rtgh

ದ್ವಿತೀಯ ಪಿ.ಯು.ಸಿ ಮುಂಬೈ ಜಾತಕ ಕನ್ನಡ ಸಾರಾಂಶ | 2nd PUC Mumbai Jataka Kannada Summary

ದ್ವಿತೀಯ ಪಿ.ಯು.ಸಿ ಮುಂಬೈ ಜಾತಕ ಕನ್ನಡ ಸಾರಾಂಶ, 2nd PUC Mumbai Jataka Kannada Poem Summary Saramsha Bhavartha Pdf Download 2022

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಮುಂಬೈ ಜಾತಕ

ಕೃತಿಕಾರರ ಹೆಸರು : ಜಿ. ಎಸ್‌. ಶಿವರುದ್ರಪ್ಪ

2nd PUC Mumbai Jataka Kannada Poem Summary

Mumbai Jataka Kannada Poem Summary

ಪ್ರಸ್ತುತ ‘ ಮುಂಬೈ ಜಾತಕ ‘ ಕವಿತೆಯು ಮುಂಬೈ , ಬೆಂಗಳೂರು , ದೆಹಲಿ , ಕೊಲ್ಕತ್ತ ಚೆನ್ನೈ ಮುಂತಾದ ಮಹಾನಗರಗಳಲ್ಲಿನ ಜನಜೀವನದ ಒಂದು ಮಾರ್ಮಿಕ ಚಿತ್ರಣ ಈ ಕವಿತೆಯಲ್ಲಿದೆ . ಇದು ಯಾವುದೇ ಒಬ್ಬ ವ್ಯಕ್ತಿಯ ಅಥವಾ ಒಂದು ನಗರವನ್ನು ಪ್ರತಿನಿಧಿಸದೆ ಸಾರ್ವತ್ರಿಕತೆಯನ್ನು ತೋರಿಸಲೋಸುಗ ಈ ಕವಿತೆಯಲ್ಲಿ ಯಾರ ಹೆಸರನ್ನು ಬಳಸಲಾಗಿಲ್ಲ . ಅಲ್ಲದೆ ಇದು ಕೇವಲ ಮುಂಬೈ ನಗರಕ್ಕೆ ಮಾತ್ರ ಸೀಮಿತವಾಗಿರದೆ ‘ ಮುಂಬೈ’ನ್ನು ಪ್ರತಿನಿಧಿಯಾಗಿ ಪರಿಗಣಿಸಲಾಗಿದೆ .

ಪ್ರಸ್ತುತ ಕವಿತೆಯ ರಚನೆಯು ಸಾಮಾನ್ಯ ಕವಿತೆಯೊಂದರಂತಿರದೆ , ಅರ್ಜಿ ನಮೂನೆಯ ರೀತಿಯಲ್ಲಿದೆ . ‘ ಹುಟ್ಟಿದ್ದು ‘ ಎಂದಾಗ ಎಲ್ಲರೂ ಸಾಮಾನ್ಯವಾಗಿ ನಮ್ಮ ನಮ್ಮ ಹುಟ್ಟೂರಿನ ಹೆಸರನ್ನು ಬರೆಯುತ್ತೇವೆ . ಆದರೆ ಮುಂಬೈನಲ್ಲಿ ವಾಸಿಸುವ ವ್ಯಕ್ತಿ ‘ ಆಸ್ಪತ್ರೆಯಲ್ಲಿ ‘ ಎಂದು ಬರೆದಿದ್ದಾನೆ . ಅಂದರೆ ಹೇಳಿಕೊಳ್ಳಲು ಯಾವ ಊರೂ ಗತಿಯಿಲ್ಲ ಎಂಬುದು ಗೋಚರಿಸುತ್ತದೆ . ಕವಿತೆ ಮುಂದುವರೆದಂತೆ ಬೆಳೆದದ್ದು ಎಂಬ ಎರಡನೆಯ ಪ್ರಶ್ನೆ ಎದುರಾಗುತ್ತದೆ . ಅದಕ್ಕೆ ಸಿಗುವ ಉತ್ತರ ಗಮನಿಸಿ , ಮನೆ – ಮಠ – ಕೇರಿಗಳಿರದೆ ಬಸ್ಸು , ಟ್ರಾಂ , ಕಾರು , ಟ್ಯಾಕ್ಸಿ , ಎಲೆಕ್ಟಿಕ್ ಟ್ರೇನುಗಳಲ್ಲಿ ಎಂದಿದೆ . ಇವೆಲ್ಲಾ ಮುಂಬೈ ನಗರದೊಳಗಿನ ಸಂಚಾರಿ ಸಾರಿಗೆಗಳು . ಇದರೊಳಗೆ ಓಡಾಡುತ್ತಲೇ ಬೆಳೆದದ್ದು ಎಂದು ಇಲ್ಲಿನ ವ್ಯಕ್ತಿ ಉತ್ತರಿಸುವಾಗ , ಅವನಿಗೊಂದು ಐಡೆಂಟಿಟಿಯೂ ಇಲ್ಲದ ಸಂದರ್ಭ ಎದುರಾಗುತ್ತದೆ . ಆತ ಕುಡಿದಿರುವುದು ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿಯ ಹಾಲು . ಎಮ್ಮೆಯನ್ನೂ ನೋಡಿಲ್ಲ , ಹಾಲನ್ನೂ ಕರೆಯುವ ಕೈಯನ್ನು ಕಾಣುವ ಸಂದರ್ಭವೇ ಎದುರಾಗಿಲ್ಲ .

ಹಾಲಿನ ಜೊತೆಗೆ ಹೊಟ್ಟೆನೋವಾದಾಗ ಗೈಪ್ ಸಿರಪ್ , ಶಕ್ತಿಗಾಗಿ ಹಾರ್ಲಿಕ್ಸ್‌ಗಳು , ತಾಯ ಎದೆಹಾಲನ್ನು ಕುಡಿದು ಬೆಳೆದೆ ಎನ್ನಲೂ ಧೈರ್ಯವಿಲ್ಲ . ಮಗುವಿನ ಬಾಲ್ಯದ ಪೋಷಣೆಯ , ಪ್ರೀತಿಯ , ಲಾಲಿಯ , ಆಟಪಾಠಗಳ ಚಿತ್ರಣವೇ ಇಲ್ಲಿಲ್ಲ . ಮಗು ಕಂಡಿರುವುದಾದರೂ ಏನನ್ನು ? ಚಂದಮಾಮ , ಹಕ್ಕಿ , ಹೂವು , ಇರುವೆ , ಗೊಂಬೆ ಮುಂತಾದವನ್ನಲ್ಲ . ಬದಲಿಗೆ ಮುಂಬೈನಗರದಲ್ಲಿ ಯಾವಾಗಲೂ ಕಾಣಸಿಗುವುದು ,

ಬೆಳಗಿನಿಂದ ಸಂಜೆಯತನಕ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಮತ್ತು ಅವಸರವಸರವಾಗಿ ತಮ್ಮ ತಮ್ಮ ಕೆಲಸಗಳಿಗೆ ಓಡುತ್ತಿರುವ ಜನರನ್ನು ಮಗು ಇದನ್ನೇ ನೋಡುತ್ತಾ ಬೆಳೆಯಬೇಕು . ಮಗುವಾಗಿರುವಾಗ ಕಲಿತದ್ದೇನು ? ಎಂಬುದು ಮುಂದಿನ ಪ್ರಶ್ನೆ , ಬಾಲ್ಯಲೀಲೆ ಗಳನ್ನು , ಗೆಳೆಯರೊಂದಿಗಿನ ಒಡನಾಟ , ಆಟ – ಪಾಠ ಯಾವುದೂ ಇಲ್ಲ . ದಿನನಿತ್ಯ ಒಂದಲ್ಲ ಒಂದಕ್ಕೆ ‘ ಕ್ಯೂ ನಿಲ್ಲು ‘ , ‘ ಪಾದಚಾರಿಗಳು ಸಂಚರಿಸುವಲ್ಲೇ ಓಡಾಡು ‘ , “ ಅವರಿವರನ್ನು ತಳ್ಳಿಯಾದರೂ ಸರಿಯೇ ನಿನ್ನ ಅಸ್ತಿತ್ವವನ್ನು ಕಂಡುಕೋ ‘ – ಇವೇ ಮುಂತಾದವು . ಬೆಳೆಯುವಾಗಲೇ ಸ್ವಾರ್ಥಿಯಾಗಿ ನೆಲೆನಿಲ್ಲು ಎಂಬುದನ್ನು ಮುಂಬೈ ನಗರವು ಕಲಿಸಿಬಿಡುತ್ತದೆಂಬುದನ್ನು ಕವಿ ಅತ್ಯಂತ ವಿಷಾದದಿಂದ ಇಲ್ಲಿ ಚಿತ್ರಿಸಿದ್ದಾರೆ .

ಇಂತಹ ಮೇಲ್ಕಂಡ ಕಡೆಗಳಲ್ಲಿ ನಡೆಯುವಾಗ ರಸ್ತೆ ಅಂಚಿನಲ್ಲಿ ಕೈ ಹಿಡಿದು ನಡೆಸಿದವಳು , ಇರುವ ಚಿಕ್ಕ ಮನೆಯಲ್ಲಿ ಹೊರ ಜಗತ್ತನ್ನು ಪರಿಚಯಿಸಿದವ ತಾಯಿ . ಅಷ್ಟೇ ಅಲ್ಲದೆ ಎಚ್ಚರಿಕೆ ಕೂಡ ಕೊಟ್ಟವಳು . ಕವಿ ತಂದೆ ಪರಿಚಯವನ್ನು ಹೀಗೆ ಮಾಡಿಕೊಡುತ್ತಿದ್ದಾರೆ .ತಂದೆ ಎಂದರೆ“ ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ಒಮ್ಮೆಮ್ಮೆ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತುಕೊಳ್ಳುವ , ಪಾಣಿ ” ಎಂದಿದ್ದಾರೆ . ಇನ್ನು ಇಲ್ಲಿ ಕಲಿಯಬೇಕಾದ ವಿದ್ಯೆ ಎಂದರೆ ಶಾಲೆ ಕಾಲೇಜುಗಳು ಕಲಿಸಿದ್ದು , ದಾರಿ ಬದಿಯ ಜಾಹಿರಾತುಗಳು ತಲೆಗೆ ಹೊಕ್ಕಿದ್ದು , ರೇಡಿಯೋ ವ್ಯಾಪಾರ ವಿಭಾಗವನ್ನು ಶಿಫಾರಸ್ಸು ಮಾಡಿದ್ದು ಮಕ್ಕಳು ತಾವಾಗಿ ಕಲಿತದ್ದು ಕಡಿಮೆಯಾದರೂ , ಬಸ್‌ಸ್ಟಾಪಿನಲ್ಲಿ ಹೆಣ್ಣು ಮಕ್ಕಳ ಕಡೆ ನೋಡಿ ಕಣ್ಣಾಡಿಸುತ್ತಿದ್ದುದು ಹೊರತುಪಡಿಸಿದರೆ ಅವರಾಗಿದ್ದು ಕಲಿತದ್ದು ಕಡಿಮೆ . ಕವಿ ಜೀವನ ಎಂದರೇನು ? ಎಂಬುದನ್ನು ಬಹಳ ಸೊಗಸಾಗಿ ಬಣ್ಣಿಸಿದ್ದಾರೆ .

ಜೀವನ ಎಂದರೆ ಎಂದರೆ ನೂರಾರು ಬೆಳಕಿನಡಿಯಲ್ಲಿ ಲಕ್ಷಾಂತರ ದಾರಿಗಳ ಚದುರಂಗದಾಟದಲ್ಲಿ ಯಾರದೋ ಕೈಗೊಂಬೆಯಾಗಿ ಅಂದರೆ ಯಾರೋ ಕೈಕೆಳಗೆ ದುಡಿಯುವುದು , ಏಳುವುದು , ಬಟ್ಟೆಯೊಳಗೆ ಮೈ ತುರುಕಿ ಓಡುವುದು , ರೈಲನ್ನೋ ಬಸ್ಸನ್ನೋ ಹಿಡಿಯುವುದು , ಸಾಯಂಕಾಲ ಸುಸ್ತಾಗಿ , ಆಯಾಸದಿಂದ ಹನ್ನೊಂದು ಘಂಟೆಗೆ ಮನೆಗೆ ಹಿಂತಿರುಗಿ ಆಯಾಸಗೊಂಡು ತೂಕಡಿಸಿ ಮಂಕಾದ ಮಡದಿಯನ್ನು ಎಚ್ಚರಿಸುವುದು . ತಣ್ಣಗಿರುವುದನ್ನೆ ತಿಂದು , ಸಾವಿರ ಗಾಲಿಯುಜ್ಜುವ ಕನಸು ಕಾಣುತ್ತಾ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು . ಇದುವೇ ಜೀವನ , ಯಾಂತ್ರಿಕ ಬದುಕು ಎಂಬುದಾಗಿ ಹೇಳಿದ್ದಾರೆ .

2nd PUC Mumbai Jataka Kannada Poem Summary Saramsha Bhavartha Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *