ಪ್ರಥಮ ಪಿ.ಯು.ಸಿ ಭಾರತ ಮತ್ತು ಅದರ ನೆರೆ ರಾಷ್ಟ್ರಗಳ ಅಭಿವೃದ್ಧಿಯ ಅನುಭವಗಳ ತೌಲನಿಕ ಅಧ್ಯಯನ ಅರ್ಥಶಾಸ್ತ್ರ ನೋಟ್ಸ್

ಪ್ರಥಮ ಪಿ.ಯು.ಸಿ ಭಾರತ ಮತ್ತು ಅದರ ನೆರೆ ರಾಷ್ಟ್ರಗಳ ಅಭಿವೃದ್ಧಿಯ ಅನುಭವಗಳ ತೌಲನಿಕ ಅಧ್ಯಯನ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, 1st Puc Economics Chapter 10 Notes Question Answer Mcq Pdf Download in Kannada Medium 2023 Kseeb Solutions For Class 11 Economic Chapter 10 Notes 1st Puc Economics 10th Lesson Notes

 

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1) ಪ್ರಾದೇಶಿಕ ಮತ್ತು ಆರ್ಥಿಕ ಗುಂಪುಗಳು ಏಕೆ ರಚನೆಯಾದವು?

ಪ್ರಾದೇಶಿಕ ಮತ್ತು ಆರ್ಥಿಕವಾಗಿ ರಚನೆಯಾದ ಗುಂಪುಗಳೆಂದರೆ : ಸಾರ್ಕ್ (SAARC), ಯುರೋಪಿಯನ್ ಯೂನಿಯನ್, ಏಷಿಯಾನ್, G-8, G-20, ಬ್ರಿಕ್ಸ್ ಇತ್ಯಾದಿ.

2) ದೇಶಿಯ ಆರ್ಥಿಕತೆಗಳನ್ನು ಬಲಯುತಗೊಳಿಸಲು ದೇಶಗಳು ಅಳವಡಿಸಿ ಕೊಂಡಿರುವ ವಿವಿಧ ವಿಧಾನಗಳಾವವು?

ದೇಶೀಯ ಆರ್ಥಿಕತೆಗಳನ್ನು ಬಲಯುತಗೊಳಿಸಲು ದೇಶಗಳು ಅಳವಡಿಸಿ ಕೊಂಡಿರುವ ವಿವಿಧ ವಿಧಾನಗಳೆಂದರೆ –

1) ಇದೇ ಉದ್ದೇಶದಿಂದ ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ಆರ್ಥಿಕ ಸಂಘಟನೆಗಳನ್ನು ರಚಿಸಿಕೊಂಡಿವೆ.

2) ತಮ್ಮ ನೆರೆ ರಾಷ್ಟ್ರಗಳು ಅಳವಡಿಸಿಕೊಂಡ ಅಭಿವೃದ್ಧಿ ವಿಧಾನಗಳು ತಿಳಿದುಕೊಳ್ಳುವ ಕಾತುರ ಎಲ್ಲಾ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ. ಇದು ಆಯಾ ರಾಷ್ಟ್ರಗಳ ಬಲ ದುರ್ಬಲತೆಗಳನ್ನು ಅರಿಯಲು ಅನುಕೂಲವಾಗುತ್ತದೆ.

3) ನೆರೆ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಗಳ ತಿಳುವಳಿಕೆ ಅವಶ್ಯಕವಾಗಿರುತ್ತದೆ. ಏಕೆಂದರೆ ಆ ಪದೇಶದ ಪ್ರಮುಖ ಸಾಮಾನ್ಯ ಆರ್ಥಿಕ ಚಟುವಟಿಕೆಗಳು ಒಂದು ಭಾಗಿದಾರ ಪರಿಸರದಲ್ಲಿ ಮಾನವ ಅಭಿವೃದ್ಧಿಗೆ ಸಂಬಂಧಿಸಿರುತ್ತದೆ.

3) ಭಾರತ ಮತ್ತು ಪಾಕಿಸ್ತಾನಗಳು ಅಭಿವೃದ್ಧಿಯ ಪಥದಲ್ಲಿ ಅಳವಡಿಸಿಕೊಂಡಿರುವ ಸಮಾನ ಅಭಿವೃದ್ಧಿ ಕಾರ್ಯತಂತ್ರಗಳು ಯಾವುವು?

ಭಾರತ ಮತ್ತು ಪಾಕಿಸ್ತಾನವು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹಭಾಗಿತ್ವದ ಮಿಶ್ರ ಆರ್ಥಿಕ ಮಾದರಿಯನ್ನು ಅನುಸರಿಸಿದೆ. ಹಸಿರು ಕ್ರಾಂತಿ ಸಂಭವಿಸಿದ ನಂತರ ಯಾಂತ್ರೀಕರಣದ ಯುಗ ಪ್ರಾರಂಭವಾಯಿತು. ಜೊತೆಗೆ ಆಯ್ದ ಮೂಲ ಸೌಕರ್ಯಗಳಲ್ಲಿ ಸಾರ್ವಜನಿಕ ಹೂಡಿಕೆಯ ಹೆಚ್ಚಳದಿಂದ ಆಹಾರ ಧಾನ್ಯಗಳ ಉತ್ಪಾದನೆಯು ಹೆಚ್ಚಾಯಿತು. ಬೃಹತ್‌ ಕೈಗಾರಿಕೆಗಳ ಸ್ಥಾಪನೆ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ಅಧಿಕ ಸಾರ್ವಜನಿಕ ವೆಚ್ಚ ಹೂಡಿಕೆಯಂತಹ ಸಮಾನರೂಪದ ತಂತ್ರಗಳನ್ನು ಅಳವಡಿಸಿಕೊಂಡಿದೆ. ಸಮಾನ ಆರ್ಥಿಕ ಬೆಳವಣಿಗೆ ಪರ ಮತ್ತು ತಲಾ ಆದಾಯ ಹೊಂದಿದ್ದವು.

4) 1958 ರಲ್ಲಿ ಚೀನಾವು ಆರಂಭಿಸಿದ “ಮಹಾ ಮುಂಜಿಗಿತ ಅಭಿಯಾನವನ್ನು” ವಿವರಿಸಿರಿ.

1958ರಲ್ಲಿ ‘ಮಹಾ ಮುಂಜಿಗಿತ’ ಅಭಿಯಾನ ಆರಂಭಿಸಲಾಯಿತು. ಇದರ ಮುಖ್ಯ ಉದ್ದೇಶ ದೇಶವನ್ನು ದೊಡ್ಡ ಪ್ರಮಾಣದಲ್ಲಿ ಕೈಗಾರೀಕರಣಗೊಳಿಸುವುದಾಗಿತ್ತು. ಜನರನ್ನು ಮನೆಯ ಹಿತ್ತಲಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ “ಕಮ್ಯೂನ್ಗಳ ಪ್ರಾರಂಭವಾದವು. ಕಮ್ಯೂನ ಪದ್ಧತಿ ಅಡಿಯಲ್ಲಿ ಜನರು ಸಾಮೂಹಿಕವಾಗಿ ಸಾಗುವಳಿ ಮಾಡುತ್ತಿದ್ದರು. 1958ರ ವೇಳೆಗೆ ಎಲ್ಲಾ ಕೃಷಿಕರನ್ನು ಒಳಗೊಂಡಂತೆ ದೇಶದಲ್ಲಿ 26000 ಕಮ್ಯೂನಗಳು ರಚನೆಯಾದವು.

5) ಚೀನಾದ ತ್ವರಿತ ಕೈಗಾರಿಕಾ ಬೆಳವಣಿಗೆಯು 1978 ರ ಸುಧಾರಣೆಯ ಪರಿಣಾಮ ಎಂಬ ಸುಳಿವನ್ನು ನೀಡಿದೆ. ಇದನ್ನು ನೀವು ಒಪ್ಪುತ್ತೀರಾ ? ಸ್ಪಷ್ಟ ಪಡಿಸಿರಿ.

ಹೌದು, 1978ರಲ್ಲಿ ಜಾರಿಗೆ ತಂದ ಸುಧಾರಣೆಗಳೆಂದರೆ : ಕೃಷಿ, ವಿದೇಶಿ ವ್ಯಾಪಾರ ಮತ್ತು ಹೂಡಿಕೆ ವಲಯಗಳಲ್ಲಿ ಅಳವಡಿಸಲಾಯಿತು.

ಕೈಗಾರಿಕಾ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಯಿತು. ಸಾಮಾನ್ಯವಾಗಿ ಖಾಸಗಿ ಉದ್ದಿಮೆಗಳು ಮತ್ತು ಪಟ್ಟಣ ಮತ್ತು ಗ್ರಾಮೀಣ ಉದ್ದಿಮೆಗಳು ಒಡೆತನ ಮತ್ತು ನಿರ್ವಹಣೆಗೊಳಪಟ್ಟ ಉದ್ಯಮಗಳನ್ನು ನಿಗದಿತ ಸರಕುಗಳು ಉತ್ಪಾದಿಸಲು ಅನುಮತಿ ನೀಡಲಾಗಿತ್ತು. ಈ ಹಂತರದಲ್ಲಿ ಸರಕಾರಿ ಒಡೆತನದ ಉದ್ದಿಮೆಗಳನ್ನು ಪೈಪೋಟಿ ಎದುರಿಸುವಂತೆ ಮಾಡಲಾಯಿತು. ಸುಧಾರಣೆ ಪ್ರಕ್ರಿಯೆಯಲ್ಲಿ ದ್ವಂದ್ವ ಬೆಲೆ ನೀತಿ ಸಹ ಒಳಗೊಂಡಿತು.

6) ಪಾಕಿಸ್ತಾನವು ಆರ್ಥಿಕ ಅಭಿವೃದ್ಧಿಗಾಗಿ ಕೈಗೊಂಡಿರುವ ಅಭಿವೃದ್ಧಿ ಪಥದ ಆರಂಭಿಕ ಕ್ರಮಗಳನ್ನು ವಿವರಿಸಿ.

ಪಾಕಿಸ್ತಾನವು ಅಭಿವೃದ್ಧಿಯಲ್ಲಿ ಸೇವಾ ವಲಯವು ದೊಡ್ಡ ಆಟಗಾರನಾಗಿ ಹೊರಹೊಮ್ಮಿದೆ. ಇದು GDP ಹೆಚ್ಚು ಕೊಡುಗೆ ನೀಡುತ್ತಿದ್ದು ಅದೇ ಸಮಯದಲ್ಲಿ ಒಂದು ನಿರೀಕ್ಷಿತ ಉದ್ಯೋಗದಾತನಾಗಿಯೂ ಹೊರಹೊಮ್ಮುತ್ತಿದೆ. ಪಾಕಿಸ್ತಾನವು ಬಡತನ ರೇಖೆಗಿಂತ ಕೆಳಗಿರುವವರನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದು ಮತ್ತು ಶಿಕ್ಷಣ, ಶೌಚಾಲಯ ಮತ್ತು ಉತ್ತಮ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುತ್ತಿದೆ. ಚೀನಾಗೆ ಹೋಲಿಸಿದರೆ ಪಾಕಿಸ್ತಾನವು ಉತ್ತಮ ನೀರಿನ ಮೂಲಗಳನ್ನು ಒದಗಿಸಿದೆ. ಪಾಕಿಸ್ತಾನ ಆರ್ಥಿಕತೆಯು ಸತತ ಮೂರು ವರ್ಷಗಳಿಂದ GDP ಬೆಳವಣಿಗೆಗೆ ಶೇ. 8 ರಷ್ಟು ಕೊಡುಗೆ ನೀಡುತ್ತಿದೆ. ಕೃಷಿ, ಉತ್ಪಾದನಾ ವಲಯ, ಸೇವಾ ವಲಯಗಳು ಈ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ.

7) .ಚೀನಾವು ಅಳವಡಿಸಿಕೊಂಡಿರುವ “ಏಕ ಮಗು ನೀತಿ’ ಯ ಪ್ರಮುಖ ಪರಿಣಾಮವೇನು?

ಚೀನಾ ದೇಶವು 1970ರ ದಶಕದ ಅಂತ್ಯದಲ್ಲಿ ಜಾರಿಗೆ ತಂದ ಏಕ ಮಗುವಿನ ನೀತಿಯೇ ಕಡಿಮೆ ಜನಸಂಖ್ಯಾ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಈ ನೀತಿಯಿಂದಾಗಿಯೇ ಚೀನಾ ದೇಶದಲ್ಲಿ ಲಿಂಗಾನುಪಾತವು ಕಡಿಮೆಯಾಗಿದೆ. ಕೆಲವು ದಶಕಗಳ ನಂತರ ಚೀನದಲ್ಲಿ ಯುವ ಜನಸಂಖ್ಯೆಯ ಪ್ರಮಾಣವನ್ನು ಹೋಲಿಸಿದಾಗ ವೃದ್ಧ ಜನಸಂಖ್ಯೆ ಪ್ರಮಾಣ ಅಧಿಕವಾಗಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಚೀನಾ ಕೆಲವೇ ಉದ್ಯೋಗಿಗಳ ನೆರವಿನಿಂದ ಅಧಿಕ ಜನರಿಗೆ ಸಾಮಾಜಿಕ ಭದ್ರತಾ ಕ್ರಮಗಳನ್ನು ಒದಗಿಸಬೇಕಾಗುತ್ತದೆ.

8) ಚೀನಾ, ಪಾಕಿಸ್ತಾನ ಮತ್ತು ಭಾರತಗಳ ಜನಸಂಖ್ಯಾ ಸೂಚಕಗಳು ತಿಳಿಸಿರಿ.

ಚೀನಾ, ಪಾಕಿಸ್ತಾನ ಮತ್ತು ಭಾರತಗಳ ಜನಸಂಖ್ಯಾ ಸೂಚಕಗಳೆಂದರೆ :

1) ಅಂದಾಜಿಸಿದ ಜನಸಂಖ್ಯೆ

2) ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ

3) ಜನಸಾಂದ್ರತೆ

4) ಲಿಂಗಾನುಪಾತ

5) ಫಲವಂತಿಕೆಯ ದರ

6) ನಗರೀಕರಣ

9) ಭಾರತ ಮತ್ತು ಚೀನಾ ದೇಶಗಳ 2003ರಲ್ಲಿ ಜಿ.ಡಿ.ಪಿ.ಯ ವಲಯವಾರು ಕೊಡುಗೆಗಳನ್ನು ಹೋಲಿಸಿ ಮತ್ತು ವ್ಯತ್ಯಾಸಗಳನ್ನು ತಿಳಿಸಿರಿ. ಇದು ಏನನ್ನು ಸೂಚಿಸುತ್ತಿದೆ?

ಚೀನಾ ದೇಶವು ಜಗತ್ತಿನಲ್ಲಿಯೇ ಎರಡನೇ ಅತಿ ಹೆಚ್ಚು ಒಟ್ಟು ದೇಶೀಯ ಉತ್ಪನ್ನ GDP $ 7.2 ಟ್ರಿಲಿಯನ್ ಅದೇ ರೀತಿ ಭಾರತದ GDP $3.3 ಟ್ರಿಲಿಯನ್ ಹೊಂದಿದೆ.

ಚೀನಾಗೆ ಶೇ.53 ರಷ್ಟು ಕೊಡುಗೆ ಕೈಗಾರಿಕಾ ವಲಯದಿಂದ ಬರುತ್ತಿದೆ. ಅದೇ ರೀತಿ ಭಾರತಕ್ಕೆ GDP ಶೇ. 50ಕ್ಕಿಂತ ಹೆಚ್ಚು ಸೇವಾವಲಯವು ಕೊಡುಗೆ ನೀಡುತ್ತಿದೆ.

10) ಮಾನವ ಅಭಿವೃದ್ಧಿಯ ವಿವಿಧ ಸೂಚಕಗಳ ಬಗ್ಗೆ ತಿಳಿಸಿರಿ.

ಮಾನವ ಅಭಿವೃದ್ಧಿಯ ವಿವಿಧ ಸೂಚಕಗಳೆಂದರೆ

1) ಜೀವಿತಾವಧಿ

2) ವಯಸ್ಕರ ಸಾಕ್ಷರತೆ

3) ಜಿ.ಡಿ.ಪಿ. ತಲಾ ವರಮಾನ

4) ಶಿಶುಮರಣ ದರ

5) ತಾಯಂದಿರ ಮರಣ ಪ್ರಮಾಣ

11) ಸ್ವಾತಂತ್ರ್ಯ ಸೂಚಕದ ವ್ಯಾಖ್ಯೆ ನೀಡಿರಿ.

ಸ್ವಾತಂತ್ರ್ಯ ಸೂಚಕಕ್ಕೆ ಕೆಲವು ಉದಾಹರಣೆ

ಸ್ವಾತಂತ್ರ್ಯ ಸೂಚಕಗಳು ಅಂದರೆ ನಾಗರೀಕ ಹಕ್ಕುಗಳಿಗೆ ನೀಡಲಾಗಿರುವ ವಿಸ್ತ್ರತ ಸಂವಿಧಾನಾತ್ಮಕ ರಕ್ಷಣೆ ವ್ಯಾಪ್ತಿಯು ಅಥವಾ ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಯ ಸ್ವಾತಂತ್ರ್ಯಕ್ಕಾಗಿ ನೀಡಲಾಗಿರುವ ವಿಸ್ತ್ರತ ರಕ್ಷಣೆ ವ್ಯಾಪ್ತಿಯಾಗಿದೆ.

ಉದಾಹರಣೆಗೆ : ಸಾಮಾಜಿಕ ಮತ್ತು ರಾಜಕೀಯ ನಿರ್ಣಯ ಕೈಗೊಳ್ಳುವಿಕೆಯಲ್ಲಿ ಪ್ರಜಾಪ್ರಭುತ್ವ ಭಾಗವಹಿಸುವಿಕೆ ಪ್ರಮಾಣವನ್ನು ಒಂದು ಮಾಪಕವಾಗಿ ಸೂಚಕವನ್ನು ಸೇರಿಸಲಾಗಿದೆ.

12) ಚೀನಾ ದೇಶದ ತೀವ್ರ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾದ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡಿರಿ,

ಚೀನಾ ದೇಶದ ತೀವ್ರ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾದ ವಿವಿಧ ಅಂಶಗಳೆಂದರೆ:

1) ಶಿಕ್ಷಣ ಮತ್ತು ಆರೋಗ್ಯ

2) ಭೂ ಸುಧಾರಣೆ

3) ವಿಕೇಂದ್ರೀಕೃತ ಯೋಜನೆ

4) ಸಣ್ಣ ಉದ್ದಿಮಗಳ ಕ್ಷೇತ್ರದಲ್ಲಿ ಮೂಲ ಸೌಕರ್ಯದ ಸ್ಥಾಪನೆ,

ಸಾಮಾಜಿಕ ಮತ್ತು ಆದಾಯ ಸೂಚಕಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಸಹಾಯಕ ವಾಯಿತು. ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಿದಾಗ, ಕಮ್ಯೂನಿನ ಹಿಡುವಳಿಗಳನ್ನು ವೈಯಕ್ತಿಕ ಸಾಗುವಳಿಗಾಗಿ ವಿತರಣೆ ಮಾಡಿದ ಪರಿಣಾಮ ವ್ಯಾಪಕ ಪ್ರಮಾಣದಲ್ಲಿ ಬಡ ಜನರ ಸಮೃದ್ಧಿಗೆ ಕಾರಣವಾಯಿತು. ಇದು ಗ್ರಾಮೀಣ ಕೈಗಾರಿಕೆಗಳ ಅದ್ಭುತ ಬೆಳವಣಿಗೆ ಮತ್ತು ಇತರೆ ಸುಧಾರಣೆಗಳಿಗೆ ಬಲಿಷ್ಟ ಅಡಿಪಾಯ ನಿರ್ಮಿಸಿತು.

13) ಭಾರತ, ಚೀನಾ ಮತ್ತು ಪಾಕಿಸ್ತಾನ ದೇಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಲಕ್ಷಣಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿರಿ,

  • ಏಕ ಮಗು ನೀತಿ
  • ಕಡಿಮೆ ಫಲವಂತಿಕೆ ದರ
  • ಅಧಿಕ ಪ್ರಮಾಣದ ನಗರೀಕರಣ
  • ಮಿಶ್ರ ಅರ್ಥವ್ಯವಸ್ಥೆ
  • ಅಧಿಕ ಫಲವಂತಿಕೆ ದರ
  • ಅಧಿಕ ಜನಸಂಖ್ಯೆ
  • ಅಧಿಕ ಜನಸಾಂದ್ರತೆ
  • ತಯಾರಿಕ ವಲಯದಿಂದ ಬೆಳವಣಿಗೆ
  • ಸೇವಾ ವಲಯದಿಂದ ಬೆಳವಣಿಗೆ

ಭಾರತದ ಲಕ್ಷಣಗಳು : ಅಧಿಕ ಜನಸಾಂದ್ರತೆ, ಸೇವಾ ವಲಯದಿಂದ ಬೆಳವಣಿಗೆ

ಚೀನಾ ಲಕ್ಷಣಗಳು : ಏಕ ಮಗು ನೀತಿ, ಅಧಿಕ ಪ್ರಮಾಣದ ನಗರೀಕರಣ, ಕಡಿಮೆ ಫಲವಂತಿಕೆ ದರ, ಅಧಿಕ ಜನಸಂಖ್ಯೆ, ತಯಾರಿಕ ವಲಯದಿಂದ ಬೆಳವಣಿಗೆ

ಪಾಕಿಸ್ತಾನದ ಲಕ್ಷಣಗಳು : ಅಧಿಕ ಫಲವಂತಿಕೆ ದರ, ಮಿಶ್ರ ಅರ್ಥವ್ಯವಸ್ಥೆ.

14) ಪಾಕಿಸ್ತಾನದಲ್ಲಿ ಕಡಿಮೆ ಬೆಳವಣಿಗೆ ಮತ್ತು ಬಡತನ ಮರು ಹುಟ್ಟಿಗೆ ಕಾರಣಗಳನ್ನು

ಪಾಕಿಸ್ತಾನದಲ್ಲಿ ಕಡಿಮೆ ಬೆಳವಣಿಗೆ ಮತ್ತು ಬಡತನ ಮರು ಹುಟ್ಟಿಗೆ ಕಾರಣಗಳೆಂದರೆ

1) ಕೃಷಿ ಬೆಳವಣಿಗೆ ಮತ್ತು ಆಹಾರ ಪೂರೈಕೆಯ ಸ್ಥಿತಿಯು ತಾಂತ್ರಿಕ ಬದಲಾವಣೆ ಸಾಂಸ್ಥಿಕ ಪ್ರಕ್ರಿಯೆ ಆಧಾರಿತವಾಗಿದೆ ಉತ್ತಮ ಸುಗ್ಗಿಕಾಲವನ್ನು ಆಧಾರಿಸಿದೆ. ಉತ್ತಮ ಸುಗ್ಗಿಯ ವೇಳೆ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿತ್ತು. ಅದು ಇಲ್ಲದಿದ್ದಾಗ ಆರ್ಥಿಕ ಸೂಚಕಗಳು ನಕಾರಾತ್ಮಕ ಅಥವಾ ಸ್ತಗಿತ ಪ್ರವೃತ್ತಿ ತೋರಿಸುತ್ತಿದ್ದವು.

2) ಪಾಕಿಸ್ತಾನದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯದ ಗಳಿಕೆಯು ಮಧ್ಯ ಪೂರ್ವ ದೇಶಗಳಲ್ಲಿ ಇರುವ ಪಾಕಿಸ್ತಾನದ ಶ್ರಮಿಕರು ರವಾನೆ ಮಾಡುತ್ತಿರುವ ಪಾವತಿಗಳಿಂದ ಮತ್ತು ಅಸ್ಥಿರ ಕೃಷಿ ಉತ್ಪನ್ನಗಳ ರಫ್ತುಗಳಿಂದ ಬರುತ್ತಿತ್ತು. ಒಂದೆಡೆ ವಿದೇಶಿ ಸಾಲದ ಮೇಲೆ ಅವಲಂಬನೆ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಸಾಲವನ್ನು ಮರುಪಾವತಿ ಮಾಡುವ ತೊಂದರೆಗಳ ಸಹ ಹೆಚ್ಚಾಗುತ್ತಿದ್ದವು.

15) ಚೀನಾ ಮತ್ತು ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಸಾಕ್ಷಿಯಾಗಿರುವ ಬೆಳವಣಿಗೆ ದರದ ಕುರಿತು ಟೀಕೆಗಳನ್ನು ಬರೆಯಿರಿ.

ಕಳೆದ ಎರಡು ದಶಕಗಳಿಂದ ಈ ಎರಡು ದೇಶಗಳಲ್ಲಿ ದೊಡ್ಡ ಶ್ರಮಬಲಕ್ಕೆ ಉದ್ಯೋಗ ಒದಗಿಸಿರುವ ಕೃಷಿ ಕ್ಷೇತ್ರದ ಬೆಳವಣಿಗೆ ಕಡಿಮೆಯಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಚೀನಾದ ಬೆಳವಣಿಗೆ ದರ ಎರಡಂಕ್ಕಿಯಲ್ಲಿ ಮುಂದುವರಿಯುತ್ತಿದ್ದರೆ, ಭಾರತದಲ್ಲಿ ಇಳಿಕೆ ಆಗಿದೆ.

1980–2013ರಲ್ಲಿ ಚೀನಾ ಮತ್ತು ಭಾರತವು ಸೇವಾ ವಲಯದ ಬೆಳವಣಿಗೆ ದರವನ್ನು ಹೆಚ್ಚಿಸಿಕೊಳ್ಳಲು ಸಮರ್ಥವಾದವು. ಚೀನಾದ ಆರ್ಥಿಕ ಬೆಳವಣಿಗೆಗೆ ತಯಾರಿಕಾ ಕೈಗಾರಿಕೆಯ ಪ್ರಮುಖ ಕೊಡುಗೆಯಾದರೆ, ಭಾರತದ ಬೆಳವಣಿಗೆಯ ಸೇವಾ ವಲಯದಿಂದಾಗಿದೆ.

ಹೆಚ್ಚುವರಿ ಪ್ರಶೋತ್ತರಗಳು

1.ಭಾರತವು ಯಾವಾಗ ಪ್ರಥಮ ಪಂಚವಾರ್ಷಿಕ ಯೋಜನೆಯನ್ನು ಘೋಷಣೆ ಮಾಡಿತು.

1951-56ರಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆಯನ್ನು ಘೋಷಣೆ ಮಾಡಿತು.

2. ಪಾಕಿಸ್ತಾನವು ಯಾವಾಗ ಪ್ರಥಮ ಪಂಚವಾರ್ಷಿಕ ಯೋಜನೆಯನ್ನು ಘೋಷಣೆ ಮಾಡಿತು.

ಪಾಕಿಸ್ತಾನವು 1956ರಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆಯನ್ನು ಘೋಷಣೆ ಮಾಡಿತು.

3. ಚೀನಾ ಯಾವಾಗ ಪ್ರಥಮ ಪಂಚವಾರ್ಷಿಕ ಯೋಜನೆಯನ್ನು ಘೋಷಣೆ ಮಾಡಿತು.

ಚೀನಾ 1953ರಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆಯನ್ನು ಘೋಷಣೆ ಮಾಡಿತು.

4. ಭಾರತ ಮತ್ತು ಪಾಕಿಸ್ತಾನ ಅಭಿವೃದ್ಧಿಗಾಗಿ ಅಳವಡಿಸಿಕೊಂಡ ಸಮಾನರೂಪದ ತಂತ್ರಗಳಾವುವು?

ಭಾರತ ಮತ್ತು ಪಾಕಿಸ್ತಾನ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ಅಧಿಕ ಸಾರ್ವಜನಿಕ ವೆಚ್ಚ ಹೂಡಿಕೆಯಂತಹ ಸಮಾನರೂಪದ ತಂತ್ರಗಳನ್ನು ಅಳವಡಿಸಿಕೊಂಡಿವೆ.

5. 1980ರವರೆಗೆ ಯಾವ ಕ್ಷೇತ್ರಗಳಲ್ಲಿ ಭಾರತ, ಚೀನಾ ಮತ್ತು ಪಾಕಿಸ್ತಾನ ಸಮಾನವಾಗಿದ್ದವು.

ಸಮಾನ ಆರ್ಥಿಕ ಬೆಳವಣಿಗೆ ದರ ಮತ್ತು ತಲಾದಾಯ ಕ್ಷೇತ್ರಗಳಲ್ಲಿ ಸಮಾನವಾಗಿದ್ದವು.

6. ದ್ವಂದ್ವ ಬೆಲೆ ನೀತಿ ಎಂದರೇನು?

ದ್ವಂದ್ವ ಬೆಲೆ ಎಂದರೆ ಒಂದೇ ಸರಕಿಗೆ ಬೇರೆ – ಬೇರೆ ಮಾರುಕಟ್ಟೆಗಳಲ್ಲಿ ಬೇರೆ ಬೇರೆ ಬೆಲೆಗಳನ್ನು ನಿಗದಿಪಡಿಸುವ ತಂತ್ರ ಎಂದರ್ಥ. ಒಂದೇ ಸರಕಿಗೆ ವಿವಿಧ ಬೆಲೆಗಳನ್ನು ದ್ವಂದ್ವ ಬೆಲೆ ನೀತಿ ಎನ್ನುವರು.

7. G-20 ರಾಷ್ಟ್ರಗಳ ಅರ್ಥ ಕೊಡಿ?

ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಅವಿಶ್ರಾಂತ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ರಾಷ್ಟ್ರಗಳ ಸದಸ್ಯತ್ವ ಹೊಂದಿದೆ. ಸಮೂಹ.

8. G – 8 ರಾಷ್ಟ್ರಗಳ ಅರ್ಥ ಕೊಡಿ?

G – 8 ರ ವೈಶಿಷ್ಟ್ಯವೆಂದರೆ ಎಲ್ಲಾ ಸದಸ್ಯ ರಾಷ್ಟ್ರಗಳ ಅಧ್ಯಕ್ಷರು ಮತ್ತು ಅಂತರರಾಷ್ಟ್ರೀಯ ಅಧಿಕಾರಿಗಳ ಆರ್ಥಿಕ, ರಾಜಕೀಯ ವಾರ್ಷಿಕ ಶೃಂಗ ಸಭೆಗಳು, ಇದರ ಜೊತೆಯಲ್ಲಿ ಅನೇಕ ಉಪಸಭೆಗಳು ಮತ್ತು ನೀತಿಯ ಸಂಶೋಧನೆಗಳು ನಡೆಯುತ್ತವೆ.

9. ವಿಶೇಷ ಆರ್ಥಿಕ ವಲಯ (SEZ) ಎಂದರೇನು?

ಒಂದು ರಾಷ್ಟ್ರದ ಸಾಮಾನ್ಯ ಆರ್ಥಿಕ ನಿಯಮಗಳಿಗಿಂತ ಭಿನ್ನವಾದ ಆರ್ಥಿಕ ನಿಯಮಗಳನ್ನು ಹೊಂದಿರುವ ಭೌಗೋಳಿಕ ಪ್ರದೇಶ. ವಿದೇಶಿ ಹೂಡಿಕೆಯನ್ನು ಹೆಚ್ಚಿಸುವುದು ಇದರ ಸಾಮಾನ್ಯ ಉದ್ದೇಶವಾಗಿದೆ.

10. ಪಾಕಿಸ್ತಾನದಲ್ಲಿ ಯಾಂತ್ರೀಕರಣ ಯುಗ ಯಾವಾಗ ಪ್ರಾರಂಭವಾಯಿತು.

ಹಸಿರು ಕ್ರಾಂತಿ ಸಂಭವಿಸಿದ ನಂತರ ಪಾಕಿಸ್ತಾನದಲ್ಲಿ ಯಾಂತ್ರೀಕರಣದ ಯುಗ ಪ್ರಾರಂಭವಾಯಿತು.

11. 1970ರಲ್ಲಿನ ಪಾಕಿಸ್ತಾನದ ರಾಷ್ಟ್ರೀಕರಣಕ್ಕೆ ಕಾರಣಗಳಾವುವು?

1970ರ ದಶಕದಲ್ಲಿ ಬಂಡವಾಳ ಸರಕುಗಳ ಕೈಗಾರಿಕೆಗಳು ರಾಷ್ಟ್ರೀಕರಣಗೊಂಡವು ಮತ್ತು ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡಲಾಯಿತು.

12. ಪಾಕಿಸ್ತಾನದಲ್ಲಿ ಯಾವಾಗ ಸುಧಾರಣೆಗಳು ಆರಂಭವಾದವು.

1988ರಲ್ಲಿ ಸುಧಾರಣೆಗಳು ಆರಂಭವಾದವು.

13. ಲಿಂಗಾನುಪಾತ ಎಂದರೇನು?

ಪ್ರತಿ 1000 ಪುರುಷರಿಗೆ ಮಹಿಳೆಯರ ಅನುಪಾತವಾಗಿದೆ.

14. ಸ್ವತಂತ್ರ ಸೂಚಕಗಳು ಎಂದರೇನು?

ಸ್ವತಂತ್ರ ಎಂದರೆ ನಾಗರೀಕ ಹಕ್ಕುಗಳಿಗೆ ನೀಡಲಾಗಿರುವ ವಿಸ್ತ್ರತ ಸಂವಿಧಾನಾತ್ಮಕ ರಕ್ಷಣೆ ವ್ಯಾಪ್ತಿಯು ಮತ್ತು ಕಾನೂನು ವ್ಯವಸ್ಥೆಯ ಸ್ವಾತಂತ್ರಕ್ಕಾಗಿ ನೀಡಲಾಗಿರುವ ವಿಸ್ತ್ರತ ರಕ್ಷಣೆ ವ್ಯಾಪ್ತಿ ಎಂದರ್ಥ.

15. ಯಾವಾಗ ಚೀನಾದಲ್ಲಿ ಆರ್ಥಿಕ ಸುಧಾರಣೆಗಳು ಪ್ರಾರಂಭವಾದವು ?

1978ರಲ್ಲಿ ಚೀನಾದಲ್ಲಿ ಆರ್ಥಿಕ ಸುಧಾರಣೆಗಳು ಪ್ರಾರಂಭವಾದವು.

FAQ :

1. ಪ್ರಾದೇಶಿಕ ಮತ್ತು ಆರ್ಥಿಕ ಗುಂಪುಗಳು ಏಕೆ ರಚನೆಯಾದವು?

ಪ್ರಾದೇಶಿಕ ಮತ್ತು ಆರ್ಥಿಕವಾಗಿ ರಚನೆಯಾದ ಗುಂಪುಗಳೆಂದರೆ : ಸಾರ್ಕ್ (SAARC), ಯುರೋಪಿಯನ್ ಯೂನಿಯನ್, ಏಷಿಯಾನ್, G-8, G-20, ಬ್ರಿಕ್ಸ್ ಇತ್ಯಾದಿ.

2. ದ್ವಂದ್ವ ಬೆಲೆ ನೀತಿ ಎಂದರೇನು?

ದ್ವಂದ್ವ ಬೆಲೆ ಎಂದರೆ ಒಂದೇ ಸರಕಿಗೆ ಬೇರೆ – ಬೇರೆ ಮಾರುಕಟ್ಟೆಗಳಲ್ಲಿ ಬೇರೆ ಬೇರೆ ಬೆಲೆಗಳನ್ನು ನಿಗದಿಪಡಿಸುವ ತಂತ್ರ ಎಂದರ್ಥ. ಒಂದೇ ಸರಕಿಗೆ ವಿವಿಧ ಬೆಲೆಗಳನ್ನು ದ್ವಂದ್ವ ಬೆಲೆ ನೀತಿ ಎನ್ನುವರು.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh