ದ್ವಿತೀಯ ಪಿ.ಯು.ಸಿ ಅಧ್ಯಾಯ-4 ಪ್ರಾಚೀನ ಯುಗ( ವೈದಿಕ ಸಂಸ್ಕೃತಿ) ಇತಿಹಾಸ ನೋಟ್ಸ್‌ | 2nd Puc History Chapter 4 Notes

ದ್ವಿತೀಯ ಪಿ.ಯು.ಸಿ ಅಧ್ಯಾಯ-4 ಪ್ರಾಚೀನ ಯುಗ ( ವೈದಿಕ ಸಂಸ್ಕೃತಿ) ಇತಿಹಾಸ ನೋಟ್ಸ್‌, 2nd Puc History Chapter 4 Notes Question Answer Mcq in Kannada Medium Kseeb Solution For Class 12 History Chapter 4 Notes 2nd Puc History 4th Chapter Question Answer Chapter 4  Ancient Period in Kannada Notes 2nd Puc History Prachina Yuga Notes

ಅಧ್ಯಾಯ-4.1 ಪ್ರಾಚೀನ ಯುಗ( ವೈದಿಕ ಸಂಸ್ಕೃತಿ)

2nd Puc History Chapter 4 Notes

2nd Puc History Chapter 4.1 Question Answer in Kannada

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1. ಪ್ರಥಮ ವೇದವನ್ನು ಹೆಸರಿಸಿ .

ಪ್ರಥಮ ವೇದ ಋಗೈದ .

2. ವೇದಗಳ ಕಾಲದಲ್ಲಿ ಕುಟುಂಬದ ಯಜಮಾನ ಯಾರಾಗಿದ್ದರು ?


ಕುಟುಂಬದ ಹಿರಿಯ ಪುರುಷ

3. ಸದಸ್ಯ ಕ್ಷೇತ್ರ ‘ ಎಂದರೇನು ?

ಉಳುಮೆ ಭೂಮಿಯನ್ನು ‘ ಕ್ಷೇತ್ರ ‘ ಎನ್ನುವರು .

4.’ ಆರ್ಯ ‘ ಪದದ ಅರ್ಥವೇನು ?

ಕುಲೀನ ಅಥವಾ ಒಡೆಯ ಅಥವಾ ಕೃಷಿ ಅವಲಂಬಿತ ವ್ಯಕ್ತಿ .

5. ಯಾವ ಶಬ್ದದಿಂದ ‘ ವೇದ ‘ ಎನ್ನುವ ಶಬ್ದವನ್ನು ಪಡೆಯಲಾಗಿದೆ ?

ಸಂಸ್ಕೃತ ಮೂಲದ ‘ ವಿದ್ ‘ ( ಜ್ಞಾನ ) ಎಂಬುದರಿಂದ’ ಪಡೆಯಲಾಗಿದೆ .

6. ‘ ವೇದ ‘ ಎಂದರೇನು ?

ವೇದ ಎಂದರೆ ‘ ಜ್ಞಾನ ‘ .

7. ಆರ್ಯರು ಯಾವುದನ್ನು ಸಂಪತ್ತೆಂದು ಪರಿಗಣಿಸಿದ್ದರು ?

ಜಾನುವಾರುಗಳನ್ನು ಸಂಪತ್ತೆಂದು ಪರಿಗಣಿಸಿದ್ದರು .

8. ಮಗುವನ್ನು ಶಾಲೆಗೆ ಕಳುಹಿಸಲು ಮಾಡುತ್ತಿದ್ದ ಸಮಾರಂಭ ಯಾವುದು ?

ಮಗುವನ್ನು ಶಾಲೆಗೆ ಕಳುಹಿಸಲು ಮಾಡುತ್ತಿದ್ದ ಸಮಾರಂಭ ಉಪನಯನ ,

9. ಆರ್ಯರ ಪ್ರಮುಖ ಕಸುಬು ಏನಾಗಿತ್ತು ?

ಆರ್ಯರ ಪ್ರಮುಖ ಕಸುಬು ‘ ಕೃಷಿ

2nd Puc History Chapter 4  Ancient Period in Kannada Notes

II . ಈ ಕೆಳಗಿನ ಪ್ರತಿಯೊಂದು 2 ವಾಕ್ಯಗಳಲ್ಲಿ ಉತ್ತರಿಸಿ :

1. ಯಾವುದಾದರೂ ಎರಡು ವೇದಗಳನ್ನು ಹೆಸರಿಸಿ

ಋಗ್ವೇದ , ಯಜುರ್ವೇದ .

2. ವೈದಿಕ ನಾಗರೀಕತೆಯಲ್ಲಿ ರಾಜನಿಗೆ ಯಾವ ಎರಡು ರಾಜಕೀಯ ಸಂಸ್ಥೆಗಳು ಸಹಾಯ ಮಾಡುತ್ತಿದ್ದವು ?

ಸಭಾ ಮತ್ತು ಸಮಿತಿ .

3. ಯಾವುದಾದರೂ ಎರಡು ವರ್ಗಗಳನ್ನು ಹೆಸರಿಸಿ .

ಬ್ರಾಹ್ಮಣ ಮತ್ತು ಕ್ಷತ್ರಿಯ ,

4. ಆರ್ಯರ ಯಾವುದಾದರೂ ಎರಡು ಆಶ್ರಮಗಳನ್ನು ಹೆಸರಿಸಿ .

ಬ್ರಹ್ಮಚರ್ಯ ( ಶಿಕ್ಷಣದ ಅವಧಿ ) , ಗೃಹಸ್ಥ ( ವೈವಾಹಿಕ ಜೀವನ ) .

5. ವೈದಿಕ ಜನರ ಯಾವುದಾದರೂ ಎರಡು ಮನರಂಜನೆ ಗಳನ್ನು ಹೆಸರಿಸಿ .

ಜೂಜಾಡುವುದು , ರಥ ಓಡಿಸುವುದು .

6. ವೈದಿಕ ಕಾಲದ ಯಾರಾದರೂ ಇಬ್ಬರು ಮಹಿಳಾ ವಿದ್ವಾಂಸರನ್ನು ಹೆಸರಿಸಿ .

ಗಾರ್ಗಿ , ಮೈತ್ರೇಯಿ .

vaidika sanskruti history notes in kannada

III ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

1. ಆರ್ಯರ ರಾಜಕೀಯ ಸ್ಥಿತಿಯ ಬಗ್ಗೆ ವಿವರಣೆ ನೀಡಿ

 • ಆರ್ಯರ ಬುಡಕಟ್ಟುಗಳನ್ನು ‘ ಜನ’ಗಳು ಎನ್ನುತ್ತಿದ್ದರು . ಬುಡಕಟ್ಟಿನ ಮುಖ್ಯಸ್ಥನನ್ನು ‘ ರಾಜನ್ ‘ ಎಂದು ಕರೆಯುತ್ತಿದ್ದರು .
 • ಜಾನುವಾರುಗಳು ಮತ್ತು ಪ್ರದೇಶಗಳಿಗಾಗಿ ಬುಡಕಟ್ಟು ಗಳು ಪರಸ್ಪರ ಸಂಘರ್ಷದಲ್ಲಿ ತೊಡಗುತ್ತಿದ್ದವು .
 • ರಾಜಪ್ರಭುತ್ವವು ವಂಶಪಾರಂಪರವಾಯಿತು .
 • ಸೈನ್ಯವು ಕಾಲ್ಗಳ , ಗಜದಳ ಮತ್ತು ಅಶ್ವದಳಗಳನ್ನೊಳಗೊಂಡಿತ್ತು ಬಿಲ್ಲುಬಾಣಗಳು , ಖಡ್ಗಗಳು , ಭರ್ಜಿಗಳು , ಗದೆಗಳು , ಕೊಡಲಿಗಳು ಮುಂತಾದ ಯುದ್ಧೋಪಕರಣಗಳನ್ನು ಉಪಯೋಗಿಸುತ್ತಿದ್ದರು .
 • ಜಯಗಳಿಸುವುದಕ್ಕಾಗಿ ಮೋಸದ ಮಾರ್ಗವನ್ನು ಅನುಸರಿಸುತ್ತಿದ್ದರು .
 • ಪುರೋಹಿತ , ಸಂಗ್ರಹಪತಿ , ಸೇನಾಪತಿ , ಎಸ್ಪತಿಗಳು ಮತ್ತು ಗ್ರಾಮಣಿಗಳು ಅರಸನಿಗೆ ಆಡಳಿತದಲ್ಲಿ ಸಹಾಯಕರಾಗಿದ್ದರು .
 • ಗ್ರಾಮಣಿ ಗ್ರಾಮದ ಮುಖ್ಯಸ್ಥ ವಿಸೃತಿಯು ಕೆಲವು ಗ್ರಾಮಗಳ ಗುಂಪಿನ ಉಸ್ತುವಾರಿ ಹೊಂದಿದ್ದನು .
 • ರಾಜನ ಪ್ರಾಥಮಿಕ ಕರ್ತವ್ಯವು ಬುಡಕಟ್ಟನ್ನು ರಕ್ಷಣೆ ಮಾಡುವುದಾಗಿತ್ತು . ಇದಕ್ಕಾಗಿ ಅವನು ಜನರಿಂದ ಕಾಣಿಕೆಗಳನ್ನು ಪಡೆಯುತ್ತಿದ್ದನು .
 • ‘ ಜನ ‘ ಗಳು ಪ್ರಬಲ ರಾಜ್ಯಗಳಾಗಿ ಪರಿವರ್ತನೆ ಗೊಂಡವು .
 • ರಾಜ್ಯಗಳನ್ನು ಪ್ರಾಂತ್ಯಗಳನ್ನಾಗಿ ವಿಂಗಡಣೆಯಾಯಿತು .

2. ಆರ್ಯರ ಸಾಮಾಜಿಕ ಸ್ಥಿತಿಯನ್ನು ವಿವರಿಸಿ .

 • ಅವಿಭಕ್ತ ಕುಟುಂಬ ವ್ಯವಸ್ಥೆಯಿದ್ದು , ಪಿತೃಪ್ರಧಾನವಾಗಿತ್ತು .
 • ಕುಟುಂಬದ ಪುರುಷ ಸದಸ್ಯ ಮುಖ್ಯಸ್ಥನಾಗಿದ್ದನು .
 • ಇವನನ್ನು ಕುಲಪತಿ ಅಥವಾ ಗೃಹಪತಿ ಎಂದು ಕರೆಯಲಾಗಿತ್ತು .
 • ಏಕಪತ್ನಿತ್ವ ರೂಢಿಯಲ್ಲಿತ್ತು , ಬಹುಪತ್ನಿತ್ವ ರಾಜವಂಶಕ್ಕೆ ಸೀಮಿತವಾಗಿತ್ತು . ಮಹಿಳೆಯರಿಗೆ ಉನ್ನತ ಸ್ಥಾನವಿದ್ದು , ವಿಧವಾ ಪುನರ್ ವಿವಾಹ ಅಸ್ತಿತ್ವದಲ್ಲಿತ್ತು .
 • ಬ್ರಾಹ್ಮಣ , ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ ಎಂಬ ವರ್ಗಗಳಿದ್ದು ವೃತ್ತಿಗಳನ್ನು ಬದಲಾಯಿಸುವುದರೊಂದಿಗೆ ಜನರು ವರ್ಗಗಳನ್ನು ಬದಲಾಯಿಸಬಹುದಾಗಿತ್ತು .
 • ಉತ್ತರ ವೈದಿಕ ಕಾಲದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಅಸ್ತಿತ್ವಕ್ಕೆ ಬಂದವು .
 • ಮಹಿಳೆಯರ ಸ್ಥಾನ ಕ್ಷೀಣಿಸಿತು .
 • ಗೋಧಿ , ಅಕ್ಕಿ , ಬಾಗ್ಲಿ , ತರಕಾರಿ , ಹಣ್ಣುಗಳು , ಹಾಲು ಮತ್ತು ಹೈನು ಜನರ ಆಹಾರ ಪದಾರ್ಥಗಳಾಗಿದ್ದವು . ಮೀನು ಮತ್ತು ಮಾಂಸಗಳನ್ನು ಉಪಯೋಗಿಸುತ್ತಿದ್ದರು .
 • ಧಾರ್ಮಿಕ ಮತ್ತು ಹಬ್ಬದ ಸಂದರ್ಭದಲ್ಲಿ ‘ ಸೋಮ ‘ ಮತ್ತು ಸುರವೆಂಬ ವಾದಕ ಪೇಯಗಳನ್ನು ಸೇವಿಸುತ್ತಿದ್ದರು .
 • ಸ್ತ್ರೀ ಪುರುಷರಿಬ್ಬರೂ ಆಭರಣಪ್ರಿಯರಾಗಿದ್ದರು .
 • ಜೂಜಾಡುವುದು , ರಥ ಓಡಿಸುವ ಸ್ಪರ್ಧೆ , ಕುದುರೆ ಓಡಿಸುವ ಸ್ಪರ್ಧೆ , ಸಂಗೀತ , ನೃತ್ಯ ಮುಂತಾದವುಗಳು ಅವರ ವಿವಿಧ ರೀತಿಯ ಮನರಂಜನೆಗಳಾಗಿದ್ದವು . ನಗಾರಿ , ದುಂದುಬಿ , ವೀಣೆ ಮತ್ತು ಕೊಳ್ಳಲು ಆ ಕಾಲದ ಪ್ರಮುಖ ಸಂಗೀತ ವಾದ್ಯಗಳಾಗಿದ್ದವು .

3. ಆರ್ಯರ ಧಾರ್ಮಿಕ ಸ್ಥಿತಿಯನ್ನು ವಿವರಿಸಿ .

 • ವೈದಿಕ ಧರ್ಮವು ಸನಾತನಧರ್ಮ . ಹಿಂದೂ ಧರ್ಮ ಮತ್ತು ಬ್ರಾಹ್ಮಣ ಧರ್ಮ ಎಂದೂ ಸಹ ಹೆಸರಾಗಿದೆ . ಇಂದಿಗೂ ಆಚರಣೆಯಲ್ಲಿದೆ .
 • ಪೂರ್ವ ವೇದ ಕಾಲದ ಆರ್ಯರು ಪ್ರಕೃತಿಯನ್ನು ಆರಾಧಿಸುತ್ತಿದ್ದರು . ಅವರುಗಳಿಗೆ ದೇವರಲ್ಲಿ ನಂಬಿಕೆಯಿತ್ತು .
 • ಇಂದ್ರ , ವರುಣ , ಅಗ್ನಿ , ವಾಯು ಸೂರ್ಯ , ಪೃಥ್ವಿ , ಸೋಮ ಮುಂತಾದ ದೇವತೆಗಳನ್ನು ಪೂಜಿಸುತ್ತಿದ್ದರು . ಮೂರ್ತಿ ಪೂಜೆ ಇರಲಿಲ್ಲ . ಪೂಜಾ ವಿಧಾನ ಸರಳವಾಗಿತ್ತು .
 • ಅವರು ಶ್ಲೋಕಗಳನ್ನು ರಚಿಸಿ ದೇವತೆಗಳನ್ನು ಆರಾಧಿಸುತ್ತಿದ್ದರು . ಉತ್ತರ ವೇದಕಾಲದಲ್ಲಿ ಧರ್ಮಾಚರಣೆ ಸಂಕೀರ್ಣ ಮತ್ತು ಕಠಿಣವಾಯಿತು .
 • ದೇವತೆಗಳ ಸಂಖ್ಯೆ ಬಹುಪಟ್ಟು ಹೆಚ್ಚಿತು ಮತ್ತು ದೇವತೆಗಳಿಗೆ ವಿವಿಧ ಆಕಾರ ಮತ್ತು ಗುಣಗಳನ್ನು ಕೊಡಲಾಯಿತು . ಮೂರ್ತಿ ಪೂಜೆ ಅಸ್ಥಿತ್ವಕ್ಕೆ ಬಂದಿತು . ಹೊಸ ದೇವತೆಗಳಾದ ಬ್ರಹ್ಮ , ವಿಷ್ಣು , ಮಹೇಶ್ವರ , ಗಣೇಶ , ಕಾರ್ತಿಕೇಯ , ಪಾರ್ವತಿ , ಲಕ್ಷ್ಮೀ , ಕಾಳಿ , ದುರ್ಗಾ , ಮುಂತಾದವರು ಅಸ್ತಿತ್ವಕ್ಕೆ ಬಂದರು .
 • ಆಕಳನ್ನು ಪವಿತ್ರವೆಂದು ಪರಿಗಣಿಸ ಲಾಗಿತ್ತು . ಯಜ್ಞ ಯಾಗಾದಿಗಳ ಆಚರಣೆಯೂ ವಿಸ್ತ್ರತವಾಯಿತು .
 • ವರ್ಗಗಳು , ಆಶ್ರಮಗಳು ಮತ್ತು ಪುರುಷಾರ್ಥಗಳು ವೈದಿಕ ಧರ್ಮದ ಅವಿಭಾಜ್ಯ ಅಂಗಗಳಾಗಿದ್ದವು . ವೈದಿಕ ಧರ್ಮವು ಹುಟ್ಟು , ಸಾವು , ಮನರ್ಜನ್ಮ ಚಕ್ರದಲ್ಲಿ ಮತ್ತು ಆತ್ಮದ ಪರಕಾಯ ಪ್ರವೇಶದ ಪರಿಕಲ್ಪನೆಯಲ್ಲೂ ನಂಬಿಕೆ ಹೊಂದಿದೆ .

4. ವೈದಿಕ ಕಾಲದ ಶಿಕ್ಷಣ ಮತ್ತು ವಿಜ್ಞಾನ ಕುರಿತು ಟಿಪ್ಪಣಿ ಬರೆಯಿರಿ .

 • ಗುರುಕುಲ , ಪಾಠಶಾಲೆ , ಅಗ್ರಹಾರ ಮತ್ತು ಘಟಕಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು .
 • ದೇವಾಲಯಗಳೂ ಕೂಡ ಶಿಕ್ಷಣ ಕೇಂದ್ರಗಳಾಗಿದ್ದವು . ಉನ್ನತ ಶಿಕ್ಷಣವನ್ನು ಕಂಚಿ ಮತ್ತು ತಕ್ಷಶಿಲಾಗಳಂತಹ ವಿಶ್ವವಿದ್ಯಾನಿಲಯಗಳಲ್ಲಿ ಒದಗಿಸಲಾಗುತ್ತಿತ್ತು .
 • ಸ್ತ್ರೀ ಪುರುಷರಿಬ್ಬರೂ ಶಿಕ್ಷಣ ಪಡೆಯುತ್ತಿದ್ದರು . ವೇದಗಳು , ಪುರಾಣಗಳು , ತತ್ವಶಾಸ್ತ್ರ , ಗಣಿತ , ಖಗೋಳಶಾಸ್ತ್ರ , ಜ್ಯೋತಿಷ್ಯಶಾಸ್ತ್ರ , ಔಷಧಶಾಸ್ತ್ರ , ತರ್ಕಶಾಸ್ತ್ರ , ಮುಂತಾದವುಗಳು ಪ್ರಮುಖ ಬೋಧನಾ ವಿಷಯಗಳಾಗಿದ್ದವು .
 • ಸಂಸ್ಕೃತ ಭೋದನಾ ಮಾಧ್ಯಮವಾಯಿತು . ಆರ್ಯರು ಗಣಿತ , ರೇಖಾಗಣಿತ , ಔಷಧಶಾಸ್ತ್ರ ಮತ್ತು ಲೋಹಶಾಸ್ತ್ರಗಳಲ್ಲಿ ಹೆಚ್ಚಿನ ಪ್ರಗತಿ ಹೊಂದಿದ್ದರು .
 • ಸೂರ್ಯ ಮತ್ತು ಚಂದ್ರ , ಚಂದ್ರ ಮತ್ತು ಭೂಮಿ ಹಾಗೂ ಸೂರ್ಯ ಮತ್ತು ಭೂಮಿಗಳ ನಡುವಿನ ಅಂತರದ ಲೆಕ್ಕಾಚಾರ ಅವರಿಗೆ ತಿಳಿದಿತ್ತು .
 • ಗ್ರಹಣಗಳು ಮತ್ತು ಧೂಮಕೇತುಗಳ ಸಂಭವಿಸುವಿಕೆಯ ಜ್ಞಾನ ಅವರಿಗಿತ್ತು .
 • ಔಷಧಶಾಸ್ತ್ರದಲ್ಲಿಯೂ ಹೆಚ್ಚಿನ ಪ್ರಗತಿ ಸಾಧಿಸುತ್ತಿದ್ದರು . ಚಂದ್ರಮಾನ ಪಂಚಾಂಗವನ್ನು ಅನುಸರಿಸುತ್ತಿದ್ದರು .

2nd Puc History Prachina Yuga Notes Mcq Questions

ಹೆಚ್ಚುವರಿ ಪ್ರಶ್ನೋತ್ತರಗಳು:

1 . ಆರ್ಯರು ಭಾರತಕ್ಕೆ ಯಾವ ದಿಕ್ಕಿನಿಂದ ಬಂದರೆಂದು ನಂಬಲಾಗಿದೆ ?

ವಾಯುವ್ಯ ದಿಕ್ಕಿನಿಂದ .

2. ಆರ್ಯರು ಯಾರು ? ಮತ್ತು ಅವರ ಮೂಲಸ್ಥಳ ಯಾವುದು ?

ಆರ್ಯರು ಕ್ಯಾಸ್ಪಿಯನ್ ಸಮುದ್ರ ಪ್ರದೇಶದ ಹಳ್ಳಿಗಾಡಿನ ದನಗಾಹಿಗಳು ,

3. ಪ್ರೊಫೆಸರ್ ಮ್ಯಾಕ್‌ಡೊನಾಲ್ಡ್‌ರವರ ಪ್ರಕಾರ ಆರ್ಯರ ಮೂಲಸ್ಥಳ ಯಾವುದು ?

ಆಗ್ನೇಯ ಏಷ್ಯಾ

4. ಆರ್ಯರು ಟಿಬೆಟ್ ಮೂಲದವರೆ೦ದು ಹೇಳಿದವರಾರು ?

ಬಾಲಗಂಗಾಧರ ತಿಲಕ್ .

5. ಆರ್ಯರ ವ್ಯಾಪಾರ ಪದ್ಧತಿಯು ಯಾವುದರ ಮೂಲಕ ನಡೆಯುತ್ತಿತ್ತು ?

ವಸ್ತುವಿನಿಮಯ .

6. ನಿಷ್ಕ ಎಂದರೇನು ?

ಒಂದು ಚಿನ್ನದ ತುಣುಕು .

7. ಪುರುಷಾರ್ಥಗಳು ಎಂದರೇನು ?

ಧರ್ಮ , ಅರ್ಥ , ಕಾಮ , ಮೋಕ್ಷ .

FAQ

1. ‘ ವೇದ ‘ ಎಂದರೇನು ?

ವೇದ ಎಂದರೆ ‘ ಜ್ಞಾನ ‘ .

2.’ ಆರ್ಯ ‘ ಪದದ ಅರ್ಥವೇನು ?

ಕುಲೀನ ಅಥವಾ ಒಡೆಯ ಅಥವಾ ಕೃಷಿ ಅವಲಂಬಿತ ವ್ಯಕ್ತಿ .

3. ಆರ್ಯರ ಪ್ರಮುಖ ಕಸುಬು ಏನಾಗಿತ್ತು ?

ಆರ್ಯರ ಪ್ರಮುಖ ಕಸುಬು ‘ ಕೃಷಿ

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf 2022

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *