ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-7 ಸಾಮಾಜಿಕ ಸಂಶೋಧನೆ ನೋಟ್ಸ್, 1st Puc Sociology 7th Chapter Notes in Kannada Question Answer Mcq Pdf Download, Kseeb Solution For Class 11 Sociology Chapter 7 Notes Social Research Notes in Kannada Samajika Samshodhane Sociology Notes in Kannada
ಅಧ್ಯಾಯ-7 ಸಾಮಾಜಿಕ ಸಂಶೋಧನೆ
1st Puc Sociology 7th Chapter Question Answer in Kannada
I. 1 . ಒಂದು ಅಂಕದ ಪ್ರಶ್ನೆಗಳು : ( ಒಂದು ವಾಕ್ಯದಲ್ಲಿ ಉತ್ತರಿಸಿ )
1. ವೀಕ್ಷಣೆ / ಅವಲೋಕನ ಎಂದರೇನು ?
ಅವಲೋಕನ ಎಂದರೆ ಉದ್ದೇಶವಿರಿಸಿಕೊಂಡು ವೀಕ್ಷಣೆ ಮಾಡುವುದು ಎಂದರ್ಥ ಪಿ . ವಿ . ಯಂಗ್‌ರವರು – ಅವಲೋಕನ ಎಂದರೆ ವ್ಯವಸ್ಥಿತ ಉದ್ದೇಶ ಪೂರಕ ಅಧ್ಯಯನವನ್ನು ಘಟನೆಗಳು ಜರುಗಿದಂತೆ ವೀಕ್ಷಿಸುವುದು , ಸಾಮಾಜಿಕ ಪರಿಕಲ್ಪನೆ ಸಂಸ್ಕೃತಿಯ ಸ್ವರೂಪ ಮತ್ತು ಮಾನವನ ವರ್ತನೆಗಳ ಸಂಕೀರ್ಣತೆಯ ಪರಸ್ಪರ ಸಂಭಂಧಗಳ ಅಂಶಗಳನ್ನು ಉದ್ದೇಶಪೂರ್ವಕವಾಗಿ ವೀಕ್ಷಿಸುವುದು . ‘ ಎಂಬುದಾಗಿ ಹೇಳಿದ್ದಾರೆ .
2. ಸಾಮಾಜಿಕ ಸಂಶೋಧನೆ ಎಂದರೇನು ?
ಸಹವರ್ತಿಗಳಾಗಿ ಜೀವಿಸುವ ಜನರ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಪರಿಶೀಲನೆಗೆ ಸಾಮಾಜಿಕ ಸಂಶೋಧನೆ ಎನ್ನುವರು .
3. ಪ್ರಶ್ನಾವಳಿ ಎಂದರೇನು ?
ಮುದ್ರಿತ ಪ್ರಶ್ನೆಗಳಿಗೆ ಉತ್ತರಗಳನ್ನು ತುಂಬಿ ಮಾಹಿತಿ ಸಂಗ್ರಹಿಸುವ ವಿಧಾನಕ್ಕೆ ಪ್ರಶ್ನಾವಳಿ ಎನ್ನುವರು .
4. ಪ್ರಾಥಮಿಕ ದತ್ತಾಂಶ ಎಂದರೇನು ?
ನಿರ್ಧಿಷ್ಟ ಸಮಸ್ಯೆಯ ಪರಿಹಾರಕ್ಕೆ ನಿರ್ಧಿಷ್ಟ ಉದ್ದೇಶದಿಂದ ನಿರ್ಧಿಷ್ಟವಾಗಿ ಸಂಶೋಧನೆಯ ಮೂಲಕ ಸಂಗ್ರಹಿಸುವ ದತ್ತಾಂಶಗಳಿಗೆ ಪ್ರಾಥಮಿಕ ದತ್ತಾಂಶಗಳು ಎನ್ನುವರು . ಸಂಶೋಧನೆ ಪ್ರಥಮ ಬಾರಿಗೆ ಸಂಗ್ರಹಿಸುವ ದತ್ತಾಂಶವನ್ನು ಪ್ರಾಥಮಿಕ ದತ್ತಾಂಶ ‘ ಎನ್ನುವರು .
5. ಮಾಧ್ಯಮಿಕ ದತ್ತಾಂಶ ಎಂದರೇನು ?
ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸುವ ದತ್ತಾಂಶವನ್ನು ಮಾಧ್ಯಮಿಕ ದತ್ತಾಂಶ ಎನ್ನುವರು . ಅಂದರೆ ಬೇರೊಂದು ಉದ್ದೇಶಕ್ಕಾಗಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶಗಳಿಗೆ ಮಾಧ್ಯಮಿಕ ದತ್ತಾಂಶ ಎನ್ನುವರು.
6. ಸಾಮಾಜಿಕ ಸಂಶೋಧನೆ ಒಂದು ವ್ಯಾಖ್ಯೆ ನೀಡಿ .
ಪಿ . ವಿ . ಯಂಗ್‌ರವರು – ‘ ಕ್ರಮಬದ್ಧವಾದ ವಿಧಾನಗಳ ಮೂಲಕ ಹೊಸ ಘಟನೆಗಳನ್ನು ಕಂಡುಹಿಡಿಯುವುದು ಅಥವಾ ಆ ಘಟನೆಗಳನ್ನು ಪರಿಶೀಲಿಸಿ ಅದರ ಪರಿಣಾಮ ಪರಸ್ಪರ ಸಂಬಂಧಗಳ ಸಾಮಾನ್ಯ ವಿವರಣೆ ಮತ್ತು ಪ್ರಕಟಿತ ನಿಯಮಗಳನ್ನು ನಿಯಂತ್ರಿಸುವುದನ್ನು ಸಾಮಾಜಿಕ ಸಂಶೋಧನೆ ‘ ಎನ್ನಬಹುದು ಎಂದಿದ್ದಾರೆ .
7. ಸಂದರ್ಶನ ಮತ್ತು ಪ್ರಶ್ನಾವಳಿಗಳ ನಡುವಿನ ಒಂದು ವ್ಯತ್ಯಾಸವನ್ನು ತಿಳಿಸಿ .
ಸಂದರ್ಶನ ಮತ್ತು ಪ್ರಶ್ನಾವಳಿಗಳ ನಡುವಿನ ಒಂದು ವ್ಯತ್ಯಾಸವೆಂದರೆ – ಸಂದರ್ಶನದಲ್ಲಿ ಉತ್ತರಿಸುವ ವ್ಯಕ್ತಿ ಸಂದರ್ಶಕರು ಕೇಳುವ ಪ್ರಶ್ನೆಗಳಿಗೆ ಮಾತ್ರ ಅವರಿಗೆ ಸಮಾಧಾನವಾಗುವ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ . ವ್ಯಕ್ತಿಗತ ಅಭಿಪ್ರಾಯಗಳು ಪ್ರಯೋಜನಕ್ಕೆ ಬರಲಾರವು . ಆದರೆ ಪ್ರಶ್ನಾವಳಿಗಳಲ್ಲಿ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕೊಡುವಾಗ ತನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ .
II . ಎರಡು ಅಂಕದ ಪ್ರಶ್ನೆಗಳು : ( 2-3 ವಾಕ್ಯಗಳಲ್ಲಿ ಉತ್ತರಿಸಿ )
1. ಪ್ರಾಥಮಿಕ ದತ್ತಾಂಶ ಹಾಗೂ ಮಾಧ್ಯಮಿಕ ದತ್ತಾಂಶಗಳ ನಡುವಿನ ಎರಡು ವ್ಯತ್ಯಾಸಗಳನ್ನು ತಿಳಿಸಿ.
ಪ್ರಾಥಮಿಕ ದತ್ತಾಂಶ ಹಾಗೂ ಮಾಧ್ಯಮಿಕ ದತ್ತಾಂಶಗಳ ನಡುವಿನ ಎರಡು ವ್ಯತ್ಯಾಸಗಳೆಂದರೆ
ಪ್ರಾಥಮಿಕ ದತ್ತಾಂಶ :
1. ಸಂಶೋಧನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಶೋಧಕನು ಪ್ರಥಮ ಬಾರಿಗೆ ಸಂಗ್ರಹಿಸುವುದು .
2. ಪ್ರಾಥಮಿಕ ದತ್ತಾಂಶವು ಮೂಲ ದತ್ತಾಂಶವಾಗಿದ್ದು ಸಂಶೋಧಕನು ಕ್ಷೇತ್ರದಿಂದ ಸಂಗ್ರಹಿಸುತ್ತಾನೆ .
ಮಾಧ್ಯಮಿಕ ದತ್ತಾಂಶ :
1. ಸಂಶೋಧಕನು ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸುವನು .
2. ಮಾಧ್ಯಮಿಕ ದತ್ತಾಂಶವು ಹಲವಾರು ವಿಧಾನ – ಸಾಧನಗಳನ್ನು ಅನುಸರಿಸಿ ಸಂಗ್ರಹಿಸಲಾಗುತ್ತದೆ .
2. ಅವಲೋಕನ / ವೀಕ್ಷಣೆಯ ಎರಡು ವಿಧಗಳನ್ನು ಕುರಿತು ಬರೆಯಿರಿ ,
ಅವಲೋಕನದ ಎರಡು ವಿಧಗಳೆಂದರೆ
1 ) ನಿಯಂತ್ರಿತ ಮತ್ತು ಅನಿಯಂತ್ರಿತ ಅವಲೋಕನ : ನಿಯಂತ್ರಿತ ಅವಲೋಕನವು ಪ್ರಯೋಗಾಲಯದಲ್ಲಿ ಜರುಗುವುದು . ಇಲ್ಲಿ ವೀಕ್ಷಕನು ಕೆಲವು ಅಧ್ಯಯನದ ಕೆಲವು ಅಂಶಗಳನ್ನು ನಿಯಂತ್ರಣದಲ್ಲಿಡುವನು . ಅನಿಯಂತ್ರಿತ ಅವಲೋಕನವೆಂದರೆ ಸಹಕಾರವಿಲ್ಲದ ಅವಲೋಕನ . ಇದು ಸಹಜ ಪರಿಸರದಲ್ಲಿರುವುದನ್ನು ನಿಯಂತ್ರಣಗಳಿಲ್ಲದೆ ಅವಲೋಕಿಸುವುದು .
2 ) ಸಹಭಾಗಿ ಅವಲೋಕನ ಮತ್ತು ಅನಹಭಾಗಿ ಅವಲೋಕನ: ಸಹಭಾಗಿ ಅವಲೋಕನದಲ್ಲಿ ಸಂಶೋಧಕನು ಸಂಶೋಧನ ಅಧ್ಯಯನದ ಸಾಮಾಜಿಕ ಪರಿಕಲ್ಪನೆಯಲ್ಲಿ ಭಾಗವಹಿಸುವನು . ಪಾಲ್ಗೊಳ್ಳದ ಅವಲೋಕನದಲ್ಲಿ ಸಂಶೋಧಕನು ಏಕಾಂಗಿಯಾಗಿ ಪ್ರತ್ಯೇಕವಾಗಿದ್ದುಕೊಂಡು ವೀಕ್ಷಿಸುವನು .
3. ಎರಡು ವಿಧದ ಸಂದರ್ಶನಗಳನ್ನು ತಿಳಿಸಿರಿ .
ಎರಡು ವಿಧದ ಸಂದರ್ಶನಗಳೆಂದರೆ
1 ) ರಚನಾತ್ಮಕ ಸಂದರ್ಶನ .
2 ) ಮೌಖಿಕ ಅಥವಾ ಅನೌಪಚಾರಿಕ ಸಂದರ್ಶನ .
4 . ಪ್ರಾಥಮಿಕ ದತ್ತಾಂಶದ ಎರಡು ಮೂಲಗಳನ್ನು ತಿಳಿಸಿರಿ .
ಪ್ರಾಥಮಿಕ ದತ್ತಾಂಶದ ಎರಡು ಮೂಲಗಳೆಂದರೆ
1) ಅವಲೋಕನ .
2) ಸಂದರ್ಶನ .
5. ಮಾಧ್ಯಮಿಕ ದತ್ತಾಂಶಗಳ ಎರಡು ವಿಧಗಳನ್ನು ತಿಳಿಸಿರಿ .
1 ) ವೈಯಕ್ತಿಕ ದಾಖಲೆಗಳು ,
2 ) ಸಾರ್ವಜನಿಕ ದಾಖಲೆಗಳು ,
6. ‘ ವಸ್ತು ನಿಷ್ಟತೆ ‘ ಎಂದರೇನು ?
ವೀಕ್ಷಕನ ವೈಯಕ್ತಿಕ ಅಭಿಪ್ರಾಯ , ಪೂರ್ವಗ್ರಹ ಪೀಡಿತ ದೃಷ್ಟಿ , ಅನಿಸಿಕೆಗಳು ಮುಂತಾದ ಆಮಿಷಗಳಿಗೆ ಆಸ್ಪದ ಕೊಡದೆ ಮಾಡುವ ಅವಲೋಕನವನ್ನು ವಸ್ತು ನಿಷ್ಪತೆ ‘ ಎನ್ನುವರು .
7. ಅವಲೋಕನದ ಎರಡು ಅನಾನುಕೂಲತೆಗಳನ್ನು ತಿಳಿಸಿರಿ .
ಅವಲೋಕನದ ಎರಡು ಅನಾನುಕೂಲತೆಗಳೆಂದರೆ-
1) ಈ ವಿಧಾನದಿಂದ ( ಅವಲೋಕನದಿಂದ ) ಸಂಗ್ರಹಿಸಿದ ಮಾಹಿತಿಯನ್ನು ಕ್ರೋಢೀಕರಿಸಲು ಸಾಧ್ಯವಿಲ್ಲ .
2 ) ಅವಲೋಕನ ವಿಧಾನದಿಂದ ಖಾಸಗಿ ನಡವಳಿಕೆಯನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ .
8. ಪ್ರಶ್ನಾವಳಿಯ ಎರಡು ಅನುಕೂಲತೆಗಳನ್ನು ಬರೆಯಿರಿ ,
1 ) ಪ್ರಶ್ನಾವಳಿಯಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುವ ವ್ಯಕ್ತಿಗಳಿಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ .
2 ) ಪ್ರಶ್ನಾವಳಿಯ ಪ್ರಶ್ನೆಗಳಿಗೆ ಉತ್ತರಿಸುವವರ ಮೇಲೆ ಭಾವನಾತ್ಮಕ ಒತ್ತಡ ಹೇರುವುದಿಲ್ಲ . ಮುಕ್ತತೆ ಮತ್ತು ಸಮಯದ ಲಭ್ಯತೆಯ ಪ್ರಶ್ನೆಗಳಿಗೆ ಉತ್ತರಿಸುವವರಿಗೆ ದೊರೆಯುತ್ತದೆ . ಇವು ಪ್ರಶ್ನಾವಳಿಯಿಂದಾಗುವ ಅನುಕೂಲಗಳಾಗಿವೆ .
1 Puc Sociology Notes in Kannada 7 Chapter
III , ಐದು ಅಂಕದ ಪ್ರಶ್ನೆಗಳು : ( 10-15 ವಾಕ್ಯಗಳಲ್ಲಿ ಉತ್ತರಿಸಿ )
1. ಪ್ರಾಥಮಿಕ ದತ್ತಾಂಶ ಎಂದರೇನು ?
ಪ್ರಾಥಮಿಕ ದತ್ತಾಂಶದ ಮೂಲವನ್ನು ಚರ್ಚಿಸಿರಿ . ಸಂಶೋಧನೆಗೆ ಸಂಭಂದಿಸಿದ ಮಾಹಿತಿಯನ್ನು ಸಂಶೋಧಕನು ಪ್ರಥಮ ಬಾರಿಗೆ ಸಂಗ್ರಹಿಸುವುದನ್ನು ಪ್ರಾಥಮಿಕ ದತ್ತಾಂಶ ಎನ್ನುವರು . “ ರಾಬರ್ಟ್‌ಸನ್ ಮತ್ತು ರೈಟ್ ” ರವರ ಪ್ರಕಾರ – – ಪ್ರಾಥಮಿಕ ದತ್ತಾಂಶವು ನಿರ್ಧಿಷ್ಟ ಸಂಶೋಧನೆಯ ಸಮಸ್ಯೆಯ ಪರಿಹಾರಕ್ಕೆ ನಿರ್ಧಿಷ್ಟ ಉದ್ದೇಶದಿಂದ ಸಂಗ್ರಹಿಸಿದ ದತ್ತಾಂಶವಾಗಿದೆ . ಪ್ರಾಥಮಿಕ ದತ್ತಾಂಶದ ಮೂಲಗಳೆಂದರೆ ಅವಲೋಕನ , ಸಂದರ್ಶನ , ಪ್ರಶ್ನಾವಳಿ ಮತ್ತು ಸಾಮಾಜಿಕ ಸಮೀಕ್ಷೆ ಇತ್ಯಾದಿ . ಅವಲೋಕನ ಎಂದರೆ ಉದ್ದೇಶವಿರಿಸಿಕೊಂಡು ಪಿ . ವಿ . ಯಂಗ್‌ರವರ ಅಭಿಪ್ರಾಯದಂತೆ – ‘ ಅವಲೋಕನ ಎಂದರೆ ವ್ಯವಸ್ಥಿತ ಮತ್ತು ಉದ್ದೇಶ ಪೂರಕ ಅಧ್ಯಯನವನ್ನು ಘಟನೆಗಳು ಜರುಗಿದಂತೆ ವೀಕ್ಷಿಸುವುದು , ಅವಲೋಕನದಲ್ಲಿ ಎರಡು ವಿಧಗಳಿವೆ ಅವುಗಳೆಂದರೆ
1 ) ನಿಯಂತ್ರಿತ ಮತ್ತು ಅನಿಯಂತ್ರಿತ ಅವಲೋಕನ
2 ) .ಸಹಭಾಗಿ ಅವಲೋಕನ ಮತ್ತು ಅಸಹಭಾಗಿ ಅವಲೋಕನ
ಸಂದರ್ಶನ : ಎಂದರೆ ಅಂತರ್‌ಕ್ರಿಯೆಯ ಪ್ರಕ್ರಿಯೆಯಾಗಿದೆ . ಸಂದರ್ಶನವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು ಅವುಗಳೆಂದರೆ
1 ) ರಚನಾತ್ಮಕ ಸಂದರ್ಶನ ಹಾಗೂ
2) ಮೌಖಿಕ ಸಂದರ್ಶನ . 2 )
ಪ್ರಶ್ನಾವಳಿ : ಮಾಹಿತಿ ಸಂಗ್ರಹಣೆಗೆ ಪ್ರಶ್ನಾವಳಿ ಒಂದು ವಿಧಾನವಾಗಿದೆ . ಮುದ್ರಿತ ಅಥವಾ ಟೈಪ್ ಮಾಡಿದ ಪ್ರಶ್ನೆಗಳ ಪಟ್ಟಿಯೆ ಪ್ರಶ್ನಾವಳಿ ಪ್ರಶ್ನೆಗಳಲ್ಲಿ ಎರಡು ವಿಧಗಳಿವೆ , ಅವುಗಳೆಂದರೆ
1 ) ರಚನಾತ್ಮಕ ಪ್ರಶ್ನಾವಳಿಗಳು .
2 ) ಮೌಖಿಕ ಪ್ರಶ್ನಾವಳಿಗಳು .
ಸಾಮಾಜಿಕ ಸಂಶೋಧನೆಯು ಕೂಡ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ .
2. ಮಾಧ್ಯಮಿಕ ದತ್ತಾಂಶಗಳ ಮೂಲಗಳನ್ನು ಚರ್ಚಿಸಿರಿ .
ಮಾಧ್ಯಮಿಕ ದತ್ತಾಂಶ ಸಂಗ್ರಹಕ್ಕೆ ಹಲವಾರು ವಿಧಾನ , ಸಾಧನಗಳನ್ನು ಅನುಸರಿಸಲಾಗುತ್ತದೆ . ಮಾಧ್ಯಮಿಕ ದತ್ತಾಂಶವನ್ನು ಸಂಶೋಧಕನು ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸುತ್ತಾನೆ . ಮಾಧ್ಯಮಿಕ ದತ್ತಾಂಶಗಳ ಮೂಲಗಳೆಂದರೆ- ವೈಯಕ್ತಿಕ ದಾಖಲೆಗಳು , ಸಾರ್ವಜನಿಕ ದಾಖಲೆಗಳು , ಪುಸ್ತಕಗಳು , ನಿಯತಕಾಲಿಕಗಳು , ಗ್ರಂಥಗಳು , ವಾರ್ಷಿಕ ಪುಸ್ತಕಗಳು , ವಿಶ್ವಕೋಶಗಳು ಮತ್ತು ಇತರ ದಾಖಲೆಗಳು . ಆಧುನಿಕ ನೂತನ ಗಣಕ ಯಂತ್ರಗಳು ವಿವಿಧ ಕಾರ್ಯಗಳನ್ನು ಏಕಕಾಲಕ್ಕೆ ನಿರ್ವಹಿಸುತ್ತವೆ , ವಿವಿಧ ಸಾಫ್ಟ್‌ವೇರ್‌ಗಳು ವಿವಿಧ ವಿನಿಯಾಂಶ ಮಾಹಿತಿ ಮತ್ತು ದತ್ತಾಂಶವನ್ನು ಒದಗಿಸುತ್ತದೆ . ಮಾಹಿತಿ ವಿಶ್ಲೇಷಣೆ ಮಾಹಿತಿ ಆಧಾರಿತ ವರದಿ ರಚನೆಗೆ ನೆರವಾಗುವುದು . ನಕ್ಷೆ , ಕೋಷ್ಟಕ ದತ್ತಾಂಶ ವಿಶ್ಲೇಷಣೆಯನ್ನು ಸಂಶೋಧಕನ ಬೇಡಿಕೆಗೆ ಅಗತ್ಯಕ್ಕೆ ತಕ್ಕಂತೆ ಒದಗಿಸುವುದು .
ಅಂತರ್‌ಜಾಲವು ಜಗತ್ತಿನ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು . ಇತ್ತೀಚಿನ ಹಿತಿ ಬೃಹತ್ತ ಪ್ರಮಾಣದಲ್ಲಿ ಲಭ್ಯವಿದೆ . ಸಾಂಪ್ರಾದಾಯಿಕ ಗ್ರಂಥಾಲಯದಲ್ಲಿ ಮುದ್ರಣದ ಐಸ್ತಕಗಳನ್ನು ಅಷ್ಟು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡಲು ಸ್ಥಳ ಅವಕಾಶವಿಲ್ಲ . ಅಂತರ್‌ಜಾಲದಲ್ಲಿ ಉಚಿತ ವೆಬ್‌ತಾಣಗಳು , ಗ್ರಂಥಾಲಯ , ಪುಸ್ತಕಗಳು ಇತ್ಯಾದಿ , ಸಂಶೋಧಕರ ಶ್ರಮ , ಸಮಯ ಮತ್ತು ಹಣವನ್ನು ಉಳಿಸಲು ಅಂತರ್‌ಜಾಲ ನೆರವಾಗುವುದು . ಮಾಧ್ಯಮಿಕ ದತ್ತಾಂಶವು ದಾಖಲೆಗಳ ಮೂಲದಿಂದ ಸಂಶೋಧಕನಿಗೆ ಲಭಿಸುವುದು .
3. ಮಾಹಿತಿ ಸಂಗ್ರಹಣೆಯಲ್ಲಿ ಸಂದರ್ಶನ ವಿಧಾನದ ಪಾತ್ರವನ್ನು ಚರ್ಚಿಸಿರಿ .
ಸಾಮಾಜಿಕ ಸಂಶೋಧನಾ ಕ್ಷೇತ್ರದಲ್ಲಿ ಸಂದರ್ಶನವು ಮಾಹಿತಿ ಸಂಗ್ರಹಣೆಯ ಪ್ರತ್ಯಕ್ಷ ವಿಧಾನವಾಗಿದೆ . ಸಂದರ್ಶನವು ಇತರರ ಅಭಿಪ್ರಾಯ ಮತ್ತು ಯೋಚನೆಗಳನ್ನು ತಿಳಿಯಲು ನೆರವಾಗುತ್ತದೆ . ಸಂದರ್ಶನದಲ್ಲಿ ಮೌಖಿಕ ಅಂಶಗಳಲ್ಲದೆ ವ್ಯಕ್ತಿಗಳ ದೈಹಿಕ ಹಾವಭಾವ , ದೃಷ್ಟಿ ಅಥವಾ ನೋಟ ಅಂಗಿನ ಚಲನವಲನಗಳು ಅರ್ಥಪೂರ್ಣವಾಗಿ ಅಭಿವ್ಯಕ್ತಗೊಳ್ಳುತ್ತವೆ . ಸಂದರ್ಶನವು ಜನರ ವ್ಯವಸ್ಥಿತವಾದ ಪರಸ್ಪರ ಸಂಪರ್ಕವನ್ನು ಒಳಗೊಂಡಿದೆ . ಇದೊಂದು ಅಂತಃಕ್ರಿಯೆಯ ವಿಧಾನವಾಗಿದೆ . ಸಂದರ್ಶನವು ರಚನಾತ್ಮಕ ( ಔಪಚಾರಿಕ ) ಹಾಗೂ ಮೌಖಿಕ ಸಂದರ್ಶನ ಎಂಬ ಎರಡು ವಿಧಾನಗಳಿವೆ . ಪೂರ್ವ ನಿಯೋಜಿತ ಪ್ರಶ್ನೆಗಳು ಮತ್ತು ನಿರ್ಧಿಷ್ಟ ಗುಣಮಟ್ಟದ ವಿಧಾನಗಳನ್ನೊಳಗೊಂಡಿದೆ . ಪ್ರಶ್ನೆಗಳಲ್ಲಿ ಒಳಗೊಂಡಿರುವ ಪದಗಳ ಸ್ವರೂಪ ಅಥವಾ ಸ್ವರೂಪಗಳನ್ನು ಕೇಳಬೇಕಾದ ರೀತಿ , ಶೈಲಿ , ಸಂದರ್ಶನ ಪ್ರಕ್ರಿಯೆಯನ್ನು ದಾಖಲಿಸುವ ವ್ಯವಸ್ಥೆ ಪ್ರಕ್ರಿಯೆಯೇ ಒಂದು ನಿರ್ಧಿಷ್ಟ ಗುಣಮಟ್ಟದಾಗಿದೆ . ರಚನಾತ್ಮಕ ಸಂದರ್ಶನವು ಸಾರ್ವತ್ರಿಕ ಮತ್ತು ನಿಖರತೆಯನ್ನು ಒದಗಿಸುತ್ತದೆ . ಇದು ಸ್ಪಷ್ಟ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ . ಮೌಖಿಕ ಸಂದರ್ಶನವು ( ಅನೌಪಚಾರಿಕ ) ಸಂದರ್ಶನವಾಗಿದೆ . ಈ ವಿಧಾನವು ಕಟ್ಟುನಿಟ್ಟಿನ , ಕಠಿಣ ನಿಯಮಗಳಿಗೆ ಹೊರತಾಗಿದೆ . ಸಂದರ್ಶನ ನಡೆಸುವ ವ್ಯಕ್ತಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ . ಸಂದರ್ಶನ ಪ್ರಕ್ರಿಯೆಯಲ್ಲಿ ಸಂದರ್ಶಕನು ಸಂಧರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನು ಕೈಗೊಳ್ಳಬಹುದು . ಸಂದರ್ಶಕನು ಕೇಳುವ ಪ್ರಶ್ನೆಗಳ ಸ್ವರೂಪ , ಆಯ್ಕೆ , ಸಂಖ್ಯೆ , ಸಂಧರ್ಭ ಇತ್ಯಾದಿಗಳನ್ನು ಸಂದರ್ಶಕನೇ ನಿರ್ಣಯಿಸಬಹುದು . ಸಂದರ್ಶನದ ಸ್ವರೂಪವನ್ನು ಉತ್ತರಿಸುವವರ ಗುಣಮಟ್ಟಕ್ಕೆ ಅನುಗುಣವಾಗಿ ತರಬಹದು , ಈ ಸಂದರ್ಶನವು ಸೌಹಾರ್ದಯುತವಾದ ವಾತಾವರಣವನ್ನು ಸೃಷ್ಟಿಸಿ , ಪರಿಣಾಮಕಾರಿ ಸಂವಹನ ಮತ್ತು ಸಂಪರ್ಕ ಜರುಗುತ್ತದೆ .
4. ಪ್ರಾಥಮಿಕ ಹಾಗೂ ಮಾಧ್ಯಮಿಕ ದತ್ತಾಂಶಗಳ ವ್ಯತ್ಯಾಸಗಳನ್ನು ಚರ್ಚಿಸಿರಿ ,
‘ ಪ್ರಾಥಮಿಕ ಹಾಗೂ ಮಾಧ್ಯಮಿಕ ದತ್ತಾಂಶಗಳ ವ್ಯತ್ಯಾಸಗಳನ್ನು ಈ ರೀತಿ ಗುರುತಿಸಬಹುದಾಗಿದೆ .
ಪ್ರಾಥಮಿಕ ದತ್ತಾಂಶ
1 ) ಈ ದತ್ತಾಂಶವನ್ನು ಕ್ಷೇತ್ರ ಅಧ್ಯಯನ ಅಥವಾ ಪ್ರಯೋಗಾಲಯದಿಂದ ಗಳಿಸಲಾಗುವುದು .
2 ) .ಪ್ರಾಥಮಿಕ ದತ್ತಾಂಶದ ಮೂಲಗಳೆಂದರೆ ಅವಲೋಕನ , ಸಂದರ್ಶನ , ಪ್ರಶ್ನಾವಳಿ , ಸಾಮಾಜಿಕ ಸಮೀಕ್ಷೆಯನ್ನು ಪಡೆಯಲಾಗುವುದು .
3 ) ಸಮಸ್ಯೆಯನ್ನು ಅರ್ಥೈಸಲು ಮತ್ತು ಪರಿಹಾರ ಕಂಡುಕೊಳ್ಳಲು ಪ್ರಾಥಮಿಕ – ದತ್ತಾಂಶವು ಉಪಯುಕ್ತವಾಗಿದೆ
4 ) ಪ್ರಾಥಮಿಕ ದತ್ತಾಂಶವನ್ನು ಸಂಶೋಧಕನು ಪ್ರಥಮ ಬಾರಿಗೆ ಕ್ಷೇತ್ರ ಅಧ್ಯಯನದಿಂದ ಅಥವಾ ಪ್ರಯೋಗಾಲಯದಿಂದ ಸಂಗ್ರಹಿಸುತ್ತಾನೆ .
ಮಾಧ್ಯಮಿಕ ದತ್ತಾಂಶ
1 ) ಮಾಧ್ಯಮಿಕ ದತ್ತಾಂಶ ಸಂಗ್ರಹಕ್ಕೆ ಹಲವಾರು ವಿಧಾನ , ಸಾಧನಗಳನ್ನು ಅನುಸರಿಸಬೇಕಾಗುತ್ತದೆ .
2 ) ಮಾಧ್ಯಮಿಕ ದತ್ತಾಂಶವನ್ನು ಸಂಶೋಧಕನು ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸಲಾಗುತ್ತಿದೆ .
3 ) ಈ ರೀತಿಯ ದತ್ತಾಂಶವು ಮಾಧ್ಯಮಿಕ ದತ್ತಾಂಶದಲ್ಲಿ ಲಭ್ಯವಿಲ್ಲ .
4 ) ಮಾಧ್ಯಮಿಕ ದತ್ತಾಂಶವು ದಾಖಲೆಗಳ ಮೂಲದಿಂದ ಸಂಶೋಧಕನಿಗೆ ಲಭಿಸುವುದು .
5. ಸಂಶೋಧನೆಯ ವ್ಯಾಖ್ಯೆ ನೀಡಿರಿ , ಸಮಾಜ ಸಂಶೋಧನೆ ಎಂದರೇನು ?
ಸಮಾಜಶಾಸ್ತ್ರಜ್ಞರು ಸಂಶೋಧನೆಗೆ ತಮಗೆ ಆದ ಬೇರೆಬೇರೆ ವ್ಯಾಖ್ಯೆ ನೀಡಿದ್ದಾರೆ . ‘ ಸಂಶೋಧನೆ ‘ ಎಂಬ ಪದವು ಲ್ಯಾಟೀನ್ ಭಾಷೆಯ Re ಮತ್ತು Search ಎಂಬ ಪದಗಳಿಂದ ಬಂದಿದೆ . ಅಂದರೆ ಮನರ್ ಶೋಧಿಸು ಎಂದರ್ಥ , ಸರಿಯಾಗಿ ಹುಡುಕುವುದು ಪರಿಶೋಧಿಸುವುದು ಎಂದರ್ಥ ಸಾಮಾನ್ಯವಾಗಿ ಸಂಶೋಧನೆ ಎಂದರೆ ಮನಃ ಹುಡುಕುವುದು , ಪರಿಶೋಧಿಸುವುದು ,
ಕಳೆದುಹೋದ ವಿಷಯ ಅಥವಾ ಹೊಸ ವಿಷಯದ ಅಸ್ಪಷ್ಟತೆಯನ್ನು ಹೋಗಲಾಡಿಸುವ ಪ್ರಕ್ರಿಯೆಯಾಗಿದೆ .
ವಿಲಿಯಂ ಸ್ಕಾಟ್ ರವರ ಪ್ರಕಾರ- ಸಾಮಾಜಿಕ ಸಂಶೋಧನೆಯು ಯಾವುದೇ ಸಂಶೋಧನೆಯ ಮಾನವ ಸಮೂಹಗಳ ಅಧ್ಯಯನಕ್ಕೆ ಪ್ರಾಮುಖ್ಯತೆ ನೀಡುವುದು ಅಥವಾ ಸಾಮಾಜಿಕ ಅಂತರ್‌ಕ್ರಿಯೆಯ ಪ್ರಕ್ರಿಯೆಗಳಿಗೆ ಮಹತ್ವ ನೀಡುವುದಾಗಿದೆ .
ಪಿ . ವಿ . ಯಂಗ್‌ರವರು ‘ ಸಾಮಾಜಿಕ ಸಂಶೋಧನೆ ಎಂದರೆ ಕ್ರಮಬದ್ಧವಾದ ವಿಧಾನಗಳ ಮೂಲಕ ಹೊಸ ಘಟನೆಗಳನ್ನು ಕಂಡುಹಿಡಿಯುವುದು ಅಥವಾ ಆ ಹಿಂದಿನ ಘಟನೆಗಳನ್ನು ಪರಿಶೀಲಿಸಿ ಅದರ ಪರಿಣಾಮಗಳು ಪರಸ್ಪರ ಸಂಬಂಧಗಳ ಸಾಮಾನ್ಯ ವಿವರಣೆ ಮತ್ತು ಪ್ರಕಟಿತ ನಿಯಮಗಳನ್ನು ನಿಯಂತ್ರಿಸುವುದಾಗಿದೆ .
ಇ.ಎಸ್.ಬೋಗಾರ್ಡ್ ರವರು- ಸಹವರ್ತಿಗಳಾಗಿ ಜೀವಿಸುವ ಜನರ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಪರಿಶೀಲನೆಯ ಸಾಮಾಜಿಕ ಸಂಶೋಧನೆಯಾಗಿದೆ . ಒಟ್ಟಾರೆ ‘ ಸಂಶೋಧನೆ ‘ ಎಂಬ ಪರಿಕಲ್ಪನೆಯ ಹೊಸ ವಿಷಯವನ್ನು ಮತ್ತು ಜ್ಞಾನವನ್ನು ಹುಡುಕುವ ಪ್ರಯತ್ನವಾಗಿದೆ . ಸಂಶೋಧನೆ ಎಂದರೆ ಜ್ಞಾನದಾಹವನ್ನು ಒಳಗೊಂಡ ವಿಧಾನಗಳ ಅನುಕರಣಿ ಪ್ರಸ್ತುತ ಜ್ಞಾನವನ್ನು ಹೆಚ್ಚಿಸುವ ಪರಿಶೋಧನೆಯನ್ನು ಒಳಗೊಂಡಿದೆ .
6. ಮಾಹಿತಿ ಸಂಗ್ರಹಣೆಯಲ್ಲಿ ಅವಲೋಕನ / ವೀಕ್ಷಣೆಯ ವಿಧಾನದ ಮಹತ್ವವನ್ನು ವಿವರಿಸಿ .
ಅವಲೋಕನ ಎಂದರೆ ಉದ್ದೇಶವಿರಿಸಿಕೊಂಡು ವೀಕ್ಷಣೆ ಮಾಡುವುದು , ಅವಲೋಕನ ಎಂದರೆ ಖಚಿತತೆಯಿಂದ ವೀಕ್ಷಣೆ ಮಾಡುವುದು , ಘಟನೆಗಳು ಜರುಗಿದಂತೆ ವೀಕ್ಷಣೆ ಮೂಲಕ ಅವುಗಳು ಪರಸ್ಪರ ಸಂಬಂಧವನ್ನು ವೀಕ್ಷಿಸುವುದು . ಅವಲೋಕನವು ಘಟನೆಗಳ ಜರುಗುವಿಕೆಯನ್ನು ಉದ್ದೇಶಪೂರ್ವಕವಾಗಿ ಗ್ರಹಿಸುವುದು . ವಸ್ತು ನಿಷ್ಪತೆಯಿಂದ ಅವಲೋಕನ ಮಾಡಿದಾಗ ವೀಕ್ಷಕನ ವೈಯಕ್ತಿಕ ಅಭಿಪ್ರಾಯ , ಪೂರ್ವಗ್ರಹ ಪೀಡಿತ ದೃಷ್ಟಿ , ಅನಿಸಿಕೆಗಳು ಅಧ್ಯಯನದಲ್ಲಿ ಪ್ರವೇಶಿಸುವುದಿಲ್ಲ . ಆದರೆ ವಸ್ತು ನಿಷ್ಪತೆಯಿಂದ ಅವಲೋಕನ ಮಾಡುವುದು ಬಹಳಷ್ಟು ಕಷ್ಟಕರ ಪ್ರಕ್ರಿಯೆಯಾಗಿದೆ .
ಪಿ . ವಿ . ಯಂಗ್‌ರವರ ವ್ಯಾಖ್ಯೆಯಂತೆ – ‘ ಅವಲೋಕನ ಎಂದರೆ ವ್ಯವಸ್ಥಿತ ಉದ್ದೇಶ ಪೂರಕ ಅಧ್ಯಯನವನ್ನು ಘಟನೆಗಳು ಜರುಗಿದಂತೆ ವೀಕ್ಷಿಸುವುದು , ಸಾಮಾಜಿಕ ಪರಿಕಲ್ಪನೆಗಳು , ಸಂಸ್ಕೃತಿಯ ಸ್ವರೂಪ ಮತ್ತು ಮಾನವನ ವರ್ತನೆಗಳ ಸಂಕೀರ್ಣತೆಯ ಪರಸ್ಪರ ಸಂಭಂಧಗಳ ಅಂಶಗಳನ್ನು ಉದ್ದೇಶಪೂರ್ವಕವಾಗಿ ವೀಕ್ಷಿಸುವುದು . ಈ ವ್ಯಾಖ್ಯೆಗಳು ಅವಲೋಕನದ ಮಹತ್ವವನ್ನು ತಿಳಿಸಿಕೊಡುತ್ತದೆ . ಅವಲೋಕನದಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ ಅವುಗಳೆಂದರೆ
1 ) ನಿಯಂತ್ರಿತ ಮತ್ತು ಅಭಿಯಂತ್ರಿತ ಅವಲೋಕನ : ನಿಯಂತ್ರಿತ ಅವಲೋಕನವು ಪ್ರಯೋಗಾಲಯದಲ್ಲಿ ಜರುಗುವುದು , ಇಲ್ಲಿ ವೀಕ್ಷಕರು ಕೆಲವು ಅಧ್ಯಯನದ ಕೆಲವು ಅಂಶಗಳನ್ನು ನಿಯಂತ್ರಣದಲ್ಲಿಡುವನು . ಅನಿಯಂತ್ರಿತ ಅವಲೋಕನವೆಂದರೆ ಸಹಕಾರವಿಲ್ಲದ ಅವಲೋಕನ . ಇದು ಸಹಜ ಪರಿಸರದಲ್ಲಿರುವುದನ್ನು ನಿಯಂತ್ರಣಗಳಿಲ್ಲದ ಅವಲೋಕನವಾಗಿದೆ .
2 ) ಸಹಭಾಗಿ ಅವಲೋಕನ ಮತ್ತು ಅಸಹಭಾಗಿ ಅವಲೋಕನ : ಸಹಭಾಗಿ ಅವಲೋಕನದಲ್ಲಿ ಸಂಶೋಧಕನು ಸಂಶೋಧನ ಅಧ್ಯಯನದ ಸಾಮಾಜಿಕ ಪರಿಕಲ್ಪನೆಯಲ್ಲಿ ಭಾಗವಹಿಸುವನು . ಪಾಲ್ಗೊಳ್ಳದ ಅವಲೋಕನದಲ್ಲಿ ಸಂಶೋಧಕನು ಏಕಾಂಗಿಯಾಗಿ ಪ್ರತ್ಯೇಕವಾಗಿದ್ದುಕೊಂಡು ವೀಕ್ಷಿಸುವುದು . ಒಟ್ಟಾರೆ ಮಾಹಿತಿ ಸಂಗ್ರಹಣೆಯಲ್ಲಿ ಅವಲೋಕನವು ಈ ಕೆಳಕಂಡ ಮಹತ್ವವನ್ನು ಪಡೆದುಕೊಂಡಿದೆ , ಅವುಗಳೆಂದರೆ
ಅವಲೋಕನದಿಂದ ಸಂಗ್ರಹಿಸುವ ಮಾಹಿತಿಯನ್ನು ಘಟನೆಗಳು ಜರುಗಿದಂತೆ ಸಂಗ್ರಹಿಸುವುದರಿಂದ ಗುಣಾತ್ಮಕ ದತ್ತಾಂಶವು ಸಂಶೋಧಕನಿಗೆ ಲಭಿಸುವುದು .
ಈ ವಿಧಾನದಿಂದ ವಿಸ್ತಾರವಾದ ಮತ್ತು ಸಂಕ್ಷಿಪ್ತವಾದ ಮಾಹಿತಿ ದೊರಕುವುದು . ಹೆಚ್ಚು ಸಡಿಲವಾದ ಸ್ಪಷ್ಟವಾದ ಮಾಹಿತಿಯು ವೀಕ್ಷಕನಿಗೆ ಲಭಿಸುವುದು .
ಈ ವಿಧಾನದಲ್ಲಿ ವೀಕ್ಷಕನಿಗೆ ವೀಕ್ಷಿಸಲು ಸ್ವಾತಂತ್ರ್ಯವಿದೆ , ಸಮೂಹದ ಸದಸ್ಯರ ಮಾಹಿತಿ ವೀಕ್ಷಕನಿಗೆ ತಿಳಿಯುವುದು . ಈ ವಿಧಾನದಿಂದ ಇತರ ವಿಧಾನಗಳಲ್ಲಿ ಪ್ರತಿಕ್ರಯಿಸಲು ಸಾಧ್ಯವಾಗದ ವ್ಯಕ್ತಿಗಳಿಗೆ ಮಾಹಿತಿ ನೀಡಲು ಅವಕಾಶ ದೊರೆಯುವುದು .
7. ಸಮಾಜ ಸಂಶೋಧನೆಯಲ್ಲಿ ಅಂತರ್ಜಲ ಮತ್ತು ಗಣಕ ಯಂತ್ರದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ .
ಆಧುನಿಕ ಸಮಾಜವು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಪ್ರಭಾವಕ್ಕೊಳಪಟ್ಟಿದೆ . ಸಮಾಜ ಸಂಶೋಧನೆಯಲ್ಲಿ ಅಂತರ್‌ಜಲ ಹಾಗೂ ಗಣಕಯಂತ್ರಗಳು ಬಹಳ ಮಹತ್ವಪೂರ್ಣವಾಗಿದೆ , ಏಕೆಂದರೆ ಆಧುನಿಕ ನೂತನಗಳಾದ ಯಂತ್ರಗಳು ವಿವಿಧ ಕಾರ್ಯಗಳನ್ನು ಏಕಕಾಲಕ್ಕೆ ಕಾರ್ಯನಿರ್ವಹಿಸುತ್ತವೆ . ವಿವಿಧ “ ಸಾಫ್ಟ್‌ವೇರ್ ಗಳು ವಿವಿಧ ವಿಷಯಗಳ ಮಾಹಿತಿ ಮತ್ತು ದತ್ತಾಂಶಗಳನ್ನು ಒದಗಿಸುತ್ತವೆ .
ಉದಾ : ಸಮಾಜವಿಜ್ಞಾನದ ಸಂಖ್ಯಾಶಾಸ್ತ್ರದ ಪ್ಯಾಕೇಜ್ ಸಾಫ್ಟ್‌ವೇರ್ ಮಾಹಿತಿ ವಿಶ್ಲೇಷಣೆ , ಮಾಹಿತಿ ಆಧಾರಿತ ವರದಿ ರಚನೆ ನೆರವಾಗುವುದು . ನಕ್ಷೆ , ಕೋಷ್ಟಕ ದತ್ತಾಂಶ , ವಿಶ್ಲೇಷಣೆಯನ್ನು ಸಂಶೋಧಕನ ಬೇಡಿಕೆ ಅಗತ್ಯಕ್ಕೆ ತಕ್ಕಂತೆ ಒದಗುವುದು . ಅಂತರ್‌ಜಾಲವು ಜಗತ್ತಿನ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು . ಇತ್ತೀಚಿನ ಮಾಹಿತಿ ಬೃಹತ್ ಪ್ರಮಾಣದಲ್ಲಿ ಲಭ್ಯವಿದೆ . ಸಾಂಪ್ರಾದಾಯಿಕ ಗ್ರಂಥಾಲಯದಲ್ಲಿ ಮುದ್ರಣದ ಪುಸ್ತಕಗಳನ್ನು ಅಷ್ಟು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡಲು ಸ್ಥಳ ಅವಕಾಶವಿಲ್ಲ . ಇದಲ್ಲದೆ 24 ಗಂಟೆಗಳಲ್ಲೂ ಮಾಹಿತಿ ಲಭ್ಯವಿರುತ್ತದೆ , ಅಂತರ್‌ಜಾಲದಲ್ಲಿನ ಉಚಿತ ವೆಬ್‌ತಾಣಗಳು , ಗ್ರಂಥಾಲಯ , ಪುಸ್ತಕಗಳು ಇತ್ಯಾದಿ ಸಂಶೋಧಕನ ಶ್ರಮ ಸಮಯ ಮತ್ತು ಹಣವನ್ನು ಉಳಿಸಲು ಸಾಧ್ಯವಾಗಿದೆ .
ಸಂಶೋಧಕನಿಗೆ ಏಕಕಾಲದಲ್ಲಿ ಮಾಹಿತಿ ಸಂಗ್ರಹ , ವರ್ಗೀಕರಣ ವಿಶ್ಲೇಷಣೆಗೆ ಕಂಪ್ಯೂಟರ್‌ಗಳು ನೆರವಾಗುತ್ತದೆ . ಸಂಶೋಧಕನ ಸಮಯ ಮತ್ತು ಹಣವನ್ನು ಉಳಿಸಲು ಕಂಪ್ಯೂಟರ್‌ಗಳು ನೆರವಾಗುತ್ತದೆ . ಪ್ರಾಥಮಿಕ ದತ್ತಾಂಶ ಪ್ರಥಮ ಬಾರಿ ಮತ್ತು ಇತ್ತೀಚಿನ ಮಾಹಿತಿಯಾಗಿದೆ , ಸಂಶೋಧನೆಯ ಸಮಸ್ಯೆಯನ್ನು ಅರ್ಥೈಸಲು ಮತ್ತು ಪರಿಹಾರ ಕಂಡುಕೊಳ್ಳಲು ಪ್ರಾಥಮಿಕ ದತ್ತಾಂಶವು ಉಪಯುಕ್ತವಾಗಿದೆ .
8. ಪ್ರಶ್ನಾವಳಿ ವಿಧಾನವನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ .
ಮಾಹಿತಿ ಸಂಗ್ರಹಣೆಗೆ ಪ್ರಶ್ನಾವಳಿ ಒಂದು ವಿಧಾನವಾಗಿದೆ . ಪ್ರಶ್ನಾವಳಿಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ . ಅವುಗಳೆಂದರೆ
1 ) ರಚನಾತ್ಮಕ ಪ್ರಶ್ನಾವಳಿಗಳು .
2 ) ಮೌಖಿಕ ಪ್ರಶ್ನಾವಳಿಗಳು . ( ಅರಚನಾತ್ಮಕ ಪ್ರಶ್ನಾವಳಿಗಳು )
1 ) ರಚನಾತ್ಮಕ ಪ್ರಶ್ನಾವಳಿಗಳು , ಈ ಪ್ರಶ್ನಾವಳಿಯಲ್ಲಿ ಪೂರ್ವ ನಿಗದಿತ ಸ್ವರೂಪವಾದ ಮತ್ತು ಮೌಖಿಕ ಸ್ವರೂಪದ ಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತದೆ . ಎಲ್ಲಾ ಉತ್ತರ ನೀಡುವವರಿಗೆ ಒಂದೇ ರೀತಿಯ ಪ್ರಶ್ನಾವಳಿಯನ್ನು ಒದಗಿಸಲಾಗುತ್ತದೆ . ಇಂತಹ ಪ್ರಶ್ನಾವಳಿಗಳಲ್ಲಿ ಮುಕ್ತ ಅಥವಾ ತೆರೆದ ಪ್ರಶ್ನೆಗಳು ಮತ್ತು ಮುಚ್ಚಿದ ಪ್ರಶ್ನೆಗಳಿರುತ್ತವೆ . ಮುಚ್ಚಿದ ಪ್ರಶ್ನೆಗಳಿಗೆ ಉತ್ತರಗಳು ಕೂಡ ನಿಗದಿತ ಉತ್ತರಗಳಿರುತ್ತವೆ . ಈ ತರಹದ ಉತ್ತರಗಳಲ್ಲಿ ‘ ಹೌದು ‘ ‘ ಇಲ್ಲ ‘ ಎಂಬ ಅಥವಾ ‘ ಸರಿ ‘ ಅಥವಾ ‘ ತಪ್ಪು ‘ ಎಂಬ ಸೀಮಿತ ಉತ್ತರಗಳಿರುತ್ತವೆ . ಮುಕ್ತ ಅಥವಾ ತೆರೆದ ಪ್ರಶ್ನೆಗಳಿಗೆ ಉತ್ತರಿಸುವವರು ಸ್ವತಂತ್ರವಾಗಿ ತಮ್ಮದೇ ಆದ ಮಾತುಗಳಲ್ಲಿ ಉತ್ತರಗಳನ್ನು ಉತ್ತರಿಸಬಹುದು .
2 ) ಮೌಖಿಕ ಪ್ರಶ್ನಾವಳಿಗಳು , ಈ ವಿಧಾನದ ಪ್ರಶ್ನಾವಳಿಗಳಲ್ಲಿ ಪ್ರಶ್ನೆಗಳನ್ನು ಪೂರ್ವ ನಿಗದಿಯಾಗಿ ರಚಿಸದೆ , ಪರಿಗಣಿಸಲಾಗುವುದು . ಈ ಪ್ರಶ್ನೆಗಳ ಸ್ವರೂಪವು ಸಡಿಲವಾದ ಗುಣವನ್ನು ಪ್ರಶ್ನೆಗಳನ್ನು ಕೇಳುವ ಸಂದರ್ಭದಲ್ಲಿ ಅಗತ್ಯಗಳ ಅನುಗುಣ ಪ್ರಶ್ನೆಗಳನ್ನು ಹೊಂದಿರುವುದರಿಂದ ಇದನ್ನು ‘ ಸಂದರ್ಶನ ಮಾರ್ಗದರ್ಶಿ ‘ ಎಂದು ಕರೆಯುವರು . ಇಂತಹ ಪ್ರಶ್ನಾವಳಿಯನ್ನು ವೈಯಕ್ತಿಕ ಅನುಭವ , ಅಭಿಪ್ರಾಯ ಇತ್ಯಾದಿಗಳ ಕುರಿತು ಮಾಹಿತಿ ಸಂಗ್ರಹಿಸಲು ಬಳಸುವರು . ಈ ಸಂದರ್ಭದಲ್ಲಿ ಉತ್ತರಿಸುವವರಿಗೆ ಗರಿಷ್ಪ ಪ್ರಮಾಣದ ಅವಕಾಶವನ್ನು ಪ್ರತಿಕ್ರಿಯಿಸಲು ಒದಗಿಸಲಾಗುವುದು . ಈ ವಿಧಾನದ ಮಹತ್ವದ ಅನುಕೂಲತೆಯೆಂದರೆ ಪ್ರತಿಕ್ರಿಯಿಸುವ ವ್ಯಕ್ತಿಗಳು ಹೋಲಿಸಲಾಗದ ಮತ್ತು ಅಸಂಬಂಧಿತ , ಅಪ್ರಸ್ತುತ ಮಾಹಿತಿಯನ್ನು ಒದಗಿಸುತ್ತಾರೆ .
9. ಸಂದರ್ಶನದ ವಿಧಗಳನ್ನು ಚರ್ಚಿಸಿರಿ .
ಸಾಮಾಜಿಕ ಸಂಶೋಧನಾ ಕ್ಷೇತ್ರದಲ್ಲಿ ಸಂದರ್ಶನವು ಮಾಹಿತಿ ಸಂಗ್ರಹಣೆಯ ಪ್ರತ್ಯಕ್ಷ ವಿಧಾನವಾಗಿದೆ . ಇತರರ ಅಭಿಪ್ರಾಯ ಮತ್ತು ಯೋಚನೆಗಳನ್ನು ತಿಳಿಯಲು ನೆರವಾಗುವುದು . ಸಂದರ್ಶನವನ್ನು ಔಪಚಾರಿಕ ಅಂಶದ ಆಧಾರದಲ್ಲಿ ರಚನಾತ್ಮಕ ಮತ್ತು ಮೌಖಿಕ ಸಂದರ್ಶನ ಎಂದು ವಿಂಗಡಿಸಬಹುದು .
1 ) ರಚನಾತ್ಮಕ ಸಂದರ್ಶನ : ಈ ಸಂದರ್ಶನವು ಪೂರ್ವ ನಿಯೋಜಿತ ಪ್ರಶ್ನೆಗಳು ಮತ್ತು ಮತ್ತು ನಿರ್ಧಿಷ್ಟ ಗುಣಮಟ್ಟದ ವಿಧಾನಗಳನ್ನೊಳಗೊಂಡಿದೆ . ಪೂರ್ವ ನಿಗದಿತ ಪ್ರಶ್ನೆಗಳು ಪ್ರಶ್ನೆಗಳ ಸ್ವರೂಪ ಮತ್ತು ಸಂಖ್ಯೆ , ಪ್ರಶ್ನೆಗಳ ಆಯ್ಕೆ , ಪ್ರಶ್ನೆಗಳಲ್ಲಿ ಒಳಗೊಂಡಿರುವ ಪದಗಳ ಸ್ವರೂಪ ಅಥವಾ ಆಸ್ವರೂಪಗಳನ್ನು ಕೇಳಬೇಕಾದ ರೀತಿ , ಶೈಲಿ , ಸಂದರ್ಶನ ಪ್ರಕ್ರಿಯೆಯನ್ನು ದಾಖಲಿಸುವ ವ್ಯವಸ್ಥೆ ಮತ್ತು ಸಂದರ್ಶನ ಪ್ರಕ್ರಿಯೆಯೇ ಒಂದು ನಿರ್ಧಿಷ್ಟ ಗುಣಮಟ್ಟದಾಗಿರುತ್ತದೆ . ಇದರಿಂದ ಸಂದರ್ಶನವು ಏಕರೂಪದ ಸಾರ್ವತ್ರಿಕತೆ ಮತ್ತು ನಿಖರತೆಯನ್ನು ಒದಗಿಸುತ್ತದೆ . ರಚನಾತ್ಮಕ ಸ್ವರೂಪವು ಒಂದೇ ರೀತಿಯ ಮತ್ತು ಸೃಷ್ಟಿ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ.
2 ) ಮೌಖಿಕ ಸಂದರ್ಶನ : ಈ ವಿಧಾನವು ಕಟ್ಟುನಿಟ್ಟಿನ , ಕಠಿಣ ನಿಯಮಗಳಿಂದ ಹೊರತಾಗಿದೆ . ಈ ವಿಧಾನದಲ್ಲಿ ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಅವಕಾಶವಿದೆ . ಸಂದರ್ಶನ ನಡೆಸುವ ವ್ಯಕ್ತಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ . ಸಂದರ್ಶನ ಪ್ರಕ್ರಿಯೆಯಲ್ಲಿ ಸಂದರ್ಶಕನು ಸಂಧರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನು ಕೈಗೊಳ್ಳಬಹುದು . ಸಂದರ್ಶನದ ಸ್ವರೂಪವನ್ನು ಪ್ರಶ್ನೆಗಳಿಗೆ ಉತ್ತರಿಸುವವರ ಗುಣಮಟ್ಟಕ್ಕೆ ಅನುಗುಣವಾಗಿ ತರಬಹುದು . ಸಂದರ್ಶನ ಪ್ರಕ್ರಿಯೆಯಲ್ಲಿ ಉತ್ತರಿಸುವವರ ಉತ್ತರಗಳನ್ನು ಮತ್ತು ಪ್ರಕ್ರಿಯೆಗಳನ್ನು ಗಮನಿಸಿ ಸಂದರ್ಶನದ ಗುರಿ ಉದ್ದೇಶಗಳಿಗೆ ಮಹತ್ವ ನೀಡಲಾಗುತ್ತದೆ . ಮೌಖಿಕ ಸಂದರ್ಶನವು ಸಂದರ್ಶಕನಿಗೆ ಉತ್ತರಿಸುವವರಿಂದ ಗರಿಷ್ಟ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ . ಇದು ಅನೌಪಚಾರಿಕ ಸ್ವರೂಪದ ಸಂದರ್ಶನವಾಗಿರುವುದರಿಂದ ಇದನ್ನು ಅನೌಪಚಾರಿಕ ಸಂದರ್ಶನ ಎಂದು ಕರೆಯುತ್ತಾರೆ . ಇದು ಸೌಹಾರ್ದಯುತವಾದ ವಾತಾವರಣವನ್ನು ಸೃಷ್ಟಿಸಿ , ಪರಿಣಾಮಕಾರಿ ಸಂವಹನ ಮತ್ತು ಸಂಪರ್ಕ ಜರುಗುತ್ತದೆ .
IV . ಹತ್ತು ಅಂಕದ ಪ್ರಶ್ನೆಗಳು : ( 30-40 ವಾಕ್ಯಗಳಲ್ಲಿ ಉತ್ತರಿಸಿ )
1. ಸಂದರ್ಶನದ ವಿಧಾನದ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ವಿವರಿಸಿ
ಸಂದರ್ಶನ ವಿಧಾನದ ಅನುಕೂಲತೆಗಳೆಂದರೆ
1 ) ಸಂದರ್ಶನ ವಿಧಾನದಿಂದ ನಂಬಲರ್ಹವಾದ ಮತ್ತು ಆಳವಾದ ಜ್ಞಾನವು ಲಭಿಸುವುದು .
2 ) ಈ ವಿಧಾನದಿಂದ ಹಿಂದಿನ ಮಾಹಿತಿ ಮತ್ತು ಭವಿಷ್ಯತ್ತಿನಲ್ಲಿ ಮಾಡಬೇಕಾದ ಯೋಜನೆಗಳ ಕುರಿತು ವಿವರವಾಗಿ ತಿಳಿಯಬಹುದು .
3 ) ಸಂದರ್ಶಕ ಮತ್ತು ಸಂದರ್ಶನೀಯ ವ್ಯಕ್ತಿಗಳೊಡನೆ ನಿಕಟವಾದ ಅಂತರ್‌ಕ್ರಿಯೆ ಜರುಗುವುದರಿಂದ ನಮಗೆ ಆಳವಾದ ಮಾಹಿತಿಯನ್ನು ಈ ವಿಧಾನವು ಒದಗಿಸುತ್ತದೆ .
4 ) ಈ ವಿಧಾನದಿಂದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಗಳಿಸಬಹುದು .
5 ) ಸಂದರ್ಶನದ ವಿಧಾನವನ್ನು ಎಲ್ಲಾ ವರ್ಗಗಳ ಜನರಿಂದ ಮಾಹಿತಿ ಸಂಗ್ರಹ ವಿಧಾನವಾಗಿ ಬಳಸಬಹುದು .
ಸಂದರ್ಶನದ ವಿಧಾನದ ಅನಾನುಕೂಲತೆಯೆಂದರೆ :
1 ) ಸಂದರ್ಶನದಲ್ಲಿ ಉತ್ತರಿಸುವ ಮಾಹಿತಿ ಕೆಲವು ಬಾರಿ ಅಪ್ರಸ್ತುತ ಅಸಮರ್ಪಕವಾಗಿರುತ್ತದೆ .
2) ಈ ವಿಧಾನದಲ್ಲಿ ಸಂದರ್ಶನಕ್ಕೆ ಉತ್ತರಿಸುವವರು , ಸೂಕ್ತ ಆಯ್ಕೆಯಾಗಿರುವುದಿಲ್ಲ . ಅಂದರೆ ತಪ್ಪು ನಮೂನೆಯ ವ್ಯಕ್ತಿಯಿಂದ ಗಳಿಸಿದ ಮಾಹಿತಿ ಸರಿಯಾಗಿರುವುದಿಲ್ಲ .
3) ಸಂದರ್ಶಕನ ಪೂರ್ವಾಗ್ರಹ ಪೀಡಿತ ದೃಷ್ಟಿ ಮತ್ತು ಪೂರ್ವ ನಿಗದಿತ ಚಿಂತನೆಗಳು ಮಾಹಿತಿಯಲ್ಲಿ ಒಳಗೊಳ್ಳುವುದು .
4 ) ಕೆಲವು ಬಾರಿ ಸಂದರ್ಶಕ ಮತ್ತು ಸಂದರ್ಶನದಲ್ಲಿ ಉತ್ತರಿಸುವವರ ನಡುವೆ ತಪ್ಪು ಗ್ರಹಿಕೆ ಮತ್ತು ಭಿನ್ನ ಜೀವನ ಶೈಲಿಯಿಂದಾಗಿ ಗೊಂದಲಗಳುಂಟಾಗುತ್ತವೆ .
5 ) ಕೆಲವು ಸಂದರ್ಭದಲ್ಲಿ ಸಂದರ್ಶನ ವಿಧಾನವೇ ಅಪ್ರಸ್ತುತವಾಗಿರುತ್ತದೆ . ಮಾಹಿತಿ ಸಂಗ್ರಹಣೆಗೆ ಬೇರೊಂದು ವಿಧಾನದ ಅವಶ್ಯಕತೆಯಿರುತ್ತದೆ . ಉದಾ : – ಅವಲೋಕನ ಅಥವಾ ವೀಕ್ಷಣಾವಿಧಾನ .
6 ) ಸಂದರ್ಶನ ನಿರ್ವಹಿಸುವುದು ಸುಲಭವಲ್ಲ . ಇದಕ್ಕೆ ತರಬೇತಿ ಹಾಗೂ ಅನುಭವದ ಅಗತ್ಯವಿರುತ್ತದೆ .
7 ) ಸಂದರ್ಶನದ ವಿಧಾನವು ಹೆಚ್ಚು ದುಬಾರಿ ಮತ್ತು ಹೆಚ್ಚು ಸಮಯವನ್ನು ಬಳಸುತ್ತದೆ .
FAQ
ಸಹವರ್ತಿಗಳಾಗಿ ಜೀವಿಸುವ ಜನರ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಪರಿಶೀಲನೆಗೆ ಸಾಮಾಜಿಕ ಸಂಶೋಧನೆ ಎನ್ನುವರು .
ಮುದ್ರಿತ ಪ್ರಶ್ನೆಗಳಿಗೆ ಉತ್ತರಗಳನ್ನು ತುಂಬಿ ಮಾಹಿತಿ ಸಂಗ್ರಹಿಸುವ ವಿಧಾನಕ್ಕೆ ಪ್ರಶ್ನಾವಳಿ ಎನ್ನುವರು .
ಇತರೆ ವಿಷಯಗಳು :
First Puc Political Science Notes
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf