ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು,1st Puc Economics Chapter 9 Notes Question Answer in Kannada Medium Pdf Download Kseeb Solutions For Class 11 Economics Chapter 9 Notes Pdf 1st Puc Parisara Mattu Susthira Abhivrudhi Economic Notes in Kannada 1st Puc Economics Notes in Kannada Pdf Chapter 9 1st Puc Economics 9th Lesson Notes in Kannada Pdf
1st Puc Economics Chapter 9 Notes in Kannada
1. ಪರಿಸರ ಎಂದರೇನು?
ಭೂ ಗ್ರಹಕ್ಕೆ ಚಳುವಳಿಯಾಗಿರುವ ಎಲ್ಲಾ ಸಂಪನ್ಮೂಲಗಳ ಒಟ್ಟು ಮೊತ್ತವನ್ನು ಪರಿಸರ ಎಂದು ವ್ಯಾಖ್ಯಾನಿಸಲಾಗಿದೆ. ಪರಿಸರವು ಒಂದನ್ನೊಂದು ಪ್ರಭಾವಿಸುವ ಸಜೀವ ಮತ್ತು ನಿರ್ಜೀವ ಅಂಶಗಳನ್ನು ಒಳಗೊಂಡಿದೆ.
2. ಸಂಪನ್ಮೂಲಗಳ ಪುನರುತ್ಪತ್ತಿಗಿಂತ ಸಂಪನ್ಮೂಲಗಳ ಹೊರ ತೆಗೆಯುವಿಕೆ ದರ ಅಧಿಕವಾದರೆ ಏನಾಗುತ್ತದೆ?
ಸಂಪನ್ಮೂಲಗಳ ಹೊರತೆಗೆಯುವಿಕೆಯು ಸಂಪನ್ಮೂಲಗಳ ಪುನರುತ್ಪತ್ತಿ ದರಕ್ಕಿಂತ ಹೆಚ್ಚಿರಬಾರದು ಮತ್ತು ತ್ಯಾಜ್ಯಗಳ ಸೃಷ್ಟಿಯ ಪ್ರಮಾಣವು ಪರಿಸರದ ಹೀರಿಕೊಳ್ಳುವ ಸಾಮರ್ಥ್ಯಕ್ಕಿಂತ ಕಡಿಮೆ ಇರಬೇಕು. ಹೀಗಾಗದಿದ್ದರೆ, ಪರಿಸರವು ಜೀವವೈವಿಧ್ಯತೆ ಮತ್ತು ಅನುವಂಶೀಯತೆಯ ಮುಂದುವರಿಕೆಗೆ ಅವಕಾಶ ಒದಗಿಸುವುದರಲ್ಲಿ ವಿಫಲವಾಗಿ ಪರಿಸರ ಮಾಲಿನ್ಯ ಮತ್ತು ಅಸಮತೋಲನ ಸಮಸ್ಯೆ ಉದ್ಭವಿಸುತ್ತದೆ. ಇಂತಹ ಸನ್ನಿವೇಶವನ್ನು ಇಂದು ವಿಶ್ವದಾದ್ಯಂತ ಕಾಣುತ್ತಿದ್ದೇವೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವೈಭವೋಪೇತ ವಸ್ತುಗಳ ಅನುಭೋಗ ಹಾಗೂ ಉತ್ಪಾದನೆಯ ಹೆಚ್ಚಳದಿಂದ ಪರಿಸರದ ಮೇಲೆ ಅಗಾಧವಾದ ಒತ್ತಡ ಬೀಳುವುದರಿಂದ ಹಲವಾರು ಸಂಪನ್ಮೂಲಗಳು ನಶಿಸಿವೆ. ತ್ಯಾಜ್ಯಗಳ ಸೃಷ್ಟಿಯ ಪ್ರಮಾಣವು ಪರಿಸರದ ಹೀರಿಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ.
3. ಈ ಕೆಳಗಿನವುಗಳನ್ನು ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಸಂಪನ್ಮೂಲಗಳೆಂದು ವಿಂಗಡಿಸಿ,
i. ಮರಗಳು
ii. ಮೀನು
iii. ಪೆಟ್ರೋಲಿಯಂ
iv. ಕಲ್ಲಿದ್ದಲು
v. ಕಬ್ಬಿಣದ ಅದಿರು
vi. ನೀರು
ನವೀಕರಿಸಬಹುದಾದ ಸಂಪನ್ಮೂಲಗಳು : ಮರಗಳು, ಮೀನು, ನೀರು
ನವೀಕರಿಸಲಾಗದ ಸಂಪನ್ಮೂಲಗಳು : ಪೆಟ್ರೋಲಿಯಂ, ಕಲ್ಲಿದ್ದಲು, ಕಬ್ಬಿಣದ ಅದಿರು.
4. ಇಂದು ಜಗತ್ತು ಎದುರಿಸುವ ಎರಡು ಪ್ರಮುಖ ಪರಿಸರ ಸಮಸ್ಯೆಗಳು
ತ್ಯಾಜ್ಯಗಳ ಸೃಷ್ಟಿ ಮತ್ತು ಮಾಲಿನ್ಯ
5. ಈ ಕೆಳಗಿನ ಅಂಶಗಳು ಭಾರತದಲ್ಲಿ ಹೇಗೆ ಪರಿಸರ ಬಿಕ್ಕಟ್ಟಿಗೆ ಕಾರಣವಾಗಿವೆ? ಸರಕಾರಕ್ಕೆ ಅವುಗಳು ಯಾವ ರೀತಿಯ ಸಮಸ್ಯೆಯನ್ನು ಒಡ್ಡುತ್ತಿವೆ?
i. ಜನಸಂಖ್ಯೆ ಏರಿಕೆ
ii. ವಾಯು ಮಾಲಿನ್ಯ
iii. ನೀರು ಕಲುಷಿತವಾಗುವುದು (ಜಲಮಾಲಿನ್ಯ)
iv. ವೈಭವೋಪೇತ ಅನುಭೋಗ
V. ಅನಕ್ಷರತೆ
vi. ಕೈಗಾರಿಕೀಕರಣ
vii. ನಗರೀಕರಣ
viii. ಅರಣ್ಯ ಸಂಪನ್ಮೂಲದ ಕ್ಷೀಣತೆ
ix. ಅತಿಕ್ರಮಣ
x. ಜಾಗತಿಕ ತಾಪಮಾನ
i. ಜನಸಂಖ್ಯೆ ಏರಿಕೆ :
ಪ್ರಪಂಚದ ಒಟ್ಟು ಭೂ ಪ್ರದೇಶದಲ್ಲಿ ಶೇ.2.5ರಷ್ಟು ಭೂ ಪ್ರದೇಶ ಹೊಂದಿರುವ ಭಾರತ ಜಗತ್ತಿನ ಜನಸಂಖ್ಯೆಯ ಸುಮಾರು ಶೇ.17ರಷ್ಟು ಮತ್ತು ಶೇ.20ರಷ್ಟು ಜಾನುವಾರುಗಳನ್ನು ಪೋಷಿಸುತ್ತಿದೆ. ಜನಸಂಖ್ಯೆ ಮತ್ತು ಜಾನುವಾರು ದಟ್ಟಣೆ ಮತ್ತು ಅರಣ್ಯೀಕರಣ ಕೃಷಿ, ಹುಲ್ಲುಗಾವಲು, ಜನವಸತಿ, ಕೈಗಾರಿಕೆಗಳ ಸ್ಥಾಪನೆ ಮುಂತಾದ ಉದ್ದೇಶಗಳಿಗೆ ಭೂಮಿಯ ಬಳಕೆ ಅಧಿಕವಾಗುತ್ತಿರುವುದರಿಂದ ದೇಶದ ಮಿತವಾದ ಸಂಪನ್ಮೂಲಗಳ ಮೇಲೆ ಒತ್ತಡ ಬೀಳುತ್ತಿದೆ. ಆದ್ದರಿಂದ, ಸರ್ಕಾರಕ್ಕೂ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಸುಸ್ಥಿರ ಅಭಿವೃದ್ಧಿ ಪಥವನ್ನು ಅಳವಡಿಸಿಕೊಳ್ಳುವವರೆಗೂ ಸರ್ಕಾರ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ.
ii. ವಾಯು ಮಾಲಿನ್ಯ
ಭಾರತದ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ವ್ಯಾಪಕವಾಗಿ ಹರಡಿದೆ. ವಾಯುಮಾಲಿನ್ಯಕ್ಕೆ ವಾಹನಗಳು, ಕೈಗಾರಿಕೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ಕೊಡುಗೆ ಅಪಾರವಾಗಿದೆ. ವಾಹನಗಳು ಹೊರ ಸೂಸುವ ಹೊಗೆ ತಳಮಟ್ಟದ ಮೂಲಗಳಾಗಿದ್ದು ಸಾಮಾನ್ಯ ಜನತೆಯ ಮೇಲೆ ಗರಿಷ್ಟ ಪ್ರಮಾಣದ ಪ್ರತಿಕೂಲ ಪರಿಣಾಮ ಬೀರುತ್ತಿವೆ. 1951ರಲ್ಲಿ ವಾಹನಗಳ ಸಂಖ್ಯೆ ಮೂರು ಲಕ್ಷ ಇದ್ದು 2003ರಲ್ಲಿ ಅದು 67 ಕೋಟಿಯಷ್ಟಾಗಿದೆ. ಒಟ್ಟು ನೋಂದಾಯಿತ ವಾಹನಗಳಲ್ಲಿ ಸುಮಾರು ಶೇ.80ರಷ್ಟು ವೈಯಕ್ತಿಕ ಸಾರಿಗೆ ವಾಹನಗಳಾಗಿದ್ದು ಇವುಗಳು ಮೇಲಿನ ಒತ್ತಡದ ಹೊರೆಯನ್ನು ಗಮನಾರ್ಹವಾಗಿ ಹೆಚ್ಚಿಸಿವೆ.
iii. ನೀರು ಕಲುಷಿತವಾಗುವುದು (ಜಲಮಾಲಿನ್ಯ)
ನೀರಿನ ಮೇಲೆ ಜೀವನವು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಅಧಿಕ ಜನಸಂಖ್ಯೆ, ಕಾರ್ಖಾನೆಗಳ ತ್ಯಾಜ್ಯ ಹೊರಹಾಕುವಿಕೆ ಇತ್ಯಾದಿಯಿಂದ ನೀರು ಕಲುಷಿತವಾಗುತ್ತಿದೆ. ಬೆಳವಣಿಗಾ ಪ್ರಕ್ರಿಯೆಯು ಸಹ ನೀರಿನ ಪ್ರಮಾಣದ ಇಳಿಕೆಗೆ ಕಾರಣವಾಗಿದೆ. ಸರ್ಕಾರವು ನೀರಿನ ಕಲುಷಿತೆಯ ಸಮಸ್ಯೆಯನ್ನು ಪರಿಹರಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದು, ಆದರೆ ಅಪೇಕ್ಷಿತ ಯಶಸ್ಸನ್ನು ಪಡೆಯಲು ವಿಫಲವಾಗುತ್ತಿದೆ.
iv. ವೈಭವೋಪೇತ ಅನುಭೋಗ : ಮುಂದುವರಿದ ದೇಶಗಳಲ್ಲಿ ವೈಭವೋಪೇತ ಅನುಭೋಗ ಮತ್ತು ಉತ್ಪಾದನಾ ಸಾಮರ್ಥ್ಯವು ಪರಿಸರದ ಮೇಲೆ ತುಂಬಾ ಒತ್ತಡವನ್ನುಂಟುಮಾಡುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಮಿತವಾದ ಸಂಪನ್ಮೂಲಗಳು ಮತ್ತು ಕಡಿಮೆ ಜನಸಂಖ್ಯಾ ಬೆಳವಣಿಗೆಯಿಂದ ಸಮಾಜದ ಮೇಲೆ ಶಿಸ್ತುಕ್ರಮವನ್ನು ಹೇರುತ್ತಿಲ್ಲ. ಆದ್ದರಿಂದ ಅವರು ವೈಭವೋಪೇತ ಸಮಾಜವನ್ನು ನಿರ್ಮಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಸಂಪನ್ಮೂಲಗಳು ಬಳಕೆಯಾಗದೇ ಇರುವುದರಿಂದ ಸಂಪನ್ಮೂಲಗಳ ವ್ಯರ್ಥಕ್ಕೆ ಕಾರಣವಾಗುತ್ತದೆ.
V. ಅನಕ್ಷರತೆ : ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅನಕ್ಷರತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಅನಕ್ಷರತಾ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿತು. ಆದರೆ ಇದು ಅರಣೀಕರಣ, ಮಾಲಿನ್ಯ, ಆರೋಗ್ಯ, ಶೌಚಾಲಯ ಇತ್ಯಾದಿಗಳು ಹೆಚ್ಚಾಗಲೂ ಕಾರಣವಾಯಿತು.
vi. ಕೈಗಾರಿಕೀಕರಣ
ಯೋಜನಾರಹಿತ ನಗರೀಕರಣ, ವಾಯುಮಾಲಿನ್ಯ, ಅಪಘಾತಗಳ ಗಂಡಾಂತರ ಮುಂತಾದ ಪರಿಣಾಮಗಳಿವೆ. ಉತ್ಪಾದನೆ ಮತ್ತು ಅನುಭೋಗ ಎರಡಕ್ಕೂ ಸಹ ಸಂಪನ್ಮೂಲಗಳ ಬೇಡಿಕೆ ಏರಿಕೆಯಾಗಿದೆ. ಇದರಿಂದ ಸಂಪನ್ಮೂಲಗಳ ಮನರುತ್ಪತ್ತಿಗಿಂತ ಹೊರತೆಗೆಯುವಿಕೆ ಹೆಚ್ಚಾಗಿದೆ.
vii. ನಗರೀಕರಣ
ಗ್ರಾಮೀಣ ಪ್ರದೇಶದ ಜನರು ಹಲವಾರು ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ನಗರ ಪ್ರದೇಶಗಳು ಕೊಳಚೆ ಪ್ರದೇಶಗಳಾಗಿ ಪರಿವರ್ತನೆಯಾಗುತ್ತಿವೆ.
viii, ಅರಣ್ಯ ಸಂಪನ್ಮೂಲದ ಕ್ಷೀಣತೆ : ಏರುತ್ತಿರುವ ಜನಸಂಖ್ಯೆಗೆ ಆಹಾರ, ವಸತಿ, ಬಟ್ಟೆ ಇತ್ಯಾದಿಗಳ ಅಗತ್ಯವಿದೆ. ಸಮಾಜದ ಎಲ್ಲಾ ಅವಶ್ಯಕತೆಗಳನ್ನು ಪಡೆಯಲು ಸರ್ಕಾರ ವ್ಯವಹಾರಸ್ಥರು ಅರಣ್ಯವನ್ನು ನಾಶಪಡಿಸುತ್ತಿದ್ದಾರೆ. ಇದು ಓಜೋನ್ ಪದರದ ನಾಶ ಮತ್ತು ಜೈವಿಕ ವೈವಿದ್ಯತೆಯ ನಾಶಕ ಕಾರಣವಾಗುತ್ತಿದೆ.
ix. ಅತಿಕ್ರಮಣ
ವನ್ಯಜೀವಿಗಳನ್ನು ನಾಶಮಾಡುವುದನ್ನು ಅತಿಕ್ರಮಣ ಎನ್ನುವರು. ಇದರಿಂದ ಭೂಮಿಯ ಪರಿಸರ ವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಜೀವ ವೈವಿಧ್ಯತೆಯನ್ನು ಸಂರಕ್ಷಿಸಬೇಕಾಗಿದೆ. ಪ್ರಾಣಿಗಳನ್ನು ಕೊಲ್ಲುವವರ ಬಗ್ಗೆ ಸರ್ಕಾರವು ತುಂಬಾ ಚಿಂತಿತವಾಗಿದ್ದು ಅಂತಹ ಅಪರಾಧಿಗಳ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡಿದೆ.
x. ಜಾಗತಿಕ ತಾಪಮಾನ : ಕೈಗಾರಿಕಾ ಕ್ರಾಂತಿಯ ನಂತರ ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಾದ ಪರಿಣಾಮವಾಗಿ ಭೂಮಿಯ ಮೇಲೆ ವಾತಾವರಣದಲ್ಲಿನ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿರುವುದೇ ಜಾಗತಿಕ ತಾಪಮಾನ ಏರಿಕೆ, ಈ ಏರಿಕೆಯು | ಮಾನವ ಪ್ರೇರಿತವಾಗಿದೆ. ಮಾನವನು ಹೆಚ್ಚು ಹೆಚ್ಚು ಅರಣ್ಯನಾಶ, ಪಳೆಯುಳಿಕೆ ಇಂಧನಗಳ ದಹನ ಮಾಡುತ್ತಿರುವುದರಿಂದ ಇಂಗಾಲದ ಡೈ ಆಕ್ಸೆಡ್ ಮತ್ತು ಹಸಿರುಮನೆ ಅನಿಲಗಳು ಹೆಚ್ಚಳವಾಗಿ ತಾಪಮಾನ ಏರಿಕೆಯಾಗುತ್ತಿದೆ. 1997ರಲ್ಲಿ ಜಪಾನ್‌ನ ಕೋಟೋದಲ್ಲಿ ನಡೆದ ವಾತಾವರಣದ ಬದಲಾವಣೆ ಮೇಲಿನ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಟ ಮಾಡುವ ಅಂತರರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಸಮಾವೇಶ ಕೈಗಾರಿಕೀಕರಣಗೊಂಡ ರಾಷ್ಟ್ರಗಳಿಗೆ ಹಸಿರುಮನೆ ಅನಿಲ ವಿಸರ್ಜನೆಯನ್ನು ಕಡಿವೆ ಮಾಡಲು ಕರೆ ನೀಡಿದೆ.
6. ಪರಿಸರದ ಕಾರ್ಯಗಳು ಯಾವುವು?
ಪರಿಸರದ ನಾಲ್ಕು ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳು ಈ ಕೆಳಕಂಡಂತಿವೆ.
1) ಇದು ಸಂಪನ್ಮೂಲಗಳನ್ನು ಪೂರೈಸುತ್ತದೆ. ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಸಂಪನ್ಮೂಲಗಳೆರಡನ್ನು ಒಳಗೊಂಡಿದೆ. ನಾಶವಾಗುವ ಸಾಧ್ಯತೆ ಇಲ್ಲದೆ ಬಳಸಬಹುದಾದ ಸಂಪನ್ಮೂಲವೇ ನವೀಕರಿಸಬಹುದಾದ ಸಂಪನ್ಮೂಲಗಳಾಗಿವೆ.
ಉದಾ : ನೀರು. ಮರಗಳು ಇತ್ಯಾದಿ ಯಾವ ಸಂಪನ್ಮೂಲಗಳು ಹೊರ ತೆಗೆದು ಉಪಯೋಗಿಸಿದಂತೆಲ್ಲ ಬರಿದಾಗುತ್ತ ಹೋಗುತ್ತವೆಯೋ ಅಂತಹ ಸಂಪನ್ಮೂಲಗಳನ್ನು ನವೀಕರಿಸಲಾಗದ ಸಂಪನ್ಮೂಲಗಳಾಗಿವೆ. ಉದಾ : ಕಲ್ಲಿದ್ದಲು, ಖನಿಜಗಳು ಇತ್ಯಾದಿಗಳು.
2) ಇದು ತ್ಯಾಜ್ಯವನ್ನು ಹೀರಿಕೊಳ್ಳುತ್ತದೆ.
3) ಇದು ಜೀವ ವೈವಿಧ್ಯತೆ ಮತ್ತು ಅನುವಂಶೀಯತೆಯ ಮುಂದುವರಿಕೆಗೆ ಅವಕಾಶ ಒದಗಿಸುತ್ತದೆ.
4) ಇದು ಮನಸ್ಸಿಗೆ ಮುದನೀಡುವ ಪ್ರಕೃತಿ ಸೌಂದರ್ಯ ದೃಶ್ಯಾವಳಿ ಇತ್ಯಾದಿಗಳನ್ನು ಒದಿಗಿಸುತ್ತದೆ.
7. ಭಾರತದಲ್ಲಿ ಭೂಮಿಯ ಗುಣಮಟ್ಟದ ಕ್ಷೀಣತೆಗೆ ಆರು ಕಾರಣಗಳನ್ನು ಗುರುತಿಸಿ.
1) ಅರಣ್ಯ ನಾಶದಿಂದಾಗುವ ಸಸ್ಯ ಸಂಕುಲಗಳ ನಾಶ
2) ಉರುವಲಿಗಾಗಿ ಅತಿಯಾದ ಕಟ್ಟಿಗೆ ಬಳಕೆ
3) ಅರಣ್ಯಭೂಮಿ ಒತ್ತುವರಿ
4) ಭೂಸಾರ ಸಂರಕ್ಷಣೆಗೆ ಕ್ರಮಕೈಗೊಳ್ಳದಿರುವುದು
5) ಕಾಡಿನ ಬೆಂಕಿ ಮತ್ತು ಅತಿಯಾದ ಹುಲ್ಲು ಮೇಯಿಸುವಿಕೆ.
6) ಅಸಮರ್ಪಕ ಆವರ್ತಬೆಳೆ ಪದ್ಧತಿ
7) ಅಸಮರ್ಪಕ ನೀರಾವರಿ ಯೋಜನೆ
8) ಅಂತರ್ಜಲದ ಅತಿಯಾದ ಬಳಕೆ
9) ಸಂಪನ್ಮೂಲಗಳ ಬಳಕೆಗೆ ಮುಕ್ತ ಅವಕಾಶ
10) ಕೃಷಿ ಅವಲಂಬಿತರ ಬಡತನ
8. ಪರಿಸರದ ಮೇಲಿನ ಋಣಾತ್ಮಕ ಪರಿಣಾಮಗಳ ಸದವಕಾಶ ವೆಚ್ಚವು ಹೇಗೆ ಹೆಚ್ಚಾಗಿದೆ? ವಿವರಿಸಿ.
ವಾಯುಮಾಲಿನ್ಯ, ಜಲಮಾಲಿನ್ಯದಿಂದಾಗಿ ಉಸಿರಾಟದ ತೊಂದರೆ ಮತ್ತು ನೀರಿನಿಂದ ಜನ್ಯವಾಗುವ ರೋಗಗಳು ಉಲ್ಬಣಿಸಿವೆ. ಆದ್ದರಿಂದ ಆರೋಗ್ಯ ರಕ್ಷಣೆಗಾಗಿ ಮಾಡುವ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ, ಕಲುಷಿತ ನದಿಗಳು, ಜಾಗತಿಕ ತಾಪಮಾನ ಏರಿಕೆ, ಓರೋನ್ ಪದರದ ನಾಶ ಮುಂತಾದ ಜಾಗತಿಕ ಪರಿಸರ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳ ಮೇಲೆ ಆರ್ಥಿಕ ಹೊರೆ ಅಧಿಕವಾಗುತ್ತಿದೆ. ಹೀಗಾಗಿ ಪರಿಸರದ ಮೇಲಿನ ಋಣಾತ್ಮಕ ಪರಿಣಾಮಗಳ ಸದಾವಕಾಶ ವೆಚ್ಚವು ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
9. ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಅಳವಡಿಸಿಕೊಂಡ ಕ್ರಮಗಳನ್ನು ವಿವರಿಸಿ.
ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಅಳವಡಿಸಿಕೊಂಡ ಕ್ರಮಗಳೆಂದರೆ
1) ಉದ್ಯೋಗಾವಕಾಶಗಳನ್ನು ಒದಗಿಸುವುದರಿಂದ ನಿರಪೇಕ್ಷ ಬಡತನವನ್ನು ಕಡಿಮೆ ಮಾಡುವುದು.
2) ಸಂಪನ್ಮೂಲಗಳ ದುರ್ಬಳಕೆ, ಪರಿಸರದ ನಾಶವನ್ನು ಕಡಿಮೆ ಮಾಡಿ, ಸಾಂಸ್ಕೃತಿಕ ವಿಘಟನೆ ಹಾಗೂ ಸಾಮಾಜಿಕ ಅಸ್ಥಿರತೆಯನ್ನು ಕಡಿಮೆ ಮಾಡುವ ಮೂಲಕ ಜನರ ನಿರಪೇಕ್ಷ ಬಡತನವನ್ನು ಕಡಿಮೆ ಮಾಡಿ ಜೀವನ ಭದ್ರತೆ ಒದಗಿಸುವುದು.
10. ಭಾರತವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ – ಹೇಳಿಕೆಯನ್ನು ಪ್ರಮಾಣೀಕರಿಸಿ.
ಭಾರತವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಉದಾ: ಫಲವತ್ತಾದ ಮಣ್ಣು, ನೂರಾರು ನದಿಗಳು ಮತ್ತು ಉಪನದಿಗಳು, ಕಾಡುಗಳು, ಅನಿಲ ನಿಕ್ಷೇಪಗಳು, ಹಿಂದೂ ಮಹಾಸಾಗರ, ಪರ್ವತಗಳ ಶ್ರೇಣಿ ಇತ್ಯಾದಿ, ದಖನ ಪ್ರಸ್ಥಭೂಮಿಯ ಕಪ್ಪುಮಣ್ಣು ವಿಶೇಷವಾಗಿ ಹತ್ತಿ ಬೆಳೆಯಲು ಯೋಗ್ಯವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಜವಳಿ ಉದ್ಯಮಗಳು ಹೆಚ್ಚು ಕೇಂದ್ರೀಕೃತವಾಗಿದೆ. ಸಿಂಧೂ – ಗಂಗಾನದಿ ಬಯಲು ಪ್ರದೇಶ ಜಗತ್ತಿನಲ್ಲಿಯೇ ಶ್ರೇಷ್ಟ ಫಲವತ್ತತೆ ಹೊಂದಿದ್ದು, ಬಹುಭಾಗ ಸಾಗುವಳಿ ಮಾಡಲಾಗುತ್ತಿದ್ದು, ಅಧಿಕ ಜನಸಂಖ್ಯೆಯನ್ನು ಹೊಂದಿದ ಪ್ರದೇಶವಾಗಿದೆ. ಭಾರತದ ಅರಣ್ಯಗಳು ಅಲ್ಲಲ್ಲಿ ಚದುರಿದಂತೆ ಹಂಚಿಕೆಯಾಗಿದ್ದರೂ, ಬಹಳಷ್ಟು ಜನರಿಗೆ ಹಸಿರು ಹೊದಿಕೆ ಹಾಗೂ ವನ್ಯಪ್ರಾಣಿಗಳಿಗೆ ಪ್ರಾಕೃತಿಕ ಹೊದಿಕೆ ಒದಗಿಸಿವೆ. ಭಾರತದಲ್ಲಿ ಹೇರಳವಾದ ಕಬ್ಬಿಣದ ಅದಿರಿನ ನಿಕ್ಷೇಪ ಕಲ್ಲಿದ್ದಲು ನಿಕ್ಷೇಪ ಮತ್ತು ನೈಸರ್ಗಿಕ ಅನಿಲಗಳ ಲಭ್ಯತೆ ಇದೆ. ಜಗತ್ತಿನ ಒಟ್ಟು ಕಬ್ಬಿಣದ ಅದಿರಿನ ನಿಕ್ಷೇಪದ ಸಂಗ್ರಹದಲ್ಲಿ ಶೇ.20ರಷ್ಟು ಕಬ್ಬಿಣದ ಅದಿರು ಭಾರತದಲ್ಲಿಯೇ ಸಿಗುತ್ತದೆ. ಪಾಟ್, ತಾಮ್, ಕ್ರೋಮೈಟ್, ವಜ್ರ, ಬಂಗಾರ, ಸೀಸ, ಲಿಗ್ನೆಟ್, ಮ್ಯಾಂಗನೀಸ್, ಸತು ಮುಂತಾದ ಖನಿಜಗಳು ದೇಶದ ವಿವಿಧ ಭಾಗಗಳಲ್ಲಿ ದೊರೆಯುತ್ತಿವೆ. ಏನೇ ಆದರೂ ಭಾರತದ ಅಭಿವೃದ್ಧಿ ಚಟುವಟಿಕೆಗಳು ಮಾನವನ ಆರೋಗ್ಯ ಮತ್ತು ಕಲ್ಯಾಣ ಮೇಲೆ ಪರಿಣಾಮ ಬೀರುವುದರ ಜೊತೆಗೆ ಸೀಮಿತ ಲಭ್ಯತೆ ಇರುವ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕೂಡ ಒತ್ತಡ ಬೀರುತ್ತಿವೆ.
11. ಪರಿಸರ ಬಿಕ್ಕಟ್ಟು ಇತ್ತೀಚಿನ ಒಂದು ಸಂಗತಿಯೇ? ಹೌದಾದರೆ ಏಕೆ?
ಹೌದು, ಪರಿಸರ ಬಿಕ್ಕಟ್ಟು ಇತ್ತೀಚಿನ ಒಂದು ಸಂಗತಿಯಾಗಿದೆ. ಆರಂಭಿಕ ದಿನಗಳಲ್ಲಿ ನಾಗರೀಕತೆ ಉದಯವಾಗುವಾಗ ಜನಸಂಖ್ಯೆಯ ಭಾರೀ ಏರಿಕೆಯ ಪೂರ್ವದಲ್ಲಿ ಮತ್ತು ದೇಶಗಳು ಕೈಗಾರಕೀಕರಣಗೊಳ್ಳುವ ಮೊದಲು ಪರಿಸರದ ಸಂಪನ್ಮೂಲಗಳ ಪುನರುತ್ಪತ್ತಿ ದರಕ್ಕಿಂತ ಕಡಿಮೆ ಇತ್ತು. ಆದ್ದರಿಂದ ಪರಿಸರ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದರೆ ಜನಸಂಖ್ಯಾ ಸ್ಫೋಟ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸಲು ಕೈಗಾರಿಕಾ ಕ್ರಾಂತಿ ಸಂಭವಿಸಿದ್ದರಿಂದ ಚಿತ್ರಣ ಬದಲಾಗಿ ಹೋಯಿತು. ಪರಿಸರದ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಒತ್ತಡ ಭಾರೀ ಹೆಚ್ಚಳವಾಯಿತು. ಹೀಗೆ ಪರಿಸರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪೂರೈಕೆ ಮತ್ತು ಬೇಡಿಕೆ ಪ್ರಮಾಣಗಳು ತಿರುವುಮುರುವಾದವು.
12. ಈ ಕೆಳಗಿನವುಗಳಿಗೆ ಎರಡು ಉದಾಹರಣೆ ನೀಡಿ –
(a) ಪರಿಸರ ಸಂಪನ್ಮೂಲಗಳ ಅತಿಯಾದ ಬಳಕೆ :
ಆರಂಭಿಕ ದಿನಗಳಲ್ಲಿ ನಾಗರೀಕತೆ ಉದಯವಾಗುವಾಗ ಮತ್ತು ಜನಸಂಖ್ಯೆಯ ಭಾರೀ ಏರಿಕೆಯ ಪೂರ್ವದಲ್ಲಿ ಮತ್ತು ದೇಶಗಳು ಕೈಗಾರಿಕೀಕರಣಗೊಳ್ಳುವ ಮೊದಲು ಪರಿಸರದ ಸಂಪನ್ಮೂಲಗಳಿಗೆ ಮತ್ತು ಸಂಪನ್ಮೂಲಗಳ ಬಳಕೆಯ ದರ ಸಂಪನ್ಮೂಲಗಳ ಪುನರುತ್ಪತ್ತಿ ದರಕ್ಕಿಂತ ಕಡಿಮೆ ಇತ್ತು. ಆದ್ದರಿಂದ ಪರಿಸರ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ಜನಸಂಖ್ಯಾ ಸ್ಫೋಟ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸಲು ಕೈಗಾರಿಕಾ ಕ್ರಾಂತಿ ಸಂಭವಿಸಿದ್ದರಿಂದ ಚಿತ್ರಣ ಬದಲಾಗಿ ಹೋಯಿತು. ತತ್ಪರಿಣಾಮವಾಗಿ ಉತ್ಪಾದನೆ ಮತ್ತು ಅನುಭೋಗಕ್ಕಾಗಿ ಸಂಪನ್ಮೂಲಗಳ ಬೇಡಿಕೆ ದರವು ಪುನರುತ್ಪತ್ತಿ ದರಕ್ಕಿಂತ ಅಧಿಕವಾದ್ದರಿಂದ, ಪರಿಸರದ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಒತ್ತಡ ಭಾರೀ ಹೆಚ್ಚಳವಾಯಿತು.
(b) ಪರಿಸರ ಸಂಪನ್ಮೂಲಗಳ ದುರ್ಬಳಕೆ
ಪರಿಸರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪೂರೈಕೆ ಮತ್ತು ಬೇಡಿಕೆ ಪ್ರಮಾಣಗಳು ತಿರುವುಮುರುವಾದವು. ಈಗ ನಾವು ಪರಿಸರದ ಸಂಪನ್ಮೂಲಗಳು ಮತ್ತು ಸೇವೆಗಳಿಗೆ ಹೆಚ್ಚಾಗಿರುವ ಬೇಡಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ, ಆದರೆ ಅತಿಯಾದ ಬಳಕೆ ಮತ್ತು ದುರ್ಬಳಕೆಯಿಂದ ಪರಿಸರ ಸಂಪನ್ಮೂಲಗಳ ಪೂರೈಕೆ ಸೀಮಿತವಾಗಿದೆ. ಆದ್ದರಿಂದ ತ್ಯಾಜ್ಯಗಳ ಉತ್ಪತ್ತಿ ಮಾಲಿನ್ಯ ಸಮಸ್ಯೆಗಳು ಸಂಧಿಗ್ಧತೆಯನ್ನು ಉಂಟುಮಾಡಿವೆ.
13. ಭಾರತದ ಪರಿಸರದ ಮೇಲೆ ಒತ್ತಡ ಯಾವುದಾದರೂ ನಾಲ್ಕು ಅಂಶಗಳನ್ನು ತಿಳಿಸಿ. ಪರಿಸರದ ಹಾನಿಯನ್ನು ಸರಿಪಡಿಸುವ ಕ್ರಮಗಳ ಅವಕಾಶ ವೆಚ್ಚವನ್ನು – ವಿವರಿಸಿ.
ಭಾರತದ ಪರಿಸರದ ಮೇಲೆ ಒತ್ತಡ ಬೀರುವ 4 ಅಂಶಗಳೆಂದರೆ :
1) ಕ್ಷೀಣಿಸುತ್ತಿರುವ ಭೂಮಿಯ ಗುಣಮಟ್ಟ :
ಭಾರತದಲ್ಲಿ ಅಪರೂಪದ ವಿಧ ಮತ್ತು ವಿಭಿನ್ನವಾದ ಗುಣಮಟ್ಟದ ಕುಸಿತವನ್ನು ಅನುಭವಿಸುತ್ತಿದೆ. ಅಸಮರ್ಪಕ ಬಳಕೆ ಮತ್ತು ಸೂಕ್ತವಲ್ಲದ ನಿರ್ವಹಣಾ ಅಭ್ಯಾಸಗಳಿಂದ ಮುಖ್ಯವಾಗಿ ಭೂಮಿಯ ಗುಣಮಟ್ಟ ಕ್ಷೀಣಿಸುತ್ತಿದೆ.
2) ಜೀವವೈವಿಧ್ಯತೆಯ ಹಾನಿ :
ದೇಶದಲ್ಲಿ ಅರಣ್ಯಭೂಮಿಯ ಲಭ್ಯತೆಯ ಪ್ರಮಾಣ ಅರಣ್ಯ ಭೂಮಿಯ ಕೇವಲ ಶೇ. 0.08 ಹೆಕ್ಟೇರುಗಳಷ್ಟಾಗಿದೆ. ಆದರೆ ಅಗತ್ಯವಿರುವ ಪ್ರಮಾಣ ಕೇವಲ 0.47 ಪೆಕ್ಟರ್‌ಗಳಷ್ಟಿದೆ. ಹೀಗಾಗಿ ಹೆಚ್ಚುವರಿಯಾಗಿ ಬಳಸಬಹುದಾದ ಮಿತಿಯನ್ನು ದಾಟಿ 15 ಮಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ಅರಣ್ಯದ ಮರಗಳನ್ನು ಕಡಿದು ನಾಶ ಮಾಡಲಾಗಿದೆ. ಭಾರತದಲ್ಲಿ ವರ್ಷಕ್ಕೆ ಸುಮಾರು 5.3 ಬಿಲಿಯನ್ ಟನ್ನುಗಳಷ್ಟು ಭೂ ಸವೆತ ಸಂಭವಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದರ ಪರಿಣಾಮವಾಗಿ ದೇಶ ಪ್ರತಿವರ್ಷ 0.8 ದಶಲಕ್ಷ ಟನ್ನುಗಳಷ್ಟು ಸಾರಜನಕ, 1.8 ದಶಲಕ್ಷ ಟನ್ನುಗಳಷ್ಟು ರಂಜಕ ಮತ್ತು 26.3 ದಶಲಕ್ಷ ಟನ್ನುಗಳಷ್ಟು ಪೊಟ್ಯಾಶಿಯಂನ್ನು ಕಳೆದುಕೊಳ್ಳುತ್ತಿದೆ.
3) ಶುದ್ಧ ನೀರಿನ ನಿರ್ವಹಣೆ :
ಯೋಜನಾರಹಿತ ನಗರೀಕರಣ, ಮಳೆ ನೀರಿನ ನಷ್ಟ, ತಪ್ಪು ತ್ಯಾಜ್ಯ ವಿಲೇವಾ ವ್ಯವಸ್ಥೆಯಿಂದ ಜಲಮಾಲಿನ್ಯವಾಗುತ್ತಿದೆ. ಇದೆಲ್ಲ ಕಾರಣಗಳಿಂದಾಗಿ ದೇಶದ ಶುದ್ಧನೀರಿನ ನಿರ್ವಹಣೆ ಕಷ್ಟಕರವಾಗಿದೆ.
4) ವಾಯುಮಾಲಿನ್ಯ :
ವಾಯುಮಾಲಿನ್ಯವು ಸಸ್ಯಗಳು, ಪ್ರಾಣಿಗಳು ಮತ್ತು ಮನುಷ್ಯರಿಗೆ ತುಂಬಾ ಅಪಾಯಕಾರಿಯಾಗಿದೆ. ವಾಹನಗಳು, ಕೈಗಾರಿಕೆಗಳು ಮತ್ತು ವಿದ್ಯುತ್ ಸ್ಥಾವರಗಳ ಕೊಡುಗೆ ಅಪಾರವಾಗಿದೆ. ಈ ಸಮಸ್ಯೆಗಳನ್ನು ಸರಿಪಡಿಸುವುದಕ್ಕಾಗಿ ಸರ್ಕಾರ ಅಧಿಕ ಹೂಡಿಕೆಯ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಆದ್ದರಿಂದ ಪರಿಸರದ ಕ್ಷೀಣತೆಯನ್ನು ಕಡಿಮೆ ಮಾಡುವುದಕ್ಕೆ ಅವಕಾಶ ವೆಚ್ಚಗಳನ್ನು ಇದು ಒಳಗೊಂಡಿದೆ.
14. ಪರಿಸರ ಸಂಪನ್ಮೂಲಗಳ ಪೂರೈಕೆ ಮತ್ತು ಬೇಡಿಕೆ ತಿರುವು ಮುರುವಾಗಿರುವುದನ್ನು ವಿವರಿಸಿ.
ಆರಂಭಿಕ ದಿನಗಳಲ್ಲಿ ನಾಗರೀಕತೆ ಉದಯವಾಗುವಾಗ ಅಥವಾ ಜನಸಂಖ್ಯೆಯ ಭಾರೀ ಏರಿಕೆಯ ಪೂರ್ವದಲ್ಲಿ ಮತ್ತು ದೇಶಗಳು ಕೈಗಾರಿಕೀಕರಣಗೊಳ್ಳುವ ಮೊದಲು ಪರಿಸರದ ಸಂಪನ್ಮೂಲಗಳಿಗೆ ಮತ್ತು ಸಂಪನ್ಮೂಲಗಳ ಬಳಕೆಯ ದರ ಸಂಪನ್ಮೂಲಗಳ ಪುನರುತ್ಪತ್ತಿ ದರಕ್ಕಿಂತ ಕಡಿಮೆ ಇತ್ತು. ಆದ್ದರಿಂದ ಪರಿಸರ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದರೆ ಜನಸಂಖ್ಯಾ ಸ್ಫೋಟ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸಲು ಕೈಗಾರಿಕಾ ಕ್ರಾಂತಿ ಸಂಭವಿಸಿದ್ದರಿಂದ ಚಿತ್ರಣ ಬದಲಾಗಿ ಹೋಯಿತು. ತತ್ವರಿಣಾಮವಾಗಿ ಉತ್ಪಾದನೆ ಮತ್ತು ಅನುಭೋಗಕ್ಕಾಗಿ ಸಂಪನ್ಮೂಲಗಳ ಬೇಡಿಕೆಯ ದರವು ಮನರುತ್ಪತ್ತಿ ದರಕ್ಕಿಂತ ಅಧಿಕವಾದ್ದರಿಂದ, ಪರಿಸರದ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಒತ್ತಡ ಭಾರೀ ಹೆಚ್ಚಳವಾಯಿತು. ಅದೇ ಪ್ರವೃತ್ತಿ ಇಂದೂ ಸಹ ಮುಂದುವರೆದಿದೆ. ಹೀಗೆ ಪರಿಸರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪೂರೈಕೆ ಮತ್ತು ಬೇಡಿಕೆ ಪ್ರಮಾಣಗಳು ತಿರುವುಮುರುವಾದವು.
15. ಪ್ರಸ್ತುತ ಪರಿಸರ ಬಿಕ್ಕಟ್ಟಿನ ಕುರಿತು ವಿವರಣೆ ಕೊಡಿ.
ಪರಿಸರವು ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳೆಂದರೆ :
ಸಂಪನ್ಮೂಲಗಳನ್ನು ಪೂರೈಸುತ್ತದೆ. ತ್ಯಾಜ್ಯವನ್ನು ಹೀರಿಕೊಳ್ಳುತ್ತದೆ, ಜೀವ ವೈವಿಧ್ಯತೆ ಮತ್ತು ಅನುವಂಶೀಯತೆಯ ಮುಂದುವರಿಕೆಗೆ ಅವಕಾಶ ಒದಗಿಸುತ್ತದೆ ಮತ್ತು ಮನಸ್ಸಿಗೆ ಮುದನೀಡುವ ಪ್ರಕೃತಿ ಸೌಂದರ್ಯ ದೃಶ್ಯಾವಳಿಗಳನ್ನು ಒದಗಿಸುತ್ತದೆ ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವೈಭವೋಪೇತ ವಸ್ತುಗಳ ಅನುಭೋಗ ಹಾಗೂ ಉತ್ಪಾದನೆಯ ಹೆಚ್ಚಳದಿಂದ ಪರಿಸರದ ಮೇಲೆ ಅಗಾಧವಾದ ಒತ್ತಡ ಬೀಳುತ್ತಿರುವುದರಿಂದ ಹಲವಾರು ಸಂಪನ್ಮೂಲಗಳು ನಶಿಸಿವೆ.
ತ್ಯಾಜ್ಯಗಳ ಸೃಷ್ಟಿಯ ಪ್ರಮಾಣವು ಪರಿಸರದ ಹೀರಿಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ. ಪರಿಸರದ ಹೀರಿಕೊಳ್ಳುವ ಸಾಮರ್ಥ್ಯವೆಂದರೆ ಪರಿಸರದ ಮಾಲಿನ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಎಂದರ್ಥ. ಇದರ ಪರಿಣಾಮವಾಗಿ ಇಂದು ನಾವು ಪರಿಸರದ ಬಿಕ್ಕಟ್ಟಿನ ಹೊಸ್ತಿಲಿನಲ್ಲಿದ್ದೇವೆ. ಇಲ್ಲಿಯವರೆಗೆ ಸಾಧಿಸಿರುವ ಅಭಿವೃದ್ಧಿಯು ನದಿಗಳನ್ನು ಕಲುಷಿತಗೊಳಿಸಿದೆ ಮತ್ತು ನದಿಗಳು ಹಾಗೂ ಜಲಮೂಲಗಳು ಬತ್ತಿಹೋಗಿ ನೀರು ಒಂದು ಆರ್ಥಿಕ ವಸ್ತುವಾಗಿ ಪರಿಣಮಿಸಿದೆ.
ಹೊಸ ಸಂಪನ್ಮೂಲಗಳ ಶೋಧಕಾರ್ಯ ಮತ್ತು ತಂತ್ರಜ್ಞಾನಕ್ಕಾಗಿ ನಾವು ಭಾರೀ ಪ್ರಮಾಣದ ಹಣವನ್ನು ವ್ಯಯ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಇದಲ್ಲದೆ ಪರಿಸರದ ಗುಣಮಟ್ಟದ ಕುಸಿತದಿಂದ ಆರೋಗ್ಯ ರಕ್ಷಣೆಗಾಗಿ ಭಾರಿ ಬೆಲೆ ತೆರಬೇಕಾಗಿದೆ. ವಾಯುಮಾಲಿನ್ಯ, ಜಲಮಾಲಿನ್ಯದಿಂದಾಗಿ ಉಸಿರಾಟದ ತೊಂದರೆ ಮತ್ತು ನೀರಿನಿಂದ ಜನ್ಯವಾಗುವ ರೋಗಗಳು ಉಲ್ಬಣಿಸಿವೆ. ಆದ್ದರಿಂದ ಆರೋಗ್ಯ ರಕ್ಷಣೆಗಾಗಿ ಮಾಡುವ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಕಲುಷಿತ ನದಿಗಳು, ಜಾಗತಿಕ ತಾಪಮಾನ ಏರಿಕೆ, ಓರೋನ್ ಪದರದ ನಾಶ ಮುಂತಾದ ಜಾಗತಿಕ ಪರಿಸರ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳ ಮೇಲೆ ಆರ್ಥಿಕ ಹೊರೆ ಅಧಿಕವಾಗುತ್ತಿದೆ. ಹೀಗಾಗಿ ಪರಿಸರದ ಮೇಲಿನ ಋಣಾತ್ಮಕ ಪರಿಣಾಮಗಳ ಸದಾವಕಾಶ ವೆಚ್ಚವು ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
16. ಭಾರತದಲ್ಲಿ ಅಭಿವೃದ್ಧಿಯು ಪರಿಸರದ ಮೇಲೆ ಯಾವುದಾದರೂ ಎರಡು ರೀತಿಯಲ್ಲಿ ದುಷ್ಪರಿಣಾಮ ಬೀರಿರುವುದರ ಬಗ್ಗೆ ಬೆಳಕು ಚೆಲ್ಲಿ, ಎರಡು ಆಯಾಮಗಳಿಂದ ಭಾರತ ಪರಿಸರ ಸಮಸ್ಯೆಯನ್ನು ಎದುರಿಸುತ್ತಿದೆ – ಅವುಗಳೆಂದರೆ ಬಡತನ ಪ್ರೇರಿತ ಪರಿಸರ ಸಮಸ್ಯೆ ಮತ್ತು ವೈಭವೋಪೇತ ಜೀವನ ಸಂಸ್ಕೃತಿ – ಇದು ಸರಿಯೇ?
ಎರಡು ಆಯಾಮಗಳಿಂದ ಭಾರತ ಪರಿಸರ ಸಮಸ್ಯೆಯನ್ನು ಎದುರಿಸುತ್ತಿದೆ. ಅವುಗಳೆಂದರೆ –
1) ಬಡತನ : ಕೈಗಾರಿಕಾ ಕ್ರಾಂತಿಯಿಂದ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ನಿರುದ್ಯೋಗ ಮತ್ತು ಬಡವರು ಬಡವರಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಬಡತನ, ಮತ್ತು ಅನಕ್ಷರತೆ, ತೀವ್ರ ಕೈಗಾರಿಕೀಕರಣ ಹೊಂದುತ್ತಿರುವ ಪ್ರಪಂಚದ ಹತ್ತು ದೇಶಗಳಲ್ಲಿ ಭಾರತವೂ ಒಂದು, ಆದರೆ ಯೋಜನಾರಹಿತ ನಗರೀಕರಣ, ವಾಯುಮಾಲಿನ್ಯ ಅಪಘಾತಗಳ ಗಂಡಾಂತರ ಮುಂತಾದ ಅನಪೇಕ್ಷಿತ ಮತ್ತು ಅನಿರೀಕ್ಷಿತ ಪರಿಣಾಮಗಳೊಂದಿಗೆ ಈ ಸ್ಥಾನ ಲಭಿಸಿದೆ.
2) ವೈಭವೋಪೇತ ಜೀವನ ಸಂಸ್ಕೃತಿ : ಮುಂದುವರಿದ ದೇಶಗಳಲ್ಲಿ ವೈಭವೋಪೇತ ಅನುಭೋಗ ಮತ್ತು ಉತ್ಪಾದನಾ ಸಾಮರ್ಥ್ಯವು ಪರಿಸರದ ಮೇಲೆ ತುಂಬಾ ಒತ್ತಡವನ್ನುಂಟು ಮಾಡುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಮಿತವಾದ ಸಂಪನ್ಮೂಲಗಳು ಮತ್ತು ಕಡಿಮೆ ಜನಸಂಖ್ಯಾ ಬೆಳವಣಿಗೆಯಿಂದ ಸಮಾಜದ ಮೇಲೆ ಶಿಸ್ತು ಕ್ರಮವನ್ನು ಹೇರುತ್ತಿಲ್ಲ. ಆದ್ದರಿಂದ ಅವರು ವೈಭವೋಪೇತ ಸಮಾಜವನ್ನು ನಿರ್ಮಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಸಂಪನ್ಮೂಲಗಳು ಬಳಕೆಯಾಗದೇ ಇರುವುದರಿಂದ ಸಂಪನ್ಮೂಲಗಳ ವ್ಯರ್ಥಕ್ಕೆ ಕಾರಣವಾಗಿದೆ.
ಹೌದು, ಭಾರತದಲ್ಲಿ ಅಭಿವೃದ್ಧಿಯು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಪರಿಸರವನ್ನು ಸಂರಕ್ಷಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಸುಸ್ಥಿರ ಅಭಿವೃದ್ಧಿಯ ಪಥವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
1st Puc Economics Chapter 9 Notes in Kannada
17. ಸುಸ್ಥಿರ ಅಭಿವೃದ್ಧಿ ಎಂದರೇನು?
ಬ್ರಂಟ್ ಲ್ಯಾಂಡ್ ಸಮಿತಿಯ ಪ್ರಕಾರ “ಮುಂದಿನ ಪೀಳಿಗೆಯೊಂದರ ಅಗತ್ಯತೆಗಳನ್ನು ಈಡೇರಿಸಿಕೊಳ್ಳುವ ಅವರ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಅಗತ್ಯತೆಗಳನ್ನು ಈಡೇರಿಸಿಕೊಳ್ಳುವ ಪ್ರಕ್ರಿಯೆಯೇ ಸುಸ್ಥಿರ ಅಭಿವೃದ್ಧಿ.
18. ನಿಮ್ಮ ಸ್ಥಳೀಯ ಪ್ರದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು, ಸುಸ್ಥಿರ ಅಭಿವೃದ್ಧಿಯ ಯಾವುದಾದರೂ ನಾಲ್ಕು ಕಾರ್ಯ ತಂತ್ರಗಳನ್ನು ವಿವರಿಸಿ.
1) ಅಸಂಪ್ರದಾಯಿಕ ಇಂಧನಗಳ ಬಳಕೆ :
ಪ್ರಸ್ತುತ ಸನ್ನಿವೇಶದಲ್ಲಿ ಭಾರತವು ಬಹುತೇಕ ಜಲವಿದ್ಯುತ್ ಮತ್ತು ಉಷ್ಣವಿದ್ಯುತ್ ಉತ್ಪಾದನೆಯ ಮೇಲೆ ಅವಲಂಬಿತವಾಗಿದೆ. ಇವೆರಡೂ ಮೂಲಗಳು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ. ಪವನಶಕ್ತಿ ಹಾಗೂ ಸೌರಶಕ್ತಿ ಸಹಜ ಮತ್ತು ಶುದ್ಧ ಶಕ್ತಿಯ ಮೂಲಗಳಾಗಿವೆ. ಇವುಗಳನ್ನು ಪರಿಶೋಧಿಸಿ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ‘ಉತ್ಪಾದಿಸಿ ಉಷ್ಣವಿದ್ಯುತ್ ಮತ್ತು ಜಲಶಕ್ತಿಗಳ ಬದಲಿಗೆ ಬಳಸಬಹುದಾಗಿದೆ.
2) ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಮತ್ತು ಗೋಬರ್ ಗ್ಯಾಸ ಬಳಕೆ :
ಗ್ರಾಮೀಣ ಪ್ರದೇಶಗಳ ಜನರು ಉರುವಲಿಗಾಗಿ ಕಟ್ಟಿಗೆ, ಬೆರಣಿ ಮತ್ತು ಜೈವಿಕ ತ್ಯಾಜ್ಯಗಳನ್ನು ಬಳಸುವುದರ ಬದಲಿಗೆ ಸಹಾಯಧನ ಆಧಾರಿತ ದೃವೀಕೃತ ಪೆಟ್ರೋಲಿಯಂ ಅನಿಲ ಮತ್ತು ಗೋಬರ್ ಅನಿಲವನ್ನು ಬಳಸಬೇಕಾಗಿದೆ. ಎಲ್.ಪಿ.ಜಿ ಮತ್ತು ಗೋಬರ್ ಅನಿಲಗಳು ಶುದ್ಧ ಇಂಧನವಾಗಿದ್ದು ಮಾಲಿನ್ಯ ಉಂಟುಮಾಡುವುದಿಲ್ಲ. ಗೋಬರ್ ಗ್ಯಾಸ ತಯಾರಿಕೆಯ ಟ್ಯಾಂಕರ್‌ನಲ್ಲಿ ಉಳಿದ ಅವಶೇಷ ಉತ್ತಮ ಸಾವಯವ ಗೊಬ್ಬರವಾಗಿ ಹಾಗೂ ಮಣ್ಣಿನ ಸಂರಕ್ಷಣೆಗಾಗಿ ಉಪಯೋಗಿಸಬಹುದಾಗಿದೆ.
3) ನಗರ ಪ್ರದೇಶಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ :
ದೆಹಲಿ, ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲವನ್ನು ಇಂಧನವಾಗಿ ಬಳಸಲಾಗುತ್ತಿದೆ. ಇದರಿಂದ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
4) ಪವನಶಕ್ತಿ :
ಗಾಳಿಯು ವೇಗವಾಗಿ ಬೀಸುವ ಪ್ರದೇಶಗಳಲ್ಲಿ ಗಾಳಿಯಂತ್ರಗಳನ್ನು ಅಳವಡಿಸಿ, ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರದೆ, ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹುದು.
5) ಸೌರಶಕ್ತಿ:
ಪೊಟೋವೊಲ್ಸಾಯಿಕ್ ಕೋಶಗಳ ಸಹಾಯದಿಂದ ಸೂಗನ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಬಹುದಾಗಿದೆ. ಉದಾ : ಬಟ್ಟೆ, ಧಾನ್ಯ, ಕೃಷಿ ವಸ್ತುಗಳು ಮತ್ತು ನಿತ್ಯ ಜೀವನದಲ್ಲಿ ಬಳಸುತ್ತಾರೆ.
6) ಕಿರು ಜಲವಿದ್ಯುತ್ ಘಟಕಗಳು :
ಪರ್ವತ ಶ್ರೇಣಿಗಳಲ್ಲಿ ಮೇಲಿನಿಂದ ರಭಸವಾಗಿ ಧುಮ್ಮಿಕ್ಕುವ ನೀರು ಕೆಳಗಡೆ ಅಳವಡಿಸಲಾಗಿರುವ ಚಕ್ರಗಳ ಮೇಲೆ ಬಿದ್ದಾಗ, ಚಕ್ರ ತಿರುಗಿದಂತೆಲ್ಲ ವಿದ್ಯುತ್ ಉತ್ಪಾದನೆಯಾಗುತ್ತದೆ. ಉತ್ಪತ್ತಿಯಾದ ವಿದ್ಯುತ್‌ನ್ನು ಸ್ಥಳೀಯವಾಗಿ ಬಳಸಿಕೊಳ್ಳುವರು. ಇಂಥ ಘಟಕಗಳು ಪರಿಸರ ಸ್ನೇಹಿಯಾಗಿದ್ದು, ಬೃಹತ್ ಜಲವಿದ್ಯುತ್ ಘಟಕಗಳಂತೆ ಯಾವ ಅಡ್ಡ ಪರಿಣಾಮಗಳೂ ಇರುವುದಿಲ್ಲ.
19. ಸುಸ್ಥಿರ ಅಭಿವೃದ್ಧಿಯ ವ್ಯಾಖ್ಯೆಯಲ್ಲಿ ಅಂತರ್ ಪೀಳಿಗೆಯ ಸಮಾನತೆಯ ಔಚಿತ್ಯವನ್ನು ವಿವರಿಸಿ.
ಪರಿಸರ ಮತ್ತು ಆರ್ಥಿಕತೆ ಒಂದಕ್ಕೊಂದು ಪರಸ್ಪರಾವಲಂಬಿ ಹಾಗೂ ಪೂರಕವಾಗಿವೆ. ಆದ್ದರಿಂದ ಪರಿಸರದ ಮೇಲಿನ ಪ್ರತಿಕೂಲ ಪರಿಣಾಮಗಳನ್ನು ನಿರ್ಲಕ್ಷಿಸುವ ಅಭಿವೃದ್ಧಿಯು ಪರಿಸರವನ್ನು ಮತ್ತು ಜೀವ ಸಂಕುಲವನ್ನು ನಾಶ ಮಾಡುತ್ತದೆ. ಇಂದಿನ ಪೀಳಿಗೆಯು ಹೊಂದಿರುವ ಜೀವನದ ಗುಣಮಟ್ಟದಷ್ಟೇ ಉತ್ತಮವಾಗಿರುವ ಜೀವನ ಮಟ್ಟವನ್ನು ಮುಂದಿನ ಪೀಳಿಗೆಯು ಹೊಂದಲು ಅವಕಾಶ ಮಾಡಿಕೊಡುವ ಅಭಿವೃದ್ಧಿ ಸಾಧಿಸುವುದು ಅಗತ್ಯವಾಗಿದೆ.
ಸುಸ್ಥಿರ ಅಭಿವೃದ್ಧಿಯ ವ್ಯಾಖ್ಯೆಯಲ್ಲಿ ಅಂತ ಪೀಳಿಗೆಯ ಸಮಾನತೆಯ ಔಚಿತ್ಯ ವಿವರಿಸಿರುವಂತೆ, ಎಲ್ಲರ ಮೂಲ ಅಗತ್ಯತೆಗಳನ್ನು ಪೂರೈಸುವುದು ಮತ್ತು ಉತ್ತಮ ಜೀವನ ಅಗತ್ಯತೆಗಳನ್ನು ಪೂರೈಸುವುದು ಮತ್ತು ಉತ್ತಮ ಜೀವನ ನಿರ್ವಹಣೆಗಾಗಿ ಬಯಕೆಗಳನ್ನು ತೃಪ್ತಿ ಪಡಿಸುವ ಅವಕಾಶಗಳನ್ನು ವಿಸ್ತರಿಸುವುದಾಗಿದೆ. ಎಲ್ಲರ ಅಗತ್ಯತೆಗಳನ್ನು ಪೂರೈಸಲು ಸಂಪನ್ಮೂಲಗಳ ಮರುಹಂಚಿಕೆ ಮಾಡುವ ಅಗತ್ಯವಿದೆ ಎಂಬುದು ನೈತಿಕ ವಿಚಾರವಾಗಿದೆ.
ಸಂಪನ್ಮೂಲಗಳ ದುರ್ಬಳಕೆ, ಪರಿಸರದ ನಾಶ ಕಡಿಮೆ ಮಾಡಿ, ಸಾಂಸ್ಕೃತಿಕ ವಿಘಟನೆ ಹಾಗೂ ಸಾಮಾಜಿಕ ಅಸ್ಥಿರತೆಯನ್ನು ಕಡಿಮೆ ಮಾಡುವ ಮೂಲಕ ಜನರ ನಿರಪೇಕ್ಷ ಬಡತನವನ್ನು ಕಡಿಮೆ ಮಾಡಿ ಜೀವನ ಭದ್ರತೆ ಒದಗಿಸುವುದೇ ಸುಸ್ಥಿರ ಅಭಿವೃದ್ಧಿಯ ಗುರಿಯಾಗಿದೆ. ಹೀಗಾಗಿ ಸುಸ್ಥಿರ ಅಭಿವೃದ್ಧಿಯು ಎಲ್ಲಾ ಜನರ ಅದರಲ್ಲೂ ಬಹುಸಂಖ್ಯಾತ ಬಡಜನರ ಅಗತ್ಯತೆಗಳಾದ ಉದ್ಯೋಗ, ಆಹಾರ, ಇಂಧನ, ನೀರು, ಆರೋಗ್ಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತದೆ.
ಹೆಚ್ಚುವರಿ ಪ್ರಶೋತ್ತರಗಳು
1st Puc Economics Chapter 9 Notes in Kannada
1. ಸಜೀವ ಮತ್ತು ನಿರ್ಜೀವ ಅಂಶಗಳಿಗೆ ಉದಾಹರಣೆ ಕೊಡಿ?
ಸಜೀವ ಅಂಶಗಳಲ್ಲಿ ಪಕ್ಷಿಗಳು, ಪ್ರಾಣಿಗಳು, ಸಸ್ಯಗಳು, ಅರಣ್ಯಗಳು ಮುಂತಾದವುಗಳು ನಿರ್ಜೀವ ಅಂಶಗಳಲ್ಲಿ ಸೂರನ ಬೆಳಕು, ನೀರು, ಅನಿಲಗಳು ಮುಂತಾದವುಗಳು.
2. ಸಂಪನ್ಮೂಲಗಳ ಪೂರೈಕೆಯ ವಿಧಗಳಾವುವು?
ಸಂಪನ್ಮೂಲಗಳ ಪೂರೈಕೆಯ 2 ವಿಧಗಳೆಂದರೆ
1) ನವೀಕರಿಸಬಹುದಾದ ಸಂಪನ್ಮೂಲಗಳು
2) ನವೀಕರಿಸಲಾಗದ ಸಂಪನ್ಮೂಲಗಳು
3. ನವೀಕರಿಸಬಹುದಾದ ಸಂಪನ್ಮೂಲಗಳು ಎಂದರೇನು? ಉದಾಹರಿಸಿ.
ನಾಶವಾಗುವ ಮತ್ತು ಮುಗಿದು ಹೋಗುವ ಸಾಧ್ಯತೆ ಇಲ್ಲದೆ ಬಳಸಬಹುದಾದ ಸಂಪನ್ಮೂಲವೇ ನವೀಕರಿಸಬಹುದಾದ ಸಂಪನ್ಮೂಲವೇ ನವೀಕರಿಸಬಹುದಾದ ಸಂಪನ್ಮೂಲಗಳಾಗಿವೆ. ಇವು ನಿರಂತರವಾಗಿ ಪೂರೈಕೆಗೆ ಲಭ್ಯವಿರುತ್ತವೆ. ಉದಾ : ನೀರು, ಮರಗಳು, ಮೀನುಗಳು ಇತ್ಯಾದಿ.
4. ನವೀಕರಿಸಲಾಗದ ಸಂಪನ್ಮೂಲಗಳು ಎಂದರೇನು? ಉದಾಹರಣೆ ಕೊಡಿ.
ಯಾವ ಸಂಪನ್ಮೂಲಗಳು ಹೊರ ತೆಗೆದು ಉಪಯೋಗಿಸಿದಂತೆಲ್ಲ ಬರಿದಾಗುತ್ತ ಹೋಗುತ್ತವೆಯೋ ಅಂತಹ ಸಂಪನ್ಮೂಲಗಳು ನವೀಕರಿಸಲಾಗದ ಸಂಪನ್ಮೂಲಗಳಾಗಿವೆ.
5. ಧಾರಣ ಶಕ್ತಿ ಎಂದರೇನು?
ಪರಿಸರದ ಮೇಲಿನ ಮಾನವ ಚಟುವಟಿಕೆಗಳ ಒತ್ತಡವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪರಿಸರದ ಧಾರಣಶಕ್ತಿ ಎನ್ನುತ್ತಾರೆ.
6 ಪರಿಸರದ ಹೀರಿಕೊಳ್ಳುವ ಸಾಮರ್ಥ್ಯ ಎಂದರೇನು?
ಪರಿಸರದ ಹೀರಿಕೊಳ್ಳುವ ಸಾಮರ್ಥ್ಯವೆಂದರೆ ಪರಿಸರದ ಮಾಲಿನ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಎಂದರ್ಥ.
7. ಜಾಗತಿಕ ತಾಪಮಾನ ಎಂದರೆ ಏನು?
ಕೈಗಾರಿಕಾ ಕ್ರಾಂತಿಯ ನಂತರ ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಾದ ಪರಿಣಾಮವಾಗಿ ಭೂಮಿಯ ಮೇಲೆ ವಾತಾವರಣದಲ್ಲಿನ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿರುವುದೇ ಜಾಗತಿಕ ತಾಪಮಾನ ಏರಿಕೆ ಎಂದರ್ಥ.
8. ಓಝೋನ್ ಪದರದ ನಾಶದ ಅರ್ಥ ಕೊಡಿ.
ಸ್ತರಗೋಲದಲ್ಲಿ ಓರೋನ್ ಅಂಶವು ಕ್ಷೀಣಿಸುವುದನ್ನು ಓಝೋನ್ ಪದರದ ನಾಶ ಎನ್ನುತ್ತಾರೆ.
9. ನಮ್ಮ ಪರಿಸರದ ಸಮಸ್ಯೆಯ ಮೇಲೆ ಅತೀ ಹೆಚ್ಚು ಒತ್ತಡ ಬೀರುವ ಅಂಶಗಳಾವುವು?
ವಾಯುಮಾಲಿನ್ಯ, ಜಲಮಾಲಿನ್ಯ, ಭೂ ಸವಕಳಿ, ಅರಣ್ಯನಾಶ, ವನ್ಯಜೀವಿಗಳ ವಿನಾಶ ಮುಂತಾದ ಅಂಶಗಳು ಭಾರತದ ಪರಿಸರದ ಸಮಸ್ಯೆಯ ಮೇಲೆ ಅತಿ ಹೆಚ್ಚು ಒತ್ತಡ ಬೀರುವ ಅಂಶಗಳಾಗಿವೆ.
10. ಭೂ ಸವೆತ ಎಂದರೇನು?
ಭೂ ಸವೆತ ಎಂದರೆ ಭೂಮಿಯ ಮೇಲ್ಪದರ ಗಾಳಿ ಅಥವಾ ನೀರಿನ ಪ್ರಭಾವದಿಂದ ಕೊಚ್ಚಿ ಹೋಗುವುದು ಎಂದರ್ಥ.
11. ಚಿಪ್ಕೋ ಚಳುವಳಿ ಎಂದರೇನು?
ಹಿಮಾಲಯದ ಅರಣ್ಯವನ್ನು ರಕ್ಷಿಸುವ ಉದ್ದೇಶವನ್ನಿಟ್ಟುಕೊಂಡ ಕೈಗೊಂಡ ಚಳುವಳಿಯೇ ಚಿಪ್ಕೋ ಚಳುವಳಿ ಎನ್ನುವರು.
12. ಅಪ್ಪಿಕೋ ಚಳುವಳಿ ಎಂದರೇನು?
ಅಪ್ಪಿಕೋ ಚಳುವಳಿ ಮರಗಳನ್ನು ತಬ್ಬಿಕೊಳ್ಳುವುದು ಎಂದರ್ಥ.
13. ಭೂಮಿಯು ಯಾವ – ಯಾವ ಉದ್ದೇಶಗಳಿಗಾಗಿ ಅಧಿಕವಾಗಿ ಬಳಕೆಯಾಗುತ್ತದೆ.
ಜನಸಂಖ್ಯೆ ಮತ್ತು ಜಾನುವಾರು ದಟ್ಟಣೆ ಹಾಗೂ ಅರಣೀಕರಣ, ಕೃಷಿ, ಹುಲ್ಲುಗಾವಲು, ಜನವಸತಿ, ಕೈಗಾರಿಕೆಗಳ ಸ್ಥಾಪನೆ ಮುಂತಾದವು.
14. ಭಾರತದ ಪರಿಸರದ ಗುಣಮಟ್ಟಕ್ಕೆ ಎರಡು ಮಾರ್ಗಗಳಿಂದ ಹಾನಿ ಉಂಟಾಗುತ್ತಿದೆ. ಅವು ಯಾವುವು?
1) ಬಡತನ ಪ್ರೇರಿತ 2) ತೀವ್ರ ಕೈಗಾರಿಕೀಕರಣ
15. ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳು ಯಾವುವು?
ವಾಹನಗಳು, ಕೈಗಾರಿಕೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳು.
16. ಮಾಲಿನ್ಯಕ್ಕೆ ಕಾರಣವಾಗಿರುವ ಅನಪೇಕ್ಷಿತ ಮತ್ತು ಅನಿರೀಕ್ಷಿತ ಪರಿಣಾಮ ಗಳಾವುವು?
ಯೋಜನಾರಹಿತ ನಗರೀಕರಣ, ವಾಯುಮಾಲಿನ್ಯ, ಅಪಘಾತಗಳ ಗಂಡಾಂತರ,
17. CPCB ಯನ್ನು ವಿಸ್ತರಿಸಿ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ
18. ಇಂದಿನ ಪೀಳಿಗೆ ಪರಿಸರವನ್ನು ಮೇಲ್ದರ್ಜೆಗೇರಿಸುವ ಕೆಲವು ಮಾವುವು
1) ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಬೇಕು.
2) ವಿಶ್ವದ ಸ್ವಾಭಾವಿಕ ಪರಿಸರದ ಪುನರುತ್ಪತ್ತಿ ಸಾಮರ್ಥ್ಯವನ್ನು ಸುರಕ್ಷಿತ ವಾಗಿಡುವುದು.
3) ವೆಚ್ಚ ಮತ್ತು ಗಂಡಾಂತರಗಳನ್ನು ತಪ್ಪಿಸುವುದು.
19. ಯಾವುದಾದರೂ ಒಂದು ಶುದ್ಧ ಶಕ್ತಿಯ ಮೂಲವನ್ನು ಹೆಸರಿಸಿ.
ಪವನಶಕ್ತಿ ಮತ್ತು ಸೌರಶಕ್ತಿ
20. ಆಯುಷ್ ಒಳಗೊಂಡಿರುವ ವೈದ್ಯಕೀಯ ಪದ್ಧತಿಗಳನ್ನು ಹೆಸರಿಸಿ
ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪತಿ,
30. ಸಾವಯವ ಗೊಬ್ಬರ ಎಂದರೇನು?
ಇದು ಜಾನುವಾರು ಸಗಣಿ, ಮಾನವ ತ್ಯಾಜ್ಯ ಮತ್ತು ಸಸ್ಯದ ಶೇಷದಿಂದ ಮಾಡಲ್ಪಟ್ಟ ಮಿಶ್ರಗೊಬ್ಬರವಾಗಿದೆ. ಇದನ್ನು ರಸಗೊಬ್ಬರವಾಗಿ ಉಪಯೋಗಿಸಲಾಗುತ್ತದೆ.
31. “ಅಪ್ಪಿಕೋ ಚಳುವಳಿ” ಯಾವ ರಾಜ್ಯದಲ್ಲಿ ಪ್ರಾರಂಭವಾಯಿತು?
ಕರ್ನಾಟಕ.
32. ಜೈವಿಕ ವ್ಯವಸ್ಥೆ ಎಂದರೇನು?
ನೈಸರ್ಗಿಕ ಪ್ರಾಣಿಗಳು, ಸಸ್ಯಗಳು ಮತ್ತು ನಿರ್ಜೀವ ವಸ್ತುಗಳ ಘಟಕಗಳು ಸಾಮರಸ್ಯದಿಂದ ಇದ್ದಾಗ ಜೀವ ವ್ಯವಸ್ಥೆಯು ಸಮತೋಲನದಲ್ಲಿರುತ್ತದೆ.
33. ಸೌರಶಕ್ತಿ ಎಂದರೆ ಏನು?
ಫೋಟೋವೋಲ್ಟಾಯಿಕ್ ಕೋಶಗಳು ಸೂರ್ಯನ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ.
34. ಪವನಶಕ್ತಿಯನ್ನು ಹೇಗೆ ಉತ್ಪಾದಿಸಲಾಗುತ್ತದೆ.
ಗಾಳಿಯು ಬೀಸುವ ವೇಗಕ್ಕನುಗುಣವಾಗಿ ಗಾಳಿಯಂತ್ರಕ್ಕೆ ಅಳವಡಿಸಿದ ರೆಕ್ಕೆಗಳು ತಿರುಗುವ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತದೆ.
35. ಸುಸ್ಥಿರ ಅಭಿವೃದ್ಧಿ ಸಾಧಿಸಲು ಹರ್ಮನ್ ಡ್ಯಾಲಿ ನೀಡಿರುವ ಸಲಹೆಗಳಾವುವು?
ಖ್ಯಾತ ಪರಿಸರ ಅರ್ಥಶಾಸ್ತ್ರಜ್ಞರಾದ ಹರ್ಮನ್ ಡ್ಯಾಲಿ ಪ್ರಕಾರ ಸುಸ್ಥಿರ ಅಭಿವೃದ್ಧಿ ಸಾಧಿಸಲು ಕೆಳಕಂಡ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ.
1) ಪರಿಸರದ ಧಾರಣಾ ಶಕ್ತಿಯ ಸಾಮರ್ಥ್ಯ ಮೀರದಂತೆ ಜನಸಂಖ್ಯೆಯನ್ನು ನಿಯಂತ್ರಿಸುವುದು
2) ತಾಂತ್ರಿಕ ಪ್ರಗತಿಯು ಸಂಪನ್ಮೂಲಗಳ ದಕ್ಷ ಬಳಕೆಯನ್ನು ಅವಲಂಬಿಸಿರಬೇಕೆ ವಿನಹ ಸಂಪನ್ಮೂಲಗಳ ಅನುಭೋಗದಿಂದಲ್ಲ.
3) ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಯ ಪ್ರಮಾಣದ ದರ, ಅವುಗಳ ಪುನರುತ್ಪತ್ತಿ ಪ್ರಮಾಣದ ದರವನ್ನು ಮೀರಬಾರದು.
4) ನವೀಕರಿಸಲಾಗದ ಸಂಪನ್ಮೂಲಗಳ ನಾಶದ ದರವು ಅವುಗಳ ಬದಲಿವಸ್ತುಗಳ ಸೃಷ್ಟಿಯ ದರಕ್ಕಿಂತ ಅಧಿಕವಿರಬಾರದು.
5) ಮಾಲಿನ್ಯದಿಂದ ಉದ್ಭವಿಸುವ ಸಮಸ್ಯೆಗಳನ್ನು ಸರಿಪಡಿಸಬೇಕು.
27. ನಮ್ಮ ದೇಶದ ಪರಿಸರ ಸ್ನೇಹಿ ಸಾಂಪ್ರದಾಯಿಕ ಜ್ಞಾನ ಮತ್ತು ಪದ್ಧತಿಗಳ ಬಗ್ಗೆ ಟಿಪ್ಪಣಿ ಬರೆಯಿರಿ.
ಹಲವಾರು ಸಂರಕ್ಷಿತ ಮತ್ತು ಸಾಂಪ್ರದಾಯಿಕ ಪದ್ಧತಿಗಳು ಪರಿಸರ ಸ್ನೇಹಿಯಾಗಿದ್ದು, ಇಂದಿಗೂ ಜನಜೀವನದ ಭಾಗವಾಗಿ ಮುಂದುವರೆದಿದೆ. ಆಧುನಿಕ ಅಸ್ಥಿರ ತಾಂತ್ರಿಕತೆ ಹೊಂದಿರುವ ಪದ್ಧತಿಗಳ ಬದಲು ಸುಸ್ಥಿರ, ಸಾಂಪ್ರದಾಯಿಕ ಪದ್ಧತಿಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಆರೋಗ್ಯ ರಕ್ಷಣೆಯಲ್ಲಿ ಒಂದು ಉದಾಹರಣೆ ಇದೆ. ಭಾರತದಲ್ಲಿ ಸುಮಾರು 15,000 ಜಾತಿಯ ಔಷಧೀಯ ಗುಣ ಹೊಂದಿರುವ ಸಸ್ಯಗಳಾಗಿವೆ. ನಮ್ಮ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಾಗದೆ ಆಯುರ್ವೇದ, ಯುನಾನಿ, ಟಿಬೆಟಿಯನ್ ಮತ್ತು ಜನಪದ ಪದ್ಧತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಂದು ಬಹಳಷ್ಟು ಸೌಂದರವರ್ಧಕಗಳು ಗಿಡಮೂಲಿಕೆಗಳಿಂದ ತಯಾರಾಗುತ್ತಿವೆ.
1) ಸಾವಯವ ಗೊಬ್ಬರ : ಈಗ ಇಡೀ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ವಿವಿಧ ಸಾವಯವ ತ್ಯಾಜ್ಯಗಳಿಂದ ತಯಾರಿಸಿದ ಮಿಶ್ರಗೊಬ್ಬರದ ಬಳಕೆಯನ್ನು ಪುನಃ ಆರಂಭಿಸಿದ್ದಾರೆ. ಇದಕ್ಕಾಗಿ ಜಾನುವಾರುಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಎರೆಹುಳುಗಳಿಂದ ಗೊಬ್ಬರ ತಯಾರಿಕೆ ವಿಧಾನವು ಈಗ ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿದೆ. ಇದರಿಂದ ಘನತ್ಯಾಜ್ಯಗಳ ಪ್ರಮಾಣ ಕಡಿಮೆಯಾಗಿದೆ.
2) ಜೈವಿಕ ರೋಗ ನಿಯಂತ್ರಣ : ಹಸಿರು ಕ್ರಾಂತಿಯ ಕಾರಣದಿಂದ, ಪ್ರತಿಕೂಲ ಪರಿಣಾಮಗಳು ಕಾರಣಲಾರಂಭಿಸಿದವು. ಈ ಸವಾಲನ್ನು ಎದುರಿಸಲು ಈಗ ರೋಗ ಮತ್ತು ಕ್ರಿಮಿಗಳ ನಿಯಂತ್ರಣಕ್ಕೆ ಉತ್ತಮ ವಿಧಾನಗಳನ್ನು ಬಳಕೆಗೆ ತರಲು ಪ್ರಯತ್ನಿಸಲಾಗುತ್ತಿದೆ. ಸಸ್ಯಗಳು ಮತ್ತು ಗಿಡಮರಗಳಿಂದ ತಯಾರಿಸಿದ ಕ್ರಿಮಿನಾಶಗಕಗಳ ಬಳಕೆ ಅಂತಹ ಒಂದು ಕ್ರಮವಾಗಿದೆ.
3) ಯುದ್ಧಗಳನ್ನು ತಡೆಯುವುದು : ಯುದ್ಧಗಳು ಮತ್ತು ಯುದ್ಧಾಸ್ತ್ರಗಳು ಸುಸ್ಥಿರ ಅಭಿವೃದ್ಧಿಗೆ ಪ್ರಮುಖ ಬೆದರಿಕೆಯ ಅಂಶಗಳಾಗಿವೆ. ಯುದ್ಧದಲ್ಲಿ ಭಾಗಿಯಾದ ರಾಷ್ಟ್ರಗಳು ಮಧ್ಯಸ್ಥಿಕೆ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.
FAQ :
ಕೈಗಾರಿಕಾ ಕ್ರಾಂತಿಯ ನಂತರ ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಾದ ಪರಿಣಾಮವಾಗಿ ಭೂಮಿಯ ಮೇಲೆ ವಾತಾವರಣದಲ್ಲಿನ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿರುವುದೇ ಜಾಗತಿಕ ತಾಪಮಾನ ಏರಿಕೆ ಎಂದರ್ಥ.
ಜನಸಂಖ್ಯೆ ಮತ್ತು ಜಾನುವಾರು ದಟ್ಟಣೆ ಹಾಗೂ ಅರಣೀಕರಣ, ಕೃಷಿ, ಹುಲ್ಲುಗಾವಲು, ಜನವಸತಿ, ಕೈಗಾರಿಕೆಗಳ ಸ್ಥಾಪನೆ ಮುಂತಾದವು.
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.