10ನೇ ತರಗತಿ ಅಧ್ಯಾಯ-14 ಶಕ್ತಿಯ ಆಕರಗಳು ವಿಜ್ಞಾನ ನೋಟ್ಸ್ ಪ್ರಶ್ನೋತ್ತರ, Class 10 Science Chapter 14 Notes Question Answer Pdf in Kannada Medium 2024 Kseeb Solution For Class 10 Chapter 14 Notes in Kannada Mcq Questions shaktiya akaragalu question answer in kannada class 10 science chapter 14 notes in kannada
Class 10 Science Chapter 14 Notes
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,
1.ಶಕ್ತಿಯ ಉತ್ತಮ ಆಕರ ಯಾವುದು ?
ಈ ಕೆಳಗಿನ ಅಂಶಗಳನ್ನು ಪೂರೈಸುವ ಯಾವುದೇ ಶಕ್ತಿಯ ಆಕರವನ್ನು ಉತ್ತಮ ಶಕ್ತಿಯ ಆಕರ ಎನ್ನಬಹುದು.
ಅ) ಏಕಮಾನ ರಾಶಿಗೆ ಅತ್ಯಧಿಕ ಉಷ್ಣವನ್ನು ಬಿಡುಗಡೆ ಮಾಡಬೇಕು.
ಆ) ಏಕಮಾನ ರಾಶಿಗೆ ಅತ್ಯಧಿಕ ಕೆಲಸವನ್ನು ಮಾಡಬೇಕು. ಇ) ಸುಲಭವಾಗಿ ಸಿಗುವಂತಿರಬೇಕು.
ಈ) ಆರ್ಥಿಕವಾಗಿ ಮಿತವ್ಯಯಿ ಆಗಿರಬೇಕು.
ಉ) ಸುಲಭವಾಗಿ ಸಂಗ್ರಹಿಸುವಂತಿರಬೇಕು ಮತ್ತು ಸುಲಭವಾಗಿ ಸಾಗಾಣಿಕೆ ಮಾಡುವಂತಿರಬೇಕು. ಊ) ಪರಿಸರ ಸ್ನೇಹಿಯಾಗಿರಬೇಕು.
2. ಉತ್ತಮ ಇಂಧನ ಯಾವುದು ?
ಉರಿಸಿದಾಗ ಅತಿ ಹೆಚ್ಚಿನ ಉಷ್ಣವನ್ನು ಬಿಡುಗಡೆ ಮಾಡುವ ಮತ್ತು ಅತಿ ಕಡಿಮೆ ಹೊಗೆಯನ್ನು ಉತ್ಪತ್ತಿ ಮಾಡುವ ಹಾಗು ಸುಲಭವಾಗಿ ಸಿಗಬಹುದಾದ ಇಂಧನವೇ ಉತ್ತಮ ಇಂಧನ.
3. ನಿಮ್ಮ ಆಹಾರವನ್ನು ಬಿಸಿಮಾಡಲು ಯಾವುದಾದರು ಶಕ್ತಿಯ ಆಕರವನ್ನು ಉಪಯೋಗಿಸುವುದಾದರೆ, ಯಾವುದನ್ನು ಆಯ್ಕೆ ಮಾಡುವಿರಿ ಮತ್ತು ಏಕೆ ?
ಆಹಾರವನ್ನು ಬಿಸಿ ಮಾಡಲು ನೈಸರ್ಗಿಕ ಅನಿಲವನ್ನು ಉಪಯೋಗಿಸುತ್ತೇವೆ. ಏಕೆಂದರೆ ಅದು ಅತ್ಯಂತ ಸ್ವಚ್ಛ ಮತ್ತು ದಕ್ಷತೆಯ ಇಂಧನವಾಗಿದೆ, ಯಾವುದೇ ರೀತಿಯ ಹೊಗೆಯನ್ನು ಉತ್ಪತ್ತಿ ಮಾಡುವುದಿಲ್ಲ. ಮತ್ತು ಅತೀ ಹೆಚ್ಚಿನ ದಹ್ಯತೆಯನ್ನು ಹೊಂದಿದೆಯಾದರೂ ಅದರ ಸಾಗಾಣಿಕೆ, ಉಪಯೋಗ ತುಂಬಾ ಸುಲಭವಾಗಿದೆ, ಅತೀ ಹೆಚ್ಚಿನ ಉಷ್ಣವನ್ನು ಉತ್ಪತ್ತಿ ಮಾಡುತ್ತದೆ.
4. ಪಳೆಯುಳಿಕೆ ಇಂಧನಗಳ ಅನಾನುಕೂಲತೆಗಳು ಯಾವುವು ?
ಅ) ಪಳೆಯುಳಿಕೆ ಇಂಧನಗಳನ್ನು ದಹಿಸುವುದರಿಂದ ಪರಿಸರ ಮಲಿನವಾಗುತ್ತದೆ.
ಆ) ಈ ಇಂಧನಗಳು ಕಾರ್ಬನ್, ನೈಟ್ರೋಜನ್ ಮತ್ತು ಸಲ್ಟರ್ ಗಳ ಆಕ್ಸೆಡ್ ಗಳನ್ನು ಉತ್ಪತ್ತಿ ಮಾಡುವ ಮೂಲಕ ಆಮ್ಲ ಮಳೆಗೆ ಕಾರಣವಾಗಿ ಮಣ್ಣಿನ ಹಾಗು ನೀರಿನ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಇ) ಈ ಇಂಧನಗಳ ದಹನದಿಂದ ಇಂಗಾಲದ ಡೈ ಆಕ್ಸೆಡ್, ಇಂಗಾಲದ ಮಾನಾಕ್ಕೆಡ್ ಗಳಂತಹ ಅನಿಲಗಳು ವಾತಾವರಣಕ್ಕೆ ಬಿಡುಗಡೆಯಾಗಿ ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗುತ್ತದೆ.
5. ನಾವು ಪರ್ಯಾಯ ಇಂಧನ ಆಕರಗಳತ್ತ ಏಕೆ ಗಮನ ಹರಿಸುತ್ತಿದ್ದೇವೆ ?
ಮಾನವನು ಸಾಂಪ್ರದಾಯಿಕವಾಗಿ ಇಂಧನದ ಆಕರವನ್ನಾಗಿ ಬಳಸುತ್ತಿರುವ ಪಳೆಯುಳಿಕೆ ಇಂಧನಗಳು ನವೀಕರಿಸಲಾಗದ ಶಕ್ತಿಯ ಆಕರಗಳಾಗಿವೆ. ಈ ಆಕರಗಳು ನಿಸರ್ಗದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಲಭ್ಯವಿದೆ ಹಾಗು ಇದನ್ನು ಪುನರುತ್ಪಾದನೆ ಮಾಡಲು ಸಾಧ್ಯವಿಲ್ಲ,ಅವುಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದೇವೆ. ಈ ರೀತಿ ಇವುಗಳನ್ನು ಅತಿಯಾಗಿ ಬಳಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ಅವು ಭೂಮಿಯಿಂದ ಕಣ್ಮರೆಯಾಗಲಿವೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆಗೆ ಇಂಧನ ಆಕರಗಳನ್ನು ಉಳಿಸಬೇಕಾದರೆ ಪರ್ಯಾಯ ಇಂಧನಗಳತ್ತ ಗಮನ ಹರಿಸಬೇಕು.
6.ನಮ್ಮ ಅನುಕೂಲತೆಗಳಿಗೆ ತಕ್ಕಂತೆ ಗಾಳಿ ಮತ್ತು ನೀರಿನ ಸಾಂಪ್ರದಾಯಿಕ ಬಳಕೆಯನ್ನು ಹೇಗೆ ಮಾರ್ಪಡಿಸಲಾಗಿದೆ?
ಸಾಂಪ್ರದಾಯಿಕವಾಗಿ ಜಲಪಾತಗಳನ್ನು ಪ್ರಚ್ಛನ್ನ ಶಕ್ತಿಯ ಮೂಲಗಳನ್ನಾಗಿ ಬಳಸಿ ಅದರಿಂದ ವಿದ್ಯುತ್ ಶಕ್ತಿಯನ್ನು ತಯಾರಿಸಲಾಗುತ್ತಿತ್ತು.ಜಲಪಾತಗಳ ಸಂಖ್ಯೆ ಕಡಿಮೆ ಇರುವ ಕಾರಣ ನದಿಗಳ ಹರಿಯುವಿಕೆಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸಿ ಅದರಲ್ಲಿ ಸಂಗ್ರಹಿಸಲಾದ ನೀರಿನಲ್ಲಿರುವ ಪ್ರಚ್ಛನ್ನ ಶಕ್ತಿಯನ್ನು ಟರ್ಬೈನ್ ಗಳು ತಿರುಗುವ ಹಾಗೆ ಮಾಡುವ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಪ್ರಾರಂಭಿಸಲಾಯಿತು. ಅದೇ ರೀತಿ ಗಾಳಿ ಶಕ್ತಿಯನ್ನು ಹಿಂದಿನ ಕಾಲದಲ್ಲಿ ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಿ ಬಾವಿಗಳಿಂದ ನೀರೆತ್ತಲು ಬಳಸಲಾಗುತ್ತಿತ್ತು.
ಇತ್ತೀಚಿಗೆ ಗಾಳಿ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಪಡೆಯಲಾಗುತ್ತಿದೆ. ಇದಕ್ಕಾಗಿ ಗಾಳಿಯಂತ್ರಗಳನ್ನು ಅಳವಡಿಸಿದ್ದು ಅವುಗಳ ರೆಕ್ಕೆಗಳು ಗಾಳಿಯ ವೇಗಕ್ಕೆ ಅನುಗುಣವಾಗಿ ತಿರುತ್ತವೆ. ಮತ್ತು ಇದನ್ನು ಟರ್ಬೈನ್ ಗೆ ಸಂಪರ್ಕಿಸಲಾಗಿದ್ದು ಇದು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ.
7. ಪೀನ, ನಿಮ್ಮ ಅಥವಾ ಸಮತಲ ಕನ್ನಡಿ (ದರ್ಪಣ )ಗಳಲ್ಲಿ ಸೌರಕುಕ್ಕರ್ ನಲ್ಲಿ ಉಪಯೋಗಿಸಲು ಸೂಕ್ತವಾದದ್ದು. ಯಾವುದು ? ಏಕೆ ?
ಸೌರಕುಕ್ಕರ್ ನಲ್ಲಿ ಸೂರ್ಯನ ಉಷ್ಣ ಶಕ್ತಿಯನ್ನು ಬಳಸಿಕೊಂಡು ಆಹಾರವನ್ನು ಬೇಯಿಸಲಾಗುತ್ತದೆ. ಇದರಲ್ಲಿ ಸೂರ್ಯನ ಕಿರಣಗಳ ಒಂದು ತೀಕ್ಷ್ಯವಾದ ಬಿಂದು ಕುಕ್ಕರ್ ನೊಳಗೆ ಬೀಳುವ ಹಾಗೆ ಮಾಡುವ ಸಲುವಾಗಿ ಒಂದು ದರ್ಪಣವನ್ನು ಅಳವಡಿಸಿರುತ್ತಾರೆ. ಸಾಮಾನ್ಯವಾಗಿ ನಿಮ್ಮ ದರ್ಪಣವು ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸುವ ಕಾರಣ ಸೌರ ಕುಕ್ಕರ್ ಗಳಲ್ಲಿ ಈ ದರ್ಪಣವನ್ನು ಬಳಸಲಾಗುತ್ತದೆ.
8. ಸಾಗರದಿಂದ ಪಡೆಯಲಿರುವ ಶಕ್ತಿಯ ಮಿತಿಗಳಾವುವು ?
ಸಾಗರದಿಂದ ಪಡೆಯುವ ಶಕ್ತಿಗಳು ಮೂರು ರೀತಿಯಲ್ಲಿವೆ.ಅವುಗಳೆಂದರೆ ಉಬ್ಬರ ಶಕ್ತಿ. ಅಲೆಗಳ ಶಕ್ತಿ ಮತ್ತು ಸಾಗರ ಉಷ್ಣ ಶಕ್ತಿ. ಇವುಗಳಿಗೆ ಕೆಲವು ಮಿತಿಗಳಿವೆ.ಅವುಗಳೆಂದರೆ
ಅ) ಸಾಗರದಲ್ಲಿ ಉತ್ಪತ್ತಿಯಾಗುವ ಉಬ್ಬರಗಳು ಭೂಮಿ, ಚಂದ್ರ ಮತ್ತು ಸೂರ್ಯನ ಸ್ಥಾನವನ್ನು ಅವಲಂಬಿಸಿದೆ.
ಆ) ಉಬ್ಬರ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲು ಅತೀ ಎತ್ತರದ ಅಣೆಕಟ್ಟುಗಳನ್ನು ಕಟ್ಟಬೇಕಾಗುತ್ತದೆ. ಇದು ಕಷ್ಟಸಾಧ್ಯ
ಇ) ಅಲೆಗಳಿಂದ ವಿದ್ಯುತ್ ಉತ್ಪಾದಿಸಲು ಅತ್ಯಂತ ಶಕ್ತಿಶಾಲಿಯಾದ ಅಲೆಗಳ ಅವಶ್ಯಕತೆ ಇದೆ.ಇದೂ ಬಲು ಅಪರೂಪ,
ಈ ) ಸಾಗರದ ಮೇಲ್ಕೆ ನಲ್ಲಿರುವ ನೀರು ಮತ್ತು ಎರಡು ಕಿಲೋ ಮೀಟರ್ ಆಳದವರೆಗಿನ ನೀರಿನ ತಾಪಮಾನದ ವ್ಯತ್ಯಾಸ 20° C ಇರಬೇಕಾಗುತ್ತದೆ. ಇದೂ ಕೂಡಾ ಅಪರೂಪವಾಗಿದೆ.
9. ಭೂ ಉಷ್ಣ ಶಕ್ತಿ ಎಂದರೇನು ?
ಭೂಮಿಯ ಅಂತರಾಳದಲ್ಲಿರುವ ದ್ರವಿತ ಶಿಲಾಪಾಕವು ಭೂಮಿಯೊಳಗಿರುವ ನೀರಿನ ಸಂಪರ್ಕಕ್ಕೆ ಬಂದಾಗ ಅದು ಆವಿಯಾಗುತ್ತದೆ. ಈ ಆವಿಯನ್ನು ಕೊಳವೆಗಳ ಮೂಲಕ ಟರ್ಬೈನ್ ಗೆ ಹಾಯಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ರೀತಿ ಪಡೆದ ಶಕ್ತಿಯೇ ಭೂ ಉಷ್ಣ ಶಕ್ತಿ.
10. ನ್ಯೂಕ್ಲೀಯ ಶಕ್ತಿಯ ಅನುಕೂಲಗಳೇನು ?
ನ್ಯೂಕ್ಲೀಯ ಶಕ್ತಿಯ ಅನುಕೂಲಗಳು ಈ ಕೆಳಗಿನಂತಿವೆ.
ಅ) ಅ) ಏಕಮಾನ ರಾಶಿಗೆ ಅತ್ಯಧಿಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ.
ಆ) ಯಾವುದೇ ರೀತಿಯ ಹೊಗೆಯನ್ನು ಉತ್ಪತ್ತಿ ಮಾಡುವುದಿಲ್ಲ.ಮತ್ತು ಸ್ವಚ್ಛವಾದ ಶಕ್ತಿಯಾಗಿದೆ.
ಇ) ಕಾರ್ಬನ್ ನ ಒಂದು ಪರಮಾಣುವಿನ ದಹನದಿಂದ ಬಿಡುಗಡೆಯಾಗುವ ಶಕ್ತಿಗಿಂತ ಸುಮಾರು 10 ಮಿಲಿಯನ್ ಪಟ್ಟು ಹೆಚ್ಚು ಶಕ್ತಿಯು ಒಂದು ಯುರೇನಿಯಂ ಪರಮಾಣುವಿನ ವಿದಳನದಿಂದ ಉತ್ಪತ್ತಿಯಾಗುತ್ತದೆ.
ಈ) ಹೈಡೋಜನ್ ಪರಮಾಣುಗಳ ಸಮ್ಮಿಲನವು ಸುಮಾರು 27 ಮಿಲಿಯನ್ ಎಲೆಕ್ಟ್ರಾನಿಕ್ ವೋಲ್ಟ್ ಗಳಷ್ಟು ಅಗಾಧ ಪ್ರಮಾಣದ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ.
11. ಶಕ್ತಿಯ ಯಾವುದೇ ಆಕರವು ಮಾಲಿನ್ಯದಿಂದ ಮುಕ್ತವೇ ? ಅಥವಾ ಏಕಿಲ್ಲ ?
ಯಾವುದೇ ಶಕ್ತಿಯ ಆಕರವು ಮಾಲಿನ್ಯದಿಂದ ಮುಕ್ತವಾಗಿಲ್ಲ. ಸೌರಶಕ್ತಿಯನ್ನು ಮಾಲಿನ್ಯ ರಹಿತವೆಂದು ಪರಿಗಣಿಸಿದರೂ ಕೂಡಾ ಸೌರ ಕೋಶಗಳ ತಯಾರಿಕೆಯು ಪರೋಕ್ಷವಾಗಿ ಪರಿಸರಕ್ಕೆ ಹಾನಿಯುಂಟುಮಾಡುತ್ತದೆ. ಅದೇ ರೀತಿ ನೂಕ್ಲೀಯ ಸಮ್ಮಿಲನ ಕ್ರಿಯೆಯಿಂದ ಯಾವುದೇ ಹಾನಿಕಾರಕ ತ್ಯಾಜ್ಯಗಳು ಉತ್ಪತ್ತಿಯಾಗದಿದ್ದರೂ ಕೂಡಾ ಸಮ್ಮಿಲನ ಕ್ರಿಯೆ ನಡೆಸಲು ಸುಮಾರು 107 K ತಾಪದ ಅವಶ್ಯಕತೆ ಇದ್ದು ಇದನ್ನು ನೂಕ್ಲೀಯ ವಿದಳನ ಕ್ರಿಯೆಯ ಮೂಲಕ ಪಡೆಯಲಾಗುತ್ತದೆ ವಿದಳನ ಕ್ರಿಯೆಯಿಂದ ಬಿಡುಗಡೆಯಾದ ತ್ಯಾಜ್ಯಗಳು ಅತ್ಯಂತ ಹೆಚ್ಚು ಹಾನಿಕಾರಕವಾಗಿದೆ
12. ಹೈಡೋಜನ್ ಅನ್ನು ರಾಕೆಟ್ ನಲ್ಲಿ ಶಕ್ತಿ ಮೂಲವಾಗಿ ಬಳಸಲಾಗಿದೆ. ನೀವು ಇದನ್ನು ಸಂಪೀಡಿತ ನೈಸರ್ಗಿಕ ಅನಿಲ ( CNG ) ಕ್ಕಿಂತ ಸ್ಥಳ ಎಂದು ಪರಿಗಣಿಸುವಿರಾ ? ಏಕೆ ? ಅಥವಾ ಎಕಿಲ್ಲಾ ?
ಹೈಡೋಜನ್ ಸಂಪೀಡಿತ ನೈಸರ್ಗಿಕ ಅನಿಲಕ್ಕಿಂತ ಸ್ವಚ್ಛವಾದ ಇಂಧನ ಏಕೆಂದರೆ ಸಂಪೀಡಿತ ನೈಸರ್ಗಿಕ ಅನಿಲವು ಹೈಡೋಕಾರ್ಬನ್ ಆಗಿದ್ದು ಸ್ವಲ್ಪ ಪ್ರಮಾಣದ ಕಾರ್ಬನ್ ಅಂಶವನ್ನು ಹೊಂದಿರುತ್ತದೆ ಮತ್ತು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದರೆ ಹೈಡೋಜನ್ ಸಮ್ಮಿಲನ ಕ್ರಿಯೆಯಲ್ಲಿ ಯಾವುದೇ ರೀತಿಯ ಹಾನಿಕಾರಕ ತ್ಯಾಜ್ಯ ಉತ್ಪತ್ತಿ ಆಗುವುದಿಲ್ಲ.ಆದ್ದರಿಂದ CNG ಗಿಂತ ಹೈಡೋಜನ್ ಸ್ವಚ್ಛ ಇಂಧನವಾಗಿದೆ.
13. ನವೀಕರಿಸಬಹುದಾದ ಯಾವುದಾದರೂ ಎರಡು ಶಕ್ತಿಯ ಮೂಲಗಳನ್ನು ಹೆಸರಿಸಿ ನಿಮ್ಮ ಆಯ್ಕೆಗೆ ಕಾರಣ
ನವೀಕರಿಸಬಹುದಾದ ಎರಡು ಶಕ್ತಿಯ ಮೂಲಗಳು ಯಾವುವೆಂದರೆ ಅ) ಸೂರ್ಯ : ಸೂರ್ಯನಿಂದ ಪಡೆಯುವ ಶಕ್ತಿಯನ್ನು ಸೌರ ಶಕ್ತಿ ಎನ್ನುತ್ತಾರೆ. ಸೂರ್ಯನ ಗರ್ಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೈಡೋಜನ್ ಮತ್ತು ಹೀಲಿಯಂ ಧಾತುಗಳಿವೆ.ಈ ಧಾತುಗಳ ಸಮ್ಮಿಲನ ಕ್ರಿಯೆಯಿಂದ ಅಗಾಧ ಪ್ರಮಾಣದ ಶಕ್ತಿ ಬಿಡುಗಡೆಯಾಗಿ ಭೂಮಿಯನ್ನು ತಲುಪುತ್ತಿದೆ,
ಸೂರ್ಯನಿಗೆ ಇನ್ನೂ ಐದು ಬಿಲಿಯನ್ ವರ್ಷ ಆಯಸ್ಸು ಹೊಂದಿರುವ ಕಾರಣ ಇದು ಒಂದು ಉತ್ತಮವಾದ ನವೀಕರಿಸಬಹುದಾದ ಶಕ್ತಿಯ ಮೂಲವಾಗಿದೆ. ಆ) ಗಾಳಿ : ಗಾಳಿ ಶಕ್ತಿಯನ್ನು ವೇಗವಾಗಿ ಬೀಸುವ ಮಾರುತಗಳಿಂದ ಪಡೆಯಲಾಗುತ್ತದೆ. ಭೂಮಿಯ ಅಸಮರ್ಪಕ ಕಾಸುವಿಕೆಯಿಂದ ಗಾಳಿ ಉತ್ಪತ್ತಿಯಾಗುತ್ತದೆ. ಭೂಮಿಯು ಇನ್ನೂ ಅನೇಕ ವರ್ಷಗಳ ಕಾಲ ಇದೇ ರೀತಿ ಕಾಸುವ ಕಾರಣಗಾಳಿಯು ಕೂಡಾ ನವೀಕರಿಸಬಹುದಾದ ಶಕ್ತಿಯ ಮೂಲವಾಗಿದೆ.
14. ನೀವು ಪರಿಗಣಿಸುವ ಎರಡು ಖಾಲಿಯಾಗುವ ಶಕ್ತಿಯ ಮೂಲಗಳನ್ನು ಹೆಸರಿಸಿ.
ನಿಮ್ಮ ಆಯ್ಕೆಗೆ ಕಾರಣ ಕೊಡಿ. ಎರಡು ಖಾಲಿಯಾಗುವ ಶಕ್ತಿಯ ಮೂಲಗಳೆಂದರೆ,
ಅ) ಕಲ್ಲಿದ್ದಲು : ಭೂಮಿಯ ಮೇಲೆ ಲಕ್ಷಾಂತರ ವರ್ಷಗಳ ಹಿಂದೆ ಇದ್ದ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳಿಂದ ಕಲ್ಲಿದ್ದಲು ಉತ್ಪತ್ತಿಯಾಗಿದೆ. ಕಲ್ಲಿದ್ದಲ್ಲಿನ ಬಳಕೆಯು ಅಗತ್ಯಕ್ಕಿಂತ ಹೆಚ್ಚಾಗಿದೆ. ಒಮ್ಮೆ ಮುಗಿದು ಹೋದರೆ ಮತ್ತೆ ಕಲ್ಲಿದ್ದಲು ಉತ್ಪತ್ತಿಯಾಗಲು ಲಕ್ಷಾಂತರ ವರ್ಷಗಳೇ ಬೇಕಾಗುತ್ತದೆ.
ಆ) ಪೆಟ್ರೋಲಿಯಂ : ಭೂಮಿಯ ಮೇಲೆ ಲಕ್ಷಾಂತರ ವರ್ಷಗಳ ಹಿಂದೆ ಇದ್ದ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳಿಂದ ಪೆಟ್ರೋಲಿಯಂ ಉತ್ಪತ್ತಿಯಾಗಿದೆ. ಇದರ ಬಳಕೆಯು ಅಗತ್ಯಕ್ಕಿಂತ ಹೆಚ್ಚಾಗಿದೆ. ಒಮ್ಮೆ ಮುಗಿದು ಹೋದರೆ ಮತ್ತೆ ಉತ್ಪತ್ತಿಯಾಗಲು ಲಕ್ಷಾಂತರ ವರ್ಷಗಳೇ ಬೇಕಾಗುತ್ತದೆ.
ಅಭ್ಯಾಸದ ಪ್ರಶೋತ್ತರಗಳು
Class 10 Science Chapter 14 Notes in Kannada
1. ಸೌರ ಜಲತಾಪಕವನ್ನು ಬಿಸಿನೀರನ್ನು ಪಡೆಯಲು ಯಾವಾಗ ಬಳಸುವುದಿಲ್ಲ.
b. ಮೋಡ ಕವಿದ ದಿನ
2. ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ದ್ರವ್ಯರಾಶಿಯ ಆಕರಕ್ಕೆ ಉದಾಹರಣೆಯಲ್ಲ.
c. ನ್ಯೂಕ್ಲೀಯ ಶಕ್ತಿ. C.
3. ನಾವು ಬಳಸುವ ಹೆಚ್ಚಿನ ಶಕ್ತಿ ಆಕರಗಳು ಸಂಗ್ರಹಿಸಿದ ಸೌರಶಕ್ತಿಯನ್ನು ಪ್ರತಿನಿಧಿಸುತ್ತವೆ.ಇದರಲ್ಲಿ ಯಾವುದು ಅಂತಿಮವಾಗಿ ಸೂರ್ಯನ ಶಕ್ತಿಯಿಂದ ಪಡೆಯಲಾಗುವುದಿಲ್ಲ .
c. ನ್ಯೂಕ್ಲೀಯಾ ಶಕ್ತಿ
4. ಪಳೆಯುಳಿಕೆ ಇಂಧನಗಳು ಮತ್ತು ಸೂರ್ಯನನ್ನು ಶಕ್ತಿಯ ನೇರ ಆಕರ ಎಂದು ಪರಿಗಣಿಸಿ ಹೋಲಿಸಿ ಮತ್ತು ವ್ಯತ್ಯಾಸ ತಿಳಿಸಿ,
ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಇಂಧನಗಳನ್ನು ಪಳೆಯುಳಿಕೆ ಇಂಧನಗಳೆನ್ನುವರು.ಇವು ನಮಗೆ ಭೂಮಿಯ ಅಂತರಾಳದಿಂದ ದೊರೆಯುತ್ತವೆ.ಅವು ಮಾನವನ ಉಪಯೋಗಕ್ಕೆ ನೇರವಾಗಿ ದೊರಕುವ ಕಾರಣ ಅವುಗಳನ್ನು ಶಕ್ತಿಯ ನೇರ ಆಕರ ಎನ್ನಬಹುದು.ಆದರೆ ಅವು ಸೀಮಿತ ಶೇಖರಣೆ ಹೊಂದಿವೆ. ಅವು ನವೀಕರಿಸಲಾಗದ ಶಕ್ತಿಯ ಸಂಪನ್ಮೂಲಗಳಾಗಿವೆ. ಒಮ್ಮೆ ಖಾಲಿಯಾದರೆ ಅವುಗಳನ್ನು ಮತ್ತೆ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಪಳೆಯುಳಿಕೆ ಇಂಧನಗಳು ರೂಪುಗೊಳ್ಳಲು ಮಿಲಿಯಾಂತರ ವರ್ಷಗಳೇ ಬೇಕು. ಅವುಗಳು ಆರ್ಥಿಕವಾಗಿ ತುಂಬಾ ದುಬಾರಿಯಾಗಿವೆ.
ಸೌರಶಕ್ತಿಯು ನವೀಕರಣಗೊಳ್ಳುವ ಶಕ್ತಿಯ ಆಕರವಾಗಿದೆ. ಮತ್ತು ಶಕ್ತಿಯ ನೇರ ಆಕರವಾಗಿದೆ. ಸೂರ್ಯನು ಅಗಾಧವಾದ ಶಕ್ತಿಯನ್ನು ಸುಮಾರು ಐದು ಬಿಲಿಯನ್ ವರುಷಗಳಿಂದ ಹೊರಹೊಮ್ಮಿಸುತ್ತಿದ್ದು ಇನ್ನೂ ಇಷ್ಟು ವರುಷಗಳ ಕಾಲ ಶಕ್ತಿಯನ್ನು ಹೊರಹೊಮ್ಮಿಸುತ್ತಿರುತ್ತಾನೆ. ಸೌರಶಕ್ತಿಯು ನಮಗೆ ಉಚಿತವಾಗಿ ಮತ್ತು ಹೇರಳವಾಗಿ ಸಿಗುವ ಶಕ್ತಿಯ ಆಕರವಾಗಿದೆ.
5. ಜೈವಿಕ ದ್ರವ್ಯರಾಶಿ ಮತ್ತು ಜಲಶಕ್ತಿಯನ್ನು ಶಕ್ತಿಯ ಆಕರಗಳಾಗಿ ಹೋಲಿಸಿ ಮತ್ತು ವ್ಯತ್ಯಾಸ ತಿಳಿಸಿ
ಜೈವಿಕ ದ್ರವ್ಯರಾಶಿಯು ಸತ್ತಂತಹ ಸಸ್ಯ ಮತ್ತು ಪ್ರಾಣಿಗಳ ತ್ಯಾಜ್ಯಗಳಿಂದ ಉತ್ಪತ್ತಿಯಾಗುತ್ತದೆ. ಆದ್ದರಿಂದ ಇದು ನೈಸರ್ಗಿಕವಾಗಿ ನವೀಕರಣಗೊಳ್ಳುತ್ತದೆ, ನೈಸರ್ಗಿಕ ಕ್ರಿಯೆಗಳಿಂದ ಇದನ್ನು ಪಡೆಯಲಾಗುತ್ತದೆ.
ಜಲಶಕ್ತಿಯನ್ನು ಎತ್ತರದಲ್ಲಿರುವ ನೀರಿನ ಪ್ರಚ್ಛನ್ನ ಶಕ್ತಿಯನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತದೆ ಈ ಶಕ್ತಿಯನ್ನು ಮತ್ತೆ ಮತ್ತೆ ಪಡೆಯಬಹುದಾಗಿದೆ. ನೀರಿನಿಂದ ಈ ಶಕ್ತಿಯನ್ನು ಪಡೆಯಲಾಗುತ್ತದೆ ಮತ್ತು ಯಾಂತ್ರಿಕ ವಿಧಾನಗಳಿಂದ ಪಡೆಯಲಾಗುತ್ತದೆ.
6. ಈ ಕೆಳಗಿನವುಗಳಿಂದ ಶಕ್ತಿಯನ್ನು ಹೊರತೆಗೆಯಲು ಇರುವ ಮಿತಿಗಳು ಯಾವುವು ?
ಅ) ಗಾಳಿ
ಗಾಳಿಯಂತ್ರ ಗಳಿಂದ ಗಾಳಿ ಶಕ್ತಿಯನ್ನು ಪಡೆಯಲಾಗುತ್ತದೆ ಆದರೆ ಈ ಯಂತ್ರಗಳಿಂದ ಶಕ್ತಿ ಉತ್ಪತ್ತಿಯಾಗಲು ಗಾಳಿಯ ವೇಗವು ಗಂಟೆಗೆ ಸುಮಾರು 15 Km ಇರಬೇಕಾಗುತ್ತದೆ. ಮತ್ತು ದೊಡ್ಡ ಗಾತ್ರದ ಗಾಳಿಯಂತ್ರಗಳ ಅವಶ್ಯಕತೆ ಇರುತ್ತದೆ.
(ಆ) ಅಲೆಗಳು
ಅಲೆಗಳಿಂದ ಶಕ್ತಿಯನ್ನು ಪಡೆಯಲು ಅತ್ಯಂತ ಶಕ್ತಿಶಾಲಿಯಾದ ಅಲೆಗಳ ಅವಶ್ಯಕತೆ ಇದೆ.
(ಇ) ಉಬ್ಬರ
ಉಬ್ಬರಗಳಿಂದ ಶಕ್ತಿಯನ್ನು ಉತ್ಪಾದಿಸಲು ಅತೀ ಎತ್ತರದ ಉಬ್ಬರಗಳ ಅವಶ್ಯಕತೆ ಇದೆ.ಉಬ್ಬರಗಳು ಉಂಟಾಗುವಿಕೆಯು ಸೂರ್ಯ,ಚಂದ್ರ ಮತ್ತು ಭೂಮಿಯ ಸಾಪೇಕ್ಷ ಸ್ಥಾನಗಳನ್ನು ಅವಲಂಬಿಸಿದೆ.
7.ಯಾವ ಆಧಾರದ ಮೇಲೆ ಈ ಕೆಳಗಿನ ಶಕ್ತಿ ಆಕರಗಳನ್ನು ನೀವು ವರ್ಗೀಕರಿಸುವಿರಿ,
a) ನವೀಕರಿಸಬಹುದಾದ ಮತ್ತು ನವೀಕರಿಸಲಾಗದ
ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಪುನರುತ್ಪತ್ತಿಯಾಗುವ ಶಕ್ತಿಯ ಆಕರಗಳೇ ನವೀಕರಿಸಬಹುದಾದ ಶಕ್ತಿಯ ಆಕರಗಳು, ಉದಾಹರಣೆಗೆ ಸೌರಶಕ್ತಿ, ಜೈವಿಕ ಶಕ್ತಿ ,ಗಾಳಿ ಶಕ್ತಿ ಇತ್ಯಾದಿ ಪ್ರಕೃತಿಗೆ ಪುನರ್ ಭರ್ತಿಯಾಗದ ಶಕ್ತಿಯ ಆಕರಗಳೇ ನವೀಕರಿಸಲಾಗದ ಶಕ್ತಿಯ ಆಕರಗಳು.ಉದಾಹರಣೆಗೆ ಕಲ್ಲಿದ್ದಲು, ಪೆಟ್ರೋಲಿಯಂ ಇಂಧನಗಳು
b) ಖಾಲಿಯಾಗುವ ಮತ್ತು ಖಾಲಿಯಾಗದ
ಹಲವಾರು ವರ್ಷಗಳ ಬಳಕೆಯ ನಂತರ ಮುಗಿದುಹೋಗುವ ಶಕ್ತಿಯ ಆಕರಗಳೇ ಖಾಲಿಯಾಗುವ ಶಕ್ತಿಯ ಆಕರಗಳು, ಉದಾ : ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಇಂಧನಗಳು –
ಎಷ್ಟು ಬಳಸಿದರೂ ಮುಗಿದುಹೋಗದ ಶಕ್ತಿಯ ಆಕರಗಳೇ ಖಾಲಿಯಾಗದ ಶಕ್ತಿಯ ಆಕರಗಳು, ಉದಾ: ಜೈವಿಕ ಶಕ್ತಿ.
a ಮತ್ತು b ನಲ್ಲಿ ನೀಡಲಾದ ಆಯ್ಕೆಗಳು ಒಂದೇ ಆಗಿವೆಯೇ?
ಹೌದು a ಮತ್ತು b ನಲ್ಲಿ ನೀಡಲಾದ ಆಯ್ಕೆಗಳು ಒಂದೇ ಆಗಿವೆ.
8. ಶಕ್ತಿಯ ಆದರ್ಶ ಆಕರದ ಗುಣಗಳು ಯಾವುವು ?
ಶಕ್ತಿಯ ಆದರ್ಶ ಆಕರದ ಗುಣಗಳು
ಅ) ಮಿತವ್ಯಯಿಯಾಗಿರಬೇಕು.
ಆ) ಸುಲಭವಾಗಿ ದೊರಕುವಂತಿರಬೇಕು.
ಇ) ಹೊಗೆ / ಮಾಲಿನ್ಯರಹಿತವಾಗಿರಬೇಕು.
ಈ) ಸುಲಭವಾಗಿ ಸಂಗ್ರಹಿಸುವಂತಿರಬೇಕು. ಉ) ಸುಲಭವಾಗಿ ಸಾಗಾಟ ಮಾಡುವಂತಿರಬೇಕು.
ಊ) ಉರಿಸಿದಾಗ ಅತೀ ಹೆಚ್ಚಿನ ಪ್ರಮಾಣದಲ್ಲಿ ಉಷ್ಣ ಮತ್ತು ಶಕ್ತಿಯನ್ನು ಕೊಡುವಂತಿರಬೇಕು.
9. ಸೌರಕುಕ್ಕರ್ ಬಳಸುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು? ಯಾವ ಸ್ಥಳಗಳಲ್ಲಿ ಸೌರಕುಕ್ಕರ್ ಗಳ ಬಳಕೆಗೆ ಮಿತಿಯನ್ನು ಕಾಣಬಹುದು ?
ಸೌರ ಕುಕ್ಕರ್ ಆಹಾರವನ್ನು ಬಿಸಿಮಾಡಲು ಅಥವಾ ಬೇಯಿಸಲು ಸೌರ ಶಕ್ತಿಯನ್ನು ಬಳಸುತ್ತದೆ. ಸೌರಶಕ್ತಿಯು ನವೀಕರಿಸಬಹುದಾದ ಶಕ್ತಿಯ ಆಕರವಾಗಿದೆ ಮತ್ತು ಸ್ವಚ್ಛ ಶಕ್ತಿಯ ಆಕರವಾಗಿದೆ. ಇದು ಪುಕ್ಕಟೆಯಾಗಿ ಸಿಗುವ ಶಕ್ತಿಯ ಆಕರವಾಗಿದೆ.ಆದ್ದರಿಂದ ಸೌರಕುಕ್ಕರ್ ನ ನಿರ್ವಹಣೆಯು ಮಿತವ್ಯಯಿಕಾರಿಯಾಗಿದೆ.ಇದರ ಅನಾನುಕೂಲವೆಂದರೆ ಸೂರ್ಯನ ತಾಪ ಇಲ್ಲದ ದಿನ ಅಂದರೆ ಮೋಡಕವಿದ ವಾತಾವರಣದಲ್ಲಿ ಇದು ಕಾರ್ಯನಿರ್ವಹಿಸುವುದಿಲ್ಲ.ಮತ್ತು ಸೌರಕುಕ್ಕರ್ ನ ಬೆಲೆಯು ಅಧಿಕವಾಗಿದೆ. ಹಗಲಿನ ಅವಧಿಯು ಕಡಿಮೆ ಇರುವ ಪ್ರದೇಶಗಳಲ್ಲಿ ಮತ್ತು ವರ್ಷಪೂರ್ತಿ ಮೋಡಕವಿದ ವಾತಾವರಣ ಇರುವಂತಹ ಪ್ರದೇಶಗಳಲ್ಲಿ ಸೌರಕುಕ್ಕರ್ ಗಳ ಬಳಕೆಗೆ ಮಿತಿಯನ್ನು ಕಾಣಬಹುದಾಗಿದೆ.
10. ಹೆಚ್ಚುತ್ತಿರುವ ಶಕ್ತಿಯ ಬೇಡಿಕೆಯು ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳು ಯಾವುವು ? ಶಕ್ತಿಯ ಬಳಕೆಯನ್ನು ಕಡಿಮೆಗೊಳಿಸಲು ನೀವು ಯಾವ ಕ್ರಮವನ್ನು ಸೂಚಿಸುವಿರಿ?
ಕೈಗಾರೀಕರಣವು ಶಕ್ತಿಯ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಪಳೆಯುಳಿಕೆ ಇಂಧನಗಳು ಸುಲಭವಾಗಿ ಲಭ್ಯವಿರುವ ಕಾರಣ ಈ ಶಕ್ತಿಯ ಬೇಡಿಕೆಯ ಬಹುಪಾಲನ್ನು ಪೂರೈಸುತ್ತಿವೆ. ಆದರೆ ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆಯು ಪರಿಸರಕ್ಕೆ ತೀವ್ರತರವಾದ ಹಾನಿಯನ್ನುಂಟು ಮಾಡುತ್ತದೆ ಇವು ವಾತಾವರಣಕ್ಕೆ ಹಸಿರು ಮನೆ ಅನಿಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಮೂಲಕ ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಸಾಗರದ ನೀರಿನ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪಳೆಯುಳಿಕೆ ಇಂಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ, ಆದಾಗ್ಯೂ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ನಾವು ಶಕ್ತಿಯ ಬಳಕೆಯನ್ನು ಕಡಿಮೆ ಮಾಡಬಹುದು ವಿದ್ಯುತ್ ಉಪಕರಣಗಳನ್ನು ವಿವೇಚನೆಯಿಂದ ಬಳಸುವುದು, ಅನಗತ್ಯವಾಗಿ ವಿದ್ಯುತ್ ಅನ್ನು ಬಳಸದೇ ಇರುವುದು, ಸೋರುತ್ತಿರುವ ನಲ್ಲಿಗಳನ್ನು ಸರಿಪಡಿಸುವುದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸರಿಯಾದ ಬಳಕೆ ಮಾಡುವುದು, ರಸ್ತೆಗಳನ್ನು ದುರಸ್ತಿ ಮಾಡುವುದು, ಹತ್ತಿರದ ಪ್ರಯಾಣಕ್ಕೆ ಬೈಸಿಕಲ್ ಬಳಸುವುದು, ಅಡಿಗೆ ಮಾಡಲು ಕುಕ್ಕರ್ ಬಳಸುವುದು, ಎಲ್.ಇ.ಡಿ ಬಲ್ಬಗಳನ್ನು ಬಳಸುವುದು ಇತ್ಯಾದಿ.
FAQ
ಉರಿಸಿದಾಗ ಅತಿ ಹೆಚ್ಚಿನ ಉಷ್ಣವನ್ನು ಬಿಡುಗಡೆ ಮಾಡುವ ಮತ್ತು ಅತಿ ಕಡಿಮೆ ಹೊಗೆಯನ್ನು ಉತ್ಪತ್ತಿ ಮಾಡುವ ಹಾಗು ಸುಲಭವಾಗಿ ಸಿಗಬಹುದಾದ ಇಂಧನವೇ ಉತ್ತಮ ಇಂಧನ.
ಮೋಡ ಕವಿದ ದಿನ
ಇತರೆ ವಿಷಯಗಳು:
10th Standard Science 1st Lesson Notes
10th Standard Science Chapter 2 Notes
10ನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf
10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf