ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-1 ಸಮಾಜಶಾಸ್ತ್ರದ ‌ಸ್ವರೂಪ ನೋಟ್ಸ್ | 1st Puc Sociology Chapter 1 Question Answer in Kannada

ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-1 ಸಮಾಜಶಾಸ್ತ್ರದ ‌ಸ್ವರೂಪ ನೋಟ್ಸ್,1st Puc Sociology Chapter 1 Question Answer Mcq in Kannada Pdf Download 2023 ಸಮಾಜಶಾಸ್ತ್ರದ ಸ್ವರೂಪ Notes 1st Puc Sociology Notes 1st Chapter Kseeb Solution For Class 11 Sociology Chapter 1 Notes Samajashastrada Swarupa Notes in Kannada

 

ಅಧ್ಯಾಯ-1 ಸಮಾಜಶಾಸ್ತ್ರದ ‌ಸ್ವರೂಪ

ಅಧ್ಯಾಯ-1 ಸಮಾಜಶಾಸ್ತ್ರದ ‌ಸ್ವರೂಪ ನೋಟ್ಸ್

ಸಮಾಜಶಾಸ್ತ್ರದ ಸ್ವರೂಪ ಪ್ರಶ್ನೆ ಉತ್ತರ Pdf

I. ಒಂದು ಅಂಕದ ಪ್ರಶ್ನೆಗಳು : ( ಒಂದು ವಾಕ್ಯದಲ್ಲಿ ಉತ್ತರಿಸಿ )

1 ) ‘ ಸೋಶಿಯಾಲಜಿ ‘ ಎಂಬ ಪದದ ವ್ಯುತ್ಪತ್ತಿಯನ್ನು ತಿಳಿಸಿರಿ ?

‘ ಸೋಶಿಯಾಲಜಿ ‘ ಎಂಬ ಪದವು ಲ್ಯಾಟಿನ್ ಭಾಷೆಯ ‘ ಸೋಶಿಯಸ್ ‘ ಮತ್ತು ಗ್ರೀಕ್ ಭಾಷೆಯ ‘ ಲಾಗೋಸ್ ‘ ಎಂಬ ಶಬ್ದದಿಂದ ವ್ಯುತ್ಪತ್ತಿ ಹೊಂದಿದೆ . ‘ ಸೋಶಿಯಸ್ ಎಂದರೆ ಸಮಾಜ ‘ ಲಾಗೋಸ್ ಎಂದರೆ ಶಾಸ್ತ್ರ ಅಥವಾ ‘ ವಿಜ್ಞಾನ ‘ ಎಂಬ ಅರ್ಥವಿದೆ , ‘ ಸೋಶಿಯಾಲಜಿ ‘ ಎಂಬುದರ ಕನ್ನಡ ತತ್ಸಮಾನ ಪದ ‘ ಸಮಾಜಶಾಸ್ತ್ರ ‘ ಎನಿಸಿದೆ .

2 ) ‘ ಸಮಾಜಶಾಸ್ತ್ರದ ಸಂಸ್ಥಾಪಕ ‘ ಎಂದು ಯಾರನ್ನು ಕರೆಯಲಾಗಿದೆ ?

‘ ಅಗಸ್ಟ್ ಕಾಮ್ಟೆ ‘ ಯನ್ನು ಸಮಾಜಶಾಸ್ತ್ರದ ಪಿತಾಮಹ ಅಥವಾ ‘ ಸಂಸ್ಥಾಪಕ ‘ ಎಂದು ಕರೆಯಲಾಗಿದೆ .

3 ) ‘ ಸೋಶಿಯಾಲಜಿ ‘ ಎಂಬ ಪದವನ್ನು ಯಾವ ವರ್ಷದಲ್ಲಿ ಪರಿಚಯಿಸಲಾಯಿತು ?

ಕ್ರಿ.ಶ. 1839 ರಲ್ಲಿ ‘ ಸೋಶಿಯಾಲಜಿ ‘ ಎಂಬ ಪದವನ್ನು ಪರಿಚಯಿಸಲಾಯಿತು .

4 ) ‘ ಸೋಶಿಯಾಲಜಿ ‘ ಎಂಬ ಪದದ ಅಕ್ಷರಶಃ ಅರ್ಥವೇನು ?

“ ಸೋಶಿಯಾಲಜಿ ‘ ಎಂಬ ಪದದ ಅಕ್ಷರಶಃ ಸಮಾಜಶಾಸ್ತ್ರ ಅಂದರೆ ಸಮಾಜದ · ಅಧ್ಯಯನವಾಗಿದೆ .

5 ) ಸಮಾಜಶಾಸ್ತ್ರದ ಒಂದು ವ್ಯಾಖ್ಯೆಯನ್ನು ತಿಳಿಸಿರಿ .

‘ ಸಮಾಜಶಾಸ್ತ್ರವು ಸಾಮಾಜಿಕ ಸಂಸ್ಥೆಗಳ ವಿಜ್ಞಾನವಾಗಿದೆ ‘ ಎಂಬುದಾಗಿ ‘ ಇಮೈಲ್‌ಡರ್ಖೀಮ್ ‘ ಹೇಳಿದ್ದಾರೆ .

6 ) ಅಗಸ್ಟ್ ಕಾಮ್ಟೆ ರಚಿಸಿದ ಯಾವುದಾದರೊಂದು ಗ್ರಂಥವನ್ನು ಹೆಸರಿಸಿ ?

ಅಗಸ್ಟ್ ಕಾಮ್ಟೆ ರಚಿಸಿದ ಗ್ರಂಥ – ‘ ಪೊಸಿಟಿವ್ ಫಿಲಾಸಫಿ ‘ ,

7 ) ಸಮಾಜಶಾಸ್ತ್ರವನ್ನು ಕುರಿತಾದ ಕಾಮ್ಬನ ವ್ಯಾಖ್ಯೆಯನ್ನು ತಿಳಿಸಿರಿ .

‘ ಸಮಾಜದ ವೈಜ್ಞಾನಿಕ ಅಧ್ಯಯನವನ್ನೇ ಸಮಾಜಶಾಸ್ತ್ರವೆಂದು ‘ ಕಾಮ್ಟ್ ‘ ಸಮಾಜಶಾಸ್ತ್ರವನ್ನು ವ್ಯಾಖ್ಯಾನಿಸಿದ್ದಾರೆ . ‌

8 ) ಸಮಾಜಶಾಸ್ತ್ರವನ್ನು ಕುರಿತಾದ ಡರ್ಖಿಂನ ವ್ಯಾಖ್ಯೆಯನ್ನು ತಿಳಿಸಿರಿ .

ಸಮಾಜಶಾಸ್ತ್ರವನ್ನು ಕುರಿತಾದ ಡಾಖ್ರಿಂ ವ್ಯಾಖ್ಯೆ ಎಂದರೆ – ಸಮಾಜಶಾಸ್ತ್ರವು ಸಾಮಾಜಿಕ ಸಂಸ್ಥೆಗಳ ವಿಜ್ಞಾನವಾಗಿದೆ .

9 ) ಸಮಾಜಶಾಸ್ತ್ರವನ್ನು ಕುರಿತಾದ ಮೆಕೈವರ್ ಮತ್ತು ಪೇಜ್‌ರವರ ವ್ಯಾಖ್ಯೆಯನ್ನು ತಿಳಿಸಿರಿ .

ಸಮಾಜ ಶಾಸ್ತ್ರವನ್ನು ಕುರಿತಾದ ಮೈಕೈವರ್ ಮತ್ತು ಪೇಜ್‌ರವರ ವ್ಯಾಖ್ಯೆ ಎಂದರೆ – “ ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ ಕುರಿತಾದುದು .

10 ) ‘ ನಿಶ್ಚಯಾತ್ಮಕ ವಿಜ್ಞಾನ ‘ ಎಂದರೇನು ?

ಒಂದು ವಸ್ತು ಹೇಗಿದೆಯೋ ಹಾಗೆ ಎಂದು ತಿಳಿಸುವ ವಿಜ್ಞಾನವನ್ನು ನಿಶ್ಚಯಾತ್ಮಕ ವಿಜ್ಞಾನ ‘ ಎನ್ನುವರು .

11 ) ‘ ಶುದ್ಧವಿಜ್ಞಾನ ‘ ಎಂದರೇನು ?

ಮಾನವನ ಅನುಕೂಲತೆಗಾಗಿ ಉಪಯೋಗಿಸುವ ಜ್ಞಾನ ಸಂಪಾದನೆಯ ವಿಜ್ಞಾವನ್ನು ‘ ಶುದ್ಧವಿಜ್ಞಾನ ‘ ಎನ್ನುವರು.

12 ) ಸಮಾಜಶಾಸ್ತ್ರವು ಶುದ್ಧ ವಿಜ್ಞಾನವೇ ?

ಸಮಾಜಶಾಸ್ತ್ರವು ಶುದ್ಧ ವಿಜ್ಞಾನವಾಗಿದೆ , ಏಕೆಂದರೆ ಇದರ ಮುಖ್ಯ ಉದ್ದೇಶ ಜ್ಞಾನ ಸಂಪಾದನೆಯಾಗಿದೆ .

13 ) ಅನ್ವಯಿಕ ವಿಜ್ಞಾನ ಎಂದರೇನು ?

“ ಅನ್ವಯಿಕ ವಿಜ್ಞಾನ ‘ ವೆಂದರೆ ಪ್ರಾಯೋಗಿಕ ವಿಜ್ಞಾನ , ಸಂಪಾದಕಿ ಜ್ಞಾನವನ್ನು ಮಾನವನ ಅನುಕೂಲತೆಗಾಗಿ ಉಪಯೋಗಿಸುವುದಾಗಿದೆ . ಪ್ರಾಯೋಗಿಕ ವಿಜ್ಞಾನವನ್ನೇ “ ಅನ್ವಯಿಕ ವಿಜ್ಞಾನ ‘ ಎನ್ನುವರು .

14 ) ಪ್ರಾಚೀನ ಭಾರತೀಯ ಸಾಮಾಜಿಕ ಚಿಂತನೆಯ ಯಾವುದಾದರೊಂದು ಸಾಹಿತ್ಯದ ಮೂಲವನ್ನು ತಿಳಿಸಿ ?

‘ ಕೌಟಿಲ್ಯನ ಅರ್ಥಶಾಸ್ತ್ರ , ಮನುವಿನ ಧರ್ಮಶಾಸ್ತ್ರ ಪ್ಲೋಟೋನ ‘ ರಿಪಬ್ಲಿಕ್ ‘ ಮುಂತಾದವು ಪ್ರಾಚೀನ ಭಾರತೀಯ ಸಾಮಾಜಿಕ ಚಿಂತನೆಯ ಸಾಹಿತ್ಯದ ಮೂಲಗಳಾಗಿವೆ .

18 ) ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾದ ಯಾವುದಾದರೊಂದು ಅಂಶವನ್ನು ತಿಳಿಸಿ ,

ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾದ ಅಂಶಗಳಲ್ಲಿ ಇದು ಒಂದು – ‘ ವಿಭಿನ್ನ ಸಮಾಜಗಳು ಮತ್ತು ಸಂಸ್ಕೃತಿಗಳ ಅಧ್ಯಯನಗಳು ನೀಡಿದ ಸ್ಪೂರ್ತಿ ‘ ,

16 ) ಸಮಾಜಶಾಸ್ತ್ರದ ಉಗಮಕ್ಕೆ ತ್ವರಿತಗೊಳಿಸಿದ ಅವಳಿ ಕ್ರಾಂತಿಗಳು ಯಾವುವು ?

ಸಮಾಜಶಾಸ್ತ್ರದ ಉಗಮಕ್ಕೆ ತ್ವರಿತಗೊಳಿಸಿದ ಅವಳಿ ಕ್ರಾಂತಿಗಳೆಂದರೆ –

1 ) ಫ್ರಾನ್ಸಿನ ಮಹಾಕ್ರಾಂತಿ ಮತ್ತು

2 ) ಕೈಗಾರಿಕಾ ಕ್ರಾಂತಿ

17 ) ಕೈಗಾರಿಕಾ ಕ್ರಾಂತಿಯ ಒಂದು ಪರಿಣಾಮವನ್ನು ತಿಳಿಸಿ .

ಕೈಗಾರಿಕಾ ಕ್ರಾಂತಿಯ ಪರಿಣಾಮವೆಂದರೆ – ‘ ಕೈಗಾರಿಕರಣದ ಪರಿಣಾಮದಿಂದ ನಗರೀಕರಣ ಪ್ರಕ್ರಿಯೆ ಆರಂಭವಾಯಿತು .

18 ) ಸಮಾಜಶಾಸ್ತ್ರದ ಯಾವುದಾದರೊಂದು ಅಧ್ಯಯನ ವಿಷಯವನ್ನು ತಿಳಿಸಿ .

ಸಮಾಜಶಾಸ್ತ್ರದ ಅಧ್ಯಯನದ ವಿಷಯಗಳಲ್ಲಿ ‘ ಗ್ರಾಮೀಣ ಮತ್ತು ನಗರ ಜೀವನ ಶೈಲಿಯೂ ಒಂದು .

19 ) ಸಮಾಜಶಾಸ್ತ್ರದ ಯಾವುದಾದರೊಂದು ವಿಶಿಷ್ಟಾಧ್ಯಯನದ ಶಾಖೆಯನ್ನು ತಿಳಿಸಿ .

ಸಮಾಜಶಾಸ್ತ್ರದ ವಿಶಿಷ್ಟಾಧ್ಯಾನದ ಶಾಖೆಗಳಲ್ಲಿ ‘ ಕುಟುಂಬ ಸಮಾಜಶಾಸ್ತ್ರ’ವೂ ಒಂದು .

20 ) ಸಮಾಜಶಾಸ್ತ್ರವು ಬಳಕೆಮಾಡುವ ಯಾವುದಾದರೊಂದು ಅಧ್ಯಯನ ವಿಧಾನವನ್ನು ತಿಳಿಸಿ .

– ಸಮಾಜಶಾಸ್ತ್ರವು ಬಳಕೆಮಾಡುವ ಒಂದು ಅಧ್ಯಯನ ವಿಧಾನವೆಂದರೆ – ಸಾಮಾಜಿಕ ನೀತಿ ನಿರೂಪಕ

21 ) ಭಾರತದ ಯಾವುದಾದರೂ ಎರಡು ಸಾಮಾಜಿಕ ಸಮಸ್ಯೆಗಳನ್ನು ಬರೆಯಿರಿ .

ಭಾರತದ ಸಾಮಾಜಿಕ ಸಮಸ್ಯೆಗಳೆಂದರೆ 1) ನಿರುದ್ಯೋಗ ಸಮಸ್ಯೆ 2 ) ಭ್ರಷ್ಟಾಚಾರದ ಸಮಸ್ಯೆ

22 ) ಸಮಾಜಶಾಸ್ತ್ರ ಸಾಮಾಜಿಕ ಸುಧಾರಣೆಯ ವಾಹಕವಾಗಿದೆಯೆಂದು ಕರೆದವರು ಯಾರು ?

“ ಅಗಸ್ಟಕಾಮ್ ‘ ಸಮಾಜಶಾಸ್ತ್ರವನ್ನು ಸಾಮಾಜಿಕ ಸುಧಾರಣೆಯ ವಾಹನವೆಂದು ಕರೆದಿದ್ದಾನೆ .

23 ) ಸಮಾಜಶಾಸ್ತ್ರ ಅಧ್ಯಯನದ ಯಾವುದಾದರೊಂದು ಒಂದು ಉಪಯೋಗವನ್ನು ಬರೆಯಿರಿ .

‘ ವ್ಯಕ್ತಿತ್ವದ ಸಮಾಜಶಾಸ್ತ್ರ ಅಧ್ಯಯನದ ಒಂದು ಉಪಯೋಗವೆಂದರೆ ಬೆಳವಣಿಗೆಯಾಗುತ್ತದೆ .

24 ) ‘ ಅಗಸ್ಟ್‌ಕಾಮ್ಟ್ ‘ ಪ್ರಕಾರ ಸಮಾಜಶಾಸ್ತ್ರದ ಎರಡು ಭಾಗಗಳಾವುವು ?

ಅಗಸ್ಟ್‌ ಕಾಮ್ಟ್ ಪ್ರಕಾರ ಸಮಾಜಶಾಸ್ತ್ರದ ಎರಡು ಭಾಗಗಳೆಂದರೆ –

1 ) ಸಾಮಾಜಿಕ ಸ್ಥಿತಿಶಾಸ್ತ್ರ ಹಾಗೂ

2 ) ಸಾಮಾಜಿಕ ಚಲನಶಾಸ್ತ್ರ

25 ) ಅಗಸ್ಟ್ ಕಾಮ್‌ರವರನ್ನು ಹೊರತು ಪಡಿಸಿ ಸಮಾಜಶಾಸ್ತ್ರದ ಮತ್ತೋರ್ವ ಸ್ಥಾಪಕ ತಜ್ಞನನ್ನು ಹೆಸರಿಸಿ ?

‘ ಹರ್ಬರ್ಟ್ ಸ್ಪೆನ್ಸರ್ ‘ ಸಮಾಜಶಾಸ್ತ್ರದ ಮತ್ತೋರ್ವ ಸ್ಥಾಪಕ .

26 ) ಕಾಲ್ಪನಿಕ ಹಂತವನ್ನು ಅರ್ಥೈಸಿ . ‌

‘ ಕಾಲ್ಪನಿಕ ಹಂತ’ವನ್ನು ಅಮೂರ್ತಹಂತ’ವೆಂದು ಕೂಡ ಕರೆಯುವರು . ಮಾನವನ ಎಲ್ಲಾ ಚಿಂತನೆಗಳು ಪ್ರಕೃತಿಯ ಅಗೋಚರ ಶಕ್ತಿಗಳಿಂದ ನಿರ್ದೇಶಿಸಲ್ಪಟ್ಟಿತ್ತು . ಇದು ಬಹುತೇಕವಾಗಿ ಪ್ರಕೃತಿಯ ಬಗೆಗಿನ ತಾತ್ವಿಕ ಶೋಧನೆಯಾಗಿತ್ತು .

27 ) ವೈಜ್ಞಾನಿಕ ಹಂತವೆಂದರೇನು ?

ಜಗತ್ತಿನ ಬಗ್ಗೆ ನಮ್ಮ ಎಲ್ಲಾ ಬೌದ್ಧಿಕ ಚಿಂತನೆ ಹಾಗೂ ಅವಲೋಕನವನ್ನು ಅವಲಂಬಿಸಿರುವ ಹಂತವನ್ನು ವೈಜ್ಞಾನಿಕ ಹಂತವೆನ್ನುವರು . ಹೆಚ್ಚು ಹೆಚ್ಚು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವ ಹಂತವನ್ನು ವೈಜ್ಞಾನಿಕ ಹಂತವೆನ್ನುವರು .

28 ) ಮಾನವತೆಯ ಮಹಾನ್ ಪುರೋಹಿತರು ಯಾರು ?

ಸಮಾಜಶಾಸ್ತ್ರಜ್ಞರು ಮಾನವತೆಯ ಮಹಾನ್ ಪುರೋಹಿತರು .

29 ) ಸ್ಪೆನ್ನರ್‌ರವರ ಮೇಲೆ ಪ್ರಭಾವ ಬೀರಿದ ಗ್ರಂಥ ಯಾವುದು ?

‘ ಸ್ಪೆನ್ನರ್’ರವರ ಮೇಲೆ ಪ್ರಭಾವ ಬೀರಿದ ಗ್ರಂಥವೆಂದರೆ – ‘ ಚಾರ್ಲ್ಸ್ ಡಾರ್ವಿನನ್ನ ‘ ಜೀವ ಸಂಕುಲಗಳ ಉಗಮ ‘ .

30 ) ಸ್ಪೆನ್ಸರ್ ರವರ ಮೇಲೆ ಪ್ರಭಾವ ಬೀರಿದ ವಿಕಾಸವಾದಿ ಯಾರು ?

ಸ್ಪೆನ್ಸರ್ ರವರ ಮೇಲೆ ಪ್ರಭಾವ ಬೀರಿದ ವಿಕಾಸವಾದಿ ‘ ಚಾರ್ಲ್ಸ್‌ ಡಾರ್ವಿನ್ . ‌

31 ) ಸ್ಪೆನ್ಸರ್ ರಚಿಸಿದ ಯಾವುದಾದರೂ ಒಂದು ಗ್ರಂಥವನ್ನು ಹೆಸರಿಸಿ .

ಸ್ಪೆನ್ಸರ್ ರವರು ರಚಿಸಿದ ಪ್ರಮುಖ ಗ್ರಂಥ ‘ ಸೋಸಿಯಲ್ ಸ್ಟಾಟಿಕ್ಸ್ .

32 ) ಸಮಾಜಶಾಸ್ತ್ರದ ದ್ವಿತೀಯ ಸಂಸ್ಥಾಪಕ ಯಾರು ?

ದ್ವಿತೀಯ ಸಂಸ್ಥಾಪಕ ‘ ಹರ್ಬರ್ಟ್ ಸ್ಪೆನ್ಸರ್ ‘

33 ) ಸಮಾಜಶಾಸ್ತ್ರದ ಪಿತಾಮಹನಾರು ?

ಭಾರತೀಯ ಸಮಾಜಶಾಸ್ತ್ರದ ಪಿತಾಮಹರು ‘ ಅಗಸ್ಟ್‌ಕಾಮ್ಸ್’ರವರು .

34 ) ಡರ್ಖೀ೦ ಪ್ರಕಾರ ‘ ಸಾಮಾಜಿಕ ಸಂಗತಿ ‘ ಎಂದರೇನು ?

ನಮ್ಮ ಪದ್ಧತಿಗಳು ಹಾಗೂ ಕರ್ತವ್ಯಗಳೆಲ್ಲವೂ ಸಮಾಜದ ನಿಯಮ ಹಾಗೂ ಸಂಪ್ರದಾಯಗಳಿಂದ ರೂಪಿಸಲ್ಪಟ್ಟಿರುವ ‘ ಔಪಚಾರಿಕ ಹಾಗೂ ಅನೌಪಚಾರಿಕ ವರ್ತನೆ ವಿಧಗಳನ್ನು “ ಸಾಮಾಜಿಕ ಸಂಗತಿಗಳೆಂದು ಡರ್ಖೀಂ ಕರೆದಿದ್ದಾರೆ . .

35 ) ಡರ್ಖೀ ೦ ಪರಿಚಯಿಸಿದ ಯಾವುದಾದರೊಂದು ಒಂದು ವಿಶಿಷ್ಟ ಅಧ್ಯಯನದ ಕ್ಷೇತ್ರವನ್ನು ಬರೆಯಿರಿ ?

ಡರ್ಖೀಂ ಪರಿಚಯಿಸಿ ಒಂದು ವಿಶಿಷ್ಟ ಅಧ್ಯಯನದ ಕ್ಷೇತ್ರವೆಂದರೆ – ‘ ಸಮಾಜಶಾಸ್ತ್ರೀಯ ಪದ್ಧತಿಗಳ ನಿಯಮಗಳನ್ನು ರೂಪಿಸಿದರು .

36 ) ಡರ್ಖೀಂರವರು ಬರೆದಿರುವ ಯಾವುದಾದರೊಂದು ಗ್ರಂಥವನ್ನು ಹೆಸರಿಸಿ :

ಡರ್ಖೀಂರವರು ಬರೆದಿರುವ ಗ್ರಂಥ – ‘ ದಿ ಡಿವಿಜನ್ ಆಫ್ ಲೇಬರ್ ಇನ್ ಸೊಸೈಟಿ ” .

37 ) ಭಾರತದ ಯಾವ ವಿಶ್ವವಿದ್ಯಾನಿಲಯದಲ್ಲಿ ಮೊದಲ ಬಾರಿಗೆ ಸಮಾಜಶಾಸ್ತ್ರವನ್ನು ಒಂದು ಅಧ್ಯಯನ ವಿಷಯವನ್ನಾಗಿ ಪರಿಚಯಿಸಲಾಯಿತು ?

1914 ರಲ್ಲಿ ಬಾಂಬೆ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗವು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾಜಶಾಸ್ತ್ರವನ್ನು ಒಂದು ಅಧ್ಯಯನ ವಿಷಯವನ್ನಾಗಿ ಪರಿಚಯಿಸಲಾಯಿತು .

38 ) ಇಬ್ಬರು ಭಾರತೀಯ ಸಮಾಜಶಾಸ್ತ್ರಜ್ಞರನ್ನು ವಿವರಿಸಿ :

ಇಬ್ಬರು ಭಾರತೀಯ ಸಮಾಜಶಾಸ್ತ್ರಜ್ಞರೆಂದರೆ – 1) ಡಾ ಗೋವಿಂದ್ ಸದಾಶಿವ ಘುರ್ಯೆ ರವರು

2 ) ಡಾ ಮೈಸೂರು ನರಸಿಂಹಾಚಾರ್ ಶ್ರೀನಿವಾಸ್‌ರವರು

39 ) ಭಾರತೀಯ ಸಮಾಜಶಾಸ್ತ್ರದ ಪಿತಾಮಹ ಯಾರು ?

ಡಾ | ಜಿ.ಎಸ್ ಘುರ್ಯೆರವರು ಭಾರತೀಯ ಸಮಾಜಶಾಸ್ತ್ರದ ಪಿತಾಮಹರಾಗಿದ್ದಾರೆ .

40 ) ಇಂಡಿಯನ್ ಸೋಷಿಯಾಲಾಜಿಕಲ್ ಸೊಸೈಟಿ ‘ ಸ್ಥಾಪಿಸಲು ಕಾರಣವಾದ ಸಮಾಜಶಾಸ್ತ್ರಜ್ಞ ಯಾರು ?

‘ ಇಂಡಿಯನ್ ಸೋಷಿಯಲಾಜಿಕಲ್ ಸೊಸೈಟಿ ‘ ಸ್ಥಾಪಿಸಲು ಕಾರಣವಾದ ಸಮಾಜಶಾಸ್ತ್ರಜ್ಞ ‘ ಡಾ.ಜಿ.ಎಸ್.ಘುರ್ಯೆ ‘.

41 ) ಜಿ.ಎಸ್ . ಘುರ್ಯೆ ಬರೆದಿರುವ ಯಾವುದಾದರೂ ಒಂದು ಗ್ರಂಥವನ್ನು ತಿಳಿಸಿ .

ಜಿ.ಎಸ್ . ಘುರ್ಯೆ ಬರೆದಿರುವ ಒಂದು ಗ್ರಂಥ ‘ ಕ್ಯಾಸ್ಟ್ ಅಂಡ್ ರೇಸ್ ಇನ್ ಇಂಡಿಯಾ ‘ .

42 ) ‘ ಕಾಸ್ಟ್ ಅಂಡ್ ರೇಸ್ ಇನ್ ಇಂಡಿಯಾ ‘ ಎಂಬ ಗ್ರಂಥವನ್ನು ಬರೆದವರು ಯಾರು ?

‘ ಕಾಸ್ಟ್ ಅಂಡ್‌ರೇಸ್ ಇನ್ ಇಂಡಿಯಾ ‘ ಎಂಬ ಗ್ರಂಥವನ್ನು ಬರೆದವರು – ‘ ಡಾ | ಜಿ.ಎಸ್.ಘುರ್ಯೆ’ರವರು .

43 ) ಕರ್ನಾಟಕದ ಪ್ರಸಿದ್ಧ ಸಮಾಜಶಾಸ್ತ್ರಜ್ಞರು ಯಾರು ?

ಕರ್ನಾಟಕದ ಪ್ರಸಿದ್ಧ ಸಮಾಜಶಾಸ್ತ್ರಜ್ಞರು “ ಡಾ ಎಂ.ಎಸ್ . ಶ್ರೀನಿವಾಸರವರು ” .

44 ) ಎಂ.ಎನ್.ಶ್ರೀನಿವಾಸ್ ಪರಿಚಯಿಸಿದ ಯಾವುದಾದರೊಂದು ಒಂದು ವಿಶಿಷ್ಟ ಪರಿಕಲ್ಪನೆಯನ್ನು ಬರೆಯಿರಿ .

ಎಂ.ಎನ್.ಶ್ರೀನಿವಾಸ್ ಪರಿಚಯಿಸಿದ ಒಂದು ವಿಶಿಷ್ಟ ಪರಿಕಲ್ಪನೆಯೆಂದರೆ – ‘ ಸಂಸ್ಕೃತಾನುಕರಣ , ‘ ಪಾಶ್ಚಾತೀಕರಣ ‘ .

45 ) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆಯಾರು ?

ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ‘ ಡಾ ಇರಾವತಿ ಕರ್ವೆ ‘ .

46 ) ಡಾ || ಇರಾವತಿ ಕರ್ವೆ ಯವರು ಬರೆದಿರುವ ಒಂದು ಕೃತಿಯನ್ನು ತಿಳಿಸಿ .

ಡಾ ॥ ಇರಾವತಿ ಕರ್ವೆಯವರು ಬರೆದಿರುವ ಒಂದು ಕೃತಿ ಎಂದರೆ – ‘ ಕಿನ್‌ಷಿಪ್ ಅರ್ಗನೈಸೇಷನ್ ಇನ್ ಇಂಡಿಯಾ ‘ ಎಂಬುದು .

47 ) .’ಕಿನ್‌ಷಿಪ್‌ ಅರ್ಗನೈಷನ್ ಇನ್ ಇಂಡಿಯಾ ‘ ಕೃತಿ ಬರೆದವರು ಯಾರು ?

ಡಾ ॥ ಇರಾವತಿ ಕರ್ವೆಯವರು ‘ ಕಿನ್‌ಪಿಷ್ ಅರ್ಗನೈಜೇಷನ್ ಇನ್ ಇಂಡಿಯಾ ‘ ಕೃತಿಯನ್ನು ಬರೆದಿದ್ದಾರೆ .

48 ) ನಿರಚನೆ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

‘ ನಿರಚನೆ ‘ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಡೇರಿಡರವರು .

49 ) ರಚನೀಕರಣ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

‘ ರಚನೀಕರಣ ‘ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು – ‘ ಗಿಡ್ಡಿಂನ್ಸ್’ರವರು .

50 ) ‘ ಸಾಮಾಜಿಕ ಆವರಣ ‘ ಎಂಬ ಪರಿಕಲ್ಪನೆಯನ್ನು ಬಳಸಿದವರು ಯಾರು ?

‘ ಸಾಮಾಜಿಕ ಆವರಣ ‘ ಎಂಬ ಪರಿಕಲ್ಪನೆಯನ್ನು ಬಳಸಿದವರು ‘ ಬೋರ್‌ಡಿಯೋಗ ,

51 ) ವೈಜ್ಞಾನಿಕ ವಿಧಾನದ ವ್ಯಾಖ್ಯೆ ನೀಡಿರಿ .

ಅವಲೋಕನೆಯ ಆಧಾರದಿಂದ ಸ್ಥಾಪಿಸಲ್ಪಟ್ಟ ಪ್ರಯೋಗಗಳ ಮೂಲಕ ಪ್ರಮಾಣಿಕರಿಸಲಾದ ವಿಧಾನವನ್ನು ವೈಜ್ಞಾನಿಕ ವಿಧಾನ ಎನ್ನುವರು .

1st Puc Sociology Notes in Kannada 1st Chapter

II . ಎರಡು ಅಂಕದ ಪ್ರಶ್ನೆಗಳು : ( 2-3 ವಾಕ್ಯದಲ್ಲಿ ಉತ್ತರಿಸಿ )

1 ) ಸಮಾಜಶಾಸ್ತ್ರ ಎಂದರೇನು ? ಅಥವಾ ಸಮಾಜಶಾಸ್ತ್ರದ ವ್ಯಾಖ್ಯೆಯನ್ನು ನೀಡಿರಿ .

‘ ಸಮಾಜಶಾಸ್ತ್ರ ‘ ಎಂಬುದು ‘ ಸೋಷಿಯಾಲಜಿ ‘ ಎಂಬ ಇಂಗ್ಲೀಷ್ ಪದದ ತತ್ಸಮಾನ ಪದವಾಗಿದ್ದು , ‘ ಸೋಷಿಯಾಲಜಿ ‘ ಎಂದು ಲ್ಯಾಟಿನ್ ಭಾಷೆಯ ‘ ಸೋಶಿಯಸ್ ‘ ಹಾಗೂ ಗ್ರೀಕ್‌ಭಾಷೆಯ ‘ ಲಾಗೋಸ್ ‘ ಎಂಬ ಪದದ ಉತ್ಪತ್ತಿಯಾಗಿದೆ . ‘ ಸಮಾಜಶಾಸ್ತ್ರದ ಪಿತಾಮಹ ಎನಿಸಿದ ‘ ಆಗಸ್ಟ್ ಕಾಮ್ಟ್ ‘ ಎಂಬುವನು ಸಮಾಜಶಾಸ್ತ್ರವನ್ನು ಹೀಗೆ ವ್ಯಾಖ್ಯಾನಿಸಿದ್ದಾನೆ – = ಸಮಾಜಶಾಸ್ತ್ರವು ನಿಸರ್ಗ ಸಹಜವಾದ ಹಾಗೂ ಸ್ಥಿರ ರೂಪದ ನಿಯಮಗಳಿಗೆ ಒಳಪಟ್ಟ ಸಮಾಜಿಕ ವಿದ್ಯಮಾನಗಳ ವಿಜ್ಞಾನವಾಗಿದ್ದು , ಅಂತಹ ನಿಯಮಗಳನ್ನು ಕಂಡುಕೊಳ್ಳುವುದೇ ಅದರ ಶೋಧನೆಯ ಉದ್ದೇಶವಾಗಿರುತ್ತದೆ . ‌

  • ‘ ಹೆಚ್.ಎಂ.ಜಾನ್ಸನ್ ರವರು ಹೇಳುವಂತೆ ‘ ಸಾಮಾಜಿಕ ಸಮೂಹಗಳ ಕುರಿತಾದ ವೈಜ್ಞಾನಿಕ ಅಧ್ಯಯನವೇ ಸಮಾಜಶಾಸ್ತ್ರ ‘ ಅಥವಾ ಇಮೈಲ್ ಡಖೀಮ್ ರವರ ಪ್ರಕಾರ – ‘ ಸಮಾಜಶಾಸ್ತ್ರವು ಸಾಮಾಜಿಕ ಸಂಸ್ಥೆಗಳ ವಿಜ್ಞಾನವಾಗಿದೆ .
  • ಮ್ಯಾಕ್ಸ್‌ವೇಬರ್’ರವರು – ‘ ಸಾಮಾಜಿಕ ವರ್ತನೆಯನ್ನು ಅರ್ಥೈಸುವ ಅಧ್ಯಯನವನ್ನು ಸಮಾಜಶಾಸ್ತ್ರ ಎಂದು ಕರೆದಿದ್ದಾನೆ . ಆತನ ಪ್ರಕಾರ ಈ ವಿಜ್ಞಾನದ ಮುಖ್ಯ ಉದ್ದೇಶ , ಮಾನವನ ಸಾಮಾಜಿಕ ವರ್ತನೆಯ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸುವುದೇ ಆಗಿದೆ .

2 ) ‘ ಆಗಸ್ಟ್‌ ಕಾಮ್ಟೆ ‘ ನೀಡಿದ ಸಮಾಜಶಾಸ್ತ್ರದ ವ್ಯಾಖ್ಯೆಯನ್ನು ತಿಳಿಸಿ .

‘ ಆಗಸ್ಟ್‌ಕಾಮ್ಟೆ ‘ ನೀಡಿದ ಸಮಾಜಶಾಸ್ತ್ರದ ವ್ಯಾಖ್ಯೆ ಎಂದರೆ – ‘ ಸಮಾಜಶಾಸ್ತ್ರವು ನಿಸರ್ಗ ಸಹಜವಾದ ಹಾಗೂ ಸ್ಥಿರ ರೂಪದ ನಿಯಮಗಳಿಗೆ ಒಳಪಟ್ಟ ಸಾಮಾಜಿಕ ವಿದ್ಯಮಾನಗಳ ವಿಜ್ಞಾನವಾಗಿದ್ದು , ಅಂತಹ ನಿಯಮಗಳನ್ನು ಕಂಡುಕೊಳ್ಳುವುದೇ ಅದರ ಶೋಧನೆಯ ಉದ್ದೇಶವಾಗಿರುತ್ತದೆ .

3 ) ಮ್ಯಾಕ್ಸ್‌ವೇಬರ್‌ ನೀಡಿದ ಸಮಾಜಶಾಸ್ತ್ರದ ವ್ಯಾಖ್ಯೆಯನ್ನು ತಿಳಿಸಿ .

ಮ್ಯಾಕ್ಸ್‌ವೇಬರ್‌ ನೀಡಿರುವ ಸಮಾಜಶಾಸ್ತ್ರದ ವ್ಯಾಖ್ಯೆ ಎಂದರೆ – ಸಾಮಾಜಿಕ ವರ್ತನೆಯನ್ನು ಅರ್ಥೈಸುವ ಅಧ್ಯಯನವನ್ನು ಸಮಾಜಶಾಸ್ತ್ರ ‘ ಎಂದು ಕರೆದಿದ್ದಾನೆ . ಆತನ ಪ್ರಕಾರ ಈ ವಿಜ್ಞಾನದ ಮುಖ್ಯ ಉದ್ದೇಶ ಮಾನವನ ಸಾಮಾಜಿಕ ವರ್ತನೆಯ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸುವುದೇ ಆಗಿದೆ ” .

4 ) ಗಿನ್ಸ್ ಬರ್ಗ್‌ರವರು ನೀಡಿದ ಸಮಾಜಶಾಸ್ತ್ರದ ವ್ಯಾಖ್ಯೆಯನ್ನು ತಿಳಿಸಿ .

ಗಿನ್ಸ್‌ಬರ್ಗ್‌ರವರು ಸಮಾಜಶಾಸ್ತ್ರದ ವ್ಯಾಖ್ಯೆ ಎಂದರೆ – ಮಾನವನ ಅನ್ನೋನ್ಯಕ್ರಿಯೆ ಹಾಗೂ ಪರಸ್ಪರ ಸಂಬಂಧಗಳ ಜೊತೆಗೆ ಅವುಗಳ ಕಾರಣ ಮತ್ತು ಪರಿಣಾಮಗಳು ಇವುಗಳ ಅಧ್ಯಯನವೇ ಸಮಾಜಶಾಸ್ತ್ರವಾಗಿದೆ ” .

5 ) ಹೆಚ್.ಎಂ.ಜಾನ್ಸನ್‌ರವರು ನೀಡಿದ ಸಮಾಜಶಾಸ್ತ್ರದ ವ್ಯಾಖ್ಯೆಯನ್ನು ತಿಳಿಸಿ .

ಹೆಚ್.ಎಂ.ಜಾನ್ಸನ್‌ರವರು ಸಮಾಜಶಾಸ್ತ್ರದ ಬಗ್ಗೆ ನೀಡಿರುವ ವ್ಯಾಖ್ಯೆ ಈ ರೀತಿ ಇದೆ ‘ ಸಾಮಾಜಿಕ ಸಮೂಹಗಳ ಕುರಿತಾದ ವೈಜ್ಞಾನಿಕ ಅಧ್ಯಯನವೇ ಸಮಾಜಶಾಸ್ತ್ರವಾಗಿದೆ ‘ .

6 ) ಸಮಾಜಶಾಸ್ತ್ರವು ಒಂದು ಅಮೂರ್ತ ವಿಜ್ಞಾನವಾಗಿದೆಯೇ ಹೊರತು ಮೂರ್ತ ವಿಜ್ಞಾನವಾಗಿಲ್ಲ ಎಂಬುದನ್ನು ಉದಾಹರಣೆ ಸಹಿತ ವಿವರಿಸಿ .

ಸಮಾಜಶಾಸ್ತ್ರವು ಒಂದು ಅಮೂರ್ತ ವಿಜ್ಞಾನವಾಗಿದೆಯೇ ಹೊರತು ಮೂರ್ತ ವಿಜ್ಞಾನವಾಗಿಲ್ಲ . ಅದಕ್ಕೆ ಒಂದು ಉದಾಹರಣೆ ಎಂದರೆ ‘ ಸಮಾಜ ಶಾಸ್ತ್ರವು ಇತಿಹಾಸದಂತೆ ಯಾವುದೇ ನಿಶ್ಚಿತವಾದ ಯುದ್ಧ ಹಾಗೂ ಕ್ರಾಂತಿಗಳನ್ನು ಸಾಮಾಜಿಕ ವಿದ್ಯಮಾನಗಳೆಂದು ಅರ್ಥಾತ್ ವಿಭಿನ್ನ ರೀತಿಯ ಸಾಮಾಜಿಕ ಸಂಘರ್ಷಗಳೆಂದು ಪರಿಭಾವಿಸಿ ಅವುಗಳ ಸಾಮಾನ್ಯ ಸ್ವರೂಪ ಹಾಗೂ ಲಕ್ಷಣಗಳನ್ನು ಅಧ್ಯಯನ ಮಾಡುತ್ತದೆ .

7 ) ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾದ ಎರಡು ಅಂಶಗಳನ್ನು ಉಲ್ಲೇಖಿಸಿರಿ ?

ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾದ ಎರಡು ಅಂಶಗಳು ಎಂದರೆ –

1 ) ಅವಳಿ ಕ್ರಾಂತಿಗಳ ಪರಿಣಾಮ ( ಫ್ರಾನ್ಸಿನ ಮಹಾಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿ )

2 ) ಭೌತ ವಿಜ್ಞಾನಗಳು ಮತ್ತು ಇತರ ಸಮಾಜದ ವಿಜ್ಞಾನಗಳ ಬೆಳವಣಿಗೆಯಿಂದ ಪಡೆದ ಸ್ಫೂರ್ತಿ .

8 ) – ಪ್ರಾಚೀನ ಭಾರತೀಯ ಸಾಮಜಿಕ ಚಿಂತನೆಯ ಯಾವುದಾದರೂ ಎರಡು ಸಾಹಿತ್ಯದ ಮೂಲಗಳನ್ನು ಉಲ್ಲೇಖಿಸಿರಿ .

ಪ್ರಾಚೀನ ಭಾರತೀಯ ಸಾಮಾಜಿಕ ಚಿಂತನೆಯ ಎರಡು ಸಾಹಿತ್ಯದ ಮೂಲಗಳೆಂದರೆ –

1 ) ಕೌಟಿಲ್ಯನ ‘ ಅರ್ಥಶಾಸ್ತ್ರ

2 ) ಅರಿಸ್ಟಾಟಲ್‌ನ ‘ ಪಾಲಿಟಿಕ್ಸ್ ಮತ್ತು ಎಥಿಕ್ಸ್ ‘

೨ ) ಕೈಗಾರಿಕಾ ಕ್ರಾಂತಿಯ ಎರಡು ಸಾಮಾಜಿಕ ಪರಿಣಾಮಗಳನ್ನು ತಿಳಿಸಿ ?

ಕೈಗಾರಿಕಾ ಕ್ರಾಂತಿಯ ಎರಡು ಸಾಮಾಜಿಕ ಪರಿಣಾಮಗಳೆಂದರೆ – –

1 ) ನಗರೀಕರಣ ಪ್ರಕ್ರಿಯೆ ಆರಂಭವಾಯಿತು . ನಗರಗಳು ವೇಗವಾಗಿ ಬೆಳೆಯತೊಡಗಿದವು .

2 ) ಸಾಮಾಜಿಕ ಸಮಸ್ಯೆಗಳು ಹೆಚ್ಚತೊಡಗಿದವು , ಸಮಾಜದಲ್ಲಿ ಕಾರ್ಮಿಕರ , ಮಹಿಳೆಯರ ಮಕ್ಕಳ ಶೋಷಣೆ ಹೆಚ್ಚಾಗತೊಡಗಿತ್ತು .

10 ) ಆಗಸ್ಟ್ ಕಾಮ್ಸ್‌ರವರ ಎರಡು ಗ್ರಂಥಗಳನ್ನು ತಿಳಿಸಿ .

ಆಗಸ್ಟ್ ಕಾಮ್ಟ್‌ ರವರ ಎರಡು ಗ್ರಂಥಗಳೆಂದರೆ –

1 ) ಪೊಸಿಟಿವ್ ಫಿಲಾಸಫಿ

2 ) ಪೊಸಿಟಿವ್‌ ಪಾಲಿಟಿಕ್ಸ್

11 ) ಸಮಾಜಶಾಸ್ತ್ರದ ಯಾವುದಾದರೂ ಎರಡು ಅಧ್ಯಯನ ವಿಷಯಗಳನ್ನು ತಿಳಿಸಿ .

ಸಮಾಜಶಾಸ್ತ್ರದ ಎರಡು ಅಧ್ಯಯನ ವಿಷಯಗಳೆಂದರೆ –

1 ) ಮಾನವ ಸಮಾಜ ಮತ್ತು ಸಂಸ್ಕೃತಿಯ ಸಮಾಜಶಾಸ್ತ್ರೀಯ ವಿಶ್ಲೇಷಣೆ

2 ) ಸಾಮಾಜಿಕ ಜೀವನದ ಮೂಲಭೂತ ಘಟಕಗಳ ಅಧ್ಯಯನ

12 ) ಸಮಾಜಶಾಸ್ತ್ರದ ಯಾವುದಾದರೂ ನಾಲ್ಕು ವಿಶೇಷಾಧ್ಯಯನ ಕ್ಷೇತ್ರಗಳನ್ನು ( ಶಾಖೆಗಳನ್ನು ಹೆಸರಿಸಿ .

ಸಮಾಜಶಾಸ್ತ್ರದ ನಾಲ್ಕು ವಿಶೇಷಾಧ್ಯಯನ ಕ್ಷೇತ್ರಗಳೆಂದರೆ

1 ) ಗ್ರಾಮೀಣ ಮತ್ತು ನಗರ ಜೀವನ ಶೈಲಿ

2 ) ವಿವಾಹ ಮತ್ತು ಕುಟುಂಬ 3 ) ಜನಸಂಖ್ಯಾಶಾಸ್ತ್ರ 4 ) ಅಲಕ್ಷಿತ ಸಮೂಹಗಳು

13 ) ಸಮಾಜಶಾಸ್ತ್ರವು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಸಹಾಯಕವಾಗಿದೆಯೇ ಹೇಗೆ ?

ಸಮಾಜಶಾಸ್ತ್ರವು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಸಹಾಯಕವಾಗಿದೆ . ಪ್ರತಿಯೊಂದು ಸಮಾಜವು ತನ್ನದೆ ಆದ ಸಮಸ್ಯೆಗಳನ್ನು ಎದುರಿಸುತ್ತದಿರುತ್ತದೆ . ಉದಾಹರಣೆಗೆ – ಬಡತನ , ನಿರುದ್ಯೋಗ , ಭಯೋತ್ಪಾದನೆ , ಅಪರಾಧ , ಬಾಲಾಪರಾಧ ಕೋಮುಗಲಭೆ , ಮಧ್ಯಪಾನ , ಭ್ರಷ್ಟಾಚಾರ , ಅಸ್ಪೃಶ್ಯತೆ , ಜಾತೀಯತೆ , ಜೂಜಾಟ , ಯುವಜನಾಂಗದ ಅಶಾಂತಿ , ವೇಶ್ಯಾವಾಟಿಕೆ , ಭಿಕ್ಷಾಟನೆ , ಮಿತಿಮೀರಿದ ಜನಸಂಖ್ಯೆ ಇನ್ನು ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದೆ . ಸಮಾಜಶಾಸ್ತ್ರವು ಸಾಮಾಜಿಕ ಸಮಸ್ಯೆಗಳ ಕುರಿತಾದ ವಸ್ತುನಿಷ್ಟ ಅಧ್ಯಯನಕ್ಕೆ ಸಹಾಯಕವಾಗಿದ್ದು , ಈ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದಂತೆ ಉಪಯುಕ್ತ ಸಲಹೆಗಳನ್ನು ನೀಡುತ್ತದೆ . ಅಂತೆಯೇ ಆಗಸ್ಟ್ ಕಾಮ್ಟ್ ಸಮಾಜಶಾಸ್ತ್ರವನ್ನು ಸಾಮಾಜಿಕ ಸುಧಾರಣೆಯ ವಾಹನವೆಂದು ಕರೆದಿದ್ದಾನೆ .

14 ) ಸಮಾಜಶಾಸ್ತ್ರದ ಯಾವುದಾದರು ಎರಡು ಉಪಯೋಗಗಳನ್ನು ತಿಳಿಸಿ . ‌

ಸಮಾಜಶಾಸ್ತ್ರದ ಎರಡು ಉಪಯೋಗಗಳೆಂದರೆ –

1 ) ಸಮಾಜಶಾಸ್ತ್ರವು ವ್ಯಕ್ತಿತ್ವದ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ .

2 ) ಸಮಾಜಶಾಸ್ತ್ರವು , ನಿರುದ್ಯೋಗ , ಬಾಲಪರಾಧ , ಕೋಮುಗಲಭೆ , ಮಧ್ಯಪಾನ , ಭ್ರಷ್ಟಾಚಾರ ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುತ್ತದೆ .

15 ) ‘ ಕಾಮ್ಟ್’ರವರ ‘ ಮೂರು ಹಂತಗಳ ಸೂತ್ರವನ್ನು ತಿಳಿಸಿ .

‘ ಕಾಮ್ಸ್’ರವರ ‘ ಮೂರು ಹಂತಗಳ ಸೂತ್ರಗಳೆಂದರೆ –

1 ) ಧರ್ಮಶಾಸ್ತ್ರೀಯ ಹಂತ

2 ) ಅಮೂರ್ತ ಹಂತ

3 ) ವೈಜ್ಞಾನಿಕ ಹಂತ

16 ) ಸಮಾಜಶಾಸ್ತ್ರದ ಪಿತಾಮಹನೆಂದು ಆಗಸ್ಟ್‌ ಕಾಮ್ಟ್‌ ರವರನ್ನು ಏಕೆ ಕರೆಯಲಾಗಿದೆ ?

ಸಮಾಜಶಾಸ್ತ್ರದ ಪಿತಾಮಹನೆಂದು ಆಗಸ್ಟ್‌ ಕಾಮ್ಟ್‌ ರವರನ್ನು ಕರೆಯಲಾಗಿದೆ . ಏಕೆಂದರೆ ‘ ಸೋಸಿಯಾಲಜಿ ‘ ಎಂಬ ಹೊಸ ವಿಜ್ಞಾನವನ್ನು ಪರಿಚಯಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ .

17 ) ಆಗಸ್ಟ್ ಕಾಮ್ಸ್‌ರವರ ಪ್ರಕಾರ ಸಮಾಜದ ಎರಡು ವಿಧಗಳಾವುವು ?

ಆಗಸ್ಟ್ ಕಾಮ್ಸ್‌ರವರ ಪ್ರಕಾರ ಸಮಾಜದ ಎರಡು ವಿಧಗಳೆಂದರೆ

1 ) ಸಾಮಾಜಿಕ ಸ್ಥಿತಿಶಾಸ್ತ್ರ 2 ) ಸಾಮಾಜಿಕ ಚಲನಶಾಸ್ತ್ರ

18 ) ಡರ್ಖೀ ೦ ರಚಿಸಿರುವ ಯಾವುದಾದರು ಎರಡು ಪ್ರಸಿದ್ಧ ಗ್ರಂಥಗಳನ್ನು ಬರೆಯಿರಿ ?

ಡರ್ಖೀ ೦ ರಚಿಸಿರುವ ಎರಡು ಪ್ರಸಿದ್ಧ ಗ್ರಂಥಗಳೆಂದರೆ –

1) ದಿ ಡಿವಿಜನ್ ಆಫ್ ಲೇಬರ್ ಇನ್ ಸೊಸೈಟಿ

2 ) ದಿರೂಲ್ಸ್ ಆರ್ಫ ಸೋಸಿಯಾಲಜಿಕಲ್ ಮೆಥಡ್

19 ) ಡರ್ಖೀ೦ ಪ್ರಕಾರ ಆತ್ಮಹತ್ಯೆಯ ನಾಲ್ಕು ವಿಧಗಳಾವುವು ?

ಡರ್ಖೀ೦ ಪ್ರಕಾರ ಆತ್ಮಹತ್ಯೆಯ ನಾಲ್ಕು ವಿಧಗಳೆಂದರೆ

1 ) ಆತ್ಮಕೇಂದ್ರಿಕ ಆತ್ಮಹತ್ಯೆ

2 ) ನಿರಾಶಾತ್ಮಕ ಆತ್ಮಹತ್ಯೆ

3 ) ಪರಹಿತ ಆತ್ಮಹತ್ಯೆ

4 ) ಮರಣಾಂತಿಕ ಆತ್ಮಹತ್ಯೆ

20 ) ಡರ್ಖೀಂರವರ ಯಾವುದಾದರೂ ಎರಡು ಕೃತಿಗಳನ್ನು ತಿಳಿಸಿ .

ಡರ್ಖೀಂರವರ ಪ್ರಮುಖ ಎರಡು ಕೃತಿಗಳೆಂದರೆ

1 ) ನ್ಯೂಯಿಸೈಡ್ ಎ ‘ ಸೋಸಿಯಾಲಜಿಕಲ್ ಅನಾಲಿಸಸ್

2 ) ದಿ ಎಲಿಮಂಟರಿ ಫಾರ್ಮ್ಸ್ ಆಫ್ ರಿಲಿಜಿಯಸ್ ಲೈಫ್

21 ) ಯಾವುದಾದರು ಇಬ್ಬರ ಭಾರತೀಯ ಸಮಾಜಶಾಸ್ತ್ರಜ್ಞರ ಹೆಸರುಗಳನ್ನು ಬರೆಯಿರಿ .

ಇಬ್ಬರು ಭಾರತೀಯ ಸಮಾಜಶಾಸ್ತ್ರಜ್ಞರೆಂದರೆ –

1 ) ಡಾ || ಇರಾವತಿ ಕರ್ವೆ

2 ) ಪಿ.ಆರ್‌ . ದೇಸಾಯಿ

22 ) ಎಂ.ಎನ್.ಶ್ರೀನಿವಾಸ್ ಪರಿಚಯಿಸಿದ ಎರಡು ಪರಿಕಲ್ಪನೆಗಳಾವುವು ?

ಎಂ.ಎನ್.ಶ್ರೀನಿವಾಸ್ ಪರಿಚಯಿಸಿದ ಎರಡು ಪರಿಕಲ್ಪನೆಗಳೆಂದರೆ –

1 ) ಸಂಸ್ಕೃತಾನುಕರಣದ ಪರಿಕಲ್ಪನೆ

2 ) ಪಾಶ್ಚಾತೀಕರಣ ಪರಿಕಲ್ಪನೆ

23 ) ಇಬ್ಬರು ಆಧುನಿಕ ಸಮಾಜ ಶಾಸ್ತ್ರಜ್ಞರನ್ನು ಹೆಸರಿಸಿ .

ಇಬ್ಬರು ಆಧುನಿಕ ಸಮಾಜ ಶಾಸ್ತ್ರಜ್ಞರೆಂದರೆ –

1 ) ಪಿಯರ್ ಬೋರ್‌ಡಿಯೋ

2 ) ಜುರ್ಗಿನ್ ಹೆಬರ್‌ಮಾಸ್

24 ) ಪೆರಿ ಬೋರ್‌ಡಿಯೋ ರಚಿಸಿರುವ ಎರಡು ಗ್ರಂಥಗಳನ್ನು ಹೆಸರಿಸಿ .

ಪೆರಿ ಬೋರ್‌ಡಿಯೋ ರಚಿಸಿರುವ ಎರಡು ಗ್ರಂಥಗಳೆಂದರೆ

1 ) ದಿ ಲಾಜಿಕ್ ಆಫ್ ಪ್ರಾಕ್ಟಿಸ್

2 ) ಕ್ರಾಫ್ಟ್ ಆಫ್ ಸೋಶಿಯಾಲಜಿ .

25 ) ವಿಜ್ಞಾನದ ಎರಡು ಗುಣಲಕ್ಷಣಗಳನ್ನು ತಿಳಿಸಿರಿ .

ವಿಜ್ಞಾನದ ಎರಡು ಗುಣಲಕ್ಷಣಗಳೆಂದರೆ –

1 ) ಸಾರ್ವತ್ರಿಕತೆ

2 ) ದೃಢೀಕರಣ

26 ) ವೈಜ್ಞಾನಿಕ ವಿಧಾನದ ಎರಡು ಹಂತಗಳನ್ನು ತಿಳಿಸಿರಿ .

ವೈಜ್ಞಾನಿಕ ವಿಧಾನದ ಎರಡು ಹಂತಗಳೆಂದರೆ –

1 ) ಅವಲೋಕನೆಯ ಆಧಾರದಿಂದ ಆರಂಭಗೊಂಡ ಪೂರ್ವ ಸಿದ್ದಾಂತದ ಹಂತ

2 ) ಇತರ ಅಧ್ಯಯನದ ವಿಧಾನಗಳ ಹಂತ

ಸಂಖ್ಯಾಶಾಸ್ತ್ರ ವಿಧಾನ , ತುಲಾನಾತ್ಮಕ ವಿಧಾನ , ಕ್ರಿಯಾತ್ಮಕ ವಿಧಾನ , ( ಏಕ ಷಾಯಕ ಅಧ್ಯಯನದ ಹಂತ )

27 ) ಭೌತ ಮತ್ತು ಸಮಾಜ ವಿಜ್ಞಾನಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ .

ಭೌತ ಮತ್ತು ಸಮಾಜ ವಿಜ್ಞಾನಗಳ ನಡುವಿನ ಎರಡು ವ್ಯತ್ಯಾಸಗಳೆಂದರೆ –

ಭೌತ ವಿಜ್ಞಾನಗಳು

1 ) ಭೌತ ವಿಜ್ಞಾನಗಳು ತಮ್ಮ ಅಧ್ಯಯನಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಸಬಹುದು . ಇದರಿಂದ ನಂಬಲರ್ಹವಾದ ಫಲಿತಾಂಶವನ್ನು ಪಡೆಯುತ್ತಿವೆ .

2 ) ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲು ಪ್ರಯೋಗಳ ಬಳಕೆ ಇಲ್ಲಿ ಸಾಧ್ಯ . ಅಂತಹ ಪ್ರಯೋಗಾಲಯಗಳ ಮೇಲೆ ಸಂಶೋಧಕನ ನಿಯಂತ್ರಣ ಬಲವಾಗಿರುತ್ತದೆ .

ಸಮಾಜ ವಿಜ್ಞಾನಗಳು

1 ) ಸಮಾಜ ವಿಜ್ಞಾನಗಳಲ್ಲಿ ವೈಜ್ಞಾನಿಕ ವಿಧಾನಗಳ ಬಳಕೆಯಲ್ಲಿ ಹಲವಾರು ತೊಂದರೆಗಳಿವೆ . ಆದ್ದರಿಂದ ಅವುಗಳು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ .

2 ) ಇಲ್ಲಿ ಪ್ರಯೋಗಾಲಯಗಳೇ ಇಲ್ಲ . ಇಡೀ ಸಮಾಜವೇ ಒಂದು ಪ್ರಯೋಗಾಲಯವಾಗಿದ್ದು ಕೇವಲ ಪ್ರಯೋಗಕ್ಕಾಗಿ ಸನ್ನಿವೇಶಗಳನ್ನು ನಿರ್ಮಿಸುವುದು ಕಷ್ಟ

1st Puc Sociology Chapter 1 Question Answer

III . ಐದು ಅಂಕದ ಪ್ರಶ್ನೆಗಳು : ( 10 – 15 ವಾಕ್ಯಗಳಲ್ಲಿ ಉತ್ತರಿಸಿ )

1 ) ಸಮಾಜಶಾಸ್ತ್ರ ಎಂದರೇನು ? ಕನಿಷ್ಟ ಮೂರು ವ್ಯಾಖ್ಯೆಗಳನ್ನು ಉಲ್ಲೇಖಿಸುವುದ ರೊಂದಿಗೆ ವಿವರಿಸಿ ?

ಮಾನವ ಸಮಾಜವನ್ನು ವೈಜ್ಞಾನಿಕವಾಗಿ ಹಾಗೂ ಸಮಗ್ರ ರೀತಿಯಲ್ಲಿ ಅಧ್ಯಯನ ಮಾಡಲು ಹೊಸ ವಿಜ್ಞಾನವೊಂದರ ಅವಶ್ಯಕತೆಯನ್ನು ಮನಗಂಡು ಅದನ್ನು ಸಮಾಜಶಾಸ್ತ್ರ ಎಂದು ಕರೆಯಲಾಗಿದೆ . ಸಮಾಜಶಾಸ್ತ್ರ ‘ ಎಂಬುದು ಸಮಾಜದ ಅಧ್ಯಯನದ ಶಾಸ್ತ್ರವಾಗಿದೆ .

  • ‘ ಆಗಸ್ಟ್‌ ಕಾಮ್ಟ್ ‘ ರವರ ಪ್ರಕಾರ ‘ ಸಮಾಜಶಾಸ್ತ್ರವು ನಿಸರ್ಗ ಸಹಜವಾದ ಹಾಗೂ ಸ್ಥಿರ ರೂಪದ ನಿಯಮಗಳಿಗೆ ಒಳಪಟ್ಟ ಸಾಮಾಜಿಕ ವಿದ್ಯಮಾನಗಳ ವಿಜ್ಞಾನವಾಗಿದ್ದು ಅಂತಹ ನಿಯಮಗಳನ್ನು ಕಂಡುಕೊಳ್ಳುವುದೇ ಅದರ ಶೋಧನೆಯ ಉದ್ದೇಶವಾಗಿರುತ್ತದೆ .
  • ‘ ಹೆಚ್.ಎಂ.ಜಾನ್ಸನ್’ರವರ ಪ್ರಕಾರ – ‘ ಸಾಮಾಜಿಕ ಸಮೂಹಗಳ ಕುರಿತಾದ ವೈಜ್ಞಾನಿಕ ಅಧ್ಯಯನವೇ ಸಮಾಜಶಾಸ್ತ್ರವೆನಿಸಿದೆ .
  • ‘ ಇಮೈಲ್ ಡರ್ಖೀಂ ‘ ರವರ ಪ್ರಕಾರ ‘ ಸಮಾಜಶಾಸ್ತ್ರವು ಸಾಮಾಜಿಕ ಸಂಸ್ಥೆಗಳ ವಿಜ್ಞಾನವಾಗಿದೆ .

2 ) ಸಮಾಜಶಾಸ್ತ್ರ ಸ್ವರೂಪ – ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ಸಮಾಜ ವಿಜ್ಞಾನಗಳ ಸಮೂಹದಲ್ಲಿ ಸಮಾಜಶಾಸ್ತ್ರಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ . ಸಮಾಜಶಾಸ್ತ್ರದ ಸ್ವರೂಪ ಹಾಗೂ ಲಕ್ಷಣಗಳನ್ನು ಈ ರೀತಿ ವಿವರಿಸಬಹುದಾಗಿದೆ .

1 ) ಸಮಾಜಶಾಸ್ತ್ರವು ಒಂದು ಪ್ರತ್ಯೇಕವಾದ ಹಾಗೂ ಸ್ವತಂತ್ರವಾದ ಅಧ್ಯಯನ ಶಾಸ್ತ್ರವಾಗಿದೆ .

2 ) ಸಮಾಜಶಾಸ್ತ್ರವು ಒಂದು ಸಮಾಜ ವಿಜ್ಞಾನವಾಗಿದೆಯೇ ಹೊರತು ಭೌತವಿಜ್ಞಾನವಾಗಿಲ್ಲ .

3 ) ಸಮಾಜಶಾಸ್ತ್ರವು ಒಂದು ನಿಶ್ಚಯಾತ್ಮಕ ಶಾಸ್ತ್ರವಾಗಿದೆಯೇ ವಿನಃ ಗುಣ ನಿರ್ದೇಶಕ ಶಾಸ್ತ್ರವಲ್ಲ .

4 ) ಸಮಾಜಶಾಸ್ತ್ರವು ಒಂದು ‘ ಶುದ್ಧ ‘ ಶಾಸ್ತ್ರವೇ ಹೊರತು ಪ್ರಾಯೋಗಿಕ ಅಥವಾ ಅನ್ವಯಿಕ ವಿಜ್ಞಾನವಲ್ಲ .

5 ) ಸಮಾಜಶಾಸ್ತ್ರವು ಅಮೂರ್ತ ಸ್ವರೂಪದ ವಿಜ್ಞಾನವಾಗಿದೆಯೇ ಹೊರತು ಮೂರ್ತ ಸ್ವರೂಪದಲ್ಲ .

6 ) ಸಮಾಜಶಾಸ್ತ್ರವು ಸಾಮಾನೀಕರಣ ಮಾಡುವ ವಿಜ್ಞಾನವಾಗಿದೆಯೇ ಹೊರತು ವೈಯುಕ್ತಿಕರಣ ಮಾಡುವ ವಿಜ್ಞಾನವಲ್ಲ .

7 ) ಸಮಾಜಶಾಸ್ತ್ರವು ಒಂದು ಸಾಮಾನ್ಯ ಸಮಾಜವಿಜ್ಞಾನವಾಗಿದಯೇ ಹೊರತು ವಿಶೇಷ ವಿಜ್ಞಾನವಾಗಿಲ್ಲ .

8 ) ಸಮಾಜಶಾಸ್ತ್ರವು ಪ್ರಯೋಗ ಸಿದ್ಧವೆನ್ನಬಹುದಾದ ( ಅನುಭವವೇದ್ಯವಾದ ) ಹಾಗೂ ವಿಚಾರ ಪ್ರಧಾನವಾದ ವಿಜ್ಞಾನವಾಗಿದೆ .

3 ) ಸಮಾಜಶಾಸ್ತ್ರದಲ್ಲಿ ಉಗಮದಲ್ಲಿ ಅವಳಿ ಕ್ರಾಂತಿಗಳ ( ಫ್ರಾನ್ಸಿನ ಮಹಾಕ್ರಾಂತಿ ಹಾಗೂ ಕೈಗಾರಿಕಾ ಕ್ರಾಂತಿ ) ಪಾತ್ರವನ್ನು ವಿವರಸಿ .

ಸಮಾಜಶಾಸ್ತ್ರದ ಉಗಮದಲ್ಲಿ ಅವಳಿಕ್ರಾಂತಿಗಳೆನಿಸಿದ ಫ್ರಾನ್ಸಿನ ಮಹಾಕ್ರಾಂತಿ ಹಾಗೂ ಕೈಗಾರಿಕಾ ಕ್ರಾಂತಿಗಳು ಮಹತ್ವಪೂರ್ಣ ಪಾತ್ರವಹಿಸುತ್ತವೆ . 1789 ರಲ್ಲಿ ನಡೆದ ಫ್ರಾನ್ಸಿನ ಮಹಾಕ್ರಾಂತಿಯು ಉಂಟುಮಾಡಿದ ರಾಜಕೀಯ ಅಸ್ಥಿರತೆ , ಸಾಮಾಜಿಕ ಗೊಂದಲ ಆರ್ಥಿಕಬಿಕ್ಕಟ್ಟು , ಇತ್ಯಾದಿಗಳು ಚಿಂತಕರ ಮನಸ್ಸನ್ನು ಕದಡಿದವು . ಸಮಾಜದಲ್ಲಿ ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು . ರಾಜಕೀಯ ಕ್ರಾಂತಿ ಬುಡಮೇಲು ಮಾಡಿದ ಹಳೆ ವ್ಯವಸ್ಥೆಗೆ ಪರ್ಯಾಯವಾಗಿ ಹೊಸ ವ್ಯವಸ್ಥೆಯೋಂದನ್ನು ರೂಪಿಸಬೇಕು , ಸಮಾನತೆ ಸ್ವಾತಂತ್ರ್ಯ , ಭ್ರಾತೃತ್ವ , ವ್ಯಕ್ತಿವಾದ , ವೈಜ್ಞಾನಿಕ ಮನೋಭಾವ , ಮುಂತಾದ ವಿಚಾರಗಳು ಅವರ ಮನಸ್ಸಿನಲ್ಲಿ ಸೇರಿಕೊಂಡವು ,

ಸಾಮಾಜಿಕ ವ್ಯವಸ್ಥೆಯ ಕುರಿತಾದ ಈ ಚಿಂತನೆ ಇಂದಿಗೂ ಅಸ್ಥಿತ್ವದಲ್ಲಿದ್ದು ಸಮಾಜಶಾಸ್ತ್ರಜ್ಞರ ಅಧ್ಯಯನದ ಮುಖ್ಯ ಕ್ಷೇತ್ರಗಳಲ್ಲೊಂದು ಎನ್ನಬಹುದಾಗಿದೆ . 18 ನೇ ಶತಮಾನದಲ್ಲಿ ಸಂಭವಿಸಿದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯು ಇಡೀ ಜಗತ್ತನ್ನೇ ತಲ್ಲಣಗೊಳಿಸಿತು . ಕೈಗಾರಿಕಾ ಕ್ರಾಂತಿಯು ಸಾಮಾಜಿಕ , ಆರ್ಥಿಕ ವ್ಯವಸ್ಥೆ ಹಾಗೂ ಉತ್ಪಾದನಾ ಪ್ರಕ್ರಿಯೆಯಲ್ಲಿ ಬದಲಾವಣೆಯಾಯಿತು , ಭೂಮಿಯ ಒಡೆತನಕ್ಕಿಂತಲೂ ಕೈಗಾರಿಕೋದ್ಯಮಿಯ ಮೇಲಿನ ಒಡೆತನ ಆಕರ್ಷಣೆಯವಾಗಿತ್ತು .

ವಸ್ತುಗಳ ಉತ್ಪಾದನೆಗಾಗಿ ಬೃಹತ್ ಗಾತ್ರದ ಸ್ಥಾಪನೆಗಳು ಸ್ಥಾಪನೆಯಾದವು . ಜನಸಂಖ್ಯೆಯ ಹೆಚ್ಚಳ , ನಿರುದ್ಯೋಗಗಳು ಉದ್ಯೋಗ ಅರಸಿ ಪಟ್ಟಣಗಳಿಗೆ ಬರಲಾರಂಭಿಸಿದರು . ಕೈಗಾರೀಕರಣದ ಪರಿಣಾಮದಿಂದ ನಗರೀಕರಣ ಪ್ರಕ್ರಿಯೆ ಪ್ರಾರಂಭವಾಯಿತು . ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿ ಕಾರ್ಮಿಕರು , ಮಹಿಳೆಯರು ಹಾಗೂ ಮಕ್ಕಳನ್ನು ಶೋಷಿಸಲಾಗುತ್ತಿತ್ತು .

ಕೈಗಾರಿಕಾ ಕ್ರಾಂತಿಯು ಮಾನವ ಚಿಂತನೆಯನ್ನು ಗಂಭೀರವಾಗಿ ಪ್ರಭಾವಿಗೊಳಿಸಿತು , ಆಗಸ್ಟ್‌ ಕಾಮ್ಟ್ , ಹರ್ಬಲ್ ಸ್ಪೆನ್ಸರ್ , ಎಮಿಲಿ ಡರ್ಖೀಮ್ , ಮಾಕ್ಸ್‌ವೇಬರ್ ಕಾರ್ಲ್‌ಮಾರ್ಕ್ಸ್ ಮುಂತಾದವರು ಕೈಗಾರಿಕಾ ಕ್ರಾಂತಿಯು ತಂದಂತಹ ಹಲವಾರು ಸಮಸ್ಯೆಗಳನ್ನು ಆಳವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು , ಸಾಮಾಜಿಕ ವಿದ್ಯಮಾನಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಒಂದು ಸ್ವತಂತ್ರ ಹಾಗೂ ಪ್ರತ್ಯೇಕ ಸಮಾಜ ವಿಜ್ಞಾನದ ಸ್ಥಾಪನೆಯ ಅವಶ್ಯಕತೆಯಿದೆ ಎಂದು ಅವರ ವಾದಿಸಿದರು . ಆಗಸ್ಟ್ ಕಾಯ್ದೆಯವರು ತಾವೇ ಸ್ವತಃ ಅಂತಹ ವಿಜ್ಞಾನವೊಂದನ್ನು ಹುಟ್ಟು ಹಾಕಿ ಅದನ್ನು ಸೋಷಿಯಾಲಜಿ ‘ ಎಂಬ ಹೆಸರಿಸಿದರು . ‌

4 ) ಸಮಾಜಶಾಸ್ತ್ರದ ಅಧ್ಯಯನಕ್ಕಾಗಿ ಕುರಿತಾಗಿ ಅಲೆಕ್ಸ – ಇಂಕಲ್ಸ್ ರವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ವಿವರಿಸಿ .

” ಸಮಾಜಶಾಸ್ತ್ರದ ಅಧ್ಯಯನ ವಿಷಯಗಳ ಬಗ್ಗೆ ಅಲೆಕ್ಸ್ ಇಂಕಲ್ಸ್‌ರವರು “ ವಾಟ್ ಈಜ್ ಸೋಷಿಯಾಲಜಿ ಕೃತಿಯಲ್ಲಿ ನೀಡಿರುವ ವಿವರಣೆಯ ಆಧಾರದ ಮೇಲೆ ಸಮಾಜಶಾಸ್ತ್ರದ ಮುಖ್ಯವಾದ ಅಧ್ಯಯನದ ವಿಷಯಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ . ಅವುಗಳೆಂದರೆ ,

1 ) ಮಾನವ ಸಮಾಜ ಮತ್ತು ಸಂಸ್ಕೃತಿಯ ಸಮಾಜಶಾಸ್ತ್ರೀಯ ವಿಶ್ಲೇಷಣೆ : ಸಮಾಜಶಾಸ್ತ್ರದ ಮುಖ್ಯದ್ದೇಶವು ಸಮಾಜ ಮತ್ತು ಸಂಸ್ಕೃತಿಗಳ ಬಗ್ಗೆ “ ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಕೂಡಿದ ವಿಶ್ಲೇಷಣೆಯನ್ನು ನೀಡುವುದಾಗಿರುತ್ತದೆ . ಸಮಾಜ ಮತ್ತು ಸಂಸ್ಕೃತಿಗಳ ವಿಕಾಸತ್ಮಕದಿಂದ ಕೂಡಿದ ಬೆಳವಣಿಗೆ ಮತ್ತು ಈ ಬೆಳವಣಿಗೆಯ ಪ್ರಕ್ರಿಯೆಯಲ್ಲಿನ ಪ್ರಮುಖವಾದ ಹಂತಗಳ ಕುರಿತಾಗಿ ಅದು ಧರ್ಮ ಮಾಡುವುದು ಸಮಾಜಶಾಸ್ತ್ರವು ಇಂತಹ ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ವೈಜ್ಞಾನಿಕ ವಿಧಾನವನ್ನು ಬಳಸುವುದರ ಅಗತ್ಯದ ಬಗ್ಗೆ ವಿಶೇಷ ಒತ್ತು ನೀಡುವುದು .

2 ) ಶಾಮಾಜಿಕ ಜೀವನದ ಮೂಲಭೂತ ಘಟಕಗಳ ಅಧ್ಯಯನ : ನಮ್ಮ ಸಾಮಾಜಿಕ ಜೀವನದ ಬಹು ಮುಖ್ಯವಾದ ಘಟಕಗಳೆಲ್ಲವೂ ಇಲ್ಲಿ ಅಧ್ಯಯನದ ವಿಷಯಗಳಾಗುತ್ತದೆ . ಉದಾಹರಣೆಗೆ : ಸಾಮಾಜಿಕ ಕ್ರಿಯೆಗಳು ಸಾಮಾಜಿಕ ಸಂಬಂಧಗಳು , ವ್ಯಕ್ತಿಯ ವ್ಯಕ್ತಿತ್ವ , ಎಲ್ಲಾ ಬಗೆಯ ಸಮೂಹಗಳು , ಗ್ರಾಮ , ನಗರ , ಹಾಗೂ ಆದಿವಾಸಿ ಸಮುಧಾಯಗಳು , ಸಂಘಗಳು , ಸಂಘಟನೆಗಳು ಮತ್ತು ಜನಸಂಖ್ಯೆ ಎಲ್ಲವೂ ಸಮಾಜಶಾಸ್ತ್ರ ವ್ಯಾಪ್ತಿಗೆ ಬರುತ್ತದೆ .

3 ) ಮೂಲಭೂತ ಸಾಮಾಜಿಕ ಸಂಸ್ಥೆಗಳ ಅಧ್ಯಯನ : ಮಾನವ ಸಾಮಾಜಿಕ ಜೀವನಕ್ಕೆ ಆಧಾರವಾಗಿರುವ ಪ್ರಾಥಮಿಕ ಸಂಸ್ಥೆಗಳು , ಅವುಗಳ ಬೆಳವಣಿಗೆ ರಚನೆ ಮತ್ತು ಕಾರ್ಯ ಇಲ್ಲಿನ ಕೇಂದ್ರ ವಿಷಯಗಳಾಗುತ್ತವೆ . ಉದಾಹರಣೆ : ಕುಟುಂಬ ಬಂಧುತ್ವ , ಧರ್ಮ , ಆಸ್ತಿ , ಆರ್ಥಿಕ , ರಾಜಕೀಯ , ಶೈಕ್ಷಣಿಕ , ವೈಜ್ಞಾನಿಕ , ಮನೋರಂಜನಾತ್ಮಕ , ಕಾನೂನಾತ್ಮಕ ಹಾಗೂ ಸಾಮಾಜಿಕ ಕಲ್ಯಾಣಾತ್ಮಕ ರೂಪದ ಸಂಸ್ಥೆಗಳು ಈ ವಲಯದಲ್ಲಿ ಬರುತ್ತದೆ .

4 ) ಮೂಲಭೂತ ಶಾಮಾಜಿಕ ಪ್ರಕ್ರಿಯೆಗಳ ಅಧ್ಯಯನ : ನಮ್ಮ ಸಾಮಾಜಿಕ ಜೀವನವನ್ನೂ ನಾನಾ ರೂಪದ ಸಾಮಾಜಿಕ ಪ್ರಕ್ರಿಯೆಗಳು ನಿರ್ವಹಿಸುವ ಮಹತ್ತರವಾದ ಪಾತ್ರವನ್ನು ಕಡೆಗಣಿಸುವಂತಿಲ್ಲ . ಉದಾ : ಸ್ಪರ್ಧೆ , ಸಂಘರ್ಷ , ಹೊಂದಾಣಿಕೆ , ಮುಂತಾದವುಗಳ ಸ್ಪರ್ಧೆಯಲ್ಲಿ .

5 ) ವಿಶೇಷಾಧ್ಯಯನಗಳ ಕ್ಷೇತ್ರಗಳ ಅಧ್ಯಯನ ಶೋಧನೆ : ಸಮಾಜಶಾಸ್ತ್ರವು ಭರದಿಂದ ಬೆಳೆಯುತ್ತಿರುವ ವಿಜ್ಞಾನವಾಗಿದ್ದು ಮಾನವನ ಸಾಮಾಜಿಕ ಜೀವನದ ಬೇರೆ ಬೇರೆ ಕ್ಷೇತ್ರಗಳನ್ನು ತನ್ನ ಅಧ್ಯಯನದ ಬೇರೆ ಬೇರೆ ಘಟಕಗಳನ್ನಾಗಿ ಮಾಡಿಕೊಳ್ಳುತ್ತಿದೆ . ಈ ಹಿನ್ನಲೆಯಲ್ಲಿ ಇದು ವಿಶೇಷ ಅಧ್ಯಯನ ಕ್ಷೇತ್ರಗಳ ಸ್ಥಾಪನೆಗೆ ಹಾಗೂ ಬೆಳವಣಿಗೆ ಅವಕಾಶ ಕಲ್ಪಿಸಿಕೊಂಡಿದೆ .

5 ) ಸಮಾಜಶಾಸ್ತ್ರದ ಬೆಳವಣಿಗೆಯಲ್ಲಿ ಆಗಸ್ಟ್‌ ಕಾಮ್ಟ್‌ ರವರ ಪಾತ್ರವನ್ನು ವಿವರಿಸಿ .

ಸಮಾಸಶಾಸ್ತ್ರದ ಬೆಳವಣಿಗೆಯಲ್ಲಿ ‘ ಆಗಸ್ಟ್‌ಕಾಮ್ಟ್‌’ಯವರ ಪಾತ್ರ ಮಹತ್ವ ಪೂರ್ತಿದಾದುರಾಗಿದೆ .

ಸಮಾಜಶಾಸ್ತ್ರದ ಸ್ಥಾಪಕ ತಜ್ಞರಲ್ಲಿ ಒಬ್ಬರಾದ “ ಆಗಸ್ಟ್‌ಕಾಮ್ಟ್‌ಯವರು “ ಸೋಸಿಯಾಲಜಿ ” ಎಂಬ ಪದವನ್ನು ಪರಿಚಯಿಸಿದವರಲ್ಲಿ ಮೊದಲಿನರಾಗಿದ್ದಾರೆ . ಆದ್ದರಿಂದಲೇ “ ಆಗಸ್ಟ್‌ಕಾಮ್ಟ್‌ ರವರನ್ನು “ ಸಮಾಜಶಾಸ್ತ್ರದ ” ಪಿತಾಮಹ ಎಂದು ಕರೆಯಲಾಗಿದೆ .

ಆಗಸ್ಟ್‌ ಕಾಮ್ಟ್‌ರವರು ತಮ್ಮ “ ಪೊಸಿಟಿವ್ ಫಿಲಾಸಫಿ ” ಎಂಬ ಕೃತಿಯ ಮೂಲಕ “ ಸೋಸಿಯಾಲಜಿ ” ಎಂಬ ಪದವನ್ನು 1839 ರಲ್ಲಿ ಮೊದಲು ಬಳಸಿ ಸಮಾಜದ ವ್ಯಜ್ಞಾನಿಕ ಅಧ್ಯಯನ ವಾಖ್ಯೆ ಸಮಾಜಶಾಸ್ತ್ರವೆಂದು ಕರೆದಿದ್ದಾರೆ . ಸಮಾಜದ ಅಧ್ಯಯನದಲ್ಲಿ ವಸ್ತು ನಿಷ್ಠವಾದ ವೈಜ್ಞಾನಿಕ ವಿಧಾನದ ಅವಶ್ಯಕತೆಗೆ ರವರು ಒತ್ತನ್ನು ನೀಡಿದ್ದರು .

‘ ಆಗಸ್ಟ್ ಕಾಮ್ಟ್‌’ರವರು ಸಮಾಜಶಾಸ್ತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು , ಅವುಗಳು ಯಾವುವೆಂದರೆ

1. ಸಾಮಾಜಿಕ ಸ್ಥಿತಿಶಾಸ್ತ್ರ

2. ಸಾಮಾಜಿಕ ಚಲನಶಾಸ್ತ್ರ

ಕುಟುಂಬ , ಅರ್ಥವ್ಯವಸ್ಥೆ , ಧರ್ಮ ಇವು ಸಾಮಾಜಿಕ ಸ್ಥಿತಿಶಾಸ್ತ್ರಕ್ಕೆ ಸಂಬಂಧಿಸಿದೆ ,

ಸಾಮಾಜದ ಬದಲಾವಣೆ , ಹಾಗೂ ಸಾಮಾಜಿಕ ಪ್ರಗತಿ ಸಾಮಾಜಿಕ ಚಲನ ಶಾಸ್ತ್ರಕ್ಕೆ ಸಂಬಂಧಿಸಿದೆ . * * ಆಗಸ್ಟ್ ಕಾಮ್ಪರವರ ಪ್ರಕಾರ ಬೌದ್ಧಿಕ ವಿಕಾಸ ಹಾಗು ಸಾಮಾಜಿಕ ಪ್ರಗತಿಗೆ ನೇರವಾದ ಸಂಬಂಧವಿದ್ದು ಇದಕ್ಕೆ ಅನ್ವಯಿಸುವಂತೆ ಮೂರು ಹಂತಗಳ ಸೂತ್ರವನ್ನು ವಿವರಿಸಿದ್ದಾರೆ . ಅವುಗಳೆಂದರೆ –

1. ಧರ್ಮಶಾಸ್ತ್ರೀಯ ಹಂತ

2. ಅಮೂರ್ತ ಹಂತ

3. ವೈಜ್ಞಾನಿಕ ಹಂತ ಕಾಯ್ದೆಯವರು “ ವಿಜ್ಞಾನಗಳ ವರ್ಗೀಕರಣ ಸಿದ್ದಾಂತವನ್ನು ನೀಡಿ ಸಾಮಾಜಿಕ ವಿಜ್ಞಾನಗಳ ಪರಸ್ಪರ ಸಂಬಂಧ ಹಾಗೂ ಪರಸ್ಪರಾವಲಂಬನೆಯನ್ನು ವಿವರಿಸಿದ್ದಾರೆ . ಕಾಯ್ದೆಯವರು ಸಮಾಜ ಶಾಸ್ತ್ರಕ್ಕೆ ನೀಡಿದ ಮಹತ್ತರ ಕೊಡುಗೆಯೆಂದರೆ 1. ಪೊಸಿಟಿವ್ ಫಿಲಾಸಫಿ 2. ಪೊಸಿಟಿವ್ ಪಾಲಿಟಿಕ್ಸ್ ಎಂಬುವುವು .

6 ) ಸಮಾಜಶಾಸ್ತ್ರವನ್ನು ಶ್ರೀಮಂತಗೊಳಿಸುವಲ್ಲಿ ಸ್ಪೆನ್ಸರ್‌ರವರ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ಬರೆಯಿರಿ .

ಸಮಾಜಶಾಸ್ತ್ರವನ್ನು ಶ್ರೀಮಂತಗೊಳಿಸುವಲ್ಲಿ ಸ್ಪೆನ್ಸರ್‌ರವರ ಕೊಡುಗೆ ಅಪಾರ ಆದ್ದರಿಂದಲೇ ಇವರನ್ನು “ಸಮಾಜಶಾಸ್ತ್ರದ ಎರಡನೇ ಪಿತಾಮಹ ” ಎಂದು ಕರೆಯಲಾಗಿದೆ . ಸಮಾಜಶಾಸ್ತ್ರದ ಸ್ಥಾಪಕ ತಜ್ಞರಲ್ಲಿ ಪ್ರಮುಖರಾದವರಾಗಿದ್ದರು .

ಹರ್ಬಟ್ ಸ್ಪೆನ್ಸರ್ ಖ್ಯಾತ ವಿಕಾಸವಾದಿಯಾಗಿದ್ದ ಚಾರ್ಲ್ ಡಾರ್ವಿನನ “ ಜೀವ ಸಂಕುಲಗಳ ಉಗಮ ” ಎಂಬ ಕೃತಿಯಿಂದ ಪ್ರಭಾವಿತರಾಗಿದ್ದಾರೆ , ಸಮಾಜವನ್ನು ಒಂದು ಜೀವಿಗೆ ಹೋಲಿಸಿ ಜೈವಿಕ ಸಾದೃಶ್ಯದ ಸಿದ್ದಾಂತವನ್ನು ಮಂಡಿಸಿದ್ದಾರೆ . ಇಡೀ ಸಮಾಜವನ್ನು ಅಧ್ಯಯನ ಘಟಕವಾಗಿ ಪರಿಗಣಿಸಬೇಕೆಂಬುದರ ಬಗ್ಗೆ ಸ್ಪೆನ್ಸರ್ ಒತ್ತನ್ನು ನೀಡಿದ್ದನು . ಈತನ ಪ್ರಕಾರ ಸಮಾಜದ ವಿವಿಧ ಭಾಗಗಳು ಪರಸ್ಪರ ಸಂಬಂಧ ಪರಸ್ಪರಾವಲಂಬನೆಯನ್ನು ಹೊಂದಿದ್ದು ಕೇವಲ ಭಾಗಗಳು ಮಾತ್ರವೇ ಇಡೀ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದೆ . ಇಡೀ ವ್ಯವಸ್ಥೆಯ ಭಾಗಗಳ ಮೇಲೆ ಪ್ರಭಾವ ಬೀರುತ್ತದೆ . ಸಮಾಜದ ವಿವಿಧ ಹಂತಗಳ ಬೆಳವಣಿಗೆಯನ್ನು ವಿವರಿಸುವಲ್ಲಿ ಸ್ಪೆನ್ಸರವರ “ ಹೋಲಿಕೆ ವಿಧಾನ ” ವಿಶೇಷ ಗಮನ ಸೆಳೆಯುತ್ತದೆ . ಹರ್ಬಲ್ ಸ್ಪೆನ್ಸರವರು ಸಮಾಜಶಾಸ್ತ್ರಕ್ಕೆ

1. ಸೋಷಿಯಲ್ ಸ್ಟಾಟಿಕ್ಸ್

2. ಫಸ್ಟ್ ಫಿನ್ಸಿಪಲ್ಸ್

3 . ಪ್ರಿನ್ಸಿಪಲ್ಸ್ ಆಫ್ ಎಥಿಕ್ಸ್

4. ಫಿನಿಪಲ್ಸ್ ಆಫ್ ಸೋಸಿಯಾಲಜಿ

5. ವಿದ್ಯುಮ್ಯಾನ್ ವರ್ಸಸ್‌ಸ್ಟೇಟ್ ಹಾಗೂ

6 . ದಿ ಸ್ಟಡಿ ಆಫ್ ಸೋಷಿಯಾಲಜಿ , ಕೃತಿಗಳ ಮೂಲಕ ಅಪಾರ ಕೊಡುಗೆಯನ್ನು ನೀಡಿದ್ದಾರೆ .

7 ) ಸಮಾಜಶಾಸ್ತ್ರವನ್ನು ಪ್ರಖ್ಯಾತಿಗೊಳಿಸುವಲ್ಲಿ ಡರ್ಖಿಂ ರವರ ಪ್ರಮುಖ ಪಾತ್ರವೇನು ?

ಡರ್ಖಿಂರವರು ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಸಮಾಜವನ್ನು ಮುಖ್ಯ ಘಟಕವಾಗಿ ಪರಿಗಣಿಸಿದ್ದರು ಅವರ ತುಲನಾತ್ಮಕ ವಿಧಾನದ ಅಧ್ಯಯನದ ವಿಭಿನ್ನ ಸಮಾಜಗಳ ತುಲನಾತ್ಮಕ ಅಧ್ಯಯನಕ್ಕೆ ಮಹತ್ವ ನೀಡಿತು . ವಿಜ್ಞಾನಿಗಳು ಪ್ರಾಕೃತಿಕ ಜಗತ್ತಿನ ವಸ್ತು ನಿಷ್ಟವಾದ ಅಧ್ಯಯನ ನಡೆಸಿದ ರೀತಿಯಲ್ಲಿಯೇ ಸಾಮಾಜಿಕ ಜೀವನದ ಅಧ್ಯಯನ ನಡೆಸಬೇಕೆಂಬುದು ಡರ್ಖಿಂರವರ ನಂಬಿಕೆಯಾಗಿತ್ತು . ಸಮಾಜದ ವಾಸ್ತವತೆಯನ್ನು ಪ್ರತಿಪಾದಿಸಿದ ಮೊದಲ ಸಮಾಜಶಾಸ್ತ್ರಜ್ಞಡರ್ಖಿಂ ರವರಾಗಿದ್ದಾರೆ .

ಸಮಾಜದ ವೈಜ್ಞಾನಿಕ ಅಧ್ಯಯನಕ್ಕೆ ಡರ್ಖಿಂರವರು ಸಮಾಸಶಾಸ್ತ್ರಿಯ ಪದ್ಧತಿಗಳ ನಿಯಮಗಳನ್ನು ರೂಪಿಸಿದ್ದಾರೆ. ಡರ್ಖಿಂರವರ ಅಭಿಪ್ರಾಯದಂತೆ ಮಾನವನ ಸಾಮಾಜಿಕ ವರ್ತನೆಯನ್ನು , ಸಾಮಾಜಿಕ ಹಿನ್ನಲೆಯಲ್ಲಿ ಅರ್ಥೈಸಿಕೊಳ್ಳಬೇಕೆ ವಿನಃ , ಆತನ ವ್ಯಕ್ತಿಗತ ದೃಷ್ಟಿಯಿಂದಲ್ಲ ಮಾನವೀಯ ಘಟನೆ ಸಾಮಾಜಿಕವಾಗಿದೆಯೆಂದು ಹೇಳುತ್ತ ಸಮಾಜದ ಹಿತಾಸಕ್ತಿಗಾಗಿ ನಾವೆಲ್ಲರೂ ಪ್ರತಿಯೊಂದು ಕ್ರಿಯೆಗಳನ್ನು ನಿರ್ವಹಿಸುತ್ತೇವೆ ಎಂದು ಡರ್ಖಿಂ ಅಭಿಪ್ರಾಯ ಪಟ್ಟಿದ್ದಾರೆ , ನಮ್ಮ ಪದ್ಧತಿಗಳು ಹಾಗೂ ಕರ್ತವ್ಯಗಳೆಲ್ಲವೂ ಸಮಾಜದ ನಿಯಮ ಹಾಗೂ ಸಂಪ್ರದಾಯಗಳಿಂದ ರೂಪಿಸಲ್ಪಟ್ಟಿವೆ , ಕರ್ತವ್ಯಗಳನ್ನು ನಾವು ರಚಿಸದೆ , ಶಿಕ್ಷಣ ಮೂಲಕ ಪಡೆದುಕೊಂಡಿದ್ದೇವೆ . ಇಂತಹ ವರ್ತನೆಯ ವಿಧಾನಗಳನ್ನು ಸಾಮಾಜಿಕ ಸಂಗತಿಗಳೆಂದು ಡರ್ಖಿ ೦ ಕರೆಯುತ್ತಾರೆ . ಡರ್ಖೀಂರವರು ತಮ್ಮ ಕೃತಿಗಳ ಮೂಲಕ ಸಮಾಜಶಾಸ್ತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ . ಅವರ ಪ್ರಮುಖ ಕೃತಿಗಳೆಂದರೆ ,

1 ) ದಿ ಡಿವಿಜನ್ ಆಫ್ ಲೇಬರ್ ಇನ್‌ಸೊಸೈಟಿ .

2 ) ದಿ ರೂಲ್ಸ್ ಆಫ್ ಸೋಸಿಯಾಲರ್ಜಿಲ್ ಮೆಥೆಡ್

3 ) ಸೂಯಿಸೈಡ್ ಎ ಸೋಸಿಯಾಲಜಿಕಲ್ ಅನಾಲಿಸಸ್

4 ) ದಿ ಎಲಿಮೆಂಟರಿ ಫಾಮ್ಸ್ ಆಫ್ ರಿಲಿಜಿಯಸ್ ಲೈಫ್ ಡರ್ಖೀಂರವರು ಸಮಾಜಶಾಸ್ತ್ರ ಹಾಗೂ ಇತರ ಶೈಕ್ಷಣಿಕ ಶಾಸ್ತ್ರಗಳಿಗೆ ಆಧಾರವಾಗಿದೆ ಎಂಬುದಾಗಿ ತಿಳಿಸಿದ್ದಾರೆ .

8 ) ಭಾರತೀಯ ಸಮಾಜಶಾಸ್ತ್ರಜ್ಞರಾದ ಜಿ.ಎಸ್ . ಘುರ್ಯೆ ಮತ್ತು ಡಾ | ಇರಾವತಿ ಕರ್ವೇರವರನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ .

ಭಾರತೀಯ ಸಮಾಜಶಾಸ್ತ್ರಜ್ಞರಾದವರಲ್ಲಿ ಪ್ರಖ್ಯಾತರಾದವರಲ್ಲಿ ಜಿ.ಎಸ್ . ಘುರ್ಯೆರವರು ಪ್ರಮುಖರಾಗಿದ್ದಾರೆ . ಭಾರತದಲ್ಲಿ ಸಮಾಜಶಾಸ್ತ್ರವನ್ನು ಜನಪ್ರಿಯಗೊಳಿಸುವಲ್ಲಿ ಘುರ್ಯೆರವರು ಮುಖ್ಯ ಪಾತ್ರ ವಹಿಸಿದ್ದರಿಂದಲೇ ಅವರನ್ನು ಭಾರತೀಯ ಸಮಾಜಶಾಸ್ತ್ರದ ಪಿತಾಮಹ ಎಂದು ಕರೆಯಲಾಗಿದೆ . ಇವರು ಭಾರತದ ಜಾತಿ ವ್ಯವಸ್ಥೆ ಕುರಿತಂತೆ ಬರೆದಿರುವ ಗ್ರಂಥ ಪ್ರಖ್ಯಾತವಾಗಿದೆ . ಹಿಂದೂ ಯೂರೋಪಿಯನ್ ಸಂಸ್ಕೃತಿಯ ಬಂಧುತ್ವವವನ್ನು ಕುರಿತು ಡಾ ಘುರ್ಯೆರವರು ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ , “ ಫ್ಯಾಮಿಲಿ ಅಂಡ್‌ ಕಿನ್ ಇನ್ ಇಂಡೋ ಯೂರೋಪಿಯನ್ ಕಲ್ಟರ್ ” ಎಂಬ ಅವರ ಅಧ್ಯಯನವು ಭಾರತೀಯ ಸಮಾಜ ಹಾಗೂ ಸಂಸ್ಕೃತಿಯ ಹಿಂದಿನ ವಿಕಾಸನವನ್ನು ತಿಳಿಸುವುದರ ಜೊತೆಗೆ ವರ್ತಮಾನ ಭಾರತೀಯ ಸಮಾಜದ ಸಮಸ್ಯೆಗಳು ಹಾಗೂ ತುಡಿತಗಳನ್ನು ವಿಶ್ಲೇಷಿಸಿದೆ , ಗ್ರಾಮೀಣ ಸಂಸ್ಕೃತಿಯ ಬಗೆಗಿನ ಘುರ್ಯೆರವರ ಅಧ್ಯಯನವು ಸಮಾಜಶಾಸ್ತ್ರ ಕ್ಷೇತ್ರದಲ್ಲಿ ಮಹತ್ವಗಳಿದೆ .

ಭಾರತದಲ್ಲಿ ಪ್ರಚಲಿತ ವರ್ತಮಾನ ಹಾಗೂ ತಡೆಯಿಲ್ಲದ ಭವಿಷ್ಯತ್ತಿನ ತಾರ್ಕಿಕ ಮುಂದುವರಿಕೆಯ ಅಧ್ಯಯನವನ್ನು ಮುಂದಿಡುತ್ತದೆ . ಡಾ ಜಿ.ಎಸ್ . ಘುರ್ಯೆರವರು “ ಕ್ಯಾಸ್ಟ್ ಅಂಡ್‌ರೇಸ್ ಇನ್ ಇಂಡಿಯಾ , “ ಷೆಡ್ಯೂಲ್ ಟ್ರೈಬ್ ” , “ ಸೋಸಿಯಾಲಜಿ ಟೆನ್ನನ್ ಇನ್ ಇಂಡಿಯಾ ” , “ ವೇದಿಕ್ ಇಂಡಿಯಾ ” , “ ಭಾರತೀಯ ಸಾಧುಗಳು ” , ಭಾರತೀಯ ಪೋಷಾಕಗಳು , ಮುಂತಾದ 30 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ . “ ಇಂಡಿಯನ್ ಸೋಷಿಯಲಾಜಿಕಲ್ ಸೊಸೈಟಿ ” ಎಂಬ ಸಂಘಟನೆಯನ್ನು ಸ್ಥಾಪಿಸಿ “ ಸೋಷಿಯಲಾಜಿಕಲ್ ಬುಲೆಟಿನ್ ” ಎಂಬ ಪ್ರಕಟಣೆಯನ್ನು ಆರಂಭಿಸಿದ ಕೀರ್ತಿ ಜಿ.ಎಸ್ . ಘುರ್ಯೆರವರಾಗಿದೆ .

ಭಾರತೀಯ ಸಮಾಜಶಾಸ್ತ್ರದಲ್ಲಿ “ ಡಾ ಇರಾವತಿಕರ್ವೆಯವರು ಪ್ರತಿಭಾವಂತ ಹಾಗೂ ಉತ್ತಮ ಸಮಾಜಶಾಸ್ತ್ರಜ್ಞೆಯೆಂದು ಗುರ್ತಿಸಲಾಗಿದೆ , ಡಾ ಇರಾವತಿಕರ್ವೆಯವರು “ ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞ ” ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ , ಕರ್ವೆಯವರು ಭಾರತೀಯ ಸಮಾಜ , ಸಾಮಾಜಿಕ ಸಂಸ್ಥೆಗಳು ಮತ್ತು ಬಂಧುತ್ವ ಇವರ ವಿಶೇಷ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿದ್ದವು . ಭಾರತೀಯ ಸಮಾಜವನ್ನು ಮತ್ತು ಇಲ್ಲಿನ ಸಂಸ್ಥೆಗಳನ್ನು ಬಂಧುತ್ವ ವ್ಯವಸ್ಥೆಯ ಮೂಲಕ ಅರ್ಥೈಸಿಕೊಳ್ಳುವುದು ಅವರ ಮುಖ್ಯ ಪ್ರಯತ್ನವಾಗಿತ್ತು .

“ ಕಿನ್‌ಫಿಪ್ ಆರ್ಗನೈಸೆರ್ಷ ಇನ್ ಇಂಡಿಯಾ ” ಎಂಬುದು ಅವರ ಪ್ರಸಿದ್ಧ ಕೃತಿ “ ಹಿಂದೂ ಸೊಸೈಟಿ ಆನ್ ಇಂಟರ್‌ಪ್ರಿಟೇಷನ್ ” “ ಫ್ಯಾಮಿಲಿಇನ್ ಇಂಡಿಯಾ ” , “ ಲ್ಯಾಂಡ್ ಅಂಡ್ ಪೀಪಲ್ ಆಫ್ ಮಹಾರಾಷ್ಟ್ರ ” ಹಾಗೂ ಇನ್ನಿತರ ಏಳಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ .

9 ) ಅನ್ವಯಿಕ ಸಮಾಜಶಾಸ್ತ್ರದ ಐದು ಶಾಖೆಗಳನ್ನು ಬರೆಯಿರಿ .

ಅನ್ವಯಿಕ ಸಮಾಜಶಾಸ್ತ್ರದ ಐದು ಶಾಖೆಗಳೆಂದರೆ

1 ) ಚಿಕಿತ್ಸಕ ಸಮಾಜಶಾಸ್ತ್ರ

2 ) ಸಾಮಾಜಿಕ ಇಂಜಿನಿಯರಿಂಗ್

3 ) ಸಮಾಜ ಕಾರ್ಯ

4 ) ಅನ್ವಯಿಕ ಸಾಮಾಜಿಕ ಸಂಶೋಧನೆ

5 ) ಕ್ರಿಯಾತ್ಮಕ ಸಮಾಜಶಾಸ್ತ್ರ ಈ ಅನ್ವಯಿಕ ಸಮಾಜಶಾಸ್ತ್ರವು ಮಾನವನ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ನೀಡುವುದರ ಬಗ್ಗೆ ಹೆಚ್ಚು ಕೇಂದ್ರಿಕರಿಸಿದೆ .

ಉದಾಹರಣೆ : ಚಿಕಿತ್ಸಕ ಸಮಾಜಶಾಸ್ತ್ರವು , ವೈದರು ರೋಗದ ಸ್ವರೂಪ ಗುಣಲಕ್ಷಣಗಳು ಮತ್ತು ಪರಿಣಾಮಗಳ ಬಗ್ಗೆ ಮಾತ್ರ ಗಮನಹರಿಸದೆ , ರೋಗಗಳ ನಿವಾರಣೆಯ ಬಗ್ಗೆ ಹೆಚ್ಚು ಕಾಳಜಿವಹಿಸುತ್ತದೆ . ಈ ರೀತಿ ಸಮಾಜಶಾಸ್ತ್ರವು ಇನ್ನಿತರ ಎಲ್ಲಾ ವಿಜ್ಞಾನಗಳಂತೆ ದ್ವಿರೂಪತೆ ಪಾತ್ರವನ್ನು ನಿರ್ವಹಿಸುವ ಸಾಮರ್ಥತೆ ಹೊಂದಿದೆ , ಶುದ್ಧ ವಿಜ್ಞಾನವಾಗಿ ಕೇವಲ ಮಾನವನ ವರ್ತನೆಗಳಿಗೆ ಮೂಲಕಾರಣ ಮತ್ತು ಪರಿಣಾಮದ ಬಗ್ಗೆ ಕೇಂದ್ರಿಕರಿಸುತ್ತಾ ಹಾಗೆಯೇ ಮಾನವ ಮತ್ತು ಸಮಾಜ ನಡುವೆಯಿರುವ ಸಂಬಂಧ ಬಗ್ಗೆ ಮಾಹಿತಿ ನೀಡುತ್ತದೆ . ಸಾಮಾಜಿಕ ಸಮಸ್ಯೆಗಳ ಉಗಮ , ಬೆಳವಣಿಗೆ , ಪರಿಣಾಮದ ಬಗ್ಗೆ ಕೇಂದ್ರಿಕರಿಸುತ್ತಾ ಹಾಗೆಯೇ ಮಾನವ ಮತ್ತು ಸಮಾಜ ನಡುವೆಯಿರುವ ಸಂಬಂಧ ಬಗ್ಗೆ ಮಾಹಿತಿ ನೀಡುತ್ತದೆ .

ಸಮಾಜಶಾಸ್ತ್ರ ಅನ್ವಯಿಕ ಶಾಸ್ತ್ರವಾಗಿ ಹಲವಾರು ರೀತಿಯಲ್ಲಿ ಮಾನವ ಸಮಾಜಕ್ಕೆ ಸಹಾಯಕವಾಗಿದೆ . ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಒಳಗೊಂಡಿದೆ , ಅಂತಹ ಸಾಮಾಜಿಕ ಸಮಸ್ಯೆಗಳು ಉಗಮ , ಬೆಳವಣಿಗೆ ಪರಿಣಾಮ ಮತ್ತು ವ್ಯಾಪಕತೆ ಆಳವಾಗಿ ಅಧ್ಯಯನ ನಡೆಸುತ್ತದೆ . ಎಲ್ಲಾ ಈ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಸಮಾಜಶಾಸ್ತ್ರದ ಸಮಾಜಶಾಸ್ತ್ರ ಕಾರ್ಯ ಹೊಂದಿದೆ . ಅನ್ವಯಿಕ ಸಮಾಜಶಾಸ್ತ್ರವು ಮಾನವಕೇಂದ್ರಿತ ವಿಜ್ಞಾನವಾಗಿದ್ದು ಆತನು ಸಮಸ್ಯೆಯಿಂದ ಮುಕ್ತರಾಗಲು ಪರಿಹರಿಸುತ್ತದೆ .

ಉದಾಹರಣೆ : ಭಿಕ್ಷಾಟನೆ , ಬಡತನ , ನಿರುದ್ಯೋಗ , ಮಧ್ಯಪಾನ , ವೈಶ್ಯಾವೃತ್ತಿ , ಜೂಜುಗಾರಿಕೆ , ಭ್ರಷ್ಟಾಚಾರ ಹೀಗೆ ಹಲವಾರು ಸಾಮಾಜಿಕ ಪಿಡುಗುಗಳ ಬಗ್ಗೆ ಕಾಳಜಿವಹಿಸುತ್ತದೆ . ಸಮಾಜಶಾಸ್ತ್ರ , ಅನ್ವಯಿಕ ಶಾಸ್ತ್ರವಾಗಿದ್ದು ಹಲವಾರು ಸಾಮಾಜಿಕ ಧೋರಣೆಗಳು ಮತ್ತು ನಿಯಮಗಳನ್ನು ಜಾರಿಗೊಳಿಸಲು ಸೂಕ್ತ ಸಲಹೆ ನೀಡುತ್ತದೆ .

10 ) ಇಪ್ಪತ್ತೊಂದನೇ ಶತಮಾನದ ಐದು ಸಮಾಜಶಾಸ್ತ್ರಜ್ಞರನ್ನು ಹೆಸರಿಸಿ .

ಇಪ್ಪತ್ತೊಂದನೇ ಶತಮಾನದ ಐದು ಸಮಾಜಶಾಸ್ತ್ರಜ್ಞರೆಂದರೆ ,

1 ) ಮೈಕಾಲ್ ಪೋಕೋ

2 ) ಜುರ್ಗಿನ್ ಹೆಬರ್‌ಮಾಸ್

3 ) ಪೆರ‍್ರಿ ಬೋರ್‌ಡಿಯ

4 ) ಜೂಕ್ಯೂಸ್ ಡೇರಿಡ

5 ) ಅಂತೋನಿ ಗಿಡ್ಡನ್ಸ್

ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜಶಾಸ್ತ್ರ ಅಧ್ಯಯನದಲ್ಲಿ ಹೊಸ ತಿರುವುಗಳನ್ನು ನೀಡಿದ್ದಾರೆ . ವಿಶೇಷವಾಗಿ ಮಾಹಿತಿ ಸಂಗ್ರಹಣಾ ವಿಧಾನದಲ್ಲಿ ಹೆಚ್ಚು ಪ್ರಾಧನ್ಯತೆ ಕೊಟ್ಟಿದ್ದಾರೆ , ಈ ಹೊಸ ಪೀಳಿಗೆಯ ಹೊಸ ಸಮಾಜಶಾಸ್ತ್ರಜ್ಞರು ಹೊಸ ಪರಿಕಲ್ಪನೆಗಳನ್ನು ಬಳಸುತ್ತಾ ಪ್ರಸಕ್ತ ಸಮಾಜವನ್ನು ವಿಶ್ಲೇಷಿಸಿದ್ದಾರೆ .

ಉದಾ : ಬೋರ್‌ಡಿಯೋನ ‘ ಸಾಮಾಜಿಕ ಆವರಣ ‘ ಡೇರಿಡರವರ ನಿರಚನೆ ಗಿಡ್ಡಿಂನ್ಸ್‌ರವರ ‘ ರಚನೀಕರಣ ಇವರೆಲ್ಲರೂ ಪ್ರಸಕ್ತ ಸಮಾಜವನ್ನು ಆಳವಾಗಿ ಅಧ್ಯಯನ ನಡೆಸುತ್ತಾ ನವಕಾರ್ಯಾತ್ಮಕವಾದ , ನವರಚನಾತ್ಮಕವಾದ , ಕೈಗಾರಿಕಾವಾದ , ನವಮಾರ್ಕ್ಸವಾದ , ನವಫ್ರಾಕ್ ಫರ್ಟವಾದ , ಆಧುನಿಕೋತ್ತರವಾದ ಮುಂತಾದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿ ಇಂತಹ ಪರಿಕಲ್ಪನೆಯಿಂದಲೇ ಸಾಮಾಜಿಕ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಿದ್ದಾರೆ . “ ಮಾನವನ ವರ್ತನೆ ಎಂದರೇನು ? ಮಾನವ ಸಮಾಜದೊಂದಿಗೆ ನಿಕಟ ಸಂಬಂಧ ಏರ್ಪಡಿಸಿಕೊಳ್ಳಲು ಕಾರಣಗಳೇನು ? ಸಮಾಜದ ಪರಿವರ್ತನೆಗಳು ಹೇಗೆ ಮತ್ತು ಏಕೆ ಸಂಭವಿಸುತ್ತದೆ , ಸಮಾಜದ ಮುಂದಿನ ಭವಿಷ್ಯದಲ್ಲಿ ಯಾವ ದಿಕ್ಕಿನ ಕಡೆ ಸಾಗುತ್ತದೆ ? ಈ ರೀತಿ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿದ್ದಾರೆ .

ಇಂದಿನ ಪ್ರಸಕ್ತ ಕಾಲದಲ್ಲಿ ಈ ಮೇಲ್ಕಂಡ ಪ್ರಶ್ನೆಗಳಿಗೆ ಉತ್ತರ ಪಡೆದು ಕೊಳ್ಳಲು ಪ್ರಯತ್ನಿಸಲಾಗಿದೆ , ಅದರ ಉತ್ತರ ಮತ್ತು ಅನುಸರಿಸುವ ವಿಧಾನಗಳು ಬೇರೆಯಾಗಿದೆ . ಇಂದಿನ ಸಮಕಾಲೀನ ಸಮಾಜವು ಸಂಪ್ರದಾಯಿಕ ಸಮಾಜಕ್ಕಿಂತಲೂ ವಿಭಿನ್ನ ಸ್ವರೂಪವನ್ನು ಹೊಂದಿದೆ . ಪ್ರಸಕ್ತ ಸಮಾಜಶಾಸ್ತ್ರಜ್ಞರು ಬದಲಾಗುತ್ತಿರುವ ಸಮಾಜದ ಸ್ವರೂಪವನ್ನು ಗ್ರಹಿಸಿ ವಿಶ್ಲೇಷಿಸಬೇಕಾಗಿದೆ .

11 ) ಸಮಾಜಶಾಸ್ತ್ರ ಒಂದು ಶುದ್ಧ ವಿಜ್ಞಾನ ಎಂದು ಪರಿಗಣಿಸಿ

ಸಮಾಜಶಾಸ್ತ್ರವು ‘ ಒಂದು ಶುದ್ಧ ವಿಜ್ಞಾನ ” ಪರಿಗಣಿಸಲಾಗಿದೆ , ಏಕೆಂದರೆ ಶುದ್ಧ ವಿಜ್ಞಾನದ ಪ್ರಾಥಮಿಕ ಉದ್ದೇಶ ಜ್ಞಾನ ಸಂಗ್ರಹಣೆ , ಪ್ರಾಯೋಗಿಕ ಬಳಕೆಯ ಬದಲಾಗಿ ಜ್ಞಾನ ಸಂಪಾದನೆಗೆ ಹೆಚ್ಚು ಪ್ರಾಮುಖ್ಯತೆ ಇಲ್ಲಿ ಕಲ್ಪಿಸಲಾಗಿದೆ . ಸಮಾಜಶಾಸ್ತ್ರ ಶುದ್ಧ ವಿಜ್ಞಾನವಾಗಿದೆಯೇ ಹೊರತು ಅನ್ವಯಿಕ ವಿಜ್ಞಾನವಲ್ಲ . ಸಮಾಜಶಾಸ್ತ್ರದಿಂದ ಲಭ್ಯವಾದ ಮಾಹಿತಿಗಳಿಂದ ಮಾನವ ಸಮಾಜಗಳ ಬಗ್ಗೆ ಅಪಾರವಾದ ವಿಷಯಗಳು ಸಂಗ್ರಹಿಸಿಕೊಳ್ಳಲಾಗಿದೆ ,

ಅಂತಹ ಮಾಹಿತಿಗಳಿಂದ ಯಾವುದೇ ಉಪಯುಕ್ತ ಪಡೆಯನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ . ‘ ಲೆಸ್ಟರ್ ಎಫ್ ವಾರ್ಡ್ ‘ ಸಮಾಜಶಾಸ್ತಜ್ಜನ ಪ್ರಕಾರ “ ಶುದ್ಧ ವಿಜ್ಞಾನ ” ವಾದ ಸಮಾಜಶಾಸ್ತ್ರದ ಪ್ರಮುಖವಾದ ಉದ್ದೇಶ ಸಾಮಾಜಿಕ ಸಂರಚನೆ ಮತ್ತು ಸಾಮಾಜಿಕ ಪರಿವರ್ತನೆಗಳ ಮೂಲಕ ಮೂಲಭೂತ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಶೋಭಿಸುವುದಾಗಿದೆ ರಾಬರ್ಟ್ ಬೈರ್‌ಸೈಡ್‌ರಲ್ಲಿ ಉಲ್ಲೇಖಿಸಿರುವಂತೆ ಸಮಾಶಾಸ್ತ್ರಜ್ಞರು ಯಾವುದೇ ಶಾಸಕರು ಯಾವ ಕಾಯ್ದೆಗಳನ್ನು ರದ್ದುಗೊಳಿಸಬೇಕು , ಯಾವುದನ್ನು ಜಾರಿಗೊಳಿಸಬೇಕೆಂದು ಚಿಂತಿಸುವ ಬದಲು ಅದರ ಪ್ರಭಾವವನನ್ನು ವಿಶ್ಲೇಷಿಸುತ್ತಾರೆ . ಸಮಾಜಶಾಸ್ತ್ರದ ಉದ್ದೇಶ ಜ್ಞಾನ ಸಂಪಾದನೆಯೂ ಕೂಡ ಆಗಿರುವುದರಿಂದ ಇದೊಂದು ಶುದ್ಧ ವಿಜ್ಞಾನವೂ ಆಗಿದೆ .

12 ) ಸಮಾಜಶಾಸ್ತ್ರ ಒಂದು ಅನ್ವಯಿಕ ವಿಜ್ಞಾನ ಎಂದು ಪರಿಗಣಿಸಿ

ಸಮಾಜಶಾಸ್ತ್ರ ಒಂದು ಅನ್ವಯಿಕ ವಿಜ್ಞಾನವೂ ಆಗಿದೆ ಅನ್ವಯಿಕ ವಿಜ್ಞಾನ ಸಾಮಾನ್ಯವಾಗಿ ಪ್ರಾಯೋಗಿಕ ಅಂಶಕ್ಕೆ ಪ್ರಾಮುಖ್ಯತೆ ಕಲ್ಪಿಸಿದೆ . ಈ ವಿಜ್ಞಾನದಿಂದ ಲಭ್ಯವಾದ ಮಾಹಿತಿಗಳ ಸಮಸ್ಯೆ ಪರಿಹಾರಕ್ಕೆ ಕೇಂದ್ರಿಕರಿಸಿದೆ ಉದಾಹರಣೆಗೆ : ವೈದ್ಯಕೀಯಶಾಸ್ತ್ರ , ಭೌತಶಾಸ್ತ್ರ , ರಸಾಯನಶಾಸ್ತ್ರ , ಸಸ್ಯಶಾಸ್ತ್ರ ಮುಂತಾದವುಗಳು . ಈ ವಿಜ್ಞಾನಗಳು ಮಾನವನ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ನೀಡುವುದರ ಬಗ್ಗೆ ಹೆಚ್ಚು ಕೇಂದ್ರಿಕರಿಸಿದೆ .

ಉದಾ : ವೈದ್ಯರು ರೋಗದ ಸ್ವರೂಪ , ಗುಣಲಕ್ಷಣಗಳು ಮತ್ತು ಪರಿಣಾಮಗಳ ಬಗ್ಗೆ ಮಾತ್ರ ಗಮನ ಹರಿಸುವುದಿಲ್ಲ ಆದರೆ ರೋಗಗಳ ನಿವಾರಣೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ . ಸಮಾಜಶಾಸ್ತ್ರ ಇನ್ನಿತರ ಎಲ್ಲಾ ವಿಜ್ಞಾನಗಳಂತೆ ದ್ವಿರೂಪತೆಯ ಪಾತ್ರವನ್ನು ನಿರ್ವಹಿಸುವ ಸಾಮರ್ಥ್ಯತೆ ಹೊಂದಿದೆ ಶುದ್ಧ ವಿಜ್ಞಾನವಾಗಿ ಕೇವಲ ಮಾನವನ ವರ್ತನೆಗಳಿಗೆ ಮೂಲಕಾರಣ ಹಾಗೂ ಪರಿಣಾಮದ ಬಗ್ಗೆ ಕೇಂದ್ರಿಕರಿಸುತ್ತಾ ಹಾಗೆಯೇ ಮಾನವ ಮತ್ತು ಸಮಾಜ ನಡುವೆಯಿರುವ ಸಂಬಂಧ ಬಗ್ಗೆ ಮಾಹಿತಿ ನೀಡುತ್ತದೆ .

ಆದರೂ ಸಮಾಜಶಾಸ್ತ್ರ ಅನ್ವಯಿಕ ಶಾಸ್ತ್ರವಾಗಿ ಹಲವಾರು ರೀತಿಯಲ್ಲಿ ಮಾನವ ಸಮಾಜಕ್ಕೆ ಸಹಾಯಕವಾಗಿದೆ . ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಒಳಗೊಂಡಿದೆ . ಅಂತಹ ಸಾಮಾಜಿಕ ಸಮಸ್ಯೆಗಳು ಉಗಮ , ಬೆಳವಣಿಗೆ , ಪರಿಣಾಮ ಮತ್ತು ವ್ಯಾಪಕತೆ ಆಳವಾಗಿ ಅಧ್ಯಯನ ನಡೆಸುತ್ತದೆ . ಹಾಗೆಯೇ ಇವೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಹೊಂದಿದೆ . ಸಮಾಜಶಾಸ್ತ್ರವು ಮಾನವ ಕೇಂದ್ರಿಕೃತ ವಿಜ್ಞಾನವಾಗಿದ್ದು ಆತನು ಸಮಸ್ಯೆಗಳಿಂದ ಮುಕ್ತರಾಗಲು ಪರಿಹಾರವನ್ನು ಸೂಚಿಸುತ್ತದೆ . ಉದಾ : ಭಿಕ್ಷಾಟನೆ , ಬಡತನ , ನಿರುದ್ಯೋಗ , ಮಧ್ಯಪಾನ , ಜೂಜುಗಾರಿಕೆ , ಭ್ರಷ್ಟಚಾರ ಮುಂತಾದವು . ಸಮಾಜಶಾಸ್ತ್ರವು ಅನ್ವಯಿಕ ಶಾಸ್ತ್ರವಾಗಿದ್ದು ಹಲವಾರು ಸಾಮಾಜಿಕ ಧೋರಣೆಗಳು ಮತ್ತು ನಿಯಮಗಳನ್ನು ಜಾರಿಗೊಳಿಸಲು ಸೂಕ್ತ ಸಲಹೆ ನೀಡುತ್ತದೆ .

13 ) ಸಮಾಜಶಾಸ್ತ್ರ ಮತ್ತು ಸಾಮಾನ್ಯಜ್ಞಾನದ ನಡುವಿನ ವ್ಯತ್ಯಾಸಗಳನ್ನು ವಿವರಿಸಿ .

ಸಮಾಜಶಾಸ್ತ್ರ ಮತ್ತು ಸಾಮಾನ್ಯಜ್ಞಾನದ ನಡುವಿನ ವ್ಯತ್ಯಾಸವನ್ನು ಈ ರೀತಿ ವಿವರಿಸಬಹುದು .

ಸಮಾಜಶಾಸ್ತ್ರ

1. ಸಮಾಜಶಾಸ್ತ್ರವು ಸಾಮಾಜಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ .

2 . ಇಲ್ಲಿ ನಿಖರತೆ ಮತ್ತು ಸಮರೂಪತೆ ಆಧಾರವಾಗಿದ್ದರು . ಕೆಲವೊಮ್ಮೆ ಅದೇ ನಿಖರತೆ ಮತ್ತು ಸಮರೂಪತೆ ಹೊಂದಿರದೆ ವಿಸ್ಮಯ ಮತ್ತು ಅಚ್ಚರಿಯನ್ನು ಮೂಡಿಸುತ್ತದೆ .

3. ಸಮಾಜಶಾಸಸ್ತ್ರಜ್ಞರು ಇನ್ನಿತರ ವಿಜ್ಞಾನಗಳಂತೆ ಯಾವುದೇ ಸಾಮಾಜಿಕ ಸಂಗತಿಯನ್ನು ಸತ್ಯಾಂಶವೆಂದು ಪರಿಗಣಿಸುವುದಿಲ್ಲ . ಏಕೆಂದರೆ ಪ್ರತಿಯೊಬ್ಬರಿಗೂ ಸಾಮಾಜಿಕ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಂತರ ಧೃಡಿಕರಣದೊಂದಿಗೆ ದಾಖಲಿಸುವ ಅನಿವಾರ್ಯವಾಗಿದೆ .

4. ಸಮಾಜಶಾಸ್ತ್ರವು ಸಮಾಜದಲ್ಲಿರುವ ವಿವಿಧ ಸಾಮಾನ್ಯ ಜ್ಞಾನದ ಮೂಲ ಮತ್ತು ಸತ್ಯಾಂಶಗಳನ್ನು ಅರ್ಥೈಸಿಕೊಂಡು ವಿಶ್ಲೇಷಿಸುವ ಹೊಣೆಗಾರಿಕೆಯನ್ನು ಹೊಂದಿದೆ .

ಸಾಮಾನ್ಯ ಜ್ಞಾನ

1 . ಸಮಾಜದಲ್ಲಿ ಜನರು ಸಾಮಾನ್ಯವಾಗಿ ನಂಬಿರುವ ಸಮಗ್ರ ಮನೋಭಾವನೆಯಾಗಿರುತ್ತದೆ . ಉದಾ : ಸಾಂಸ್ಕೃತಿಕ , ಧಾರ್ಮಿಕ , ಕೌಟುಂಬಿಕ , ವೈವಾಹಿಕ ಹೀಗೆ ಹಲವಾರು ಅಂಶಗಳು .

2 . ಸಾಮಾನ್ಯಜ್ಞಾನದಿಂದ ತಮ್ಮ ಸುತ್ತಮುತ್ತಲಿನ ನೈಸರ್ಗಿಕ ಮತ್ತು ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸಿ ಅರ್ಥೈಸಿಕೊಂಡಿರುತ್ತಾರೆ .

3. ಸಾಮಾನ್ಯಜ್ಞಾನ ಕೆಲವೊಮ್ಮೆ ಸುಳ್ಳು ಮತ್ತು ಪ್ರಸಕ್ತ ಎನಿಸಿಕೊಳ್ಳಲು ಸಾಧ್ಯವಾಗದಿರಬಹುದು .

4. ಬಹುತೇಕ ಸಾಮಾನ್ಯಜ್ಞಾನಗಳ ದೃಢೀಕರಣಗಳು , ಊಹೆಗಳು , ಅಜ್ಞಾನ ಪೂರ್ವಗ್ರಹ ಪೀಡಿತ , ಆಕಸ್ಮಿಕ ಮುಂತಾದವುಗಳ ಆಧಾರವಾಗಿರುತ್ತದೆ .

5. ಸಾಮಾನ್ಯಜ್ಞಾನವನ್ನು ಸಾರ್ವತ್ರಿಕರಿಸಲು ಸಾಧ್ಯವಿಲ್ಲ , ಏಕೆಂದರೆ ಕೆಲವು ಸಾಮಾಜಿಕ ಸಂಗತಿಗಳು ಸಾಮಾನ್ಯಜ್ಞಾನಕ್ಕಿಂತ ವಿಭಿನ್ನವಾಗಿದ್ದು ಅಚ್ಚರಿ ಮೂಡಿಸುತ್ತದೆ .

14 ) ವಿಜ್ಞಾನದ ವ್ಯಾಖ್ಯೆ ನೀಡಿ ಗುಣ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ .

ವಿಜ್ಞಾನದ ವ್ಯಾಖ್ಯೆ ವಿಶಾಲವಾದ ಅರ್ಥದಲ್ಲಿ ಹೇಳುವುದಾದರೆ , “ ಭೌತಿಕ ಅಥವಾ ಸಾಮಾಜಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಯಾವುದೇ ಕ್ರಮಬದ್ದವಾದ ಅಧ್ಯಯನವನ್ನು ವಿಜ್ಞಾನ ಎನ್ನಬಹುದು .

ಆರ್.ಟಿ. ಶಾಫರ್‌ರವರು “ ಕ್ರಮಬದ್ಧವಾದ ವಿಧಾನಗಳ ಮೂಲಕ ಪ್ರಾಪ್ತವಾದ ಜ್ಞಾನದ ಸಮಷ್ಠಿಯನ್ನು ವಿಜ್ಞಾನ ” ಎನ್ನುವರು .

ಅತ್ಯಂತ ಸರಳ ಪದಗಳಲ್ಲಿ ಹೇಳುವುದಾದರೆ , “ ವಿಜ್ಞಾನವೆಂಬುದು ಕ್ರಮಬದ್ಧವಾದ ಅಥವಾ ಸಂಘಟಿತವಾದ ಜ್ಞಾನವಾಗಿದೆ ”

ವಿಜ್ಞಾನದ ಗುಣ – ಲಕ್ಷಣಗಳು

1 ) ವಾಸ್ತವತೆ ಅಥವಾ ಸತ್ಯ ಸಂಗತಿ : ವಿಜ್ಞಾನವು ಸತ್ಯಸಂಗತಯಿಯನ್ನು ಅವಲಂಬಿಸಿರುತ್ತದೆ “ ಅವಲೋಕಿತ ವಿದ್ಯಮಾನವನ್ನೇ ಇಲ್ಲಿ ವಾಸ್ತವಾಂಶ ಅಥವಾ ಸತ್ಯಸಂಗತಿ ಎನ್ನಲಾಗುವುದು . ಯಾವ ಹೇಳಿಕೆಯು ಸತ್ಯವಾಗಿದೆಯೋ ಅದನ್ನೆ ವಾಸ್ತವಾಂಶ ಎನ್ನಬಹುದು .

ಉದಾಹರಣೆ : 1. ಕಲ್ಲು ಒಂದು ಘನವಸ್ತುವಾಗಿದೆ .

2. ಭಾರತದಲ್ಲಿ ಸರ್ವಧರ್ಮಿಯರು ನೆಲೆಸಿದ್ದಾರೆ

2 ) ಕಾರಣ ಮತ್ತು ಪರಿಣಾಮ : “ ಘಟನೆಗಳ ಜರುಗುವಿಕೆ ಎಂಬುದು ಕಾರಣ ಮತ್ತು ಪರಿಣಾಮ ಸಂಬಂಧಗಳಿಂದ ನಿರ್ಧರಿತವಾಗುತ್ತದೆ ” ಎಂಬಂಶವನ್ನು ಸ್ಪಷ್ಟಪಡಿಸುತ್ತದೆ . ಉದಾಹರಣೆ : ಬಡತನವು ಆರ್ಥಿಕ ಹಿಂದುಳಿದಿರುವಿಕೆಯ ಕಾರಣಗಳಲ್ಲಿ ಒಂದು . ಇದಕ್ಕೆ ಸಂಬಂಧಿಸಿದಂತೆ ಕಾರಣೀಯ ಸಂಬಂಧಗಳ ಮರ್ಮವನ್ನು ಅರಿತುಕೊಳ್ಳುವುದೇ ವಿಜ್ಞಾನದ ಕಾರ್ಯ .

3 ) ಸಾರ್ವತ್ರಿಕತೆ : ವೈಜ್ಞಾನಿಕ ಶೋಧನೆಗಳು ಸಾರ್ವತ್ರಿಕ ಸ್ವರೂಪದವುಗಳಾಗಿರುತ್ತದೆ . ಯಾವುದೇ ಜನಾಂಗ , ರಾಷ್ಟ್ರೀಯತೆ , ಭಾಷೆ , ಧರ್ಮ , ಪ್ರದೇಶ , ಸಾಮಾಜಿಕ ವರ್ಗಕ್ಕೆ ಮಾತ್ರ ವೈಜ್ಞಾನಿಕ ಸತ್ಯತೆಯು ಸೀಮಿತವಾಗಿರಲು ಸಾಧ್ಯವಿಲ್ಲ .

ಉದಾಹರಣೆ : 1. ನೀರು ಹರಿಯುವುದು 2. ಗಾಳಿ ಬೀಸುತ್ತದೆ ಮುಂತಾದವು

4 ) ಭವಿಷ್ಯ ಸೂಚಕತೆ : ಮುಂದಾಗುವ ಘಟನೆಯನ್ನು ಮೊದಲೇ ಸೂಚಿಸುವುದಕ್ಕೆ “ ಭವಿಷ್ಯ ಸೂಚಕತೆ ” ಎನ್ನಬಹುದು .

ಉದಾಹರಣೆ : 1. ಗ್ರಹಣಗಳ ಸೂಚನೆ 2. ಚಂಡಮಾರುತಗಳ ಸೂಚನೆ 3. ಭೂಕಂಪಗಳು 4. ಮಳೆ ಯಾಗುವ ಸೂಚನೆಗಳು ಇತ್ಯಾದಿ

5 ) ದೃಢೀಕರಣ : ಒಂದು ಹೇಳಿಕೆ ಕಲ್ಪನೆಯ ಸತ್ಯತೆಯನ್ನು ಸ್ಥಾಪಿಸಲು ಅನುಸರಿಸುವ ಯಾವುದೇ ವಿಧಾನವನ್ನು ದೃಡೀಕರಣ ಅಥವಾ ಪ್ರಮಾಣೀಕರಣ ಎನ್ನಬಹುದು .

ಉದಾ : 1. ಭೂಮಿಯ ಸೂರ್ಯನ ಸುತ್ತ ಸುತ್ತುತ್ತಿದೆ 2. ಸೂರ್ಯ ಒಂದು ನಕ್ಷತ್ರ ಇತ್ಯಾದಿ .

6 ) ವಸ್ತುನಿಷ್ಟತೆ ಮತ್ತು ಮೌಲ್ಯ ನಿರಪೇಕ್ಷಿತ : ವಸ್ತುನಿಷ್ಟತೆ ಎಂದರೆ , ಅವಲೋಕಗಳನ್ನು ಮಾಡುವಾಗ ಹಾಗು ವ್ಯಾಖ್ಯಾನಿಸುವಾಗ ಯಾವುದೇ ಬಗೆಯ ಪೂರ್ವಗ್ರಹಗಳಿಂದ ಮುಕ್ತವಾಗಿರುವುದು ಎಂದರ್ಥ .

ನಾವು ಸತ್ಯ ಸಂಗತಿಗಳನ್ನು ಅಥವಾ ವಾಸ್ತವಾಂಶಗಳನ್ನು ವ್ಯಾಖ್ಯಾನಿಸುವಾಗ ವೈಯಕ್ತಿಕ ತೀರ್ಮಾನಗಳು ವ್ಯಕ್ತಪಡಿಸುವಾಗ ಎಚ್ಚರ ವಹಿಸಬೇಕು .

7 ) ವೈಜ್ಞಾರಿಕ ವಿಧಾನಗಳು ಹಾಗೂ ತಂತ್ರಗಳ ಮೇಲೆ ವಿಶೇಷವಾದ ಗಮನ: ಜ್ಞಾನದ ಯಾವುದೇ ಶಾಖೆಯು ತನ್ನನ್ನು ವಿಜ್ಞಾನ ಎಂದು ಕರೆಸಿಕೊಳ್ಳಬೇಕಾದರೆ ಅದು ವೈಜ್ಞಾನಿಕ ವಿಧಾನವನ್ನು ಅವಲಂಬಿಸುವುದು ಅನಿವಾರ್ಯ , ವಿಜ್ಞಾನದ ಏಕತೆಯನ್ನು ಅದರ ವಿಧಾನದಲ್ಲಿ ಕಾಣಬಹುದೇ ವಿನಃ ಅದರ ವಸ್ತು ವಿಷಯಗಳಲ್ಲ ಎಂದು ಕಾರ್ಲ್‌ಪಿಯರ್‌ಸನ್ ಹೇಳಿದ್ದಾನೆ .

15 ) ಭೌತ ಮತ್ತು ಸಮಾಜ ವಿಜ್ಞಾನಗಳ ನಡುವಿನ ವ್ಯತ್ಯಾಸವನ್ನು ಚರ್ಚಿಸಿರಿ .

ಭೌತ ಹಾಗೂ ಸಮಾಜ ವಿಜ್ಞಾನಗಳು ಅನುಕ್ರಮವಾಗಿ ಭೌತ ಹಾಗೂ ಸಾಮಾಜಿಕ ಪ್ರಪಂಚಗಳ ಕುರಿತಾದ ಅಧ್ಯಯನ ಮಾಡುವ ಜ್ಞಾನ ಶಾಖೆಗಳು , ಇವುಗಳ ನಡುವೆ ಮೂಲಭೂತ ವ್ಯತ್ಯಾಸವಿದೆ , ಇವುಗಳ ಅಧ್ಯಯನ ವಸ್ತು ಹಾಗೂ ಅಧ್ಯಯನಗಳ ವಿಧಾನಗಳು ಬೇರೆ ಬೇರೆಯಾಗಿವೆ , ಇವುಗಳ ನಡುವಿನ ಇಂತಹ ಮುಖ್ಯ ವ್ಯತ್ಯಾಸಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದಾಗಿದೆ .

ಭೌತ ವಿಜ್ಞಾನಗಳು

1 ) ಭೌತ ವಿಜ್ಞಾನಗಳು ತಮ್ಮ ಅಧ್ಯಯನಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಸಬಹುದು . ಇದರಿಂದ ನಂಬಲರ್ಹವಾದ ಫಲಿತಾಂಶಗಳನ್ನು ಪಡೆಯುತ್ತೇವೆ .

2 ) ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲು ಪ್ರಯೋಗಾಲಯಗಳ ಬಳಕೆ ಇಲ್ಲಿ ಸಾಧ್ಯ . ಇಂತಹ ಪ್ರಯೋಗಾಲಯಗಳ ಮೇಲೆ ಸಂಶೋಧಕನ ನಿಯಂತ್ರಣವೂ ಬಲವಾಗಿರುತ್ತದೆ .

3 ) ಇಲ್ಲಿನ ಅಧ್ಯಯನ ವಸ್ತುಗಳ ಭೌತಿಕ ಸ್ವರೂಪದಲ್ಲಿದ್ದು ವಿಜ್ಞಾನಿಯ ಪ್ರಯೋಗಗಳಿಗೆ ಒಳಪಡುತ್ತವೆ .

4 ) ಭವಿಷ್ಯ ಸೂಚಿಕತೆ ಮತ್ತು ನಿಯಂತ್ರಣ ಇಲ್ಲಿ ಸಾಧ್ಯ . ಉದಾ : ಗ್ರಹಣ , ಭೂಕಂಪ , ಹವಾಮಾನ ಇತ್ಯಾದಿ .

5 ) ಕಾರಣಿಯತೆಯು ಇಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ . ಕಾರಣ ಪರಿಣಾಮಗಳ ನಡುವಿನ ಸಂಬಂಧ ಬಗ್ಗೆ ವಿಶೇಷಗೊಂದಲ ಇರುವುದಿಲ್ಲ . ಉದಾ : ರೋಗಗಳ ಕಾರಣಗಳು , ಕ್ಷಾಮ , ಪ್ರವಾಹ , ಇತ್ಯಾದಿಗಳ ಕಾರಣ ಹಾಗೂ ಪರಿಣಾಮಗಳು .

6 ) ಭೌತ ವಿಜ್ಞಾನದ ಅಧ್ಯಯನಗಳು ಯಾವುದೇ ನಿರ್ದಿಷ್ಟ ಕಾಲ ದೇಶ , ಪ್ರದೇಶ , ಸಂಸ್ಕೃತಿ , ಸಮುದಾಯಗಳಿಗೆ ಮಾತ್ರ ಸೀಮಿತವಾದವುಗಳಲ್ಲ ಸಾಮಾನ್ಯವಾಗಿ ಅವು ಸಾರ್ವತ್ರಿಕ ಸ್ವರೂಪದಲ್ಲಿರುತ್ತವೆ .

ಸಮಾಜ ವಿಜ್ಞಾನಗಳು

1 ) ಸಮಾಜ ವಿಜ್ಞಾನಗಳಲ್ಲಿ ವೈಜ್ಞಾನಿಕ ವಿಧಾನಗಳ ಬಳಕೆಯಲ್ಲಿ ಹಲವಾರು ತೊಂದರೆಗಳಿವೆ . ಆದ್ದರಿಂದ ಅವುಗಳು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ . ಈವಿಧಾನಗಳ ಬಳಕೆ ಕೂಡ ಇತ್ತೀಚೆಗೆ ಆರಂಭವಾದವು .

2 ) ಇಲ್ಲಿ ಪ್ರಯೋಗಾಲಯಗಳೇ ಇಲ್ಲ ಇಡಿ ಸಮಾಜವೇ ಒಂದು ಪ್ರಯೋಗಾಲಯವಾಗಿದ್ದು ಕೇವಲ ಪ್ರಯೋಗಕ್ಕಾಗಿ ಸನ್ನಿವೇಶಗಳನ್ನು ನಿರ್ಮಿಸುವುದು ಕಷ್ಟ .

3 ) ಸಜೀವಿಗಳಾದ ಮಾನವರೇ ಇಲ್ಲಿನ “ ಪ್ರಯೋಗದ ವಸ್ತುಗಳು ” ಆದ್ದರಿಂದ ಸಂಶೋಧನ ಪ್ರಯೋಗಗಳಿಗೆ ಅದು ಸಹಕರಿಸಬಹುದು , ವಿರೋಧಿಸಬಹುದು ಅಥವಾ ಬೇರೆ ರೀತಿಯೇ ವರ್ತಿಸಬಹುದು .

4 ) ಭವಿಷ್ಯ ಸೂಚಕತೆ ಹಾಗೂ ನಿಯಂತ್ರಣ ಇಲ್ಲಿನ ಕಷ್ಟ ಸಾಧ್ಯ . ಸಮಾಜ ವಿಜ್ಞಾನಗಳಿಗೆ ತಮ್ಮ ಪ್ರಯೋಗ ವಸ್ತುಗಳಾದ ವ್ಯಕ್ತಿಗಳ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ ಮನುಷ್ಯ ಸ್ವಭಾವವನ್ನು ಊಹಿಸುವುದು .

5 ) ಕಾರಣೀಯತೆಯು ಇಲ್ಲಿ ಹೆಚ್ಚು ಅಸ್ಪಷ್ಟವಾಗಿರುತ್ತದೆ . ಕಾರಣ ಪರಿಣಾಮ ನಡುವಿನ ಪರಸ್ಪರಾವಲಂಬನೆಯು ಕೆಲವು ಸಲ ಗೊಂದಲಗಳಿಗೆ ಕಾರಣವಾಗುತ್ತದೆ . ಉದಾ : ಅನಕ್ಷರತೆಯಿಂದಾಗಿ ಬಡತನವೇ ? ಅಥವಾ ಬಡತನದಿಂದಾಗಿ ಅನಕ್ಷರತೆಯೇ ? ಇದನ್ನು ನಿರ್ಧರಿಸುವುದು ಹೇಗೆ ? ಸಮಾಜ ವಿಜ್ಞಾನಗಳಲ್ಲಿ ಹೆಚ್ಚಿನ ಸಂಶೋಧನೆಗಳು ನಿಗದಿತ ಕಾಲ , ಪ್ರದೇಶ ದೇಶ ಸಂಸ್ಕೃತಿ , ಜನ ಸಮುದಾಯಗಳಿಗೆ ಸೀಮಿತವಾಗಿರುತ್ತದೆ .

16 ) ಸಮಾಜದ ಅಧ್ಯಯನದಲ್ಲಿ ಆಧುನಿಕ ಸಮಾಜಶಾಸ್ತ್ರಜ್ಞರು ಬಳಸಿದ ವಿವಿಧ ದೃಷ್ಟಿಕೋನಗಳನ್ನು ತಿಳಿಸಿ ,

1950 ರ ದಶಕದ ನಂತರ ಹೊಸ ಚಿಂತಕರು ಕೂಡ ಸಮಾಜದ ಅಧ್ಯಯನ ಕ್ಷೇತ್ರದಲ್ಲಿ ಪ್ರವೇಶಿಸಿದ್ದಾರೆ , ಅವರಲ್ಲಿ ಪ್ರಮುಖರೆಂದರೆ

1 ) ಮೈಕಾಲ್ ಫೆರೋ

2 ) ಜರ್ಗಿನ್ ಹೆಬರ್‌ಮಾಸ್

3 ) ಪೆ ಬೋರ್‌ಡಿಯು

4 ) ಜೂನ್ಯೂಸ್ ಡೇರಿಡ

5 ) ಆಂತೋನಿ ಗಿಡನ್ಸ್

ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜಶಾಸ್ತ್ರ ಅಧ್ಯಯನದಲ್ಲಿ ಹೊಸ ತಿರುವುಗಳನ್ನು ನೀಡಿದ್ದಾರೆ , ವಿಶೇಷವಾಗಿ ಮಾಹಿತಿ ಸಂಗ್ರಹಣಾ ವಿಧಾನದಲ್ಲಿ ಹೆಚ್ಚು ಮಾನ್ಯತೆ ಕಲ್ಪಿಸಿದ್ದಾರೆ .

ಉದಾ : I. ಭೋರ್‌ಡಿಯೋನ ಸಾಮಾಜಿಕ ಆವರಣ

2. ಡೇರಿಡವರ ನಿರಚನೆ

3. ಗಿಡ್ಡಂನ್ಸ್‌ರವರ ರಚನೀಕರಣ .

ಇವರೆಲ್ಲರೂ ಪ್ರಸಕ್ತ ಸಮಾಜವನ್ನು ಆಳವಾಗಿ ಅಧ್ಯಯನ ನಡೆಸುತ್ತಾ ನವಕಾರ್ಯಾತ್ಮಕವಾಗಿ , ನವರಚನಾತ್ಮಕವಾದ , ಕೈಗಾರಿಕಾವಾದ ಆಧುನಿಕೋತ್ತರವಾದ ಮುಂತಾದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿ ಇಂತಹ ಪರಿಕಲ್ಪನೆಯಿಂದಲೇ ಸಾಮಾಜಿಕ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಿದ್ದಾರೆ . ಸಮಾಜಶಾಸ್ತ್ರ ಅಧ್ಯಯನ ರಚನಾತ್ಮಕ ವಿಧಾನವನ್ನು ಅಳವಡಿಸಬೇಕೆಂದು ವಾರಿಸಿ ದೈನಂದಿನ ಜೀವನದ ಪ್ರತಿಯೊಂದು ಅನಿವಾರ್ಯತೆ ಮತ್ತು ಎಲ್ಲಾ ಕ್ರಿಯಾ ಚಟುವಟಿಕೆಗಳನ್ನು ಸಹಜವಾಗಿ ಸ್ವೀಕರಿಸಿಕೊಂಡು “ ಸಮಾಜವನ್ನು ವಿಶ್ಲೇಷಿಸಬೇಕೆಂದು ತಿಳಿಸಿದ್ದಾರೆ .

ನಿರಚನೆ ಪ್ರಕಾರ ಗ್ರಂಥಗಳಲ್ಲಿ ಕೆಲವೊಂದು ಅಂಶಗಳನ್ನು ಆಂತರಿಕವಾಗಿ ಸೇರಿಕೊಳ್ಳುತ್ತಾ ಮತ್ತು ಇನ್ನಿತರ ಅಂಶಗಳನ್ನು ಹೊರಗೆ ಇಡುವ ಪ್ರಯತ್ನ ಮಾಡುತ್ತದೆ . ಇದರ ಮೂಲಕ ಜನ ಸಮೂಹ ಯಾವುದು ನಿರ್ಣಾಯಕ ಮತ್ತು ನಿರ್ಣಾಯಕವಲ್ಲ ಎಂಬ ಮನೋಭಾವನೆ ಬೆಳೆಯುತ್ತದೆ . ಮಾನವ ಸಮಾಜದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತದೆ . ಈ ನಿಟ್ಟಿನಲ್ಲಿ ಎಲ್ಲಾ ವಿಜ್ಞಾನಗಳು ಎರಡು ದೃಷ್ಟಿಕೋನಗಳನ್ನು ಹೊಂದಿದೆ . ಅವುಗಳೆಂದರೆ

1 ) ಶುದ್ಧ ವಿಜ್ಞಾನ / ಶುದ್ಧ ಸಮಾಜಶಾಸ್ತ್ರ

2 ) ಅನ್ವಯಿಕ ವಿಜ್ಞಾನ / ಅನ್ವಯಿಕ ಸಮಾಜಶಾಸ್ತ್ರ

IV . ಹತ್ತು ಅಂಕದ ಪ್ರಶ್ನೆಗಳು : ( 30-40 ವಾಕ್ಯಗಳಲ್ಲಿ ಉತ್ತರಿಸಿ )

1) ಸಮಾಜಶಾಸ್ತ್ರದ ವ್ಯಾಖ್ಯೆ ನೀಡಿರಿ . ಅದರ ಗುಣಲಕ್ಷಣಗಳನ್ನು ವಿವರಿಸಿ .

ಮಾನವ ಸಮಾಜವನ್ನು ವೈಜ್ಞಾನಿಕವಾಗಿ ಹಾಗೂ ಸಮಗ್ರ ರೀತಿಯಲ್ಲಿ ಅಧ್ಯಯನ ಮಾಡಲು ಹೊಸ ವಿಜ್ಞಾನವೊಂದರ ಅವಶ್ಯಕತೆಯನ್ನು ಮನಗಂಡು ಅದನ್ನು ಸಮಾಜಶಾಸ್ತ್ರ ಎಂದು ಕರೆಯಲಾಗಿದೆ . ಸಮಾಜಶಾಸ್ತ್ರ ‘ ಎಂಬುದು ಸಮಾಜದ ಅಧ್ಯಯನದ ಶಾಸ್ತ್ರವಾಗಿದೆ . * ‘ ಆಗಸ್ಟ್ ಕಾಮ್ಟ್ ‘ ರವರ ಪ್ರಕಾರ – ‘ ಸಮಾಜಶಾಸ್ತ್ರವು ನಿಸರ್ಗ ಸಹಜವಾದ ಹಾಗೂ ಸ್ಥಿರ ರೂಪದ ನಿಯಮಗಳಿಗೆ ಒಳಪಟ್ಟ ಸಾಮಾಜಿಕ ವಿದ್ಯಮಾನಗಳ ವಿಜ್ಞಾನವಾಗಿದ್ದು ಅಂತಹ ನಿಯಮಗಳನ್ನು ಕಂಡುಕೊಳ್ಳುವುದೇ ಅದರ ಶೋಧನೆಯ ಉದ್ದೇಶವಾಗಿರುತ್ತದೆ . ‌

‘ ಹೆಚ್.ಎಂ.ಜಾನ್ಸನ್’ರವರ ಪ್ರಕಾರ – ‘ ಸಾಮಾಜಿಕ ಸಮೂಹಗಳ ಕುರಿತಾದ ವೈಜ್ಞಾನಿಕ ಅಧ್ಯಯನವೇ ಸಮಾಜಶಾಸ್ತ್ರ’ವೆನಿಸಿದೆ .

‘ ಇಮೈಲ್ ಡರ್ಖೀಂ ‘ ರವರ ಪ್ರಕಾರ ‘ ಸಮಾಜಶಾಸ್ತ್ರವು ಸಾಮಾಜಿಕ ಸಂಸ್ಥೆಗಳ ವಿಜ್ಞಾನವಾಗಿದೆ . ಸಮಾಜ ವಿಜ್ಞಾನಗಳ ಸಮೂಹದಲ್ಲಿ ಸಮಾಜಶಾಸ್ತ್ರಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ . ಸಮಾಜಶಾಸ್ತ್ರದ ಸ್ವರೂಪ ಹಾಗೂ ಲಕ್ಷಣಗಳನ್ನು ಈ ರೀತಿ ವಿವರಿಸಬಹುದಾಗಿದೆ .

1 ) ಸಮಾಜಶಾಸ್ತ್ರವು ಒಂದು ಪ್ರತ್ಯೇಕವಾದ ಹಾಗೂ ಸ್ವತಂತ್ರವಾದ ಅಧ್ಯಯನ ಶಾಸ್ತ್ರವಾಗಿದೆ .

2 ) ಸಮಾಜಶಾಸ್ತ್ರವು ಒಂದು ಸಮಾಜ ವಿಜ್ಞಾನವಾಗಿದೆಯೇ ಹೊರತು ಭೌತವಿಜ್ಞಾನವಾಗಿಲ್ಲ .

3 ) ಸಮಾಜಶಾಸ್ತ್ರವು ಒಂದು ನಿಶ್ಚಯಾತ್ಮಕ ಶಾಸ್ತ್ರವಾಗಿದೆಯೇ ವಿನಃ ಗುಣ ನಿರ್ದೇಶಕ ಶಾಸ್ತ್ರವಲ್ಲ .

4 ) ಸಮಾಜಶಾಸ್ತ್ರವು ಒಂದು ‘ ಶುದ್ಧ ‘ ಶಾಸ್ತ್ರವೇ ಹೊರತು ಪ್ರಾಯೋಗಿಕ ಅಥವಾ ಅನ್ವಯಿಕ ವಿಜ್ಞಾನವಲ್ಲ .

5 ) ಸಮಾಜಶಾಸ್ತ್ರವು ಅಮೂರ್ತ ಸ್ವರೂಪದ ವಿಜ್ಞಾನವಾಗಿದೆಯೇ ಹೊರತು ಮೂರ್ತ ಸ್ವರೂಪದಲ್ಲ .

6 ) ಸಮಾಜಶಾಸ್ತ್ರವು ಸಾಮಾನ್ಯಕರಣ ಮಾಡುವ ವಿಜ್ಞಾನವಾಗಿದೆಯೇ ಹೊರತು ವೈಯುಕ್ತಿಕರಣ ಮಾಡುವ ವಿಜ್ಞಾನವಲ್ಲ .

7 ) ಸಮಾಜಶಾಸ್ತ್ರವು ಒಂದು ಸಾಮಾನ್ಯ ಸಮಾಜವಿಜ್ಞಾನವಾಗಿದೆಯೇ ಹೊರತು ವಿಶೇಷ ವಿಜ್ಞಾನವಾಗಿಲ್ಲ .

8 ) ‘ ಸಮಾಜಶಾಸ್ತ್ರವು ಪ್ರಯೋಗ ಸಿದ್ಧವೆನ್ನಬಹುದಾದ ( ಅನುಭವವೇದ್ಯವಾದ ) ಹಾಗೂ ವಿಚಾರ ಪ್ರಧಾನವಾದ ವಿಜ್ಞಾನವಾಗಿದೆ .

2 ) ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿ .

ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾದ ಎರಡು ಅಂಶಗಳು ಎಂದರೆ –

1 ) ಅವಳಿ ಕ್ರಾಂತಿಗಳ ಪರಿಣಾಮ ( ಫ್ರಾನ್ಸಿನ ಮಹಾಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿ )

2 ) ಭೌತ ವಿಜ್ಞಾನಗಳು ಮತ್ತು ಇತರ ಸಮಾಜದ ವಿಜ್ಞಾನಗಳ ಬೆಳವಣಿಗೆಯಿಂದ ಪಡೆದ ಸ್ಪೂರ್ತಿಸಮಾಜಶಾಸ್ತ್ರದ ಉಗಮದಲ್ಲಿ ಅವಳಿಕ್ರಾಂತಿಗಳೆನಿಸಿದ ಫ್ರಾನ್ಸಿನ ಮಹಾಕ್ರಾಂತಿ ಹಾಗೂ ಕೈಗಾರಿಕಾ ಕ್ರಾಂತಿಗಳು ಮಹತ್ವಪೂರ್ಣ ಪಾತ್ರವಹಿಸುತ್ತವೆ .

1789 ರಲ್ಲಿ ನಡೆದ ಫ್ರಾನ್ಸಿನ ಮಹಾಕ್ರಾಂತಿಯು ಉಂಟುಮಾಡಿದ ರಜಕೀಯ ಅಸ್ಥಿರತೆ , ಸಾಮಾಜಿಕ ಗೊಂದಲ ಆರ್ಥಿಕಬಿಕ್ಕಟ್ಟು , ಇತ್ಯಾದಿಗಳು ಚಿಂತಕರ ಮನಸ್ಸನ್ನು ಕದಡಿದವು . ಸಮಾಜದಲ್ಲಿ ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು . ರಾಜಕೀಯ ಕ್ರಾಂತಿ ಬುಡಮೇಲು ಮಾಡಿದ ಹಳೆ ವ್ಯವಸ್ಥೆಗೆ ಪರ್ಯಾಯವಾಗಿ ಹೊಸ ವ್ಯವಸ್ಥೆಯೋಂದನ್ನು ರೂಪಿಸಬೇಕು , ಸಮಾನತೆ ಸ್ವಾತಂತ್ರ್ಯ , ಭ್ರಾತೃತ್ವ , ವ್ಯಕ್ತಿವಾದ , ವೈಜ್ಞಾನಿಕ ಮನೋಭಾವ , ಮುಂತಾದ ವಿಚಾರಗಳು ಅವರ ಮನಸ್ಸಿನಲ್ಲಿ ಸೇರಿಕೊಂಡವು , ಸಾಮಾಜಿಕ ವ್ಯವಸ್ಥೆಯ ಕುರಿತಾದ ಈ ಚಿಂತನೆ ಇಂದಿಗೂ ಅಸ್ಥಿತ್ವದಲ್ಲಿದ್ದು ಸಮಾಜಶಾಸ್ತ್ರಜ್ಞರ ಅಧ್ಯಯನದ ಮುಖ್ಯ ಕ್ಷೇತ್ರಗಳಲ್ಲೊಂದು ಎನ್ನಬಹುದಾಗಿದೆ.

18 ನೇ ಶತಮಾನದಲ್ಲಿ ಸಂಭವಿಸಿದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯು ಇಡೀ ಜಗತ್ತನ್ನೇ ತಲ್ಲಣಗೊಳಿಸಿತು . ಕೈಗಾರಿಕಾ ಕ್ರಾಂತಿಯು ಸಾಮಾಜಿಕ , ಆರ್ಥಿಕ ವ್ಯವಸ್ಥೆ ಹಾಗೂ ಉತ್ಪಾದನಾ ಪ್ರಕ್ರಿಯೆಯಲ್ಲಿ ಬದಲಾವಣೆಯಾಯಿತು , ಭೂಮಿಯ ಒಡೆತನಕ್ಕಿಂತಲೂ ಕೈಗಾರಿಕೋದ್ಯಮಿಯ ಮೇಲಿನ ಒಡೆತನ ಆಕರ್ಷಣೆಯವಾಗಿತ್ತು . ವಸ್ತುಗಳ ಉತ್ಪಾದನೆಗಾಗಿ ಬೃಹತ್ ಗಾತ್ರದ ಸ್ಥಾಪನೆಗಳು ಸ್ಥಾಪನೆಯಾದವು . ಜನಸಂಖ್ಯೆಯ ಹೆಚ್ಚಳ , ನಿರುದ್ಯೋಗಗಳು ಉದ್ಯೋಗ ಅರಸಿ ಪಟ್ಟಣಗಳಿಗೆ ಬರಲಾರಂಭಿಸಿದರು . ಕೈಗಾರೀಕರಣದ ಪರಿಣಾಮದಿಂದ ನಗರೀಕರಣ ಪ್ರಕ್ರಿಯೆ ಪ್ರಾರಂಭವಾಯಿತು .

ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿ ಕಾರ್ಮಿಕರು , ಮಹಿಳೆಯರು ಹಾಗೂ ಮಕ್ಕಳನ್ನು ಶೋಷಿಸಲಾಗುತ್ತಿತ್ತು . ಕೈಗಾರಿಕಾ ಕ್ರಾಂತಿಯು ಮಾನವ ಚಿಂತನೆಯನ್ನು ಗಂಭೀರವಾಗಿ ಪ್ರಭಾವಿಗೊಳಿಸಿತು , ಆಗಸ್ಟ್‌ ಕಾಮ್ಸ್ , ಹರ್ಬಲ್ ಸ್ಪೆನ್ಸರ್ , ಎಮಿಲಿಡರ್ಖೀಮ್ , ಮಾಕ್ಸ್‌ವೇಬರ್ ಕಾರ್ಲ್‌ಮಾರ್ಕ್ಸ್ ಮುಂತಾದವರು ಕೈಗಾರಿಕಾ ಕ್ರಾಂತಿಯು ತಂದಂತಹ ಹಲವಾರು ಸಮಸ್ಯೆಗಳನ್ನು ಆಳವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು , ಸಾಮಾಜಿಕ ವಿದ್ಯಮಾನಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಒಂದು ಸ್ವತಂತ್ರ ಹಾಗೂ ಪ್ರತ್ಯೇಕ ಸಮಾಜ ವಿಜ್ಞಾನದ ಸ್ಥಾಪನೆಯ ಅವಶ್ಯಕತೆಯಿದೆ ಎಂದು ಅವರ ವಾದಿಸಿದರು . ಆಗಸ್ಟ್ ಕಾಯ್ದೆಯವರು ತಾವೇ ಸ್ವತಃ ಅಂತಹ ವಿಜ್ಞಾನವೊಂದನ್ನು ಹುಟ್ಟು ಹಾಕಿ ಅದನ್ನು ಸೋಷಿಯಾಲಜಿ ‘ ಎಂಬ ಹೆಸರಿಸಿದರು .

3 ) ಸಮಾಜಶಾಸ್ತ್ರದ ಅಧ್ಯಯನ ವಿಷಯವನ್ನು ವಿವರಿಸಿ .

ಸಮಾಜಶಾಸ್ತ್ರದ ಎರಡು ಅಧ್ಯಯನ ವಿಷಯಗಳೆಂದರೆ

1 ) ಮಾನವ ಸಮಾಜ ಮತ್ತು ಸಂಸ್ಕೃತಿಯ ಸಮಾಜಶಾಸ್ತ್ರೀಯ ವಿಶ್ಲೇಷಣೆ

2 ) ಸಾಮಾಜಿಕ ಜೀವನದ ಮೂಲಭೂತ ಘಟಕಗಳ ಅಧ್ಯಯನ . ಸಮಾಜಶಾಸ್ತ್ರದ ಅಧ್ಯಯನ ವಿಷಯಗಳ ಬಗ್ಗೆ ಅಲೆಕ್ಸ್ ಇಂಕಲ್ಸ್‌ರವರು “ ವಾಟ್ ಈಜ್ ಸೋಷಿಯಾಲಜಿ ” ಎಂಬ ಕೃತಿಯಲ್ಲಿ ನೀಡಿರುವ ವಿವರಣೆಯ ಆಧಾರದ ಮೇಲೆ ಸಮಾಜಶಾಸ್ತ್ರದ ಮುಖ್ಯವಾದ ಅಧ್ಯಯನದ ವಿಷಯಗಳನ್ನು ಈ ಕೆಳಕಂಡಂತೆ ಪಟ್ಟು ಮಾಡಲಾಗಿದೆ . ಅವುಗಳೆಂದರೆ ,

1 ) ಮಾನವ ಸಮಾಜ ಮತ್ತು ಸಂಸ್ಕೃತಿಯ ಸಮಾಜಶಾಸ್ತ್ರೀಯ ವಿಶ್ಲೇಷಣೆ : ಸಮಾಜಶಾಸ್ತ್ರದ ಮುಖ್ಯದ್ದೇಶವು ಸಮಾಜ ಮತ್ತು ಸಂಸ್ಕೃತಿಗಳ ಬಗ್ಗೆ “ ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಕೂಡಿದ ವಿಶ್ಲೇಷಣೆಯನ್ನು ನೀಡುವುದಾಗಿರುತ್ತದೆ . ಸಮಾಜ ಮತ್ತು ಸಂಸ್ಕೃತಿಗಳ ವಿಕಾಸತ್ಮಕದಿಂದ ರೂಡಿದ ಬೆಳವಣಿಗೆ ಮತ್ತು ಈ ಬೆಳವಣಿಗೆಯ ಪ್ರಕ್ರಿಯೆಯಲ್ಲಿನ ಪ್ರಮುಖವಾದ ಹಂತಗಳ ಕುರಿತಾಗಿ ಅದು ಧರ್ಮ ಮಾಡುವುದು ಸಮಾಜಶಾಸ್ತ್ರವು ಇಂತಹ ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ವೈಜ್ಞಾನಿಕ ವಿಧಾನವನ್ನು ಬಳಸುವುದರ ಅಗತ್ಯದ ಬಗ್ಗೆ ವಿಶೇಷ ಒತ್ತು ನೀಡುವುದು .

2 ) ಸಾಮಾಜಿಕ ಜೀವನದ ಮೂಲಭೂತ ಘಟಕಗಳ ಅಧ್ಯಯನ : ನಮ್ಮ ಸಾಮಾಜಿಕ ಜೀವನದ ಬಹು ಮುಖ್ಯವಾದ ಘಟಕಗಳೆಲ್ಲವೂ ಇಲ್ಲಿ ಅಧ್ಯಯನದ ವಿಷಯಗಳಾಗುತ್ತದೆ . ಉದಾಹರಣೆಗೆ : ಸಾಮಾಜಿಕ ಕ್ರಿಯೆಗಳು ಸಾಮಾಜಿಕ ಸಂಬಂಧಗಳು , ವ್ಯಕ್ತಿಯ ವ್ಯಕ್ತಿತ್ವ , ಎಲ್ಲಾ ಬಗೆಯ ಸಮೂಹಗಳು , ಗ್ರಾಮ , ನಗರ , ಹಾಗೂ ಆದಿವಾಸಿ ಸಮುಧಾಯಗಳು , ಸಂಘಗಳು , ಸಂಘಟನೆಗಳು ಮತ್ತು ಜನಸಂಖ್ಯೆ ಎಲ್ಲವೂ ಸಮಾಜಶಾಸ್ತ್ರ ವ್ಯಾಪ್ತಿಗೆ ಬರುತ್ತದೆ .

3 ) ಮೂಲಭೂತ ಸಾಮಾಜಿಕ ಸಂಸ್ಥೆಗಳ ಅಧ್ಯಯನ : ಮಾನವ ಸಾಮಾಜಿಕ ಜೀವನಕ್ಕೆ ಆಧಾರವಾಗಿರುವ ಪ್ರಾಥಮಿಕ ಸಂಸ್ಥೆಗಳು , ಅವುಗಳ ಬೆಳವಣಿಗೆ ರಚನೆ ಮತ್ತು ಕಾರ್ಯ ಇಲ್ಲಿನ ಕೇಂದ್ರ ವಿಷಯಗಳಾಗುತ್ತವೆ . ಉದಾಹರಣೆ : ಕುಟುಂಬ ಬಂಧುತ್ವ , ಧರ್ಮ , ಆಸ್ತಿ , ಆರ್ಥಿಕ , ರಾಜಕೀಯ , ಶೈಕ್ಷಣಿಕ , ವೈಜ್ಞಾನಿಕ , ಮನೋರಂಜನಾತ್ಮಕ , ಕಾನೂನಾತ್ಮಕ ಹಾಗೂ ಸಾಮಾಜಿಕ ಕಲ್ಯಾಣಾತ್ಮಕ ರೂಪದ ಸಂಸ್ಥೆಗಳು ಈ ವಲಯದಲ್ಲಿ ಬರುತ್ತದೆ .

4 ) ಮೂಲಭೂತ ಶಾಮಾಜಿಕ ಪ್ರಕ್ರಿಯೆಗಳ ಅಧ್ಯಯನ: ನಮ್ಮ ಸಾಮಾಜಿಕ ಜೀವನವನ್ನೂ ನಾನಾ ರೂಪದ ಸಾಮಾಜಿಕ ಪ್ರಕ್ರಿಯೆಗಳು ನಿರ್ವಹಿಸುವ ಮಹತ್ತರವಾದ ಪಾತ್ರವನ್ನು ಕಡೆಗಣಿಸುವಂತಿಲ್ಲ . ಉದಾ : ಸ್ಪರ್ಧೆ , ಸಂಘರ್ಷ , ಹೊಂದಾಣಿಕೆ , ಮುಂತಾದವುಗಳ ಸ್ಪರ್ಧೆಯಲ್ಲಿ

5 ) ವಿಶೇಷಾಧ್ಯಯನಗಳ ಕ್ಷೇತ್ರಗಳ ಅಧ್ಯಯನ ಶೋಧನೆ , ಸಮಾಜಶಾಸ್ತ್ರವು ಭರದಿಂದ ಬೆಳೆಯುತ್ತಿರುವ ವಿಜ್ಞಾನವಾಗಿದ್ದು ಮಾನವನ ಸಾಮಾಜಿಕ ಜೀವನದ ಬೇರೆ ಬೇರೆ ಕ್ಷೇತ್ರಗಳನ್ನು ತನ್ನ ಅಧ್ಯಯನದ ಬೇರೆ ಬೇರೆ ಘಟಕಗಳನ್ನಾಗಿ ಮಾಡಿಕೊಳ್ಳುತ್ತಿದೆ . ಈ ಹಿನ್ನಲೆಯಲ್ಲಿ ಇದು ವಿಶೇಷ ಅಧ್ಯಯನ ಕ್ಷೇತ್ರಗಳ ಸ್ಥಾಪನೆಗೆ ಹಾಗೂ ಬೆಳವಣಿಗೆ ಅವಕಾಶ ಕಲ್ಪಿಸಿಕೊಂಡಿದೆ .

4 ) ಸಮಾಜಶಾಸ್ತ್ರದ ಬೆಳವಣಿಗೆಯಲ್ಲಿ ಕೋಮ್ಟ್ ಹಾಗೂ ಸ್ಪೆನ್ಸ್ ರವರ ಕೊಡುಗೆಗಳನ್ನು ವಿವರಿಸಿ .

ಸಮಾಸಶಾಸ್ತ್ರದ ಬೆಳವಣಿಗೆಯಲ್ಲಿ ‘ ಆಗಸ್ಟ್‌ಕಾಮ್ಟ್’ಯವರ ಪಾತ್ರ ಮಹತ್ವ ಪೂರ್ತಿದಾದುರಾಗಿದೆ . ಸಮಾಜಶಾಸ್ತ್ರದ ಸ್ಥಾಪಕ ತಜ್ಞರಲ್ಲಿ ಒಬ್ಬರಾದ “ ಆಗಸ್ಟ್‌ಕಾಮ್ಟ್ ” ಯವರು “ ಸೋಸಿಯಾಲಜಿ ” ಎಂಬ ಪದವನ್ನು ಪರಿಚಯಿಸಿದವರಲ್ಲಿ ಮೊದಲಿನರಾಗಿದ್ದಾರೆ . ಆದ್ದರಿಂದಲೇ “ ಆಗಸ್ಟ್‌ಕಾಮ್ಟ್ ರವರನ್ನು “ ಸಮಾಜಶಾಸ್ತ್ರದ ” ಪಿತಾಮಹ ಎಂದು ಕರೆಯಲಾಗಿದೆ . ‌

ಆಗಸ್ಟ್‌ಕಾಮ್ಟ್ರವರು ತಮ್ಮ “ ಪೊಸಿಟಿವ್ ಫಿಲಾಸಫಿ ” ಎಂಬ ಕೃತಿಯ ಮೂಲಕ “ ಸೋಸಿಯಾಲಜಿ ” ಎಂಬ ಪದವನ್ನು 1839 ರಲ್ಲಿ ಮೊದಲು ಬಳಸಿ ಸಮಾಜದ ವೈಜ್ಞಾನಿಕ ಅಧ್ಯಯನ ವಾಖ್ಯೆ ಸಮಾಜಶಾಸ್ತ್ರವೆಂದು ಕರೆದಿದ್ದಾರೆ .

ಸಮಾಜದ ಅಧ್ಯಯನದಲ್ಲಿ ವಸ್ತು ನಿಷ್ಠವಾದ ವೈಜ್ಞಾನಿಕ ವಿಧಾನದ ಅವಶ್ಯಕತೆಗೆ ರವರು ಒತ್ತನ್ನು ನೀಡಿದ್ದರು . ‘ ಆಗಸ್ಟ್‌ಕಾಮ್ಟ್’ರವರು ಸಮಾಜಶಾಸ್ತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು ,

ಅವುಗಳು ಯಾವುವೆಂದರೆ 1. ಸಾಮಾಜಿಕ ಸ್ಥಿತಿಶಾಸ್ತ್ರ 2. ಸಾಮಾಜಿಕ ಚಲನಶಾಸ್ತ್ರ

ಕುಟುಂಬ , ಅರ್ಥವ್ಯವಸ್ಥೆ , ಧರ್ಮ ಇವು ಸಾಮಾಜಿಕ ಸ್ಥಿತಿಶಾಸ್ತ್ರಕ್ಕೆ ಸಂಬಂಧಿಸಿದೆ . ಸಾಮಾಜದ ಬದಲಾವಣೆ , ಹಾಗೂ ಸಾಮಾಜಿಕ ಪ್ರಗತಿ ಸಾಮಾಜಿಕ ಚಲನ ಶಾಸ್ತ್ರಕ್ಕೆ ಸಂಬಂಧಿಸಿದೆ .

ಆಗಸ್ಟ್‌ಕಾಮ್ಟೆ ರವರ ಪ್ರಕಾರ ಬೌದ್ಧಿಕ ವಿಕಾಸ ಹಾಗು ಸಾಮಾಜಿಕ ಪ್ರಗತಿಗೆ ನೇರವಾದ ಸಂಬಂಧವಿದ್ದು ಇದಕ್ಕೆ ಅನ್ವಯಿಸುವಂತೆ ಮೂರು ಹಂತಗಳ ಸೂತ್ರವನ್ನು ವಿವರಿಸಿದ್ದಾರೆ . ಅವುಗಳೆಂದರೆ –

1. ಧರ್ಮಶಾಸ್ತ್ರೀಯ ಹಂತ

2 , ಅಮೂರ್ತ ಹಂತ

3. ವೈಜ್ಞಾನಿಕ ಹಂತ

ಕಾಮ್ಟೆಯವರು “ ವಿಜ್ಞಾನಗಳ ವರ್ಗೀಕರಣ ಸಿದ್ದಾಂತವನ್ನು ನೀಡಿ ಸಾಮಾಜಿಕ ವಿಜ್ಞಾನಗಳ ಪರಸ್ಪರ ಸಂಬಂಧ ಹಾಗೂ ಪರಸ್ಪರಾವಲಂಬನೆಯನ್ನು ವಿವರಿಸಿದ್ದಾರೆ . ಕಾಯ್ದೆಯವರು ಸಮಾಜ ಶಾಸ್ತ್ರಕ್ಕೆ ನೀಡಿದ ಮಹತ್ತರ ಕೊಡುಗೆಯೆಂದರೆ

1. ಪೊಸಿಟಿವ್ ಫಿಲಾಸಫಿ

2. ಪೊಸಿಟಿವ್ ಪಾಲಿಟಿಕ್ಸ್ ಎಂಬುವುವು .

ಸಮಾಜಶಾಸ್ತ್ರವನ್ನು ಶ್ರೀಮಂತಗೊಳಿಸುವಲ್ಲಿ ಸ್ಪೆನ್ಸರ್‌ರವರ ಕೊಡುಗೆ ಅಪಾರ ಆದ್ದರಿಂದಲೇ ಇವರನ್ನು “ ಸಮಾಜಶಾಸ್ತ್ರದ ಎರಡನೇ ಪಿತಾಮಹ ” ಎಂದು ಕರೆಯಲಾಗಿದೆ . ಸಮಾಜಶಾಸ್ತ್ರದ ಸ್ಥಾಪಕ ತಜ್ಞರಲ್ಲಿ ಪ್ರಮುಖರಾದವರಾಗಿದ್ದರು . ಹರ್ಬಟ್ ಸ್ಪೆನ್ಸರ್ ಖ್ಯಾತ ವಿಕಾಸವಾದಿಯಾಗಿದ್ದ ಚಾರ್ಲ್ ಡಾರ್ವಿನನ “ ಜೀವ ಸಂಕುಲಗಳ ಉಗಮ ” ಎಂಬ ಕೃತಿಯಿಂದ ಪ್ರಭಾವಿತರಾಗಿದ್ದಾರೆ , ಸಮಾಜವನ್ನು ಒಂದು ಜೀವಿಗೆ ಹೋಲಿಸಿ ಜೈವಿಕ ಸಾದೃಶ್ಯದ ಸಿದ್ದಾಂತವನ್ನು ಮಂಡಿಸಿದ್ದಾರೆ . ಇಡೀ ಸಮಾಜವನ್ನು ಅಧ್ಯಯನ ಘಟಕವಾಗಿ ಪರಿಗಣಿಸಬೇಕೆಂಬುದರ ಬಗ್ಗೆ ಸ್ಪೆನ್ಸರ್ ಒತ್ತನ್ನು ನೀಡಿದ್ದನು . ಈತನ ಪ್ರಕಾರ ಸಮಾಜದ ವಿವಿಧ ಭಾಗಗಳು ಪರಸ್ಪರ ಸಂಬಂಧ ಪರಸ್ಪರಾವಲಂಬನೆಯನ್ನು ಹೊಂದಿದ್ದು ಕೇವಲ ಭಾಗಗಳು ಮಾತ್ರವೇ ಇಡೀ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದೆ . ಇಡೀ ವ್ಯವಸ್ಥೆಯ ಭಾಗಗಳ ಮೇಲೆ ಪ್ರಭಾವ ಬೀರುತ್ತದೆ . ಸಮಾಜದ ವಿವಿಧ ಹಂತಗಳ ಬೆಳವಣಿಗೆಯನ್ನು ವಿವರಿಸುವಲ್ಲಿ ಸ್ಪೆನ್ಸರವರ “ ಹೋಲಿಕೆ ವಿಧಾನ ” ವಿಶೇಷ ಗಮನ ಸೆಳೆಯುತ್ತದೆ .

ಹರ್ಬಲ್ ಸ್ಪೆನ್ಸರವರು ಸಮಾಜಶಾಸ್ತ್ರಕ್ಕೆ1. ಸೋಷಿಯಲ್ ಸ್ಟಾಟಿಕ್ಸ್ 2 . ಫಸ್ಟ್ ಫಿನ್ಸಿಪಲ್ಸ್ 3. ಪ್ರಿನ್ಸಿಪಲ್ಸ್ ಆಫ್ ಎಥಿಕ್ಸ್ 4. ಫಿಪಲ್ಸ್ ಆಫ್ ಸೋಸಿಯಾಲಜಿ 5. ವಿದ್ಯುಮ್ಯಾನ್ ವರ್ಸಸ್‌ಸ್ಟೇಟ್ ಹಾಗೂ 6. ದಿ ಸ್ಟಡಿ ಆಫ್ ಸೋಷಿಯಾಲಜಿ , ಕೃತಿಗಳ ಮೂಲಕ ಅಪಾರ ಕೊಡುಗೆಯನ್ನು ನೀಡಿದ್ದಾರೆ .

5 ) ಸಮಾಜಶಾಸ್ತ್ರದ ಉಪಯೋಗಗಳನ್ನು ಬರೆಯಿರಿ .

ಸಮಾಜಶಾಸ್ತ್ರವು ಕಿರಿಯ ವಿಜ್ಞಾನವಾಗಿದ್ದರೂ ಅದರ ಉಪಯೋಗಗಳನ್ನು ಸಾರ್ವತ್ರಿಕವಾಗಿ ಗುರುತಿಸಲಾಗಿದೆ . ಸಮಾಜದಲ್ಲಿ ನಾವು ಏನಾಗಬೇಕೋ ಹಾಗಾಗುವುದು ಹೇಗೆ ? ಎಂಬುದನ್ನು ತಿಳಿಸಿಕೊಡುವುದೇ “ ಪ್ರೋ ॥ ಗಿಡ್ಡಂನ್ಸ್ ಹೇಳಿದ್ದಾರೆ . ಇಂದಿನ ಆಧುನಿಕ ಸಂಕೀರ್ಣ ಸಮಾಜಕ್ಕೆ ಸಮಾಜಶಾಸ್ತ್ರ ಅಧ್ಯಯನವು ಹೆಚ್ಚಿನ ಪ್ರಾಯೋಗಿಕ ಮಹತ್ವವಿದೆ . ಸಮಾಜಶಾಸ್ತ್ರ ವ್ಯಕ್ತಿ ಹಾಗೂ ಸಮಾಜಕ್ಕೆರಡಕ್ಕೂ ಉಪಯೋಗಕಾರಿಯಾಗಿದ್ದು ಅದರ ಉಪಯೋಗಗಳು ಈ ಕೆಳಗಿನಂತಿವೆ . ಅವುಗಳೆಂದರೆ

1 ) ವ್ಯಕ್ತಿತ್ವದ ಬೆಳವಣಿಗೆ : ಸಮಾಜಶಾಸ್ತ್ರವು ಸಮಾಜದ ವೈಜ್ಞಾನಿಕವಾದ ಹಾಗೂ ಸಮಗ್ರವಾದ ಜ್ಞಾನವನ್ನು ನೀಡುತ್ತದೆ ಸಮಾಜದ ರಚನೆ , ಬೆಳವಣಿಗೆ , ಬದಲಾವಣೆ , ಸಮಸ್ಯೆಗಳ ವ್ಯಕ್ತಿಯ ಹಕ್ಕು ಬಾಧ್ಯತೆಗಳು ಇತ್ಯಾದಿ ಅಂಶಗಳ ವೈಜ್ಞಾನಿಕ ತಿಳುವಳಿಕೆಯು ಮಾನವನನ್ನು ಸತ್ವಯುತವಾದ ಸದಸ್ಯನನ್ನಾಗಿ ಮಾಡುವುದರ ಜೊತೆಗೆ ಸಮರ್ಪಕ ರೀತಿಯಲ್ಲಿ ಅವನ ವ್ಯಕ್ತಿತ್ವ ಬೆಳವಣಿಗೆಗೆ ಎಡೆ ಮಾಡಿಕೊಡುತ್ತದೆ .

2 ) ಮನೋಭಾವನೆಗಳ ಬದಲಾವಣೆ : ` ನಮ್ಮ ಸಮಾಜ , ಧರ್ಮ , ಸಂಪ್ರದಾಯಗಳು , ನೀತಿ ನಿಯಮಗಳು , ಸಂಸ್ಥೆಗಳು , ಮೌಲ್ಯಗಳು , ಆದರ್ಶಗಳು ಇತ್ಯಾದಿಗಳ ಬಗೆಗಿನ ವೈಚಾರಿಕ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುವಲ್ಲಿ ಸಮಾಜಶಾಸ್ತ್ರ ಉಪಯುಕ್ತವಾಗಿದೆ .

3 ) ಸಮಾಜಶಾಸ್ತ್ರವು ಸಾಮಾಜಿಕ ಜಗತ್ತಿನೆಡೆ ವಿಮರ್ಶಾತ್ಮಕವಾದ ದೃಷ್ಟಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ .

4 ) ಸಾಮಾಜಿಕ ಸಮಸ್ಯೆಗಳ ಪರಿಹಾರ : ಸಮಾಜಶಾಸ್ತ್ರವು ಸಾಮಾಜಿಕ ಸಮಸ್ಯೆಗಳಾದ ಜಾತಿಯತೆ , ನಿರುದ್ಯೋಗ , ಬಡತನ , ಬಾಲಪರಾದ ಮುಂತಾದ ವಸ್ತುನಿಷ್ಟ ಅಧ್ಯಯನಕ್ಕೆ ಸಹಾಯಕವಾಗಿದೆ . ಆದ್ದರಿಂದಲೇ ಆಗಸ್ಟ್ ಕಾಯ್ದೆ ಸಮಾಜಶಾಸ್ತ್ರವನ್ನು ಸಾಮಾಜಿಕ ಸುಧಾರಣೆಯ ವಾಹನವೆಂದು ಕರೆದಿದ್ದಾನೆ .

5 ) ಸಾಮಾಜಿಕ ನಿಯೋಜನೆ ಮತ್ತು ಸಾಮಾಜಿಕ ಭೀತಿ ನಿರೂಪಣೆ : ಕುಟುಂಬ , ಜನಸಂಖ್ಯೆ ನಿಯಂತ್ರಣ , ಪರಿಸರ ಮಾಲಿನ್ಯ ದುರ್ಬಲ ವರ್ಗಗಳ ಮೀಸಲಾತಿ ಮುಂತಾದ ಸಾಮಾಜಿಕ ನಿಯೋಜನೆ ಹಾಗೂ ಸಮಾಜ ನೀತಿಯನ್ನು ರೂಪಿಸುವಲ್ಲಿ ಸಮಾಜಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ .

6 ) ಹಿಂದುಳಿದ ಹಾಗೂ ದುರ್ಬಲ ವರ್ಗಗಳ ಏಳಿಗೆ : ಆರ್ಥಿಕ , ಸಾಮಾಜಿಕ , ರಾಜಕೀಯ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಅನೇಕ ವರ್ಗಗಳಿವೆ . ಉದಾಹರಣೆಗೆ : ಪರಿಶಿಷ್ಟ ಜಾತಿ , ವರ್ಗ , ಸ್ತ್ರೀ ಹಾಗೂ ಇನ್ನಿತರ ದುರ್ಬಲ ವರ್ಗಗಳು ಶತಮಾನಗಳಿಂದ ಹಲವು ರೀತಿಯ ಶೋಷಣೆಗೆ ಒಳಗಾಗಿವೆ . ಇದನ್ನು ಸಮನಾಗಿಸಲು ಹಾಗೂ ಅವರ ಕಲ್ಯಾಣವನ್ನು ಸಾಧಿಸಲು ಅವರಿಗೆ ಸರ್ಕಾರದ ಸಹಾಯದ ಅವಶ್ಯವಿದೆ .

7 ) ಬೋಧನೆ ವಿಷಯವಾಗಿ ಸಮಾಜಶಾಸ್ತ್ರ ‘ IAS , KAS , IFS , IPS ಪರೀಕ್ಷಾರ್ಥಿಗಳ ಅಧ್ಯಯನ ವಿಷಯಗಳಲ್ಲಿ ಸಮಾಜಶಾಸ್ತ್ರವನ್ನು ಸೇರ್ಪಡೆ ಮಾಡಲಾಗಿದೆ . ಸಮಾಜಶಾಸ್ತ್ರದಲ್ಲಿ ವಿಶೇಷ ಶಿಕ್ಷಣ ಪಡೆದವರಿಗೆ ಶಿಕ್ಷಣ , ಸಮಾಜಕಲ್ಯಾಣ , ಕುಟುಂಬ ಕಲ್ಯಾಣ , ಸಾರ್ವಜನಿಕ ಆಡಳಿತ ಇಲಾಖೆ , ಸ್ತ್ರೀ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಇನ್ನು ಮುಂತಾದ ಕ್ಷೇತ್ರದಲ್ಲಿ ಹಲವಾರು ಬಗೆಯ ಉದ್ಯೋಗವಕಾಶಗಳು ಲಭ್ಯವಿದೆ .

8 ) ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಮಾಜಶಾಸ್ತ್ರದ ಪಾತ್ರ : ದೇಶಗಳ ಆರ್ಥಿಕ ಜೀವನವನ್ನು ವಿಶ್ಲೇಷಿಸುವಲ್ಲಿ ಸಮಾಜಶಾಸ್ತ್ರೀಯ ಮಾಹಿತಿಗಳ ಮಹತ್ವವನ್ನು ಅರ್ಥಶಾಸ್ತ್ರಜ್ಞರು ಮನಕಂಡಿದ್ದಾರೆ . ಆದ್ದರಿಂದಲೇ ಸಮಾಜಶಾಸ್ತ್ರಜ್ಞನಿಗೆ ಅರ್ಥಶಾಸ್ತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು . ಇವೆಲ್ಲ ಆಧುನಿಕ ಸನ್ನಿವೇಶಗಳು ಹಾಗೂ ಬೆಳವಣಿಗೆಗಳ ಬಗ್ಗೆ ಜ್ಞಾನವನ್ನು ಸಮಾಜಶಾಸ್ತ್ರವು ನೀಡುತ್ತದೆ , ಇದು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ .

6 ) ವೈಜ್ಞಾನಿಕ ವಿಧಾನದ ವ್ಯಾಖ್ಯೆ ನೀಡಿ ಅದರ ಹಂತಗಳನ್ನು ಚರ್ಚಿಸಿ

ಜಗತ್ತಿನ ಬಗ್ಗೆ ನಮ್ಮ ಎಲ್ಲಾ ಬೌದ್ಧಿಕ ಚಿಂತನೆ ಹಾಗೂ ಅವಲೋಕನವನ್ನು ಅವಲಂಬಿಸಿರುವ ಹಂತವನ್ನು ವೈಜ್ಞಾನಿಕ ಹಂತವೆನ್ನುವರು . ಹೆಚ್ಚು ಹೆಚ್ಚು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವ ಹಂತವನ್ನು ವೈಜ್ಞಾನಿಕ ಹಂತವೆನ್ನುವರು .

ವೈಜ್ಞಾನಿಕ ವಿಧಾನದ ಎರಡು ಹಂತಗಳೆಂದರೆ

1 ) ಅವಲೋಕನೆಯ ಆಧಾರದಿಂದ ಆರಂಭಗೊಂಡ ಪೂರ್ವ ಸಿದ್ಧಾಂತದ ಹಂತ

2 ) ಇತರ ಅಧ್ಯಯನದ ವಿಧಾನಗಳ ಹಂತ ಸಂಖ್ಯಾಶಾಸ್ತ್ರ ವಿಧಾನ , ತುಲಾನಾತ್ಮಕ ವಿಧಾನ , ಕ್ರಿಯಾತ್ಮಕ ವಿಧಾನ , ( ಏಕ ಷಾಯಕ ಅಧ್ಯಯನದ ಹಂತ )

7 ) ಪಿಯರ್‌ ಬೋರ್‌ಡಿಯೋ , ಜುರ್ಗಿನ್ ಹೆಬರ್‌ಮಾಸ್ , ಜಾಕ್ಯೂಸ್ ಡೆರಿಡಾರವರ ಸಮಾಜಶಾಸ್ತ್ರೀಯ ದೃಷ್ಟಿಕೋನವನ್ನು ವಿವರಿಸಿ .

ಪಿಯರ್ ಬೋರ್‌ಡಿಯೋ , ಜುರ್ಗಿನ್‌ಹೆಬರ್‌ಮಾಸ್ , ಜಾಕ್ಯೂಸ್ ಡೇರೀಡರವರು ಸಮಾಜಶಾಸ್ತ್ರಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ , ಈ ಸಮಾಜಶಾಸ್ತ್ರಜ್ಞರ ದೃಷ್ಟಿಕೋನಗಳು ಇಂತಿವೆ .

ಪಿಯರ್‌ಬೋರ್‌ಸಿಯಾ : ಇವರ ಪ್ರಕಾರ ಸಮಾಜಶಾಸ್ತ್ರವೂ ಸಮಾಜದ ಸಂಸ್ಕೃತಿಯಲ್ಲಿ ಅಡಕವಾಗಿರುವ ಆಂತರಿಕ ಅಂಶಗಳನ್ನು ತಿಳಿಸುವ ಪ್ರಯತ್ನವಾಗಿದೆ . ಬೋರ್‌ಡಿಯಾ ನವಮಾರ್ಕ್ಸ್ ವಾದ ಪ್ರತಿಪಾದಕವಾಗಿದ್ದ ಕಾರಣದಿಂದ ಶ್ರಮಿಕ ವರ್ಗದ ಸಂಸ್ಕೃತಿಗಳ ಬಗ್ಗೆ ಅತೀವವಾದ ಆಸಕ್ತಿಯನ್ನು ವ್ಯಕ್ತ ಪಡಿಸಿದ್ದಾರೆ , ಇಂತಹ ಶ್ರಮಿಕ ವರ್ಗಗಳ ಸಂಸ್ಕೃತಿಯನ್ನು “ ಪ್ರತಿರೋಧಕ ಸಂಸ್ಕೃತಿ ” ಎಂದು ಕರೆಯಲಾಗಿದೆ . 66 ಸಮಾಜಶಾಸ್ತ್ರ ಯಾವ ರೀತಿ ಆಕಾರ ಸಂರಚನೆ ಹೊಂದಿರಬೇಕು ? ಇಂತಹ ಬೋರಡಿಯೋ ತಮ್ಮ ತಮ್ಮ ಗ್ರಂಥವಾದ “ ದಿ ಲಾಜಿಕ್ ಆಫ್ ಪ್ರಾಕ್ಟಿಸ್ ಹಾಗೂ ಕ್ರಾಫ್ಟ್ ಆಫ್ ಸೋಶಿಯಾಲಜಿ ” ಎಂಬ ಗ್ರಂಥದಲ್ಲಿ ಸಾಮಾಜಿಕ ಜೀವನಕ್ರಮಗಳನ್ನು ವ್ಯಕ್ತಿನಿಷ್ಟತೆ ಹಿನ್ನಲೆಯಲ್ಲಿ ಅವಲೋಕಿಸಿದ್ದಾರೆ . ಸಮಾಜಶಾಸ್ತ್ರ ಅಧ್ಯಯನ ರಚನಾತ್ಮಕ ವಿಧಾನವಸನ್ನು ಅಳವಡಿಸಿಕೊಳ್ಳಬೇಕೆಂದು ವಾದಿಸಿದರೆ ದೈನಂದಿನ ಜೀವನದ ಪ್ರತಿಯೊಂದು ಅನಿವಾರ್ಯತೆ ಮತ್ತು ಎಲ್ಲಾ ಕ್ರಿಯಾ ಚಟುವಟಿಕೆಗಳನ್ನು ಸಹಜವಾಗಿ ಸ್ವೀಕರಿಸಿಕೊಂಡು “ ಸಮಾಜ ” ವಿಶ್ಲೇಷಿಸಬೇಕೆಂದು ತಿಳಿಸಿದ್ದಾರೆ .

ಜುರ್ಬಿನ್ ಹೆಬರ್ ಮಾ : ಹೆಬರ್‌ಮಾಸ್ ಧನಾತ್ಮಕ ಚಿಂತನೆಯ ಪ್ರಭಾವದಿಂದ ನೈಸರ್ಗಿಕ ಮತ್ತು ಸಾಮಾಜಿಕ ಪ್ರಪಂಚವನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ . ಈ ಸಿದ್ಧಾಂತವು ಜನರ ಮನೋಭಾವನೆ ಮತ್ತು ದೃಷ್ಟಿಕೋನವನ್ನು ಸೀಮಿತಗೊಳಿಸಿದೆ ಎಂದು ಟೀಕಿಸಿದ್ದಾರೆ . ಬಂಡವಾಳಶಾಹಿ ಸಮಾಜಗಳನ್ನು ತೀವ್ರವಾಗಿ ಟೀಕಿಸಿದ ಇವರು ಪರಿವರ್ತನೆ ಸಹಜ ಮತ್ತು ನಿರಂತರವಾದ ಪ್ರಕ್ರಿಯೆ ಈ ವ್ಯವಸ್ಥೆ ತನ್ನ ಅಸ್ತಿತ್ವಕ್ಕಾಗಿ ನಿರ್ಮಿಸಿಕೊಂಡಿರುವ ನೈತಿಕ ಮೌಲ್ಯಗಳ ವಿನಾಶದಿಂದ ಬಂಡವಾಳಶಾಹಿ ವ್ಯವಸ್ಥೆಯು ಕುಸಿಯುತ್ತಿದೆ , ಈ ಆರ್ಥಿಕ ಪ್ರಗತಿ ಸಾಮಾಜಿಕ ಜೀವನದ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡಿದೆ . ಆರ್ಥಿಕ ಪ್ರಗತಿ ಕುಂಠಿತವಾದಂತೆ ಪ್ರಸಕ್ತ ಸಮಾಜದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ನಾಶವಾಗುತ್ತದೆ . ಎಂಬ ವಾದವನ್ನು ಮಂಡಿಸುತ್ತಾರೆ .

ಜೆಕ್ಯೂಸ್‌ ಡೆರೀಡ : ಡೇರೀಡ ಸಮಾಜಶಾಸ್ತ್ರದ ಚಿಂತನೆಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ . ಅವರ ಚಿಂತನೆಗಳು ಪ್ರಾಥಮಿಕ ಭಾಷಾಶಾಸ್ತ್ರದ ಆಧಾರವಾಗಿ ವಿಕಾಸಗೊಂಡಿದೆ , ನಿರಚನೆ ಎಂಬ ಜನಪ್ರಿಯವಾದ ಆಧುನಿಕ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ , ಸಮಾಜಶಾಸ್ತ್ರೀಯ ಸಾಹಿತ್ಯ ಮತ್ತು ಚಿಂತನೆಯನ್ನು ನಿರಚನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ . ಡೆಡ ಪ್ರಕಾರ ಗ್ರಂಥಗಳ ಮೂಲಕ ವಿಶ್ಲೇಷಿಸುವ ಕ್ರಮಗಳ ಯಾವಾಗಲೂ ಸತ್ಯವಾಗಿರುವುದಿಲ್ಲ . ಅದೊಂದು ವಿಷಯಗಳ ಸುಳಿಯಲ್ಲಿ ಸಿಲುಕಿದ ಸತ್ಯಸಂಗತಿಯನ್ನು ಮರೆಮಾಚುತ್ತದೆ . ನಿರಚನೆ ಪ್ರಕಾರ ಗ್ರಂಥಗಳಲ್ಲಿ ಕೆಲವೊಂದು ಅಂಶಗಳನ್ನು ಆಂತರಿಕವಾಗಿ ಸೇರಿಕೊಳ್ಳುತ್ತಾ ಮತ್ತು ಇನ್ನಿತರ ಅಂಶಗಳನ್ನು ಹೊರಗೆ ಇಡುವ ಪ್ರಯತ್ನವನ್ನು ಮಾಡುತ್ತದೆ . ಇದರ ಮೂಲಕ ಜನಸಮೂಹ ಯಾವುದು ನಿರ್ಣಾಯಕ ಮತ್ತು ನಿರ್ಣಾಯಕವಲ್ಲ ಎಂಬ ಭಾವನೆ ಬೆಳೆಯುತ್ತದೆ . ಸಮಾಜಶಾಸ್ತ್ರದ ಗ್ರಂಥದಲ್ಲಿನ ಆಂತರೀಕ ಹಾಗೂ ಬಾಹ್ಯ ಅಂಶಗಳ ನಡುವಿನ ವ್ಯತ್ಯಾಸವನ್ನು ಸ್ವೀಕರಿಸುವಂತೆ ಮಾಡುವ ಉದ್ದೇಶಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಈ ವಾದದ ಉದ್ದೇಶವಾಗಿದೆ .

FAQ

1 ) ‘ ಸೋಶಿಯಾಲಜಿ ‘ ಎಂಬ ಪದವನ್ನು ಯಾವ ವರ್ಷದಲ್ಲಿ ಪರಿಚಯಿಸಲಾಯಿತು ?

ಕ್ರಿ.ಶ. 1839 ರಲ್ಲಿ ‘ ಸೋಶಿಯಾಲಜಿ ‘ ಎಂಬ ಪದವನ್ನು ಪರಿಚಯಿಸಲಾಯಿತು .

2 ) ‘ ಸಮಾಜಶಾಸ್ತ್ರದ ಸಂಸ್ಥಾಪಕ ‘ ಎಂದು ಯಾರನ್ನು ಕರೆಯಲಾಗಿದೆ ?

‘ ಅಗಸ್ಟ್ ಕಾಮ್ಟೆ ‘ ಯನ್ನು ಸಮಾಜಶಾಸ್ತ್ರದ ಪಿತಾಮಹ ಅಥವಾ ‘ ಸಂಸ್ಥಾಪಕ ‘ ಎಂದು ಕರೆಯಲಾಗಿದೆ .

ಇತರೆ ವಿಷಯಗಳು :

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

All Subjects Notes

All Notes App

Leave a Reply

Your email address will not be published. Required fields are marked *

rtgh