ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಮೂಲ ಸೌಕರ್ಯಗಳು ನೋಟ್ಸ್‌ | 1st Puc Economics Chapter 8 Notes in Kannada

ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಮೂಲ ಸೌಕರ್ಯಗಳು ನೋಟ್ಸ್‌ ಪ್ರಶ್ನೋತ್ತರಗಳು. 1st Puc Economics Chapter 8 Notes Question Answer Mcq Pdf in Kannada Medium 2023 Kseeb Solutions For Class 11 Economics Chapter 8 Notes 1st Puc Economics 8th Lesson Notes 1st Puc Economics Notes in Kannada Chapter 8 1st Puc Economics Moola Soukarya Notes in Kannada

 

1st Puc Economics Chapter 8 Notes in Kannada

1. ‘ಮೂಲಸೌಕರ್ಯ’ ಈ ಪದವನ್ನು ವಿವರಿಸಿ.

ಆರ್ಥಿಕತೆಯ ಕಾರ್ಯಾಚರಣೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಸೌಲಭ್ಯಗಳು, ಚಟುವಟಿಕೆಗಳು ಮತ್ತು ಸೇವೆಗಳನ್ನು ಮೂಲಸೌಕರ್ಯ ಎನ್ನುವರು. ಇದು ಅರ್ಥವ್ಯವಸ್ಥೆಯ ಸಹಾಯಕ ಅಡಿಪಾಯವಾಗಿದ್ದು ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತದೆ. ಮಾರುವವರ ಮತ್ತು ಕೊಳ್ಳುವವರ ನಡುವೆ ಸರಕುಗಳು ಮತ್ತು ಸೇವೆಗಳು ಪ್ರವಹಿಸಲು ಅವಕಾಶವನ್ನು ಮಾಡಿಕೊಡುತ್ತದೆ.

2. ಮೂಲಸೌಕರ್ಯದ ಎರಡು ವಿಧಗಳನ್ನು ವಿವರಿಸಿ. ಹೇಗೆ ಅವೆರಡೂ ಪರಸ್ಪರ ಅವಲಂಬಿತವಾಗಿದೆ?

ಮೂಲಸೌಕರ್ಯದಲ್ಲಿ ಎರಡು ವಿಧಗಳಿವೆ.

1) ಆರ್ಥಿಕ ಮೂಲಸೌಕರ್ಯ :

2) ಸಾಮಾಜಿಕ ಮೂಲಸೌಕರ್ಯ

1) ಆರ್ಥಿಕ ಮೂಲಸೌಕರ್ಯ :

ಉತ್ಪಾದನೆ ಮತ್ತು ವಿತರಣೆ ಕ್ರಿಯೆಯ ಭಾಗವಾಗಿ ಒಂದು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಪ್ರತ್ಯಕ್ಷ ಕೊಡುಗೆಯನ್ನು ಸಲ್ಲಿಸುವ ರಚನೆಗಳನ್ನು ಆರ್ಥಿಕ ಮೂಲಸೌಕರ್ಯಗಳು ಎನ್ನುವರು, ನೀರಾವರಿ, ಇಂಧನ ಸಂಪರ್ಕ ವ್ಯವಸ್ಥೆ, ಹಣಕಾಸಿನ ಸಂಸ್ಥೆಗಳು ಇತ್ಯಾದಿಗಳನ್ನು ಒಳಗೊಂಡಿದೆ.

2) ಸಾಮಾಜಿಕ ಮೂಲಸೌಕರ್ಯ

ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಗೆ ಹೊರಗಿನಿಂದ ಆರ್ಥಿಕತೆಗೆ ಪರೋಕ್ಷವಾಗಿ ಸಹಾಯ ಸಲ್ಲಿಸುವ ಸೌಲಭ್ಯಗಳಿಗೆ ಸಾಮಾಜಿಕ ಮೂಲಸೌಕರ್ಯಗಳು ಎನ್ನುವರು. ಇದು ಆರೋಗ್ಯ, ಶಿಕ್ಷಣ, ಗೃಹ ನಿರ್ಮಾಣ ಮತ್ತು ಪೌರಸೇವೆ ಇತ್ಯಾದಿಗಳನ್ನು ಒಳಗೊಂಡಿದೆ.

3. ಹೇಗೆ ಮೂಲಸೌಕರ್ಯಗಳು ಉತ್ಪಾದನೆಯನ್ನು ಹೆಚ್ಚಿಸುತ್ತದೆ?

ಮೂಲಸೌಕರ್ಯಗಳು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೇಗೆಂದರೆ

ಎ) ಮೌಲಸೌಕರ್ಯವು ಕೈಗಾರಿಕೆ ಮತ್ತು ಕೃಷಿ ಉತ್ಪಾದನೆ, ದೇಶೀ ಮತ್ತು ವಿದೇಶಿ ವ್ಯಾಪಾರ ಹಾಗೂ ವಾಣಿಜ್ಯದಂತಹ ಪ್ರಮುಖ ರಂಗಗಳಿಗೆ ಬೆಂಬಲವಾಗಿರುವ ಸೇವೆಗಳನ್ನು ಒದಗಿಸುತ್ತಿದೆ.

ಬಿ) ರಸ್ತೆಗಳು, ರೈಲು ಮಾರ್ಗಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಅಣೆಕಟ್ಟುಗಳು, ದೂರ ಸಂಪರ್ಕ ಸೌಲಭ್ಯಗಳು, ನೈರ್ಮಲ್ಯ ವ್ಯವಸ್ಥೆ, ಹಣಕಾಸು ವ್ಯವಸ್ಥೆ ಮತ್ತು ಸೇವೆಗಳು ಮೂಲಸೌಕರ್ಯದಲ್ಲಿ ಸೇರಿವೆ.

ಸಿ) ಕೆಲವು ಸೌಲಭ್ಯಗಳು ಸರಕು ಮತ್ತು ಸೇವೆಗಳ ಉತ್ಪಾದನೆಯ ಮೇಲೆ ನೇರವಾಗಿ ಪರಿಣಾಮ ಬೀರಿದರೆ ಇನ್ನು ಕೆಲವು ಆರ್ಥಿಕತೆಯ ಸಾಮಾಜಿಕ ವಲಯದ ನಿರ್ಮಾ ಣದ ಮೂಲಕ ಪರೋಕ್ಷವಾಗಿ ಬೆಂಬಲ ನೀಡುತ್ತದೆ.

ಡಿ) ಆಧುನಿಕ ಕೃಷಿಯನ್ನು ಬೃಹತ್‌ ಪ್ರಮಾಣದಲ್ಲಿ ಕೈಗೊಳ್ಳುತ್ತಿರುವುದರಿಂದ ವಿಮೆ ಮತ್ತು ಬ್ಯಾಂಕಿಂಗ್ ಸೌಲಭ್ಯವನ್ನು ಇದು ಅವಲಂಬಿಸಿದೆ.

ಇ) ಉತ್ಪಾದನಾಂಗಗಳ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತವೆ. ಈ ಎರಡು ರೀತಿಯಲ್ಲಿ ಮೌಲಸೌಕರ್ಯವು ಆರ್ಥಿಕ ಅಭಿವೃದ್ಧಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ.

ಎಫ್)ನೀರಿನ ಪೂರೈಕೆ ಮತ್ತು ನೈರ್ಮಲ್ಯದಲ್ಲಿನ ಸುಧಾರಣೆಯು ಜಲಜನ್ಯ ರೋಗಗಳಿಂದಾಗಿ ಕಾಯಿಲೆಗೆ ತುತ್ತಾಗುವ ಮತ್ತು ವ್ಯಾಧಿಗಳಿಂದಾಗುವ ಗಂಭೀರತೆಯನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಬಹಳ ಪಭಾವಶಾಲಿಯಾಗಿದೆ.

4. ಮೂಲಸೌಕರ್ಯಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತದೆ. ಇದನ್ನು ನೀವು ಒಪ್ಪುತ್ತೀರಾ? ವಿವರಿಸಿ,

ಆಧುನಿಕ ಕೈಗಾರಿಕಾ ಆರ್ಥಿಕತೆಯ ಕಾರ್ಯನಿರ್ವಹಣೆಯು ಅವಲಂಬಿತವಾಗಿರುವ ಆಧಾರ ವ್ಯವಸ್ಥೆಯೇ ಮೂಲಸೌಕರ್ಯ, ಬಿತ್ತನೆ ಬೀಜಗಳು, ರೋಗನಿವಾರಕ ಔಷಧಿಗಳು, ರಸಗೊಬ್ಬರ ಮತ್ತು ಕೃಷಿ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಶೀಘ್ರವಾಗಿ ಸಾಗಿಸಲು ಆಧುನಿಕ ಕೃಷಿಯು ಆಧುನಿಕ ರಸ್ತೆ ಸಾರಿಗೆ ರೈಲ್ವೆ ಮತ್ತು ಹಡಗುಗಳ ಸೌಕರ್ಯವನ್ನು ಅವಲಂಬಿಸಿದೆ.

ಉತ್ಪಾದನಾಂಗಗಳ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ, ಈ ಎರಡು ರೀತಿಯಲ್ಲಿ ಮೂಲಸೌಕರ್ಯವು ಆರ್ಥಿಕ ಅಭಿವೃದ್ಧಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಅಸಮರ್ಪಕ ಮೂಲ ಸೌಕರ್ಯವು ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮಗಳನ್ನು ಬೀರುತ್ತದೆ. ನೀರಿನ ಪೂರೈಕೆ ಮತ್ತು ನೈರ್ಮಲ್ಯದಲ್ಲಿನ ಸುಧಾರಣೆಯ ಜಲಜನ್ಯ ರೋಗಗಳಿಂದಾಗಿ ಕಾಯಿಲೆಗೆ ತುತ್ತಾಗುವ ಮತ್ತು ವ್ಯಾಧಿಗಳಿಂದಾಗುವ ಗಂಭೀರತೆಯನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಬಹಳ ಪ್ರಭಾವಶಾಲಿಯಾಗಿದೆ. ಇದಲ್ಲದೇ ನೀರು, ನೈರ್ಮಲ್ಯ ಮತ್ತು ಆರೋಗ್ಯದ ನಡುವಿನ ಸಂಬಂಧದಂತೆ ಸಾರಿಗೆ ಮತ್ತು ಸಂಪರ್ಕದಂತಹ ಮೂಲಸೌಕರ್ಯಗಳ ಗುಣಮಟ್ಟವೂ ಆರೋಗ್ಯ ಸೇವೆಗಳನ್ನು ಪಡೆಯುವುದರ ಮೇಲೆ ಪರಿಣಾಮ ಬೀರುತ್ತದೆ. ವಾಯುಮಾಲಿನ್ಯ ಮತ್ತು ಸಾರಿಗೆಗೆ ಸಂಬಂಧಿಸಿದ ಸುರಕ್ಷತಾ ಕಂಟಕಗಳು, ವಿಶೇಷವಾಗಿ ಹೆಚ್ಚು ಜನಸಾಂದ್ರತೆಯಿರುವ ಪ್ರದೇಶಗಳಲ್ಲಿ, ಕಾಯಿಲೆಗೆ ಈಡಾಗುವ ಪ್ರಮಾಣದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.

5. ಭಾರತದಲ್ಲಿ ಗ್ರಾಮೀಣ ಮೂಲಸೌಕರ್ಯಗಳ ಸ್ಥಿತಿಗತಿಗಳೇನು?

ಸಾಂಪ್ರದಾಯಿಕವಾಗಿ ದೇಶದಲ್ಲಿನ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಆದರೆ ಈ ವಲಯದಲ್ಲಿ ಹೂಡಿಕೆ ಸಾಕಷ್ಟಿಲ್ಲ. ನಮ್ಮ ಬಹುಸಂಖ್ಯಾತ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಜಗತ್ತಿನಲ್ಲಿ ಬೇಕಾದಷ್ಟು ತಾಂತ್ರಿಕ ಪ್ರಗತಿಯಾಗಿದ್ದರೂ ಗ್ರಾಮೀಣ ಮಹಿಳೆಯರು ಉರುವಲಿನ ಅಗತ್ಯಗಳಿಗಾಗಿ ಬೆರಣಿ, ಕೃಷಿ ತ್ಯಾಜ್ಯಗಳು, ಕಟ್ಟಿಗೆಗಳನ್ನು ಬಳಸುತ್ತಿದ್ದಾರೆ. 2001ರ ಜನಗಣತಿಯ ಪ್ರಕಾರ ಗ್ರಾಮೀಣ ಭಾರತದಲ್ಲಿ ಶೇ.56ರಷ್ಟು ಕುಟುಂಬಗಳು ಮಾತ್ರ ವಿದ್ಯುತ್‌ ಸಂಪರ್ಕವನ್ನು ಹೊಂದಿವೆ ಮತ್ತು ಶೇ.43ರಷ್ಟು ಜನ ಸೀಮೆಎಣ್ಣೆಯನ್ನು ಬಳಸುತ್ತಿದ್ದಾರೆ. ಸುಮಾರು ಶೇ. 90ರಷ್ಟು ಜೈವಿಕ ಇಂಧನವನ್ನು. ಶೇ.24ರಷ್ಟು ನೀರಿನ ಲಭ್ಯತೆ ಇದೆ.

ಸುಮಾರು ಶೇ. 76ರಷ್ಟು ಜನರು ಬಾವಿ, ಕೆರೆ, ಕೊಳ, ಸರೋವರ, ನದಿ ಮತ್ತು ಕಾಲುವೆ ಇತ್ಯಾದಿ ತೆರೆದ ಮೂಲಗಳಿಂದ ಕುಡಿಯಲು ನೀರನ್ನು ಬಳಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ನೈರ್ಮಲ್ಯ ಸೌಲಭ್ಯಗಳನ್ನು ಪಡೆಯಲು ಶಕ್ತರಾಗಿರುವ ಜನಸಂಖ್ಯೆ ಕೇವಲ ಶೇ. 20ರಷ್ಟು ಮಾತ್ರ.

6. ಇಂಧನದ ಪ್ರಾಮುಖ್ಯತೆಯೇನು? ವಾಣಿಜ್ಯ ಮತ್ತು ವಾಣಿಜೇತರ ಇಂಧನ ಮೂಲಗಳ ವ್ಯತ್ಯಾಸಗಳನ್ನು ತಿಳಿಸಿ.

ರಾಷ್ಟ್ರದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಇಂಧನ ಬಹಳ ಪ್ರಮುಖ ಸಂಗತಿಯಾಗಿದೆ. ಇದು ಕೈಗಾರಿಕೆಗೆ ಅತ್ಯಾವಶ್ಯಕ. ಈಗ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಾದ ರಸಗೊಬ್ಬರಗಳು, ರೋಗನಿಯಂತ್ರಕ ಔಷಧಿಗಳು ಮತ್ತು ಕೃಷಿ ಉಪಕರಣಗಳ ಉತ್ಪಾದನೆ ಮತ್ತು ಸಾಗಣಿಕೆಯಲ್ಲಿ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅಡುಗೆಗಾಗಿ, ಬೆಳಕಿಗಾಗಿ ಮತ್ತು ಶಾಖಕ್ಕಾಗಿ ಇತ್ಯಾದಿ ಗೃಹಬಳಕೆಯ ಉದ್ದೇಶಕ್ಕೆ ಕುಟುಂಬಗಳಿಗೆ ಇಂಧನದ ಅವಶ್ಯಕತೆಯಿದೆ.

ವಾಣಿಜ್ಯ ಮತ್ತು ವಾಣಿಜೇತರ ಇಂಧನ ಮೂಲಗಳ ವ್ಯತ್ಯಾಸಗಳೆಂದರೆ :

ವಾಣಿಜ್ಯ ಮೂಲಗಳು

ವಾಣಿಜ್ಯೇತರ ಮೂಲಗಳು

1) ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ವಿದ್ಯುಚ್ಛಕ್ತಿ ಇತ್ಯಾದಿ ಇಂಧನ ವಾಣಿಜ್ಯ ಮೂಲಗಳಾಗಿವೆ.

1) ಉರುವಲು ಕಟ್ಟಿಗೆ, ಕೃಷಿ ತ್ಯಾಜ್ಯ, ಬೆರಣಿ ಇತ್ಯಾದಿಗಳು ವಾಣಿಜ್ಯೇತರ ಮೂಲಗಳಾಗಿವೆ.

2) ವಾಣಿಜ್ಯ ಮೂಲಗಳು ಸಾಮಾನ್ಯವಾಗಿ ಮುಗಿದು ಹೋಗುತ್ತವೆ.

2) ವಾಣಿಜ್ಯೇತರ ಮೂಲಗಳು ಇವುಗಳನ್ನು ನವೀಕರಿಸ ಬಹುದಾಗಿದೆ.

7. ವಿದ್ಯುತ್‌ ಉತ್ಪಾದನೆಯ ಮೂರು ಮೂಲಗಳಾವುವು?

ದೇಶದಲ್ಲಿ ವಿದ್ಯುತ್‌ ಉತ್ಪಾದಿಸುವ ಮೂರು ಮುಖ್ಯ ಮೂಲಗಳೆಂದರೆ :

1) ಉಷ್ಣ ಶಕ್ತಿ (Thermal Power) : ಭಾರತದಲ್ಲಿ ಕಲ್ಲಿದ್ದಲು ಹೇರಳವಾಗಿ ದೊರೆಯುವುದರಿಂದ ಹಲವಾರು ವಿದ್ಯುಚ್ಛಕ್ತಿ ಕೇಂದ್ರಗಳಲ್ಲಿ ಉಷ್ಣ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಇದು ವಿದ್ಯುಚ್ಛಕ್ತಿಯ ಪ್ರಮುಖ ಮೂಲವಾಗಿದೆ. ಭಾರತದಲ್ಲಿ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ 1950 ಶೇ.51 ರಷ್ಟಿದ್ದ ಪಾಲು 2001ರಷ್ಟರಲ್ಲಿ ಶೇ.81ಕ್ಕೆ ಏರಿಕೆಯಾಗಿದೆ.

2) ಜಲ ವಿದ್ಯುಚ್ಛಕ್ತಿ (Hydro Electric Power) : ದೇಶದ ಅಭಿವೃದ್ಧಿಯಲ್ಲಿ ಜಲವಿದ್ಯುಚ್ಛಕ್ತಿಯೂ ಒಂದು ಮುಖ್ಯ ಪಾತ್ರವಹಿಸುತ್ತದೆ. ದೊಡ್ಡ – ದೊಡ್ಡ ಡ್ಯಾಂಗಳನ್ನು ನಿರ್ಮಿಸಿ ಬಹುಉದ್ದೇಶಿತ ನದಿ ಕಣಿವೆ ಯೋಜನೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಭಾರತದಲ್ಲಿ ಒಟ್ಟು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಶೇ. 20 ರಷ್ಟು ಜಲವಿದ್ಯುಚ್ಛಕ್ತಿಯ ಕೊಡುಗೆಯಾಗಿದೆ.

3) ಅಣು ಶಕ್ತಿ (Nuclear Power) : ಭಾರತದಲ್ಲಿ ಹಲವಾರು ಅಣುಶಕ್ತಿ ಕೇಂದ್ರಗಳಿವೆ. ಅವುಗಳೆಂದರೆ : ಮಹಾರಾಷ್ಟ್ರದ ತಾರಾಪುರ, ರಾಜಸ್ತಾನದ ಕೋಟಾ, ತಮಿಳುನಾಡಿನ ಕಲ್ಪಕಂ, ಉತ್ತರಪ್ರದೇಶದ ನರೋರ ಮತ್ತು ಕರ್ನಾಟಕದ ಕೈಗಾ, ಭಾರತವು ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿಯನ್ನು ಬಳಸಿಕೊಳ್ಳುತ್ತದೆ.

8. ವಿದ್ಯುತ್ ಸಾಗಾಣಿಕೆ ಮತ್ತು ವಿತರಣೆಯಲ್ಲಿನ ನಷ್ಟ ಎನ್ನುವುದರ ಅರ್ಥವೇನು? ಹೇಗೆ ಅವುಗಳನ್ನು ಕಡಿಮೆ ಮಾಡಬಹುದು?

ವಿವಿಧ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಉತ್ಪಾದನೆಯಾದ ಎಲ್ಲಾ ವಿದ್ಯುಚ್ಛಕ್ತಿಯು ಅಂತಿಮ ಗ್ರಾಹಕರಿಂದ ಬಳಸಲ್ಪಡುತ್ತಿಲ್ಲ. ಅದರಲ್ಲಿ ಒಂದು ಭಾಗವು ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದಲೇ ಉಪಯೋಗಿಸಲ್ಪಡುತ್ತದೆ. ಅಲ್ಲದೇ ವಿದ್ಯುಚ್ಛಕ್ತಿಯ ಸರಬರಾಜಿನಲ್ಲಿ ಸ್ವಲ್ಪ ಭಾಗ ನಷ್ಟವಾಗುತ್ತಿದೆ. ಮನೆಗಳಲ್ಲಿ ಕಛೇರಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಬಳಸಲು ಲಭಿಸುತ್ತಿರುವುದು ವಿಯುಚ್ಛಕ್ತಿಯ ನಿವ್ವಳ ಲಭ್ಯತೆಯಾಗಿದೆ. ಹೆಚ್ಚಿನ ಸಾರ್ವಜನಿಕ ಬಂಡವಾಳ, ಉತ್ತಮ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳು, ಶೋಧನೆ ಮತ್ತು ತಾಂತ್ರಿಕ ನಾವೀನ್ಯತೆಯಿಂದ ವಿದ್ಯುತ್ ಪೂರೈಕೆಯ ನಷ್ಟವನ್ನು ತಪ್ಪಿಸಿಕೊಳ್ಳಬಹುದು.

9. ವಾಣಿಜ್ಯೇತರ ಇಂಧನ ವಿವಿಧ ಮೂಲಗಳು ಯಾವುವು?

ಸೌರಶಕ್ತಿ, ಪವನಶಕ್ತಿ ಮತ್ತು ಉಬ್ಬರವಿಳಿತ ಶಕ್ತಿ ಇವುಗಳನ್ನು ವಾಣಿಜೇತರ ಇಂಧನ ಮೂಲಗಳೆಂದು ಕರೆಯುತ್ತಾರೆ. ಭಾರತ ಉಷ್ಣವಲಯದ ರಾಷ್ಟ್ರವಾಗಿರುವುದರಿಂದ ಹಾಗೂ ಈಗಾಗಲೇ ಲಭ್ಯವಿರುವ ಮಿತವ್ಯಯಕಾರಿ ತಂತ್ರಜ್ಞಾನವನ್ನು ಬಳಸಿದಲ್ಲಿ ಈ ಅನಿಯಮಿತ ಸಾಮರ್ಥ್ಯವನ್ನು ಭಾರತ ಹೊಂದಿದೆ. ಇದಕ್ಕಾಗಿ ಅತ್ಯಂತ ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಸಹ ಅಭಿವೃದ್ಧಿ ಪಡಿಸಬಹುದಾಗಿದೆ.

10. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯಿಂದ ವಿದ್ಯುತ್‌ ಬಿಕ್ಕಟ್ಟಿನಿಂದ ಪಾರಾಗಬಹುದು ಎನ್ನುವುದನ್ನು ಸಮರ್ಥಿಸಿ.

ಪವನಶಕ್ತಿ, ಸೌರಶಕ್ತಿ, ಉಬ್ಬರವಿಳಿತ ಶಕ್ತಿ, ಉರುವಲು ಕಟ್ಟಿಗೆ, ಬೆರಣಿ, ತ್ಯಾಜ್ಯಗಳು ಒಟ್ಟು ಇಂಧನ ಬಳಕೆಯಲ್ಲಿ ಶೇ. 26 ರಷ್ಟು ಪಾಲನ್ನು ಹೊಂದಿದೆ. ಇದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯನ್ನು ನಿರ್ಧರಿಸುವ ಮೂಲಸೌಕರ್ಯ ಅಂಶಗಳಲ್ಲಿಯೇ ಅತ್ಯಂತ ಪ್ರಮುಖವಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ವಿದ್ಯುಚ್ಛಕ್ತಿ ಬೇಡಿಕೆ ಒಟ್ಟು ದೇಶೀಯ ಉತ್ಪನ್ನ (GDP) ದ ವಾರ್ಷಿಕ ಬೆಳವಣಿಗೆಯ ದರಕ್ಕಿಂತಲೂ ಹೆಚ್ಚಾಗಿದೆ. 2012 – 13ರಲ್ಲಿ ಭಾರತದಲ್ಲಿ ಸುಮಾರು ಶೇ.70ರಷ್ಟು ಪಾಲನ್ನು ಹೊಂದಿದೆ.

11. ಹೇಗೆ ಇಂಧನ ಬಳಕೆಯ ಮಾದರಿಯು ವರ್ಷಗಳ ಅವಧಿಯಲ್ಲಿ ಬದಲಾಗಿದೆ?

ಭಾರತದಲ್ಲಿ ಬಳಕೆಯಾಗುವ ಒಟ್ಟು ಇಂಧನದಲ್ಲಿ ಶೇ.74ರಷ್ಟು ವಾಣಿಜ್ಯ ಇಂಧನ ಮೂಲಗಳಾಗಿವೆ. ಇದರಲ್ಲಿ ದೊಡ್ಡ ಪಾಲು ಶೇ. 54ರಷ್ಟು ಹೊಂದಿರುವ ಕಲ್ಲಿದ್ದಲು, ನಂತರದ ಸ್ಥಾನ ಶೇ. 32ರಷ್ಟು ಪಾಲು ಹೊಂದಿರುವ ತೈಲ, ಶೇ.10ರಷ್ಟು ಪಾಲಿರುವ ನೈಸರ್ಗಿಕ ಅನಿಲ ಮತ್ತು ಶೇ. 2ರಷ್ಟು ಇರುವ ಜಲವಿದ್ಯುತ್‌ ವಾಣಿಜ್ಯ ಇಂಧನ ಮೂಲದಲ್ಲಿ ಸೇರಿವೆ.

ವಾಣಿಜೇತರ ಇಂಧನ ಮೂಲಗಳಾಗಿರುವ ಉರುವಲು ಕಟ್ಟಿಗೆ, ಬೆರಣಿ ಮತ್ತು ಕೃಷಿ ತ್ಯಾಜ್ಯಗಳು ಒಟ್ಟು ಇಂಧನ ಬಳಕೆಯಲ್ಲಿ ಶೇ.26ರಷ್ಟು ಪಾಲನ್ನು ಹೊಂದಿದೆ. ಭಾರತದ ಇಂಧನ ಕ್ಷೇತ್ರದ ಮುಖ್ಯ ಲಕ್ಷಣವೆಂದರೆ ಕಚ್ಚಾತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಆಮದನ್ನು ಅವಲಂಬಿಸಿರುವುದು ಮತ್ತು ಈ ಅವಲಂಬನೆ ಭವಿಷ್ಯದಲ್ಲಿ ಮತ್ತಷ್ಟು ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿರುವುದು.

ವಾಣಿಜ್ಯ ಇಂಧನದ ವಲಯವಾರು ಅನುಭೋಗದ ಮಾದರಿಯನ್ನು ಕೋಷ್ಟಕದಲ್ಲಿ ನೀಡಲಾಗಿದೆ. 1953-54ರಲ್ಲಿ ಸಾರಿಗೆ ವಲಯ ವಾಣಿಜ್ಯ ಇಂಧನವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಗೃಹಬಳಕೆ, ಕೃಷಿ, ಕೈಗಾರಿಕಾ ವಲಯದ ಪಾಲು ಹೆಚ್ಚಾಗುತ್ತಿದೆ. ತೈಲ ಮತ್ತು ಅನಿಲಗಳು ಇಂಧನ ಬಳಕೆಯಲ್ಲಿಯೇ ಅತ್ಯಂತ ಹೆಚ್ಚಿನ ಪಾಲನ್ನು ಹೊಂದಿದೆ. ಶೀಘ್ರಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಇಂಧನ ಬಳಕೆಯಲ್ಲಿಯೂ ಸರಿಸಮಾನವಾದ ಏರಿಕೆ ಉಂಟಾಗಿದೆ.

12. ಹೇಗೆ ಆರ್ಥಿಕ ಬೆಳವಣಿಗೆ ಮತ್ತು ಇಂಧನ ಬಳಕೆಯ ದರ ಸಂಬಂಧ ಹೊಂದಿದೆ?

ಆಧುನಿಕ ನಾಗರೀಕತೆಯ ಬೆಳವಣಿಗೆಯೊಂದಿಗೆ ಗುರುತಿಸಿಕೊಂಡಿರುವ ಹಾಗೂ ಅತ್ಯಂತ ಹೆಚ್ಚಾಗಿ ಗೋಚರಿಸಲ್ಪಡುವ ಶಕ್ತಿಯ ರೂಪವನ್ನೇ ವಿದ್ಯುಚ್ಛಕ್ತಿಯೆಂದು ಕರೆಯುತ್ತೇವೆ. ಇದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯನ್ನು ನಿರ್ಧರಿಸುವ ಮೂಲಸೌಕರ್ಯ ಅಂಶಗಳಲ್ಲಿಯೇ ಅತ್ಯಂತ ಪ್ರಮುಖವಾಗಿದೆ. ವಿದ್ಯುಚ್ಛಕ್ತಿಯ ಬೇಡಿಕೆಯ ಬೆಳವಣಿಗೆ ದರವು ಒಟ್ಟು ದೇಶೀಯ ಉತ್ಪನ್ನದ (GDP) ಬೆಳವಣಿಗೆಯ ದರಕ್ಕಿಂತ ಹೆಚ್ಚಾಗಿರುತ್ತದೆ. ವಾರ್ಷಿಕವಾಗಿ ಶೇ.8ರಷ್ಟು GDP ಬೆಳವಣಿಗೆಯನ್ನು ಸಾಧಿಸಲು ವಿದ್ಯುಚ್ಛಕ್ತಿಯ ಪೂರೈಕೆಯು ಸುಮಾರು ಶೇ.12 ಕ್ಕಿಂತ ಹೆಚ್ಚಾಗುವುದು ಅಗತ್ಯವಾಗಿದೆ. ಇದರಿಂದ ಆರ್ಥಿಕ ಬೆಳವಣಿಗೆ ಮತ್ತು ಇಂಧನ ಬಳಕೆಯ ದರ ಸಂಬಂಧವನ್ನು ತೋರಿಸುತ್ತದೆ.

13. ವಿದ್ಯುತ್ ವಲಯವು ಎದುರಿಸುತ್ತಿರುವ ಸಮಸ್ಯೆಗಳಾವುವು?

ಇಂದು ಭಾರತದ ವಿದ್ಯುಚ್ಛಕ್ತಿ ವಲಯವು ಎದುರಿಸುತ್ತಿರುವ ಕೆಲವು ಸವಾಲುಗಳೆಂದರೆ –

  • ಭಾರತದ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವು ಆರ್ಥಿಕ ಬೆಳವಣಿಗೆಯ ವಾರ್ಷಿಕ ದರವಾದ ಶೇ. 7-8ರಷ್ಟನ್ನು ಪೂರೈಸಲು ಸಾಕಾಗುತ್ತಿಲ್ಲ. ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಭಾರತದ ವಾಣಿಜ್ಯ ಇಂಧನ ಪೂರೈಕೆಯಲ್ಲಿ ಶೇ.7ರಷ್ಟು ಬೆಳವಣಿಗೆ ಸಾಧಿಸುವ ಅಗತ್ಯವಿದೆ. ಪ್ರಸ್ತುತ ವಾರ್ಷಿಕವಾಗಿ ಕೇವಲ 20,000 ಮೆ.ವ್ಯಾಟ್‌ಗಳಷ್ಟನ್ನು ಮಾತ್ರ ಸೇರಿಸಲು ಭಾರತ ಶಕ್ತವಾಗಿದೆ.
  • ವಿದ್ಯುತ್‌ ಸರಬರಾಜು ಮಾಡುವ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗಳು (SEBs) ಅನುಭವಿಸುವ ನಷ್ಟದ ಪ್ರಮಾಣ ರೂ.500 ಶತಕೋಟಿಗಳನ್ನು ಮೀರಿದೆ. ಇದು ವಿದ್ಯುಚ್ಛಕ್ತಿಯ ಪ್ರಸರಣದಲ್ಲಿನ ಮತ್ತು ವಿತರಣೆಯಲ್ಲಿನ ನಷ್ಟ, ತಪ್ಪಾದ ದರ ಮತ್ತು ಅದಕ್ಷತೆಗಳಿಂದ ಸಂಭವಿಸುತ್ತಿದೆ. ರೈತರಿಗೆ ವಿದ್ಯುತ್ತನ್ನು ಪೂರೈಸುವುದೂ ಮತ್ತು ವಿದ್ಯುತ್‌ ಕಳ್ಳತನವೂ ರಾಜ್ಯ ವಿದ್ಯುತ್‌ ಮಂಡಳಿಗಳ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
  • ಖಾಸಗಿ ವಲಯದ ವಿದ್ಯುತ್ ಉತ್ಪಾದನಾ ಕೇಂದ್ರಗಳು ಇನ್ನು ಮಹತ್ತರ ಪಾತ್ರವಹಿಸಬೇಕಾಗಿದೆ.
  • ಅಧಿಕ ವಿದ್ಯುತ್‌ದರ ಮತ್ತು ದೇಶದ ವಿವಿಧ ಭಾಗಗಳಲ್ಲಿನ ಸುದೀರ್ಘ ವಿದ್ಯುತ್ ಕಡಿತವೂ ಸಾರ್ವಜನಿಕರ ಅಶಾಂತಿಗೆ ಕಾರಣವಾಗಿದೆ.
  • ಭಾರತದ ವಿದ್ಯುತ್ ವಲಯದ ಪ್ರಮುಖ ವಿದ್ಯುತ್ ಕೇಂದ್ರವಾಗಿರುವ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಕಚ್ಚಾವಸ್ತು ಮತ್ತು ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿದೆ.

14. ಭಾರತದಲ್ಲಿನ ವಿದ್ಯುತ್ ಬಿಕ್ಕಟ್ಟನ್ನು ಎದುರಿಸಲು ಜಾರಿಗೆ ತರಲಾದ ಸುಧಾರಣೆಗಳನ್ನು ಚರ್ಚಿಸಿರಿ.

ಹೆಚ್ಚಿನ ಸಾರ್ವಜನಿಕ ಬಂಡವಾಳ, ಉತ್ತಮ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳು, ಶೋಧನೆ, ತಾಂತ್ರಿಕ ನಾವೀನ್ಯತೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಇವು ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಪೂರೈಸುವ ಖಾತರಿಯನ್ನು ನೀಡುತ್ತದೆ. ಸ್ಥಾಪಿತ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ವಿದ್ಯುತ್ ವಲಯದಲ್ಲಿ ಬಂಡವಾಳ ಹೂಡುವುದರ ಬದಲಾಗಿ ಸರ್ಕಾರ ವಿದ್ಯುತ್‌ ವಲಯದ ಖಾಸಗೀಕರಣಕ್ಕೆ ಹೊರಟಿದೆ, ಅದರಲ್ಲೂ ವಿದ್ಯುತ್‌ ವಿತರಣೆಯಲ್ಲಿ ಮತ್ತು ಅಧಿಕ ವಿದ್ಯುತ್‌ ದರಕ್ಕೆ ಅನುಮತಿಸಿರುವುದು ಕೆಲವು ವಲಯಗಳ ಮೇಲೆ ದುಷ್ಪರಿಣಾಮ ಬೀರಿದೆ.

15. ನಮ್ಮ ದೇಶದ ಜನರ ಆರೋಗ್ಯದ ಪ್ರಮುಖ ಲಕ್ಷಣಗಳಾವುವು?

  • ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷದಷ್ಟು ಮಕ್ಕಳು ನೀರಿನಿಂದ ಬರುವ ರೋಗದಿಂದ ಸಾಯುತ್ತಿದ್ದಾರೆ. ಏಡ್ಸ್‌ನ ಅಪಾಯವೂ ಕೂಡಾ ಏರುತ್ತಿದೆ. ಪ್ರಸ್ತುತ ಭಾರತದಲ್ಲಿ ಒಟ್ಟು ಸಂಖ್ಯೆಯ ಶೇ.20 ಕ್ಕಿಂತ ಕಡಿಮೆ ಜನಸಂಖ್ಯೆಯು ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಉಪಯೋಗಿಸುತ್ತಿದ್ದಾರೆ.
  • ಒಂದು ಅಧ್ಯಯನದ ಪ್ರಕಾರ ಶೇ.38ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವಶ್ಯವಿರುವಷ್ಟು ಸಂಖ್ಯೆಯ ವೈದ್ಯರುಗಳನ್ನು ಹೊಂದಿದ್ದರೆ ಶೇ. 30ರಷ್ಟು ಔಷಧಗಳ ದಾಸ್ತಾನು ಹೊಂದಿದೆ. ಈ ಕೇಂದ್ರಗಳು ಕ್ಷ – ಕಿರಣ ಅಥವಾ ರಕ್ತ ಪರೀಕ್ಷಾ ಸೌಲಭ್ಯಗಳನ್ನು ಹೊಂದಿಲ್ಲ.
  • ಮಕ್ಕಳ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರು ಇತ್ಯಾದಿ ಪರಿಣಿತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಲು ಗ್ರಾಮೀಣ ಜನರಿಗೆ ಸಾಧ್ಯವಾಗುತ್ತಿಲ್ಲ.
  • ಭಾರತದಲ್ಲಿ 120 ಲಕ್ಷಕ್ಕಿಂತ ಹೆಚ್ಚು ಅಂಧ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಕ್ಷಯರೋಗವು ಅತೀ ವೇಗವಾಗಿ ಹರಡುತ್ತಿರುವ ಒಂದು ಕಾಯಿಲೆಯಾಗಿದ್ದು ಇದರಿಂದ ದೇಶದಲ್ಲಿ 14 ದಶಲಕ್ಷ ಜನರು ನರಳಾಡುತ್ತಿದ್ದಾರೆ.

16. ‘ರೋಗಗಳ ಜಾಗತಿಕ ಹೊರೆ’ ಎಂದರೇನು?

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.17ರಷ್ಟು ಜನಸಂಖ್ಯೆ ಭಾರತದಲ್ಲಿದೆ. ಆದರೆ ಕಾಯಿಲೆಗಳ ಜಾಗತಿಕ ಹೊರೆಯಲ್ಲಿ (GBD) ಶೇ.20ರಷ್ಟು ಭಾರತದಲ್ಲಿಯೇ ಇದೆ. ಜಗತ್ತಿನಲ್ಲಿ ಕಾಯಿಲೆಯಿಂದ ಅಕಾಲಿಕ ಮರಣಕ್ಕೆ ತುತ್ತಾಗುವವರ ಸಂಖ್ಯೆಯನ್ನು ಗುರುತಿಸಲು ವಿದ್ವಾಂಸರು GBDಯನ್ನು ಮಾಪಕವಾಗಿ ಬಳಸುತ್ತಿದ್ದಾರೆ ಅದರೊಂದಿಗೆ ರೋಗ ಕಾರಣಕ್ಕೆ, ಅಂತಹ ರೋಗಿಗಳು ರೋಗ ಕಾರಣಕ್ಕಾಗಿ ಅಶಕ್ತತೆಯಿಂದ ನರಳಿದ ವರ್ಷಗಳನ್ನು ಗುರುತಿಸಲಾಗುತ್ತದೆ.

ಭಾರತದಲ್ಲಿ GBDಯ ಅರ್ಧಕ್ಕಿಂತ ಹೆಚ್ಚಿನವು ಅತಿಸಾರ, ಮಲೇರಿಯಾ ಮತ್ತು ಕ್ಷಯ ಮುಂತಾದ ಸಾಂಕ್ರಾಮಿಕ ರೋಗಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಐದು ಲಕ್ಷ ಮಕ್ಕಳು ನೀರಿನಿಂದ ಹರಡುವ ಕಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ. ಏಡ್ಸ್‌ನ ಅಪಾಯವೂ ಕೂಡಾ ಭಾರಿ ಪ್ರಮಾಣದಲ್ಲಿ ಏರುತ್ತಿದೆ. ಪ್ರತಿ ವರ್ಷ 2.2 ದಶಲಕ್ಷ ಮಕ್ಕಳು ಅಪೌಷ್ಠಿಕತೆ ಮತ್ತು ಲಸಿಕೆಗಳ ಅಸಮರ್ಪಕ ಪೂರೈಕೆಯಿಂದ ಸಾವನ್ನಪ್ಪುತ್ತಿದ್ದಾರೆ.

17. ನಮ್ಮ ಆರೋಗ್ಯ ಸುರಕ್ಷಾ ವ್ಯವಸ್ಥೆಯ ದೋಷಗಳನ್ನು ಚರ್ಚಿಸಿ.

ನಮ್ಮ ಆರೋಗ್ಯ ಸುರಕ್ಷಾ ವ್ಯವಸ್ಥೆಯ ದೋಷಗಳನ್ನು ಈ ಕೆಳಗಿನಂತೆ ಚರ್ಚಿಸಬಹುದಾಗಿದೆ. ಅವುಗಳೆಂದರೆ :

1) ಆರೋಗ್ಯ ಸೇವೆಗಳ ಅಸಮಾನ ಹಂಚಿಕೆ : ದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಅಸಮಾನ ಹಂಚಿಕೆಯನ್ನು ಹೆಚ್ಚಾಗಿ ಕಾಣಬಹುದಾಗಿದೆ. ಈ ಕೆಳಗಿನಂತೆ ತಿಳಿಯಬಹುದು.

ಎ) ಭಾರತದಲ್ಲಿ ಶೇ.70ರಷ್ಟು ಜನಸಂಖ್ಯೆಯು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾಗ್ಯೂ ಕೇವಲ ಐದನೇ ಒಂದು ಭಾಗದ ಆಸ್ಪತ್ರೆಗಳು ಮಾತ್ರ ಗ್ರಾಮೀಣ ಪ್ರದೇಶದಲ್ಲಿದೆ.

ಬಿ) ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಥವಾ ರಕ್ತ ಪರೀಕ್ಷಾ ಕೇಂದ್ರಗಳನ್ನು ಹೊಂದಿಲ್ಲ.

ಸಿ) ಗ್ರಾಮೀಣ ಪ್ರದೇಶದಲ್ಲಿ 7 ಲಕ್ಷ ಹಾಸಿಗೆಗೆ ಕೇವಲ ಶೇ.11 ರಷ್ಟು ಹಾಸಿಗೆಗಳು ಒಳರೋಗಿಗಳಿಗೆ ಲಭ್ಯವಿದೆ.

ಡಿ) ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 1 ಲಕ್ಷ ಜನರಿಗೆ ಮಾತ್ರ ಆಸ್ಪತ್ರೆಗಳು ದೊರೆಯುತ್ತಿದೆ.

ಇ) ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ನಿರ್ದಿಷ್ಟ ವೈದ್ಯಕೀಯ ಸೌಕರ್ಯಗಳಾದ ಮಕ್ಕಳ ಚಿಕಿತ್ಸೆ, ಪ್ರಸೂತಿ ಸೌಲಭ್ಯ, ಅರಿವಳಿಕೆ ಚಿಕಿತ್ಸೆ ಇತ್ಯಾದಿ.

ಎಫ್) ಈಗಲೂ ವೈದ್ಯರ ಕೊರತೆಯಿಂದ ಕೂಡಿದೆ.

2) ಬಡವ – ಶ್ರೀಮಂತ ವಿಭಜನೆ :

ಎ) ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಶೇ.20ರಷ್ಟು ಕಡುಬಡವರು ತಮ್ಮ ಆದಾಯದ ಶೇ.12ರಷ್ಟನ್ನು ಆರೋಗ್ಯ ಸುರಕ್ಷೆಗಾಗಿ ವೆಚ್ಚಮಾಡಿದರೆ ಶ್ರೀಮಂತರು ಕೇವಲ ಶೇ.2ರಷ್ಟನ್ನು ಮಾತ್ರ ವೆಚ್ಚ ಮಾಡುತ್ತಿದ್ದಾರೆ.

ಬಿ) ಬಡವರು ಕಾಯಿಲೆ ಬಿದ್ದರೆ ತಮ್ಮ ಆಸ್ತಿಯನ್ನು ಮಾರಾಟ ಅಥವಾ ಮಕ್ಕಳನ್ನು ಒತ್ತೆ ಇಡಬೇಕಾಗುತ್ತದೆ.

3) ಮಹಿಳಾ ಆರೋಗ್ಯ :

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ವಿವಾಹಿತ ಮಹಿಳೆಯರಲ್ಲಿ, 15ರಿಂದ 49ರ ವಯೋಮಾನದೊಳಗಿರುವ ಶೇ.50ರಷ್ಟು ಸ್ತ್ರೀಯರು ರಕ್ತಹೀನತೆ ಮತ್ತು ಕಬ್ಬಿಣದ ಅಂಶದ ಕೊರತೆಯಿಂದ ಬಳಲುತ್ತಿದ್ದಾರೆ.

4) GBD ಯಲ್ಲಿ ಏರಿಕೆ :

ಶೇ. 20ರಷ್ಟು ಜನರು ಅಕಾಲಿಕ ಮರಣಕ್ಕೆ ತುತ್ತಾಗುವವರ ಸಂಖ್ಯೆಯಾಗಿದೆ. ಪ್ರತಿವರ್ಷ 5 ಲಕ್ಷ ಮಕ್ಕಳು ನೀರಿನಿಂದ ಹರಡುವ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ಪ್ರತಿವರ್ಷ 2.2ದಶಲಕ್ಷ ಮಕ್ಕಳು ಅಪೌಷ್ಠಿಕತೆ ಮತ್ತು ಲಸಿಕೆಗಳ ಅಸಮರ್ಪಕ ಪೂರೈಕೆಯಿಂದ ಸಾವನ್ನಪ್ಪುತ್ತಿದ್ದಾರೆ.

18. ಹೇಗೆ ಮಹಿಳಾ ಆರೋಗ್ಯವು ಪ್ರಮುಖ ಆದ್ಯತಾ ವಿಷಯವಾಗಿದೆ?

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಪುರುಷರಿಗೆ ಹೋಲಿಸಿದಾಗ ಆರೋಗ್ಯ, ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಮಹಿಳೆಯರು ತುಂಬಾ ಅನಾನುಕೂಲತೆಗಳನ್ನು ಅನುಭವಿಸುತ್ತಿದ್ದಾರೆ. ದೇಶದಲ್ಲಿ, 2001ರಂದು 927ರಷ್ಟು ಇದ್ದ ಮಕ್ಕಳ ಲಿಂಗಾನುಪಾತವು 914ಕ್ಕೆ ಇಳಿದಿದೆ. ಎನ್ನುವುದು 2011ರ ಜನಗಣತಿಯಲ್ಲಿ ಕಂಡು ಬಂದಿದೆ. ದೇಶದಲ್ಲಿನ ಹೆಣ್ಣು ಭ್ರೂಣಹತ್ಯೆ ಇದಕ್ಕೆ ಮುಖ್ಯ ಕಾರಣವಾಗಿದೆ. ಸುಮಾರು 3,00,000 ಹೆಣ್ಣು ಮಕ್ಕಳು 15ನೇ ವಯಸ್ಸಿನೊಳಗೆ ವಿವಾಹಿತರಾಗುವುದಲ್ಲದೆ ಮಕ್ಕಳನ್ನು ಪಡೆಯುತ್ತಿದ್ದಾರೆ. ವಿವಾಹಿತ ಮಹಿಳೆಯರಲ್ಲಿ, 15 ರಿಂದ 49ರ ವಯೋಮಾನದೊಳಗಿರುವ ಶೇ. 50ರಷ್ಟು ಸ್ತ್ರೀಯರು ರಕ್ತಹೀನತೆ ಮತ್ತು ಕಬ್ಬಿಣದ ಅಂಶದ ಕೊರತೆಯಿಂದಾಗುವ ಪೌಷ್ಠಿಕ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಶೇ.19ರಷ್ಟು ಮಾತೆಯರ ಮರಣಕ್ಕೆ ಕಾರಣವಾಗಿದೆ. ಭಾರತದಲ್ಲಿ ಗರ್ಭಪಾತವೂ ಕೂಡಾ ಮಾತೃತ್ವ ಅನಾರೋಗ್ಯ ಮತ್ತು ಮರಣಕ್ಕೆ ಪ್ರಮುಖ ಕಾರಣವಾಗಿದೆ.

19. ಸಾರ್ವಜನಿಕ ಆರೋಗ್ಯದ ಅರ್ಥವನ್ನು ವಿವರಿಸಿ, ಇತ್ತೀಚಿನ ವರ್ಷಗಳಲ್ಲಿ ಕಾಯಿಲೆಗಳ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಪ್ರಮುಖ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಚರ್ಚಿಸಿ

ಆರೋಗ್ಯವೆಂದರೆ ಕಾಯಿಲೆ ಇಲ್ಲದೇ ಇರುವ ಸ್ಥಿತಿ ಮಾತ್ರವಲ್ಲ ಆದರೆ ಅದು ಒಬ್ಬ ವ್ಯಕ್ತಿಗೆ ಸಾಮರ್ಥ್ಯವನ್ನು ಸಿದ್ಧಿಕರಿಸುವ ಶಕ್ತಿಯಾಗಿದೆ. ಆರೋಗ್ಯ ಎನ್ನುವುದು ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರ ಪ್ರಕ್ರಿಯೆಯಾಗಿದೆ.

ಆರೋಗ್ಯ ಮೂಲಸೌಕರ್ಯದ ಅಭಿವೃದ್ಧಿ ಎಂದರೆ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಮೂಲಭೂತ ಅವಶ್ಯಕತೆಗಳನ್ನು ಸುಧಾರಿಸುವುದಾಗಿರುತ್ತದೆ. ಆರೋಗ್ಯ ಮೂಲ ಸೌಕರ್ಯವು ಆಸ್ಪತ್ರೆ, ತರಬೇತಿ ಪಡೆದ ಸಿಬ್ಬಂದಿ ಅಂದರೆ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಪರೀಕ್ಷಾ ಸೌಕರ್ಯಗಳನ್ನು ಒಳಗೊಂಡಿದೆ. ಆರೋಗ್ಯ ಸಂಬಂಧಿ ವಿಷಯಗಳ ಕುರಿತು ಮಾರ್ಗದರ್ಶನ ಮಾಡುವ ಮತ್ತು ನಿಯಂತ್ರಿಸುವ ಸಂವಿಧಾನಾತ್ಮಕ ಭಾದ್ಯತೆಯು ಸರ್ಕಾರದ ಮೇಲಿದೆ. “ಕೇಂದ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪರಿಷತ್ತಿನ (CCHFW) ಮೂಲಕ ನೀತಿ ಮತ್ತು ಯೋಜನೆಗಳನ್ನು ರೂಪಿಸಿದೆ. ದೇಶದಲ್ಲಿ ಮುಖ್ಯವಾದ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮಾಹಿತಿಗಳನ್ನು ಸಂಗ್ರಹಿಸುವುದಲ್ಲದೆ ರಾಜ್ಯ ಸರ್ಕಾರಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸಿನ ಮತ್ತು ತಾಂತ್ರಿಕ ನೆರವನ್ನು ನೀಡುತ್ತದೆ.

ಸರ್ಕಾರವು ಗ್ರಾಮೀಣ ಮಟ್ಟದಲ್ಲಿ ವಿವಿಧ ರೀತಿಯ ಆಸ್ಪತ್ರೆಗಳನ್ನು ಸ್ಥಾಪಿಸಿದ ಅವುಗಳನ್ನು ತಾಂತ್ರಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಎಂದು ಕರೆಯಲಾಗುತ್ತದೆ. ಖಾಸಗಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಆಸ್ಪತ್ರೆಗಳೂ ಕೂಡಾ ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿವೆ. ಈ ಆಸ್ಪತ್ರೆಗಳು ವೈದ್ಯಕೀಯ, ಫಾರ್ಮಸಿ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ತರಬೇತಿ ಹೊಂದಿದ ವೃತ್ತಿಪರರು ಮತ್ತು ಅರೆ – ವೈದ್ಯಕೀಯ ವೃತ್ತಿಪರರಿಂದ ನಿರ್ವಹಿಸಲ್ಪಡುತ್ತಿವೆ.

ಸ್ವಾತಂತ್ರಾನಂತರದಿಂದ ಆರೋಗ್ಯ ಸೇವೆಗಳ ಭೌತಿಕ ಸೌಲಭ್ಯಗಳಲ್ಲಿ ಗಮನಾರ್ಹ ವಿಸ್ತರಣೆಯಾಗಿದೆ. 1951 – 2013ರ ಅವಧಿಯಲ್ಲಿ ಹೆಚ್ಚಳಿಕೆಯಾಗುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳ ಬಹುತೇಕ ನಿರ್ಮೂಲನೆ ಫಲಪ್ರದವಾಗಿದೆ.

20. ಆರು ಭಾರತೀಯ ವೈದ್ಯ ಪದ್ಧತಿಯ ಪ್ರಕಾರಗಳ ವ್ಯತ್ಯಾಸಗಳನ್ನು ತಿಳಿಸಿ.

ಆಯುರ್ವೇದ, ಯೋಗ, ಯುನಾನಿ, ಸಿದ್ದಾ, ಹೋಮಿಯೋಪತಿ (AYUSH) ಮತ್ತು ಪ್ರಕೃತಿ ಚಿಕಿತ್ಸೆ.

21. ಹೇಗೆ ಆರೋಗ್ಯ ಸುರಕ್ಷಾ ಕಾಯಕ್ರಮಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಬಹುದು?

ಆರೋಗ್ಯವೆಂದರೆ ಕಾಯಿಲೆ ಇಲ್ಲದೇ ಇರುವ ಸ್ಥಿತಿ ಮಾತ್ರವಲ್ಲ. ಆದರೆ ಅದು ಒಬ್ಬ ಒಂದು ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರ ಪ್ರಕ್ರಿಯೆಯಾಗಿದೆ ಆರ್ಥಿಕ ಅಭಿವೃದ್ಧಿ) ಆರೋಗ್ಯ ಸಂಬಂಧೀ ವಿಷಗಳ ಕುರಿತು ಮಾರ್ಗದರ್ಶನ ಮಾಡುವ ಮತ್ತು ನಿಯಂತ್ರಿಸುವ ಸಂವಿಧಾನಾತ್ಮಕ ಭಾದ್ಯತೆಯು ಸರ್ಕಾರದ ಮೇಲಿದೆ. ಕೇಂದ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪರಿಷತ್ತಿನ ಮೂಲಕ ನೀತಿ ಮತ್ತು ಯೋಜನೆಗಳನ್ನು ರೂಪಿಸಿದೆ. ದೇಶದಲ್ಲಿ ಮುಖ್ಯವಾದ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮಾಹಿತಿಗಳನ್ನು ಸಂಗ್ರಹಿಸುವುದಲ್ಲದೆ ರಾಜ್ಯ ಸರ್ಕಾರಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸಿವನ ಮತ್ತು ತಾಂತ್ರಿಕ ನೆರವನ್ನು ನೀಡುತ್ತದೆ.

1) ಆರೋಗ್ಯ ಅತಿ ಮುಖ್ಯವಾದ ಸಾರ್ವಜನಿಕ ಸರಕು ಮತ್ತು ಮೂಲಭೂತ ಮಾನವ ಹಕ್ಕಾಗಿದೆ. ಸಾರ್ವಜನಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಣಬೇಕು.

2) ಕಾಯಿಲೆಯ ವಿರುದ್ಧದ ಹೋರಾಟದ ಯಶಸ್ಸು ಶಿಕ್ಷಣ ಮತ್ತು ಆರೋಗ್ಯ ಮೂಲಸೌಕರ್ಯದ ದಕ್ಷತೆಯನ್ನು ಅವಲಂಬಿಸಿದೆ.

3) ಆರೋಗ್ಯ ಮತ್ತು ಶುಚಿತ್ವವನ್ನು ಒದಗಿಸುವ ದಕ್ಷ ವ್ಯವಸ್ಥೆಗಳ ಕುರಿತು ಪರಿಜ್ಞಾನವನ್ನು ಮೂಡಿಸುವುದು.

4) ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾತ್ರ

5) ಆರೋಗ್ಯ ಸುರಕ್ಷಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿಸುವುದು.

6) ಜನರನ್ನು ಉತ್ತಮ ಗುಣಮಟ್ಟದ ಜೀವನದ ದಿಶೆಗೆ ಒಯ್ಯುವುದು,

7) ಎಲ್ಲರಿಗೂ ಆರೋಗ್ಯ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಅದರ ಲಭ್ಯತೆ ಮತ್ತು ಅವುಗಳನ್ನು ಪಡೆಯುವ ಸಾಮರ್ಥ್ಯವನ್ನು ಮೂಲ ಆರೋಗ್ಯ ಸೌಕರ್ಯಗಳೊಂದಿಗೆ ಸಮನ್ವಯಗೊಳಿಸಬೇಕಾಗಿದೆ.

ಹೆಚ್ಚುವರಿ ಪ್ರಶೋತ್ತರಗಳು

1st Puc Economics Chapter 8 Notes in Kannada

1. ಮೂಲಸೌಕರ್ಯ ಎಂದರೇನು?

ಆರ್ಥಿಕತೆಯ ಕಾರ್ಯಾಚರಣೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಸೌಲಭ್ಯಗಳು, ಚಟುವಟಿಕೆಗಳು ಮತ್ತು ಸೇವೆಗಳನ್ನು ಮೂಲಸೌಕರ್ಯ ಎನ್ನುವರು.

2. ಮೂಲಸೌಕರ್ಯವನ್ನು ಎಷ್ಟು ವಿಧಗಳಾಗಿ ವಿಂಗಡಿಸಿದ್ದಾರೆ. ಹೆಸರಿಸಿ.

ಮೂಲಸೌಕರ್ಯವನ್ನು 2 ವಿಧಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ –

1) ಆರ್ಥಿಕ ಮೂಲಸೌಕರ್ಯ

2) ಸಾಮಾಜಿಕ ಮೂಲಸೌಕರ್ಯ

3. ಸಾಮಾಜಿಕ ಮೂಲಸೌಕರ್ಯ ಎಂದರೇನು?

ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಗೆ ಹೊರಗಿನಿಂದ ಆರ್ಥಿಕತೆಗೆ ಪರೋಕ್ಷವಾಗಿ ಸಹಾಯ ಸಲ್ಲಿಸುವ ಸೌಲಭ್ಯಗಳಿಗೆ ಸಾಮಾಜಿಕ ಮೂಲಸೌಕರ್ಯಗಳು ಎನ್ನುವರು.

4. ಆರೋಗ್ಯದ ಅರ್ಥ ನೀಡಿ.

ಆರೋಗ್ಯವೆಂದರೆ ಕಾಯಿಲೆ ಇಲ್ಲದೇ ಇರುವ ಸ್ಥಿತಿ ಮಾತ್ರವಲ್ಲ ಆದರೆ ಅದು ಒಬ್ಬ ವ್ಯಕ್ತಿಗೆ ಸಾಮರ್ಥ್ಯವನ್ನು ಸಿದ್ದೀಕರಿಸುವ ಶಕ್ತಿಯಾಗಿದೆ.

5. ಆರೋಗ್ಯ ಮಾಪಕ ಮಾಡುವ ಸೂಚಕಗಳಾವುವು?

ಈ ಕೆಳಗಿನ ಸೂಚಕಗಳನ್ನು ಪರಿಗಣಿಸುವ ಮೂಲಕ ಜನರ ಆರೊಗ್ಯವನ್ನು ಮಾಪನ ಮಾಡಬಹುದು. ಅವುಗಳೆಂದರೆ :

1) ಶಿಶುಮರಣದರ

2) ಮಾತೃತ್ವ ಮರಣದರ

3) ನಿರೀಕ್ಷಿತ ಜೀವಿತಾವಧಿ

4) ಪೌಷ್ಟಿಕತೆಯ ಮಟ್ಟ

5) ಸಾಂಕ್ರಾಮಿಕ ಮತ್ತು ಸಾಂಕ್ರಾವಲ್ಲದ ರೋಗಗಳು

6. ಆರೋಗ್ಯ ಮೂಲಸೌಕರ್ಯದ ಅಭಿವೃದ್ಧಿ ಎಂದರೇನು?

ಆರೋಗ್ಯ ಮೂಲಸೌಕರ್ಯದ ಅಭಿವೃದ್ಧಿ ಎಂದರೆ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಜನರ ಮೂಲಭೂತ ಅವಶ್ಯಕತೆಗಳನ್ನು ಸುಧಾರಿಸವುದಾಗಿರುತ್ತದೆ.

7. ಆರೋಗ್ಯ ಮೂಲ ಸೌಕರ್ಯ ಎಂದರೇನು?

ಆರೋಗ್ಯ ಮೂಲಸೌಕರ್ಯವು ಆಸ್ಪತ್ರೆ, ತರಬೇತಿ ಪಡೆದ ಸಿಬ್ಬಂದಿ ಮತ್ತು ವೈದ್ಯಕೀಯ ಪರೀಕ್ಷಾ ಸೌಕರ್ಯಗಳನ್ನು ಒಳಗೊಂಡಿದೆ.

8. CCHFW ನ್ನು ವಿಸ್ತರಿಸಿ.

ಕೇಂದ್ರ ಸರ್ಕಾರವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿ.

9. ರೋಗಗಳ ಜಾಗತಿಕ ಸಂಕಷ್ಟ (GBD) ಎಂದರೇನು?

ಜನರು ನಿರ್ದಿಷ್ಟ ರೋಗಗಳಿಂದ ಅಕಾಲ ಮರಣಕ್ಕೆ ತುತ್ತಾಗುವುದಲ್ಲದೆ, ಮರಣಕ್ಕೆ ಮುನ್ನ ಅಂಗವೈಫಲ್ಯ ಸ್ಥಿತಿಯಲ್ಲಿ ಕಳೆಯುವ ಸಮಯವನ್ನು ಅಳೆಯುವ ಪರಿಣಿತರು ಉಪಯೋಗಿಸುವ ಸೂಚಕವಾಗಿದೆ.

10. 2011ರ ಪ್ರಕಾರ ಲಿಂಗಾನುಪಾತ ಎಷ್ಟಿದೆ?

914/1000

11. 2011ರ ಜನಗಣತಿಯ ಪ್ರಕಾರ ಭಾರತದ ಶಿಶುಮರಣ ದರವೆಷ್ಟು?

1000 ಶಿಶುಗಳಿಗೆ 41 ಶಿಶುಗಳ ಮರಣ,

12. ಇಂಧನ ಎಂದರೇನು?

ಕೈಗಾರಿಕೆಗಳು, ಸಾರಿಗೆ, ಗೃಹಕೃತ್ಯದ ಉದ್ದೇಶಗಳಿಗೆ, ಬೆಳಕಿಗೆ ಮುಂತಾದ ಉತ್ಪಾದಕ ಚಟುವಟಿಕೆಗಳಿಗೆ ಇಂಧನವು ಅವಶ್ಯಕ ಆಧಾರವಾಗಿದೆ.

13. ಇಂಧನದ ಮೂಲಗಳಾವುವು?

1) ಇಂಧನದ ಸಾಂಪ್ರದಾಯಿಕ ಮೂಲಗಳು

2) ಇಂಧನದ ಅಸಾಂಪ್ರದಾಯಿಕ ಮೂಲಗಳು

14. ಸಾಂಪ್ರದಾಯಿಕ ಇಂಧನದ ಮೂಲಗಳು ಯಾವುವು?

1) ವಾಣಿಜ್ಯೇತರ ಮೂಲಗಳು

2) ವಾಣಿಜ್ಯ ಮೂಲಗಳು

15. ವಿದ್ಯುಚ್ಛಕ್ತಿಯ ಅರ್ಥ ಕೊಡಿ.

ಆಧುನಿಕ ನಾಗರೀಕತೆಯ ಬೆಳವಣಿಗೆಯೊಂದಿಗೆ ಗುರುತಿಸಿಕೊಂಡಿರುವ ಮತ್ತು .ಅತ್ಯಂತ ಹೆಚ್ಚಾಗಿ ಗೋಚರಿಸಲ್ಪಡುವ ಶಕ್ತಿಯ ರೂಪ.

16. ವಾಣಿಜ್ಯೇತರ ಇಂಧನ ವಿವಿಧ ಮೂಲಗಳು ಯಾವುವು?

ವಾಣಿಜೇತರ ಇಂಧನ ವಿವಿಧ ಮೂಲಗಳೆಂದರೆ ಕೃಷಿಯ ತ್ಯಾಜ್ಯ ಮತ್ತು ಬೆರಣಿ ಇತ್ಯಾದಿ.

17. ನವೀಕರಿಸಲಾಗದ ಶಕ್ತಿ ಯಾವುದು?

ಪೆಟ್ರೋಲ್, ನೈಸರ್ಗಿಕ ಅನಿಲ ಮುಂತಾದವು.

18. ಯಾವ ಶಕ್ತಿ ಮೂಲಗಳು ಇಂಗಾಲವನ್ನು ಹೊರಸೂಸುವುದಿಲ್ಲ. ಉದಾ ಕೊಡಿ.

1) ಜಲವಿದ್ಯುತ್ ಶಕ್ತಿ 2) ಪವನ ಶಕ್ತಿ

19. ಕೃಷಿ ತ್ಯಾಜ್ಯ ಮತ್ತು ಉರುವಲು ಯಾವ ಇಂಧನ ಮೂಲ?

ವಾಣಿಜ್ಯೇತರ ಇಂಧನ ಮೂಲ

20. ಆರೋಗ್ಯ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಿಂದುಳಿದಿರುವ 4 ರಾಜ್ಯಗಳನ್ನು ಹೆಸರಿಸಿ.

ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ.

21. ಯಾವ ಕಾರಣಕ್ಕಾಗಿ ಭಾರತದಲ್ಲಿ ಪ್ರಸ್ತುತ ಉತ್ಪಾದನೆಯಾಗುತ್ತಿರುವ ವಿದ್ಯುಚ್ಛಕ್ತಿಗಿಂತ ಅದರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಆರ್ಥಿಕ ಅಭಿವೃದ್ಧಿ ಮತ್ತು ಜನಸಂಖ್ಯಾ ಬೆಳವಣಿಗೆಯ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ವಿದ್ಯುಚ್ಛಕ್ತಿ ಬಳಕೆಯ ಬೇಡಿಕೆ ಹೆಚ್ಚುತ್ತಿದೆ.

22. ಭಾರತದಲ್ಲಿ ಇಂಧನ ಉತ್ಪಾದಿಸುವ ಪ್ರಮುಖ ಮೂಲ ಯಾವುದು ?

ಕಲ್ಲಿದ್ದಲು ಪ್ರಮುಖ ಇಂಧನದ ಮೂಲವಾಗಿದೆ.

23. ಭಾರತದಲ್ಲಿನ ಆರೋಗ್ಯ ಮೂಲಸೌಕರ್ಯದ ಮೂರು ವ್ಯವಸ್ಥೆಗಳೆಂದರೇನು?

ಭಾರತದಲ್ಲಿನ ಆರೋಗ್ಯ ಮೂಲಸೌಕರ್ಯದ ಮೂರು ಹಂತದ ಎಂದರೆ ಆರೋಗ್ಯವನ್ನು ಮೂರು ಹಂತಗಳಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ವಲಯಗಳಲ್ಲಿದೆ.

24. ಭಾರತದಲ್ಲಿ ಎಷ್ಟು ಜಾತಿಯ ಔಷಧೀಯ ಗುಣಹೊಂದಿರುವ ಸಸ್ಯಗಳಿವೆ?

ಭಾರತದಲ್ಲಿ ಸುಮಾರು 15,000 ಜಾತಿಯ ಸಸ್ಯಗಳಿವೆ.

25. ಭಾರತದಲ್ಲಿ ಎಷ್ಟು ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳಿವೆ?

ಭಾರತದಲ್ಲಿ 380ಕ್ಕಿಂತ ಹೆಚ್ಚು ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳಿವೆ.

26. ISM ಅನ್ನು ವಿಸ್ತರಿಸಿ.

ISM ಎಂದರೆ ಭಾರತೀಯ ಔಷಧ ಪದ್ಧತಿಯು ಆರು ಪದ್ಧತಿಯನ್ನು ಒಳಗೊಂಡಿದೆ.

27. ಪವನಶಕ್ತಿ ಎಂದರೇನು?

ಗಾಳಿಯು ಬೀಸುವ ವೇಗಕ್ಕನುಗುಣವಾಗಿ ಗಾಳಿಯಂತಕ್ಕೆ ಅಳವಡಿಸಿದ ರೆಕ್ಕೆಗಳು ತಿರುಗುವ ಮೂಲಕ ವಿದ್ಯುತ್‌ ಉತ್ಪಾದನೆಯಾಗುತ್ತದೆ.

28. ಸೌರಶಕ್ತಿ ಎಂದರೇನು?

ಸಸ್ಯಗಳು ದ್ಯುತಿಸಂಶ್ಲೇಷಣಾ ಕ್ರಿಯೆಗಾಗಿ ಸೌರಶಕ್ತಿಯನ್ನು ಬಳಸುತ್ತವೆ. ಫೋಟೋವೋಲ್ಟಾಯಿಕ್‌ ಕೋಶಗಳು ಸೂರ್ಯನ ಶಕ್ತಿಯನ್ನು ವಿದ್ಯುತ್‌ಶಕ್ತಿಯಾಗಿ ಪರಿವರ್ತಿಸುತ್ತವೆ.

29. ಭಾರತದಲ್ಲಿನ ಪರಮಾಣು ಶಕ್ತಿ ಕೇಂದ್ರಗಳನ್ನು ಹೆಸರಿಸಿ.

ತಾರಾಪುರ, ರಾಣ ಪ್ರತಾಪ ಸಾಗರ, ಕಲ್ಪಕಂ, ನರೋರ.

30. ಸಾಂಕ್ರಾಮಿಕ ರೋಗಗಳಾವುವು?

ಸಾಂಕ್ರಾಮಿಕ ರೋಗಗಳೆಂದರೆ ಕ್ಷಯರೋಗಗಳು, HIV ಇತ್ಯಾದಿ. ಮಲೇರಿಯಾ, ವಾಂತಿಭೇದಿ

31. ದೇಶದಲ್ಲಿ ಸುಮಾರು ಎಷ್ಟು ಮಕ್ಕಳು ಅಪೌಷ್ಠಿಕತೆ ಮತ್ತು ರೋಗ ನಿರೋಧಕ ಚುಚ್ಚುಮದ್ದಿನ ಅಸಮರ್ಪಕ ಪೂರೈಕೆಯಿಂದಾಗಿ ಸಾಯುತ್ತಿದ್ದಾರೆ.

ಸುಮಾರು 2.2 ದಶಲಕ್ಷ ಮಕ್ಕಳು ಅಪೌಷ್ಠಿಕತೆ ಮತ್ತು ರೋಗ ನಿರೋಧಕ ಚುಚ್ಚುಮದ್ದಿನ ಅಸಮರ್ಪಕ ಪೂರೈಕೆಯಿಂದಾಗಿ ಸಾಯುತ್ತಿದ್ದಾರೆ.

32. ASHA ವಿಸ್ತರಿಸಿ.

ASHA – ವಿಶ್ವಾಸಾರ್ಹವಾದ ಸಾಮಾಜಿಕ ಆರೋಗ್ಯ ಸಾಹಸಿ.

33. ಮೂಲಸೌಕರ್ಯ ಮತ್ತು ಉತ್ಪಾದನೆಯ ನಡುವಣ ಸಂಬಂಧವೇನು?

ಮೂಲಸೌಕರ್ಯ ಹೆಚ್ಚಾದಂತೆ ಉತ್ಪಾದಕತೆ ಹೆಚ್ಚುತ್ತದೆ ಮತ್ತು ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಮೂಲಸೌಕರ್ಯ ಮತ್ತು ಉತ್ಪಾದನೆಯ ನಡುವೆ ಪ್ರತ್ಯಕ್ಷ ಸಂಬಂಧವಿದೆ.

FAQ :

1. ಮೂಲಸೌಕರ್ಯ ಎಂದರೇನು?

ಆರ್ಥಿಕತೆಯ ಕಾರ್ಯಾಚರಣೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಸೌಲಭ್ಯಗಳು, ಚಟುವಟಿಕೆಗಳು ಮತ್ತು ಸೇವೆಗಳನ್ನು ಮೂಲಸೌಕರ್ಯ ಎನ್ನುವರು.

1. ಆರೋಗ್ಯ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಿಂದುಳಿದಿರುವ 4 ರಾಜ್ಯಗಳನ್ನು ಹೆಸರಿಸಿ.

ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *