5th Standard Dheera Senani Kannada Notes | 5ನೇ ಧೀರ ಸೇನಾನಿ ತರಗತಿ ಕನ್ನಡ ನೋಟ್ಸ್ 

kseeb solutions 5th standard kannada Dheera Senani Kannada Notes pdf download, 5ನೇ ಧೀರ ಸೇನಾನಿ ತರಗತಿ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ

kseeb solutions 5th standard kannada Dheera Senani Notes

5th Dheera Senani Standard Kannada Notes | 5ನೇ ಧೀರ ಸೇನಾನಿ ತರಗತಿ ಕನ್ನಡ ನೋಟ್ಸ್  , ಪ್ರಶ್ನೆ ಉತ್ತರ question answer, text book pdf download Kannada deevige

kseeb solutions 5th standard kannada Dheera Senani Kannada Notes pdf download,

ಪದಗಳ ಅರ್ಥ

 ಅಲಂಕೃತ = ಅಲಂಕಾರ ಮಾಡಿದ , ಸಿಂಗರಿಸಿದ ಉತ್ತುಂಗ = ಶೇಪ್‌ ಕಾವಲಿರಿಸು = ರಕ್ಷಿಸು . ಕೃತಿ = ಕೆಲಸ ಗಾಡಿ = ಚಿಕ್ಕಡಿ , ಬಂಡಿ ಗಾಥೆ = ಕತೆ , ಘಟನೆ ಗ್ರಾಮದ ಓಣಿ = ಹಳ್ಳಿಯ ಬೀದಿ ಜನ್ಮತಾಳು = ಹುಟ್ಟು ಜನಿಸು ದುರ್ಗಮ = ಹೋಗಲು ಅಸಾಧ್ಯ ಫೀಲ್ಡ್ = ಭೂಭಾಗ ಫೀಲ್ಡ್ ಮಾರ್ಷಲ್ = ಭೂಸೇನೆಯಲ್ಲಿ ವಿಶೇಷ options.com ans.com ಪರಿಣತಿಯನ್ನು ಪಡೆದವರಿಗೆ ಕೊಡುವ ಅತ್ಯುನ್ನತ ಪದವಿ . = ಮಹಾದಂಡನಾಯಕರು = ಸೇನಾ ವರಿಷ್ಮ , ಸೈನ್ಯದ ಅತಿ ಹಿರಿಯ ಅಧಿಕಾರಿ ಮಾರ್ಪಲ್ = ಪರಿಣತ ನೇತೃತ್ವ = ಮುಂದಾಳತ್ವ , ಹಿರಿತನ ಲೇಸು = ಒಪ್ಪಿತ , ಒಳ್ಳೆಯದು ಸಜನಿಕೆ = ಒಳ್ಳೆಯತನ

5ನೇ ಧೀರ ಸೇನಾನಿ ತರಗತಿ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ

 ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .

 1. ಬೇವೂರರು ಯಾವಾಗ ಜನಿಸಿದರು ? 

ಬೇವೂರರು ದಿನಾಂಕ 11-08-1916ರಂದು ಬಾಗಲಕೋಟೆ ಜಿಲ್ಲೆಯ ಬೇವೂರ್ ಗ್ರಾಮದಲ್ಲಿ ಜನಿಸಿದರು . 

 1. ಬೇವೂರರ ತಂದೆ ತಾಯಿಯರ ಹೆಸರೇನು ? 

ಬೇವೂರರ ತಂದೆಯ ಹೆಸರು ಗುರುನಾಥ್‌ರಾವ್ ಹಾಗೂ ತಾಯಿ ರುಕ್ಕಿಣಿ ಬಾಯಿ . 

 1. ಗೋಪಾಲರಾಯರ ಸ್ವಂತ ಊರ ಯಾವುದು?

ಗೋಪಾಲರಾಯರ ಸ್ವಂತ ಊರು ಬೇವೂರು

 1. ಬೇವೂರರನ್ನು ಬಿಗಿದಪ್ಪಿ ಪ್ರಶಂಸಿಸಿದವರು ಯಾರು ? 

ಬೇವೂರರನ್ನು ಬಿಗಿದಪ್ಪಿ ಪ್ರಶಂ ಸಿಸಿದವರು ಮಹಾ ದಂಡನಾಯಕರಾಗಿದ್ದ ಮಾರ್ಪಲ್ ಮಾಣಿಕ್ ಪಾರವರು . 

 1. ಭಾರತ ಸರಕಾರವು ಬೇವೂರರನ್ನು ಎರಡು ವರ್ಷದ – ಅವಧಿಗೆ ಯಾವ ಕಾರ್ಯಕ್ಕೆ ನೇಮಿಸಿತು ?
  ಭಾರತ ಸರ್ಕಾರವು ಬೇವೂರರನ್ನು ಎರಡು ವರ್ಷದ ಅವಧಿಗೆ ಡೆನ್ಮಾರ್ಕಿನ ರಾಯಭಾರಿಯನ್ನಾಗಿ ನೇಮಿಸಿತು . 

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರವನ್ನು ಬರೆಯಿರಿ . 

 1. ಗೋಪಾಲರಾಯರು ಎಲ್ಲಿ ಸೈನಿಕ ಶಿಕ್ಷಣ ಪಡೆದರು ? 

ಗೋಪಾಲರಾಯರು ರಾಯಲ್ ಇಂಡಿಯನ್ ಮಿಲಿಟರಿ

ಕಾಲೇಜಿನಲ್ಲಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕ ಶಿಕ್ಷಣವನ್ನು ಪಡೆದರು . 

 1. ಬೇವರೂರರ ನೇತೃತ್ವದ ಸೈನಿಕ ತುಕಡಿಯ ಸಾಹಸ ವನ್ನು ವಿವರಿಸಿರಿ ? 

ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಬಾಂಗ್ಲಾ ದೇಶಕ್ಕೆ ಭಾರತದ ಸೇನೆ ಸಹಕರಿಸಿತು . ಆಗ ಬೇವೂರರು ಮುಖ್ಯಸ್ತರಾಗಿ

ರಾಜಸ್ಥಾನ ಮತ್ತು ಕಚ್ಚಿದ ದು ಪಾಕಿಸ್ತಾನದ ಕಡೆಗೆ ನುಗ್ಗಿದರು . ಸೇನಾ ತುಕಡಿಯ ದು ಪ್ರದೇಶಗಳಲ್ಲಿ ಸಾವಿರಾರು ಚದರ

ಪಾಕ್ ನೆಲವನ್ನು ಆಕ್ರಮಿಸಿಕೊಂಡರು . ಬೇವೂರರ ನೇತೃತ್ವದ ಸೈನಿಕ ತುಕಡಿಯುವು ಇದಕ್ಕಾಗಿ ಫೀಲ್ಡ್ ಮಾರ್ಪಲ್ ಮಾಣಿಕ್

ಅಭಿಮಾನದಿಂದ 9 ಊರವರು ಇವರನ್ನು ಪಶಂಸಿಸಿದರು . 

 1. ಬೇವೂರರ ಸಜ್ಜನಿಕೆಯನ್ನು ಉದಾಹರಣೆಯೊಂದಿಗೆ ತಿಳಿಸಿರಿ .

 ಬೇವೂರರು ಸಜ್ಜನರು . ಒಮ್ಮೆ ಅವರ ಊರಿನ ಆದರ್ಶ ವಿದ್ಯಾವರ್ಧಕ ಸಂಘಕ್ಕೆ ಹೋದಾಗ ಅವರಿಗಾಗಿ ಬಂದೂಕು ಧಾರಿಗಳಾದ

ಪೋಲಿಸರನ್ನು ಕಾವಲಿರಿಸಿದ್ದರು . ಅದನ್ನು ನಿರಾಕರಿಸಿ , ತಮಗಾಗಿ ಬಂದ ಜೀಪಿನಲ್ಲಿ ಕುಳಿತುಕೊಳ್ಳದೆ ರೈತನ ಗಾಡಿಯಲ್ಲಿ ಹೋದರು .

ಈ ಘಟನೆ ಅವರ ಸಜ್ಜನಿಕೆಯನ್ನು ತೋರಿಸುತ್ತದೆ .

 1. ನಿವೃತ್ತಿ ನಂತರವೂ ಬೇವೂರರ ಸೇವೆ ಭಾರತ ಸರಕಾರಕ್ಕೆ ಅವಶ್ಯಕವೆನಿಸಿದ ಸಂದರ್ಭ ಯಾವುದು ?
  ನಿವೃತ್ತಿಯ ನಂತರವೂ ಬೇವೂರರ ಸೇವೆಯು ಭಾರತ ಸರ್ಕಾರಕ್ಕೆ ಅವಶ್ಯವಾಯಿತು . ಅವರ ಆಡಳಿತ ವೈಖರಿಯನ್ನು ಗುರುತಿಸಿ ಭಾರತ ಸರ್ಕಾರವು ಅವರನ್ನು ಡೆನ್ಮಾರ್ಕಿನ ರಾಯಭಾರಿಯನ್ನಾಗಿ ಎರಡು ವರ್ಷ ಅವಧಿಗೆ ನೇಮಿಸಿತು . 

ಇ ) ಬಿಟ್ಟ ಸ್ಥಳಗಳನ್ನು ತುಂಬಿರಿ . 

 1. ಗೋಪಾಲರಾಯರ ತಂದೆ ಸರ್ . ಗುನಾಥ್ ರಾವ್ ತಾಯಿ ರುಕಿಣಿಬಾಯಿ 
 2. ಗೋಪಾಲರಾಯರು ತಮ್ಮ ದಲ್ಲಿಯೇ ಗೌರವ ಖಡ ಮತ್ತು ಚಿನ್ನದ ಪದಕ ಜೀವನ ಪಡೆದಿದ್ದರು . 
 3. “ ಯುವಜನರು ನಾಳೆಯ ದೇಶ ರಕ್ಷಕ ರಾಗಬೇಕು ” ಎಂಬುದು ಅವರ ಬಯಕೆಯಾಗಿತ್ತು .
 4. ಡಾಜ ಕಟ್ಟಿಸಿದ ಯುದ್ಧ ಸ್ಮಾರಕ ಭವನಕ್ಕೆ ಜಿ.ಜಿ. ಬೇವೂರರ ಹೆಸರಿಟ್ಟಿದ್ದಾರೆ .

 5 .ನಾನೊಬ್ಬ  ಸೈನಿಕ ನನಗೇಕೆ ರಕ್ಷಣೆ ? ಇದು ನನ್ನನ ಊರು . ಇವರೆಲ್ಲ ನನ್ನ ಜನ ” ಎಂದರು . 

ವ್ಯಾಕರಣ ಮಾಹಿತಿ

 ಅ ) ಸಮಾನಾರ್ಥಕ ಪದಗಳು

ಒಂದು ವ್ಯಕ್ತಿ , ಪ್ರಾಣಿ , ವಸ್ತು , ಇತ್ಯಾದಿಗಳಿಗೆ ಅದೇ ಅರ್ಥವನ್ನು ಸೂಚಿಸುವ ಹಲವಾರು ಇತರ ಪದಗಳು

ಇರುತ್ತವೆ . ಹೀಗೆ ಒಂದು ಶಬ್ದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಮತ್ತೊಂದು ಶಬ್ದಕ್ಕೆ ಸಮಾನಾರ್ಥಕಪದ ಎನ್ನವರು . 

ಉದಾ : ಕಾಯಕ = ಕೆಲಸ , ಉದ್ಯೋಗ , ಕಸಬು , ಊಳಿಗ , ದುಡಿಮೆ ತಂಡ = ಪಕ್ಷ , ಒಣ , ಗುಂಪು , ಪಡೆ ,

ದಳ , ಸಮೂಹ ಪದ = ಕಮಲ , ತಾವರೆ , ಅರವಿಂದ , ವನಜ , ಸರೋಜ . ಭಾಷೆ = ಮಾತು , ನುಡಿ , ವಚನ , ಆಣೆ , ಪ್ರತಿಜ್ಞೆ ನಂಬಿಗೆಯ ನುಡಿ , 

ಆ ) ನಾನಾರ್ಥಪದಗಳು 

 ಒಂದು ಶಬ್ದವು ಇತರ ಹಲವಾರು ಅರ್ಥಗಳನ್ನು ಸೂಚಿಸುವಂತಿದ್ದರೆ ಅದನ್ನು ನಾನಾರ್ಥಕ ಪದ ಎನ್ನುವರು . 

ಉದಾ : ದಂಡ = ಶಿಕ್ಷೆ , ಕೋಲು , ಸೈನ್ಯ ಉದ ದಳ = ಸೈನ್ಯ , ಎಲೆ , ಗುಂಪು ಅಂಗ = ಭಾಗ , ದೇಹ = ಮಡಿ = ಸಾಯಿ , ಶುದ್ಧವಾದದ್ದು 

ಭಾಷಾಭ್ಯಾಸ 

ಅ ) ಸಮಾನಾರ್ಥಕ ಪದಗಳು

 1. ಒಂದು ಸಮಾನಾರ್ಥಕ ಪದ ಎಂದರೇನು ? 

ಒಂದು ಶಬ್ದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಮತ್ತೊಂದು ಶಬ್ದಕ್ಕೆ ಸಮಾನಾರ್ಥಕ ಪದ ಎನ್ನುವರು . 

 1. ನಾನಾರ್ಥಕ ಪದ ಎಂದರೇನು ? 

ಒಂದು ಶಬ್ದವು ಇತರ ಹಲವಾರು ಅರ್ಥಗಳನ್ನು ಸೂಚಿಸುವಂತಿದ್ದರೆ ಅದನ್ನು ನಾನಾರ್ಥಕ ಪದ ಎನ್ನುವರು . 

 1. ಈ ಪದಗಳಿಗೆ ನಾನಾರ್ಥಗಳನ್ನು 

ಮಾದರಿ : ಅಡಿ = ತಳ , ಪಾದ , ಅಳತೆ ಅರಿ , ಕಾಡು , ಮಡಿ , ನುರಿ ರೆಯಿರಿ . ಅರಿ = ಶತ್ತು , ತಿಳಿ ,

ಕಾಡು = ವನ , ಕಾಟ ( ತೊಂದರೆ ) ಕೊಡು ಮಡಿ = ಶುಭ್ರ , ಸ್ವಚ್ಛ , ಸಮು ನುಡಿ = ಹೇಳು , ಮಾತು = ಇ ) 

ಶುಭನುಡಿ 

 1. ದೇಶಕ್ಕಾಗಿ ದುಡಿಯೋಣ , ದೇಶಕ್ಕಾಗಿ ಬಾಳೋಣ .
 2. ದೇಶ , ಭಾಷೆ , ಸಂಸ್ಕೃತಿಗಳ ಬಗ್ಗೆ ಸದಾ ಅಭಿಮಾನವಿರಲಿ . 
 3. ನಮ್ಮ ದೇಶ ಭಾರತ , ಹೇಳಿರೆಲ್ಲ ಹಿಗ್ಗು

ಪ್ರವೇಶ 

ನಮ್ಮ ದೇಶ ತ್ಯಾಗ , ಬಲಿದಾನಗಳಿಗೆ ಹೆಸರುವಾಸಿ ಯಾಗಿದೆ . ಇಲ್ಲಿ ಪುರಾಣ ಕಾಲದಲ್ಲಿ ಮೊದಲ್ಗೊಂಡು ಕಾರ್ಗಿಲ್

ಹೋರಾಟದವರೆಗೂ ಅನೇಕಾನೇಕ ಯುದ್ಧಗಳು ನಿರಂತರವಾಗಿ ನಡೆದಿವೆ . ಜಾಗತಿಕ ಮಹಾಯುದ್ಧಗಳಲ್ಲೂ ಭಾರತೀಯರು

ಸಾಹಸವ ಮೆರೆದಿದ್ದಾರೆ . ದೇಶದ ರಕ್ಷಣೆಯ ಮಾತು ಬಂದಾಗ ಜೀವದ ಹಂಗು ತೊರೆದು ಹೋರಾಡಿದ ಅದೆಷ್ಟೋ ಮಹನೀಯರು

ನಮ್ಮ ಕಣ್ಣಮುಂದೆ ಹಾದು ಹೋಗುತ್ತಾರೆ . ಅಂತಹವರು ನಮ್ಮ ಪ್ರಾತಃಸ್ಮರಣೀಯರು . 

ಮುಖ್ಯಾಂಶಗಳು

 ಭಾರತದಲ್ಲಿ ಅನೇಕ ಜನ ಮೇಧಾವಿಗಳು , ವೀರ ಯೋಧರು , ವಿಜ್ಞಾನಿಗಳು , ಸಾಧಕರು ಜನ್ಮ ತಾಳಿದ್ದಾರೆ . ಅಂತಹ

ಸಾಧಕರ ಸಾಲಿನಲ್ಲಿ ಧೀರಸೇನಾನಿ ಮಹಾದಂಡನಾಯಕ ಜನರಲ್ ಜಿ.ಜಿ. ಬೇವೂರರು ಒಬ್ಬರು .ಕರ್ನಾಟಕ ಬಾಗಲಕೋಟೆ

ಜಿಲ್ಲೆಯ ಬೇವೂರ ಗ್ರಾಮದವರಾದ ಸರ್ . ಗುರುನಾಥ್‌ರಾವ್ ಹಾಗೂ ರುಕ್ಕಿಣಿಬಾಯಿಯವರ ಪುತ್ರ ಗೋಪಾಲರಾವ್ ಇವರು

ದಿನಾಂಕ 11-08-1916ರಂದು ಜನಿಸಿದರು . ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಮತ್ತುಇಂಡಿಯನ್ ಮಿಲಿಟರಿ

ಅಕಾಡೆಮಿಯಲ್ಲಿ ಸೈನಿಕ ಶಿಕ್ಷಣ ಪಡೆದರು . ಶಿಸ್ತು , ಕಠಿಣ ಶ್ರಮಗಳಿಂದ ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ “ ಗೌರವ ಖಡ

” ಮತ್ತು ಚಿನ್ನದ ಪದಕಗಳನ್ನು ಪಡೆದುಕೊಂಡ ಕೀರ್ತಿ ಅವರದು . 1937 ರಲ್ಲಿ ಬೇವೂರರು ಭಾರತೀಯ ಸೇನಾಪಡೆ ಸೇರಿದರು .

ಜನರಲ್ ಜಿ.ಜಿ. ಬೇವೂರರ ಕರ್ತವ್ಯನಿಷ್ಠೆ ದಕ್ಷ – ಆಡಳಿತ ಕಂಡು ಭಾರತ ಸರ್ಕಾರವು ಅವರಿಗೆ “ ಪದ್ಮಭೂಷಣ ” ಪ್ರಶಸ್ತಿ ಹಾಗೂ ಪರಮ

ವಿಶಿಷ್ಟ ಸೇವಾ ಪದಕವನ್ನು ಕೊಟ್ಟು ಗೌರವಿಸಿತು . ಮುಂದೆ ಕಟ್ಟಿಸಿದ ಯುದ್ಧ ಸ್ಮಾರಕ ಜನರಲ್ , ಜಿ.ಜಿ. ಬೇವೂರರ

ಹೆಸರಿಡಲಾಯಿತು . ಜನರಲ್ ಜಿ.ಜಿ. ಬೇವೂರರೊಳಗಿನ ನಿಜವಾದ ಯೋಧನನ್ನು ದೇಶ ಗುರ್ತಿಸಿದ್ದು ಬಾಂಗ್ಲಾ ಯುದ್ಧದಲ್ಲಿ .

ಆ ಯುದ್ಧದಲ್ಲಿ ಪಾಕ್ ಸೈನಿಕರು ಮಾನವ ಹಕ್ಕುಗಳನ್ನು ಉಲಂಘಿಸಿದರು . ಬಾಂಗ್ಲಾ ದೇಶಕ್ಕೆ ಭಾರತದ ಸೇನೆ ಸಹಕರಿಸಿತು .

ಬೇವೂರರು ರಾಜಸ್ಥಾನ ಮತ್ತು ಕಚ್ಚದ ದುರ್ಗಮ ಪ್ರದೇಶದಲ್ಲಿ ಸಾವಿರಾರು ಚದರ ಮೈಲಿ ನೆಲವನ್ನು ಆಕ್ರಮಿಸಿದರು .

ಇವರು ಈ ಸಂದರ್ಭದಲ್ಲಿ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಮಾಣಿಕ್ ಪಾರವರು ಬೇವೂರರನ್ನು ಅಭಿಮಾನದಿಂದ

ಬಿಗಿದಪ್ಪಿ ಪ್ರಶಂಸಿಸಿದರು . ಬೇವೂರರ ಸಾಹಸ ದೇಶದಲ್ಲಿ ಮನೆಮಾತಾಯಿತು . ಅವರು ತೋರಿದ ಶೌರ್ಯ ಸಾಹಸಕ್ಕೆ

ರಾಷ್ಟ್ರಮಟ್ಟದ ಗೌರವವೂ ದೊರೆ ` ತು . ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಸಿ.ಸಿ. 

ಕಲಿಕೆಯು ಒಂದು ಅಂಗವಾದಾ ರಾಗ ಬೇವೂರರು ಅದರ ಪ್ರಥಮ ನಿರ್ದೇಶಕರಾದರು . ಯುವಜನರು ನಾಳೆಯ ದೇಶ

ರಕ್ಷಕರಾಗಬೇಕು ಎಂಬುದು ಅವರ ಬಯಕೆಯಾಗಿತ್ತು . 1973 ರ ಜನವರಿ 15 ರಂದು ಗೋಪಾಲರಾವ್ ಗುರುನಾಥ ರಾವ್

ಬೇವೂರರು ಭಾರತದ ಭೂ ಸೇನೆಯ ಒಂಬತ್ತನೆಯ ಮಹಾದಂಡ ನಾಯಕರಾದರು .

 ಜನರಲ್ ಜಿ.ಜಿ. ಬೇವೂರರ ಕರ್ತವ್ಯನಿಷ್ಠೆ , ದಕ್ಷ ಆಡಳಿತ ಕಂಡು ಭಾರತ ಸರ್ಕಾರವು ಅವರಿಗೆ “ ಪದ್ಮಭೂಷಣ ” ಪ್ರಶಸ್ತಿ ಹಾಗೂ

ಪರಮ ವಿಶಿಷ್ಟ ಸೇವಾ ಪದಕವನ್ನು ಕೊಟ್ಟು ಗೌರವಿಸಿತು . ಮುಂದೆ ಡಾರ್ಜಿಲಿಂಗ್‌ನಲ್ಲಿ

ಕಟ್ಟಿಸಿದ ಯುದ್ಧ ಸ್ಮಾರಕ ಭವನಕ್ಕೆ ಜನರಲ್ ಜಿ.ಜಿ. ಬೇವೂರರ ಹೆಸರಿಡ ಲಾಯಿತು . 

ಒಮ್ಮೆ ಬೇವೂರಿನಲ್ಲಿ ಅವರಿಗೆ ಅದ್ದೂರಿಯಿಂದ ಸ್ವಾಗತ ದೊರೆತಾಗ “ ನಾನೊಬ್ಬ ಸೈನಿಕ , ನನಗೇಕೆ ರಕ್ಷಣೆ ? ಇದು ನನ್ನ

ಊರು , ನನ್ನ ಜನ ” ಎಂದು ಹೇಳಿ ಜೀಪಿನಲ್ಲಿ ಕುಳಿತುಕೊಳ್ಳದೆ ರೈತನ ಗಾಡಿಯೊಂದರಲ್ಲಿ ಹೆಂಡತಿ ಯೊಂದಿಗೆ ಕುಳಿತು ಊರ

ಜನರ ಯೋಗ ಕೇಮವನ್ನು ವಿಚಾರಿಸುತ್ತಾ ನಡೆದರು . ” ಮಾತಿಗಿಂತ ಕೃತಿ ಲೇಸು ” ಎಂಬ ತತ್ವ ಜನರಲ್ ಬೇವೂರ್ ಅವರದು .

ನಿವೃತ್ತಿಯ ಅನಂತರ ಸೇವೆಯು ಭಾರತ ಸರಕಾರಕ್ಕೆ ವೈಖರಿಯನ್ನು ಗುರ್ತಿಸಿ ಭಾರತ ಸರ್ಕಾರವು ಬೇವೂರರನ್ನು ಡೆನ್ಮಾರ್ಕಿನ

ರಾಯಭಾರಿಯನ್ನಾಗಿ ಎರಡು ವರ್ಷದ ಅವಧಿಗೆ ನೇಮಿಸಿತು . ಬೇವೂರಿನ ವರಪುತ್ರ ಭಾರತದ ಒಂಬತ್ತನೆಯ ಮಹಾದಂಡ

ನಾಯಕರಾಗಿ ಸೇವೆ ಸಲ್ಲಿಸಿದ ಸಹೃದಯಿಯಾದ ಜಿ.ಜಿ. ಬೇವೂರರು 1989 ಅಕ್ಟೋಬರ್ 24 ರಂದು ಇಹಲೋಕ ತ್ಯಜಿಸಿದರು

. ಆದರೂ ಅವರ ಸಾಹಸದ ಗಾಥೆಗಳೂ ಭಾರತದ ಮಹಾ ದಂಡನಾಯಕದ ಚರಿತ್ರೆಯಲ್ಲಿ ಅಮರವಾಗಿ ಉಳಿದಿವೆ . 

ಕೃತಿಕಾರರ ಪರಿಚಯ :

ಡಾ . ಬಸವರಾಜ ಹದಿಯವರು 01-061955ರಂದು ಬಾಗಲಕೋಟೆ ಜಿಲ್ಲೆಯ ಬೇವೂರಿನಲ್ಲಿ ಜನಿಸಿದರು .

ತಂದೆ ಚನ್ನಪ್ಪ , ತಾಯಿ ಚನ್ನವ್ವ , ಲೇಖಕರು 1997 ರಲ್ಲಿ ಮುಳಗುಂದದ ಬಾಲಲೀಲಾ ಮಹಾಂತ ತ ಶಿವಯೋಗಿಗಳ

ಕುರಿತ ಮಹಾಪುಬಂಧಕ್ಕೆ ಡಾಕ್ಟರೇಟ್ ಪ ಪದವಿ ಪಡೆದಿದ್ದಾರೆ . ಶ್ರೀ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ಮಹಾವಿದ್ಯಾಲಯದಲ್ಲಿ

ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ . ಬೇವೂರಿನ ಅಪರೂಪದವರು . ಅಕ್ಕನ ಬಳಗ ಮುಂತಾದವು ಅವರ ಕೃತಿಗಳು .

ಪ್ರಸ್ತುತ ಪಾಠವನ್ನು ಅವರ “ ವೀರ ಸೇನಾನಿ ಜನರಲ್ ಜಿ.ಜಿ. ಬೇವೂರ ‘ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ . 

kseeb solutions 5th standard kannada PDF 

5th Standard  Dheera Senani Kannada Note Lesson question answer pdf textbook summary Kannada Deevige 5th Class Dheera Senani Kannada Notes question answer text book pdf download 5ನೇ ತರಗತಿ ಧೀರ ಸೇನಾನಿ ಕನ್ನಡ ನೋಟ್ಸ್  ಪ್ರಶ್ನೆ 

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh