8ನೇ ತರಗತಿ ಸೂಕ್ಷ್ಮ ಜೀವಿಗಳು ಮಿತ್ರ ಮತ್ತು ಶತ್ರು ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 8th Standard Science Chapter 2 Notes Question Answer in Kannada Medium Pdf Download Kseeb Solutions For Class 8 Science Chapter 2 Notes 8th Class Sukshma Jeevigalu Mitra Mattu Shatru Vignana Notes 8th Standard Science 2nd Lesson Notes
8th Standard Science Chapter 2 Notes in Kannada
1. ಬಿಟ್ಟ ಸ್ಥಳಗಳನ್ನು ತುಂಬಿರಿ
1. ಸೂಕ್ಷ್ಮಜೀವಿಗಳನ್ನು ಸೂಕ್ಷ್ಮದರ್ಶಕದ ಸಹಾಯದಿಂದ ಕಾಣಬಹುದು
2. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ನೀಲಿ ಹಸಿರು ಶೈವಲಗಳು ಗಾಳಿಯಿಂದ ನೇರವಾಗಿ ನೈಟ್ರೋಜನ್ ಅನ್ನು ಸ್ಥಿರೀಕರಿಸುತ್ತದೆ.
3. ಆಲ್ಕೋಹಾಲ್ ಅನ್ನು ಯೀಸ್ಟ್ ಸಹಾಯದಿಂದ ಉಪ್ಪಾದಿಸಲಾಗುತ್ತದೆ.
4. ಕಾಲರಾ ರೋಗವು ಬ್ಯಾಕ್ಟಿರಿಯಾ ದಿಂದ ಉಂಟಾಗುತ್ತದೆ,
2. ಸರಿಯಾದ ಉತ್ತರವನ್ನು ಬರೆಯಿರಿ
(1) ಇದರ ಉತ್ಪಾದನೆಯಲ್ಲಿ ಯೀಸ್ಟ್ ಅನ್ನು ಬಳಸಲಾಗುತ್ತದೆ.
ಉತ್ತರ: (ಅಕ್ಕೋಹಾಲ್
(2) ಈ ಕೆಳಗಿನವು ಪ್ರತಿಜೈವಿಕವಾಗಿವೆ
ಉತ್ತರ: ಸ್ಟ್ರೆಪ್ಟೋಮೈಸಿನ್
(2) ಮಲೇರಿಯಾ ರೋಗಕ್ಕೆ ಕಾರಣವಾಗುದ ಪ್ರೋಟೋಜೋವಾಗಳ ವಾಹಕ
ಅನಾಫಿಲೀಸ್ ಹಣ್ಣು ಸೊಳ್ಳೆ
(3) ಸಂಪರ್ಕದಿಂದ ಹರಡುವ ರೋಗಗಳ ಅತ್ಯಂತ ಸಾಮಾನ್ಯ ವಾಹಕ
ನೊಣ
(4) ಬ್ರೆಡ್ ಅಥವಾ ಇಡ್ಡಿಹಿಟ್ಟು ಉಬ್ಬುವುದು ಈ ಕಾರಣದಿಂದ
ಯೀಸ್ಟ್ ಕೋಶಗಳ ಬೆಳವಣಿಗೆ
(5) ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯ
ಹುದುಗುವಿಕೆ
03) A ಪಟ್ಟಿಯಲ್ಲಿ ನೀಡಿರುವ ಸೂಕ್ಷ್ಮಜೀವಿಗಳನ್ನು ಬ ಪಟ್ಟಿಯಲ್ಲಿ ಕೊಟ್ಟಿರುವ ಅವುಗಳ ಕಾರ್ಯಕ್ಕನುಗುಣವಾಗಿ ಹೊಂದಿಸಿ
A B
ಬ್ಯಾಕ್ಟಿರಿಯಾ ಕಾಲರಾಗೆ ಕಾರಣ
ರೈಜೋಬಿಯಂ ನೈಟ್ರೋಜನ್ ಸ್ಥಿರೀಕರಿಸುವುದು
ಲ್ಯಾಕ್ಟೋಬ್ಯಾಸಿಲಸ್ ಮೊಸರು ತಯಾರಿಸುವುದು
ಯೀಸ್ಟ್ ಬ್ರೆಡ್ ತಯಾರಿಸುವುದು
ಪ್ರೋಟೋಜೋವಾ ಮಲೇರಿಯಾಗೆ ಕಾರಣ
ವೈರಸ್ ಏಡ್ಸ್‌ಗೆ ಕಾರಣ
04) ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡಬಹುದೇ? ಇಲ್ಲದಿದ್ದರೆ ಅವುಗಳನ್ನು ಹೇಗೆ ನೋಡಬಹುದು?
ಉತ್ತರ: ಇಲ್ಲ, ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅವುಗಳನ್ನು ಕೇವಲ ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು.
05) ಸೂಕ್ಷ್ಮಜೀವಿಗಳ ಪ್ರಮುಖ ಗುಂಪುಗಳು ಯಾವುವು?
ಉತ್ತರ: ಸೂಕ್ಷ್ಮಜೀವಿಗಳನ್ನು ನಾಲ್ಕು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಲಾಗಿದೆ.
- ಬ್ಯಾಕ್ಟಿರಿಯಾ
- ಶಿಲೀಂಧ್ರ
- ಪ್ರೋಟೋಜೋವಾ ಮತ್ತುಶೈವಲಗಳು
06) ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳನ್ನು ಹೆಸರಿಸಿ
ಉತ್ತರ: ರೈಜೋಬಿಯಮ್ ಮತ್ತು ಕೆಲವು ನೀಲಿ ಹಸಿರು ಶೈವಲಗಳು ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳಾಗಿದೆ.
17) ನಮ್ಮ ಜೀವನದಲ್ಲಿ ಸೂಕ್ಷ್ಮಜೀವಿಗಳ ಉಪಯುಕ್ತತೆಯನ್ನು ಕುರಿತು 10 ಸಾಲುಗಳನ್ನು ಬರೆಯಿರಿ,
ಉತ್ತರ: ದೊಡ್ಡ ಪ್ರಮಾಣದಲ್ಲಿ ಮದ್ಯ, ವೈನ್ ಮತ್ತು ಆಸಿಟಿಕ್ ಅನ್ನು ಉತ್ಪಾದನೆಯಲ್ಲಿ ಸೂಕ್ಷ್ಮಜೀವಿಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಯೀಸ್ಟ್‌ಳನ್ನು ಮದ್ಯ ಮತ್ತು ವೈಟ್‌ನ ವಾಣಿಜ್ಯ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟಿರಿಯಾ ಮೊಸರು ಉಂಟಾಗುವುದನ್ನು ಉತ್ತೇಜಿಸುತ್ತದೆ, ಸೂಕ್ಷ್ಮಜೀವಿಗಳು ಸತ್ತ್ವ ಸಸ್ಯಗಳು ಮತ್ತು ಪ್ರಾಣಿಗಳ ಪಾದಯದ ತ್ಯಾಜ್ಯವನ್ನು ಸರಳ ಪದಾರ್ಥಗಳಾಗಿ ಪರಿವರ್ತಿಸುತ್ತದೆ. ಈ ವಸ್ತುಗಳನ್ನು ಇತರ ಸಸ್ಯಗಳು ಮತ್ತು ಪ್ರಾಣಿಗಳು ಮತ್ತೆ ಬಳಸುತ್ತದೆ. ರೈಜೋಬಿಯನ್ ನಂತಹ ಕೆಲವು ಬ್ಯಾಕ್ಟಿರಿಯಾಗಳು ಮತ್ತು ಕೆಲವು ನೀಲಿ ಹಸಿರು ಶೈವಲಗಳು ದುಗ್ಗಣ್ಣನ್ನು ಉತ್ಕೃಷ್ಟಗೊಳಿಸಲು ಮತ್ತು ಅದರ ಫಲವತ್ತತೆಯನ್ನು ಹೆಚ್ಚಿಸಲು ವಾತಾವರಣದಿಂದ ನೈಟ್ರೋಜನ್ ಅನ್ನು ಸ್ಥಿರಗೊಳಿಸುತ್ತವೆ. ಸೂಕ್ಷ್ಮಜೀವಿಗಳು ಔಷಧಗಳ ತಯಾರಿಕೆಯಲ್ಲಿಯೂ ಸಹ ಪ್ರಮುಖ ಪಾತ್ರವನ್ನು ವಹಿಸಿದೆ. ಕೆಲವು ಪ್ರತಿಜೈವಿಕಗಳಾದ ಹೋಮೈಸಿನ್, ಟೆಟ್ರಾಸೈಕ್ಲಿನ್ ಮತ್ತು ಎರಿಥೋಮೈಸಿನ್ ಗಳನ್ನು ತಿಲೀಂಧ್ರ ಮತ್ತು ಬ್ಯಾಕ್ಟಿರಿಯಾಗಳಿಂದ ತಯಾರಿಸಲಾಗುತ್ತದೆ. ಕೆಲವು ಸೂಕ್ಷ್ಮಜೀವಿಗಳನ್ನು, 1000, ಮತ್ತು ಕೈಗಾರಿಕಾ ತ್ಯಾಜ್ಯಗಳ ಜೈವಿಕ ಸಂಸ್ಕರಣೆಯಲ್ಲಿ ಬಳಸಲಾಗುತ್ತದೆ.
18) ಸೂಕ್ಷ್ಮಜೀವಿಗಳಿಂದ ಉಂಟಾಗುವ ಹಾನಿಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.
ಉತ್ತರ: ಹಲವಾರು ಸೂಕ್ಷ್ಮಜೀವಿಗಳು ಮಾನವರಲ್ಲಿ ಮತ್ತು ಸಸ್ಯಗಳಲ್ಲಿ ರೋಗಗಳನ್ನು ಉಂಟುಮಾಡುವುದಲ್ಲದೇ ಇತರ ಪ್ರಾಣಿಗಳಲ್ಲೂ ರೋಗಗಳನ್ನು ಉಂಟುಮಾಡುತ್ತದೆ, ಉದಾಹರಣೆಗೆ, ಆಂಫ್ರಾಕ್ ಇದೂಂದು ಬ್ಯಾಕ್ಟಿರಿಯಾದಿಂದ ಉಂಟಾಗದ ಮಾನವ ಮತ್ತು ಜಾನುವಾರುಗಳಿಗೆ ತಗುಲುವ ಭಯಾನಕ ರೋಗವಾಗಿದೆ, ಜಾನುವಾರುಗಳಿಗೆ ತಗುಲುವ ಕಾಲು ಮತ್ತು ಬಾಯಿ ರೋಗವು ಒಂದು ಜೈರಸ್ ನಿಂದ ಉಂಟಾಗುತ್ತದೆ, ಹಲವಾರು ಸೂಕ್ಷ್ಮ ಜೀವಿಗಳು ಗೋಧಿ, ಭತ್ತ, ಆಲೂಗಡ್ಡೆ, ಕಬ್ಬು, ಕಿತ್ತಳೆ, ಸೇಬು ಮುತ್ತು ಉತರ ಸಸ್ಯಗಳಲ್ಲಿ ರೋಗಗಳನ್ನು ಉಂಟುಮಾಡುತ್ತದೆ, ರೋಗಗಳು ಬೆಳಗಳ ಇಳಂದರಿಯನ್ನು ಕುಂಠಿತಗೊಳಿಸುತ್ತದೆ. ಕೆಲವು ಸೂಕ್ಷ್ಮಜೀವಿಗಳಿಂದಾಗಿ ಹಾಳಾದ ಆಹಾರದ ಸೇವನೆಯಿಂದ ‘ಆಹಾರ ವಿಷದಯ’ ಎಂಬ ಪರಿಸ್ಥಿತಿ ಉಂಟಾಗುತ್ತದೆ. ನಮ್ಮ ಆಹಾರದ ಮೇಲೆ ಬೆಳೆಯುವ ಸೂಕ್ಷ್ಮಜೀವಿಗಳು ಕೆಲವೊಮ್ಮೆ ವಿಷಕಾರಿ: ಪದಾರ್ಥಗಳನ್ನು ಉತ್ಪಾದಿಸುತ್ತದೆ. ಇವುಗಳು ಆಹಾರವನ್ನು ವಿಷಯುಕ್ತವಾಗಿ ಮಾಡುವುದರ ಮೂಲಕ ಗಂಭೀರವಾದ ಕಾಯಿಲೆಯನ್ನು ಹಾಗೂ ಸಾವನ್ನು ಕೂಡಾ ಉಂಟುಮಾಡುತ್ತವೆ.
19) ಪ್ರತಿಜೈವಿಕಗಳು ಎಂದರೇನು ಪ್ರತಿಜೈವಿಕಗಳನ್ನು ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಉತ್ತರ: ಕೆಲವು ರೋಗಕಾರಕ ಸೂಕ್ಷ್ಮಬೇವಿಗಳನ್ನು ಕೊಲ್ಲಲು ಮತ್ತು ಅವುಗಳ ಬೆಳವಣಿಗೆಯನ್ನು ನಿಲ್ಲಿಸಲು, ಕೆಲವು ಸೂಕ್ಷ್ಮಜೀವಿಗಳಿಂದಲೇ ತಯಾರಾದ ಔಷಧಿಗಳನ್ನು ಪ್ರತಿಜೈವಿಕಗಳೆಂದು ಕರೆಯಲಾಗುತ್ತದೆ.
ಪ್ರತಿಜೈವಿಕಗಳನ್ನು ತೆಗೆದುಕೊಳ್ಳುವಾಗ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು:
- ಪ್ರತಿಜೈವಿಕಗಳನ್ನು ಕೇವಲ ಮಾನ್ಯತೆ ಪಡೆದ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ತೆಗೆದುಕೊಳ್ಳಬೇಕು.
- ಪ್ರತಿಜೈವಿಕಗಳನ್ನು ತೆಗೆದುಕೊಳ್ಳಲು ವೈದ್ಯರು ತಿಳಿಸಿರುವ ಪ್ರಮಾಣ ಮತ್ತು ಆವರಿಯನ್ನು ಪೂರ್ಣಗೊಳಿಸಬೇಕು
- ಪ್ರತಿಜೈವಿಕಗಳನ್ನು ಸರಿಯಾದ ಸಮಯ ಮತ್ತು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಆರೋಗ್ಯದ ಮೇಲೆ ದುಷ್ಪರಿಕಾದು ಉಂಟಾಗಬಹುದು, ಜೀವಹಾನಿಯೂ ಉಂಟಾಗಬಹುದು,
ಹೆಚ್ಚುವರಿ ಪ್ರಶ್ನೆಗಳು:
1. ಭೇದಿ ಮತ್ತು ಮಲೇರಿಯಾಗಳಂತಹ ಗಂಭೀರ ರೋಗಗಳನ್ನು ಪ್ರೋಟೋಜೋವಾ ಗಳು ಉಂಟುಮಾಡುತ್ತದೆ.
2. ಟೈಫಾಯ್ಡ್ ಮತ್ತು ಕ್ಷಯ (ಟಿಬಿ) ರೋಗಗಳು ಬ್ಯಾಕ್ಟಿರಿಯಾಗಳಿಂದ ಉಂಟಾಗುತ್ತದೆ.
3. ಪೋಲಿಯೋ ಮತ್ತು ಸೀತಾಳೆ ಸಿಡುಬು ಮುಂತಾದ ಗಂಭೀರ ರೋಗಗಳು ವೈರಸ್ ಗಳಿಂದ ಉಂಟಾಗುತ್ತದೆ.
4. ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟಿರಿಯಾ ಮೊಸರು ಉಂಟಾಗುವುದನ್ನು ಉತ್ತೇಜಿಸುತ್ತದೆ.
5. ಆಂಥ್ರಾಕ್ಸ್ ರೋಗವನ್ನು ಉಂಟುಮಾಡುವ ಬ್ಯಾಕ್ಟಿರಿಯ: ಜೆಸಿಲಸ್ ಆಂಥ್ರಾಸಿಸ್
6. ಸಕ್ಕರೆಯು ಆಲ್ಕೋಹಾಲ್ ಆಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನು ಹುದುಗುವಿಕೆ ಎಂದು ಕರೆಯಲಾಗುತ್ತದೆ
10) ವೈರಸ್ ಗಳಿಂದ ಉಂಟಾಗುವ ಸಾಮಾನ್ಯ ಕಾಯಿಲೆಗಳನ್ನು ಹೆಸರಿಸಿ,
ಉತ್ತರ: ಸಾಮಾನ್ಯ ಕಾಯಿಲೆಗಳಾದ ಶೀತ, ಇನ್‌ಫ್ಲುಯೆಂಜಾ) ಕೆಮ್ಮು
2. ಗೋಧಿ ಅಥವಾ ಮೈದಾ ಹಿಟ್ಟು ಮತ್ತು ಬೆಚ್ಚಗಿನ ನೀರಿನ ಮಿಶ್ರಣಕ್ಕೆ ಸ್ವಲ್ಪಪ್ರಮಾಣದ ಯೀಸ್ಟ್ ಪುಡಿಯನ್ನು ಸೇರಿಸಿ ಚೆನ್ನಾಗಿ ನಾದಿ, ಮೃದುವಾದ ಹಿಟ್ಟನ್ನು ತಯಾರಿಸಿ, ಎರಡು ಗಂಟೆಗಳ ನಂತರ ನೀವು ಏನನ್ನು ಗಮನಿಸುತ್ತೀರಿ? ನೀವು ಗಮನಿಸಿದ ಅಂಶಕ್ಕೆ ಕಾರಣವನ್ನು ವಿವರಿಸಿ
ಉತ್ತರ: ಎರಡು ಗಂಟೆಗಳ ನಂತರ ನಾವು ನಾದಿದ ಹಿಟ್ಟು ಉಬ್ಬಿರುವುದನ್ನು ಗಮನಿಸುತ್ತೇವೆ. ಕಾರಣ, ಯೀಸ್ಟ್ ವೇಗವಾಗಿ ಸಂತಾನೋತ್ಪತ್ತಿ ನಡೆಸುತ್ತದೆ ಮತ್ತು ಉಸಿರಾಟದ ಸಮಯದಲ್ಲಿ ಕಾರ್ಬನ್ ಡೈಆಕ್ಸಿಡ್ ಅನ್ನು ಉತ್ಪಾದಿಸುತ್ತದೆ. ಅನಿಲದ ಗುಳ್ಳೆಗಳು ಹಿಟ್ಟಿನಲ್ಲಿ ತುಂಬುತ್ತದೆ ಮತ್ತು ಅದರ ಗಾತ್ರವನ್ನು ಹೆಚ್ಚಿಸುತ್ತದೆ.
3. ಹುದುಗುವಿಕೆಯನ್ನು ಯಾರು ಮತ್ತು ಯಾವಾಗ ಅನ್ವೇಷಿಸಿದರು?
ಉತ್ತರ: 1857ರಲ್ಲಿ ಲೂಯಿಸ್ ಫ್ಯಾಕ್ಟರ್ ಹುದುಗುವಿಕೆಯನ್ನು ಆನ್ವೇಷಿಸಿದರು.
4. ಸಿಡುಬು ರೋಗಕ್ಕೆ ಲಸಿಕೆಯನ್ನು ಯಾರು ಮತ್ತು ಯಾವಾಗ ಕಂಡುಹಿಡಿದರು.
ಉತ್ತರ: ಎಡ್ವರ್ಡ್ ಜೆನ್ನರ್ 1798ರಲ್ಲಿ ಸಿಡುಬು ರೋಗಕ್ಕೆ ಲಸಿಕೆಯನ್ನು ಕಂಡುಹಿಡಿದರು.
5. ರೋಗಕಾರಕ ಜೀವಿಗಳು ಎಂದರೇನು?
ಉತ್ತರ: ಸೂಕ್ಷ್ಮಜೀವಿಗಳು ಅನೇಕ ರೀತಿಯಲ್ಲಿ ಹಾನಿಕಾರಕಗಳಾಗಿವೆ. ಕೆಲವು ಸೂಕ್ಷ್ಮಜೀವಿಗಳು ಮನುಷ್ಯದಲ್ಲಿ, ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗಗಳನ್ನು ಉಂಟುಮಾಡುತ್ತದೆ. ಈ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ರೋಗಕಾರಕ ಜೀವಿಗಳು ಎನ್ನಲಾಗುತ್ತದೆ.
06. ಸಂಪರ್ಕದಿಂದ ಹರಡುವ ರೋಗಗಳು ಎಂದರೇನು ? ಉದಾಹರಿಸಿ,
ಉತ್ತರ: ನಾವು ಉಸಿರಾಡುದ ಗಾಳಿಯ ಮೂಲಕ, ಐಡಿಯುವ ನೀರಿನ ಮೂಲಕ ಅಥವಾ ತಿನ್ನುವ ಆಹಾರದ ಮೂಲಕ ರೋಗಕಾರಕ ಜೀವಿಗಳು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಸೋಂಕಿತ ವ್ಯಕ್ತಿಯ ನೇರ ಸಂಪರ್ಕದಿಂದ ಮತ್ತು ಪ್ರಾಣಿಗಳ ಮೂಲಕವೂ ಅವು ಹರಡುತ್ತದೆ. ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಗಾಳಿ, ನೀರು, ಆಹಾರ ಅಥವಾ ದೈಹಿಕ ಸಂಪರ್ಕದ ಮೂಲಕ ಹರಡುವ ಸೂಕ್ಷ್ಮಜೀವಿ ಕಾಯಿಲೆಗಳಿಗೆ ಸಂಪರ್ಕದಿಂದ ಹರಡುವ ರೋಗಗಳು ಎನ್ನಲಾಗುತ್ತದೆ. ಉದಾಹರಣೆ: ಕಾಲರಾ, ಸಾಮಾನ್ಯಶೀತ, ಚಿಕನ್ ಪಾಕ್ಸ್ (ಸೀತಾಳೆ ಸಿಡು) ಮತ್ತು ಕ್ಷಯರೋಗ,
7. ಆಹಾರ ಸಂರಕ್ಷಣೆಯ ಕೆಲವು ವಿಧಾನಗಳನ್ನು ಹೆಸರಿಸಿ, ಉದಾಹರಿಸಿ,
ಉತ್ತರ: ಆಹಾರ ಸಂರಕ್ಷಣೆಯ ಕೆಲವು ವಿಧಾನಗಳು
01] ರಾಸಾಯನಿಕ ವಿಧಾನ: ಸೋಡಿಯಂ ಬೆಂಡೋಯೇಟ್ ಮತ್ತು ಸೋಡಿಯಂ ಮಟಾದೈಸಟ್‌ಗಳು ರೂಢಿಯಲ್ಲಿರುವ ರಾಸಾಯನಿಕ ಸಂರಕ್ಷಕಗಳಾಗಿದೆ. ಇದ್ದುಗಳು ಜಾವ ಮತ್ತು ಹಣ್ಣಿನ ರಸಗಳ ಹಾಳಾಗುವಿಕೆಯನ್ನು ತಡೆಗಟ್ಟಲೂ ಸಹ ಬಳಕೆಯಲ್ಲಿದೆ.
02) ಅಡುಗೆ ಉಪ್ಪಿನಿಂದ ಸಂರಕ್ಷಣೆ: ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ತಡೆಗಟ್ಟಲು ಮಾಂಸ ಮತ್ತು ಮೀನನ್ನು ಶುಷ್ಕ ಉಪ್ಪಿನಿಂದ ಸಂಸ್ಕರಿಸಲಾಗುತ್ತದ, ನೆಲ್ಲಿಕಾಯಿ, ಮಾವಿನಕಾಯಿ, ಹುಣಸೆಹಣ್ಣು, ಇತ್ಯಾದಿಗಳನ್ನು ಸಂರಕ್ಷಿಸಲೂ ಸಹ ಉಪ್ಪನ್ನು ಹಚ್ಚುವ ವಿಧಾನವು ಬಳಕೆಯಾಗುತ್ತಿದೆ.
03] ಸಕ್ಕರೆಯಿಂದ ಸಂರಕ್ಷಣೆ: ಜಾಮ್, ಜೆಲ್ಲಿ, ಮತ್ತು ಹಣ್ಣಿನ ರಸಗಳು ಸಕ್ಕರೆಯಿಂದ ಸಂರಕ್ಷಿಸಲ್ಪಡುತ್ತದೆ. ತೇವಾಂಶದ ಪ್ರಮಾಣವನ್ನು ಕಡಿದು ಮಾಡುವುದರ ಮೂಲಕ ಆಹಾರವನ್ನು ಹಾಳುಮಾಡುವ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ತಡೆಗಟ್ಟುತ್ತದೆ.
04] ಎಣ್ಣೆ ಮತ್ತು ವಿನೇಗರ್‌ಗಳಿಂದ ಸಂರಕ್ಷಣೆ: ಎಣ್ಣೆ ಮತ್ತು ಎಸೆಗರ್‌ಗಳ ಬಳಕೆಯು ಉಪ್ಪಿನಕಾಯಿಯ ಕಡುವಿಕೆಯನ್ನು ತಪ್ಪಿಸುತ್ತದೆ, ಏಕೆಂದರೆ, ಆ ರೀತಿಯ ಪರಿಸರದಲ್ಲಿ ಬ್ಯಾಕ್ಟಿರಿಯಾ ಬದುಕಲಾರವು, ತರಕಾರಿಗಳು, ಹಣ್ಣುಗಳು, ಮೀನು ಮತ್ತು ಮಾಂಸಗಳನ್ನು ಸಾಮಾನ್ಯವಾಗಿ ಈ ವಿಧಾನದಿಂದ ಸಂರಕ್ಷಿಸಲಾಗುತ್ತದೆ.
05] ಶಾಖ ಮತ್ತು ತಂಪು ವಿಧಾನದಿಂದ ಸಂರಕ್ಷಣೆ : ಕುದಿಸುವುದರಿಂದಾಗಿ ಅನೇಕ ಸೂಕ್ಷ್ಮದ ಜೀವಿಗಳು ನಾಶವಾಗುತ್ತವೆ, ಇದೇ ರೀತಿ, ನಾವು ನಮ್ಮ ಆಹಾರದ್ದನ್ನು ರೆಫ್ರಿಜರೇಟರ್ ಗಳಲ್ಲಿ ಇಡುತ್ತೇವೆ. ಕಡಿಮೆ ತಾಪವು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ.
06] ಸಂಗ್ರಹಣೆ ಮತ್ತು ಮೊಟ್ಟಣ ಕಟ್ಟುವಿಕೆಯಿಂದ ಸಂರಕ್ಷಣೆ: ಸೂಕ್ಷ್ಮಜೀವಿಗಳ ದಾಳಿಯನ್ನು ತಪ್ಪಿಸುವ ಸಲುವಾಗಿ, ಇತ್ತೀಚಿನ ದಿನಗಳಲ್ಲಿ ಒಣಹಣ್ಣುಗಳು ಮತ್ತು ತರಕಾರಿಗಳನ್ನೂ ಸಹ ಗಾಳಿಯಾಡದಂತೆ ಮೊಹರು ಮಾಡಿದ ಪೊಟ್ಟಣಗಳಲ್ಲಿ ಮಾರಲಾಗುತ್ತದೆ.
ಇತರೆ ವಿಷಯಗಳು :
8th Standard Kannada Text Book Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
FAQ
ಉತ್ತರ: ಸೂಕ್ಷ್ಮಜೀವಿಗಳು ಅನೇಕ ರೀತಿಯಲ್ಲಿ ಹಾನಿಕಾರಕಗಳಾಗಿವೆ. ಕೆಲವು ಸೂಕ್ಷ್ಮಜೀವಿಗಳು ಮನುಷ್ಯದಲ್ಲಿ, ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗಗಳನ್ನು ಉಂಟುಮಾಡುತ್ತದೆ. ಈ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ರೋಗಕಾರಕ ಜೀವಿಗಳು ಎನ್ನಲಾಗುತ್ತದೆ.
ಉತ್ತರ: ಇಲ್ಲ, ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅವುಗಳನ್ನು ಕೇವಲ ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.