Shivakumara Swamiji Quotes, 35+ Thoughts, Best Motivational, Inspirational Quotes in Kannada, ಶಿವಕುಮಾರ ಸ್ವಾಮೀಜಿ ನುಡಿಮುತ್ತುಗಳು,
Shivakumara Swamiji Quotes in Kannada
1) ಯಾರೂ ಸೋಮಾರಿಗಳಾಗಬಾರದು, ಪರಾವಲಂಬನೆಯಂತು ಆಗಲೇ ಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.
2) ಶಿಕ್ಷಣ ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು.
3) ಮನಸ್ಸು ಪವಿತ್ರವಾದದ್ದು, ಅದನ್ನು ಜೋಪಾನ ಮಾಡುವ ಕರ್ತವ್ಯ ನಮ್ಮದು.
4) ಲೋಕದ ಮನೋಧರ್ಮ ಏಕಮುಖಿಯಾದುದಲ್ಲ, ಬಹುಮುಖಿಯಾದುದು. ಸಂಕೀರ್ಣ ಸ್ವರೂಪ ಅದರದ್ದು.
5) ನಮ್ಮ ಪೂರ್ವಿಕರು ನಮಗಾಗಿ ದುಡಿದ ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೇ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ. ಮಾನವೀಯತೆ ಅವರ ಜೀವ ಗುಣವಾಗಿತ್ತು.
6) ಸೇವೆ ಎಂಬುದು ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.
7) ನಮ್ಮ ಹಿಂದಿನ ಪೂರ್ವಜ ಗುರುಗಳು ನಮಗೆ ಕಲಿಸಿದ ಪಾಠವೆಂದರೆ, ಸದಾ ಕ್ರಿಯಾಶೀಲವಾಗಿರುವ ಜೀವನ ಭಾಗ್ಯ.
8) ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು, ಮಾತು ತಪಸ್ಸು ಎನ್ನುವಂತಿರಬೇಕು.
9) ಆತ್ಮಾವಲೋಕನದ ಅರಿವಿನ ಅಭಾವದಿಂದ ಸಮಾಜವಿಂದು ನೈತಿಕತೆಯ ದಿವಾಳಿಯನ್ನು ಅನುಭವಿಸುತ್ತಿದೆ.
10) ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಾಣದು.
11) ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ. ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ.
12) ಜಗತ್ತು ವೇಗವಾಗಿ ಮುಂದುವರೆದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.
13) ದುಡಿಯದೆ ತಿನ್ನುವುದು ಕೂಳು, ಶ್ರಮ ಜೀವನ ನಡೆಸಿ ಊಟ ಮಾಡುವುದು ಪ್ರಸಾದ.
14) ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.
15) ಧರ್ಮ ತತ್ವಗಳು ಉಳಿಯಬೇಕಾದರೆ ಸ್ತ್ರೀಯರು ಸಂಸ್ಕಾರವಂತರಾಗಬೇಕು. ಸಮಾಜದ ಕಣ್ಣಾಗಬೇಕು.
35 + Shivakumara Swamiji Quotes in Kannada
16) ಧರ್ಮ ಗ್ರಂಥದಲ್ಲಿಲ್ಲ, ಗುಡಿಯಲ್ಲಿಲ್ಲ, ಬದುಕಿನಲ್ಲಿದೆ. ಹೃದಯವಂತಿಕೆಯಲ್ಲಿದೆ.
17) ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ.
18) ಇಂದು ರಾಷ್ಟ್ರಾದ್ಯಂತ್ಯ ಜನಶಕ್ತಿಯ ಅಪವ್ಯಯವಾಗುತ್ತಿದೆ. ಇದು ಶುಭ ಲಕ್ಷಣವಲ್ಲ.
19) ಜನ ನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು.
20) ವ್ಯವಸಾಯ ಎಂಬುದು ಪವಿತ್ರ ವೃತ್ತಿ. ಅನ್ನಬ್ರಹ್ಮನ ಸೃಷ್ಠಿ ಮಾಡುವ ಅನುಪಮ ಉದ್ಯೋಗ.
21) ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ, ಆ ಶಕ್ತಿ ನಿಕ್ಷೇಪವಾಗಿದೆ.
22) ಕಾಯಕ ಲೋಕ ಕಲ್ಯಾಣಕ್ಕೆ ಮಾಡುವ ಪ್ರಾರ್ಥನೆ. ಕೈಯಿಂದ ಮಾಡುವ ಪೂಜೆ.
23) ದೃಷ್ಠಿ ಪವಿತ್ರವಾಗಿರಲಿ. ಭಾವ ಶುದ್ಧವಾಗಿರಲಿ. ಬದುಕು ಭಕ್ತಿಯಿಂದೊಡಗೂಡಿರಲಿ.
24) ಹೆಣ್ಣಿಗೆ ಧಾರ್ಮಿಕ ಸಂಸ್ಕಾರವನ್ನು, ಸ್ವಾತಂತ್ರ್ಯವನ್ನು ಕೊಟ್ಟಿದ್ದು ಶರಣ ಧರ್ಮ.
25) ಮನುಷ್ಯ ಮನುಷ್ಯನಾಗಿ ಬಾಳುವ ಕಲೆಯನ್ನು ಇಂದು ಮರೆಯುತ್ತಿದ್ದಾನೆ.
26) ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಅದರಿಂದ ಬರುವ ಲಾಭ ಅಪಾರವಾದುದು.
27) ಪರಮಾತ್ಮ ಕೊಟ್ಟ ಶ್ರೇಷ್ಠವಾದ ಆಸ್ತಿಯಲ್ಲಿ ಹೆಚ್ಚಿನ ಭರವಸೆಯನ್ನು ತಾಳಬೇಕು.
28) ಆಡಳಿತ ಮಾಡುವವರು ಬಹಳ ಎಚ್ಚರಿಕೆ ಹಾಗೂ ಜಾಣ್ಮೆಯಿಂದ ಇರಬೇಕು.
29) ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಸ್ವಚ್ಛಂದ ಪ್ರವೃತ್ತಿಯಲ್ಲಿ ಅದೊಂದು ಆತ್ಮವಿಕಾಸ ರಕ್ಷೆ.
30) ವ್ಯಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಜಗತ್ತನ್ನು ಬಿಡಬೇಕಾಗಿಲ್ಲ, ಸಂಸಾರ ತೊರೆಯಬೇಕಿಲ್ಲ, ಕಾಡನ್ನು ಸೇರಬೇಕಿಲ್ಲ. ತಾನು ಇದ್ದಲ್ಲೇ ಸಾಧನೆ ಮಾಡಿ ಸಿದ್ಧಿಯನ್ನು ಪಡೆಯಬಹುದು. ಸಾಕ್ಷಾತ್ಕಾರವನ್ನು ಹೊಂದಬಹುದು. ಅದು ಹೆಚ್ಚಾಗಿ ಮನಸ್ಸನ್ನೇ ಅವಲಂಬಿಸಿರುತ್ತದೆ.
31) ಆತ್ಮ ಎಂದರೆ ದೇಹವಲ್ಲ ಅಥವಾ ಅವಯವ ಸಮೂಹವಲ್ಲ. ಮನಸ್ಸೂ ಅಲ್ಲ. ಈ ಎಲ್ಲವೂಗಳಲ್ಲಿಯೂ ಇರುವ ಚೈತನ್ಯ. ಅದಕ್ಕೆ ನಾಶವಿಲ್ಲ. ಆ ಆತ್ಮವನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ.
32) ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿರುವ ಪುಣ್ಯಶಾಲಿಯೇ ಮಹಾತ್ಮ.
33) ಜಗತ್ತನ್ನು ಬಿಡದೆ, ಸಂಸಾರವನ್ನು ತೊರೆಯದೆ, ಕಾಡನ್ನು ಸೇರದೆ, ತಾನು ಇದ್ದಲ್ಲಿಯೇ ಸಾಧನೆ ಮಾಡಿ ಸಿದ್ಧಿ ಪಡೆಯುವುದು ಸಾಕ್ಷಾತ್ಕಾರ.
34) ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅಪಚಾರ ಮಾಡದೆ ನಡೆದುಕೊಳ್ಳುವವನೇ ಧೀರ.
35) ಪ್ರಾರ್ಥನೆ ಎಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ, ಆಹಾರ. ಅದನ್ನು ಗಳಿಸುವಾಗ ಏಕಾಗ್ರತೆಯಿರಬೇಕು. ಹೊಟ್ಟೆಗೆ ಹಸಿವಾದಾಗ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೇ ಹಾಗೆಯೇ ಮನಸ್ಸಿನ ಹಸಿವೆಗೆ ಪ್ರಾರ್ಥನೆ ಪ್ರಸಾದವಾಗುತ್ತದೆ.
36) ಪ್ರತಿದಿನ ಮಲಗುವ ಮುನ್ನ ನಡೆ ನುಡಿಗಳು, ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು.
FAQ
ಶಿವಕುಮಾರ ಸ್ವಾಮೀಜಿ ಅವರು ಏಪ್ರಿಲ್ 1, 1908 ರಂದು ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ಜನಿಸಿದರು.
ಶಿವಕುಮಾರ ಸ್ವಾಮೀಜಿ ಅವರು ಏಪ್ರಿಲ್ 1, 1908 ರಂದು ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ಜನಿಸಿದರು.
ಶ್ರೀ ಹರದನಹಳ್ಳಿ ಗೋಸಲ ಸಿದ್ದೇಶ್ವರ ಸ್ವಾಮಿಗಳು 15 ನೇ ಶತಮಾನದಲ್ಲಿ ಭಾರತದ ಕರ್ನಾಟಕದ ದಕ್ಷಿಣ ರಾಜ್ಯದಲ್ಲಿರುವ ಒಂದು ಹಳ್ಳಿಯಲ್ಲಿ ಸಿದ್ದಗಂಗಾ ಮಠವನ್ನು ಸ್ಥಾಪಿಸಿದರು.
113 ವರ್ಷಗಳು (ಜನನ 1 ಏಪ್ರಿಲ್ 1907)
ಶಿವಕುಮಾರ ಸ್ವಾಮಿಜಿ ನುಡಿಮುತ್ತುಗಳು – Shivakumara Swamiji Quotes in Kannada
ಇತರ ವಿಷಯಗಳು
ಪುನೀತ್ ರಾಜ್ ಕುಮಾರ್ ಬಗ್ಗೆ ಪ್ರಬಂಧ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಶಿವಕುಮಾರ ಸ್ವಾಮಿಜಿ ನುಡಿಮುತ್ತುಗಳುನಿಮಗೆ ಇಷ್ಟವಾಗಿದೆ ಎಂದು ಭಾವಿಸಿದ್ದೇವೆ. ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ