8ನೇ ತರಗತಿ ವಿಜ್ಞಾನ ಬೆಳಕು ಪಾಠದ ನೋಟ್ಸ್‌ | 8th Standard Science Chapter 16 Notes

8ನೇ ತರಗತಿ ವಿಜ್ಞಾನ ಬೆಳಕು ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, 8th Standard Science Chapter 16 Notes Question Answer 8th Belaku Pata Notes Pdf Download 2022 Kseeb Solutions For Class 8 Science Chapter 16 Notes in Kannada Medium 8th Class Science 16 Lesson Notes Belaku 8th Standard Notes Pdf ಬೆಳಕು ಪಾಠದ ಪ್ರಶ್ನೆ ಉತ್ತರ Pdf 8th Class Science Belaku Chapter Question Answer

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ನೀವು ಕತ್ತಲೆಯ ಕೋಣೆಯಲ್ಲಿದ್ದೀರಿ ಎಂದು ಭಾವಿಸಿಕೊಳ್ಳಿ. ಕೋಣೆಯಲ್ಲಿರುವ ವಸ್ತುಗಳನ್ನು ನೀವು ಕಾಣುವಿರೇ? ಕೋಣೆಯ ಹೊರಗಿನ ವಸ್ತುಗಳನ್ನು ನೀವು ಕಾಣುವಿರೇ ವಿವರಿಸಿ

ಉತ್ತರ: ನಾವು ಕತ್ತಲ ಕೋಣೆಯಲ್ಲಿದ್ದಾಗ, ಕೋಣೆಯಲ್ಲಿನ ವಸ್ತುಗಳನ್ನು ಕಾಣಲು ಸಾಧ್ಯವಾಗುವುದಿಲ್ಲ. ಆದರೆ, ಕೋಣೆಯ ಹೊರಗಿನ ವಸ್ತುಗಳನ್ನು ನಾವು ನೋಡಬಹುದು.

ವಸ್ತುವಿನಿಂದ ಹೊರಟ ಬೆಳಕು ನಮ್ಮ ಕಣ್ಣುಗಳನ್ನು ಪ್ರವೇಶಿಸಿದಾಗ ಮಾತ್ರ ನಾವು ಆ ವಸ್ತುವನ್ನು ಕಾಣುತ್ತೇವೆ. ಬೆಳಕು ಆ ವಸ್ತುವಿನಿಂದ ಉತ್ಸರ್ಜನೆಯಾಗಿರಬಹುದು ಅಥವಾ ಅದರಿಂದ ಪ್ರತಿಫಲನಗೊಂಡಿರಬಹುದು, ಕೋಣೆಯಲ್ಲಿ ಬೆಳಕು ಇಲ್ಲದಿದ್ದಾಗ, ವಸ್ತುಗಳು ಬೆಳಕನ್ನು ಪ್ರತಿಫಲಿಸುವುದಿಲ್ಲ. ಆದ್ದರಿಂದ, ಕತ್ತಲೆಯ ಕೋಣೆಯಲ್ಲಿ ವಸ್ತುಗಳು ನಮಗೆ ಕಾಣುವುದಿಲ್ಲ. ಕೋಣೆಯ ಹೊರಗೆ ಬೆಳಕು ಇದ್ದರೆ, ಹೊರಗಿನ ವಸ್ತುಗಳನ್ನು ನಾವು ಕಾಣಬಹುದು


2. ನಿಯತ ಮತ್ತು ಚದುರಿದ ಪ್ರತಿಫಲನಗಳ ನಡುವಿನ ವ್ಯತ್ಯಾಸ ತಿಳಿಸಿ, ಚದುರಿದ ಪ್ರತಿಫಲನವು ಪ್ರತಿಫಲನದ ನಿಯಮಗಳ ವೈಫಲ್ಯ ಎಂಬ ಅರ್ಥವೇ ?

ನಿಯತ ಪ್ರತಿಫಲನಚದುರಿದ ಪ್ರತಿಫಲನ
ನುಣುಪಾದ ಮೇಲೈ ನಿಂದ ಉಂಟಾಗುವ ಪ್ರತಿಫಲನ,

ಒರಟಾದ ಅಥವಾ ಅನಿಯತ ಮೇಲ್ಮೈನಿಂದ ಉಂಟಾಗುವ ಪ್ರತಿಫಲನ

ಬೆಳಕಿನ ಕಿರಣಗಳು ಪರಸ್ಪರ ಸಮಾಂತರವಾಗಿರುತ್ತದೆ. ಬೆಳಕಿನ ಕಿರಣಗಳು ಪರಸ್ಪರ ಸಮಾಂತರವಾಗಿರುವುದಿಲ್ಲ
ಸ್ಪಷ್ಟವಾದ ಪ್ರತಿಬಿಂಬ ಮೂಡುತ್ತದೆ.ಸ್ಪಷ್ಟವಾದ ಪ್ರತಿಬಿಂಬ ಮೂಡುವುದಿಲ್ಲ

3. ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ, ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ,

(a) ಹೊಳಪುಳ್ಳ ಮರದ ಮೇಜು

(b) ಸೀಮೆಸುಣ್ಣದ ಪುಡಿ

(c) ಹಲಗೆಯ ಮೇಲ್ಮೈ

(d) ನೀರು ಚೆಲ್ಲಿರುವ ಅದ್ಭುತ ಶಿಲೆಯ ನೆಲ

(e) ದರ್ಪಣ

(f) ಕಾಗದದ ಚೂರು

ಉತ್ತರ: (1) ಹೊಳಪುಳ್ಳ ಮರದ ಮೇಜು : ನಿಯತ ಪ್ರತಿಫಲನವನ್ನು ತೋರುತ್ತದೆ ಮೇಜಿನ ಹೊಳಪುಳ್ಳ ಮೇಲ್ಮೈ ನುಣುಪಾಗಿರುತ್ತದೆ, ನುಣುಪಾದ ಮೇಲೈನಿಂದ ಪ್ರತಿಫಲಿಸಲ್ಪಟ್ಟ ಕಿರಣಗಳು ಪರಸ್ಪರ ಸಮಾಂತರವಾಗಿರುತ್ತದೆ.

(b) ಸೀಮೆಸುಣ್ಣದ ಪುಡಿ: ಚದುರಿದ ಪ್ರತಿಫಲನವನ್ನು ತೋರುತ್ತದೆ, ಸೀಮೆಸುಣ್ಣದ ಪುಡಿಯ ಮೇಲ್ಮೈ ನುಣುಪಾಗಿರುವುದಿಲ್ಲ. ನುಣುಪಾಗಿರದ ಮೇಲ್ಮೈ ನಿಂದ ಪ್ರತಿಲಿಸಲ್ಪಟ್ಟ ಕಿರಣಗಳು ಪರಸ್ಪರ ಸಮಾಂತರವಾಗಿರುವುದಿಲ್ಲ.

(c) ಹಲಗೆಯ ಮೇಲ್ಮೈ : ಚದುರಿದ ಪ್ರತಿಫಲನವನ್ನು ತೋರುತ್ತದೆ. ಹಲಗೆಯ ಮೇಲ್ಮೈ ನುಣುಪಾಗಿರುವುದಿಲ್ಲ, ನುಣುಪಾಗಿರದ ಮೇಲೈನಿಂದ ಪ್ರತಿಫಲಿಸಲ್ಪಟ್ಟ ಕಿರಣಗಳು ಪರಸ್ಪರ ಸಮಾಂತರವಾಗಿರುವುದಿಲ್ಲ.

(d) ನೀರು ಚೆಲ್ಲಿರುವ ಅದ್ಭುತ ಶಿಲೆಯ ನೆಲ: ನಿಯತ ಪ್ರತಿಫಲನವನ್ನು ತೋರುತ್ತದೆ. ನೀರು ಚೆಲ್ಲಿರುವ ಅದ್ಭುತ ಶಿಲೆಯ ನೆಲದ ಮೇಲೆ ನುಣುಪಾಗಿರುತ್ತದೆ. ನುಣುಪಾದ ಮೇಲ್ಮೈನಿಂದ ಪ್ರತಿಫಲಿಸಲ್ಪಟ್ಟ ಕಿರಣಗಳು ಪರಸ್ಪರ ಸಮಾಂತರವಾಗಿರುತ್ತದೆ.

(e) ದರ್ಪಣ: ನಿಯತ ಪ್ರತಿಫಲನವನ್ನು ತೋರುತ್ತದೆ. ದರ್ಪಣದ ಮೇಲ್ಮೈ ನುಣುಪಾಗಿರುತ್ತದೆ. ನುಣುಪಾದ ಮೇಲ್ಮೈ ನಿಂದ ಪ್ರತಿಫಲಿಸಲ್ಪಟ್ಟ ಕಿರಣಗಳು ಪರಸ್ಪರ ಸಮಾಂತರವಾಗಿರುತ್ತದೆ.

(f) ಕಾಗದದ ಚೂರು: ಚದುರಿದ ಪ್ರತಿಫಲನವನ್ನು ತೋರುತ್ತದ ಕಾಗದದ ಚೂರು ಮೇಲ್ಮೈ ನುಣುಪಾಗಿರುವುದಿಲ್ಲ. ನುಣುಪಾಗಿರದ ಮೇಲ್ಮೈ ನಿಂದ ಪ್ರತಿಫಲಿಸಲ್ಪಟ್ಟ ಕಿರಣಗಳು ಪರಸ್ಪರ ಸಮಾಂತರವಾಗಿರುವುದಿಲ್ಲ.

4. ಪ್ರತಿಫಲನದ ನಿಯಮಗಳನ್ನು ನಿರೂಪಿಸಿ

ಉತ್ತರ: ಬೆಳಕಿನ ಪ್ರತಿಫಲನದ ನಿಯಮಗಳು:

1] pತನ ಕೋnವು ಪ್ರತಿಫಲನ ಕೋನಕ್ಕೆ ಸಮಾನಾಗಿರುತ್ತದೆ.

2) ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲಿಸುವ ಮೇಲ್ಮೈಗೆ ಎಳೆದ ಲಂಬಗಳು ಒಂದೇ ಸಮತಲದಲ್ಲಿರುತ್ತದೆ.

5. ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬಗಳು ಒಂದೇ ಸಮತಲದಲ್ಲಿ ಇರುತ್ತದೆ ಎಂದು ತೋರಿಸುವ ಒಂದು ಚಟುವಟಿಕೆಯನ್ನು ವಿವರಿಸಿ,

ಉತ್ತರ: ಮೇಜಿನ ಮೇಲೆ ಒಂದು ಸಮತಲ ದರ್ಪಣವನ್ನಿಡಿ, ಒಂದು ಹಾಳೆಯನ್ನು ತೆಗೆದುಕೊಂಡು, ಅದರ ಮಧ್ಯಭಾಗದಲ್ಲಿ ಒಂದು ಚಿಕ್ಕ ರಂದ್ರವನ್ನು ಮಾಡಿ, ಕೋಣೆಯಲ್ಲಿನ ಬೆಳಕು ಪ್ರಕಾಶಮಾನವಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಹಾಳೆಯನ್ನು ಮೇಜಿಗೆ ಲಂಭವಾಗಿ ಹಿಡಿದುಕೊಳ್ಳಿ ಮತ್ತೊಂದು ಹಾಳೆಯನ್ನು ಮೇಜಿನಮೇಲೆ ಲಂಬವಾಗಿ ನಿಲ್ಲಿಸಿದ ದರ್ಪಣವನ್ನು ತಾಕುವಂತೆ ಇಟ್ಟು, ಅದರ ಮೇಲ್ಮೈ ದರ್ಪಣಕ್ಕೆ ಲಂಭವಾಗಿರುದಂತೆ ಒಂಡು ಲಂಬರೇಖೆಯನ್ನು ಎಳೆಯಿರಿ, ಈಗ, ಟಾರ್ಚಿನ ಬೆಳಕಿನ ಕಿರಣವು ಹಾಳೆಯಲ್ಲಿನ ರಂಧ್ರದ ಮೂಲಕ ಹಾದುಹೋಗಿ ದರ್ಪಣವನ್ನು ಲಂಬವು ತಾಕಿರುವಲ್ಲಿ ಬೀಳುವಂತೆ ಮಾಡಿ, ಆಗ, ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲಿಸುವ ಮೇಲ್ಮೈಗೆ ಎಳೆದ ಲಂಬಗಳು ಒಂದೇ ಹಾಳೆಯ ಮೇಲೆ ಕಾಣುತ್ತದೆ, ಇದು, ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬಗಳು ಒಂದೇ ಸಮತಲದಲ್ಲಿ ಇರುತ್ತವೆ ಎಂದು ತೋರಿಸುತ್ತದೆ.

6. ಕೆಳಗಿನವುಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ,

(a ಸಮತಲ ದರ್ಪಣದ ಮುಂಭಾಗದಿಂದ 1m ದೂರದಲ್ಲಿರುವ ವ್ಯಕ್ತಿಯು ಆತನ ಪ್ರತಿಬಿಂಬದಿಂದ 2 m ದೂರದಲ್ಲಿರುವಂತೆ ಕಾಣುತ್ತಾನೆ

(b) ಸಮತಲ ದರ್ಪಣದ ಮುಂಭಾಗದಲ್ಲಿ ಬಲಗೈನಿಂದ ನಿಮ್ಮ ಎಡ ಕಿವಿಯನ್ನು ಮುಟ್ಟಿದರೆ, ದರ್ಪಣದಲ್ಲಿ ನಿಮ್ಮ ಬಲಕಿವಿಯನ್ನು ಎಡ ಕೈ ಮುಟ್ಟಿದಂತೆ ಕಾಣುತ್ತದೆ.

(C) ನೀವು ಮಂದೆ ಬೆಳಕನ್ನು ನೋಡಿದಾಗ ನಿಮ್ಮ ಕಣ್ಣಿನ ಪಾಪೆಯ ಗಾತ್ರವು ದೊಡ್ಡದು ಆಗುತ್ತದೆ.

(d) ರಾತ್ರಿ ಪಕ್ಷಿಗಳು ಅವುಗಳ ಕಣ್ಣುಗಳಲ್ಲಿ ಕಂಬಿ ಕೋಶಗಳಿಗಿಂತ ಕಡಿಮೆ ಶಂಕು ಕೋಶಗಳನ್ನು ಹೊಂದಿರುತ್ತದೆ.

7 ರಿಂದ 8ರ ವರೆಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

7. ಪತನ ಕೋನವು ಪ್ರತಿಫಲನ ಕೋನಕ್ಕೆ ಸಮ

(a) ಯಾವಾಗಲೂ (b) ಕೆಲವು ಸಲ (c) ವಿಶೇಷ ಸಂದರ್ಭಗಳಲ್ಲಿ (d) ಯಾವಾಗಲೂ ಇಲ್ಲ

ಉತ್ತರ: (8) ಯಾವಾಗಲೂ ಇಲ್ಲ

8. ಸಮತಲ ದರ್ಪಣವು ಉಂಟುಮಾಡುವ ಪ್ರತಿಬಿಂಬವು

(ಉತ್ತರ: (b) ದರ್ಪಣದ ಹಿಂದೆ ವಸ್ತುವಿನ ಗಾತ್ರದಷ್ಟೇ ಮಿಥ್ಯ ಪ್ರತಿಬಿಂಬ,

9. ಕೆಲಿಡೋಸ್ಕೋಪ್‌ನ ತಯಾರಿಕೆಯನ್ನು ವಿವರಿಸಿ,

ಉತ್ತರ: ಕೆಲಿಡೋಸ್ಕೋಪ್ ತಯಾರಿಸಲು 15cm ಉದ್ದ ಮತ್ತು 4cm ಅಗಲ ಇರುವ ಆಯತಾಕಾರದ ದರ್ಪಣದ ಮೂರು ಪಟ್ಟಿಗಳನ್ನು ತೆಗೆದುಕೊಳ್ಳಿ, ಅವುಗಳನ್ನು ಜೋಡಿಸಿ ಒಂದು ಪಟ್ಟಕವನ್ನು ತಯಾರಿಸಿ ಈ ಜೋಡಣೆಯನ್ನು ವೃತ್ತಕಾರದ ರಟ್ಟಿನ ಕೊಳದ ಅಥವಾ ದಪ್ಪನೆಯ ಕಾಗದದ ಕೊಳವೆಯಲ್ಲಿ ಇರಿಸಿ, ಕಾಗದದ ಕೊಳವೆಯು ಪಟ್ಟಕದ ಪಟ್ಟಿಗಳಿಗಿಂತ ಸ್ವಲ್ಪ ಉದ್ದ ಇರುವುದನ್ನು ಖಚಿತಪಡಿಸಿಕೊಳ್ಳಿ, ನೀವು ನೋಡಲು ಸಾಧ್ಯವಿರುವಂತೆ ಮಧ್ಯದಲ್ಲಿ ಸಣ್ಣ ರಂಧ್ರವಿರುವ ರಟ್ಟಿನ ಫಲಕದಿಂದ ಕೊಳವೆಯ ಒಂದು ತುದಿಯನ್ನು ಮುಚ್ಚಿ ರಟ್ಟಿನ ಫಲಕದ ದೀರ್ಘ ಬಾಳಿಕೆಗಾಗಿ ಫಲಕದ ಮೇಲೆ ಪಾರದರ್ಶಕವಾದ ಪ್ಲಾಸ್ಟಿಕ್‌ ನ ರನ್ನು ಆಂಟಿಸಿ, ಇನ್ನೊಂದು ತುದಿಯಲ್ಲಿ ದರ್ಪಣಗಳು ಪಟ್ಟಕ್ಕೆ ತಾಕುವಂತೆ ಒಂದು ವೃತ್ತಾಕಾರದ ಸಮತಲ ಗಾಜನ್ನು ಅಂಟಿಸಿ, ಗಾಜಿನ ಫಲಕದ ಮೇಲೆ ಹಲವಾರು ಸಣ್ಣದಾದ ಬಣ್ಣದ ಗಾಜಿನ ಚೂರುಗಳನ್ನು ಇರಿಸಿ ( ಬಣ್ಣದ ಬಳೆಗಳ ಒಡೆದ ಚೂರುಗಳು ). ಈ ಕೊಳವೆಯ ತುದಿಯನ್ನು ಅಪಾರದರ್ಶಕ ಗಾಜಿನ ಫಲಕದಿಂದ ಮುಚ್ಚಿರಿ, ಬಣ್ಣಬಣ್ಣದ ಗಾಜಿನ ಚೂರುಗಳ ಚಲನೆಗೆ ಸಾಕಷ್ಟು ಅವಕಾಶ ಕಲ್ಪಿಸಿ, ನಿಮ್ಮ ಕೆಲಿಡೋಸ್ಕೋಪ್ ಈಗ ಸಿದ್ಧ

10. ಮಾನವನ ಕಣ್ಣಿನ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ,

11. ಗುರ್ಮಿತ್‌, ಲೇಸರ್ ಟಾರ್ಚ್ ಬಳಸಿ ಚಟುವಟಿಕೆ 16.8ನ್ನು ಮಾಡಬಯಸಿದಳು ಆಕೆಯ ಉಪಾಧ್ಯಾಯರು ಹಾಗ ಮಾಡದಿರುವಂತೆ ಸಲಹೆ ನೀಡಿದರು, ಉಪಾಧ್ಯಾಯರ ಸಲಹೆಗೆ ಕಾರಣವನ್ನು ನೀವು ವಿವರಿಸಬಲ್ಲಿರಾ?

ಉತ್ತರ: ಲೇಸ‌ರ್ ಟಾರ್ಚ್‌ ಬೆಳಕಿನ ತೀವ್ರತೆಯು ಅತಿ ಹೆಚ್ಚಾಗಿರುವುದರಿಂದ, ಅದು ಮಾನವರ ಕಣ್ಣುಗಳಿಗೆ ಹಾನಿಕಾರಕವಾಗಿದೆ. ಅದು, ಕಣ್ಣಿನ ಅಕ್ಷಿಪಟಕ್ಕೆ ಹಾನಿಮಾಡುವ ಮೂಲಕ ಶಾಶ್ವತ ಕುರುಡುತನವನ್ನು ಉಂಟುಮಾಡುತ್ತದೆ. ಆದ್ದರಿಂದ, ಗುರ್ಮಿತ್‌ನ ಉಪಾಧ್ಯಾಯರು ಲೇಸ‌ರ್ ಟಾರ್ಚ್ ಬಳಸಿ ಚಟುವಟಿಕೆ 16.8ನ್ನು ಮಾಡದಿರುವಂತೆ ಸಲಹೆ ನೀಡಿದ್ದಾರೆ.

12. ನೀವು ನಿಮ್ಮ ಕಣ್ಣುಗಳ ಕಾಳಜಿಯನ್ನು ಹೇಗೆ ವಹಿಸುವಿರಿ ಎಂದು ವಿವರಿಸಿ.

ಉತ್ತರ: ನಮ್ಮ ಕಣ್ಣುಗಳ ಕಾಳಜಿಯನ್ನು ವಹಿಸಲು ನಿರ್ವಹಿಸಬೇಕಾದ ಕೆಲವು ಅಂಶಗಳು ಹೀಗಿದೆ,

01] ಸಮಸ್ಯೆ ಇದ್ದರೆ ನಾವು ಕಣ್ಣಿನ ತಜ್ಜರ ಬಳಿ ಹೋಗಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು

02) ಕಣ್ಣಿನ ತಜ್ಞರು ಸಲಹೆ ನೀಡಿದರೆ, ಸೂಕ್ತ ಕನ್ನಡಕಗಳನ್ನು ಬಳಸಬೇಕು,

03) ಅತಿ ಕಡಿದು ಬೆಳಕು ಅಥವಾ ಅತಿಯಾದ ಬೆಳಕು ಕಣ್ಣುಗಳಿಗೆ ಒಳ್ಳೆಯದಲ್ಲ, ಅತಿ ಕಡಿಮೆ ಬೆಳಕು ಕಣ್ಣುಗಳಿಗೆ ಆಯಾಸ ಮತ್ತು ತಲೆನೋವು ಉಂಟುಮಾಡುತ್ತದೆ. ಸೂರ್ಯನ ಬೆಳಕಿನಂತಹ ಅತಿಯಾದ ಬೆಳಕು, ಬಲ್ಪ್ ಅಥವಾ ಲೇಸರ್ ಬೆಳಕು ಅಕ್ಷಿಪಟಲವನ್ನು ಹಾನಿ ಮಾಡಬಹುದು,

04] ಸೂರ್ಯನ ಬೆಳಕು ಅಥವಾ ಪ್ರಖರವಾದ ಬೆಳಕನ್ನು ನೇರವಾಗಿ ನೋಡಬಾರದು. ‌

05) ನಮ್ಮ ಕಣ್ಣುಗಳನ್ನು ಉಜ್ಜಬಾರದು. ಕಣ್ಣಿನೊಳಗೆ ದೂಳಿನ ಕಣಗಳು ಹೋದಾಗ ಕಣ್ಣುಗಳನ್ನು ಶುದ್ಧವಾದ ನೀರಿನಲ್ಲಿ ತೊಳೆಯಬೇಕು. ಯಾವುದೇ ಸುಧಾರಣೆ ಕಾಣದಿದ್ದರೆ ಕಣ್ಣಿನ ತಜ್ಞರ ಬಳಿ ಹೋಗಬೇಕು.

06) ದೃಷ್ಟಿಸಲು ಸಾಧ್ಯವಾದ ಸಾಮಾನ್ಯ ದೂರದಲ್ಲಿ ಓದಬೇಕು, ಪುಸ್ತಕವನ್ನು ಕಣ್ಣಿಗೆ ಅತಿ ಸಮೀಪದಲ್ಲಿರಿಸಿಕೊಂಡು ಅಥವಾ ಆತಿ ದೂರದಲ್ಲಿರಿಸಿಕೊಂಡು ಓದಬಾರದು.

12. ಪ್ರತಿಫಲಿತ ಕಿರಣವು ಪತನ ಕಿರಣದೊಂದಿಗೆ 90 ಡಿಗ್ರಿ ಕೋನವನ್ನು ಉಂಟುಮಾಡಿದರೆ ಆಗ ಪತನ ಕೋನವೆಷ್ಟು?

ಉತ್ತರ: ಪ್ರತಿಫಲಿತ ಕಿರಣ ಮತ್ತು ಪತನ ಕಿರಣಗಳ ನಡುವಿನ ಕೋನ=90 ಡಿಗ್ರಿ ಆದರೆ, ಪ್ರತಿಫಲನದ ನಿಯಮದ ಪ್ರಕಾರ, ಪತನ ಕೋನ ಪ್ರತಿಫಲನ ಕೋನ

ಪತನ ಕೋನ + ಪ್ರತಿಫಲನ ಕೋನ = 90°

ಪತನ ಕೋನ + ಪತನ ಕೋಣೆ = 90°

13. ಪರಸ್ಪರ: 40Cm ಅಂತರದಲ್ಲಿರುವ ಎರಡು ಸಮತಲ ದರ್ಪಣಗಳ ನಡುವೆ ಒಂದು ಮೇಣದಬತ್ತಿಯನ್ನು ಇರಿಸಿದರೆ ಅದರ ಎಷ್ಟು ಪ್ರತಿಬಿಂಬಗಳು ಉಂಟಾಗುತ್ತದೆ?

ಉತ್ತರ: ಪರಸ್ಪರ 40 cm ಅಂತರದಲ್ಲಿರುವ ಎರಡು ಸಮತಲ ದರ್ಪಣಗಳ ನಡುದೆ ಒಂದು ಮೇಣದಬತ್ತಿಯನ್ನು ಇರಿಸಿದರೆ ಅದರ ಅನಂತ (ಅಸಂಖ್ಯಾತ) ಪ್ರತಿಬಿಂಬಗಳು ಉಂಟಾಗುತ್ತದೆ, ಏಕೆಂದರೆ, ಒಂದು ದರ್ಪಣದಲ್ಲಿನ ಪ್ರತಿಬಂಬವು ಮತ್ತೊಂದು ದರ್ಪಣಕ್ಕೆ ವಸ್ತುವಾಗುತ್ತದೆ.

15. ಎರಡು ವರ್ಷಗಳು ಪರಸ್ಪರ ಲಂಬಕೋನದಲ್ಲಿ ಸಂಧಿಸಿದೆ. ಅವುಗಳಲ್ಲಿ ಒಂದರ ಮೇಲೆ ಬೆಳಕಿನ ಕಿರಣವೊಂದು 30° ಕೋನದಲ್ಲಿ ಚಿತ್ರ 16.19ರಲ್ಲಿ ತೋರಿರುವಂತೆ ಬೀಳುತ್ತದೆ. ಎರಡನೇ ದರ್ಪಣದಿಂದ ಪ್ರತಿಫಲನವಾಗುವ ಕಿರಣವನ್ನು ಎಳೆಯಿರಿ.

16. ಬೂಝೋನ್ ಸಮತಲ ದರ್ಪಣದ ಪಕ್ಕದಲ್ಲಿ ‘A’ ಬಿಂದುವಿನಲ್ಲಿ ಚಿತ್ರ 16.20ರಲ್ಲಿ ತೋರಿಸಿರುವಂತೆ ನಿಲ್ಲುತ್ತಾನೆ. ಅವನು ದರ್ಪಣದಲ್ಲಿ ತನ್ನನ್ನು ತಾನು ಕಾಣಬಲ್ಲನೇ? ಜೊತೆಗೆ P, Q ಮತ್ತು R ಗಳಲ್ಲಿರುವ ವಸ್ತುಗಳ ಪ್ರತಿಬಿಂಬಗಳನ್ನೂ ಕಾಣಬಲ್ಲನೇ?

ಉತ್ತರ: ಸಮತಲ ದರ್ಪಣದಲ್ಲಿ, ವಸ್ತುವು ದರ್ಪಣದ ಮುಂದೆ ಎಷ್ಟು ದೂರದಲ್ಲಿ ಇರುತ್ತದೆಯೋ ಮಿಥ್ಯ ಪ್ರತಿಬಿಂಬದ ದರ್ಪಣದ ಹಿಂದೆ ಅಷ್ಟೇ ದೂರದಲ್ಲಿ ಉಂಟಾಗುತ್ತದೆ. A ಯು ತನ್ನ ಬಿಂಬವನ್ನು ನೋಡಲಾರನು, ಕರಣ ದರ್ಪಣವು ತನ್ನ ಕಡೆಗೆ ಗಿಡ್ಡದಾಗಿದೆ. ಆದರೆ, ಅವನು ದರ್ಪಣದಲ್ಲಿ P ಮತ್ತು Q ಗಳ ಬಿಂಬಗಳನ್ನು ನೋಡಬಹುದು. ಆದರೆ, R ನ ಬಿಂಬವನ್ನು ನೋಡಲಾರನು.

17. (a) ಬಿಂದು ‘A’ ನಲ್ಲಿರುವ ವಸ್ತುವೊಂದರ ಪ್ರತಿಬಿಂಬದ ಸ್ಥಾನವನ್ನು ಸಮತಲ ದರ್ಪಣದಲ್ಲಿ ಕಂಡು ಹಿಡಿಯಿರಿ. B ನಲ್ಲಿರುವ ಪಹೇಲಿಯ ಈ ಪ್ರತಿಬಿಂಬವನ್ನು ಕಾಣುವಳೇ

(c) ‘C’ ನಲ್ಲಿರುವ ಬೂಝೋ ಸಹ ಈ ಪ್ರತಿಬಿಂಬವನ್ನು ಕಾಣಬಲ್ಲನೇ?

(d) ಪಹೇಲಿಯು ‘B’ ಇಂದ ‘C ಗೆ ಚಲಿಸಿದರೆ, ‘A’ ನ ಪ್ರತಿಬಿಂಬು ಎಲ್ಲಿಗೆ ಚಲಿಸುತ್ತದೆ!

ಉತ್ತರ :

ಹೆಚ್ಚುವರಿ ಪ್ರಶ್ನೆಗಳು:

18. ಚದುರುವಿಕೆ ಎಂದರೇನು?

ಬೆಳಕನ್ನು ಅದರ ಘಟಕ ಬಣ್ಣಗಳನ್ನಾಗಿ ವಿಭಜಿಸುವುದನ್ನು ಚದುರುವಿಕೆ ಎನ್ನುತ್ತಾರೆ.

19. ಪ್ರತಿದೀಪ್ತ ವಸ್ತುಗಳು ಎಂದರೇನು?

ಬೇರೆ ವಸ್ತುಗಳ ಬೆಳಕಿನಿಂದ ಹೊಳೆಯುವ ವಸ್ತುಗಳನ್ನು ಪ್ರತಿದೀಪ್ತ ವಸ್ತುಗಳು ಎಂದು ಕರೆಯುತ್ತೇವೆ.

20. ಸ್ವಯಂ ಪ್ರಕಾಶವುಳ್ಳ ವಸ್ತುಗಳು ಎಂದರೇನು?

ಸ್ವಂತ ಬೆಳಕನ್ನು ಹೊರಸೂಸುವ ವಸ್ತುಗಳನ್ನು ಸ್ವಯಂ ಪ್ರಕಾಶವುಳ್ಳ ವಸ್ತುಗಳು ಎನ್ನುವರು.

21. ಮಾನವರ ಕಣ್ಣಿನ ಭಾಗಗಳನ್ನು ಪಟ್ಟಿಮಾಡಿ,

ಉತ್ತರ: ಮಾನವನ ಕಣ್ಣಿನ ಭಾಗಗಳೆಂದರೆ, ಕಾರ್ನಿಯಾ, ಐರಿಸ್, ಪಾಪೆ, ಮಸೂರ, ಅಕ್ಷಿಪಟಲ ಮತ್ತು ದೃಷ್ಟಿನರ

22. ಬೆಳಕಿಗೆ ಪ್ರತಿಫಲನದ ನಿಯಮಗಳನ್ನು ತೋರಿಸುವ ಚಿತ್ರ ಬರೆದು ಭಾಗಗಳನ್ನು ಹೆಸರಿಸಿ

23. ಮಾನವರ ಕಣ್ಣಿನ ರಚನೆ ಮತ್ತು ಕಾರ್ಯವನ್ನು ವಿವರಿಸಿ.

ಉತ್ತರ: ಕಣ್ಣು ಹೆಚ್ಚು ಕಡಿಮೆ ಗೋಳಾಕಾರವಾಗಿದೆ. ಕಣ್ಣಿನ ಹೊರ ಕವಚವು ಬಿಳಿಯಾಗಿದೆ. ಇದು ಕಠಿಣವಾಗಿರುವುದರಿಂದ ಕಣ್ಣಿನ ಒಳಭಾಗವನ್ನು ಅಪಘಾತಗಳಿಂದ ರಕ್ಷಿಸಬಹುದು, ಇದರ ಪಾರದರ್ಶಕ ಮುಂಭಾಗವನ್ನು ಕಾರ್ನಿಯಾ ಎಂದು ಕರೆಯುವರು. ಕಾರ್ನಿಯಾದ ಹಿಂಭಾಗದಲ್ಲಿ ಕಪ್ಪಾದ ಸ್ನಾಯು ರಚನೆಯಿದ್ದು ಅದನ್ನು ಐರಿಸ್ ಎಂದು ಕರೆಯಲಾಗುತ್ತದೆ ಐರಿಸ್‌ನಲ್ಲಿ ಸಣ್ಣ ರಂಧ್ರವಿದ್ದು ಅದನ್ನು ಪಾಪೆ ಎಂದು ಕರೆಯುವರು: ಭಾಷೆಯ ಗಾತ್ರವನ್ನು ಐರಿಸ್ ನಿಯಂತ್ರಿಸುತ್ತದೆ, ಕಣ್ಣಿಗೆ ವಿಶಿಷ್ಟವಾದ ಬಣ್ಣ ನೀಡುವ ಭಾಗವೇ ಐರಿಸ್, ಕಣ್ಣಿನ ಪಾಪೆಯ ಹಿಂಭಾಗದ ಮಧ್ಯದಲ್ಲಿ ದಪ್ಪನಾಗಿರುವ ಒಂದು ಮಸೂರವಿದೆ. ಮಸೂರವು ಕಣ್ಣಿನ ಹಿಂಭಾಗದಲ್ಲಿರುವ ಅಕ್ಷಿಪಟಲ ಎನ್ನುವ ಪದರದ ಮೇಲೆ ಬೆಳಕನ್ನು ಕೇಂದ್ರೀಕರಿಸುತ್ತದೆ. ಅಕ್ಷಿಪಟಲವು ಅನೇಕ ನರಕೋಶಗಳನ್ನು ಹೊಂದಿದೆ. ನರಕೋಪಗಳು, ಗ್ರಹಿಸಿದ ಸಂವೇದನೆಗಳನ್ನು ದೃಷ್ಟಿನರದ ಮೂಲಕ ಮೆದುಳಿಗೆ ಕಳುಹಿಸಲಾಗುತ್ತದೆ.

ಎರಡು ರೀತಿಯ ಜೀವಕೋಶಗಳಿವೆ.

(i) ಶಂಕು ಕೋಶಗಳು, ಇವು ಪ್ರಕಾಶಮಾನವಾದ ಬೆಳಕಿಗೆ ಸ್ಪಂದಿಸುತ್ತದೆ ಮತ್ತು

(ii) ಕಂಬಿಕೋಶಗಳು ಇವು ಮಂದ ಬೆಳಕಿಗೆ ಸ್ಪಂದಿಸುತ್ತದೆ,

ಶಂಕುಕೋಶಗಳು : ಬಣ್ಣಗಳನ್ನು ಗ್ರಹಿಸುತ್ತವೆ. ದೃಷ್ಟಿನರ ಮತ್ತು ಅಕ್ಷಿಪಟಲಗಳು ಸಂಧಿಸುವಲ್ಲಿ ಸಂವೇದನಾ ಕೋಶಗಳು ಅಲ್ಲದಿರುವುದರಿಂದ ಆ ಪ್ರದೇಶದಲ್ಲಿ ದೃಷ್ಟಿಗ್ರಹಿಗೆ ಸಾಧ್ಯವಿಲ್ಲ. ಆ ಸ್ಥಳವನ್ನು ಅಂಧ ಪ್ರದೇಶ ಎಂದು ಕರೆಯುವರು. ಅಕ್ಷಿಪಟಲದ ಮೇಲೆ ಅಚ್ಚಾದ ಬಿಂಬವು ತಕ್ಷಣವೇ ಕಣ್ಮರೆಯಾಗುವುದಿಲ್ಲ. ಅದು ಸೆಕೆಂಡಿನ 1/16 ರಷ್ಟು ಕಾಲ ಧೃಢವಾಗಿ ಅಲ್ಲಿಯೇ ಇರುತ್ತದೆ.

24. ಉತ್ತಮ ದೃಷ್ಟಿಗಾಗಿ ನಾವು ಯಾವ ಆಹಾರಗಳನ್ನು ಸೇವಿಸಬೇಕು?

ಉತ್ತರ: ಉತ್ತಮ ದೃಷ್ಟಿಗಾಗಿ ಪ್ರತಿಯೊಬ್ಬರೂ, ಎ ಜೀವಸತ್ವ ಘಟಕಗಳಿರುವ ಆಹಾರವನ್ನು ಸೇವಿಸುವುದು ಅಗತ್ಯ ಹಸಿ ಕ್ಯಾರೆಟ್, ಗೆಡ್ಡೆಕೋಸು ಮುತ್ತು ಹಸಿರು ತರಕಾರಿಗಳು (ಸೊಪ್ಪುಗಳು) ಮೀನಿನ ಎಣ್ಣೆ ಮುಂತಾದವು ಎ ಜೀವಸತ್ವಭರಿತವಾಗಿದೆ. ಮೊಟ್ಟೆ, ಹಾಲು, ಮೊಸರು, ಗಿಣ್ಣು, ಬೆಣ್ಣೆ ಮತ್ತು ಪಪ್ಪಾಯಿ ಹಾಗೂ ಮಾವಿನಂತಹ ಹಣ್ಣುಗಳು ಸಹ ಎ ಜೀವಸತ್ವಭರಿತವಾಗಿದೆ.

FAQ :

1. ಚದುರುವಿಕೆ ಎಂದರೇನು?

ಬೆಳಕನ್ನು ಅದರ ಘಟಕ ಬಣ್ಣಗಳನ್ನಾಗಿ ವಿಭಜಿಸುವುದನ್ನು ಚದುರುವಿಕೆ ಎನ್ನುತ್ತಾರೆ.

2. ಸ್ವಯಂ ಪ್ರಕಾಶವುಳ್ಳ ವಸ್ತುಗಳು ಎಂದರೇನು?

ಸ್ವಂತ ಬೆಳಕನ್ನು ಹೊರಸೂಸುವ ವಸ್ತುಗಳನ್ನು ಸ್ವಯಂ ಪ್ರಕಾಶವುಳ್ಳ ವಸ್ತುಗಳು ಎನ್ನುವರು.

ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

8th Standard Kannada Text Book Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *