3ನೇ ತರಗತಿ ಸಂಕ್ರಾಂತಿ ಪದ್ಯದ ನೋಟ್ಸ್ Pdf, 3rd Standard Sankranti Poem Question Answer Summery Kseeb Solution For Class 3 Chapter 8 Notes 2024 Sankranti Poem in Kannada 3rd Standard Kannada Padya Question And Answer Notes Pdf Download in Kannada Medium
3rd Standard Sankranti Padya Question and Answer
ತರಗತಿ : 3ನೇ ತರಗತಿ
ವಿಷಯ : ಕನ್ನಡ
ಪದ್ಯದ ಹೆಸರು : ಸಂಕ್ರಾಂತಿ
ಅ ) ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸು .
1. ತಂಗಿಯು ಯಾವ ಲಂಗ ಹಾಕಿಕೊಂಡಿದ್ದಳು ?
ಉತ್ತರ : ತಂಗಿಯು ಜರಿಯಿಂದ ಕೂಡಿದ ಮಡಿಕೆ ಮುರಿಯದ ಲಂಗ ಹಾಕಿಕೊಂಡಿದ್ದಳು .
2. ಗೆಳತಿಯ ಜೊತೆ ತಂಗಿ ಕೇರಿಗೆ ಹೊರಟಿದ್ದು ಏಕೆ ?
ಉತ್ತರ : ಹಬ್ಬದ ಆಚರಣೆಯಂದು ಎಳ್ಳು , ಕಬ್ಬು , ಸಕ್ರೆ ಅಚ್ಚು ಬಾಳೆಹಣ್ಣು , ಬೆಲ್ಲ ಇವೆಲ್ಲವನ್ನು ಊರಿನ ಓಣಿಯ ಜನರಿಗೆ ಹಂಚುವುದಕ್ಕಾಗಿ ಗೆಳತಿಯ ಜೊತೆ ತಂಗಿಯು ಹೊರಟಿದ್ದಾಳೆ.
3. ಮಕ್ಕಳನ್ನು ಹಸೆಯಲ್ಲಿ ಕೂರಿಸಿ ಏನು ಮಾಡುವರು ?
ಉತ್ತರ : ಮಕ್ಕಳನ್ನು ಹಸೆಯಲ್ಲಿ ಕೂರಿಸಿ ಎಳ್ಳು – ಎಲಚಿ ಅಚ್ಚುಗಳನ್ನು ತಲೆಯ ಮೇಲೆ ಸುರಿಯುವರು .
4. ಅಪ್ಪ ದನಕರುಗಳಿಗೆ ಏನು ಕೊಟ್ಟರು ?
ಉತ್ತರ : ಅಪ್ಪ ದನಕರುಗಳಿಗೆ ಅಕ್ಕಿ – ಬೆಲ್ಲ – ಹಣ್ಣುಗಳನ್ನು ಕೊಟ್ಟರು .
5. ಈ ಪದ್ಯವು ಯಾವ ಹಬ್ಬಕ್ಕೆ ಸಂಬಂಧಿಸಿದ್ದಾಗಿದೆ ?
ಉತ್ತರ : ಈ ಪದ್ಯವು ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದ್ದಾಗಿದೆ .
ಆ ) ‘ ಅ ‘ ಪಟ್ಟಿಯಲ್ಲಿರುವ ವಾಕ್ಯಗಳನ್ನು ‘ ಬ ‘ ಪಟ್ಟಿಯಲ್ಲಿರುವ ವಾಕ್ಯಗಳೊಂದಿಗೆ ಹೊಂದಿಸಿ ಬರೆ .
“ಅ” “ಬ” “ಉತ್ತರ”
೧. ತಂಗಿ ಕೇರಿಗೆಲ್ಲ ೧. ಗರಿಮುರಿ ಜರತಾರಿ ಲಂಗ ಹಾಕಿಕೊಂಡು
೨. ಬೀರೋಕಂತ ಹೊರಟಿದ್ದಾಳೆ ೨. ಅಕ್ಕಿ – ಬೆಲ್ಲ – ಹಣ್ಣು ತಂಗಿ ಕೇರಿಗೆಲ್ಲ
೩. ರಂಗೇನಳ್ಳಿ ರ ೦ ಗಿನ ಗೊಂಬೆ ೩. ಮಕ್ಕಳಿಗಚ್ಚು ಮೆಚ್ಚು ಕಣ್ಣ ತುಂಬ ನೋಡಿ
೪. ಕಿಚ್ಚನು ಹಾಯಿಸಿ ಕೊಡುವರು ಅಪ್ಪ ೪ , ಲಂಗ ಹಾಕಿಕೊಂಡು ಅಕ್ಕಿ- ಬೆಲ್ಲ- ಹಣ್ಣು
೫. ಸುರಿಯುವಾಗ ಅಮ್ಮ ಅಜ್ಜಿ ೫. ಕಣ್ಣ ತುಂಬ ನೋಡಿ ಮಕ್ಕಳಿಗಚ್ಚು ಮೆಚ್ಚು
ಸಮರ್ಥ್ಯಾಧಾರಿತ ಅಭ್ಯಾಸ
ಅ ) ಪಠ್ಯವನ್ನು ಆಧರಿಸಿ ಘಟನೆಗಳನ್ನು ಅನುಕ್ರಮವಾಗಿ ಬರೆ .
1. ಮಕ್ಕಳನ್ನು ಹಸೆಯಲ್ಲಿ ಕೂರಿಸಿ , ಎಳ್ಳು – ಎಲಚಿ ಅಚ್ಚುಗಳನ್ನು ಅಮ್ಮ ಅಜ್ಜಿ ಸುರಿಯುವರು .
2. ಪುಟಾಣಿ ತಂಗಿ ತನ್ನ ಗೆಳತಿ ಜೊತೆ ಎಳ್ಳು , ಬೆಲ್ಲ ಬೀರಲು ಹೊರಟಳು .
3. ತಂಗಿಯು ಗರಿಮುರಿ ಜರತಾರಿ ಲಂಗ ಹಾಕಿಕೊಂಡಳು .
4. ಎತ್ತು ಹಸು ಕರುಗಳನ್ನು ಕೊಂಬು ಹೆರೆದು ಬಣ್ಣವ ಬಳಿದು ಶೃಂಗಾರ ಮಾಡಿದರು .
ಉತ್ತರ:
1. ತಂಗಿಯು ಗರಿಮುರಿ ಜರತಾರಿ ಲಂಗ ಹಾಕಿಕೊಂಡಳು
2. ಪುಟಾಣಿ ತಂಗಿ ತನ್ನ ಗೆಳತಿ ಜೊತೆ ಎಳ್ಳು ಬೆಲ್ಲ ಬೀರಲು ಹೊರಟಳು .
3. ಎತ್ತು ಹಸು ಕರುಗಳನ್ನು ಕೊಂಬು ಹೆರೆದು ಬಣ್ಣವ ಬಳಿದು ಶೃಂಗಾರ ಮಾಡಿದರು .
4. ಮಕ್ಕಳನ್ನು ಹಸೆಯಲ್ಲಿ ಕೂರಿಸಿ ಎಳ್ಳು – ಎಲಚಿ- ಅಚ್ಚುಗಳನ್ನು ಅಮ್ಮ ಅಜ್ಜಿ ಸುರಿಯುವರು
ಆ ) ನಿಮ್ಮ ಮನೆಯಲ್ಲಿ ಬೆಳಿಗ್ಗೆ ಎದ್ದ ನಂತರ ಶಾಲೆಗೆ ಹೋಗುವವರೆಗಿನ ನಾಲ್ಕು ಘಟನೆಗಳನ್ನು ನೆನಪಿಸಿಕೊಂಡು , ಅನುಕ್ರಮವಾಗಿ ಬರೆ .
ಉತ್ತರ : 1. ಬೆಳಿಗ್ಗೆ ಬೇಗನೆ ಎದ್ದು ಹಲ್ಲುಜ್ಜಿ ಸ್ನಾನ ಮಾಡಿ ದೇವರಿಗೆ ವಂದಿಸುವೆನು .
2. ಶಾಲೆಗೆ ಹೋಗುವ ಮೊದಲು ಅಂದಿನ ವೇಳಾಪಟ್ಟಿಯಂತೆ ಪುಸ್ತಕಗಳನ್ನು ಜೋಡಿಸಿಟ್ಟುಕೊಂಡೆನು . ಜೊತೆಗೆ ಸಮವಸ್ತ್ರಗಳನ್ನು ಅಚ್ಚುಕಟ್ಟಾಗಿ ಹಾಕಿಕೊಂಡೆನು .
3. ಬೆಳಗಿನ ಅಲೋಪಹಾರವನ್ನು ಮುಗಿಸಿಕೊಂಡು , ಒಂದು ಕಪ್ಪು ಹಾಲು ಕುಡಿದು , ಮಧ್ಯಾಹ್ನದ ಊಟದ ಡಬ್ಬವನ್ನು ಕಟ್ಟಿಸಿಕೊಂಡು ಶಾಲೆಗೆ ಹೋಗಲು ಅಣಿಯಾದೆನು . ವಾಹನ ಬಂತು ,
4. ಶಾಲೆಗೆ ಕರೆದೊಯ್ಯುವ ಶಾಲಾ ವಾಹನ ಬಂತು, ಜೋಪಾನವಾಗಿ ವಾಹನವನ್ನು ಹತ್ತಿ ಸಹಪಾಠಿಗಳೊಂದಿಗೆ ಶಾಲೆಗೆ ಹೊರಟನು .
ಭಾಷಾಭ್ಯಾಸ
‘ಗಂಡು ‘ ಎಂಬ ಅರ್ಥ ಬರುವ ಪದಗಳಿಗೆ ‘ ಪುಲ್ಲಿಂಗ ‘ ಎಂದೂ , ‘ ಹೆಣ್ಣು ‘ ಎಂಬ ಅರ್ಥ ಬರುವ ಪದಗಳಿಗೆ ‘ ಸ್ತ್ರೀಲಿಂಗ ಎಂದೂ ಹಾಗೂ ‘ ಗಂಡು ‘ ‘ ಹೆಣ್ಣು ‘ ಎಂಬ ಎರಡೂ ಅರ್ಥ ಬರದ ಪದಗಳಿಗೆ ‘ ನಪುಂಸಕ ಲಿಂಗ ‘ ಎಂದೂ ಹೆಸರು .
ಅ ) ಕೆಳಗಿನ ವಾಕ್ಯಗಳನ್ನು ಆವರಣದಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ ಬರೆಯಿರಿ .
1. ಹುಡುಗಿಯು ತರಕಾರಿಯನ್ನು ತಂದಳು . ( ಇದನ್ನು ಪುಲ್ಲಿಂಗ ರೂಪದಲ್ಲಿ ಬರೆ )
ಉತ್ತರ : ಹುಡುಗನು ತರಕಾರಿಯನ್ನು ತಂದನು .
2. ರಾಜು ಗಾಡಿಯನ್ನು ಎಳೆದನು . – ( ‘ ರಾಜು ‘ ಎಂಬ ಪದದ ಬದಲಿಗೆ ‘ ಎತ್ತು ‘ ಎಂಬ ಪದ ಬಳಸಿ , ವಾಕ್ಯ ರಚಿಸಿ )
ಉತ್ತರ : ಎತ್ತು ಗಾಡಿಯನ್ನು ಎಳೆಯಿತು .
3. ಅಣ್ಣ ತಮ್ಮಂದಿರು ಸ್ನೇಹಿತರಂತೆ ಇದ್ದರು . ( ಇದನ್ನು ಸ್ತ್ರೀಲಿಂಗ ರೂಪದಲ್ಲಿ ಬರೆ)
ಉತ್ತರ : ಅಕ್ಕ – ತಂಗಿಯರು ಸ್ನೇಹಿತೆಯರಂತೆ ಇದ್ದರು .
Kseeb Solution For Class 3 Chapter 8 Notes
ಆ ) ಕೆಳಗೆ ಕೊಟ್ಟಿರುವ ಪದಗಳನ್ನು ಪುಲ್ಲಿಂಗ , ಸ್ತ್ರೀಲಿಂಗ , ನಪುಂಸಕ ಲಿಂಗಗಳಾಗಿ ವಿಂಗಡಿಸಿ ಬರೆ .
(ಪುಸ್ತಕ , ತಮ್ಮ ತಮ್ಮ ಶಾಲೆ , ಅಣ್ಣ , ತಂಗಿ , ತಂದೆ , ತಾಯಿ , ಸಹೋದರಿ , ಗೆಳೆಯ , ಕುರ್ಚಿ , ಗೆಳತಿ )
ಪುಲ್ಲಿಂಗ : ರಾಜ, ಅಣ್ಣ, ತಮ್ಮ, ತಂದೆ, ಗೆಳೆಯ
ಸ್ತ್ರೀಲಿಂಗ : ರಾಣಿ, ಸಹೋದರಿ, ಅಕ್ಕ, ತಂಗಿ, ಗೆಳತಿ, ತಾಯಿ
ನಪುಂಸಕ ಲಿಂಗ : ಕುರ್ಚಿ, ಮೇಜು, ಪುಸ್ತಕ, ಶಾಲೆ, ಗೋಡೆ
ಆ ) ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಆರಿಸಿ ಬರೆ .
ಉತ್ತರ : ಹಾಕಿಕೊಂಡು – ಮಾಡಿಕೊಂಡು ,
ಅಚ್ಚು – ಮೆಚ್ಚು
ಗಿಲಿಗಿಲಿ – ಗರಿಮುರಿ ,
ಹಬ್ಬ – ಕಬ್ಬ ,
ಕೊಂಬನು – ಕಿಚ್ಚನು .
3rd Std Sankranti Poem Summery In Kannada
ಸಾರಾಂಶ :
ಕವಿ ಎಚ್.ಎಸ್ . ವೆಂಕಟೇಶಮೂರ್ತಿ ಯವರು ‘ ಸಂಕ್ರಾಂತಿ ಹಬ್ಬದ ಕುರಿತು ಇಲ್ಲಿ ವಿವರಿಸಿದ್ದಾರೆ . ಈ ಹಬ್ಬವು ಬಂದು ಕಟ್ಟು ಕಟ್ಟು ಕಬ್ಬವನ್ನು ತಂದಿದೆ . ಜರಿಯಿಂದ ಕೂಡಿದ ಮಡಿಕೆ ಮುರಿಯದ ಹೊಸ ಬಟ್ಟೆ ಹಾಕಿಕೊಂಡು ಮತ್ತು ಕಾಲಿಗೆ ಮಾಡುತ್ತ ಉತಾರಗಜ್ಜೆಗಳನ್ನು ಧರಿಸಿ ಶಬ್ದ ಆಚರಿಸುತ್ತಿದ್ದಾರೆ . ಕಬ್ಬು , ಸಕ್ರೆ ಅಚ್ಚು , ಹಬ್ಬದ ದಿನದಂದು ಬಾಳೆಹಣ್ಣು ಮತ್ತು ಬೆಲ್ಲ ಇವೆಲ್ಲವುಗಳನ್ನು ಓಣಿಯ ಜನರಿಗೆ ತಂಗಿಯು ವಿತರಿಸುವುದಕ್ಕೆ ಹೊರಟಿದ್ದಾಳೆ . ರಂಗೇನಹಳ್ಳಿ ರಂಗಿನ ಗೊಂಬೆಯಾಗಿ ಪುಟಾಣಿ ತಂಗಿ ತನ್ನ ಗೆಳತಿಯೊಂದಿಗೆ ಹೊರಟಿದ್ದಾಳೆ . ಅವಳನ್ನು ಕಣ್ಣ ತುಂಬ ನೋಡಿ ಎನ್ನುವರು . ಹಬ್ಬದ ದಿನ ಮನೆಯಲ್ಲಿನ ಎತ್ತು – ಕರು – ಹಸುಗಳಿಗೆ ಬಣ್ಣ ಬಳಿದಿದ್ದಾರೆ . ಅವುಗಳನ್ನು ವಿವಿಧ ಬಣ್ಣದ ಬಟ್ಟೆಗಳಿಂದ ಸಿಂಗರಿಸಿದ್ದಾರೆ . ಬೆಂಕಿ ಹಾಯಿಸಿ ದನಕರುಗಳಿಗೆ ಅಪ್ಪ ಅಕ್ಕಿ – ಬೆಲ್ಲ – ಹಣ್ಣುಗಳನ್ನು ಕೊಡುತ್ತಾರೆ ,
ಆ ಮಕ್ಕಳನ್ನು ಒಂದು ಕಡೆ ಕೂಡಿಸಿ ಎಳ್ಳು – ಹಣ್ಣು ಅಚ್ಚುಗಳನ್ನು ಸೇರಿಸಿ ಪಾತ್ರೆಯಲ್ಲಿ ಹಾಕಿ ಮೇಲಿಂದ ಮಕ್ಕಳ ಮೇಲೆ ಸುರಿಯುವರು . ಇದು ಅಮ್ಮ ಅಜ್ಜಿಗಳಿಗೆ ಆನಂದ ಉಂಟು ಮಾಡಿದೆ ಮತ್ತು ಮಕ್ಕಳಿಗೆ ಅಚ್ಚುಮೆಚ್ಚಾಗಿದೆ ಎಂದು ಕವಿ ಹೇಳುತ್ತಾರೆ .
FAQ
ಉತ್ತರ : ಮಕ್ಕಳನ್ನು ಹಸೆಯಲ್ಲಿ ಕೂರಿಸಿ ಎಳ್ಳು – ಎಲಚಿ ಅಚ್ಚುಗಳನ್ನು ತಲೆಯ ಮೇಲೆ ಸುರಿಯುವರು .
ಉತ್ತರ : ಈ ಪದ್ಯವು ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದ್ದಾಗಿದೆ .
ಉತ್ತರ : ಅಪ್ಪ ದನಕರುಗಳಿಗೆ ಅಕ್ಕಿ – ಬೆಲ್ಲ – ಹಣ್ಣುಗಳನ್ನು ಕೊಟ್ಟರು .
ಇತರೆ ವಿಷಯಗಳು:
1 ರಿಂದ 10ನೇ ತರಗತಿ ಕನ್ನಡ ನೋಟ್ಸ್ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf