8ನೇ ತರಗತಿ ಕೆಲವು ನೈಸರ್ಗಿಕ ವಿದ್ಯಮಾನಗಳು ವಿಜ್ಞಾನ ನೋಟ್ಸ್‌ | 8th Standard Science Chapter 15 Notes

8ನೇ ತರಗತಿ ಕೆಲವು ನೈಸರ್ಗಿಕ ವಿದ್ಯಮಾನಗಳು ವಿಜ್ಞಾನ ನೋಟ್ಸ್‌ ಪ್ರಶ್ನೋತ್ತರಗಳು, 8th Standard Science Chapter 15 Notes Question Answer Pdf Kannada Medium 2023 Kseeb Solutions For Class 8 Science Chapter 15 Notes 8th Kelavu Naisargika Vidyamanagalu Question Answer 8th Class Science 15 Lesson Notes

8th Standard Science Chapter 15 Notes in Kannada

1 ಮತ್ತು 2ನೇ ಪ್ರಶ್ನೆಗಳಿಗೆ ಸೂಕ್ತ ಆಯ್ಕೆಯನ್ನು ಸೂಚಿಸಿ,

1. ಈ ಕೆಳಗಿನವುಗಳಲ್ಲಿ ಘರ್ಷಣೆಯಿಂದ ಆವೇಶಗೊಳಿಸಲು ಸಾಧ್ಯವಿಲ್ಲದ ವಸ್ತು

(a) ಪ್ಲಾಸ್ಟಿಕ್‌ ಅಳತೆಪಟ್ಟಿ (b) ತಾಮ್ರದ ಸರಳು (C) ಉಬ್ಬಿದ ಬಲೂನ್ (d) ಉಣ್ಣೆಯ ಬಟ್ಟೆ

ಉತ್ತರ: (b) ತಾಮ್ರದ ಸರಳು

2. ಗಾಜಿನ ಕಡ್ಡಿಯನ್ನು, ರೇಷ್ಮೆ ಬಟ್ಟೆಯ ತುಂಡಿಗೆ ಉಜ್ಜಿದಾಗ ಕಡ್ಡಿ

ಉತ್ತರ: (b) ಧನ ಆವೇಶಗೊಳಿಸುತ್ತದೆ, ಮತ್ತು ಬಟ್ಟೆಯು ಋಣ ಆವೇಶಗೊಳಿಸುತ್ತವೆ.

3. ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ T ಎಂದೂ ತಪ್ಪಿದ್ದರೆ f ಎಂದೂ ಬರೆಯಿರಿ.

a) ಸಜಾತೀಯ ಆವೇಶಗಳು ಆಕರ್ಷಿಸುತ್ತದೆ ಉತ್ತರ: F

b) ಭೂಕಂಪಗಳನ್ನು ಮೊದಲೇ ಊಹಿಸಬಹುದು ಉತ್ತರ: F

(b) ಆವೇಶಭರಿತ ಗಾಜಿನ ಕಡ್ಡಿಯ ಆವೇಶಭರಿತ ಪ್ಲಾಸ್ಟಿಕ್ ಕೊಳವೆಯನ್ನು ಆಕರ್ಷಿಸುತ್ತದೆ ಉತ್ತರ: T

(c) ಮಿಂಚುವಾಹಕವು ಕಟ್ಟಡಗಳನ್ನು ಮಿಂಚಿನಿಂದ ರಕ್ಷಿಸುವುದಿಲ್ಲ ಉತ್ತರ: F

4. ಚಳಿಗಾಲದಲ್ಲಿ ದೇಹದಿಂದ ಸ್ವೆಟರ್ ತಗೆಯುವಾಗ ಕೆಲವು ಬಾರಿ ಚಿಟಿ ಚಿಟಿ ಶಬ್ಧ ಕೇಳುತ್ತದೆ. ವಿವರಿಸಿ

ಉತ್ತರ: ಸ್ವೆಟರ್‌ ನ್ನು ತೆಗೆಯುವಾಗ, ಸ್ವೆಟರ್ ಮತ್ತು ದೇಹದ ನಡುವಿನ ಘರ್ಷಣೆಯಿಂದ ಉಣ್ಣೆಯು ಆವೇಶಭರಿತವಾಗುತ್ತದೆ, ಆದ್ದರಿಂದ, ದೇಹದಿಂದ ಸ್ವೆಟರ್ ತೆಗೆಯುವಾಗ ಕೆಲವು ಬಾರಿ ಚಿಟಿ ಚಿಟಿ ಶಬ್ಧ ಕೇಳುತ್ತದೆ,

5. ಆವೇಶಭರಿತ ವಸ್ತುವನ್ನು ನಾವು ನಮ್ಮ ಕೈನಿಂದ ಸ್ಪರ್ಷಿಸಿದಾಗ ಆವೇಶರಹಿತ (ವಿಸರ್ಜನೆ) ಗೊಳ್ಳುತ್ತದೆ ಏಕೆ? ವಿವರಿಸಿ

ಉತ್ತರ: ಆವೇಶಭರಿತ ವಸ್ತುವನ್ನು ನಾವು ನಮ್ಮ ಕೈನಿಂದ ಸೃಷ್ಟಿಸಿದಾಗ, ಆ ಆವೇಶಗಳನ್ನು ನಮ್ಮ ದೇಹವು ಭೂಮಿಗೆ ವರ್ಗಾಯಿಸುತ್ತದೆ. ಇದರಿಂದಾಗಿ, ಆ ವಸ್ತುವು ತನ್ನ ಆವೇಶವನ್ನು ಕಳೆದುಕೊಳ್ಳುತ್ತದೆ. ಈ ವಿದ್ಯಮಾನವನ್ನು ಭೂಸಂಪರ್ಕಗೊಳಿಸುವುದು ಎನ್ನುವರು

6. ವಿನಾಶಕಾರಿ ಭೂಕಂಪ ಶಕ್ತಿಯ ಅಳತೆಯನ್ನು ಅಳೆಯುವ ಮಾಪನವನ್ನು ಹೆಸರಿಸಿ ಭೂಕಂಪದ ಅಳತೆಯ ಮಾಪನದಲ್ಲಿ 3 ಆಗಿದೆ. ಭೂಕಂಪಮಾಪಕವು ಇದನ್ನು ದಾಖಲಿಸುತ್ತದೆಯೇ’ ಇದು ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆಯೇ ?

ಉತ್ತರ: ರಿಕ್ಟರ್ ಮಾಪನದಲ್ಲಿ ಭೂಕಂಪದ ವಿನಾಶಕಾರಿ ಶಕ್ತಿಯನ್ನು ಅಳೆಯುವರು. ಇದು 1 ರಿಂದ 10 ರ ವರೆಗೆ ಆಳತೆಗಳನ್ನು ಹೊಂದಿರುತ್ತದೆ. ಭೂಕಂಪದ ಅಳತೆಯ ಮಾಪನದಲ್ಲಿ 3 ಆಗಿರುವ ಸಂದರ್ಭದಲ್ಲಿ, ಭೂಕಂಪಮಾಪಕವು ಇದನ್ನು ದಾಖಲಿಸುತ್ತದೆ.

ರಿಕ್ಟರ್ ಮಾಪನದಲ್ಲಿ ಭೂಕಂಪನದ ಅಳತೆಯು 3 ಆಗಿದ್ದರೆ, ಆ ಭೂಕಂಪನದು ಹೆಚ್ಚು ಹಾನಿಯನ್ನು ಉಂಟುಮಾಡುವುದಿಲ್ಲ. ಸಾಮಾನ್ಯವಾಗಿ, ರಿಕ್ಟರ್ ಮಾಪನದಲ್ಲಿ ಭೂಕಂಪನದ ಆಳಕೆಯು 5 ಕ್ಕಿಂತ ಹೆಚ್ಚಿದ್ದರೆ, ಆದು ಹೆಚ್ಚು ಹಾನಿಯನ್ನು ಉ೦ಟುಮಾಡುತ್ತದೆ.

7. ಮಿಂಚಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮೂರು ಕ್ರಮಗಳನ್ನು ತಿಳಿಸಿರಿ,

ಉತ್ತರ: 01] ಮನೆಯಿಂದ ಹೊರಗೆ ಬರಬಾರದು, ಒಂದು ವೇಳೆ ವಾಹನಗಳಲ್ಲಿ ಚಲಿಸುತ್ತಿದ್ದರೆ, ಮಿಂಚು ನಿಲ್ಲುವವರೆಗೆ ಅಲ್ಲಿಯೇ ನಿಲ್ಲಬೇಕು ಮತ್ತು ವಾಹನದ ಕಿಟಕಿಯ ಗಾಜುಗಳನ್ನು ಏರಿಸಿರಬೇಕು,

02) ವಿದ್ಯುತ್‌ ತಂತಿಗಳು, ವಿದ್ಯುತ್ ಕಂಬಗಳು, ದೂರವಾಣಿ ತಂತಿ, ಲೋಹದ ಕೊಳವೆಗಳು ಮುಂತಾದವುಗಳನ್ನು ಮುಟ್ಟಬಾರದು.

03) ಹರಿಯುವ ನೀರಿನ ಸಂಪರ್ಕ ತಪ್ಪಿಸಲು ಗುಡುಗುಸಹಿತ ಮಳೆ ಸಂದರ್ಭದಲ್ಲಿ ಸ್ಥಾನ ಮಾಡುವುದು ಸೂಕ್ತವಲ್ಲ,

04) ವಿದ್ಯುತ್ ಉಪಕರಣಗಳಾದ ಗಣಕಯಂತ್ರ, ದೂರದರ್ಶನ ಮುಂತಾದವುಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು.

8. ಎರಡು ಆವೇಶಭರಿತ ಬಲೂನ್ಗಳು ಪರಸ್ಪರ ವಿಕರ್ಷಿಸುತ್ತದೆ ಹಾಗೂ ಒಂದು ಆದೇಶಭರಿತ ಬಲೂನ್ ಮತ್ತೊಂದು ಆವೇಶರಹಿತ ಬಲೂನ್ ಅನ್ನು ಆಕರ್ಷಿಸುತ್ತದೆ, ಏಕೆ? ವಿವರಿಸಿ,

ಉತ್ತರ: ಆವೇಶಭರಿತ ಬಲೂನ್‌ಗಳ ಮೇಲಿರುವ ಆದೇಶಗಳ ಗುಣಲಕ್ಷಣಗಳು ಒಂದೆ ರೀತಿಯದ್ದಾಗಿರುತ್ತದೆ. ಸಜಾತೀಯ ಆವೇಶಗಳು ಪರಸ್ಪರ ವಿಕರ್ಷಿಸುವುದರಿಂದ ಎರಡು ಆವೇಶಭರಿತ ಬಲೂನ್‌ಗಳು ಪರಸ್ಪರ ವಿಕರ್ಷಿಸುತ್ತದೆ. ಒಂದು ಆವೇಶಭರಿತ ಬಲೂನನ್ನು ಮತ್ತೊಂದು ಆವೇಶರಹಿತ ಬಲೂನ್‌ ಹತ್ತಿರಕ್ಕೆ ತಂದಾಗ, ಆವೇಶಭರಿತ ಬಲೂನ್‌ ನಿಂದಾಗಿ ಆವೇಶರಹಿತ ಬಲೂನ್ ಮೇಲೆ, ಆವೇಶಭರಿತವಾಗುತ್ತದೆ ಮತ್ತು ವಿರುದ್ಧವಾಗಿರುತ್ತದೆ. ವಿಜಾತೀಯ ಆದೇಶಗಳು: ಪರಸ್ಪದ ಆಕರ್ಷಿಸುವುದರಿಂದ, ಒಂದು ಆವೇಶಭರಿತ ಬಲೂನ್ ಮತ್ತೊಂದು ಆವೇಶರಹಿತ ಬಲೂನ್ ಅನ್ನು ಆಕರ್ಷಿಸುತ್ತದೆ.

9. ಆವೇಶಭರಿತ ವಸ್ತುವನ್ನು ಪತ್ತೆಹಚ್ಚಲು ಉಪಯೋಗಿಸುವ ಉಪಕರಣವನ್ನು ಚಿತ್ರದ ಸಹಾಯದಿಂದ ವಿವರಿಸಿ.

ಉತ್ತರ: ಇದು ಒಂದು ಅಲ್ಯೂಮಿನಿಯಮ್ ಸರಳನ್ನು ಹೊಂದಿದೆ. ಸರಳಿನ ಒಂದು ತುದಿಯು ಅಲ್ಯೂಮಿನಿಯಮ್ ಎರಡು ಹಾಳೆಗಳನ್ನು, ಮತ್ತೊಂದು ತುದಿಯು ಲೋಹದ ಬಿಲ್ಲೆಯನ್ನು ಹೊಂದಿರುತ್ತದೆ. ಅಲ್ಯೂಮಿನಿಯಮ್‌ನ ಹಾಳೆಗಳನ್ನು ಕಾನಿಕಲ್ ಪ್ಲಾಸ್ಕ್‌ ನ ಒಳಗಿರಿಸಿ, ಅದು ಗಾಳಿಯ ಸಂಪರ್ಕಕ್ಕೆ ಬಾರದಂತೆ ಪ್ಲಾಸ್ಕ್‌ ನ ಮಾದರಿಯನ್ನು, ಕಾರ್ಕ್‌ ನಿಂದ ಮುಚ್ಚಲಾಗಿರುತ್ತದೆ, ಯಾವುದೇ ಆವೇಶಭರಿತ ವಸ್ತುವಿನಿಂದ ಲೋಹದ ಬಿಲ್ಲೆಯನ್ನು ಸ್ಪರ್ಷಿಸಿದಾಗ, ಅಲ್ಯೂಮಿನಿಯಮ್ಸ್ ಹಾಳೆಗಳು ಪರಸ್ಪರ ದೂರ ಸರಿಯುತ್ತದೆ, ಕಾರಣ, ಆವೇಶಭರಿತ ವಸ್ತುವಿನಿಂದ ಕೆಲವು ಆವೇಶಗಳು ಲೋಹದ ಸರಳಿನ ಮೂಲಕ ಅಲ್ಯೂಮಿನಿಯಮ್ ಹಾಳೆಗೆ ವರ್ಗಾವಣೆಯಾಗುತ್ತದೆ, ಅಲ್ಯೂಮಿನಿಯಮ್ ಹಾಳೆಗಳಿಗೆ ವರ್ಗಾಯಿಸಲ್ಪಟ್ಟ ಆವೇಶಗಳು ಒಂದೆ ರೀತಿಯದ್ದಾಗಿರುತ್ತದೆ. ಆದ್ದರಿಂದ ಹಾಳೆಗಳು ಪರಸ್ಪರ ವಿಕರ್ಷಿಸುತ್ತದೆ. ಒಂದು ವೇಳೆ ವಸ್ತುವು ಲೋಹದ ಬಿಲ್ಲೆಯನ್ನು ಸ್ಪರ್ಷಿಸಿದಾಗ, ಅಲ್ಯೂಮಿನಿಯಮ್ ಹಾಳೆಗಳು ಪರಸ್ಪರ ವಿಕರ್ಷಿಸದಿದ್ದರೆ, ಆ ವಸ್ತುವು ಆದೇಶವನ್ನು ಹೊಂದಿಲ್ಲ ಎಂದರ್ಥ.

8th Standard Science Chapter 15 Question Answer

10.ಭಾರತದಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಮೂರು ರಾಜ್ಯಗಳನ್ನು ಪಟ್ಟಿ ಮಾಡಿ,

ಉತ್ಸರ: ಭಾರತದಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಮೂರು ರಾಜ್ಯಗಳು ಜಮ್ಮು ಕಾಶ್ಮೀರ, ಗುಜರಾತ್ ಮತ್ತು ಅಸ್ಸಾಮ್,

11. ಭೂಕಂಪ ಸಂಭವಿಸಿದ ಸಮಯದಲ್ಲಿ ನೀವು ಮನೆಯಿಂದ ಹೊರಗಿದ್ದೀರಿ ಎಂದರೆ ನಿಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳದ ಮುನ್ನೆಚ್ಚರಿಕೆಗಳು ಯಾವುವು ತಿಳಿಸಿ.

ಉತ್ತರ ಭೂಕಂಪ ಸಂಭವಿಸಿದ ಸಮಯದಲ್ಲಿ ನಾವು ಮನೆಯಿಂದ ಹೊರಗಿದ್ದಾಗ, ನಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು,

  • ಕಟ್ಟಡಗಳು, ಮರಗಳು ಮತ್ತು ಮೇಲಿನ ವಿದ್ಯುತ್‌ ತಂತಿಗಳಿಂದ ದೂರದಲ್ಲಿರುವ ಸೂಕ್ತ ಸ್ಥಳದಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕು.
  • ಕಾರು ಅಥವಾ ಬಸ್‌ನಲ್ಲಿದ್ದರೆ ಹೊರಬರಬಾರದು, ಚಾಲಕನಿಗೆ ಭೂಕಂಪವಲಯದಿಂದ ನಿಧಾನವಾಗಿ ದೂರ ಚಲಿಸಲು ತಿಳಿಸಬೇಕು, ನಡುಕ ನಿಲ್ಲುವವರೆಗೂ ಹೊರ ಬರಬಾರದು.

12. ಹವಾಮಾನ ಇಲಾಖೆಯು ಕೆಲವು ದಿನಗಳಲ್ಲಿ ಗುಡುಗುಸಹಿತ ಮಳೆ ಸಂಭವಿಸುತ್ತದೆ ಎಂದು ಊಹಿಸಿದೆ. ಆ ಸಂದರ್ಭದಲ್ಲಿ ನೀವು ಹೊರ ಹೋಗಬೇಕಾಗಿದೆ. ನೀವು ಛತ್ರಿಯನ್ನು ಕೊಂಡೊಯ್ಯುತ್ತೀರಾ ವಿವರಿಸಿ.

ಉತ್ತರ: ಇಲ್ಲ, ಆ ಸಂದರ್ಭದಲ್ಲಿ ನಾವು ಛತ್ರಿಯನ್ನು ಕೊಂಡೊಯ್ಯುವುದಿಲ್ಲ. ಏಕೆಂದರೆ, ಗುಡುಗುಸಹಿತ ಮಳೆ ಸಂಭವಿಸುವಾಗ ಮೋಡಗಳಿಂದ ಬೆಳಕಿನೊಂದಿಗೆ ವಿದ್ಯುತ್ ಆದೇಶಗಳ ವಿಸರ್ಜನೆಯ ಛತ್ರಿಯಲ್ಲಿನ ಲೋಹದ ಸರಳನ್ನು ಪ್ರವೇಶಿಸಬಹುದು. ಇದರಿಂದ, ಛತ್ರಿಯನ್ನು ಹಿಡಿದವರಿಗೆ ವಿದ್ಯುತ್‌ ಆಘಾತ ಸಂಭವಿಸಬಹುದು.

13. ಮಳೆ ಬರುವಾಗ ಮಿಂಚು ಹೇಗೆ ಉಂಟಾಗುತ್ತದೆ?

ಉತ್ತರ: ಮೋಡಗಳು ಮತ್ತು ಭೂಮಿ ಅಥವಾ ಬೇರೆ ಬೇರೆ ಮೋಡಗಳ ನಡುವೆ ನಡೆಯುವ ವಿದ್ಯುತ್‌ ಆವೇಶಗಳ ವಿಸರ್ಜನ ಕ್ರಿಯೆಯಿಂದ ಮಿಂಚು ಉಂಟಾಗುತ್ತದೆ.

14. ಮಿಂಚು ಮತ್ತು ಬಟ್ಟೆಗಳಿಂದ ಉಂಟಾದ ಕಿಡಿಗಳು ಎರಡೂ ಒಂದೇ ವಿದ್ಯಮಾನಗಳು ಎಂದು ಹೋಲಿಸಿ ತೋರಿಸಿದ ವಿಜ್ಞಾನಿ ಯಾರು?

ಉತ್ತರ: ಬೆಂಜಮಿನ್ ಫ್ರಾಂಕ್ಲಿನ್ ಎಂಬ ಅಮೇರಿಕದ ವಿಜ್ಞಾನಿಯು 1752 ರಲ್ಲಿ ಮಿಂಚು ಮತ್ತು ಬಟ್ಟೆಗಳಿಂದ ಉಂಟಾದ ಕಿಡಿಗಳು ಎರಡೂ ಒಂದೇ ವಿದ್ಯಮಾನಗಳು ಎಂದು ಹೋಲಿಸಿ ತೋರಿಸಿದರು.

15. ಮೋಡಗಳಿಂದ ಮಿಂಚು ಹೇಗೆ ಸಂಭವಿಸುತ್ತದೆ ಎಂಬುದನ್ನು ವಿವರಿಸಿ.

ಉತ್ತರ: ಗುಡುಗುಸಹಿತ ಮಳೆ ಬರುವ ಸಮಯದಲ್ಲಿ, ಗಾಳಿ ಪ್ರವಾಹವು ಮೇಲ್ಮುಖವಾಗಿ ಹಾಗೂ ನೀರಿನ ಹನಿಗಳು ಕೆಳಮುಖವಾಗಿ ಚಲಿಸುತ್ತದೆ. ಈ ಕ್ಷಿಪ್ರ ಚಲನೆಯ ಆವೇಶಗಳನ್ನು ಬೇರ್ಪಡಿಸುತ್ತದೆ. ಇಲ್ಲಿಯವರೆಗೂ ಪೂರ್ಣವಾಗಿ ಅರ್ಥವಾಗದ ಈ ಕ್ರಿಯೆಯಲ್ಲಿ ಧನಆವೇಶಗಳು ಮೋಡಗಳ ಮೇಲ್ವಾಗದ ಅಂಚಿನಲ್ಲೂ, ಋುಣ ಆವೇಶಗಳು, ಮೋಡಗಳ ಕೆಳಭಾಗದ ಅಂಚಿನಲ್ಲೂ ಶೇಖರಣೆಗೊಳ್ಳುತ್ತದೆ ಮತ್ತು ಧನಾವೇಶಗಳು ಭೂಮಿಯ ಸಮೀಪದಲ್ಲೂ ಸಹ ಶೇಖರಣೆಯಾಗುತ್ತದೆ. ಶೇಖರಣೆಯಾದ ಆವೇಶಗಳ ಪರಿಮಾಣವು ಅತಿ ಹೆಚ್ಚಾದಂತೆ, ಗಾಳಿಯ ಸಾಮಾನ್ಯವಾಗಿ ವಿದ್ಯುತ್‌ ಅವಾಹಕದಂತೆ ವರ್ತಿಸುವ ಕಾರಣ, ಆವೇಶಗಳ ಚಲನೆಗೆ ಪ್ರತಿರೋಧವನ್ನು ಒಡ್ಡುವುದಿಲ್ಲ. ಋಣ ಮತ್ತು ಧನಆದೇಶಗಳು ಒಟ್ಟಿಗೆ ಸೇರಿ ಅತಿ ಪ್ರಕಾಶಮಾನವಾದ ಬೆಳಕಿನ ಗೆರೆಗಳು ಮತ್ತು ಕಟ್ಟವನ್ನು ಉಂಟುಮಾಡುತ್ತದೆ. ಈ ಗೆರೆಗಳು ಮಿಂಚಾಗಿ ಗೋಚರಿಸುತ್ತದೆ. ಈ ಕ್ರಿಯೆಯೇ ವಿದ್ಯುತ್ ಆವೇಶಗಳ ವಿಸರ್ಜನೆ,

16. ಮಿಂಚು ವಾಹಕಗಳು ಎಂದರೇನು ? ಅದು ಹೇಗೆ ಕಾರ್ಯನಿರ್ವಹಿಸುತ್ತದೆ.

ಉತ್ತರ: ಮಿಂಚು ವಾಹಕಗಳು ಮಿಂಚಿನಿಂದಾಗುವ ಪರಿಣಾಮದಿಂದ ಕಟ್ಟಡಗಳನ್ನು ರಕ್ಷಿಸಲು ಉಪಯೋಗಿಸುವ ಸಾಧನವೇ ಮಿಂಚು – ವಾಹಕ. ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಕಟ್ಟಡಕ್ಕಿಂತಲೂ ಎತ್ತರವಾದ ಲೋಹದ ಸರಳನ್ನು ಗೋಡೆಗೆ ಅಳಪಡಿಸಲಾಗಿರುತ್ತದೆ. ಸರಳಿನ ಒಂದು ತುದಿಯನ್ನು ಕಟ್ಟಡ ಮೇಲ್ಬಾಗದ ಗಾಳಿಯಲ್ಲಿ ಮತ್ತೊಂದು ತುದಿಯನ್ನು ಭೂಮಿಯ ಆಳದಲ್ಲಿ ಹೂಳಲಾಗಿರುತ್ತದೆ. ಗುಡುಗುಸಹಿತ ಮಳೆಯ ಸಂದರ್ಭದಲ್ಲಿ, ಈ ಸರಳು ವಿದ್ಯುತ್ ಆವೇಶಗಳನ್ನು ಭೂಮಿಗೆ ವರ್ಗಾಯಿಸಲು ಸುಲಭ ಮಾರ್ಗ ಕಲ್ಪಿಸುತ್ತದೆ. ಇದರಿಂದ, ಕಟ್ಟಡಗಳಿಗೆ ಹಾನಿ ಉಂಟಾಗುವುದಿಲ್ಲ.

17. ಭೂಕಂಪಗಳಿಗೆ ಸಂಭವನೀಯ ಕಾರಣಗಳು ಯಾವವು?

ಉತ್ತರ: ಜ್ವಾಲಾಮುಖಿಯ ಸ್ಫೋಟ, ಉಲ್ಕೆಯ ಭೂಮಿಗೆ ಅಪ್ಪಳಿಸುವುದು, ಒಳಭಾಗದಲ್ಲಿ ಪರಮಾಣು ಸ್ಫೋಟ ಮತ್ತು ಭೂತಟ್ಟೆಗಳ ಚಲನೆಗಳು ಭೂಕಂಪನಗಳಿಗೆ ಸಂಭವನೀಯ ಕಾರಣಗಳಾಗಿದೆ.

18. ಸೈಸ್ಮಿಕ್ (ಭೂಕಂಪ) ಅಥವಾ ಶೂನ್ಯ ವಲಯಗಳು ಎಂದರೆನು?

ಉತ್ತರ: ಭೂತಟ್ಟೆಯ ಗಡಿಭಾಗಗಳು ದುರ್ಬಲ ವಲಯಗಳಾಗಿದ್ದು ಅವುಗಳ ಚಲನೆಯಿಂದ ಭೂಕಂಪದ ಸಂಭವನೀಯತೆಯು ಉಂಟಾಗುವುದು. ಈ ದುರ್ಬಲ ವಲಯಗಳೇ ಸೈಸ್ಮಿಕ್ (ಭೂಕಂಪ) ಅಥವಾ ನ್ಯೂನ್ಯತಾ ವಲಯಗಳು,

19. ಭಾರತದಲ್ಲಿ ಭೂಕಂಪನದ ವಿಷಯದಲ್ಲಿ ಭಯಭೀತಿಯನ್ನುಂಟುಮಾಡುವ ಪ್ರದೇಶಗಳಾವವು?

ಉತ್ತರ: ಭಾರತದಲ್ಲಿ ಭಯಭೀತಿಯನ್ನುಂಟು ಮಾಡುವ ಪ್ರದೇಶಗಳೆಂದರೆ ಕಾಶ್ಮೀರ, ಪಶ್ಚಿಮ ಮತ್ತು ಮಧ್ಯ ಹಿಮಾಲಯ, ಪೂರ್ಣ ಪ್ರಮಾಣದ ಈಶಾನ್ಯ ಭಾಗ, ಖುಚ್‌ ನ ರನ್ನ ಪ್ರದೇಶ, ರಾಜಸ್ಥಾನ ಮತ್ತು ಭಾರತದ ಗಂಗಾ ನದಿ ಬಯಲು ಪ್ರದೇಶ, ದಕ್ಷಿಣ ಭಾರತದ ಕೆಲವು ಪ್ರದೇಶಗಳೂ ಸಹ ಅಪಾಯ, ವಲಯಗಳಾಗಿದೆ.

20. ಭೂಕಂಪ ವಲಯಗಳಲ್ಲಿ ವಾಸಿಸುವ ಜನಸಾಮಾನ್ಯರು ಕಂಪನ- ಸುರಕ್ಷಿತವಾಗಿಸಲು ಕಟ್ಟಡ ನಿರ್ಮಾಣವನ್ನು ಸರಳಗೊಳಿಸುವ ಕ್ರಮಗಳನ್ನು ತಿಳಿಸಿ.

ಅರ್ಹ ವಾಸ್ತುಶಿಲ್ಪಿಗಳನ್ನು ಹಾಗೂ ರಚನಾ ಅಭಿಯಂತರರನ್ನು ಸಂಪರ್ಕಿಸುವುದು,

ಭೂಕಂಪ ಪ್ರದೇಶಗಳಲ್ಲಿ, ಭಾರೀ ನಿರ್ಮಾಣ ಸಾಮಾಗ್ರಿಗಳಿಗಿಂತಲೂ ಮಣ್ಣು ಮತ್ತು ಮರ ಬಳಸುವಿಕೆ ಉತ್ತಮ,

ಚಾವಣಿಯನ್ನು ಸಾಧ್ಯವಾದಷ್ಟು ಹಗುರವಾಗಿಸಬೇಕು. ಇದರಿಂದ ಕುಸಿತದ ಸಮಯದಲ್ಲಿ ಹಾನಿಯ ಪ್ರಮಾಣ ಕಡಿಮೆ

ಆಲ್ಕೆರಾಗಳು ಮತ್ತು ಕಪಾಟುಗಳನ್ನು ಗೋಡೆಗೆ ಜೋಡಿಸಿದಂತೆ ನಿರ್ಮಿಸುವುದರಿಂದ ಸುಲಭವಾಗಿ ಕುಸಿಯುವುದಿಲ್ಲ.

ಭೂಕಂಪದ ಸಂದರ್ಭದಲ್ಲಿ ಗೋಡೆ ಗಡಿಯಾರ, ಭಾವಚಿತ್ರದ ಚೌಕಟ್ಟು, ಜಲತಾಪಕ ಮುಂತಾದವುಗಳನ್ನು ಮೇಲೆ ಬೀಳದಂತೆ ಜಾಗರೂಕತೆಯಿಂದ ನೇತು ಹಾಕುವುದು.

ಭೂಕಂಪದ ಸಮಯದಲ್ಲಿ, ಕೆಲವು ಕಟ್ಟಡಗಳು ಬೆಂಕಿಗೆ ಆಹುತಿಯಾಗುವುದರಿಂದ, ಕಾರ್ಯನಿರ್ವಹಿಸುವ ಬೆಂಕಿ ನಂದಿಸುವ (ಅಗ್ನಿಶಾಮಕ) ಉಪಕರಣವನ್ನು ಕಟ್ಟಡಗಳಲ್ಲಿ ಅದರಲ್ಲೂ ಬಹು ಅಂತಸ್ತಿನ ಕಟ್ಟಡಗಳಲ್ಲಿ ಅಳವಡಿಸಿರುವುದು

21. ಭೂಕಂಪದ ನಡಕ ಸಂಭವಿಸಿದಾಗ ನಮ್ಮ ರಕ್ಷಣೆಗಾಗಿ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ತಿಳಿಸಿ,

ಉತ್ತರ; (1) ನೀವು ಮನೆಯಲ್ಲಿದ್ದರೆ,

ನಡಕ ನಿಲ್ಲುವವರೆಗೆ ಮೇಜಿನ ಕೆಳಭಾಗದಲ್ಲಿ ಆಶ್ರಯ ಪಡೆಯಬೇಕು

ನಿಮ್ಮ ಮೇಲೆ ಬೀಳಬಹುದಾದ ಎತ್ತರವಾದ ಮತ್ತು ಭಾರವಾದ ವಸ್ತುಗಳಿಂದ ದೂರವಿರಬೇಕು. ನೀವು ಹಾಸಿಗೆಯ ಮೇಲಿದ್ದರೆ ಮೇಲೇಳದೆ ದಿಂಬಿನಿಂದ ತಲೆಯನ್ನು ರಕ್ಷಿಸಿಕೊಳ್ಳಬೇಕು.

(2) ನೀವು ಹೊರಗಿದ್ದರೆ,

11] ಕಟ್ಟಡಗಳು, ಮರಗಳು ಮತ್ತು ಮೇಲಿನ ವಿದ್ಯುತ್‌ ತಂತಿಗಳಿಂದ ದೂರದಲ್ಲಿರುವ ಸೂಕ್ತ ಸ್ಥಳದಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕು.

02] ಕಾರು ಅಥವಾ ಬಸ್‌ನಲ್ಲಿದ್ದರೆ ಹೊರಬರಬೇಡಿ. ಚಾಲಕನಿಗೆ ಭೂಕಂಪವಲಯದಿಂದ ನಿಧಾನವಾಗಿ ದೂರ ಚಲಿಸಲು ತಿಳಿಸಬೇಕು. ನಡುಕ ನಿಲ್ಲುವವರೆಗೂ ಹೊರ ಬರಬಾರದು,

FAQ

1. ಮಳೆ ಬರುವಾಗ ಮಿಂಚು ಹೇಗೆ ಉಂಟಾಗುತ್ತದೆ?

ಉತ್ತರ: ಮೋಡಗಳು ಮತ್ತು ಭೂಮಿ ಅಥವಾ ಬೇರೆ ಬೇರೆ ಮೋಡಗಳ ನಡುವೆ ನಡೆಯುವ ವಿದ್ಯುತ್‌ ಆವೇಶಗಳ ವಿಸರ್ಜನ ಕ್ರಿಯೆಯಿಂದ ಮಿಂಚು ಉಂಟಾಗುತ್ತದೆ.

2. ಭೂಕಂಪಗಳಿಗೆ ಸಂಭವನೀಯ ಕಾರಣಗಳು ಯಾವವು?

ಉತ್ತರ: ಜ್ವಾಲಾಮುಖಿಯ ಸ್ಫೋಟ, ಉಲ್ಕೆಯ ಭೂಮಿಗೆ ಅಪ್ಪಳಿಸುವುದು, ಒಳಭಾಗದಲ್ಲಿ ಪರಮಾಣು ಸ್ಫೋಟ ಮತ್ತು ಭೂತಟ್ಟೆಗಳ ಚಲನೆಗಳು ಭೂಕಂಪನಗಳಿಗೆ ಸಂಭವನೀಯ ಕಾರಣಗಳಾಗಿದೆ.

ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

8th Standard Kannada Text Book Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh