rtgh

ಪ್ರಥಮ ಪಿ.ಯು.ಸಿ ದತ್ತಾಂಶಗಳ ಸಂಗ್ರಹಣೆ ಅರ್ಥಶಾಸ್ತ್ರ ನೋಟ್ಸ್‌ | 1st Puc Economics Chapter 12 Notes

ಪ್ರಥಮ ಪಿ.ಯು.ಸಿ ದತ್ತಾಂಶಗಳ ಸಂಗ್ರಹಣೆ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 1st Puc Economics Chapter 12 Notes Question Answer Pdf in Kannada Medium Kseeb Solutions For Class 11 Economics Chapter 12 Notes 1st Puc Dattamshagala Sangrahane Economics Notes Pdf 1st Puc Economics Collection of Data Notes 2023

 

1st Puc Economics Chapter 12 Notes in Kannada

1. ಕೆಳಗಿನ ಪ್ರಶ್ನೆಗಳಿಗೆ 4 ಸೂಕ್ತವಾದ ಬಹು ಆಯ್ಕೆ ಉತ್ತರವನ್ನು ರಚಿಸಿ

(i) ನೀವು ಹೊಸ ಉಡುಪನ್ನು ಖರೀದಿಸುವಾಗ ಕೆಳಗಿನವುಗಳಲ್ಲಿ ಯಾವುವು ಅತ್ಯಂತ ಮುಖ್ಯವಾದುವು?

ಆಕರ್ಷಕ / ದುಬಾರಿ | ಅಗ್ಗದ / ಬಾಳಿಕೆ ಬರುವ

(ii) ಗಣಕಯಂತ್ರವನ್ನು ನೀವು ಎಷ್ಟು ಬಾರಿ ಉಪಯೋಗಿಸುವಿರಿ?

ಪ್ರತಿದಿನ | ವಾರಕ್ಕೊಮ್ಮೆ / ಆಗಾಗ್ಗೆ / ತಿಂಗಳಿಗೊಮ್ಮೆ

(ii) ಯಾವ ಯಾವ ದಿನ ಪತ್ರಿಕೆಗಳನ್ನು ನೀವು ನಿಯಮಿತವಾಗಿ ಓದುವಿರಿ?

ಹಿಂದೂಸ್ತಾನ್ ಟೈಮ್ಸ್ / ದಿ ಹಿಂದು / ಪ್ರಜಾವಾಣಿ / ವಿಜಯಕರ್ನಾಟಕ

(iv) ಪೆಟ್ರೋಲ್ ಬೆಲೆಯಲ್ಲಿನ ಏರಿಕೆಯನ್ನು ಸಮರ್ಥಿಸಲಾಗಿದೆ.

ಇಲ್ಲ / ಹೌದು / ಅನ್ಯಾಯದ / ಸಮರ್ಥನೆ

(v) ನಿಮ್ಮ ಕುಟುಂಬದ ಮಾಸಿಕ ಆದಾಯ ಎಷ್ಟು?

2000 ಕ್ಕಿಂತ ಕಡಿಮೆ / 2000 – 3000 ನಡುವೆ / 3000 – 5000 ನಡುವೆ / 5000 – 10000 ದ ನಡುವಣ.2

2. ದ್ವಿ-ಮಾರ್ಗದ ಐದು ಪ್ರಶ್ನೆಗಳನ್ನು – ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರ) ರಚಿಸಿ (ಸರಿ ಅಥವಾ ತಪ್ಪು ಬರೆಯಿರಿ).

1) ನಿಮ್ಮ ಕ್ಷೇತ್ರದಲ್ಲಿ ಎದ್ಯುಚ್ಛಕ್ತಿ ಪೂರೈಕೆ ಸರಿಯಾಗಿದೆಯೇ?

2) ವಿದ್ಯುಚ್ಛಕ್ತಿ ದರದಲ್ಲಿನ ಏರಿಕೆ ಸಮರ್ಥಿಸಲಾಗಿದೆ.

3) ದೂಮಪಾನವನ್ನು ನಿಷೇಧಿಸಬೇಕು ಎಂದು ನೀವೂ ಯೋಚಿಸಿದ್ದೀರಾ?

4) ಮಧ್ಯಪಾನವನ್ನು ನಿಷೇಧಿಸಬೇಕು ಎಂದು ನೀವೂ ಯೋಚಿಸಿದ್ದೀರಾ?

5) ಸರ್ಕಾರವು ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ನಿಮಗೆ ಅನಿಸುತ್ತದೆಯೇ?

3. ಕೆಳಗಿನ ಹೇಳಿಕೆಗಳು ಸರಿಯೇ, ತಪ್ಪೇ ಎಂದು ತಿಳಿಸಿ,

(i) ದತ್ತಾಂಶಗಳ ಮೂಲಗಳು ಬಹಳ ಇವೆ.

ಸರಿ

(ii) ಜನರು ವಿದ್ಯಾವಂತರಾಗಿದ್ದಾಗ ಮತ್ತು ವಿಶಾಲವಾದ ಪ್ರದೇಶದಲ್ಲಿ ಚದುರಿದ್ದಾಗ ದತ್ತಾಂಶವನ್ನು ಸಂಗ್ರಹಿಸಲು ದೂರವಾಣಿ ಸಮೀಕ್ಷೆಯು ಅತ್ಯಂತ ಸೂಕ್ತ ವಿಧಾನವಾಗಿದೆ.

ಸರಿ

(iii) ಸಂಶೋಧಕನು ಸಂಗ್ರಹಿಸಿದ ದತ್ತಾಂಶಕ್ಕೆ ಮಾಧ್ಯಮಿಕ ದತ್ತಾಂಶ ಎಂದು ಕರೆಯುತ್ತೇವೆ.

ಸರಿ

(iv) ನಿಶ್ಚಿತ (ಯಾದೃಚ್ಛಿಕವಲ್ಲದ) ಮಾದರಿಯ ಆಯ್ಕೆಯು ನಿರ್ದಿಷ್ಟ ಪಕ್ಷಪಾತವನ್ನು ಒಳಗೊಂಡಿರುತ್ತದೆ.

ತಪ್ಪು

(v) ಮಾದರಿ ಅಲ್ಲದೆ ವಿಧಾನದಲ್ಲಿನ ದೋಷಗಳನ್ನು ಅಧಿಕ ಸಂಖ್ಯೆ ಮಾದರಿಯನ್ನು ತೆಗೆದುಕೊಳ್ಳುವುದರಿಂದ ಕನಿಷ್ಠ ಗೊಳಿಸಬಹುದು.

ತಪ್ಪು

4 ಕೆಳಕಂಡ ಪ್ರಶ್ನೆಗಳ ಬಗ್ಗೆ ಏನೆಂದು ಯೋಚಿಸುವಿರಿ? ಈ ಪ್ರಶ್ನೆಗಳಲ್ಲಿ ಯಾವುದಾದರೂ ಸಮಸ್ಯೆಗಳು ನಿಮಗೆ ಕಂಡುಬರುತ್ತಿದೆಯೇ? ವಿವರಿಸಿ.

(i) ಹತ್ತಿರದ ಮಾರುಕಟ್ಟೆಯಿಂದ ಎಷ್ಟು ದೂರದಲ್ಲಿ ನೀವು ವಾಸಿಸುತ್ತಿದ್ದೀರಾ? ಹತ್ತಿರ ಮಾರುಕಟ್ಟೆಯಿಂದ 2 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದೀನಿ.

(ii) ನಾವು ಹಾಕುವ ಕಸದಲ್ಲಿ ಕೇವಲ ಶೇ.5ರಷ್ಟು ಮಾತ್ರ ಪ್ಲಾಸ್ಟಿಕ್ ಚೀಲವಿದ್ದರೆ, ಅದನ್ನು ನಿಷೇಧಿಸಬೇಕೇ? ಹೌದು, ಪ್ಲಾಸ್ಟಿಕ್ ಚೀಲವನ್ನು ನಿಷೇಧಿಸಬೇಕು ಏಕೆಂದರೆ ಅವು ಭೂಮಿಯಲ್ಲಿ ಕ್ಷೀಣಿಸುವುದಿಲ್ಲ.

(iii) ಪೆಟ್ರೋಲ್ ಬೆಲೆಯಲ್ಲಿನ ಏರಿಕೆಯನ್ನು ನೀವು ವಿರೋಧಿಸುವುದಿಲ್ಲವೇ?

(iv) ರಾಸಾಯನಿಕ ಗೊಬ್ಬರದ ಬಳಕೆಯನ್ನು ನೀವು ಒಪ್ಪುತ್ತೀರಾ?

(v) ನಿಮ್ಮ ಜಮೀನಿನಲ್ಲಿ ನೀವು ಗೊಬ್ಬರವನ್ನು ಬಳಸುತ್ತೀರಾ? ಹೌದು.

(vi) ನಿಮ್ಮ ಜಮೀನಿನ ಪ್ರತಿ ಹೆಕ್ಟೇರ್‌ನಲ್ಲಿ ಬರುವ ಇಳುವರಿ(ಫಸಲು) ಎಷ್ಟು?

ಪ್ರತಿ ಹೆಕ್ಟೇರ್‌ನಲ್ಲಿ 50 ಕ್ವಿಂಟಾಲ್ ಇಳುವರಿ ಬರುತ್ತದೆ. ಈ ಮೇಲಿನ ಪ್ರಶ್ನೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡುಬರುತ್ತಿಲ್ಲ.

5.ನೀವು ಮಕ್ಕಳಲ್ಲಿ ವೆಜಿಟೇಬಲ್ ಅಟ್ಟಾ ನೂಡಲ್ಸ್‌ನ ಜನಪ್ರಿಯತೆ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ. ಈ ಮಾಹಿತಿಯನ್ನು ಸಂಗ್ರಹಿಸಲು ಸೂಕ್ತವಾದ ಪ್ರಶ್ನಾವಳಿಯನ್ನು ವಿನ್ಯಾಸಗೊಳಿಸಿ.

ಪ್ರಶ್ನಾವಳಿಯ ವಿನ್ಯಾಸ

1) ಅನುಭೋಗಿಯ ಹೆಸರು

2) ಲಿಂಗ (ಪುರುಷ / ಸ್ತ್ರೀ)

3) ಶಾಶ್ವತ ಮನೆವಿಳಾಸ

4) ಕುಟುಂಬದಲ್ಲಿನ ಮಕ್ಕಳ ಸಂಖ್ಯೆ

5) ನೀವು ವೆಜಿಟೇಬಲ್ ಅಟ್ಟಾ ನೂಡಲ್ಸ್‌ನ್ನು ಸೇವಿಸಲು ಬಯಸುವೀರಾ?

(ಹೌದು / ಇಲ್ಲ)

6) ಹೌದಾದರೆ, ನೀವು ಯಾಕೆ ನಿರ್ದಿಷ್ಟವಾಗಿ ಅಟ್ಟಾ ನೂಡಲ್ಸ್‌ನ್ನು ಬಯಸುವೀರಿ?

7) ನೀವು ಈ ಉತ್ಪನ್ನವು ದುಬಾರಿ ಎಂದು ಕಂಡುಕೊಂಡಿದ್ದೀರಾ? (ಹೌದು / ಇಲ್ಲ)

8) ನೀವು ಬಳಸಿದ ಪದಾರ್ಥಗಳನ್ನು ಪರೀಕ್ಷಿಸುತ್ತೀರಾ? (ಹೌದು / ಇಲ್ಲ) |

6. 200 ಕೃಷಿಕ್ಷೇತ್ರಗಳಿರುವ ಒಂದು ಹಳ್ಳಿಯಲ್ಲಿ ಬೆಳೆ ಹಂಚಿಕೆ ವಿಧಾನದ ಅಧ್ಯಯನ ನಡೆಸಲಾಗಿದೆ. ಇದರಲ್ಲಿ 50 ಕೃಷಿಕ್ಷೇತ್ರಗಳ ಸಮೀಕ್ಷೆ ನಡೆಸಿದಾಗ, ಶೇ.50ರಷ್ಟು ಮಾತ್ರ ಗೋಧಿ ಬೆಳೆಯುತ್ತಿದ್ದರು. ಹಾಗಾದರೆ ಜನಸಂಖ್ಯೆ ಮತ್ತು ಮಾದರಿ

ಸಮೀಕ್ಷೆಯ ಗಾತ್ರ ಎಷ್ಟು?

ಜನಸಂಖ್ಯೆ : ಎಲ್ಲ 200 ಕೃಷಿ ಕ್ಷೇತ್ರಗಳು

ಮಾದರಿ : 50 ಕೃಷಿ ಕ್ಷೇತ್ರಗಳು

7. ಮಾದರಿ, ಜನಸಂಖ್ಯೆ ಮತ್ತು ಚಲಕಗಳಿಗೆ ಎರಡೆರಡು ಉದಾಹರಣೆಗಳನ್ನು ನೀಡಿ.

ಮಾದರಿ ಉದಾಹರಣೆಗಳು : ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿ, ಮಹಿಳಾ ಕಾರ್ಮಿಕರ ಆರ್ಥಿಕ ಸ್ಥಿತಿಗತಿಗಳು, ಒಂದು ಪ್ರದೇಶದ ಮೇಲೆ ಉಂಟಾಗುವ ಪರಿಣಾಮಗಳು.

ಜನಸಂಖ್ಯೆಗೆ ಉದಾಹರಣೆಗಳು : ಜನಸಂಖ್ಯಾ ಜನನ ಮತ್ತು ಮರಣದರ, ಸಾಕ್ಷರತೆ, ಉದ್ಯೋಗ, ಜೀವಿತಾವಧಿ, ಜನಸಂಖ್ಯಾ ಗಾತ್ರ ಮತ್ತು ರಚನೆ ಇತ್ಯಾದಿಗಳು,

ಚಲಕಗಳ ಉದಾಹರಣೆಗಳು : ಆಹಾರ ಧಾನ್ಯಗಳ ಉತ್ಪಾದನೆಯಲ್ಲಿನ ಬದಲಾವಣೆ, ಜನಸಂಖ್ಯೆಯಲ್ಲಿ ಬದಲಾವಣೆ, ವಸ್ತುಗಳ ಬೆಲೆಯಲ್ಲಿ ಬದಲಾವಣೆ ಮುಂತಾದವು.

8. ಕೆಳಗಿನ ಯಾವ ವಿಧಾನವು ಉತ್ತಮ ಫಲಿತಾಂಶವನ್ನು ನೀಡುತ್ತದೆ ಮತ್ತು ಏಕೆ?

ಜನಗಣತಿ

ಜನಸಂಖ್ಯೆಯ ಪ್ರತಿಯೊಂದು ಅಂಶವನ್ನು ಹೊಂದಿರುವ ಸಮೀಕ್ಷೆಗೆ ಜನಗಣತಿ ಎನ್ನುತ್ತೇವೆ. ಒಬ್ಬ ಶೋಧಕನು ಭಾರತದ ಒಟ್ಟು ಜನಸಂಖ್ಯೆಯನ್ನು ಅಧ್ಯಯನ ಮಾಡಬೇಕಾದರೆ ಆತನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಒಂದು ಕುಟುಂಬವನ್ನು ಬಿಡದೆ ಎಲ್ಲ ಕುಟುಂಬಗಳಿಂದಲೂ ಮಾಹಿತಿಯನ್ನು ಪಡೆಯಬೇಕಾಗುತ್ತದೆ.

ಅನುಕೂಲಗಳು :

  • ಜನಗಣತಿಯಲ್ಲಿ ಫಲಿತಾಂಶವು ಸ್ಪಷ್ಟ, ನಿಖರ ಮತ್ತು ನಂಬಲರ್ಹ ವಾದುದಾಗಿರುತ್ತದೆ.
  • ದತ್ತಾಂಶ ಸಂಗ್ರಹಣೆಯ ಕಾಲದಲ್ಲಿ ಪೂರ್ವಾಗ್ರಹಗಳು ಉದ್ಭವಿಸುವುದಿಲ್ಲ.
  • ಜನಗಣತಿಯು ಎಲ್ಲಾ ಸಮಯದಲ್ಲೂ ಸೂಕ್ತವಾಗುವುದಿಲ್ಲ.
  • ವಿಶ್ವದ ವಿವಿಧ ಲಕ್ಷಣಗಳನ್ನು ಸುಲಭವಾಗಿ ಅಧ್ಯಯನ ಮಾಡಬಹುದಾಗಿದೆ.

ಅನಾನುಕೂಲಗಳು :

  • ಇದಕ್ಕೆ ಹೆಚ್ಚು ಶಕ್ತಿ, ಹಣ ಮತ್ತು ಸಮಯ ಬೇಕಾಗುತ್ತದೆ.
  • ವಿಶ್ವ ಚಿಕ್ಕದಾಗಿದ್ದರೆ ಇದು ಅನುಕೂಲಕರವಾಗಿರುತ್ತದೆ.
  • ಇದು ಒಂದು ಅವೈಜ್ಞಾನಿಕ ವಿಧಾನವಾಗಿದೆ.

ಮಾದರಿ ಸಮೀಕ್ಷೆ

ಜನಸಂಖ್ಯೆ ಅಥವಾ ವಿಶ್ವದಿಂದ ತೆಗೆದುಕೊಂಡಂತಹ ಮಾದರಿಗಳಿಂದ ಅಥವಾ ಘಟಕಗಳ ಗುಂಪಿನಿಂದ ದತ್ತಾಂಶಗಳನ್ನು ಸಂಗ್ರಹಿಸುವ ವಿಧಾನಕ್ಕೆ ಮಾದರಿ ಸಮೀಕ ಭಾಗವಾಗಿರುತ್ತದೆ. ಎನ್ನುತ್ತೇವೆ. ಮಾದರಿಯು ಜನಸಂಖ್ಯೆಯ ಪ್ರಾತಿನಿಧಿಕ

ಅನುಕೂಲಗಳು :

  • ಮಾದರಿ ಸಮೀಕ್ಷೆ ಸರಳ ಮತ್ತು ವೈಜ್ಞಾನಿಕವಾಗಿದೆ.
  • ಜನಸಂಖ್ಯೆಗಿಂತ ಚಿಕ್ಕದಾಗಿದ್ದು, ಕಡಿಮೆ ವೆಚ್ಚ ಮತ್ತು ಸಮಯ ಬೇಕಾಗಿದೆ.
  • ಜನಸಂಖ್ಯೆಯ ಬಗ್ಗೆ ಸಕಾರಣವಾದ, ಖಚಿತ ಮಾಹಿತಿಯನ್ನು ಕೊಡುವ ಸಾಮರ್ಥ್ಯ ಹೊಂದಿರುತ್ತದೆ.
  • ಮಾದರಿಯು ಚಿಕ್ಕದಾಗಿರುವುದರಿಂದ ತೀವ್ರ ರೀತಿಯಲ್ಲಿ ವಿಚಾರಿಸುವುದರ ಮೂಲಕ ಹೆಚ್ಚು ವಿವರವಾದ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ.

ಅನಾನುಕೂಲಗಳು

  • ಮೇಲ್ವಿಚಾರಣೆ ಮಾಡುವುದು ಸುಲಭ ಆದರೂ ಮಾದರಿ ಸಮೀಕ್ಷೆಯು ಚಿಕ್ಕ ಜನಸಂಖ್ಯೆಗೆ ಸೂಕ್ತವಾದುದಲ್ಲ.
  • ತಪ್ಪಾಗಿ ಆಯ್ದ ಮಾದರಿಯು ತಪ್ಪಾದ ವಿಶ್ಲೇಷಣೆಗೆ ಮತ್ತು ತಪ್ಪು ತೀರ್ಮಾನಗಳಿಗೆ ದಾರಿಯಾಗುತ್ತದೆ.
  • ಮಾದರಿಗಳು ಪ್ರಾತಿನಿಧಿಕ ಮಾತ್ರವೇ ಆಗಿರುವುದರಿಂದ ಈ ವಿಧಾನದಲ್ಲಿ ಫಲಿತಾಂಶವು ಸಂಪೂರ್ಣವಾಗಿರುವುದಿಲ್ಲ.

9. ಕೆಳಗಿನ ಯಾವ ದೋಷವು ಹೆಚ್ಚು ಗಂಭೀರವಾದುದು ಮತ್ತು ಏಕೆ?

(1) ಮಾದರಿ ಆಯ್ಕೆಯ ದೋಷಗಳು

ಮಾದರಿ ಉದ್ದೇಶ ಜನಸಂಖ್ಯೆಯನ್ನು ಅಂದಾಜು ಮಾಡುವುದು. ಮಾದರಿ ಆಯ್ಕೆಯ ದೋಷಗಳು ಮಾದರಿ ಅಂದಾಜಿನ ಮತ್ತು ಜನಸಂಖ್ಯೆಯ ಸಹಜ ಗುಣಲಕ್ಷಣಗಳ ನಡುವಿನ ದೋಷಗಳ ವ್ಯತ್ಯಾಸವೇ ಆಗಿರುತ್ತದೆ. ಈ ದೋಷಗಳು ನೀವು ಜನಸಂಖ್ಯೆಯಲ್ಲಿನ ಮಾದರಿಯನ್ನು ತೆಗೆದುಕೊಂಡು ಗಮನಿಸಿದಾಗ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಜನಸಂಖ್ಯೆಯ ಮಾನದಂಡದ ನೈಜ ಬೆಲೆ (ಯಾವುದು ತಿಳಿದಿಲ್ಲವೋ) ಮತ್ತು ಇದರ ಅಂದಾಜು ಬೆಲೆಯ (ಮಾದರಿಯಿಂದ) ವ್ಯತ್ಯಾಸವೇ “ಮಾದರಿಯ ದೋಷಗಳು, ಬೃಹತ್‌ ಪ್ರಮಾಣದ ಮಾದರಿಗಳನ್ನು ತೆಗೆದುಕೊಳ್ಳುವುದರಿಂದ ಮಾದರಿಯ ದೋಷಗಳ ಪರಿಮಾಣವನ್ನು ಕಡಿಮೆ ಮಾಡಬಹುದು.

(2) ಮಾದರಿ ಆಯ್ಕೆಯಲ್ಲದ ವಿಧಾನದ ದೋಷಗಳು

ಮಾದರಿ ಆಯ್ಕೆಯಲ್ಲದ ವಿಧಾನದ ದೋಷಗಳು ಮಾದರಿ ಆಯ್ಕೆ ದೋಷಗಳಿಗಿಂತ ಹೆಚ್ಚು ಗಂಭೀರವಾಗಿದೆ. ಏಕೆಂದರೆ ಅಧಿಕ ಸಂಖ್ಯೆಯ ಮಾದರಿಯನ್ನು ತೆಗೆದುಕೊಂಡರೆ ಮಾದರಿ ಆಯ್ಕೆಯ ವಿಧಾನದಲ್ಲಿನ ದೋಷಗಳನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಬಹುದು. ಆದರೆ ಅಧಿಕ ಸಂಖ್ಯೆಯ ಮಾದರಿಯನ್ನು ತೆಗೆದುಕೊಂಡರೂ ಸಹ ಮಾದರಿ ಆಯ್ಕೆ ಅಲ್ಲದ ವಿಧಾನದ ದೋಷಗಳನ್ನು ಕನಿಷ್ಟಗೊಳಿಸುವುದು ಕಷ್ಟವಾಗುತ್ತದೆ. ಜನಗಣತಿಯೂ ಸಹ ಮಾದರಿ ಅಲ್ಲದ ವಿಧಾನದಲ್ಲಿನ ದೋಷಗಳನ್ನು ಹೊಂದಿರುತ್ತವೆ. ಕೆಲವು

ಮಾದರಿ ಆಯ್ಕೆ ಅಲ್ಲದ ವಿಧಾನದ ದೋಷಗಳು ಯಾವುವೆಂದರೆ :

1) ದತ್ತಾಂಶಗಳ ಅರ್ಜನೆಯಲ್ಲಿನ ದೋಷಗಳು

2) ಪ್ರತಿಸ್ಪಂದನ ರಹಿತ ದೋಷಗಳು

3) ಪಕ್ಷಪಾತ ಮಾದರಿ

10. ನಿಮ್ಮ ತರಗತಿಯಲ್ಲಿ 10 ವಿದ್ಯಾರ್ಥಿಗಳಿದ್ದಾರೆ ಎಂದು ಭಾವಿಸೋಣ. ಇದರಲ್ಲಿ ನೀವು 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಇಚ್ಚಿಸುವಿರಿ. ಹಾಗಾದರೆ ಎಷ್ಟು ಮಾದರಿಯಲ್ಲಿ ಆಯ್ಕೆ ಮಾಡಲು ಸಾಧ್ಯ?

10 ಮಾದರಿಯಲ್ಲಿ ಆಯ್ಕೆ ಮಾಡಬಹುದಾಗಿದೆ.

11. ನಿಮ್ಮ ತರಗತಿಯಲ್ಲಿನ 10 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಲಾಟರಿ ವಿಧಾನವನ್ನು ಹೇಗೆ ಉಪಯೋಗಿಸುವಿರಿ? ಚರ್ಚಿಸಿ

ತರಗತಿಯಲ್ಲಿನ 10 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಲಾಟರಿ ವಿಧಾನದಲ್ಲಿ ಈ ಕೆಳಗಿನ ಮಾರ್ಗಗಳನ್ನು ಅನುಸರಿಸಬಹುದು.

  • ನಾವು ಒಂದೇ ರೀತಿಯ 10 ಚೀಟಿಗಳನ್ನು ತೆಗೆದುಕೊಳ್ಳಬೇಕು. ಅದು ಗಾತ್ರ, ಬಣ್ಣ ಎಲ್ಲವೂ ಒಂದೇ ಆಗಿದ್ದರೆ ಆಯ್ಕೆಯ ಪಕ್ಷಪಾತವನ್ನು ತಡೆಗಟ್ಟಬಹುದು. ಈ ಎಲ್ಲಾ ಚೀಟಿಗಳ ಮೇಲೆ 10 ವಿದ್ಯಾರ್ಥಿಗಳ ಹೆಸರನ್ನು ಬರೆಯಬೇಕು.
  • ಈ ಎಲ್ಲಾ ಚೀಟಿಗಳನ್ನು ಬಟ್ಟಲಿನಲ್ಲಿ ಮಿಶ್ರಣಮಾಡಬೇಕು.
  • ಬಟ್ಟಲಿನಿಂದ ಒಂದರ ನಂತರ ಒಂದನ್ನು 3 ಬಾರಿ ಚೀಟಿಗಳನ್ನು ತೆಗೆಯಬೇಕು. ಈ ಮಾರ್ಗದ ಮೂಲಕ 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

12. ಲಾಟರಿ ವಿಧಾನವು ಯಾವಾಗಲೂ ಅನಿಶ್ಚಿತ (ಯಾದೃಚ್ಛಿಕ) ಮಾದರಿಯನ್ನು ನೀಡುತ್ತದೆಯೆ? ವಿವರಿಸಿ.

ಇಲ್ಲ, ಲಾಟರಿ ವಿಧಾನವು ಯಾವಾಗಲೂ ಅನಿಶ್ಚಿತ ಮಾದರಿಯನ್ನು ನೀಡುವುದಿಲ್ಲ ಏಕೆಂದರೆ ಈ ವಿಧಾನವು “ಅವಕಾಶ’ಗಳ ಆಧಾರವಾಗಿದೆ.

13. ನಿಮ್ಮ ತರಗತಿಯಲ್ಲಿನ 10 ವಿದ್ಯಾರ್ಥಿಗಳಲ್ಲಿ ಅನಿಶ್ಚಿತ ಮಾದರಿಯ 3 ವಿದ್ಯಾರ್ಥಿಗಳನ್ನು ಅನಿಶ್ಚಿತ ಸಂಖ್ಯಾ ಪಟ್ಟಿಯನ್ನು ಉಪಯೋಗಿಸಿ ಆಯ್ಕೆ ಮಾಡುವ ಕ್ರಮವನ್ನು ವಿವರಿಸಿ.

ಯಾದೃಚ್ಛಿತ (ಅನಿಶ್ಚಿತ) ಸಂಖ್ಯಾ ಕೋಷ್ಟಕವು ಜನಸಂಖ್ಯೆಯಲ್ಲಿನ ಪ್ರತಿಯೊಂದು ವೈಯಕ್ತಿಕ ಘಟಕಕ್ಕೂ ಆಯ್ಕೆಯಾಗುವ ಸಮಾನವಾದ ಭರವಸೆಯನ್ನು ನೀಡುವಂತೆ ರಚಿತವಾಗಿರುತ್ತದೆ. ಇವುಗಳು ಪ್ರಕಟಿತ ರೂಪದಲ್ಲಿ ಲಭ್ಯವಾಗುತ್ತದೆ. ಇಲ್ಲಿ 10 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳನ್ನು ಮಾದರಿಯಾಗಿ ಆಯ್ಕೆ ಮಾಡಬೇಕು. ಇದರಲ್ಲಿ ಗರಿಷ್ಟ ಕ್ರಮಸಂಖ್ಯೆ ಎರಡು ಅಂಕೆಯ ಸಂಖ್ಯೆ 10. ಆದ್ದರಿಂದ ನಾವು ಎರಡು ಅಂಕೆಯ ಅನಿಶ್ಚಿತ ಸಂಖ್ಯೆಗಳನ್ನು ಅನುಕ್ರಮವಾಗಿ ಸಮಾಲೋಚಿಸುತ್ತೇವೆ. ನಾವು 10 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇರುವುದಿಲ್ಲ. ಆದ್ದರಿಂದ ಆಯ್ಕೆ ಮಾಡಿದ 3 ಕುಟುಂಬಗಳ ಕ್ರಮ ಸಂಖ್ಯೆಗಳು ಈ ರೀತಿಯಲ್ಲಿರುತ್ತವೆ. 5, 9, 2.

14. ಸಮೀಕ್ಷೆಗಿಂತ ಮಾದರಿಯು ಉತ್ತಮ ಫಲಿತಾಂಶವನ್ನು ನೀಡುತ್ತದೆಯೆ? ನಿಮ್ಮ ಉತ್ತರಕ್ಕೆ ಕಾರಣ ಕೊಡಿ.

ಜನಸಂಖ್ಯೆಯೊಂದರ ಸಮೀಕ್ಷೆಯ ಉದ್ದೇಶಕ್ಕೆ ಅನುಸಾರವಾಗಿ ಯಾವಾಗಲೂ ಎಲ್ಲಾ ವ್ಯಕ್ತಿಗಳು / ವಸ್ತುಗಳು ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವುದಾಗಿದೆ. ಮಾದರಿಯ ಆಯ್ಕೆಯಲ್ಲಿ ಮೊದಲ ಕೆಲಸವೇನೆಂದರೆ ಜನಸಂಖ್ಯೆಯನ್ನು ಗುರ್ತಿಸುವುದು. ಒಮ್ಮೆ ಜನಸಂಖ್ಯೆಯನ್ನು ಗುರ್ತಿಸಿದ ನಂತರ ಒಟ್ಟಾರೆ ಜನಸಂಖ್ಯೆಯನ್ನು ಅಧ್ಯಯನ ಮಾಡಲು ಕಷ್ಟವಾಗುವುದರಿಂದ ಸಂಶೋಧಕನು ಮಾದರಿಯ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾನೆ. ಸಾಮಾನ್ಯವಾಗಿ ಉತ್ತಮ ಮಾದರಿಯು ಜನಸಂಖ್ಯೆಗಿಂತ ಚಿಕ್ಕದಾಗಿರುತ್ತದೆ ಮತ್ತು ಸಮಂಜಸವಾದ ನಿಖರವಾದ ಮಾಹಿತಿಯನ್ನು ಕಡಿಮೆ ಸಮಯ ಮತ್ತು ಕಡಿಮೆ ವೆಚ್ಚದಲ್ಲಿ ಕೊಡುವ ಸಾಮರ್ಥ್ಯ ಹೊಂದಿರುತ್ತದೆ.

ಹೆಚ್ಚುವರಿ ಪ್ರಶೋತ್ತರಗಳು

1st Puc Economics Chapter 12 Notes

1. ದತ್ತಾಂಶ ಎಂದರೇನು?

ಒಂದು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮಾಹಿತಿ ಒದಗಿಸುವ ಸಾಧನವೇ ದತ್ತಾಂಶ.

2. ದತ್ತಾಂಶ ಸಂಗ್ರಹಣೆಯ ಉದ್ದೇಶವೇನು?

ದತ್ತಾಂಶ ಸಂಗ್ರಹಣೆಯ ಉದ್ದೇಶವೆಂದರೆ ಒಂದು ನಿರ್ದಿಷ್ಟ ಸಮಸ್ಯೆ ಅಥವಾ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಒದಗಿಸುವುದು. ಆ ರೀತಿ ಸಂಗ್ರಹಿಸಿದ ದತ್ತಾಂಶಗಳು ಸಮಸ್ಯೆಯೊಂದರ ಪರಿಹಾರವನ್ನು ತಲುಪಲು ನಿದರ್ಶನವಾಗುತ್ತದೆ.

3. ಚಲಕಗಳು ಎಂದರೇನು?

ಆರ್ಥಿಕ ಸಂಗತಿಗಳ ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇರುವುದರಿಂದ ಈ ಮಾಲ್ಯಗಳನ್ನು “ಚಲಕಗಳು” ಎಂದು ಕರೆಯುತ್ತೇವೆ.

4. ದತ್ತಾಂಶ ಸಂಗ್ರಹಣೆಯ ಎರಡು ವಿಧಗಳನ್ನು ಹೆಸರಿಸಿ.

ದತ್ತಾಂಶ ಸಂಗ್ರಹಣೆಯ ಎರಡು ವಿಧಗಳೆಂದರೆ :

1) ಪ್ರಾಥಮಿಕ ದತ್ತಾಂಶ

2) ಮಾಧ್ಯಮಿಕ ದತ್ತಾಂಶ

5. ಪ್ರಾಥಮಿಕ ದತ್ತಾಂಶದ ಅರ್ಥ ತಿಳಿಸಿ.

ಶೋಧಕನು ದತ್ತಾಂಶವನ್ನು ವಿಚಾರಣೆ ಅಥವಾ ತನಿಖೆ ಮಾಡುವುದರ ಮೂಲಕ ಸಂಗ್ರಹಿಸುವುದಾಗಿದೆ. ಇಂತಹ ದತ್ತಾಂಶವನ್ನು ಪ್ರಾಥಮಿಕ ದತ್ತಾಂಶ ಎನ್ನುವರು.

6. ಶೋಧಕ ಎಂದರೆ ಯಾರು?

ಸಾಂಖ್ಯಿಕ ಸಮೀಕ್ಷೆಯನ್ನು ಕೈಗೊಳ್ಳುವ ವ್ಯಕ್ತಿಯನ್ನು ಶೋಧಕನೆಂದು ಕರೆಯುತ್ತೇವೆ.

7. ಪ್ರಾಥಮಿಕ ದತ್ತಾಂಶ ಸಂಗ್ರಹಣೆಯ ವಿಧಾನಗಳನ್ನು ಬರೆಯಿರಿ.

ಪ್ರಾಥಮಿಕ ದತ್ತಾಂಶ ಸಂಗ್ರಹಣೆಯ ವಿಧಾನಗಳೆಂದರೆ :

1) ವೈಯಕ್ತಿಕ ಸಂದರ್ಶನಗಳು

2) ಪ್ರಶ್ನಾವಳಿಯ ಅಂಚೆಮೂಲಕ ರವಾನಿಸುವುದು

3) ದೂರವಾಣಿ ಸಂದರ್ಶನಗಳು

8. ಮಾಧ್ಯಮಿಕ ದತ್ತಾಂಶದ ಅರ್ಥ ನೀಡಿ.

ಇತರರು ಈಗಾಗಲೇ ಸಂಗ್ರಹಿಸಿದ ಮತ್ತು ಸಂಸ್ಕರಿಸಿದ (ಪರೀಕ್ಷಿಸಿ ಮತ್ತು ಪಟ್ಟಿ ಮಾಡಿದ) ದತ್ತಾಂಶಗಳನ್ನು “ಮಾಧ್ಯಮಿಕ ದತ್ತಾಂಶ” ಎನ್ನುತ್ತೇವೆ.

9. ಮಾಧ್ಯಮಿಕ ದತ್ತಾಂಶದ ಪ್ರಕಟಿತ ಮೂಲಗಳು ಯಾವುವು?

ಮಾಧ್ಯಮಿಕ ದತ್ತಾಂಶದ ಪ್ರಕಟಿತ ಮೂಲಗಳೆಂದರೆ

1) ಅಂತರರಾಷ್ಟ್ರೀಯ ಪ್ರಕಟಣೆಗಳು

2) ಸರ್ಕಾರಿ ಪ್ರಕಟಣೆಗಳು

3) ನಿಯತಕಾಲಿಕೆಗಳು, ದಿನಪತ್ರಿಕೆಗಳು

4) ಅರ್ಥಶಾಸ್ತ್ರಜ್ಞರು ಬರೆದ ಪುಸ್ತಕಗಳು

10. ವೈಯಕ್ತಿಕ ಸಂದರ್ಶನವನ್ನು ನೀವು ಹೇಗೆ ಅರ್ಥೈಸುತ್ತೀರಿ?

ಈ ವಿಧಾನದಲ್ಲಿ ಶೋಧಕನು, ದತ್ತಾಂಶವನ್ನು ವೈಯಕ್ತಿಕವಾಗಿ ಸಂಗ್ರಹಿಸಿ, ಪ್ರತಿವಾದಿಯ ಜೊತೆ ಮುಖಾಮುಖಿ ಸಂದರ್ಶನ ನಡೆಸಿ ಅವರಿಂದ ಪೂರಕ ಮಾಹಿತಿಯನ್ನು ಸಂಗ್ರಹಿಸಿ ವಿಧಾನ ಇಲ್ಲಿ ಸಂದರ್ಶಕನು ಪ್ರತಿವಾದಿಯ ಸ್ಥಳವಾಗಿರುತ್ತಾರೆ.

11. ರಚನಾತ್ಮಕ ಪ್ರಶ್ನಾವಳಿ ಎಂದರೇನು?

ರಚನಾತ್ಮಕ ಪ್ರಶ್ನಾವಳಿಯು ಮುಚ್ಚಿದ ಎಲ್ಲೆಯ ಪ್ರಶ್ನೆಗಳನ್ನು ಒಳಗೊಂಡಿದ್ದು ಅವುಗಳಿಗೆ ಉತ್ತರ ಆಯ್ಕೆ ಮಾಡಲು ಬಹು ಸಾಧ್ಯತಾ ಉತ್ತರಗಳನ್ನು ನೀಡಲಾಗಿರುತ್ತವೆ.

12. ಪ್ರಶ್ನಾವಳಿ ಎಂದರೇನು?

ತನಿಖೆಯ ವಿಷಯಕ್ಕಾಗಿ ತನಿಖೆದಾರನು ಸಿದ್ಧಪಡಿಸಿದ ಪ್ರಶ್ನೆಗಳ ಪಟ್ಟಿ ಪ್ರತಿವಾದಿಯು ಈ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿದೆ.

13. ಪೈಲೆಟ್ ಮತ್ತು ಮಾರ್ಗದರ್ಶಕ ಸಮೀಕ್ಷೆಯ ಅರ್ಥ ಕೊಡಿ.

ಒಮ್ಮೆ ಪ್ರಶ್ನಾವಳಿಯನ್ನು ಸಿದ್ಧಪಡಿಸಿದ ನಂತರ ಒಂದು ಸಣ್ಣ ಗುಂಪಿನೊಂದಿಗೆ ಪರೀಕ್ಷಿಸಿ ನೋಡುವುದಕ್ಕೆ ಪ್ರಶ್ನಾವಳಿಯ ಪೈಲೆಟ್ ಪೂರ್ವಭಾವಿ ಪರೀಕ್ಷೆ ಎನ್ನುತ್ತೇವೆ.

14. ಜನಗಣತಿ ಎಂದರೇನು?

ಜನಸಂಖ್ಯೆಯ ಪ್ರತಿಯೊಂದು ಅಂಶವನ್ನು ಹೊಂದಿರುವ ಸಮೀಕ್ಷೆಗೆ ಜನಗಣತಿ ಎನ್ನುವರು.

15. ಮಾದರಿ ಸಮೀಕ್ಷೆಯ ಅರ್ಥ ತಿಳಿಸಿ

ಜನಸಂಖ್ಯೆ ಅಥವಾ ವಿಶ್ವಗಣದಿಂದ ಆಯ್ಕೆ ಮಾಡಲ್ಪಟ್ಟ ಪ್ರಾತಿನಿಧಿಕ ವ್ಯಕ್ತಿಗಳ ಗಣದ ಕುರಿತು ಪ್ರಾಪ್ತಾಂಕಗಳನ್ನು ಪಡೆಯುವ ವಿಧಾನವಾಗಿದೆ.

16. ಮಾದರಿ ಸಮೀಕ್ಷೆಯ ಎರಡು ಮುಖ್ಯ ವಿಧಗಳನ್ನು ತಿಳಿಸಿ,

ಮಾದರಿ ಸಮೀಕ್ಷೆಯ ಎರಡು ಮುಖ್ಯ ವಿಧಗಳೆಂದರೆ :

I) ಯಾದೃಚ್ಛಿಕ (ಅನಿಶ್ಚಿತ) ಮಾದರಿ

2) ಯಾದೃಚ್ಛಿಕ ಅಲ್ಲದ (ನಿಶ್ಚಿತ) ಮಾದರಿ

17. ಯಾದೃಚ್ಛಿಕ (ಅನಿಶ್ಚಿತ) ಮಾದರಿ ಜನಸಂಖ್ಯೆಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಇದು ಒಂದು ಮಾದರಿ ವಿಧಾನವಾಗಿದ್ದು, ಇದರಲ್ಲಿ ಪ್ರತಿಯೊಬ್ಬ ಮಾಹಿತಿದಾರನಿಗೂ ಆಯ್ಕೆಯಾಗುವ ಸಮಾನ ಅವಕಾಶವಿದ್ದು ಪ್ರತಿನಿಧಿತ ಮಾಹಿತಿದಾರರನ್ನು ಆಯ್ಕೆಮಾಡಲಾಗುತ್ತದೆ.

18. ಲಾಟರಿ ವಿಧಾನವನ್ನು ತಿಳಿಸಿ.

ಆಯ್ಕೆಯಾದ ಪ್ರತಿ ಮಾಹಿತಿದಾರನೂ ಯಾದೃಚ್ಛಿಕ (ಅನಿಶ್ಚಿತ) ಮಾದರಿಯಾಗಿರುತ್ತದೆ. ಇದನ್ನು ಲಾಟರಿ ವಿಧಾನ ಎಂದೂ ಕರೆಯುವರು.

19. ನಿಶ್ಚಿತ (ಯಾದೃಚ್ಚಿಕ ಅಲ್ಲದ) ಮಾದರಿಗಳ ಆಯ್ಕೆ ಎಂದರೇನು?

ನಿಶ್ಚಿತ ಮಾದರಿ ವಿಧಾನದಲ್ಲಿ ಜನಸಂಖ್ಯೆಯ ಎಲ್ಲಾ ಘಟಕಗಳು ಆಯ್ಕೆಯಲ್ಲಿ ಸಮಾನ ಅವಕಾಶಗಳನ್ನು ಹೊಂದಿರುವುದಿಲ್ಲ ಅಥವಾ ಶೋಧಕನ ತೀರ್ಪ ಮಾದರಿಯ ಆಯ್ಕೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತದೆ.

20. ಮಾದರಿಯ ದೋಷಗಳು ಎಂದರೇನು?

ಜನಸಂಖ್ಯೆಯ ಮಾನದಂಡದ ನೈಜ ಬೆಲೆ (ಯಾವುದು ತಿಳಿದಿಲ್ಲವೋ) ಮತ್ತು ಇದರ ಅಂದಾಜು ಬೆಲೆಯ (ಮಾದರಿಯಿಂದ) ವ್ಯತ್ಯಾಸವೇ “ಮಾದರಿಯ ದೋಷಗಳು” ಎನ್ನುವರು.

21. ಮಾದರಿ ಆಯ್ಕೆ ಅಲ್ಲದ ವಿಧಾನದ ದೋಷಗಳು ಯಾವುವು?

1) ದತ್ತಾಂಶಗಳ ಅರ್ಜನೆಯಲ್ಲಿನ ದೋಷಗಳು

2) ಪತಿಸಂದನ ರಹಿತ ದೋಷಗಳು

22. ಸಾಂಖ್ಯಿಕ ದತ್ತಾಂಶಗಳನ್ನು ಸಂಗ್ರಹಿಸಿ, ಕ್ರಮಬದ್ಧಗೊಳಿಸುವ ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಕೆಲವು ಸಂಸ್ಥೆಗಳಾವುವು?

ಭಾರತದ ಜನಗಣತಿ, ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್‌ (NSSO) ಸೆಂಟ್ರಲ್ ಸ್ಪ್ಯಾನಿಸ್ಟಿಕಲ್ ಆರ್ಗನೈಸೇಷನ್ (CSO), ರಿಜಿಸ್ಟ್ರಾರ್ ಜನರಲ್ ಆ ಇಂಡಿಯಾ (RGI), ಡೈರಕ್ಟರೇಟ್ ಜನರಲ್ ಆಫ್ ಕಮರ್ಷಿನಲ್ ಇಂಟಲಿಜೆನ್ಅಂಡ್ ಸ್ಟ್ಯಾಟಿಸ್ಟಿಕ್ಸ್ (DGC,I.S), ಲೇಬರ್ ಬ್ಯೂರೋ ಇತ್ಯಾದಿಗಳು. –

23. . ಸ್ವತಂತ್ರ ನಂತರ ಮೊದಲಸಲ ಜನಗಣತಿ ಯಾವಾಗ ನಡೆಯಿತು?

ಸ್ವತಂತ್ರ ನಂತರ ಮೊದಲ ಸಲ ಜನಗಣತಿ 1951ರಲ್ಲಿ ನಡೆಯಿತು.

24. NSSO ಅನ್ನು ವಿಸ್ತರಿಸಿ :

ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್

25. ಭಾರತದಲ್ಲಿ ದೇಶದಾದ್ಯಂತ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಸಮೀಕ್ಷೆಯನ್ನು ಯಾರು ಕೈಗೊಳ್ಳುತ್ತಾರೆ.

NSSO.

26. ಪ್ರಶ್ನಾವಳಿಯ ಲಕ್ಷಣಗಳನ್ನು ಬರೆಯಿರಿ.

ಪ್ರಶ್ನಾವಳಿ / ಸಂದರ್ಶನ ಪಟ್ಟಿಯನ್ನು ತಯಾರಿಸುವಾಗ ನೀವು ಕೆಳಕಂಡ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

1) ಪ್ರಶ್ನಾವಳಿಯು ಹೆಚ್ಚು ಉದ್ದವಾಗಿರಬಾರದು.

2) ಪ್ರಶ್ನಾವಳಿಯ ಸರಣಿ ಸಾಮಾನ್ಯದಿಂದ ನಿರ್ದಿಷ್ಟತೆಗೆ ಚಲಿಸಬೇಕು.

3) ಪ್ರಶ್ನೆಗಳು ಅಸ್ಪಷ್ಟವಾಗಿರಬಾರದು, ಪ್ರತಿವಾದಿಗಳು ಅವುಗಳನ್ನು ಶೀಘ್ರವಾಗಿ, ಸರಿಯಾಗಿ ಮತ್ತು ಸ್ಪಷ್ಟವಾಗಿ ಉತ್ತರಿಸುವಂತಿರಬೇಕು.

4) ಪ್ರಶ್ನೆಗಳಲ್ಲಿ ಎರಡು ನಿಷೇಧಗಳನ್ನು ಬಳಸಲಾರದು. ‘ಹಾಗಲ್ಲವೇ?’ ‘ಮಾಡುವುದಿಲ್ಲವೇ?’

5) ಪ್ರಶ್ನೆಗಳು ಪ್ರತಿವಾದಿಯು ಹೇಗೆ ಉತ್ತರಿಸಬೇಕೆಂಬುದರ ಬಗ್ಗೆ ಸುಳಿವು ನೀಡುವಂತಹ ಮಾರ್ಗದರ್ಶಕವಾಗಿರಬಾರದು.

6) ಪ್ರಶ್ನಾವಳಿಯು ಮುಚ್ಚಿದ ಎಲ್ಲೆಯ ಅಥವಾ ತೆರೆದ ಎಲ್ಲೆಯ ಪ್ರಶ್ನೆಗಳನ್ನು ಹೊಂದಿರಬಹುದು.

27, ‘ದತ್ತಾಂಶವು ಒಂದು ಸಮಸ್ಯೆಯನ್ನು ಮಾಹಿತಿಕೊಡುವುದರ ಮೂಲಕ ಅರ್ಥೈಸಿಕೊಳ್ಳಲು ಸಹಾಯ ಮಾಡುವ ಉಪಕರಣವಾಗಿದೆ. ಈ ಹೇಳಿಕೆಯನ್ನು ಉದಾಹರಣೆಯ ಮೂಲಕ ವಿವರಿಸಿ,

ಸಂಖ್ಯಾಶಾಸ್ತ್ರದ ಪ್ರಮುಖ ಕಾರ್ಯವೆಂದರೆ ಶೋಧಕನಿಗೆ ಅಗತ್ಯವಾದ ದತ್ತಾಂಶಗಳನ್ನು ಸಂಗ್ರಹಿಸಿ ತೀರ್ಮಾನಕ್ಕೆ ಬರಲು ಸಹಾಯ ಮಾಡುವುದು. ದತ್ತಾಂಶಗಳ ಸಂಗ್ರಹಣೆಯ ಉದ್ದೇಶವೆಂದರೆ ಒಂದು ನಿರ್ದಿಷ್ಟ ವಿಷಯ ಅಥವಾ ಸಮಸ್ಯೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡುವುದು. ಈ ರೀತಿ ಸಂಗ್ರಹಿಸಿದ ದತ್ತಾಂಶಗಳು ಸಮಸ್ಯೆಯೊಂದರ ಪರಿಹಾರವನ್ನು ತಲುಪಲು ನಿದರ್ಶನವಾಗುತ್ತದೆ.

ಉದಾ : ಹಲವಾರು ಏರಿಳಿತಗಳ ನಂತರ ಆಹಾರ ಧಾನ್ಯಗಳ ಉತ್ಪಾದನೆ 1990-91ರಲ್ಲಿ 176 ಮಿಲಿಯನ್ ಟನ್‌ಗಳಿಗೆ ಹಾಗೂ 1996-97ರಲ್ಲಿ 1999 ಮಿಲಿಯನ್ ಟನ್‌ಗಳಿಗೆ ಏರಿಕೆ ಆಗಿರುತ್ತದೆ. ಆದರೆ 1997-98ರಲ್ಲಿ 194ಮಿ ಟನ್‌ಗಳಿಗೆ ಇಳಿಕೆ ಆಗಿರುತ್ತದೆ. ನಂತರದ ವರ್ಷಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ನಿರಂತರವಾಗಿ ಏರಿಕೆ ಆಗುತ್ತಿದ್ದು, 2001 – 02ರಲ್ಲಿ 212 ಮಿ. ಟನ್‌ಗಳಿಗೆ ತಲುಪಿರುತ್ತದೆ. –

ಈ ಹೇಳಿಕೆಯಲ್ಲಿ ಗಮನಿಸಿದಾಗ ವಿವಿಧ ವರ್ಷಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಸ್ಥಿರವಾಗಿರುವುದಿಲ್ಲ. ಈ ಮೌಲ್ಯಗಳು ಬದಲಾಗುತ್ತಲೇ ಇರುವುದರಿಂದ ಈ ಮೌಲ್ಯಗಳನ್ನು “ಚಲಕಗಳು” ಎಂದು ಕರೆಯುತ್ತೇವೆ. ಇಂತಹ ಚಲಕಗಳನ್ನು X, y, z ಅಕ್ಷರಗಳು ಪ್ರತಿನಿಧಿಸುತ್ತವೆ. ಪ್ರತಿಯೊಂದು ಚಲಕಗಳ ಮೌಲ್ಯಗಳು ಒಂದು ಪ್ರಾಪ್ತಾಂಕ ಆಗಿರುತ್ತದೆ. ಇಲ್ಲಿ ವರ್ಷಗಳನ್ನು ‘x’ ಚಲಕವು ಮತ್ತು ಆಹಾರ ಧಾನ್ಯಗಳ ಉತ್ಪಾದನೆಯನ್ನು y ಚಲಕವು ಪ್ರತಿನಿಧಿಸುತ್ತದೆ.

ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ

(ಮಿಲಿಯನ್ ಟನ್‌ಗಳಲ್ಲಿ)

XY
1979 – 80108
1990 – 91176
1996 – 97199
1997 – 98194
2001 – 02212

ಇಲ್ಲಿ X ಮತ್ತು Y ಚಲಕಗಳ ಮೌಲ್ಯಗಳು ‘ದತ್ತಾಂಶಗಳಾಗಿದ್ದು’ ಇವುಗಳಿಂದ ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯ ಬಗ್ಗೆ ಮಾಹಿತಿ ಪಡೆಯಬಹುದು. ಆಹಾರ ಧಾನ್ಯಗಳ ಉತ್ಪಾದನೆಯ ಏರಿಳಿತವನ್ನು ತಿಳಿದುಕೊಳ್ಳಬೇಕಾದರೆ, ನಮಗೆ ವಿವಿಧ ವರ್ಷಗಳಲ್ಲಿನ ಆಹಾರ ಧಾನ್ಯಗಳ ಉತ್ಪಾದನೆಯ ‘ದತ್ತಾಂಶಗಳು’ ಬೇಕಾಗುತ್ತದೆ. ಹೀಗಾಗಿ ‘ದತ್ತಾಂಶ’ವು ಒಂದು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮಾಹಿತಿ ಒದಗಿಸುವ ಸಾಧನವಾಗಿದೆ.

40. ವೈಯಕ್ತಿಕ ಸಂದರ್ಶನ ಹಾಗೂ ದೂರವಾಣಿ ಸಂದರ್ಶನಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.

ವೈಯಕ್ತಿಕ ಸಂದರ್ಶನಗಳು :

ಅನುಕೂಲಗಳು

1) ವಿಧಾನದಲ್ಲಿ ಶೋಧಕನು ದತ್ತಾಂಶವನ್ನು ವೈಯಕ್ತಿಕವಾಗಿ ಸಂಗ್ರಹಿಸುತ್ತಾನೆ. 2) ಶೋಧಕನು ಪ್ರತಿವಾದಿಯ ಜೊತೆ ಮುಖಾಮುಖಿ ಸಂದರ್ಶನವನ್ನು ನಡೆಸುತ್ತಾನೆ.

3) ಸಂದರ್ಶಕನಿಗೆ ಅಧ್ಯಯನದ ವಿತರಣೆ ನೀಡುವ ಮತ್ತು ಪ್ರತಿವಾಧಿಯ ಯಾವುದೇ ಪ್ರಶ್ನೆಗಳಿಗೆ ಉತ್ತರವೀಯುವ ಅವಕಾಶವಿರುತ್ತದೆ.

4) ಅಪಾರ್ಥ ಮಾಡಿಕೊಳ್ಳುವುದನ್ನು ಮತ್ತು ತಪ್ಪಾದ ವಿವರಣೆ ನೀಡುವುದನ್ನು ತಪ್ಪಿಸಬಹುದು.

5) ಪ್ರತಿವಾದಿಯ ಪ್ರತಿಕ್ರಿಯೆಯ ವೀಕ್ಷಣೆಯಿಂದ ಪೂರಕ ಮಾಹಿತಿಯನ್ನು ನೀಡಬಹುದಾಗಿದೆ.

ಅನಾನುಕೂಲಗಳು :

1) ತರಬೇತಿ ಹೊಂದಿದ ಸಂದರ್ಶನಾಕಾರರ ಬೇಕಾಗಿರುವುದರಿಂದ ಇದು ದುಬಾರಿಯಾಗಿದೆ.

2) ಇದು ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚು ಸಮಯವ ತೆಗೆದುಕೊಳ್ಳುತ್ತದೆ.

3) ಶೋಧಕನ ಉಪಸ್ಥಿತಿಯು ಪ್ರತಿವಾದಿಯು ನಿಜವಾಗಿಯೂ ಏನನ್ನು ಯೋಚಿಸುತ್ತಾನೆ ಎಂಬುದನ್ನು ತಿಳಿಸಲು ಅಡ್ಡಿಪಡಿಸಬಹುದು.

ದೂರವಾಣಿ ಸಂದರ್ಶನಗಳು :

ಅನುಕೂಲಗಳು :

1) ದೂರವಾಣಿ ಸಂದರ್ಶನದಲ್ಲಿ ಶೋಧಕನು ದೂರವಾಣಿಯ ಮೂಲಕ ಪ್ರಶ್ನೆಗಳನ್ನು ಕೇಳುತ್ತಾನೆ.

2) ಇದು ವೈಯಕ್ತಿಕ ಸಂದರ್ಶನಕ್ಕಿಂತ ಕಡಿಮೆ ಖರ್ಚಿನದ್ದಾಗಿರುತ್ತದೆ.

3) ಇದನ್ನು ಕಡಿಮೆ ಅವಧಿಯಲ್ಲಿ ನಡೆಸಬಹುದಾಗಿದೆ.

4) ಇದು ಶೋಧಕನು ಪ್ರತಿವಾದಿಗೆ ಪ್ರಶ್ನೆಗಳನ್ನು ಸ್ಪಷ್ಟಿಕರಿಸಲು ಅನುವು ಮಾಡಿಕೊಡುತ್ತದೆ.

5) ಪ್ರತಿವಾದಿಯು ಕೆಲವು ಪ್ರಶ್ನೆಗಳಿಗೆ ನೇರ ಸಂದರ್ಶನದಲ್ಲಿ ಉತ್ತರಿಸಲು ಇಷ್ಟವಿಲ್ಲದಿದ್ದ ಪಕ್ಷದಲ್ಲಿ ದೂರವಾಣಿ ಸಂದರ್ಶನವು ಉತ್ತಮ ಆಗಿರುತ್ತದೆ.

ಅನಾನುಕೂಲಗಳು

1) ದೂರವಾಣಿ ಸಂಪರ್ಕ ಹೊಂದಿರುವವರಿಗೆ ಮಾತ್ರ ಈ ಸಮೀಕ್ಷೆ ಸೀಮಿತವಾಗಿದೆ.

2) ಇದು ಪ್ರತಿವಾದಿಗಳ ದೃಶ್ಯ ಪ್ರತಿಕ್ರಿಯೆಗಳಿಗೆ ಅಡ್ಡಿಪಡಿಸುತ್ತದೆ.

FAQ

1. ದತ್ತಾಂಶ ಎಂದರೇನು?

ಒಂದು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮಾಹಿತಿ ಒದಗಿಸುವ ಸಾಧನವೇ ದತ್ತಾಂಶ.

2. ಚಲಕಗಳು ಎಂದರೇನು?

ಆರ್ಥಿಕ ಸಂಗತಿಗಳ ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇರುವುದರಿಂದ ಈ ಮಾಲ್ಯಗಳನ್ನು “ಚಲಕಗಳು” ಎಂದು ಕರೆಯುತ್ತೇವೆ.

3. ಪ್ರಶ್ನಾವಳಿ ಎಂದರೇನು?

ತನಿಖೆಯ ವಿಷಯಕ್ಕಾಗಿ ತನಿಖೆದಾರನು ಸಿದ್ಧಪಡಿಸಿದ ಪ್ರಶ್ನೆಗಳ ಪಟ್ಟಿ ಪ್ರತಿವಾದಿಯು ಈ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿದೆ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *