3ನೇ ತರಗತಿ ಸ್ವಾತಂತ್ರ್ಯ ದಿನಾಚರಣೆ ಕನ್ನಡ ನೋಟ್ಸ್, 3rd Standard Swatantra Dinacharane Kannada Lesson Notes Question Answer Pdf Download 2024 Kseeb Solution For Class 3 Chapter 3 Notes 3rd Standard Kannada Swatantra Dinacharane Question Answer 3rd std kannada chapter 2 notes
3rd Standard Kannada 3rd Lesson Question Answer
ತರಗತಿ : 3ನೇ ತರಗತಿ
ವಿಷಯ : ಕನ್ನಡ
ಪಾಠದ ಹೆಸರು : ಸ್ವಾತಂತ್ರ್ಯ ದಿನಾಚರಣೆ
3rd Class Swatantra Dinacharane Question answer
ಅ ) ಒಂದು ವಾಕ್ಯದಲ್ಲಿ ಉತ್ತರಿಸಿ
1. ಮುಖ್ಯ ಗುರುಗಳು ಯಾರ ಸಭೆ ಕರೆದರು?
ಉತ್ತರ : ಮುಖ್ಯಗುರುಗಳು ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ ಸಭೆ ಕರೆದರು .
2. ಸ್ವಾತಂತ್ರ್ಯ ದಿನವನ್ನು ಎಂದು ಆಚರಿಸುತ್ತೇವೆ ?
ಉತ್ತರ : ಆಗಸ್ಟ್ 15 ರಂದು ಸ್ವಾತಂತ್ರ ದಿನವನ್ನಾಗಿ ಆಚರಿಸುತ್ತೇವೆ .
3. ಯಾರು ಕ್ಷಮೆ ಕೋರಿದರು ?
ಉತ್ತರ : ಪಾಹಿನ್ , ಐಶ್ವರ್ಯ ( ಸಾಂಸ್ಕೃತಿಕ ಮಂತ್ರಿ) ಕ್ಷಮೆ ಕೋರಿದರು .
3rd Standard Swatantra Dinacharane Notes
ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರಿಸು .
1.’ ಮಂತ್ರಿಮಂಡಲದ ಸಭೆಯಲ್ಲಿ ಯಾವುದರ ಬಗ್ಗೆ ಚರ್ಚಿಸಿದರು ?
ಉತ್ತರ : ಮಂತ್ರಿಮಂಡಲದ ಸಭೆಯಲ್ಲಿ ಆಗಸ್ಟ್ ತಿಂಗಳಲ್ಲಿ ಬರುವ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದನ್ನು ಕುರಿತು ಚರ್ಚಿಸಿದರು .
2. ಸ್ವಾತಂತ್ರ್ಯ ದಿನಾಚರಣೆ ಎಂದರೇನು ?
ಉತ್ತರ : ದೇಶ ಸ್ವತಂತ್ರವಾದ ಸವಿನೆನಪಿಗೆ ಪ್ರತಿ ವರ್ಷ ದೇಶಾದ್ಯಂತ ಆಚರಿಸುವ ಹಬ್ಬವೇ ಸ್ವಾತಂತ್ರ್ಯ ದಿನಾಚರಣೆ .
3. ಐಶ್ವರ್ಯ ನೀಡಿದ ಸಲಹೆ ಏನು?
ಉತ್ತರ : ಧ್ವಜಸಂಭದ ಸುತ್ತ ರಂಗವಲ್ಲಿ ಹಾಕಿದರೆ ಚೆನ್ನಾಗಿರುತ್ತದೆ ಎಂಬ ಸಲಹೆಯನ್ನು ಐಶ್ವರ್ಯ ನೀಡುವಳು .
4. ಕ್ರೀಡಾ ಮಂತ್ರಿ ವಹಿಸಿಕೊಂಡ ಕಾರ್ಯವೇನು ?
ಉತ್ತರ : ಕ್ರೀಡಾ ಮಂತ್ರಿ ವಿವೇಕನು ಆಟೋಟ ಸ್ಪರ್ಧೆ ನಡೆಸಿ ವಿಜೇತರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವನ್ನು ವಹಿಸಿಕೊಂಡನು .
5.ಮೂರನೆಯ ತರಗತಿಯವರು ವಹಿಸಿಕೊಂಡ ಕಾರ್ಯ ಯಾವುದು ?
ಉತ್ತರ : ಮೂರನೆಯ ತರಗತಿಯವರು ಧ್ವಜಸ್ತಂಭವನ್ನು ಸಿಂಗರಿಸುವ ಕಾರ್ಯವನ್ನು ವಹಿಸಿಕೊಂಡರು .
Swatantra Dinacharane 3rd Standard Kannada Notes
ಇ ) ಕಾರಣ ಕೊಡು .
1. ಮುಖ್ಯ ಗುರುಗಳು ಮಂತ್ರಿಮಂಡಲದ ಸಭೆ ಕರೆದರು:
ಕಾರಣ, ಆಗಸ್ಟ್ ತಿಂಗಳು ಶಾಲೆಯಲ್ಲಿ ಈ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕಾಗಿತ್ತು.
2. ಇತರರು ಮಾತನಾಡುವಾಗ ಕೇಳಿಸಿಕೊಳ್ಳಬೇಕು.
ಉತ್ತರ: ಒಬ್ಬರು ಮಾತನಾಡುವಾಗ ನಮ್ಮ ನಮ್ಮೊಳಗೆ ಮಾತನಾಡುತ್ತಿದ್ದರೆ , ಇತರರ ಅಭಿಪ್ರಾಯಗಳು ತಿಳಿಯುವುದಿಲ್ಲ . ಆದ್ದರಿಂದ ಇತರರು ಮಾತನಾಡುವಾಗ ಅದನ್ನು ಕೇಳಿಸಿಕೊಳ್ಳಬೇಕು .
3. ಸಭೆಯಲ್ಲಿ ಒಟ್ಟಾಗಿ ಮಾತನಾಡಬಾರದು .
ಉತ್ತರ : ಕಾರಣ , ಸಭೆಯಲ್ಲಿ ಸರದಿ ಅನುಸರಿಸಿ ಮಾತನಾಡಿದರೆ , ಯಾರು ಏನು ಮಾತನಾಡಿದರು ಎಂದು ತಿಳಿಯುತ್ತದೆ .
ಈ ) ಈ ಮಾತುಗಳನ್ನು ಯಾರು , ಯಾರಿಗೆ ಹೇಳಿದರು ಬರೆ .
1. “ ನಮ್ಮ ಶಾಲೆಯಲ್ಲೂ ಆಚರಿಸುತೇವಲ್ಲ ಸರ್ ? ”
ಉತ್ತರ : ಈ ಮಾತನ್ನು ಷರೀಫ್ ( ಉಪ ಮುಖ್ಯಮಂತ್ರಿ)ನು ಗುರುಗಳಿಗೆ ಕೇಳುತ್ತಾನೆ .
2. “ ಒಳ್ಳೆಯದು , ಮೇರಿಯ ಸಲಹೆ ಎಲ್ಲರಗೂ ಒಪ್ಪಿಗೆಯೇ ? ”
ಉತ್ತರ : ಈ ಮಾತನ್ನು ಗುರುಗಳು ಎಲ್ಲ ವಿದ್ಯಾರ್ಥಿಗಳಿಗೆ ಕೇಳುತ್ತಾರೆ .
3. “ ನಮ್ಮ ತೋಟದಿಂದ ಮಾವಿನ ತಳಿರು , ಬಾಳೆಕಂಬ ತರುತ್ತೇನೆ . ”
ಉತ್ತರ : ಈ ಮಾತನ್ನು ರಾಜು ( ಮುಖ್ಯಮಂತ್ರಿ) ಕಾರ್ತಿಕ್ ( ಸ್ವಚ್ಛತಾ ಮಂತ್ರಿ ) ನಿಗೆ ಹೇಳುವನು .
ಉ ) ಈ ಪದಗಳನ್ನು ಬಳಸಿ ಸಂ ತ ವಾಕ್ಯ ರಚಿಸು .
( ವಾಕ್ಯ ರಚಿಸಿ ಬರೆದಿದೆ ) –
1. ತೋರಣ : ಹೊಸ ವರ್ಷ ಯುಗಾದಿಯ ಹಬ್ಬದಂದು ಮನೆಯ ಬಾಗಿಲಿಗೆ ತಳಿರು – ತೋರಣ ಕಟ್ಟುತ್ತೇವೆ .
2. ರಂಗವಲ್ಲಿ : ನೀತಾ ಪ್ರತಿದಿನ ಮುಂಜಾನೆ ಮನೆಯ ಮುಂದೆ ರಂಗವಲ್ಲಿ ಹಾಕುತ್ತಾಳೆ .
ನಾನು ಶಾಲೆಯ ಆಟದ ಬಯಲಿನಲ್ಲಿ ಇದ್ದ ಕಸವನ್ನು ತೆಗೆದು ಸ್ವಚ್ಛಗೊಳಿಸಿದೆನು .
2. ನೀನು ಮನೆಯಲ್ಲಿ ವಹಿಸಿಕೊಂಡು ಮಾಡಿದ ಒಂದು ಕೆಲಸವನ್ನು ಬರೆ .
ಉತ್ತರ : ನಾನು ಮನೆಯಲ್ಲಿ ನಲ್ಲಿಯಲ್ಲಿ ನೀರು ಬಂದಾಗ ಕುಡಿಯಲು ಅದನ್ನು ಸಂಗ್ರಹಿಸಿದೆನು .
3. ನಿನ್ನ ಮನೆಯಲ್ಲಿ ಎಲ್ಲರೂ ಕುಳಿತು ಚರ್ಚಿಸಿ ಮಾಡಿರುವ ಕೆಲಸ ಯಾವುದು ?
ನಾವು ಮನೆಯಲ್ಲಿ ಎಲ್ಲರೂ ಕುಳಿತು ಚರ್ಚಿಸಿ ಶಾಲೆಯ ಬಿಡುವಿನ ವೇಳೆಯಲ್ಲಿ ಶೈಕ್ಷಣಿಕ ಪ್ರವಾಸ ಮಾಡಿದೆವು
ಭಾಷಾಭ್ಯಾಸ
ಅ ) ಸರಿಯಾದ ಅರ್ಥ ಬರುವಂತೆ ಪದಗಳನ್ನು ಜೋಡಿಸಿ ವಾಕ್ಯಗಳನ್ನು ಸರಿಪಡಿಸಿ ಬರೆ .
1. ಸಮವಸ್ತ್ರ ಮಕ್ಕಳು ಧರಿಸಿ ಬಂದರು
ಉತ್ತರ : ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ಬಂದರು
2. ಮಕ್ಕಳು ಸಾಂಸ್ಕೃತಿಕ ನಡೆಸಿಕೊಟ್ಟರು ಕಾರ್ಯಕ್ರಮ
ಉತ್ತರ : ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು .
3. ಕೈತೋಟದಲ್ಲಿ ಶಾಲೆ ಹೂ ಗಿಡಗಳಿವೆ
ಉತ್ತರ : ಶಾಲೆಯ ಕೈತೋಟದಲ್ಲಿ ಹೂ ಗಿಡಗಳಿವೆ .
ಆ ) ಅ , ಆ ಮತ್ತು ಇ ಮನೆಗಳಲ್ಲಿರುವ ಪದಗಳನ್ನು ಕ್ರಮವಾಗಿ ಬಳಸಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸು .
ಮಾದರಿ : ಅವನು ಮನೆಗೆ ಹೋಗುತ್ತಾನೆ .
ಭಾಷಾ ಚಟುವಟಿಕೆ
ಅ ) ಈ ಜೋಡು ನುಡಿಗಳನ್ನು ಗಮನಿಸಿ , ನಕಲು ಮಾಡು .
( ತಳಿರು ತೋರಣ , ಸಿಹಿ ಕಹಿ , ಕಳ್ಳ ಕೊಳ್ಳ , ಬೆಟ್ಟ ಗುಡ್ಡ , ನೋವು ನಲಿವು)
1. ಸುಖ ದುಃಖ
2. ಕಷ್ಟ ನಷ್ಟ
3. ಮಾವು ಬೇವು
4. ಸಾವು ನೋವು
5. ನಲಿ ಕಲಿ .
6. ಅಕ್ಕ ಪಕ್ಕ
Swatantra Dinacharane Lesson in Kannada
ಆ ) ಆವರಣದಲ್ಲಿ ಕೊಟ್ಟಿರುವ ಸಮಾನಾರ್ಥಕ ಪದವನ್ನು ಗುರುತಿಸಿ ಮಾದರಿಯಂತೆ ಬರೆ .
( ಬಟ್ಟೆ , ಬಾವುಟ , ಮುಂಜಾನೆ , ತಯಾರಿ , ಅಣಿ , ಬೆಳಗಿನ ಜಾವ , ಪತಾಕೆ , ಕುಸುಮ , ಪುಷ್ಪ , ಅರಿವೆ )
ಮಾದರಿ : 1. ವಸ್ತ್ರ ಬಟ್ಟೆ ಅರಿವೆ
2. ಧ್ವಜ ಬಾವುಟ ಪತಾಕೆ
3. ನಸುಕು ಬೆಳಗಿನ ಜಾವ ಮುಂಜಾನೆ
4. ಸಿದ್ದತೆ ಅಣಿ ತಯಾರಿ
5. ಹೂ ಪುಷ್ಪ ಕುಸುಮ
FAQ
ಉತ್ತರ : ಆಗಸ್ಟ್ 15 ರಂದು ಸ್ವಾತಂತ್ರ ದಿನವನ್ನಾಗಿ ಆಚರಿಸುತ್ತೇವೆ .
ಉತ್ತರ : ದೇಶ ಸ್ವತಂತ್ರವಾದ ಸವಿನೆನಪಿಗೆ ಪ್ರತಿ ವರ್ಷ ದೇಶಾದಂತ ಆಚರಿಸುವ ಹಬ್ಬವೇ ಸ್ವಾತಂತ್ರ್ಯ ದಿನಾಚರಣೆ .
ಇತರೆ ವಿಷಯಗಳು:
1 ರಿಂದ 10ನೇ ತರಗತಿ ಕನ್ನಡ ನೋಟ್ಸ್ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf