3ನೇ ತರಗತಿ ಕಂದ ಪದ್ಯದ ನೋಟ್ಸ್ ಪ್ರಶ್ನೋತ್ತರ, 3rd Standard Kannada Kanda Poem Notes Question Answer Summery Kseeb Solution For Class 3 Chaprter 4 Notes Pdf Download 3rd Standard Kannada Chapter 4 Notes
ತರಗತಿ : 3ನೇ ತರಗತಿ
ವಿಷಯ : ಕನ್ನಡ
ಪದ್ಯದ ಹೆಸರು : ಕಂದ
ಮೂರನೇ ತರಗತಿ ಕಂದ ಪದ್ಯ
ಅ ) ಈ ಸಾಲುಗಳನ್ನು ಪದ್ಯದಲ್ಲಿರುವಂತೆ ಪೂರ್ಣಗೊಳಿಸು .
1. ಅಳುವ ಕಂದನ ತುಟಿ ………….
ಉತ್ತರ : ಅಳುವ ಕಂದನ ತುಟಿಯು ಹವಳದ ಕುಡಿಹಂಗ
2. ‘ ಆಡಿ ಬಾ ನನ ಕಂದ ……………
ಉತ್ತರ : ಆಡಿ ಬಾ ನನ ಕಂದ ಅಂಗಾಲ ತೊಳೆದೇನ
3. ಕೂಸು ಇದ್ದ ಮನಿಗೆ ………….
ಉತ್ತರ : ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
4. ಕಂದಾನ ಕಿರಿಕಿರಿ ………….
ಉತ್ತರ : ಕಂದಾನ ಕಿರಿಕಿರಿ ಇಂದೇನು ಹೇಳಲಿ .
3rd Standard Kannada Kanda Poem Notes
ಆ ) ಒಂದೊಂದು ಪದ / ವಾಕ್ಯದಲ್ಲಿ ಉತ್ತರ ಬರೆ .
1. ಅಳುವ ಕಂದನ ಕಣ್ಣೋಟ ಹೇಗಿರುತದೆ?
ಉತ್ತರ : ಅಳುವ ಕಂದನ ಕಣ್ಣೋಟ ಶಿವ ಕೈಯಲಗು ಹೊಳೆದಂಗ ಇರುತ್ತದೆ .
2. ಮಗು ಏನನ್ನು ತಂದು ನಿಲ್ಲಿಸೆಂದು ಕೇಳುತ್ತದೆ ?
ಉತ್ತರ : ಮಗು ಸಂಜೆಯ ಹೊತ್ತಿನಲ್ಲಿ ಆಕಾಶದಲ್ಲಿರುವ ಚಂದ್ರನನ್ನು ತಂದು ನಿಲ್ಲಿಸೆಂದು ಕೇಳುತ್ತದೆ .
3. ತಾಯಿಯು ಕಂದನ ಅಂಗಾಲನ್ನು ಯಾವುದರಿಂದ ತೊಳೆಯುವುದಾಗಿ ಹೇಳುತ್ತಾಳೆ ?
ಉತ್ತರ : ತಾಯಿಯು ಕಂದನ ಅಂಗಾಲನ್ನು ತೆಂಗಿನಕಾಯಿಯ ತಿಳಿನೀರಿನಿಂದ ತೊಳೆಯುವುದಾಗಿ ಹೇಳುತ್ತಾಳೆ .
4. ಅಳುವ ಕಂದನ ತುಟಿಯನ್ನು ಯಾವುದಕ್ಕೆ ಹೋಲಿಸಲಾಗಿದೆ ?
ಉತ್ತರ : ಅಳುವ ಕಂದನ ತುಟಿಯನ್ನು ಹವಳದ ಕುಡಿಗೆ ಹೋಲಿಸಲಾಗಿದೆ .
Kanda Poem in Kannada Pdf
ಇ ) ‘ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸು .
1. ಕೂಸು ಇದ್ದ ಮನೆಗೆ ಬೀಸಣಿಗೆ ಬೇಡ , ಏಕೆ ?
ಉತ್ತರ : ಕೂಸು ಮನೆಯ ಒಳಗೆ ಹೊರಗೆ ಆಟವಾಡಿಕೊಂಡು ಇದ್ದರೆ ಅದರ ಸಂತೋಷದಿಂದಲೇ ಮನೆಯಲ್ಲಿ ಗಾಳಿ ಬೀಸಿದಂತಾಗುತ್ತದೆ . ಇಲ್ಲಿ ತಾಯಿ ಮಗುವಿನ ಚಲನವಲನವೇ ಗಾಳಿ ಎಂದು ಸಾಂದರ್ಭಿಕವಾಗಿ ಹೇಳಿದ್ದಾಳೆ .
2. ಆಡಿ ಬಂದ ಕಂದನನ್ನು ತಾಯಿ ಹೇಗೆ ಉಪಚರಿಸುವಳು ?
ಉತ್ತರ : ಆಡಿ ಬಂದ ಕಂದನನ್ನು ತಾಯಿ ಉಪಚರಿಸುತ್ತ ಅದರ ಅಂಗಾಲನ್ನು ತೆಂಗಿನಕಾಯಿಯ ತಿಳಿನೀರಿನಿಂದ ತೊಳೆಯುವಳು ಮತ್ತು ಚಿನ್ನದಂತಹ ಕಂದನ ಮುಖವನ್ನು ತೊಳೆಯುತ್ತಾಳೆ .
ಅ ) ತಪ್ಪುಗಳನ್ನು ಸರಿಪಡಿಸಿ
1. ಬೀಸಣಿಗೆ ಗಾಳಿ ಸುಳಿದವ
ಉತ್ತರ : ಬೀಸಣಿಗೆ ಗಾಳಿ ಸುಳಿದಾವ .
2. ಕುಡಿಹುಬು ಬೇವಿನೆಸಳಂಗ
ಉತ್ತರ : ಕುಡಿಹುಬ್ಬು ಬೇವಿನೆಸಳಂಗ ,
3. ಚಂದಮನ ತಂದು ನಿಲಿಸೆಂದು
ಉತ್ತರ : ಚಂದ್ರಮನ ತಂದು ನಿಲಿಸೆಂದಾ
Kanda Poem in Kannada 3rd Standard
ಆ ) ಈ ಸಾಲುಗಳನ್ನು ನಕಲು ಮಾಡು
1. ಆಡಿ ಬಾ ನನಕಂದ ಅಂಗಾಲ ತೊಳೆದೇನ
ಉತ್ತರ : ಆಡಿ ಬಾ ಎನಕಂದ ಅಂಗಾಲ ತೊಳೆದೇನ .
2. ಕುಡಿಹುಬ್ಬು ಬೇವಿನೆಸಳಂಗ
ಉತ್ತರ : ಕುಡಿಹುಬ್ಬು ಬೇವಿನೆಸಳಂಗ ,
ಇ ) ಈ ಪದ್ಯದಲ್ಲಿ ಒತ್ತಕ್ಷರಗಳಿರುವ ಪದ ಳನ್ನು ಬರೆ .
1. ಕಂದಯ್ಯ
2. ತಕ್ಕೊಂಡು
3. ಕಣ್ಣೋಟ
4. ಕುಡಿಹುಬ್ಬು
5. ಕೈಯಲಗು
6. ಹೊಳೆದಂಗ
ಭಾಷಾ ಚಟುವಟಿಕೆ
ಅ ) ಸಮಾನಾರ್ಥಕ ಪದಗಳನ್ನು ಬರೆ .
1. ಬಂಗಾರ = ಚಿನ್ನ , ಸ್ವರ್ಣ
2. ಕೂಸು = ಕಂದ , ಮಗು
3. ತಾಯಿ = ಅಪ್ಪ , ಅಮ್ಮ
ಆ ) ಈ ವಾಕ್ಯಗಳಲ್ಲಿ ಅಡಿ ಗೆರೆ ಹಾಕಿದ ಪದಗಳಿಗೆ ಗ್ರಾಂಥಿಕ ರೂಪ ಬರೆ .
1. ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ ?
ಉತ್ತರ : ಮನೆಗೆ
2. ಬಂಗಾರ ಮಾರಿ
ಉತ್ತರ : ಮುಖ
3. ಬೀಸಣಿಗೆ ಗಾಳಿ ಸುಳಿದಾವ
ಗಾಳಿ ಬೀಸಿಕೊಳ್ಳಲು ಇರುವ ಸಾಧನ
4. ಚಂಜೀಯ ಚಂದ್ರಮನ ನಿಲಿಸೆಂದಾ
ಉತ್ತರ : ಸಂಜೆಯ
3rd Standard Kanda Poem Summary in Kannada
ಪದ್ಯದ ಸಾರಾಂಶ :
‘ ಕಂದ ‘ ಈ ಪದ್ಯದಲ್ಲಿ ತಾಯಿಯ ಮಮತೆ ವ್ಯಕ್ತವಾಗಿದೆ . ತಾಯಿ ತನ್ನ ಕಂದನ ಕುರಿತು ಪ್ರೀತಿ , ಮಮತೆ , ವಾತ್ಸಲ್ಯವನ್ನು ತೋರುವಳು . ತನ್ನ ಕಂದ ಎಷ್ಟೇ ತೊಂದರೆ ಕೊಡಲಿ ಅಥವಾ ಹಠ ಮಾಡಲಿ ಆದರೆ ತಾಯಿ ತೋರುವ ಮಮತೆ ಮಾತ್ರ ಅನನ್ಯವಾಗಿದೆ . ಇಲ್ಲಿ ತಾಯಿ ಕೂಸು ಇದ್ದ ಬೀಸಣಿಗೆ ಏಕೆ ಬೇಕು ? ಎಂದು ಪ್ರಶ್ನಿಸುತ್ತಾಳೆ . ಆ ಕೂಸು ಮನೆಯ ಒಳಗೆ ಮತ್ತು ಹೊರಗೆ ಆಟವಾಡಿಕೊಂಡು ನಡೆದಾಡಿದರೆ ಅದೇ ಅವಳಿಗೆ ಬೀಸಣಿಗೆ , ಗಾಳಿ ತನ್ನಪ್ಪಕ್ಕೆ ತಾನೇ ಸುಳಿಯುತ್ತದೆ ಎಂದು ಹೇಳುವಳುತಾಯಿ ಆ ಕೂಸಿಗೆ ‘ ಆಟವನ್ನು ಆಡಿ ಬಾ , ತೆಂಗಿನಕಾಯಿ ತಿಳಿನೀರಿನಿಂದ ನಿನ್ನ ಅಂಗಾಲು ಮತ್ತು ನಿನ್ನಚಿನ್ನದಂತಹ ಮುಖವನ್ನು ತೊಳೆಯುತ್ತೇನೆ ‘ ಎಂದು ಹೇಳುತ್ತಾಳೆ .
ತಾಯಿ ತನ್ನ ಕಂದನ ಅಳುವನ್ನು ಮತ್ತು ಅದರ ತುಟಿಯನ್ನು ಹವಳದ ಕುಡಿಯ ಹಾಗೆ ಎಂದು ಹೇಳುವಳು ಹಾಗೂ ಕಂದನ ಕುಡಿ ಹುಬ್ಬು ಬೇವಿನ ಹೂವಿನ ದಳದಂತೆ , ಕಂದನ ಕಣೋಟ ಶಿವನ ಕೈಯಲ್ಲಿಯ ಹೊಳೆಯುವ ಕತ್ತಿಯ ತುದಿಯಂತೆ ಎಂದು ವರ್ಣಿಸುವಳು . ತಾಯಿ ತನ್ನ ಕಂದನ ಕಿರಿಕಿರಿ ಅವಳ ಕಂದ , ಬಿಂದಿಗೆ ಹಾಲು ಸುರಿ ಎಂದು ಹೇಳುತ್ತದೆ ಮತ್ತು ಸಂಜೆಯ ಸಮಯದಲ್ಲಿ ಆಕಾಶದಲ್ಲಿ ಮೂಡಿರುವ ಚಂದ್ರನನ್ನು ತಂದು ನಿಲ್ಲಿಸು ಎಂದು ಕಂದ ಕೇಳುತ್ತದೆ ಎಂದು ತಾಯಿ ಹೇಳುತ್ತಾಳೆ .
FAQ
ಉತ್ತರ : ಅಳುವ ಕಂದನ ಕಣ್ಣೋಟ ಶಿವ ಕೈಯಲಗು ಹೊಳೆದಂಗ ಇರುತ್ತದೆ .
ಉತ್ತರ : ಅಳುವ ಕಂದನ ತುಟಿಯನ್ನು ಹವಳದ ಕುಡಿಗೆ ಹೋಲಿಸಲಾಗಿದೆ .
ಉತ್ತರ : ಮಗು ಸಂಜೆಯ ಹೊತ್ತಿನಲ್ಲಿ ಆಕಾಶದಲ್ಲಿರುವ ಚಂದ್ರನನ್ನು ತಂದು ನಿಲ್ಲಿಸೆಂದು ಕೇಳುತ್ತದೆ .
ಇತರೆ ವಿಷಯಗಳು:
1 ರಿಂದ 10ನೇ ತರಗತಿ ಕನ್ನಡ ನೋಟ್ಸ್ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf