3ನೇ ತರಗತಿ ಜಾತ್ರೆ ಕನ್ನಡ ನೋಟ್ಸ್‌ | 3rd Standard Jatre Kannada Notes Question Answer

3ನೇ ತರಗತಿ ಜಾತ್ರೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 3rd Standard Jatre Kannada Notes Question Answer Summery Pdf Download in Kannada Medium 2024 Kseeb Solution For Class 3 Chapter 11 Notes

3rd Std Jatre Notes in Kannada

3rd Standard Jathre Kannada Notes

ತರಗತಿ : 3ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಜಾತ್ರೆ

Jatre Lesson Question Answer Pdf

ಅ ) ಒಂದೊಂದು ವಾಕ್ಯದಲ್ಲಿ ಉತ್ತರಿಸು .

1. ರಥಬೀದಿ ಹೇಗೆ ಕಂಗೊಳಿಸುತ್ತಿತ್ತು?

ಉತ್ತರ : ರಥಬೀದಿಯು ತಳಿರು ತೋರಣ ಹಾಗೂ ಬಣ್ಣದ ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು .

2. ಕಂಸಾಳೆ ಎಂದರೇನು ?

ಉತ್ತರ : ಕಂಚಿನ ತಾಳಕ್ಕೆ ಕಂಸಾಳೆ ಎನ್ನುವರು .

3 . ದೇವರ ಗುಡ್ಡರು ಎಂದು ಯಾರನ್ನು ಈ ಕರೆಯುತ್ತಾರೆ ?

ಉತ್ತರ : ಕಂಸಾಳೆ ನೃತ್ಯದವರನ್ನು , ಅವರು ಮಲೆಯ ಮಹದೇಶ್ವರನ ಭಕ್ತರಾದ್ದರಿಂದ ಅವರನ್ನು ದೇವರಗುಡ್ಡರು ಎಂದು ಕರೆಯುತ್ತಾರೆ .

4. ಡೊಳ್ಳು ಎಂದರೇನು ?

ಉತ್ತರ : ಡೊಳ್ಳು ಎಂದರೆ ಅದು ಒಂದು ಚರ್ಮ ವಾದ್ಯ .

5. ಡೊಳ್ಳು ಕುಣಿತದವರು ಯಾರ ಭಕ್ತರು ?

ಉತ್ತರ : ಡೊಳ್ಳು ಕುಣಿತದವರು ಬೀರದೇವರ ಭಕ್ತರು .

6. ರಂಗಸ್ಥಳ ಎಂದರೇನು ?

ಉತ್ತರ : ಬಣ್ಣದ ನಾಲ್ಕು ಕಂಬಗಳಿಂದ ಸಿಂಗರಿಸಿರುವ ಆ ಎತ್ತರವಾದ ಜಾಗಕ್ಕೆ ರಂಗಸ್ಥಳ ಎನ್ನುವರು.

7. ಯಾರನ್ನು ಭಾಗವತರೆಂದು ಕರೆಯುತ್ತಾರೆ?

ಉತ್ತರ : ಜಾಗಟೆ ಹಿಡಿದು ದನಿ ಎತ್ತಿ ಹಾಡುತ್ತಿರುವವರನ್ನು ಭಾಗವತರೆಂದು ಕರೆಯುತ್ತಾರೆ .

ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸು .

1. ಬೀಸು ಕಂಸಾಳೆ ಎಂದೇರನು ?

ಉತ್ತರ : ಮಹದೇಶ್ವರನನ್ನು ಕುರಿತು ಹಾಡುತ್ತಾ ಬಾಗಿ , ಬಳುಕಿ , ಕುಳಿತು , ನಿಂತು ಲಯವಾಗಿ ಕಂಸಾಳೆಯನ್ನು ತಟ್ಟುತ್ತಾ ಮತ್ತು ಕಂಸಾಳೆಯನ್ನು ಬೀಸುತ್ತಾ ನೃತ್ಯ ಮಾಡುವುದಕ್ಕೆ ಬೀಸು ಕಂಸಾಳೆ ಎನ್ನುವರು .

2. ಕಂಸಾಳೆಯವರು ಹಾಡುತ್ತಾ ಹೇಗೆ ನರ್ತಿಸುತ್ತಾರೆ ?

ಉತ್ತರ : ಕಂಸಾಳೆಯವರು ಮಹದೇಶ್ವರನನ್ನು ಕುರಿತು ಹಾಡುತ್ತಾ ಬಾಗಿ , ಬಳುಕಿ , ಕುಳಿತು , ನಿಂತು ಲಯವಾಗಿ ಕಂಸಾಳೆಯನ್ನು ತಟ್ಟುತ್ತಾ ನರ್ತಿಸುತ್ತಾರೆ .

3. ಡೊಳ್ಳು ಕುಣಿತವನ್ನು ಯಾವ ಸಂದರ್ಭದಲ್ಲಿ ಮಾಡುತ್ತಾರೆ ?

ಉತ್ತರ : ಡೊಳ್ಳು ಕುಣಿತವನ್ನು ಜಾತ್ರೆ , ಉತ್ಸವ, ಕಲಾಮೇಳ, ಹಬ್ಬ ಮುಂತಾದ ಸಂದರ್ಭಗಳಲ್ಲಿ ಮಾಡುತ್ತಾರೆ.

4. ಯಕ್ಷಗಾನ ಬಯಲಾಟ ಎಂದರೇನು?

ಉತ್ತರ : ಪುರಾಣ ಕಥೆಗಳನ್ನು ವೇಷ , ಕುಣಿತ , ಮಾತು ಹಾಗೂ ಹಿಮ್ಮೇಳದೊಂದಿಗೆ ಆಡಿ ತೋರಿಸುವ ಕಲೆಗೆ ಯಕ್ಷಗಾನ ಬಯಲಾಟ ಎನ್ನುವರು .

5. ಯಕ್ಷಗಾನ ಬಯಲಾಟದ ಮುಖ್ಯ ಅಂಗಗಳಾವುವು ?

ಉತ್ತರ : ಯಕ್ಷಗಾನ ಬಯಲಾಟದಲ್ಲಿ ರಂಗಸ್ಥಳ , ಹಿಮ್ಮೇಳ , ಮುಮ್ಮೇಳ ಮತ್ತು ಪ್ರಸಂಗ ಇವುಗಳೇ ಮುಖ್ಯ ಅಂಗಗಳು .

3rd Standard Jatre Kannada Notes Question answer

ಇ ) ಈ ವಾಕ್ಯಗಳಲ್ಲಿ ಬಿಟ್ಟಿರುವ ಶಬ್ದಗಳನ್ನು ತುಂಬು .

1. ರಾಜು ಮತ್ತು ಕಮಲ ………… ಜೊತೆ ಜಾತ್ರೆಗೆ ಹೋದರು .

ಉತ್ತರ : ತಾತನ

2. ಜಾತ್ರೆಯಲ್ಲಿ ನೋಡಿದಲ್ಲೆಲ್ಲಾ …………

ಉತ್ತರ : ಜನಸಾಗರವೇ

3. ಯಕ್ಷಗಾನ ಬಯಲಾಟದ ಅಂದಿನ ಪ್ರಸಂಗ …………

ಉತ್ತರ : ಶ್ರೀದೇವಿ ಮಹಾತ್ಮ

4 ಜಾತ್ರೆಯಲ್ಲಿ ಭಕ್ತರು ………… ಎಳೆಯುತ್ತಿದ್ದರು .

ಉತ್ತರ : ರಥ

ಹೊಂದಿಸಿ ಬರೆಯಿರಿ

ಅ ಬ ಉತ್ತರ

ಡೊಳ್ಳು ತಾಳವಾದ್ಯ ಚರ್ಮವಾದ್ಯ

ಕಂಸ ಚಂಡೆ ತಾಳವಾದ್ಯ

ಯಕ್ಷಗಾನ ಚರ್ಮವಾದ್ಯ ಚಂಡೆ

3rd Standard Jatre Kannada Notes Pdf Download

ಉ ) ಈ ಮಾತುಗಳನ್ನು ಯಾರು , ಯಾರಿಗೆ ಹೇಳಿದರು ? ಬರೆ .

1. ‘ ಇವರು ಮಲೆಯ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು .

‘ ಉತ್ತರ : ಈ ಮಾತನ್ನು ತಾತನು ರಾಜುವಿಗೆ ಹೇಳಿದನು

2. ‘ ತಾತ ಅದೇನದು ಅಲ್ಲಿ ಕಾಣುತ್ತಿರುವುದುʼ

ಉತ್ತರ : ಈ ಮಾತನ್ನು ರಾಜು , ತಾತನಿಗೆ ಕೇಳುವನು .

ಅ ) ಈ ಶಬ್ದಗಳನ್ನು ಬಳಸಿ ಆರ್ಥಪೂರ್ಣ ವಾಕ್ಯ ರಚಿಸು.

1. ಕುತೂಹಲ: ಜಾತ್ರೆಯಲ್ಲಿ ನೃತ್ಯ ಮಾಡುವವರನ್ನು ಕಂಡು ರಾಜು ಕುತೂಹಲದಿಂದ ಅವರು ಯಾರು? ಎಂದು

2. ಬಾರಿಸು : ಜಾತ್ರೆಯಲ್ಲಿ ಡಬ್ ಡಬ್ ಸದ್ದು ಮಾಡುತ್ತಾ ಡೊಳ್ಳು ಬಾರಿಸುತ್ತಿದ್ದರು .

ಭಾಷಾಭ್ಯಾಸ

ಅ ) ಇಲ್ಲಿ ಕೊಟ್ಟಿರುವ ವಿವರವು ನಡೆದು ಹೋಗಿರುವ ಘಟನೆಯದ್ದಾಗಿದೆ . ಅಡಿಗರೆ ಎಳೆದಿರುವ ಪದಗಳನ್ನು ಮಾತ್ರ ಬದಲಿಸಿ ಮುಂದೆ ನಡೆಯಲಿರುವ ಘಟನೆಯಂತ ಬದಲಿಸಿ ಬರೆ .

ರಾಜು ಓಟದ ಸ್ಪರ್ಧೆಯಲ್ಲಿ ಓಡಿದನು . ಸ್ಪರ್ಧೆಯಲ್ಲಿ ಗೆದ್ದನು . ಅವನಿಗೆ ಬಹುಮಾನ ನೀಡಿದರು ರಾಜು ಬಹುಮಾನ ಪಡೆದುಕೊಂಡನು . ಜನರು ಚಪ್ಪಾಳೆ ತಟ್ಟಿದರು . ರಾಜು ಸಂತೋಷದಿಂದ ನಕ್ಕನು .

ರಾಜು ಓಟದ ಸ್ಪರ್ಧೆಯಲ್ಲಿ ಓಡುವನು , ಸ್ಪರ್ಧೆಯಲ್ಲಿ ಗೆಲ್ಲುವನು . ಅವನಿಗೆ ಬಹುಮಾನ ನೀಡುವರು . ರಾಜು ಬಹುಮಾನ ಪಡೆದುಕೊಳ್ಳುವನು . ಜನರು ಚಪ್ಪಾಳೆ ತಟ್ಟುವರು . ರಾಜು ಸಂತೋಷದಿಂದ ನಗುವನು .

FAQ

1. ಕಂಸಾಳೆ ಎಂದರೇನು ?

ಉತ್ತರ : ಕಂಚಿನ ತಾಳಕ್ಕೆ ಕಂಸಾಳೆ ಎನ್ನುವರು .

2. ಡೊಳ್ಳು ಕುಣಿತದವರು ಯಾರ ಭಕ್ತರು ?

ಉತ್ತರ : ಡೊಳ್ಳು ಕುಣಿತದವರು ಬೀರದೇವರ ಭಕ್ತರು .

3 ರಥಬೀದಿ ಹೇಗೆ ಕಂಗೊಳಿಸುತ್ತಿತ್ತು?

ಉತ್ತರ : ರಥಬೀದಿಯು ತಳಿರು ತೋರಣ ಹಾಗೂ ಬಣ್ಣದ ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

3ನೇ ತರಗತಿ ಕನ್ನಡ ನೋಟ್ಸ್

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *

rtgh