ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-2 ಮೂಲಭೂತ ಪರಿಕಲ್ಪನೆಗಳು ನೋಟ್ಸ್‌ | 1st Puc Sociology 2nd Chapter Notes in Kannada

ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-2 ಮೂಲಭೂತ ಪರಿಕಲ್ಪನೆಗಳು ನೋಟ್ಸ್‌, 1st Puc Sociology 2nd Chapter Notes in Kannada Question Answer Mcq Pdf 2023 1st Puc Sociology Chapter 2 Question Answer in Kannada Kseeb Solution For Class 11 Sociology Chapter 2 Notes Basic Concepts in Kannada Notes

 

ಅಧ್ಯಾಯ-2 ಮೂಲಭೂತ ಪರಿಕಲ್ಪನೆಗಳು

mulabhuta parikalpanegalu sociology notes pdf

1st Puc Sociology Chapter 2 Question Answer in Kannada

I. ಒಂದು ಅಂಕದ ಪ್ರಶ್ನೆಗಳು : ( ಒಂದು ವಾಕ್ಯದಲ್ಲಿ ಉತ್ತರಿಸಿ )

1 ) ‘ ಮಾನವ ಸಾಮಾಜಿಕ ಪ್ರಾಣಿ ‘ ಎಂದು ಮೊಟ್ಟಮೊದಲು ಹೇಳಿದವರಾರು ?

ಮಾನವ ಸಾಮಾಜಿಕ ಪ್ರಾಣಿ ಎಂದು ಮೊಟ್ಟ ಮೊದಲು ಹೇಳಿದವರು ‘ ಅರಿಸ್ಟಾಟಲ್ ‘ .

2 ) ‘ ಸಮಾಜ ‘ ಎಂಬ ಪದದ ಉತ್ಪತ್ತಿಯನ್ನು ತಿಳಿಸಿ .

‘ ಸಮಾಜ ‘ ಎಂಬ ಕನ್ನಡ ಪದದ ಇಂಗ್ಲೀಷ್‌ನ ತತ್ಸಮಾನ ಪದ ‘ ಸೊಸೈಟಿ ‘ ಎಂಬುದಾಗಿದೆ . ಸೊಸೈಟಿ ಎಂಬ ಪದವು ಲ್ಯಾಟಿನ್ ಭಾಷೆಯ ‘ ಸೋಸಿಯಸ್ ‘ ಎಂಬ ಪದದಿಂದ ಉತ್ಪತ್ತಿಯಾಗಿದೆ . ಲ್ಯಾಟಿನ್ ಭಾಷೆಯಲ್ಲಿ ‘ ಸೋಸಿಯಸ್ ‘ ಎಂದರೆ ಒಡನಾಡಿತನ , ಗೆಳೆಯ ಎಂದರ್ಥ , ಒಟ್ಟಿನಲ್ಲಿ ಒಡನಾಡಿಗಳ ಒಡನಾಟದಿಂದ ಒಟ್ಟು ಗೂಡಿಸಿದ ವ್ಯವಸ್ಥೆಯೇ ಸಮಾಜ ‘ ಎನ್ನಬಹುದು .

3 ) ‘ ಸಾಮಾಜಿಕ ಸಂಬಂಧಗಳ ಬಲೆ ‘ ಎಂಬುದು ಏನನ್ನು ಸೂಚಿಸುವುದು ?

ಜನರಲ್ಲಿ ಪರಸ್ಪರ ಒಡನಾಡಿತನ , ಸಹಕಾರ , ಪ್ರೀತಿ – ವಿಶ್ವಾಸ , ಅನುಕಂಪ , ತ್ಯಾಗ , ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಸಾಮಾಜಿಕ ಸಂಬಂಧಗಳ ಬಲೇ ಸೂಚಿಸುತ್ತದೆ ‘ .

4 ) ಸಹಕಾರ ಎಂದರೇನು ?

ಸಹಕಾರವೆಂದರೆ ದುಡಿಯುವುದಾಗಿದೆ .

5 ) ಸಮೂದಾಯದ ಒಂದು ಉದಾಹರಣೆ ಕೊಡಿ .

‘ ಜನರ ಸಾಮಾನ್ಯ ಆಸಕ್ತಿ ಮತ್ತು ಕಾರ್ಯ ಚಟುವಟಿಕೆಗಳನ್ನು ಹೊಂದಿರುವ ಭೌಗೋಳಿಕ ಪ್ರದೇಶವೇ ಸಮುದಾಯ , ಸಾಮಾಜಿಕ ಸಾಮರಸ್ಯ ಹೊಂದಿರುವ ಒಂದು ಸಾಮಾಜಿಕ ನೆಲೆಗೆ ‘ ಸಮುದಾಯ ‘ ಎನ್ನಬಹುದು .

6 ) ಪ್ರಾದೇಶಿಕತೆ ಎಂದರೇನು ?

‘ ಜನರು ಸಮಾನ ಉದ್ದೇಶಗಳ ಈಡೇರಿಕೆಗೆ ಕೂಡಿ ಭೌತಿಕ ನೆಲೆಯನ್ನು ಹೊಂದಿರುವ ಪ್ರದೇಶವನ್ನು ಪ್ರಾದೇಶಿಕತೆ ಎನ್ನಬಹುದಾಗಿದೆ .

7 ) ಸಮುದಾಯಕ್ಕೆ ಒಂದು ಉದಾಹರಣೆ ಕೊಡಿ .

ಕುಟುಂಬ , ಸಂಘ – ಸಂಸ್ಥೆಗಳು , ಆದಿವಾಸಿಗಳು ಸಮುದಾಯಕ್ಕೆ ಉದಾಹರಣೆ .

8 ) ಸಂಘ ಎಂದರೇನು ?

“ ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಜನರೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುವುದೇ ಸಂಘ

9 ) ಸಂಘದ ಒಂದು ಉದಾಹರಣೆ ತಿಳಿಸಿ .

ರೋಟರಿಕ್ಲಬ್ , ಲಯನ್ಸ್ ಕ್ಲಬ್ , ಶಾಲೆ , ಕಾಲೇಜು ಮುಂತಾದವು ಸಂಘಕ್ಕೆ ಉದಾಹರಣೆಯಾಗಿದೆ .

10 ) ಸಂಸ್ಥೆ ಎಂದರೇನು ?

ಮೂಲಭೂತ ಅಗತ್ಯತೆಗಳನ್ನು ಈಡೇರಿಸಲು ಪ್ರತಿಯೊಂದು ಸಮಾಜವು ಸೃಷ್ಟಿಸಿಕೊಳ್ಳುವ ಒಂದು ವಿಶಿಷ್ಟ ಕಾರ್ಯ ವಿಧಾನದ ವ್ಯವಸ್ಥೆಯಲ್ಲಿ ಸಂಸ್ಥೆ ಯಾಗಿದೆ .

11 ) ಸಂಸ್ಥೆಯ ಒಂದು ಉದಾಹರಣೆ ಕೊಡಿ .

ಶಿಕ್ಷಣ ಸಂಸ್ಥೆಗಳು , ಧಾರ್ಮಿಕ ಸಂಸ್ಥೆಗಳು ,

12 ) .ಪ್ರಾಥಮಿಕ ಸಂಸ್ಥೆಯ ಒಂದು ಉದಾಹರಣೆ ತಿಳಿಸಿ .

ಧರ್ಮ , ವಿವಾಹ , ಕುಟುಂಬ ಮುಂತಾದವು ಪ್ರಾಥಮಿಕ ಸಂಸ್ಥೆಯಾಗಿದೆ .

13 ) ಮಾಧ್ಯಮಿಕ ಸಂಸ್ಥೆಯ ಒಂದು ಉದಾಹರಣೆ ಕೊಡಿ .

ಶಿಕ್ಷಣ , ಪರೀಕ್ಷೆ , ಕಾನೂನು , ಶಾಸನಗಳು , ಮುಂತಾದವು ಮಾಧ್ಯಮಿಕ ಸಂಸ್ಥೆಯ ಒಂದು ಉದಾಹರಣೆಯಾಗಿದೆ .

14 ) ವಿಕಸಿತ ಸಂಸ್ಥೆಯ ಒಂದು ಉದಾಹರಣೆ ನೀಡಿ .

ಕುಟುಂಬ , ಗ್ರಾಮ ಮುಂತಾದವು ವಿಕಸಿತ ಸಂಸ್ಥೆಯ ಉದಾಹರಣೆಯಾಗಿದೆ .

15 ) ಸಾಮಾಜಿಕ ಸಮೂಹ ಎಂದರೇನು ?

ಮಾನವ ಸಂಬಂಧಗಳಿಂದ ಒಟ್ಟು ಗೂಡಿರುವ ಯಾವುದೇ ಜನ ಸಂಗ್ರಹವನ್ನು ಸಾಮಾಜಿಕ ಸಮೂಹ ಎಂದು ಕರೆಯಬಹುದು .

16 ) ಸಾಮಾಜಿಕ ಸಮೂಹಗಳನ್ನು ಒಳ ಸಮೂಹ ಮತ್ತು ಹೊರಸಮೂಹ ಎಂದು ವರ್ಗೀಕರಿಸಿದವರಾರು ?

ಸಾಮಾಜಿಕ ಸಮೂಹಗಳನ್ನು ಒಳ ಸಮೂಹ ಮತ್ತು ಹೊರಸಮೂಹ ಎಂದು ವರ್ಗೀಕರಿಸಿದವರು ‘ ವಿಲಿಯಂ ಗ್ರಹಾಮ್ ಸಮ್ನರ್’ರವರು .

17 ) .ಪ್ರಾಥಮಿಕ ಸಮೂಹ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

ಪ್ರಾಥಮಿಕ ಸಮೂಹ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಸಿ.ಹೆಚ್.ಕೂಲೇ’ಯವರು .

18 ) ‘ ಗೆ ಮೈನ್‌ಶಾಪ್ಟ್ ‘ ಮತ್ತು ‘ ಗೆಸೆಲ್ಸ್ ಶಾಪ್ ‘ ಎಂಬ ಸಮೂಹಗಳನ್ನು ವರ್ಗೀಕರಿಸಿದವರು ಯಾರು ?

‘ ಗೆ ಮೈನ್ ಶಾಪ್ ‘ ಮತ್ತು ‘ ಗೆಸೆಲ್ಸ್ ಶಾಪ್ ‘ ಎಂಬ ಸಮೂಹಗಳನ್ನು ವರ್ಗೀಕರಿಸಿದವರು ‘ ಫರ್ಡಿನೆಂಡ್ ಟೋನಿಸ್‌ರವರು ‘ .

19 ) ‘ ಗೆಮೈನ್‌ಶಾಪ್‌’ಗೆ ಒಂದು ಉದಾಹರಣೆ ತಿಳಿಸಿ .

ಕುಟುಂಬ , ನೆರೆಹೊರೆ , ಗ್ರಾಮ ಮುಂತಾದವು ‘ ಗೆಮೈನ್‌ಶಾಫ್ಟ್ ‘ ಗೆ ಒಂದು ಉದಾಹರಣೆಯಾಗಿದೆ .

20 ) ‘ ಗೆಸೆಲ್‌ಶಾಪ್‌’ನ ಒಂದು ಉದಾಹರಣೆ ತಿಳಿಸಿ .

‘ ಗೆಸೆಲ್‌ಶಾಪ್ಸ್’ನ ಒಂದು ಉದಾಹರಣೆ ಎಂದರೆ – ವ್ಯಾಪಾರಿ ಸಂಘಟನೆಗಳು , ಕಾರ್ಮಿಕ ಸಂಘಟನೆಗಳು , ರಾಜಕೀಯ ಪಕ್ಷಗಳು ಮುಂತಾದವು .

21 ) ಸಮೂಹಗಳನ್ನು ಐಚ್ಛಿಕ ಸಮೂಹ ಮತ್ತು ಅನೈಚ್ಛಿಕ ಸಮೂಹ ಎಂದು ವರ್ಗೀಕರಿಸಿದವರು ಯಾರು ?

ಚಾರ್ಲ್ಸ್ ಎ.ಎಲ್‌ವುಡ್ ಎಂಬುವರು .

22 ) ಲಂಬಾಂತರ ಸಮೂಹ ಮತ್ತು ಸಮಾಂತರ ಸಮೂಹ ಎಂದು ಸಮೂಹಗಳನ್ನು ವರ್ಗೀಕರಿಸಿದವರು ಯಾರು?

ಲಂಬಾಂತರ ಸಮೂಹ ಮತ್ತು ಸಮಾಂತರ ಸಮೂಹ ಎಂದು ಸಮೂಹಗಳನ್ನು ವರ್ಗೀಕರಿಸಿದವರು ‘ ಪಿ.ಎ.ಸೊರೊಕಿನ್ .

23 ) ಲಂಬಾಂತರ ಸಮೂಹ’ದ ಒಂದು ಉದಾಹರಣೆ ಕೊಡಿ .

“ ಆರ್ಥಿಕ ಸಾಮಾಜಿಕ ವರ್ಗ , ‘ ಜಾತಿ ಸಮೂಹಕ್ಕೆ ಒಂದು ಉದಾಹರಣೆಯಾಗಿದೆ .

24 ) .’ಪ್ರಾದೇಶಿಕ ಸಮೂಹ ‘ ಮತ್ತು ‘ ಪ್ರಾದೇಶಿಕವಲ್ಲದ ಸಮೂಹ ಎಂದು ಸಮೂಹಗಳನ್ನು ಯಾರು ವರ್ಗೀಕರಿಸಿದ್ದಾರೆ ?

‘ ಪ್ರಾದೇಶಿಕ ಸಮೂಹ ‘ ಮತ್ತು ‘ ಪ್ರಾದೇಶಿಕವಲ್ಲದ ಸಮೂಹ ಎಂದು ಸಮೂಹಗಳನ್ನು ಯಾರು ವರ್ಗೀಕರಿಸಿದವರು – ‘ ಪಾರ್ಕ್ ಮತ್ತು ಬರ್ಗೆಸ್

25 ) ಸಂಘಟಿತ ಸಮೂಹದ ಒಂದು ಉದಾಹರಣೆ ತಿಳಿಸಿ .

ಸಂಘಟಿತ ಸಮೂಹದ ಒಂದು ಉದಾಹರಣೆ ಎಂದರೆ – ‘ ಬ್ಯಾಂಕ್ , ಕಾಲೇಜು , ವಿಶ್ವವಿದ್ಯಾಲಯ , ಆಸ್ಪತ್ರೆ ಇತ್ಯಾದಿ.

26 ) ಅಸಂಘಟಿತ ಸಮೂಹದ ಒಂದು ಉದಾಹರಣೆ ತಿಳಿಸಿ .

ಪ್ರೇಕ್ಷಕರ ಸಮೂಹ , ಶೋತೃವೃಂದ , ಉದ್ರಿಕ್ತಜನರ ಸಮೂಹ ಮುಂತಾದವು ಅಸಂಘಟಿತ ಸಮೂಹದ ಒಂದು ಉದಾಹರಣೆ .

27 ) ‘ ಸಾಮಾಜಿಕ ನಿಯಂತ್ರಣ ‘ ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಳಕೆಗೆ ತಂದವರು ಯಾರು ?

‘ ಸಾಮಾಜಿಕ ನಿಯಂತ್ರಣ ‘ ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಳಕೆಗೆ ತಂದವರು – ` ಈ.ಎ.ರಾಸ್‌ರವರು .

28 ) ‘ ಸಾಮಾಜಿಕ ನಿಯಂತ್ರಣ ‘ ಎಂಬ ಗ್ರಂಥದ ಕರ್ತನಾರು ?

ಸಾಮಾಜಿಕ ನಿಯಂತ್ರಣ ಎಂಬ ಗ್ರಂಥದ ಕರ್ತ ‘ ಈ.ಎ.ರಾಸ್’ರವರು .

29 ) .ಔಪಚಾರಿಕ ನಿಯಂತ್ರಣ ಒಂದು ಉದಾಹರಣೆ ಕೊಡಿ .

ಪೋಲಿಸ್ , ನ್ಯಾಯಾಲಯ , ಶಾಲೆ , ಮುಂತಾದವು .

30 ) .ಅನೌಪಚಾರಿಕ ನಿಯಂತ್ರಣದ ಒಂದು ಉದಾಹರಣೆ ಕೊಡಿ .

ಅನೌಪಚಾರಿಕ ನಿಯಂತ್ರಣದ ಒಂದು ಉದಾಹರಣೆ – ‘ ನೈತಿಕ ನಿಯಮಗಳು , ಪದ್ಧತಿಗಳು , ಮತಧರ್ಮ ಇತ್ಯಾದಿ .

31 ) .ಆಹಾರ ಸಂಗ್ರಹಣೆ ಮತ್ತು ಬೇಟೆಗಾರಿಕೆ ಸಮಾಜ ಎಂದರೇನು ?

ಬೇಟೆ , ಮೀನುಗಾರಿಕೆ , ಜೇನು ಮತ್ತು ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸುವುದು ಪ್ರಮುಖ ಕಾರ್ಯವಾಗಿಸಿಕೊಂಡ ಪುಟ್ಟ ಸಮಾಜವನ್ನು ಆಹಾರ ಸಂಗ್ರಹಣೆ ಮತ್ತು ಬೇಟೆಗಾರಿಕೆ ಸಮಾಜ ಎನ್ನುವರು .

32 ) ಕೃಷಿಕ ಸಮಾಜದ ಒಂದು ಲಕ್ಷಣವನ್ನು ತಿಳಿಸಿ .

ಕೃಷಿ ಸಮಾಜವು ಒಬ್ಬ ಮುಖ್ಯಸ್ಥನ ನಿಯಂತ್ರಣಕ್ಕೆ ಒಳಪಟ್ಟಿದ್ದುದು ಕೃಷಿಕ ಸಮಾಜದ ಒಂದು ಲಕ್ಷಣ .

33 ) ಪಶುಪಾಲನೆ ಮತ್ತು ತೋಟಗಾರಿಕೆ ಸಮಾಜವನ್ನು ವ್ಯಾಖ್ಯಾನಿಸಿ .

ಹೆಚ್ಚು ಜನರು ತಮ್ಮನ್ನು ತಾವು ಪಶುಪಾಲನೆ ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡ ಸಮಾಜವನ್ನು ‘ ಪಶುಪಾಲನೆ ಹಾಗೂ ತೋಟಗಾರಿಕೆ ಸಮಾಜ ‘ ಎನ್ನುವರು .

34 ) ಸಾಂಪ್ರದಾಯಿಕ ಸಮಾಜದ ಒಂದು ಲಕ್ಷಣವನ್ನು ಬರೆಯಿರಿ .

ಸಾಂಪ್ರದಾಯಿಕ ಸಮಾಜದ ಒಂದು ಲಕ್ಷಣವೆಂದರೆ – ಸಮಾಜವು ಸಾಮಾಜಿಕ ಸಂಬಂಧಗಳ ಬಲೆಯಾಗಿದೆ .

35 ) ಪ್ರಥಮ ಜಗತ್ತಿನ ಸಮಾಜವನ್ನು ವ್ಯಾಖ್ಯಾನಿಸಿ

18 ನೇ ಶತಮಾನದಿಂದ ಪ್ರಸ್ತುತ ಕಾಲದವರೆಗೆ ಕಂಡುಬರುವ ಸಮಾಜವನ್ನು ‘ ಪ್ರಥಮ ಜಗತ್ತಿನ ಸಮಾಜ ‘ ಎನ್ನುವರು .

36 ) ದ್ವಿತೀಯ ಜಗತ್ತಿನ ಸಮಾಜ ಎಂದರೇನು ?

ರಷ್ಯಾ ದೇಶದ ಕಮ್ಯೂನಿಸ್ಟ್ ಕ್ರಾಂತಿಯ ನಂತರ ಅಸ್ತಿತ್ವಕ್ಕೆ ಬಂದ ರಾಷ್ಟ್ರಗಳನ್ನು ‘ ದ್ವಿತೀಯ ಜಗತ್ತಿನ ಸಮಾಜ ‘ ಎಂದು ಕರೆದಿದ್ದಾರೆ .

37 ) ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ಲಕ್ಷಣವನ್ನು ತಿಳಿಸಿ .

ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ಲಕ್ಷಣವೆಂದರೆ- ‘ ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವತಂತ್ರ ರಾಷ್ಟ್ರಗಳಾಗಿವೆ ‘ .

38 ) ನೂತನ ಕೈಗಾರಿಕ ರಾಷ್ಟ್ರಗಳ ಪಟ್ಟಿಯಲ್ಲಿ ಬರುವ ಒಂದು ದೇಶದ ಹೆಸರನ್ನು ಬರೆಯರಿ .

ಹಾಂಗ್‌ಕಾಂಗ್ , ( ದಕ್ಷಿಣಕೋರಿಯಾ , ಸಿಂಗಪೂರ್ ) ನೂತನ ಕೈಗಾರಿಕಾ ರಾಷ್ಟ್ರಗಳ ಪಟ್ಟಿಯಲ್ಲಿ ಬರುವ ಒಂದು ದೇಶದ ಹೆಸರಾಗಿದೆ .

39 ) ಲೋಕರೂಢಿ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

ಲೋಕರೂಢಿ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರೆಂದರೆ – ‘ ಡಬ್ಲೂ.ಜಿ . ಸೆಮ್ಮರ್ ” .

40 ) ಲೋಕಾರೂಢಿ ಎಂದರೇನು ?

ಜನರ ದೈನಂದಿನ ಆಚಾರ ಕ್ರಮಗಳನ್ನು ಲೋಕಾಚಾರ ‘ ಎಂದು ಕರೆಯಲಾಗಿದೆ .

41 ) ‘ ಲೋಕಾರೂಢಿಗೆ ‘ ಒಂದು ಉದಾಹರಣೆ ಕೊಡಿ .

ಜನಸಮ್ಮತರೀತಿಯಲ್ಲಿ ಆಹಾರ ಸೇವಿಸುವ ಕ್ರಮವು ಲೋಕಾರೂಢಿಗೆ ಒಂದು ಉದಾಹರಣೆಯಾಗಿದೆ .

42 ) ‘ ನೈತಿಕ ನಿಯಮ ‘ ಎಂದರೇನು ?

ಸಮಾಜದ ಸದಸ್ಯರುಗಳು ತಮ್ಮ ಸಮೂಹದ ನಿರಂತರ , ಅಸ್ತಿತ್ವಕ್ಕೆ ಅಗತ್ಯವೆಂದು ಪರಿಗಣಿಸುವ ಎಲ್ಲಾ ರೂಢಿಗಳನ್ನು ಮತ್ತು ಸಮೂಹದ ದೈನಂದಿನ ಕ್ರಮಗಳನ್ನು ‘ ನೈತಿಕ ನಿಯಮಗಳೆಂದು ಕರೆಯುತ್ತಾರೆ .

43 ) ಕಾನೂನು ಎಂದರೇನು ?

ರಾಜಕೀಯ ಸಂಸ್ಥೆಗಳ ಮೂಲಕ ಹೊರಹೊಮ್ಮುವ ಸಾಮಾಜಿಕ ನಿಯಮಗಳನ್ನು ಕಾನೂನು ಎನ್ನುವರು .

Mulabhuta Parikalpanegalu Sociology Notes Pdf

II . ಎರಡು ಅಂಕದ ಪ್ರಶ್ನೆಗಳು : ( 2-3 ವಾಕ್ಯದಲ್ಲಿ ಉತ್ತರಿಸಿ )

1) ಮೂಲ ಪರಿಕಲ್ಪನೆ ಎಂದರೇನು ?

ಯಾವುದಾದರೂ ಒಂದು ವಸ್ತುವಿನ ಸ್ವರೂಪದ ಅಥವಾ ವಸ್ತುವಿನ ನಡುವಿನ ಸಂಬಂಧಗಳ ಕುರಿತಾಗಿರುವ ಸಾಮಾನ್ಯ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಪದ ಅಥವಾ ಪದ ಸಮುಚ್ಚಯಕ್ಕೆ ‘ ಪರಿಕಲ್ಪನೆ ‘ ಎನ್ನುತ್ತೇವೆ .

2 ) ಸಮಾಜ’ದ ವ್ಯಾಖ್ಯೆ ತಿಳಿಸಿ .

ಒಡನಾಡಿಗಳ ಒಡನಾಟದಿಂದ ಒಟ್ಟುಗೂಡಿರುವ ವ್ಯವಸ್ಥೆಯೇ ‘ ಸಮಾಜ’ವಾಗಿದೆ .

1) ಮೆಕೈವರ ಮತ್ತು ಪೇಜ್‌ರವರು ‘ ಸಾಮಾಜಿಕ ಸಂಬಂಧಗಳ ಬಲಯೇ ಸಮಾಜ ‘ ಎಂಬುದಾಗಿ ಹೇಳಿದ್ದಾರೆ .

2 ) ಹೆಚ್.ಎಂ. ಜಾನ್ಸ್‌ರವರು – ‘ ಸಮೂಹಗಳ ಸಮೂಹವೇ ಸಮಾಜ ‘ ಎಂದಿದ್ದಾರೆ .

3 ) ಶ್ರಮವಿಭಜನೆ ಎಂದರೇನು ?

ಸಾಮಾನ್ಯ ಕಾರ್ಯವೊಂದನ್ನು ತಮ್ಮೊಳಗೆ ಹಂಚಿಕೊಂಡು ದುಡಿಯುವುದಕ್ಕೆ ‘ ಶ್ರಮ ವಿಭಜನೆ ‘ ಎನ್ನುವರು .

4) ಹೋಲಿಕೆಯ ತತ್ವ ಎಂದರೇನು ?

ವ್ಯಕ್ತಿಗಳಲ್ಲಿ ಆಸೆ ಆಕಾಂಕ್ಷೆಗಳು , ಕೆಲಸಗಳು , ಗುರಿಗಳು , ಆದರ್ಶಗಳು , ಮೌಲ್ಯಗಳಲ್ಲಿ ಹೋಲಿಕೆಗಳನ್ನು ಹೊಂದಿರುವರು ಕೂಡಿ ಬಾಳುವ ರೀತಿ , ಪ್ರೀತಿ – ವಿಶ್ವಾಸ , ತ್ಯಾಗ , ನಾವೆಲ್ಲರೂ ಒಂದು ಎಂಬ ಭಾವನೆ ಬೆಳೆಸಿಕೊಳ್ಳುವ ರೀತಿಯ ಹೋಲಿಕೆಯ ತತ್ವವಾಗಿದೆ .

5 ) ಭಿನ್ನತೆಯ ತತ್ವ ಎಂದರೇನು ?

ಸಮಾಜದ ಜನರ ರೂಪ , ಆಸಕ್ತಿ , ಬುದ್ಧಿಶಕ್ತಿ , ಭಾವನೆಗಳು , ಮಾನಸಿಕ ಶಕ್ತಿ , ಸಾಮರ್ಥ್ಯ ಮುಂತಾದವುಗಳಲ್ಲಿ ಭಿನ್ನತೆಗಳಿರುತ್ತವೆ . ಇದನ್ನು ಭಿನ್ನತೆಯ ತತ್ವ ‘ ಎಂದು ಕರೆಯುವರು . ಈ ಕಾರಣದಿಂದಲೇ ಸಮಾಜದಲ್ಲಿ ಶಿಕ್ಷಕರು ವೈದ್ಯರು , ಇಂಜಿನಿಯರು , ವ್ಯಾಪಾರಿಗಳು , ವಕೀಲರು ಮುಂತಾದ ವೈವಿಧ್ಯಮಯ ವೃತ್ತಿ ಸಮೂಹಗಳು ಸಮಾಜದಲ್ಲಿ ಕಂಡು ಬರುವುದು .

6 ) ಸಮಾಜವು ಗತಿಶೀಲವಾದುದು ಎಂದು ಏಕೆ ಹೇಳಲಾಗುತ್ತದೆ ?

` ಸಮಾಜವು ಯಾವಾಗಲೂ ಪರಿವರ್ತನಶೀಲವಾದದು , ಪರಿವರ್ತನೆ ಇಲ್ಲದೆ ಯಾವುದೇ ಸಮಾಜವು ಧೀರ್ಘಕಾಲ ಸ್ಥಿರವಾಗಿ ಉಳಿಯಲಾರದು . ಹಳೆಯ ಸಂಘ ಸಂಸ್ಥೆಗಳು ಮರೆಯಾಗಿ , ಹೊಸ ಸಂಘ ಸಂಸ್ಥೆಗಳು ಹುಟ್ಟುವವು , ಬದಲಾವಣೆ ನಿಧಾನವಾಗಿ ಅಥವಾ ವೇಗವಾಗಿ ಸಾಗುವ ಪ್ರಕ್ರಿಯೆಯಾಗಿದೆ . ಆದ್ದರಿಂದ ಸಮಾಜವು ಗತಿಶೀಲವಾದುದು ಎಂದು ಹೇಳಲಾಗುತ್ತದೆ .

7 ) ಸಮಾಜದ ಯಾವುದೇ ಎರಡು ಲಕ್ಷಣಗಳನ್ನು ತಿಳಿಸಿ .

ಸಮಾಜ ಯಾವುದೇ ಎರಡು ಲಕ್ಷಣಗಳೆಂದರೆ –

1 ) ಸಮಾಜವು ಸಮೂಹಗಳ ಸಮೂಹವಾಗಿದೆ .

2 ) ಸಮಾಜವು ಸಾಮಾಜಿಕ ಸಂಬಂಧಗಳ ಬಲೆಯಾಗಿದೆ .

8 ) ಸಮುದಾಯವನ್ನು ವ್ಯಾಖ್ಯಾನಿಸಿ .

  • ಜನರ ಸಾಮಾನ್ಯ ಆಸಕ್ತಿ ಮತ್ತು ಕಾರ್ಯಚಟುವಟಿಕೆಗಳನ್ನು ಹೊಂದಿರುವ ಭೌಗೋಳಿಕ ಪ್ರದೇಶವನ್ನು ಸಮುದಾಯ ಎನ್ನಲಾಗಿದೆ .
  • ಸಾಮಾಜಿಕ ಸಾಮರಸ್ಯ ಹೊಂದಿರುವ ಒಂದು ಸಾಮಾಜಿಕ ನೆಲೆಗೆ ಸಮುದಾಯ ಎನ್ನುತ್ತಾರೆ .
  • ನಾವು ನಮ್ಮವರು ಎಂಬ ಭಾವನೆಯೊಂದಿಗೆ ಒಂದು ನಿಶ್ಚಿತ ಭೂ ಪ್ರದೇಶದಲ್ಲಿ ವಾಸಿಸುವ ಜನ ಸಮೂಹವನ್ನು ‘ ಸಮುದಾಯ ‘ ಎನ್ನುವರು .

9 ) ಸಮುದಾಯದ ಎರಡು ಮುಖ್ಯ ಮೂಲಾಂಶಗಳನ್ನು ತಿಳಿಸಿ .

ಸಮುದಾಯದ ಎರಡು ಮುಖ್ಯ ಮೂಲಾಂಶಗಳೆಂದರೆ –

1 ) ನಿರ್ದಿಷ್ಟ ಭೂ ಪ್ರದೇಶ ಅಥವಾ ಸ್ಥಾನೀಯತೆ

2) ಸಾಮುದಾಯಿಕ ಭಾವನೆ

10 ) ಸಮುದಾಯಕ ಭಾವನೆ ಎಂದರೇನು ?

ಸಮುದಾಯದ ಬಗೆಗಿನ – ನಾವು ನಮ್ಮವರು ಎಂಬ ಭಾವನೆ ಅಥವಾ ಒಂದು ಸ್ಥಳೀಯ ಸಮೂಹದೊಂದಿಗೆ ಪೂರ್ಣ ಅರಿವಿನೊಂದಿಗೆ ಅಲ್ಲಿನ ಜನರು ತಮ್ಮನ್ನು ತಾವು ಗುರ್ತಿಸಿಕೊಳ್ಳುವುದನ್ನು ಸಾಮುದಾಯಕ ಭಾವನೆ ‘ ಎನ್ನುವರು .

11 ) ಆದಿವಾಸಿ ಸಮುದಾಯ ಎಂದರೇನು ?

ಒಂದು ವಿಶಿಷ್ಟ ಆಡು ಭಾಷೆಯೊಂದಿಗೆ , ಒಂದು ಜೀವನ ಕ್ರಮವನ್ನು ಹಂಚಿಕೊಂಡು , ಒಂದು ನಿಗದಿತ ಭೂ ಪ್ರದೇಶದಲ್ಲಿ ವಾಸಿಸುವವರಿಗೆ ಆದಿವಾಸಿ ಸಮುದಾಯ ಎನ್ನುತ್ತೇವೆ .

12 ) ಗ್ರಾಮ ಸಮುದಾಯ ಎಂದರೇನು ?

ಹಳ್ಳಿಗಳಲ್ಲಿ ವಾಸಿಸುತ್ತಾ , ಕೃಷಿ ಮತ್ತು ಅದಕ್ಕೆ ಸಂಬಂಧಿತ ವೃತ್ತಿಗಳನ್ನು ಅವಲಂಬಿಸಿ ಜೀವನ ನಡೆಸುವ ಸಮುದಾಯವನ್ನು ಗ್ರಾಮ ಸಮುದಾಯ ಎಂದು ಕರೆಯುವರು .

13 ) ನಗರ ಸಮುದಾಯ ಎಂದರೇನು ?

‘ ಗಾತ್ರದಲ್ಲಿ ದೊಡ್ಡರಿದ್ದು , ಕೃಷಿಯೇತರ ವೃತ್ತಿಗಳನ್ನು ಅವಲಂಬಿಸಿರುವ ಹಾಗೂ ಬಹಳ ವೈವಿಧ್ಯಮಯದಿಂದ ಕೂಡಿದ ಮಾಧ್ಯಮಿಕ ಸಂಬಂಧ ಪ್ರಾಧಾನ್ಯವಿರುವ ಪಟ್ಟಣ ಮತ್ತು ನಗರವಾಸಿಗಳ ಸಮುದಾಯವನ್ನು ನಗರ ಸಮುದಾಯ ‘ ಎನ್ನುವರು .

14 ) ಸಂಘದ ವ್ಯಾಖ್ಯೆ ತಿಳಿಸಿ .

ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಜನರಲ್ಲಿ ಒಟ್ಟುಗೂಡಿ ಕೆಲಸ ಮಾಡುವುದೇ ಸಂಘ ಎಂದಿದ್ದಾರೆ ಡಿ.ಎಸ್.ಬೋಗಾರ್ಡ್‌ಸ್‌ರವರು .

ಮೆಕೈವರ್ ಮತ್ತು ಪೇಜ್‌ರವರು “ ಯಾವುದೊಂದು ಸಾಮಾನ್ಯ ಬೇಡಿಕೆಯನ್ನು ಇಲ್ಲವೇ ಅಂತಹ ಸರಣಿ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದರ ಸಲುವಾಗಿ ಸಂಘಟಿತವಾದ ಜನ ಸಮೂಹವೇ ಸಂಘ ಎಂದಿದ್ದಾರೆ . ‘

15 ) ಸಂಘದ ಯಾವುದೇ ಎರಡು ಲಕ್ಷಣಗಳನ್ನು ತಿಳಿಸಿ .

ಸಂಘದ ಎರಡು ಲಕ್ಷಣಗಳೆಂದರೆ – 1 )ಸಂಘ ಒಂದು ಮಾನವ ಸಮೂಹ 2 ) ಸಹಕಾರದ ಮನೋಭಾವ

16) ಸಂಸ್ಥೆಯ ವ್ಯಾಖ್ಯೆ ತಿಳಿಸಿ .

ಮೂಲಭೂತ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಪ್ರತಿಯೊಂದು ಸಮಾಜವು ಸೃಷ್ಟಿಸಿಕೊಳ್ಳುವ ಒಂದು ವಿಶಿಷ್ಟ ಕಾರ್ಯ ವಿಧಾನದ ವ್ಯವಸ್ಥೆಯನ್ನು ಸಂಸ್ಥೆ ಎನ್ನುವರು .

‘ ಕಿಂಗ್ನಲೇ ಡೇವಿಸ್’ರವರ ಪ್ರಕಾರ ‘ ಕಾರ್ಯವೊಂದರ ಸುತ್ತ ರಚಿಸಲ್ಪಟ್ಟ ಹಾಗೂ ಪರಸ್ಪರ ಪೂರಕವಾದ ಲೋಕಾಚಾರ , ನೈತಿಕ ನಿಯಮ ಮತ್ತು ಕಾನೂನುಗಳ ಒಟ್ಟು ಸಮುಚ್ಚಯವೇ ಸಂಸ್ಥೆ ಎನಿಸುತ್ತದೆ .

ಮೆಕೈವರ್ ಮತ್ತು ಪೇಜ್ ರವರ ಪ್ರಕಾರ -‘ಸಮೂಹಿಕ ಚಟುವಟಿಕೆಗೆ ವಿಶಿಷ್ಟವಾದ ಸ್ಥಾಪಿತ ಕಾರ್ಯ ವಿಧಾನದ ರೂಪಗಳು ಅಥವಾ ನಿಯಮಗಳನ್ನು ಒಳಗೊಂಡಿರುವುದು ಸಂಸ್ಥೆ ಎನ್ನುವರು .

17 ) ಸಂಸ್ಥೆಯ ಯಾವುದೇ ಎರಡು ಲಕ್ಷಣಗಳನ್ನು ತಿಳಿಸಿ .

ಸಂಸ್ಥೆಯ ಎರಡು ಲಕ್ಷಣಗಳೆಂದರೆ – 1 ) ಸಂಸ್ಥೆಗಳು ಅಲಿಖಿತ ಮತ್ತು ಲಿಖಿತರೂಪದ ಸಂಪ್ರದಾಯಗಳನ್ನು ಹೊಂದಿದೆ . 2 ) ಸಂಸ್ಥೆಗಳು ಹೆಚ್ಚು ಶಾಶ್ವತವಾಗಿರುತ್ತದೆ .

18 ) ಪ್ರಾಥಮಿಕ ಸಮೂಹ ಎಂದರೇನು ?

ಅನೋನ್ಯವಾದ ಮುಖಾಮುಖಿ ಸಂಬಂಧ ಮತ್ತು ಸಹಕಾರ ಗುಣಗಳನ್ನು ಹೊಂದಿದ ಸಮೂಹಗಳಿಗೆ ‘ ಪ್ರಾಥಮಿಕ ಸಮೂಹ’ಗಳು ಎನ್ನುವರು . ಉದಾ : ಕುಟುಂಬ , ಗೆಳೆಯರ ಬಳಗ , ನೆರೆಹೊರೆ , ಇತ್ಯಾದಿ .

19 ) ಮಾಧ್ಯಮಿಕ ಸಮೂಹ ಎಂದರೇನು ?

ಅನ್ಯೋನ್ಯತೆಯ ಕೊರತೆಯಿರುವ ಅನುಭವವನ್ನು ನೀಡುವಂತಹ ಸಮೂಹಗಳಿಗೆ ಮಾಧ್ಯಮಿಕ ಸಮೂಹಗಳೆಂದು ಹೇಳಬಹುದು . ಉದಾ : ಶಾಲಾ ಕಾಲೇಜು , ರಾಜಕೀಯ ಪಕ್ಷಗಳು , ಕಾರ್ಮಿಕ ಸಂಘಗಳು ಇತ್ಯಾದಿ .

20 ) ಸಾಮಾಜಿಕ ಸಮೂಹಗಳ ಯಾವುದೇ ಎರಡು ಲಕ್ಷಣಗಳನ್ನು ತಿಳಿಸಿ ?

ಸಾಮಾಜಿಕ ಸಮೂಹಗಳ ಎರಡು ಲಕ್ಷಣಗಳೆಂದರೆ –

ಸಾಮಾಜಿಕ ಸಮೂಹಗಳು ಏಕತೆ ಮತ್ತು ಏಕಮತ್ಯವನ್ನು ಹೊಂದಿರುತ್ತವೆ .

ಸಾಮಾಜಿಕ ಸಮೂಹಗಳು ಗತಿಶೀಲವಾದವುಗಳಾಗಿರುತ್ತವೆ .

21 ) ಸಾಮಾಜಿಕ ಸಮೂಹದ ವ್ಯಾಖ್ಯೆ ತಿಳಿಸಿ ?

1 ) ಮಾರ್ಷಲ್ ಜೋನ್ಸ್ ‘ ರವರು – ‘ ವ್ಯವಸ್ಥಿತವಾದ ಸಾಮಾಜಿಕ ಅಂತಃಕ್ರಿಯೆಯನ್ನು ಹೊಂದಿರುವ ಇಬ್ಬರು ಅಥವಾ ಅದಕ್ಕೂ ಹೆಚ್ಚು ಜನರನ್ನು ಸಾಮಾಜಿಕ ಸಮೂಹ ಎಂದು ಕರೆಯಬಹುದು .

2 ) ಮೈಕೈವರ್‌ ಮತ್ತು ಪೇಜ್ ಮಾನವ ಸಂಬಂಧಗಳಿಂದ ಒಟ್ಟು ಗೂಡಿರುವ ಯಾವುದೇ ಜನ ಸಂಗ್ರಹವನ್ನು ಸಾಮಾಜಿಕ ಸಮೂಹ ಎಂಬುದಾಗಿ ಕರೆಯಬಹುದು ಎಂದು ಹೇಳಿದ್ದಾರೆ .

3 ) ಅಗಬರ್ಗ್ ಮತ್ತು ನಿಮ್‌ಕಾಫ್ – ಇಬ್ಬರು ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಒಂದುಗೂಡಿದಾಗ ಮತ್ತು ಪರಸ್ಪರ ಪ್ರಭಾವ ಬೀರುವಂತಾದಾಗ ಅದೊಂದು ಸಾಮಾಜಿಕ ಸಮೂಹ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ .

22 ) ಒಳ – ಸಮೂಹ ಎಂದರೇನು ?

ವ್ಯಕ್ತಿಯೋರ್ವನು ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಯಾವುದನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನನ್ನು ವಿಭಿನ್ನ ಸಮೂಹಗಳೊಂದಿಗೆ ಗುರುತಿಸಿಕೊಳ್ಳುತ್ತಾನೆಯೋ ಆ ಸಮೂಹವು ಆ ಸಂದರ್ಭದಲ್ಲಿ ಆತನ ಒಳಸಮೂಹ ವಾಗಿರುತ್ತದೆ . ಉದಾ : ಧಾರ್ಮಿಕ ಸಮೂಹ , ಜಾತಿ ಸಮೂಹ , ಇತ್ಯಾದಿ .

23 ) ಹೊರ ಸಮೂಹ ಎಂದರೇನು ?

ಯಾವ ಸಮೂಹಕ್ಕೆ ವ್ಯಕ್ತಿಯು ಸೇರಿಲ್ಲವೆಂದು ಭಾವಿಸುವನೋ ಅದು ಅವನ ಹೊರ ಸಮೂಹ ಎನಿಸುತ್ತದೆ . ಒಳ ಸಮೂಹದಿಂದ ಹೊರಗುಳಿದ ಸಮೂಹವೇ ಹೊರ ಸಮೂಹವಾಗಿದೆ . ಉದಾ : ಒಂದು ಜಾತಿಯವರು ಒಳಸಮೂಹ , ಇತರ ಜಾತಿಯವರು ಹೊರ ಸಮೂಹ ಇದೇ ರೀತಿ ಧರ್ಮದ ವಿಷಯದಲ್ಲಿಯೂ .

24 ) ‘ ಐಚ್ಛಿಕ ಸಮೂಹ ‘ ಎಂದರೇನು ?

ಯಾವ ಸಮೂಹಗಳ ಸದಸ್ಯನಾಗುವುದು ವ್ಯಕ್ತಿಯ ಸ್ವಂತ ಇಚ್ಛೆಯನ್ನು ಅವಲಂಬಿಸಿರುವುದೋ ಅಂತಹ ಸಮೂಹಗಳು ‘ ಐಚ್ಛಿಕ ಸಮೂಹಗಳು ಎನಿಸಿಕೊಳ್ಳುತ್ತದೆ . ಉದಾ : ರಾಜಕೀಯ ಪಕ್ಷಗಳು , ಕಾರ್ಮಿಕ ಸಂಘಗಳು , ಮಿತ್ರರಬಳಗ , ಕ್ಲಬ್‌ಗಳು ಮುಂತಾದವು .

25 ) ಸಂಘಟಿತ ಸಮೂಹ ಎಂದರೇನು ?

ಸಂಘಟನಾತ್ಮಕ ಸಂರಚನೆಯನ್ನು ಹೊಂದಿದ್ದು ಇವುಗಳ ಸದಸ್ಯರ ಪಾತ್ರ – ಅಂತಸ್ತು ಅಧಿಕಾರ ಮೊದಲಾದ ಅಂಶಗಳ ಬಗ್ಗೆ ನಿಶ್ಚಿತತೆ ಇರುವ ಸಮೂಹಗಳಿಗೆ ಸಂಘಟಿತ ಸಮೂಹಗಳು ‘ ಎನ್ನುವರು . ಉದಾ : ಕಾಲೇಜು , ಬ್ಯಾಂಕ್ , ಆಸ್ಪತ್ರೆ ಇತ್ಯಾದಿ .

26 ) ಅಸಂಘಟಿತ ಸಮೂಹ ಎಂದರೇನು ?

ನಿರ್ದಿಷ್ಟವಾದ ಅಥವಾ ಶಾಶ್ವತವಾದ ಸದಸ್ಯತ್ವ ಹೊಂದಿರದ ಸಂಘಟನಾತ್ಮಕ ಸಂರಚನೆಯಿಲ್ಲದಿರುವಿಕೆಯಂತಹ ಸಮೂಹಗಳಿಗೆ ‘ ಅಸಂಘಟಿತ – ಸಮೂಹ’ಗಳೆಂದು ಕರೆಯುವರು . ಉದಾ : ಪ್ರೇಕ್ಷಕರ ಸಮೂಹ , ಉದ್ರಿಕ್ತ ಜನರ ಗುಂಪು ,

27 ) ವಂಶವಾಹಿಕ ಸಮೂಹ ಎಂದರೇನು ?

ಅನೈಚ್ಛಿಕವಾದ ಜೈವಿಕ ನೆಲೆಯನ್ನು ಹೊಂದಿದವುಗಳಾಗಿದ್ದು ವ್ಯಕ್ತಿಗಳು ಹುಟ್ಟಿನಿಂದಲೇ ಅವುಗಳ ಸದಸ್ಯರಾಗಿರುತ್ತಾರೆ . ಇಂತಹ ಸಮೂಹಗಳನ್ನು ವಂಶವಾಹಿಕ ಸಮೂಹಗಳು ಎಂದು ಕರೆಯುವರು . ಉದಾ : ಕುಟುಂಬ , ಕುಲ , ಜಾತಿ , ಇತ್ಯಾದಿ .

28 ) ಸಾಮಾಜಿಕ ನಿಯಂತ್ರಣ ಎಂದರೇನು ?

ಸಮಾಜವು ವ್ಯಕ್ತಿಗಳ ಮೇಲೆ ಹೊಂದಿರುವ ನಿಯಂತ್ರಣವನ್ನು ಸಮೂಹ ಸಮ್ಮತ ನಡವಳಿಕೆಗೆ ಅನುಸಾರವಾಗಿ ವರ್ತಿಸುವಂತೆ ಕಟ್ಟು ಪಾಡುಗಳಿಗೊಳಪಡಿಸುವ ಸಮಾಜದ ಪ್ರಯತ್ನವನ್ನು ‘ ಸಾಮಾಜಿಕ ನಿಯಂತ್ರಣ ‘ ಎನ್ನಬಹುದು .

29 ) ಸಾಮಾಜಿಕ ನಿಯಂತ್ರಣದ ಯಾವುದೇ ಎರಡು ಉದ್ದೇಶಗಳನ್ನು ತಿಳಿಸಿ .

ಸಾಮಾಜಿಕ ನಿಯಂತ್ರಣದ ಎರಡು ಉದ್ದೇಶಗಳೆಂದರೆ – 1 ) ಸಾಮಾಜಿಕ ನಿಯಂತ್ರಣವು ಸಾಮಾಜಿಕ ಅನುವರ್ತತೆಯನ್ನು ತರುವುದು . 2 ) ಸಾಮಾಜಿಕ ನಿಯಂತ್ರಣವು ಐಕಮತ್ಯವನ್ನುಂಟು ಮಾಡುವುದು .

30 ) ಸಾಮಾಜಿಕ ನಿಯಂತ್ರಣದ ಎರಡು ಪ್ರಕಾರಗಳನ್ನು ಹೆಸರಿಸಿ .

ಸಾಮಾಜಿಕ ನಿಯಂತ್ರಣದ ಎರಡು ಪ್ರಕಾರಗಳೆಂದರೆ

1 ) ಔಪಚಾರಿಕ ನಿಯಂತ್ರಣ : ಕಾನೂನು , ಶಾಲೆ , ಪೋಲಿಸ್ , ಇತ್ಯಾದಿ

2 ) ಅನೌಪಚಾರಿಕ ನಿಯಂತ್ರಣ : ಸಾರ್ವಜನಿಕ ಅಭಿಪ್ರಾಯ , ನೈತಿಕ ನಿಯಮಗಳು ಇತ್ಯಾದಿ .

31 ) ಔಪಚಾರಿಕ ನಿಯಂತ್ರಣ ಎಂದರೇನು ?

ಉದ್ದೇಶ ಪೂರ್ವಕವಾಗಿ ಹಾಗೂ ಯೋಜಿತವಾಗಿ ಸ್ಥಾಪಿತವಾದ ಹಾಗೂ ನಿಗಧಿತ ಕ್ರಮವಿಧಾನ ಹಾಗೂ ಸಾಧನಗಳನ್ನೊಳಗೊಂಡ ನಿಯಂತ್ರಣವನ್ನು ಸಾಮಾಜಿಕ ನಿಯಂತ್ರಣ ಎನ್ನುವರು .

32 ) ಅನೌಪಚಾರಿಕ ನಿಯಂತ್ರಣ ಎಂದರೇನು ?

ಯಾವುದೇ ಬಗೆಯ ಪೂರ್ವನಿರ್ಧಾರಿತ ಉದ್ದೇಶ ಅಥವಾ ಯೋಜನೆಗಳಿಂದಲ್ಲದೆ ಆದರೆ ತಮ್ಮಿಂದ ತಾವೇ ಸ್ವಾಭಾವಿಕವಾಗಿ ಎಂಬಂತೆ ಕಾಲಾನುಕ್ರಮದಲ್ಲಿ ವಿಕಾಸಗೊಂಡು ಬಂದ ಸಾಮಾಜಿಕ ನಿಯಂತ್ರಣ ಸಾಧನಗಳ ಸಮಷ್ಟಿಯನ್ನಯು ಅನೌಪಚಾರಿಕ ನಿಯಂತ್ರಣ ‘ ಎನ್ನುತ್ತೇವೆ . ಉದಾ : ಮತಧರ್ಮ , ಸಾರ್ವಜನಿಕ ಅಭಿಪ್ರಾಯ ಇತ್ಯಾದಿ .

33 ) ಆಹಾರ ಸಂಗ್ರಹಣೆ ಮತ್ತು ಬೇಟೆಗಾರಿಕೆ ಸಮಾಜದ ಲಕ್ಷಣಗಳನ್ನು ಬರೆಯಿರಿ .

ಆಹಾರ ಸಂಗ್ರಹಣೆ ಮತ್ತು ಬೇಟೆಗಾರಿಕೆ ಸಮಾಜದ ಲಕ್ಷಣಗಳೆಂದರೆ : ಆಹಾರ ಸಂಗ್ರಹಣೆ ಮತ್ತು ಬೇಟೆಗಾರಿಕೆ ಸಮಾಜವು ಸಣ್ಣ ಸಮುದಾಯವಾಗಿದ್ದು , ಬೇಟೆ , ಮೀನುಗಾರಿಕೆ , ಜೇನು ಮತ್ತು ಗೆಡ್ಡೆಗೆಣಸುಗಳನ್ನು ಸಂಗ್ರಹಿಸುವುದು ಪ್ರಮುಖ ಕಾರ್ಯವಾಗಿದ್ದು ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಸ್ಥಾನ – ಮಾನ ನಿಗಧಿಯಾಗಿರುತ್ತದೆ .

34 ) ಕೃಷಿ ಸಮಾಜದ ಲಕ್ಷಣಗಳನ್ನು ಬರೆಯಿರಿ .

ಕೃಷಿ ಸಮಾಜದ ಲಕ್ಷಣಗಳೆಂದರೆ – ಕೃಷಿ ಸಮಾಜವು ಕೃಷಿಯನ್ನು ಅವಲಂಬಿಸಿದೆ . ಇಲ್ಲಿ ಗ್ರಾಮವಾಸಿಗಳ ವ್ಯವಸ್ಥೆಯಾಗಿದೆ . ಆಹಾರ ಸಂಗ್ರಹಣೆಯು ಕೃಷಿ ಸಮಾಜದ ಮತ್ತೊಂದು ಲಕ್ಷಣ , ಕೃಷಿ ಸಮಾಜವು ಒಬ್ಬ ಮುಖ್ಯಸ್ಥನ ನಿಯಂತ್ರಣಕ್ಕೆ ಒಳಪಟ್ಟಿದ್ದು , ಪರಸ್ಪರ ಸಾಮಾಜಿಕ ಅಸಮಾನೆಗಳು ಗೋಚರಿಸುತ್ತದೆ .

35 ) ಸಾಂಪ್ರದಾಯಿಕ ಸಮಾಜದ ಲಕ್ಷಣಗಳನ್ನು ಬರೆಯಿರಿ .

ಸಾಂಪ್ರದಾಯಿಕ ಸಮಾಜದ ನಾಗರೀಕತೆಯು ಕ್ರಿ.ಪೂ .6000 ರಿಂದ ಹತ್ತೊಮಬತ್ತನೇಯ ಶತಮಾನದವರೆಗೂ ಈ ರೀತಿಯ ಸಮಾಜ ಅಸ್ತಿತ್ವದಲ್ಲಿತ್ತು . ಇದು ಕೈಗಾರಿಕ ಸಮಾಜಕ್ಕಿಂತ ಗಾತ್ರದಲ್ಲಿ ಸಣ್ಣದ್ದಾಗಿದ್ದರೂ , ಸುಮಾರು 1000 ಸಂಖ್ಯೆಯಿಂದ ಲಕ್ಷಾಂತರ ಜನರ ಜೀವನ ಕ್ರಮ . ಕೆಲವು ನಗರಗಳು ವ್ಯಾಪಾರ ಮತ್ತು ಉತ್ಪಾದನಾ ಕೇಂದ್ರಗಳಾಗಿದ್ದವು . ಈ ಸಮಾಜವು ವ್ಯವಸಾಯ ಆಧಾರಿತ ಸಮಾಜವಾಗಿತ್ತು . ಇಲ್ಲಿ ವಿವಿಧ ವರ್ಗಗಳ ನಡುವೆ ಅಸಮಾನತೆಯು ಕಂಡು ಬರುತ್ತಿತ್ತು . ಸಾಂಪ್ರದಾಯಿಕ ಸಮಾಜವು ಒಬ್ಬ ರಾಜ ಅಥವಾ ಚಕ್ರವರ್ತಿಯ ಆಳ್ವಿಕೆಗೆ ಒಳಪಟ್ಟಿತ್ತು .

36 ) ಆಧುನಿಕ ಸಮಾಜದ ಎರಡು ರಾಷ್ಟ್ರಗಳನ್ನು ತಿಳಿಸಿ ,

ಆಧುನಿಕ ಸಮಾಜದ ಎರಡು ರಾಷ್ಟ್ರಗಳೆಂದರೆ – 1 ) ಆಸ್ಟ್ರೇಲಿಯಾ 2 ) ಜಪಾನ್

37 ) ನೂತನ ಕೈಗಾರಿಕಾ ಸಮಾಜದ ಎರಡು ಲಕ್ಷಣಗಳನ್ನು ತಿಳಿಸಿ .

ನೂತನ ಕೈಗಾರಿಕಾ ಸಮಾಜದ ಎರಡು ಲಕ್ಷಣಗಳೆಂದರೆ –

1) 1970 ರ ನಂತರ ಅಸ್ತಿತ್ವಕ್ಕೆ ಬಂದ ಈ ರಾಷ್ಟ್ರಗಳೂ ಕೂಡ ಬಂಡವಾಳಶಾಹಿ ಮತ್ತು ಮುಕ್ತ ಆರ್ಥಿಕ ವ್ಯವಸ್ಥೆಯ ರಾಷ್ಟ್ರಗಳಾಗಿವೆ .

2 ) ಈ ದೇಶದ ಸರಾಸರಿ ತಲಾದಾಯ ಪ್ರಥಮ ಜಗತ್ತಿನ ಸಮಾಜಗಳಿಗಿಂತ ಕಡಿಮೆ ಇದೆ . ಹಾಂಗ್‌ಕಾಂಗ್‌ , ದಕ್ಷಿಣಕೋರಿಯಾ , ಸಿಂಗಪೂರ್‌ , ಬ್ರೆಜಿಲ್ ಮತ್ತು ಮೆಕ್ಸಿಕೋ ಈ ಪಟ್ಟಿಗೆ ಸೇರಿವೆ .

38 ) ಪ್ರಾಥಮಿಕ ಸಮೂಹ ಎಂದರೇನು ?

ಅನ್ಯೋನ್ಯವಾದ , ಮುಖಾಮುಖಿ ಸಂಬಂಧ ಮತ್ತು ಸಹಕಾರ ಗುಣಗಳನ್ನು ಹೊಂದಿದ ಸಮೂಹಗಳಿಗೆ ಪ್ರಾಥಮಿಕ ಸಮೂಹಗಳೆಂದು ಕರೆಯುವರು . ಉದಾ : ಕುಟುಂಬ , ಗೆಳೆಯರ ಬಳಗ , ನೆರೆಹೊರೆ ಇತ್ಯಾದಿ .

39 ) ಮಾಧ್ಯಮಿಕ ಸಮೂಹ ಎಂದರೇನು ?

ಅನೋನ್ಯತೆಯ ಕೊರತೆಯಿರುವ ಅನುಭವವನ್ನು ನೀಡುವಂತಹ ಸಮೂಹಗಳಿಗೆ ಮಾಧ್ಯಮಿಕ ಸಮೂಹಗಳೆಂದು ಹೇಳಬಹುದು . ಉದಾ : ಬ್ಯಾಂಕುಗಳು , ರಾಜಕೀಯ ಪಕ್ಷಗಳು , ಇತ್ಯಾದಿ .

40 ) ಪ್ರಾಥಮಿಕ ಸಮೂಹದ ಎರಡು ಗುಣಲಕ್ಷಣಗಳನ್ನು ಬರೆಯಿರಿ .

ಪ್ರಾಥಮಿಕ ಸಮೂಹದ ಎರಡು ಗುಣಲಕ್ಷಣಗಳೆಂದರೆ

1 ) ಪ್ರಾಥಮಿಕ ಸಂಬಂಧಗಳ ಪ್ರಾಧಾನ್ಯತೆಯನ್ನು ಹೊಂದಿರುತ್ತದೆ .

2 ) ಹಿತಾಸಕ್ತಿಗಳಲ್ಲಿ ಸಮಭಾಗಿತ್ವ ಹೊಂದಿರುತ್ತದೆ .

41 ) ಮಾಧ್ಯಮಿಕ ಸಮೂಹದ ಎರಡು ಗುಣಲಕ್ಷಣಗಳನ್ನು ಬರೆಯಿರಿ .

ಮಾಧ್ಯಮಿಕ ಸಮೂಹದ ಎರಡು ಗುಣಲಕ್ಷಣಗಳೆಂದರೆ :

1 ) ಮಾಧ್ಯಮಿಕ ಸಮೂಹಗಳು ಮಾಧ್ಯಮಿಕ ಸಂಬಂಧಗಳ ಪ್ರಾಧಾನ್ಯತೆಯನ್ನು ಹೊಂದಿರುತ್ತದೆ .

2 ) ಮಾಧ್ಯಮಿಕ ಸಮೂಹವು ನಿಶ್ಚಿತ ಗುರಿ ಮತ್ತು ನಿಶ್ಚಿತ ಆಸಕ್ತಿಯನ್ನು ಹೊಂದಿರುತ್ತದೆ .

42 ) ಸಂಘಟಿತ ಸಮೂಹಕ್ಕೆ ಎರಡು ಉದಾಹರಣೆಗಳನ್ನು ನೀಡಿ .

ಸಂಘಟಿತ ಸಮೂಹಕ್ಕೆ ಎರಡು ಉದಾಹರಣೆಗಳೆಂದರೆ ಶಾಲೆ , ಕಾಲೇಜು , ವಿಶ್ವವಿದ್ಯಾಲಯ , ಬ್ಯಾಂಕ್ , ಮುಂತಾದವು .

43 ) ಅಸಂಘಟಿತ ಸಮೂಹಕ್ಕೆ ಎರಡು ಉದಾಹರಣೆಗಳನ್ನು ನೀಡಿ .

ಅಸಂಘಟಿತ ಸಮೂಹಕ್ಕೆ ಎರಡು ಉದಾಹರಣೆಗಳೆಂದರೆ –

1 ) ಪ್ರೇಕ್ಷಕ ಸಮೂಹಗಳು 2 ) ಸಾರ್ವಜನಿಕರು , ಉದ್ರಿಕ್ತ ಜನಸ್ತೋಮ ಇತ್ಯಾದಿ .

44 ) ಲೋಕರೂಢಿಯ ಎರಡು ಲಕ್ಷಣಗಳನ್ನು ತಿಳಿಸಿ ,

ಲೋಕರೂಢಿಯ ಎರಡು ಲಕ್ಷಣಗಳೆಂದರೆ – 1) ಲೋಕರೂಢಿಗಳು ಸಾಮಾಜಿಕವಾದವುಗಳು . 2 ) ಲೋಕಾರೂಢಿಗಳು ವೈವಿಧ್ಯಮಯವಾಗಿರುತ್ತವೆ .

45 ) ನೈತಿಕ ನಿಯಮಗಳ ಎರಡು ಲಕ್ಷಣಗಳನ್ನು ಬರೆಯಿರಿ .

ನೈತಿಕ ನಿಯಮಗಳ ಎರಡು ಲಕ್ಷಣಗಳೆಂದರೆ –

1 ) ನೈತಿಕ ನಿಯಮಗಳು ನಮ್ಮ ಸಾಮಾಜಿಕ ಜೀವನದ ನಿಯಂತ್ರಕಗಳಿದ್ದಂತೆ

2 ) ನೈತಿಕ ನಿಯಮಗಳು ಹೆಚ್ಚು ಶಾಶ್ವತವಾದವುಗಳು

46 ) ಕಾನೂನಿನ ಎರಡು ಲಕ್ಷಣಗಳನ್ನು ಬರೆಯಿರಿ :

ಕಾನೂನಿನ ಎರಡು ಲಕ್ಷಣಗಳೆಂದರೆ 1 ) ಕಾನೂನುಗಳು ಸಾಮಾನ್ಯವಾಗಿ ಲಿಖಿತ ರೂಪದಲ್ಲಿರುವುದರಿಂದ ಒಂದಲ್ಲ ಒಂದು ಬಗೆಯಲ್ಲಿ ದಾಖಲುಗಳಂತೆ ಉಳಿಯುತ್ತವೆ . 2 ) ಕಾನೂನುಗಳು ಸ್ಪಷ್ಟತೆ , ನಿಖರತೆ ಹಾಗೂ ನಿಸ್ಸಂದೇಹಯುಕ್ತತೆಯ ಗುಣಗಳನ್ನು ಹೊಂದಿರುತ್ತದೆ .

Iv ಐದು ಅಂಕದ ಪ್ರಶ್ನೆಗಳು : ( 10 – 15 ವಾಕ್ಯಗಳಲ್ಲಿ ಉತ್ತರಿಸಿ )

1st Puc Sociology 2nd Chapter Notes in Kannada

1) ಸಮಾಜ ಎಂದರೇನು ? ವಿವರಿಸಿ .

ಒಡನಾಡಿಗಳ ಒಡನಾಟದಿಂದ ಒಟ್ಟುಗೂಡಿರುವ ವ್ಯವಸ್ಥೆಯೇ ‘ ಸಮಾಜ ‘ ಎನ್ನುವರು . ‘ ಸಮಾಜ ‘ ಎಂಬ ಕನ್ನಡ ಪದವು ಇಂಗ್ಲೀಷ್ ಭಾಷೆಯ ಸೊಸೈಟಿ ಎಂಬ ಪದದ ಅನುವಾದವಾಗಿದೆ . ‘ ಸೊಸೈಟಿ ‘ ಎಂಬ ಪದವು ಲ್ಯಾಟಿನ್ ಭಾಷೆಯ ‘ ಸೋಸಿಯಸ್ ಎಂಬ ಪದದಿಂದ ಉತ್ಪತ್ತಿಯಾಗಿದೆ . ಲ್ಯಾಟಿನ್ ಭಾಷೆಯ ‘ ಸೋಸೆಯಸ್ ‘ ಎಂದರೆ ಒಡನಾಡಿತನ , ಗೆಳೆತನ ಎಂದರ್ಥ .

ಕೆಲವು ಸಮಾಜಶಾಸ್ತ್ರಜ್ಞರು ‘ ಸಮಾಜ’ದ ಅರ್ಥವನ್ನು ಈ ರೀತಿ ಅರ್ಥೈಸಿದ್ದಾರೆ .

1 ) ಮೈಕೈವರ ಮತ್ತು ಪೇಜ್‌ರವರ ಪ್ರಕಾರ – ‘ ಸಾಮಾಜಿಕ ಸಂಬಂಧಗಳ ಬಲೆಯೇ ಸಮಾಜ ‘ .

2 ) ಜಿ.ಡಿ.ಎಂ.ಕೋಲ್ ‘ ಒಂದು ಸಮುದಾಯದೊಳಗಿನ ಸುಸಂಘಟಿತ ಸಂಸ್ಥೆಗಳ , ಸಂಘಗಳ ಸಂಕೀರ್ಣವಾದ ವ್ಯವಸ್ಥೆಯೇ ಸಮಾಜ ‘ ಎಂಬುದಾಗಿ ಹೇಳಿದ್ದಾರೆ .

3 ) ಪ್ರೋ ಎಫ್.ಎಚ್.ಗಿಡ್ಡಿಂಗ್’ರವರು – ‘ ಜೊತೆಗೂಡಿ ಇರಬಹುದಾದ ವ್ಯಕ್ತಿಗಳನ್ನು ಒಟ್ಟುಗೂಡಿಸಿದ ಒಂದು ಒಕ್ಕೂಟ , ಸಂಘಟನೆ , ಔಪಚಾರಿಕ ಬಾಂಧವ್ಯಗಳ ಮೊತ್ತವೇ ಸಮಾಜ ಎಂದಿದ್ದಾರೆ .

2 ) ಸಮಾಜದ ಐದು ಲಕ್ಷಣಗಳನ್ನು ವಿವರಿಸಿ .

ಸಮಾಜದ ಐದು ಲಕ್ಷಣಗಳೆಂದರೆ :

1 ) ಸಮಾಜವು ಸಮೂಹಗಳ ಸಮೂಹ : ಹಲವು ಜನರು ಒಟ್ಟುಗೂಡಿ ಸಮೂಹವಾಗುವುದು . ಇಂತಹ ಹಲವಾರು ಸಮೂಹಗಳು ಒಟ್ಟುಗೂಡಿ ಸಮಾಜವಾಗುವುದು . ಪ್ರತಿಯೊಂದು ಸಮಾಜವು ಕುಟುಂಬ , ನೆರೆಹೊರೆ , ಗ್ರಾಮ , ನಗರ , ಕಾರ್ಮಿಕ ಸಂಘ , ಧಾರ್ಮಿಕ ಸಂಘ , ರಾಜಕೀಯ ಪಕ್ಷಗಳು ಮುಂತಾದ ಸಮೂಹಗಳನ್ನು ಹೊಂದಿರುವುದು . ಆದ್ದರಿಂದಲೇ ಹೆಚ್.ಎಂ.ಜಾನ್ಸನ್‌ರವರು – ‘ ಸಮೂಹಗಳ ಸಮೂಹವೇ ಸಮಾಜ ‘ ಎಂದಿದ್ದಾರೆ.

2 ) ಸಮಾಜವು ಸಾಮಾಜಿಕ ಸಂಬಂಧಗಳ ಬಲೆ : ಸಾಮಾಜಿಕ ಸಂಬಂಧವೆಂದರೆ ಇಬ್ಬರು ಅಥವಾ ಅದಕ್ಕಿಂತಲೂ ಹೆಚ್ಚಿನ ಜನರ ನಡುವಿನ ಕೊಡುವ ಮತ್ತು ತೆಗೆದುಕೊಳ್ಳುವ ಸಂಬಂಧ ಎನ್ನುತ್ತೇವೆ . ಸಾಮಾಜಿಕ ಸಂಬಂಧಗಳ ವ್ಯಾಪ್ತಿ ವಿಶಾಲವಾಗಿದೆ . ಉದಾ : ಗುರುಶಿಷ್ಯರು , ರೋಗಿಗಳು ವೈದ್ಯರು , ಗಂಡ ಹೆಂಡತಿ ಮುಂತಾದವುಗಳಲ್ಲಿ ಇಂತಹ ಸಂಬಂಧ ಕಾಣುವೆವು . – ಒಬ್ಬ ವ್ಯಕ್ತಿ ಏಕಕಾಲದಲ್ಲಿ ಹಲವಾರು ಸಾಮಾಜಿಕ ಸಂಬಂಧಗಳನ್ನು ಹೊಂದಿರುವನು . ಒಟ್ಟಿನಲ್ಲಿ ಸಾಮಾಜಿಕ ಸಂಬಂಧಗಳ ಬಲೆಯೇ ಸಮಾಜ ‘ ,

3 ) ಹೋಲಿಕೆ ಮತ್ತು ವ್ಯತ್ಯಾಸಗಳು : ಹೋಲಿಕೆ ಮತ್ತು ವ್ಯತ್ಯಾಸಗಳು , ಇವು ಸಮಾಜದ ದೃಷ್ಟಿಯಿಂದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ‘ , ಸಮಾಜದ ಜನರ ರೂಪ , ಆಸಕ್ತಿ , ಬುದ್ಧಿಶಕ್ತಿ , ಭಾವನೆಗಳು , ಮಾನಸಿಕ ಶಕ್ತಿ , ಸಾಮರ್ಥ್ಯ ಮುಂತಾದವುಗಳಲ್ಲಿ ಭಿನ್ನತೆಗಳಿರುತ್ತವೆ . ಈ ಕಾರಣದಿಂದಲೇ ಸಮಾಜದಲ್ಲಿ ಕೃಷಿಕರು , ಕಾರ್ಮಿಕರು , ಸೈನಿಕರು , ಶಿಕ್ಷಕರು , ವ್ಯಾಪಾರಿಗಳು , ವಕೀಲರು , ವೈದ್ಯರು ಇಂಜಿನಿಯರರು ಮುಂತಾದ ವೈವಿಧ್ಯಮಯ ವೃತ್ತಿ ಸಮೂಹಗಳು ಸಮಾಜದಲ್ಲಿ ಕಂಡು ಬರುವುವು . ಸಮಾಜದ ಅಸ್ತಿತ್ವದಲ್ಲಿ ಹೋಲಿಕೆ ಪ್ರಥಮ ಸ್ಥಾನದಲ್ಲಿಯೂ , ವ್ಯತ್ಯಾಸವು ನಂತರದ ಸ್ಥಾನದಲ್ಲಿ ಇರುತ್ತದೆ .

4 ) ಸಹಕಾರ ಮತ್ತು ಶ್ರಮವಿಭಜನೆ : ಮಾನವ ಸಮಾಜವು ಬಹುಮಟ್ಟಿಗೆ ಸಹಕಾರ ಮತ್ತು ಶ್ರಮ ವಿಭಜನೆಗಳ ಮೇಲೆ ನಿಂತಿರುತ್ತದೆ . ಸಹಕಾರವೆಂದರೆ ಜನರು ಸಮಾನ ಉದ್ದೇಶಗಳ ಈಡೇರಿಕೆಗೆ ಕೂಡಿ ದುಡಿಯುವುದಾಗಿದೆ . ‘ ಶ್ರಮವಿಭಜನೆ ಎಂದರೆ ಸಾಮಾನ್ಯ ಕಾರ್ಯವೊಂದನ್ನು ತಮ್ಮೊಳಗೆ ಹಂಚಿಕೊಂಡು ದುಡಿಯುವುದಾಗಿದೆ . ಆದ್ದರಿಂದ ಸಹಕಾರ ಮತ್ತು ಶ್ರಮ ವಿಭಜನೆ ಎರಡು ಪರಸ್ಪರ ಪೂರಕವಾಗಿದೆ .

5 ) ಪರಸ್ಪರ ಅವಲಂಬನೆ : ಪರಸ್ಪರ ಅವಲಂಬನೆಯು ಸಮಾಜದ ಪ್ರಮುಖ ಲಕ್ಷಣವಾಗಿದೆ . ನಾಗರಿಕತೆ ಮತ್ತು ಔದ್ಯೋಗಿಕತೆ ಬೆಳೆಯುತ್ತಾ ಹೋದಂತೆ , ಜೀವನದ ವೈವಿದ್ಯತೆ ಹೆಚ್ಚಿದ್ದಂತೆ ಪರಸ್ಪರ ಅವಲಂಬನೆಯು ಹೆಚ್ಚುತ್ತಾ ಹೋಗುವುದು … ಸಾಮಾಜಿಕ ಸಮೂಹಗಳು , ರಾಷ್ಟ್ರಗಳು ಕೂಡಾ ಪರಸ್ಪರಾವಲಂಬನೆಯ ಮೇಲೆ ಕಾರ್ಯ ನಿರ್ವಹಿಸುತ್ತವೆ .

3 ) ಸಮುದಾಯದ ಮೂಲಾಂಶಗಳನ್ನು ವಿವರಿಸಿ ,

ಸಮುದಾಯದ ಅಸ್ತಿತ್ವಕ್ಕೆ ಅವಶ್ಯವಾಗಿ ನಿರ್ದಿಷ್ಟ ಭೂ ಪ್ರದೇಶ ಮತ್ತು ಸಾಮುದಾಯಿಕ ಭಾವನೆ ಎಂಬ ಎರಡು ಅಂಶಗಳು ಬೇಕು . ಅವುಗಳಿಗೆ ಸಮುದಾಯದ ಮೂಲಾಂಶಗಳು ಎನ್ನುವರು .

1 ) ಅರ್ಬಿಷ್ಟ ಭೂ ಪ್ರದೇಶ ಅಥವಾ ಸ್ಥಾನೀಯತೆ: ಸಮುದಾಯವು ಒಂದು ಪ್ರಾದೇಶಿಕ ಸಮೂಹವಾಗಿದ್ದು ಅದು ಯಾವಾಗಲೂ ನಿರ್ದಿಷ್ಟ ಭೌಗೋಳಿಕ ಪ್ರದೇಶ ಆವರಿಸಿರುವುದು . ಹೀಗಾಗಿ ಸ್ಥಾನೀಯತೆಯು ಸಮುದಾಯದ ಭೌತಿಕ ನೆಲೆಯು ಜನರ ಸಾಮಾಜಿಕ ಜೀವನದ ಮೇಲೆ ಅವರ ಕುಟುಂಬ , ಮತಧರ್ಮ , ನಂಬಿಕೆ ಆಚಾರ ವಿಚಾರ , ಉದ್ಯೋಗಗಳ ಮೇಲೆ ಬಹಳ ಗಣನೀಯವಾದ ಪ್ರಭಾವವನ್ನು ಬೀರುವುದು , ಸಮುದಾಯದ ಭೌತಿಕ ನೆಲೆಗಳಿಗೆ ಸಂಬಂಧಿಸಿದ ಫಲವತ್ತಾದ ಭೂಮಿ , ಖನಿಜಗಳು , ಅರಣ್ಯ , ಜಲ , ಸಸ್ಯ , ಹವಾಮಾನ ಮುಂತಾದ ಅನೇಕ ಭೌತಿಕಾಂಶಗಳಾಗಿವೆ .

2 ) ಸಾಮುದಾಯಿಕ ಭಾವನೆ : ಸಾಮುದಾಯಿಕ ಭಾವನೆ ಎಂದರೆ – ‘ ಸಮುದಾಯದ ಬಗೆಗಿನ ‘ ನಾವು ನಮ್ಮವರು ಎಂಬ ಭಾವನೆ ಅಥವಾ ಒಂದು ಸ್ಥಳೀಯ ಸಮೂಹದೊಂದಿಗೆ ಪೂರ್ಣ ಅರಿವಿನೊಂದಿಗೆ ಅಲ್ಲಿನ ಜನರು ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಎಂದರ್ಥ . ಸಾಮುದಾಯಿಕ ಭಾವನೆಯಿಂದ ಜನರು ತಮ್ಮ ಸುಖ ದುಃಖಗಳನ್ನು ಪರಸ್ಪರ ಹಂಚಿಕೊಳ್ಳುವರು ಮತ್ತು ಅವರಲ್ಲಿ ಸಾಮೂಹಿಕ ಐಕ್ಯತೆಯ ಭಾವನೆ ಮೂಡುವುದು . ಸಾಮುದಾಯಿಕ ಭಾವನೆ ಸದಾ ಜಾಗೃತವಾಗಿರಬೇಕಾದರೆ ಜನರಲ್ಲಿ ಸಮಾನ ಆಸಕ್ತಿಗಳು , ಸಮಾನ ಜೀವನ ವಿಧಾನಗಳು ಇರಬೇಕಾಗುತ್ತದೆ .

4 ) ಸಂಘದ ಲಕ್ಷಣಗಳನ್ನು ವಿವರಿಸಿ .

ಸಂಘದ ಲಕ್ಷಣಗಳೆಂದರೆ –

ಸಂಘ ಒಂದು ಮಾನವ ಸಮೂಹ : ಸಂಘವು ಜನರಿಂದ ನಿರ್ಮಾಣವಾಗಿದೆ . ಜನರ ಹೊರತಾಗಿ ಸಂಘವಿರಲು ಸಾಧ್ಯವಿಲ್ಲ . ಸಂಘವು ಒಂದು ಸುಸಂಘಟಿತವಾದ ಸಮೂಹ . ಆದ್ದರಿಂದ ಪ್ರೇಕ್ಷಕರ ಸಮೂಹ , ಜನಜಂಗುಳಿ ಮುಂತಾದ ಅಸಂಘಟಿತ ಸಮೂಹಗಳು ಸಂಘವಾಗಲು ಸಾಧ್ಯವಿಲ್ಲ .

ನಿರ್ದಿಷ್ಟ ಆಸಕ್ತಿ : ಸಂಘವು ಜನರ ಸಮಾನ ಆಸಕ್ತಿಗಳ ಈಡೇರಿಕೆಗಾಗಿ ಸುಸಂಘಟಿತವಾದ ಸಮೂಹವಾಗಿದೆ . ಉದಾ : ರಾಜಕೀಯ ಆಸಕ್ತಿ ಹೊಂದಿರುವವರು , ರಾಜಕೀಯ ಪಕ್ಷಗಳಿಗೆ ಸೇರಿ ಕೊಂಡರೆ , ಕ್ರೀಡಾಸಕ್ತಿಗಳು ಕ್ರೀಡಾಸಂಘಗಳಿಗೆ ಸೇರಿಕೊಳ್ಳುತ್ತಾರೆ .

ಸಹಕಾರದ ಮನೋಭಾವ : ಜನರು ತಮ್ಮ ಬೇಡಿಕೆಗಳು ಮತ್ತು ಉದ್ದೇಶಗಳ ಈಡೇರಿಕೆಗಾಗಿ ಪರಸ್ಪರ ಸಹಕಾರ ಸಹಾಯಗಳಲ್ಲಿ ತೊಡಗುವುದು ಅನಿವಾರ್ಯವಾಗಿದೆ . ಜನರ ಬೇಡಿಕೆಗಳು ವೈಯಕ್ತಿಕವಾಗಿ ಈಡೇರಲಾರದು . ಉದಾ : ಕಾರ್ಮಿಕರ ಸಂಘ ಸಂಘಟಿತ ಸಮೂಹ : ಸಂಘಟನೆಯು ಸಂಘಕ್ಕೊಂದು ರೂಪವನ್ನು ವ್ಯವಸ್ಥೆಯನ್ನು ಭದ್ರತೆಯನ್ನು ನೀಡುತ್ತದೆ . ಸಂಘಟನೆಯು ಸಂಘವೊಂದರಲ್ಲಿ ವಿವಿಧ ಅಂತಸ್ತುಗಳು ಮತ್ತು ಪಾತ್ರಗಳು ವಿವಿಧ ಸದಸ್ಯರಲ್ಲಿ ಹೇಗೆ ಹಂಚಲ್ಪಟ್ಟಿದೆ ಎಂಬ ಅಂಶವನ್ನು ಸ್ಪಷ್ಟಪಡಿಸುವುದು .

ಸಾಮಾಜಿಕ ನಿಯಂತ್ರಣ : ಪ್ರತಿಯೊಂದು ಸಂಘವು ತನ್ನ ಸದಸ್ಯರ ವರ್ತನೆಯನ್ನು ನಿಯಂತ್ರಿಸಲು ತನ್ನದೆ ಆದ ನಿಯಮಗಳನ್ನು ಹೊಂದಿರುವುದು . ಸಂಘವು ತನ್ನ ಸದಸ್ಯರ ವರ್ತನೆಯನ್ನು ನಿಯಂತ್ರಿಸಲು ನಿಯಮಗಳನ್ನು ಬರಹದ ರೂಪದಲ್ಲಿ ಹೊಂದಿರಬಹುದು .

ಸ್ಥಿರತೆ : ಸಂಘವು ಶಾಶ್ವತ ಸ್ವರೂಪದ ಅಥವಾ ತಾತ್ಕಾಲಿಕ ಸ್ವರೂಪದಾಗಿರಬಹುದು . ಕೆಲವು ರಾಜಕೀಯ ಪಕ್ಷಗಳು , ಕಾರ್ಮಿಕ ಸಂಘಗಳು ಹಲವಾರು ದಶಕಗಳ ಇತಿಹಾಸವನ್ನು ಹೊಂದಿದೆ . ಕೆಲವು ಸಂಘಗಳು ಬಹಳ ತಾತ್ಕಾಲಿಕವಾದವುಗಳು . ಉದಾ : ಸಾಹಿತಿಗಳನ್ನು ಅಥವಾ ವಿಜ್ಞಾನಿಗಳನ್ನು ಸನ್ಮಾನಿಸುವಲ್ಲಿ ಸ್ಥಾಪಿಸಬಹುದಾದ ಸಂಘಗಳು ಸನ್ಮಾನ ಸಮಾರಂಭದೊಂದಿಗೆ ವಿಸರ್ಜನೆಯು ಹೊಂದಬಹುದು .

5 ) ಸಮುದಾಯದ ಲಕ್ಷಣಗಳನ್ನು ವಿವರಿಸಿ .

ಸಮುದಾಯದ ಹಲವಾರು ಲಕ್ಷಣಗಳನ್ನು ಹೊಂದಿದೆ ಅವುಗಳೆಂದರೆ –

ಸ್ಥಿರತೆ ಅಥವಾ ಸಾಪೇಕ್ಷ ಶಾಶ್ವತತೆ : ಸಮುದಾಯವು ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಶಾಶ್ವತವಾಗಿ ಜೀವನ ನಡೆಸುವ ಸಮೂಹವಾಗಿದೆ . ಮಾನವನು ಈ ಭೂಮಿಯ ಮೇಲೆ ಒಂದು ಕಡೆ ಶಾಶ್ವತವಾಗಿ ನೆಲೆ ನಿಂತು ಜೀವನ ನಡೆಸಲು ಪ್ರಾರಂಭಿಸಿದನೋ ಅಂದಿನಿಂದ ಸಮುದಾಯಗಳು ಕಂಡು ಬರುತ್ತಿವೆ . ಹೀಗಾಗಿ ಸಮುದಾಯಗಳು ಸ್ಥಿರವಾದವುಗಳು .

ಸ್ವಾಭಾವಿಕತೆ : ಸಮುದಾಯಗಳು ಸಾಮಾನ್ಯವಾಗಿ , ನೈಸರ್ಗಿಕವಾಗಿ ಬೆಳೆದು ಬಂದಿವೆ . ಜನರು ಯಾವಾಗ ಒಂದು ಕಡೆ ಧೀರ್ಘಕಾಲ ಸ್ಥಿರವಾಗಿ ನೆಲೆಸಲು ಪ್ರಾರಂಭಿಸಿದ ನಂತರ ಸಾಮುದಾಯಿಕ ಭಾವನೆ ಬೆಳೆದು ಸಮುದಾಯಗಳು ರಚನೆಯಾದವು . ಆದುದರಿಂದ ಸಮುದಾಯಗಳು ಸ್ವಯಂ ಪ್ರೇರಿತವಾಗಿ , ಕ್ರಮೇಣವಾಗಿ ವಿಕಾಸವಾಗುತ್ತದೆ .

ಸಮುದಾಯದ ಗಾತ್ರ: ಸಮುದಾಯವು ನಿರ್ದಿಷ್ಟ ಗಾತ್ರ ಹೊಂದಿರುವುದಿಲ್ಲ . ಗ್ರಾಮವು ಚಿಕ್ಕ ಸಮುದಾಯವಾಗಿರುವಂತೆ ನಗರವು ಬೃಹತ್ ಸಮುದಾಯವಾಗಿರುತ್ತದೆ .

ಸಾಮಾಜಿಕ ನಿಯಂತ್ರಣ : ಪ್ರತಿಯೊಂದು ಸಮುದಾಯವು ತನ್ನದೇ ಆದ ಹಲವಾರು ಸಾಮಾಜಿಕ ನಿಯಮಗಳನ್ನು ಬೆಳೆಸಿಕೊಂಡು ತನ್ನ ಸದಸ್ಯರುಗಳ ವರ್ತನೆಯನ್ನು ನಿಯಂತ್ರಿಸುವುದು .ನಗರ ಸಮುದಾಯಗಳಲ್ಲಿ ಔಪಚಾರಿಕ ನಿಯಂತ್ರಣದ ಸಾಧನಗಳಾದ ಕಾನೂನು , ಶಾಸನ , ಪೋಲಿಸ್ ಮುಂತಾದವುಗಳು ಜನರ ವರ್ತನೆಯನ್ನು ನಿಯಂತ್ರಿಸುತ್ತವೆ .

ವಿಶಿಷ್ಟ ಹೆಸರು : ಪ್ರತಿಯೊಂದು ಸಮುದಾಯವು ತನ್ನದೇ ಆದ ಹೆಸರು ಹೊಮದಿರುವುದ . ಅದು ಗ್ರಾಮ , ನಗರ , ಆದಿವಾಸಿ ಸಮುದಾಯವಾಗಿರಲಿ ‘ ತನ್ನದೇ ಆದ ವಿಶೇಷ ಹೆಸರು ಹೊಂದಿರುವುದು ಮತ್ತು ಅದರ ಮೂಲಕವೇ ಗುರುತಿಸಲ್ಪಡುತ್ತದೆ .

6 ) ಸಂಸ್ಥೆಯ ಐದು ಲಕ್ಷಣಗಳನ್ನು ವಿವರಿಸಿ .

ಸಂಸ್ಥೆಯ ಐದು ಲಕ್ಷಣಗಳೆಂದರೆ –

ಸಾರ್ವತ್ರಿಕ ವಾದವು : ಸಾಮಾಜಿಕ ಸಂಸ್ಥೆಗಳು ಸಾರ್ವತಿಕ ಸ್ವರೂಪದವು , ಸಂಸ್ಥೆಗಳು ಇಲ್ಲದ ಸಮಾಜವನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ . ಪ್ರಾಥಮಿಕ ಸ್ವರೂಪದ ಸಂಸ್ಥೆಗಳಾದ ವಿವಾಹ , ಕುಟುಂಬ , ರಾಜಕೀಯ ವ್ಯವಸ್ಥೆ ಇವು ಎಲ್ಲಾ ಸಮುದಾಯದಲ್ಲಿಯೂ ಕಂಡುಬರುವುದು ,

ಪ್ರಾಮಾಣೀಕೃತ ನಿಯಮಗಳು : ಸಾಮಾಜಿಕ ಸಂಸ್ಥೆಗಳು ಎಲ್ಲರೂ ತಿಳಿಯಲ್ಪಟ್ಟ ಗುರ್ತಿಸಲ್ಪಟ್ಟ ಹಾಗೂ ಸಮಾಜದ ಪ್ರಾಮಾಣೀಕೃತ ನಿಯಮಗಳಾಗಿವೆ . ಉದಾ : ವಿವಾಹ ಸಂಸ್ಥೆಯು ಪತಿ – ಪತ್ನಿಯರ ನಡುವಿನ ಸಂಬಂಧವನ್ನು ನಿಯಂತ್ರಿಸುತ್ತದೆ . ಪ್ರಮಾಣಿಕೃತ ನಿಯಮ ಮತ್ತು ವಿಧಾನಗಳನ್ನು ಹೊಂದಿರುತ್ತದೆ .

ನಿಯಂತ್ರಣದ ಸಾಧನವಾಗಿ ಸಂಸ್ಥೆಗಳು : ಧರ್ಮ , ಶಿಕ್ಷಣ , ನೈತಿಕತೆ , ಸರ್ಕಾರ , ಶಾಸನ ಮುಂತಾದ ಸಂಸ್ಥೆಗಳು ಜನರ ವರ್ತನೆಯನ್ನು ಹಲವು ರೀತಿಯಲ್ಲಿ ನಿಯಂತ್ರಿಸುತ್ತವೆ : ಅದೇ ರೀತಿ ಶಾಲೆ ಮತ್ತು ಕಾಲೇಜಿನಂತಹ ಸಂಸ್ಥೆಯು ಕೂಡ ಜನ ಮಾನ್ಯತೆ ಪಡೆದ ಪ್ರಮಾಣೀಕೃತ ನಿಯಮ ಮತ್ತು ವಿಧಾನಗಳನ್ನೇ ಹೊಂದಿರುತ್ತದೆ .

ಹೆಚ್ಚು ಶಾಶ್ವತವಾದವು : ಸಂಸ್ಥೆಗಳು ಸಾಮಾನ್ಯವಾಗಿ ತ್ವರಿತವಾಗಿ ಬದಲಾವಣೆ ಹೊಂದುವುದಿಲ್ಲ . ಕೆಲವು ಸಾಮಾಜಿಕ ಸಂಸ್ಥೆಗಳು ಅತಿ ನಿಷ್ಟೆಯ ಮತ್ತು ಬಾಳಿಕ ಬರುವಂತಹ ಸ್ವರೂಪವನ್ನು ಹೊಂದಿವೆ . ಉದಾ : ಜಾತಿ ಮತ್ತು ಧರ್ಮ , ಒತ್ತಡಕ್ಕೆ ಮಣಿದು ಅಥವಾ ಪರಿಸ್ಥಿತಿಗೆ ತಲೆಬಾಗಿ ಪರಿವರ್ತಿತಗೊಂಡರೂ ಮೂಲಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ .

ಅಮೂರ್ತ ಸ್ವರೂಸವುಳ್ಳವು : ಸಂಸ್ಥೆಗಳು ಸ್ಪರ್ಶ ಸಾಧ್ಯವಾದ ಅಥವಾ ದೃಷ್ಟಿಗೋಚರವಾಗುವ ವಸ್ತುಗಳಲ್ಲ . ಕಾರಣವೇನೆಂದರೆ ಅವು ಅಮೂರ್ತ ಸ್ವರೂಪವಾದವು . ಅದಕ್ಕಾಗಿಯೇ ವಿವಾಹವನ್ನು ವಸ್ತು ಸಂಗ್ರಹಾಲಯದಲ್ಲಿಡಲಾಗದು . ತತ್ವದರ್ಶಗಳ ಹಿನ್ನಲೆಯಲ್ಲಿ ತುಲನೆ ಮಾಡಿ ನೋಡಬಹುದು .

ಅಲಿಖಿತ ಮತ್ತು ಲಿಖಿತ ರೂಪದ ಶಂಪ್ರದಾಯಗಳು : ಸಂಸ್ಥೆಗಳು ಅಲಿಖಿತ ಮತ್ತು ಲಿಖಿತ ಸಂಪ್ರದಾಯದ ರೂಪದಲ್ಲಿ ಅಸ್ತಿತ್ವದಲ್ಲಿರಬಹುದು . ಸಂಸ್ಥೆಗಳು ಬಹಳ ಮಟ್ಟಿಗೆ ರೂಪದಲ್ಲಿರುವುದು ಸಂಪ್ರದಾಯ . ಇಲ್ಲಿ ನೈತಿಕ ನಿಯಮಗಳನ್ನು ಕಾಣುತ್ತೇವೆ . ಉದಾ : ಧಾರ್ಮಿ ಗ್ರಂಥಗಳು , ಸರ್ಕಾರಿ ಆಜ್ಞೆಗಳು

ಸಾಂಕೇತಿಕ ಲಕ್ಷಣಗಳು: ಪ್ರತಿಯೊಂದು ಸಾಮಾಜಿಕ ಸಂಸ್ಥೆಗಳು ತಮ್ಮದೇ ಆದ ಭೌತಿಕ ಹಾಗೂ ಅಭೌತಿಕ ಸ್ವರೂಪದ ನಿರ್ದಿಷ್ಟ ಸಾಂಕೇತಿಕ ಲಕ್ಷಣಗಳನ್ನು ಹೊಂದಿರುತ್ತದೆ . ಉದಾ : ರಾಷ್ಟ್ರಧ್ವಜ , ರಾಷ್ಟ್ರಮುದ್ರೆ , ರಾಷ್ಟ್ರಗೀತೆ ಮುಂತಾದವು .

7 ) ಸಾಮಾಜಿಕ ಸಮೂಹದ ಲಕ್ಷಣಗಳನ್ನು ವಿವರಿಸಿ

ಸಾಮಾಜಿಕ ಸಮೂಹದ ಲಕ್ಷಣಗಳೆಂದರೆ –

ಅಂತಕ್ರಿಯೆಯಲ್ಲಿ ನಿರತವಾದ ವ್ಯಕ್ತಿಗಳ ಸಂಕಲನ : ಸಮೂಹವು ವ್ಯಕ್ತಿಗಳನ್ನು ಒಳಗೊಂಡಿದೆ . ಜನರಿಲ್ಲದೆ ಸಮೂಹವಿರಲು ಸಾಧ್ಯವಿಲ್ಲ . ಸಾಮಾಜಿಕ ಅಂತಃಕ್ರಿಯೆಯು ಸಮೂಹಗಳ ಸ್ಥಾಪನೆಗೆ ಮೂಲಾಧಾರವಿದ್ದಂತೆ . ನಾಲ್ಕಾರು ಮಂದಿ ಜನರನ್ನು ಒಂದು ಸಮೂಹ ‘ ಎನ್ನಲಾಗಿದೆ . ಆದರೆ ಅವರ ಮಾತುಕತೆ , ತಿಕ್ಕಾಟ ಮುಂತಾದವು ಅಂತಃ ಕ್ರಿಯೆಯಲ್ಲಿ ತೊಡಗಿದಾಗ ಮಾತ್ರ ಒಂದು ಸಮೂಹ ಎನಿಸಿಕೊಳ್ಳುವರು .

ಸಾಮೂಹದ ಏಕತೆ ಮತ್ತು ಐಕ್ಯಮತ್ಯ : ಸಮೂಹ ಸದಸ್ಯದಲ್ಲಿ ಏಕತೆಯ ಮನೋಭಾವವನ್ನು ಗುರುತಿಸುವುದು ಸಾಧ್ಯ . ಸಮೂಹದ ಏಕತೆ ಹಾಗೂ ಐಕಮತ್ಯದ ಸ್ವರೂಪವು ಸಾಮಾಜಿಕ ಅಂತಃಕ್ರಿಯೆಯ ಸ್ವರೂಪ , ಗುಣ ಹಾಗೂ ಪ್ರಕಾರಗಳನ್ನು ಅವಲಂಬಿಸಿವೆ . ಕುಟುಂಬ , ಮಿತ್ರರ ಬಳಗ , ಇವೇ ಮುಂತಾದ ಸಮೂಹಗಳಲ್ಲಿ ಜನರು ಹೆಚ್ಚು ಐಕ್ಯಮಶ್ಯರಿಂದ ಹಾಗೂ ಏಕತೆಯಿಂದ ಇರುವರು .

ಸಮೂಹದ ಉದ್ದೇಶಗಳು ಮತ್ತು ಆಸಕ್ತಿಗಳು : ಸಮೂಹದ ಸದಸ್ಯರ ಜನರ ದೃಷ್ಟಿಯು ಸಮೂಹದ ಉದ್ದೇಶ ಹಾಗೂ ಆಸಕ್ತಿಗಳ ಮೇಲೆ ಕೇಂದ್ರೀಕೃತವಾಗಿರುವುದು . ಜನರ ಉದ್ದೇಶಗಳು ಬೇರೆ ಬೇರೆಯಾಗಿರುವುದರಿಂದ ಬೇರೆ ಬೇರೆ ಸಮೂಹಗಳು , ಕಾರ್ಮಿಕ ಸಂಘಗಳು , ಶೈಕ್ಷಣಿಕ ಸಮೂಹಗಳು ಮುಂತಾದವು ಜನರ ವಿಭಿನ್ನ ಉದ್ದೇಶ ಹಾಗೂ ಆಸಕ್ತಿಗಳನ್ನು ಪ್ರತಿಬಿಂಬಿಸುತ್ತವೆ .

ನಮೂನೆಗಳು ತಮ್ಮ ವೈಯುಕ್ತಿಕ ಅದಲಿಗಿಂತಲೂ ಹೆಚ್ಚು ಬಲಯುತವಾಗಿರುತ್ತದೆ : ಸಮೂಹವೆಂಬುದು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ . ಸಮೂಹವೆಂಬುದು ತನ್ನದೇ ಆದ ವಾಸ್ತವತೆಯೊಂದನ್ನು ಹೊಂದಿರುತ್ತದೆ .

ಸಮೂಹ ನಿಯಮಗಳು : ಪ್ರತಿಯೊಂದು ಸಮೂಹವು ತನ್ನದೇ ಆದ ನೀತಿ ನಿಯಾಮಾವಳಿಗಳನ್ನು ಹೊಂದಿರುತ್ತದೆ . ಸಮೂಹದ ಸದಸ್ಯರು ಅವುಗಳಿಗೆ ಬದ್ದರಾಗಿ ನಡೆಯಬೇಕಾಗುತ್ತದೆ . ಈ ನಿಯಮಗಳು ರೂಢಿ ಸಂಪ್ರದಾಯಗಳು ಲೋಕಾರೂಢಿ , ಸಂವಿಧಾನ , ಕಾನೂನು ಶಾಸನ ಮುಂತಾದ ಯಾವುದೇ ರೂಪದಲ್ಲಿರಬಹುದು . ಇವು ಲಿಖಿತ ಅಥವಾ ಅಲಿಖಿತ ರೂಪದಲ್ಲಿ ಇರಬಹುದು .

ಸಮೂಹದ ಗಾತ್ರ : ಪ್ರತಿಯೊಂದು ಸಮೂಹವು ತನ್ನದೇ ಆದ ಗಾತ್ರವನ್ನು ಹೊಂದಿರುತ್ತದೆ . ಸಮೂಹಗಳ ಗಾತ್ರವು ಒಂದೇ ಬಗೆಯದಾಗಿರುವುದಿಲ್ಲ . ಕುಟುಂಬದಂತಹ ಪ್ರಾಥಮಿಕ ಸಮೂಹಗಳ ಗಾತ್ರವು ಬಹಳ ಚಿಕ್ಕದಾಗಿರುತ್ತದೆ . ರಾಜಕೀಯ ಪಕ್ಷಗಳು , ಕಾರ್ಮಿಕ ಸಂಘಗಳು ದೊಡ್ಡದಾಗಿರುತ್ತವೆ .

ಸಮೂಹಗಳು ಗತಿಶೀಲವಾದವು : ಸಮೂಹಗಳು ಜಡ ಸ್ವರೂಪವಾದವುಗಳಲ್ಲ . ಆದರೆ ಗತಿಶೀಲ , ಸ್ವಭಾವವುಳ್ಳವು , ಮಂದಗತಿ ಅಥವಾ ಶೀಘ್ರ ವೇಗದಲ್ಲಿ ಅವು ಬದಲಾವಣೆ ಹೊಂದಿತ್ತಿರುತ್ತವೆ , ಗತಿಶೀಲತೆ ಸಮೂಹದ ಆಂತರಿಕ ಸ್ವಭಾವವಾಗಿದೆ .

8 ) ಸಾಮಾಜಿಕ ಸಮೂಹದ ಪ್ರಾಮುಖ್ಯತೆಯನ್ನು ವಿವರಿಸಿ .

ಸಾಮಾಜಿಕ ಸಮೂಹವು ಹಲವಾರು ಪ್ರಾಮುಖ್ಯತೆ ಹೊಂದಿದೆ . ‘ ಸಮೂಹ ‘ ಎಂಬುದು ಸಮಾಜಶಾಸ್ತ್ರ ಅಧ್ಯಯನ ಕೇಂದ್ರ ಬಿಂದುವಾಗಿದೆ . ಮಾನವನು ಸಂಘ ಜೀವಿಯಾಗಿರುವುದರಿಂದ ಸಮಾಜದ ವಿವಿಧ ಸಮೂಹಗಳಲ್ಲಿ ಬೆರತು ತನ್ನ ಜೀವನ ನಡೆಸುತ್ತದೆ . ತನ್ನ ದಿನ ನಿತ್ಯದ ಜೀವನದಲ್ಲಿಯೂ ಮಾನವನು ಕುಟುಂಬ ನೆರೆಹೊರೆ , ಕಾರ್ಖಾನೆ , ಕಾರ್ಯಾಲಯ , ಮಿತ್ರರ ಬಳಗ ಮುಂತಾದ ಹತ್ತಾರು ಸಮೂಹಗಳಲ್ಲಿ ನಿಕಟ ಸಂಬಂಧವನ್ನು ಹೊಂದಿರುತ್ತಾನೆ . ಆದ್ದರಿಂದ ಸಾಮಾಜಿಕ ಅಧ್ಯಯನವೆಂದರೆ ಮಾನವನ ಸಮೂಹ ಜೀವನದ ಅರ್ಥಾತ್ ಸಾಮಾಜಿಕ ಸಮೂಹಗಳ ಅಧ್ಯಯನವೇ ಆಗಿದ್ದು ಅರ್ಥಾತ್ ಸಾಮಾಜಿಕ ಸಮೂಹಗಳ ಅಧ್ಯಯನವೇ ಆಗಿದೆ . ಸಾಮಾಜಿಕ ಸಮೂಹಗಳ ಅಧ್ಯಯನವು ಸಮಾಜಶಾಸ್ತ್ರ ಅಧ್ಯಯನದ ಹೃದಯವಿದ್ದಂತೆ ಎಂದು ಕರೆಯಲಾಗಿದೆ . ಸಮಾಜಶಾಸ್ತ್ರವನ್ನು ಸಾಮಾಜಿಕ ಸಮೂಹಗಳ ವೈಜ್ಞನಿಕ ಅಧ್ಯಯನ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ .

ಸಮೂಹಗಳು ತನ್ನ ಗುಣಲಕ್ಷಣಗಳಿಂದ ತನ್ನ ಅಸಂಖ್ಯಾ ವರ್ಗೀಕರಣಗಳು ಹೊಂದಿರುವುದು ಅದರ ಪ್ರಾಮುಖ್ಯತೆಯನ್ನು ತೋರಿಸುತ್ತದೆ .

  • ಸಾಮಾಜಿಕ ಸಮೂಹದ ಏಕತೆ ಮತ್ತು ಐಕಮತ್ಯ .
  • ಸಾಮಾಜಿಕ ಸಮೂಹದ ಉದ್ದೇಶಗಳು ಹಾಗೂ ಆಸಕ್ತಿಗಳು ಹೆಚ್ಚು ಬಲಯುತವಾಗಿರುತ್ತಿದ್ದುದು .
  • ಸಾಮಾಜಿಕ ಸಮೂಹದ ಗತಿಶೀಲತೆ ಹಾಗೂ ಅದರ ಶಾಶ್ವತೆಗಳು ಸಾಮಾಜಿಕ ಸಮೂಹದ ಪ್ರಾಮುಖ್ಯತೆಯ ನಿದರ್ಶನಗಳಾಗಿವೆ .

9 ) ಆಧುನಿಕ ಪೂರ್ವ ಸಮಾಜಗಳನ್ನು ವಿವರಿಸಿ .

ಸಮಾಜವನ್ನು ಆಧುನಿಕ ಪೂರ್ವ ಸಮಾಜ ಮತ್ತು ಆಧುನಿಕ ಸಮಾಜ ಎಂಬ ಎರಡು ರೀತಿ ವರ್ಗೀಕರಿಸಬಹುದು . ಆಧುನಿಕ ಪೂರ್ವಸಮಾಜವನ್ನು ಈ ಕೆಳಕಂಡಂತೆ ನಾಲ್ಕು ರೀತಿ ವರ್ಗೀಕರಿಸಲಾಗಿದೆ .

1 ) ಬೇಟೆಗಾರಿಕೆ ಮತ್ತು ಆಹಾರ ಸಂಗ್ರಹಣೆಯ ಸಮಾಜ

2 ) ಕೃಷಿ ಸಮಾಜ

3 ) ತೋಟಗಾರಿಕೆ ಮತ್ತು ಪಶುಪಾಲನೆಯ ಸಮಾಜ

4 ) ಸಾಂಪ್ರದಾಯಿಕ ಸಮಾಜ ಅಥವಾ ನಾಗರೀಕತೆ

1 ) ಬೇಟೆಗಾರಿಕೆ ಮತ್ತು ಆಹಾರ ಸಂಗ್ರಹಣೆಯ ಸಮಾಜ : ಈ ಸಮಾಜವು ಸಣ್ಣ ಸಮುದಾಯವಾಗಿದ್ದು ಬೇಟೆ , ಮೀನುಗಾರಿಕೆ ಮತ್ತು ಗೆಡ್ಡೆಗೆಣಸುಗಳನ್ನು ಸಂಗ್ರಹಿಸುವುದ ಪ್ರಮುಖ ಕಾರ್ಯವಾಗಿದ್ದುದು , ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಸ್ಥಾನ – ಮಾನ ನಿಗಧಿಯಾಗಿರುತ್ತದೆ .

2 ) ಕೃಷಿ ಸಮಾಜ : ಈ ಸಮಾಜವು ಕೃಷಿಯನ್ನು ಅವಲಂಬಿಸಿದೆ . ಗ್ರಾಮ ವಾಸಿಗಳ ವ್ಯವಸ್ಥೆ , ಇಲ್ಲಿ ನಗರ ಮತ್ತು ಪಟ್ಟಣಗಳು ನಗಣ್ಯ ಆಹಾರ ಸಂಗ್ರಹಣೆಯು ಕೃಷಿ ಸಮಾಜದ ಮತ್ತೊಂದು ಲಕ್ಷಣ . ಕೃಷಿ ಸಮಾಜವು ಒಬ್ಬ ಮುಖ್ಯಸ್ಥನ ನಿಯಂತ್ರಣಕ್ಕೆ ಒಳಪಟ್ಟಿದ್ದು ಪರಸ್ಪರ ಸಾಮಾಜಿಕ ಅಸಮಾನಗಳು ಗೋಚರಿಸುತ್ತವೆ .

3 ) ತೋಟಗಾರಿಕೆ ಮತ್ತು ಪಶುಪಾಲನೆಯ ಸಮಾಜ :ಇಲ್ಲಿ ಸುಮಾರು ನೂರರಿಂದ ಸಾವಿರದಷ್ಟು ಜನರಿರುತ್ತಾರೆ . ಪಶುಪಾಲನೆಯು ಈ ಸಮಾಜದ ಪ್ರಮುಖ ಕೆಲಸವಾಗಿರುತ್ತದೆ . ಈ ಸಮಾಜವು ಕೂಡ ಒಬ್ಬ ನಾಯಕನ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ . ಇಲ್ಲಿ ಅಸಮಾನತೆಗಳು ಗೋಚರಿಸುತ್ತದೆ .

4 ) ಸಾಂಪ್ರದಾಯಿಕ ಸಮಾಜ ಅಥವಾ ನಾಗರಿಕತೆ : ಕ್ರಿ.ಪೂ. 6000 ರಿಂದ 19 ನೇ ಶತಮಾನದವರೆವಿಗೂ ಅಸ್ತಿತ್ವದಲ್ಲಿದ್ದ ಸಮಾಜ , ಕೈಗಾರಿಕಾ ಸಮಾಜಕ್ಕಿಂತ ಗಾತ್ರದಲ್ಲಿ ಸಣ್ಣದಾಗಿದ್ದರೂ ಸುಮಾರು 1000 ಸಂಖ್ಯೆಯಿಂದ ಲಕ್ಷಾಂತರ ಜನರ ಜೀವನ ಕ್ರಮ , ಕೆಲವು ನಗರಗಳು ವ್ಯಾಪಾರ ಮತ್ತು ಉತ್ಪಾದನಾ ಕೇಂದ್ರಗಳಾಗಿದ್ದವು . ಈ ಸಮಾಜವು ವ್ಯವಸಾಯ ಆಧಾರಿತ ಸಮಾಜವಾಗಿತ್ತು . ಇಲ್ಲಿ ವಿವಿಧ ವರ್ಗಗಳ ನಡುವೆ ಅಸಮಾನತೆಯು ಕಂಡು ಬರುತ್ತಿತ್ತು . ಸಾಂಪ್ರದಾಯಿಕ ಸಮಾಜವು ಒಬ್ಬ ರಾಜನ ಆಳ್ವಿಕೆಗೆ ಒಳಪಟ್ಟಿತ್ತು .

10 ) ಆಧುನಿಕ ಸಮಾಜಗಳನ್ನು ವಿವರಿಸಿ .

ಆಧುನಿಕ ಸಮಾಜವನ್ನು ನಾಲ್ಕು ಪ್ರಕಾರವಾಗಿ ವರ್ಗೀಕರಿಸಲಾಗಿದೆ . ಅವುಗಳೆಂದರೆ

1 ) ಪ್ರಥಮ ಜಗತ್ತಿನ ಸಮಾಜ

2 ) ದ್ವಿತೀಯ ಜಗತ್ತಿನ ಸಮಾಜ

3 ) ಅಭಿವೃದ್ಧಿ ಶೀಲ ಸಮಾಜ

4 ) ನೂತನ ಕೈಗಾರಿಕಾ ಸಮಾಜ

1 ) ಪ್ರಥಮ ಜಗತ್ತಿನ ಸಮಾಜ

ಈ ವರ್ಗವು 18 ನೇ ಶತಮಾನದಿಂದ ಪ್ರಸ್ತುತ ಕಾಲದವರೆಗೆ ಕಂಡು ಬರುತ್ತದೆ . ಈ ಸಮಾಜವು ಕೈಗಾರಿಕ ವ್ಯವಸ್ಥೆಯಾಗಿ ಬಂಡವಾಳಶಾಹಿ ಮತ್ತು ಮುಕ್ತ ಆರ್ಥಿಕತೆಯನ್ನು ಪಾಲಿಸುತ್ತದೆ . ಬಹುತೇಕ ಪಟ್ಟಣ ಮತ್ತು ನಗರ ವಾಸಿಗಳಾಗಿ ಕೈಗಾರಿಕೆ ಮತ್ತು ಅದರ ಉಪ ವಲಯಗಳಲ್ಲಿ ದುಡಿಯುತ್ತಾರೆ . ಕೆಲವೇ ಜನ ಮಾತ್ರ ಕೃಷಿಯನ್ನು ಅವಲಂಬಿಸಿ , ಗ್ರಾಮಗಳಲ್ಲಿ ವಾಸಿಸುತ್ತಾರೆ . ಒಂದು ಸುವ್ಯವಸ್ಥಿತ ಸರ್ಕಾರವು ಸಮಾಜವನ್ನು ನಿಯಂತ್ರಿಸುತ್ತದೆ . ಪಾಶ್ಚಾತ್ಯ ರಾಷ್ಟ್ರಗಳು ಮತ್ತು ಜಪಾನ್ , ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲೂ ಈ ರೀತಿಯ ಸಮಾಜವನ್ನು ಕಾಣುತ್ತೇವೆ .

2 ) ದ್ವಿತೀಯ ಜಗತ್ತಿನ ಸಮಾಜಗಳು :

ರಷ್ಯಾ ‘ ದೇಶದ ಕಮ್ಯೂನಿಸ್ಟ್ ಕ್ರಾಂತಿಯ ನಂತರ ಅಸ್ತಿತ್ವಕ್ಕೆ ಬಂದ ರಾಷ್ಟ್ರಗಳಾಗಿವೆ . ಇವುಗಳೂ ಕೂಡ ಕೈಗಾರಿಕಾ ರಾಷ್ಟ್ರಗಳೇ ಆಗಿದ್ದರೂ ಕೇಂದ್ರೀಕೃತ ಅರ್ಥ ವ್ಯವಸ್ಥೆಯನ್ನು ಹೊಂದಿದೆ . ಸೀಮಿತ್ತಿ ಸಂಖ್ಯೆಯ ಜನರು ಕೃಷಿಯನ್ನು ಅವಲಂಬಿಸಿದರೆ ಬಹುತೇಕರು ಟ್ಟಣಗಳಲ್ಲಿ ಕೈಗಾರಿಕೆಗಳನ್ನು ದುಡಿಯುತ್ತಿದ್ದರು . 1990 ರ ಸೋವಿಯತ್ ನಗರ ಮತ್ತು ಪಟ್ಟಣಗಳಲ್ಲಿ ರಷ್ಯಾದಲ್ಲಿ ನಡೆದ ರಾಜಕೀಯ ಪರಿವರ್ತನೆಯಿಂದ ಮುಕ್ತ ಆರ್ಥಿಕತೆ ಜಾರಿಗೆ ಬಂದಿತು . ದ್ವಿತೀಯ ಜಗತ್ತಿನ ಸಮಾಗಳು ಬಹುತೇಕ ಪ್ರಥಮ ಜಗತ್ತಿನ ಸಮಾಗಳ ರೀತಿ ಹೊಂದಾಣಿಕೆ ಮಾಡಿಕೊಂಡಿವೆ .

3 ) ಪ್ರಗತಿ ಶೀಲ ರಾಷ್ಟ್ರಗಳು : ಆಳ್ವಿಕೆಯಿಂದ ಸ್ವತಂತ್ರಗೊಂಡ ರಾಷ್ಟ್ರಗಳಾಗಿವೆ . ಬಹುತೇಕ ಈ ರಾಷ್ಟ್ರಗಳು ಕೃಷಿ ಪ್ರಧಾನವಾಗಿದ್ದು ಕೃಷಿ ಉತ್ಪನ್ನದಲ್ಲಿ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿವೆ . ಇಲ್ಲಿಯೂ ಕೂಡ ಕೇಂದ್ರೀಕೃತ ಸರ್ಕಾರ ಸಮಾವನ್ನು ನಿಯಂತ್ರಿಸುತ್ತದೆ . ಭಾರತ , ಚೀನ , ದಕ್ಷಿಣ , ಅಮೇರಿಕಾ ರಾಷ್ಟ್ರಗಳು , ಆಫ್ರಿಕಾ ಖಂಡ ಬಹುತೇಕ ರಾಷ್ಟ್ರಗಳು ಈ ಗುಂಪಿಗೆ ಸೇರಿವೆ .

4 ) ನೂತನ ಕೈಗಾರಿಕಾ ಸಮಾಜಗಳು 1970 ರ ನಂತರ ಅಸ್ತಿತ್ವಕ್ಕೆ ಬಂದ ಈ ರಾಷ್ಟ್ರಗಳೂ ಕೂಡ ಬಂಡವಾಳಶಾಹಿ ಮತ್ತು ಮುಕ್ತ ಆರ್ಥಿಕ ವ್ಯವಸ್ಥೆಯ ರಾಷ್ಟ್ರಗಳಾಗಿವೆ . ಈ ದೇಶದ ಸರಾಸರಿ ತಲಾದಾಯ ಪ್ರಥಮ ಜಗತ್ತಿನ ಸಮಾಜಗಳಿಗಿಂತ ಕಡಿಮೆ ಇದೆ . ಹಾಂಗ್‌ಕಾಂಗ್ , ದಕ್ಷಿಣಾ ಕೊರಿಯಾ , ಸಿಂಗಾಪುರ , ಈ ಪಟ್ಟಿಗೆ ಸೇರಿವೆ .

11 ) ಪ್ರಾಥಮಿಕ ಸಮೂಹಗಳ ಲಕ್ಷಣಗಳನ್ನು ವಿವರಿಸಿ .

ಪ್ರಾಥಮಿಕ ಸಮೂಹಗಳ ಲಕ್ಷಣಗಳೆಂದರೆ :

1 ) ಪ್ರಾಥಮಿಕ ಸಂಬಂಧಗಳ ಪ್ರಾಧಾನ್ಯತೆ : ಪ್ರಾಥಮಿಕ ಸಮೂಹಗಳಲ್ಲಿ ಮುಖಾ – ಮುಖಿಸಂಬಂಧಗಳ ಪ್ರಾಧಾನ್ಯತೆಯನ್ನು ಕಾಣಬಹುದು . ಸದಸ್ಯರ ನಡುವೆ ಸ್ನೇಹ ಪರತೆ , ಅನ್ನೋನ್ಯತೆ , ಸಾಹಚರ್ಯ , ಸಹಕಾರ ಇವು ಎದ್ದು ಕಾಣುತ್ತವೆ . ಒಬ್ಬ ಸದಸ್ಯ ಇನ್ನೊಬ್ಬ ಸದಸ್ಯನಿಗೆ ಪೂರ್ಣವಾಗಿ ಪರಿಚಿತನಾಗಿರುತ್ತಾನೆ .

2 ) ಚಿಕ್ಕಗಾತ್ರ : ಪ್ರಾಥಮಿಕ ಸಮೂಹಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಅವುಗಳ ಸದಸ್ಯತ್ವವು ಬಹಳ ಸೀಮಿತವಾಗಿರುತ್ತದೆ . ಸದಸ್ಯರ ಸಂಖ್ಯೆ ಕಡಿಮೆಯಾಗಿರುವುದರಿಂದಲೇ ಸದಸ್ಯರಲ್ಲಿ ಪರಸ್ಪರ ಅನೋನ್ಯ ಮತ್ತು ವೈಯಕ್ತಿಕ ಸಂಪರ್ಕ ಸಂಬಂಧಗಳು ಏರ್ಪಟ್ಟಿರುತ್ತವೆ .

3 ) ಸಮೂಹದ ಶಾಶ್ವತತೆ : ಪ್ರಾಥಮಿಕ ಸಮೂಹಗಳು ಹೆಚ್ಚು ಸುಬದ್ರವೂ ಶಾಶ್ವತ ಸ್ವರೂಪವೂ ಆಗಿವೆ . ಸಾಮಾಜಿಕ ಸಂಬಂಧಗಳು ಹೆಚ್ಚು ಹೆಚ್ಚು ಆಳವಾಗುತ್ತಾ ಬಂದಂತೆ ಸದಸ್ಯರಲ್ಲಿ … ಸ್ನೇಹಪರತೆ , ನಿಕಟತೆ ಹೆಚ್ಚುತ್ತಾ ಬಂದಂತೆ ಸಮೂಹಗಳ ಶಾಶ್ವತೆಯೂ ಹೆಚ್ಚುತ್ತಾ ಬರುವುದು .

4 ) ಸಮಾನ ಹಿನ್ನಲೆ : ಪ್ರಾಥಮಿಕ ಸಮೂಹದ ಸದಸ್ಯರು ಸಾಮಾನ್ಯವಾಗಿ ಸಮಾನ ರೂಪದ ಸಾಂಸ್ಕೃತಿಕ , ಮಾನಸಿಕ ಹಾಗೂ ಸಾಮಾಜಿಕ ಹಿನ್ನಲೆಯನ್ನು ಹೊಂದಿರುತ್ತಾರೆ . ಗ್ರಾಮೀಣ ಹಾಗೂ ಆದಿವಾಸಿಗಳ ಸಮುದಾಯದಲ್ಲಿ ಕಂಡು ಬರುವ ಪ್ರಾಥಮಿಕ ಸಮೂಹಗಳಲ್ಲಂತೂ ಕೆಲವೊಮ್ಮೆ ಅವರ ಆರ್ಥಿಕ ಹಾಗೂ ಧಾರ್ಮಿಕ ಹಿನ್ನಲೆಯೂ ಕೂಡ ಒಂದೇ ಆಗಿರುತ್ತದೆ .

5 ) ಹಿತಾಸಕ್ತಿಗಳಲ್ಲಿ ಸಮಭಾಗಿತ್ವ : ಪ್ರಾಥಮಿಕ ಸಮೂಹದ ಸದಸ್ಯರು ಎಲ್ಲರಿಗಾಗಿ ಯೋಚಿಸುವುದು , ದುಡಿಯುವರು , ಸಮೂಹದ ಪ್ರಗತಿಯತ್ತ , ಕಲ್ಯಾಣದತ್ತ ಎಲ್ಲರ ಗಮನವಿರುತ್ತದೆ . ಸಮೂಹದ ಕಷ್ಟ ಕಾರ್ಪಣ್ಯಗಳಲ್ಲಿಯೂ , ಸುಖ ಸಂತೋಷಗಳಲ್ಲಿಯೂ ಸದಸ್ಯರದು ಸಮಭಾಗಿತ್ವ ವಿರುವುದು , ಎಲ್ಲರೂ ಸಮಾನ ಉದ್ದೇಶದ ಈಡೇರಿಕೆಗಾಗಿ ಕೂಡಿ ಬರೆಯುವರು .

12 ) ಮಾಧ್ಯಮಿಕ ಸಮೂಹಗಳ ಲಕ್ಷಣಗಳನ್ನು ವಿವರಿಸಿ .

ಮಾಧ್ಯಮಿಕ ಸಮೂಹಗಳ ಲಕ್ಷಣವೆಂದರೆ –

1 ) ಮಾಧ್ಯಮಿಕ ಸಂಬಂಧಗಳ ಪ್ರಾಧಾನ್ಯತೆ : ಮಾಧ್ಯಮಿಕ ಸಮೂಹಗಳಲ್ಲಿ ಅಪ್ರತ್ಯಕ್ಷ , ಅವೈಯಕ್ತಿಕವಾದ ಕರಾರಿನ ಸ್ವರೂಪದ ಹಾಗೂ ಸರ್ವಾಂಗೀಯವಲ್ಲದ ಸಂಬಂಧಗಳ ಪ್ರಾಧಾನ್ಯತೆಯನ್ನು ಗಮನಿಸಬಹುದು . ಈ ಸಮೂಹಗಳು ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿರುವುದರಿಂದ ಪರಸ್ಪರರಲ್ಲಿ ಮಾಧ್ಯಮಿಕ ಸ್ವರೂಪದ ಸಂಬಂಧಗಳು ಎದ್ದು ಕಾಣುತ್ತವೆ .

2 ) ಸಮೂಹದ ಗಾತ್ರ : ಮಾಧ್ಯಮಿಕ ಸಮೂಹಗಳು ಸಾಮಾನ್ಯವಾಗಿ ಬೃಹತ್ ಗಾತ್ರವನ್ನು ಹೊಂದಿರುತ್ತವೆ . ಪ್ರಾರಂಭದಲ್ಲಿ ಚಿಕ್ಕದಾಗಿದ್ದರೂ , ದೊಡ್ಡ ಗಾತ್ರದೊಂದಿಗೆ ಬೆಳೆದು ನಿಲ್ಲುತ್ತದೆ . ಉದಾ : ರೆಡೆಕ್ರಾಸ್ , ರೋಟರಿ ಕ್ಲಬ್ , ರಾಜಕೀಯ ಪಕ್ಷಗಳು , ಕಾರ್ಮಿಕ ಸಮೂಹಗಳಂತಹ ಮಾಧ್ಯಮಿಕ ಸಮೂಹಗಳ ಸದಸ್ಯರು ಸಾವಿರಾರು ಮಂದಿ ಇರುತ್ತಾರೆ .

3 ) ಭೌತಿಕ ಸಾಮೀಪ್ಯದ ಅಭಾವ : ಮಾಧ್ಯಮಿಕ ಸಮೂಹದ ಸದಸ್ಯರು ವಿಶಾಲ ಭೂ ಪ್ರದೇಶದಲ್ಲಿ ಕೆಲವೊಮ್ಮೆ ಹರಡಿಕೊಂಡಿರುತ್ತಾರೆ . ಅಂದರೆ ವ್ಯಾಪಕ ಪ್ರದೇಶದಲ್ಲಿರುತ್ತಾರೆ . ಸದಸ್ಯರು ಇಲ್ಲಿ ಒಂದೇ ಪ್ರದೇಶದವರಾಗಿರಬೇಕೆಂಬ ಅಗತ್ಯವೂ ಇಲ್ಲ .

4 ) ಸದಸ್ಯತ್ವದ ಸ್ವರೂಪ : ಮಾಧ್ಯಮಿಕ ಸಮೂಹದ ಸದಸ್ಯತ್ವವು ನಮಗೆ ಹುಟ್ಟಿನಿಂದಲೇ ಪ್ರಾಪ್ತವಾಗುವುದಿಲ್ಲ . ಮಾಧ್ಯಮಿಕ ಸದಸ್ಯತ್ವದ ಸ್ವರೂಪ ಕಡ್ಡಾಯವಾಗಿಲ್ಲವಾದ್ದರಿಂದ ಅವುಗಳನ್ನು ಸೇರಲು ಬಿಡಲು ಸದಸ್ಯರು ಸ್ವತಂತ್ರರಾಗಿರುತ್ತಾರೆ . ಆದ್ದರಿಂದ ಮಾಧ್ಯಮಿಕ ಸಮೂಹದ ಸದಸ್ಯರು ಐಚ್ಛಿಕ್ಕವಾದುದಾಗಿದೆ .

5 ) ನಿಶ್ಚಿತ ಗುರಿ ಅಥವಾ ಆಸಕ್ತಿ : ಮಾಧ್ಯಮ ಸಮೂಹಗಳು ರಚನೆಯಾಗಿರುವುದೇ ಕೆಲವು ನಿಶ್ಚಿತ ಉದ್ದೇಶಗಳ ಅಥವಾ ಹಿತಾಸಕ್ತಿಗಳ ಪೂರೈಕೆಗಾಗಿ ಉದಾ : ರಾಜಕೀಯ ಆಸಕ್ತಿಗಳ ಪೂರೈಕೆಗಾಗಿ ರಾಜಕೀಯ ಪಕ್ಷಗಳು , ಧಾರ್ಮಿಕ ಆಸಕ್ತಿಗಳ ಈಡೇರಿಕೆಗಾಗಿ ಧಾರ್ಮಿಕ ಸಂಘಟನೆಗಳು , ಇವುಗಳನ್ನು ವಿಶೇಷಾಸಕ್ತಿ ಸಮೂಹಗಳು ‘ ಎಂದು ಕರೆಯಲಾಗಿದೆ .

6 ) ಸಮೂಹದ ನಿಯಂತ್ರಣದ ಸ್ವರೂಪ : ಮಾಧ್ಯಮಿಕ ಸಮೂಹಗಳು ಬೃಹತ್ ಗಾತ್ರ ಹೊಂದಿದ್ದರಿಂದ ಅನೌಪಚಾರಿಕ ನಿಯಂತ್ರಣದ ಸಾಧನಗಳು ವಿಫಲವಾಗಬಹುದು . ಸಮೂಹದ ಸದಸ್ಯದ ವರ್ತನೆಯನ್ನು ನಿಯಂತ್ರಿಸಲು ಕಾನೂನು , ಸಾರ್ವಜನಿಕ ಅಭಿಪ್ರಾಯಗಳನ್ನು ಬಳಸಲಾಗುತ್ತದೆ .

13 ) ಲೋಕಾರೂಢಿಯ ಲಕ್ಷಣಗಳನ್ನು ವಿವರಿಸಿ :

ಲೋಕಾರೂಢಿಯ ಲಕ್ಷಣಗಳೆಂದರೆ :

1 ) ಲೋಕಾರೂಢಿಗಳು ಸಾಮಾಜಿಕವಾದವುಗಳು: ಲೋಕಾರೂಢಿಗಳು ಮಾನವನ ಸಮೂಹ ಜೀವನದ ಸೃಷ್ಟಿಯಾಗಿವೆ . ಲೋಕಾರೂಢಿಗಳನ್ನು ಪಾಲಿಸುವುದರಿಂದಾಗಿಯೇ ಸಾಮಾಜಿಕವಾಗಿ ಒಂದುಗೂಡಲು ಸಾಧ್ಯ . ವ್ಯಕ್ತಿಗಳು ಬೆಳೆಸಿಕೊಂಡಿರುವ ಸಾಮಾಜಿಕ ಸಂಬಂಧಗಳಿಂದಾಗಿ ಲೋಕಾರೂಡಿಗಳು ವ್ಯಕ್ತಿಗತ ಜೀವನದಲ್ಲಿ ಅನುಷ್ಟಾನದಲ್ಲಿರುತ್ತದೆ .

2 ) ಅನೌಪಚಾರಿಕ ಜಾರಿಗೊಳಿಸುವಿಕೆ : ಲೋಕಾರೂಢಿಗಳು ಅನವಪಚಾರಿಕ ನಿಯಂತ್ರಣದ ಸಾಧನಗಳು , ಇವುಗಳನ್ನು ಜಾರಿಗೊಳಿಸಲು ಕೋರ್ಟುಗಳು , ಪೋಲಿಸರು ಇರುವುದಿಲ್ಲ . ಇವುಗಳನ್ನು ಸಾಮಾನ್ಯವಾಗಿ ಜನರು ಅನುಸರಿಸುತ್ತಾರೆ . ಏಕೆಂದರೆ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ನಾವು ಇವುಗಳನ್ನು ಮೈಗೂಡಿಸಿಕೊಂಡಿರುತ್ತೇವೆ .

3 ) ಯೋಜನಾರಹಿತ ಉಗಮ : ಲೋಕಾರೂಢಿಗಳು ಕ್ರಮಬದ್ಧ ಯೋಜನೆಯ ಫಲಶೃತಿಗಳಲ್ಲ . ‘ ಸಮ್ಮರನ ಅಭಿಪ್ರಾಯದಲ್ಲಿ ಅವು ಇದಕ್ಕಿದ್ದಂತೆಯೇ ಮತ್ತು ಜನರಿಗೆ ಅರಿವಿಲ್ಲದೆಯೇ ಆಚರಣೆಯಲ್ಲಿ ಕಾಣಬರುತ್ತದೆ .

4 ) ಲೋಕಾರೂಢಿಗಳು ವೈವಿಧ್ಯಮಯವಾಗಿದೆ : ಲೋಕಾರೂಢಿಗಳು ಪ್ರದೇಶದಿಂದ ಪ್ರದೇಶಕ್ಕೆ ಸಮಾಜದಿಂದ ಸಮಾಜಕ್ಕೆ ಬದಲಾಗುತ್ತಾ ಹೋಗುತ್ತವೆ . ಉದಾ : ಭಾರತೀಯ ಮಹಿಳೆಯರು ತಮ್ಮ ತಲೆಕೂದಲನ್ನು ಉದ್ದವಾಗಿ ಬೆಳೆಸುವುದಾದರೆ ಪಾಶ್ಚಾತ್ಯ ಸ್ತ್ರೀಯರು ಅವುಗಳನ್ನು ಚಿಕ್ಕದಾಗಿ ಕತ್ತರಿಸಿ ಶೃಂಗರಿಸಿಕೊಳ್ಳುವರು . ಭಾರತೀಯರು ನೆಲದ ಮೇಲೆ ಕುಳಿತು ಊಟ ಮಾಡುವರು . ಪಾಶ್ಚಾತ್ಯರು ಊಟಕ್ಕೆ ಕುರ್ಚಿಗಳ ಮೇಲೆ ಕುಳಿತು ಮೇಜಿನ ಮೇಲಿಟ್ಟುಕೊಂಡು ಊಟ ಮಾಡುವರು .

5 ) ಲೋಕಾರೂಢಿಗಳು ಅಸಂಖ್ಯಾವಾದವುಗಳು : ಲೋಕಾರೂಢಿಗಳನ್ನು ಪಟ್ಟಿಮಾಡುವುದು ಸಾಧ್ಯವಿಲ್ಲ ಏಕೆಂದರೆ ಇವು ಅಪಾರ ಸಂಖ್ಯೆಯಲ್ಲಿವೆ . ಆದಿವಾಸಿ ಸಮಾಜದಲ್ಲಿ ನೂರಾರು ಲೋಕಾರೂಢಿಗಳು ಜಾರಿಯಲ್ಲಿದ್ದರೆ ನಗರ ಪ್ರದೇಶಗಳಲ್ಲಿ ಸಾವಿರಾರು ಲೋಕಾರೂಢಿಗಳು ಜಾರಿಯಲ್ಲಿವೆ .

6 ) ಲೋಕಾರೂಢಿಗಳು ಪರಿವರ್ತನಾ ಶೀಲವಾದವುಗಳು : ಲೋಕಾರೂಢಿಗಳು ಜಡಸ್ವರೂಪವಾದವುಗಳಲ್ಲ . ಅವು ನಿರಂತರವಾಗಿ ಪರಿವರ್ತನೆಗೆ ಒಳಪಟ್ಟಿರುತ್ತದೆ . ಕಾಲಗತಿಯಲ್ಲಿ ಅಸಂಖ್ಯಾತ ಲೋಕಾಚಾರಗಳು ಕಣ್ಮರೆಯಾಗಿ ಹೋಗಿವೆ . ಹೊಸ ಲೋಕಾಚಾರಗಳು ಸಾಮಾಜಿಕ ಜಗತ್ತಿನಲ್ಲಿ ಕಾಣಿಸಿಕೊಂಡಿವೆ . ಕೆಲವು ಲೋಕಾಚಾರಗಳು ತೀವ್ರಗತಿಯಲ್ಲಿ ಪರಿವರ್ತಿತವಾಗುತ್ತಿದ್ದರೆ ಮತ್ತೆ ಕೆಲವು ಮಂದಗತಿಯಲ್ಲಿ ಪರಿವರ್ತನೆಗೊಳ್ಳುತ್ತವೆ .

14 ) ನೈತಿಕ ನಿಯಮಗಳ ಲಕ್ಷಣಗಳನ್ನು ವಿವರಿಸಿ .

ನೈತಿಕ ನಿಯಮಗಳ ಲಕ್ಷಣಗಳೆಂದರೆ

1 ) ನೈತಿಕ ನಿಯಮಗಳು ನಮ್ಮ ಸಾಮಾಜಿಕ ಜೀವನದ ನಿಯಂತ್ರಕಗಳಿದ್ದಂತೆ : ನೈತಿಕ ನಿಯಮಗಳು ಸಮೂಹ ಜೀವನದ ಸ್ವರೂಪವನ್ನು ಸರಿಯಾಗಿ ಬಿಂಬಿಸುತ್ತವೆ . ಅವು ನಮ್ಮ ವರ್ತನೆಯ ಮೇಲೆ ಇತಿಮಿತಿಗಳನ್ನು ಹೇರುತ್ತವೆ . ಲೋಕಾರೂಢಿಗಳಿಗಿಂತಲೂ ನೈತಿಕ ನಿಯಮಗಳು ಹೆಚ್ಚು ಒತ್ತಾಯ ಪೂರ್ವಕವಾಗಿ ಮತ್ತು ಅಗ್ರಹ ಪೂರ್ವಕವಾಗಿ ಹೇರಲ್ಪಟ್ಟುತ್ತವೆ .

2 ) ನೈತಿಕ ನಿಯಮಗಳು ಹೆಚ್ಚು ಶಾಶತ್ವವಾದವುಗಳು : ಮಾನವ ಸಮೂಹ ಜೀವನಕ್ಕೆ ಅಗತ್ಯವಾಗಿರುವ ನೈತಿಕ ನಿಯಮಗಳು ಬಹುತೇಕ ಶಾಶ್ವತ ಸ್ವರೂಪವಾದವು ಎನ್ನಬಹುದು . ಸತ್ಯ , ನ್ಯಾಯ , ಅಹಿಂಸೆ , ತ್ಯಾಗ , ಸಹಾಯ ಪ್ರೀತಿ ಇತ್ಯಾದಿಗಳು ಶಾಶ್ವತವಾದವುಗಳು . ಕೆಲವು ನೈತಿಕ ನಿಯಮಗಳು ಪ್ರಗತಿಗೆ ತಡೆಯನ್ನು ಒಡ್ಡುವುದು ಇದೆ . ಉದಾ : ಗುಲಾಮಗಿರಿ , ಸತಿಪದ್ಧತಿ , ಬಾಲ್ಯವಿವಾಹ , ಮುಂತಾದವು .

3 ) ನೈತಿಕ ನಿಯಮಗಳು ಸಮೂಹದಿಂದ ಸಮೂಹಕ್ಕೆ ಬೇರೆಯಾಗುತ್ತದೆ : ನೈತಿಕ ನಿಯಮಗಳು ಸಾರ್ವತ್ರಿಕವಾಗಿ ಎಲ್ಲಾ ಸಮಾಜಗಳ ಕಾಣಬರಬಹುದಾದರೂ ಎಲ್ಲಾ ಸಮಾಜಗಳಲ್ಲಿ ಒಂದೇ ತೆರೆನಾದ ನೈತಿಕ ನಿಯಮಗಳಲ್ಲ . ಉದಾ : ಹೆಣ್ಣು ಶಿಶು ಹತ್ಯಾ ಎಸ್ಕಿಮೋ ಸಮಾಜದಲ್ಲಿ ತೀರ ಸಹಜವಾದುದರೆ , ಆಧುನಿಕ ಸಮಾಜದಲ್ಲಿ ಅಕ್ಷಮ್ಯ ಅಪರಾದವೆನಿಸುತ್ತದೆ .

4 ) ನೈತಿಕ ನಿಯಮಗಳಿಗೆ ಮೌಲ್ಯಗಳ ಧರ್ಮದ ಬೆಂಬಲವಿರುವುದು : ಮೌಲ್ಯಗಳಿಂದ ಸಮರ್ಥನೆ ಮತ್ತು ಮತಧರ್ಮದ ಸಮ್ಮತಿ ಸಿಗುವುದರಿಂದ ನೈತಿಕ ನಿಯಮಗಳು ಹೆಚ್ಚು ಪ್ರಭಾವಿಯಾಗಿ ಪರಿಣಾಮವಾಗಿ ನಮ್ಮ ವರ್ತನೆಗಳನ್ನು ನಿಯಂತ್ರಿಸುವುವು . ಉದಾ : ಕ್ರೈಸ್ತ ಧರ್ಮದ ನಿಯಮ , ಬೌದ್ಧರ ಅಷ್ಟಾಂಗಮಾರ್ಗ , ಮುಂತಾದವು.

15 ) ಕಾನೂನಿನ ಲಕ್ಷಣಗಳನ್ನು ವಿವರಿಸಿ .

ಕಾನೂನಿನ ಪ್ರಮುಖ ಲಕ್ಷಣಗಳೆಂದರೆ –

ಕಾನೂನನ್ನು ರಾಜಕೀಯವಾಗಿ ಸುಸಂಘಟಿತವಾದ ಸಮಾಜಗಳಲ್ಲಿ ಮಾತ್ರ ಕಾಣಬಹುದು . ಕಾನೂನುಗಳು ಮಾನವನ ವರ್ತನೆಗೆ ಸಂಬಂಧಿಸಿದ ನಿಯಮಗಳಾಗಿದ್ದು , ರಾಜ್ಯಶಕ್ತಿಯಿಂದ ಅದರ ಪ್ರಜೆಗಳಿಗಾಗಿ ರಚಿತವಾದವುಗಳಾಗಿರುತ್ತವೆ .

ಕಾನೂನುಗಳು ಮಾನವನ ಉದ್ದೇಶ ಪೂರ್ವಕವಾದ ಚಿಂತನೆಯಿಂದ ಮತ್ತು ಜಾಗರೂಕತೆಯಿಂದ ಮಾಡಲಾದ ಯೋಜನೆಯಿಂದ ಮಾಡಿದ ನಿಯಮಗಳಾಗಿರುತ್ತದೆಯೇ ವಿನಃ ಇದಕ್ಕಿದ್ದಂತೆ ಕಾಣಬರುವ ಸ್ವರೂಪವಾದವುಗಳಲ್ಲ .

ಕಾನೂನುಗಳು ಸ್ಪಷ್ಟತೆ , ನಿಶ್ಚಿಕತೆ , ನಿಸ್ಸಂದೇಹಯುಕ್ತತೆಯ ಗುಣಗಳನ್ನು ಹೊಂದಿರುತ್ತದೆ .

ಕಾನೂನಿನ ಉಲ್ಲಂಘನೆಯ ಶಿಕ್ಷೆ ಕಡ್ಡಾಯ

ಕಾನೂನುಗಳು ಸಾಮಾನ್ಯವಾಗಿ ಲಿಖಿತ ರೂಪದಲ್ಲಿರುವುದರಿಂದ ಒಂದಲ್ಲ ಒಂದು ಬಗೆಯಲ್ಲಿ ದಾಖಲುಗಳಂತೆ ಉಳಿಯುತ್ತದೆ .

FAQ

1 ) ‘ ಮಾನವ ಸಾಮಾಜಿಕ ಪ್ರಾಣಿ ‘ ಎಂದು ಮೊಟ್ಟಮೊದಲು ಹೇಳಿದವರಾರು ?

ಮಾನವ ಸಾಮಾಜಿಕ ಪ್ರಾಣಿ ಎಂದು ಮೊಟ್ಟ ಮೊದಲು ಹೇಳಿದವರು ‘ ಅರಿಸ್ಟಾಟಲ್ ‘ .

2 ) ಸಹಕಾರ ಎಂದರೇನು ?

ಸಹಕಾರವೆಂದರೆ ದುಡಿಯುವುದಾಗಿದೆ .

ಇತರೆ ವಿಷಯಗಳು :

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

All Subjects Notes

All Notes App

Leave a Reply

Your email address will not be published. Required fields are marked *

rtgh