ಪ್ರಥಮ ಪಿ.ಯು.ಸಿ ದತ್ತಾಂಶಗಳ ನಿರೂಪಣೆ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, 1st Puc Economics Chapter 14 Question Answer Mcq Pdf in Kannada Medium Kseeb Solutions For Class 11 Economics Chapter 14 Notes 1st Puc Economics Dattamashagala Nirupane in Kannada Notes Presentation Of Data Class 11 Presentation of Data in Statistics
1st Puc Economics Chapter 14 Notes in Kannada
ಈ ಕೆಳಕಂಡ 1 ರಿಂದ 10 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಉತ್ತರಿಸಿ.
1. ಸ್ತಂಭ ರೇಖಾಚಿತ್ರವು ಒಂದು
(i) ಏಕ ಪರಿಮಾಣದ ನಕ್ಷೆ
(ii) ದ್ವಿ ಪರಿಮಾಣದ ನಕ್ಷೆ
(iii) ಪರಿಮಾಣ ರಹಿತ ನಕ್ಷೆ
(iv) ಯಾವುದೂ ಅಲ್ಲ
2. ಆಯತಚಿತ್ರದ ಮೂಲಕ ನಿರೂಪಿಸಲ್ಪಡುವ ದತ್ತಾಂಶಗಳು ಈ ಕೆಳಗಿನ ಯಾವುದನ್ನು ನಕ್ಷೆಯ ಮೂಲಕ ಗುರುತಿಸಲು ಸಹಾಯ ಮಾಡುತ್ತದೆ?
(i) ಸರಾಸರಿ
(ii) ಬಹುಲಕ
(iii) ಮಧ್ಯಾಂಕ
(iv) ಎಲ್ಲವೂ
3. ಒಗಿವ್ ರೇಖೆಯು ಈ ಕೆಳಗಿನ ಯಾವುದನ್ನು ನಕ್ಷೆಯ ಮೂಲಕ ಗುರುತಿಸಲು ಸಹಾಯ ಮಾಡುತ್ತದೆ?
(i) ಬಹುಲಕ
(ii) ಸರಾಸರಿ
(iii) ಮಧ್ಯಂಕ
(iv) ಯಾವುದೂ ಅಲ್ಲ.
4. ಅಂಕಗಣಿತೀಯ ರೇಖಾನಕ್ಷೆಯ ಮೂಲಕ ನಿರೂಪಿಸಲ್ಪಟ್ಟ ದತ್ತಾಂಶಗಳು ಈ ಕೆಳಗಿನ ಯಾವುದನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ?
(i) ದೀರ್ಘಕಾಲಿಕ ಪ್ರವೃತ್ತಿ
(ii) ದತ್ತಾಂಶಗಳಲ್ಲಿನ ಪುನರಾವರ್ತನಾಪವೃತ್ತಿ
(iii) ದತ್ತಾಂಶಗಳಲ್ಲಿನ ಪ್ರಬುದ್ಧತೆ
(iv) ಎಲ್ಲವೂ
5. ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ತಿಳಿಸಿ
(i) ಸ್ತಂಭಚಿತ್ರಗಳಲ್ಲಿ ಸ್ತಂಭಗಳ ಅಗಲಗಳು ಸಮಾನವಾಗಿರಬೇಕೆಂದೇನೂ ಇಲ್ಲ
ತಪ್ಪು
(ii) ಆಯತ ಚಿತ್ರದಲ್ಲಿನ ಆಯತಗಳ ಅಗಲಗಳು ಅವಶ್ಯವಾಗಿ ಸಮನಾಗಿರಬೇಕು.
ತಪ್ಪು
(iii) ಸತತ ವರ್ಗೀಕರಣಕ್ಕೆ ಮಾತ್ರ ಆಯತ ಚಿತ್ರವನ್ನು ರಚಿಸಬಹುದು
ಸರಿ
(iv) ಆಯತ ಚಿತ್ರ ಮತ್ತು ಸ್ತಂಭಚಿತ್ರಗಳಲ್ಲಿ ದತ್ತಾಂಶಗಳನ್ನು ಒಂದೇ ರೀತಿಯಲ್ಲಿ ನಿರೂಪಿಸಲಾಗುತ್ತದೆ
ಸರಿ
(v) ಆಯತ ಚಿತ್ರದ ಸಹಾಯದಿಂದ ಆವೃತ್ತಿ ವಿತರಣೆಯ ಬಹುಲಕವನ್ನು ನಕ್ಷೆಯ ರೂಪದಲ್ಲಿ ತಿಳಿಸಬಹುದು
ಸರಿ
(vi) ಒಗಿವ್‌ಗಳಿಂದ ಆವೃತ್ತಿ ವಿತರಣೆಯ ಮಧ್ಯಾಂಕವನ್ನು ತಿಳಿಯಲಾಗುವುದಿಲ್ಲ
ತಪ್ಪು
6. ಈ ಕೆಳಕಂಡವುಗಳನ್ನು ಪ್ರಸ್ತುತಪಡಿಸಲು ಯಾವ ರೀತಿಯ ರೇಖಾಚಿತ್ರಗಳು ಬಹಳ ಪರಿಣಾಮಕಾರಿಯಗಿವೆ?
(i) ವರ್ಷದ ಯಾವ ತಿಂಗಳಿನಲ್ಲಿ ಹೆಚ್ಚು ಮಳೆಯಾಗಿದೆ?
ಬಹುಸ್ತಂಭ ರೇಖಾಚಿತ್ರ
(ii) ಧರ್ಮದ ಆಧಾರದ ಮೇಲೆ ದಿಲ್ಲಿಯ ಜನಸಂಖ್ಯೆಯ ಸಂಯೋಜನೆ
ಸಂಘಟಕ ಸ್ತಂಭ ರೇಖಾಚಿತ್ರ
(iii) ಒಂದು ಕಾರ್ಖಾನೆಯಲ್ಲಿನ ಘಟಕಗಳ ಮೇಲಿನ ವೆಚ್ಚ
ಸಂಘಟಕ ಸ್ತಂಭ ರೇಖಾಚಿತ್ರ
7. ಉದಾಹರಣೆ 4.2 ರಲ್ಲಿ ತೋರಿಸಿರುವಂತೆ ನೀವು ಭಾರತದ ನಗರಗಳಲ್ಲಿ ಕೆಲಸಮಾಡದವರ ಸಂಖ್ಯೆಯಲ್ಲಿನ ಹೆಚ್ಚಳ ಹಾಗೂ ನಗರೀಕರಣದ ಕೆಳಸ್ತರದವುಗೆ ಒತ್ತು ನೀಡಲು ಬಯಸಿದ್ದೀರಿ ಎಂದು ಊಹಿಸಿಕೊಳ್ಳಿ, ಹಾಗಾದಲ್ಲಿ ಅವುಗಳನ್ನು ಕೋಷ್ಟಕರೂಪದಲ್ಲಿ ಹೇಗೆ ಪ್ರಸ್ತುತಪಡಿಸುತ್ತೀರಿ?
8. ಯಾವುದಾದರೂ ಆವೃತ್ತಿ ಕೋಷ್ಟಕದಲ್ಲಿ ಸಮಾನ ವರ್ಗಾಂತರಾಳಗಳ ಬದಲು ಅಸಮಾನ ವರ್ಗಾಂತರಾಳಗಳು ಇದ್ದಲ್ಲಿ ಆಯತ ಚಿತ್ರವನ್ನು ಬರೆಯುವುದು ಹೇಗೆ ಭಿನ್ನವಾಗಿರುತ್ತದೆ?
ಆವೃತ್ತಿ ಕೋಷ್ಟಕದಲ್ಲಿ ಸಮಾನ ವರ್ಗಾಂತರರಾಳಗಳ ಬದಲು ಅಸಮಾನ ವರ್ಗಾಂತರಾಳಗಳು ಇದ್ದಲ್ಲಿ ಆಯತ ಚಿತ್ರ ಹೇಗೆ ಭಿನ್ನವಾಗಿದೆ. ಎಂದರೆ : ಸ್ತಂಭಗಳ ಅಂತರ ಮತ್ತು ಅಗಲಗಳು ಅಥವಾ ವಿಸ್ತೀರ್ಣಗಳು ಇಚ್ಛಾನುಸಾರ ಇರುತ್ತದೆ. ಪ್ರತಿ ಸಂಭಗಳ ಅಗಲವು ಸಮವೇ ಇದ್ದರೂ ಕೂಡ ಸ್ತಂಭದ ಉದ್ದವು ಆವೃತ್ತಿಯ ವರ್ಗಾಂತರಗಳಿಗೆ ಸಮವಾಗಿರುತ್ತದೆ. ಅಸಮಾನ ವರ್ಗಾಂತರಾಳಗಳ ಸರಿಹೊಂದಿಸುವಿಕೆಗೆ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.
1) ಮೊದಲು ನಾವು ಕನಿಷ್ಟ ವರ್ಗಾಂತರಾಳಗಳನ್ನು ಗುರುತಿಸಬೇಕು. ನಾವು ಇದರೊಂದಿಗೆ ವರ್ಗಾಂತರಾಳಗಳನ್ನು ಹೊಂದಾಣಿಕೆ ಮಾಡಲಾಗುವುದಿಲ್ಲ.
2) ದತ್ತಾಂಶಗಳನ್ನು ನಕ್ಷೆಯ ಮೂಲಕ ನಿರೂಪಿಸುವಾಗ ಒಂದು ಆಯತದ ಎತ್ತರವು ಅದರ ವಿಸ್ತೀರ್ಣದ ಎತ್ತರದ ಹಾಗೂ ಪಾದಗಳ ಭಾಗಲಬ್ಧವಾಗಿರುತ್ತದೆ.
9. ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ರಿಪೋರ್ಟನಲ್ಲಿ ಹೇಳಿದಂತೆ “ಡಿಸೆಂಬರ್ 2001ರ ಮೊದಲ 15 ದಿನಗಳಲ್ಲಿ ಸಕ್ಕರೆ ಉತ್ಪಾದನೆಯು 3,87,000 ಟನ್‌ಗಳಷ್ಟಿದ್ದು, ಡಿಸೆಂಬರ್ 2000ದಲ್ಲಿ ಅದೇ 15 ದಿನಗಳ ವೇಳೆಗೆ, 3,78,000 ಟನ್ ಆಗಿತ್ತು. ಡಿಸೆಂಬರ್ 2001ರ ಮೊದಲ 15 ದಿನಗಳಲ್ಲಿ ಕಾರ್ಖಾನೆಯಿಂದ ಒಳಬಳಕೆಗಾಗಿ ಹಿಂದೆಗೆದುಕೊಂಡ ಸಕ್ಕರೆಯ ಪ್ರಮಾಣ 2,83,300 ಟನ್‌ಗಳು ಹಾಗೂ ರಫ್ತಗಾಗಿ 41,000 ಟನ್ ಗಳಿದ್ದು, ಹಿಂದಿನ ವರ್ಷ ಅದೇ ಅವಧಿಯಲ್ಲಿ ಒಳಬಳಕೆಗಾಗಿ ಇಟ್ಟುಕೊಂಡ ಸಕ್ಕರೆಯ ಪ್ರಮಾಣ 1,54,000 ಟನ್ ಗಳಾಗಿದ್ದು ರಫ್ತು ಶೂನ್ಯವಾಗಿತ್ತು.
(i) ಈ ದತ್ತಾಂಶಗಳನ್ನು ಕೋಷ್ಟಕದ ರೂಪದಲ್ಲಿ ನಿರೂಪಿಸಿ,
(ii) ನೀವು ಈ ದತ್ತಾಂಶಗಳನ್ನು ರೇಖಾಚಿತ್ರಗಳಲ್ಲಿ ನಿರೂಪಿಸಬೇಕೆಂದು ಊಹಿಸಿಕೊಳ್ಳಿ. ಹಾಗಿದ್ದಲ್ಲಿ ನೀವು ಯಾವ ರೀತಿಯ ರೇಖಾಚಿತ್ರವನ್ನು ಉಪಯೋಗಿಸಿಕೊಳ್ಳುವಿರಿ ಹಾಗೂ ಏಕೆ?
(iii) ಈ ದತ್ತಾಂಶಗಳನ್ನು ರೇಖಾಚಿತ್ರದ ಮೂಲಕ ನಿರೂಪಿಸಿ,
10. ಈ ಕೆಳಕಂಡ ಕೋಷ್ಟಕದಲ್ಲಿ ಕ್ಷೇತ್ರವಾರು ಅಂದಾಜುಮಾಡಿದ ನೈಜ ಬೆಳವಣಿಗೆ ದರಗಳನ್ನು ಜಿಡಿಪಿ ಅಂಶಿಕ ವೆಚ್ಚದಲ್ಲಿ ತೋರಿಸಲಾಗಿದೆ. (ಹಿಂದಿನ ವರ್ಷದ ಮೇಲೆ ಆದ ಶೇಕಡಾವಾರು ಬದಲಾವಣೆ)
ಒಂದು ವಾಕ್ಯದ ಪ್ರಶ್ನೋತ್ತರಗಳು
1. ದತ್ತಾಂಶಗಳ ನಿರೂಪಣೆ ಎಂದರೇನು?
ವಿಫುಲವಾಗಿ ಸಂಗ್ರಹಿಸಿದ ದತ್ತಾಂಶಗಳನ್ನು, ಉಪಯೋಗಿಸಲು ಸಿದ್ಧವಾಗಿರುವಂತೆ ಮತ್ತು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವಂತೆ ದತ್ತಾಂಶಗಳನ್ನು ಸಂಕ್ಷಿಪ್ತವಾಗಿ ನಿರೂಪಣೆ ಮಾಡುವುದನ್ನು ದತ್ತಾಂಶಗಳ ನಿರೂಪಣೆ ಎಂದು ಕರೆಯುತ್ತೇವೆ.
2. ದತ್ತಾಂಶ ನಿರೂಪಣೆಯ ಮೂರು ವಿಧಾನಗಳಾವುವು?
ದತ್ತಾಂಶ ನಿರೂಪಣೆಯ ಮೂರು ವಿಧಾನಗಳೆಂದರೆ
1) ಮೂಲ ಪಠ್ಯ ಅಥವಾ ವಿವರಣಾತ್ಮಕವಾಗಿ ನಿರೂಪಣೆ
2) ಕೋಷ್ಟಕ ನಿರೂಪಣೆ
3) ರೇಖಾಕೃತಿಯ ನಿರೂಪಣೆ
3. ದತ್ತಾಂಶಗಳ ಪಠ್ಯ ನಿರೂಪಣೆಯ ಅರ್ಥ ಕೊಡಿ,
ಪಠ್ಯ ನಿರೂಪಣೆಯಲ್ಲಿ ದತ್ತಾಂಶಗಳನ್ನು ಪಠ್ಯದೊಳಗೆ ಅಥವಾ ವಾಕ್ಯಗಳ ರೂಪದಲ್ಲಿ ವರ್ಣಿಸಲಾಗುತ್ತದೆ. ಇದನ್ನು ದತ್ತಾಂಶಗಳ ಪಠ್ಯ ನಿರೂಪಣೆ ಎನ್ನುವರು.
4. ಕೋಷ್ಠಕ ಎಂದರೇನು?
ದತ್ತಾಂಶಗಳನ್ನು ಅಡ್ಡಸಾಲು ಮತ್ತು ಕಂಬಸಾಲುಗಳಲ್ಲಿ ನಿರೂಪಿಸುವಿಕೆಯನ್ನು ಕೋಷ್ಟಕ ಎನ್ನುತ್ತೇವೆ.
5. ಕೋಷ್ಟಕ ರೂಪೀಕರಣದಲ್ಲಿ ನಾಲ್ಕು ವರ್ಗಗಳಾವುವು?
ಕೋಷ್ಟಕ ರೂಪೀಕರಣದಲ್ಲಿ ನಾಲ್ಕು ವರ್ಗಗಳಿವೆ.
1) ಗುಣಾತ್ಮಕ
2) ಪರಿಮಾಣಾತ್ಮಕ
3) ಕಾಲಾನುಸಾರ
4) ಸ್ಥಾನಾನುಸಾರ
6. ಸಮಯಾನುಸಾರ ವರ್ಗೀಕರಣದ ಅರ್ಥ ಬರೆಯಿರಿ,
ಇಲ್ಲಿ ಕಾಲವು ವರ್ಗೀಕರಣದ ಚಲಕವಾಗಿದೆ ಹಾಗೂ ದತ್ತಾಂಶಗಳು ಕಾಲದ ಆಧಾರದ ಮೇಲೆ ವರ್ಗೀಕರಿಸಲ್ಪಡುತ್ತವೆ. ಕಾಲವು, ಗಂಟೆಗಳು, ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಇತ್ಯಾದಿಗಳಲ್ಲಿ ಇರಬಹುದು.
7. ಗುಣಾತ್ಮಕ ವರ್ಗೀಕರಣ ಎಂದರೇನು?
ಸಾಮಾಜಿಕ ಸ್ಥಾನಮಾನ, ಭೌತಿಕ ಸ್ಥಾನಮಾನ, ರಾಷ್ಟ್ರೀಯತೆ ಇತ್ಯಾದಿ ಗುಣಲಕ್ಷಣಗಳಿಗನುಸಾರ ವರ್ಗೀಕರಣ ಮಾಡುವುದಕ್ಕೆ ‘ಗುಣಾತ್ಮಕ ವರ್ಗೀಕರಣ’ ಎನ್ನುತ್ತಾರೆ.
8. ಮೂಲ ಎಂದರೇನು?
ಇದು ಕೋಷ್ಟಕದಲ್ಲಿ ನಿರೂಪಿಸಿದ ದತ್ತಾಂಶಗಳ ಮೂಲವನ್ನು ಸೂಚಿಸುವ ಸಂಕ್ಷಿಪ್ತ ಹೇಳಿಕೆಯನ್ನು ಮೂಲ ಟಿಪ್ಪಣಿ ಎನ್ನುವರು.
9. ಸ್ತಂಭಾರೇಖಾ ಚಿತ್ರ ಎಂದರೇನು?
ವ್ಯವಹಾರಿಕ ಮತ್ತು ಆರ್ಥಶಾಸ್ತ್ರೀಯ ದತ್ತಾಂಶಗಳನ್ನು ನಿರೂಪಿಸಲು ಸ್ತಂಭಗಳೆಂದು ಕರೆಯುವ ಆಯತಗಳನ್ನು ಬಳಸಿ ಬರೆಯುವ ರೇಖಾಚಿತ್ರವನ್ನು ಸ್ವಂಭರಾ ಚಿತ್ರ ಎನ್ನುತ್ತೇವೆ.
10. ರೇಖಾಚಿತ್ರಗಳಲ್ಲಿನ ವಿಧಗಳಾವುವು?
ರೇಖಾಚಿತ್ರಗಳಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಬಹಳ ಪ್ರಮುಖ ವಾದವುಗಳೆಂದರೆ :
1) ರೇಖಾಗಣಿತೀಯ ಚಿತ್ರಗಳು / ಜ್ಯಾಮಿತಿ ಚಿತ್ರಗಳು
2) ಆವೃತ್ತಿಯ ರೇಖಾ ಚಿತ್ರಗಳು
3) ಅಂಕಗಣತೀಯ ರೇಖಾ ಚಿತ್ರಗಳು
11. ರೇಖಾಗಣಿತೀಯ ನಕ್ಷೆಗಳಾವುವು?
ಸ್ತಂಭ ಹಾಗೂ ಪೈ ರೇಖಾ ಚಿತ್ರಗಳು ರೇಖಾಗಣಿತೀಯ ಚಿತ್ರಗಳಾಗಿವೆ.
12. ಸ್ತಂಭರೇಖಾ ಚಿತ್ರಗಳ ವಿಧಗಳನ್ನು ತಿಳಿಸಿ.
ಸ್ತಂಭರೇಖಾ ಚಿತ್ರಗಳಲ್ಲಿ 3 ವಿಧಗಳಿವೆ. ಅವುಗಳೆಂದರೆ :
1) ಸರಳ ಸ್ತಂಭ
2) ಬಹುಸ್ತಂಭ
3) ಸಂಘಟಕ ಸ್ತಂಭ ರೇಖಾಚಿತ್ರಗಳು
13. ಸರಳ ಸ್ತಂಭ ರೇಖಾ ಚಿತ್ರ ಎಂದರೇನು?
ಸರಳ ಸ್ತಂಭ ರೇಖಾ ಚಿತ್ರವು ದತ್ತಾಂಶಗಳ ಪ್ರತಿ ವರ್ಗಕ್ಕೆ ಉದ್ದ ಮತ್ತು ಅಗಲ ಸಮಾನವಾಗಿರುವ ಆಯತಾಕಾರದ ಸ್ತಂಭಗಳ ಗುಂಪನ್ನು ಒಳಗೊಂಡಿರುತ್ತದೆ.
14. ಬಹು ಸ್ತಂಭ ರೇಖಾ ಚಿತ್ರದ ಅರ್ಥ ಬರೆಯಿರಿ
ಎರಡು ಅಥವಾ ಹೆಚ್ಚು ದತ್ತಾಂಶಗಳ ಗಣಗಳನ್ನು ಹೋಲಿಕೆ ಮಾಡಲು ಉಪಯೋಗಿಸುವ ಚಿತ್ರವನ್ನು ಬಹು ಸ್ತಂಭಾ ರೇಖಾ ಚಿತ್ರ ಎಂದು ಕರೆಯುತ್ತಾರೆ. ಉದಾ : ಆದಾಯ ಮತ್ತು ವೆಚ್ಚ, ಬೇರೆ – ಬೇರೆ ವರ್ಷಗಳಲ್ಲಿ ಆಮದು ಹಾಗೂ ರಫ್ತು ಇತ್ಯಾದಿ.
15. ಸಂಘಟಕ ಸ್ತಂಭ ರೇಖಾ ಚಿತ್ರ ಎಂದರೇನು? ಉದಾಹರಣೆ ಕೊಡಿ.
ವಿವಿಧ ಘಟಕಗಳ ಭಾಗಗಳ ಗಾತ್ರಗಳನ್ನು ಹೋಲಿಕೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ ಹಾಗೂ ಈ ಅವಿಭಾಜ್ಯ ಅಂಗಗಳ ನಡುವಿನ ಸಂಬಂಧಗಳ ಮೇಲೂ ಬೆಳಕು ಚೆಲ್ಲುತ್ತವೆ.
ಉದಾ : ವಿವಿಧ ಉತ್ಪನ್ನಗಳ ಮಾರಾಟದಿಂದ ಬಂದ ಆದಾಯ, ಸ್ವೀಕೃತಿಗಳು ಹಾಗೂ ವೆಚ್ಚಗಳ ಆಯ – ವ್ಯಯ ನಮೂನೆ ಇತ್ಯಾದಿ.
16. ಪೈ – ನಕ್ಷೆ ಎಂದರೇನು?
ಪೈ – ರೇಖಾ ಚಿತ್ರವು ಒಂದು ವೃತ್ತವಾಗಿದ್ದು, ಅದರ ವಿಸ್ತೀರ್ಣವನ್ನು ಅದು ಪತಿನಿಧಿಸುವ ಘಟಕಗಳ ಪ್ರಮಾಣಾನುಗುಣವಾಗಿ ವಿಭಾಗಿಸಲಾಗುತ್ತದೆ. ಇದನ್ನು ಪೈ ನಕ್ಷೆ ಎಂದು ಕರೆಯುತ್ತಾರೆ.
17. ಆವೃತ್ತಿ ರೇಖಾ ಚಿತ್ರಗಳನ್ನು ತಿಳಿಸಿ.
ವರ್ಗೀಕೃತ ಆವೃತ್ತಿ ವಿತರಣೆ ರೂಪದಲ್ಲಿರುವ ದತ್ತಾಂಶಗಳನ್ನು ಸಾಮಾನ್ಯವಾಗಿ ಅವೃತ್ತಿ ರೇಖಾ ಚಿತ್ರಗಳಾದ ಆಯತ ಚಿತ್ರ, ಆವೃತ್ತಿ ಬಹುಭುಜ, ಆವೃತ್ತಿ ವಕ್ರರೇಖೆ ಹಾಗೂ ಚೂಪು ಚಾವಣಿ ರೇಖೆಗಳಲ್ಲಿ ಪ್ರತಿನಿಧಿಸಲಾಗುತ್ತದೆ.
18. ಆವೃತ್ತಿ ಬಹುಭುಜಾಕೃತಿ ಎಂದರೇನು?
ಆವೃತ್ತಿ ಬಹುಭುಜಾಕೃತಿ ಸಾಮಾನ್ಯವಾಗಿ ನಾಲ್ಕು ಅಥವಾ ಹೆಚ್ಚು ಸರಳರೇಖೆಗಳಿಂದ ಆವೃತ್ತವಾದ ಒಂದು ಸಮತಲವಾಗಿರುತ್ತದೆ.
19. ಆವೃತ್ತಿ ವಕ್ರರೇಖೆ ಎಂದರೇನು?
ಆವೃತ್ತಿ ಬಹುಭುಜಾಕೃತಿಯಲ್ಲಿ ಗುರುತಿಸಿದ ಬಿಂದುಗಳ ಸಾಧ್ಯವಾದಷ್ಟೂ ಹತ್ತಿರದಿಂದ ಹಾದುಹೋಗುವಂತೆ ಸುಲಲಿತ ವಕ್ರ ರೇಖೆಯನ್ನು ಎಳೆಯುವುದರ ಮೂಲಕ ಆವೃತ್ತಿ ವಕ್ರರೇಖೆಯನ್ನು ಪಡೆಯಬಹುದು.
20, ಚೂಪು ಚಾವಣಿ (ಕಮಾನು ರೇಖೆ) ಓಗಿವ್ ರೇಖೆ ಎಂದರೇನು?
ಇದನ್ನು ಸಂಚಿತ ಆವೃತ್ತಿ ರೇಖೆ ಎಂದು ಕರೆಯುತ್ತಾರೆ. ಎರಡು ತರಹದ ಸಂಚಿತ ಆವೃತ್ತಿ ಇರುವಂತೆ, ಅಂದರೆ ಒಂದು ನಿರ್ದಿಷ್ಟ ದತ್ತಾಂಶಗಳಿಗಿಂತ ಕಡಿಮೆ (ಗಿಂತ ಕಡಿಮೆ) ಹಾಗೂ ಇನ್ನೊಂದು ಒಂದು ನಿರ್ದಿಷ್ಟ ದತ್ತಾಂಶಗಳಿಗಿಂತ ಹೆಚ್ಚು (ಗಿಂತ ಜಾಸ್ತಿ) ಇರುವಂತೆ ಯಾವಾಗಲೂ ವರ್ಗೀಕೃತ ಆವೃತ್ತಿ ವಿತರಣೆ ದತ್ತಾಂಶಗಳಿಗೆ ಎರಡು ಚೂಪು ಚಾವಣಿ ರೇಖೆಗಳು ಇರುತ್ತವೆ.
21. ಅಂಕಗಣಿತೀಯ ರೇಖಾ ನಕ್ಷೆ ಎಂದರೇನು?
ಈ ನಕ್ಷೆಯಲ್ಲಿ, ಸಮಯವನ್ನು (ಗಂಟೆ / ತಾರೀಖು, ವಾರ, ತಿಂಗಳು, ವರ್ಷ ಇತ್ಯಾದಿ) x – ಅಕ್ಷದ ಮೇಲೆ ಹಾಗೂ ಚಲಕದ ಮೌಲ್ಯಗಳನ್ನು (ಕಾಲಶ್ರೇಣಿ ದತ್ತಾಂಶ) y – ಅಕ್ಷದ ಮೇಲೆ ಗುರುತಿಸಲಾಗುತ್ತದೆ. ಈ ಗುರುತಿಸಲ್ಪಟ್ಟ ಬಿಂದುಗಳನ್ನು ಸೇರಿಸಿದಲ್ಲಿ ನಮಗೆ ಅಂಕಗಣಿತೀಯ ರೇಖಾ ನಕ್ಷೆ ಸಿಗುತ್ತದೆ.
22. ರೇಖಾಕೃತಿಯ ನಿರೂಪಣೆಯ ಎರಡು ಉಪಯೋಗಗಳಾವುವು?
- ರೇಖಾಕೃತಿಗಳು ದತ್ತಾಂಶಗಳ ಸ್ಪಷ್ಟ ಚಿತ್ರಣ ನೀಡುತ್ತವೆ.
- ಸಂಖ್ಯಾಶಾಸ್ತ್ರ ಮಾಪನಗಳಾದ ಸರಾಸರಿ, ಮಧ್ಯಾಂಕ ಮತ್ತು ಬಹುಲಕಗಳನ್ನು ಸರಳವಾಗಿ ವಿವಿಧ ಮಾದರಿಗಳ ನಡುವೆ ಹೋಲಿಕೆ ಮಾಡಬಹುದು.
ಹತ್ತು ವಾಕ್ಯದ ಪ್ರಶೋತ್ತರಗಳು :
1. ದತ್ತಾಂಶಗಳ ವರ್ಗೀಕರಣದ ವಿಧಗಳು ಯಾವುವು? ವಿವರಿಸಿ.
ದತ್ತಾಂಶಗಳ ವರ್ಗೀಕರಣದ ವಿಧಗಳೆಂದರೆ :
1) ಗುಣಾತ್ಮಕ ವರ್ಗೀಕರಣ :
ಸಾಮಾಜಿಕ ಸ್ಥಾನಮಾನ, ಭೌತಿಕ ಸ್ಥಾನಮಾನ, ರಾಷ್ಟ್ರೀಯತೆ ಇತ್ಯಾದಿ ಗುಣಲಕ್ಷಣಗಳಿಗನುಸಾರ ವರ್ಗೀಕರಣ ಮಾಡುವುದಕ್ಕೆ ‘ಗುಣಾತ್ಮಕ ವರ್ಗೀಕರಣ ಎನ್ನುತ್ತಾರೆ. ಉದಾಹರಣೆಗೆ : ಲಿಂಗ ಮತ್ತು ಸ್ಥಳಗಳ ಗುಣಲಕ್ಷಣಗಳ ಆಧಾರದ ಮೇರೆಗೆ ವರ್ಗೀಕರಣದ ಮಾಡುವುದು ಗುಣಾತ್ಮಕ ಸ್ವರೂಪದಲ್ಲಿದೆ.
2) ಪರಿಮಾಣಾತ್ಮಕ ವರ್ಗೀಕರಣ :
ಪರಿಮಾಣಾತ್ಮಕ ವರ್ಗೀಕರಣದಲ್ಲಿ ದತ್ತಾಂಶಗಳನ್ನು ಪರಿಮಾಣಾತ್ಮಕ ಸ್ವರೂಪದಲ್ಲಿರುವ ಲಕ್ಷಣಗಳ ಆಧಾರದ ಮೇಲೆ ವರ್ಗೀಕರಣ ಮಾಡಲಾಗುತ್ತದೆ. ಉದಾ : ವಯಸ್ಸು, ಎತ್ತರ, ಉತ್ಪಾದನೆ, ಆದಾಯ ಮುಂತಾದವುಗಳು.
3) ಕಾಲಾನುಸಾರ ವರ್ಗೀಕರಣ :
ಇಲ್ಲಿ ಕಾಲವು ವರ್ಗೀಕರಣದ ಚಲಕವಾಗಿದೆ ಹಾಗೂ ದತ್ತಾಂಶಗಳು ಕಾಲದ ಆಧಾರದ ಮೇಲೆ ವರ್ಗೀಕರಣಸಲ್ಪಡುತ್ತವೆ. ಕಾಲವು, ಗಂಟೆಗಳು, ದಿನಗಳು, ತಿಂಗಳುಗಳು, ವರ್ಷಗಳು ಇತ್ಯಾದಿಗಳಲ್ಲಿ ಇರಬಹುದು.
4) ಪ್ರದೇಶಾನುಸಾರ ವರ್ಗೀಕರಣ :
ದತ್ತಾಂಶಗಳ ವರ್ಗೀಕರಣವನ್ನು ಸ್ಥಳದ ಆಧಾರದ ಮೇಲೆ ಮಾಡಿದರೆ ಅದು ಪ್ರದೇಶಾನುಸಾರ ಅಥವಾ ಪ್ರಾದೇಶಿಕ ವರ್ಗೀಕರಣವಾಗುತ್ತದೆ. ಸ್ಥಳವು ಹಳ್ಳಿ / ಪಟ್ಟಣ / ಕ್ಷೇತ್ರ, ಜಿಲ್ಲೆ, ರಾಜ್ಯ ದೇಶ ಇತ್ಯಾದಿ.
2. ಒಂದು ಉತ್ತಮ ಕೋಷ್ಟಕದಲ್ಲಿರಬೇಕಾದ ಅಂಶಗಳು ಯಾವುವು? ವಿವರಿಸಿ.
ದತ್ತಾಂಶಗಳನ್ನು ಅಡ್ಡಸಾಲು ಮತ್ತು ಕಂಬಸಾಲುಗಳಲ್ಲಿ, ಕೆಲವು ವಿವರಣೆಗಳ ಜೊತೆಗೆ ನಿರೂಪಿಸಿದ ಕೋಷ್ಟಕೀಕರಣ ಎನ್ನುತ್ತಾರೆ. ಒಂದು ಉತ್ತಮ ಕೋಷ್ಟಕವು ಕೆಳಗಿನ ಅಂಶಗಳನ್ನು ಹೊಂದಿರುತ್ತದೆ.
1) ಕೋಷ್ಟಕದ ಕ್ರಮಾಂಕ :
ಸುಲಭವಾಗಿ ಗುರುತಿಸಲು ಹಾಗೂ ಮುಂದಿನ ಉಪಯೋಗಕ್ಕೆ ಅನುಕೂಲವಾಗಲು, ಒಂದು ಉಚಿತವಾದ ಕ್ರಮಾಂಕವನ್ನು ಕೋಷ್ಟಕಕ್ಕೆ ಕೊಡಬೇಕಾಗಿರುತ್ತದೆ. ಇದನ್ನು ಕೋಷ್ಟಕದ ಮೇಲ್ಬಾಗದಲ್ಲಿ ಬರೆದಿರಬೇಕಾಗುತ್ತದೆ.
2) ಶೀರ್ಷಿಕೆ :
ಶೀರ್ಷಿಕೆಯು ದತ್ತಾಂಶಗಳ ಸ್ವಭಾವವನ್ನು ವಿವರಿಸುತ್ತದೆ. ಇದು ಸಾಮಾನ್ಯವಾಗಿ ಕೋಷ್ಟಕದ ಮೇಲೆ, ಕ್ರಮಾಂಕದ ಕೆಳಗೆ ಇರುತ್ತದೆ.
3) ಶಿರೋಟಿಪ್ಪಣಿ :
ಶೀರ್ಷಿಕೆಗಿಂತ ಕೆಳಗೆ, ಬಲಗಡೆ ಶಿರೋ ಟಿಪ್ಪಣಿಯು ಇರುತ್ತದೆ. (ಉದಾ : ರೂಪಾಯಿ, ಕೋಟಿಗಳಲ್ಲಿ)
4) ಕಂಬಸಾಲು ಶಿರೋನಾಮೆ :
ಈ ಶಿರೋನಾಮೆಯು ಕಂಬ ಸಾಲುಗಳ ಶಿರೋನಾಮೆಯಾಗಿರುತ್ತವೆ. ಅವುಗಳು ಸಾಧಾರಣವಾಗಿ ಕಂಬಸಾಲುಗಳ ಮಧ್ಯದಲ್ಲಿ ಬರೆದಿರುತ್ತವೆ.
5) ಅಡ್ಡಸಾಲು ಶಿರೋನಾಮೆ :
ಇವುಗಳು ಅಡ್ಡಸಾಲು ಶಿರೋನಾಮೆಯಾಗಿರುತ್ತದೆ. ಇವುಗಳು ಕೋಷ್ಟಕದ ಎಡತುದಿಯಲ್ಲಿ ಇರುತ್ತವೆ.
6) ಕೋಷ್ಟಕದ ವಸ್ತು ವಿವರಣೆ :
ಕೋಷ್ಟಕದ ವಸ್ತುವಿವರಣೆಯು ಕೋಷ್ಟಕದ ಮುಖ್ಯಭಾಗವಾಗಿರುತ್ತದೆ. ಇದು ದತ್ತಾಂಶಗಳ ಮಾಹಿತಿಯನ್ನು ಒಳಗೊಂಡಿರುತ್ತವೆ.
7) ಮೂಲಟಿಪ್ಪಣಿ :
ಇದು ಕೋಷ್ಟಕದಲ್ಲಿರುವ ಮಾಹಿತಿಯ ಮೂಲವನ್ನೊಳಗೊಂಡ ಚಿಕ್ಕದಾದ ಟಿಪ್ಪಣಿಯಾಗಿರುತ್ತದೆ. ಇದನ್ನು ಕೋಷ್ಟಕದ ಕೆಳಗಡೆ ಬರೆಯಲಾಗಿರುತ್ತದೆ.3.
8) ಅಡಿಟಿಪ್ಪಣಿ :
ಇದು ಕೋಷ್ಟಕದ ಕೊನೆಯ ಭಾಗವಾಗಿರುತ್ತದೆ. ದತ್ತಾಂಶಗಳ ಗುಣಲಕ್ಷಣಗಳನ್ನು ವಿವರಿಸುತ್ತದೆ.
3. ಒಂದು ಮಾದರಿ ಕೋಷ್ಟಕವನ್ನು ಬರೆದು ಅದರ ಅಂಗಗಳನ್ನು ಗುರುತಿಸಿ.
FAQ
ವಿಫುಲವಾಗಿ ಸಂಗ್ರಹಿಸಿದ ದತ್ತಾಂಶಗಳನ್ನು, ಉಪಯೋಗಿಸಲು ಸಿದ್ಧವಾಗಿರುವಂತೆ ಮತ್ತು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವಂತೆ ದತ್ತಾಂಶಗಳನ್ನು ಸಂಕ್ಷಿಪ್ತವಾಗಿ ನಿರೂಪಣೆ ಮಾಡುವುದನ್ನು ದತ್ತಾಂಶಗಳ ನಿರೂಪಣೆ ಎಂದು ಕರೆಯುತ್ತೇವೆ.
ದತ್ತಾಂಶಗಳನ್ನು ಅಡ್ಡಸಾಲು ಮತ್ತು ಕಂಬಸಾಲುಗಳಲ್ಲಿ ನಿರೂಪಿಸುವಿಕೆಯನ್ನು ಕೋಷ್ಟಕ ಎನ್ನುತ್ತೇವೆ.
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.