ಉರಿಲಿಂಗಪೆದ್ದಿಯ ವಚನಗಳು ಕನ್ನಡ ಸಾರಾಂಶ, Vachanagalu Saramsha In Kannada, Urilingapeddiya Vachanagalu Kannada Summary Pdf Download 2023
ತರಗತಿ : ದ್ವಿತೀಯ ಪಿ.ಯು.ಸಿ.
ಪದ್ಯದ ಹೆಸರು : ವಚನಗಳು (ಉರಿಲಿಂಗಪೆದ್ದಿಯ ವಚನಗಳು)
ಕೃತಿಕಾರರ ಹೆಸರು : ಉರಿಲಿಂಗಪೆದ್ದಿ
Vachanagalu Summary In Kannada
ವಚನಕಾರನಾದ ಉರಿಲಿಂಗಪೆದ್ದನು ಈ ಜಗತ್ತಿನಲ್ಲಿ ಎಲ್ಲೆಲ್ಲೂ ಶಿವನ ಅಸ್ತಿತ್ವ ಇರುವುದನ್ನು ಈ ರೀತಿ ತನ್ನ ವಚನದ ಮೂಲಕ ತಿಳಿಸಿಕೊಟ್ಟಿದ್ದಾರೆ . ಅದನ್ನು ಹಲವಾರು ಉದಾಹರಣೆಗಳನ್ನು ಕೊಟ್ಟು ಸ್ಪಷ್ಟಪಡಿಸಿದ್ದಾರೆ .“ ಸೂರ್ಯನಿಲ್ಲದೆ ಹಗಲು ಆಗದು , ದೀಪ ಇಲ್ಲದೆ ಬೆಳಕು ಕೂಡ ಸಾಧ್ಯವಿಲ್ಲ , ಹೂವಿಲ್ಲದೆ ಸುವಾಸನೆ ( ಪರಿಮಳ ) ಬರಲು ಸಾಧ್ಯವೇ ? ಎಲ್ಲೆಲ್ಲಿ ಮಹಾಘನನಾದ , ಶ್ರೇಷ್ಠನಾದ , ಸರ್ವೋತ್ತಮನಾದ ಶಿವಲಿಂಗವು ತೋರುವುದೋ ಅಲ್ಲೆಲ್ಲವು ಪರಿಶುದ್ಧತೆಯನ್ನು ನಾವು ಈ ಜಗತ್ತಿನಲ್ಲಿ ಕಾಣಬಹುದು ” ಎಂಬುದಾಗಿ ವಚನಕಾರರು ತಿಳಿಸಿದ್ದಾರೆ .
ಪರುಷ ಎಂದರೆ ಮುಟ್ಟಿದ್ದನ್ನೆಲ್ಲ ಬಂಗಾರವಾಗಿಸುವ ಮಣಿ . ಅದರ ನಿವಾಸ ದಲ್ಲಿರುವನು ಬೇಕಾದ್ದನ್ನೆಲ್ಲ ಪರುಷಮಣಿಯಿಂದಲೇ ಪಡೆಯುವನೆ ವಿನಹ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವುದಿಲ್ಲ . ಹಾಗೆಯೇ ಹರಿಯುತ್ತಿರುವ ತೊರೆಯೊಳಗಿರುವವನು ಬಾಯಾರಿದಾಗ ತೊರೆಯ ನೀರನ್ನು ಸೇವಿಸುತ್ತಾನಲ್ಲದೆ , ನೀರಿಗೆಂದು ಮತ್ತೊಂದು ಕೆರೆಯ ನೀರನ್ನು ಹುಡುಕುತ್ತಾ ಹೋಗುವುದಿಲ್ಲ . ಕುಡಿಯಲು ಕೆರೆಯಲ್ಲಿನ ನಿಂತ ನೀರಿಗಿಂತ ಹರಿವ ತೊರೆಯ ನೀರು ಅತ್ಯುತ್ತಮ . ಹಾಗೆಯೇ ಶುಭಕರವಾದ ಶಿವಲಿಂಗ ವನ್ನು ಮೈಮೇಲೆ ಧರಿಸಿದವನು ಬೇರೆ ಲಿಂಗವನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು ಹೇಳಿದ್ದಾನೆ . ವೀರಶೈವ ಸಿದ್ಧಾಂತದ ಪ್ರಕಾರ ದೇಹದ ಮೇಲಿರುವ ಇಷ್ಟಲಿಂಗವು ದೇವಾಲಯಗಳಲ್ಲಿ , ಪುಣ್ಯಸ್ಥಳಗಳಲ್ಲಿ ಇರುವ ಇತರ ಶಿವಲಿಂಗಗಳಿಗಿಂತ ಬಹಳ ಶ್ರೇಷ್ಠ . ಈ ಹಿನ್ನೆಲೆಯಲ್ಲೇ ಪ್ರಸ್ತುತ ವಚನ ರಚನೆಯಾಗಿದೆ .
ಗುರುವಿನ ಘನತೆಯನ್ನು ಸಾರುವ ವಚನವಿದು . ಲಘು ಎಂಬುದಕ್ಕೆ ಚಿಕ್ಕದು , ಹಗುರವಾದುದು ಎಂಬರ್ಥವಿದೆ . ಅಂತೆಯೇ ಗುರು ಎಂಬುದಕ್ಕೆ ದೊಡ್ಡದು , ಹಿರಿದು ಎಂಬರ್ಥಗಳಿವೆ . ವರ್ತನೆಯಲ್ಲಿ ಹಗುರವಾಗಿ ನಡೆದುಕೊಳ್ಳುವುದು , ಗಂಭೀರವಾಗಿ ಘನತೆಯಿಂದ ನಡೆದುಕೊಳ್ಳುವುದು ಮುಂತಾದ ಬಗೆಗಳಿವೆ . ಆದ್ದರಿಂದ ಉರಿಲಿಂಗಪೆದ್ದಿಯು ಲಘುವು ಗುರುವಿನ ವರ್ತನೆ ತೋರನು , ಗುರುವಾದವನು ಲಘುವಾಗಿ ವರ್ತಿಸಬಾರ ದೆಂದಿದ್ದಾನೆ . ಅವನ ಅಭಿಪ್ರಾಯದಲ್ಲಿ ಲಘು ವರ್ತನೆಯ ವ್ಯಕ್ತಿ ಯಾವಾಗಲೂ ಲಘು ವಾಗಿಯೇ ಉಳಿಯುತ್ತಾನೆ . ಗುರು ಗುರುವಾಗಿಯೇ ಇರುತ್ತಾನೆ . ಒಬ್ಬ ಶ್ರೇಷ್ಠ ಗುರು ವಾದವನು ಲಘುವರ್ತನೆಯಲ್ಲಿ ನಡೆದುಕೊಳ್ಳುವುದು ಸರಿಯಾದ ಆಚಾರವಲ್ಲ . ಗುರು ಲಿಂಗ – ಜಂಗಮವೆಂಬ ತ್ರಿವಿಧವನ್ನು ಲಘುವಾಗಿ ಕಂಡವನು ತಾನೇ ಲಘುವಾಗುತ್ತಾನೆ . ಆದ್ದರಿಂದ ತ್ರಿವಿಧವನ್ನು ದೊಡ್ಡದೆಂದು ಭಾವಿಸಿ ಪಾಲಿಸಬೇಕೆಂದು ಉರಿಲಿಂಗಪೆದ್ದಿಯು ತಿಳಿಸಿದ್ದಾನೆ.
Vachanagalu Saramsha In Kannada, Urilingapeddiya Vachanagalu Kannada Summary Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
- Urilingapeddiya Vachanagalu Notes
- 2 PUC Notes PDF
- 1 PUC Notes
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- 50+ ಪ್ರಬಂಧಗಳು
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.