Sarva Mangala Mangalye Mantra in Kannada, ಸರ್ವ ಮಂಗಳ ಮಾಂಗಲ್ಯೇ ಶ್ಲೋಕ ದುರ್ಗಾದೇವಿ ಪೂಜಾ ಮಂತ್ರ, Sarva Mangala Mangalye Lyrics in Kannada ಸರ್ವ ಮಂಗಳ ಮಾಂಗಲ್ಯೇ ಮಂತ್ರ Sarva Mangala Mangalye Stotram in Kannada Sarva Mangala Mangalye Stotram
Sarva Mangala Mangalye Mantra in Kannada
ಸರ್ವ ಮಂಗಳ ಮಾಂಗಲ್ಯೇ ಮಂತ್ರ
ಹಿಂದೂ ಧರ್ಮದಲ್ಲಿ ದೇವರಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಅದರಲ್ಲೂ ದುರ್ಗಾ ದೇವಿಯೆಂದರೆ ಹಿಂದೂ ದೇವತೆಯರಲ್ಲೇ ಅತ್ಯಂತ ಪ್ರಭಾವಶಾಲಿ ದೇವಿಯೆನ್ನುವ ನಂಬಿಕೆಯಿದೆ.
ದುರ್ಗೆಯನ್ನು ದೇವಿ ಅಥವಾ ಶಕ್ತಿ ಎಂದೂ ಕೂಡ ಕರೆಯಲಾಗುತ್ತದೆ. ಹಿಂದಿಯಲ್ಲಿ ಇದರರ್ಥ ‘ಮಹಿಳೆ’ ಮತ್ತು ‘ಶಕ್ತಿ’ ಎಂದರ್ಥ.
ದೇವರನ್ನು ಪೂಜಿಸುವುದರಿಂದ ಮಾತ್ರವಲ್ಲ, ಕೆಲವೊಂದು ಮಂತ್ರ ಪಠಣೆಯಿಂದ ಕೂಡ ದೇವರನ್ನು ನಾವು ಒಲಿಸಿಕೊಳ್ಳಬಹುದು. ಅದರಲ್ಲೂ ದುರ್ಗೆಯನ್ನು ಕೇವಲ ಪೂಜೆಯಿಂದ ಒಲಿಸಲು ಸಾಧ್ಯವಿಲ್ಲ.
ಹಾಗಾಗಿ ನಿಮ್ಮ ಆರೋಗ್ಯ, ಐಶ್ವರ್ಯ, ಮಕ್ಕಳ ಜ್ಞಾನ ಹೆಚ್ಚಿಸಲು, ಆರೋಗ್ಯ ಹೆಚ್ಚಿಸಲು, ದುಷ್ಟ ಶಕ್ತಿಯಿಂದ ದೂರವಿರಲು ಇಲ್ಲಿದೆ ಸರಳವಾದ ದುರ್ಗಾ ದೇವಿ ಮಂತ್ರಗಳು.
ದುರ್ಗಾ ದೇವಿ
ಪ್ರಾಚೀನ ಕಾಲದಲ್ಲಿ ಈ ದೇವಿಯನ್ನು ಹಿಮಾಲಯ ಹಾಗೂ ವಿಂಧ್ಯದ ನಿವಾಸಿಗಳು ಭಕ್ತಿಪೂರ್ವಕವಾಗಿ ಪೂಜಿಸಲ್ಪಟ್ಟ ಪರ್ವತ ದೇವಿ. ದಿನಗಳು ಕಳೆದಂತೆ ಈಕೆಯ ಶಕ್ತಿಯನ್ನು ಅರಿತ ಸಾಮಾನ್ಯ ಜನರೂ, ಬ್ರಾಹ್ಮಣರೂ ಕೂಡ ಈಕೆಯನ್ನು ಪೂಜಿಸಲಾರಂಭಿಸಿದರು.
ದುರ್ಗೆಯನ್ನು ಹೆಚ್ಚಾಗಿ ನವರಾತ್ರಿಯ ದಿನಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯಂದು ಈಕೆಯನ್ನು ವಿಶೇಷ ಅಲಂಕಾರದೊಂದಿಗೆ ಹೂವು ಹಣ್ಣುಗಳಿಂದ ಪೂಜಿಸಲಾಗುತ್ತದೆ.
ಹಿಂದೂ ಧರ್ಮದ ಅದಿದೇವತೆ, ಪಾರ್ವತಿಯ ಇನ್ನೊಂದು ಸ್ವರೂಪವೆಂದೇ ಗುರುತಿಸಿಕೊಂಡ ದುರ್ಗೆ ಯನ್ನು ಯುದ್ಧದ ಸಮಯದಲ್ಲಿ ಹೆಚ್ಚಾಗಿ ಪೂಜಿಸಲಾಗುತ್ತಿತ್ತು. ಹಾಗಾಗಿ ಸಂಸ್ಕೃತದಲ್ಲಿ ದುರ್ಗಾ ಎಂದರೆ ‘ಒಂದು ಕೋಟೆ’ ಎಂದರ್ಥ.
ಸಾಮಾನ್ಯವಾಗಿ ದುರ್ಗೆಯೆಂದರೆ ಎಲ್ಲಾ ಮನಸ್ಸಿನಲ್ಲಿ ಮೊದಲು ಮೂಡುವುದು ಆಕೆಯ ಕೋಪದಿಂದ ಕೂಡಿದ ಆ ಮುಖ, ತನ್ನೆಲ್ಲಾ ಕೈಗಳಲ್ಲೂ ವಿವಿಧ ರೀತಿಯ ಅಸ್ತ್ರಗಳನ್ನು ಹಿಡಿದು ಹುಲಿಯ ಮೇಲೇರಿ ಬರುವ ಆ ದೃಶ್ಯ.
ಆಕೆ ಕೇವಲ ಕೆಟ್ಟವರಿಗೆ ಮಾತ್ರ ತನ್ನ ರೌದ್ರಾವತಾರವನ್ನು ಪ್ರದರ್ಶಿಸುವ ದೇವಿ. ದುಷ್ಟರನ್ನು ಶಿಕ್ಷಿಸುವ, ಸಜ್ಜರನ್ನು ರಕ್ಷಿಸುವ ಸದ್ಗುಣ ಸಂಪನ್ನೆ ತಾಯಿ ದುರ್ಗೆ. ದುಷ್ಟರ ಸಂಹಾರಕ್ಕಾಗಿ 9 ಅವತಾರಗಳನ್ನೆತ್ತಿದ ಮಹಾತಾಯಿ.
ಇದೀಗ ನಾವು ಹೇಳಲು ಹೊರಟಿರುವ ಮಂತ್ರವನ್ನು ಸಾಮಾನ್ಯವಾಗಿ ನೀವೆಲ್ಲರೂ ಕೇಳಿರುತ್ತೀರಿ, ಯಾಕೆಂದರೆ ಈ ಮಂತ್ರ ಅಷ್ಟೊಂದು ಜನಪ್ರಿಯ ಮಂತ್ರವಾಗಿದೆ.
ಈ ಮಂತ್ರವನ್ನು ದುರ್ಗಾ ದೇವಿಯ ಪೂಜೆಯನ್ನು ಆರಂಭಿಸುವಾಗ ಪಠಿಸಲಾಗುತ್ತದೆ. ಈ ಮಂತ್ರ ಪಠಿಸುವುದರಿಂದ ಜ್ಞಾನ ಮತ್ತು ಏಕಾಗ್ರತೆಯು ವೃದ್ಧಿಸುತ್ತದೆ. ಈ ಮಂತ್ರವನ್ನು ಯಾರು ಬೇಕಾದರು ಪಠಿಸಬಹುದು.
Sarva Mangala Mangalye Lyrics in Kannada
ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣೀ ನಮೋಸ್ತುತೆ.
ಯಾ ದೇವಿ ಸರ್ವ ಭೂತೇಷು, ಶಾಂತಿ ರೂಪೇಣಾ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಶಕ್ತಿ ರೂಪೇಣಾ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಮಾತ್ರಿ ರೂಪೇಣಾ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಬುದ್ಧಿ ರೂಪೇಣಾ ಸಂಗ್ಸ್ತಿತ
ನಮಸ್ತಸೈ, ನಮಸ್ತಸೈ, ನಮಸ್ತಸೈ, ನಮೋ ನಮಃ
ಇದು ಪ್ರಮುಖ ದುರ್ಗಾ ಮಂತ್ರವಾಗಿದ್ದು, ಈ ಮಂತ್ರವನ್ನು ಹೆಚ್ಚಾಗಿ ದುರ್ಗಾದೇವಿಯನ್ನು ಪೂಜಿಸುವ ಸಂದರ್ಭದಲ್ಲಿ ಪಠಿಸಲಾಗುತ್ತದೆ. ದುರ್ಗಾದೇವಿಯನ್ನು ಪೂಜಿಸುತ್ತಾ ನಾವೂ ಕೂಡ ಈ ಮಂತ್ರವನ್ನು ಭಜಿಸುವುದರಿಂದ ನಮ್ಮ ಬುದ್ಧಿ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.
ಮಂತ್ರವನ್ನು ಪಠಿಸುವುದರಿಂದ ಕೂಡ ವ್ಯಕ್ತಿಯ ಜೀವನದಲ್ಲಿ ಎದುರಾಗಬಹುದಾದ ಎಂತಹುದ್ದೇ ಕಷ್ಟವನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ. ಹಾಗೂ ಈ ಮಂತ್ರದಿಂದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಮಹಿಳೆಯಾಗಲಿ, ಪುರುಷರಾಗಲಿ ಈ ಮಂತ್ರವನ್ನು ಭಜಿಸುವುದರಿಂದ ದುಷ್ಟ ಶಕ್ತಿಯು ನಮ್ಮನ್ನು ಆಕರ್ಷಿಸುವುದಿಲ್ಲ. ಅಷ್ಟು ಮಾತ್ರವಲ್ಲದೇ ಶತ್ರುಗಳಿಂದಾಗಬಹುದಾದ ಅನಾಹುತವನ್ನು ಕೂಡ ತೊಡೆದುಹಾಕುತ್ತದೆ. ಶಾಂತಿ ಮತ್ತು ಸಮೃದ್ಧಿಗಾಗಿ ಈ ಮಂತ್ರವನ್ನು ಪಠಿಸಿರಿ
FAQ :
ದುರ್ಗೆಯನ್ನು ಹೆಚ್ಚಾಗಿ ನವರಾತ್ರಿಯ ದಿನಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯಂದು ಈಕೆಯನ್ನು ವಿಶೇಷ ಅಲಂಕಾರದೊಂದಿಗೆ ಹೂವು ಹಣ್ಣುಗಳಿಂದ ಪೂಜಿಸಲಾಗುತ್ತದೆ.
ಸಾಮಾನ್ಯವಾಗಿ ದುರ್ಗೆಯೆಂದರೆ ಎಲ್ಲಾ ಮನಸ್ಸಿನಲ್ಲಿ ಮೊದಲು ಮೂಡುವುದು ಆಕೆಯ ಕೋಪದಿಂದ ಕೂಡಿದ ಆ ಮುಖ, ತನ್ನೆಲ್ಲಾ ಕೈಗಳಲ್ಲೂ ವಿವಿಧ ರೀತಿಯ ಅಸ್ತ್ರಗಳನ್ನು ಹಿಡಿದು ಹುಲಿಯ ಮೇಲೇರಿ ಬರುವ ಆ ದೃಶ್ಯ.
ಇತರೆ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಸರ್ವ ಮಂಗಳ ಮಾಂಗಲ್ಯೇ ಮಂತ್ರ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಸರ್ವ ಮಂಗಳ ಮಾಂಗಲ್ಯೇ ಮಂತ್ರದ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ