8ನೇ ತರಗತಿ ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ವಿಜ್ಞಾನ ನೋಟ್ಸ್‌ | 8th Standard Science Chapter 1 Notes in Kannada

8ನೇ ತರಗತಿ ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 8th Standard Science Chapter 1 Notes Question Answer in Kannada Medium Kseeb Solutions For Class 8 Science Chapter 1 Notes 8th Class Beleya Utpadane Mattu Nirvahane Vignana Notes Pdf 2022 8th Standard Science 1st Lesson Notes

8th Standard Science Chapter 1 Notes in Kannada

8th Standard Science Chapter 1 Notes in Kannada

01) ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿ,

(a) ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಿ ಬೆಳೆಸುವುದನ್ನು ಬೆಳೆ ಎನ್ನುತ್ತಾರೆ.

(b) ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣಿನ ಪೂರ್ವಸಿದ್ಧತೆ ಮೊದಲ ಹಂತವಾಗಿದೆ.

(C) ಹಾನಿಗೊಳಗಾದ ಬೀಜಗಳು ನೀರಿನ ಮೇಲೆ ತೇಲುತ್ತದೆ.

(d) ಬೆಳೆಯುತ್ತಿರುವ ಬೆಳೆಗೆ ಸಾಕಷ್ಟು ಸೌರಬೆಳಕು ಮತ್ತು ಮಣ್ಣಿನಿಂದ ನೀರು ಮತ್ತು ಪೋಷಕಾಂಶಗಳು ಅಗತ್ಯವಾಗಿ ಬೇಕು,

2) A ಪಟ್ಟಿಯಲ್ಲಿರುವ ಪ್ರಮುಖ ಪದಗಳೊಂದಿಗೆ B ಪಟ್ಟಿಯಲ್ಲಿರುವ ಅಂಶಗಳನ್ನು ಹೊಂದಿಸಿ ಬರೆಯಿರಿ

A B

ಖಾರಿಫ್ ಬೆಳೆಗಳು ಭತ್ತ ಮತ್ತು ಜೋಳ

ರಬಿ ಬೆಳೆಗಳು ಗೋಧಿ, ಕಡಲೆ, ಬಟಾಣಿ

ರಾಸಾಯನಿಕ ಗೊಬ್ಬರಗಳು ಯೂರಿಯಾ ಮತ್ತು ಸೂಪರ್ ಫಾಸ್ಪೇಟ್

ಸಾವಯವ ಗೊಬ್ಬರ ಪ್ರಾಣಿತ್ಯಾಜ್ಯ, ಸಗಣಿ, ಮೂತ್ರ ಮತ್ತು ಸಸ್ಯತ್ಯಾಜ್ಯ

3) ಈ ಕೆಳಗಿನ ಪ್ರತಿಯೊಂದರ ಬಗ್ಗೆ ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ,

(a) ಮಣ್ಣನ್ನು ಸಿದ್ಧಗೊಳಿಸುವಿಕ (b) ಬಿತ್ತನೆ

(c) ಕಳೆ ನಿವಾರಣೆ (d) ಒಕ್ಕಣೆ

(a) ಮಣ್ಣನ್ನು ಸಿದ್ಧಗೊಳಿಸುವಿಕೆ: ಬೆಳೆಯನ್ನು ಬೆಳೆಯುವ ಮೊದಲು ಮಣ್ಣನ್ನು ಹದಗೊಳಿಸುವುದು ಕೃಷಿಯು ಮೊದಲ ಹಂತವಾಗಿದೆ. ಕೃಷಿಯಲ್ಲಿನ ಬಹುಮುಖ್ಯ ಕಾರ್ಯವೆಂದರೆ, ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿಸುವುದು. ಇದರಿಂದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ. ಮಣ್ಣಿನಲ್ಲಿರುವ ಎರೆಹುಳುಗಳು ಮತ್ತು ಸೂಕ್ಷ್ಮಜೀವಿಗಳು ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುತ್ತದೆ ಮತ್ತು ಅದಕ್ಕೆ ಹೊಮಸ್ಸನ್ನು ಸೇರಿಸುತ್ತವೆ. ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎನ್ನುತ್ತಾರೆ. ಮಣ್ಣು ಸಡಿಲಗೊಳಿಸುವ ಪ್ರಕ್ರಿಯೆಯು ಪೋಷಕಾಂಶದಿಂದ ಸಮೃದ್ಧವಾದ ಮಣ್ಣನ್ನು ಮೇಲ್ಬಾಗಕ್ಕೆ ತರುತ್ತದೆ. ಈ ಪೋಷಕಾಂಶಗಳನ್ನು ಸಸ್ಯಗಳು ಬಳಸಿಕೊಳ್ಳುತ್ತವೆ.

(b) ಬಿತ್ತನೆ: ಬಿತ್ತನೆಯು ಬೆಳೆ ಉತ್ಪಾದನೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಬಿತ್ತನೆಗೆ ಮೊದಲು ಒಳ್ಳೆಯ ತಳಿಯ, ಆರೋಗ್ಯಕರ, ಸ್ವಚ್ಛ ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ದುಕೊಳ್ಳಲಾಗುತ್ತದೆ. ರೈತರು ಅಧಿಕ ಇಳುವರಿ ನೀಡುವ ಬೀಜಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಬಿತ್ತನೆಯನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಸಲಕರಣೆಗಳಿಂದ ಅಥವ ಯಾಂತ್ರಿಕ ಕೂರಿಗೆಯಿಂದ ಮಾಡಲಾಗುತ್ತದೆ. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆಯ ಒಂದು ಆಲಿಕೆಯ ಆಕಾರದಲ್ಲಿರುತ್ತದೆ. ಹಿಂದಿನ ಕಾಲದಲ್ಲಿ ಇವನ್ನು ಹೆಚ್ಚು ಬಳಸಲಾಗುತ್ತಿತ್ತು, ಈಗಿನ ದಿನಗಳಲ್ಲಿ ಟ್ರ್ಯಾಕ್ಟ‌ನ ಸಹಾಯದಿಂದ ಯಾಂತ್ರಿಕ ಕೂರಿಗೆಯನ್ನು ಬಳಸಿ ಬಿತ್ತನೆ ಮಾಡಲಾಗುತ್ತಿದೆ. ಈ ಸಲಕರಣೆಯು ಸರಿಯಾದ ಆಳದಲ್ಲಿ ಮತ್ತು ಅಂತರಗಳಲ್ಲಿ ಒಂದೇ ರೀತಿಯಾಗಿ ಬೀಜಗಳನ್ನು ಬಿತ್ತನೆ ಮಾಡುತ್ತದೆ. ಯಾಂತ್ರಿಕ ಕೂರಿಗೆಯಿಂದ ಮಾಡುವ ಬಿತ್ತನೆಯು ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ,

(c) ಕಳೆ ನಿವಾರಣೆ: ಬೆಳೆಯ ಜೊತೆಗೆ ಬೆಳೆಯದ ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎನ್ನುವರು. ಕಳಗಳನ್ನು ತೆಗೆದುಹಾಕುವುದಕ್ಕೆ ಕಳೆ ಕೀಳುವಿಕೆ ಎನ್ನುವರು. ಕಳೆಗಳು ನೀರು, ಪೋಷಕಾಂಶಗಳು, ಸ್ಥಳ ಮತ್ತು ಬೆಳಕಿಗಾಗಿ ಬೆಳೆಗಳೊಂದಿಗೆ ಸ್ಪರ್ಧೆ ನಡೆಸುವುದರಿಂದ ಬೆಳೆಗಳ ಬೆಳೆಯುವಿಕೆಗೆ ಅವು ಹಾನಿಯುಂಟುಮಾಡುತ್ತದೆ. ಇದರಿಂದ ಇಳುದರಿಯು ಕಡಿಮೆಯಾಗುತ್ತದೆ. ಆದ್ದರಿಂದ, ಕಳೆ ಕೀಳುವಿಕೆಯ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಕಳೆ ಕೀಳುವಿಕೆಯ ಕೆಲವು ವಿಧಾನಗಳು ಹೀಗಿದೆ:

(i) ಕಳೆನಾಶಕಗಳು ಎಂದು ಕರೆಯಲ್ಪಡುವ ಕೆಲವು ರಾಸಾಯನಿಕಗಳನ್ನು ಬಳಸುವುದರಿಂದ ಕಳೆಗಳನ್ನು ನಿಯಂತ್ರಿಸಬಹುದು. ಇವುಗಳಿಂದ ಬೆಳೆಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ.

(ii) ಬೆಳೆಗಳ ಬಿತ್ತನೆಗೆ ಮೊದಲು ಉಳುಮೆ ಮಾಡುದಿಕೆಯು ಕಳೆಗಳನ್ನು ಬುಡಮೇಲಾಗಿಸಿ ನಾಶಪಡಿಸುತ್ತದೆ. ಕಳೆಗಳು. ಹೂವು ಮತ್ತು ಬೀಜಗಳನ್ನು ಬಿಡುವ ಮೊದಲು ಅವುಗಳನ್ನು ಕಿತ್ತು ಹಾಕಬೇಕು,

(iii) ಕಾಲಕಾಲಕ್ಕೆ ಕಳೆಗಳನ್ನು ಬುಡಸಹಿತ ಕಿತ್ತುಹಾಕುವುದು ಅಥವಾ ನೆಲಮಟ್ಟಕ್ಕೆ ಅವುಗಳನ್ನು ಕತ್ತರಿಸುವುದು ಕೈಗಳಿಂದ ಕಳೆಗಳನ್ನು ನಿವಾರಿಸುವ ವಿಧಾನವಾಗಿದೆ. ಇದನ್ನು ಕುರ್ಪಿ ಅಥವಾ ಬರ್ಚಿಗೆ ಎಂದು ಕರೆಯುವ ಸಣ್ಣ ಕತ್ತಿಗಳಿಂದ ಮಾಡಲಾಗುತ್ತದೆ. ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಗಳನ್ನೂ ಸಹ ಬಳಸಲಾಗುತ್ತದೆ.

(d) ಒಕ್ಕಣೆ: ಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಒಕ್ಕಣೆ ಎನ್ನುವರು, ಇದನ್ನು ‘ಕಂಬೈನ್’ ಎಂದು ಕರೆಯುವ ಯಂತ್ರದಿಂದ ನಡೆಸಲಾಗುತ್ತದೆ. ವಾಸ್ತವವಾಗಿ ಕಂಟೈನ್ ಎಂಬುದು ಹಾರ್ದೆಸ್ಟರ್ ಮತ್ತು ಒಕ್ಕುದ ಚಿತ್ರಗಳ ಜೋಡಣೆಯಾಗಿದೆ. ಇದು ಸಸ್ಯಗಳನ್ನು ಕಟಾವು ಮಾಡುವುದರ ಜೊತೆಗೆ ಕಾಳುಗಳನ್ನು ಶುದ್ದೀಕರಿಸುತ್ತಿದೆ.

4) ರಸಗೊಬ್ಬರಗಳು ಸಾವಯುವ ಗೊಬ್ಬರಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ವಿವರಿಸಿ

ಉತ್ತರ: ರಸಗೊಬ್ಬರಗಳು ಮತ್ತು ಸಾವಯವ ಗೊಬ್ಬರ ನಡುವಿನ ವ್ಯತ್ಯಾಸಗಳು:

ರಸಗೊಬ್ಬರಗಳುಸಾವಯವ ಗೊಬ್ಬರಗಳು
ರಸಗೊಬ್ಬರವು ಮಾನವ ನಿರ್ಮಿತ ನೀರಯವದ ಲವಣ,11) ಸಾವಯವ ಗೊಬ್ಬರವು ಒಂದು ನೈಸರ್ಗಿಕ ಪದಾರ್ಥವಾಗಿದ್ದು, ಅದನ್ನು ಸಗಣಿ ಮತ್ತು ಸಸ್ಯಗಳ ಉಳಿಕೆಗಳ ವಿಘಟನೆಯಿಂದ ಪಡೆಯಲಾಗುತ್ತದೆ.
ರಸಗೊಬ್ಬರಗಳನ್ನು ಕಾರ್ಖಾನೆಗಳಲ್ಲಿ ಉತ್ಪಾದಿಸುತ್ತಾರೆಸಾವಯವ ಗೊಬ್ಬರಗಳನ್ನು ಬಯಲುಗಳಲ್ಲಿ ಉತ್ಪಾದಿಸಬಹುದು
ರಸಗೊಬ್ಬರಗಳು ಯಾವುದೇ ರೀತಿಯ ಹೂಮಸ್ ಅನ್ನು ಮಣ್ಣಿಗೆ ಒದಗಿಸುವುದಿಲ್ಲ.ಸಾವಯವ ಗೊಬ್ಬರವು ಸಾಕಷ್ಟು ಹೂಮರ್ ಅನ್ನು ಮಣ್ಣಿಗೆ ಒದಗಿಸುತ್ತದೆ.
ರಸಗೊಬ್ಬರಗಳು ನೈಟ್ರೋಜನ್ ಪಾಸ್ಪರಸ್ ಮತ್ತು ಪೊಟ್ಯಾಸಿಯಂಗಳಂತಹ ಸಸ್ಯಪೋಷಕಗಳಿಂದ ಸಮೃದ್ಧವಾಗಿದೆ.ಸಾಪೇಕ್ಷವಾಗಿ ಸಾವಯವ ಗೊಬ್ಬರವು ಸಸ್ಯಪೋಷಕಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿವೆ,
ರಸಗೊಬ್ಬರಗಳನ್ನು ಬಳಸುವಾಗ ಸೂಕ್ತ ಪ್ರಮಾಣ, ಅವಧಿ ಪ್ರಮಾಣದಲ್ಲಿ ಹೊಂದಿದೆಸಾವಯವ ಗೊಬ್ಬರಗಳನ್ನು ಬಳಸಲು ಸೂಕ್ತ ಪ್ರಮಾಣ, ಅವಧಿ ಮುಂತಾದ ವಿಶೇಷ ಮಾರ್ಗದರ್ಶದ ಅಗತ್ಯವಿರುತ್ತದೆ
ಇದರ ಅತಿಯಾದ ಬಳಕೆಯು ಪ್ರಕೃತಿಗೆ ಹಾನಿ ಉಂಟು ಮಾಡುತ್ತದೆ

ಇದರ ಅತಿಯಾದ ಬಳಕೆಯು ಪ್ರಕೃತಿಗೆ ಯಾವುದೇ ಹಾನಿಉಂಟುಮಾಡುವುದಿಲ್ಲ.

5) ನೀರಾವರಿ ಎಂದರೇನು? ನೀರನ್ನು ಉಳಿತಾಯ ಮಾಡುವ ನೀರಾವರಿಯ ಎರಡು ವಿಧಾನಗಳನ್ನು ವಿವರಿಸಿ.

ಉತ್ತರ: ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದಕ್ಕೆ ನೀರಾವರಿ ಎಂದು ಕರೆಯುತ್ತಾರೆ. ನೀರನ್ನು ಉಳಿತಾಯ ಮಾಡದ ನೀರಾದರಿಯ ಎರಡು ವಿಧಾನಗಳೆ೦ದರೆ,

(1) ತುಂತುರು ನೀರಾವರಿ: ಸಾಕಷ್ಟು ನೀರಿನ ಲಭ್ಯತೆ ಇಲ್ಲದ ಮತ್ತು ಅಸಮವಾದ ಭೂಮಿಗೆ ಈ ವಿಧಾನವು ಹೆಚ್ಚು ಉಪಯುಕ್ತವಾಗಿದೆ. ಇಲ್ಲಿ ತುದಿಯಲ್ಲಿ ತಿರುಗುವ ನಳಿಕೆಯನ್ನು ಹೊಂದಿರುವ ಕೊಳವೆಗಳನ್ನು ಮುಖ್ಯ ಕೊಳವೆಗೆ ನಿಯಮಿತ ಅಂತರಗಳಲ್ಲಿ ಲಂಬವಾಗಿ ನಿಲ್ಲುವಂತೆ ಜೋಡಿಸಲಾಗಿರುತ್ತದೆ. ಒಂದು ಮೋಟಾರ್ ಪಂಪ್‌ ಸಹಾಯದಿಂದ ನೀರನ್ನು ಹೆಚ್ಚು ಒತ್ತಡದಲ್ಲಿ ಮುಖ್ಯ ಕೊಳವೆಗೆ ಹರಿಯುವಂತೆ ಮಾಡಿದರೆ ಅದು ತಿರುಗುವ ಹಳಿಕೆಗಳ ಮೂಲಕ ಹೊರಚಿದುತ್ತದೆ, ಇದು ಮಳೆಯಂತೆ ಬೆಳೆಗಳ ಮೇಲೆ ಬೀಳುತ್ತದೆ.

(2) ಹನಿ ನೀರಾವರಿ: ಈ ವಿಧಾನದಲ್ಲಿ ನೀರು ಹನಿ ಹನಿಯಾಗಿ ಬೇರುಗಳ ಬಳಿ ಬೀಳುತ್ತದೆ. ಆದ್ದರಿಂದ ಇದನ್ನು hನಿ ನೀರಾವರಿ ವಿಧಾನ ಎನ್ನುತ್ತಾರೆ, ಇದು ಹಣ್ಣಿನ ಗಿಡಗಳಿಗೆ, ಉದ್ಯಾನಗಳಿಗೆ ಮತ್ತು ಮರಗಳಿಗೆ ನೀರು ಹಾಯಿಸುವ ಅತ್ಯುತ್ತಮ

6. ಸಸ್ಯ ಅಥವಾ ಪ್ರಾಣಿ ತ್ಯಾಜ್ಯಗಳ ವಿಘಟನೆಯಿಂದ ಪಡೆಯಲಾಗುವ ಗೊಬ್ಬರವನ್ನು ಸಾವಯವ ಗೊಬ್ಬರ ಎನ್ನುವರು,

7. ಮಣ್ಣಿಗೆ ಪೋಷಕಾಂಶಗಳನ್ನು ಸೇರಿಸಲು ಜಮೀನಿಗೆ ಗೊಬ್ಬರಗಳನ್ನು ಹಾಕುವ ಪ್ರಕ್ರಿಯೆಯನ್ನು ಗೊಬ್ಬರನೀಡಿಕೆ ಎನ್ನುತ್ತಾರೆ.

8. ಯಜಮಾನದ ಆಧಾರದ ಮೇಲೆ ಭಾರತದಲ್ಲಿ ಬೆಳೆಗಳನ್ನು ಎಷ್ಟು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ? ಹೆಸರಿಸಿ

ಉತ್ತರ: ಋತುಮಾನದ ಆಧಾರದ ಮೇಲೆ ಭಾರತದಲ್ಲಿ ಬೆಳೆಗಳನ್ನು ವಿಶಾಲವಾಗಿ ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ –

ರಬಿ ಮತ್ತು ಖಾರಿಫ್ ಬೆಳೆಗಳು.

9. ಪಶುಸಂಗೋಪನೆ ಎಂದರೇನು ?

ಉತ್ತರ: ಪ್ರಾಣಿಗಳಿಂದಲೂ ಸಹ ಆಹಾರವನ್ನು ಪಡೆಯಲಾಗುತ್ತದೆ ಮತ್ತು ಅದಕ್ಕಾಗಿ ಪ್ರಾಣಿಗಳನ್ನು ಸಾಕುತ್ತಾರೆ ಇದನ್ನು ಪಶುಸಂಗೋಪನೆ ಎನ್ನಲಾಗುತ್ತದೆ.

10. ದೇಶದ ವಿಭಿನ್ನ ಭಾಗಗಳಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತದೆ, ಏಕೆ?

ಉತ್ತರ: ಉಷ್ಣಾಂಶ, ತೇವಾಂಶ ಮತ್ತು ಮಳೆಯ ಪ್ರಮಾಣಗಳಂತಹ ಹವಾಮಾನ ಪರಿಸ್ಥಿತಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತದೆ. ಇದರಿಂದಾಗಿಯೇ ದೇಶದ ವಿಭಿನ್ನ ಭಾಗಗಳಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತದೆ.

11. ಖಾರಿಪ್‌ ಬೆಳೆಗಳು ಎಂದರೇನು ಉದಾಹರಣೆ ಕೊಡಿ

ಉತ್ತರ: ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ಖಾರಿಫ್ ಬೆಳಗಳು ಎನ್ನುವರು. ಭಾರತದಲ್ಲಿ ಮಳೆಗಾಲವು ಸಾಮಾನ್ಯವಾಗಿ ಜೂನ್‌ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಭತ್ತ, ಜೋಳ, ಸೋಯಾಬೀನ್, ನೆಲಗಡಲೆ, ಹತ್ತಿ ಇತ್ಯಾದಿಗಳು ಖಾರಿಫ್

12. ರಬಿ ಬೆಳೆಗಳು ಎಂದರೇನು? ಉದಾಹರಣೆ ಕೂಡಿ,

ಉತ್ತರ: ಚಳಿಗಾಲದಲ್ಲಿ ಬೆಳೆಯುದ ಬೆಳೆಗಳಿಗೆ ರಬಿ ಬೆಳೆಗಳು ಎನ್ನುವರು, ಅವುಗಳ ಕಾಲಾವಧಿ ಸಾಮಾನ್ಯವಾಗಿ ಆಕ್ಟೋಬರ್‌ ನಿಂದ ಮಾರ್ಚ್‌ವರೆಗೆ ಇರುತ್ತದೆ, ಗೋಧಿ, ಕಾಳೆ, ಬಟಾಣಿ, ಸಾಸಿದೆ ಮತ್ತು ಅಗಸೆ ರಬಿ ಬೆಳೆಗಳಾಗಿದೆ.

13. ಕೃಷಿ ಪದ್ಧತಿಗಳು ಎಂದರೇನು?

ಉತ್ತರ: ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಚಟುದಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎಂದು ಕರೆಯಲಾಗುತ್ತದೆ.

14. ಕೃಷಿ ಪದ್ಧತಿ(ಚಟುವಟಿಕೆ)ಗಳನ್ನು ಕ್ರಮಬದ್ಧವಾಗಿ ಪಟ್ಟಿ ಮಾಡಿ,

ಉತ್ತರ: (1) ಮಣ್ಣನ್ನು ಹದಗೊಳಿಸುವಿಕೆ (1) ಬಿತ್ತನೆ (i) ಸಾವಯದ ಗೊಬ್ಬರಗಳು ಮತ್ತು ರಸಗೊಬ್ಬರಗಳನ್ನು ಸೇರಿಸುವುದು. (v) ನೀರಾವರಿ (v) ಕಳಗಳಿಂದ ರಕ್ಷಣೆ (v) ಕೊಯ್ದು (v) ಸಂಗ್ರಹಣೆ

15. ಮಣ್ಣನ್ನು ಸಣ್ಣಕಣಗಳ ಗಾತ್ರಕ್ಕೆ ಪುಡಿ ಮಾಡ ಉದ್ದೇಶಕ್ಕಾಗಿ ಬಳಸುವ ಮುಖ್ಯ ಸಲಕರಣೆಗಳಾವುವು?

ಉತ್ತರ: ಮಣ್ಣನ್ನು ಸಣ್ಣಕಣಗಳ ಗಾತ್ರಕ್ಕೆ ಪುಡಿ ಮಾಡುವ ಉದ್ದೇಶಕ್ಕಾಗಿ ಬಳಸುವ ಮುಖ್ಯ ಸಲಕರಣೆಗಳೆಂದರೆ ನೇಗಿಲು, ಎಡೆಕುಂಟೆ

16. ನೇಗಿಲ ರಚನೆ, ಉಪಯೋಗ ಮತ್ತು ಉಪಯೋಗಿಸುವ ವಿಧಾನಗಳನ್ನು ವಿವರಿಸಿ

ಉತ್ತರ: ಮಣ್ಣನ್ನು ಉಳುಮೆ ಮಾಡಲು, ಬೆಳೆಗೆ ಗೊಬ್ಬರಗಳನ್ನು ಹಾಕಲು, ಕಳೆಗಳನ್ನು ತೆಗೆಯಲು, ಮಣ್ಣನ್ನು ಪುಡಿ ಮಾಡಲು ಮುಂತಾದ ಕೆಲಸಗಳಿಗೆ ಅನಾದಿಕಾಲದಿಂದ ಇದನ್ನು ಬಳಸಲಾಗುತ್ತಿದೆ. ಈ ಸಲಕರಣೆಯನ್ನು ಮರದಿಂದ ಮಾಡಲಾಗಿದ್ದು ಎತ್ತುಗಳಿಂದ ಅಥವಾ ಇತರ ಪ್ರಾಣಿಗಳಿಂದ ಎಳೆಯಲಾಗುತ್ತದೆ. ಇದು ಬಲಯುತವಾದ, ತ್ರಿಕೋನಾಕಾರದ ಕಬ್ಬಿಣದ ಚೂರನ್ನು ಹೊಂದಿದ್ದು ಅದನ್ನು ನೇಗಿಲಿನ ಕುಳ ಎಂದು ಕರೆಯುತ್ತಾರೆ. ಉದ್ದನೆಯ ಮರದ ತುಂಡು ನೇಗಿಲಿನ ಮುಖ್ಯ ಭಾಗವಾಗಿದ್ದು ಅದನ್ನು ಈಚ ಎಂದು ಕರೆಯುತ್ತಾರೆ. ಈಚಿನ ಒಂದು ತುದಿಯಲ್ಲಿ ಹಿಡಿಗೆ (ಹೇಳಿ ಇರುತ್ತದೆ. ಇನ್ನೊಂದು ತುದಿಯನ್ನು ಎತ್ತುಗಳ ಕುತ್ತಿಗೆಯ ಮೇಲಿಡುವ ನೊಗಕ್ಕೆ ಕಟ್ಟಲಾಗುತ್ತದೆ. ಒಂದು ಜೊತೆ ಎತ್ತುಗಳು ಮತ್ತು ಒಬ್ಬ ಮನುಷ್ಯ ಸುಲಭವಾಗಿ ನೇಗಿಲನ್ನು ಬಳಸಬಹುದು.

17. ಎಡೆಕುಂಟೆಯ ಕಿರು ಪರಿಚಯ ಕೊಡಿ.

ಉತ್ತರ: ಇದೊಂದು ಸರಳವಾದ ಉಪಕರಣವಾಗಿದ್ದು ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುತ್ತಾರೆ, ಇದು ಮರ ಅಥವಾ ಕಬ್ಬಿಣದಿಂದಾದ ಉದ್ದನೆಯ ತುಂಡನ್ನು ಹೊಂದಿರುತ್ತದೆ, ಅಗಲವಾದ, ಬಲಯುತವಾದ ಮತ್ತು ಒಂದು ಕಬ್ಬಿಣದ ತಟ್ಟೆಯಂತಹ ರಚನೆಯನ್ನು ಇದರ ಒಂದು ತುದಿಯಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಇದು ಬೇಡ್‌ನಂತೆ ಕೆಲಸ ಮಾಡುತ್ತದೆ. ಇದನ್ನು ಪ್ರಾಣಿಗಳಿಂದ ಎಳೆಯಲಾಗುತ್ತದೆ.

18. ಹಾನಿಗೊಳಗಾದ ಬೀಜಗಳು ನೀರಿನ ಮೇಲೆ ಏಕೆ ತೇಲುತ್ತದೆ?

ಉತ್ತರ: ಹಾನಿಗೊಳದ ಬೀಜಗಳು ಟೊಳ್ಳಾಗಿರುವುದರಿಂದ ಆನ್ನು ಹಗುರವಾಗಿರುತ್ತದೆ. ಆದ್ದರಿಂದ ಅದು ನೀರಿನ ಮೇಲೆ ತೇಲುತ್ತದೆ.

19. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆಯಾದ ಕೂರಿಗೆ ಹೇಗೆ ಕೆಲಸ ಮಾಡುತ್ತದೆ?

ಉತ್ತರ: ಬೀಜಗಳನ್ನು ಕೂರಿಗೆಯ ಆಲಿಕೆಯಂತಹ ಭಾಗದಲ್ಲಿ ತುಂಬಲಾಗುತ್ತದೆ, ಅದು ಚೂಪಾದ ತುದಿಗಳನ್ನು ಹೊಂದಿದ ಎರಡು ಅಥವಾ ಮೂರು ಕೊಳವೆಗಳ ಮೂಲಕ ಕೆಳಗೆ ಬರುತ್ತದೆ. ಈ ತುದಿಗಳು ಮಣ್ಣಿನೊಳಕ್ಕೆ ಚುಚ್ಚಿ ಬೀಜಗಳನ್ನು ಬಿತ್ತುತ್ತದೆ.

20. ಯಾಂತ್ರಿಕ ಕೂರಿಗೆಯ ಕಾರ್ಯವೈಖರಿಯನ್ನು ವಿವರಿಸಿ.

ಉತ್ತರ: ಟ್ರಾಕ್ಟರ್‌ನ ಸಹಾಯದಿಂದ ಯಾಂತ್ರಿಕ ಕೂರಿಗೆಯನ್ನು ಬಳಸಿ ಬಿತ್ತನೆ ಮಾಡಲಾಗುತ್ತಿದೆ. ಈ ಸಲಕರಣೆಯು ಸರಿಯಾದ ಆಳದಲ್ಲಿ ಮತ್ತು ಅಂತರಗಳಲ್ಲಿ ಒಂದೇ as ಬೀಜಗಳನ್ನು ಬಿತ್ತನೆ ಮಾಡುತ್ತದೆ. ಬಿತ್ತನೆಯ ನಂತರ ಬೀಜಗಳು ಮಣ್ಣಿನಿಂದ ಮುಟ್ಟಿರುವುದನ್ನು ಇದು ಖಚಿತಪಡಿಸುತ್ತದೆ. ಪಕ್ಷಿಗಳು ಬೀಜಗಳನ್ನು ತಿಳಿದಂತೆ ಇದು ರಕ್ಷಿಸುತ್ತದೆ. ಯಾಂತ್ರಿಕ ಕೂರಿಗೆಯಿಂದ ಮಾಡುವ ಬಿತ್ತನೆಯು ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ.

21. ಬೂಜೋನ್ ಶಾಲೆಯ ಬಳಿ ಒಂದು ನರ್ಸರಿ ಇದೆ, ಅಲ್ಲಿ ಚಿಕ್ಕ ಸಸ್ಯಗಳನ್ನು ಸಣ್ಣ ಚೀಲಗಳಲ್ಲಿ ಇರಿಸಿರುವುದನ್ನು ಅದನ್ನು ನೋಡಿದೆ. ಏಕೆ ಅವುಗಳನ್ನು ಹೀಗೆ ಇರಿಸಲಾಗಿದೆ ಎಂಬುದನ್ನು ಅವನು ಯೋಚಿಸುತ್ತಾನೆ? ಅವನಿಗೆ ಅದರ ಕಾರಣವನ್ನು ತಿಳಿಸಿ,

ಉತ್ತರ: ಭತ್ತಗಳಂತಹ ಕೆಲವು ಸಸ್ಯಗಳ ಬೀಜಗಳನ್ನು ಮೊದಲು ಮಾಡಿಗಳಲ್ಲಿ ಬೆಳೆಸುತ್ತಾರೆ. ಅವು ಸಣ್ಣ ಸಸಿಗಳಾದ ನಂತರ ಅವುಗಳನ್ನು ಜಮೀನುಗಳಲ್ಲಿ ಕೈಗಳಿಂದ ಉಟ ಮಾಡಲಾಗುತ್ತಿದೆ. ಕೆಲವು ಅರಣ್ಯ ಸಸ್ಯಗಳನ್ನು ಮತ್ತು ಹೂವಿನ ಗಿಡಗಳನ್ನ ಸಹ ನರ್ಸರಿಗಳಲ್ಲಿ ಬೆಳೆಸಲಾಗುತ್ತದೆ. ಆದ್ದರಿಂದ ಆ ಸಸ್ಯಗಳನ್ನು ಹಾಗೆ ಇರಿಸಲಾಗಿದೆ.

22. ಬಿತ್ತನೆ ಮಾಡುವಾಗ ಸಸ್ಯಗಳ ಬೀಜಗಳ ನಡುವೆ ಸೂಕ್ತ ಅಂತರವಿರಬೇಕು, ಏಕೆ?

ಉತ್ತರ: ಬಿತ್ತನೆ ಮಾಡುವಾಗ ಸಸ್ಯಗಳ ಬೀಜಗಳ ಸಜೆ ಸೂಕ್ತ ಅಂತರವಿರಬೇಕು, ಏಳೆಂದರೆ, ಸಸ್ಯಗಳು ಕಪ್ಪು ಸೌರಬೆಳಕು, ಪೋಷಕಾಂಶಗಳು ಮತ್ತು ನೀರನ್ನು ಮಣ್ಣಿನಿಂದ ಪಡೆಯಲು ಇದು ಸಹಾಯಕವಾಗಿದೆ.

23. ಗೊಬ್ಬರಗಳು ಎಂದರೇನು

ಉತ್ತರ: ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಪೋಷಕಾಂಶಗಳ ರೂಪದಲ್ಲಿ ಮಣ್ಣಿಗೆ ಸೇರಿಸುವ ಪದಾರ್ಥಗಳನ್ನು ಗೊಬ್ಬರಗಳು ಎನ್ನುವರು.

24. ರಸಗೊಬ್ಬರಗಳಿಗೆ ಕೆಲವು ಉದಾಹರಣೆಗಳನ್ನು ಕೊಡಿ

ಉತ್ತರ: ರಸಗೊಬ್ಬರಗಳಿಗೆ ಕೆಲವು ಉದಾಹರಣೆಗಳೆಂದರೆ ಯೂರಿಯಾ, ಅಜೋನಿಯಂ ಸಲ್ಪೇಟ್, ಸೂಪರ್ ಫಾಸ್ಪೇಟ್, ಪೊಟ್ಯಾಷ್, ಎನ್‌ ಪಿ ಕೆ

25. ರಸಗೊಬ್ಬರಗಳು ಎಂದರೇನು?

ಉತ್ತರ: ರಸಗೊಬ್ಬರಗಳು ರಾಸಾಯನಿಕ ಪದಾರ್ಥಗಳಾಗಿದ್ದು ಒಂದು ನಿರ್ದಿಷ್ಟ ಪೋಷಕಾಂಶವನ್ನು ಹೆಚ್ಚಾಗಿ ಹೊಂದಿರುತ್ತದೆ.

26. ಸಾವಯವ ಗೊಬ್ಬರಗಳನ್ನು ರಸಗೊಬ್ಬರಗಳಿಗಿಂತ ಉತ್ತದು ಎಂದು ಏಕೆ ಪರಿಗಣಿಸಲಾಗಿದೆ?

ಉತ್ತರ: ಸಾವಯವ ಗೊಬ್ಬರಗಳನ್ನು ರಸಗೊಬ್ಬರಗಳಿಗಿಂತ ಉತ್ತರು ಎಂದು ಪರಿಗಣಿಸಲಾಗಿದೆ. ಏಕೆಂದರೆ,

ನೀರನ್ನು ಹಿಡಿದಿರುವ ಮಣ್ಣಿನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.

ಇದು ಮಣ್ಣನ್ನು ರಂಧ್ರಯುಕ್ತವಾಗಿಸುತ್ತದೆ. ಇದರಿಂದಾಗಿ, ಅನಿಲಗಳ ವಿನಿಮಯವು ಸುಲಭವಾಗುತ್ತದೆ

ಇದು ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಇದು ಮಣ್ಣಿನ ಸಂರಚನೆಯನ್ನು ಸುಧಾರಿಸುತ್ತದೆ,

27. ನೀರಾವರಿಯ ಆಕರಗಳನ್ನು ಪಟ್ಟಿಮಾಡಿ.

ಉತ್ತರ: ನೀರಾವರಿಯ ಆಕರಗಳೆಂದರೆ – ಬಾವಿಗಳು, ಕೊಳಗಳು, ಕೆರೆಗಳು, ಸರೋವರಗಳು, ನದಿಗಳು, ಅಣೆಕಟ್ಟುಗಳು

28. ನೀರಾವರಿಯ ಸಾಂಪ್ರದಾಯಿಕ ವಿಧಾನಗಳನ್ನು ಹೆಸರಿಸಿ,

ಉತ್ತರ: ನೀರಾವರಿಯ ಸಾಂಪ್ರದಾಯಿಕ ವಿಧಾನಗಳು,

1) ಅಗಳು (ರಾಟೆ ವಿಧಾನ) ) ಸರಪಳಿ ಪಂಚ್ ) ಏತ ನೀರಾವರಿ IV) ರಾಹಟ್ (ಸನ್ನೆಕೋಲು ವಿಧಾನ)

29. ಕಳೆನಾಶಕಗಳನ್ನು ಸಿಂಪಡಿಸುವಾಗ ರೈತರು ತಮ್ಮು ಮೂಗು ಮುತ್ತು ಬಾಯಿಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಏಕೆ?

ಉತ್ತರ: ಕಳೆನಾಶಕಗಳ ಸಿಂಪಡಣೆಯು ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು, ಆದ್ದರಿಂದ, ಈ ರಾಸಾಯನಿಕಗಳನ್ನು ಸಿಂಪಡಿಸುವಾಗ ಅವರು ತಮ್ಮ ದೂ ದುತ್ತು ಬಾಯಿಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು.

30. ಸಂಗ್ರಹಿಸುವ ಮೊದಲು ಕಾಳುಗಳನ್ನು ಬಿಸಿಲಿನಲ್ಲಿ ಸಮರ್ಪಕವಾಗಿ ಏಕೆ ಒಣಗಿಸಬೇಕು?

ಉತ್ತರ: ತಾಜಾ ಬೆಳೆಯು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ. ಆಗಷ್ಟೇ ಕೊಯ್ದು ಮಾಡಿದ ಕಾಳುಗಳನ್ನು (ಧಾನ್ಯಗಳನ್ನು) ಒಣಗಿಸದೇ ಸಂಗ್ರಹಿಸಿದರೆ ಅವು ಹಾಳಾಗಬಹುದು ಅಥವಾ ಕೀಟಭಾಷೆಗೊಳಪಡಬಹುದು ಅಥವಾ ಅವು ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು, ಆದ್ದರಿಂದ, ಸಂಗ್ರಹಿಸುವ ಮೊದಲು ಉಳುಗಳನ್ನು ಅವುಗಳಲ್ಲಿನ ತೇವಾಂಶ ಕಡಿಮೆಯಾಗುವಂತೆ ಬಿಸಿಲಿನಲ್ಲಿ ಸಮರ್ಪಕವಾಗಿ ಒಣಗಿಸಬೇಕು. ಇದು ಕೀಟಪೀಡೆಗಳು, ಬ್ಯಾಕ್ಟಿರಿಯಾ, ಮತ್ತು ಶಿಲೀಂಧ್ರಗಳಿಂದಾಗುವ ದಾಳಿಗಳನ್ನು ತಡೆಯುತ್ತದೆ.

FAQ :

1. ರಬಿ ಬೆಳೆಗಳು ಎಂದರೇನು? ಉದಾಹರಣೆ ಕೂಡಿ,

ಉತ್ತರ: ಚಳಿಗಾಲದಲ್ಲಿ ಬೆಳೆಯುದ ಬೆಳೆಗಳಿಗೆ ರಬಿ ಬೆಳೆಗಳು ಎನ್ನುವರು, ಅವುಗಳ ಕಾಲಾವಧಿ ಸಾಮಾನ್ಯವಾಗಿ ಆಕ್ಟೋಬರ್‌ ನಿಂದ ಮಾರ್ಚ್‌ವರೆಗೆ ಇರುತ್ತದೆ, ಗೋಧಿ, ಕಾಳೆ, ಬಟಾಣಿ, ಸಾಸಿದೆ ಮತ್ತು ಅಗಸೆ ರಬಿ ಬೆಳೆಗಳಾಗಿದೆ.

2. ರಸಗೊಬ್ಬರಗಳು ಎಂದರೇನು?

ಉತ್ತರ: ರಸಗೊಬ್ಬರಗಳು ರಾಸಾಯನಿಕ ಪದಾರ್ಥಗಳಾಗಿದ್ದು ಒಂದು ನಿರ್ದಿಷ್ಟ ಪೋಷಕಾಂಶವನ್ನು ಹೆಚ್ಚಾಗಿ ಹೊಂದಿರುತ್ತದೆ.

3. ಗೊಬ್ಬರಗಳು ಎಂದರೇನು

ಉತ್ತರ: ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಪೋಷಕಾಂಶಗಳ ರೂಪದಲ್ಲಿ ಮಣ್ಣಿಗೆ ಸೇರಿಸುವ ಪದಾರ್ಥಗಳನ್ನು ಗೊಬ್ಬರಗಳು ಎನ್ನುವರು.

ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

8th Standard Kannada Text Book Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh