3ನೇ ತರಗತಿ ಹೊಯ್ಸಳ ಕನ್ನಡ ನೋಟ್ಸ್‌ | 3rd Standard Hoysala Kannada Notes Question Answer

3ನೇ ತರಗತಿ ಹೊಯ್ಸಳ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 3rd Standard Hoysala Lesson Notes Question Answer 3rd Std Kannada Hoysala Notes Pdf 2024 Kseeb Solution For Class 3 Chapter 13 Notes

ತರಗತಿ : 3ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಹೊಯ್ಸಳ

3rd Standard Hoysala Lesson Notes

Hoysala 3rd Standard Notes Question Answer

ಅ ) ಒಂದು ವಾಕ್ಯದಲ್ಲಿ ಉತ್ತರಿಸು .

1 . ಬೈಲೂರಿನಲ್ಲಿರುವ ದೇವಾಲಯ ಯಾವುದು ?

ಬೇಲೂರಿನಲ್ಲಿರುವ ದೇವಾಲಯ ಚೆನ್ನಕೇಶವ ದೇವಾಲಯ ,

2. ‘ ಅಂಗಡಿ ‘ ಎಂಬ ಹಳ್ಳಿ ಎಲ್ಲಿದೆ ?

ಉತ್ತರ : ‘ ಅಂಗಡಿ ‘ ಎಂಬ ಹಳ್ಳಿ ಮೂಡಿಗೆರೆ ತಾಲೂಕಿನಲ್ಲಿದೆ .

3. ಹುಲಿಯ ಬಾಯಿಗೆ ಸಲಾಕೆಯಿಂದ ತಿವಿದ ಬಾಲಕ ಯಾರು ?

ಉತ್ತರ : ಹುಲಿಯ ಬಾಯಿಗೆ ಸಲಾಕೆಯಿಂದ ತಿವಿದ ಬಾಲಕ ‘ ಸಳ ‘ .

4. ಹೊಯ್ಸಳ ಲಾಂಛನವು ಯಾವ ಘಟನೆಯನ್ನು ತಿಳಿಸುತ್ತದೆ ?

ಉತ್ತರ : ಹೊಯ್ಸಳ ಲಾಂಛನವು ಸಳನು ಹುಲಿಯನ್ನು ಕೊಂದ ಘಟನೆಯನ್ನು ತಿಳಿಸುತ್ತದೆ .

5. ಸಳನಿಗೆ ‘ ಹೊಯ್ ಸಳ ‘ ಎಂದು ಯಾರು ಹೇಳಿದರು ?

ಉತ್ತರ : ಗುರುಗಳಾದ ಜೈನ ಗುರು ಒಬ್ಬರು ಸಳನಿಗೆ ‘ ಹೊಯ್ ಸಳ ‘ ಎಂದು ಹೇಳಿದರು .

6. ಚೆನ್ನ ಕೇಶವ ದೇವಾಲಯವನ್ನು ಯಾರು ಕಟ್ಟಿಸಿದರು ?

ಉತ್ತರ : ಚೆನ್ನಕೇಶವ ದೇವಾಲಯವನ್ನು ವಿಷ್ಣುವರ್ಧನನು ಕಟ್ಟಿಸಿದನು .

ಆ ) ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸು .

1. ಸಳನ ಮನೆತನಕೆ ಹೊಯ್ಸಳ ಎಂಬ ಹೆಸರು ಹೇಗೆ ಬಂತು ?

ಉತ್ತರ : ಮೂಡಿಗೆರೆ ತಾಲೂಕಿನ ಅಂಗಡಿ ಎಂಬ ಹಳ್ಳಿಯ ವಾಸಂತಿ ದೇವಿಯ ಗುಡಿಯಲ್ಲಿ ಜೈನ ಗುರುಗಳು ಪಾಠ ಮಾಡುತ್ತಿದ್ದಾಗ ಹೆಬ್ಬುಲಿಯು ಆರ್ಭಟಿಸುತ್ತಾ ಗುರುಗಳ ಕಡೆಗೆ ಬರುತ್ತದೆ . ಎಲ್ಲ ಶಿಷ್ಯರು ಹೌಹಾರಿ ಓಡುವರು . ಶಿಷ್ಯರಲ್ಲಿ ಒಬ್ಬನಾದ ಸಳನು ಗುರುಗಳ ರಕ್ಷಣೆಗೆ ನಿಂತನು . ಗುರುಗಳು ಅವನ ಕೈಗೆ ಒಂದು ಕಬ್ಬಿಣದ ಸಲಾಕೆ ಕೊಟ್ಟು ‘ ಹೊಯ್ ಸಳ ‘ , ‘ ಹೊಯ್ ಸಳ ‘ ಎಂದು ಕೂಗಿ ಹೇಳಿದರು . ಹೆದರದ ಸಳನು ಸಲಾಕೆಯಿಂದ ಹುಲಿಯನ್ನು ಹೊಡೆದನು . ನಂತರ ಆ ಸಲಾಕೆಯನ್ನು ಹುಲಿಯ ಬಾಯಲ್ಲಿ ತೂರಿಸಿ ಅದನ್ನು ಕೊಂದು ಹಾಕಿದನು. ಹುಲಿಯನ್ನು ಮಣಿಸಿದ ‘ ಘಟನೆಗಾಗಿಯೇ ಸಳನ ಮನೆತನಕ್ಕೆ ಹೊಯ್ಸಳ ಎಂಬ ಹೆಸರು ಬಂದಿತು ಮತ್ತು ಆ ಹೆಸರು ವಂಶದ ಲಾಂಛನವಾಯಿತು . ‘ ಹೊಯ್ಸಳ ‘ ಎಂಬ ನುಡಿಯಿಂದಲೇ ಅವನ ವಂಶವು ಪ್ರಸಿದ್ದಿಯಾಯಿತು .

2. ಜನರು ಸಳನನ್ನು ತಮ್ಮದೊರೆ ಎಂದು ಒಪ್ಪಲು ಕಾರಣವೇನು ?

ಉತ್ತರ : ಸಳನು ಹುಲಿಯನ್ನು ಮಣಿಸಿದ ಸುದ್ದಿ ಗ್ರಾಮದಲ್ಲೆಲ್ಲಾ ಹರಡಿತು . ಗುರುಗಳು ‘ ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ , ಇವನು ನಿಮ್ಮೆಲ್ಲರನ್ನು ಕಾಪಾಡುವನು ‘ ಎಂದರು . ಈ ಕಾರಣಕ್ಕಾಗಿ ಸಳನನ್ನು ಜನರು ತಮ್ಮದೊರೆ ಎಂದು ಒಪ್ಪಿಕೊಂಡರು .

3. ಹೊಯ್ಸಳರಿಂದ ನಿರ್ಮಾಣಗೊಂಡ ಪ್ರಸಿದ್ಧ ದೇವಾಲಯಗಳು ಯಾವುವು ?

ಉತ್ತರ : ಬೇಲೂರು , ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳು ಹೊಯ್ಸಳರಿಂದ ನಿರ್ಮಾಣಗೊಂಡ ಪ್ರಸಿದ್ಧ ದೇವಾಲಯಗಳಾಗಿವೆ .

3rd Standard Hoysala Lesson Notes

ಇ ) ಈ ಮಾತನ್ನು ಯಾರು ಯಾರಿಗೆ ಹೇಳಿದರು ? ಬರೆ .

1. “ ಗುರುಗಳೇ , ಅಲ್ಲಿ ಕಾಣುತ್ತಿರುವ ಊರು ಯಾವುದು ?

” ಉತ್ತರ : ಈ ಮಾತನ್ನು ವರುಣನು ಗುರುಗಳಿಗೆ ಕೇಳುವನು .

2. “ ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ . ”

ಉತ್ತರ : ಈ ಮಾತನ್ನು ಗುರುಗಳು ಗುಂಪು ಗುಂಪಾಗಿ ಬಂದ ಗ್ರಾಮದ ಜನರಿಗೆ ಹೇಳುವರು .

3. “ ಭಲೇ ಸಳ ! ಒಳ್ಳೆಯ ಕೆಲಸ ಮಾಡಿದೆ . ”

ಉತ್ತರ : ಈ ಮಾತನ್ನು ಗುಂಪು ಗುಂಪಾಗಿ ಬಂದ ಗ್ರಾಮದ ಜನರು ಸಳನಿಗೆ ಹೇಳಿದರು .

ಈ ) ಕೊಟ್ಟಿರುವ ವಾಕ್ಯಗಳನ್ನು ಸರಿಪಡಿಸಿ ಬರೆ .

1. ಈ ದೇವಾಲಯವು ನಿರ್ಮಾಣವಾಗಿದೆ ನಕ್ಷತ್ರಾಕಾರದ ಜಗಲಿಯ ಮೇಲೆ

ಉತ್ತರ : ನಕ್ಷತ್ರಾಕಾರದ ಜಗಲಿಯ ಮೇಲೆ ಈ ದೇವಾಲಯವು ನಿರ್ಮಾಣವಾಗಿದೆ .

2. ರಕ್ಷಣೆಗೆ ನಿಂತನು ಗುರುಗಳ ಸಳನು

ಉತ್ತರ : ಸಳನು ಗುರುಗಳ ರಕ್ಷಣೆಗೆ ನಿಂತನು .

3. ಉತ್ತರ : ಹುಲಿಯನ್ನು ಹರಡಿತು ಹರಡಿತು ಸುದ್ದಿ ಗ್ರಾಮದಲ್ಲೆಲ್ಲಾ

3. ಹುಲಿಯನ್ನು ಕೊಂದ ಸುದ್ದಿ ಗ್ರಾಮದಲ್ಲೆಲ್ಲಾ ಹರಡಿತು

ಉ ) ಈ ವಾಕ್ಯಗಳು ಸರಿ ಇದ್ದರೆ ( ) ಎಂದೂ , ತಪ್ಪಿದ್ದರೆ ತಪ್ಪು ( X ) ಎಂದೂ ಗುರುತಿಸಿ ಬರೆ .

1. ಸಳನು ಹುಲಿಯನ್ನು ಕಂಡು ಹೆದರಿದನು . ( X )

2. ವಾಸಂತಿ ದೇವಿಯ ಗುಡಿಯಲ್ಲಿ ಜೈನ ಗುರು ಒಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು . ( )

3. ಬೇಲೂರಿನಲ್ಲಿರುವುದು ಚೆನ್ನಕೇಶವ ದೇವಾಲಯ . ( )

4. ಗುರುಗಳು ಹುಲಿಯನ್ನು ಕೊಂದರು . ( X )

ಭಾಷಾ ಚಟುವಟಿಕೆ

ಅ ) ಮಾದರಿಯಂತ ಕೂಡಿಸಿ ಬರೆ

ಮಾದರಿ : ಹಣ + ವಂತ = ಹಣವಂತ

1. ಧೈರ್ಯ + ವಂತ = ಧೈರ್ಯವಂತ

2. ಬುದ್ಧಿ + ವಂತ = ಬುದ್ದಿವಂತ

3. ಗುಣ + ವಂತ = ಗುಣವಂತ

4. ಶೀಲ + ವಂತ = ಶೀಲವಂತ

5. ಛಲ + ವಂತ = ಛಲವಂತ

ಆ ) ಕೊಟ್ಟಿರುವ ವಾಕ್ಯಗಳಿಗೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು .

1. ಆಹಾ ಈ ಜಲಪಾತವು ಎಷ್ಟು ಅದ್ಭುತವಾಗಿದೆ

ಉತ್ತರ : ಆಹಾ ! ಈ ಜಲಪಾತವು ಎಷ್ಟು ಅದ್ಭುತವಾಗಿದೆ.

2. ಗುರುಗಳೇ ರಸ್ತೆ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲವೇ

ಉತ್ತರ : ಗುರುಗಳೇ , ರಸ್ತೆ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲವೇ ?

3. ಮಾವಿನ ತೋಪಿಗೆ ರಂಗ ರವಿ ರಾಜು ಹಾಗೂ ರಾಮ ಹೋದರು

ಉತ್ತರ : ಮಾವಿನ ತೋಪಿಗೆ ರಂಗ , ರವಿ , ರಾಜು ಹಾಗೂ ರಾಮ ಹೋದರು .

FAQ

1 . ಬೈಲೂರಿನಲ್ಲಿರುವ ದೇವಾಲಯ ಯಾವುದು ?

ಬೇಲೂರಿನಲ್ಲಿರುವ ದೇವಾಲಯ ಚೆನ್ನಕೇಶವ ದೇವಾಲಯ ,

2. ಹೊಯ್ಸಳ ಲಾಂಛನವು ಯಾವ ಘಟನೆಯನ್ನು ತಿಳಿಸುತ್ತದೆ ?

ಉತ್ತರ : ಹೊಯ್ಸಳ ಲಾಂಛನವು ಸಳನು ಹುಲಿಯನ್ನು ಕೊಂದ ಘಟನೆಯನ್ನು ತಿಳಿಸುತ್ತದೆ .

3. ಚೆನ್ನ ಕೇಶವ ದೇವಾಲಯವನ್ನು ಯಾರು ಕಟ್ಟಿಸಿದರು ?

ಉತ್ತರ : ಚೆನ್ನಕೇಶವ ದೇವಾಲಯವನ್ನು ವಿಷ್ಣುವರ್ಧನನು ಕಟ್ಟಿಸಿದನು .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

3ನೇ ತರಗತಿ ಕನ್ನಡ ನೋಟ್ಸ್

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *

rtgh