3ನೇ ತರಗತಿ ಈಸೂರ ಸ್ವಗತ ಕನ್ನಡ ನೋಟ್ಸ್‌ | 3rd Standard Eesura Swagata Lesson Notes Question Answer Pdf

3ನೇ ತರಗತಿ ಈಸೂರ ಸ್ವಗತ ಕನ್ನಡ ನೋಟ್ಸ್‌, 3rd Standard Eesura Swagata Lesson Notes Question Answer 3rd Std Eesura Swagata Kannada Notes Pdf 2022 Kseeb Solution For Class 3 Chapter 6 Notes

3rd Standard Eesura Swagata Lesson Notes

Contents

Kannada Class 3 Lesson Eesura Swagata Notes

ಅ ) ಒಂದು ಪದ / ವಾಕ್ಯದಲ್ಲಿ ಉತ್ತರ ಬರೆ .

1. ಈಸೂರು ಯಾವ ಜಿಲ್ಲೆಯಲ್ಲಿದೆ ?

ಉತ್ತರ : ಈಸೂರು ಶಿವಮೊಗ್ಗ ಜಿಲ್ಲೆಯಲ್ಲಿದೆ .

2. ಗಾಂಧೀಜಿಯವರು ಆರಂಭಿಸಿದ ಚಳುವಳಿ ಯಾವುದು ?

ಉತ್ತರ : ಗಾಂಧೀಜಿಯವರು “ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ‘ ಎಂಬ ಚಳುವಳಿಯನ್ನು ಆರಂಭಿಸಿದರು

3. ಈಸೂರಿನ ಜನತೆ ಯಾರ ಅಧಿಕಾರವನ್ನು ಧಿಕ್ಕರಿಸಿದರು ?

ಉತ್ತರ : ಈಸೂರಿನ ಜನತೆ ಬ್ರಿಟಿಷ್ ಸರಕಾರದ ಅಧಿಕಾರವನ್ನು ಧಿಕ್ಕರಿಸಿದರು

4. ಈಸೂರಿನ ಜನತೆ ತಮ್ಮ ಹಳ್ಳಿಯನ್ನು ಏನೆಂದು ಘೋಷಿಸಿದರು ?

ಉತ್ತರ : ” ಈಸೂರಿನ ಜನತೆ ತಮ್ಮ ಹಳ್ಳಿಯನ್ನು ಸ್ವತಂತ್ರ ಹಳ್ಳಿ ಎಂದು ಸಾರಿದರು .

5. ಈಸೂರು ಜನರ ಘೋಷಣೆ ಏನು ?

ಉತ್ತರ : ‘ ಏಸೂರ ಕೊಟ್ಟರೂ ಈಸೂರ ಬಿಡೆವು ‘ – ಇದು ಈಸೂರು ಜನರ ಘೋಪಣೆ .

6. ಸ್ಥಳೀಯ ಸರ್ಕಾರದ ಅಮಲ್ದಾರ ಮತ್ತು ಪೊಲೀಸ್ ಅಧಿಕಾರಿಯ ಹೆಸರೇನು ?

ಉತ್ತರ : ಸಾಹುಕಾರ ಜಯಣ್ಣ ಮತ್ತು ಮಲ್ಲಪ್ಪಯ್ಯ ,

7. ಅಗಸೆ ಬಾಗಿಲಿನಲ್ಲಿ ಹಾಕಿದ್ದ ಫಲಕದಲ್ಲಿ ಏನೆಂದು ಬರೆದಿತ್ತು ?

ಉತ್ತರ : ಅಗಸೆ ಬಾಗಿಲಿನಲ್ಲಿ ಹಾಕಿದ್ದ ಫಲಕದಲ್ಲಿ “ ಬೇಜವಾಬ್ದಾರಿ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶವಿಲ್ಲ . ಪ್ರವೇಶಿಸಿದರೆ … . ? ” ಎಂದು ಬರೆದಿತ್ತು .

7 ಹೊಸ ಸರ್ಕಾರದ ಅಧಿಕಾರಿಗಳು ಬ್ರಿಟಿಷ್ ಅಧಿಕಾರಿಗಳಿಗೆ ನೀಡಿದ ಆಜ್ಞೆ ಏನು ?

ಹೊಸ ಸರ್ಕಾರದ ಅಧಿಕಾರಿಗಳು ಬ್ರಿಟಿಷ್ ಅಧಿಕಾರಿಗಳಿಗೆ “ ರಾಜೀನಾಮೆ ಕೊಟ್ಟು ಗಾಂಧಿ ಟೋಪಿ ಹಾಕಿಕೊಂಡು ಈಸೂರು ಸರ್ಕಾರದಲ್ಲಿ ಕೆಲಸ ಮಾಡಬೇಕೆಂದು ಆಜ್ಞೆ ಮಾಡಿದರು .

9. ಸ್ವಗತ ಎಂದರೇನು ?

ಉತ್ತರ : ತನಗೆ ತಾನೇ ಮಾತನಾಡಿಕೊಳ್ಳುವುದಕ್ಕೆ ಸ್ವಗತ ಎನ್ನುತ್ತಾರೆ

ಆ) ಕಾರಣ ಕೊಡು

1. ಈಸೂರು ಶಿವಮೊಗ್ಗ ಜಿಲ್ಲೆಗೆ ಹೆಸರು ತಂದಿತು.

ಉತ್ರ : ಏಕೆಂದರೆ ತಮ್ಮದೇ ಸರ್ಕಾರ ರಚಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಪ್ರೇಮಿಗಳ ಊರು ಈ ಈಸೂರು

2. ಹೊಸ ಸರ್ಕಾರದಲ್ಲಿ ಮಕ್ಕಳನ್ನು ಅಧಿಕಾರಿಗಳನ್ನಾಗಿ ಮಾಡಿದರು .

ಉತ್ತರ : ಏಕೆಂದರೆ ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಒಳಗೊಂಡ ತಮ್ಮದೇ ಸರ್ಕಾರವನ್ನು ರಚಿಸಿ ಊರ ರಕ್ಷಣೆಗೆ ನಿಂತರು .

ಇ ) ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬು .

1. ಅಧಿಕಾರಿಗಳು ಕಂದಾಯ ವಸೂಲಿಗೆ ……….. ಪುಸ್ತಕಗಳೊಂದಿಗೆ ಬಂದರು .

ಉತ್ತರ : ಖಾತೆ – ಕಿರ್ದಿ

2. ದೇವಸ್ಥಾನದ ಮುಂದೆ ……….. ಸಭೆ ನಡೆಸಿದರು

ಉತ್ತರ : ಗುಪ್ತ

3. ಅವರಿಗೆ ಐವತ್ತು ರೂಪಾಯಿ ……….. ವಿಧಿಸಲಾಯಿತು .

ಉತ್ತರ : ದಂಡ

ಈ ) ಸರಿ ತಪ್ಪು ಗುರುತಿಸು .

1. ಪಟೇಲ್ ಚನ್ನಬಸವಯ್ಯ ಮತ್ತು ಶಾನುಭೋಗ ರಂಗನಾಥರಾವ್ ಸ್ವತಂತ್ರ ಸರ್ಕಾರದ ಅಧಿಕಾರಿಗಳು . [ X ]

2. ಬ್ರಿಟಿಷ್ ಅಧಿಕಾರಿಗಳು ಗ್ರಾಮ ಪವೇಶಿಸದಂತೆ ಜನರು ಪ್ರತಿಭಟಿಸಿದರು . [ ]

3. ಈಸೂರಿನ ಸ್ವತಂತ್ರ ಸರ್ಕಾರದ ರಚನೆಯನ್ನು ತಿಳಿದ ಬ್ರಿಟಿಷ್ ಅಧಿಕಾರಿಗಳು ಸಂತಸಗೊಂಡರು . [ X ]

ಉ ) ವಿರುದ್ಧಾರ್ಥಕ ಪದಗಳನ್ನು ಹೊಂದಿಸಿ ಬರೆ .

ಅ ಆ ಉತ್ತರ

ಆರಂಭ ಹೇಡಿ ಮುಕ್ತಾಯ

ಪ್ರವೇಶ ಗೆಲುವು ನಿರ್ಗಮನ

ಸೋಲು ನಿರ್ಗಮನ ಗೆಲುವು

ಧೀರ ಮುಕ್ತಾಯ ಹೇಡಿ

ಅ ) ಕೊಟ್ಟಿರುವ ವಾಕ್ಯಗಳನ್ನು ನಕಲು ಮಾಡು .

1. ಏಸೂರ ಕೊಟ್ಟರೂ ಈಸೂರು ಬಿಡೆವು

ಉತ್ತರ : ಏಸೂರ ಕೊಟ್ಟರೂ ಈಸೂರು ಬಿಡೆವು .

2. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ .

ಉತ್ತರ : ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ,

3. ಬೇಜವಾಬ್ದಾರಿ ಅಧಿಕಾರಿಗಳಿಗೆ ಈಸೂರಿಗೆ ಪ್ರವೇಶವಿಲ್ಲ .

ಉತ್ತರ : ಸರಿಯಾದ ಬೇಜವಾಬ್ದಾರಿ ಅಧಿಕಾರಿಗಳಿಗೆ ಈಸೂರಿಗೆ ಪ್ರವೇಶವಿಲ್ಲ .

ಆ ) ಇಲ್ಲಿ ಕೊಟ್ಟಿರುವ ವಾಕ್ಯಗಳನ್ನು ಸರಿಯಾದ ಕ್ರಮದಲ್ಲಿ ಶುದ್ಧವಾಗಿ ಬರೆ .

1. ಆಳುತ್ತಿದ್ದರು ಹಿಂದೆ ಬ್ರಿಟಿಷರು ಭಾರತವನ್ನು

ಉತ್ತರ : ಹಿಂದೆ ಬ್ರಿಟಿಷರು ಭಾರತವನ್ನು ಆಳುತ್ತಿದ್ದರು .

2. ಸ್ವಾತಂತ್ರ್ಯ ಈಸೂರಿನವರು ಪೇಮಿಗಳು

ಈಸೂರಿನವರು ಸ್ವಾತಂತ್ರ ಪೇಮಿಗಳು .

ಆ ) ಆವರಣದಲ್ಲಿ ಕೊಟ್ಟಿರುವ ಸೂಕ್ತ ಪದ ಆರಿಸಿ ಮಾದರಿಯಂತೆ ಬಹುವಚನ ಪದಗಳನ್ನು ಬರೆ

( ಅಣ್ಣಂದಿರು, ತಮ್ಮಂದಿರು, ಚಿಕ್ಕಮ್ಮಂದಿರು, ಚಿಕ್ಕಪ್ಪಂದಿರು, ತಮ್ಮಂದಿರು, ಮಾವಂದಿರು, ಅಜ್ಜಂದಿರು )

ಮಾದರಿ : ಅಕ್ಕ – ಅಕ್ಕಂದಿರು

ಉತ್ತರ :

ಅಣ್ಣ – ಅಣ್ಣಂದಿರು ,

ತಮ್ಮ – ತಮ್ಮಂದಿರು

ಚಿಕ್ಕಮ್ಮ– ಚಿಕ್ಕಮ್ಮಂದಿರು

ಅಜ್ಜ – ಅಜ್ಜಂದಿರು

ಮಾವ – ಮಾವಂದಿರು ,

ಚಿಕ್ಕಪ್ಪ – ಚಿಕ್ಕಪ್ಪಂದಿರು

ಭಾಷಾಭ್ಯಾಸ

ಅ ) ಇಲ್ಲಿ ಕೊಟ್ಟಿರುವ ಕೆಲವು ಅನ್ಯ ದೇಶೀಯ ಶಬ್ದಗಳನ್ನು ಓದಿ ತಿಳಿ .

ಅರೇಬಿಕ್ ಪದ : ಖಾತೆ ಕಿರ್ದಿ , ಅಮಲಾರ , ಮೊಕದ್ದಮೆ , ಕಚೇರಿ , ಕುರ್ಚಿ ,

ಇಂಗ್ಲಿಷ್ : ಸ್ಕೂಟರ್ , ಬಕೆಟ್ , ನಿಕ್ಕರ್ , ಪ್ಯಾಂಟ್ , ಬ್ಯಾಂಕ್

ಹಿಂದೂಸ್ಥಾನಿ : ಟೋಪಿ , ಗಡಿಯಾರ , ಗಾಡಿ , ಗಿರಾಕಿ , ಗಾಬರಿ

ಆ ) ನುಡಿಗಟ್ಟುಗಳ ಅರ್ಥ ತಿಳಿ .

ನುಡಿಗಟ್ಟು ಅರ್ಥ ನುಡಿಗಟ್ಟು ಅರ್ಥ

ಎತ್ತಿದ ಕೈ ಪ್ರವೀಣ ಎಳ್ಳಷ್ಟು ಅತ್ಯಲ್ಪ

ಕಬ್ಬಿಣದ ಕಡಲೆ ಕಠಿಣವಾದ ವಿಷಯ ರೈಲುಬಿಡು ಸುಳ್ಳುಹೇಳು

ತಲೆಹಾಕು ಮಧ್ಯ ಪ್ರವೇಶಿಸು ಕಾಲುತೆಗೆ ಹೊರಡು

ಇ ) ವಾಕ್ಯದಲ್ಲಿನ ಬಿಟ್ಟ ಸ್ಥಳಗಳನ್ನು ಮೇಲೆ ಕೊಟ್ಟಿರುವ ನುಡಿಗಟ್ಟುಗಳಲ್ಲಿ ಸೂಕ್ತವಾದುದನ್ನು ಆರಿಸಿ ತುಂಬಿ ಬರೆ

1. ರಾಜು ಕೆಲಸ ಮಾಡುವುದರಲ್ಲಿ ……….

ಉತ್ತರ : ಎತ್ತಿದ ಕೈ

2. ಅವರು ಮಾತನಾಡುವಾಗ ನಾನು ಅನವಶ್ಯಕವಾಗಿ ……….

ಉತ್ತರ : ತಲೆ ಹಾಕುವುದಿಲ್ಲ .

3. ಕೆಲವರು ತಮಗೆ ಗೊತ್ತಿಲ್ಲದಿದ್ದರೂ ಸುಮ್ಮನೆ ……….

ಉತ್ತರ : ರೈಲು ಬಿಡುವರು

4. ಅಮ್ಮ ಕೆಲಸ ಹೇಳಿದರೆ ನನ್ನ ತಮ್ಮ……….

ಉತ್ತರ : ಕಾಲು ತೆಗೆಯುವನು .

FAQ

1. ಈಸೂರು ಯಾವ ಜಿಲ್ಲೆಯಲ್ಲಿದೆ ?

ಉತ್ತರ : ಈಸೂರು ಶಿವಮೊಗ್ಗ ಜಿಲ್ಲೆಯಲ್ಲಿದೆ .

5. ಈಸೂರು ಜನರ ಘೋಷಣೆ ಏನು ?

ಉತ್ತರ : ‘ ಏಸೂರ ಕೊಟ್ಟರೂ ಈಸೂರ ಬಿಡೆವು ‘ – ಇದು ಈಸೂರು ಜನರ ಘೋಪಣೆ .

3. ಈಸೂರಿನ ಜನತೆ ಯಾರ ಅಧಿಕಾರವನ್ನು ಧಿಕ್ಕರಿಸಿದರು ?

ಉತ್ತರ : ಈಸೂರಿನ ಜನತೆ ಬ್ರಿಟಿಷ್ ಸರಕಾರದ ಅಧಿಕಾರವನ್ನು ಧಿಕ್ಕರಿಸಿದರು

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *

close

Ad Blocker Detected!

Ad Blocker Detected! Please disable the adblock for free use

Refresh