3ನೇ ತರಗತಿ ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | 3rd Standard Anarogyada Simha Poem Notes

3ನೇ ತರಗತಿ ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌, 3rd Standard Anarogyada Simha Poem Notes Question Answer Summery in Kannada Pdf 2024 ಅನಾರೋಗ್ಯದ ಸಿಂಹ Notes Kseeb Solution For Class 3 Chapter 12 Notes 2024

Anarogyada Simha Poem Notes

Anarogyada Simha Poem Notes 2022

ಅ ) ಒಂದು ಪದ / ವಾಕ್ಯದಲ್ಲಿ ಉತ್ತರಿಸು .

1. ಕಾಡಿನ ರಾಜ ಸಿಂಹಕ್ಕೆ ಏನಾಯಿತು ?

ಉತ್ತರ : ಕಾಡಿನ ರಾಜ ಸಿಂಹಕ್ಕೆ ಅನ್ನವೂ ಸೇರದೆ , ನೀರೂ ಸೇರದೇ ಅನಾರೋಗ್ಯ ಉಂಟಾಯಿತು .

2. ಡಾ . ಜೀಬ್ರಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಉತ್ತರ : ಡಾ . ಜೀಬ್ರಾ ಕಾಡಿನ ರಾಜ ಸಿಹವನ್ನು ಪರೀಕ್ಷಿಸಿ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು .

3. ಡಾ . ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಉತ್ತರ : ಡಾ.ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎಂದು ಹೇಳಿತು .

4. ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಉತ್ತರ : ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನನಗೆ ‘ ಎಂದು ಹೇಳಿತು .

5. ಈ ಪದ್ಯದ ನೀತಿಯೇನು ? ‘

ಉಪಾಯ ಬಲ್ಲವನಿಗೆ ಅಪಾಯವಿಲ್ಲ ‘ ಎಂಬ ಪದ್ಯದ ನೀತಿಯಾಗಿದೆ .

3rd Standard Anarogyada Simha Poem Notes Question Answer

ಆ ) ಎರಡು , ಮೂರು ವಾಕ್ಯಗಳಲ್ಲಿ ಉತ್ತರಿಸು .

1. ಕಾಡಿನ ರಾಜ ಸಿಂಹವು ವ್ಯಥೆ ಪಡಲು ಕಾರಣವೇನು ?

ಉತ್ತರ : ಕಾಡಿನ ರಾಜ ಸಿಂಹವು ವ್ಯಥೆಪಡಲು ಕಾರಣವೇನೆಂದರೆ – ಅದಕ್ಕೆ ಊಟಮಾಡಲು ಅನ್ನವು ಸೇರದಂತಾಯಿತು ಹಾಗೂ ನೀರೂ ಕೂಡ ಸೇರದಂತಾಯಿತು . ಹೀಗಾಗಿ ಸಿಂಹವು ಅನಾರೋಗ್ಯದಿಂದ ಬಹಳಷ್ಟು ನೋವು ಪಟ್ಟಿತು .

2. ಡಾ . ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು ? ಸಿಂಹವು ಏನು ಮಾಡಿತು ?

ಉತ್ತರ : ಡಾ.ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಬಾಯನ್ನು ತೆಗೆಯಲು ಹೇಳಿತು . ಸಿಂಹವು ಬಾಯನ್ನು ತೆರೆದು ತೋರಿಸಿದ ನಂತರ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು . ಆಗ ಸಿಂಹಕ್ಕೆ ಕೋಪವು ಬಂದು ಹೀಗೆ ಹೇಳಲು ಎಂಥ ಧೈರ್ಯ ನಿನಗೆ ಎಂದು ಗರ್ಜಿಸಿತು . ಸತ್ಯವನ್ನು ಹೇಳಿದ ವೈದ್ಯನನ್ನು ಬೈದು ಹೊರಗಡೆ ಓಡಿಸಿತು .

3. ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು? ಸಿಂಹವು ಏನು ಮಾಡಿತು ?

ಉತ್ತರ : ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹದ ನಾಡಿಯನ್ನು ಹಿಡಿದು ನೋಡಿ ಪರೀಕ್ಷಿಸಿತು . ನಂತರ ಸಿಂಹಕ್ಕೆ ಬಾಯಿಯನ್ನು ತೆರೆಯಲು ಹೇಳಿತು . ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎನ್ನುತ್ತ ಅದರ ಮುಖವನ್ನು ನೋಡಿತು . ಆಗ ಸಿಂಹವು ಕೋಪಗೊಂಡು ನನ್ನ ಎದುರಿನಲ್ಲೇ ಪ್ರಶಂಸೆ ಮಾಡುತ್ತಿಯಾ ಎಂದು ಹೇಳುತ್ತದೆ . ಇರುವ ಸತ್ಯವ ಹೇಳಲು ಹೆದರಿದ ಡಾ . ಹೈನಾಳನ್ನು ಹೊರ ಹಾಕಿಸಿತು .

4. ಜಾಣ ವೈದ್ಯ ನರಿ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೇ ಪರೀಕ್ಷಿಸಿತು ?

ವೈದ್ಯ ನರಿ ಚಕ್ರವರ್ತಿಯಾದ ಸಿಂಹವನ್ನು ಉಪಚರಿಸುತ್ತ ಬಾಯನ್ನು ತೆಗೆಯಲು ವಿನಂತಿಸಿತು . ಆಗ ಚಕ್ರವರ್ತಿಯಾದ ಸಿಂಹವು ಉಸಿರನು ಕುರಿತು ಏನು ಹೇಳುವಿರಿ ? ‘ ಎಂದು ಕೇಳುತ್ತಾ ತನ್ನ ಬಾಯನ್ನು ತೆರೆಯಿತು . ಆಗ ಬುದ್ಧಿವಂತ ನರಿಯು ‘ ಶೀತದ ಮೂಗು ಕಟ್ಟಿದೆ ಒಡೆಯ ವಾಸನೆ ಏನು ನನಗೆ ತಿಳಿಯದು ” ಎಂದು ತಕ್ಷಣ ಹೇಳುತ್ತಾ ಕ್ಷಮೆಯನ್ನು ಕೇಳಿತು . ಬುದ್ಧಿವಂತ ನರಿಯು ಸಿಂಹದ ಕೋಪಕ್ಕೆ ಬಲಿಯಾಗದೆ ಪಾರಾಯಿತು .

ಇ ) ಸಮಾನಾರ್ಥಕ ಪದಗಳನ್ನು

ಅಡವಿ = ಕಾಡು , ಅರಣ್ಯ ,

ಕಾಯಿಲೆ = ರೋಗ , ವ್ಯಾಧಿ ,

ದುರ್ವಾಸನೆ = ದುರ್ನಾತ ,

ಸಾಮರ್ಥ್ಯಧಾರಿತ ಚಟುವಟಿಕೆ

ಅ ) ಈ ಒಗಟುಗಳನ್ನು ಬಿಡಿಸಿ ಸರಿ ಉತ್ತರವನ್ನು ಆವರಣದಿಂದ ಆರಿಸಿ ಬರೆ .

[ ನಾಲಗೆ , ಮೀನು , ಕಮಲ ]

1. ನೀರಲೇ ಹುಟ್ಟುತ್ತದೆ . ನೀರಲೇ ಬೆಳೆಯುತ್ತದೆ . ನೀರಲೇ ಸಾಯುತ್ತದೆ .

ಉತ್ತರ : [ ಕಮಲ ]

2. ‘ ನಾಡಿನಲ್ಲಿ ಮೊದಲಿರುವ ‘ ಕೆಲಸ’ದಲ್ಲಿ ನಡುವಿರುವ ‘ ಕೊಡುಗೆ’ಯಲ್ಲಿ ಕಡೆಗಿರುವೆ ನುಡಿ ನಾ ಯಾರೆಂದು ?

ಉತ್ತರ : [ ನಾಲಗೆ ]

3. ನೀರಿನಲ್ಲಿದ್ದರೆ ಗಿಲಿಗಿಲಿ ನೀರ ಹೊರಗಿದ್ದರೆ ವಿಲಿವಿಲಿ ಕಡಲ ಕಾಗೆಗೆ ನಾ ಮಿರಿಮಿರಿ

ಉತ್ತರ : ಮೀನು

Anarogyada Simha Poem Summery in Kannada

ಸಾರಾಂಶ :

ಕವಿ ತಮ್ಮ ಈ ‘ ಅನಾರೋಗ್ಯದ ಸಿಂಹ ‘ ಎಂಬ ಕವಿತೆಯಲ್ಲಿ ಕಾಡಿನಲ್ಲಿ ವಾಸಿಸುವ ಪ್ರಾಣಿಗಳನ್ನು ಬಳಸಿಕೊಂಡು ಕಥನ ಕವನ ರಚಿಸುವುದರ ಮೂಲಕ ಯಾರಿಗೆ ಉಪಾಯ ತಿಳಿದಿರುತ್ತದೆಯೋ ಅವರಿಗೆ ಅಪಾಯವಿಲ್ಲ ಎಂಬ ಸಂದೇಶವನ್ನು ಈ ಪದ್ಯದಲ್ಲಿ ಸಿಂಹದ ಅನಾರೋಗ್ಯದ ಕಥೆಯನ್ನು ಕವಿ ಕಾಡಿನಲ್ಲಿ ವಾಸಿಸುವರಾಜಸಂಹರಾಯನು ಯನು ಒಂದು ದಿನ ಅನಾರೋಗ್ಯದಿಂದ ಬಳಲುತ್ತಿದ್ದನು . ಸಿಂಹಕ್ಕೆ ಊಟವೂ ಸೇರದಂತಾಯಿತು . ನೀರೂ ಸೇರದಂತಾಯಿತು . ಹೀಗಾಗಿ ಸಿಂಹವು ಬಹಳ ನೋವು ರಾಜನಾದ ಸಿಂಹವು ಅರ ಎಲ್ಲ ವೈದ್ಯರುಗಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಚಿಕಿತ್ಸೆ ಪಡೆಯಲು ಕರೆಯಿಸಿತು . ಮೊದಲು ಡಾ.ಜೀಬ್ರಾ ಸಿಂಹವನ್ನು ಪರೀಕ್ಷಿಸಿ ಅದರ ಬಾಯನ್ನು ತೆಗೆಯಲು ಹೇಳಿತು . ಅದರಂತೆ ಸಿಂಹವು ತನ್ನ ಬಾಯಿಯನ್ನು ತೆರೆದು ತೋರಿಸಿತು . ಆಗ ಡಾ . ಜೀಬ್ರಾ ಕೆಟ್ಟ ವಾಸನೆಯ ಉಸಿರಿದೆ ಎಂದು ಹೇಳಿತು . ಈ ಮಾತನ್ನು ಕೇಳಿದ ಸಿಂಹವು ಇಂತಹ ಮಾತನ್ನಾಡಲು ಎಷ್ಟು ಧೈರ್ಯ ನಿನಗೆ ಎಂದು ಗರ್ಜಿಸಿತು . ಇದ್ದ ಸತ್ಯವನ್ನು ಹೇಳಿದ ಡಾ . ಜೀಬ್ರಾವನ್ನು ಸಿಂಹವು ಬೈದು ಹೊರಗಡೆ ಓಡಿಸುತ್ತದೆ .

ಮುಂದಿನ ಸರದಿ ಡಾ . ಹೈನಾ ಸಿಂಹವನ್ನು ಪರೀಕ್ಷಿಸಲು ಬಾಗಿಲು ತಟ್ಟಿ ಒಳಗೆ ಬಂದಿತು . ಸಿಂಹದ ನಾಡಿಯ ಹಿಡಿದು ನೋಡಿದ ನಂತರ ಬಾಯನ್ನು ತೆರೆಯಲು ಹೇಳಿತು . ಎಂತಹ ಸುವಾಸನೆ ನಿಮ್ಮ ಉಸಿರಲ್ಲಿ ಎಂದು ಹೊಗಳುತ್ತ ಮುಖವನ್ನು ನೋಡಿತು . ಆಗ ಸಿಂಹಕ್ಕೆ ಕೋಪವು ನೆತ್ತಿಗೆ ಏರಿತು . ನೀನು ನನ್ನನ್ನು ಮಾಡಲು ಬಂದಿರುವೆ . ನನಗೆ ಚಿಕಿತ್ಸೆ ನೀಡಲು ಬಂದಿಲ್ಲ ಎಂದು ಹೇಳಿತು . ಇದ್ದ ಸತ್ಯವನ್ನು ಹೇಳಲು ಹೈನಾಳನ್ನು ಹೊರ ಹಾಕಿಸಿತು . ಹೆದರಿದ ಬಾಗಿಲು ನಂತರದ ಸರದಿ ಜಾಣ ವೈದ್ಯ ನರಿಯದಾಗಿತ್ತು . ತಟ್ಟಿ ಒಳಗೆ ಬಂದಿತು . ಉಪಚರಿಸುತ್ತ ಬಾಯನ್ನು ತೆರೆಯಲು ಹೇಳಿತು . ಆಗ ಸಿಂಹವು ಉಸಿರನ್ನು ಕುರಿತು ಏನು ಹೇಳುವಿ ? ಎಂದು ಪ್ರಶ್ನಿಸುತ್ತಾ ತನ್ನ ಬಾಯನ್ನು ತೆಗೆಯಿತು . ಬುದ್ಧಿವಂತ ನರಿಯು ತಕ್ಷಣವೇ ಶೀತದಿಂದ ಮೂಗು ಕಟ್ಟಿದೆ ಒಡೆಯ ವಾಸನೆ ಏನು ನನಗೆ ತಿಳಿಯದು ಎಂದು ಹೇಳುತ್ತ ಕ್ಷಮೆಯನ್ನು ಕೇಳುತ್ತದೆ . ಸಿಂಹದ ಕೋಪಕ್ಕೆ ಬಲಿಯಾಗದೆ ನರಿಯು ಪಾರಾಯಿತು . ಆದ್ದರಿಂದ ‘ ಉಪಾಯ ಬಲ್ಲವನಿಗೆ ಅಪಾಯವಿಲ್ಲ ‘ ಎನ್ನುವುದೇ ಇಲ್ಲಿಯ ನೀತಿಯಾಗಿದೆ .

FAQ

1. ಡಾ . ಜೀಬ್ರಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಉತ್ತರ : ಡಾ . ಜೀಬ್ರಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು .

2. ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಉತ್ತರ : ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನನಗೆ ‘ ಎಂದು ಹೇಳಿತು .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

3ನೇ ತರಗತಿ ಕನ್ನಡ ನೋಟ್ಸ್

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *

rtgh