ದಮೆ ‘ .
17 ) ಪಕ್ಷ ವೈಷಮ್ಯ ಎಂದರೇನು ?
ಒಂದು ಸಮೂಹದೊಳಗೆ ನಡೆಯುವ ಘರ್ಷಣೆಯನ್ನು ಪಕ್ಷ ವೈಷಮ್ಯ ‘ ಎನ್ನುವರು .
18 ) ಮೊಕದ್ದಮೆ ಎಂದರೇನು ?
‘ ಮೊಕದ್ದಮೆ ‘ ಎಂಬುದು ಒಂದು ಬಗೆಯ ಕಾನೂನಿನ ಹೋರಾಟ . ‘ ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹ ತನ್ನ ಹಕ್ಕುಗಳಿಗಾಗಿ ಅಥವಾ ತನಗೆ ನ್ಯಾಯ ದೊರಕಿಸಿಕೊಳ್ಳಲು ನ್ಯಾಯಾಲಯದ ಮೂಲಕ ನಡೆಸುವ ಹೋರಾಟಕ್ಕೆ ‘ ಮೊಕದ್ದಮೆ ‘ ಎನ್ನುವರು .
19 ) ಹೊಂದಾಣಿಕೆ ಎಂದರೇನು ?
ಮಾನವನು ತನ್ನ ಪರಿಸರದೊಂದಿಗೆ ಮತ್ತು ಸಹಚರರೊಂದಿಗೆ ಹೊಂದಿಕೊಳ್ಳುತ್ತಾ ಸಾಗುವ ಪ್ರಕ್ರಿಯೆಯನ್ನು ‘ ಹೊಂದಾಣಿಕೆ ‘ ಎನ್ನುವರು .
20 ) ಹೊಂದಾಣಿಕೆಯ ಯಾವುದಾದರೂ ಒಂದು ಲಕ್ಷಣವನ್ನು ತಿಳಿಸಿ .
ಹೊಂದಾಣಿಕೆಯ ಒಂದು ಲಕ್ಷಣವೆಂದರೆ ‘ ಹೊಂದಾಣಿಕೆಯು ನಿರಂತರವಾದುದು .
21 ) ಹೊಂದಾಣಿಕೆಯ ಯಾವುದಾದರೂ ಒಂದು ವಿಧಾನವನ್ನು ತಿಳಿಸಿ .
ಹೊಂದಾಣಿಕೆಯ ಒಂದು ವಿಧಾನವೆಂದರೆ – ‘ ಮಧ್ಯಸ್ಥಗಾರನ ಪಾತ್ರ .
22 ) ಬಲಪ್ರಯೋಗಕ್ಕೆ ಮಣಿಯುವುದು ಎಂದರೇನು ?
ಬಲ ಪ್ರಯೋಗದ ಬಳಕೆಯಿಂದ ಅಥವಾ ಅದರ ಬೆದರಿಕೆಯೊಡ್ಡಿ ಒಮ್ಮೆಮ್ಮೆ ಸಂಘರ್ಷವನ್ನು ನಿಲ್ಲಿಸಬಹುದು . ಇದನ್ನು ಬಲಪ್ರಯೋಗ ಎಂದು ಕರೆಯಲಾಗಿದೆ .
23 ) ರಾಜಿ ಮತ್ತು ಒಪ್ಪಂದ ಎಂದರೇನು ?
ಸಂಘರ್ಷ ನಿರತ ಪಕ್ಷಗಳು ಸಮಬಲರಾಗಿದ್ದು ಸಂಘರ್ಷವನ್ನು ಮುಂದುವರೆಸಲು ಇಷ್ಟ ಪಡದೇ ಇದ್ದಾಗ , ಪರಸ್ಪರ ತಮ್ಮ ಧೋರಣೆಯನ್ನು ಕೈ ಬಿಟ್ಟು ಕೊಡುವ ಮತ್ತು ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದನ್ನು ಒಪ್ಪಂದ ಅಥವಾ ರಾಜಿ ಎನ್ನುವರು .
24 ) ಉದಾತೀಕರಣ ಎಂದರೇನು ?
ಅಕ್ರಮಶೀಲ ಪ್ರವೃತ್ತಿಯನ್ನು ತೊರೆದು ಸೌಹಾರ್ಧಯುತ ಸಹಜೀವನ ನಡೆಸುವ ಪ್ರಯತ್ನವೇ ಉದಾತ್ತೀಕರಣ ಎನಿಸಿದೆ .
25 ) ಸ್ವಾಂಗೀಕರಣ ಎಂದರೇನು ?
ಒಬ್ಬ ವ್ಯಕ್ತಿ ಹಾಗೂ ಸಮೂಹ ನಿಧಾನಗತಿಯಲ್ಲಿ ಹೊಸ ಸ್ಥಿತಿಗತಿಗಳಲ್ಲಿ ಲೀನವಾಗುವುದನ್ನು ಅಂದರೆ ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯಲ್ಲಿ ಲೀನವಾಗುವುದನ್ನು ‘ ಸ್ವಾಂಗೀಕರಣ ‘ ಎನ್ನುವರು .
26 ) ಸ್ವಾಂಗೀಕರಣದ ಯಾವುದಾದರೂ ಒಂದು ಲಕ್ಷಣವನ್ನು ತಿಳಿಸಿ .
ಸ್ವಾಂಗೀಕರಣದ ಒಂದು ಲಕ್ಷಣವೆಂದರೆ – ‘ ಸ್ವಾಂಗೀಕರಣವು ಯಾವುದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ‘.
27 ) ಸ್ವಾಂಗೀಕರಣಕ್ಕೆ ಸಹಾಯಕವಾದ ಯಾವುದಾದರೂ ಒಂದು ಅಂಶವನ್ನು ತಿಳಿಸಿ .
ಸ್ವಾಂಗೀಕರಣಕ್ಕೆ ಸಹಾಯಕವಾದ ಒಂದು ಅಂಶವೆಂದರೆ ‘ ಸಹನೆ ‘ ,
28 ) ಆರ್ಥಿಕ ಸಂಸ್ಥೆಗೆ ಯಾವುದಾದರೂ ಒಂದು ಉದಾಹರಣೆ ಕೊಡಿ .
ಆರ್ಥಿಕ ಸಂಸ್ಥೆಗೆ ಒಂದು ಉದಾಹರಣೆ ‘ ಬ್ಯಾಂಕ್ ‘ .
1st Puc Sociology Chapter 3 Question Answer in Kannada
II . ಎರಡು ಅಂಕದ ಪ್ರಶ್ನೆಗಳು : ( 2-3 ವಾಕ್ಯದಲ್ಲಿ ಉತ್ತರಿಸಿ )
1 ) ಸಂವಹನದ ಯಾವುದಾದರೂ ಎರಡು ವಿಧಗಳನ್ನು ತಿಳಿಸಿ .
ಸಂವಹನದ ಎರಡು ವಿಧಗಳೆಂದರೆ –
1 ) ಸಂವೇದನೆ 2 ) ಸಂವೇಗ
2 ) ಸಾಮಾಜಿಕ ಪ್ರಕ್ರಿಯೆ ಎಂದರೇನು ?
ಸಾಮಾಜಿಕ ಅಂತಃಕ್ರಿಯೆಗಳು ಏರ್ಪಡುವ ವಿವಿಧ ರೂಪಗಳನ್ನು ಸಾಮಾಜಿಕ ಪ್ರಕ್ರಿಯೆಗಳೆಂದು ಕರೆಯುತ್ತಾರೆ .
3 ) ಸಾಮಾಜಿಕ ಪ್ರಕ್ರಿಯೆಯ ಯಾವುದಾದರೂ ಎರಡು ಪ್ರಕಾರಗಳನ್ನು ತಿಳಿಸಿ ,
ಸಾಮಾಜಿಕ ಪ್ರಕ್ರಿಯೆಯ ಎರಡು ಪ್ರಕಾರಗಳೆಂದರೆ 1 ) ಸಹಕಾರ 2 ) ಸ್ಪರ್ಧೆ
4 ) Co – operation ಎಂಬ ಪದ ಹೇಗೆ ಉತ್ಪತ್ತಿಯಾಯಿತು ?
ಕೋ – ಆಪರೇಷನ್ ‘ ( Co – operation ) ಎಂಬ ಪದವು ಲ್ಯಾಟಿನ್ ಭಾಷೆಯ ‘ ಕೋ ‘ ( Co ಎಂದರೆ ಒಟ್ಟಿಗೆ ಸೇರು ) ಮತ್ತು ಅಪರರಿ ( Operari ಎಂದರೆ ಕೆಲಸಮಾಡು ) ಎಂಬ ಶಬ್ದಗಳಿಂದ ಉತ್ಪತ್ತಿಯಾಗಿದೆ . ಒಟ್ಟಿಗೆ ಸೇರಿ ಕೆಲಸ ಮಾಡುವುದು ಅಥವಾ ದುಡಿಯುವುದೇ ಸಹಕಾರ ಎಂದು ಎನಿಸಿದೆ .
5 ) ಸಹಕಾರದ ಎರಡು ಪ್ರಕಾರಗಳನ್ನು ತಿಳಿಸಿ .
ಸಹಕಾರದ 2 ಪ್ರಕಾರಗಳೆಂದರೆ 1 ) ಪ್ರತ್ಯಕ್ಷ ಸಹಕಾರ 2 ) ಪರೋಕ್ಷ ಸಹಕಾರ
6 ) ಸಹಕಾರದ ಎರಡು ಅನುಕೂಲತೆಗಳನ್ನು ತಿಳಿಸಿ .
ಸಹಕಾರದ ಎರಡು ಅನುಕೂಲತೆಗಳೆಂದರೆ
1 ) ಸಹಕಾರವು ಪ್ರಗತಿ ಸಾಧಿಸಲು ಸಹಾಯಕವಾದದ್ದು : ಸಹಕಾರವು ಸಮಾಜದ ಪ್ರಗತಿಗೆ ಅತೀ ಅವಶ್ಯಕವಾಗಿದೆ . ಕೃಷಿ , ಉದ್ದಿಮೆ , ಸಾರಿಗೆ ಸಂಪರ್ಕ , ತಾಂತ್ರಿಕತೆ ಮೊದಲಾದ ಕ್ಷೇತ್ರಗಳಲ್ಲಿ ಸಹಕಾರವಿಲ್ಲದೆ ಪ್ರಗತಿ ಸಾಧಿಸುವುದು ಅಸಾಧ್ಯ .
2 ) ಸಹಕಾರವು ನಮ್ಮ ಜೈವಿಕ ಅಸ್ತಿತ್ವಕ್ಕೆ ಅಗತ್ಯವಾದುದು : ಮಾನವ ಜನಾಂಗದ ಮುಂದುವರೆಯುವಿಕೆಯು ಸ್ತ್ರೀ ಪುರುಷರ ನಡುವೆ ಸಹಕಾರವಿರಬಹುದಾದ ಅಗತ್ಯವೂ ಅನಿವಾರ್ಯವು ಹೌದು .
7) ಸ್ಪರ್ಧೆ ಎಂದರೇನು ?
ಪರಿಮಿತ ಪ್ರಮಾಣದಲ್ಲಿ ಸಿಗುವ ವಸ್ತುವಿಗಾಗಿ ವ್ಯಕ್ತಿಯೊಳಗೆ ಮತ್ತು ಸಮೂಹದೊಳಳಗೆ ನಡೆಯುವ ಸತತ ಹೋರಾಟಕ್ಕೆ ಸ್ಪರ್ಧೆ ಎನ್ನುವರು .
8 ) ಸ್ಪರ್ಧೆಯ ಯಾವುದಾದರೂ ಎರಡು ಪ್ರಕಾರಗಳನ್ನು ತಿಳಿಸಿ .
ಸ್ಪರ್ಧೆಯ ಎರಡು ಪ್ರಕಾರಗಳೆಂದರೆ 1 ) ರಾಜಕೀಯ ಸ್ಪರ್ಧೆ 2) ಆರ್ಥಿಕ ಸ್ಪರ್ಧೆ
9 ) ಸ್ಪರ್ಧೆಯ ಯಾವುದಾದರು ಎರಡು ಕಾರ್ಯಗಳನ್ನು ತಿಳಿಸಿ ?
ಸ್ಪರ್ಧೆಯ ಎರಡು ಕಾರ್ಯಗಳೆಂದರೆ –
1 ) ಸ್ಪರ್ಧೆಯು ಹೊಸ ಅನುಭವ ಹಾಗೂ ಸಾಧನೆಗೆ ಪ್ರೇರಣೆ ನೀಡುವುದು
2 ) ಸ್ಪರ್ಧೆಯು ಕಾರ್ಯ ದಕ್ಷತೆಯನ್ನು ಹೆಚ್ಚಿಸುತ್ತದೆ .
10 ) ಸಂಘರ್ಷ ಎಂದರೇನು ?
ಬೇರೆಯವರ ಇಚ್ಛೆಯನ್ನು ಉದ್ದೇಶ ಪೂರ್ವಕವಾಗಿ ಮತ್ತು ಒತ್ತಾಯ ಪೂರ್ವಕವಾಗಿ ಹತ್ತಿಕ್ಕುವ ಪ್ರಯತ್ನವೇ ಸಂಘರ್ಷ ಎನ್ನುತ್ತಾರೆ .
11 ) ಜಾರ್ಜಸಿಮ್ಮೆಲ್ ನೀಡಿದ ಸಂಘರ್ಷದ ಯಾವುದಾದರೂ ನಾಲ್ಕು ಪ್ರಕಾರ ತಿಳಿಸಿ .
ಜಾರ್ಜಸಿಮ್ಮೆಲ್ ನೀಡಿದ ಸಂಘರ್ಷದ ನಾಲ್ಕು ಪ್ರಕಾರಗಳೆಂದರೆ –
1 ) ಯುದ್ಧ
2 ) ಪಕ್ಷವೈಷಮ್ಯ ಅಥವಾ ಅಂತಃಕಲಹ
3 ) ದಾವೆ ಅಥವಾ ಮೊಕದ್ದಮೆ
4 ) ಅವೈಯಕ್ತಿಕ ಆದರ್ಶಗಳ ನಡುವಿನ ಸಂಘರ್ಷ ಅಥವಾ ತಾತ್ವಿಕನ ಘರ್ಷ .
12 ) ಹೊಂದಾಣಿಕೆ ಎಂದರೇನು ?
ಮಾನವನು ತನ್ನ ಪರಿಸರದೊಂದಿಗೆ ಮತ್ತು ಸಹಚರರೊಂದಿಗೆ ಹೊಂದಿಕೊಳ್ಳುತ್ತಾ ಸಾಗುವ ಪ್ರಕ್ರಿಯೆಯನ್ನು ‘ ಹೊಂದಾಣಿಕೆ ‘ ಎನ್ನುವರು .
13 ) ಹೊಂದಾಣಿಕೆಯ ಯಾವುದಾದರೂ ಎರಡು ಪ್ರಕ್ರಿಯೆಗಳನ್ನು ತಿಳಿಸಿ ,
ಹೊಂದಾಣಿಕೆಯ ಎರಡು ಪ್ರಕ್ರಿಯೆಗಳೆಂದರೆ – –
1 ) ಬಲಪ್ರಯೋಗಕ್ಕೆ ( ಒತ್ತಾಯಕ್ಕೆ ) ಮಣಿಯುವುದು .
2 ) ಒಪ್ಪಂದ ಅಥವಾ ರಾಜಿ .
14 ) ಸಂಯುಕ್ತಿಕ ವಿವರಣೆ ಎಂದರೇನು ?
ತಮ್ಮ ತಪ್ಪುಗಳಿಗೆ ಹಾಗೂ ವೈಫಲ್ಯಗಳಿಗೆ ಯುಕ್ತಿಪೂರ್ವಕವಾಗಿ ವಿವರಣೆ ಕೊಟ್ಟು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ‘ ಸಂಯುಕ್ತಿಕ ‘ ಎನ್ನುವರು
15 ) ಸ್ವಾಂಗೀಕರಣ ಎಂದರೇನು ?
ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯಲ್ಲಿ ಲೀನವಾಗುವುದನ್ನು ಸ್ವಾಂಗೀಕರಣ ಎನ್ನುವರು .
16 ) ಸ್ಟಾಂಗೀಕರಣದ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ .
ಸ್ವಾಂಗೀಕರಣದ ಎರಡು ಲಕ್ಷಣಗಳೆಂದರೆ –
1 ) ಸ್ವಾಂಗೀಕರನವು ಯಾವುದೇ ಒಂದು ಕ್ಷೇತ್ರಕ್ಕೆ ಮೀಸಲಾಗಿರುವುದಿಲ್ಲ .
2 ) ಸ್ವಾಂಗೀಕರಣವು ಮಂದಗತಿಯಲ್ಲಿ ಕ್ರಮವಾಗಿ ಸಾಗುವ ಪ್ರಕ್ರಿಯೆಯಾಗಿದೆ .
17 ) ಸ್ವಾಂಗೀಕರಣದ ಯಾವುದಾದರೂ ಎರಡು ಸಹಾಯಕವಾದ ಅಂಗಗಳನ್ನು ಬರೆಯಿರಿ ,
ಸ್ವಾಂಗೀಕರಣದ ಸಹಾಯಕ್ಕೆ ಎರಡು ಅಂಶಗಳೆಂದರೆ –
1 ) ಸಹನೆ 2 ) ಅನೋನ್ಯ ಸಾಮಾಜಿಕ ಬಾಂಧವ್ಯ
1st PUC Sociology 3nd Chapter Notes in Kannada
III . ಐದು ಅಂಕದ ಪ್ರಶ್ನೆಗಳು : ( 10-15 ವಾಕ್ಯಗಳಲ್ಲಿ ಉತ್ತರಿಸಿ )
1 ) ಸಾಮಾಜಿಕ ಅಂತಃಕ್ರಿಯೆ ಎಂದರೇನು ? ಅದರ ಮೂಲಾಂಶಗಳನ್ನು ವಿವರಿಸಿ ,
ಸಮಾಜದ ನಿರ್ಮಿತಿಗೆ ಕಾರಣರಾದ ವ್ಯಕ್ತಿಗಳು ಪರಸ್ಪರ ಒಡನಾಟ ನಡೆಸುವುದನ್ನು ‘ ಸಾಮಾಜಿಕ ಅಂತಃಕ್ರಿಯೆ ‘ ಎನ್ನುವರು . ಪಾರ್ ಮತ್ತು ಬರ್ಗೆಸ್’ರವರು ಸಾಮಾಜಿಕ ಅಂತಃಕ್ರಿಯೆಯ ಎರಡು ಮೂಲಾಂಶಗಳನ್ನು ಗುರ್ತಿಸಿದ್ದಾರೆ . ಅವುಗಳೆಂದರೆ
1 ) ಸಂಪರ್ಕ : ವ್ಯಕ್ತಿಗಳು ಪರಸ್ಪರ ಹತ್ತಿರ ಬರಲು ಸಾಧ್ಯವಾಗುವ ಪ್ರಕ್ರಿಯೆಗೆ ಸಂಪರ್ಕ ‘ ಎನ್ನುವರು . ಸಂಪರ್ಕವಿಲ್ಲದೆ ಅಂತಃಕ್ರಿಯೆ ಏರ್ಪಡಲಾಗದು . ಇದು ಅಂತಃಕ್ರಿಯೆಯ ಆರಂಭಿಕ ಹಂತ ಸಂಪರ್ಕಗಳಲ್ಲಿ ಎರಡು ಪ್ರಕಾರಗಳಿವೆ .
ಪ್ರಾದೇಶಿಕ ಸಂಪರ್ಕ : ನಿರ್ದಿಷ್ಟ ಪ್ರದೇಶದಲ್ಲಿರುವ ಸಮಕಾಲೀನ ವ್ಯಕ್ತಿಗಳು ಸಮೂಹದೊಳಗಿನ ಸಂಪರ್ಕವನ್ನು ಸೂಚಿಸುವುದನ್ನು ಪ್ರಾದೇಶಿಕ ಸಂಪರ್ಕ ಎನ್ನುವರು .
ಸಾಮೂಹಿಕ ಸಂಪರ್ಕ : ಹಿರಿಯ ತಲೆಮಾರುಗಳಿಂದ ರೂಢಿಗತವಾಗಿ ಬಂದ ಸಂಪ್ರದಾಯಗಳನ್ನು ಸಾಮೂಹಿಕ ಸಂಪರ್ಕ ಎನ್ನುವರು .
2 ) ಸಂವಹನ :
ಸಂವಹನವು ಸಾಮಾಜಿಕ ಅಂತಃಕ್ರಿಯೆಯ ಮಾಧ್ಯಮವಾಗಿದೆ . ಸಂವಹನದ ಮೂಲಕ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಭಾವನೆ ಹಾಗೂ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ . ಸಂವಹನಗಳಲ್ಲಿ ಮೂರು ವಿಧಗಳನ್ನು ಕಾಣಬಹುದು ಅವುಗಳೆಂದರೆ –
1 ) ಸಂವೇದನೆ 2 ) ಸಂವೇಗ 3 ) ಭಾವನೆಗಳ ಮತ್ತು ವಿಚಾರಗಳು
2 ) ಸಾಮಾಜಿಕ ಪ್ರಕ್ರಿಯೆ ಎಂದರೇನು ? ವಿವರಿಸಿ .
ಸಾಮಾಜಿಕ ಅಂತಃಕ್ರಿಯೆಗಳು ಏರ್ಪಡುವ ವಿವಿಧ ರೂಪಗಳನ್ನು ಸಾಮಾಜಿಕ ಪ್ರಕ್ರಿಯೆ’ಗಳೆಂದು ಕರೆಯುವರು . ಮೆಕ್ಕೆವರ್ ಮತ್ತು ಪೇಜ್ : ‘ ಸಮೂಹದ ಸದಸ್ಯರುಗಳ ಸಂಬಂಧಗಳು ಒಮ್ಮೆ ಒಗ್ಗೂಡಿದಾಗ ವಿಶೇಷ ರೂಪವನ್ನು ಪಡೆಯುವ ವಿಧಾನವನ್ನು ಸಾಮಾಜಿಕ ಪ್ರಕ್ರಿಯೆಗಳು ಎಂದಿದ್ದಾರೆ .
ಎ.ಡೂಗ್ರೀನ್ ರವರು – ‘ ಸಾಮಾಜಿಕ ಅಂತಃಕ್ರಿಯೆಗಳು ಏರ್ಪಡುವ ವಿಶಿಷ್ಟ ವಿಧಾನಗಳನ್ನು ಸಾಮಾಜಿಕ ಪ್ರಕ್ರಿಯೆಗಳು ‘ ಎನ್ನಬಹುದು ಎಂದು ಅಭಿಪ್ರಾಯ ಪಡುತ್ತಾರೆ .
ಹಾರ್ಟನ್ ಮತ್ತು ಹಂಟ್ ‘ ಸಾಮಾಜಿಕ ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ , ಪುನರಾವರ್ತಿತ ಸ್ವರೂಪದ ವರ್ತನೆಯ ಬಗೆಗಳನ್ನು ಸಾಮಾಜಿಕ ಪ್ರಕ್ರಿಯೆಗಳು ‘ ಎನ್ನಬಹುದು ಎಂದಿದ್ದಾರೆ .
ಸಮಾಜಶಾಸ್ತ್ರಜ್ಞರಾದ ಪಾರ್ಕ್ ಮತ್ತು ಬರ್ಗೆಸ್‌ರವರು ಸಾಮಾಜಿಕ ಪ್ರಕ್ರಿಯೆಗಳನ್ನು ಐದು ಪ್ರಕಾರಗಳಾಗಿ ವಿಂಗಡಿಸಿದ್ದಾರೆ . ಅವುಗಳೆಂದರೆ –
ಸಾಮಾಜಿಕ ಪ್ರಕ್ರಿಯೆಯ ಪ್ರಕಾರಗಳು –
1 ) ಸಹಕಾರ
2 ) ಸ್ಪರ್ಧೆ
3 ) ಸಂಘರ್ಷ
4 ) ಹೊಂದಾಣಿಕೆ
5 ) ಸ್ವಾಂಗೀಕರಣ
3 ) ಸಹಕಾರದ ಎರಡು ಪ್ರಕಾರಗಳು ಯಾವುವು ?
‘ ಒಟ್ಟಿಗೆ ಸೇರಿ ಕೆಲಸ ಮಾಡುವುದನ್ನು ‘ ಸಹಕಾರ ಎಂದು ಕರೆಯುವರು . “ ಸಹಕಾರ’ವನ್ನು ಎರಡು ಪ್ರಕಾರಗಳಾಗಿ ವಿಂಗಡಿಸಿದ್ದಾರೆ . ಅವುಗಳೆಂದರೆ –
1 ) ಪ್ರತ್ಯಕ್ಷ ಸಹಕಾರ
2 ) ಪರೋಕ್ಷ ಸಹಕಾರ
1 ) ಪ್ರತ್ಯಕ್ಷ ಸಹಕಾರ : ಪ್ರತ್ಯಕ್ಷ ಸಹಕಾರದಲ್ಲಿ ವ್ಯಕ್ತಿಗಳು ಸಾಮಾನ್ಯವಾಗಿ ಒಂದೇ ಉದ್ದೇಶವನ್ನು ಹೊಂದಿದ್ದು , ಹೊಲಗದ್ದೆಗಳಲ್ಲಿ ಜನರು ಒಟ್ಟಾಗಿ ದುಡಿಯುವುದು . ಅದನ್ನು ಕೈಗೊಳ್ಳಲು ಒಂದೇ ಬಗೆಯ ಕಾರ್ಯದಲ್ಲಿ ಭಾಗವಹಿಸುತ್ತಾರೆ . ಸಹಕಾರದಲ್ಲಿ ಜನರು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಾರೆ . ಸಹಕಾರದಲ್ಲಿ ಜನರು ಸಾಮಾನ್ಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒಟ್ಟಾಗಿ ದುಡಿಯುವರು .
ಉದಾಹರಣೆಗೆ : ಉತ್ಸವ , ಧಾರ್ಮಿಕ ಸಮಾರಂಭಗಳಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸುವುದು .
2 ) ಪರೋಕ್ಷ ಸಹಕಾರ : ಪರೋಕ್ಷ ಸಹಕಾರದಲ್ಲಿ ಒಂದು ಗುರಿಸಾಧನೆಗಾಗಿ ವ್ಯಕ್ತಿಗಳು ವಿವಿಧ ಬಗೆಯ ಕಾರ್ಯಗಳಲ್ಲಿ ಭಾಗಿಗಳಾಗುತ್ತಾರೆ . ವ್ಯಕ್ತಿಗಳು ಇಲ್ಲಿ ವೈಯಕ್ತಿಕ ನೆಲೆಯಲ್ಲಿ ಕೆಲಸ ಮಾಡುತ್ತಾರೆ . ಆದರೂ ಅವರ ಉದ್ದೇಶವು ಒಂದೇ ಆಗಿರುತ್ತದೆ . ಈ ಬಗೆಯ ಸಹಕಾರವು ಶ್ರಮವಿಭಜನೆ ಮತ್ತು ವಿಶೇಷ ಪರಿಣತಿಯನ್ನು ಆಧರಿಸಿದೆ . ಇಂದಿನ ಆಧುನಿಕ ಸಮಾಜದಲ್ಲಿ ಪರೋಕ್ಷ ಸಹಕಾರವು ಪ್ರಮುಖ ಪಾತ್ರ ವಹಿಸುತ್ತದೆ .
ಉದಾಹರಣೆಗೆ : ಹೀಗೆ ಸಹಕಾರವು ವ್ಯಕ್ತಿಗಳಲ್ಲಿ ಅನ್ನೋನ್ಯತೆ ಹಾಗೂ ಐಕ್ಯತೆಯನ್ನು ಬೆಳೆಸುವುದು . ಸಮೂಹಗಳಿಗೆ ಸಾಮಾಜಿಕ ಸಂತೃಪ್ತಿ ತರುವುದು .
ಬ್ಯಾಂಕಿನ ಬೇರೆ ಬೇರೆ ಸಿಬ್ಬಂದಿ ವರ್ಗದವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವುದರಿಂದ ಬ್ಯಾಂಕಿನ ಕೆಲಸ ಸುಗಮವಾಗಲು ಸಾಧ್ಯ . ಇದರಿಂದ ಬ್ಯಾಂಕಿನ ನೌಕರರಲ್ಲಿ ಸಹಕಾರದ ಪ್ರಜ್ಞೆ ಇರಬೇಕಾಗುತ್ತದೆ .
ಇದೇ ರೀತಿ ಆಸ್ಪತ್ರೆಗಳಲ್ಲಿ ಕೈಗಾರಿಕಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ .
4 ) ಮಾನವನ ಸಾಮಾಜಿಕ ಜೀವನದಲ್ಲಿ ಸಹಕಾರ ಅಗತ್ಯವಿದೆ ವಿವರಿಸಿ .
ಮಾನವನ ಸಾಮಾಜಿಕ ಜೀವನದಲ್ಲಿ ಸಹಕಾರ ತುಂಬಾ ಅಗತ್ಯವಿದೆ . ಏಕೆಂದರೆ “ ಸಹಕಾರವು ಸಾಮಾಜಿಕ ಅಗತ್ಯತೆಯಾಗಿದೆʼ . ಅದು ನಮ್ಮ ಜೀವನವನ್ನು ಸಂಪೂರ್ಣವಾಗಿ ಆವರಿಸಿ ನಿಲ್ಲುತ್ತದೆ .
ಮೆಕೈವರ್ ಮತ್ತು ಪೇಜ್‌ರವರು ಹೇಳಿರುವಂತೆ ಸಮಾನ ಆಸಕ್ತಿಗಳ ಪೂರೈಕೆಯಿಂದ ದೃಷ್ಟಿಯಿಂದ ಇತರರೊಂದಿಗೆ ಸಹಕರಿಸಿ ಸಹಕಾರವಿಲ್ಲದೆ ಮತ್ತು ದುಡಿದಲ್ಲದೇ ಮಾನವನು ಇತರರೊಂದಿಗೆ ಸಹ ಜೀವನ ನಡೆಸಲಾರನು .
ಸಹಕಾರವು ನಮ್ಮ ಜೈವಿಕ ಅಸ್ತಿತ್ವಕ್ಕೆ ಕೂಡ ಅಗತ್ಯವಾಗಿದೆ . ಮಾನವರು ಸಹಕಾರದ ಹೊರತಾಗಿ ಬದುಕುವುದು ಅಸಾಧ್ಯ ಮಾನವ ಜನಾಂಗದ ಮುಂದುವರೆಯುವಿಕೆಯ ದೃಷ್ಟಿಯಿಂದಲಾದರೂ ಬೇಕಾದುದು ಅನಿವಾರ್ಯವೂ , ಅವಶ್ಯಕತೆಯೂ ಆಗದೆ ,
ಪ್ರಗತಿಯನ್ನು ಸಾಧಿಸಲು ಸಹಕಾರದ ಅಗತ್ಯವಿದೆ . ಕೃಷಿ , ಉದ್ದಿಮೆ , ಸಾರಿಗೆ ಸಹಕಾರವಿಲ್ಲದೆ ಪ್ರಗತಿ ಸಾಧಿಸುವುದು ಅಸಾಧ್ಯ .
5 ) ಸ್ಪರ್ಧೆ ಎಂದರೇನು ? ಅದರ ಮುಖ್ಯ ಪ್ರಕಾರಗಳನ್ನು ವಿವರಿಸಿ .
ಪರಿಮಿತ ಪ್ರಮಾಣದಲ್ಲಿ ಸಿಗುವ ವಸ್ತುವಿಗಾಗಿ ವ್ಯಕ್ತಿಗಳೊಳಗೆ ಮತ್ತು ಸಮೂಹಗಳೊಳಗೆ ನಡೆಯುವ ಸತತ ಹೋರಾಟಕ್ಕೆ ‘ ಸ್ಪರ್ಧೆ ‘ ಎನ್ನುವರು .
ಎಲ್ಲರೂ ಹಂಚಿಕೊಳ್ಳಲು ಸಾಧ್ಯವಾಗದ ನೇಮಕ ಉದ್ದೇಶಕ್ಕಾಗಿ ಇಬ್ಬರು ಅಥವಾ ಅದಕ್ಕೂ ಹೆಚ್ಚು ಜನರ ನಡುವೆ ನಡೆಯುವ ಹೋರಾಟವನ್ನು ಸ್ಪರ್ಧೆ ಎನ್ನುವರು .
ಸ್ಪರ್ಧೆಗಳಲ್ಲಿನ ಪ್ರಕಾರಗಳನ್ನು ಬರ್ನಾಡ್‌ರವರು ಈ ರೀತಿ ತಿಳಿಸಿದ್ದಾರೆ .
ಅವುಗಳೆಂದರೆ –
1 ) ಸಾಮಾಜಿಕ ಸ್ಪರ್ಧೆ
2 ) ಆರ್ಥಿಕ ಸ್ಪರ್ಧೆ
3 ) ರಾಜಕೀಯ ಸ್ಪರ್ಧೆ
4 ) ಸಾಂಸ್ಕೃತಿಕ ಸ್ಪರ್ಧೆ
5 ) ಜನಾಂಗೀಯ ಸ್ಪರ್ಧೆ
1 ) ಸಾಮಾಜಿಕ ಸ್ಪರ್ಧೆ : ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಾಮಾಜಿಕ ಸ್ಪರ್ಧೆಗಳು ಹೆಚ್ಚು ಕಂಡು ಬರುತ್ತವೆ . ವೈಯಕ್ತಿಕ ಪ್ರತಿಭೆ ಸಾಮರ್ಥ್ಯ ಮತ್ತು ಬುದ್ಧಿ ಶಕ್ತಿಯನ್ನು , ಸಾಧನೆ ಸಾಹಸಗಳನ್ನು ಗೌರವಿಸುವ ಎಲ್ಲಾ ಸಮಾಜಗಳಲ್ಲೂ ಸಾಮಾಜಿಕ ಸ್ಪರ್ಧೆ ಸ್ಪಷ್ಟವಾಗಿ ಕಂಡುಬರುತ್ತದೆ .
2 ) ಆರ್ಥಿಕ ಸ್ಪರ್ಧೆ : ಪುರುಷರ ನಡುವೆ ಸಹಕಾರವಿದೆ ಸಂಪರ್ಕ , ತಾಂತ್ರಿಕತೆ ಮೊದಲಾದ ಕ್ಷೇತ್ರಗಳಲ್ಲಿ ಆರ್ಥಿಕ ಸ್ಪರ್ಧೆಯು ಹೆಚ್ಚು ವ್ಯಾಪಕವಾಗಿ , ತೀವ್ರವಾಗಿ ಮತ್ತು ನಿರಂತರವಾಗಿ ಕಂಡು ಬರುವುದು . ಸಂಪತ್ತಿನ ಉತ್ಪಾದನೆ ವಿನಿಮಯ ವಿತರಣೆ ಮತ್ತು ಅನುಭೋಗ ಮುಂತಾದ ಆರ್ಥಿಕ ಚಟುವಟಿಕೆಗಳಲ್ಲಿ ಈ ಬಗೆಯ ಸ್ಪರ್ಧೆಯನ್ನು ಕಾಣಬಹುದು . ಜನರು ಸಂಪತ್ತಿಗಾಗಿ , ಲಾಭಕ್ಕಾಗಿ , ಉದ್ಯೋಗಗಳಿಸಲು , ಸಂಬಳ , ಕೂಲಿ , ಪಡೆಯಲು , ಆರ್ಥಿಕ ಸ್ಥಾನಗಳಿಸಲು ಕಕ್ಷಿದಾರರಿಂದ , ರೋಗಿಗಳಿಂದಲೂ ಹಣಪಡೆಯುವ ಸ್ಪರ್ಧೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಜನರು ನಿರಂತರ ಸ್ಪರ್ಧೆಯಲ್ಲಿ ತೊಡಗಿರುತ್ತಾರೆ .
3 ) ರಾಜಕೀಯ ಸ್ಪರ್ಧೆ : ರಾಜಕೀಯ ಅಧಿಕಾರಕ್ಕಾಗಿ ಪಕ್ಷದ ಸದಸ್ಯರುಗಳಲ್ಲಿ ನಿರಂತರ ಸ್ಪರ್ಧೆ ಏರ್ಪಟ್ಟಿರುತ್ತದೆ . ಇದು ಚುನಾವಣಾ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ .
4 ) ಸಾಂಸ್ಕೃತಿಕ ಸ್ಪರ್ಧೆ : ವಿಭಿನ್ನ ಸಾಂಸ್ಕೃತಿಕ ಸಮೂಹಗಳೊಳಗೆ , ಸಾಂಸ್ಕೃತಿಕ ಸ್ಪರ್ಧೆ ಕಂಡು ಬರುತ್ತದೆ . ವಿವಿಧ ಧರ್ಮಗಳಲ್ಲಿ ಅಂದರೆ ಇಸ್ಲಾಂ ಧರ್ಮ ಹಾಗೂ ಕ್ರೈಸ್ತ ಧರ್ಮ , ಭಾರತೀಯರು ಮತ್ತು ಪಾಶ್ಚಿಮಾತ್ಯರ ನಡುವಿನ ಸ್ಪರ್ಧೆಗಳನ್ನು ನಾವು ಕಾಣಬಹುದು . ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ . ಆರ್ಯರು – ದ್ರಾವಿಡರ ನಡುವಿನ ಸ್ಪರ್ಧೆಯ ಇವುಗಳಲ್ಲಿ ಒಂದಾಗಿದೆ .
5 ) ಜನಾಂಗೀಯ ಸ್ಪರ್ಧೆ : ಆರ್ಥಿಕ ಮತ್ತು ಪ್ರಾದೇಶಿಕ ಲಾಭಗಳಿಗಾಗಿ , ಸೀಮಿತ ದೃಷ್ಟಿಕೋನದ ಫಲವಾಗಿ ಮತ್ತು ರಾಜಕೀಯ ಉದ್ದೇಶಗಳಿಗಾಗಿ ವಿವಿಧ ಜನಾಂಗಗಳ ನಡುವೆ ಸ್ಪರ್ಧೆಯು ಹಿಂಸಾತ್ಮಕ ಹಾಗೂ ಅಹಿಂಸಾತ್ಮಾಕವಾಗಿರುತ್ತದೆ . ಉದಾ : ಬಿಳಿಯರು ಮತ್ತು ಕರಿಯರ ನಡುವಿನ ಸ್ಪರ್ದೆಯು ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಸರ್ವಸಾಮಾನ್ಯವಾಗಿದೆ .
6 ) ಸ್ಪರ್ಧೆಯ ಕಾರ್ಯಗಳಾವುವು ? ವಿವರಿಸಿ .
ಸ್ಪರ್ಧೆಯ ಕಾರ್ಯಗಳನ್ನು ಈ ಕೆಳಕಂಡಂತೆ ವಿವರಿಸಬಹುದು .
1. ಸ್ಪರ್ಧೆಯು ಕಾರ್ಯದಕ್ಷತೆಯನ್ನು ಹೆಚ್ಚಿಸುವುದು : ಸ್ಪರ್ಧೆಯು ಕ್ರಿಯಾತ್ಮಕವಾದ್ದರಿಂದ ವ್ಯಕ್ತಿಯನ್ನು ನಿರಂತರವಾಗಿ ದುಡಿಯುವಂತೆ ಪ್ರೇರೇಪಿಸುತ್ತದೆ . ಸಹಕಾರವು ಕಾರ್ಯಸಾಧಿಸಬಹುದಾದರೆ , ಸ್ಪರ್ಧೆಯ ಮುಖಾಂತರ ಕಾರ್ಯವು ಹೆಚ್ಚು ಸಮರ್ಥಕವಾಗಿ ನೆರವೇರುವುದು .
2.ಸ್ಪರ್ಧೆಯು ವ್ಯಕ್ತಿಗಳಿಗೆ ಸಾಮಾಜಿಕ ಸ್ಥಾನಮಾನ ಕಲ್ಪಿಸಿಕೊಡುವುದು : ವಿಭಿನ್ನ ವ್ಯಕ್ತಿಗಳಿಗೆ ಅವರವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಮಾಜಿಕ ಸ್ಥಾನಮಾನವನ್ನು ನೀಡುವಲ್ಲಿ ಸ್ಪರ್ಧೆಯು ಸಹಕಾರಿಯಾಗಿದೆ . ಪ್ರತಿಭೆಯನ್ನು ಗುರುತಿಸುವ ಏಕೈಕ ವಸ್ತುನಿಷ್ಟೆ ವಿಧಾನವೆಂದರೆ ಸ್ಪರ್ಧೆ ,
3. ಸ್ಪರ್ಧೆಯು ಹೊಸ ಅನುಭವ ಹಾಗೂ ಸಾಧನೆಗೆ ಪ್ರೇರಣೆ ನೀಡುವುದು : ಅಗಬರ್ಗ್ ಮತ್ತು ನಿಮ್‌ಕಾಫ್ ಹೇಳಿರುವಂತೆ ಸಾಮಾಜಿಕ ಮಾನ್ಯತೆಯನ್ನು ಹೊಸ ಅನುಭವಗಳನ್ನು ಪಡೆಯಬೇಕೆಂಬ ವ್ಯಕ್ತಿಗಳ ಬಯಕೆಗಳನ್ನು ಈಡೇರಿಸಲು ಸ್ಪರ್ಧೆಯು ಸೂಕ್ತ ಅವಕಾಶಗಳನ್ನು ನೀಡುವುದು .
4.ಸ್ಪರ್ಧೆಯು ಸಾಮಾಜಿಕ , ಆರ್ಥಿಕ ಹಾಗೂ ತಾಂತ್ರಿಕ ಪ್ರಗತಿಗೆ ಸಹಕಾರಿಯಾಗಿದೆ : ಉತ್ತಮ ಸ್ಪರ್ಧೆಯಿಂದ ಉತ್ಪಾದನೆ ಅಧಿಕಗೊಂಡ ಪ್ರಗತಿ ಸಾಧ್ಯವಾಗುವುದು , ಸ್ಪರ್ಧೆಯಲ್ಲಿ ಜಯಶೀಲರಾದವರು ತಮ್ಮ ವೈಯಕ್ತಿಕ ಉದ್ದೇಶಗಳನ್ನು ಸಾಧಿಸಿಕೊಳ್ಳುವುದರ ಜೊತೆಗೆ ಸಮಾಜದ ಏಳಿಗೆಗೂ ಕಾರಣರಾಗುವರು . ವ್ಯಕ್ತಿಗಳ ಮತ್ತು ಸಮೂಹಗಳ ಸ್ಪರ್ಧೆಯಿಂದ ಜನರಿಗೆ ಒಳ್ಳೆಯ ವಸ್ತುಗಳು ಮತ್ತು ಅವಕಾಶಗಳು ಸಿಗುವ ಸಾಧ್ಯತೆಯೂ ಇದೆ . ವ್ಯಾಪಾರ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ನಾವು ಇದನ್ನು ಕಾಣಬಹುದು .
5. ಸ್ಪರ್ಧೆಯು ಸಾಮಾಜಿಕ ಚಲನೆಗೆ ಕಾರಣವಾಗುವುದು : ಸ್ಪರ್ಧೆಯಿಂದಾಗಿ ಸಾಮಾಜಿಕ ಪರಿವರ್ತನೆಯ ವೇಗವು ತೀವ್ರವಾಗುವುದು . ಇದರ ಪರಿಣಾಮವಾಗಿ ವ್ಯಕ್ತಿಗಳ ಸಾಮಾಜಿಕ ಚಲನೆಗೆ ಅಂದರೆ ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಪ್ರವೇಶಿಸಲು ಅಥವಾ ಇದ್ದ ಸಾಮಾಜಿಕ ಅಂತಸ್ತಿನಲ್ಲಿಯೇ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸ್ಪರ್ಧೆಯು ಸಹಕಾರಿಯಾಗುವುದು .
7 ) ಜಾರ್ಜ್ ಸಿಮ್ಮೆಲ್ ಸಂಘರ್ಷದ ಪ್ರಕಾರಗಳಾವುವು ? ವಿವರಿಸಿ .
ಜಾರ್ಜ್ ಸಿಮ್ಮೆಲ್‌ರ ಪ್ರಕಾರ ಸಂಘರ್ಷವು ನಾಲ್ಕು ಮುಖ್ಯವಾದ ಪ್ರಕಾರಗಳಲ್ಲಿ ವ್ಯಕ್ತವಾಗುತ್ತದೆ . ಅವುಗಳೆಂದರೆ –
1 ) ಯುದ್ಧ
2 ) ಪಕ್ಷವೈಷಮ್ಯ ಅಥವಾ ಅಂತಃಕಲಹ
3 ) ಮೊಕದ್ದಮೆ ಅಥವಾ ದಾವೆ
4 ) ತಾತ್ವಿಕ ಸಂಘರ್ಷಗಳು
1 ) ಯುದ್ಧ : ಯುದ್ಧವು ಮಾನವರಲ್ಲಿ ಅತ್ಯಂತ ಆಳವಾಗಿ ಬೇರೂರಿರುವ ವಿರೋಧಾತ್ಮಕ ಆ . ವೇಗವನ್ನು ಪ್ರತಿನಿಧಿಸುವುದು : ದ್ವೇಷ , ಪ್ರತಿಕಾರ , ಸಂಪತ್ತು , ಸಾಮ್ರಾಜ್ಯ ವಿಸ್ತರಣೆ ಮುಂತಾದ ಗುರಿಗಳನ್ನು ಮುಂದಿಟ್ಟುಕೊಂಡು ಈ ಆ ವೇಗವು ಕಾರ್ಯರೂಪಕ್ಕೆ ಇಳಿದು ಯುದ್ಧದ ರೂಪದಲ್ಲಿ ಕಾಣಿಸಬಹುದು .
2) ಅವೈಯಕ್ತಿಕ ಆದರ್ಶಗಳ ನಡುವಿನ ಸಂಘರ್ಷ ಅಥವಾ ತಾತ್ವಿಕ ಸಂಘರ್ಷ : ವೈಯಕ್ತಿಕ ಕಾರಣಗಳಿಗಿಂತಲೂ ಕೆಲವು ತತ್ವಗಳಿಗಾಗಿ ಆದರ್ಶಗಳಿಗಾಗಿ ವ್ಯಕ್ತಿಗಳು ಹೋರಾಡುವುದುಂಟು . ಈ ಬಗೆಯ ಸಂಘರ್ಷದಲ್ಲಿ ಎದುರಾಳಿಗಳು ತಮ್ಮ ತತ್ವಗಳನ್ನು ಆದರ್ಶಗಳನ್ನು ಸಮರ್ಥಿಸಿಕೊಂಡು ಹೋರಾಡುವರು . ಇದು ಒಮ್ಮೊಮ್ಮೆ ಭಯಾನಕ ರೂಪ ತಾಳುವುದು ಉಂಟು .
3 ) ಪಕ್ಷ ವೈಷಮ್ಯ ಅಥವಾ ಅಂತಃಕಲಹ : ಪಕ್ಷ ವೈಷಮ್ಯ ಒಂದು ಸಮೂಹದೊಳಗೆ ನಡೆಯುವ ಘರ್ಷಣೆ , ಒಬ್ಬ ಕುಟುಂಬ ಸಂಘ , ಸಂಘಟನೆಯ ವ್ಯಕ್ತಿಯು ಅನ್ಯಾಯವಾಗಿದೆ ಎಂದು ತಿಳಿದಾಗ ತಮ್ಮ ಸಮೂಹ ಸಂಘ , ಸಂಘಟನೆಯ ವಿರುದ್ಧವೇ ಬಂಡೇಳಬಹುದು . ಉದಾಹರಣೆಗೆ : ಕುಟುಂಬದೊಳಗೆ , ರಾಜಕೀಯ ಪಕ್ಷದೊಳಗೆ , ಜಾತಿ ಸಮೂಹದೊಳಗೆ
4 ) ದಾವೆ ಅಥವಾ ಮೊಕದ್ದಮೆ : ದಾವೆಯು ಒಂದು ಬಗೆಯ ಕಾನೂನಿನ ಹೋರಾಟವಾಗಿದೆ . ಒಬ್ಬ ವ್ಯಕ್ತಿ ಅಥವಾ ಒಂದು ಸಂಘ ತಮಗೆ ನ್ಯಾಯ ದೊರಕಿಸಿಕೊಳ್ಳಲು ನ್ಯಾಯಾಲಯದ ಮೂಲಕ ಈ ಬಗೆಯ ಹೋರಾಟ ನಡೆಸಬಹುದು . ಈ ರೀತಿಯ ಹೋರಾಟದಲ್ಲಿ ಭಾವನಾತ್ಮಕ್ಕಿಂತಲೂ , ವಾಸ್ತವಿಕತೆಗೆ ಹೆಚ್ಚು ಪ್ರಾಧಾನ್ಯತೆಯಿದೆ .
10 ) ಹೊಂದಾಣಿಕೆಯ ಲಕ್ಷಣಗಳನ್ನು ವಿವರಿಸಿ .
ಹೊಂದಾಣಿಕೆಯ ಲಕ್ಷಣಗಳೆಂದರೆ :
ಹೊಂದಾಣಿಕೆಯ ಸಂಘರ್ಷದ ಸಹಜವಾದ ಫಲಶೃತಿಯಾಗಿದೆ : ಶಾಶ್ವತ ಅಥವಾ ತಾತ್ಕಾಲಿಕ ಸ್ವರೂಪದ ಒಪ್ಪಂದಗಳನ್ನು ಹೊಂದಾಣಿಕೆ ‘ ಎನ್ನುವರು . ವ್ಯಕ್ತಿಗಳ ಅಥವಾ ಪಂಗಡಗಳ ನಡುವಿನ ಸಂಘರ್ಷವನ್ನು ಇಷ್ಟ ಪಡದೆ ಇದ್ದಾಗ ಇವರು ಹೊಂದಾಣಿಕೆಗೆ ಸಿದ್ಧರಾಗುತ್ತಾರೆ . ಸಂಘರ್ಷವನ್ನು ಎಡೆಬಿಡದೆ ನಿರಂತರವಾಗಿ ನಡೆಸಲು ಸಾಧ್ಯವಾಗದಿರುವುದರಿಂದಲೇ ಅದು ಸಹಜವಾಗಿ ಹೊಂದಾಣಿಕೆಗೆ ಅವಕಾಶ ನೀಡುವುದು .
ಹೊಂದಾಣಿಕೆಯು ವ್ಯಕ್ತಿಗಳ ಪೂರ್ಣಅರಿವಿನಿಂದ ಅಥವಾ ಅರಿವಿಲ್ಲದೆಯೇ ಸಂಭವಿಸಬಹುದು : ಮಾನವನು ತನ್ನ ಸಾಮಾಜಿಕ ಪರಿಸರಕ್ಕೆ ತನಗೆ ಅರಿವಿಲ್ಲದೆ ಹೊಂದಿಕೊಳ್ಳುತ್ತಾನೆ . ಉದಾ : ಶಿಶುವು ಲೋಕಾಚಾರ , ನೈತಿಕ ನಿಯಮ , ಪದ್ಧತಿಗಳು ಸಂಪ್ರದಾಯಗಳು ಮುಂತಾದವುಗಳಿಂದ ಕೂಡಿದ ನಿಯಮಗಳಿಗೆ ತನಗರಿವಿಲ್ಲದಂತೆಯೇ ಹೊಂದಿಕೊಳ್ಳುತ್ತಾರೆ . ಒಂದು ವೇಳೆ ಹೊಂದಿಕೊಳ್ಳಲು ಆಗದಿದ್ದಲ್ಲಿ ಆತನ ಪೂರ್ಣ ಪ್ರಮಾಣದ ವ್ಯಕ್ತಿಯಾಗುವುದು ಕಷ್ಟ .
ಹೊಂದಾಣಿಕೆಯು ಸಾರ್ವತ್ರಿಕವಾದುದು : ಹೊಂದಾಣಿಕೆಯು ಎಲ್ಲಾ ಕಡೆ ಕಂಡು ಬರುವ ಒಂದು ಪ್ರಕ್ರಿಯೆಯಾಗಿದೆ . ಆಗಾಗ ನಡೆಯುವ ತಿಕ್ಕಾಟಗಳನ್ನು ತಾತ್ಕಾಲಿಕವಾಗಿಯಾದರೂ ಸ್ಥಗಿತಗೊಳಿಸಲು ಹೊಂದಾಣಿಕೆ ಅಗತ್ಯವಾಗುವುದು .
ಹೊಂದಾಣಿಕೆಯು ನಿರಂತರವಾದುದು : ಹೊಂದಾಣಿಕೆ ಎಂಬುದು , ಯಾವುದೇ ನಿರ್ದಿಷ್ಟಕ್ಕೆ ಅಥವಾ ಯಾವುದೇ ಸಮಯಕ್ಕೆ , ಯಾವುದೇ ಪರಿಸರಕ್ಕೆ ಸೀಮಿತವಾಗಿರುವುದಿಲ್ಲ . ಸಂಘರ್ಷಗಳು , ಸಮಸ್ಯೆಗಳು ಇರುವವರೆಗೆ ಹೊಂದಾಣಿಕೆಯು ನಿರಂತರವಾಗಿರುತ್ತದೆ ಆದರೆ ಹೊಂದಾಣಿಕೆ ಪರಿಣಾಮಕ್ಕೆ ಹಾಗೂ ಸಂದರ್ಭಕ್ಕೆ ಬೇರೆಯಾಗಬಹುದು .
11 ) ರಾಜಿ ಅಥವಾ ಒಪ್ಪಂದದಲ್ಲಿ ಮೂರನೇ ಪಕ್ಷದ ಪಾತ್ರ ವಿವರಿಸಿ .
ರಾಜಿ ಅಥವಾ ಒಪ್ಪಂದದಲ್ಲಿ ಮೂರನೇ ಪಕ್ಷ ಎಂದರೆ ಮೂರನೇ ಪಕ್ಷದ ಪಾತ್ರ ಅಂದರೆ ಮಧ್ಯಸ್ಥಿಕೆಯ ಪಾತ್ರ ಅತ್ಯಮೂಲ್ಯವಾದುದು . ಇದು ಮೂರು ವಿಧಗಳಲ್ಲಿ ಏರ್ಪಾಡಾಗುವುದು ಅವುಗಳೆಂದರೆ –
1 ) ಪಂಚಾಯಿತಿ
2 ) ಮಧ್ಯಸ್ಥಿಕೆ
3 ) ಮನವೊಲೈಸುವಿಕೆ
1 ) ಪಂಚಾಯಿತಿ : ಸಂಘರ್ಷದಲ್ಲಿ ತೊಡಗಿರುವವರು ತಾವಾಗಿಯೇ ಅದನ್ನು ಪರಿಕರಿಸಿಕೊಳ್ಳಲಾರೆ ಎಂದು ತಿಳಿದೊಡನೆ ಅವರು ಪಂಚಾಯಿತಿಗೆ ಸಿದ್ದವಾಗುವುದುಂಟು . ಎರಡು ಪಕ್ಷಗಳಿಂದ ಆಯ್ಕೆಯಾಗಲ್ಪಟ್ಟ ಪಂಚಾಯಿತಿದಾರನು ಪಂಚಾಯಿತಿಯ ಮೂಲಕ ಕೊಡುವ ತೀರ್ಮಾನಕ್ಕೆ ಪಕ್ಷಗಳು ಬದ್ಧರಾಗಿರಬೇಕು . ಉದಾಹರಣೆ : ರಾಜಕೀಯ ಪಂಚಾಯಿತಿಗಳು , ಗ್ರಾಮ ಪಂಚಾಯಿತಿಗಳು , ಕಾರ್ಮಿಕ ಆಡಳಿತ ಮಂಡಳಿಯ ಒಪ್ಪಂದಗಳು ಇತ್ಯಾದಿ .
2 ) ಮಧ್ಯಸ್ಥಿಕೆ : ಇದು ಪಂಚಾಯಿತಿ ಸ್ವರೂಪದಲ್ಲಿಯೇ ಇರುವುದು . ಆದರೆ ಇಲ್ಲಿ ಮಧ್ಯಸ್ಥಿಕೆ ವಹಿಸುವ ಮೂರನೇ ವ್ಯಕ್ತಿ ಅಥವಾ ಪಕ್ಷವು ಕೊಡುವ ತೀರ್ಮಾನಕ್ಕೆ ಬದ್ಧರಾಗಿರಬೇಕೆಂಬನಿಯಮವಿಲ್ಲ , ಮಧ್ಯಸ್ಥಿಕೆದಾರರು ತಮ್ಮ ವರ್ಚಸ್ಸಿನಿಂದ ಶಾಂತಿಯುತ ಒಪ್ಪಂದಕ್ಕೆ ಮುಂದಾಗುವರು .
3 ) ಮನವೊಲೈಸುವಿಕೆ : ಹೊಂದಾಣಿಕೆ ಅಥವಾ ಒಪ್ಪಂದಕ್ಕೆ ಸಂಬಂಧಿಸಿದ ಮತ್ತೊಂದು ವಿಧಾನವೆಂದರೆ ಸಂಘರ್ಷ ನಿರತರಾದವರ ಮನವೊಲೈಸಿ ಅವರ ನಡುವೆ ರಾಜಿಯುಂಟಾಗುವಂತೆ ಮಾಡುವುದು . ಇದರಿಂದಾಗಿ ಸ್ವಾಂಗೀಕರಣಕ್ಕೆ ನಾಂದಿಯಾಗುವುದು ಇದೆ , ಹಠಮಾರಿತನ ಬಿಟ್ಟು ಸ್ನೇಹ ಸಹಬಾಳ್ವೆಯಿಂದ ನಡೆಯುವ ಅನುನಯದಿಂದ ಒಲಿಸಿಕೊಳ್ಳುವ ಕಾರ್ಯವೇ ಮನವೊಲೈಸುವುದಾಗಿದೆ .
12 ) ಹೊಂದಾಣಿಕೆಯ ವಿಭಿನ್ನ ವಿಧಾನಗಳನ್ನು ವಿವರಿಸಿ .
ಹೊಂದಾಣಿಕೆಯ ವಿಭಿನ್ನ ವಿಧಾನಗಳನ್ನು ಈ ರೀತಿ ಪಟ್ಟಿ ಮಾಡಲಾಗಿದೆ . ಅವುಗಳೆಂದರೆ –
1 ) ಬಲಪ್ರಯೋಗಕ್ಕೆ ಮಣಿಯುವುದು : ಬಲಪ್ರಯೋಗದ ಬಳಕೆಯಿಂದ ಅಥವಾ ಅದರ ಬೆದರಿಕೆಯನ್ನೊಡ್ಡಿ ಒಮ್ಮೊಮ್ಮೆ ಸಂಘರ್ಷವನ್ನು ನಿಲ್ಲಿಸಲಾಗುವುದು . ಸಂಘರ್ಷದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಪಕ್ಷಗಳು ಅಸಮಬಲರಾಗಿದ್ದಾಗ ಮಾತ್ರ ಈ ವಿಧಾನ ಬಳಕೆಗೆ ಬರುವುದು .
2 ) ಒಪ್ಪಂದ ಅಥವಾ ರಾಜಿ : ಸಂಘರ್ಷ ನಿರತ ಪಕ್ಷಗಳು ಸಮಬಲರಾಗಿದ್ದು ಸಂಘರ್ಷವನ್ನು ಮುಂದುವರಿಸಲು ಇಷ್ಟ ಪಡದೇ ಇದ್ದಾಗ ಒಪ್ಪಂದ ಅಥವಾ ರಾಜಿಯಾಗುತ್ತಾರೆ .
3 ) ಮಧ್ಯಸ್ಥಗಾರನ ಪಾತ್ರ : ಒಪ್ಪಂದವು , ಪಂಚಾಯಿತಿ , ಮಧ್ಯಸ್ಥಿಕೆ ಮತ್ತು ಮನವೊಲೈಸುವಿಕೆಯಿಂದ ಫಲಪ್ರದವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ .
4 ) ಸಹನೆ : – , ಪಕ್ಷಗಳು ಮತ್ತು ವ್ಯಕ್ತಿಗಳು ಸಹನೆಯನ್ನು ಬೆಳೆಸಿಕೊಂಡು ಸಂಘರ್ಷವನ್ನು ನಿಲ್ಲಿಸಿ ಬಿಡುವುದುಂಟು. ಸಹನೆಯು ಬಾಳು ಮತ್ತು ಬಾಳಗೋಡು ‘ ಎಂಬ ತತ್ವವನ್ನು ಆಧರಿಸಿದೆ .
5 ) ಮನಃ ಪರಿವರ್ತನೆ : ವ್ಯಕ್ತಿಗಳು ಅಥವಾ ಪಕ್ಷಗಳು ತಮ್ಮ ನಂಬಿಕೆಗಳನ್ನು ದೃಢ ನಿಶ್ಚಯಗಳನ್ನು ನಿಷ್ಠೆಯನ್ನು ಇದ್ದಕ್ಕಿದ್ದಂತೆ ಬದಲಿಸಿ ಬೇರೆಯವರನ್ನು ಸ್ವೀಕರಿಸುವುದನ್ನು ‘ ಮನಃ ಪರಿವರ್ತನೆ ‘ ಎನ್ನಲಾಗಿದೆ . ಇದನ್ನು ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚು ಬಳಸುವರು .
6 ) ಉದಾತ್ತೀಕರಣ : ಅಕ್ರಮಶೀಲ ಪ್ರವೃತ್ತಿಯನ್ನು ತೊರೆದು ಸೌಹಾರ್ದಯುತ ಸಹಜೀವನ ನಡೆಸುವ ಪ್ರಯತ್ನವೇ ಉದಾತ್ತೀಕರಣವಾಗಿದೆ . ಗೌತಮಬುದ್ಧ , ಮಹಾವೀರ , ಏಸುಕ್ರಿಸ್ತ , ಬಸವಣ್ಣ ಗಾಂಧೀಜಿ ಈ ವಿಧಾನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ .
7 ) ಸಂಯುಕ್ತಿಕ ವಿವರಣೆ : ತಮ್ಮ ತಪ್ಪುಗಳಿಗೆ ಅಥವಾ ವೈಫಲ್ಯಗಳಿಗೆ ಯುಕ್ತಿ ಪೂರ್ವಕವಾಗಿ ವಿವರಣೆ ಕೊಟ್ಟು ತಮ್ಮನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವಾಗಿದೆ . ಇದು ವ್ಯಕ್ತಿಗಳ ಮಟ್ಟದಲ್ಲಿ ಹಾಗೂ ಸಮೂಹಗಳಲ್ಲಿ ಕಂಡುಬರುವುದು .
13 ) ಸ್ವಾಂಗೀಕರಣದ ಲಕ್ಷಣಗಳನ್ನು ವಿವರಿಸಿ :
ಸ್ವಾಂಗೀಕರಣವು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿದೆ . ಅವುಗಳೆಂದರೆ –
1 ಸ್ಟಾಂಗೀಕರಣವು ಯಾವುದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ : ಸ್ವಾಂಗೀಕರಣದ ಪ್ರಕ್ರಿಯೆಯನ್ನು ಜೀವನದ ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದು . ಉದಾಹರಣೆಗೆ : ಕುಟುಂಬದಲ್ಲಿ ನವಜಾತ ಶಿಶುಗಳು ಕಾಲಾನುಕ್ರಮದಲ್ಲಿ ತಮ್ಮ ಸಮಾಜದ ಸಂಸ್ಕೃತಿಯೊಂದಿಗೆ ಸಾಮಾಜೀಕರಣಗೊಳ್ಳುತ್ತಾರೆ . ಧರ್ಮವನ್ನು ಸ್ವೀಕಾರ ಮಾಡುವ ಮತಾಂತರವು ಸ್ವಾಂಗೀಕರಣವೇ ಆಗಿದೆ .
2. ಸ್ವಾಂಗೀಕರಣವು ಮಂದಗತಿಯಿಂದ ಕ್ರಮಕ್ರಮವಾಗಿ ನಡೆಯುವುದು : ಸ್ವಾಂಗೀಕರಣವು ಇದಕ್ಕಿದ್ದಂತೆಯೇ ಸಂಭವಿಸುವ ಪ್ರಕ್ರಿಯೆಯಲ್ಲ . ಅದಕ್ಕೆ ಸಮಯ ಬೇಕು . ವ್ಯಕ್ತಿಗಳು ಮತ್ತು ಸಮೂಹಗಳು ಒಂದುಗೂಡುವುದಕ್ಕೆ ಸಾಕಷ್ಟು ಕಾಲವಕಾಶ ಬೇಕಾಗುವುದು ಸಾಮಾಜಿಕ ಸಂಪರ್ಕದ ಸ್ವರೂಪವನ್ನು ಆಧರಿಸಿಯೇ ಸ್ವಾಂಗೀಕರಣ ನಡೆಯುವುದು .
3. ಸ್ವಾಂಗೀಕರಣವು ಸಾಮಾನ್ಯವಾಗಿ ಪ್ರಜಾಪೂರ್ವಕವಲ್ಲದ ಒಂದು ಪ್ರಕ್ರಿಯೆ : ಸ್ವಾಂಗೀಕರಣ ಪ್ರಕ್ರಿಯೆಯಲ್ಲಿ ವ್ಯಕ್ತಿಗಳಿಗೆ ಹಾಗೂ ಸಮೂಹಗಳಿಗೆ ಏನು ನಡೆಯುತ್ತಿದೆ ಎನ್ನುವುದರ ಪರಿವೇ ಇಲ್ಲದಿರಬಹುದು . ಪ್ರತ್ಯಕ್ಷವಾಗಿ ಅವರ ಗಮನಕ್ಕೆ ಬಾರದಂತೆ ಪರೋಕ್ಷವಾಗಿ ಅವರ ಮನಸ್ಸು ಪರಿವರ್ತನೆಯಾಗಬಹುದು .
4. ಸ್ವಾಂಗೀಕರಣವು ಒಮ್ಮುಖವಾದ ಪ್ರಕ್ರಿಯೆಯಾಗಿಲ್ಲ : ಸ್ವಾಂಗೀಕರಣವು ಕೊಡುವ ತೆಗೆದುಕೊಳ್ಳುವ ತತ್ವವನ್ನು ಆಧರಿಸಿ ನಿಂತಿದೆ . ಆದ್ದರಿಂದ ಇದು ಏಕಮಾರ್ಗೀಯ ಪ್ರಕ್ರಿಯೆಯಾಗಿಲ್ಲ . ಸಾಮಾನ್ಯವಾಗಿ ಇದು ಸಂಸ್ಕೃತಿ ಗ್ರಹಣ ಪ್ರಕ್ರಿಯೆಯು ನಂತರವೇ ನಡೆಯುತ್ತದೆ ಎನ್ನಬಹುದು .
14 ) ಸ್ವಾಂಗೀಕರಣಕ್ಕೆ ಸಹಾಯಕವಾದ ಅಂಶಗಳನ್ನು ವಿವರಿಸಿ .
ಸ್ವಾಂಗೀಕರಣಕ್ಕೆ ಸಹಾಯಕವಾದ ಅಂಶಗಳೆಂದರೆ –
1 ) ಸಹನೆ : ಸಾಂಸ್ಕೃತಿಕ ವ್ಯತ್ಯಾಸಗಳ ಬಗೆಗೆ ಜನರು ಸಹನೆಯಿಂದಿರುವುದಾದರೆ ಮಾತ್ರ ಅದು ಸಾಧ್ಯ . ಸಹನೆಯಿಂದ ಭಿನ್ನ ಸಂಸ್ಕೃತಿಗಳ ಜನರು ಪರಸ್ಪರ ಸಂಪರ್ಕ ಬೆಳೆಸಿಕೊಳ್ಳುವುದು ಮತ್ತು ಅಂತಿಮವಾಗಿ ಒಂದುಗೂಡುವುದು ಸಾಧ್ಯ .
2 ) ಅನ್ನೋನ್ಯ ಸಾಮಾಜಿಕ ಬಾಂಧವ್ಯ : ಸಾಮಾಜಿಕ ಸಂಪರ್ಕ ಸಂಬಂಧಗಳ ಅಂತಿಮ ಫಲಶೃತಿಯೇ ಸ್ವಾಂಗೀಕರಣ , ಅನ್ನೋನ್ಯವಾಗಿದ್ದರೆ ಸ್ವಾಂಗೀಕರಣವು ಕಡಿಮೆ ಸಮಯದಲ್ಲಿ ಪೂರ್ಣಗೊಳ್ಳುವುದು .
3 ) ಸಂಯೋಗ ಅಥವಾ ಅಂತರ್ ವಿವಾಹ : ಅಂತರ್‌ವಿವಾಹವು ವಿವಿಧ ಗುಂಪುಗಳ ನಡುವೆ ವೈವಾಹಿಕ ಸಂಬಂಧ ಏರ್ಪಾಡುವಂತೆ ಮಾಡುವುದು , ವ್ಯಕ್ತಿಗಳು ಅತ್ಯಂತ ಆತ್ಮೀಯವಾದ ಸಂಬಂಧವೇರ್ಪಡುವುದರೊಂದಿಗೆ ಜೈವಿಕ ಸಂಬಂಧ ಏರ್ಪಾಡುವುದಕ್ಕೆ ಅವಕಾಶವಾಗುವುದು .
4 ) ಸಾಂಸ್ಕೃತಿಕ ಸಾಮ್ಯತೆ : ಸಂಸ್ಕೃತಿಯ ಕೆಲವು ಮುಖ್ಯ ವಿಷಯಗಳ ಬಗ್ಗೆ ಸಮೂಹಗಳೊಳಗೆ ಸಾಮ್ಯತೆ ಮತ್ತು ಸಹಮತ ಇರುವುದಾದಲ್ಲಿ ಸ್ವಾಂಗೀಕರಣವು ಸುಗುಮವಾಗುವುದು . ಉದಾಹರಣೆಗೆ : ಅಮೇರಿಕಾದಲ್ಲಿ ಇಂಗ್ಲೀಷ್ ಮಾತನಾಡುವ ಪ್ರೊಟೆಸ್ಟೆಂಟರು ಇಂಗ್ಲೀಷ್ ಬಾರದ ಕ್ರೈಸ್ತರಿಗಿಂತಲೂ ಹೆಚ್ಚು ಸುಲಭ ಹಾಗೂ ವೇಗವಾಗಿ ಸಾಮರಸ್ಯಗೊಳ್ಳಲು ಸಾಧ್ಯವಾಯಿತು .
5 ) ಶಿಕ್ಷಣ : ಶಿಕ್ಷಣದ ಮೂಲಕ ವ್ಯಕ್ತಿಗಳ ಹಾಗೂ ಸಮೂಹಗಳ ಪೂರ್ವಾಗ್ರಹವನ್ನು ತೊಡೆದು ಹಾಕಲು ಹಾಗೂ ವ್ಯತ್ಯಾಸಗಳ ತೀವ್ರತೆಯನ್ನು ತಗ್ಗಿಸಲು ಶಿಕ್ಷಣವು ಸಹಕಾರಿಯಾಗಿದೆ .
6 ) ಸಮಾನ ಸಾಮಾಜಿಕ ಹಾಗೂ ಆರ್ಥಿಕ ಅವಕಾಶ : ಸ್ವಾಂಗೀಕರಣಕ್ಕೆ ಸಾರ್ವಜನಿಕ ಶಿಕ್ಷಣದೊಂದಿಗೆ ಎಲ್ಲ ಸಮೂಹಗಳ ಎಲ್ಲಾ ಜನರಿಗೆ ಸಮಾನ ಅವಕಾಶ ಕಲ್ಪಿಸಿದಾಗ ಮಾತ್ರ ಸ್ವಾಂಗೀಕರಣವು ತ್ವರಿತವಾಗಿ ನಡೆಯುವುದು ಸಾಧ್ಯ . ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯು ಸಮಾಜದಲ್ಲಿ ತುಂಬಿ ತುಳುಕುತ್ತಿದ್ದರೆ ಅದರಿಂದ ದ್ವೇಷ ಅಸೂಯೆ ಮತ್ತು ಸಂಘರ್ಷಗಳೂ ಮಿತಿಮೀರುವುದು ನಿಶ್ಚಿತ , ಆದರೆ ಸಮಾನತೆಯಿಂದ ಮಾತ್ರ ಸೌಹಾರ್ದಯುತವಾದ ಸಹಜೀವನ ಮತ್ತು ಸ್ವಾಂಗೀಕರಣವು ಸಾಧ್ಯವಾಗುವುದು .
15 ) E.W. ಬರ್ಗೇಸ್ ರವರ ಸಂಸ್ಥೆಗಳ ನಾಲ್ಕು ವರ್ಗೀಕರಣವನ್ನು ಬರೆಯಿರಿ .
E.W. ಬರ್ಗೇಸ್ ರವರ ಸಂಸ್ಥೆಗಳ ನಾಲ್ಕು ವರ್ಗೀಕರಣ ಎಂದರೆ
1 ) ಸಾಂಸ್ಕೃತಿಕ ಸಂಸ್ಥೆಗಳು : ಆಚಾರ – ವಿಚಾರ , ಸಂಪ್ರದಾಯಗಳು , ಕ್ರಿಯಾವಿಧಿಗಳು ಮುಂತಾದವುಗಳನ್ನು ಹೊಸ ಪೀಳಿಗೆಗಳಿಗೆ ವರ್ಗಾಯಿಸುವ ಕಾವ್ಯವನ್ನು ನಿರ್ವಹಿಸುತ್ತದೆ . ಸಾಂಸ್ಕೃತಿ ಪರಂಪರೆಗೆ ಹೆಚ್ಚು ಮಾನ್ಯತೆ ನೀಡುತ್ತದೆ . ಉದಾ : ಕುಟುಂಬ , ಧರ್ಮ , ಶಿಕ್ಷಣ ಮುಂತಾದವುಗಳು
2 ) ಆರ್ಥಿಕ ಸಂಸ್ಥೆಗಳು : ಮಾನವನ ಮೂಲಭೂತ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲು ಪ್ರಯತ್ನಿಸುವ ಸಂಸ್ಥೆಯಾಗಿದೆ . ಇಂತಹ ಸಂಸ್ಥೆಗಳಿಂದಲೆ ಆಹಾರ , ವಸತಿ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಸಹಾಯಕವಾಗಿದೆ . ಸರಕು ಮತ್ತು ಸೇವೆಗಳ ಉತ್ಪಾದನೆಯ ಬಗ್ಗೆ ಕಾಳಜಿ ವಹಿಸುತ್ತದೆ . ಉದಾಹರಣೆಗೆ ; ಕಾರ್ಖಾನೆ , ಕೃಷಿರಂಗ , ಬ್ಯಾಂಕ್ , ವಾಣಿಜ್ಯ ಕೇಂದ್ರಗಳು ಸಾರಿಗೆ ಸಂಸ್ಥೆಗಳು ಇತ್ಯಾದಿ .
3 ) ಮನರಂಜನೆ ಸಂಸ್ಥೆಗಳು : ಮಾನವನ ಮಾನಸಿಕ ಉಲ್ಲಾಸ ಮತ್ತು ವಿರಾಮಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ಸ್ಥಾಪನೆಯಾಗಿರುವ ಸಂಸ್ಥೆಯಾಗಿದೆ . ಇಲ್ಲಿ ಮಾನಸಿಕ ಉಲ್ಲಾಸ ಮತ್ತು ಕಲೆಯ ಉದ್ದೇಶವಾಗಿರುತ್ತದೆ . ಉದಾಹರಣೆಗೆ : ನಾಟಕ , ಸಂಗೀತ , ಸಾಹಿತ್ಯ , ಚಲನಚಿತ್ರ ಟಿ.ವಿ. , ರೇಡಿಯೋ ಮುಂತಾದವುಗಳು .
4 ) ಸಾಮಾಜಿಕ ನಿಯಂತ್ರಣ ಸಂಸ್ಥೆಗಳು : ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ . ಸಮಾಜದ ಎಲ್ಲಾ ವರ್ಗಗಳ ಜನ ಸಮೂಹ , ಸಹಬಾಳ್ವೆ ನಡೆಸಲು ಒತ್ತಡ ಬೀರುತ್ತದೆ . ಉದಾಹರಣೆಗೆ : ಕಾನೂನು , ಪೋಲಿಸ್ , ನ್ಯಾಯಾಲಯ , ಮುಂತಾದವು .
16 ) ಮಾಧ್ಯಮಿಕ ಸಮೂಹಗಳ ಕಾರ್ಯಗಳನ್ನು ತಿಳಿಸಿ .
ಮಾಧ್ಯಮಿಕ ಸಮೂಹಗಳು ಎಂದರೆ , ಕಾರ್ಖಾನೆ , ಬ್ಯಾಂಕ್ , ಶಾಲೆ , ಸಾರಿಗೆ ಸಂಸ್ಥೆಗಳು ವಾಣಿಜ್ಯ ಮುಂತಾದವುಗಳು . ಆಧುನಿಕ ಯುಗದಲ್ಲಿ ಮಾಧ್ಯಮಿಕ ಸಂಸ್ಥೆಗಳು ಪ್ರಭಾವಶಾಲಿಯಾಗಿದ್ದು ಹೆಚ್ಚು ವ್ಯಾಪಕವಾಗಿದೆ . ಇಂತಹ ಮಾಧ್ಯಮಿಕ ಸಮೂಹಗಳ ಕಾರ ವಿಧಾನಗಳನ್ನು ಕೆಳಕಂಡ ಅಂಶಗಳ ಮೂಲಕ ವಿಶ್ಲೇಷಿಸಬಹುದು , ಅವುಗಳೆಂದರೆ –
1 ) ಮಾನವನ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಹಾಯಕವಾಗಿದೆ . ಮೂಲಭೂತ ಬೇಡಿಕೆಗಳಾದ ಆಹಾರ ವಸತಿ ಮತ್ತು ವಸ್ತುಗಳನ್ನು ಪೂರೈಸುವುದು ತೀರಾ ಅನಿವಾರ್ಯವಾಗಿದೆ . ಇದರೊಂದಿಗೆ ಇನ್ನಿತರ ಬೇಡಿಕೆಗಳು ಹೆಚ್ಚಾಗುತ್ತಿವೆ . ಅವುಗಳನ್ನು ಪೂರೈಸುವ ಹೊಣೆಗಾರಿಕೆ ಮಾಧ್ಯಮಿಕ ಸಮೂಹವಾಗಿದೆ .
2 ) ಸಾಮಾಜಿಕ ಪರಿವರ್ತನೆ ಮತ್ತು ಸಾಮಾಜಿಕ ಜಾಗೃತಿಗಳ ಬಗ್ಗೆ ಅರಿವು ಮೂಡಿಸುತ್ತದೆ .
3 ) ಶಿಕ್ಷಣ ಮತ್ತು ಕಾನೂನಿನ ಮೂಲಕ ಮೂಢನಂಬಿಕೆ ಮತ್ತು ಅಂಧಕಾರ ಭಾವನೆಗಳನ್ನು ನಿರ್ಮೂಲನ ಮಾಡುತ್ತದೆ .
1st Puc Sociology Chapter 3 Question Answer
IV . ಹತ್ತು ಅಂಕದ ಪ್ರಶ್ನೆಗಳು : ( 30-40 ವಾಕ್ಯಗಳಲ್ಲಿ ಉತ್ತರಿಸಿ )
1 ) ಸಹಕಾರದ ಸ್ವರೂಪ ಹಾಗೂ ಪ್ರಾಮುಖ್ಯತೆಯನ್ನು ವಿವರಿಸಿ .
ಇಬ್ಬರು ಅಥವಾ ಹೆಚ್ಚು ಜನರು ಸಾಮಾನ್ಯ ಗುರಿಯನ್ನು ತಲುಪಲು ಒಟ್ಟಿಗೆ ಸೇರಿ ಮಾಡುವ ನಿರಂತರ ಸಾಮಾಜಿಕ ಪ್ರಕ್ರಿಯೆ ಸಹಕಾರದ ಸ್ವರೂಪವಾಗಿದೆ .
ಸಹಕಾರದ ಪ್ರಮುಖ ಪ್ರಾಮುಖ್ಯತೆಯೆಂದರೆ :
1 ) ಸಹಕಾರವು ಒಂದು ಸಾಮಾಜಿಕ ಅಗತ್ಯಯಾಗಿದೆ : ಸಹಕಾರದಿಂದಾಗಿ ನಮ್ಮ ಸಾಮಾಜಿಕ ಜೀವನ ಸಾಧ್ಯವಾಗಿದೆ , ಅದು ನಮ್ಮ ಜೀವನನ್ನು ಸಂಪೂರ್ಣವಾಗಿ ಆವರಿಸಿ ನಿಲ್ಲುತ್ತದೆ .
2 ) ಸಹಕಾರವು ನಮ್ಮ ಜೈವಿಕ ಅಸ್ತಿತ್ವಕ್ಕೆ ಕೂಡ ಅಗತ್ಯವಾದುದು : ಮಾನವ ಜನಾಂಗದ ಮುಂದುವರೆಯುವಿಕೆಯು ದೃಷ್ಟಿಯಿಂದಲಾದರೂ ಸ್ತ್ರೀ ಪುರುಷರ ನಡುವೆ ಸಹಕಾರವಿರಬೇಕಾದುದು ಅನಿವಾರ್ಯವಾಗಿದೆ . ಈ ಅನಿವಾರ್ಯತೆಯ ಕಾರಣದಿಂದಾಗಿಯೇ ‘ ಕುಟುಂಬ ‘ ಎಂಬ ಅತ್ಯಂತ ಪ್ರಾಥಮಿಕ ಸಂಸ್ಥೆಗಳು ವಾಣಿಜ್ಯ ಮುಂತಾದವುಗಳು .
2) ವ್ಯಕ್ತಿಯ ಮಟ್ಟದಲ್ಲಿ ಸಂಭವಿಸುವ ಸ್ವಾಂಗೀಕರಣ ಪ್ರಕ್ರಿಯೆಯನ್ನು ವಿವರಿಸಿ .
ವ್ಯಕ್ತಿಯ ಮಟ್ಟದಲ್ಲಿ ಸಂಭವಿಸುವ ಸ್ವಾಂಗೀಕರಣ ಪ್ರಕ್ರಿಯೆ ಎಂದರೆ ವ್ಯಕ್ತಿಗಳು ವಿವಿಧ ಸಮೂಹದೊಂದಿಗೆ ಅನಿವಾರ್ಯ ಕಾರಣಗಳಿಂದ ಸಂಪರ್ಕ ಬೆಳೆಸಿಕೊಳ್ಳುತ್ತಾರೆ . ಇಂತಹ ಅನಿವಾರ್ಯ ಕಾರಣಗಳು ಆರ್ಥಿಕ , ರಾಜಕೀಯ , ಸಾಂಸ್ಕೃತಿಕ , ಸಾಮಾಜಿಕವಾಗಿ ವ್ಯಕ್ತಿಯ ಹೊಸ ಪ್ರಕಾರದ ಅಭ್ಯಾಸಗಳು , ಹವ್ಯಾಸಗಳು , ಸಂಪ್ರದಾಯ ನಂಬಿಕೆಗಳು ಮತ್ತು ಇನ್ನಿತರ ಸಾಂಸ್ಕೃತಿಕ ಅಂಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅನುಸರಿಸುತ್ತಾರೆ .
ಉದಾ : – 19 ನೇ ಶತಮಾನದಲ್ಲಿ ಭಾರತದ ಅಭಿನಯದ ತಾಳಿಗೆ ಹೊಸ ವೃತ್ತಿಗಳನ್ನು ಅವಲಂಭಿಸಿ ಪ್ರಶ್ನಾಮೌಡ್ಯ ಉಡುಗೆ – ತೊಡುಗೆ , ಆಹಾರ ಪದ್ಧತಿ , ಕ್ರೀಡೆ ಮತ್ತು ಮನರಂಜನೆ ಮುಂತಾದವುಗಳನ್ನು ಸ್ವೀಕರಿಸಿಕೊಂಡರು . ವಿವಾಹದ ನಂತರ ಸ್ತ್ರೀಯರು ತವರು ಮನೆಗಿಂತಲೂ ವಿಭಿನ್ನತೆಯಿರುವ ಪತಿಯ ಕೌಟುಂಬಿಕ ಪರಿಸರದೊಂದಿಗೆ ಸಂಬಂಧ ಹೊಂದುತ್ತಾ ಪತಿಯ ಮನೆ ಸಾಮಾಜಿಕ ಪರಿಸರದೊಂದಿಗೆ ಸಹಜವಾಗಿ ಲೀನವಾಗುತ್ತಾರೆ . ಇಂತಹ ಸಂದರ್ಭಗಳಲ್ಲಿ ವ್ಯಕ್ತಿಗಳು ತಮ್ಮ ಸಮೂಹದ ನಿಯಮಗಳನ್ನು ಸ್ವೀಕರಿಸಿಕೊಳ್ಳುವ ಪ್ರವೃತ್ತಿಗಳು ಹೆಚ್ಚಾಗುತ್ತವೆ .
ಮಾಧ್ಯಮಿಕ ಸಮೂಹಗಳಾದ ಶಾಲೆ , ಕಾಲೇಜು , ಬ್ಯಾಂಕು , ಸೈನ್ಯ ಮುಂತಾದವುಗಳಲ್ಲಿ ವ್ಯಕ್ತಿ ಜೀವನ ಆರಂಭವಿದ್ದಂತೆ ಹೊಸ ಜೀವನ ಶೈಲಿ ರೂಢಿಸಿಕೊಳ್ಳುತ್ತಾರೆ .
3. ಸಮೂಹ ಮಟ್ಟದಲ್ಲಿ ಸಂಭವಿಸುವ ಸ್ವಾಂಗೀಕರಣ ಪ್ರಕ್ರಿಯೆಯನ್ನು ವಿವರಿಸಿ .
ಸಮೂಹ ಮಟ್ಟದಲ್ಲಿ ಸಂಭವಿಸುವ ಸ್ವಾಂಗೀಕರಣ ಪ್ರಕ್ರಿಯೆಯನ್ನು ಈ ಕೆಳಕಂಡಂತೆ ವಿವರಿಸಬಹುದಾಗಿದೆ . ಯಾವುದೇ ಎರಡು ವಿಭಿನ್ನ , ಸಾಂಸ್ಕೃತಿಕ ಸಮೂಹಗಳ ಸಾಮಾಜಿಕ , ರಾಜಕೀಯ ಆರ್ಥಿಕ ಮತ್ತು ಇನ್ನಿತರ ಕಾರಣಗಳಿಂದ ಪರಸ್ಪರ ಸಂಪರ್ಕ ಬೆಳಸಿಕೊಂಡಾಗ ಸ್ವಾಂಗೀಕರಣವು ಸಂಭವಿಸುತ್ತದೆ . ಇಂತಹ ಸಂದರ್ಭಗಳಲ್ಲಿ ದುರ್ಬಲ ಶೋಷಿತ ಸಮೂಹಗಳು ಪರಕೀಯ ಸಾಂಸ್ಕೃತಿಕ ಅಂಶಗಳನ್ನು ಪಡೆದುಕೊಳ್ಳುತ್ತಾರೆ . ಉದಾ : – ಬ್ರಿಟಿಷರ ಆಳ್ವಿಕೆಯ ಕಾಲಾವಧಿಯಲ್ಲಿ ಭಾರತೀಯ ಪಾಶ್ಚಿಮಾತ್ಯ ಸಂಸ್ಕೃತಿಗಳನ್ನು ಅನುಸರಿಸುತ್ತಾ ಹಾಗೂ ಕಾಲಕ್ರಮೇಣ ಜೀವನದ ಒಂದು ಭಾಗವಾಗಿ ಉಡುಗೆ ತೊಡುಗೆ , ಕ್ರೀಡೆ , ಹವ್ಯಾಸಗಳು , ಭಾಷೆ ಬಳಕೆ , ಆಹಾರ ಪದ್ಧತಿ ಇತ್ಯಾದಿಯನ್ನು ಕೆಲವರು ತಮ್ಮ ಸ್ಥಳೀಯ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು .
ಅಮೆರಿಕಾ ಮತ್ತು ಬ್ರಿಟನ್ ದೇಶದ ವಲಸೆಗಾರರು , ಸಾಮಾನ್ಯವಾಗಿ ಉಡುಗೆ – ತೊಡುಗೆ , ಆಹಾರ ಪದ್ಧತಿ , ಭಾಷಾ ಶೈಲಿ ಮುಂತಾದವುಗಳನ್ನು ಸ್ಥಳೀಯ ಸಮೂಹದೊಂದಿಗೆ ಗುರುತಿಸಿಕೊಂಡರು . ಇಂದು ವಿವಿಧ ಸಮೂಹಗಳು ತಮ್ಮ ಸ್ಥಳೀಯ ಸಮೂಹಗಳೊಂದಿಗೆ ಬೆರತುಕೊಳ್ಳಲು ಸ್ವಾಂಗೀಕರಣ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ .
4. ಸಂಘರ್ಷದ ಕಾರ್ಯಗಳನ್ನು ವಿವರಿಸಿ .
- ಸಂಘರ್ಷ ಸಮಾಜದಲ್ಲಿ ಆಗಿಂದಾಗ್ಗೆ ಸಂಭವಿಸುವ ಪ್ರಕ್ರಿಯೆಯಾಗಿದೆ , ಈ ಪ್ರಕ್ರಿಯೆ ಧನಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಒಳಗೊಂಡಿದೆ . ಲಿ.ಎಸ್ . ಎ . ಕೋಸರ್ ತಮ್ಮ ಗ್ರಂಥವಾದ functions of conflicts ನಲ್ಲಿ ಸಂಘರ್ಷದ ಕಾರ್ಯಗಳನ್ನು ಈ ಕೆಳಕಂಡಂತೆ ವಿಶ್ಲೇಷಿಸಿದ್ದಾರೆ .
- ಸಂಘರ್ಷದಿಂದ ವ್ಯಕ್ತಿ ಅಥವಾ ಸಮೂಹಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಅಂತಸ್ತು ಮತ್ತು ಸ್ತಾನಮಾನ ಪಡೆದುಕೊಳ್ಳುವ ಸಾಧನವಾಗಿದೆ . ಯುದ್ಧ , ಆಂತರಿಕ ಗಲಭೆ ಮತ್ತು ವೈಯಕ್ತಿಕ ಹೋರಾಟದಿಂದ ವ್ಯಕ್ತಿಗಳು ಉನ್ನತ ಸ್ಥಾನಮಾನ ಪಡೆದವರು . ಉದಾ : – ನೆಪೋಲಿಯನ್ , ಗಾಂಧೀಜಿ , ಅಂಬೇಡ್ಕರ್ ಮುಂತಾದವರು .
- ಸಂಘರ್ಷದಿಂದ ನಿರ್ಧಿಷ್ಟ ಸಮೂಹಗಳಲ್ಲಿ ಐಕ್ಯತೆ ಭಾವನೆ ಬೆಳೆಸಿಕೊಂಡು ಆಂತರಿಕ ಸಂಘಟನೆ ಹೆಚ್ಚಿಸಿಕೊಳ್ಳಲು ಪ್ರೇರಣೆ ನೀಡುತ್ತದೆ . “ ಸಾಮಾನ್ಯ ಶತ್ರು ” ಗುರುತಿಸಿಕೊಳ್ಳುವ ಪ್ರವೃತ್ತಿಯಿಂದ ಆಂತರಿಕ ಸಂಘಟನೆ ಭದ್ರವಾಗಿ ಬೇರೂರುತ್ತದೆ . ಉದಾ : – ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ವಿರುದ್ಧ ಎಲ್ಲಾ ಜನಸಮೂಹ ಒಟ್ಟಿಗೆ ಶ್ರಮಿಸಿದರು .
- ಸಂಘರ್ಷ ಸಾಮಾಜಿಕ ಸನ್ನಿವೇಷಗಳ ನೈಜ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡುತ್ತದೆ , ಉನ್ನತ ಅಧಿಕಾರಿಗಳು ಮತ್ತು ಕಾನೂನು ಪಾಲಕರಿಗೆ ಎಚ್ಚರಿಕೆ ಗಂಟೆ ‘ ಯಂತೆ ಪಾತ್ರ ನಿರ್ವಹಿಸುತ್ತದೆ . ಸಂಘರ್ಷದ ಬಳಿಕ ಜನರು ಶಾಂತಿ ಮತ್ತು ಅಹಿಂಸೆ ತತ್ವವನ್ನು ಎತ್ತಿ ಹಿಡಿಯಲು ಪ್ರೇರಣೆ ನೀಡುತ್ತದೆ . ಉದಾ : – ಅಶೋಕನು ಕಾಳಿಂಗ ಯುದ್ದ ನಂತರ ಶಾಂತಿ ಮತ್ತು ಅಹಿಂಸೆ ತತ್ವಕ್ಕೆ ಮಹತ್ವ ಕಲ್ಪಿಸಿದನು .
- ಸಂಘರ್ಷದಿಂದ ವ್ಯಕ್ತಿ ಅಥವಾ ಸಮೂಹಗಳ ನಡುವೆ ಇರುವಂತೆ ಅಪನಂಬಿಕೆ ಮತ್ತು ತಪ್ಪು ಗ್ರಹಿಕೆಯನ್ನು ದೂರ ಮಾಡುತ್ತದೆ . ವ್ಯಕ್ತಿಗಳ ನಡುವೆ ಮತ್ತೊಮ್ಮೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯ . ಉದಾ : – ಕುಟುಂಬದಲ್ಲಿ ಗಂಡ ಹೆಂಡತಿ , ಇಬ್ಬರು ಮಿತ್ರರುಗಳ ನಡುವೆ ಸಣ್ಣ ಪುಟ್ಟ ಜಗಳ ಸಂಭವಿಸುತ್ತಾ ತಪ್ಪುಗ್ರಹಿಕೆ ಮತ್ತು ಸಂದೇಶವನ್ನು ದೂರ ಮಾಡಲಾಗಿದೆ .
- ಸಂಘರ್ಷತ್ಮಾಕ ಸಿದ್ಧಾಂತದ ಪ್ರತಿಪಾದಕರಾದ ಕಾರ್ಲ್ ಮಾಕರ್ , ಸೈಂಟ್ ಸೈಮನ್ , ಲಿವಿಸ್ ಕೋಸರ್ ಪ್ರಕಾರ ಸಂಘರ್ಷದಿಂದ ಸಮಾಜ ಪರಿವರ್ತನೆ ಸಂಭವಿಸುತ್ತದೆ , ಬಂಡವಾಳಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯಲ್ಲಿ ಆಂತರಿಕಸಂಘರ್ಷದಿಂದಲೇ ಶ್ರಮಿಕ ವರ್ಗ ಶೋಷಣೆ ಮತ್ತು ದೌರ್ಜನ್ಯದಿಂದ ಮುಕ್ತರಾಗಲು ಸಾಧ್ಯವಾಗಿದೆ .
5. ಸಂಘರ್ಷದ ಕಾರಣಗಳನ್ನು ತಿಳಿಸಿ .
ಸಂಘರ್ಷದ ಕಾರಣಗಳು ಇಂತಿವೆ
1 ) ವ್ಯಕ್ತಿಗಳ ವಿಭಿನ್ನ ದೃಷ್ಟಿಕೋನಗಳು .
2 ) ಸಾಂಸ್ಕೃತಿಕ ವ್ಯತ್ಯಾಸಗಳು .
3 ) ಆಸಕ್ತಿಗಳ ಘರ್ಷಣೆ
4 ) ಸಾಮಾಜಿಕ ಪರಿವರ್ತನೆ .
1 ) ವ್ಯಕ್ತಿಗಳ ವಿಭಿನ್ನ ದೃಷ್ಟಿಕೋನಗಳು . ಯಾವುದೇ ಇಬ್ಬರು ವ್ಯಕ್ತಿಗಳಲ್ಲಿ ತಮ್ಮ ಸ್ವಭಾವದಲ್ಲಿ ಏಕರೂಪತೆ ಇರುವುದಿಲ್ಲ . ಮನೋಭಾವನೆಗಳು , ಚಿಂತನೆಗಳು , ಅಭಪ್ರಾಯಗಳು ಮತ್ತು ಆಸಕ್ತಿಗಳಿಗೆ ಸಂಬಂಧಿಸಿದಂತೆ ವಿಭಿನ್ನವಾದ ದೃಷ್ಟಿ ಕೊನ ಹೊಂದಿರುತ್ತಾರೆ . ಇಂತಹ ವ್ಯತ್ಯಾಸಗಳು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ .
2 ) ಸಾಂಸ್ಕೃತಿಕ ವ್ಯತ್ಯಾಸಗಳು . ಸಮೂಹ ಮತ್ತು ವ್ಯಕ್ತಿಗಳಲ್ಲಿ ಸಾಂಸ್ಕೃತಿಕ ವ್ಯತ್ಯಾಸಗಳು ಕಂಡುಬರುತ್ತವೆ . ಒಂದು ಸಮೂಹ ಇನ್ನೊಂದು ಸಂಸ್ಕೃತಿಯನ್ನು ನಿರಾಕರಿಸಿದಾಗ ಸಂಘರ್ಷಗಳು ಸಹಜವಾಗಿ ಸಂಭವಿಸುತ್ತದೆ . ಭಾರತದ ಸಮಾಜದಲ್ಲಿ ಧಾರ್ಮಿಕ ವಿಭಿನ್ನತೆಯಿಂದಾಗಿ ಹಲವಾರು ಬಾರಿ ಕೋಮುಗಲಭೆಗಳು ಸಂಭವಿಸುತ್ತದೆ .
3 ) ಆಸಕ್ತಿಗಳ ಘರ್ಷಣೆ . ವಿವಿಧ ಜನರು ಅಥವಾ ಸಮೂಹಗಳ ಮಾನಸಿಕ ಚಿಂತನೆ ಸಮರೂಪತೆ ಹೊಂದಿರುವುದಿಲ್ಲ . ಸಮಾಜಗಳಲ್ಲಿ ಎರಡು ವೈವಿಧ್ಯ ಭಾವನೆ ಮತ್ತು ಅನಿಸಿಕೆಗಳು ಸದಾ ಜಾಗೃತವಾಗಿರುತ್ತದೆ .
4 ) ಸಾಮಾಜಿಕ . ಸಮಾಜದ ಎಲ್ಲಾ ಸಮೂಹಗಳು ಮತ್ತು ಸಂಸ್ಥೆ ಏಕರೂಪವಾಗಿ ಸಾಮಾಜಿಕ ಪರಿವರ್ತನೆಗಳನ್ನು ಸ್ವೀಕರಿಸುವುದಿಲ್ಲ . ಕೆಲವು ಸಮೂಹಗಳು ಸಹಮತ ವ್ಯಕ್ತಪಡಿಸುತ್ತವೆ . ಪ್ರಸಕ್ತ ಸಾಮಾಜಿಕ ಪರಿವರ್ತನೆಯ ಫಲಶೃತಿಯಿಂದ ಉನ್ನತ ಅಂತಸ್ತು ಮತ್ತು ಜೀವನ ವಿಧಾನಗಳನ್ನು ಸುಧಾರಿಸಿಕೊಳ್ಳುವರು . ಆದರೆ ಇನ್ನೊಂದು ಸಮೂಹ ಇಂತಹ ಪರಿವರ್ತನೆ ಪಡೆದುಕೊಳ್ಳಲು ವಿಫಲವಾಗುತ್ತದೆ . ಇದರಿಂದ ಸಮಾಜದಲ್ಲಿ “ ಹಿಂಬೀಳಿಕೆ ” ಹೆಚ್ಚಾದಂತೆ ಸಂಘರ್ಷ ವ್ಯಾಪಕವಾಗಿ ಗೋಚರವಾಗುತ್ತದೆ . ಹೀಗೆ ಸಂಘರ್ಷವು ಸಂಭವಿಸಲು ಹಲವಾರು ಕಾರಣಗಳಿರುತ್ತವೆ .
FAQ
ಸಮಾಜದ ವ್ಯಕ್ತಿಗಳು ಸಂಪರ್ಕದ ಮುಖಾಂತರ ಪರಸ್ಪರ ಹತ್ತಿರಕ್ಕೆ ಬರಲು ಸಾಧ್ಯವಾಗುವುದು . ಇದು ಸಾಮಾಜಿಕ ಸಂಪರ್ಕ ಎನ್ನುವರು .
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಭಿಪ್ರಾಯ ಹಾಗೂ ಭಾವನೆಗಳನ್ನು ಅರ್ಥೈಸುವ ಸಾಮಾಜಿಕ ಅಂತಃಕ್ರಿಯೆಯ ಮಾಧ್ಯಮವನ್ನು ‘ ಸಂವಹನ ‘ ಎನ್ನುವರು .
ಬೇರೆಯವರ ಇಚ್ಚೆಯನ್ನು ಉದ್ದೇಶಪೂರ್ವಕವಾಗಿ ಮತ್ತು ಒತ್ತಾಯ ಪೂರ್ವಕವಾಗಿ ಹತ್ತಿಕ್ಕುವ ಪ್ರಯತ್ನವನ್ನು ಸಂಘರ್ಷ ಎನ್ನುವರು .
ಇತರೆ ವಿಷಯಗಳು :
First Puc Political Science Notes
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf