7ನೇ ತರಗತಿ ಭಾಗ್ಯದ ಬಳೆಗಾರ ಪದ್ಯ ನೋಟ್ಸ್, ಪ್ರಶ್ನೋತ್ತರಗಳು, 7th Standard Bhagyada Balegara Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Poem 3 Notes 7th Class Kannada 3rd Poem Notes Bhagyada Balegara Poem in Kannada Bhagyada Balegara Poem Question Answer Bhagyada Balegara Poem 7th Standard
7th Standard Kannada Bhagyada Balegara Poem Notes Pdf
7th Class Kannada Bhagyada Balegara Question Answer
ಲೇಖಕರ ಪರಿಚಯ – ಜನಪದಗೀತೆ
ನೃಪತುಂಗ ಕವಿ ಹೇಳಿದಂತೆ ಕನ್ನಡ ನಾಡಿನ ಹೆಣ್ಣು ಮಕ್ಕಳು ಕುರಿತೋದದಯ ಕಾವ್ಯ ಪ್ರಯೋಗ ಪರಿಣಿತ ಮತಿಗಳು ‘ಎಂಬುದು ಜನಪದ ಗೀತೆಗಳನ್ನು ಓದಿದಾಗ ಅನುಭವಕ್ಕೆ ಬರುತ್ತದೆ . ಹೆಣ್ಣು ಮಕ್ಕಳಿಗೆ ಮದುವೆಯಾದ ನಂತರ ಮನೆಯ ಮೇಲಿನ ಪ್ರೀತಿ , ಅಭಿಮಾನ ಹೆಚ್ಚುತ್ತದೆ .ಪ್ರಸ್ತುತ ಪದ್ಯದಲ್ಲಿ ಹೆಣ್ಣಿನ ಮತ್ತು ಬಳೆಗಾರನ ಸಂಭಾಷಣೆ ಸೊಗಸಾಗಿ ಮೂಡಿ ಬಂದಿದೆ . ತವರಿನ ಗುರುತನ್ನು ಮರಗಿಡ ಪಕ್ಷಿಗಳ ಮೂಲಕ ಮಾಡಿಕೊಡುವುದು ಶ್ಲಾಘನೀಯವಾಗಿದೆ . ವಿದ್ಯಾರ್ಥಿಗಳು ನಮ್ಮ ಜನ , ಸಂಸ್ಕೃತಿ , ಭಾಷೆಗಳನ್ನು ಕಲಿಯಲಿ ಎಂಬುದೇ ಪದ್ಯದ ಆಶಯವಾಗಿದೆ . ರಚಿಸಿದ ಕವಿ ಹಾಗೂ ಕವಿಯತ್ರಿಯ ಹೆಸರು ಗೊತ್ತಿಲ್ಲದಿದ್ದರೂ , ಗೀತೆ ಹೃದಯವನ್ನು ಮುಟ್ಟುವಂತಿದೆ .
ಮುಖ್ಯಾಂಶಗಳು :
ಜನಪದ ಗೀತೆಗಳ ಮೂಲಕ ಹೆಣ್ಣಿಗೆ ತವರು ಹಾಗೂ ತಾಯಿಯ ಪ್ರೀತಿಯನ್ನು ತೋರಿಸುವ ಪ್ರಯತ್ನ . ಈ ಗೀತೆ ಅಪಾರ ಜನಪ್ರಿಯತೆಯನ್ನು ಗಳಿಸಿದೆ . ಹೆಣ್ಣು ಬಳೆಗಾರನಿಗೆ ತನ್ನ ತವರು ಮನೆಗೆ ಹೋಗಿ ತನ್ನ ತಾಯಿಗೆ ಹೆಣು ಬಳಗಾರನಿಗೆ ತನ್ನ ತವರು ಮನೆಗೆ ಹೋಗಿ ತಮ್ಮ ತಾಯೀ ಒಮ್ಮೆ ಬಳಗಾರ ಹೆಣ್ಣುಮಗಳ ಮನೆಗೆ ಹೋಗುತ್ತಾನೆ .ಆಗ ಹೆಣ್ಣು ತನ್ನ ತಾಯಿಗೆ ಅಚ್ಚ ಕೆಂಪಿನ ಬಳೆ , ಹಸಿರು ಗೀರಿನ ಬಳ ಕೊಟ್ಟು ಬರುವಂತೆ ಕೇಳಿಕೊಳ್ಳುತ್ತಾಳೆ . ಆದರೆ ಬಳೆಗಾರ ನಿನ್ನ ತವರು ಮನೆ ಎಲ್ಲಿದೆ , ನನಗೆ ಗೊತ್ತಿಲ್ಲವಲ್ಲ ತವರನ್ನು ತೋರಿಸು ಬಾ ಎಂದು ಕರೆಯುತ್ತಾನೆ . ಆಗ ಹೆಣ್ಣು ತನ್ನ ತವರಿನ ಗುರುತನ್ನು ಸೊಗಸಾಗಿ ಹೇಳುತ್ತಾಳೆ . ಬಾಳೆ ತೋಟ ಬಲಕ್ಕೆ ಸೀಬೆ ತೋಟ ಎಡಕ್ಕೆ ಬಿಟ್ಟು ಮಧ್ಯದಲ್ಲಿ ಹೋದರೆ ತವರು ಸಿಗುತ್ತದೆ . ತವರಿನಲ್ಲಿ ಅಲೆ ಆಡುತ್ತಿರುತ್ತದೆ , ಗಾಣ ತಿರುಗುತ್ತಿರುತ್ತದೆ . ನವಿಲು ಸಾರಂಗಗಳು ನಲಿಯುತ್ತಿರುತ್ತದೆ . ಹಂಚಿನ ಮನೆ , ಕಂಚಿನ ಬಾಗಿಲನ್ನು ಹೊಂದಿದೆ . ಮನೆಯ ಮುಂದೆ ಮುತ್ತಿನ ಚಪ್ಪರ ಹಾಕಿರುತ್ತದೆ . ತಾಯಿ ಅಲ್ಲಿ ಕುಳಿತು ತಾಯಿಗೆ ಇಷ್ಟವಾದ ಬಳೆಯನ್ನು ಕೊಟ್ಟು ಬಾ ಕೇಳಿಕೊಳ್ಳುತ್ತಾಳೆ .
ಶಬ್ದಾರ್ಥ :
ಭಾಗ್ಯದ = ಅದೃಷ್ಟವಂತ
ಬಳೆಗಾರ = ಬಳೆಯನ್ನು ಮಾರುವವನು
ಗುರಿಯಿಲ್ಲ = ಉದೇಶವಿಲ್ಲ
ಆಲೆ = ಆಲೆಮನೆ , ( ಬೆಲ್ಲ ಮಾಡುವ ಸ್ಥಳ ) ಕಬ್ಬಿನ ರಸ ತೆಗೆಯುವ ಯಂತ್ರ
ನಡುವೆ = ಮಧ್ಯದಲ್ಲಿ
ಹಟ್ಟಿಲಿ =ಹಟ್ಟಿಯಲ್ಲಿ ,ಮನೆಯಲ್ಲಿ
ತವರು = ತಾಯಿಯ ಮನೆ
ಮಿಂಚಾಡು = ಹೊಳೆಯುವ
ಸಾರಂಗ = ಜಿಂಕೆ
ಹಡೆದವ್ವ = ಅಮ್ಮ ಮುತ್ತೆದೆ = ಮದುವೆಯಾದ ಹೆಣ್ಣು
ಗಾಣ = ಎಣ್ಣೆ ಅಥವಾ ಕಬ್ಬಿನ ರಸ ತೆಗೆಯುವ ಯಂತ್ರ
ಅಭ್ಯಾಸ ಪ್ರಶ್ನೆಗಳು
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :
1. ಬಳೆಗಾರ ಎಲ್ಲಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ ?
ಉತ್ತರ : ಬಳೆಗಾರ ತನ್ನ ತವರಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ .
2. ತಾಯಿಯ ಮನೆ ಯಾವ ರೀತಿ ಇದೆ ?
ಉತ್ತರ : ತಾಯಿಯ ಮನೆ ಹೆಂಚಿನ ಮಾಡನ್ನು ಕಂಚಿನ ಕದವನ್ನು ಹೊಂದಿದೆ ಎನ್ನುತ್ತಾಳೆ .
3. ಚಪ್ಪರದ ನಡುವೆ ತಾಯಿ ಯಾವ ಆಟ ಆಡುತ್ತಾಳೆ ?
ಉತ್ತರ : ಚಪ್ಪರದ ನಡುವೆ ತಾಯಿ ಪಗಡೆಯಾಟ ಆಡುತ್ತಾಳೆ .
4. ಹಡೆದವ್ವನಿಗೆ ಯಾವ ಬಣ್ಣದ ಬಳೆ ಎಂದರೆ ಆಸೆ ?
ಉತ್ತರ : ಹಡೆದವ್ವನಿಗೆ ಅಚ್ಚಕೆಂಪು ಮತ್ತು ಹಸಿರು ಗೀರಿನ ಬಳೆ ಎಂದರೆ ಆಸೆ .
7th Standard Kannada Bhagyada Balegara Notes Pdf
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರಿಸಿ :
1. ತವರು ಮನೆಗೆ ಹೋಗಲು ಗುರುತುಗಳೇನು ?
ಉತ್ತರ : ತವರು ಮನೆಗೆ ಹೋಗಬೇಕಾದರೆ ಬಲಕ್ಕೆ ಬಾಳೆ ತೋಟ ,ಸೀಬೆತೋಟ ಸಿಗುತ್ತದೆ . ಮಧ್ಯದ ದಾರಿಯಲ್ಲಿ ನಡೆದು ಹೋದರೆ ಎದುರಿಗೇ ತವರು ಮನೆ ಸಿಗುತ್ತದೆ .
2. ತವರ ಮನೆ ನೋಡಲು ಹೇಗಿದೆ ?
ಉತ್ತರ : ತವರು ಮನೆಯಲ್ಲಿ ಆಲೆ ಆಡುತ್ತಿರುತ್ತದೆ , ಗಾಣ ತಿರುಗುತ್ತಿರುತ್ತದೆ .ಹಂಚಿನ ಮನೆ , ಕಂಚಿನ ಬಾಗಿಲನ್ನು ಹೊಂದಿದೆ . ಮನೆಯ ಮುಂದೆ ಚಪ್ಪರ ಹಾಕಿರುತ್ತದೆ . ಚಪ್ಪರದ ಕೆಳಗೆ ತಾಯಿ ಕುಳಿತು ಪಗಡೆಯಾಡುತ್ತಿರುತ್ತಾಳೆ, ಹೀಗೆ ತವರು ಮನೆ ನೋಡಲು ಹಿತಕರವಾಗಿರುತ್ತದೆ
ಉ. ಕೆಳಗಿನ ಪದ್ಯದಲ್ಲಿ ಇರುವ ವಾಕ್ಯಗಳಂತೆ ಅರ್ಥಕೊಡುವ ಸಾಲುಗಳನ್ನು ಗುರುತಿಸಿ .
ಪ್ರಶ್ನೆ
1. ನಿನ್ನ ತವರೂರು ನನಗೇನು ಗೊತ್ತು ?
2. ಅಲ್ಲಿದೆ ನನ್ನ ತವರೂರು .
3 , ನನ್ನ ತವರು ಮನೆಯ ಮಾಡು ಹಂಚಿನದು ; ನನ್ನ ತವರು
ಮನೆಯ ಬಾಗಿಲು ಕಂಚಿನದು .
4 , ಎಲೆ ಬಳೆಗಾರನೇ , ನವಿಲು ಸಾರಂಗ ಅಲ್ಲಿ ಕುಣಿಯುತ್ತವೆ .
ಉತ್ತರ :
1. ನಿನ್ನ ತವರೂರ ನಾನೇನು ಬಲ್ಲೆನು .
2. ಅಲ್ಲಿಹುದೇ ನನ್ನ ತವರೂರು .
3. ಹಂಚಿನ ಮನೆ ಕಾಣೋ , ಕಂಚಿನ ಕದ ಕಾಣೋ
4 , ನವಿಲು ಸಾರಂಗ ನಲಿತಾವೆ ಬಳೆಗಾರ
5. ಅವಳೆ ಕಾಣೋ ಎನ್ನ ಹಡೆದವ್ವಾ
6. ಕೊಂಡೋಗೊ ಎನ್ನ ತವರೀಗೆ
7 , ಅಚ್ಚ ಕೆಂಪಿನ ಬಳ ಹಸಿರು ಗೀರಿನ ಬಳೆ ಎನ್ನ ಹಡೆದವ್ಗ ಬಲು ಆಸೆ ಬಳೆಗಾರ
ಕೆಳಗೆ ನೀಡಿರುವ ನುಡಿಗಟ್ಟುಗಳನ್ನು ಬಳಸಿ ವಾಕ್ಯ ರಚಿಸಿ
1. ಅಡ್ಡದಾರಿ (ತಪ್ಪು ಕೆಲಸ ಮಾಡು ) : ಸಹವಾಸ ‘ ದೋಷದಿಂದ ಯುವಕರು ಅಡ್ಡ ದಾರಿ ಹಿಡಿಯುತ್ತಾರೆ .
2. ಎತ್ತಿದ ಕೈ ( ಪ್ರವೀಣ ) : ಹಳ್ಳಿಯ ಹುಡುಗರು ಆಟದಲ್ಲಿ ಎತ್ತಿದ ಕೈ
3. ನೀರಿಗೆ ಹಾಕು ( ವ್ಯರ್ಥಮಾಡು ) : ಮೂರ್ಖರಿಗೆ ಮಾಡುವ ಉಪದೇಶ ನೀರಿಗೆ ಹಾಕಿದಂತಾಗುತ್ತದೆ .
4. ಬೇರೂರು ( ಸ್ಥಿರವಾಗಿರು ) : ಒಳ್ಳೆಯ ಅಭ್ಯಾಸಗಳು ಬಾಲ್ಯದಲ್ಲಿಯೇ ಬೇರೂರಬೇಕು .
5. ಮೈ ಬಗ್ಗಿಸು ( ಶ್ರಮಪಡು ) : ಮೈ ಬಗ್ಗಿಸಿ ಕೆಲಸ ಮಾಡಿದರೆ ದೈಹಿಕ ವ್ಯಾಯಾಮದ ಜೊತೆಗೆ ಆರೋಗ್ಯವೂ ಲಭಿಸುತ್ತದೆ .
FAQ :
ಉತ್ತರ : ಬಳೆಗಾರ ತನ್ನ ತವರಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ .
ಉತ್ತರ : ಚಪ್ಪರದ ನಡುವೆ ತಾಯಿ ಪಗಡೆಯಾಟ ಆಡುತ್ತಾಳೆ .
ಉತ್ತರ : ತಾಯಿಯ ಮನೆ ಹೆಂಚಿನ ಮಾಡನ್ನು ಕಂಚಿನ ಕದವನ್ನು ಹೊಂದಿದೆ ಎನ್ನುತ್ತಾಳೆ .
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.