Hallu Novige Mane Maddu Kannada | ಹಲ್ಲು ನೋವಿಗೆ ಮನೆ ಮದ್ದು..

Hallu Novige Mane Maddu Kannada | ಹಲ್ಲು ನೋವಿಗೆ ಮನೆ ಮದ್ದು..

 

ಹಲ್ಲು ನೋವಿಗೆ ಮನೆ ಮದ್ದು Home Remidis for Teetheche Kannada

ಹಲ್ಲು ನೋವು ಸಾಮಾನ್ಯವಾಗಿ ಬಹುತೇಕರಲ್ಲಿ ಕಾಣಿಸಿಕೊಳ್ಳುತ್ತದೆ. ಈ ನೋವು ಕೊಡುವ ಸಂಕಟ ಅಷ್ಟಿಷ್ಟಲ್ಲ.

ಸಹಿಸಲಾರದ ನೋವಿಗೆ ಅನೇಕ ಕಾರಣಗಳಿದ್ದರೂ, ತಕ್ಷಣ ಪರಿಹಾರ ಸಿಗಬೇಕು ಎಂದು ಹಲ್ಲು ನೋವಿರುವವರು ಭಾವಿಸುತ್ತಾರೆ. ಅಂತಹದೊಂದು ಯಾತನೆಯನ್ನು ಹಲ್ಲು ನೋವು ನೀಡುತ್ತಿರುತ್ತದೆ.

ಹಲ್ಲು ನೋವು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲೇ ಇರುವ ಕೆಲ ಪದಾರ್ಥಗಳಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ

ತಂಪಾದ ನೀರು, ಬಿಸಿಯಾದ ವಸ್ತು, ಸಿಹಿ ತಿಂಡಿ ಹಾಗೂ ಗಟ್ಟಿಯಾದ ಆಹಾರವನ್ನು ಸೇವಿಸಿದಾಗ ಹುಳುಕಾದ ಹಲ್ಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಇದರ ಪರಿಣಾಮ ಹಲ್ಲಿನ ಸುತ್ತಲ ಪ್ರದೇಶದಿಂದ ತಲೆ ಬುರುಡೆಯವರೆಗೂ ನೋವು ಉಂಟಾಗುವುದು. ಕೆಲವೊಮ್ಮೆ ಹಲ್ಲುನೋವಿನಿಂದ ಕಿವಿನೋವು ಮತ್ತು ತಲೆನೋವು ಸಹ ಕೆರಳುವ ಸಾಧ್ಯತೆಗಳಿರುತ್ತವೆ.

ಹಲ್ಲು ನೋವಿಗೆ ಮನೆ ಮದ್ದು

 ಹಲ್ಲು ನೋವಿಗೆ ಮನೆ ಮದ್ದು ಗಳು Hallu Novige Mane Maddu, Home remedies for Teeth Kannada, Hallu Noovige Pariharagalu in kannada, Hallu Novu Mane Maddu

ಐಸ್ ಪ್ಯಾಕ್
ಹಲ್ಲು ನೋವು ಬಂದಾಗ ನೀವು ಐಸ್ ಪ್ಯಾಕ್ ಅಥವಾ ಹೆಪ್ಪು ಗಟ್ಟಿದ ಬಟಾಣಿ ಚೀಲವನ್ನು ಹಲ್ಲಿನಿಂದ ಉಂಟಾದ ನೋವಿನ ಜಾಗದಲ್ಲಿ ಇರಿಸಿ.
ಕೆನ್ನೆಯ ಒಳಭಾಗದಲ್ಲಿ ಇರುವ ಹಲ್ಲಿನಿಂದ ನೋವು ಉಂಟಾಗುತ್ತಿದ್ದರೆ, ಕೆನ್ನೆಯ ಹೊರಭಾಗದಲ್ಲೂ ಐಸ್ ಪ್ಯಾಕ್ ಅನ್ನು ಇಡಬಹುದು.

ಕೆಲವು ನಿಮಿಷಗಳ ಕಾಲ ಈ ಕ್ರಮವನ್ನು ಅನುಸರಿಸಿದರೆ ನೋವು ಶಮನವಾಗುವುದು. ಐಸ್ ಪ್ಯಾಕ್ ಅತಿಯಾಗಿ ತಣ್ಣಗಿರುವುದರಿಂದ ರಕ್ತನಾಳಗಳು ನಿರ್ಬಂಧಿಸುತ್ತವೆ.

ಜೊತೆಗೆ ಪೀಡಿತ ಪ್ರದೇಶಗಳಿಗೆ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದರಿಂದ ನೋವು, ಸೆಳೆತ ಮತ್ತು ಉರಿಯೂತವು ಕಡಿಮೆಯಾಗುವುದು.

 

ಉಪ್ಪು ನೀರಿನಲ್ಲಿ ಬಾಯಿ ಮುಕ್ಕುಳಿಸುವುದು
ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕುಳಿಸಿದರೆ ಹಲ್ಲಿನ ಸಂಧಿಯಲ್ಲಿ ಸಿಲುಕಿಕೊಂಡ ಕೊಳೆ ಹಾಗೂ ಆಹಾರ ಪದಾರ್ಥಗಳು ತೆರವುಗೊಳ್ಳುತ್ತವೆ. ಜೊತೆಗೆ ಕೀಟಾಣುಗಳನ್ನು ನಾಶಗೊಳಿಸುವುದರಿಂದ ನೋವು ಮತ್ತು ಸೆಳೆತವು ಕಡಿಮೆಯಾಗುವುದು.

ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ 1 ಟೀ ಚಮಚ ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ. ನಂತರ ಉಪ್ಪು ಮಿಶ್ರಿತ ನೀರನ್ನು ಬಾಯಲ್ಲಿ 30 ಸೆಕೆಂಡುಗಳ ಕಾಲ ಇರಿಸಿಕೊಂಡು ಮುಕ್ಕುಳಿಸಿ.

ಈ ಪ್ರಕ್ರಿಯೆಯನ್ನು ನೀವು ಅಗತ್ಯ ಇರುವಷ್ಟು ಸಮಯಗಳ ಕಾಲ ಪುನರಾವರ್ತಿಸಬಹುದು. ಇದರಿಂದ ತ್ವರಿತ ಆರಾಮು ದೊರೆಯುವುದು.

 

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಪುರಾತನ ಕಾಲದಿಂದಲೂ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ. . ಹಲ್ಲುನೋವು ಬಂದಾಗ ಬೆಳ್ಳುಳ್ಳಿಯನ್ನು ಹೀಗೆ ಬಳಸಿ… ಕೆಲವು ತಾಜಾ ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ.

ಸಿಪ್ಪೆಯನ್ನು ಬಿಡಿಸಿ, ಜಜ್ಜಿಕೊಳ್ಳಿ ಅಥವಾ ಪುಡಿಮಾಡಿಕೊಳ್ಳಿ. ಅದನ್ನು ಉಪ್ಪಿನೊಂದಿಗೆ ಬೆರೆಸಿ. ಉಪ್ಪಿನೊಂದಿಗೆ ಬೆರೆತ ಬೆಳ್ಳುಳ್ಳಿ ಮಿಶ್ರಣವನ್ನು ಪೀಡಿತ ಪ್ರದೇಶ ಅಥವಾ ನೋವಿನ ಜಾಗದಲ್ಲಿ ಇರಿಸಿ.
ನೋವು ಬಹುಬೇಗ ಕಡಿಮೆಯಾಗುವುದು. ಅಗತ್ಯವಿದ್ದಾಗ ಈ ಸುಲಭ ಕ್ರಮವನ್ನು ಅನುಸರಿಸಬಹುದು.

 

ಪುದೀನಾ ಚಹಾ

ಪುದೀನಾ ಚಹಾ ಹೆಚ್ಚು ಆರಾಮದಾಯಕ ಅನುಭವ ನೀಡುವುದು. ಜೊತೆಗೆ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ನೋವುಗಳನ್ನು ಶಮನಗೊಳಿಸುವುದು. ಪುದೀನದಲ್ಲಿ ಇರುವ ಮಿಂಟಿ ಪರಿಮಳ ಹಾಗೂ ಜೀವವಿರೋಧಿ ಗುಣವು ನೋವನ್ನು ನಿವಾರಿಸಲು ಸಹಾಯಮಾಡುತ್ತದೆ.

ಒಂದು ಟೀ ಚಮಚ ಒಣಗಿದ ಪುದೀನಾ ಎಲೆಯನ್ನು ತೆಗೆದುಕೊಳ್ಳಿ. ಒಂದು ಕಪ್ ನೀರನ್ನು ಕುದಿಯಲು ಇಡಿ. ಕುದಿ ಬಂದ ನಂತರ ಪುದೀನ ಎಲೆಗಳನ್ನು ನೀರಿಗೆ ಹಾಕಿ.

ಸುಮಾರು 20 ನಿಮಿಷಗಳ ಕಾಲ ಕುದಿಯಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಪುದೀನ ನೀರನ್ನು ಬಾಯಲ್ಲಿ ತುಂಬಿಕೊಳ್ಳಿ. ಈ ಮಿಶ್ರಣದ ನೀರಿನಿಂದ ಬಾಯಿ ಮುಕ್ಕುಳಿಸಬಹುದು. ಇಲ್ಲವೇ ನುಂಗಲು ಬಹುದು.

 

ಉಗುರು ಬೆಚ್ಚನೆಯ ಉಪ್ಪುನೀರು
ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಟೇಬಲ್ ಚಮಚ ಉಪ್ಪು ನೀರು ಸೇರಿಸಿ, ಚೆನ್ನಾಗಿ ಕಲಿಸಿಕೊಂಡು, ಈ ನೀರಿನಿಂದ ದಿನಕ್ಕೆ ಎರಡು ಮೂರು ಬಾರಿ ಬಾಯಿಯನ್ನು ಮುಕ್ಕಳಿಸುತ್ತಾ ಇರಿ.

ಇದರಿಂದ ಸೋಂಕು ಉಂಟಾಗಿದ್ದ ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ಸೋಂಕು ಹಾಗೂ ನೋವು ಕಡಿಮೆಯಾಗುತ್ತದೆ.

 

ಈರುಳ್ಳಿ
ಸಾಮಾನ್ಯವಾಗಿ ಈರುಳ್ಳಿಯಲ್ಲಿರುವ ನಂಜುನಿರೋಧಕ ಗುಣಗಳು, ಎಂತಹ ಹಲ್ಲು ನೋವನ್ನು ಕೂಡ ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಂದು ವೇಳೆ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ.

ಹಸಿ ಈರುಳ್ಳಿಯನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ನೋವಿರುವ ಹಲ್ಲುಗಳ ಭಾಗದಲ್ಲಿಟ್ಟು ಅಗಿಯಿರಿ. ಇಲ್ಲದಿದ್ದರೆ ಹತ್ತು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿಕೊಂಡಿರಿ

 

ಅಲೋವೆರಾ
ಸಮೃದ್ಧವಾದ ವಿಟಮಿನ್ ಇ ಇಂದ ಕೂಡಿರುವ ಸಸ್ಯ ಅಲೋವೆರಾ. ಅಲೋವೆರಾ ಜೆಲ್ಅನ್ನು ಸುಟ್ಟ ಗಾಯಗಳು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಹಲ್ಲಿನ ನೋವು ಹಾಗೂ ಒಸಡುಗಳನ್ನು ಸ್ವಚ್ಛ ಮಾಡಲು ಸಹಾಯಮಾಡುತ್ತದೆ. ಅಲೋವೆರಾ ನೈಸರ್ಗಿಕ ಜೀವ ವಿರೋಧಿ ಗುಣಗಳನ್ನು ಒಳಗೊಂಡಿದೆ.

ಒಂದು ಬೌಲ್ ಅಲ್ಲಿ ಅಲೋವೆರಾ ಜೆಲ್ ತೆಗೆದುಕೊಳ್ಳಿ. ನೋವಿರುವ ಭಾಗದಲ್ಲಿ ಅಲೋವೆರಾ ಜೆಲ್‌ನಿಂದ ಮಸಾಜ್ ಮಾಡಿ. ನೋವು ಶಮನವಾಗುವುದು.

 

ಲವಂಗ
ಲವಂಗ ಸಾಂಬಾರು ಪದಾರ್ಥಗಳಲ್ಲಿ ಒಂದು. ಅತ್ಯಂತ ಔಷಧೀಯ ಗುಣವನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಅರವಳಿಕೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ರಾಸಾಯನಿಕ ಸಂಯುಕ್ತವಾದ ಯುಜೆನಾಲ್ ಇರುತ್ತದೆ.

ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಒಳಗೊಂಡಿದೆ. ಇದು ಹಲ್ಲು ಮತ್ತು ವಸಡು ಸೋಂಕುಗಳ ವಿರುದ್ಧ ಹೋರಾಡುತ್ತದೆ.
ಒಂದು ಹತ್ತಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ, ಹಲ್ಲು ನೋವಿನ ಜಾಗದಲ್ಲಿ ಇರಿಸಿ, ಇಲ್ಲಾಂದ್ರೆ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ ಇಲ್ಲವಾದರೆ ಇಡೀ ಲವಂಗವನ್ನು ನೋವಾಗುವ ಹಲ್ಲಿನ ಸ್ಥಳದಲ್ಲಿ ಜಗೆಯಿರಿ.
ಪೀಡಿತ ಹಲ್ಲಿನ ಜಾಗದಲ್ಲಿ ಜಜ್ಜಿದ ಲವಂಗದ ಪೇಸ್ಟ್ ಅನ್ನು ಅನ್ವಯಿಸಿ. 30 ನಿಮಿಷಗಳ ಕಾಲ ಇರಿಸಿ.

ಕಾಳು ಮೆಣಸಿನ ಪುಡಿ
ಕಾಳು ಮೆಣಸಿನ ಪುಡಿಯೊಂದಿಗೆ ಸ್ವಲ್ವ ಉಪ್ಪು ಸೇರಿಸಿ ಪೇಸ್ಟ್​ ಮಾಡಿಕೊಳ್ಳಿ. ಈ ಪೇಸ್ಟ್​ನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಳ್ಳುವುದರಿಂದ ಹಲ್ಲು ನೋವಿಗೆ ಪರಿಹಾರ ಕಾಣಬಹುದು.

 

ನಿಂಬೆ ರಸ

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹಲ್ಲು ಮತ್ತು ಒಸಡನ್ನು ಬಲಗೊಳಿಸುವಂತಹ ಕಾರ್ಯವನ್ನು ಮಾಡುತ್ತದೆ. ಸ್ವಲ್ಪ ನಿಂಬೆ ರಸ ತೆಗೆದು ನೋವಿರುವ ಹಲ್ಲಿನ ಮೇಲೆ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

 

ಉಪ್ಪು ನೀರು

ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ. ಇದೇ ಪ್ರಕ್ರಿಯೆಯನ್ನು ದಿನಂಪ್ರತಿ ರಾತ್ರಿ ಮಲಗುವ ಮುನ್ನ ಮಾಡುವುದರಿಂದ ಬಾಯಲ್ಲಿರುವ ಕೀಟಾಣುಗಳು ನಾಶವಾಗುತ್ತವೆ.

ಹೀಗೆ ಮಾಡುವುದರಿಂದ ಹಲ್ಲಿನ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು.

Hallu Novige Mane Maddu

ಹೆಚ್ಚಿನ ಇತರ ವಿಷಯಗಳು:

Weight Loss Tips

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh