Moral Stories in Kannada | ಕನ್ನಡ ಕಥೆಗಳು

Moral Stories in Kannada | ಕನ್ನಡ ಕಥೆಗಳು

 

ಕನ್ನಡ ನೀತಿ ಕಥೆಗಳು

ಮುಖಭಂಗ

ಒಂದು ಹಳ್ಳಿ . ಅಲ್ಲಿ ಹೆಚ್ಚು – ಕಡಿಮೆ ಎಲ್ಲ ಬಡ ಕುಟುಂಬಗಳೇ ಇದ್ದವು .

ಒಂದು ಮಾತ್ರ ಶ್ರೀಮಂತ ಕುಟುಂಬವಿತ್ತು . ಈ ಕುಟುಂಬದ ಯಜಮಾನ ಬಡ ಕುಟುಂಬಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಗರ್ವದಿಂದ ಮೆರೆಯುತ್ತಿದ್ದನು . ಇವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಎಲ್ಲರೂ ಕಾಯುತ್ತಿದ್ದರು . ಆ ಹಳ್ಳಿಯಲ್ಲಿ ಪ್ರತಿ ವರ್ಷದಂತೆ ಗ್ರಾಮ ದೇವತೆಯ ಹಬ್ಬ ಬಂತು .

ಸುತ್ತಮುತ್ತಲಿನ ಗ್ರಾಮದವರು ಸೇರಿದ್ದರು . ಗ್ರಾಮ ದೇವತೆಯ ಹಬ್ಬದ ವಿಶೇಷ ದೇವತೆಯ ಮೈ ಮೇಲೆ ಹಾಕಿರುವ ಸೀರೆಯನ್ನು ಹರಾಜು ಹಾಕುವುದಾಗಿತ್ತು . ಅದನ್ನು ತೆಗೆದುಕೊಂಡವರಿಗೆ ಪುಣ್ಯ ಲಭಿಸುವುದು ಎಂಬ ನಂಬಿಕೆಯಿತ್ತು . ಯಾವಾಗಲೂ ಸೀರೆ ಶ್ರೀಮಂತ ಕುಟುಂಬದ ಪಾಲಾಗುತ್ತಿತ್ತು .

ಈ ಸಾರಿ ಹಬ್ಬದಲ್ಲಿ ಹರಾಜು ಪ್ರಾರಂಭವಾಯಿತು , ಹರಾಜು ಕೂಗುವ ವ್ಯಕ್ತಿ ಸೀರೆ ತೋರಿಸುತ್ತಾ ಒಂದು ಸಾವಿರ ಎಂದನು . ಶ್ರೀಮಂತ ‘ ಎರಡು ಸಾವಿರ ‘ ಎಂದನು , ತಕ್ಷಣವೇ ಗುಂಪಿನಿಂದ ಐದು ಸಾವಿರ ‘ ಎಂಬ ಕೂಗು ಕೇಳಿಸಿತು . ಶ್ರೀಮಂತನಿಗೆ ಆಶ್ಚರ್ಯವಾಯಿತು . ನೋಡುತ್ತಾನೆ .

ತನ್ನ ಹಳ್ಳಿಯ ಬಡ ಕುಟುಂಬದ ವ್ಯಕ್ತಿಯೊಬ್ಬ ಕೂಗಿದ್ದು ! ಶ್ರೀಮಂತ ಏನನ್ನೂ ತೋರಿಸಿಕೊಳ್ಳದೆ ಮತ್ತೆ ಹತ್ತು ಸಾವಿರ ಎಂದನು . ಶ್ರೀಮಂತನ ಕೂಗಿಗೆ ಪ್ರತಿಯಾಗಿ “ ನನ್ನ ಇಡೀ ಆಸ್ತಿ ‘ ಎಂದು ಬಿಟ್ಟಿ ಬಡವ . ಇದನ್ನು ಕೇಳಿದ ಶ್ರೀಮಂತ ಆತನ ಸರಿಸಮಾನವಾಗಿ ಕೂಗಲು ಧೈರ್ಯ ಬರಲಿಲ್ಲ .

ಏನೂ ಮಾತು ಹೊರಡಲಿಲ್ಲ . ಮುಖಭಂಗವಾದಂತಾಗಿ ಮೆಲ್ಲನೆ ಕಾಲುಕಿತ್ತನು .

************************************************************

 

 

ತಪ್ಪು ಉತ್ತರ

ಕಾಡಿನ ಒಂದು ಮರದ ಮೇಲೆ ಒಂದು ಕೋಗಿಲೆ ವಾಸವಾಗಿತ್ತು . ಅದೇ ಮರದ ‘ ಮೇಲೆ ಬೇರೆ ಕೆಲವು ಪಕ್ಷಿಗಳು ವಾಸವಾಗಿದ್ದವು , ಕೋಗಿಲೆಗೆ ಖುಷಿಯಾದಾಗ ಅದು ಹಾಡುತ್ತಿತ್ತು ,

ಇದರಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು . ಒಂದು ದಿನ ಎಲ್ಲ ಪಕ್ಷಿಗಳು ಸೇರಿ ಅದನ್ನು ಅಲ್ಲಿಂದ ಓಡಿಸಿದವು . ಅದು ಕಾಡಿನ ಹೊರಗೆ ಇರುವ ಒಂದು ಒಣಮರದ ಮೇಲೆ ಹೋಗಿ ಕುಳಿತುಕೊಂಡಿತು .

ಅಷ್ಟರಲ್ಲೇ ಮತ್ತೊಂದು ಕೋಗಿಲೆ ಅಲ್ಲಿಗೆ ಬಂತು . ತನ್ನ ಬಂಧುವೊಂದು ನಿರಾಶೆಯಿಂದ ಕುಳಿತಿರುವುದನ್ನು ಕಂಡು ಅದರ ನಿರಾಶೆಗೆ ಕಾರಣ ಏನೆಂದು ಕೇಳಿತು .

ಅದಕ್ಕೆ ಮೊದಲನೆಯ ಕೋಗಿಲೆ ‘ ನಾನು ಕಾಡಿನಲ್ಲಿರುವ ಒಂದು ಮರದ ಮೇಲೆ ವಾಸಿಸುತ್ತಿದ್ದೆ . ನನಗೆ ಖುಷಿಯಾದಾಗ ಹಾಡುತ್ತಿದ್ದೆ . ಒಂದು ದಿನ ಆ ಮರದ ಮೇಲೆ ವಾಸವಾಗಿದ್ದ ಬೇರೆ ಪಕ್ಷಿಗಳು ‘ ನೀನೇಕೆ ಹಾಡುವಿ ? ” ಎಂದು ಕೇಳಿದವು . ಅದಕ್ಕೆ ನಾನು ನನ್ನ ಸಂತೋಷಕ್ಕಾಗಿ ಹಾಡುತ್ತೇನೆ .

ಹಾಡದೇ ನಾನು ಬದುಕಿರಲಾರೆ ಎಂದು ಹೇಳಿದೆ . ಆಗ ಎಲ್ಲ ಪಕ್ಷಿಗಳು ಸೇರಿ ನನ್ನನ್ನು ಅಲ್ಲಿಂದ ಓಡಿಸಿಬಿಟ್ಟವು ‘ ಎಂದು ಹೇಳಿತ್ತು . ಆಗ ಎರಡನೆಯ ಕೋಗಿಲೆ ‘ ನೀನು ಅವಕ್ಕೆ ತಪ್ಪು ಉತ್ತರ ಕೊಟ್ಟಿರುವೆ .

ಅದಕ್ಕೆ ಹಾಗಾಗಿದೆ ನಿನ್ನ ಉತ್ತರದಿಂದ ಅವು ನೀನೊಬ್ಬ ಸ್ವಾರ್ಥಿ . ನಿನ್ನ ಮೇಲೆ ನಿನಗೆ ನಿಯತ್ರಣವಿಲ್ಲ ಎಂದು ತಿಳಿದುಬಿಟ್ಟಿವೆ .

ನನಗೂ ಆ ಪಕ್ಷಿಗಳು ಅದೇ ಪ್ರಶ್ನೆಯನ್ನು ಕೇಳಿದ್ದವು . ಅದಕ್ಕೆ ನಾನು ‘ ನಾನು ನಿಮ್ಮನ್ನು ಖುಷಿಪಡಿಸುವದಕ್ಕಾಗಿ ಹಾಡುತ್ತೇನೆ ‘ ಎಂದು ಹೇಳಿದ್ದೆ .

ಆದ್ದರಿಂದ ನಾನು ಈಗಲೂ ಅವುಗಳ ಜೊತೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದು ಹೇಳಿತು . ನಾವು ಆಡುವ ಮಾತು ತುಂಬ ಜಾಣ್ನೆಯಿಂದ ಕೊಡಿರಬೇಕು .

        ಆದ್ದರಿಂದಲೇ ‘ ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ ‘ ಎಂದು ಹಿರಿಯರು ಹೇಳಿರುವುದು .

 

************************************************************

 

ಕನ್ನಡ ನೀತಿ ಕಥೆಗಳು

ಹಣೆಬರಹ

ಒಂದಾನೊಂದು ಕಾಲದಲ್ಲಿ ಸುವರ್ಣಗಿರಿ ಎಂಬ ರಾಜ್ಯದಲ್ಲಿ ‘ ಚಂದ್ರಸೇನನೆಂಬ ರಾಜನು ಆಳುತ್ತಿದ್ದನು . ಆತನು ದಾನ , ಧರ್ಮ , ಪೂಜೆ ಪುನಸ್ಕಾರಗಳಿಗೆ ಪ್ರಖ್ಯಾತನಾಗಿದ್ದನು .

‘ ನನ್ನ ರಾಜ್ಯದಲ್ಲಿ ಬಡವರೇ ಇರಬಾರದು . ಎಲ್ಲರೂ ಸುಖ ಸೌಭಾಗ್ಯಗಳಿಂದ ಕೂಡಿರಬೇಕು ‘ ಎಂಬ ಭಾವನೆ ಹೊಂದಿ ತನ್ನ ಪ್ರಜೆಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಕಾಣುತ್ತಿದ್ದನು . ಆಗಾಗ ಸಂಜೆಯ ವೇಳೆ ಮಂತ್ರಿ ಸುಗುಣಾನಂದನೊಡನೆ ವಾಯು ವಿಹಾರಕ್ಕೆ ಹೋಗುತ್ತಿದ್ದನು .

ಒಂದು ದಿನ ಹೀಗೆ ಹೋಗುತ್ತಿರುವಾಗ ಸಂಜೆ ಮುಗಿದು ಕತ್ತಲಾಗುತ್ತ ಬಂತು . “ ಮಂತ್ರಿಗಳೇ ಬೇಗ ರಾಜಧಾನಿ ಸೇರೋಣ . ಕುದುರೆಯನ್ನು ವೇಗವಾಗಿ ಓಡಿಸಿ ‘ ಎಂದು ಸೂಚಿಸಿದನು .

ಕೊಂಚ ದೂರ ಹೋಗುವುದರಲ್ಲಿ ರಾಜನು ಕುದುರೆಯನ್ನು ನಿಲ್ಲಿಸಿ ‘ ಮಂತ್ರಿಗಳೇ ಕತ್ತಲಾಗುತ್ತಾ ಬಂದಿದ್ದರೂ ಕುಟೀರದ ಮುಂದೆ ತೋಟದ ಕೆಲಸ ಮಾಡುತ್ತಿರುವ ವಿಪ್ರ ಯಾರು ? ತುಂಡುಬಟ್ಟೆ ಉಟ್ಟು ಚಳಿಯನ್ನು ಲೆಕ್ಕಿಸದ ಆ ಮಹಾ ಪುರುಷ ಯಾರು ‘ ಎಂದು ಕೇಳಿದರು .

ಆಗ ಮಂತ್ರಿಯು ಆತ ಶೇಷ ಶರ್ಮನೆಂಬ ಪ್ರಖಾಂಡ ಪಂಡಿತ , ಶ್ರಮಜೀವಿ ಎಂದರು . “ ನಮ್ಮ ರಾಜ್ಯದಲ್ಲಿ ಆತ ಏಕೆ ಇಷ್ಟು ಕಷ್ಟಪಡಬೇಕು  ಅರಮನೆಗೆ ಕರೆಸಿ ಬೇಕಾದ್ದನ್ನು ಕೊಡಿ ‘ ಎಂದನು . `

ಕ್ಷಮಿಸಿ ಮಹಾರಾಜ ಆತ ಮಹಾ ಆತ್ಮ ಗೌರವಿ , ಯಾರಿಂದ ಏನೂ ಬೇಡುವುದಿಲ್ಲ . ಯಾರ ಸಹಾಯವನ್ನೂ ಬಯಸುವುದಿಲ್ಲ . ಕಾಯಕ ಮಾಡಿ ಹೆಂಡತಿ ಮಕ್ಕಳನ್ನು ಪೋಷಿಸುತ್ತಿದ್ದಾನೆ ‘ ಎಂದು ಉತ್ತರಿಸಿದನು ಮಂತ್ರಿ .

ಸರಿ ನಡೆಯಿರಿ ಇದಕ್ಕೆ ನಾವೇ ಒಂದು ಉಪಾಯ ಮಾಡೋಣ ‘ ಎಂದು ಇಬ್ಬರೂ ಹೊರಟರು . ಮಾರನೆಯ ದಿನ ಶೇಷ ಶರ್ಮನ ತೋಟದಲ್ಲಿ ಒಂದು ಚೀಲ ಸಿಕ್ಕಿತು . ಅದರ ತುಂಬಾ ಚಿನ್ನದ ನಾಣ್ಯಗಳಿದ್ದವು .

ಕೂಡಲೆ ಆತ ಅದನ್ನು ಕೈಯಲ್ಲಿ ಹಿಡಿದು ರಾಜ ದರ್ಬಾರಿಗೆ ನಡೆದ ‘ ಮಹಾ ಪ್ರಭು ನನ್ನ ತೋಟದಲ್ಲಿ ಚಿನ್ನದ ನಾಣ್ಯಗಳಿರುವ ಈ ಚೀಲ ಸಿಕ್ಕಿದೆ , ಯಾರದೋ ಏನೋ ವಿಚಾರಣೆ ನಡೆಸಿ ಅವರಿಗೆ ತಲುಪಿಸಿ  ಎಂದು ಹೇಳಿ ಹೊರಡಲನುವಾದ

ಆಗ ರಾಜನು ‘ ಅದು ಯಾರದೇ ಆಗಲಿ , ನಿಮ್ಮ ತೋಟದಲ್ಲಿ ಸಿಕ್ಕಿದೆ . ನೀವೇ ಅನುಭವಿಸಿ ‘ ಎಂದನು . ಆಗ ಶೇಷ ಶರ್ಮ ‘ ಕ್ಷಮಿಸಿ ಮಹಾ ಪ್ರಭು , ನಿತ್ಯ ನನ್ನ ತೋಟಕ್ಕೆ ಅನೇಕ ಹಕ್ಕಿಗಳು ಬರುತ್ತವೆ .

ನವಿಲು , ಜಿಂಕೆಗಳು ಬರುತ್ತವೆ . ಅವು ನಮ್ಮದೆಂದರೆ ದ್ರೋಹವಾಗುವುದಿಲ್ಲವೆ ? ಅನೇಕ ಮಂದಿ ದಾರಿಹೋಕರು ನಮ್ಮ ತೋಟದ ಹಣ್ಣು ಹಂಪಲು ತಿಂದು ಹೋಗುತ್ತಾರೆ .

ಅವರು ನಮ್ಮವರಾಗುತ್ತಾರೆ ? ಕ್ಷಮಿಸಿ ಆ ಹಣ ಯಾರದೋ ಅವರಿಗೆ ಕೊಡಿ ‘ ಎಂದನು . ‘ ನಮ್ಮ ಹಣೆಯಲ್ಲಿ ಬರೆದಿರುವಷ್ಟು ನಮಗೆ ಸಿಕ್ಕಿದೆ . ನಾನು ಅದರಿಂದ ಸುಖವಾಗಿದ್ದೇನೆ ‘

ಎಂದು ವಂದಿಸಿ ಕುಟೀರಕ್ಕೆ ತೆರಳಿದನು . ಮಂತ್ರಿ ` ಪ್ರಭು ಹಣೆಬರಹ ಬದಲಾಯಿಸಲು ಬರೆದ ಆ ಬ್ರಹ್ಮನಿಂದಲೇ ಸಾಧ್ಯವಿಲ್ಲ ಎಂದನು .

           ************************************************************

 

Moral Stories in Kannada With Video

Kannada Moral Stories – ಬಡವರ ಗಣೇಶ ಚತುರ್ಥಿ | Stories in Kannada | Kannada Stories

Kannada Moral Stories – ಬಡ ಕಾರ್ಮಿಕರ ಭಕ್ತಿ | Stories in Kannada | Kannada Stories

ತಾಯಿಯ ಮಾಂತ್ರಿಕ ಪೆಟ್ರೋಲ್ | Kannada Stories | Kannada Moral Stories | Kannada Kathe | Magic Land

ಸಹೋದರಿಯ ಬ್ಯೂಟಿ ಪಾರ್ಲರ್ | Kannada Kathe | Stories in Kannada | Stories Dunia Kannada

Kannada Moral Stories – ಗಲಿವರ್ ನ ಹೊಸ ಕಥೆ | Stories in Kannada | Kannada Stories | Kannada Kathe

ಇತರ ವಿಷಯಗಳು: 

Kalpanika Kathegalu

ಇನ್ನು ಹೆಚ್ಚಿನ  ಕನ್ನಡ ಕಥೆಗಳು  ಹೋಗಲು ಬಯಸಿದರೆ  ಇಲ್ಲಿ ಕೆಲವು ಪುಸ್ತಕಗಳಲ್ಲಿ ಕೊಟ್ಟಿದ್ದೇವೆ   ನೀವು ನೋಡಬಹುದು

Bharatada Vaividhyamaya Janapada Kathegalu

Kannada Janapada Kathegalu

Ajji Helida Kathegalu

2 thoughts on “Moral Stories in Kannada | ಕನ್ನಡ ಕಥೆಗಳು

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh