3ನೇ ತರಗತಿ ಕಪ್ಪೆಯ ಹಾಡು ಪದ್ಯದ ಕನ್ನಡ ನೋಟ್ಸ್‌ | 3rd Standard Kappeya Hadu Poem Notes

3ನೇ ತರಗತಿ ಕಪ್ಪೆಯ ಹಾಡು ಪದ್ಯದ ಕನ್ನಡ ನೋಟ್ಸ್‌, 3rd Standard Kappeya Hadu Poem Notes Question Answer Summery in Kannada Pdf Download 2024 Kseeb Solution For Class Chapter 14 Kappeya Hadu in Kannada Notes

ತರಗತಿ : 3ನೇ ತರಗತಿ

ವಿಷಯ : ಕನ್ನಡ

ಪದ್ಯದ ಹೆಸರು ; ಕಪ್ಪೆಯ ಹಾಡು

3rd Standard Kappeya Hadu Poem Notes

Kappeya Hadu in Kannada Notes

ಅ ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು .

1. ಕಪ್ಪೆಯ ಗೆಳೆಯ ಯಾರು ?

ಉತ್ತರ : ರೈತನು ಕಪ್ಪೆಯ ಗೆಳೆಯನಾಗಿದ್ದಾನೆ .

2. ರೈತ ಯಾವುದಕ್ಕಾಗಿ ಕಾಯುತ್ತಿರುವನು ?

ಉತ್ತರ : ರೈತನು ಕಪ್ಪೆಯ ಕೊರಳ ಹಾಡಿಗಾಗಿ ಕಾಯುತ್ತಿರುವನು .

3. ಕಪ್ಪೆಯ ಬಣ್ಣ ಯಾವುದು ?

ಉತ್ತರ : ಕಪ್ಪೆಯ ಬಣ್ಣ ಮಣ್ಣಿನ ಬಣ್ಣ

4. ಕಪ್ಪೆಯ ಕಣ್ಣು ಹೇಗಿದೆ ?

ಉತ್ತರ : ಕಪ್ಪೆಯ ಕಣ್ಣು ನೀಲಿಯಾಗಿದೆ .

5. ಕಪ್ಪೆ ಯಾವ ಸಮಯದಲ್ಲಿ ಕಾಣಸಿಗುತ್ತದೆ .

ಉತ್ತರ : ಕಪ್ಪೆಯು ಸಂಜೆಯ ಹೊತ್ತಿನಲ್ಲಿ ಕಾಣಸಿಗುತ್ತದೆ .

6. ಬೇಸಿಗೆಯಲ್ಲಿ ಕಪ್ಪೆ ಎಲ್ಲಿ ವಾಸ ಮಾಡುತ್ತದೆ ?

ಉತ್ತರ : ಬೇಸಿಗೆಯಲ್ಲಿ ಕಪ್ಪೆ ನೆಲದ ಒಳಗೆ ವಾಸಿಸುತ್ತದೆ .

ಆ ) ಈ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸು .

1. ಕಪ್ಪೆ ಹೇಗಿರುತ್ತದೆ ಎಂದು ಕವಿ ಹೇಳಿದ್ದಾನೆ ?

ಉತ್ತರ : ಇಲ್ಲಿ ಕವಿ ಕಪ್ಪೆಯು ಮಣ್ಣಿನ ಬಣ್ಣದ್ದಾಗಿದೆ ಮತ್ತು ನೀಲಿ ಕಣ್ಣುಗಳನ್ನು ಹೊಂದಿದೆ ಹಾಗೂ ಕಪ್ಪೆಯು ಸಣ್ಣ ಜೀವಿ ಎಂದು ಹೇಳಿದ್ದಾನೆ .

2. ತುಂಟ ಹುಡುಗ ಬಂದಾಗ ಕಪ್ಪೆ ಏಕೆ ದೂರ ಜಿಗಿಯುತ್ತದೆ ?

ಉತ್ತರ : ತುಂಟ ಹುಡುಗ ಕಪ್ಪೆಯನ್ನು ಕಂಡಾಗ ಕಲ್ಲು ಎಸೆಯುವನು . ಆದ್ದರಿಂದ ಕಪ್ಪೆ ದೂರ ಜಿಗಿಯುತ್ತದೆ

ಇ ) ಬಿಟ್ಟ ಸ್ಥಳ ಪದ ತುಂಬು .

1. ಮಣ್ಣ ಬಣ್ಣ ನೀಲಿ ಕಣ್ಣ

2. ಬಿತ್ತಿ ಬೆಳವ ಹಳ್ಳಿ ರೈತ

3. ಅವನು ಬರಲು ಮಾರು ದೂರ

4. ಅದೋ ನೋಡು ಕೇರೆ ರಾಯ

5. ಸಂಜೆ ಹೊತ್ತು ಕೆರೆಯ ಸುತ್ತ

ಅ ) ಇಲ್ಲಿ ನೀಡಿರುವ ಶಬ್ದಗಳಿಗೆ ನೀಡಿರುವ ಇತರೆ ಶಬ್ದಗಳನ್ನು ಮಾದರಿಯಂತೆ ಬರೆ

ಮಾದರಿ : ಶಾಲೆ – ಶಿಕ್ಷಕ – ಮ ಕ್ಕಳು – ಪುಸ್ತಕ – ಪೆನ್ನು

1. ಮನೆ : ತಂದೆ – ತಾಯಿ – ಮಗು

2. ಕಾಡು : ಆನೆ – ಜಿಂಕೆ – ನವಿಲು –

3. ಕಾರು : ಬಸ್ಸು – ಸ್ಕೂಟರ್ – ರಿಕ್ಷಾ

4. ಅಂಗಡಿ : ಮಾಲೀಕ – ಆಳು – ಗಿರಾಕಿ

Kseeb Solution For Class Chapter 14

ಆ ) ಇಲ್ಲಿ ನೀಡಿರುವ ವಸ್ತುಗಳ ಬಗ್ಗೆ ಎರಡೆರಡು ವಾಕ್ಯಗಳನ್ನು ಬರೆ ,

1. ಚೀಲ : ರೈತರು ಹೊಲದಲ್ಲಿ ಬೆಳೆದ ಕಾಳುಗಳನ್ನು ಚೀಲದಲ್ಲಿ ತುಂಬುತ್ತಾರೆ .

ಪ್ರವೀಣನು ತರಕಾರಿಯನ್ನು ತರಲು ಚೀಲ ತೆಗೆದುಕೊಂಡು ಹೋದನು .

2. ಹೂ: ತೋಟದಲ್ಲಿ , ಬೆಳೆದ ಹೂಗಳನ್ನು ಮಾರುಕಟ್ಟೆಗೆ ತರುವರು

ಮಾರುಕಟ್ಟೆಯಲ್ಲಿಯ ಹೂಗಳನ್ನು ಕೊಂಡು ಹೆಂಗಸರು ತಮ್ಮ ತಲೆಗೆ ಮುಡಿದುಕೊಳ್ಳುವರು .

3. ಶಾಲೆ : ನಮ್ಮ ಶಾಲೆಯಲ್ಲಿ ಗುರುಗಳು ಚೆನ್ನಾಗಿ ಪಾಠ ಮಾಡುತ್ತಾರೆ .

ನಾವು ಶಾಲೆಗೆ ಸಮವಸ್ತ್ರವನ್ನು ಧರಿಸಿಕೊಂಡು ಹೋಗುತ್ತೇವೆ .

ಭಾಷಾಭ್ಯಾಸ

ಅ ) ಈ ವಾಕ್ಯದಲ್ಲಿ ಬರುವ ಲಿಂಗ ಸೂಚಕ ಪದಗಳನ್ನು ಗಮನಿಸಿ ಬಿಟ್ಟಿರುವ ಸ್ಥಳವನ್ನು ತುಂಬು .

ಮಾದರಿ : ಹುಡುಗ ಕಲ್ಲು ಎಸೆಯುವನು ಹುಡುಗಿ ಕಲ್ಲು ಎಸೆಯುವಳು .

1. ಗೆಳೆಯ ಆಡಲು ಕಾಯುತ್ತಿರುವನು

ಉತ್ತರ : ಗೆಳತಿ ಆಡಲು ಕಾಯುತ್ತಿರುವಳು

2. ತುಂಟ ಕಲ್ಲು ಎಸೆವನು .

ಉತ್ತರ : ತುಂಟಿ ಕಲ್ಲು ಎಸೆವಳು .

3. ಅವನು ಊರಿಗೆ ಬಂದನು .

ಉತ್ತರ : ಅವಳು ಊರಿಗೆ ಬಂದಳು .

4. ಅಪ್ಪ ಕೆಲಸಕ್ಕೆ ಹೋದನು .

ಉತ್ತರ : ಅಮ್ಮ ಕೆಲಸಕ್ಕೆ ಹೋದಳು

ಭಾಷಾ ಚಟುವಟಿಕೆ

ಅ ) ಈ ಶಬ್ದಗಳಿಗೆ ಮಾದರಿಯಂತೆ ಪ್ರಾಸಪದ ಬರೆಯಿರಿ .

ಮಾದರಿ : ಬಾರಿ – ಹಾರಿ , ಸೇರಿ – ಮಾರಿ

1. ನಾನು – ನೀನು ಅವನು – ಸೀನು

2. ದೂರ – ಹತ್ತಿರ ಸಮರ – ಮಧುರ

ಆ ) ಬಿಡಿಸಿ ಬರೆದಿರುವುದನ್ನು ಜೋಡಿಸಿ ಬರೆ .

ಮಾದರಿ : ಕಾಯುತ + ಇರುವೆನು = ಕಾಯುತಿರುವೆನು .

1. ಬರುತ + ಇರುವೆನು = ಬರುತಿರುವೆನು .

2. ನೋಡುತ + ಇರುವೆನು = ನೋಡುತಿರುವೆನು .

3. ವಾಸಿಸುತ + ಇರುವೆನು = ವಾಸಿಸುತಿರುವೆನು .

ಸಾರಾಂಶ :

ಕವಿ ಗೋಪಾಲಕೃಷ್ಣ ಶಗ್ರಿತ್ತಾಯ ಅವರು ಕಪ್ಪೆಯ ಕುರಿತು ಹಾಡನ್ನು ರಚಿಸಿದ್ದಾರೆ . ಕಪ್ಪೆಯ ನಿತ್ಯದ ದಿನಚರಿ , ಮನುಷ್ಯನೊಂದಿಗೆ ಅದರ ಸಂಬಂಧ , ಅದರ ವ್ಯಕ್ತಿತ್ವ ಕುರಿತು ಈ ಪದ್ಯದಲ್ಲಿ ವಿವರಿಸಿದ್ದಾರೆ . ಈ ಹೊಂದಿದ ಮಣ್ಣಿನ ಬಣ್ಣ , ನೀಲಿ ಕಣ್ಣುಗಳನ್ನು ಸಣ್ಣಜೀವಿಯಾಗಿದ್ದು , ಸಂಜೆಯ ಹೊತ್ತು ಕೆರೆಯ ಬಳಿ ತನ್ನನ್ನು ನೋಡಿರುವಿರಾ ? ಎಂದು ಆ ಕಪ್ಪೆಯು ನಮ್ಮನ್ನು ಕೇಳುತ್ತದೆ . ಮುಂದುವರೆದು ಅದು ಹೇಳುತ್ತದೆ , ಬೇಸಿಗೆಯಲ್ಲಿ ನೆಲದ ಒಳಗೆ ವಾಸಿಸುತೇನೆ ಹಾಗೂ ಸುಡುವ ಬಿಸಿಲ ಕಾಲದಲ್ಲಿ ಅಡಗಿ ಬಿಡುವುದಾಗಿ ‘ ಕಪ್ಪೆಯು ಹೇಳುತ್ತದೆ . ಬಿತ್ತಿ ಬೆಳೆಯುವ ರೈತ ನನ್ನ ಗೆಳೆಯನಾಗಿದ್ದಾನೆ . ನನ್ನ ಕೊರಳ ಹಾಡಿಗಾಗಿ ಅವನು ಕಾಯುತ್ತಿರುವನು ಎಂದು ಕಪ್ಪೆಯು ಹೇಳುತ್ತದೆ .

ತುಂಟ ಹುಡುಗ ನನ್ನ ಕಂಡು ಕಲ್ಲು ಎಸೆಯುವನು . ಅವನು ಸಮೀಪ ಬರಲು ನಾನು ಮಾರು ದೂರ ಜಿಗಿದುಬಿಡುತ್ತೇನೆ ಎಂದು ಕಪ್ಪೆಯು ಹೇಳುತ್ತದೆ . ಅದೋ ನೋಡು ಕೇರರಾಯ ಅಂದರೆ ಹಾವು ಬರುತ್ತಿದೆ . ಆದ್ದರಿಂದ ಈಗ ಹೋಗಿ ಮತ್ತೆ ಬರುವೆನು ಎಂದು ಹೇಳುತ್ತಾ ಕೆರೆಗೆ ಜಿಗಿಯಿತು .

FAQ

1. ಕಪ್ಪೆ ಯಾವ ಸಮಯದಲ್ಲಿ ಕಾಣಸಿಗುತ್ತದೆ .

ಉತ್ತರ : ಕಪ್ಪೆಯು ಸಂಜೆಯ ಹೊತ್ತಿನಲ್ಲಿ ಕಾಣಸಿಗುತ್ತದೆ .

2. ಬೇಸಿಗೆಯಲ್ಲಿ ಕಪ್ಪೆ ಎಲ್ಲಿ ವಾಸ ಮಾಡುತ್ತದೆ ?

ಉತ್ತರ : ರೈತನು ಕಪ್ಪೆಯ ಕೊರಳ ಹಾಡಿಗಾಗಿ ಕಾಯುತ್ತಿರುವನು .

3. ಕಪ್ಪೆಯ ಕಣ್ಣು ಹೇಗಿದೆ ?

ಉತ್ತರ : ಕಪ್ಪೆಯ ಕಣ್ಣು ನೀಲಿಯಾಗಿದೆ .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

3ನೇ ತರಗತಿ ಕನ್ನಡ ನೋಟ್ಸ್

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *

rtgh