3ನೇ ತರಗತಿ ನನ್ನ ಕನಸು ಪಾಠದ ಪ್ರಶ್ನೋತ್ತರ ನೋಟ್ಸ್, 3rd Standard Nanna Kanasu Lesson Notes Question Answer Summery 3rd Class Nanna Kanasu Lesson Pdf 2024 Kseeb Solution For Class 3 Nanna Kanasu Notes
Nanna Kanasu 3rd Standard Lesson in Kannada
Nanna Kanasu 3rd Standard Lesson Question Answer
ಅ ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಕಾಡಿಗೆ ಮರ ಕಡಿಯಲು ಬಂದವರು ಯಾರು ?
ಉತ್ತರ : ಕಾಡಿಗೆ ಮರ ಕಡಿಯಲು ಬಂದವರು ಮನುಷ್ಯನು . ( ಮಾನವ )
2. ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು ?
ಉತ್ತರ : ಮಾನವ ಮೊಲಕ್ಕೆ ಅಂಜುಬುರುಕ ಪ್ರಾಣಿ ಎಂದು ಹೇಳಿದನು .
3. ಕೋತಿ ಮಾನವನನ್ನು ಏನೆಂದು ಪ್ರಶ್ನಿಸಿತು ?
ಉತ್ತರ : ಕೋತಿ ಮಾನವನನ್ನು ‘ ನೀವು ಸುಂದರವೋ ಅಥವಾ ನಾವು ಸುಂದರವೋ ಎಂದು ಪ್ರಶ್ನಿಸಿತು.
4. ಮಾನವನ ಯಾರನ್ನು ಬಯಲಿನಲ್ಲಿ ವಾಸ ಮಾಡುವವರೆಂದು ಮೂದಲಿಸಿದನು ?
ಉತ್ತರ : ಮಾನವ ಕಾಡುಹಂದಿಗಳಿಗೆ ಬಯಲಿನಲ್ಲಿ ವಾಸ ಮಾಡುವವರೆಂದು ಮೂದಲಿಸಿದನು
3rd Class Nanna Kanasu Lesson Pdf
ಆ ) ಈ ಪ್ರಶ್ನೆಗಳಿಗೆ ಎರಡು -ಮೂರು ವಾಕ್ಯಗಳಲ್ಲಿ ಉತ್ತರಿಸಿ
1. ಮೊಲವು ಮಾನವನನ್ನು ಅವಿವೇಕಿ ಎಂದು ಹೇಳಿದ್ದು ಏಕೆ?
ಉತ್ತರ : ಕಾಡಿಗೆ ಮರ ಕಡಿಯಲು ಬಂದ ಮಾನವನನ್ನು ಕಂಡು ಮೊಲವು , ಇಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಾವು ನೋವುಗಳು ಸಂಭವಿಸಿವೆ . ಆದರೂ ಕಾಡಿನ ನಾಶಕ್ಕೆ ಮುಂದಾಗಿವೆಯಲ್ಲಾ ಅವಿವೇಕಿ ಎಂದು ಹೇಳಿತು .
2. ರಾಜು ಕಂಡ ಕನಸೇನು ?
ಉತ್ತರ : ದೊಡ್ಡ ಕಾಡಿನಲ್ಲಿ ಪ್ರಾಣಿಗಳೆಲ್ಲ ಸೇರಿ ಮರ ಕಡಿಯಲು ಹೋದ ಮಾನವನ ಮನಃಪರಿವರ್ತನೆ ಮಾಡಿದ ಘಟನೆಯ ಕನಸು ರಾಜು ಕಂಡನು .
3. ಮಾನವನ ಸವಾಲಿಗೆ ಕಾಗೆಯ ಉತ್ತರವೇನು ?
ಉತ್ತರ : ‘ ಗೀಜಗನ ಗೂಡು , ಜೇನುಗೂಡು , ಗೆದ್ದಲುಹುಳು ಕಟ್ಟುವ ಹುತ್ತಗಳು ಎಷ್ಟು ಸುಂದರ , ಸುರಕ್ಷಿತ ! ಕಸದಿಂದ ಮಾಡಿರುವ ನಮ್ಮ ಸಾಧನೆಯ ಮುಂದೆ ಪುಕೃತಿಯ ನಾಶದ ನಿಮ್ಮ ಸಾಧನೆ ಶೂನ್ಯ ‘ ಎಂಬುದು ಕಾಗೆಯ ಬುದ್ದಿವಂತಿಕೆಯ ಉತ್ತರವಾಗಿದೆ
Nanna Kanasu Pata Question Answer Notes
ಇ ) ಈ ವಾಕ್ಯಗಳನ್ನು ಯಾರು , ಯಾರಿಗೆ ಹೇಳಿದರು ?
1. “ ಸಾಲುಮರದ ತಿಮ್ಮಕ್ಕನನ್ನು ನೋಡಿ ಕಲಿ ” .
ಉತ್ತರ : ಈ ಮಾತನ್ನು ಮರವು ಮಾನವನಿಗೆ ಹೇಳಿತು . ಮರವು ಮಾನವನಿಗೆ ಬುದ್ಧಿವಾದ ಹೇಳುತ್ತ , ಏ ಮಾನವ , ನೀನು ಏನೇ ಮಾಡಿದ್ದರೂ ಅಥವಾ ಮುಂದೆ ಮಾಡಿದರೂ ಅದು ಈ ಪ್ರಕೃತಿಯ ಪ್ರಭಾವದಿಂದ ಪುಕೃತಿಯ ಅಂಗವಾದ ಕಾಡಿನ ನಾಶದಿಂದ ನಿನ್ನ ಸಂತತಿಯ ನಾಶವೆಂಬುದನ್ನು ಮೊದಲು ಅರಿತುಕೋ . ಕಾಡಿನ ಸಂರಕ್ಷಣೆಗೆ ಮುಂದಾಗು , ಸಾಲುಮರದ ತಿಮ್ಮಕ್ಕನನ್ನು ನೋಡಿ ಕಲಿ . ನೀನು ಬದುಕುವ ಜೊತೆಗೆ ಪ್ರಕೃತಿಯ ಉಳಿವಿಗೆ ನಿನ್ನ ಬುದ್ಧಿವಂತಿಕೆಯನ್ನು ತೋರಿಸು ‘ ಎಂದು ಮರವು ಮಾನವನಿಗೆ ಹೇಳಿತು .
2. “ ನಾವು ಪ್ರಾಣಿಗಳಿಂದ ಕಲಿಯುವುದು ಬಹಳಷ್ಟಿದೆ . ”
ಉತ್ತರ : ಈ ಮೇಲಿನ ಮಾತನ್ನು ರಾಜುವಿನ ಅಮ್ಮ ರಾಜುವಿಗೆ ಹೇಳುತ್ತಾಳೆ . ಬೆಳಗಾಗಿದ್ದು ರಾಜುವು ತನಗೆ ರಾತ್ರಿ ನಿದ್ದೆಯಲ್ಲಿ ಬಿದ್ದ ಕನಸಿನ ವಿಚಾರ ‘ ಕಾಡಿನ ಕಥೆ’ಯ ಬಗ್ಗೆ ಹೇಳುತ್ತಾ , ದೊಡ್ಡ ಕಾಡಿನ ಪ್ರಾಣಿಗಳೆಲ್ಲ ಸೇರಿ ಮರ ಕಡಿಯಲು ಹೋದ ಮನುಷ್ಯನ ಮನಃಪರಿವರ್ತನೆ ಮಾಡಿದುದನ್ನು ಹೇಳುತ್ತಾನೆ . ಅದಕ್ಕೆ ಪ್ರತ್ಯುತ್ತರವಾಗಿ ರಾಜುನ ಅಮ್ಮನು “ ನಿನ್ನೆ ರಾತ್ರಿ ‘ ಕಾಡಿನ ಕತೆ ‘ ಓದಿ ಮಲಗಿದೆಯಲ್ಲಾ , ಅದಕ್ಕೆ ಈ ರೀತಿ ಕನಸು ಬಿದ್ದಿದೆ . ನಾವು ಪ್ರಾಣಿಗಳಿಂದ ಕಲಿಯೋದು ಬಹಳಷ್ಟಿದೆ ‘ ಎಂದು ಹೇಳುತ್ತಾಳೆ .
3rd Standard Kannada Nanna Kanasu Notes 2024
ಈ ) ‘ ಅ ‘ ಪಟ್ಟಿಯಲ್ಲಿನ ಪ್ರಾಣಿಪಕ್ಷಿಗಳನ್ನು ‘ ಬ ‘ ಪಟ್ಟಿಯಲ್ಲಿನ ಅವುಗಳ ವಿಶೇಷತೆಗಳ ಜೊತೆ ಹೊಂದಿಸಿ ಬರೆ .
‘ ಅ ‘ ‘ ಬ’
೧. ಕೋಗಿಲೆ ಇಂಪಾದ ಧ್ವನಿ
೨ ಜಿಂಕೆ ಸುಂದರವಾದ ಕಣ್ಣು
೩ . ನವಿಲು ಆಕರ್ಷಕ ನಡಿಗೆ
ಉ) ವಿರುದ್ಧಾರ್ಥಕ ಪದ ಬರೆಯಿರಿ.
- ಅಂಜುಬುರುಕ X ಧೈರ್ಯವಂತ
- ಮೊದಲು X ಕೊನೆ
- ಉಳಿವು X ಅಳಿವು
- ಅತಿವೃಷ್ಠಿ X ಅನಾವೃಷ್ಠಿ
FAQ
ಉತ್ತರ : ಕಾಡಿಗೆ ಮರ ಕಡಿಯಲು ಬಂದವರು ಮನುಷ್ಯನು . ( ಮಾನವ )
ಉತ್ತರ : ಕೋತಿ ಮಾನವನನ್ನು ‘ ನೀವು ಸುಂದರವೋ ಅಥವಾ ನಾವು ಸುಂದರವೋ ಎಂದು ಪ್ರಶ್ನಿಸಿತು.
ಇತರೆ ವಿಷಯಗಳು:
1 ರಿಂದ 10ನೇ ತರಗತಿ ಕನ್ನಡ ನೋಟ್ಸ್ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf