ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ಸಾರಾಂಶ, 2nd PUC Shilube Eriddane Kannada Summary Saramsha Bhavartha Pdf Download 2022
ತರಗತಿ : ದ್ವಿತೀಯ ಪಿ.ಯು.ಸಿ
ಪದ್ಯದ ಹೆಸರು : ಶಿಲುಬೆ ಏರಿದ್ದಾನೆ
ಕೃತಿಕಾರರ ಹೆಸರು : ಕೆ. ಎಸ್. ನಿಸಾರ್ ಅಹಮ್ಮದ್
Shilube Eriddane Kannada Summary
ಕೆ.ಎಸ್ . ನಿಸಾರ್ ಅಹಮದ್ ಅವರು ರಚಿಸಿರುವ ‘ ಶಿಲುಬೆ ಏರಿದ್ದಾನೆ ‘ ಎಂಬ ಈ ಕವಿತೆಯನ್ನು ಅವರ ‘ ವ್ಯಕ್ತಿಪರ ಕವನಗಳು ‘ ಎಂಬ ಸಂಗ್ರಹದಿಂದ ಆಯ್ದುಕೊಂಡಿದೆ . ಇಲ್ಲಿ ಶಿಲುಬೆಯನ್ನು ಏರಿದವನು ಕ್ರೈಸ್ತ ಧರ್ಮದ ಸಂತನೆನಿಸಿದ ಏಸುಕಿಸ್ತ ಅಥವಾ ಜೀಸಸ್ . ಆತ ತನ್ನ ಸಾವಿನ ಸಂದರ್ಭದಲ್ಲಿಯೂ ಲೋಕಕಲ್ಯಾಣದ ಹಿತವನ್ನು ಚಿಂತಿಸಿದ ಮಹಾತ್ಮ ಆತನ ಪ್ರೀತಿ , ಕರುಣೆ , ಔದಾರ್ಯತೆಗಳು ಇಂದಿನ ವಿಷಮ ವಾತಾವರಣದಲ್ಲಿ ಎಲ್ಲರ ಹೃದಯಗಳಲ್ಲೂ ಅನುರಣನಗೊಳ್ಳಬೇಕೆಂದು ಕವಿ ಆಶಿಸಿದ್ದಾರೆ .
ಕ್ರಿಸ್ಮಸ್ ಹಬ್ಬ ಎಂದರೆ ಜೀಸಸ್ ಜನಿಸಿದ್ದು ಚಳಿಗಾಲದ ಡಿಸೆಂಬರ್ 25 ರಂದು . ಆ ಚಳಿಯಲ್ಲಿಯು ಎಲ್ಲರೂ ರಾತ್ರಿಯಲ್ಲಿ ಎಚ್ಚರವಿದ್ದು ಅದಕ್ಕಾಗಿ ಮನೆಯ ಮುಂದೆ ನಕತದೀಪಗಳನ್ನು ಬೆಳಗಿ ಬಂಧು ಬಾಂಧವರೊಡನೆ ಜೀಸಸ್‌ನ ಜನ್ಮದಿನಕ್ಕೆ ಶುಭಾಶಯ ಕೋರುವ ಕೇಕ್ ಹಂಚಿ , ಕ್ರಿಸ್‌ಮಸ್ ಟೀ , ಗಿಡ ಇಲ್ಲದಿದ್ದಲ್ಲಿ ಪ್ಲಾಸ್ಟಿಕ್‌ನದಾದರೂ ಸರಿ ಅದನ್ನು ಸಿಂಗರಿಸಿ , ಅಂದಿನ ವಾತಾವರಣವನ್ನು ನೆನಪಿಸಲೋಸುಗ ಹತ್ತಿಯಿಂದ ವಾತಾವರಣವನ್ನು ಮಂಜಿನಂತೆ ಸೃಷ್ಟಿಸಿ , ಅಂದಿನ ಅವರ ಉಡುಪುಗಳೊಂದಿಗೆ ( ಸ್ಯಾರ್ಟ ಧರಿಸಿ ) ಮೊಂಬತ್ತಿ ಬೆಳಗುವ ದೃಶ್ಯವನ್ನು ಸೃಜಿಸುವರು .
ಚರ್ಚ್ – ಮನೆ ಎಲ್ಲೆಡೆಯಲ್ಲಿಯೂ ಗೋಡೆಗಳ ಮೇಲೆ ಶಿಲುಬೇಗೇರಿದ ಜೀಸಸ್‌ನ ಮಾದರಿಗಳು , ಅದರಲ್ಲಿ ಜೀಸಸ್‌ನ ಚಿತ್ರ ಕರುಣಮೂರ್ತಿಯಂತೆ ಕಂಡು ಬರುತ್ತದೆ . ಬಾಗಿದ ತಲೆ , ಕುತ್ತಿಗೆಯಲ್ಲಿ ಉಬ್ಬಿದ ನರ , ಯಾತನೆ , ನೋವಿನಲ್ಲೂ ಒಳ್ಳೆಯ ಮಾತಾಡುವ ಮುಖ ಮುದ್ರೆ , ತೆರೆದ ಎದೆ , ಎಡಕ್ಕೊಬ್ಬ – ಬಲಕ್ಕೊಬ್ಬ ವಕಾಲತ್ತು ನಡೆಸಲು ಸನ್ಮಾನಿಸಲು ನಿಂತಿದ್ದರೆ ಜೀಸಸ್ ಅವರನ್ನು ಕಂಡು ನಿಮ್ಮನ್ನು ಆ ದೇವರು ಕ್ಷಮಿಸಲಿ ಎನ್ನುತ್ತಿದ್ದಾನೆ . ಇನ್ನು ಜೀಸಸ್‌ನ ಚಿತ್ರವನ್ನು ಕವಿ ಮಾರ್ಮಿಕವಾಗಿ ಯಥಾವತ್ತಾಗಿ ಚಿತ್ರಿಸುತ್ತ ಹೀಗೆ ಬರೆದಿದ್ದಾರೆ .
ಜೀಸಸ್‌ನ ತಲೆಗೆ ಮುಳ್ಳಿನ ಕಿರೀಟ , ಕೈಕಾಲುಗಳಿಗೆ ಬಡಿದ ಮೊಳೆಗಳು . ಆತನಿಗೆ ಆ ಶಿಕ್ಷೆ ಕೊಡಲು ಅವರು ಹಬ್ಬಿಸಿದ ಸುಳ್ಳಿನ ವದಂತಿ ಹಾಗೂ ರೋಮನ್ ಜನತೆಗೆ ಯಾವ ಮಾತುಗಳು ಬೀಳದಷ್ಟು ಜೋರು ಕೊಂಬುಗಳ ಧ್ವನಿಗಳೊಂದಿಗೆ ಜೀಸನನ್ನು ಯಮನ ಬಳಿಗೆ ಕಳುಹಿಸಲು ಮಾಡಿರುವ ಸಿದ್ಧತೆಗಳು ಗುಜರಿಗಳಂತೆ ಕಾಣುತ್ತಿವೆ . ಅಂದಿನ ಆ ಭೀಬತ್ಸೆ ಇಂದಿಗೂ ಮಾಯವಾಗಿಲ್ಲ . ಇಂದಿಗೂ ಅದು ರೈಫಲ್ , ಟ್ಯಾಂಕ್ , ಬಾಂಬು , ಗ್ರೆನೇಡುಗಳ ರೂಪತಾಳಿ ಮತ್ತಷ್ಟು ಭೀಕರ ಸನ್ನಿವೇಶವನ್ನು ಉಂಟು ಮಾಡಿದೆ . ಇಂದು ಜನತೆಯಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುವ ಬದಲು ದ್ವೇಷದ ಜ್ವಾಲೆಯಲ್ಲಿ ಸೇಡು ತೀರಿಸಿಕೊಳ್ಳಲು ಬಲಿಷ್ಟ ಕೈಗಳು ಮುನ್ನುಗ್ಗಿ ಹೊರಟಂತಿವೆ ” .
ಇಂದು ಜಗತ್ತಿನಾದ್ಯಂತ ಇರುವ ದುಷ್ಟತನಕ್ಕೆ ಜೀಸಸ್‌ನ ಪ್ರೀತಿ , ಕರುಣೆ , ಔದಾರ್ಯಗಳೆ ಔಷಧವಾಗಬೇಕೆಂದು ಕವಿಯು ಆಶಿಸಿರುವ ವಿವರಗಳು ಪದ್ಯದ ಈ ಮೇಲಿನ ಭಾಗದಲ್ಲಿದೆ . ಕವಿಯ ಕಣ್ಣಿಗೆ ಜೀಸಸ್ ದುಷ್ಟ ಸಾಮ್ರಾಜ್ಯದ ಅವನತಿಗೆ , ಕ್ರೋಧಕ್ಕೆ , ತಿಳಿಗೇಡಿತನಕ್ಕೆ ಉತ್ತರವಾಗಿ ಕಂಡುಬಂದಿದ್ದಾನೆ . ದುಷ್ಟ ಸಾಮ್ರಾಜ್ಯ ದೂರಾಗಿ ದೈವೀರಾಜ್ಯದ ಆಗಮನದ ಸೂಚನೆಯಂತೆ ಜೀಸಸ್ ಈಗ ಶಿಲುಬೆ ಏರಿದ್ದಾನೆಂದು ಕವಿ ಭಾವಿಸುತ್ತಾರೆ . ಇಂದು ಇಗರ್ಜಿ , ಮಸೀದಿ , ದೇವಸ್ಥಾನ , ಮಠ ಮುಂತಾದೆಡೆ ಕಾಣಬರುತ್ತಿರುವುದು ಜನರ ಮತಿರಹಿತ ಹಟ ಇದಕ್ಕೆ ಮುಗ್ಧರು ಅಮಾಯಕರು ಬಲಿಯಾಗುತ್ತಿದ್ದಾರೆ .
ಕೋರ್ಟು – ಪೊಲೀಸ್ ಠಾಣೆಗಳು ಮುಗ್ಧ ಜನರನ್ನು ಬಂಧಿಸಿ ಕತ್ತಲಕೋಣೆಯಲ್ಲಿರಿಸಿಕೊಂಡಿವೆ . ಬಡವರ ಮನೆಗಳಲ್ಲಿ ತಿಂಗಳಿಗೊಂದು ಸಲ ದೀಪ ಬೆಳಗುವ ಸ್ಥಿತಿಯೂ ಇಲ್ಲದ ಬಡತನ ರಾರಾಜಿಸುತ್ತಿದೆ . ಈ ಎಲ್ಲ ಮುಗ್ಧರ ನೋವುಗಳ ಪ್ರತಿರೂಪವಾಗಿ ಶಿಲುಬೆಯೇರಿರುವ ಏಸು ಕವಿಯ ಕಣ್ಣಿಗೆ ಕಾಣಿಸಿರುವುದು ಮಾತ್ರವಲ್ಲ , ಆತ ಶೋಷಿತರ ಕಣ್ಣೀರನ್ನು ಒರೆಸುವ , ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾಶಕ್ತಿಯಾಗಿ ಕಾಣಿಸಿಕೊಂಡಿದ್ದಾನೆ . ಕವಿಯು ಶಿಲುಬೆ ಏರಿರುವ ಏಸು ಜಗತ್ತಿನ ದುಃಖವನ್ನು ತೊಡೆಯುವ ಮಹಾಸಂತ ನೆಂದು ಭಾವಿಸಿದ್ದಾರೆ .
2nd PUC Shilube Eriddane Kannada Summary Saramsha Bhavartha Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.