Kannada Kathegalu | ಕನ್ನಡ ಕಥೆಗಳು | Kannada Kalpanika Kathegalu

Kannada Kathegalu, Kannada Kalpanika Kathegalu, ಕನ್ನಡ ಕಥೆಗಳು, ಕನ್ನಡ ಕಾಲ್ಪನಿಕ ಕಥೆಗಳು, Moral Story in Kannada, Short Kannada Stories Neeti Kathegalu Panchatantra Kathegalu in Kannada

“ನಿಜವಾದ ಗೆಳೆತನ”

ಒಂದೂರಿನಲ್ಲಿ ನಾಲ್ಕು ಜನ ಗೆಳೆಯರಿದ್ದರು . ಅದರಲ್ಲಿ ಒಬ್ಬ ಗೆಳೆಯನ ಸಾವು ಸಮೀಪಿಸಿತ್ತು . ಆದ್ದರಿಂದ ಅವನು ಮೊದಲನೇ ಗೆಳೆಯನ ಮನೆಗೆ ಹೋಗಿ ಅವರ ಹತ್ತಿರ ಹೀಗೆ ಹೇಳಿದ .

“ಗೆಳೆಯ ನನ್ನ ಸಾವು ಹತ್ತಿರ ಬಂದಿದೆ . ಆದರೆ ನನಗೆ ಸಮಾಧಿಯ ಒಳಗೆ ಒಬ್ಬನೇ ಇರಲು ಭಯ . ನೀನು ನನ್ನ ಜೊತೆ  ಬರುವೆಯಾ ?

”ಅದಕ್ಕೆ ಗೆಳೆಯ ಹೇಳಿದ – ” ನೋಡು ನಿನ್ನ ಸಮಾಧಿಗೆ ಜಾಗ ಖರೀದಿಸಿ ಕೊಡುವೆ . ರೇಷ್ಮೆಯ ಬಟ್ಟೆ ಹೊಲಿಸುವೆ . ಆದರೆ ಸಮಾಧಿಯ ಒಳಗೆ ಬರಲಾರೆ . ”ಇವನಿಗೆ ದುಃಖ ಹೆಚ್ಚಾಯಿತು .

ಎರಡನೇ ಗೆಳೆಯನ ಮನೆಗೆ ಹೋಗಿ ತನ್ನ ಸಮಸ್ಯೆ ಹೇಳಿದ . ಅದಕ್ಕೆ ಗೆಳೆಯ “ ನಾನು ನಿನ್ನ ಹೆಣ ಹೊರಲು ಬರುತ್ತೇನೆ . ಆದರೆ ಸಮಾಧಿಯ ಒಳಗೆ ಬರುವುದಿಲ್ಲ ‘ ಎಂದ . ಇವನಿಗೆ ದುಃಖ ಇನ್ನಷ್ಟು ಹೆಚ್ಚಾಯಿತು

ಮೂರನೇ ಗೆಳೆಯನ ಮನೆಗೆ ಹೋಗಿ ತನ್ನ ಸಮಸ್ಯೆ ಹೇಳಿಕೊಂಡ ಮತ್ತು ಮೊದಲ ಇಬ್ಬರ ಉತ್ತರ ಅವನಿಗೆ ಹೇಳಿದ . ಆಗ ಗೆಳೆಯ ಹೇಳಿದ – ‘ ನೀನು ಚಿಂತಿಸಬೇಡ . ನಾನು ನಿನ್ನ ಜೊತೆ ಬರುವೆ . ಅದೂ ಸಮಾಧಿಯ ಒಳಗೆ

”ದೂತರು ಪ್ರಶ್ನಿಸಿದರೆ ಅದಕ್ಕೆ ನಾನು ಅದಕ್ಕೆ ಗೆಳೆಯ ಹೇಳಿದ – ” ನೋಡು ಧೈರ್ಯದಿಂದ ಉತ್ತರಿಸುವೆ ‘ ಆಗ  ಅವನಿಗೆ ಸಮಾಧಾನವಾಯಿತು .

ಮೊದಲನೆ ಸ್ನೇಹಿತ :: ಹಣ, ಆದ್ದರಿಂದ  ” ಸಮಾಧಿ ಜಾಗ ರೇಷ್ಮೆಯ ಬಟ್ಟೆ  ಕೊಡುತ್ತೇನೆ ಎಂದ .

ಎರಡನೆಯ ಸ್ನೇಹಿತ :: ಸಂಬಂಧಿಕ . ಹೇಗೆಂದರೆ ಸಂಬಂಧಿಕರು ಮಾತ್ರ ಹೆಣ ಹೊರುವವರು .

ಮೂರನೇ ಸ್ನೇಹಿತ :: ತ್ಯಾಗ ಮತ್ತು  ಸ್ನೇಹ ಮನೋಭಾವ ,

ಅದಕ್ಕೆ ಸ್ನೇಹಿತ ಸಮಾಧಿಯ ಒಳಗೆ ಬರುತ್ತೇನೆ ಎಂದ

“ನರಿ ಮತ್ತು ಮೊಸಳೆ ಕಥೆ”

ಗವಿಯಲ್ಲಿ ವಾಸವಾಗಿದ್ದ ಒಂದು ನರಿಗೆ ಏನೂ ಆಹಾರ ಸಿಕ್ಕಿರಲಿಲ್ಲ. ಅದೊಂದು ನದಿಯ ದಡಕ್ಕೆ ಬಂತು. ನದಿಯ ಇನ್ನೊಂದು ದಡದಲ್ಲಿ ಕೆಂಪು ಕೆಂಪಾದ ಹಣ್ಣುಗಳ ಮರವೊಂದು ಕಂಡಿತು.

ಅಲ್ಲಿಗೆ ಹೋದರೆ ಬೇಕಾದಷ್ಟು ಹಣ್ಣು ತಿನ್ನಬಹುದೆನಿಸಿತು. ಆದರೆ ನದಿಯಲ್ಲಿ ತುಂಬಾ ನೀರಿದ್ದ ಕಾರಣ ನದಿಗಿಳಿಯಲು ಸಾಧ್ಯವಿರಲಿಲ್ಲ.

ಆ ನರಿಯನ್ನೇ ನೋಡುತ್ತಿದ್ದ ಒಂದು ಮೊಸಳೆಗೆ ಇದು ತನಗೆ ಹೊಟ್ಟೆ ತುಂಬಾ ಆಹಾರವಾಗಬಹುದು ಎಂಬ ಯೋಚಿಸಿ ಉಪಾಯವಾಗಿ ಅದನ್ನು ಹಿಡಿಯಲು ನಿರ್ಧರಿಸಿತು. ಅದು ನರಿ ಬಳಿಗೆ ಹೋಗಿ ‘ಏನು ಯೋಚನೆ ಮಾಡುತ್ತಿದ್ದೀಯಾ, ಏನಾಗಬೇಕು?’ ಎಂದು ಕೇಳಿತು.

ಅದಕ್ಕೆ ನರಿ ” ನದಿಯ ಆಚೆ ದಡದಲ್ಲಿರುವ ಪ್ರಾಣಿಗಳಿಂದ ಇನ್ನೂ ಸುಂಕ ಬಂದಿಲ್ಲವಂತೆ. ಹುಲಿರಾಯರು ವಸೂಲಿ ಮಾಡಿಕೊಂಡು ಬಾ ಎಂದಿದ್ದಾರೆ. ಆದರೆ ನದಿ ದಾಟಲು ಆಗುವುದಿಲ್ಲ’ ಎಂದಿತು.

ಅದಕ್ಕೇನಂತೆ ನಾನು ದಾಟಿಸುತ್ತೇನೆ. ಆದರೆ ನನಗೆ ಅದರ ಸಂಬಳ ಕೊಡಬೇಕು ” ಎಂದು ಮೊಸಳೆ ಹೇಳಿ ನರಿಯನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಆಚೆ ದಡಕ್ಕೆ ಹೋಯಿತು.

ದಡದಲ್ಲಿ ಕೆಳಗಿಳಿದ ಕೂಡಲೇ ನರಿಯನ್ನು ನುಂಗಬೇಕೆಂದು ಅದು ಎಣಿಸಿಕೊಂಡಿತ್ತು. ಆದರೆ ದಡ ತಲಪುವ ಮೊದಲೇ ನರಿ ಚಂಗನೆ ದಡಕ್ಕೆ ಹಾರಿತು.

‘ಸಂಬಳ ಎಲ್ಲಿ?’ ಎಂದು ಮೊಸಳೆ ಕೇಳಿದಾಗ ‘ಮರಳಿ ಬರುವಾಗ ಎರಡನ್ನೂ ಸೇರಿಸಿ ಕೊಡ್ತೇನೆ’ ಎಂದು ಓಡುತ್ತಲೇ ಹೇಳಿದ ನರಿ ಹಣ್ಣಿನ ಮರಗಳ ಬಳಿಗೆ ಹೋಗಿ ಉದುರಿದ್ದ ಹಣ್ಣುಗಳನ್ನು ಹೊಟ್ಟೆ ತುಂಬ ತಿಂದಿತು.

ಸಂಜೆಯವರೆಗೆ ಕಾದ ಮೊಸಳೆ ಮತ್ತೆ ನರಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಹಿಂತಿರುಗಿತು.

ಅದರ ಬುದ್ಧಿವಂತಿಕೆ ಗೊತ್ತಿದ್ದ ಕಾರಣ ಅದು ದಡಕ್ಕೆ ಹಾರುವ ಮೊದಲೇ ಅದರ ಒಂದು ಕಾಲನ್ನು ಹಲ್ಲುಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿತು.

ಜಾಣ ನರಿ ಜೋರಾಗಿ ನಗುತ್ತ ‘ಅಯ್ಯೋ ಮೊಸಳೆಯಣ್ಣ, ಇದೆಂಥ ನಿನ್ನ ಅವಸ್ಥೆ ನನ್ನ ಕಾಲು ಹಿಡಿದು ನಮಸ್ಕರಿಸಬೇಕು ಅನ್ನುವ ಆಸೆಯಲ್ಲಿ ಕಾಲಿನ ಬದಲು ತೇಲುತ್ತಿರುವ ಒಂದು ಬೇರನ್ನು ಯಾಕೆ ಕಚ್ಚಿಕೊಂಡಿದ್ದೀ? ನನ್ನ ಕಾಲು ಇಲ್ಲಿದೆ ನೋಡು’ ಎಂದಿತು.

ಆ ಮಾತನ್ನು ನಂಬಿ ಮೊಸಳೆ ಕಾಲನ್ನು ಬಿಟ್ಟ ಕೂಡಲೇ ದಡಕ್ಕೆ ನೆಗೆದು ನರಿ ತಪ್ಪಿಸಿಕೊಂಡಿತು.

ಹೇಗಾದರೂ ಮಾಡಿ ನರಿಯನ್ನು ತಿನ್ನದೆ ಬಿಡುವುದಿಲ್ಲ ಎಂದು ಶಪಥ ಮಾಡಿದ ಮೊಸಳೆ ನದಿಯ ದಡದಲ್ಲಿ ಒಂದು ಮರದಿಂದ ತುಂಬ ಹಣ್ಣುಗಳು ಬಿದ್ದಿರುವುದನ್ನು ನೋಡಿತು.

ಅದನ್ನು ತಿನ್ನಲು ನರಿ ಬರುವುದು ಅದಕ್ಕೆ ಗೊತ್ತಿತ್ತು. ಆ ಸಮಯದಲ್ಲಿ ಮರದ ಕೆಳಗೆ ಹಣ್ಣುಗಳನ್ನು ರಾಶಿ ಹಾಕಿ ಅದರೊಳಗೆ ಹುದುಗಿಕೊಂಡಿತು.

ನರಿಗೆ ಹಣ್ಣುಗಳ ರಾಶಿ ಕಂಡು ಅನುಮಾನವಾಯಿತು. ‘ಹಣ್ಣುಗಳೇ, ಯಾವಾಗಲೂ ನಾನು ಬರುವಾಗ ಮೇಲಕ್ಕೆ ಹಾರುತ್ತಿದ್ದಿರಿ.

ಆದರೆ ಇಂದೇನಾಗಿದೆ ನಿಮಗೆ? ಸುಮ್ಮನೆ ಯಾಕೆ ಮಲಗಿದ್ದೀರಿ?’ ಎಂದು ಕೇಳಿತು. ಇದನ್ನು ಸತ್ಯವೆಂದೇ ನಂಬಿದ ಮೊಸಳೆ ಬಾಲದಲ್ಲಿ ಹಣ್ಣುಗಳನ್ನು ರಪರಪನೆ ಮೇಲಕ್ಕೆ ಚಿಮ್ಮಿಸಿತು.

ಅಲ್ಲಿ ಮೊಸಳೆಯಿರುವುದು ಅರ್ಥವಾದ ಕೂಡಲೇ ನರಿ, ‘ಏನು ಮೊಸಳೆಯಣ್ಣ, ಹಣ್ಣುಗಳು ಹಾರುವುದಿಲ್ಲವೆಂದು ನಿನಗೆ ಗೊತ್ತಿಲ್ಲವೆ?’ ಎನ್ನುತ್ತ ಓಡಿಹೋಯಿತು.

ಮೊಸಳೆ ಹೊಸ ಉಪಾಯ ಹುಡುಕಿತು. ನರಿಯ ಗವಿಯನ್ನು ಪತ್ತೆ ಮಾಡಿ ಅದರೊಳಗೆ ಹೋಗಿ ಮಲಗಿತು.

ಬೇಟೆಗೆ ಹೋದ ನರಿ ಮರಳಿದಾಗ ಗವಿಯೊಳಗೆ ಹೋಗಿರುವ ಮೊಸಳೆಯ ಹೆಜ್ಜೆ ಗುರುತುಗಳನ್ನು ಕಂಡು ನಿಜ ವಿಷಯ ತಿಳಿದುಕೊಂಡು ಗಟ್ಟಿ ದನಿಯಲ್ಲಿ ‘ಗುಹೆಯಣ್ಣ, ಯಾವಾಗಲೂ ನಾನು ಬರುವಾಗ ಶಂಖ ಊದಿ ಸ್ವಾಗತಿಸುತ್ತಿದ್ದ

ನೀನು ಇಂದೇಕೆ ಮೌನವಾಗಿರುವೆ? ಏನಾಗಿದೆ ನಿನಗೆ?’ ಎಂದು ಕೇಳಿತು.

ಇದನ್ನು ನಿಜವೆಂದು ಭಾವಿಸಿದ ಮೊಸಳೆ ಶಂಖದಂತೆ ಕೂಗಿತು. ಮೊಸಳೆಯ ಮೋಸ ತಿಳಿದ ಕೂಡಲೇ ನರಿ ‘ಅಯ್ಯೋ ಬೆಪ್ಪು ಮೊಸಳೆಯಣ್ಣ, ಗವಿ ಎಂದಿಗಾದರೂ ಕೂಗುವುದುಂಟೆ? ನಿನಗಷ್ಟೂ ಗೊತ್ತಿಲ್ಲವೆ?’ ಎಂದು ನಗುತ್ತ ಅಲ್ಲಿಂದ ದೂರ ಓಡಿಹೋಯಿತು.

ಮೊಸಳೆ ಇನ್ನೂ ಒಂದು ಉಪಾಯ ಹುಡುಕಿತು. ತನ್ನ ಹೆಂಡತಿಯನ್ನು ನರಿಯ ಬಳಿಗೆ ಕಳುಹಿಸಿತು. ಹೆಣ್ಣು ಮೊಸಳೆ ಕಣ್ಣೀರಿಳಿಸುತ್ತ ‘ನಿನ್ನ ಅಣ್ಣ ಅಂದರೆ ನನ್ನ ಗಂಡ ಮೊಸಳೆ ಸತ್ತು ಹೋಗಿದೆ.

ನನಗೆ ಕೊಡಬೇಕಾದ ಸಂಬಳವನ್ನಂತೂ ನರಿ ಕೊಡಲಿಲ್ಲ. ಅಂತ್ಯ ಸಂಸ್ಕಾರವನ್ನಾದರೂ ಮಾಡಿ ಸದ್ಗತಿ ಸಿಗುವಂತೆ ಮಾಡಲಿ ಎಂದು ಕೊನೆಯಾಸೆ ಹೇಳಿಕೊಂಡಿತ್ತು.

ಆದ್ದರಿಂದ ನೀನು ಬಂದು ಅದರ ಬಯಕೆ ನೆರವೇರಿಸಬೇಕು’ ಎಂದು ಕೇಳಿಕೊಂಡಿತು. ನರಿ ಅದರ ಜೊತೆಗೆ ಹೋಯಿತು.

Neeti Kathegalu ನೀತಿ ಕಥೆ

ಮರದ ಕೆಳಗೆ ನಿಶ್ಚಲವಾಗಿ ಮಲಗಿದ್ದ ಮೊಸಳೆಯನ್ನು ನೋಡಿ ‘ಇದು ಸತ್ತ ಹಾಗೆ ಕಾಣಿಸುವುದಿಲ್ಲವಲ್ಲ.

ಸತ್ತವರು ಕಣ್ಣಿನ ರೆಪ್ಪೆ ಪಟಪಟ ಬಡಿಯುತ್ತಾರೆ. ನಾಲಿಗೆ ಹೊರಗೆ ಚಾಚುತ್ತಾರೆ. ಇದಕ್ಕೆ ಅಂತಹ ಯಾವ ಲಕ್ಷ ಣಗಳೂ ಕಾಣಿಸುತ್ತಿಲ್ಲ’ ಎಂದಿತು.

ಆಗ ತಾನು ಸತ್ತಿದ್ದೇನೆಂದು ತೋರಿಸಿಕೊಳ್ಳಲು ಮೊಸಳೆ ಕಣ್ಣರೆಪ್ಪೆಗಳನ್ನು ಪಟಪಟ ಬಡಿಯುತ್ತ ನಾಲಿಗೆ ಹೊರಗೆ ಹಾಕಿತು.

ನರಿ ಜೋರಾಗಿ ನಕ್ಕು ‘ಹೆಡ್ಡ, ಸತ್ತವರು ರೆಪ್ಪೆ ಬಡಿಯುವುದು ಎಲ್ಲಾದರೂ ಉಂಟೆ? ನಿನ್ನ ಮೋಸದ ಬಲೆಗೆ ನಾನು ಎಂದಿಗೂ ಸಿಲುಕುವುದಿಲ್ಲ’ ಎಂದು ಹೇಳಿ ದೂರ ಓಡಿತು.

ಮೊಸಳೆಗೆ ನಾಚಿಕೆಯಾಗಿ ಆ ಪ್ರದೇಶದಿಂದಲೇ ಹೋಯಿತು…….

ಚಿನ್ನದ ಮೊಟ್ಟೆ ಇಡುವ ಕೋಳಿ

ಒಂದೂರಿನಲ್ಲಿ ಒಬ್ಬ ಬಡವನಿದ್ದನು

ಕಡುಬಡತನದಿಂದಾಗಿ ಅವನು ಬೇಸತ್ತು ಹೋಗಿದ್ದನು , ಸಂಸಾರ ಸಾಕುವ ಹೊಣೆ ನಿರ್ವಹಿಸಲಾಗದ ಸಾಕಾಗಿ ಹೊಗಿದ್ದನು . ಮೂರು ಹೊತ್ತು ಮೈ ಮುರಿದು ದುಡಿದರೂ ಸಿಗುತ್ತಿದ್ದ ಕೂಲಿ ಒಂದು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ .

ಹೀಗಿರುವಾಗ ಆ ಬಡವನಿದ್ದ ಉರಿಗೆ ಒಬ್ಬ ಸಾಧು ಬಂದನು ತನ್ನ ಹೆಂಡತಿಯ ಒತ್ತಾಯದಿಂದ ಬಡವ ಆ ಸಾಧುವಿನ ಸೇವೆಯನ್ನು ಮಾಡಿದನು . ಸೇವೆಯಿಂದ ಸಂತೃಪ್ತನಾದ ಸಾಧು ಬಡವನಿಗೆ ಒಂದು ಕೋಳಿಯನ್ನು ಕೊಟ್ಟನು   ಈ ಬಂಗಾರದ ” ಅಯ್ಯಾ ,

ಇಂದಿನಿಂದ ನಿನ್ನ ದರಿದ್ರ ತೀರಿತು ಈ ಕೋಳಿ ಪ್ರತಿನಿತ್ಯ ಒಂದು ಮೊಟ್ಟೆಯನ್ನಿಡುವುದು ಅದನ್ನು ಮಾರಿಕೊಂಡು ನಿನ್ನ ಬಡತನ ಪರಿಹರಿಸಿಕೊ ” ಎಂದನು . ಮಾರನೆಯ ದಿನ ಬೆಳಗ್ಗೆ ಆ ಕೋಳಿಯು ಒಂದು ಚಿನ್ನದ ಮೊಟ್ಟೆಯನ್ನಿಟ್ಟಿತು,

ಆನಂದದಿಂದ  ನಲಿದಾಡಿದ ಬಡವ ಆ ಮೊಟ್ಟೆಯನ್ನು ಪೇಟೆಗೆ ತೆಗೆದುಕೊಂಡು ಹೋಗಿ ಮಾರಿ ದವಸ ಧಾನ್ಯಗಳನ್ನು ಕೊಂಡುತಂದನು ,

ಮನೆಯಲ್ಲಿ ಆ ದಿನ ಹಬ್ಬದ ಸಡಗರ , ಪ್ರತಿದಿನ ಕೋಳಿಯು ಒಂದೊಂದು ಬಂಗಾರದ ಮೊಟ್ಟೆಯನ್ನು ಇಡುತ್ತಿದ್ದ ಕಾರಣ ಆ ಬಡವ ಬಹಳ ಬೇಗ ಆ ಊರಿಗೆ ದೊಡ್ಡ ಧನಿಕನೆನಿಸಿಕೊಂಡನು.

ಅವನಲ್ಲಿ ಆ ಪಟ್ಟಣಕ್ಕೆ ದೊಡ್ಡ ಶ್ರೀಮಂತ ಎಂದೆನಿಸಿಕೊಳ್ಳುವ ಆಸೆ ಹೆಚ್ಚಾಯಿತು. ಅವನ ಹೆಂಡತಿಯ ಒತ್ತಾಸೆ ನೀಡತೊಡಗಿದಳು ,

ಕೆಲ ದಿನಗಳ ನಂತರ ಅವನ ಹೆಂಡತಿಯು  ” ರೀ ಈ ಕೋಳಿ ಪ್ರತಿದಿನವೂ ಒಂದೊಂದೇ ಚಿನ್ನದ ಮೊಟ್ಟೆಯನ್ನಿಡುತ್ತದೆ ,

ಆದ್ದರಿಂದ ಇದರ ಹೊಟ್ಟೆಯಲ್ಲಿ ಚಿನ್ನದ ಮೊಟ್ಟೆಗಳ ದೊಡ್ಡ ಗಣಿಯೇ ಇರಬೇಕು , ಒಂದೇ ಬಾರಿಗೆ ಅದರ ಹೊಟ್ಟೆ ಸಿಳಿಬಿಟ್ಟರೆ ಆ ಚಿನ್ನದ ಮೊಟ್ಟೆಗಳ ಗಣಿಯೇ ನಮ್ಮದಾಗುವುದು ” ಎಂದಳು

ಆ ಸಲಹೆ ಬಡವನಿಗೆ ಬಹಳ ಹಿಡಿಸಿತು , ಹಿಂದೆ ಮುಂದೆ ಯೋಚಿಸದೇ ಆ ಕೋಳಿಯ ಹೊಟ್ಟೆಯನ್ನು ಸೀಳಿದನು , ಕೋಳಿ ಸತ್ತು ಅವನಿಗೆ ಪ್ರತಿದಿನ ಸಿಗುತ್ತಿದ್ದ ಚಿನ್ನದ ಮೊಟ್ಟೆಗೂ ಬರ ಬಂದಿತು ,

ನೀತಿ :: ಅತಿ ಆಸೆ ಗತಿ ಗೆಡಿಸುತ್ತದೆ . ತುಂಬಾ ಅಸೆ ಪಟ್ಟರೆ ಸಿಕ್ಕತ್ತಿದ್ದಂತಹ ಸಣ್ಣದು ಸಹ  ದೂರವಾಗುತ್ತದೆ.

Kannada Stories Kannada Kalpanika Kathegalu With Video

1. ಮಾಂತ್ರಿಕ ಮರ ಮಾಂತ್ರಿಕ ವಿಕ್ | Kannada stories | Story Kannada| Kannada Kathegalu

2. ಮ್ಯಾಜಿಕ್ ಮರದಿಂದ ಮಾಡಿದ ಸಹಾಯ Magical Tree | Kannada stories | Kannada Kathe

3. ಬುದ್ಧಿವಂತ ಹಸು | Kannada Stories | Kannada Kathe

4. Tenali Raman stories in Kannada | Moral Stories | Animated Storie

5. ಅಜ್ಜಿ ಕಥೆಗಳು Ajji Kathegalu – Kannada Moral Stories

6. Tenali Raman Stories In Kannada | Full Animated Movie

7. ಬುದ್ಧಿವಂತ ಮೊಲ – Kannada Kathegalu | Kannada Stories | Kalpanika Kathegalu

ಹಾಗೆ ನೀವು ಇನ್ನೂ ಹೆಚ್ಚಿನ ಕನ್ನಡ  ಕಥೆಗಳನ್ನು ಓದಲು ಬಯಸಿದರೆ ನಾವು ಇಲ್ಲಿ ಕೆಲವು ಕಥೆ ಪುಸ್ತಕಗಳು  ಲಿಂಕನ್ನು ಕೊಟ್ಟಿದ್ದೇವೆ ನೀವು ಹೋಗಿ ನೋಡಬಹುದು

Kannada Kathegalu Books

ಇತರೆ ವಿಷಯಗಳು :

Vachanagalu

Kavanagalu

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ಕನ್ನಡ ಕಥೆಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ಕಥೆಗಳು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh