ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | 2 PUC Shilube Eriddane Kannada Notes.

ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd PUC Shilube Eriddane Kannada Notes Question Answer pdf guide Download Second Puc 2024

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಶಿಲುಬೆ ಏರಿದ್ದಾನೆ

ಕೃತಿಕಾರರ ಹೆಸರು : ಕೆ. ಎಸ್.‌ ನಿಸಾರ್‌ ಅಹಮ್ಮದ್‌

ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌

ಕವಿ ಪರಿಚಯ:

ಕೆ.ಎಸ್ . ನಿಸಾರ್ ಅಹಮದ್ ( ಜನನ : ೫.೨.೧೯೩೬ ) ಅವರು ಪ್ರಯೋಗ ಶೀಲತೆ ಮತ್ತು ವಿಭಿನ್ನ ಸಂವೇದನೆಯ ಮೂಲಕ ಕನ್ನಡ ಕಾವ್ಯಕ್ಕೆ ಹೊಸ ಆಯಾಮ ನೀಡಿದವರು . ಹುಟ್ಟಿದ್ದು ದೇವನಹಳ್ಳಿಯಲ್ಲಿ . ಓದಿದ್ದು ಭೂಗರ್ಭ ವಿಜ್ಞಾನ . ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ .

ವಿಭಿನ್ನ ಸಂಸ್ಕೃತಿಯ ಅರಿವು , ವೈಚಾರಿಕ ದೃಷ್ಟಿಕೋನ , ಲವಲವಿಕೆಯ ಭಾಷೆ , ಅನುಭವವನ್ನು ಹದವರಿತ ವ್ಯಂಗ್ಯ , ಕಟೋಕ್ತಿಗಳ ಮೂಲಕ ಹೇಳುವ ಜಾಣ್ಮ ನಿಸಾರರ ಕಾವ್ಯದ ಮುಖ್ಯ ಲಕ್ಷಣಗಳು . ಸಂಜೆ ಐದರ ಮಳೆ , ಅನಾಮಿಕ ಆಂಗ್ಲರು , ನೆನೆದವರ ಮನದಲ್ಲಿ , ಸುಮುಹೂರ್ತ , ನಾನೆಂಬ ಪರಕೀಯ , ಆಕಾಶಕ್ಕೆ ಸರಹದ್ದುಗಳಿಲ್ಲ , ಸ್ವಯಂಸೇವೆಯ ಗಿಳಿಗಳು , ಬಹಿರಂಗ ಮೊದಲಾದ ಕವನಸಂಕಲಗಳನ್ನು ನಿಸಾರ್‌ ಪ್ರಕಟಿಸಿದ್ದಾರೆ . ಹಾಗೆಯೇ ಕನ್ನಡದ ಮೊಟ್ಟಮೊದಲ ಭಾವಗೀತೆಗಳ ಜನಪ್ರಿಯ ಕ್ಯಾಸೆಟ್ ನಿತ್ಯೋತ್ಸವ’ವನ್ನು ಹೊರತಂದು ಧ್ವನಿಸುರುಳಿ ಪರಂಪರೆ ಬೆಳೆಯಲು ನಿಸಾರ್ ಕಾರಣರಾಗಿದ್ದಾರೆ .

ಕಾವ್ಯಕ್ಷೇತ್ರ ಮಾತ್ರವಲ್ಲದೆ ಶ್ರೇಷ್ಠ ಅನುವಾದಕರೂ , ವೈಚಾರಿಕ ಲೇಖನಕರ್ತರೂ ಆಗಿರುವ ನಿಸಾರ್ ೨೦೦೭ ರಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ , ಹಂಪಿ ಕನ್ನಡ ವಿ.ವಿ.ಯ ನಾಡೋಜ ಪುರಸ್ಕಾರ , ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಅನಕೃ ಪ್ರಶಸ್ತಿ , ಇತ್ಯಾದಿ ಗೌರವಗಳು ಇವರಿಗೆ ಸಂದಿವೆ .

‘ಶಿಲುಬೆ ಏರಿದ್ದಾನೆ ‘ ಕವನ ಜೀಸಸ್ ಬಗ್ಗೆ ಗೋವಿಂದ ಪೈಯವರ ‘ ಗೊಲ್ಗೊಥಾ ‘ ಕವನದ ನಂತರ ಬಂದ ವಿಶಿಷ್ಟ ಕವನ . ಜೀಸಸ್‌ನ ವ್ಯಕ್ತಿತ್ವ , ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿರುವ ಕವಿ ಆ ಕಾಲದ ಹಿಂಸೆ , ಕ್ರೌರ್ಯ ಈ ಕಾಲದಲ್ಲಿಯೂ ಹೊಸರೂಪದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ಕಟ್ಟಿಕೊಟ್ಟಿದ್ದಾರೆ . ಜೀಸಸ್‌ನ ಸಾವನ್ನು ವಿಷಾದದಿಂದ ನೋಡುವ ಕವಿ , ಆತ ಇಂದು ಅಸಂಖ್ಯ ಹೃದಯಗಳಲ್ಲಿ ಮಾನವತೆಯ ಕಿಡಿಯನ್ನು ಹಚ್ಚಿಹೋಗುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ .

ಕಾವ್ಯದ ಹಿನ್ನೆಲೆ :

ಜಗತ್ತಿಗೆ ಪ್ರೀತಿ , ದಯೆ , ಕರುಣೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಗಳಲ್ಲಿ ಜೀಸಸ್ ಪ್ರಮುಖರು . ಸಾವಿನ ಸಂಕಟದಲ್ಲೂ ವಿಚಲಿತನಾಗದೆ ಲೋಕಕಲ್ಯಾಣಕ್ಕಾಗಿ ಮಿಡಿದ ಜೀಸಸ್‌ನ ವ್ಯಕ್ತಿತ್ವ ಇಂದು ಪ್ರಸ್ತುತ ಹಿಂಸೆ ಆಧುನಿಕ ಸಮಾಜದ ಗುಣವೆಂಬಂತೆ ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಜೀಸಸ್‌ನ ಪ್ರೀತಿ , ಕರುಣೆ , ಔದಾರ್ಯ ನಮ್ಮೊಳಗೆ ಅನುರಣನಗೊಳ್ಳಬೇಕಾದ ಅಗತ್ಯವಿದೆ . ಕವಿ ನಿಸಾರ್ ಅವರು ಜೀಸಸ್‌ನ ವ್ಯಕ್ತಿತ್ವದ ಬಗ್ಗೆ ಬರೆದಿರುವ ಈ ಕವಿತೆ ಪರಧರ್ಮ ಸಹಿಷ್ಣುತೆ ಹಾಗೂ ವಿಶ್ವಭಾತೃತ್ವಕ್ಕೆ ಬರೆದ ಹೊಸ ಭಾಷ್ಯದಂತಿದೆ .

ಶಬ್ದಾರ್ಥ :

ಶಿಲುಬೆ – ಕ್ರೈಸ್ತರಲ್ಲಿ ಹಿಂದೆ ತಪ್ಪಿತಸ್ಥರನ್ನು ಕೊಲ್ಲಲು ನಿರ್ಮಿಸಿದ ಮರದ ಸಾಧನ , ಕ್ರೈಸ್ತರ ಧಾರ್ಮಿಕ ಲಾಂಛನ ; ನಾತು – ಒಳ್ಳೆಯ ಮಾತು ; ಮಕುಟ – ಕಿರೀಟ ; ಕೊಂಬು – ವಾಲಗ ( ಊದುವ ಸಾಧನ ) : ಗುಜರಿ ಹಳೆಯ ಸಾಮಾನುಗಳನ್ನು ಮಾರುವ ಸ್ಥಳ : ರೈಫಲ್ಲು – ಪಿಸ್ತೂಲು ; ಟ್ಯಾಂಕು , ಗನೇಡು – ಯುದ್ಧ ಸಾಧನಗಳು ; ಮುಯ್ಯ – ಸೇಡು ; ಆಜ್ಯ – ತುಪ್ಪ ; ಮಸಜೀದು – ಮಸೀದಿ ; ಇಗರ್ಜಿ – ಚರ್ಚು ; ಮತಿರಹಿತ – ಬುದ್ಧಿರಹಿತ ; ಮಾಹೆ ತಿಂಗಳು ; ಒಂದಾವರ್ತಿ – ಒಂದು ಸಲ ; ಸೋಗೆ ಬಿಲ – ಗುಡಿಸಲು ; ಅಸಂಖ್ಯ – ಲೆಕ್ಕವಿಲ್ಲದಷ್ಟು ; ಕವಲು – ಟಿಸಿಲು , ಭಿನ್ನತೆ , ಬದಲಾವಣೆ .

2nd PUC Shilube Eriddane Kannada Notes

II . ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದೆ ?

ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಮಂಜಿನ ಕೆಲಸ ಮಾಡಿದೆ .

2 ) ಶಿಲುಬೆಯೇರಿದವರು ಯಾರು ?

ಜೀಸಸ್ ಶಿಲುಬೆಯೇರಿದವರು .

3 ) ಏನು ಬಂದೇ ತೀರುತ್ತದೆ ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆಗೆ ಏರಿದ್ದಾನೆ ?

“ ಬಂದೇ ತೀರುತ್ತದೆ ದೈವಿರಾಜ್ಯ ” ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆಗೇರಿದ್ದಾನೆ .

4 ) ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ದತೆಗೆ ಯಾವ ರೂಪ ಕರುಣಿಸಿದೆ ?

ಕ್ರಿಸ್ಮಸ್ , ಪ್ಲಾಸ್ಟಿಕ್ , ನಕಲಿನ ಕುಬ್ದತೆಗೆ ಗಿಡದ ರೂಪಕರುಣಿಸಿದೆ .

5 ) ಜೀಸಸ್‌ನ ಮುಖ ಮುದ್ರೆ ಏನನ್ನು ನುಡಿವಂತಿದೆ ?

ಜೀಸಸ್‌ನ ಮುಖ ಮುದ್ರೆ ಯಾತನೆಯಲ್ಲಿಯೂ ( ನೋವಿನಲ್ಲಿಯೂ ) ಒಳ್ಳೆಯ ಮಾತಾಡುತ್ತಿರುವಂತೆ ಇದೆ .

6 ) ಯಾರ ಕಂಬನಿಯನ್ನೊರಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ ?

ಶೋಷಿತರ ಕಂಬನಿಯನ್ನೇರಿಸಿ ಜೀಸಸ್ ದಿನನಿತ್ಯ ಶಿಲುಬೆಗೇರಿದ್ದಾನೆ .

7 ) ಜೀಸಸ್‌ನ ಶಿಲುಬೆಗೇರಿಸಿದವರು ಯಾರ ವಕಾಲತ್ತು ನಡೆಸಿದವರಾಗಿದ್ದಾರೆ ?

ಶಿಲುಬೆಗೇರಿಸಿದವರು ಕೊಲೆಗಡುಕ ಬರಬ್ಬನ ವಕಾಲತ್ತು ನಡೆಸಿದವರಾಗಿದ್ದಾರೆ .

8 ) ಕವಿಯ ಪ್ರಕಾರ ತಿಂಗಳಿಗೊಂದು ಸಲವೂ ದೀಪ ಹಚ್ಚದ ಸ್ಥಳ ಯಾವುದು ?

ಕವಿಯ ಪ್ರಕಾರ ತಿಂಗಳಿಗೊಂದು ಸಲವೂ ದೀಪ ಹಚ್ಚದ ಸ್ಥಳವೆಂದರೆ “ ದಲಿತ ವಾಸದ ಸೋಗೆಬಿಲಗಳು ”

III . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

2 puc shilube eriddane kannada question answer

1 ) ಶಿಲುಬೆಗೇರಿದ ಯೇಸುವಿನ ದೇಹ ಯಾರಿಗೆ , ಏನನ್ನು ಅನ್ನುವಂತಿದೆ ?

ಶಿಲುಬೆಗೇರಿದ ಯೇಸುವಿನ ದೇಹ “ ಕೊಲೆ ಗಡುಕ ಬರಬ್ಬನ ವಕಾಲತ್ತು ನಡೆಸಿದವರಿಗೆ ಹಾಗೂ ಎಡ – ಬಲಗಳಲ್ಲಿ ನಿಂತ ಕಳ್ಳರಿಗೆ , ರೋಮನ್ ಯುವಕರಿಗೆ “ ದೇವರು ನಿಮ್ಮನ್ನು ಮನ್ನಿಸಲಿ ” ಎಂದು ಹೇಳುವಂತಿದೆ .

2 ) ಯಾವ ಸಂದೇಶವನ್ನು ನೀಡುವ ರೀತಿಯಲ್ಲಿ ಜೀಸಸ್ ಶಿಲುಬೆಯೇರಿದ್ದಾನೆ ?

ಜಗತ್ತಿಗೆ ಪ್ರೀತಿ , ದಯೆ , ಕರುಣೆಯನ್ನು ತೋರುವ ದೈವಿ ಸಾಮ್ರಾಜ್ಯ ಬಂದೇ ಬರುತ್ತದೆ ಎಂಬ ಸಂದೇಶವನ್ನು ನೀಡುವ ರೀತಿಯಲ್ಲಿ ಜೀಸಸ್ ಶಿಲುಬೆ ಏರಿದ್ದಾನೆ .

3 ) ಶಿಲುಬೆಗೇರಿಸಿದವರ ಗುಣಗಳು ಇಂದು ಯಾವ ವೇಷ ತಾಳಿವೆ ?

ಶಿಲುಬೆಗೇರಿಸಿದವರ ಗುಣಗಳು ಇಂದು ರೈಫಲ್ಲು , ಟ್ಯಾಂಕ್ , ಬಾಂಬು ಗ್ರನೇಡುಗಳ ವೇಷ ತಾಳಿವೆ .

4 ) ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ ?

ಕ್ರಿಸ್ಮಸ್ , ಮನೆಗೆ ಕೇಕು , ನಕ್ಷತ್ರದೀಪ , ಪ್ಲಾಸ್ಟಿಕ್ ನಕಲಿನ ಕುಬ್ದತೆಗೆ ಕರುಣಿಸಿದ ಗಿಡದ ರೂಪ , ಹತ್ತಿಯಿಂದ ಮಂಜಿನ ಸಾದೃಶ್ಯತೆ , ಸ್ಕರ್ಟ್ ಧರಿಸಿ ಮೊಂಬತ್ತಿ ಹಿಡಿದ ಹುಡುಗಿಯರು ಎಲ್ಲವೂ ಹೊತ್ತು ತಂದಿದೆ .

IV . ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ ? ಚರ್ಚಿಸಿ .

ಇಂದಿಗೂ ಜೀಸಸ್ ದಿನನಿತ್ಯ ಶಿಲುಬೆ ಏರುತ್ತಲೇ ಇರುವನೆಂದು ಕವಿಯು ಅದನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸಿ ಹೇಳಿದ್ದಾರೆ . ಚರ್ಚು , ಮಸೀದಿ , ದೇವಸ್ಥಾನ ಮತ್ತು ಮಠಗಳಲ್ಲಿ ಮತದ ವಿಚಾರವಾಗಿ ಮತಿರಹಿತ ಹಟಗಳು ಮುನ್ನೆಲೆಗೆ ಬಂದಿವೆ . ಅಲ್ಲಿ ಏಸು ಶಿಲುಬೆಗೇರುವನು . ಕೋರ್ಟಿನಲ್ಲಿ , ಕಾರ್ಖಾನೆಗಳಲ್ಲಿ , ಠಾಣೆಗಳಲ್ಲಿ , ಬಂಧೀಖಾನೆಗಳಲ್ಲಿ , ಆಸ್ಪತ್ರೆಗಳಲ್ಲಿ ನರಳುತ್ತಿರುವವರ – ಶೋಷಣೆಗೊಳಗಾದ ಜನರ ದುಃಖ ಸಂಕಟಗಳಲ್ಲಿ ಏಸುಕ್ರಿಸ್ತನು ಶಿಲುಬೆ ಏರುತ್ತಾನೆ . ತಿಂಗಳಿಗೊಮ್ಮೆ ಗುಡಿಸಲಿನಲ್ಲಿ ದೀಪಹಚ್ಚುವ ಶಕ್ತಿ ಇಲ್ಲದ ಜನರ ಸೋಗೆ ಬಿಲಗಳಲ್ಲಿಯೂ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ . ಶೋಷಿತರ ಕಂಬನಿಯನ್ನೊರೆಸುವ ಸಲುವಾಗಿ ಆತ ಶಿಲುಬೆಯೇರಿರುವ ನೆಂದು ಕವಿ ವಿವರಿಸಿದ್ದಾರೆ .

2 ) “ ಶಿಲುಬೆ ಏರಿದ್ದಾನೆ ” ಕವನದಲ್ಲಿ ಜೀಸಸ್ ವ್ಯಕ್ತಿತ್ವ ಮತ್ತು ಆತನ ಮಹತ್ವವನ್ನು ಕವಿ ಯಾವ ರೀತಿ ನಿರೂಪಿಸಿದ್ದಾರೆ ?

ವಿವರಿಸಿ’ಶಿಲುಬೆ ಏರಿದ್ದಾನೆ ‘ ಕವನದಲ್ಲಿ ಜೀಸಸ್ ವ್ಯಕ್ತಿತ್ವ ಮತ್ತು ಆತನ ಮಹತ್ವವನ್ನು ಕವಿ ಯಥಾವತ್ತಾಗಿ , ಮನೋಜ್ಞವಾಗಿ ನಿರೂಪಿಸಿದ್ದಾರೆ . ಜೀಸಸ್‌ನ ವ್ಯಕ್ತಿತ್ವವು ಪ್ರೀತಿ , ದಯೆ , ಕರುಣೆಯಿಂದ ಕೂಡಿದೆ . ಲೋಕ ಕಲ್ಯಾಣಕ್ಕಾಗಿ ಮಿಡಿದ ಜೀಸಸ್‌ನ ವ್ಯಕ್ತಿತ್ವ ಇಂದಿಗೂ ಪ್ರಸ್ತುತವಾಗಿದೆ . ಜೀಸಸ್‌ನ್ನು ಸಾರಿರುವ ಪ್ರೀತಿ ,ಕರುಣೆ , ದಯೆ , ಔದಾರ್ಯದ ಸಂದೇಶವು ನಮ್ಮೊಳಗೆ ಅನುಕರಣಗೊಂಡಿದೆ . ಸಹಿಷ್ಣುತೆ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವುದು ಜೀಸಸ್‌ನ ಮಹತ್ತರ ಉದ್ದೇಶ . ಇದು ಇಂದಿಗೂ ವಿಶ್ವವ್ಯಾಪಿಯಾಗಿರುವುದು ಇದರ ಮಹತ್ವವನ್ನು ಸಾರುತ್ತದೆ . ಜೀಸಸ್ ಜನತೆಯ ಅಸಂಖ್ಯಾತ ಹೃದಯದಲ್ಲಿ ಮಾನವತೆಯ ದೀಪವನ್ನು ಬೆಳಗಿದ್ದಾರೆ .

3 ) ಶಿಲುಬೆಗೇರಿದ ಜೀಸಸ್‌ನ ದೇಹ ಏನನ್ನು ಹೇಳುವಂತಿದೆ ? ವಿವರಿಸಿ .

ಶಿಲುಬೆಗೇರಿಸಿರುವ ಏಸುವಿನ ದೇಹವು ತಪ್ಪು ಮಾಡಿದವರನ್ನು ಕ್ಷಮಿಸೆಂದು ಪಾರ್ಥಿಸುವಂತಿದೆ . ಆತನ ಶಿರ ಬಾಗಿದೆ , ಕುತ್ತಿಗೆಯ ನರವು ಉಬ್ಬಿಕೊಂಡಿದ್ದು ದುಃಖ -ನೋವನ್ನು ನುಂಗಿದಂತಿದೆ . ಆತನ ಮುಖಮುದ್ರೆ ಮತ್ತು ತೆರೆದ ಎದೆಯ ಯಾತನೆಯಲ್ಲಿಯೂ ನಲ್ವಾತನ್ನೇ ನುಡಿಯುವಂತೆ ತೋರುತ್ತಿದೆ . ಬರಬ್ಬನ ಕೊಲೆ ಗಡುಕತನವನ್ನು ಕ್ಷಮಿಸಿ , ನಿರಪರಾಧಿಯಾದ ತನ್ನನ್ನು ಕ್ಷಮಿಸದ , ಬದಲಿಗೆ ಕಳ್ಳರೊಂದಿಗೆ ಗಲ್ಲಿಗೇರಿಸಿದ ರೋಮಿನ ಯಾಜಕರನ್ನು ಆ ದೇವರು ಕ್ಷಮಿಸಿಬಿಡಲಿ ಎನ್ನುವ ಭಾವವನ್ನು ಬಿಂಬಿಸುವಂತಿದೆ ಎಂದು ಕವಿಯು ವಿವರಿಸಿದ್ದಾರೆ ,

ಸಂದರ್ಭವನ್ನು ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1. “ ಮನ್ನಿಸಲಿ ನಿಮ್ಮನ್ನ ಆ ದೇವರೆ ! ”

ಕೆ . ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಕವಿಯೇ ಉದ್ಧರಿಸಿದ್ದಾರೆ . ಏಸುವು ನಿರಪರಾಧಿಯಾದವನು , ಕೊಲೆಗಡುಕ ಬರಬ್ಬನನ್ನು ಕ್ಷಮಿಸಿದ ರೋಮಿನ ಯಾಜಕರು ಏಸುವನ್ನು ಕ್ಷಮಿಸದೆ , ಕಳ್ಳರಿಬ್ಬರೊಂದಿಗೆ ಗಲ್ಲಿಗೇರಿಸಲು ಆಗ್ರಹಿಸಿದರು . ಇದನ್ನು ನೆನೆದ ಕವಿಯು ನಿಮ್ಮ ದುಷ್ಟತನದ ಕೆಲಸವನ್ನು ಆ ದೇವರು ಕ್ಷಮಿಸಲಿ ” ಎಂದಿದ್ದಾರೆ . ಅಕ್ಷಮ್ಯ ಅಪರಾಧವನ್ನು ಕ್ಷಮಿಸಬೇಕೆಂಬ ಉದಾರ ಹೃದಯಿಯಾದ ಏಸುವಿನ ಬೆಳಕು – ಆದರ್ಶ ಕವಿಯಲ್ಲೂ ಅನುರಣಿಸಿರುವುದನ್ನು ಗಮನಿಸಬಹುದು .

2. “ ವೇಷ ಮರೆಸಿವೆ ಅಷ್ಟೆ – ಈ ಎಲ್ಲ ಕೇಡುಗಳು . ”

ಕೆ.ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಏಸು ಶಿಲುಬೆ ಏರಿದ ಕಾಲದಲ್ಲಿ ಜಗತ್ತಿನಲ್ಲಿ ದುಷ್ಟತನ ಕ್ರೌರ್ಯಗಳು ಬಲವಾಗಿ ನೆಲೆಯೂರಿ ಮುಗ್ಧರನ್ನು ಅಮಾಯಕರನ್ನು ಶಿಕ್ಷಿಸಿ ಹಿಂಸಿಸುತ್ತಿದ್ದವು . ಈ ಗುಣಗಳು ಕಾಲರಾಯನ ಗುಜರಿ ಸೇರದೆ ಇಂದಿಗೂ ವೇಷ ಮರೆಸಿಕೊಂಡು ಜಗತ್ತನ್ನಾಳುತ್ತಿರುವು ದನ್ನು ಕವಿಯು ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ . ವೇಷ ಮರೆಸಿರುವ ಕೇಡುಗಳು ರೈಫಲ್ಲು , ಟ್ಯಾಂಕ್ , ಬಾಂಬು , ಗ್ರೆನೇಡುಗಳ ರೂಪದಲ್ಲಿ ಹಿಂಸೆಯನ್ನು ಚಾಲ್ತಿಯಲ್ಲಿರಿಸಿರುವುದನ್ನು ಕವಿ ಇಲ್ಲಿ ಉದಾಹರಿಸಿದ್ದಾರೆ .

3. “ ದಿನನಿತ್ಯ ಶಿಲುಬೆಯೇರಿದ್ದಾನೆ ಜೀಸಸ್ . ”

ಕೆ . ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯ ಅಂತ್ಯದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ಏಸುಕ್ರಿಸ್ತನು ಇಂದಿಗೂ ದಿನನಿತ್ಯ ಶಿಲುಬೆ ಏರುವುದನ್ನು ಕವಿಯು ವಿವರಿಸಿದ್ದಾರೆ . ಆದರೆ ಆತ ಇಂದು ಶಿಲುಬೆಗೇರಿರುವುದು ಮತಗಳೆಂಬ ಮತಿಹೀನರ ದರ್ಪದಲ್ಲಿ ಶೋಷಣೆಗೊಳಗಾಗಿರುವ ಮುಗ್ಧರಲ್ಲಿ , ಅಮಾಯಕರಾಗಿ ಶಿಕ್ಷೆಗೆ ಗುರಿಯಾಗುತ್ತಿರುವ ದುಃಖಿತರ ಕಂಬನಿಗಳಲ್ಲಿ , ಆಸ್ಪತ್ರೆಗಳಲ್ಲಿ ನರಳುತ್ತಿರುವ ರೋಗಿಗಳ ರೂಪದಲ್ಲಿ , ತಿಂಗಳಿ ಗೊಮ್ಮೆಯೂ ದೀಪಹಚ್ಚಲು ಶಕ್ತಿಯಿಲ್ಲದ ಬಡವರ ಮನೆಗಳಲ್ಲಿ ಏಸುವು ದಿನ ನಿತ್ಯವೂ ಶಿಲುಬೆ ಏರಿ , ನೊಂದವರ ಕಂಬನಿಯನ್ನೊರೆಸುತ್ತಿದ್ದಾನೆಂದು ಕವಿಯು ಹೇಳಿದ್ದಾರೆ .

4. “ ಯಾತನೆಗೂ ನಲ್ವಾತನೇ ನುಡಿವ ಮುಖಮುದ್ರೆ ”

ಕೆ.ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಗೋಡೆಯಲ್ಲಿರುವ ಏಸುವಿನ ಪಟವನ್ನು ನೋಡಿ ಕವಿಯು ಈ ಮೇಲಿನ ಮಾತನ್ನು ಹೇಳಿದ್ದಾರೆ . ಶಿಲುಬೆ ಏರಿರುವ ಜೀಸಸ್‌ನ ಪಟ ಗೋಡೆಯ ಮೇಲಿದೆ . ಆತನ ಶಿರ ಬಾಗಿದೆ , ಕುತ್ತಿಗೆಯಲ್ಲಿ ನರ ಉಬ್ಬಿದೆ . ಇದು ದುಃಖ ಅನುಭವಿಸುತ್ತಿರುವುದರ ಸಂಕೇತವಾಗಿದೆ . ಜಡಿದ ಮೊಳೆ , ಬಡಿದ ಮುಳ್ಳಿನ ಕಿರೀಟಗಳ ನೋವನ್ನು ಸಹಿಸಿಯೂ ಏಸುವಿನ ಮುಖಮುದ್ರೆಯು ಒಳ್ಳೆಯ ಮಾತನ್ನೇ ನುಡಿಯುವಂತಿದೆ ಎಂದು ಕವಿಯು ವಿವರಿಸಿದ್ದಾರೆ . ತಾನು ನೋವುಂಡರೂ , ನೋವು ಮಾಡಿದವರಿಗೆ ಹಿತವನ್ನೇ ಬಯಸುವ ಕರುಣಾಮಯಿಯಾಗಿ ಏಸುವು ಕವಿಯ ಕಣ್ಣಿಗೆ ಕಂಡಿರುವನು .

5 , “ ಬಂದೇ ತೀರುತ್ತದೆ ದೈವೀರಾಜ್ಯ ”

ಕೆ . ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಏಸುವು ಶಿಲುಬೆ ಏರಿದ್ದರೂ ಆತ ಮತ್ತೆ ಉದಯಿಸಿ ಬಂದು ದೈವೀರಾಜ್ಯವನ್ನು ತರುವನೆಂಬ ನಂಬಿಕೆ ಕವಿಯದಾಗಿದೆ . ದುಷ್ಟರ ಸಾಮ್ರಾಜ್ಯಕ್ಕೆ , ಅವರ ಕ್ರೋಧ ಹಾಗೂ ತಿಳಿಗೇಡಿತನಕ್ಕೆ ಅಂತ್ಯವನ್ನು ಹಾಡಿ ದೈವೀಸಾಮ್ರಾಜ್ಯವನ್ನು ತರಲೆಂದೇ ಏಸುವು ಶಿಲುಬೆಯನ್ನು ಏರಿದ್ದಾನೆ . ಆತ ಮರಳಿ ಬಂದು ದುಷ್ಟತನವನ್ನು ತೊಲಗಿಸಿ ಸತ್ಯಕ್ಕೆ , ಒಳ್ಳೆಯತನಕ್ಕೆ ಅವಕಾಶಮಾಡಿಕೊಡುವನೆಂಬ ಆಶಯವನ್ನು ಕವಿಯು ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಪಡಿಸಿದ್ದಾರೆ .

2nd PUC Shilube Eriddane Kannada Notes Question Answer pdf Download in 2023

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh