ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಉದ್ಯೋಗ : ಬೆಳವಣಿಗೆ ಮಾಹಿತಿ ಮತ್ತು ಇತರ ಸಮಸ್ಯೆಗಳು ನೋಟ್ಸ್‌ | 1st Puc Economics Chapter 7 Notes

ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಉದ್ಯೋಗ : ಬೆಳವಣಿಗೆ ಮಾಹಿತಿ ಮತ್ತು ಇತರ ಸಮಸ್ಯೆಗಳು ನೋಟ್ಸ್‌ ಪ್ರಶ್ನೋತ್ತರಗಳು, 1st Puc Economics Chapter 7 Notes in Kannada Kseeb Solutions For Class 11 Economics Chapter 7 Notes 1st Puc Economics 7th Lesson Notes Question Answer Karnataka 1st PUC Economics Chapter 7 Employment-Growth, Informalisation and Other Issues in Kannada Udyoga Belavanige Mahiti Mattu itara Samasyegalu Notes

 

1. ಶ್ರಮಿಕನೆಂದರೆ ಯಾರು ?

ತಮ್ಮ ತಮ್ಮ ಸಾಮರ್ಥ್ಯದ (ಹೆಚ್ಚು ಅಥವಾ ಕಡಿಮೆಯಿರಬಹುದು) ಆಧಾರದ ಮೇಲೆ ಆರ್ಥಿಕ ಚಟುವಟಿಕೆಯಲ್ಲಿ ತೊಡಗುವವರನ್ನು ಶ್ರಮಿಕರೆಂದು ಕರೆಯಲಾಗುತ್ತದೆ.

2. ಶ್ರಮಿಕ – ಜನಸಂಖ್ಯೆಯ ಅನುಪಾತವನ್ನು ವ್ಯಾಖ್ಯಾನಿಸಿ?

ಭಾರತದ ಒಟ್ಟು ಶ್ರಮಿಕರನ್ನು ಭಾರತದ ಒಟ್ಟು ಜನಸಂಖ್ಯೆಯಿಂದ ಭಾಗಿಸಿ ಅದನ್ನು 100 ರಿಂದ ಗುಣಿಸಿದರೆ ಶ್ರಮಿಕ – ಜನಸಂಖ್ಯೆಯ ಅನುಪಾತವಾಗಿದೆ..

3. ಈ ಕೆಳಗಿನವರು ಶ್ರಮಿಕರೇ? ಏಕೆ?

ಭಿಕ್ಷುಕ, ಕಳ್ಳ, ಕಳ್ಳವ್ಯಾಪಾರಿ, ಜೂಜುಕೋರ, ಭಿಕ್ಷುಕ, ಕಳ್ಳ, ಕಳ್ಳವ್ಯಾಪಾರಿ ಮತ್ತು ಜೂಜುಕೋರರು ಶ್ರಮಿಕರಲ್ಲ. ಏಕೆಂದರೆ, ಅವರು ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ. ಆದ್ದರಿಂದ ಇವರನ್ನು ಶ್ರಮಿಕರು ಎಂದೂ ಪರಿಗಣಿಸಲು ಸಾಧ್ಯವಿಲ್ಲ.

4. ರಾಜು ಶಾಲೆಗೆ ಹೋಗುತ್ತಿದ್ದಾನೆ. ಅವನು ಶಾಲೆಯಲ್ಲಿ ಇಲ್ಲದಿದ್ದಾಗ ನೀವು ಅವನನ್ನು ಅವನ ಹೊಲದಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡುವಿರಿ. ಅವನನ್ನು ಶ್ರಮಿಕನೆಂದು ಪರಿಗಣಿಸಲು ಸಾಧ್ಯವೇ? ಏಕೆ?

ರಾಜು, ಹೊಲದಲ್ಲಿ ಕೆಲಸ ಮಾಡುತ್ತಿದ್ದು ಉತ್ಪಾದನೆಗೆ ಕೊಡುಗೆ ನೀಡುತ್ತಿರುತ್ತಾನೆ. ಆದರೆ ಅವನ ಕೆಲಸಕ್ಕೆ ಕೂಲಿ ಪಡೆಯುವುದಿಲ್ಲ. ಆತ ಕೃಷಿಯಲ್ಲಿ ತನ್ನ ಪೋಷಕರಿಗೆ ಸಹಾಯ ಮಾಡುತ್ತಿರುತ್ತಾನೆ. ಅವನಿಗೆ ಯಾವುದೇ ಕೂಲಿ ನೀಡದೇ ಇರುವುದರಿಂದ ಅವನು ಕೂಲಿ ಶ್ರಮಿಕನಲ್ಲ.

5. ನಗರದ ಮಹಿಳೆಯರಿಗೆ ಹೋಲಿಸಿದಾಗ ಗ್ರಾಮೀಣ ಮಹಿಳೆಯರೆ ಹೆಚ್ಚಾಗಿ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ. ಏಕೆ?

ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ ಸ್ಥಿತಿಗತಿಗಳು ಮಹಿಳೆಯರನ್ನು ಮನೆಯಲ್ಲಿರುವಂತೆ ಒತ್ತಾಯಿಸುವುದಿಲ್ಲ. ಸ್ತ್ರೀಯರಿಗೆ ಹೋಲಿಸಿದರೆ ಪುರುಷರೇ ಹೆಚ್ಚು ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ನಗರ ಪ್ರದೇಶಗಳಲ್ಲಿ ಪ್ರತಿ 100 ನಗರ ಮಹಿಳೆಯರಿಗೆ ಕೇವಲ 15 ಮಹಿಳೆಯರು ಮಾತ್ರ ಕೆಲವು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ 25 ಮಹಿಳೆಯರು ಉದ್ಯೋಗದ ಮಾರುಕಟ್ಟೆಯಲ್ಲಿ ಭಾಗವಹಿಸುವರು. ನಗರ ಪ್ರದೇಶಗಳಲ್ಲಿ ಪುರುಷರು ಹೆಚ್ಚು ಆದಾಯವನ್ನು ಸಂಪಾದಿಸುತ್ತಾರೋ ಅಂತಹ ಕುಟುಂಬಗಳಲ್ಲಿ ಮಹಿಳೆಯರು ಹೊಸದಾಗಿ ಉದಯವಾಗುತ್ತಿರುವ ಉದ್ಯೋಗಗಳು ಹೆಚ್ಚಾಗಿ ವಲಯದಲ್ಲಿ ಕಂಡುಬರುತ್ತದೆ

6. ರಾಜು ಶಾಲೆಗೆ ಹೋಗುತ್ತಿದ್ದಾನೆ. ಅವನು ಶಾಲೆಯಲ್ಲಿ ಇಲ್ಲದಿದ್ದಾಗ ನೀವು ಅವನನ್ನು ಅವನ ಹೊಲದಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡುವಿರಿ, ಅವನನ್ನು ಶ್ರಮಿಕನೆಂದು ಪರಿಗಣಿಸಲು ಸಾಧ್ಯವೇ? ಏಕೆ?

ರಾಜು, ಹೊಲದಲ್ಲಿ ಕೆಲಸ ಮಾಡುತ್ತಿದ್ದು ಉತ್ಪಾದನೆಗೆ ಕೊಡುಗೆ ನೀಡುತ್ತಿರುತ್ತಾನೆ. ಆದರೆ ಅವನ ಕೆಲಸಕ್ಕೆ ಕೂಲಿ ಪಡೆಯುವುದಿಲ್ಲ. ಆತ ಕೃಷಿಯಲ್ಲಿ ತನ್ನ ಪೋಷಕರಿಗೆ ಸಹಾಯ ಮಾಡುತ್ತಿರುತ್ತಾನೆ. ಅವನಿಗೆ ಯಾವುದೇ ಕೂಲಿ ನೀಡದೇ ಇರುವುದರಿಂದ ಅವನು ಕೂಲಿ ಶ್ರಮಿಕನಲ್ಲ.

7. ನಗರದ ಮಹಿಳೆಯರಿಗೆ ಹೋಲಿಸಿದಾಗ ಗ್ರಾಮೀಣ ಮಹಿಳೆಯರೆ ಹೆಚ್ಚಾಗಿ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ. ಏಕೆ?

ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ ಸ್ಥಿತಿಗತಿಗಳು ಮಹಿಳೆಯರನ್ನು ಮನೆಯಲ್ಲಿರುವಂತೆ ಒತ್ತಾಯಿಸುವುದಿಲ್ಲ. ಸ್ತ್ರೀಯರಿಗೆ ಹೋಲಿಸಿದರೆ ಪುರುಷರೇ ಹೆಚ್ಚು ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ನಗರ ಪ್ರದೇಶಗಳಲ್ಲಿ ಪ್ರತಿ 100 ನಗರ ಮಹಿಳೆಯರಿಗೆ ಕೇವಲ 15 ಮಹಿಳೆಯರು ಮಾತ್ರ ಕೆಲವು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಗ್ರಾಮಾಂತರ ಪ್ರದೇಶಗಳಲ್ಲಿ 25 ಮಹಿಳೆಯರು ಉದ್ಯೋಗದ ಮಾರುಕಟ್ಟೆಯಲ್ಲಿ ಭಾಗವಹಿಸುವರು. ನಗರ ಪ್ರದೇಶಗಳಲ್ಲಿ ಪುರುಷರು ಹೆಚ್ಚು ಆದಾಯವನ್ನು ಸಂಪಾದಿಸುತ್ತಾರೋ ಅಂತಹ ಕುಟುಂಬಗಳಲ್ಲಿ ಮಹಿಳೆಯರು ಕೆಲಸ ಮಾಡುವುದನ್ನು ಪ್ರೋತ್ಸಾಹಿಸುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸಂಖ್ಯೆಯ ಮಹಿಳೆಯರು ಭೂರಹಿತ ಕಾರ್ಮಿಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದು ಅವರ ಜೀವನ ಮಟ್ಟವು ತುಂಬಾ ಕೆಳಮಟ್ಟದಲ್ಲಿರುವುದರಿಂದ ಮಹಿಳೆಯರು ಕೆಲಸಕ್ಕೆ ಹೆಚ್ಚಾಗಿ ಹೋಗುತ್ತಾರೆ.

8. ಮೀನಾಕ್ಷಿ ಒಬ್ಬ ಗೃಹಿಣಿ. ಮನೆಯ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಅವಳು ತನ್ನ ಗಂಡ ನಡೆಸುವ ಸ್ವಂತ ಬಟ್ಟೆ ಅಂಗಡಿಯಲ್ಲೂ ಕೆಲಸ ಮಾಡುತ್ತಾಳೆ. ಅವಳನ್ನು ಶ್ರಮಿಕಳೆಂದು ಪರಿಗಣಿಸಲು ಸಾಧ್ಯವೇ? ಏಕೆ?

ತನ್ನ ಗಂಡ ನಡೆಸುವ ಸ್ವಂತ ಬಟ್ಟೆ ಅಂಗಡಿಯ ಕೆಲಸವನ್ನು ಮಾಡುವ ಮೀನಾಕ್ಷಿಯನ್ನು ಶ್ರಮಿಕಳೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅವಳ ಸೇವೆಗೆ ಪ್ರತಿಫಲ ದೊರೆಯುತ್ತಿಲ್ಲ. ಅವಳ ಗಂಡನ ಆದಾಯವು ಮಿಶ್ರ ಆದಾಯವಾಗಿದ್ದು ಅದರಲ್ಲು ಅವಳ ಶ್ರಮವು ಸೇರಿದೆ.

ಆದರೆ ಮೀನಾಕ್ಷಿಯೂ ಬೇರೆಯ ಮಾಲೀಕರ ಹತ್ತಿರ ಕೆಲಸ ಮಾಡಿದ್ದರೆ ಆಕೆಯ ಸೇವೆಗೆ ತಕ್ಕ ಸಂಬಳ / ವೇತನ ದೊರೆಯುತ್ತಿತ್ತು. ಆಗ ಮೀನಾಕ್ಷಿಯನ್ನು ಶ್ರಮಿಕಳೆಂದು ಪರಿಗಣಿಸಬಹುದು

9. ಏಕೆ ನಿಯಮಿತ ಸಂಬಳ ಪಡೆಯುವ ಕಾರ್ಮಿಕರು ಗ್ರಾಮೀಣ ಪ್ರದೇಶಗಳಿಗಿ೦ತ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದ್ದಾರೆ?

ಬೇರೆಯವರ ಹೊಲದಲ್ಲಿ ಮತ್ತು ಕೃಷಿಯೇತರ ಉದ್ದಿಮೆಯಲ್ಲಿ ಕೆಲಸ ಮಾಡುವ ಮತ್ತು ಪ್ರತಿಫಲವಾಗಿ ನಿಯಮಿತವಾಗಿ ಸಂಬಳ ಮತ್ತು ಕೂಲಿಯನ್ನು ಪಡೆಯುವವರನ್ನು ನಿಯಮಿತ ವೇತನ ಶ್ರಮಿಕರು ಎನ್ನುವರು. ಅವರು ಪೂರ್ಣಕಾಲಿಕ ಮತ್ತು ಅರೆಕಾಲಿಕವಾಗಿ, ಕೂಲಿ ಪಡೆಯುವ ಮತ್ತು ಸಂಬಳ ಸಹಿತ ತರಬೇತಿ ನಿರತರನ್ನು ಒಳಗೊಂಡಿರುತ್ತದೆ.

ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ನಿಯಮಿತ ಸಂಬಳ ಪಡೆಯುವ ಕಾರ್ಮಿಕರು ಹೆಚ್ಚಾಗಿರುವುದಕ್ಕೆ ಕಾರಣವೇನೆಂದರೆ, ಸರ್ಕಾರಿ ಕಛೇರಿಗಳು, ಆಫೀಸ್‌ಗಳು, ಖಾಸಗಿ ಕಂಪನಿಗಳು, ಶಾಲಾ – ಕಾಲೇಜುಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗಿರುವುದರಿಂದ ಇದರಲ್ಲಿರುವ ಕಾರ್ಮಿಕರು ಸಹ ನಿಯಮಿತ ಸಂಬಳ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ.

10. ಏಕೆ ನಿಯಮಿತ ಸಂಬಳ ಉದ್ಯೋಗದಲ್ಲಿ ಹೆಂಗಸರು ಕಡಿಮೆ ಕಂಡುಬರುತ್ತಾರೆ.

ಸಾಮಾನ್ಯ ಕೂಲಿ ಕೆಲಸವು ಪುರುಷ ಮತ್ತು ಮಹಿಳೆಯರಿಬ್ಬರಿಗೂ ಜೀವನಾಧಾರದ ಎರಡನೇ ಮುಖ್ಯ ಮೂಲವಾಗಿದೆ. ವೇತನ ನಡೆಯುವ ಉದ್ಯೋಗಕ್ಕೆ ಬಂದಾಗ ಪುರುಷರೇ ಹೆಚ್ಚು ಪ್ರಮಾಣದಲ್ಲಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಇವರು ಶೇ.20ರಷ್ಟಿದ್ದರೆ, ಮಹಿಳೆಯ ಪ್ರಮಾಣ ಶೇ.13 ರಷ್ಟಿದೆ. ವೇತನಾಧಾರಿತ ಉದ್ಯೋಗಗಳಿಗೆ ಕೌಶಲ್ಯತೆ ಮತ್ತು ಹೆಚ್ಚಿನ ಮಟ್ಟದ ಶಿಕ್ಷಣದ ಅವಶ್ಯಕತೆಯಿರುವ ಕಾರಣದಿಂದಾಗಿ ಮಹಿಳೆಯರು ಉದ್ಯೋಗದಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಲು ಸಾಧ್ಯವಾಗಿಲ್ಲ.

11. ಭಾರತದಲ್ಲಿ ವಲಯವಾರು ಕ್ರಮಬಲದ ವಿತರಣೆಯ ಇತ್ತೀಚಿನ ಪ್ರವೃತ್ತಿಗಳನ್ನು ವಿಶ್ಲೇಷಿಸಿ.

ರಾಷ್ಟ್ರದ ಆರ್ಥಿಕಾಭಿವೃದ್ಧಿಯ ಪಥದಲ್ಲಿ ಶ್ರಮವು ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಿಂದ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಕ್ಕೆ ಸ್ಥಾನಪಲ್ಲಟಗೊಳ್ಳುವುದು. ಒಂದು ದೇಶದ ಉದ್ಯೋಗ ರಚನೆಯು ಕಾರ್ಮಿಕರನ್ನು ವಿವಿಧ ವೃತ್ತಿಗನುಸಾರವಾಗಿ ಆರ್ಥಿಕ ಚಟುವಟಿಕೆಗಳಿಗನುಸಾರವಾಗಿ ವಿಂಗಡಿಸುವುದಾಗಿದೆ. ಅವುಗಳೆಂದರೆ :

ಪ್ರಾಥಮಿಕ ವಲಯ : ಕೃಷಿ, ಆರಣ್ಯ, ಮೀನುಗಾರಿಕೆ, ಗಣಿಗಾರಿಕೆ ಇತ್ಯಾದಿ.

ದ್ವಿತೀಯ ವಲಯ : ತಯಾರಿಕಾ ಉತ್ಪಾದನೆ, ವಿದ್ಯುಚ್ಛಕ್ತಿ, ಕಟ್ಟಡ ನಿರ್ಮಾಣ ಇತ್ಯಾದಿ.

ಸೇವಾ ವಲಯ : ವ್ಯಾಪಾರ, ಸಾರಿಗೆ ಮತ್ತು ಸಂಗ್ರಹಣೆ, ಸೇವೆಗಳು, 2011 – 12ರ ಪ್ರಕಾರ ಭಾರತದಲ್ಲಿ ಬಹುಸಂಖ್ಯಾತ ಕೆಲಸಗಾರರಿಗೆ ಪ್ರಾಥಮಿಕ ವಲಯವು ಶೇ. 49ರಷ್ಟು ಉದ್ಯೋಗದ ಪ್ರಮುಖ ಮೂಲವಾಗಿದೆ. ದ್ವಿತೀಯ ವಲಯ ಕೇವಲ ಶೇ. 24ರಷ್ಟು ಶ್ರಮಬಲಕ್ಕೆ ಉದ್ಯೋಗವನ್ನು ನೀಡುವುದು. ಶೇ.27ರಷ್ಟು ಶ್ರಮಿಕರು ಸೇವಾ ವಲಯದಲ್ಲಿದ್ದಾರೆ. ಶೇ. 64ರಷ್ಟು ಗ್ರಾಮೀಣ ಭಾರತದ ಶ್ರಮಬಲವು ಕೃಷಿ, ಅರಣ್ಯ ಮತ್ತು ಮೀನುಗಾರಿಕೆಯನ್ನು ಅವಲಂಬಿಸಿದೆ. ಶೇ . 20ರಷ್ಟು ಗ್ರಾಮೀಣ ಕೆಲಸಗಾರರು ತಯಾರಿಕಾ ಕೈಗಾರಿಕೆಗಳಲ್ಲಿ, ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರುತ್ತಾರೆ. ಸೇವಾ ವಲಯವು ಶೇ. 16 ರಷ್ಟು ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗವನ್ನು ನೀಡಿದೆ. ಶೇ.ರಷ್ಟು 20ರಷ್ಟು ಜನರಿಗೆ ದ್ವಿತೀಯ ವಲಯದಲ್ಲಿ ನಿರತರಾಗಿರುತ್ತದೆ.

ಪ್ರಾಥಮಿಕ ವಲಯದಲ್ಲಿ ಪುರುಷ ಮತ್ತು ಮಹಿಳಾ ಶ್ರಮಿಕರೀರ್ವರ ಸಾಂಧೀಕರಣವಿದ್ದರೂ, ಇಲ್ಲಿ ಮಹಿಳಾ ಕೆಲಸಗಾರರ ಸಾಂದ್ರೀಕರಣ ಹೆಚ್ಚಾಗಿದೆ. ಪ್ರಾಥಮಿಕ ವಲಯದಲ್ಲಿ ಶೇ.63ರಷ್ಟು ಮಹಿಳಾ ಶ್ರಮಬಲವು ಉದ್ಯೋಗದಲ್ಲಿದ್ದರೆ ಅದರ ಅರ್ಧಕ್ಕಿಂತ ಕಡಿಮೆ ಪುರುಷ ಶ್ರಮಿಕರು ಇದೇ ವಲಯದಲ್ಲಿದ್ದಾರೆ. ಪುರುಷ ದ್ವಿತೀಯ ಮತ್ತು ಸೇವಾ ವಲಯಗಳೆರೆಡೆರಲ್ಲೂ ಉದ್ಯೋಗಾವಕಾಶಗಳನ್ನು ಪಡೆಯುವರು.

12, 1970ಕ್ಕೆ ಹೋಲಿಸಿದಾಗ ವಿವಿಧ ಕೈಗಾರಿಕೆಗಳಲ್ಲಿನ ಶ್ರಮಬಲದ ಹಂಚಿಕೆಯಲ್ಲಿ ಅಷ್ಟೇನು ಬದಲಾವಣೆಗಳಾಗಿಲ್ಲ. ವಿಮರ್ಶಿಸಿ.

ಭಾರತ ಒಂದು ಕೃಷಿಯಾಧಾರಿತ ದೇಶ ಜನಸಂಖ್ಯೆಯ ಬಹುಭಾಗ ಗ್ರಾಮಿಣ ಭಾಗಗಳಲ್ಲಿ ವಾಸವಾಗಿದ್ದಾರೆ ಮತ್ತು ಕೃಷಿಯೇ ಅವರ ಜೀವನಾಧಾರದ ಮುಖ್ಯ ಕಸುವಾಗಿದೆ. ಭಾರತವು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಭಿವೃದ್ಧಿಯ ತಂತ್ರಗಳು ಕೃಷಿಯ ಮೇಲಿನ ಅವಲಂಬಿತ ಜನರ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದವು.

ಕೈಗಾರಿಕಾ ವಲಯಗಳಿಂದಾದ ಶ್ರಮಬಲದ ಹಂಚಿಕೆಯು ಕೃಷಿ ಕೆಲಸಗಳಿಂದ ಕೃಷಿಯೇತರ ಕೆಲಸಗಳಿಗೆ ಆದ ಗಣನೀಯ ಪಲ್ಲಟವನ್ನು ತೋರಿಸುತ್ತದೆ. 1972 73ರಲ್ಲಿ ಶೇ.74ರಷ್ಟು ಶ್ರಮಬಲವು ಪ್ರಾಥಮಿಕ ವಲಯದಲ್ಲಿ ತೊಡಗಿದ್ದರೆ, 2011 12ರಲ್ಲಿ ಅದರ ಪ್ರಮಾಣ ಶೇ.50ಕ್ಕೆ ಕುಸಿಯಿತು. ದ್ವಿತೀಯ ಮತ್ತು ಸೇವಾ ವಲಯಗಳು ಶೇ.11ರಿಂದ ಶೇ.24ಕ್ಕೆ ಮತ್ತು ಶೇ.15ರಿಂದ ಶೇ.27ಕ್ಕೆ ಹೆಚ್ಚಳವಾಗಿದೆ.

(1972 ವಿವಿಧ ಸ್ಥಾನಮಾನಗಳ ಶ್ರಮಬಲದ ಹಂಚಿಕೆಯು ಕಳೆದ ನಾಲ್ಕು ದಶಕಗಳಲ್ಲಿ 2012) .ಜನರು ಸ್ವ – ಉದ್ಯೋಗ ಮತ್ತು ನಿಯಮಿತ ಸಂಬಳದ ಉದ್ಯೋಗಗಳಿಂದ ದಿನಗೂಲಿ ಕೆಲಸಕ್ಕೆ ಚಲಿಸಿರುವುದನ್ನು ಸೂಚಿಸುತ್ತದೆ. ಆದಾಗ್ಯೂ, ಉದ್ಯೋಗ ನೀಡುವುದನ್ನು ಮುಂದುವರೆಸುತ್ತಿರುವ ಸ್ವ – ಉದ್ಯೋಗ ಕ್ಷೇತ್ರವು ಪ್ರಮುಖವಾದುದಾಗಿದೆ. ತಜ್ಞರು ಸ್ವ – ಉದ್ಯೋಗ ಮತ್ತು ನಿಯಮಿತ ಸಂಬಳದ ಉದ್ಯೋಗಗಳಿಂದ ದಿನಗೂಲಿ ಕೆಲಸಕ್ಕೆ ಸಾಗುವ ಈ ಪ್ರಕ್ರಿಯೆಯನ್ನು “ಶ್ರಮಬಲದ ಅನಿಶ್ಚಿತತೆ” ಎಂದು ಕರೆಯುವರು.

13. ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ ಉದ್ಯೋಗ ಸೃಷ್ಟಿಯು ರಾಷ್ಟ್ರದ GDP ಬೆಳವಣಿಗೆಗೆ ತಕ್ಕದ್ದಾಗಿದೆ ಎಂದು ನೀವು ಯೋಚಿಸುವಿರಾ? ಹೇಗೆ?

1950 – 2010ರ ಅವಧಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP)ದ ಬೆಳವಣಿಗೆ ಧನಾತ್ಮಕವಾಗಿತ್ತು ಮತ್ತು ಉದ್ಯೋಗದ ಬೆಳವಣಿಗೆಗಿಂತ ಹೆಚ್ಚಾಗಿತ್ತು. ಈ ಅವಧಿಯಲ್ಲಿ ಉದ್ಯೋಗ ಬೆಳವಣಿಗೆಯ ದರ ಶೇ.2 ಕ್ಕಿಂತ ಹೆಚ್ಚಾಗಿಲ್ಲ. 1990ರ ದಶದಲ್ಲಿ ಉದ್ಯೋಗದ ಬೆಳವಣಿಗೆ ಕುಸಿಯಲು ಪ್ರಾರಂಭಿಸಿ, ಭಾರತದಲ್ಲಿದ್ದ ಯೋಜನಾ ಪೂರ್ವ ಹಂತದ ಬೆಳವಣಿಗೆಯ ಮಟ್ಟವನ್ನು ತಲುಪಿತು. ಈ ವರ್ಷಗಳಲ್ಲಿ GDP ಮತ್ತು ಉದ್ಯೋಗದ ಬೆಳವಣಿಗೆಗಳ ನಡುವೆಯಿದ್ದ ಅಗಾಧ ಅಂತರವಾಗಿದೆ. ತಜ್ಞರು ಈ ವಿದ್ಯಮಾನವನ್ನು “ಉದ್ಯೋಗರಹಿತ ಬೆಳವಣಿಗೆ’ ಎಂದು ಕರೆಯುತ್ತಾರೆ.

14. ಔಪಚಾರಿಕ ವಲಯಕ್ಕಿಂತ ಅನೌಪಚಾರಿಕ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗುವ ಅವಶ್ಯಕತೆಯಿದೆಯೇ? ಏಕೆ?

ಅನೌಪಚಾರಿಕ ವಲಯದ ಕಾರ್ಮಿಕರು ಮತ್ತು ಉದ್ಯಮಗಳು ನಿಯಮಿತ ಆದಾಯವನ್ನು ಪಡೆಯುತ್ತಿಲ್ಲ. ಅವರು ಸರ್ಕಾರದಿಂದ ಯಾವುದೆ ರಕ್ಷಣೆಯನ್ನು ಮತ್ತು ನಿಯಮಗಳನ್ನು ಹೊಂದಿಲ್ಲ. ಯಾವುದೇ ಪರಿಹಾರವಿಲ್ಲದೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಅನೌಪಚಾರಿಕ ವಲಯದ ಉದ್ಯಮಗಳಲ್ಲಿ ಬಳಸುವ ತಂತ್ರಜ್ಞಾನ ಹಳೆಯದಾಗಿದೆ. ಯಾವುದೇ ಲೆಕ್ಕಪತ್ರವನ್ನು ಇಡುವುದಿಲ್ಲ. ಇತ್ತೀಚೆಗೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO)ಯ ಪ್ರಯತ್ನಗಳಿಂದಾಗಿ ಭಾರತ `ಸರ್ಕಾರ ಅನೌಪಚಾರಿಕ ಉದ್ಯಮಗಳ ಆಧುನೀಕರಣ ಮತ್ತು ಅನೌಪಚಾರಿಕ ವಲಯದ ಶ್ರಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕೈಗೊಂಡಿದೆ.

15. ವಿಕ್ಟರ್ ದಿನದಲ್ಲಿ 2 ಗಂಟೆಗಳ ಕಾಲ ಮಾತ್ರ ಕೆಲಸ ಪಡೆಯಬಲ್ಲನು. ದಿನದ ಉಳಿದ ಸಮಯದಲ್ಲಿ ಅವನು ಕೆಲಸನವನ್ನು ಹುಡುಕುತ್ತಾನೆ. ಅವನು ನಿರುದ್ಯೋಗಿಯೇ? ಯಾಕೆ? ವಿಕ್ಟರ್‌ನಂತಹ ವ್ಯಕ್ತಿಗಳು ಯಾವ ಉದ್ಯೋಗವನ್ನು ಮಾಡುತ್ತಿರುವರು?

ವಿಕ್ಟರ್ ದಿನದಲ್ಲಿ 2 ಗಂಟೆಗಳ ಕಾಲ ಮಾತ್ರ ಕೆಲಸ ಪಡೆಯಬಲ್ಲನು. ದಿನದ ಉಳಿದ ಸಮಯದಲ್ಲಿ ಅವನು ಕೆಲಸವನ್ನು ಹುಡುಕುತ್ತಾನೆ. ಎಕ್ಟರ್‌ನನ್ನು ತಾತ್ಕಾಲಿಕ ದಿನಗೂಲಿ ಕಾರ್ಮಿಕ ಎಂದು ಕರೆಯಲಾಗುವುದು. ಅವನನ್ನು ಅರೆ ಉದ್ಯೋಗಿಯೆಂದು ಕರೆಯಬಹುದು. ಭಾರತದಲ್ಲಿ ಒಟ್ಟು ಶ್ರಮಶಕ್ತಿಯಲ್ಲಿ ಶೇ. 33 ರಷ್ಟು ದಿನಗೂಲಿ ಕಾರ್ಮಿಕರನ್ನು ಒಳಗೊಂಡಿದೆ.

16. ನೀವು ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದೀರಿ ಎಂದು ಭಾವಿಸಿ. ಒಂದು ವೇಳೆ ಹಳ್ಳಿಯ ಪಂಚಾಯಿತಿಗೆ ಉದ್ಯೋಗ ಸೃಷ್ಟಿಯೊಂದಿಗೆ ಹಳ್ಳಿಯ ಸುಧಾರಣೆಗೆ ನಿಮ್ಮ ಸಲಹೆ ಯನ್ನು ಕೇಳಿದರೆ ನೀವು ಯಾವ ಬಗೆಯ ಚಟುವಟಿಕೆಗಳನ್ನು ಸೂಚಿಸುತ್ತೀರಾ?

ನಾವು ಕೇವಲ ಉದ್ಯೋಗಗಳನ್ನು ಕಲ್ಪಿಸುವ ಕಾರ್ಯಕ್ರಮಗಳಲ್ಲಿದೆ ಪ್ರದೇಶದಲ್ಲಿ ಸೇವೆಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ಸೂಚಿಸುತ್ತೇವೆ. ಅವುಗಳೆಂದರೆ : ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ, ಗ್ರಾಮೀಣ ವಸತಿ, ಗ್ರಾಮೀಣ ಕುಡಿಯುವ ನೀರು ಮತ್ತು ಪೌಷ್ಟಿಕಾಂಶ ಇತ್ಯಾದಿ. ಈ ಚಟುವಟಿಕೆಗಳು ಗ್ರಾಮವನ್ನು ಅಭಿವೃದ್ಧಿ ಪಡಿಸುವುದಲ್ಲದೆ ಉದ್ಯೋಗಾವಕಾಶಗಳನ್ನು ಸಹ ಹೆಚ್ಚಿಸುತ್ತದೆ.

17. ದಿನಗೂಲಿ ಕೆಲಸಗಾರರೆಂದರೆ ಯಾರು?

ಕರೆ ಮತ್ತು ಸಾಂಧರ್ಭಿಕ ಆಧಾರಿತ ಕೆಲಸ ಮೇಲೆ ಮಾಡುವವರನ್ನು ದಿನಗೂಲಿ ಕೆಲಸಗಾರರೆನ್ನುತ್ತಾರೆ. ಈ ವಿಭಾಗದಲ್ಲಿ ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣದ ಕಾರ್ಮಿಕರು, ಗೃಹ ಕೆಲಸಗಾರರು, ದುರಸ್ತಿ ಮಾಡುವವರು ಇತ್ಯಾದಿ ಒಳಗೊಂಡಿದ್ದಾರೆ.

18. . ಶ್ರಮಿಕನೊಬ್ಬನು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿರುವನೆ ಎಂಬುದನ್ನು ನೀವು ಹೇಗೆ ತಿಳಿಯುವಿರಿ.

ಅನೌಪಚಾರಿಕ ವಲಯದ ಕಾರ್ಮಿಕರು ನಿಯಮಿತ ಆದಾಯವನ್ನು ಪಡೆಯುತ್ತಿಲ್ಲ. ಈ ವಲಯದ ಕಾರ್ಮಿಕರುಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳು, ನಿವೃತ್ತಿ ಮತ್ತು ರಜೆ ಸೌಲಭ್ಯಗಳಿರುವುದಿಲ್ಲ. ಕಾರ್ಮಿಕ ಕಾನೂನುಗಳು ಸಹ ಇವರನ್ನು ರಕ್ಷಿಸುವುದಿಲ್ಲ.

ಹೆಚ್ಚುವರಿ ಪ್ರಶ್ನೆಗಳು

1. ಕೆಲಸ ಎಂದರೇನು?

ಜನರು ಉತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕೆಲಸ ಎನ್ನುತ್ತಾರೆ.

2. ಆರ್ಥಿಕ ಚಟುವಟಿಕೆಗಳು ಎಂದರೇನು?

ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಕೊಡುಗೆ ನೀಡುವ ಚಟುವಟಿಕೆಗಳನ್ನು ಆರ್ಥಿಕ ಚಟುವಟಿಕೆಗಳು ಎಂದು ಕರೆಯಲಾಗುತ್ತದೆ.

3. ಜನರು ಏಕೆ ಕೆಲಸಮಾಡುತ್ತಾರೆ?

ಕೆಲಸವು ಜೀವನಾಧಾರವಾಗಿದೆ. ಆಹಾರ, ಬಟ್ಟೆ, ವಸತಿ ಮುಂತಾದ ಜೀವನಾವಶ್ಯಕಗಳನ್ನು ಪಡೆಯುವಲ್ಲಿ ಇದು ಅವಶ್ಯಕವಾಗಿದೆ. ಇದು ಹಣಕಾಸು ಹಾಗೂ ಆಧ್ಯಾತ್ಮಿಕ ಪ್ರತಿಫಲಗಳನ್ನು ನೀಡುತ್ತದೆ. ಕೆಲಸವು ನಾವು ಹಾಗೂ ನಮ್ಮ ಅವಲಂಬಿತರು ಬಾಳಲು ಸಹಾಯಕಾರಿಯಾಗಿದೆ.

4. ದುಡಿಯುವ ಕಾರ್ಮಿಕರ ಅಧ್ಯಯನದ ಅವಶ್ಯಕತೆಗಳೇನು?

ಇದರಿಂದ ನಮ್ಮ ರಾಷ್ಟ್ರದಲ್ಲಿಯ ಉದ್ಯೋಗದ ಗುಣಮಟ್ಟ, ಪ್ರಮಾಣ, ಸ್ವರೂಪ ಹಾಗೂ ರಚನೆಯ ಬಗ್ಗೆ ತಿಳಿಸುತ್ತದೆ. ಇದರಿಂದ ನಮ್ಮ ಭೌಗೋಳಿಕ ಸಂಪನ್ಮೂಲಗಳನ್ನು ಅಂದಾಜು ಮತ್ತು ಬಳಕೆಗೆ ಸಹಾಯ ಮಾಡುತ್ತದೆ. ಯೋಜನೆಗಳನ್ನು ಸಿದ್ಧಪಡಿಸಲು ಮತ್ತು ರಾಷ್ಟ್ರೀಯ ವರಮಾನದಲ್ಲಿ ವಿವಿಧ ಕ್ಷೇತ್ರಗಳ ಪಾಲುಗಳ ಬಗ್ಗೆ ಮಾಹಿತಿ ನೀಡುತ್ತದೆ.

5. “ಆರ್ಥಿಕವಾಗಿ ಚುರುಕಾದ ಜನಸಂಖ್ಯೆ” ಎಂದು ಯಾರನ್ನು ಕರೆಯುವರು.

ಶ್ರಮಿಕ ಶಕ್ತಿಯನ್ನು ಮತ್ತು ಕಾರ್ಮಿಕ ಶಕ್ತಿಯನ್ನು ಆರ್ಥಿಕವಾಗಿ ಚುರುಕಾದ ಜನಸಂಖ್ಯೆ ಎನ್ನುವರು.

6. ಮಾನವನ ಸಮಗ್ರ ಚಟುವಟಿಕೆಗಳ ಎರಡು ವಿಧಗಳನ್ನು ಹೆಸರಿಸಿ.

1) ಆರ್ಥಿಕ ಚಟುವಟಿಕೆಗಳು

2) ಆರ್ಥಿಕೇತರ ಚಟುವಟಿಕೆಗಳು

7. ಉದ್ಯೋಗ ಎಂದರೇನು?

ಕಾರ್ಮಿಕರು ನಿರ್ವಹಿಸುವ ಕೆಲಸಗಳಿಗೆ ಉದ್ಯೋಗ ಎನ್ನುತ್ತಾರೆ.

8. ಜನಸಂಖ್ಯೆ ಎಂದರೇನು?

ಒಂದು ನಿರ್ದಿಷ್ಟ ಪ್ರದೇಶದಲ್ಲಿ, ಒಂದು ನಿರ್ದಿಷ್ಟ ಸಮಯದಲ್ಲಿ ವಾಸಿಸುವ ಜನರ ಒಟ್ಟು ಸಂಖ್ಯೆಯನ್ನು ಜನಸಂಖ್ಯೆ ಎಂದು ಕರೆಯುತ್ತಾರೆ.

9. ಶ್ರಮಶಕ್ತಿ ಎಂದರೇನು?

ಒಂದು ನಿಗಧಿ ಅವಧಿಯಲ್ಲಿ ಕೆಲಸವನ್ನು ಮಾಡುವ ಅಥವಾ ಕೆಲಸವನ್ನು ಹುಡುಕುವ ಮತ್ತು ಕೆಲಸಕ್ಕೆ ದೊರೆಯುವ ಜನರನ್ನು ಶ್ರಮಶಕ್ತಿ ಎಂದು ಕರೆಯುತ್ತಾರೆ.

10. ಶ್ರಮಿಕ – ಜನಸಂಖ್ಯಾ ಅನುಪಾತ ಎಂದರೇನು?

ಭಾರತದ ಒಟ್ಟು ಶ್ರಮಿಕರನ್ನು ಭಾರತದ ಒಟ್ಟು ಜನಸಂಖ್ಯೆಯಿಂದ ಭಾಗಿಸಿ ಅದನ್ನು 100ರಿಂದ ಗುಣಿಸಿದಾಗ ಬರುವ ಪ್ರಮಾಣವಾಗಿದೆ.

11. ಸ್ವ – ಉದ್ಯೋಗ ಎಂದರೇನು?

ವ್ಯಕ್ತಿಯು ಬೇರೆಯವರಿಗಾಗಿ ದುಡಿಯದೆ ಸ್ವಂತಕ್ಕಾಗಿ ದುಡಿಯುತ್ತಾನೆ.

12, ಸ್ವ – ಉದ್ಯೋಗಿ ಎಂದರೇನು?

ಯಾವ ವ್ಯಕ್ತಿಯು ಸ್ವಂತ ಸಂಸ್ಥೆಯನ್ನು ಮತ್ತು ವ್ಯವಹಾರದ ಘಟಕ ಮಾಲಿಕನಾಗಿ ತನ್ನ ಉಪ ಜೀವನವನ್ನು ನಡೆಸುತ್ತಾನೋ, ಅವನು ಸ್ವ – ಉದ್ಯೋಗಿಯಾಗಿದ್ದಾನೆ.

ಉದಾ : ಸಿಮೆಂಟ್ ಅಂಗಡಿಯ ಮಾಲಿಕ

13, ಆರ್ಥಿಕಾಭಿವೃದ್ಧಿಯ ಪ್ರಮುಖ ಸೂಚಕಗಳಾಗಿವೆ?

ಆರ್ಥಿಕಾಭಿವೃದ್ಧಿಯ ಪ್ರಮುಖ ಸೂಚಕಗಳೆಂದರೆ :

1) ಉದ್ಯೋಗಾವಕಾಶಗಳ ಸೃಷ್ಠಿ

2) ಒಟ್ಟು ದೇಶೀಯ ಉತ್ಪನ್ನಗಳು

14. ಕಾರ್ಮಿಕ ಶಕ್ತಿಯ ತಾತ್ಕಾಲಿಕರಣ / ಹಂಗಾಮೀಕರಣ ಎಂದರೇನು?

ಸ್ವಯಂ ಉದ್ಯೋಗದಿಂದ ಹಂಗಾಮಿ ಉದ್ಯೋಗದ ಕಡೆ ವಾಲುವ ಪ್ರಕ್ರಿಯೆಯನ್ನು ವಿದ್ವಾಂಸರು “ಕಾರ್ಮಿಕ ಶಕ್ತಿಯ ತಾತ್ಕಾಲೀಕರಣ / ಹಂಗಾಮಿಕರಣ ಎಂದು ಕರೆದಿದ್ದಾರೆ.

15. ತಾತ್ಕಾಲಿಕ ದಿನಗೂಲಿ ಕಾರ್ಮಿಕರೆಂದರೆ ಯಾರು?

ಸಾಂದರ್ಭಿಕ ಮತ್ತು ಕರೆ ಆಧಾರದ ಮೇಲೆ ಕೆಲಸ ಮಾಡುವ ಜನರನ್ನು ತಾತಾಲಿಕ ದಿನಗೂಲಿ ಕಾರ್ಮಿಕರೆಂದು ಕರೆಯುವರು.

ಉದಾ : ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಇತ್ಯಾದಿ.

16. ಅರ್ಥಶಾಸ್ತ್ರಜ್ಞರ ಪ್ರಕಾರ ಕಾರ್ಮಿಕ ಬಲದ ಎರಡು ವರ್ಗಗಳನ್ನು ಹೆಸರಿಸಿ.

ಕಾರ್ಮಿಕ ಬಲದ ಎರಡು ವರ್ಗಗಳಾಗಿ ವಿಂಗಡಿಸುತ್ತಾರೆ.

1) ಔಪಚಾರಿಕ ವಲಯದ / ಸಂಘಟಿತ ವಲಯದ ಕಾರ್ಮಿಕರು

2) ಅನೌಪಚಾರಿಕ ವಲಯದ / ಸಂಘಟಿತ ವಲಯದ ಕಾರ್ಮಿಕರು

17. ಔಪಚಾರಿಕ ವಲಯ ಎಂದರೇನು?

10 ಅದಕ್ಕಿಂತ ಹೆಚ್ಚು ಕೂಲಿ ಕೆಲಸಗಾರರನ್ನು ಹೊಂದಿರುವ ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಖಾಸಗಿ ವಲಯದ ಸಂಸ್ಥೆಗಳನ್ನು ಔಪಚಾರಿಕ ವಲಯ ಎನ್ನುವರು.

18. ಔಪಚಾರಿಕ ವಲಯ ಕಾರ್ಮಿಕರೆಂದರೇನು?

ಔಪಚಾರಿಕ ವಲಯದಲ್ಲಿ ಕೆಲಸ ಮಾಡುವವರನ್ನು ಔಪಚಾರಿಕ ವಲಯ ಕಾರ್ಮಿಕರೆಂದು ಕರೆಯುತ್ತಾರೆ.

19. ಅನೌಪಚಾರಿಕ ವಲಯ ಎಂದರೇನು?

ನಿಯಮಿತ ಆಧಾರದ ಮೇಲೆ 10 ಕ್ಕಿಂತ ಕಡಿಮೆ ಕಾಮಿಕರನ್ನು ನೇಮಕ ಮಾಡಿಕೊಳ್ಳುವ ಖಾಸಗಿ ಸಂಸ್ಥೆಗಳಿಗೆ ಅನೌಪಚಾರಿಕ ವಲಯ ಎನ್ನುತ್ತಾರೆ.

20. ನಿರುದ್ಯೋಗ ಎಂದರೇನು?

ನಿರುದ್ಯೋಗ ಎಂದರೆ ಕೆಲಸ ಮಾಡುವ ಸಾಮರ್ಥ್ಯ ಮತ್ತು ಮನಸ್ಸು ಹೊಂದಿದ್ದು ಅಂತವರಿಗೆ ಲಾಭದಾಯಕ ಉದ್ಯೋಗ ದೊರೆಯದಿರುವ ಸ್ಥಿತಿ ಎಂದರ್ಥ.

21. ನಿರುದ್ಯೋಗದ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸುವ ಸಂಸ್ಥೆಗಳಾವುವು?

ಅನೇಕ ಸಂಸ್ಥೆಗಳ ವಾರ್ಷಿಕ ವರದಿಗಳಾದ – ನ್ಯಾಷನಲ್ ಸಾಂಪಲ್ ಸರ್ವೆ ಭಾರತದ ಜನಗಣತಿಯ ವರದಿ, ಕಾರ್ಮಿಕ ಸಚಿವಾಲಯ ಇತ್ಯಾದಿ.

22. ನಿರುದ್ಯೋಗದ ವಿಧಗಳಾವುವು?

ನಮ್ಮ ದೇಶದಲ್ಲಿ ಅನೇಕ ಪ್ರಕಾರದ ನಿರುದ್ಯೋಗಗಳಿವೆ. ಅವುಗಳೆಂದರೆ 1) ಮುಕ್ತ ನಿರುದ್ಯೋಗ 2) ಮರೆಮಾಚಿದ ನಿರುದ್ಯೋಗ 3) ಋತುಮಾನ ನಿರುದ್ಯೋಗ 4) ನಗರ ನಿರುದ್ಯೋಗ

ಸಾರ್ವಜನಿಕ ಕ್ಷೇತ್ರದ ಅರ್ಥ ತಿಳಿಸಿರಿ. ಸರ್ಕಾರಿ ಸೌಮ್ಯಕ್ಕೆ ಒಳಪಟ್ಟಿರುವ ಕ್ಷೇತ್ರವನ್ನು ಸಾರ್ವಜನಿಕ ಕ್ಷೇತ್ರವೆನ್ನುವರು. ಸರ್ಕಾರವು ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿರುತ್ತದೆ.

23. ಖಾಸಗಿ ಕ್ಷೇತ್ರ ಎಂದರೇನು?

ಖಾಸಗಿ ಜನರ ಮತ್ತು ಸಮೂಹದ ಒಡೆತನದಲ್ಲಿರುವ ಮತ್ತು ಅವರಿಂದ ನಡೆಸಲ್ಪಡುವ ಉದ್ಯಮಗಳಾಗಿವೆ.

24. ನಿಯಮಿತ ವೇತನ / ಕೂಲಿ ಪಡೆಯುವ ಶ್ರಮಿಕ ಎಂದರೆ ಯಾರು?

ಬೇರೆಯವರ ಹೊಲದಲ್ಲಿ ಮತ್ತು ಕೃಷಿಯೇತರ ಉದ್ದಿಮೆಯಲ್ಲಿ ಕೆಲಸ ಮಾಡುವ ಮತ್ತು ಪ್ರತಿಫಲವಾಗಿ ನಿಯಮಿತವಾಗಿ ಸಂಬಳ ಅಥವಾ ಕೂಲಿಯನ್ನು ಪಡೆಯುವರು.

25. ಉತ್ಪಾದನಾ ಚಟುವಟಿಕೆ ಎಂದರೇನು?

ಉತ್ಪಾದನಾ ಚಟುವಟಿಕೆ ಎಂದರೆ ಸರಕು ಮತ್ತು ಸೇವೆಗಳ ಉತ್ಪಾದನಾ ಪ್ರಕ್ರಿಯೆ ಎಂದರ್ಥ.

26. ಯಾವ ಶ್ರಮಿಕರು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಅನುಭವಿಸುತ್ತಾರೆ?

ಔಪಚಾರಿಕ ವಲಯದ ಕಾರ್ಮಿಕರು,

27. ಶ್ರಮಶಕ್ತಿ ಭಾಗವಹಿಸುವಿಕೆ ದರ ಎಂದರೇನು?

“ಪ್ರತಿ 100 ಜನರಿಗೆ ಇರುವ ಶ್ರಮಶಕ್ತಿಯ ಪ್ರಮಾಣವನ್ನು ಶ್ರಮ ಶಕ್ತಿಯ ಭಾಗವಹಿಸುವಿಕೆ ದರ” ಎನ್ನುವರು.

29. ನಿರುದ್ಯೋಗ ದರ ಎಂದರೇನು?

ಪ್ರತಿ 1000 ಜನರಲ್ಲಿ ಇರುವ ನಿರುದ್ಯೋಗಿಗಳ ಪ್ರಮಾಣವನ್ನು ನಿರುದ್ಯೋಗಿ ದರ” ಎಂದು ಕರೆಯುತ್ತಾರೆ.

30. ನಿರುದ್ಯೋಗದ ವಿಧಗಳನ್ನು ವಿವರಿಸಿ.

ಕೆಲಸ ಮಾಡುವ ಸಾಮರ್ಥ್ಯ ಮತ್ತು ಮನಸ್ಸು ಹೊಂದಿದ್ದು ಅಂತವರಿಗೆ ಲಾಭದಾಯಕ ಉದ್ಯೋಗ ದೊರೆಯದಿರುವ ಸ್ಥಿತಿಯನ್ನು ನಿರುದ್ಯೋಗ ಎನ್ನುತ್ತೇವೆ. ನಿರುದ್ಯೋಗದ ವಿಧಗಳೆಂದರೆ :

1) ಮುಕ್ತ ನಿರುದ್ಯೋಗ : ಜನರ ಸದ್ಯದಲ್ಲಿರುವ ಕೂಲಿ ಮತ್ತು ಪರಿಸ್ಥಿತಿಯಲ್ಲಿ, ಕೆಲಸ ಮಾಡುವ ಸಾಮರ್ಥ್ಯ ಮತ್ತು ಮನಸ್ಸು ಹೊಂದಿದ್ದು, ಅಂತವರಿಗೆ ಲಾಭದಾಯಕ ಉದ್ಯೋಗ ದೊರೆಯದಿರುವ ಸ್ಥಿತಿಯಾಗಿದೆ.

2) ಮರೆಮಾಚಿದ ನಿರುದ್ಯೋಗ : ಒಂದು ಕೆಲಸದ ನಿರ್ವಹಣೆಗೆ ಅವಶ್ಯಕವಿರುವ ಕೆಲಸಗಾರರಿಗಿಂತ ಅಧಿಕ ಪ್ರಮಾಣದ ಕೆಲಸಗಾರರು, ಒಳಗೊಂಡಂತಹ ಪರಿಸ್ಥಿತಿಯನ್ನು ಮರೆಯಾಚಿದ ನಿರುದ್ಯೋಗವೆನ್ನುತ್ತಾರೆ.

3) ಋತುಮಾನ ನಿರುದ್ಯೋಗ : ಇದು ಋತುಮಾನ ಸರೂಪವನ್ನು ಹೊಂದಿದ ಕೆಲಸಗಳ ಪ್ರತೀಕವಾಗಿದೆ. ಹಳ್ಳಿಗಳಲ್ಲಿ ಹೆಚ್ಚಾಗಿ ಈ ರೀತಿಯ ಸಮಸ್ಯೆ ಉದ್ಭವಿಸುತ್ತವೆ. ಬಿತ್ತನೆ ಹಾಗೂ ಸಮಯಗಳಲ್ಲಿ ಕೃಷಿ ಕಾರ್ಯಗಳು ಅಧಿಕವಾಗಿದ್ದು, ಸುಗ್ಗಿ ನಂತರ ಕೃಷಿ ಕಾರ್ಯಗಳು ಕಡಿಮೆ ಇರುತ್ತವೆ. ಇಂತಹ ಸಮಯಗಳಲ್ಲಿ ಕೃಷಿ ಕಾರ್ಮಿಕರು ಬೇರೆ ಪ್ರದೇಶಗಳಿಗೆ ವಲಸೆ ಹೋಗಲು ಕಾರಣವಾಗಿದೆ.

4) ನಗರ ನಿರುದ್ಯೋಗ : ಇದು ಆವರ್ತ ಸ್ವರೂಪವನ್ನು ಹೊಂದಿದೆ. ಆರ್ಥಿಕ ಚಟುವಟಿಕೆಗಳ ಹಿಂಜರಿತ, ಆರ್ಥಿಕ ಬಿಕ್ಕಟ್ಟು ಹಾಗೂ ಆರ್ಥಿಕ ಹಿನ್ನಡೆಗಳ ಕಾರಣದಿಂದ ನಗರ ನಿರುದ್ಯೋಗವು ಉದ್ಭವಿಸುತ್ತದೆ. ಇದು ಕೈಗಾರಿಕಾ ಹಾಗೂ ಸೇವಾ ಕ್ಷೇತ್ರಗಳಲ್ಲಿ ಕಂಡು ಬರುತ್ತದೆ.

FAQ

1. ಶ್ರಮಿಕನೆಂದರೆ ಯಾರು ?

ತಮ್ಮ ತಮ್ಮ ಸಾಮರ್ಥ್ಯದ (ಹೆಚ್ಚು ಅಥವಾ ಕಡಿಮೆಯಿರಬಹುದು) ಆಧಾರದ ಮೇಲೆ ಆರ್ಥಿಕ ಚಟುವಟಿಕೆಯಲ್ಲಿ ತೊಡಗುವವರನ್ನು ಶ್ರಮಿಕರೆಂದು ಕರೆಯಲಾಗುತ್ತದೆ.

2. ನಿರುದ್ಯೋಗ ಎಂದರೇನು?

ನಿರುದ್ಯೋಗ ಎಂದರೆ ಕೆಲಸ ಮಾಡುವ ಸಾಮರ್ಥ್ಯ ಮತ್ತು ಮನಸ್ಸು ಹೊಂದಿದ್ದು ಅಂತವರಿಗೆ ಲಾಭದಾಯಕ ಉದ್ಯೋಗ ದೊರೆಯದಿರುವ ಸ್ಥಿತಿ ಎಂದರ್ಥ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

rtgh