ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-8 ಭೂಪಟ ಅಧ್ಯಯನ ಮಹತ್ವದ ಐತಿಹಾಸಿಕ ಸ್ಥಳಗಳು | 2nd Puc History India Map in Kannada

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-8 ಭೂಪಟ ಅಧ್ಯಯನ ಮಹತ್ವದ ಐತಿಹಾಸಿಕ ಸ್ಥಳಗಳು ನೋಟ್ಸ್‌, 2nd Puc History India Map in Kannada 2nd Puc History Chapter 8 Notes in Kannada Kseeb Solution For Class 12 History Chapter 8 Notes ಭಾರತದ ಭೂಪಟ ಚಿತ್ರ ನಕ್ಷೆ 2nd Puc History Map Work in Kannada

ಅಧ್ಯಾಯ-8 ಭೂಪಟ ಅಧ್ಯಯನ ಮಹತ್ವದ ಐತಿಹಾಸಿಕ ಸ್ಥಳಗಳು

2nd Puc History Chapter 8 Notes

2nd Puc History India Map in Kannada

2nd Puc History India Map in Kannada

2nd Puc History Chapter 8 Question Answer in Kannada

 • ಹರಪ್ಪ : ಇದು ಸಿಂಧೂ ನಾಗರೀಕತೆಯ ಪ್ರಮುಖ ನಿವೇಶನ ಗಳಲ್ಲಿ ಒಂದಾಗಿದೆ . ಇದು ರಾವಿ ನದಿಯ ದಡದಲ್ಲಿದೆ . ಇದು ಇಂದು ಪಾಕಿಸ್ತಾನದ ಪಶ್ಚಿಮ ಪಂಜಾಬ್‌ನ ಮೊಂಟೆಗೊಮರಿ ಜಿಲ್ಲೆಯಲ್ಲಿದೆ . 1921 ರಲ್ಲಿ ದಯರಾಂ ಸಹಾನಿಯವರು ಈ ನಿವೇಶನವನ್ನು ಉತ್ಪನನ ಮಾಡಿದರು . ಮಹಾ , ಉಗ್ರಾಣ ಇಲ್ಲಿ ಕಂಡುಬರುವ ಪ್ರಮುಖ ಕಟ್ಟಡವಾಗಿದೆ .
 • ಪಾಟಲೀಪುತ್ರ : ಗಂಗಾ ನದಿಯ ದಂಡೆಯ ಮೇಲಿರುವ ಇದು ಪ್ರಸ್ತುತ ಪಾಟ್ನ ಎಂದು ಕರೆಯಲ್ಪಡುತ್ತಿರುವ ಬಿಹಾರ ರಾಜ್ಯದ ರಾಜಧಾನಿಯಾಗಿದೆ . ಇದು ಮಗಧ ಸಾಮ್ರಾಜ್ಯ ಮೌರ್ಯರ ಮತ್ತು ಗುಪ್ತರ ರಾಜಧಾನಿಯಾಗಿತ್ತು.
 • ಪಾಣಿಪತ್ : ಇದು ಹರಿಯಾಣ ರಾಜ್ಯದಲ್ಲಿದೆ . ಭಾರತದ ಇತಿಹಾಸದಲ್ಲಿ ಇದೊಂದು ಪ್ರಸಿದ್ಧ ಕದನ ಭೂಮಿಯಾಗಿದ್ದು , ಇಲ್ಲಿ ಮೂರು ಪ್ರಮುಖ ಕದನಗಳು ಜರುಗಿದವು .
 • ಕಲ್ಕತ್ತ: ಹೂಗ್ಲಿ ನದಿಯ ದಡದಲ್ಲಿರುವ ಇದು ಪಶ್ಚಿಮ ಬಂಗಾಳದ ರಾಜಧಾನಿಯಾಗಿದೆ . ಭಾರತದಲ್ಲಿ ಇದು ಬ್ರಿಟಿಷರ ಪ್ರಥಮ ರಾಜಧಾನಿಯಾಗಿತ್ತು . ಕಲ್ಕತ್ತದ ಸಮೀಪ ಬೇಲೂರು ಎಂಬಲ್ಲಿ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸಿದರು .
 • ಬಾದಾಮಿ : ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ , ಬಾದಾಮಿಯ ಆರಂಭಿಕ ಹೆಸರು ವಾತಾಪಿಯಾಗಿದ್ದು , ಇದು ಚಾಲುಕ್ಯರ ರಾಜಧಾನಿಯಾಗಿತ್ತು , ಇದು ಗುಹಾಂತರ ದೇವಾಲಯಗಳಿಗೆ ಪ್ರಸಿದ್ದಿಯಾಗಿದೆ .
 • ಹಂಪಿ : ತುಂಗಭದ್ರಾ ನದಿಯ ದಡದ ಮೇಲಿರುವ ಇದು ಬಳ್ಳಾರಿ ಜಿಲ್ಲೆಯಲ್ಲಿದೆ . ವಿರೂಪಾಕ್ಷ ದೇವಾಲಯ , ವಿಜಯ ವಿಠಲ ದೇವಾಲಯ , ಕಲ್ಲಿನ ರಥ ಮುಂತಾದವು ಹಂಪಿಯ ಭವ್ಯವಾದ ಸ್ಮಾರಕಗಳಾಗಿವೆ .
 • ಪಾಂಡಿಚೆರಿ : ಇದು ಮದ್ರಾಸ್‌ನ ದಕ್ಷಿಣಕ್ಕೆ ಕೋರಮಂಡಲ ತೀರ ಪ್ರದೇಶದಲ್ಲಿದೆ . ಇದು ಭಾರತದಲ್ಲಿ ಫ್ರೆಂಚರ ರಾಜಧಾನಿ ಯಾಗಿತ್ತು .
 • ಕಂಚಿ : ( ಕಾಂಚಿಪುರಂ ) ಇದು ತಮಿಳುನಾಡಿನ ಮದ್ರಾಸ್ ಸಮೀಪದಲ್ಲಿದೆ . ಇದು ಪಲ್ಲವರ ರಾಜಧಾನಿಯಾಗಿತ್ತು . ಈ ನಗರವು ಹಲವಾರು ಶೈವ ಮತ್ತು ವೈಷ್ಣವ ದೇವಾಲಯಗಳಿಗೆ ಪ್ರಸಿದ್ಧಿಯಾಗಿದೆ . ವಿಶ್ವ ಪ್ರಸಿದ್ಧ ಕಾಮಾಕ್ಷಿ ದೇವಾಲಯ ಇಲ್ಲಿದೆ .
 • ತಕ್ಷಶಿಲ : ದ ಇದು ಪಾಕಿಸ್ತಾನದ ವಾಯುವ್ಯ ಭಾಗದಲ್ಲಿದೆ . ಇದು ಗಾಂಧಾರ ಪ್ರಾಂತ್ಯದ ರಾಜಧಾನಿಯಾಗಿತ್ತು . ತಕ್ಷಶಿಲಾ ವಿಶ್ವವಿದ್ಯಾಲಯವು ಪ್ರಾಚೀನ ಭಾರತದಲ್ಲಿ ಪ್ರಮುಖ ವಿದ್ಯಾಕೇಂದ್ರವಾಗಿತ್ತು . ಕೌಟಿಲ್ಯನು ಈ ವಿಶ್ವವಿದ್ಯಾಲಯದಲ್ಲಿ ಆಚಾರ್ಯನಾಗಿದ್ದನು .
 • ದೆಹಲಿ : ಇದು ಯಮುನಾ ನದಿಯ ದಡದಲ್ಲಿದೆ . ಇದು ದೆಹಲಿ ಸುಲ್ತಾನರ ರಾಜಧಾನಿಯಾಗಿದ್ದಿತ್ತಲ್ಲದೆ ಕೆಲಕಾಲ ಮೊಘಲರ ರಾಜಧಾನಿಯಾಗಿತ್ತು . ಕುತುಬ್ ಮಿನಾರ್ , ಕೆಂಪುಕೋಟೆ , ಜಾಮಿ ಮಸೀದಿ ಮುಂತಾದ ಸ್ಮಾರಕಗಳು ಇಲ್ಲಿವೆ .
 • ದೇವಗಿರಿ : ಇದು ಮಹಾರಾಷ್ಟ್ರದಲ್ಲಿದೆ , ಅಲ್ಲಾವುದ್ದೀನ್ ಖಿಲ್ಲಿಯು ಈ ನಗರದ ಮೇಲೆ ದಂಡಯಾತ್ರೆಗಳನ್ನು ಕೈಗೊಂಡನು . ಮಹಮದ್ ಬಿನ್ ತೊಘಲಕನು ದೇವಗಿರಿಯ ಸಮೀಪ ದೌಲತಾಬಾದ್ ಎಂಬ ಹೊಸನಗರವನ್ನು ನಿರ್ಮಿಸಿದನು ಹಾಗೂ ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ಅಲ್ಪಕಾಲ ಸ್ಥಳಾಂತರಿಸಿದ್ದನು .
 • ಜಲಿಯನ್ ವಾಲಾಬಾಗ್ : ಇದು ಪಂಜಾಬಿನ ಅಮೃತಸರದಲ್ಲಿದೆ . ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ನಿರಾಯುಧ ಜನರನ್ನು ಜನರಲ್ ಡಯರ್ ಎಂಬುವನು 1919 ರಲ್ಲಿ ಕಗ್ಗೋಲೆಗೈದನು .
 • ದಂಡಿ : ಇದು ಗುಜರಾತಿನ ಪಶ್ಚಿಮ ತೀರದಲ್ಲಿದೆ . ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು ಇಲ್ಲಿಂದ ಆರಂಭಿಸಿದರು .
 • ಬೀದರ್ : ಇದು ಕರ್ನಾಟಕದ ಉತ್ತರ ಭಾಗದಲ್ಲಿದೆ . ಇದು ಬಹಮನಿ ರಾಜ್ಯದ ರಾಜಧಾನಿಯಾಗಿತ್ತು . ಇಲ್ಲಿ ಮಹಮದ್ ಗವಾನನು ಮದರಸಾವೊಂದನ್ನು ನಿರ್ಮಿಸಿದನು .
 • ಶ್ರೀರಂಗಪಟ್ಟಣ : ಇದು ಮಂಡ್ಯ ಜಿಲ್ಲೆಯಲ್ಲಿದೆ . ಇದು ಆರಂಭಿಕ ಮೈಸೂರು ಒಡೆಯರು , ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ರಾಜಧಾನಿಯಾಗಿತ್ತು . ದರಿಯಾ ದೌಲತ್ ಅರಮನೆ ಮತ್ತು ಶ್ರೀ ರಂಗನಾಥ ದೇವಾಲಯ ಇಲ್ಲಿ ಕಂಡುಬರುವ ಪ್ರಮುಖ ಸ್ಮಾರಕಗಳು .
 • ಬಾಂಬೆ : ಮಹಾರಾಷ್ಟ್ರದ ರಾಜಧಾನಿಯಾಗಿದೆ . ಇದು ಭಾರತದ ಪಶ್ಚಿಮ ತೀರದಲ್ಲಿ ಬ್ರಿಟೀಷರ ಪ್ರಮುಖ ನೆಲೆಯಾಗಿತ್ತು . ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧಿವೇಶನ ಇಲ್ಲಿ ಜರುಗಿತು .
 • ಆಗ್ರಾ: ಇದು ಉತ್ತರ ಪ್ರದೇಶದಲ್ಲಿ ಯಮುನಾ ನದಿಯ ದಡದ ಮೇಲಿದೆ . ಇದನ್ನು ಸಿಕಂದರ್ ಲೋಧಿಯು ನಿರ್ಮಿಸಿದನು . ಇದು ಮೊಘಲರ ರಾಜಧಾನಿಯಾಯಿತು . ತಾಜಮಹಲ್ ಆಗ್ರಾದಲ್ಲಿನ ಅತ್ಯಂತ ಪ್ರಮುಖ ಸ್ಮಾರಕವಾಗಿದೆ .
 • ಪಾಟಲೀಪುತ್ರ : ಗಂಗಾನದಿಯ ದಂಡೆಯ ಮೇಲಿರುವ ಇದು ಪ್ರಸ್ತುತ ಪಾಟ್ನ ಎಂದು ಕರೆಯಲ್ಪಡುತ್ತಿರುವ ಬಿಹಾರ ರಾಜ್ಯದ ರಾಜಧಾನಿಯಾಗಿದೆ . ಇದು ಮಗಧ ಸಾಮ್ರಾಜ್ಯ , ಮೌರ್ಯರ ಮತ್ತು ಗುಪ್ತರ ರಾಜಧಾನಿಯಾಗಿತ್ತು.
 • ಮೀರತ್ : ಉತ್ತರ ಪ್ರದೇಶ ರಾಜ್ಯದಲ್ಲಿದ್ದು , ದೆಹಲಿಯ ಸಮೀಪವಿದೆ . ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕೇಂದ್ರವಾಗಿತ್ತು .
 • ಬಿಜಾಪುರ : ( ವಿಜಾಪುರ ) ಕರ್ನಾಟಕದ ಉತ್ತರ ಭಾಗದಲ್ಲಿರುವ ಇದು ಆದಿಲ್‌ಷಾಹಿಗಳ ರಾಜಧಾನಿ ಯಾಗಿತ್ತು . ಗೋಳಗುಮ್ಮಟ , ಇಬ್ರಾಹಿಂ ರೋಜಾ , ಅಸಾರ ಮಹಲ್ , ಬಾರಾಕಮಾನ್ ಮುಂತಾದವು ಇಲ್ಲಿವೆ .
 • ಹಳೇಬೀಡು : ಇದು ಹಾಸನ ಜಿಲ್ಲೆಯಲ್ಲಿದೆ . ಇದರ ಮೊದಲ ಹೆಸರು ದೋರ ಸಮುದ್ರ ಮತ್ತು ಇದು ಹೊಯ್ಸಳರ ರಾಜಧಾನಿ ಯಾಗಿತ್ತು . ಹೊಯ್ಸಳೇಶ್ವರ ಮತ್ತು ಶಾಂತಳೇಶ್ವರ ದೇವಾಲಯಗಳು ಇಲ್ಲಿವೆ .

FAQ

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸಿದರು ಎಲ್ಲಿ ಸ್ಥಾಪಿಸಿದರು?

ಕಲ್ಕತ್ತದ ಸಮೀಪ ಬೇಲೂರು ಎಂಬಲ್ಲಿ

ಜಲಿಯನ್ ವಾಲಾಬಾಗ್ ಎಲ್ಲಿದೆ ?

ಇದು ಪಂಜಾಬಿನ ಅಮೃತಸರದಲ್ಲಿದೆ

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

1 thoughts on “ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-8 ಭೂಪಟ ಅಧ್ಯಯನ ಮಹತ್ವದ ಐತಿಹಾಸಿಕ ಸ್ಥಳಗಳು | 2nd Puc History India Map in Kannada

Leave a Reply

Your email address will not be published. Required fields are marked *

rtgh