ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಭಾಗ – 2 ಪೀಠಿಕೆ ನೋಟ್ಸ್ | 1st Puc Economics Notes in Kannada Chapter 11

ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಭಾಗ – 2 ಪೀಠಿಕೆ ನೋಟ್ಸ್ ಪ್ರಶ್ನೋತ್ತರಗಳು, 1st Puc Economics Chapter 11 Notes Question Answer Pdf in Kannaa Medium 2023 Kseeb Solutions For Class 11 Economics Chapter 11 Notes in Kannada

 

1st Puc Economics Chapter 11 Notes

1st Puc Economics Chapter 11 Notes
1st Puc Economics Chapter 11 Notes

ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ಎಂದು ಗುರುತಿಸಿ.

(i) ಸಂಖ್ಯಾಶಾಸ್ತ್ರವು ಕೇವಲ ಪರಿಮಾಣಾತ್ಮಕ ದತ್ತಾಂಶಗಳೊಂದಿಗೆ ವ್ಯವಹರಿಸುತ್ತದೆ.

ಸರಿ

(ii) ಸಂಖ್ಯಾಶಾಸ್ತ್ರವು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಸರಿ.

(iii) ದತ್ತಾಂಶಗಳಿಲ್ಲದೆ ಸಂಖ್ಯಾಶಾಸ್ತ್ರವು ಅರ್ಥಶಾಸ್ತ್ರಕ್ಕೆ ಯಾವುದೇ ಉಪಯೋಗವಾಗುವುದಿಲ್ಲ.

ಸರಿ

2. ಬಸ್‌ನಿಲ್ದಾಣ ಅಥವಾ ಒಂದು ಮಾರುಕಟ್ಟೆಯಲ್ಲಿ ನೀವು ಕಾಣುವ ಚಟುವಟಿಕೆಗಳ ಒಂದು ಪಟ್ಟಿಯನ್ನು ತಯಾರಿಸಿ ಅವುಗಳಲ್ಲಿ ಯಾವುವು ಆರ್ಥಿಕ ಚಟುವಟಿಕೆಗಳಾಗಿವೆ?

ಆರ್ಥಿಕ ಚಟುವಟಿಕೆಗಳೆಂದರೆ :

1) ಕಾರ್ಖಾನೆ ಅಥವಾ ಆಫೀಸ್‌ನಲ್ಲಿ ಕೆಲಸಮಾಡುವವರು.

2) ಅಂಗಡಿಯವರು

3) ರೋಗಿಗೆ ಚಿಕಿತ್ಸೆ ಮಾಡುವ ವೈದ್ಯರು.

4) ಶಾಲೆಯಲ್ಲಿ ಪಾಠಮಾಡುವ ಶಿಕ್ಷಕರು

5) ಹಾಲಿನ ಡೈರಿನಲ್ಲಿ ಕೆಲಸಮಾಡುವ ಹಾಲು ಮಾರುವವನು

ಆರ್ಥಿಕೇತರ ಚಟುವಟಿಕೆಗಳೆಂದರೆ

1) ಸ್ವಂತ ಮಗನಿಗೆ ಪಾಠಮಾಡುವ ಶಿಕ್ಷಿತರು

2) ತನ್ನ ವಯಸ್ಸಾದ ತಾಯಿಗೆ ಸೇವೆ ಮಾಡುವ ನರ್ಸ್

3) ತನ್ನ ಮನೆಯಲ್ಲಿ ಅಡುಗೆ ಮಾಡುವ ಮನೆಯೊಡತಿ

4) ಪ್ರವಾಹ ವಿಕೋಪಕ್ಕೆ ಒಳಗಾದಾಗ ಸಾಮಾಜಿಕ ಸೇವೆ ಮಾಡುವ NGO,

2. ಸರ್ಕಾರ ಮತ್ತು ನೀತಿ ನಿರೂಪಕರು ಆರ್ಥಿಕ ಅಭಿವೃದ್ಧಿಗೆ ಸೂಕ್ತವಾದ ನೀತಿಗಳನ್ನು ರೂಪಿಸಲು ಸಂಖ್ಯಾತ್ಮಕ ದತ್ತಾಂಶ ಬಳಸುವರು. ಎರಡು ಉದಾಹರಣೆಗಳೊಂದಿಗೆ ವಿವರಿಸಿ.

  • ಸರ್ಕಾರ ಮತ್ತು ನೀತಿ ನಿರೂಪಕರು ಆರ್ಥಿಕ ಅಭಿವೃದ್ಧಿ ಸೂಕ್ತವಾದ ನೀತಿಗಳನ್ನು ರೂಪಿಸಲು ಸಂಖ್ಯಾತ್ಮಕ ದತ್ತಾಂಶ ಬಳಸುವರು. ಆರ್ಥಿಕ ಸಮಸ್ಯೆಗಳ ಆಧಾರದ ಮೇಲೆ ವಿವಿಧ ಅಂಶಗಳ ಮಾಹಿತಿ ಲಭ್ಯವಿಲ್ಲದೇ ಯಾವುದೇ ಸಮಸ್ಯೆ ಬಗೆಗಿನ ವಿಶ್ಲೇಷಣೆ ಮಾಡಲಾಗುವುದಿಲ್ಲ. ಉದಾ : ಸರ್ಕಾರವು ನಿರುದ್ಯೋಗ ಮತ್ತು ಬಡತನದ ಸಮಸ್ಯೆಗಳ ಪರಿಹಾರಕ್ಕೆ ನೀತಿ ಮಾಡಬೇಕಾದರೆ ಸರಿಯಾದ ದತ್ತಾಂಶದ ಅಗತ್ಯವಿದೆ. ಅಂದರೆ ಕೆಲಸಕ್ಕಾಗಿ ಕಾಯುತ್ತಿರುವ ಜನರ ಸಂಖ್ಯೆ, ನಿರುದ್ಯೋಗಿ ಮತ್ತು ಅರೆ – ಉದ್ಯೋಗಿ ವ್ಯಕ್ತಿಗಳು, ಶಿಕ್ಷಿತರು ಮತ್ತು ಅಶಿಕ್ಷಿತರು, ಬಡತನ ರೇಖೆಗಿಂತ ಕೆಳಗೆ ವಾಸಿಸುವವರ ಸಂಖ್ಯೆಗೆ ಸಂಬಂಧಿಸಿದಂತೆ ದತ್ತಾಂಶಗಳ ಅವಶ್ಯಕತೆ ಇದೆ.
  • ಸರ್ಕಾರವು ಬಡತನ ಮತ್ತು ಆದಾಯ ಅಸಮಾನತೆಯನ್ನು ನಿರ್ಮೂಲನೆ ಮಾಡಬೇಕಾದರೆ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ದತ್ತಾಂಶಗಳ ಅಗತ್ಯವಿದೆ. ಉದಾ : ಸರ್ಕಾರವು ಭೂಕಂಪ, ಪ್ರವಾಹ, ಸುನಾಮಿ, ಹಕ್ಕಿ ಜ್ವರ ಇತ್ಯಾದಿಗಳಿಂದ ಹಾನಿಗೊಳಗಾದವರ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಭವಿಸಬಹುದಾದ ನಷ್ಟಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಕಲೆಹಾಕಿ, ಕ್ರೂಢೀಕರಿಸಬೇಕಾಗುತ್ತದೆ.
  • ಆಧುನಿಕ ಅರ್ಥಶಾಸ್ತ್ರಜ್ಞರು, ಬಡತನ ಮಾಪನ, ಆದಾಯ ವಿತರಣೆ ಸೂಕ್ತವಾದ ಉದ್ಯೋಗ ಅವಕಾಶಗಳು, ಪರಿಸರ ವಿಪತ್ತುಗಳು ಮುಂತಾದ ವಿಷಯಗಳು ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಉಪಯುಕ್ತ ಅಧ್ಯಯನವನ್ನು ಮಾಡಲು ಬೇಕಾದ ಕೌಶಲ್ಯಗಳನ್ನು ಅರ್ಥಶಾಸ್ತ್ರವು ಒಳಗೊಂಡಿದೆ.

4. “ನೀವು ಅಪರಿಮಿತ ಬಯಕೆಗಳನ್ನು ಮತ್ತು ಅವುಗಳನ್ನು ತೃಪ್ತಿಪಡಿಸುವ ಸಂಪನ್ಮೂಲಗಳನ್ನು ಮಿತಿಯಲ್ಲಿ ಹೊಂದಿದ್ದೀರಿ”. ಎರಡು ಉದಾಹರಣೆಗಳ ಸಹಿತ ಈ ಹೇಳಿಕೆಯನ್ನು ವಿವರಿಸಿ.

ಪ್ರತಿಯೊಬ್ಬ ವ್ಯಕ್ತಿಗೆ ಅಪರಿಮಿತ ಬಯಕೆಗಳಿದ್ದು ಅವುಗಳನ್ನು ತೃಪ್ತಿಪಡಿಸುವ ಸಾಧನಗಳ ಲಭ್ಯತೆಯು ಮಿತವಾಗಿವೆ. ಸಂಪನ್ಮೂಲಗಳ ಕೊರತೆಯಿಂದ ಆರ್ಥಿಕ ಸಮಸ್ಯೆ ಉದ್ಭವವಾಗುತ್ತದೆ. ಉತ್ಪಾದಕರು ಹೊಂದಿರುವ ಸಂಪನ್ಮೂಲಗಳು ಮಿತವಾಗಿದೆ ಮತ್ತು ಪರ್ಯಾಯ ಬಳಕೆಯನ್ನು ಹೊಂದಿವೆ. ನೀವು ದಿನನಿತ್ಯ ಸೇವಿಸುವ ಆಹಾರದ ವಿಷಯವನ್ನು ತೆಗೆದುಕೊಳ್ಳಿ. ಅದು ನಿಮ್ಮ ಪೋಷಣೆಯ ಬಯಕೆಯನ್ನು ಈಡೇರಿಸುವುದು. ಕೃಷಿಯಲ್ಲಿ ನಿರತರಾಗಿರುವ ರೈತರು ನಿಮ್ಮ ಆಹಾರದ ಬೆಳೆಗಳನ್ನು * ಉತ್ಪಾದಿಸುತ್ತಾರೆ. ಯಾವುದೇ ಸಮಯದಲ್ಲಿ ಕೃಷಿಯಲ್ಲಿ ಭೂಮಿ, ಶ್ರಮ, ನೀರು, * ಗೊಬ್ಬರ ಇತ್ಯಾದಿ ಸಂಪನ್ಮೂಲಗಳನ್ನು ನಿಶ್ಚಿತ ಪ್ರಮಾಣದಲ್ಲಿ ನೀಡಲಾಗಿರುತ್ತದೆ. ಈ – ಎಲ್ಲಾ ಸಂಪನ್ಮೂಲಗಳು ಪಠ್ಯಾಯ ಉಪಯೋಗಗಳನ್ನು ಹೊಂದಿರುತ್ತವೆ. ಇದೇ ಸಂಪನ್ಮೂಲಗಳನ್ನು ಆಹಾರೇತರ ಬೆಳೆಗಳಾದ ರಬ್ಬರ್, ಹತ್ತಿ, ಸೆಣಬು ಇತ್ಯಾದಿಗಳನ್ನು ಬಳಸಬಹುದು. ಹೀಗೆ ಸಂಪನ್ಮೂಲಗಳ ಪಠ್ಯಾಯ ಉಪಯೋಗವು ಈ ಸಂಪನ್ಮೂಲಗಳಿಂದ ಉತ್ಪಾದಿಸಲ್ಪಡಬಹುದಾದ ಹಲವು ಸರಕುಗಳ ನಡುವಿನ ಆಯ್ಕೆಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ.

5. ನೀವು ತೃಪ್ತಿಪಡಿಸಿಕೊಳ್ಳಬೇಕಾದಂತಹ ಬಯಕೆಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ.

ನಿತ್ಯ ಜೀವನದಲ್ಲಿ ಹಲವಾರು ರೀತಿಯ ಕೊರತೆಯನ್ನು ಎದುರಿಸುತ್ತೇವೆ. ನಮ್ಮ ಬಯಕೆಗಳು ಹಲವಾರು ವಿಧಗಳಾಗಿವೆ. ಅವು ಆಹಾರ, ಬಟ್ಟೆ, ವಸತಿ, ಶಿಕ್ಷಣ, ಮನರಂಜನೆ ಇತ್ಯಾದಿಗಳಿಗೆ ಸಂಬಂಧಿಸಿದೆ. ನಮ್ಮ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳುವ ಸಮಸ್ಯೆಯನ್ನು ಎದುರಿಸುತ್ತೇವೆ ಏಕೆಂದರೆ ಸಂಪನ್ಮೂಲಗಳ ಕೊರತೆಯಿದೆ. ಆದ್ದರಿಂದ ನಾವು ಅತಿ ಹೆಚ್ಚು ಅವಶ್ಯಕವಿರುವಂತಹ ಬಯಕೆಯನ್ನು ಈಡೇರಿಸಿಕೊಂಡು ಕಡಿಮೆ ಅಗತ್ಯವಿರುವುದನ್ನು ಮುಂದೂಡಬೇಕು.

6. ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು ನೀವು ನೀಡುವ ಕಾರಣಗಳಾವುವು ?

ಅರ್ಥಶಾಸ್ತ್ರವು ಆರ್ಥಿಕತೆಯ ಸಮಸ್ಯೆಗಳನ್ನು ಅಧ್ಯಯನ ಮಾಡುವ ಪ್ರಮುಖ ವಿಷಯವಾಗಿದೆ. ಆಲೆಡ್ ಮಾರ್ಷಲ್‌ರವರು ಹೇಳಿರುವಂತೆ ಜೀವನ ವ್ಯವಹಾರಗಳಲ್ಲಿ ಮಾನವನ ಅಧ್ಯಯನವೇ ಅರ್ಥಶಾಸ್ತ್ರ”. ನಾವು ಸರಕುಗಳನ್ನು ಖರೀದಿಸಿದಾಗ ಅನುಭೋಗಿ ಎನ್ನುವರು.

ಸರಕುಗಳನ್ನು ಮಾರಾಟ ಮಾಡಿದರೆ ಅದನ್ನು ಮಾರಾಟಗಾರ ಎಂತಲೂ, ಸರಕುಗಳನ್ನು ಉತ್ಪಾದಿಸುವ ಅಥವಾ ತಯಾರಿಸುವವರನ್ನು ಉತ್ಪಾದಕ ಎಂದು ಕರೆಯಬಹುದು. ಇತರರಿಗಾಗಿ ಕೆಲಸ ಮಾಡಿ ಅಥವಾ ತನ್ನ ಕೆಲಸಕ್ಕಾಗಿ ಹಣ ಪಡೆಯುವವನು ಸೇವಾಧಾರಿ ಎನ್ನುವರು. ಈ ಎಲ್ಲಾ ಚಟುವಟಿಕೆಗಳು ಮಾನವನ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಚಟುವಟಿಕೆಗಳು ದೈನಂದಿನ ಜೀವನದ ವ್ಯವಹಾರವಾಗಿದೆ. ಅರ್ಥಶಾಸ್ತ್ರವು ಮಾನವ ಜೀವನಕ್ಕೆ ಪರಿಣಾಮ ಬೀರುವ ಆರ್ಥಿಕ ಮತ್ತು ಉತ್ಪಾದಕ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಸಂಪನ್ಮೂಲಗಳು ಮಿತವಾಗಿವೆ ಮತ್ತು ಪರ್ಯಾಯ ಬಳಕೆಯನ್ನು ಹೊಂದಿವೆ. ಈ ಎಲ್ಲಾ ಸಂಪನ್ಮೂಲಗಳು ಉತ್ಪಾದನೆ ಮತ್ತು ಅನುಭೋಗ ಎರಡಕ್ಕೂ ಉಪಯೋಗಿಸಬಹುದಾಗಿದೆ. ನಾವು ಅರ್ಥಶಾಸ್ತ್ರದಲ್ಲಿ ಉತ್ಪಾದನೆ, ವಿತರಣೆ, ಅನುಭೋಗ, ಕ್ಷೇಮ ಮತ್ತು ಜನರ ಜೀವನ ಮಟ್ಟವನ್ನು ಅಭ್ಯಸಿಸುತ್ತೇವೆ.

7. ಸಂಖ್ಯಾಶಾಸ್ತ್ರದ ವಿಧಾನಗಳು ಸಾಮಾನ್ಯ ಜ್ಞಾನಕ್ಕೆ ಪರ್ಯಾಯವಲ್ಲ, ನಿಮ್ಮ ನಿತ್ಯ ಜೀವನದಲ್ಲಿನ ಉದಾಹರಣೆಯೊಂದಿಗೆ ಇದನ್ನು ವಿಶ್ಲೇಷಿಸಿರಿ.

ಹೌದು, ಸಂಖ್ಯಾಶಾಸ್ತ್ರದ ವಿಧಾನಗಳು ಸಾಮಾನ್ಯ ಜ್ಞಾನಕ್ಕೆ ಪರ್ಯಾಯವಲ್ಲ, ಈ ಹೇಳಿಕೆಯು ಸಂಖ್ಯಾಶಾಸ್ತ್ರದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೊಡುತ್ತದೆ. ಇದು ವಿದ್ಯಾರ್ಥಿಗಳಿಗೆ ಸಂಖ್ಯಾಶಾಸ್ತ್ರದ ಸಾಮಾನ್ಯ ಜ್ಞಾನವಿಲ್ಲದೆ ಬಳಸಬಾರದು ಎಂದು ಒತ್ತಾಯಿಸುತ್ತದೆ. ಈ ಮುಂದಿನ ಹೇಳಿಕೆ ಸಹಾಯದಿಂದ ಇದು ಸತ್ಯ ಎಂಬುದು ತಿಳಿದು ಬರುತ್ತದೆ.

ಸಂಖ್ಯಾಶಾಸ್ತ್ರವನ್ನು ಹಾಸ್ಯ ಮಾಡಲಿಕ್ಕೆ ಒಂದು ಆಸಕ್ತಿದಾಯಕ ಕಥೆಯು ಹೇಳಲ್ಪಟ್ಟಿದೆ. ಒಂದು ಕುಟುಂಬದ ನಾಲ್ಕು ಜನರು (ಗಂಡ/ಹೆಂಡತಿ ಮತ್ತು ಇಬ್ಬರು ಮಕ್ಕಳು) ಒಮ್ಮೆ ನದಿ ದಾಟುತ್ತಿದ್ದರು. ತಂದೆಗೆ ನದಿಯ ಸರಾಸರಿ ಆಳ ತಿಳಿದಿತ್ತು. ಹೀಗಾಗಿ ಅವನು ತನ್ನ ಕುಟುಂಬ ಸದಸ್ಯರ ಸರಾಸರಿ ಎತ್ತರವನ್ನು ಲೆಕ್ಕ ಹಾಕುತ್ತಾರೆ. ನದಿಯ ಸರಾಸರಿ ಆಳಕ್ಕಿಂತ ಆ ಕುಟುಂಬದ ಸರಾಸರಿ ಎತ್ತರ ಜಾಸ್ತಿ ಇರುವುದರಿಂದ

ಹೆಚ್ಚುವರಿ ಪ್ರಶೋತ್ತರಗಳು

1. ಗ್ರಾಹಕ ಎಂದರೆ ಒಬ್ಬ ವ್ಯಕ್ತಿ

ಎ) ಸರಕುಗಳನ್ನು ಉತ್ಪಾದಿಸುವನು

ಬಿ) ಇತರಿಗಾಗಿ ಕೆಲಸ ಮಾಡಿ ಅಥವಾ ತನ್ನ ಕೆಲಸಕ್ಕಾಗಿ ಹಣ ಪಡೆಯುವವನು

ಸಿ) ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಸರಕುಗಳನ್ನು ಕೊಂಡುಕೊಳ್ಳುವವನು

ಡಿ) ಹಣಕ್ಕಾಗಿ ಇತರರಿಗೆ ಸೇವೆಯನ್ನು ಒದಗಿಸುವವನು.

2. “ರಾಷ್ಟ್ರಗಳ ಸಂಪತ್ತು” ಎಂಬ ಪುಸ್ತಕದ ಕರ್ತೃ ಯಾರು

ಎ) ಜೆ.ಬಿ.ಸೇ

ಬಿ) ಆಡಂಸ್ಮಿತ್

ಸಿ) ಕಾರ್ಲ್ ಮಾರ್ಕ್ಸ್

ಡಿ) ಜೆ.ಎಸ್‌.ಮಿಲ್

3. ಈ ಕೆಳಗಿನವುಗಳಲ್ಲಿ ಯಾವುದು ಆರ್ಥಿಕೇತರ ಚಟುವಟಿಕೆ ಅಲ್ಲ?

ಎ) ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸುವುದು

ಬಿ) ವಿಕಲಚೇತನ ವ್ಯಕ್ತಿಗೆ ಸಹಾಯ ಮಾಡುವುದು

ಸಿ) ಹಣದ ರೂಪದಲ್ಲಿ ಸರಕು ಮತ್ತು ಸೇವೆಗಳನ್ನು ಕೊಳ್ಳುವುದು ಮತ್ತು ಮಾರುವುದು

ಡಿ) ಪ್ರಾರ್ಥನೆಗೆ ಹಾಜರಾಗುವುದು

4. ಈ ಕೆಳಗಿನವುಗಳಲ್ಲಿ ಯಾವುದು ಆರ್ಥಿಕ ಚಟುವಟಿಕೆಯಲ್ಲ?

ಎ) ರಕ್ತದಾನ ಶಿಬಿರವನ್ನು ಆಯೋಜಿಸುವುದು

ಬಿ) ಬಟ್ಟೆ, ಟೈಲರ್ ಇತ್ಯಾದಿಗಳ ಸಹಾಯದಿಂದ ಅಂಗಿಗಳನ್ನು ತಯಾರಿಸುವುದು.

ಸಿ) ವಾರ್ತಾಪತ್ರಿಕೆಗಳು, ಪುಸ್ತಕಗಳು ಇತ್ಯಾದಿಗಳನ್ನು ಪ್ರಕಟಿಸಲು ಪ್ರಿಂಟಿಂಗ್ ಯಂತ್ರಗಳ ಉತ್ಪಾದನೆ.

ಡಿ) ಕಾರ್ಮಿಕರಿಗೆ ಕೂಲಿ ನೀಡುವುದು.

5. ಈ ಕೆಳಗಿನವುಗಳಲ್ಲಿ ಯಾವುದು ಆರ್ಥಿಕ ಚಟುವಟಿಕೆಯಲ್ಲ?

ಎ) ಉತ್ಪಾದನೆ

ಬಿ) ವಿತರಣೆ

ಸಿ) ಸಾಮಾಜಿಕ ಚಟುವಟಿಕೆಗಳು,

ಡಿ) ಹೂಡಿಕೆ

6. ಅರ್ಥಶಾಸ್ತ್ರಕ್ಕೆ ಸಂಪತ್ತಿನ ವ್ಯಾಖ್ಯೆ ನೀಡಿದವರಾರು?

ಎ) ಆಬ್ರೆಡ್ ಮಾರ್ಷಲ್

ಬಿ) ಆಡಂಸ್ಮಿತ್

ಸಿ) ಲಿಯೋನೆಲ್ ರಾಬಿನ್‌ಸನ್

ಡಿ)ಪೌಲ್ ಎ. ಸಾಮ್ಯುಲ್‌ಸನ್

7. ಅರ್ಥಶಾಸ್ತ್ರದ ಪಿತಾಮಹ ಯಾರು?

ಎ) ಜೆ.ಬಿ.ಸೇ

ಬಿ) ಆಡಂಸ್ಮಿತ್

ಸಿ) ಲಿಯೋನೆಲ್ ರಾಬಿನ್‌ಸನ್‌

ಡಿ) ಜೆ.ಎಸ್.ಮಿಲ್

8. ಯಾವುದು ವಾಸ್ತವಿಕ ವಿಜ್ಞಾನಕ್ಕೆ ಉದಾಹರಣೆಯಲ್ಲ?

ಎ) ಪ್ರಪಂಚದಲ್ಲಿಯೇ ಭಾರತವು 2ನೇ ಅತಿದೊಡ್ಡ ಜನಸಂಖ್ಯಾ ದೇಶವಾಗಿದೆ.

ಬಿ) ಭಾರತದಲ್ಲಿ ಬೆಲೆಗಳು ಏರುತ್ತಿವೆ.

ಸಿ) ಭಾರತವು ರಕ್ಷಣೆಗೆ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದೆ.

ಡಿ) ಸರಕಿನ ಬೆಲೆಗಳ ಇಳಿಕೆಯು ಅದರ ಬೇಡಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.

9. ಗುಣಾತ್ಮಕ ಹೇಳಿಕೆಯನ್ನು ಆಯ್ಕೆ ಮಾಡಿ :

ಎ) ದೆಹಲಿಯಲ್ಲಿನ ಜನರು ಸಸ್ಯಾಹಾರಿಗಳಾಗಿದ್ದಾರೆ

ಬಿ) ವಿದ್ಯಾರ್ಥಿಗಳ ಬುದ್ಧಿಶಕ್ತಿ

ಸಿ) ವಿದ್ಯಾರ್ಥಿಗಳ ಎತ್ತರ

ಡಿ) ವ್ಯಕ್ತಿಯ ಆದಾಯ

10. ಸಂಖ್ಯಾಶಾಸ್ತ್ರವನ್ನು

ಎ) ಒಂದು ಅರ್ಥ

ಬಿ) ಎರಡು ಅರ್ಥ

ಸಿ) ಮೂರು ಅರ್ಥ

ಡಿ) ನಾಲ್ಕು ಅರ್ಥ

11. ಸಂಖ್ಯಾಶಾಸ್ತ್ರ ಅಧ್ಯಯನದ ಮೊದಲ ಹಂತ ಯಾವುದು?

ಎ) ದತ್ತಾಂಶಗಳ ವಿಶ್ಲೇಷಣೆ

ಬಿ) ದತ್ತಾಂಶದ ಅಭಿವ್ಯಕ್ತಿ

ಸಿ) ದತ್ತಾಂಶಗಳ ಸಂಗ್ರಹಣೆ

ಡಿ) ದತ್ತಾಂಶದ ವ್ಯಾಖ್ಯಾನ

12. ಯಾವುದು ಸಂಖ್ಯಾಶಾಸ್ತ್ರದ ಕಾರ್ಯಗಳಲ್ಲ?

ಎ) ಸಂಖ್ಯಾಶಾಸ್ತ್ರ ಕಠಿಣ ದತ್ತಾಂಶವನ್ನು ಸರಳೀಕರಿಸುತ್ತದೆ.

ಬಿ) ಸಂಖ್ಯಾಶಾಸ್ತ್ರ ಮುಂದಾಗುವುದನ್ನು ಅಂದಾಜಿಸಲು ಸಹಾಯ ಮಾಡುತ್ತದೆ.

ಸಿ) ಸಂಖ್ಯಾಶಾಸ್ತ್ರ ನಮ್ಮನ್ನು ಧಾರ್ಮಿಕ ವ್ಯಕ್ತಿಗಳನ್ನಾಗಿಸುತ್ತದೆ.

ಡಿ) ಸಂಖ್ಯಾಶಾಸ್ತ್ರ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1st Puc Economics Chapter 11 Notes

1. ಅರ್ಥಶಾಸ್ತ್ರ ಎಂದರೇನು?

ಜನರು ಮತ್ತು ಸಮಾಜ ತಮ್ಮ ಬಯಕೆಗಳ ತೃಪ್ತಿಗಾಗಿ ತಮ್ಮ ಸಮಾಜದ ವಿವಿಧ ಜನರು ಮತ್ತು ಗುಂಪುಗಳ ಅನುಭೋಗಕ್ಕಾಗಿ ವಿತರಣೆಗೆ ಸರಕು ಮತ್ತು ಸೇವೆಗಳ ಉತ್ಪಾದಿಸಲು ಪರ್ಯಾಯ ಅನುಭೋಗವುಳ್ಳ ವಿರಳ ಸಂಪನ್ಮೂಲಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕೆಂಬುದರ ಅಧ್ಯಯನಕ್ಕೆ ಅರ್ಥಶಾಸ್ತ್ರ ಎನ್ನುವರು.

2. ಅರ್ಥಶಾಸ್ತ್ರವನ್ನು ವ್ಯಾಖ್ಯಾನಿಸಿ.

ಪ್ರೊ|| ಲಿಂನಲ್ ರಾಬಿನ್ಸ್‌ರವರ ಪ್ರಕಾರ : “ಪರ್ಯಾಯ ಉಪಯೋಗಗಳನ್ನೊಳಗೊಂಡ ಕೊರತೆಯಲ್ಲಿರುವ ಸಾಧನಗಳು ಮತ್ತು ಗುರಿಗಳ ಸಂಬಂಧದಲ್ಲಿ ಮಾನವನ ವರ್ತನೆಯನ್ನು ಅಭ್ಯಾಸ ಮಾಡುವ ವಿಜ್ಞಾನವೇ ಅರ್ಥಶಾಸ್ತ್ರ”.

3. ಅರ್ಥಶಾಸ್ತ್ರದ ಪಿತಾಮಹ ಯಾರು?

ಪ್ರೊ|| ಆಡಂಸ್ಮಿತ್ ಅರ್ಥಶಾಸ್ತ್ರದ ಪಿತಾಮಹ.

4. ಅನುಭೋಗಿ ಎಂದರೆ ಯಾರು?

ಕುಟುಂಬದ ಅಥವಾ ಯಾವುದೇ ವ್ಯಕ್ತಿಗೆ ಉಡುಗೊರೆಯಾಗಿ ನೀಡಲು ಸರಕುಗಳನ್ನು ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಅಥವಾ ತನ್ನ ಅಗತ್ಯಗಳಿಗಾಗಿ ಕೊಂಡುಕೊಳ್ಳುವ ವ್ಯಕ್ತಿಗೆ ಅನುಭೋಗಿ ಎನ್ನುವರು.

5. ಮಾರಾಟಗಾರ ಎಂದು ಯಾರಿಗೆ ಕರೆಯಲಾಗುತ್ತದೆ?

ಲಾಭಕ್ಕಾಗಿ ಸರಕುಗಳನ್ನು ಮಾರುವವರನ್ನು ಮಾರಾಟಗಾರ ಕರೆಯಲಾಗುತ್ತದೆ.

6. ಉತ್ಪಾದಕ ಎಂದರೇನು?

ಸರಕುಗಳನ್ನು ಉತ್ಪಾದಿಸುವವರನ್ನು ಅಥವಾ ತಯಾರಕರನ್ನು ಉತ್ಪಾದಕ ಎನ್ನುವರು.

7. ಸೇವಾಧಾರಿಯ ಅರ್ಥ ಕೊಡಿ.

ಉದ್ಯೋಗದಲ್ಲಿದ್ದು, ಇತರಿಗಾಗಿ ಕೆಲಸ ಮಾಡುತ್ತಿದ್ದರೆ, ಮತ್ತು ಅದಕ್ಕೆ ಸಂಭಾವನೆ ಪಡೆಯುತ್ತಿರುವವರನ್ನು ಸೇವಾಧಾರಿ ಎಂದು ಕರೆಯುವರು.

8. ಸೇವಾಧಾತ ಎಂದರೇನು?

ಹಣಕ್ಕಾಗಿ ಇತರರಿಗೆ ಸೇವೆಯನ್ನು ಒದಗಿಸುವವನು.

9. ಆರ್ಥಿಕ ಚಟುವಟಿಕೆಗಳೆಂದರೇನು?

ಹಣಗಳಿಕೆಗಾಗಿ ಕೈಗೊಳ್ಳುವ ಚಟುವಟಿಕೆಗಳೇ ಆರ್ಥಿಕ ಚಟುವಟಿಕೆಗಳು. ಇದನ್ನು ದೈನಂದಿನ ಜೀವನ ವ್ಯವಹಾರ ಎಂದು ಕರೆದಿದ್ದಾರೆ.

10. ಲಾಭದಾಯಕ ಉದ್ಯೋಗಿ ಎಂದರೇನು?

ಒಂದು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರನ್ನು ಲಾಭದಾಯಕ ಉದ್ಯೋಗಿಯಾಗಿದ್ದಾರೆ.

11. ಆರ್ಥಿಕ ಚಟುವಟಿಕೆಗಳನ್ನು ಹೆಸರಿಸಿ.

ಆರ್ಥಿಕ ಚಟುವಟಿಕೆಗಳೆಂದರೆ :

1) ಅನುಭೋಗ

2) ಉತ್ಪಾದನೆ

3) ವಿತರಣೆ

4) ವಿನಿಮಯ

12. ಅನುಭೋಗದ ಅರ್ಥ ಕೊಡಿ.

ನಮ್ಮ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಸರಕು ಮತ್ತು ಸೇವೆಗಳನ್ನು ಬಳ ಕ್ರಿಯೆಗೆ ಅನುಭೋಗ ಎಂದು ಕರೆಯಲಾಗಿದೆ.

13. ಉತ್ಪಾದನೆಯ ಅರ್ಥ ತಿಳಿಸಿ.

ಸರಕು ಮತ್ತು ಸೇವೆಗಳನ್ನು ತಯಾರು ಮಾಡುವ ಕ್ರಿಯೆಗೆ ಉತ್ಪಾದನೆ ಎನ್ನುತ್ತೇವೆ. ಇಲ್ಲಿ ಒಬ್ಬ ಉತ್ಪಾದಕನು ವಿವಿಧ ಸರಕು ಮತ್ತು ಸೇವೆಗಳ ವೆಚ್ಚ ಮತ್ತು ಬೆಲೆಗಳ ಅರಿವು ಇದ್ದಾಗ ಉತ್ಪಾದನಾ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾನೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ.

14. ವಿತರಣೆ ಅಧ್ಯಯನದ ಉಪಯೋಗವನ್ನು ತಿಳಿಸಿ.

ದೇಶದಲ್ಲಿ ಏನೆಲ್ಲಾ ಉತ್ಪಾದನೆ ಆಗಿದೆಯೋ ಅವುಗಳಿಂದ ಬರುವ ರಾಷ್ಟ್ರೀಯ ಆದಾಯವು ಕೂಲಿ, ಲಾಭ ಮತ್ತು ಬಡ್ಡಿಗಳ ರೂಪದಲ್ಲಿ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ತಿಳಿಯುವುದು. ಇದು ವಿತರಣೆಯ ಅಧ್ಯಯನವಾಗಿದೆ.

15. ವಿನಿಮಯದಲ್ಲಿ ಏನನ್ನು ಅಭ್ಯಾಸ ಮಾಡುವಿರಿ?

ಜನರು ತಮ್ಮ ನಡುವೆ ಸರಕು ಮತ್ತು ಸೇವೆಗಳನ್ನು ವಿನಿಮಯ ಮಾಡಿಕೊಳ್ಳುವ ಕ್ರಿಯೆಗೆ ‘ಏನಿಮಯ’ ಎನ್ನುವರು. ಇಲ್ಲಿ ಬೆಲೆ, ಮೌಲ್ಯ, ಹಣ, ಹಣಕಾಸು, ವ್ಯಾಪಾರ ಮುಂತಾದ ಪರಿಭಾವನೆಗಳನ್ನು ಅಭ್ಯಾಸ ಮಾಡುತ್ತೇವೆ.

16. ದತ್ತಾಂಶಗಳೆಂದರೇನು?

ಒಂದು ವಿಷಯದ ಕುರಿತು ಉತ್ತಮ ತಿಳುವಳಿಕೆಗಾಗಿ ಅಥವಾ ನಿರ್ಣಯ ಕೈಗೊಳ್ಳಲು ನಿರ್ದಿಷ್ಟ ಮಾಹಿತಿಯನ್ನು ತಿಳಿಸುವುದಕ್ಕಾಗಿ ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸಿದ ಸಂಖ್ಯೆಗಳ ಗಣವನ್ನು ದತ್ತಾಂಶಗಳು ಎಂದು ಕರೆಯುತ್ತೇವೆ.

17. ನೀತಿಗಳು ಎಂದರೇನು?

ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಕ್ರಮಗಳನ್ನು ನೀತಿಗಳು ಎನ್ನುವರು.

18. ಸಂಖ್ಯಾಶಾಸ್ತ್ರವನ್ನು ಏಕವಚನದಲ್ಲಿ ವ್ಯಾಖ್ಯಾನಿಸಿ.

ಏಕವಚನದಲ್ಲಿ ಸಂಖ್ಯಾಶಾಸ್ತ್ರವೆಂದರೆ : “ಸಂಖ್ಯಾರೂಪದ ದತ್ತಾಂಶಗಳ ಸಂಗ್ರಹಣೆ, ಅಭಿವ್ಯಕ್ತಿ, ವಿಶ್ಲೇಷಣೆ ಮತ್ತು ವ್ಯಾಖ್ಯಾನಿಸುವ ವಿಜ್ಞಾನ”.

19. ಸಂಖ್ಯಾಶಾಸ್ತ್ರವನ್ನು ಬಹುವಚನದಲ್ಲಿ ವ್ಯಾಖ್ಯಾನಿಸಿ.

ಬಹುವಚನದಲ್ಲಿ ಸಂಖ್ಯಾಶಾಸ್ತ್ರವೆಂದರೆ : “ವ್ಯವಸ್ಥಿತವಾಗಿ ಸಂಗ್ರಹಿಸಲ್ಪಟ್ಟ ಅಂಕಿಸಂಖ್ಯಾ ಮಾಹಿತಿ” ಎಂದಾಗುತ್ತದೆ. ಅಂದರೆ ದತ್ತಾಂಶವೆಂದಾಗಿದೆ.

20, ಸಂಖ್ಯಾಶಾಸ್ತ್ರದ ವರ್ಗೀಕರಣ ತಿಳಿಸಿ.

ಸಂಖ್ಯಾಶಾಸ್ತ್ರದ ವರ್ಗೀಕರಣವೆಂದರೆ :

1) ಪರಿಮಾಣಾತ್ಮಕ ಸಂಗತಿ

2) ಗುಣಾತ್ಮಕ ಸಂಗತಿ

21. ಸಂಖ್ಯಾಶಾಸ್ತ್ರದ ಅರ್ಥ ನೀಡಿ.

ಅರ್ಥಪೂರ್ಣ ತೀರ್ಮಾನವನ್ನು ಕೈಗೊಳ್ಳಲು ದತ್ತಾಂಶಗಳನ್ನು ಸಂಗ್ರಹಿಸುವ ಸಂಘಟಿಸುವ, ನಿರೂಪಿಸುವ ಮತ್ತು ವಿಶ್ಲೇಷಿಸುವ ವಿಧಾನ, ಮುಂದುವರೆದು ಇದು ದತ್ತಾಂಶಗಳು ಎಂಬ ಅರ್ಥವನ್ನು ಸಹ ನೀಡುತ್ತದೆ.

22. ಪರಿಮಾಣಾತ್ಮಕ ಸಂಗತಿ ತಿಳಿಸಿ.

ಮಾಹಿತಿ ಮತ್ತು ದತ್ತಾಂಶಗಳನ್ನು ಸಂಖ್ಯೆಗಳ ಮೂಲಕ ವ್ಯಕ್ತಪಡಿಸುವುದು.

23. ಗುಣಾತ್ಮಕ ಸಂಗತಿಯ ಅರ್ಥ ನೀಡಿ.

ಮಾಹಿತಿ ಮತ್ತು ದತ್ತಾಂಶಗಳನ್ನು ಗುಣವಿಶೇಷಣಗಳ ರೂಪದಲ್ಲಿ ವ್ಯಕ್ತಪಡಿಸುವುದು.

24. ನಿಮ್ಮ ನಿತ್ಯಜೀವನದಲ್ಲಿ ನೀವು ಕಾಣುವ ಯಾವುದಾದರು ಎರಡು ಪ್ರಕಾರದ ಕೊರತೆಗಳನ್ನು ಬರೆಯಿರಿ.

ರೈಲ್ವೆ ಬುಕ್ಕಿಂಗ್‌ ಕೌಂಟರ್‌ನಲ್ಲಿ ಉದ್ದ ಸರತಿ ಸಾಲು, ಭರ್ತಿಯಾಗಿರುವ ಬಸ್ಸು ಮತ್ತು ರೈಲುಗಳು, ಅಗತ್ಯ ಸರಕುಗಳ ಕೊರತೆ, ಹೊಸ ಸಿನಿಮಾ ನೋಡುವ ಸಲುವಾಗಿ ಟಿಕೆಟ್ ಪಡೆಯಲು ನೂಕುನುಗ್ಗಲು ಇತ್ಯಾದಿಗಳು.

25. ಉತ್ಪಾದನಾಂಗಗಳಾವುವು?

ಒಂದು ದೇಶದ ಸಂಪನ್ಮೂಲಗಳನ್ನು ನಾಲ್ಕು ಅಂಗಗಳಾಗಿ ವಿಂಗಡಿಸಬಹುದು. ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆ.

26, ಆರ್ಥಿಕ ಸಮಸ್ಯೆ ಎಂದರೇನು?

ಅದು ಹೇಗೆ ಉದ್ಭವಿಸುತ್ತದೆ? ಅಪರಿಮಿತ ಬಯಕೆಗಳು ಮತ್ತು ಮಿತ ಸಂಪನ್ಮೂಲಗಳಿಂದ ಉದ್ಭವವಾಗುವ ಆಯ್ಕೆಯ ಸಮಸ್ಯೆಯನ್ನು ಆರ್ಥಿಕ ಸಮಸ್ಯೆ ಎನ್ನುವರು.ಬಯಕೆ ಮತ್ತು ಸಂಪನ್ಮೂಲಗಳ ನಡುವೆ ಪರಿಪೂರ್ಣ ಅನುರೂಪತೆ ಇ ಇದ್ದಾಗ್ಯೂ, ಆರ್ಥಿಕ ಸಮಸ್ಯೆ ಉದ್ಭವಿಸುತ್ತದೆ.

27. ಅರ್ಥಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರದ ಪ್ರಾಮುಖ್ಯತೆಯನ್ನು ವಿವರಿಸಿ.

  • ಒಂದು ಆರ್ಥಿಕ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅದನ್ನು ಪರಿಹರಿಸಲು ಆರ್ಥಿಕ ನೀತಿಯನ್ನು ರೂಪಿಸಲು ಸಂಖ್ಯಾಶಾಸ್ತ್ರವು ಒಬ್ಬ ಅರ್ಥಶಾಸ್ತ್ರಜ್ಞನಿಗೆ ಅತ್ಯಗತ್ಯವಾದ ಪರಿಕರವಾಗಿದೆ.
  • ಸಂಖ್ಯಾಶಾಸ್ತ್ರವು ಒಬ್ಬ ಅರ್ಥಶಾಸ್ತ್ರಜ್ಞರು ಆರ್ಥಿಕ ಸಂಗತಿಗಳನ್ನು ಸಂಕ್ಷಿಪ್ತ ಮತ್ತು ನಿರ್ದಿಷ್ಟ ರೂಪದಲ್ಲಿ ನಿರೂಪಿಸಲು ಸಮರ್ಥರನ್ನಾಗಿ ಮಾಡುತ್ತದೆ. ಮತ್ತು ಇದು ಹೇಳಿಕೆಯ ನಿರ್ದಿಷ್ಟ ಗ್ರಹಿಕೆಗೆ ಸಹಾಯಮಾಡುತ್ತದೆ. ಆರ್ಥಿಕ ಸಂಗತಿಗಳನ್ನು ಸಂಖ್ಯಾಶಾಸ್ತ್ರದ ರೂಪದಲ್ಲಿ ವ್ಯಕ್ತಪಡಿಸಿದಾಗ ಅವು ಹೆಚ್ಚು ಕರಾರುವಕ್ಕಾಗಿರುತ್ತವೆ.
  • ಸಂಖ್ಯಾಶಾಸ್ತ್ರವು ಸಾಂದ್ರೀಕೃತ ಗುಂಪು ದತ್ತಾಂಶಗಳನ್ನು ಕೆಲವೇ ಸಂಖ್ಯಾರೂಪದ ಅಳತೆಗಳನ್ನಾಗಿ ಬದಲಾಯಿಸಲು ಸಹಾಯ ಮಾಡುತ್ತದೆ. ಇಂತಹ ಸಂಖ್ಯಾತ್ಮಕ ಅಳತೆಗಳು ದತ್ತಾಂಶಗಳನ್ನು ಸಂಕ್ಷಿಪ್ತಗೊಳಿಸಲು ಸಹಾಯಕವಾಗುತ್ತವೆ.
  • ಆಗಾಗ್ಗೆ ಸಂಖ್ಯಾಶಾಸ್ತ್ರವು ವಿವಿಧ ಆರ್ಥಿಕ ಸಂಗತಿಗಳ ನಡುವಿನ ಸಂಬಂಧವನ್ನು ಗುರುತಿಸಲು ಬಳಸಲಾಗುತ್ತದೆ. ಉದಾ : ಒಂದು ಸರಕಿನ ಬೆಲೆ ಮತ್ತು ಅದರ ಬೇಡಿಕೆಯ ನಡುವಿನ ಸಂಬಂಧ, ಉತ್ಪಾದನೆ ಮತ್ತು ಅದರ ಬೆಲೆ ಇತ್ಯಾದಿ.
  • ಸಂಖ್ಯಾಶಾಸ್ತ್ರವು ಮುಂದಾಗುವುದನ್ನು ಅಂದಾಜಿಸಲು ಸಹಾಯ ಮಾಡುತ್ತದೆ. ಭವಿಷ್ಯವು ಅನಿಶ್ಚಿತವಾಗಿದೆ. ಭವಿಷ್ಯವನ್ನು ಮುಂದಾಗಿ ಹೇಳುವುದು, ಸಾಧ್ಯವೇ ಇಲ್ಲ. ಆದರೆ ಸಂಖ್ಯಾಶಾಸ್ತ್ರದ ಪರಿಕರಗಳ ಸಹಾಯದಿಂದ ಭವಿಷ್ಯದ ಪ್ರವೃತ್ತಿಯನ್ನು ಮೊದಲೇ ಅಂದಾಜಿಸಬಹುದು.
  • ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಸಂಖ್ಯಾಶಾಸ್ತ್ರವು ಮಹತ್ತರ ಸೇವೆಯನ್ನು ನೀಡುತ್ತದೆ. ಸರ್ಕಾರದ ಯೋಜನೆ ಮತ್ತು ನೀತಿ ರಚನೆಯು ಬೇಡಿಕೆ, ಉತ್ಪಾದನೆ ಮುಂತಾದವುಗಳಿಗೆ ಸಂಬಂಧಿಸಿದ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿದೆ.

FAQ

1. ಅರ್ಥಶಾಸ್ತ್ರವನ್ನು ವ್ಯಾಖ್ಯಾನಿಸಿ.

ಪ್ರೊ|| ಲಿಂನಲ್ ರಾಬಿನ್ಸ್‌ರವರ ಪ್ರಕಾರ : “ಪರ್ಯಾಯ ಉಪಯೋಗಗಳನ್ನೊಳಗೊಂಡ ಕೊರತೆಯಲ್ಲಿರುವ ಸಾಧನಗಳು ಮತ್ತು ಗುರಿಗಳ ಸಂಬಂಧದಲ್ಲಿ ಮಾನವನ ವರ್ತನೆಯನ್ನು ಅಭ್ಯಾಸ ಮಾಡುವ ವಿಜ್ಞಾನವೇ ಅರ್ಥಶಾಸ್ತ್ರ”.

2. ಆರ್ಥಿಕ ಚಟುವಟಿಕೆಗಳೆಂದರೇನು?

ಹಣಗಳಿಕೆಗಾಗಿ ಕೈಗೊಳ್ಳುವ ಚಟುವಟಿಕೆಗಳೇ ಆರ್ಥಿಕ ಚಟುವಟಿಕೆಗಳು. ಇದನ್ನು ದೈನಂದಿನ ಜೀವನ ವ್ಯವಹಾರ ಎಂದು ಕರೆದಿದ್ದಾರೆ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh