5th Standard Mallajjiya Malige Kannada Notes | 5ನೇ ತರಗತಿ ಮಲ್ಲಜ್ಜಿಯ ಮಳಿಗೆ ಕನ್ನಡ ನೋಟ್ಸ್ 

5ನೇ ತರಗತಿ ಮಲ್ಲಜ್ಜಿಯ ಮಳಿಗೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 5th Standard Mallajjiya Malige Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Chapter 7 Notes 5th Class Kannada 7th Chapter Notes mallajjiya malige kannada lesson Notes Pdf Mallajjiya Malige Notes

5th Standard Kannada 7th Lesson Notes

ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .

1. ಸೃಜನ್ ಯಾರಿಗೆ ಪತ್ರವನ್ನು ಬರೆದನು ?

ಸೃಜನ್ ತನ್ನ ತಂಗಿ ಸೌಜನ್ಯಗಳಿಗೆ ಪತ್ರ ಬರೆದನು .

2. ಯಾರಿಗೆ ಮಿಠಾಯಿ ಎಂದರೆ ಇಷ್ಟ ?

 ಮಕ್ಕಳಿಗೆ ಮಿಠಾಯಿ ಎಂದರೆ ಬಲು ಇಷ್ಮ . 

3. ಮಲ್ಲಜ್ಜಿ ಎಲ್ಲರೊಂದಿಗೆ ಹೇಗೆ ಮಾತನಾಡುತ್ತಾಳೆ ? 

ಮಲ್ಲಜ್ಜಿ ಎಲ್ಲರೊಂದಿಗೆ ನಗುನಗುತ್ತಾ , ಪ್ರೀತಿಯಿಂದ , ಸಮಾಧಾನದಿಂದ ಮಾತನಾಡುತ್ತಾಳೆ . 

4. ಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ್ಕ ಎಷ್ಟು ? 

ಮಲ್ಲಜ್ಜಿಯ ಕೋರ್ಟಿನಲ್ಲಿ ಶುಲ್ಕವೇ ಇರುವುದಿಲ್ಲ . 

5. ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ ?

 ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಜಾದೂ ಲೋಕ ವಿದಂತೆ ತೋರುತ್ತದೆ .

Mallajjiya Malige Questions and Answers

 ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ . 

1. ಮಲ್ಲಜ್ಜಿಯ ಮಳಿಗೆಯಲ್ಲಿ ದೊರೆಯುವ ವಸ್ತುಗಳು ಯಾವುವು ? 

ಮಲ್ಲಜ್ಜಿಯ ಮಳಿಗೆಯಲ್ಲಿ ಎಲ್ಲವೂ ದೊರಕುತ್ತವೆ . ಕಡಲೆಪುರಿ , ಕೊಬ್ಬರಿ ಮಿಠಾಯಿ , ಇತ್ತೀಚಿನ ತಿನಿಸು , ಎಲೆಅಡಿಕೆ , ಸಕ್ಕರೆ – ಚಹಾಪುಡಿ , ಊದುಕಡ್ಡಿ – ಕರ್ಪೂರ , ಬಿಟು – ಖಾರ , ಸೋ – ಪೌಡರ್ , ಚಾಕಲೇಟ್ , ಪೆಪ್ಪರ್‌ಮೆಂಟ್ … ಹೀಗೆ ಹತ್ತು ಹಲವಾರು ವಸ್ತುಗಳು ದೊರೆಯುತ್ತವೆ .

2. ಮಲ್ಲಜ್ಜಿಯ ನ್ಯಾಯಾಲಯದ ಕುರಿತು ವಿವರಿಸಿ . 

ಮಲ್ಲಜ್ಜಿಯು ತನ್ನ ಮಳಿಗೆಯಲ್ಲಿ ಜನರ ಸಮಸ್ಯೆಗಳು ಬಹಳ ಸುಲಭವಾಗಿ ಪರಿಹಾರವಾಗುತ್ತವೆ . ಮಕ್ಕಳಿಂದ ಹಿಡಿದು ಮುದುಕರವರೆಗೂ ದೂರುಗಳನ್ನು ತರುತ್ತಾರೆ . ಎಷ್ಟೋ ಬಾರಿ ನ್ಯಾಯಾಲಯದಲ್ಲಿಯೂ ಮಲ್ಲಣ್ಣೆಯು ಪರಿಹರಿಸುತ್ತಾಳೆ . ಇಲ್ಲಿ ಯಾವ ವಕೀಲರು , ಸಾಕ್ಷಿಗಳೂ ಬೇಕಿಲ್ಲ . ಇವಳು ಕೊಡುವ ತೀರ್ಪು ಯಾವ ನ್ಯಾಯಧೀಶನ ತೀರ್ಪಿಗೂ ಕಡಿಮೆಯಿಲ್ಲ . ಆದ್ದರಿಂದ ಇದೊಂದು ಜನಪ್ರಿಯ ‘ ಜನತಾ ನ್ಯಾಯಾಲಯ ಇದ್ದಂತೆ . 

3. ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಜಾದೂಲೋಕವೆನಿಸಿದ್ದು ಏಕೆ ?

 ಮಲ್ಲಜ್ಜಿಯ ಮಳಿಗೆ ಸದಾ ತೆರೆದೇ ಇರುತ್ತದೆ . ಅವಳು ಯಾವಾಗಲೂ ಅಂಗಡಿಯಲ್ಲೇ ಇರುತ್ತಾಳೆ . ಹೊಸ ಹೊಸ ಬಗೆಯ ಮಿಠಾಯಿ , ಚಾಕಲೇಟ್ ಸಹ ಸಿಗುತ್ತದೆ . ಇವಳು ಯಾವಾಗ ವ್ಯಾಪಾರ ಮಾಡುತ್ತಾಳೆ . ಯಾವಾಗ ವಸ್ತುಗಳನ್ನು ತರುತ್ತಾಳೆ . ಇದು ಸೃಜನ್‌ಗೆ ಸೋಜಿಗವೆನಿಸುತ್ತದೆ . ಆದ್ದರಿಂದ ಅವನಿಗೆ ಇದೊಂದು ಜಾದೂ ಲೋಕವಿದಂತೆ ಎಂದೆನಿಸುತ್ತದೆ . 

ಇ ) ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ . 

  1. ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ ಮಿಠಾಯಿ ಕೊಡುತ್ತಾಳೆ .
  2. ಅವರ ಜಾತಕ ಸಮೇತ ವಿವರಿಸಿ ಬಿಡುತ್ತಾಳೆ . 
  3. ಮಕ್ಕಳಿಂದ ಹಿಡಿದು ಮುದುಕರವರೆಗಿನ ದೂರು ಗಳನ್ನು ದೂರಮಾಡಿ ಬಿಡುತ್ತಾಳೆ . 
  4. ಇದರ ಬಾಗಿಲು ಸದಾ ತೆರೆದೇ ಇರುತ್ತದೆ . 
  5. ‘ ಮಲ್ಲಜ್ಜಿಯ ಮಳಿಗೆ ‘ ನನಗೆ ಒಂದು ಜಾದೂಲೋಕ ಇದ್ದಂತೆ . 

ವ್ಯಾಕರಣ ಮಾಹಿತಿ 

ಅ ) ಪತ್ರಲೇಖನ 

ನಾವು ಸಾಮಾನ್ಯವಾಗಿ ಇನ್ನೊಬ್ಬರ ಜೊತೆ ಮಾತಿನ ಮೂಲಕ ವಿಪಯ , ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ . ಅವರು ನೇರವಾಗಿ ಸಂಪರ್ಕಕ್ಕೆ ಸಿಗದಿದ್ದಾಗ ಅಂತಹ ಸಂದರ್ಭಗಳಲ್ಲಿ ಬರವಣಿಗೆಯ ಮೂಲಕ ಅವರಿಗೆ ವಿಷಯವನ್ನು ತಿಳಿಸುತ್ತೇವೆ . ಹೀಗೆ ಸಂಗತಿ , ವಿಚಾರ , ವಿಷಯಗಳನ್ನು ಇನ್ನೊಬ್ಬರ ಜೊತೆ ಬರವಣಿಗೆಯ ಮೂಲಕ ಹಂಚಿಕೊಳ್ಳುವುದು ಇಲ್ಲವೇ ತಿಳಿಸುವುದನ್ನು ‘ ಪತ್ರಲೇಖನ ‘ ಎನ್ನುತ್ತೇವೆ . ಪತ್ರ ಎಂದರೆ ಕಾಗದ , ಓಲೆ , ಬರೆದ ಕಾಗದ ಅರ್ಥಗಳಿವೆ .

ಪತ್ರದ ಕೆಲವು ವಿಧಗಳು 

  1. ವೈಯಕ್ತಿಕ ಪತ್ರಗಳು
  2. ಮನವಿ ಪತ್ರಗಳು
  3. ಆಡಳಿತ ವಿಷಯಗಳಿಗೆ ಸಂಬಂಧಿಸಿದ ಪತ್ರಗಳು 
  4. ಜಾಹೀರಾತು ಮತ್ತು ಪ್ರಕಟಣೆ ಪತ್ರಗಳು
  5. ವಿವಿಧ ಸಂಗ್ರಹಣೆ ಹಾಗೂ

ಪತ್ರಿಕಾವರದಿ ಪತ್ರಗಳು ಪತ್ರ ಬರೆಯುವಾಗ ಅನುಸರಿಸಬೇಕಾದ ಸಾಮಾನ್ಯ ನಿಯಮಗಳು : 

  1. ಪತ್ರದ ಮೇಲ್ಬಾಗದಲ್ಲಿ ದಿನಾಂಕ , ಹೆಸರು , ವಿರಬೇಕು . ಕೊ , ಆಶೀನ ಇರಬೇಕು . 
  2. ಸೂಕ್ತವಾದ ಸಂಬೋಧನೆ ಬರೆಯಬೇಕು . 
  3. ವಿಪಯಗಳನ್ನು ಅರ್ಥವತ್ತಾಗಿ ಸರಳ ಬರೆಯಬೇಕು .
  4. ಔಚಿತ್ಯಪೂರ್ಣವಾದ ಕೋರಿಕೆ  ಉದಾ : ಇತಿ ನಮಸ್ಕಾರ , ಇತಿಆಶೀರ್ವಾದ 
  5. ಪತ್ರದ ಕೊನೆಯಲ್ಲಿ ಸಹಿ ಹಾಕಬೇಕು . 
  6. ಕವರ್ ಮತ್ತು ಪತ್ರದ ಮೇಲ್ಬಾಗದಲ್ಲಿ ಕಳುಹಿಸುವವರ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು . 
  7. ಕವರಿನ ಇನ್ನೊಂದು ಬದಿಯಲ್ಲಿ ಕಳುಹಿಸಬೇಕಾದ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು . 
  8. ಬರವಣಿಗೆಯು ಅಂದವಾದ ಶೈಲಿಯಲ್ಲಿ , ಆಕರ್ಷಕ ವಾಗಿ ಇರಬೇಕು . 

ಸಂಬೋಧನೆಗಳು :

ತಂದೆಗೆ 

ತಾಯಿಗೆ 

ಗುರುಗಳಿಗೆ : 

ತೀರ್ಥರೂಪು 

ಮಾತೃಶ್ರೀ ಪೂಜ್ಯ

ಗೆಳೆಯ / ಗೆಳತಿಗೆ: ಆತ್ಮೀಯ ,ನಲ್ಮೆಯ  ಪ್ರೀತಿಯ

ಚಿಕ್ಕಪ್ಪ ದೊಡ್ಡಪ್ಪನಿಗೆ : ತೀರ್ಥರೂಪು ಸಮಾನ

ಚಿಕ್ಕಮ್ಮ ದೊಡ್ಡಮ್ಮ  : ಮಾತೃಶ್ರೀ ಸಮಾನ

ಕಿರಿಯರಿಗೆ : ಚಿರಂಜೀವಿ 

ಹೀಗೆ ವೈಯಕ್ತಿಕ ಪತ್ರಗಳನ್ನು ಬರೆಯುವಾಗ ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಸಂಶೋಧನೆ ಗಳನ್ನು ಬಳಸುತ್ತೇವೆ . ಇದು ನಾವು ಅವರಿಗೆ ತೋರಿಸುವ ಗೌರವವನ್ನು ಸೂಚಿಸುತ್ತದೆ . 

ಭಾಷಾಭ್ಯಾಸ

 ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿ ಬರೆಯಿರಿ

ಪತ್ರ = ಕಾಗದ ,

ಓಲೆ ಉಚಿತ = ಪುಕ್ಕಟೆ 

ತುರ್ತು = ಜರೂರು , 

ಕೂಡಲೆ ಶುಲ್ಕ = ಸುಂಕ , ದಂಡ 

ತೀರ್ಪು = ನಿರ್ಣಯ , ತೀರ್ಮಾನ  . 

ಆ ) ಯಾವುದಾದರೂ ನಾಲ್ಕು ವಿಧದ ಪತ್ರಗಳನ್ನು ಹೆಸರಿಸಿರಿ . 

ನಾಲ್ಕು ವಿಧದ ಪತ್ರಗಳು

  1. ವೈಯಕ್ತಿಕ ಪತ್ರಗಳು
  2. ಮನವಿ ಪತ್ರಗಳು
  3. ಆಡಳಿತ ಪತ್ರಗಳು 
  4. ಪತ್ರಿಕಾ ವರದಿ ಪತ್ರಗಳು

 ಇ ) ಶುಭನುಡಿ 

  1. ಜನಸೇವೆಯಿಂದ ಜನಮನ್ನಣೆ ದೊರಕುತ್ತದೆ .
  2. ವೃತ್ತಿಯೊಂದಿಗೆ ಸೇವೆಯೂ ಉತ್ತಮವಾದ ಪ್ರವೃತ್ತಿ . 
  3. ಎಲ್ಲರೊಳಗೊಂದಾಗುವ ಬಾಳು ಆದರ್ಶದ ಬಾಳು .
  4. ಅನುಭವದ ನುಡಿಗಳು ಬದುಕಿಗೆ ದಾರಿದೀಪ . 

FAQ :

ಸೃಜನ್ ಯಾರಿಗೆ ಪತ್ರವನ್ನು ಬರೆದನು ?

ಸೃಜನ್ ತನ್ನ ತಂಗಿ ಸೌಜನ್ಯಗಳಿಗೆ ಪತ್ರ ಬರೆದನು .

ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ ?

 ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಜಾದೂ ಲೋಕ ವಿದಂತೆ ತೋರುತ್ತದೆ .

ಇತರೆ ವಿಷಯಗಳು:

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh