Panchatantra Stories in Kannada | ಪಂಚತಂತ್ರ ಕಥೆಗಳು

ಮಕ್ಕಳ ಪಂಚತಂತ್ರ ಕಥೆಗಳು ಕನ್ನಡ, Panchatantra Stories in Kannada, Panchatantra Kathegalu kannadadalli pdf Panchatantra Short Stories in Kannada

Panchatantra Stories in Kannada

Panchatantra Stories in Kannada ಪಂಚತಂತ್ರ ಕಥೆಗಳು
Panchatantra Stories in Kannada ಪಂಚತಂತ್ರ ಕಥೆಗಳು

ಮಕ್ಕಳ ಪಂಚತಂತ್ರ ಕಥೆಗಳು,ಪಂಚತಂತ್ರ ಕಥೆಗಳ ಮೂಲ ಭಾರತ.ಕವಿತೆ ಹಾಗೂ ಗದ್ಯದಲ್ಲಿ ಮೂಲತಃ  ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ. ಇಲ್ಲಿ ನೀವು ಈ ಲೇಖನದಲ್ಲಿ ಕತ್ತೆಯ ಉಪಾಯ, ಮುಖಭಂಗ, ಅಪಾಯ ಬಂದಾಗ ಉಪಾಯ, ಸಿಂಹ ಮೊಲ, ಅರಸನ ಉಡುಗೊರೆ ಎಂಬ ಕಥೆಗಳನ್ನು ಓದಬಹುದಾಗಿದೆ.

ಕತ್ತೆಯ ಉಪಾಯ

ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ . ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ . ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ .

ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ ‘ ಎಂಥಾ ಜನ್ಮವಪ್ಪಾ ನಿಂದೂ ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ .

ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ . ‘ ಎಂದು ಪರಿಹಾಸ್ಯ ಮಾಡಿ ನಕ್ಕಿತು .

ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು . ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಹುನ್ನಾರ ಮಾಡಿತು . ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಏರಿಸಿದಾಗ ಕತ್ತೆ ಅದನ್ನು ಬೀಳಿಸಿ ತಾನೂ ನೆಲಕ್ಕೆ ಬಿದ್ದು ಒದ್ದಾಡತೊಡಗಿತು .

ಇದರಿಂದ ವ್ಯಾಪಾರಿಗೆ ತುಂಬಾ ದಿಗಿಲಾಯಿತು . ‘ ಅಯ್ಯೋ ಪಾಪ ! ಕತ್ತೆಯ ಆರೋಗ್ಯ ಸರಿಯಿಲ್ಲವೆಂದು ತೋರುತ್ತದೆ ‘ ಎಂದುಕೊಂಡು ಆ ಭಾರವಾದ ಬಟ್ಟೆ ಮೂಟೆಗಳನ್ನು ಕುದುರೆ ಮೇಲೆ ಹೊರಿಸಿ ಪ್ರಯಾಣ ಮುಂದುವರಿಸಿದ . ಕತ್ತೆಯನ್ನು ನಿಂದಿಸಿದ ತಪ್ಪಿಗೆ ಕುದುರೆಗೆ ತಕ್ಕ ಶಿಕ್ಷೆಯಾಯಿತು .

ಮುಖಭಂಗ

ಒಂದು ಹಳ್ಳಿ. ಅಲ್ಲಿ ಹೆಚ್ಚು – ಕಡಿಮೆ ಎಲ್ಲ ಬಡ ಕುಟುಂಬಗಳೇ ಇದ್ದವು . ಒಂದು ಮಾತ್ರ ಶ್ರೀಮಂತ ಕುಟುಂಬವಿತ್ತು . ಈ ಕುಟುಂಬದ ಯಜಮಾನ ಬಡ ಕುಟುಂಬಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಗರ್ವದಿಂದ ಮೆರೆಯುತ್ತಿದ್ದನು .

ಇವನಿಗೆ ಹೇಗಾದರೂ ಮಾಡಿ ಬುದ್ದಿ ಕಲಿಸಬೇಕೆಂದು ಎಲ್ಲರೂ ಕಾಯುತ್ತಿದ್ದರು . ಆ ಹಳ್ಳಿಯಲ್ಲಿ ಪ್ರತಿ ವರ್ಷದಂತೆ ಗ್ರಾಮ ದೇವತೆಯ ಹಬ್ಬ ಬಂತು.

ಸುತ್ತಮುತ್ತಲಿನ ಗ್ರಾಮದವರು ಸೇರಿದ್ದರು. ಗ್ರಾಮ ದೇವತೆಯ ಹಬ್ಬದ ವಿಶೇಷ ದೇವತೆಯ ಮೈ ಮೇಲೆ ಹಾಕಿರುವ ಸೀರೆಯನ್ನು ಹರಾಜು ಹಾಕುವುದಾಗಿತ್ತು.

ಅದನ್ನು ತೆಗೆದುಕೊಂಡವರಿಗೆ ಪುಣ್ಯ ಲಭಿಸುವುದು ಎಂಬ ನಂಬಿಕೆಯಿತ್ತು . ಯಾವಾಗಲೂ ಸೀರೆ ಶ್ರೀಮಂತ ಕುಟುಂಬದ ಪಾಲಾಗುತ್ತಿತ್ತು. ಈ ಸಾರಿ ಹಬ್ಬದಲ್ಲಿ ಹರಾಜು ಪ್ರಾರಂಭವಾಯಿತು. ಹರಾಜು ಕೂಗುವ ವ್ಯಕ್ತಿ ಸೀರೆ ತೋರಿಸುತ್ತಾ ‘ ಒಂದು ಸಾವಿರ ‘ ಎಂದನು.

ಶ್ರೀಮಂತ ‘ ಎರಡು ಸಾವಿರ ‘ ಎಂದನು . ತಕ್ಷಣವೇ ಗುಂಪಿನಿಂದ ಐದು ಸಾವಿರ ‘ ಎಂಬ ಕೂಗು ಕೇಳಿಸಿತು . ಶ್ರೀಮಂತನಿಗೆ ಆಶ್ಚರ್ಯವಾಯಿತು . ನೋಡುತ್ತಾನೆ .

ತನ್ನ ಹಳ್ಳಿಯ ಬಡ ಕುಟುಂಬದ ವ್ಯಕ್ತಿಯೊಬ್ಬ ಕೂಗಿದ್ದು ! ಶ್ರೀಮಂತ ಏನನ್ನೂ ತೋರಿಸಿಕೊಳ್ಳದೆ ಮತ್ತೆ ಹತ್ತು ಸಾವಿರ ಎಂದನು . ಶ್ರೀಮಂತನ ಕೂಗಿಗೆ ಪ್ರತಿಯಾಗಿ “ ನನ್ನ ಇಡೀ ಆಸ್ತಿ ‘ ಎಂದು ಬಿಟ್ಟ ಬಡವ . ಇದನ್ನು ಕೇಳಿದ ಶ್ರೀಮಂತ ಆತನ ಸರಿಸಮಾನವಾಗಿ ಕೂಗಲು ಧೈರ್ಯಬರಲಿಲ್ಲ .

ಏನೂ ಮಾತು ಹೊರಡಲಿಲ್ಲ . ಮುಖಭಂಗವಾದಂತಾಗಿ ಮೆಲ್ಲನೆ ಕಾಲುಕಿತ್ತನು

ಅಪಾಯ ಬಂದಾಗ ಉಪಾಯ

ಒಂದು ಕಾಡಿನಲ್ಲಿ ಆನೆಯೊಂದು ಸಿಕ್ಕಿದ ಎಲ್ಲಾ ಪ್ರಾಣಿಗಳನ್ನು ಹಿಂಸಿಸುತ್ತಿತ್ತು . ಕಂಡ ಪ್ರಾಣಿಗಳನ್ನೆಲ್ಲಾ ಕೊಲ್ಲುತ್ತಿತ್ತು ಹೀಗೆ ಆ ಆನೆಗೆ ಸಿಕ್ಕು ಅನೇಕ ಪ್ರಾಣಿಗಳು ಸತ್ತುಹೋದುವು . ಆಗ ಪ್ರಾಣಿಗಳೆಲ್ಲಾ ಸಭೆ ಸೇರಿ ಆನೆಯ ಹಾವಳಿಯಿಂದ ಪಾರಾಗಲು ಒಂದು ಉಪಾಯವನ್ನು ಯೋಚಿಸಿದವು .

ಪ್ರಾಣಿಗಳೆಲ್ಲಾ ಒಂದಾಗಿ ಆನೆಯ ಬಳಿ ಬಂದು “ ನೀನೇ ಕಾಡಿನ ರಾಜನಾಗಬೇಕು ‘ ಎಂದು ಕೇಳಿಕೊಂಡವು . ಆನೆ ಅದಕ್ಕೆ ಒಪ್ಪಿ ಹೆಮ್ಮೆಯಿಂದ ಬೀಗಿತು .

ಹೀಗಿರುವಾಗ ಪ್ರಾಣಿಗಳೆಲ್ಲಾ ಸೇರಿ ಮೊದಲೇ ಒಂದು ಸ್ಥಳದಲ್ಲಿ ಕೆಸರಿನ ಹೊಂಡವನ್ನು ಸಿದ್ಧಮಾಡಿದ್ದವು ಆ ಹೊಂಡದ ಮೇಲೆ ಮರದ ರೆಂಬೆ ಕೊಂಬೆಗಳನ್ನೆಲ್ಲಾ ಹಾಕಿ ಮರೆ ಮಾಡಿದ್ದವು .

ಮರದಿಂದ ಸಿಂಹಾಸನವನ್ನು ಮಾಡಿ ಇಟ್ಟು ಆನೆಯನ್ನು ಪಟ್ಟಾಭಿಷೇಕಕ್ಕಾಗಿ ಕರೆತಂದವು . ಪ್ರಾಣಿಗಳ ಈ ತಂತ್ರ ಅರಿಯದ ಆನೆಯು ಗಂಭೀರವಾಗಿ ಆ ಸ್ಥಳಕ್ಕೆ ನಡೆಯಿತು .

ಮುಚ್ಚಿಟ್ಟಿದ್ದ ಕೆಸರ ಹೊಂಡದಲ್ಲಿ ಆನೆಯು ಬಿದ್ದು ಬಿಟ್ಟಿತು . ಎಲ್ಲಾ ಪ್ರಾಣಿಗಳು ಸೇರಿ ಆನೆಯು ಹೊಂಡದಿಂದ ಬರದಂತೆ ನೋಡಿಕೊಂಡವು .

ಕೆಸರನಲ್ಲಿ ಸಿಕ್ಕಿಕೊಂಡ ಆನೆಯು ಹೊರಕ್ಕೆ ಬರಲಾಗದೆ ಹಸಿವಿನಿಂದ ಒದ್ದಾಡಿ ಸತ್ತು ಹೋಯಿತು . ಎಲ್ಲಾ ಪ್ರಾಣಿಗಳು ಆನೆಯ ಸಾವಿನಿಂದ ಸಂತಸಗೊಂಡವು . ಅಪಾಯ ಬಂದಾಗ ಉಪಾಯದಿಂದ ಪಾರಾಗಬೇಕು ಎಂಬ ಗುಣಪಾಠವನ್ನು ತಿಳಿದುಕೊಂಡವು .

ಸಿಂಹ ಮೊಲ

ಮಧ್ಯಾಹ್ನವಾಗಿತ್ತು. ಸೂರ್ಯನು ತಲೆಯ ಮೇಲಿದ್ದ. ಊಟದ ಸಮಯವಾಗಿತ್ತು. ಸಿಂಹರಾಜನಿಗೆ ಹಸಿವಾಗಿತ್ತು, ಆದರೆ ಆಹಾರದ ದೃಷ್ಟಿ ಇರಲಿಲ್ಲ. ಇದು ಹಿಂದೆಂದೂ ಸಂಭವಿಸಿರಲಿಲ್ಲ.

ಸೂರ್ಯನು ತಲೆಯ ಮೇಲೆ ಬರುತ್ತಿದ್ದಂತೆ, ಒಂದು ಪ್ರಾಣಿ ಸಿಂಹದ ರಾಜನ ಬಳಿಗೆ ಬಂದು ತನ್ನನ್ನು ತಾನೇ ಆಹಾರವಾಗಿ ಅರ್ಪಿಸುತ್ತದೆ.

ಒಂದು ಕಾಲವಿತ್ತು, ಸಿಂಹವು ಬೇಟೆಯಾಡಲು ಹೊರಟು ತಾನು ಹಿಡಿಯುವ ಪ್ರಾಣಿಯನ್ನು ಕೊಲ್ಲುತ್ತದೆ. ಪ್ರಾಣಿಗಳು ಸಿಂಹವನ್ನು ನಾಶಪಡಿಸದಂತೆ ವಿನಂತಿಸಿದವು. ಅವರು ರಾಜನಿಗೆ ಊಟವಾಗಿ ಪ್ರತಿದಿನ ಮಧ್ಯಾಹ್ನ ಒಂದು ಪ್ರಾಣಿಯನ್ನು ಕಳುಹಿಸಲು ಮುಂದಾದರು.

ಸಿಂಹರಾಜನು ಒಪ್ಪಿದನು ಮತ್ತು ಅಂದಿನಿಂದ ಅವನು ಬೇಟೆಯಾಡುವುದನ್ನು ನಿಲ್ಲಿಸಿದನು. ಅವನ ಊಟವು ಪ್ರತಿದಿನ ಮಧ್ಯಾಹ್ನ ಅವನ ಗುಹೆಗೆ ಬಂದಿತು. ಆದರೆ ಈ ದಿನ ಅಲ್ಲ. ಸಿಂಹ ತಾಳ್ಮೆ ಕಳೆದುಕೊಳ್ಳುತ್ತಿತ್ತು. ಅವನ ಹೊಟ್ಟೆ ಗೊಣಗುತ್ತಿತ್ತು. ಅವನಿಗೂ ಕೋಪ ಬರುತ್ತಿತ್ತು.

ಆಗ ತಾನೇ ಮೊಲವೊಂದು ತನ್ನ ಬಳಿ ಬರುತ್ತಿರುವುದನ್ನು ಕಂಡ. “ಆದ್ದರಿಂದ, ನನ್ನ ಆಹಾರವು ತಡವಾಗಿದೆ ಮತ್ತು ತುಂಬಾ ಚಿಕ್ಕದಾಗಿದೆ! ಈ ಪ್ರಾಣಿಗಳಿಗೆ ತಕ್ಕ ಪಾಠ ಕಲಿಸಬೇಕು” ಎಂದು ಸಿಂಹ ಯೋಚಿಸಿತು.

“ಆದರೆ ಮೊದಲು ನನ್ನ ಹೊಟ್ಟೆಯನ್ನು ತುಂಬಿಸೋಣ” ಎಂದು ಅವರು ನಿರ್ಧರಿಸಿದರು. “ಇಷ್ಟು ತಡವಾಗಿ ಬರಲು ನಿಮಗೆ ಎಷ್ಟು ಧೈರ್ಯ?” ಅವನು ಮೊಲದ ಮೇಲೆ ಗುಡುಗಿದನು.

“ನನ್ನನ್ನು ಕ್ಷಮಿಸಿ, ನನ್ನ ಪ್ರಭು. ಸಮಯಕ್ಕೆ ಸರಿಯಾಗಿ ಇಲ್ಲಿಗೆ ತಲುಪುತ್ತಿದ್ದೆ. ಆದರೆ ಕಾಡಿನಲ್ಲಿ ಈ ಹೊಸ ಸಿಂಹದಿಂದ ನಾನು ತಡಮಾಡಿದೆ ”ಎಂದು ಮೊಲ ಹೇಳಿತು.

ಸಿಂಹವು ಗಾಬರಿಯಾಯಿತು, “ಈ ಸಿಂಹದ ಬಗ್ಗೆ ಎಲ್ಲವನ್ನೂ ಹೇಳಲು ನಾನು ನಿಮಗೆ ಆಜ್ಞಾಪಿಸುತ್ತೇನೆ.” “ಈ ಸಿಂಹವು ನನ್ನನ್ನು ಕಬಳಿಸಲು ಬಯಸಿತು.

ಆದರೆ ನಾನು ಈಗಾಗಲೇ ನಿನ್ನನ್ನು ಭೇಟಿಯಾಗಲು ಹೊರಟಿದ್ದೇನೆ ಎಂದು ಹೇಳಿದೆ. ಸಿಂಹ ನನ್ನನ್ನು ನೋಡಿ ನಕ್ಕಿತು. ನಿಜವಾದ ರಾಜನು ತನ್ನ ಬೇಟೆಯನ್ನು ಬೇಟೆಯಾಡುತ್ತಾನೆ ಮತ್ತು ನಿನ್ನಂತಹ ದುರ್ಬಲ ಸಿಂಹಕ್ಕೆ ನಾನು ತಲೆಬಾಗಬಾರದು ಎಂದು ಅವನು ಹೇಳಿದನು.

ಅವನ ಮಾತುಗಳು, ನನ್ನ ಸ್ವಾಮಿ, ನನ್ನದಲ್ಲ! “ಈ ಸಿಂಹ ನನ್ನನ್ನು ಅವಮಾನಿಸಲು ಎಷ್ಟು ಧೈರ್ಯ. ಈ ಕ್ಷಣದಲ್ಲಿ ನನ್ನನ್ನು ಅವನ ಬಳಿಗೆ ಕರೆದುಕೊಂಡು ಹೋಗು,” ಸಿಂಹವು ಕೋಪದಿಂದ ಹೇಳಿತು. “ನನ್ನ ಪ್ರಭು, ಇನ್ನೊಂದು ಸಿಂಹವೂ ನಿನ್ನನ್ನು ಭೇಟಿಯಾಗಲು ಬಯಸಿತು. ಅವನು ನನ್ನ ಜೀವವನ್ನು ಉಳಿಸಿದನು ಇದರಿಂದ ನಾನು ಅವನ ಸಂದೇಶವನ್ನು ನಿಮಗೆ ತಲುಪಿಸುತ್ತೇನೆ.

ಅವನು ಕಾಡಿನ ಹೊಸ ರಾಜ ಎಂದು ಹೇಳುತ್ತಾನೆ. “ಅವನು ಹಾಗೆ ಹೇಳಿದನೇ? ನನ್ನನ್ನು ಆ ವಂಚಕನ ಬಳಿಗೆ ಕರೆದೊಯ್ಯಿರಿ. “ಆದರೆ ನನ್ನ ಲಾರ್ಡ್, ನಾನು ಅವನನ್ನು ಅನುಸರಿಸಲು ಸಲಹೆ ನೀಡುವುದಿಲ್ಲ.

ಅವನು ಬಲಶಾಲಿ, ಮತ್ತು ಅವನು ಕೋಟೆಯಲ್ಲಿ ವಾಸಿಸುತ್ತಾನೆ. “ಹಾ! ಸಣ್ಣ ಮೊಲವು ಹೆಮ್ಮೆಯನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ನಾನು ನಿರೀಕ್ಷಿಸುವುದಿಲ್ಲ.

ಈ ಕಾಡಿನಲ್ಲಿ ಯಾರೂ ನನಗೆ ಸವಾಲು ಹಾಕಿ ಬದುಕಲು ಸಾಧ್ಯವಿಲ್ಲ. ನನ್ನನ್ನು ಈ ಕಾಡಿನ ನಕಲಿ ರಾಜನ ಬಳಿಗೆ ಕರೆದೊಯ್ಯಿರಿ. ಮೊಲವು ಸಿಂಹವನ್ನು ಕಾಡಿನ ಇನ್ನೊಂದು ತುದಿಗೆ ಕರೆದೊಯ್ದಿತು.

ತೆರವು ಮಾಡುವ ಜಾಗದಲ್ಲಿ ಕಲ್ಲಿನ ಬಾವಿಯೊಂದು ನಿಂತಿತ್ತು. “ನನ್ನ ಸ್ವಾಮಿ, ಇನ್ನೊಂದು ಸಿಂಹವು ಆ ಕೋಟೆಯೊಳಗೆ ವಾಸಿಸುತ್ತಿದೆ” ಎಂದು ಅವರು ಪಿಸುಗುಟ್ಟಿದರು.

ಸಿಂಹವು ಬಾವಿಯ ಗೋಡೆಯನ್ನು ಹತ್ತಿ ಕೆಳಗೆ ನೋಡಿತು. ಅಲ್ಲಿ ‘ಇನ್ನೊಂದು’ ಸಿಂಹ ತನ್ನತ್ತ ತಿರುಗಿ ನೋಡುವುದನ್ನು ಕಂಡನು. ಮೂರ್ಖ ಸಿಂಹವು ತನ್ನ ಪ್ರತಿಬಿಂಬವನ್ನು ನೋಡುತ್ತಿದೆ ಎಂದು ತಿಳಿದಿರಲಿಲ್ಲ.

ಅವರು ಭಾರಿ ಘರ್ಜನೆ ನೀಡಿದರು. ಗರ್ಜನೆಯು ಬಾವಿಯ ಗೋಡೆಗಳಲ್ಲಿ ಪ್ರತಿಧ್ವನಿಸಿತು ಮತ್ತು ಇನ್ನಷ್ಟು ಜೋರಾಗಿ ಧ್ವನಿಸಿತು.

ಸಿಂಹ ಮೊಲದ ಕಡೆಗೆ ತಿರುಗಿತು. “ನೀನು ಸರಿ. ಈ ವ್ಯಕ್ತಿ ತುಂಬಾ ಬಲಶಾಲಿ. ಅವನ ಘರ್ಜನೆಯು ಪ್ರಬಲವಾಗಿದೆ. ಆದರೆ ಚಿಂತಿಸಬೇಡ, ನಾನು ಅವನನ್ನು ಕ್ಷಣಾರ್ಧದಲ್ಲಿ ಕೊಲ್ಲುತ್ತೇನೆ. ಹೀಗೆ ಹೇಳುತ್ತಾ ಸಿಂಹವು ಬಾವಿಗೆ ಹಾರಿತು.

ಅವನು ಬಾವಿಯ ತಳದಲ್ಲಿ ತಲೆಗೆ ಹೊಡೆದನು ಮತ್ತು ಹೊರಗೆ ಬರಲಿಲ್ಲ. ಪೊದೆಗಳ ಹಿಂದೆ ಅಡಗಿದ್ದ ಪ್ರಾಣಿಗಳೆಲ್ಲ ಚಪ್ಪಾಳೆ ತಟ್ಟಿ ಹೊರಗೆ ಬಂದವು.

ಅರಸನ ಉಡುಗೊರೆ

ರೈತನೊಬ್ಬನ ತೋಟದಲ್ಲಿದ್ದ ಸೇಬು ಮರದಲ್ಲಿಒಂದೇ ಒಂದು ಹಣ್ಣು ಬೆಳೆಯಿತು. ಆತ ಅದನ್ನು ಕೊಯ್ದು ಇದನ್ನು ತನಗೆ ಅತ್ಯಂತ ಪ್ರೀತಿಪಾತ್ರರಾದ ಯಾರಿಗಾದರೂ ಉಡುಗೊರೆಯಾಗಿ ಕೊಡಬೇಕು ಎಂದು ಯೋಚಿಸಿ ಪ್ರಜೆಗಳ ಕ್ಷೇಮಕ್ಕಾಗಿ ಹಗಲಿರುಳೂ ಚಿಂತಿಸುವ ಅರಸನಿಗೆ ಒಪ್ಪಿಸಲು ನಿರ್ಧರಿಸಿ ಅರಸನ ಸಭೆಗೆ ಹೋದ.

ಅಲ್ಲಿಆತ ಸೇಬನ್ನು ಅರಸನ ಮುಂದಿರಿಸಿ ‘ದೊರೆಯೇ, ಇದು ಬಹು ವಿಶೇಷವಾಗಿದೆ. ದೇವತೆಗಳ ಕೃಪೆಯಿಂದ ಈ ಏಕೈಕ ಹಣ್ಣು ನನ್ನ ತೋಟದಲ್ಲಿಬೆಳೆದಿದೆ ಎಂದು ಭಾವಿಸಿದ್ದೇನೆ.

ಅಮೂಲ್ಯವಾದ ಹಣ್ಣನ್ನು ನನಗೆ ಪ್ರೀತಿಪಾತ್ರರಾದವರಿಗಷ್ಟೇ ಕೊಡಬೇಕು ಎಂದು ನಿರ್ಧರಿಸಿ ತಮಗೆ ಇದನ್ನು ಉಡುಗೊರೆಯಾಗಿ ನೀಡಬೇಕೆಂದು ತಂದಿದ್ದೇನೆ. ಸ್ವೀಕರಿಸಿ’ ಎಂದು ನಿವೇದಿಸಿದ.

ಅರಸನು ಸೇಬನ್ನು ಹಿಡಿದು ನೋಡಿದಾಗ ಅದರಲ್ಲಿವಿಶೇಷವಿದೆ ಎಂದು ಅವನಿಗನಿಸಲಿಲ್ಲ. ಆದರೆ ಮುಗ್ಧ ರೈತನ ಪ್ರೀತಿಯನ್ನು ಶಂಕಿಸಬಾರದು ಎಂಬ ಕಾರಣಕ್ಕೆ ಸಂತೋಷ ವ್ಯಕ್ತಪಡಿಸಿ ‘ನಿಜವಾಗಿಯೂ ಅತ್ಯಮೂಲ್ಯ ಕೊಡುಗೆಯನ್ನೇ ತಂದಿರುವೆ. ಇದಕ್ಕಾಗಿ ನನ್ನಿಂದ ನಿನಗೆ ಏನು ಪ್ರತಿಫಲ ಬೇಕು ಕೇಳು’ ಎಂದು ಹೇಳಿದ.

ರೈತ ಪ್ರತಿಫಲಕ್ಕೆ ಕೈಯೊಡ್ಡದೆ ‘ಎಲ್ಲಾದರೂ ಉಂಟೆ? ಪ್ರೀತಿಯ ಕೊಡುಗೆಗೆ ಪ್ರತಿಫಲ ಸ್ವೀಕರಿಸುವುದು ಉಚಿತವಲ್ಲ’ ಎಂದು ನಿರಾಕರಿಸಿದ.

ಬರಿಗೈಯಲ್ಲಿರೈತನನ್ನು ಕಳುಹಿಸಲು ಅರಸನ ಮನವೊಪ್ಪದೆ ಮಂತ್ರಿಗಳೊಂದಿಗೆ ಸಮಾಲೋಚಿಸಿದಾಗ ಮಂತ್ರಿಗಳು ‘ಆತ ಕಾಲಿಗೆ ಹಾಕಲು ಒಳ್ಳೆಯ ಪಾದರಕ್ಷೆಗಳು ಕೂಡ ಇಲ್ಲದೆ ಕಷ್ಟಪಟ್ಟು ನಡೆದು ಇಲ್ಲಿಗೆ ಬಂದಿದ್ದಾನೆ.

ಅವನಿಗೆ ಸವಾರಿಗೆ ಯೋಗ್ಯವಾದ ಒಳ್ಳೆಯ ಕುದುರೆ ಕೊಡಬೇಕು. ಕುದುರೆಯ ಮೇಲೆ ಅದಕ್ಕೆ ಹೊರಲು ಸಾಧ್ಯವಿರುವಷ್ಟು ಚಿನ್ನದ ನಾಣ್ಯಗಳ ಮೂಟೆಯನ್ನಿರಿಸಿದರೆ ಆತ ಸುಖದಿಂದ ಬದುಕಲು ನೆರವಾಗುತ್ತದೆ’ ಎಂದು ಹೇಳಿದರು.

ಹೀಗೆ ಅರಸನು ಕೊಡುಗೆಯಾಗಿ ನೀಡಿದ ಕುದುರೆಯ ಮೇಲೆ ಕುಳಿತುಕೊಂಡು ರೈತ ಮನೆಯ ದಾರಿ ಹಿಡಿದ.

ಆತನ ಮನೆಯ ಪಕ್ಕದಲ್ಲಿಒಬ್ಬ ಶ್ರೀಮಂತ ರೈತನಿದ್ದ. ಅವನು ಯಾರಿಗೂ ಕೊಳೆತ ಹಣ್ಣು ಕೂಡ ಉಚಿತವಾಗಿ ಕೊಡುವವನಲ್ಲ. ಆತ ಒಳ್ಳೆಯ ಕುದುರೆಯನ್ನೇರಿಕೊಂಡು ಬರುತ್ತಿರುವ ಬಡ ರೈತನನ್ನು ಕಂಡು ಬೆರಗಾಗಿ ಅವನನ್ನು ತಡೆದು ನಿಲ್ಲಿಸಿ ‘ನಿನ್ನೆ ತನಕ ಹೊಲ ಉಳಲು ಮುದಿ ಎತ್ತನ್ನು ಕೊಳ್ಳಲು ನಿನ್ನ ಬಳಿ ಶಕ್ತಿಯಿರಲಿಲ್ಲ.

ಆದರೆ ಇಂದು ಲಕ್ಷ ಲಕ್ಷ ಬೆಲೆ ಬಾಳುವ ಕುದುರೆಯ ಮೇಲೆ ಕುಳಿತುಕೊಂಡು ಬರುತ್ತಾ ಇದ್ದೀ ಅಂದರೆ ಏನು ಸಮಾಚಾರ?’ ಎಂದು ಕೇಳಿದ. ಅದಕ್ಕೆ ರೈತ ‘ಇದು ಪ್ರಾಮಾಣಿಕವಾಗಿಯೇ ದೊರಕಿದೆ.

ನನ್ನ ತೋಟದಲ್ಲಿಕೆಂಪು ಬಣ್ಣದ ದೊಡ್ಡ ಸೇಬು ಆಗಿತ್ತಲ್ಲ. ಅದು ಬಹಳ ಅಪೂರ್ವವಾದುದೆಂದು ನನಗೆ ಗೊತ್ತಾಗಿ ಅದನ್ನು ಅರಸರಿಗೆ ಉಡುಗೊರೆಯಾಗಿ ಕೊಟ್ಟೆ.

ಅವರು ನನಗೆ ಈ ಕುದುರೆ ಕೊಟ್ಟರು ಮತ್ತು ಬಂಗಾರದ ನಾಣ್ಯಗಳ ಮೂಟೆಯನ್ನೂ ಹೊರಿಸಿ ಕಳುಹಿಸಿದರು’ ಎಂದ. ಶ್ರೀಮಂತನು ತನ್ನ ತೋಟದಲ್ಲಿಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾಗಿರುವ ಸೇಬು ಹಣ್ಣುಗಳು ಬೇಕಾದಷ್ಟಿವೆ.

ಒಂದು ಹಣ್ಣಿಗೆ ಒಂದು ಕುದುರೆ, ಒಂದು ಮೂಟೆ ಚಿನ್ನ ಸಿಗುವುದಾದರೆ ತನ್ನ ಮನೆಯನ್ನು ಅದರಿಂದಲೇ ತುಂಬಿಸಬಹುದು ಎಂದು ಲೆಕ್ಕ ಹಾಕಿದ ಅವನು ಚಂದಚಂದದ ಸೇಬು ಹಣ್ಣುಗಳನ್ನು ಕೊಯ್ಯಿಸಿ ಗಾಡಿ ತುಂಬ ಹೇರಿಕೊಂಡು ಅರಸನ ಸನ್ನಿಧಿಗೆ ಹೋಗಿ ‘ನಾನು ಬಡ ರೈತ.

ನನ್ನ ತೋಟದಲ್ಲಿಅತ್ಯಮೂಲ್ಯವಾದ ಸೇಬು ಹಣ್ಣುಗಳು ರಾಶಿರಾಶಿಯಾಗಿ ಬೆಳೆದಿವೆ.

ಇದು ಯೋಗ್ಯರಾದವರ ಬಳಿಗೆ ಸೇರಬೇಕು ಎಂಬ ಆಶಯದಿಂದ ಎಲ್ಲವನ್ನೂ ಕೊಯ್ಯಿಸಿ ತಮಗೆ ಸಮರ್ಪಿಸಲು ತಂದಿದ್ದೇನೆ’ ಎಂದ. ಅದಕ್ಕೆ ಅರಸ ‘ತುಂಬಾ ಸಂತೋಷವಾಯಿತು.

ಈ ಹಣ್ಣುಗಳಿಗಾಗಿ ನೀನು ಯಾವ ಪ್ರತಿಫಲ ಬೇಕು ಎಂದು ಬಯಸಿದರೂ ಅದನ್ನು ಕೊಡುವ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದ.

ಅದಕ್ಕೆ ರೈತ ‘ನಾನು ಇದನ್ನು ತಂದಿದ್ದು ಪ್ರತಿಫಲದ ಬಯಕೆಯಿಂದ ಅಲ್ಲವೇ ಅಲ್ಲ. ನನಗೆ ಏನೂ ಬೇಡ’ ಎಂದು ಹೇಳಿದಾಗ ಅರಸ ‘ಪ್ರಜೆಗಳಿಂದ ನಾನು ಯಾವ ವಸ್ತುವನ್ನೂ ಉಚಿತವಾಗಿ ಸ್ವೀಕರಿಸುವುದಿಲ್ಲ. ಅದಕ್ಕೆ ಪ್ರತಿಫಲ ಕೊಡಲೇಬೇಕಾಗುತ್ತದೆ.

ಏನು ಬೇಕಿದ್ದರೂ ಕೇಳು. ಕೊಡುತ್ತೇನೆ’ ಎಂದ. ಶ್ರೀಮಂತ ರೈತ ಮನಸ್ಸಿನಲ್ಲೇ ಸಂತೋಷಪಟ್ಟು ‘ಅರಸರು ಪ್ರೀತಿಯಿಂದ ಏನು ಕೊಟ್ಟರೂ ಅದನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ.

ಗಾಡಿ ತುಂಬ ಹಣ್ಣು ತಂದಿರುವ ಇವನು ಬಡವನಲ್ಲಎಂದು ನಿರ್ಧರಿಸಿ ಅರಸ ಆತನ ಬೆರಳುಗಳಲ್ಲಿಉಂಗುರಗಳನ್ನು ಧರಿಸಿರುವ ಗುರುತನ್ನು ಕಂಡು ಆತ ದುಡಿಯುವವನೂ ಅಲ್ಲಅನಿಸಿತು.

ಆತ ಬಡ ರೈತ ತಂದುಕೊಟ್ಟಿದ್ದ ಸೇಬು ಹಣ್ಣನ್ನು ಒಳಗಿನಿಂದ ತರಿಸಿ ಶ್ರೀಮಂತ ರೈತನ ಕೈಯಲ್ಲಿಟ್ಟು ‘ಇದು ನನಗೆ ತುಂಬಾ ಪ್ರೀತಿಯ ಹಣ್ಣು. ಬಡ ರೈತನೊಬ್ಬನ ಶ್ರಮದ ಫಲ. ಇದರ ಬೆಲೆ ಕಟ್ಟಲಾಗದು.

ಇದನ್ನು ತೆಗೆದುಕೊಂಡು ಹೋಗು’ ಎಂದು ಹೇಳಿದಾಗ ಶ್ರೀಮಂತ ರೈತ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಬಂದ.

Panchatantra Stories in Kannada – ಪಂಚತಂತ್ರ ಕಥೆಗಳು

ಇತರ ವಿಷಯಗಳು:

ಇನ್ನು ಹೆಚ್ಚಿನ  ಕನ್ನಡ ಕಥೆಗಳು  ಹೋಗಲು ಬಯಸಿದರೆ  ಇಲ್ಲಿ ಕೆಲವು ಪುಸ್ತಕಗಳಲ್ಲಿ ಕೊಟ್ಟಿದ್ದೇವೆ   ನೀವು ನೋಡಬಹುದು

panchatantra kathegalu in kannada pdf

Kalpanika Kathegalu

50+ ಕನ್ನಡ ಪ್ರಬಂಧಗಳು

ಮಹಿಳಾ ಸಬಲೀಕರಣ ಯೋಜನೆಗಳು

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಪಂಚತಂತ್ರ ಕಥೆಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ  

Leave a Reply

Your email address will not be published. Required fields are marked *

rtgh