10ನೇ ತರಗತಿ ಅಧ್ಯಾಯ 16- ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ವಿಜ್ಞಾನ ನೋಟ್ಸ್‌ | 10 Class Science Chapter 16 Notes

10ನೇ ತರಗತಿ ಅಧ್ಯಾಯ 16- ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ವಿಜ್ಞಾನ ನೋಟ್ಸ್‌, Class 10 Science chapter 16 Notes Question Answer Mcq in Kannada Kseeb Solution For Class 10 Science Chapter 16 Notes in kannada Naisargika Sampanmulagala Sustira Nirvahane Science Notes 10 Class science Chapter 16 Notes Question Answer

 

10th Standard Science Chapter 16 Notes in Kannada

10 class science chapter 16 notes question answer

1.ನೀವು ಹೆಚ್ಚು ಪರಿಸರ ಸ್ನೇಹಿಯಾಗಲು ನಿಮ್ಮ ಹವ್ಯಾಸಗಳಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಗಳೇನು ?

 • ಉಪಯೋಗಿಸದೇ ಇರುವ ವಿದ್ಯುತ್‌ ಉಪಕರಣಗಳ ಸ್ವಿಚ್ಚ ಅನ್ನು ಆಫ್ ಮಾಡುವುದು.
 • ಆಹಾರ ಮತ್ತು ನೀರನ್ನು ಪೋಲು ಮಾಡದೇ ಇರುವುದು.
 • ನಲ್ಲಿಯನ್ನು ಉಪಯೋಗಿಸಿದ ನಂತರ ನಿಲ್ಲಿಸುವುದು.
 • ಪ್ಲಾಸ್ಟಿಕ್ ಮತ್ತು ಗಾಜಿನಂತಹ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು.
 • ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು.
 • ಹತ್ತಿರದ ಪ್ರಯಾಣಕ್ಕೆ ಕಾಲ್ನಡಿಗೆ ಅಥವಾ ಬೈಸಿಕಲ್ ಬಳಸುವುದು,
 • ದೂರದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುವುದು.

2. ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುವುದರ ಅನುಕೂಲಗಳೇನು ?

ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡುವುದರಿಂದ ಪರಿಸರದಲ್ಲಿರು ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳು ನಶಿಸಿ ಹೋಗುತ್ತವೆ. ಇದರಿಂದ ಯಾವುದೇ ಅನುಕೂಲಗಳಾವುದಿಲ್ಲ.

3. ಈ ಅನುಕೂಲಗಳು ನಮ್ಮ ಸಂಪನ್ಮೂಲ ನಿರ್ವಹಣೆಯಲ್ಲಿ ದೀರ್ಘಾವಧಿ ದೃಷ್ಟಿಕೋನವನ್ನು ಬಳಸುವುದರಿಂದ ಉಂಟಾಗುವ ಅನುಕೂಲಗಳಿಗಿಂತ ಹೇಗೆ ಭಿನ್ನವಾಗಿವೆ. ?

ಸಂಪನ್ಮೂಲ ನಿರ್ವಹಣೆಯಲ್ಲಿ ದೀರ್ಘಾವಧಿ ದೃಷ್ಟಿಕೋನವನ್ನು ಬಳಸುವುದರಿಂದ ಸಂಪನ್ಮೂಲಗಳನ್ನು ನಾವು ಅನೇಕ ವರ್ಷಗಳವರೆಗೆ ಸಂರಕ್ಷಿಸಬಹುದು. ಮುಂದಿನ ಪೀಳಿಗೆಯವರಿಗೂ ಸಂಪನ್ಮೂಲಗಳು ದೊರಕುವಂತೆ ಮಾಡಬಹುದಾಗಿದೆ. ಪ್ರತಿಯೊಬ್ಬ ಪ್ರಜೆಗೂ ಸಂಪನ್ಮೂಲದ ಸರಿಯಾದ ಹಂಚಿಕೆಯಾಗುವಂತೆ ನೋಡಿಕೊಳ್ಳಬಹುದು, ಆದರೆ ಅಲ್ಪಾವಧಿ ದೃಷ್ಟಿಕೋನದ ನಿರ್ವಹಣೆಯಲ್ಲಿ ಇವೆಲ್ಲವೂ ಸಾಧ್ಯವಿಲ್ಲ.

4. ಸಂಪನ್ಮೂಲಗಳು ನ್ಯಾಯಸಮ್ಮತವಾಗಿ ಹಂಚಿಕೆಯಾಗಬೇಕೆಂದು ನೀವೇಕೆ ಭಾವಿಸುತ್ತೀರಿ ? ನಮ್ಮ ಸಂಪನ್ಮೂಲಗಳ ನ್ಯಾಯಸಮ್ಮತ ಹಂಚಿಕೆಯ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳು ಯಾವುವು ?

ಸಂಪನ್ಮೂಲಗಳು ಪ್ರತಿಯೊಬ್ಬ ನಾಗರಿಕನಿಗೂ ಸಿಗಬೇಕಾದರೆ ಅದು ನ್ಯಾಯಸಮ್ಮತವಾಗಿ ಹಂಚಿಕೆಯಾಗಬೇಕು. ಮಾನವನ ಅತಿಯಾಸೆ, ಭ್ರಷ್ಟಾಚಾರ, ಸಿರಿವಂತರ ಲಾಬಿಗಳು,ಲಂಚಗುಳಿತನ ಇತ್ಯಾದಿ ನಮ್ಮ ನ್ಯಾಯಸಮ್ಮತ ಹಂಚಿಕೆಯ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳು.

5. ನಾವು ಅರಣ್ಯ ಹಾಗು ವನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು ?

ಜೀವ ವೈವಿಧ್ಯತೆಯನ್ನು ಕಾಪಾಡಲು ಮತ್ತು ಪರಿಸರದ ಸಮತೋಲನಕ್ಕೆ ನಾವು ಅರಣ್ಯ ಹಾಗು ವನ್ಯಜೀವಿಗಳನ್ನು ಸಂರಕ್ಷಿಸಬೇಕು . ಕಾಡಿನೊಳಗೆ ಅಥವಾ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಅನೇಕ ವನವಾಸಿ ಜನಾಂಗದವರ ವಾಸಸ್ಥಳದ ರಕ್ಷಣೆಗೆ ನಾವು ಅರಣ್ಯ ಹಾಗು ವನ್ಯಜೀವಿಗಳನ್ನು ಸಂರಕ್ಷಿಸಬೇಕು .ಅರಣ್ಯವನ್ನು ಸಂರಕ್ಷಿಸದೇ ಇದ್ದರೆ ಮಣ್ಣಿನ ಗುಣಮಟ್ಟದಲ್ಲಿ ಕುಸಿತ, ಮಣ್ಣಿನ ಸವಕಳಿ, ನೀರಿನ ಕೊರತೆ ಹಾಗು ಮಳೆಯ ಅಭಾವ ತಲೆದೋರುವ ಸಾಧ್ಯತೆ ಇದೆ.ಅರಣ್ಯ ಮತ್ತು ವನ್ಯಜೀವಿಗಳಿಲ್ಲದ ಮಾನವನ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ.

6. ಕಾಡುಗಳ ಸಂರಕ್ಷಣೆಗಾಗಿ ಕೆಲವು ಸಲಹೆಗಳನ್ನು ನೀಡಿ,

 • ಸಾರ್ವಜನಿಕರು ಮರ ಕಡಿಯುವವರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಾಂದೋಲನವನ್ನು ಏರ್ಪಡಿಸಬೇಕು, ಉದಾ: ಚಿಪ್ಪೋ ಚಳುವಳಿ
 • ಗಿಡಗಳನ್ನು ನೆಡುವ ಪ್ರಮಾಣವನ್ನು ಹೆಚ್ಚಿಸಬೇಕು. ಜೊತೆಗೆ ಅವುಗಳ ಪೋಷಣೆ ಕೂಡಾ ಮಾಡಬೇಕು.
 • ಸರಕಾರವು ಕಾಡಿನಲ್ಲಿರುವ ಅತ್ಯಮೂಲ್ಯ ಸಂಪತ್ತನ್ನು ರಕ್ಷಿಸಲು ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು.
 • ಜನಸಾಮಾನ್ಯರಿಗೆ ಅರಣ್ಯ ನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸಬೇಕು.

7. ನಿಮ್ಮ ಪ್ರದೇಶದಲ್ಲಿನ ಜಲಕೊಯ್ಲು / ನಿರ್ವಹಣೆಯ ಸಾಂಪ್ರದಾಯಿಕ ವಿಧಾನಗಳನ್ನು ಕಂಡುಕೊಳ್ಳಿ.

ನಮ್ಮ ಪ್ರದೇಶದಲ್ಲಿನ ಜಲನಿರ್ವಹಣೆಯ ಸಾಂಪ್ರದಾಯಿಕ ವಿಧಾನಗಳು ಯಾವುವೆಂದರೆ, ಕೆರೆಗಳು,ಒಡ್ಡುಗಳು ಕಿಂಡಿ ಅಣೆಕಟ್ಟುಗಳು ಇತ್ಯಾದಿ,

8. ಮೇಲಿನ ವಿಧಾನಗಳನ್ನು ಬೆಟ್ಟ / ಪರ್ವತ ಪ್ರದೇಶಗಳು ಅಥವಾ ಸಮತಟ್ಟಾದ ಪ್ರದೇಶ ಅಥವಾ ಪ್ರಸ್ಥಭೂಮಿ ಪ್ರದೇಶಗಳಲ್ಲಿನ ಸಂಭವನೀಯ ವಿಧಾನಗಳ ಜೊತೆಗೆ ಹೋಲಿಸಿ,

ಹೆಚ್ಚು ಸಮತಟ್ಟಾಗಿರುವ ಭೂ ಭಾಗಗಳಲ್ಲಿ ಜಲಕೊಯ್ದು ರಚನೆಗಳು ಅರ್ದ ಚಂದ್ರಾಕಾರ ರೂಪದಲ್ಲಿದ್ದು ಮಣ್ಣಿನಿಂದ ನಿರ್ಮಿತವಾದ ಒಡ್ಡುಗಳು ಕೆಳಮಟ್ಟದಲ್ಲಿರುತ್ತವೆ.

ಬೆಟ್ಟ / ಪರ್ವತ ಪ್ರದೇಶಗಳಲ್ಲಿ ಪ್ರಮುಖವಾಗಿ ಹಿಮಾಚಲ ಪ್ರದೇಶದಂತಹ ಸ್ಥಳಗಳಲ್ಲಿ ಕುಲ್ಸ್ ಗಳೆಂದು ಕರೆಯುವ ಒಂದು ವಿಧದ ಕಾಲುವೆ ನೀರಾವರಿ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಕೇರಳದಲ್ಲಿ ಬೆಟ್ಟಗಳ ಕೆಳಭಾಗದಲ್ಲಿ ಸುರಂಗಗಳನ್ನು ಕೊರೆಯುವ ಮೂಲಕ ನೀರಿನ ನಿರ್ವಹಣೆ ಮಾಡಲಾಗುತ್ತದೆ.

9. ನಿಮ್ಮ ಪ್ರದೇಶ / ಸ್ಥಳದಲ್ಲಿರುವ ನೀರಿನ ಆಕರಗಳನ್ನು ಕಂಡುಕೊಳ್ಳಿ.ಆ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಜನರಿಗೆ ಈ ಆಕರಗಳಿಂದ ನೀರು ದೊರಕುತ್ತಿದೆಯೇ ?

ನಮ್ಮ ಪ್ರದೇಶದಲ್ಲಿ ಅಂತರ್ಜಲ / ಕೆರೆಯನ್ನು ನೀರಿನ ಆಕರವಾಗಿ ಬಳಸುತ್ತಿದ್ದೇವೆ. ಈ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಜನರಿಗೆ ಈ ಆಕರದಿಂದ ನೀರು ಲಭಿಸುತ್ತಿದೆ.

ಅಭ್ಯಾಸದ ಪ್ರಶೋತ್ತರಗಳು

1. ಪರಿಸರ ಸ್ನೇಹಿಯಾಗಿರುವಂತೆ ನಿಮ್ಮ ಮನೆಯಲ್ಲಿ ಯಾವ ಬದಲಾವಣೆಗಳಾಗಬೇಕೆಂದು ನೀವು ಸಲಹೆ ನೀಡುವಿರಿ,

 • ಉಪಯೋಗಿಸದೇ ಇರುವ ವಿದ್ಯುತ್‌ ಉಪಕರಣಗಳ ಸ್ವಿಚ್ಚ ಅನ್ನು ಆಫ್ ಮಾಡುವುದು.
 • ಆಹಾರ ಮತ್ತು ನೀರನ್ನು ಪೋಲು ಮಾಡದೇ ಇರುವುದು,
 • ನಲ್ಲಿಯನ್ನು ಉಪಯೋಗಿಸಿದ ನಂತರ ನಿಲ್ಲಿಸುವುದು,
 • ಪ್ಲಾಸ್ಟಿಕ್ ಮತ್ತು ಗಾಜಿನಂತಹ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು. .
 • ಅಡುಗೆಗೆ ಕುಕ್ಕರ್ ಬಳಸುವುದು.
 • ಎಲ್.ಇ.ಡಿ ಬಲ್ಪ್ ಗಳನ್ನು ಬಳಸುವುದು.
 • ಮನೆಯ ಸುತ್ತ ಗಿಡ ಮರಗಳನ್ನು ಬೆಳೆಸುವುದು.

2. ನಿಮ್ಮ ಶಾಲೆಯನ್ನು ಪರಿಸರ ಸ್ನೇಹಿಯಾಗಿಸಲು ನೀವು ಕೆಲವು ಬದಲಾವಣೆಗಳನ್ನು ಸೂಚಿಸುವಿರಾ?

 • ಅನಗತ್ಯವಾಗಿ ವಿದ್ಯುತ್‌ ಅನ್ನು ಬಳಸದೇ ಇರುವುದು.
 • ಜೈವಿಕವಾಗಿ ವಿಘಟನೆಗೊಳ್ಳುವ ಮತ್ತು ವಿಘಟನೆಗೊಳ್ಳದ ತ್ಯಾಜ್ಯಗಳ ಸರಿಯಾದ ವಿಲೇವಾರಿ ಮಾಡುವುದು,
 • ಸೌರಶಕ್ತಿಯನ್ನು ಬಳಸುವುದು.
 • ಸೋರುತ್ತಿರುವ ನಲ್ಲಿಗಳನ್ನು ಸರಿಪಡಿಸುವುದು,
 • ಹೂದೋಟಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸುವುದು.

3. ಈ ಅಧ್ಯಾಯದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ವಿಷಯ ಬಂದಾಗ ನಾಲ್ಕು ಮುಖ್ಯ ಪಾಲುದಾರರಿರುವುದನ್ನು ನಾವು ನೋಡಿದೆವು. ಇವರಲ್ಲಿ ಅರಣ್ಯ ಉತ್ಪನ್ನಗಳ ನಿರ್ವಹಣೆಯನ್ನು ನಿರ್ಧರಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ ? ನೀವು ಹಾಗೇಕೆ ಭಾವಿಸುತ್ತೀರಿ ?

ಅರಣ್ಯ ಇಲಾಖೆಯು ಅರಣ್ಯ ಉತ್ಪನ್ನಗಳ ನಿರ್ವಹಣೆಯನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದ್ದಾರೆ.ಯಾಕೆಂದರೆ ಅರಣ್ಯವನ್ನು ಸಂರಕ್ಷಿಸುವ ಮತ್ತು ಬೆಳೆಸುವ ಕರ್ತವ್ಯ ಅರಣ್ಯ ಇಲಾಖೆಯದಾಗಿರುತ್ತದೆ.

4. ಒಬ್ಬ ವ್ಯಕ್ತಿಯಾಗಿ ಈ ಕೆಳಗಿನವುಗಳ ನಿರ್ವಹಣೆಯಲ್ಲಿ ನೀವು ಯಾವ ಕೊಡುಗೆ ಅಥವಾ ಬದಲಾವಣೆ ಮಾಡುವಿರಿ.?

ಅ) ಅರಣ್ಯಗಳು ಮತ್ತು ವನ್ಯಜೀವಿಗಳು

 • ಮರಗಳನ್ನು ಕಡಿಯುವುದರ ವಿರುದ್ಧ ಪ್ರತಿಭಟನೆ ಮಾಡುತ್ತೇನೆ.
 • ವನ್ಯಜೀವಿಗಳನ್ನು ಬೇಟೆಯಾಡುವುದರ ವಿರುದ್ಧ ಪ್ರತಿಭಟಿಸುತ್ತೇನೆ.
 • ಅರಣ್ಯ ಭೂಮಿಯ ಅತಿಕ್ರಮಣವನ್ನು ತಡೆಯಲು ಹೋರಾಡುತ್ತೇನೆ.

ಆ) ನೀರಿನ ಸಂಪನ್ಮೂಲಗಳು

 • ಹಲ್ಲನ್ನು ಉಜ್ಜುತ್ತಿರುವಾಗ ಅಥವಾ ಸ್ನಾನ ಮಾಡುತ್ತಿರುವಾಗ ನಲ್ಲಿಯನ್ನು ನಿಲ್ಲಿಸುತ್ತೇನೆ.
 • ಸೋರುತ್ತಿರುವ ನಲ್ಲಿಯನ್ನು ಸರಿಪಡಿಸಲು ತಿಳಿಸುತ್ತೇನೆ / ಸರಿಪಡಿಸುತ್ತೇನೆ.
 • ಮಳೆ ನೀರಿನ ಕೊಯ್ದು ಮಾಡಿ ಅಂತರ್ಜಲ ಅಭಿವೃದ್ಧಿ ಪಡಿಸುತ್ತೇನೆ.
 • ಕೊಳಚೆ ನೀರನ್ನು ಕುಡಿಯುವ ನೀರಿನ ಮೂಲಗಳಿಗೆ ಸೇರದ ಹಾಗೆ ನೋಡಿಕೊಳ್ಳತ್ತೇನೆ.

ಇ) ಕಲ್ಲಿದ್ದಲು ಮತ್ತು ಪೆಟ್ರೋಲಿಯಂ

 • ಸೌರ ಶಕ್ತಿಯನ್ನು ಹೆಚ್ಚಾಗಿ ಬಳಸುತ್ತೇನೆ.
 • ಹತ್ತಿರದ ಪ್ರಯಾಣಕ್ಕೆ ಕಾಲ್ನಡಿಗೆ ಅಥವಾ ಬೈಸಿಕಲ್ ಬಳಸುತ್ತೇನೆ.
 • ದೂರ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತೇನೆ.
 • ಕಲ್ಲಿದ್ದಲಿನ ಉಪಯೋಗವನ್ನು ಮಿತಗೊಳಿಸುತ್ತೇನೆ.
 • ಪರ್ಯಾಯ ಶಕ್ತಿಯ ಆಕರಗಳನ್ನು ಬಳಸುತ್ತೇನೆ.

5.ಒಬ್ಬ ವ್ಯಕ್ತಿಯಾಗಿ ವಿವಿಧ ನೈಸರ್ಗಿಕ ಸಂಪನ್ಮೂಲಗಳ ನಿಮ್ಮ ಬಳಕೆಯನ್ನು ಕಡಿಮೆ ಮಾಡಲು ನೀವು ಏನು ಮಾಡುವಿರಿ?

 • ಅರಣ್ಯ ನಾಶವನ್ನು ತಡೆಗಟ್ಟುವುದು.
 • ಮರುಬಳಕೆ ಮಾಡಿದ ಕಾಗದವನ್ನು ಉಪಯೋಗಿಸುವುದು.
 • ನೀರನ್ನು ಅನಗತ್ಯವಾಗಿ ಪೋಲು ಮಾಡದೇ ಇರುವುದು,
 • ಮಳೆನೀರಿನ ಕೊಯ್ದು ಪದ್ಧತಿಯನ್ನು ಅಳವಡಿಸುವುದು.
 • ಸೌರ ಶಕ್ತಿಯಂತಹ ಪರ್ಯಾಯ ಶಕ್ತಿಯ ಆಕರಗಳನ್ನು ಬಳಸುವುದು.

6. ಕಳೆದ ಒಂದು ವಾರದಲ್ಲಿ ಈ ಕೆಳಗಿನವುಗಳ ಕುರಿತು ನೀವು ಕೈಗೊಂಡ ಐದು ಕ್ರಮಗಳನ್ನು ಪಟ್ಟಿ ಮಾಡಿ

ಅ) ನಮ್ಮ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ,

 • ಮರುಬಳಕೆಯಾದ ಕಾಗದವನ್ನು ಬಳಸಿದ್ದು.
 • ಜೈವಿಕ ವಿಘಟನೆಗೊಳ್ಳುವ ಮತ್ತು ಜೈವಿಕ ವಿಘಟನೆಗೊಳ್ಳದ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಿದ್ದು,
 • ಗಿಡಗಳನ್ನು ಬೆಳಸಿದ್ದು.
 • ಹತ್ತಿರದ ಪ್ರಯಾಣವನ್ನು ಕಾಲ್ನಡಿಗೆಯಿಂದ ಕ್ರಮಿಸಿದ್ದು
 • ನೈಸರ್ಗಿಕ ಅನಿಲದಿಂದ ಚಲಿಸುವ ಆಟೋದಲ್ಲಿ ದೂರ ಪ್ರಯಾಣ ಮಾಡಿದ್ದು,

ಆ) ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಹೆಚ್ಚಿಸುವುದು .

 • ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿದ್ದು.
 • ನೀರನ್ನು ವ್ಯರ್ಥ ಮಾಡಿದ್ದು.
 • ವಿದ್ಯುತ್ ಅನ್ನು ಅನಗತ್ಯವಾಗಿ ಬಳಸಿದ್ದು.
 • ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಬಿಸಾಡಿದ್ದು.
 • ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೇ ಇದ್ದದ್ದು.

7. ಈ ಅಧ್ಯಾಯದಲ್ಲಿ ಪ್ರಸ್ತಾಪಿಸಿದ ಸಮಸ್ಯೆಗಳ ಆಧಾರದ ಮೇಲೆ ನಮ್ಮ ಸಂಪನ್ಮೂಲಗಳ ಸಮರ್ಪಕ ಬಳಕೆ ಮಾಡುವುದರ ಕಡೆ ನಿಮ್ಮ ಜೀವನಶೈಲಿಯಲ್ಲಿ ಯಾವ ಬದಲಾವಣೆಗಳನ್ನು ನೀವು ಅಳವಡಿಸಿಕೊಳ್ಳುವಿರಿ.

 • ಮರಕಡಿಯುವುದನ್ನು ನಿಲ್ಲಿಸಿ ಗಿಡಗಳನ್ನು ಬೆಳೆಸುತ್ತೇನೆ.
 • ಸ್ಟಿಕ್ ವಸ್ತುಗಳ ಬಳಕೆಯನ್ನು ಮಿತಗೊಳಿಸುತ್ತೇನೆ. • ಮರುಬಳಕೆ ಮಾಡಿದ ಕಾಗದವನ್ನು ಬಳಸುತ್ತೇನೆ .
 • ಜೈವಿಕ ವಿಘಟನೆಗೆ ಒಳಗಾಗಗುವ ಮತ್ತು ಒಳಗಾಗದ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತೇನೆ.
 • ನೀರನ್ನು ಅನಗತ್ಯ ವ್ಯರ್ಥ ಮಾಡುವುದಿಲ್ಲ.
 • ಹತ್ತಿರದ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ ಅಥವಾ ಬೈಸಿಕಲ್ಲಿನಲ್ಲಿ ಮತ್ತು ದೂರದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತೇನೆ.
 • ಮನೆಯಲ್ಲಿ ಎಲ್.ಇ.ಡಿ ಬಲ್ಸ್ ಗಳನ್ನು ಬಳಸುತ್ತೇನೆ.
 • ಬಹುಮಹಡಿ ಕಟ್ಟಡಗಳನ್ನು ಮೆಟ್ಟಿಲುಗಳ ಸಹಾಯದಿಂದಲೇ ಏರುತ್ತೇನೆ ಲಿಫ್ಟ್ ಬಳಸುವುದಿಲ್ಲ.

FAQ

1.ನೀವು ಹೆಚ್ಚು ಪರಿಸರ ಸ್ನೇಹಿಯಾಗಲು ನಿಮ್ಮ ಹವ್ಯಾಸಗಳಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಗಳೇನು ?

ಉಪಯೋಗಿಸದೇ ಇರುವ ವಿದ್ಯುತ್‌ ಉಪಕರಣಗಳ ಸ್ವಿಚ್ಚ ಅನ್ನು ಆಫ್ ಮಾಡುವುದು.
ಆಹಾರ ಮತ್ತು ನೀರನ್ನು ಪೋಲು ಮಾಡದೇ ಇರುವುದು.

2. ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುವುದರ ಅನುಕೂಲಗಳೇನು ?

ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡುವುದರಿಂದ ಪರಿಸರದಲ್ಲಿರು ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳು ನಶಿಸಿ ಹೋಗುತ್ತವೆ. ಇದರಿಂದ ಯಾವುದೇ ಅನುಕೂಲಗಳಾವುದಿಲ್ಲ.

ಇತರೆ ವಿಷಯಗಳು:

10th Standard Science 1st Lesson Notes

10th Standard Science Chapter 2 Notes

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *