ಪ್ರಥಮ ಪಿ.ಯು.ಸಿ ದತ್ತಾಂಶಗಳ ಸಂಘಟನೆ ಅರ್ಥಶಾಸ್ತ್ರ ನೋಟ್ಸ್‌ | 1st Puc Economics Chapter 13 Notes in Kannada

ಪ್ರಥಮ ಪಿ.ಯು.ಸಿ ದತ್ತಾಂಶಗಳ ಸಂಘಟನೆ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 1st Puc Economics Chapter 13 Notes Question Answer Pdf in Kannada Medium Kseeb Solutions For Class 11 Economics Chapter 13 Notes 1st Puc Dattamshagala Sangatane Arthashastra Notes 1st Puc Economics Organisation Of Data Notes

 

1st Puc Economics Chapter 13 Notes in Kannada

1. ಈ ಕೆಳಗಿನವುಗಳಲ್ಲಿ ಯಾವ ಪರ್ಯಾಯವು ಸರಿ?

(i) ವರ್ಗದ ಮಧ್ಯಾಂಕವು ಇದಕ್ಕೆ ಸಮವಾಗಿದೆ.

(ಎ) ವರ್ಗದ ಮೇಲ್ಮೀತಿ ಮತ್ತು ಕೆಳಮಿತಿಯ ಸರಾಸರಿ

(ಬಿ) ವರ್ಗದ ಮೇಲಿತಿ ಮತ್ತು ಕೆಳಮಿತಿಯ ಗುಣಲಬ್ಬ

(ಸಿ) ವರ್ಗದ ಮೇಲಿತಿ ಮತ್ತು ಕೆಳಮಿತಿಯ ಅನುಪಾತ

(ಡಿ) ಮೇಲಿನ ಯಾವುದೂ ಇಲ್ಲ.

(ii) ಎರಡು ಚಲಕಗಳ ಆವೃತ್ತಿ ವಿತರಣೆಯನ್ನು ಹೀಗೆ ಕರೆಯುತ್ತಾರೆ.

(ಎ) ಏಕ ಚಲಕ ವಿತರಣೆ

(ಬಿ) ದ್ವಿಚಲಕ ವಿತರಣೆ

(ಸಿ) ಬಹುಚಲಕ ವಿತರಣೆ

(ಡಿ) ಮೇಲಿನ ಯಾವುದೂ ಇಲ್ಲ

(iii) ವರ್ಗೀಕೃತ ದತ್ತಾಂಶಗಳಲ್ಲಿ ಸಂಖ್ಯಾ ಶಾಸ್ತ್ರೀಯ ಲೆಕ್ಕಾಚಾರಗಳು ಇದರ ಮೇಲೆ ಆಧಾರಿತವಾಗಿದೆ.

(ಎ) ದತ್ತಾಂಶದ ನೈಜ ಮೌಲ್ಯ

(ಬಿ) ವರ್ಗದ ಮೇಲಿತಿ

(ಸಿ) ವರ್ಗದ ಕೆಳಮಿತಿ

(ಡಿ) ವರ್ಗದ ಮಧ್ಯಾಂಕ

(iv) ವಿಮುಕ್ತ ವಿಧಾನದಲ್ಲಿ.

(ಎ) ವರ್ಗಾಂತರದಲ್ಲಿ ವರ್ಗದ ಮೇಲ್ಮೀತಿಯು ಸೇರಿಸಲ್ಪಟ್ಟಿಲ್ಲ.

(ಬಿ) ವರ್ಗಾಂತರದಲ್ಲಿ ವರ್ಗದ ಮೇಲಿತಿಯು ಸೇರಿಸಲ್ಪಟ್ಟಿದೆ.

(ಸಿ) ವರ್ಗಾಂತರದಲ್ಲಿ ವರ್ಗದ ಕೆಳಮಿತಿಯು ಸೇರಿಸಲ್ಪಟ್ಟಿಲ್ಲ.

(ಡಿ) ವರ್ಗಾಂತರದಲ್ಲಿ ವರ್ಗದ ಕೆಳಮಿತಿಯು ಸೇರಿಸಲ್ಪಟ್ಟಿದೆ.

(v) ವ್ಯಾಪ್ತಿಯು

(ಎ) ಗರಿಷ್ಠ ಮತ್ತು ಕನಿಷ್ಟ ಪ್ರಾಪ್ತಾಂಕಗಳ ನಡುವಿನ ವ್ಯತ್ಯಾಸ

(ಬಿ) ಕನಿಷ್ಟ ಮತ್ತು ಗರಿಷ್ಟ ಪ್ರಾಪ್ತಾಂಕಗಳ ನಡುವಿನ ವ್ಯತ್ಯಾಸ

(ಸಿ) ಗರಿಷ್ಟ ಮತ್ತು ಕನಿಷ್ಟ ಪ್ರಾಪ್ತಾಂಕಗಳ ಸರಾಸರಿ.

(ಡಿ) ಗರಿಷ್ಟ ಮತ್ತು ಕನಿಷ್ಟ ಪ್ರಾಪ್ತಾಂಕಗಳ ನಡುವಿನ ಅನುಪಾತ

2. ವಸ್ತುಗಳನ್ನು ವರ್ಗೀಕರಿಸುವುದರಿಂದ ಯಾವುದಾದರೂ ಅನುಕೂಲತೆಯಿದೆಯೇ? ನಿಮ್ಮ ದೈನಂದಿನ ಜೀವನದ ಉದಾಹರಣೆಯೊಂದಿಗೆ ವಿವರಿಸಿ.

ವಸ್ತುಗಳನ್ನು ಹೋಲಿಕೆ ಮಾಡಲು ಸಹಾಯ ಮಾಡುತ್ತದೆ.

ಎ. ದತ್ತಾಂಶಗಳನ್ನು ಹೋಲಿಕೆ ಮಾಡಲು ಸಹಾಯ ಮಾಡುತ್ತದೆ.

ಬಿ. ಚಲಕಗಳ ನಡುವಣ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಕರಿಸುತ್ತದೆ.

ಸಿ. ವರ್ಗೀಕರಣವು ದತ್ತಾಂಶದ ಪ್ರಮುಖ ಲಕ್ಷಣಗಳ ಮೇಲೆ ಬೆಳಕು ಚೆಲ್ಲುತ್ತದೆ.

ಡಿ. ಇದು ದತ್ತಾಂಶದ ಸಂಖ್ಯಾಶಾಸ್ತ್ರ ವಿಶ್ಲೇಷಣೆಯನ್ನು ಸರಳೀಕರಿಸುತ್ತದೆ.

ಇ. ದತ್ತಾಂಶದ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೃಹದಾದ ದತ್ತಾಂಶವನ್ನು ಕೆಲವೇ ಅಂಕಿ ಸಂಖ್ಯೆಗಳಿಗೆ ಇಳಿಸಿ ಸುಲಭವಾಗಿ ಅರ್ಥವಾಗುವಂತೆ ಮಾಡಬಹುದಾಗಿದೆ.

3. ಚಲಕವೆಂದರೇನು? ಸತತ ಮತ್ತು ಅಸತತ ಚಲಕದ ನಡುವಿನ ವ್ಯತ್ಯಾಸ ತಿಳಿಸಿ. ಖರ್ಚಿನ ವ್ಯಾಪ್ತಿಯನ್ನು ಪಡೆಯಿರಿ.

ಕೆಲವು ಆರ್ಥಿಕ ಸಂಗತಿಗಳ ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಇವುಗಳನ್ನು ಚಲಕಗಳು ಎನ್ನುತ್ತಾರೆ. ಚಲಕಗಳು ಎರಡು ವಿಧ.

1. ಚಲಕಗಳು

2. ಅಸತತ ಚಲಕ

1. ಚಲಕಗಳು : ಸತತ ಚಲಕವು ಯಾವುದೇ ಸಾಂಖ್ಯಿಕ ಮೌಲ್ಯವನ್ನು ಹೊಂದಬಹುದು. ಇದು ಪೂರ್ಣ ಸಂಖ್ಯೆಗಳನ್ನು (1, 2, 3, 4…) ಅಪೂರ್ಣ ಸಂಖ್ಯೆಗಳನ್ನು (1/2, 2/3, 3/4) ಮತ್ತು ಸಂಪೂರ್ಣ ಭಾಜಕವನಲ್ಲದ ಸಂಖ್ಯೆಗಳನ್ನು (2,3, 5) ಹೊಂದಬಹುದು. ಸತತ ಚಲಕಕ್ಕೆ ಇತರ ಉದಾಹರಣೆಗಳೆಂದರೆ ತೋಕ ಸಮಯ ದೂರ ಮುಂತಾದವು.

2, ಅಸತತ ಚಲಕಗಳು : ಅಸತತ ಚಿಲಕವು ಮಮೌಲ್ಯಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಇದು ಒಂದು ಮೌಲ್ಯದಿಂದ ಮತ್ತೊಂದು ಮೌಲ್ಯಕ್ಕೆ ಜಿಗಿಯುತ್ತದೆ. ಮತ್ತು ಮೌಲ್ಯಗಳು ಸತತವಾಗಿರುವುದಿಲ್ಲ.

ಉದಾ : ಒಂದು ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು 50, 65, 90, 100 ಇತ್ಯಾದಿ ಆಗಬಹುದು. .

4. ದತ್ತಾಂಶಗಳ ವರ್ಗೀಕರಣದಲ್ಲಿ ಉಪಯೋಗಿಸುವ ವಿಮುಕ್ತ ಮತ್ತು ಸಂವೃತ್ತ ವಿಧಾನಗಳನ್ನು ವಿವರಿಸಿ.

ವಿಮುಕ್ತ ವಿಧಾನ :

ಈ ವಿಧಾನದಲ್ಲಿ ವರ್ಗಗಳನ್ನು ತಯಾರಿಸುವಾಗ ವರ್ಗದ ಕೆಳಮಿತಿಯು ಅದರ ಮುಂಚಿನ ವರ್ಗದ ಮೇಲಿತಿಯೊಂದಿಗೆ ಹೊಂದಿಕೆಯಾಗಬೇಕು. ಅಂದರೆ ವರ್ಗಗಳನ್ನು ತಯಾರಿಸುವಾಗ ಒಂದು ವರ್ಗದ ಮೇಲಿತಿಯು ಮುಂದಿನ ವರ್ಗದ ಕೆಳಮಿತಿಗೆ ಸಮವಾಗಿರಬೇಕು. ಆದ್ದರಿಂದ, ಈ ರೀತಿಯ ವರ್ಗೀಕರಣವು ಸತತ ಚಲಕಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ.

ಉದಾ : ಕಚ್ಚಾ ದತ್ತಾಂಶದಲ್ಲಿ ಪ್ರಾಪ್ತಾಂಕ 40 ಎರಡು ಬಾರಿ ಪುನರಾವರ್ತನೆಯಾಗುತ್ತಿದ್ದು, ವರ್ಗ 30 – 40ರಲ್ಲಿ ಅದು ಸೇರ್ಪಡೆಯಾಗಿಲ್ಲ. ಬದಲಿಗೆ ವರ್ಗ 40-50ರಲ್ಲಿ ಅದು ಸೇರ್ಪಡೆಯಾಗಿದೆ.

ಸಂವೃತ್ತ ವಿಧಾನ :

ಸಂವೃತ್ತ ವಿಧಾನದಲ್ಲಿ ಒಂದು ವರ್ಗದಲ್ಲಿ ಮೇಲ್ಮೀತಿಯು ವರ್ಗಾಂತರದಿಂದ ಹೊರತಾಗಿರುವುದಿಲ್ಲ. ಇದು ವರ್ಗದ ಮೇಲಿತಿಯನ್ನು ವರ್ಗದಲ್ಲಿ ಸೇರಿಸಿಕೊಳ್ಳುತ್ತದೆ. ಆದ್ದರಿಂದ, ವರ್ಗದ ಎರಡೂ ಮಿತಿಗಳು ವರ್ಗದ ಭಾಗವಾಗುತ್ತದೆ.

ಉದಾ : ವರ್ಗ 800 – 899ರಲ್ಲಿ ಯಾರ ಆದಾಯ 800 ಮತ್ತು 800 ರಿಂದ 899ರ ನಡುವೆ ಇರುತ್ತದೆಯೋ ಅವರನ್ನೆಲ್ಲ ಸೇರಿಸುತ್ತೇವೆ.

5. 50 ಕುಟುಂಬಗಳ ಮನೆ ವಾರ್ತೆ ಖರ್ಚುಗಳಿಗೆ ಸಂಬಂಧಿಸಿದ ಕೋಷ್ಟಕ 3.2ರಲ್ಲಿನ ದತ್ತಾಂಶಗಳನ್ನು ಉಪಯೋಗಿಸಿ ಮತ್ತು

(ಎ) ಕುಟುಂಬದ ಮೇಲಿನ ಮಾಸಿಕ ಖರ್ಚಿನ ವ್ಯಾಪ್ತಿಯನ್ನು ಪಡೆಯಿರಿ.

(ಬಿ) ವ್ಯಾಪ್ತಿಯನ್ನು ಸರಿಯಾದ ವರ್ಗಾಂತರಗಳಾಗಿ ವಿಭಾಗಿಸಿ ಮತ್ತು ವೆಚ್ಚದ ಆವೃತ್ತಿ ವಿತರಣೆಯನ್ನು ಪಡೆಯಿರಿ.

(ಸಿ) ಯಾವ ಕುಟುಂಬದ ಆಹಾರದ ಮೇಲಿನ ವೆಚ್ಚ

(a) 2000 ರೂ.ಗಳಿಗಿಂತ ಕಡಿಮೆ

(b) 3000 ರೂ.ಗಳಿಗಿಂತ ಹೆಚ್ಚಿದೆಯೋ

(c) 1500 ರೂ. ಮತ್ತು 2000 ರೂ.ಗಳ ನಡುವೆ ಇರುವ ಕುಟುಂಬಗಳ ಸಂಖ್ಯೆಯನ್ನುಕಂಡು ಹಿಡಿಯಿರಿ.

50 ಕುಟುಂಬಗಳ ಮಾಸಿಕ ಮನೆ ವಾರ್ತೆ ಖರ್ಚು (ರೂ. ಗಳಲ್ಲಿ)

ವ್ಯಾಪ್ತಿಯನ್ನು ಸರಿಯಾದ ವರ್ಗಾಂತರಗಳಾಗಿ ವಿಭಾಗಿಸಿ ಮತ್ತು ವೆಚ್ಚದ ಆವೃತ್ತಿ ವಿತರಣೆಯನ್ನು ಪಡೆಯಿರಿ.

ಎ. 2000 ರೂ. ಗಳಿಗಿಂತ ಕಡಿಮೆ ಆಹಾರದ ಮೇಲಿನ ವೆಚ್ಚ ಮಾಡುವ ಕುಟುಂಬಗಳ ಸಂಖ್ಯೆ : = 19+14= 33

ಬಿ. 3000 ರೂ. ಗಳಿಗಿಂತ ಹೆಚ್ಚಿರುವ ಕುಟುಂಬಗಳ ಸಂಖ್ಯೆ = 2+1+2+1=6

ಸಿ. 1500 ರೂ. & 2000 ರೂ. ಗಳ ನಡುವೆ ಇರುವ ಕುಟುಂಬಗಳ 3033 = 14+6=20

6. ವರ್ಗೀಕರಿಸಿದ ದತ್ತಾಂಶದಲ್ಲಿ ಮಾಹಿತಿಯ ನಶಿಸುವಿಕೆ ಎಂದರೇನು?

ದತ್ತಾಂಶಗಳನ್ನು ಆವೃತ್ತಿ ಎತರಣೆಯಾಗಿ ವರ್ಗೀಕರಿಸುವಲ್ಲಿ ಒಂದು ಮೂಲಭೂತ ಕೊರತೆ ಕಂಡು ಬರುತ್ತದೆ. ಇದು ದತ್ತಾಂಶಗಳನ್ನು ಸಂಕ್ಷಿಪ್ತವಾಗಿ ಸರಳವಾಗಿ ಸಾರಾಂಶದ ರೂಪದಲ್ಲಿ ನೀಡುವಾಗ ಕಚ್ಚಾ ದತ್ತಾಂಶದಲ್ಲಿ ಕಂಡು ಬರುವ ವಿವರಗಳನ್ನು ತೋರಿಸುವುದಿಲ್ಲ. ದತ್ತಾಂಶಗಳ ಸಂಕ್ತಿಪ್ತ ವರ್ಗೀಕರಣದಿಂದ ಹೆಚ್ಚನ್ನು ಪಡೆಯಬಹುದಾದರೂ ದತ್ತಾಂಶಗಳ ಮಾಹಿತಿ ನಶಿಸಿ ಹೋಗುತ್ತದೆ. ಒಮ್ಮೆ ದತ್ತಾಂಶಗಳ ವರ್ಗೀಕರಣವಾದರೆ, ಯಾವುದೇ ವೈಯಕ್ತಿಕ ಮೌಲ್ಯ ಮುಂದಿನ ಸಂಖ್ಯಾ ಗಣಿತದ ಲೆಕ್ಕಾಚಾರದಲ್ಲಿ ಮಹತ್ವ ಪಡೆದಿರುವುದಿಲ್ಲ.

ಉದಾ : ವರ್ಗ 20 – 30 ಹೊಂದಿರುವ ಪ್ರಾಪ್ತಾಂಕಗಳು 25, 25, 20, 22, 25 ಮತ್ತು 28, ಆದರೆ ದತ್ತಾಂಶಗಳನ್ನು ವರ್ಗೀಕರಿಸಿದಾದ ಆವೃತ್ತಿ ವಿತರಣೆಯು ಕೇವಲ ಆ ವರ್ಗದ ಸಂಖ್ಯೆಗಳ ದಾಖಲೆಯನ್ನು ನೀಡುತ್ತದೆಯೇ ಹೊರತು, ಅವುಗಳ ಮೌಲ್ಯವನ್ನಲ್ಲ.

ಪ್ರಾಥಮಿಕ ಮತ್ತು ಮಾಧ್ಯಮಿಕ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಕಚ್ಚಾ ದತ್ತಾಂಶ ಅಥವಾ ವರ್ಗೀಕರಿಸದಿರುವ ದತ್ತಾಂಶ ಎನ್ನುವರು. ಕ್ರಮಬದ್ಧವಾದ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಗೆ ದತ್ತಾಂಶಗಳ ಸರಿಯಾದ ಸಂಘಟನೆ ಮತ್ತು ನಿರೂಪಣೆ ಅವಶ್ಯವಾಗಿರುತ್ತದೆ. ಆದ್ದರಿಂದ, ದತ್ತಾಂಶಗಳ ಸಂಗ್ರಹಣೆಯ ನಂತರ ಮುಂದಿನ ಹೆಜ್ಜೆ ಅವುಗಳನ್ನು ಸಂಘಟಿಸುವುದು ಮತ್ತು ವರ್ಗೀಕರಣದಿಂದ ಕಚ್ಚಾ ದತ್ತಾಂಶಗಳ ಸಾರಾಂಶವನ್ನು ಪಡೆಯಬಹುದು. ಹಾಗೂ ಅರ್ಥವಾಗುವಂತೆ ಸ್ಪಷ್ಟವಾಗುವಂತೆ ಒಂದೇ ತರಹದ ಗುಣಗಳುಳ್ಳ ಅಂಶಗಳನ್ನು ಒಂದೇ ವರ್ಗದಲ್ಲಿ ಜೋಡಿಸುವುದರಿಂದ ನಮಗೆ ಅವುಗಳನ್ನು ಸುಲಭವಾಗಿ ಹುಡುಕಲು, ಹೋಲಿಸಲು ಮತ್ತು ನಿರ್ಣಯಿಸಲು ಸಹಾಯವಾಗುತ್ತದೆ.

7. ವರ್ಗೀಕರಿಸಿದ ದತ್ತಾಂಶವು, ಕಚ್ಚಾ ದತ್ತಾಂಶಕ್ಕಿಂತ ಉತ್ತಮವಾದುದು ಎಂದು ನೀವು ಒಪ್ಪುವಿರಾ? ಏಕೆ?

ಪ್ರಾಥಮಿಕ ಮತ್ತು ಮಾಧ್ಯಮಿಕ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಕಚ್ಚಾ ದತ್ತಾಂಶ ಮತ್ತು ವರ್ಗೀಕರಿಸದಿರುವ ದತ್ತಾಂಶ ಎನ್ನುವರು. ಕ್ರಮಬದ್ಧವಾದ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಗೆ ದತ್ತಾಂಶಗಳ ಸರಿಯಾದ ಸಂಘಟನೆ ಮತ್ತು ನಿರೂಪಣೆ ಅವಶ್ಯವಾಗಿರುತ್ತದೆ. ಆದ್ದರಿಂದ, ದತ್ತಾಂಶಗಳ ಸಂಗ್ರಹಣೆಯ ನಂತರ ಮುಂದಿನ ಹೆಜ್ಜೆ ಅವುಗಳನ್ನು ಸಂಘಟಿಸುವುದು ಮತ್ತು ವರ್ಗೀಕೃತ ರೂಪದಲ್ಲಿ ನಿರೂಪಿಸುವುದು ಆಗಿರುತ್ತದೆ. ದೊಡ್ಡ ಪ್ರಮಾಣದ ಅವರ್ಗೀಕೃತ ದತ್ತಾಂಶದಿಂದ ಮಾಹಿತಿ ಪಡೆಯುವುದು ಕಷ್ಟವಾದ ಕೆಲಸ. ವರ್ಗೀಕರಣದಿಂದ ಕಚ್ಚಾ ದತ್ತಾಂಶಗಳ ಸಾರಾಂಶವನ್ನು ಪಡೆಯಬಹುದು, ಹಾಗೂ ಅರ್ಥವಾಗುವಂತೆ ಸ್ಪಷ್ಟವಾಗುವಂತೆ. ಒಂದೇ ತರಹದ ಗುಣಗಳುಳ್ಳ ಅಂಶಗಳನ್ನು ಒಂದೇ ವರ್ಗದಲ್ಲಿ ಜೋಡಿಸುವುದರಿಂದ ಅದು ನಮಗೆ ಅವುಗಳನ್ನು ಸುಲಭವಾಗಿ ಹುಡುಕಲು, ಹೋಲಿಸಲು ಮತ್ತು ನಿರ್ಣಯಿಸಲು ಸಹಾಯವಾಗುತ್ತದೆ.

8. ಏಕಚಲಕ ಮತ್ತು ದ್ವಿಚಲಕ ಆವೃತ್ತಿ ವಿತರಣೆಯ ನಡುವಿನ ವ್ಯತ್ಯಾಸ ತಿಳಿಸಿ.

ಏಕಚಲಕ ಆವೃತ್ತಿ ವಿತರಣೆ : ಒಂದು ಚಲಕದ ಆವೃತ್ತಿ ವಿತರಣೆಯನ್ನು ಏಕಚಲಕ ವಿತರಣೆ ಎನ್ನುತ್ತಾರೆ.

ಉದಾ : ಏಕ ಚಲಕವಾದ ವಿದ್ಯಾರ್ಥಿಗಳ ಅಂಕದ ಏಕಚಲಕ ಆವೃತ್ತಿ ವಿತರಣೆಯನ್ನು ತೋರಿಸುತ್ತದೆ.

ದ್ವಿಚಲಕ ಆವೃತ್ತಿ ವಿತರಣೆ : ದ್ವಿಚಲಕ ಆವೃತ್ತಿ ವಿತರಣೆಯು ಎರಡು ಚಲಕಗಳ ಆವೃತ್ತಿ ವಿತರಣೆಯಾಗಿದೆ.

ಉದಾ : ಕಂಪನಿಗಳ ಎರಡು ಚಲಕಗಳಾದ, ಮಾರಾಟ ಮತ್ತು ಜಾಹೀರಾತು ವೆಚ್ಚದ ಆವೃತ್ತಿ ವಿತರಣೆಯನ್ನು ತೋರಿಸುತ್ತದೆ.

9. ವರ್ಗಾಂತರ 7 ಇರುವಂತೆ ಕೆಳಗಿನ ದತ್ತಾಂಶಗಳ ಸಹಾಯದಿಂದ ಸಂವೃತ್ತ ವಿಧಾನದಲ್ಲಿ ಆವೃತ್ತಿ ವಿತರಣೆಯನ್ನು ತಯಾರಿಸಿ.

FAQ :

1. ಚಲಕವೆಂದರೇನು?

ಕೆಲವು ಆರ್ಥಿಕ ಸಂಗತಿಗಳ ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಇವುಗಳನ್ನು ಚಲಕಗಳು ಎನ್ನುತ್ತಾರೆ.

2. ಏಕಚಲಕ ಆವೃತ್ತಿ ವಿತರಣೆ ಎಂದರೇನು?

ಒಂದು ಚಲಕದ ಆವೃತ್ತಿ ವಿತರಣೆಯನ್ನು ಏಕಚಲಕ ವಿತರಣೆ ಎನ್ನುತ್ತಾರೆ.

3. ದ್ವಿಚಲಕ ಆವೃತ್ತಿ ವಿತರಣೆ ಎಂದರೇನು?

ದ್ವಿಚಲಕ ಆವೃತ್ತಿ ವಿತರಣೆಯು ಎರಡು ಚಲಕಗಳ ಆವೃತ್ತಿ ವಿತರಣೆಯಾಗಿದೆ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh