rtgh

ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಬಡತನ ನೋಟ್ಸ್‌ | 1st Puc Economics Chapter 4 Notes in Kannada

ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಬಡತನ ನೋಟ್ಸ್‌ ಪ್ರಶ್ನೋತ್ತರಗಳು, 1st Puc Economics Chapter 4 Notes Question Answer Mcq Pdf Download in Kannada Medium 2023 Kseeb Solutions For Class 11 Economics Chapter 4 Notes in Kannada 1st Puc Economics Badatana notes Economics Chapter 4 Poverty Questions and Answers 1st Puc Economics 4th Lesson Notes

 

1st Puc Economics Chapter 4 Notes in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಪೌಷ್ಠಿಕಾಂಶ ಆಧಾರಿತ ವಿಧಾನವು ಏಕೆ ಬಡವರನ್ನು ಗುರುತಿಸುವಲ್ಲಿ ಸಮರ್ಪಕವಾಗಿಲ್ಲ?

ಪೌಷ್ಠಿಕಾಂಶವುಳ್ಳ ಸರಕುಗಳು ಪ್ರತಿಯೊಬ್ಬರ ಜೀವನ ಮಟ್ಟವನ್ನು ಉತ್ತಮಪಡಿಸುವುದು ಅನುಮಾನಸಾದವಾಗಿರುವುದರಿಂದ ಪೌಷ್ಠಿಕಾಂಶ ಆಧಾರಿತ ವಿಧಾನವು ಬಡವರನ್ನು ಗುರುತಿಸುವಲ್ಲಿ ಸಮರ್ಪಕವಾಗಿಲ್ಲ.

2. ಕೂಲಿಗಾಗಿ ಕಾಳು ಯೋಜನೆ ಎಂದರೇನು?

2004 ನವೆಂಬರ್ 14ರಂದು ಕೇಂದ್ರ ಸರ್ಕಾರವು ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಪ್ರಾರಂಭಿಸಲಾಯಿತು. ಭಾರತದಲ್ಲಿನ 150 ಹಿಂದುಗಳಿದ ಜಿಲ್ಲೆಗಳಿಗೆ ಉದ್ಯೋಗವನ್ನು ಸೃಷ್ಟಿಸಿ ಪೂರಕ ವೇತನವನ್ನು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.

3. ಭಾರತದಲ್ಲಿ ಬಡತನ ನಿರ್ಮೂಲನೆ ಮಾಡಲು ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳು ಏಕೆ ಪ್ರಮುಖವಾಗಿವೆ?

ಏಕೆಂದರೆ, ಉದ್ಯೋಗಸೃಷ್ಟಿ ಮಾಡುವುದರ ಮೂಲಕ ಬಡವರ ಆದಾಯ ಹೆಚ್ಚಿಸಬಹುದಾಗಿದೆ. ಸ್ವಯಂ – ಉದ್ಯೋಗ ಮತ್ತು ಕೂಲಿ ಉದ್ಯೋಗಳನ್ನು ಸೃಷ್ಟಿಸುವುದು ಸ್ವ – ಸಹಾಯ ಗುಂಪುಗಳನ್ನು ರಚಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಅವರು ಅಲ್ಪ ಹಣವನ್ನು ಉಳಿತಾಯ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಮತ್ತು ಆ ಹಣದಿಂದ ಕಿರು ಪ್ರಮಾಣದ ಸಾಲಗಳನ್ನು ನೀಡಲಾಗುತ್ತದೆ. ಇದು ಆದಾಯದ ಮಟ್ಟಗಳು, ಕೌಶಲ್ಯದ ಅಭಿವೃದ್ಧಿ, ಆರೋಗ್ಯ ಮತ್ತು ಸಾಕ್ಷರತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.

4. ಬಡತನ ಸಮಸ್ಯೆಯನ್ನು ಆದಾಯ ಗಳಿಸುವ ಆಸ್ತಿಗಳ ಸೃಷ್ಟಿಯು ಹೇಗೆ ನಿವಾರಿಸಬಲ್ಲವು?

ಬಡತನ ಸಮಸ್ಯೆಯನ್ನು ಗಳಿಸುವ ಆಸ್ತಿಗಳ ಸೃಷ್ಟಿಯು ಹೇಗೆ ನಿವಾರಿಸಬಲ್ಲವು. `ಬಡತನವನ್ನು ಕಡಿಮೆಗೊಳಿಸುವ ನಿರ್ದಿಷ್ಟವಾದ ಕಾರಕ್ರಮಗಳನ್ನು ಆಧರಿಸಿದೆ: ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳ ಮೂಲಕ ಹೆಚ್ಚುವರಿ ಆಸ್ತಿಗಳನ್ನು ನಿರ್ಮಿಸಿ, ಬಡವರ ಆದಾಯ ಮತ್ತು ಉದ್ಯೋಗಗಳನ್ನು ಹೆಚ್ಚಿಸಬಹುದಾಗಿದೆ.

5. ಭಾರತದಲ್ಲಿ ಬಡತನ ನಿವಾರಣೆಗಾಗಿ ಸರ್ಕಾರವು ಕೈಗೊಂಡಿರುವ ಮೂರು ಆಯಾಮದ ಕಾರ್ಯಕ್ರಮಗಳು ಬಡತನ ನಿರ್ಮೂಲನೆ ಮಾಡುವಲ್ಲಿ ಯಶಸ್ವಿ ಯಾಗಿಲ್ಲ. ವಿಮರ್ಶಿಸಿ,

ಕೆಲವು ವಿದ್ವಾಂಸರು ಬಡತನ ಕಡಿಮೆ ಮಾಡುವ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ತಡೆಯುಂಟು ಮಾಡಿರುವ ನಿರ್ದಿಷ್ಟ ಕಾರಣಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ :

1) ಭೂಮಿ ಮತ್ತು ಇತರೆ ಆಸ್ತಿಗಳ ಅಸಮಾನ ಹಂಚಿಕೆ,

2) ಬಡತನ ಕಡಿಮೆಗೊಳಿಸುವ ಕಾರಕ್ರಮಗಳ ಪ್ರಯೋಜನಗಳನ್ನು ಬಡವರಲ್ಲದವರು ಪಡೆಯುತ್ತಿರುವುದು.

3) ಈ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿರುವ ಹಣದ ಸಂಪನ್ಮೂಲ ಸಾಕಷ್ಟಿಲ್ಲದಿರುವುದು.

4) ಬಡತನ ನಿವಾರಣಾ ಕಾರಕ್ರಮಗಳ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಸರ್ಕಾರದ ಮತ್ತು ಬ್ಯಾಂಕ್‌ ನೌಕರರು ಪ್ರೇರಣಾ ರಹಿತರು, ಅಸಮರ್ಪಕ ತರಬೇತಿ ಹೊಂದಿರುವವರು ಮತ್ತು ಭ್ರಷ್ಟಾಚಾರ ಪೀಡಿತರಾಗಿರುವುದು.

5) ಈ ಕಾಠ್ಯಕ್ರಮಗಳ ಅನುಷ್ಟಾನದಲ್ಲಿ ಸ್ಥಳೀಯ ಮಟ್ಟದ ಸಂಸ್ಥೆಗಳು ಭಾಗವಹಿಸದಿರುವುದು.

6) ಬಡವರು ಸಕ್ರಿಯವಾಗಿ ಭಾಗವಹಿಸದಿರುವುದು.

6. ಬಡವರು ಮತ್ತು ಹಿರಿಯ ನಾಗರಿಕರು ಹಾಗೂ ದಿಕ್ಕಿಲ್ಲದ ಮಹಿಳೆಯರ ಸಹಾಯಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳಾವುವು ?

ಬಡವರು ಮತ್ತು ಹಿರಿಯ ನಾಗರಿಕರು ಹಾಗೂ ದಿಕ್ಕಿಲ್ಲದ ಮಹಿಳೆಯರ ಸಹಾಯಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ.

7. ನಿರುದ್ಯೋಗ ಮತ್ತು ಬಡತನದ ನಡುವೆ ಯಾವುದಾದರೂ ಸಂಬಂಧವಿದೆಯೇ? ವಿವರಿಸಿ.

ಭಾರತ ನಗರದಲ್ಲಿನ ಹೆಚ್ಚಿನ ಬಡವರು ಗ್ರಾಮೀಣ ಪ್ರದೇಶದಿಂದ ಹೊರದೂಡಲ್ಪಟ್ಟ ಬಡವರಾಗಿದ್ದು ಜೀವನೋಪಾಯವನ್ನು ಅರಸಿ ವಲಸೆ ಬಂದವರಾಗಿರುತ್ತದೆ. ಕೈಗಾರಿಕೀಕರಣವು ಈ ಎಲ್ಲಾ ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ ಬಡತನವು ಉದ್ಯೋಗದ ಸ್ವರೂಪದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ನಿರುದ್ಯೋಗ ಮತ್ತು ಅರೆ ಉದ್ಯೋಗ ಹಾಗೂ ದಿನಗೂಲಿ ಮತ್ತು ಸಾಂದರ್ಭಿಕ ಉದ್ಯೋಗದ ಸ್ವರೂಪದ ಅವರನ್ನು ಸಾಲದ ಸುಳಿಗೆ ದೂಡಿ ಬಡತನವನ್ನು ಮತ್ತಷ್ಟು ಹೆಚ್ಚಿಸಿವೆ.

8. ನೀವು ಒಂದು ಬಡ ಕುಟುಂಬದಿಂದ ಬಂದಿದ್ದು, ಒಂದು ಪೆಟ್ಟಿಗೆ ಅಂಗಡಿಯನ್ನು ಇಡಲು ಸರ್ಕಾರದಿಂದ ಹಣಕಾಸಿನ ಸಹಾಯ ಪಡೆಯಲು ಅಪೇಕ್ಷಿದಿದ್ದೀರೆಂದು ಭಾವಿಸಿ. ನೀವು ಯಾವ ಯೋಜನೆ ಅಡಿಯಲ್ಲಿ ಸಹಾಯಕ್ಕೆ ಅರ್ಜಿ ಸಲ್ಲಿಸುವಿರಿ? ಮತ್ತು ಏಕೆ?

ಸ್ವರ್ಣ ಜಯಂತಿ ಷಹರಿ ರೋಜಗಾರ್‌ ಯೋಜನೆ (SJSRY) ಪ್ರಧಾನಮಂತ್ರಿ ರೋಜಗಾರ್‌ ಯೋಜನೆ (PMRY) ಏಕೆಂದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ – ಉದ್ಯೋಗ ಮತ್ತು ಕೂಲಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿದೆ.

9. ಗ್ರಾಮೀಣ ಮತ್ತು ನಗರ ಬಡತನದ ನಡುವಿನ ವ್ಯತ್ಯಾಸವನ್ನು ವಿಷದೀಕರಿಸಿ. ಬಡತನ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವರ್ಗಾವಣೆಯಾಗಿದೆ ಎಂದು ಹೇಳುವುದು ಸರಿಯೇ ? ಬಡತನ ಅನುಪಾತ ಪ್ರವೃತ್ತಿಯನ್ನು ಬಳಸಿಕೊಂಡು ನಿಮ್ಮ ಉತ್ತರವನ್ನು ಸಮರ್ಥಿಸಿ.

ಗ್ರಾಮೀಣ ಬಡತನನಗರ ಬಡತನ
ಗ್ರಾಮೀಣ ಪ್ರದೇಶಗಳಲ್ಲಿ ಮುಕ್ತ ಮತ್ತು ಮರೆಮಾಚಿದ ನಿರುದ್ಯೋಗಗ ಳೆರಡನ್ನೂ ಒಟ್ಟಿಗೆ ಕಾಣಬಹುದು.ಸಾಮಾನ್ಯವಾಗಿ ಮುಕ್ತ ನಿರುದ್ಯೋಗ ವನ್ನು ಕಾಣಬಹುದಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಮುಕ್ತ ಮತ್ತು ಮರೆಮಾಚಿದ ನಿರುದ್ಯೋಗವನ್ನು ವಿಭಾಗಿಸುವುದು ಕಷ್ಟ.2, ಮುಕ್ತ ಮತ್ತು ಮರೆಮಾಚಿದ ನಿರುದ್ಯೋಗವನ್ನು ವ್ಯತ್ಯಾಸವನ್ನು ಕಂಡು ಹಿಡಿಯಬಹುದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾದಷ್ಟು ಕೃಷಿ ಮೇಲಿನ ಅವಲಂಬಿ ತರು ಹೆಚ್ಚಾಗುವುದರಿಂದ ಸಾಂದರ್ಭಿಕ ಮುಕ್ತ, ಅರೆ ಮತ್ತು ಮರೆಮಾಚಿದ ನಿರು ದ್ಯೋಗವು ಹೆಚ್ಚಾಗುತ್ತದೆ.ನಗರ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಇತರೆ ಸೌಲಭ್ಯಗಳ ಹೆಚ್ಚಾಗುವುದ ರಿಂದ ಮುಕ್ತ ನಿರುದ್ಯೋಗ ಹೆಚ್ಚಾಗುತ್ತದೆ.
ಶಿಕ್ಷಣ, ಉದ್ಯೋಗ, ಸಾಮಾಜಿಕ ಕ್ಷೇಮಾಭಿವೃದ್ಧಿ ಇತ್ಯಾದಿ ಸೌಲಭ್ಯಗಳಿಲ್ಲದಿ ರುವುದರಿಂದ ಜನರಲ್ಲಿ ಬಡತನ ಏರಿಕೆ ಯಾಗುತ್ತದೆ.ನಗರ ಪ್ರದೇಶಗಳಲ್ಲಿ ಜನರು ಸಾಮಾನ್ಯವಾಗಿ ತಮ್ಮ ಉದ್ಯೋಗಗಳಲ್ಲಿ ಅಥವಾ ಇತರ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಾರೆ.
ಅಪೌಷ್ಟಿಕತೆ ಗ್ರಾಮೀಣ ಜನರಲ್ಲಿ ಹೆಚ್ಚುಸಾಮಾನ್ಯವಾಗಿ, ಅಪೌಷ್ಟಿಕತೆ ಕಾಣ ಸಿಗುವುದಿಲ್ಲ.

ಹೌದು, ಗ್ರಾಮೀಣ ಪ್ರದೇಶದಲ್ಲಿನ ಜನರು ಪರ್ಯಾಯ ಉದ್ಯೋಗವನ್ನು ಅರಸಿ ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. 1973-74ರಲ್ಲಿ ಶೇ. 80ಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಮತ್ತು 2011-12ರಲ್ಲಿಯೂ ಈ ಪ್ರಮಾಣದಲ್ಲಿ ಬಡವರ ಸಂಖ್ಯೆಯೂ ಕಡಿಮೆಯಾಗಿದ್ದು, ನಗರ ಪ್ರದೇಶದಲ್ಲಿ ಅವರ ಸಂಖ್ಯೆಯೂ ಅತ್ಯಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

10. ನೀವು ಗ್ರಾಮ ನಿವಾಸಿಯೆಂದು ಭಾವಿಸಿಕೊಂಡು, ಬಡತನದ ಸಮಸ್ಯೆಯನ್ನು ಎದುರಿಸುವ ಕೆಲವು ಕ್ರಮಗಳನ್ನು ಸೂಚಿಸಿ.

  1. ಉದ್ಯೋಗ ಅವಕಾಶಗಳ ಸೃಷ್ಟಿ 2. ಜನಸಂಖ್ಯಾ ನಿಯಂತ್ರಣ 4. ಮೂಲಭೂಲ ಸೌಕರ್ಯಗಳ ಪೂರೈಕೆ
  2. ಆರ್ಥಿಕ ಅಭಿವೃದ್ಧಿ
  3. ಆರ್ಥಿಕ ಅಸಮಾನತೆಗಳ ನಿವಾರಣೆ

ಹೆಚ್ಚುವರಿ ಪ್ರಶ್ನೆಗಳು

1st Puc Economics Chapter 4 Notes in Kannada

1. ಬಡತನ ಅರ್ಥ ಕೊಡಿರಿ.

ಒಂದು ದೇಶದಲ್ಲಿ ಜನತೆಯ ಒಂದು ವರ್ಗವು ಕನಿಷ್ಟ ಮೂಲ ಅಗತ್ಯಗಳನ್ನು ಪಡೆಯುವ ಸಾಮರ್ಥ್ಯವಿಲ್ಲದ ಸ್ಥಿತಿಯೇ ಬಡತನ.

ಉದಾ : ಆಹಾರ, ಉಡುಪು, ವಸತಿ, ಶಿಕ್ಷಣ ಮತ್ತು ಆರೋಗ್ಯ

2. ಬಡ ಮತ್ತು ದುರ್ಬಲ ಗುಂಪಿಗೆ ಸೇರಿದ ಬಡವರನ್ನು ಉದಾಹರಿಸಿ.

ಗಾಡಿ ಎಳೆಯುವವರು, ಚಮ್ಮಾರರು, ಹೂ ಕಟ್ಟುವ ಮಹಿಳೆಯರು, ಚಿಂದಿ ಆಯುವವರು, ಭಿಕ್ಷುಕರು ಮತ್ತು ಅತಿ ಸಣ್ಣ ವ್ಯಾಪಾರಿಗಳು ಇತ್ಯಾದಿ.

3. ಕಚ್ಚಾ ಗುಡಿಸಲು ಎಂದರೇನು?

ಹುಲ್ಲು, ಗರಿ, ಬಿದಿರು ಮತ್ತು ಮರ ಹಾಗೂ ಸುಟ್ಟ ಮಣ್ಣಿನಿಂದ ನಿರ್ಮಿಸಲ್ಪಟ್ಟ ಮನೆಗಳನ್ನು ಕಚ್ಚಾ ಗುಡಿಸಲು ಎನ್ನುತ್ತಾರೆ.

4. ಕಡುಬಡವರು ಯಾರು?

ವಾಸಿಸಲು ಸೌಲಭ್ಯಗಳೂ ಇರುವುದಿಲ್ಲ, ಗ್ರಾಮೀಣ ಪ್ರದೇಶದಲ್ಲಿನ ಭೂರಹಿತರು ಭೂಮಿ ಹೊಂದಿದ್ದರೂ ಒಣ ಅಥವಾ ನಿರುಪಯುಕ್ತ ಭೂಮಿ ಹೊಂದಿರುವವರು ಮತ್ತು ದಿನದ ಎರಡು ಹೊತ್ತಿನ ಊಟವನ್ನು ಪಡೆಯಲಾಗದವರನ್ನು ಕಡು ಬಡವರು ಎನ್ನಬಹುದಾಗಿದೆ.

5. ಯಾವುದು ಬಡವರನ್ನು ದೈಹಿಕವಾಗಿ ದುರ್ಬಲರನ್ನಾಗಿಸಿದೆ?

ಅಪೌಷ್ಟಿಕತೆ, ಅನಾರೋಗ್ಯ ಹಾಗೂ ಅಶಕ್ತತೆಗಳು ಬಡವರನ್ನು ದೈಹಿಕವಾಗಿ ದುರ್ಬಲರನ್ನಾಗಿಸಿವೆ.

6. ಬಡವರನ್ನು ಯಾವ ಆಧಾರದ ಮೇಲೆ ಗುರುತಿಸಲಾಗುತ್ತದೆ?

ಕೆಲವು ಅರ್ಥಶಾಸ್ತ್ರಜ್ಞರು ಬಡವರನ್ನು ಅವರ ವೃತ್ತಿ ಮತ್ತು ಆಸ್ತಿಗಳ ಒಡೆತನದ ಆಧಾರದ ಮೇಲೆ ಗುರುತಿಸಲು ಪ್ರಯತ್ನಿಸಿದ್ದಾರೆ.

7. ಬಡತನದ ವಿಧಗಳಾವುವು?

ಬಡತನದಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವುಗಳೆಂದರೆ :

  1. ನಿರಪೇಕ್ಷ ಬಡತನ 2, ಸಾಪೇಕ್ಷ ಬಡತನ

8. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಯಾರು ಬಡತನ ರೇಖೆಯ ಪರಿಕಲ್ಪನೆ ಬಗ್ಗೆ ಮೊಟ್ಟ ಮೊದಲು ಚರ್ಚಿಸಿದರು?

ದಾದಾಬಾಯಿ ನವರೋಜಿ.

9. ಬಡತನ ವರ್ಗೀಕರಣ ಹೆಸರಿಸಿ?

ಬಡವರ ವರ್ಗೀಕರಣಕ್ಕೆ ಅನೇಕ ಮಾರ್ಗಗಳಿವೆ. ಅವುಗಳೆಂದರೆ

1. ದೀರ್ಘಕಾಲಿಕ ಬಡವರು

2. ಕ್ಷಣಿಕ ಬಡವರು ಮತ್ತು

3. ಎಂದಿಗೂ ಬಡವರಲ್ಲದವರು.

10. ಬಡತನ ರೇಖೆಯ ಅರ್ಥ ನೀಡಿರಿ.

ಜನಸಂಖ್ಯಾ ಹಂಚಿಕೆಯಲ್ಲಿ ಬಡವರನ್ನು ಬಡವರಲ್ಲದವರಿಂದ ಪ್ರತ್ಯೇಕಿಸುವ ಬಿಂದುವನ್ನು ಬಡತನ ರೇಖೆ ಎನ್ನುವರು.

11. ಯೋಜನಾ ಆಯೋಗದ ಪ್ರಕಾರ ಬಡತನ ರೇಖೆಯನ್ನು ವ್ಯಾಖ್ಯಾನಿಸಿ,

ಯೋಜನಾ ಆಯೋಗದ ಪ್ರಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಬೇಕಾಗುವ ಆಹಾರದ ಕನಿಷ್ಟ ಪೌಷ್ಟಿಕಾಂಶ ಕ್ಯಾಲೋರಿಗಳ ಆದಾರದ ಮೇಲೆ ಅಂದಾಜಿಸಿದೆ. ಗ್ರಾಮೀಣ ಪ್ರದೇಶದ ವ್ಯಕ್ತಿಯೊಬ್ಬನಿಗೆ ದಿನಂಪ್ರತಿ 2400 ಕ್ಯಾಲೋರಿಗಳು ಮತ್ತು ನಗರ ಪ್ರದೇಶದ ವ್ಯಕ್ತಿಯೊಬ್ಬನಿಗೆ 2100 ಕ್ಯಾಲೋರಿಗಳು ಎಂದು ಅಂದಾಜಿಸಲಾಗಿದೆ.

12. ಕಡೆಯುವ ಬಡವರು ಎಂದರೆ ಯಾರು?

ನಿರಂತರವಾಗಿ ಬಡತನ ರೇಖೆಯ ಒಳಗೆ ಮತ್ತು ಹೊರಗೆ ಚಲಿಸುವವರಾಗಿದ್ದಾರೆ. ಉದಾ : ಸಣ್ಣ ರೈತರು ಮತ್ತು ಋತು ಸಂಬಂಧಿ ಕೆಲಸಗಾರರು.

13. ಬಡತನವನ್ನು ಅಂದಾಜಿಸಲು ಅರ್ಥಶಾಸ್ತ್ರಜ್ಞರು ಪ್ರಯತ್ನಿಸಿರುವ ಪರ್ಯಾಯ ಸೂಚ್ಯಂಕಗಳು ಯಾವುವು?

ಸೇನ್ ಸೂಚ್ಯಾಂಕ

ಬಡತನದ ಅಂತರ ಸೂಚಿ

ದ್ವಿಗುಣಗೊಳಿಸಲಾದ ಬಡತನ ಅಂತರಸೂಚಿ

14. ಬಡತನವನ್ನು ಮಾಪನ ಮಾಡುವ ಮಾರ್ಗಗಳಾವುವು?

ತಲೆ’ ಎಣಿಕೆ ಅನುಪಾತ

ಆದಾಯ ಅಂತರ ಅನುಪಾತ

ಬಡತನ ಅಂತರಸೂಚ

ದ್ವಿಗುಣಿಸಿದ ಬಡತನ ಅಂತರ ಸೂಚಿ

15. ತಲೆ ಎಣಿಕೆ ಅನುಪಾತ ಎಂದರೇನು?

ಬಡತನ ರೇಖೆಗಿಂತ ಕೆಳಗಿರುವ ಜನರ ಪ್ರಮಾಣದ ಆಧಾರದ ಮೇಲೆ ಬಡವರ ಸಂಖ್ಯೆಯನ್ನು ಅಂದಾಜಿಸುವುದನ್ನು ತಲೆ ಎಣಿಕೆ ಅಂದಾಜು ಎನ್ನುತ್ತಾರೆ.

16. ಬಡವರ ಅಭಿವೃದ್ಧಿ ಎಂದರೇನು?

ವ್ಯಕ್ತಿಯ ಬದುಕಿಗೆ ಅಡೆತಡೆಯಾಗಿರುವ ಸಂಗತಿಗಳಾದ ಅನಕ್ಷರತೆ, ಅನಾರೋಗ್ಯ ಸಂಪನ್ಮೂಲಗಳನ್ನು ಪಡೆಯುವಲ್ಲಿನ ಅಸಮರ್ಥತೆ ಅಥವಾ ನಾಗರೀಕ ಮತ್ತು ರಾಜಕೀಯ ಸ್ವಾತಂತ್ರ್ಯದ ಕೊರತೆಯನ್ನು ತೊಡೆದು ಹಾಕುವುದಾಗಿದೆ.

17. ಭಾರತದಲ್ಲಿ ಬಡತನದ ಸಮೀಕ್ಷೆಯನ್ನು ಯಾವ ಸಂಸ್ಥೆ ಸಂಗ್ರಹಿಸುತ್ತದೆ.

ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (NSSO)

18. ಯಾವ ಯಾವ ರಾಜ್ಯಗಳಲ್ಲಿ ಇಂದಿಗೂ ಬಡತನದ ಮಟ್ಟವು ರಾಷ್ಟ್ರೀಯ ಬಡತನದ ಮಟ್ಟಕ್ಕಿಂತಲೂ ಅಧಿಕವಾಗಿದೆ.

ಒರಿಸ್ಸಾ, ಮಧ್ಯ ಪ್ರದೇಶ, ಬಿಹಾರ ಮತ್ತು ಉತ್ತರ ಪ್ರದೇಶ.

19. ಸಮಗ್ರ ಬಡತನದ ಅರ್ಥ ನೀಡಿರಿ.

ವ್ಯಕ್ತಿಗತ ಬಡತನವನ್ನು ಕೂಡಿಸಿದರೆ ಅದು ಸಮಗ್ರ ಬಡತನವಾಗುತ್ತದೆ.

20. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಇರುವ ಉದ್ಯೋಗದ ಸ್ವರೂಪಗಳು.

1, ನಿರುದ್ಯೋಗ 2, ಅರೆ ಉದ್ಯೋಗ 3. ದಿನಗೂಲಿ ಉದ್ಯೋಗ 4. ಸಾಂದರ್ಭಿಕ ಉದ್ಯೋಗ

21. ಬಡತನವನ್ನು ಕಡಿಮೆಗೊಳಿಸುವ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ತಿಳಿಸಿ.

ಬೆಳವಣಿಗೆ ಆಧಾರಿತ ಮಾರ್ಗ

ಆದಾಯ ಮತ್ತು ಉದ್ಯೋಗ ಸೃಷ್ಠಿಯ ಮಾರ್ಗ

ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವುದು.

22 ಒಟ್ಟು ದೇಶೀಯ ಉತ್ಪನ್ನ ಎಂದರೇನು?

ಒಂದು ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಎಲ್ಲಾ ಅಂತಿಮ ಸರಕು ಮತ್ತು ಸೇವೆಗಳ ಹಣರೂಪದ ಮೌಲ್ಯವಾಗಿದೆ.

23, ತಲಾದಾಯ ಎಂದರೇನು?

ಒಂದು ವ್ಯಕ್ತಿಯ ವಾರ್ಷಿಕ ಆದಾಯವಾಗಿದೆ.

24, ಸ್ವ – ಉದ್ಯೋಗಿಗಳು ಎಂದರೇನು?

ತಮ್ಮದೇ ಸ್ವಂತ ಕೃಷಿ ಮತ್ತು ಕೃಷಿಯೇತರ ಉದ್ದಿಮೆಗಳಲ್ಲಿ ಅಥವಾ ಸ್ವತಂತ್ರವಾಗಿ ವೃತ್ತಿಯಲ್ಲಿ ತೊಡಗಿರುವವರು.

25, MGNREGA ಅನ್ನು ವಿಸ್ತರಿಸಿ.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆ.

26. ಯಾವಾಗ “ಪ್ರಧಾನಮಂತ್ರಿ ಜನ – ಧನ” ಯೋಜನೆಯನ್ನು ಆರಂಭಿಸಲಾಗಿದೆ.

2014ರಲ್ಲಿ ಪ್ರಧಾನಮಂತ್ರಿ ಜನ – ಧನ ಯೋಜನೆ ಪ್ರಾರಂಭವಾಯಿತು.

27. ಅತ್ಯಂತ ಬಡ ಕುಟುಂಬಗಳ ಮುಖ್ಯ ಲಕ್ಷಣಗಳನ್ನು ಪಟ್ಟಿ ಮಾಡಿರಿ.

ಅತ್ಯಂತ ಬಡವರು ವಾಸಿಸಲು ಗುಡಿಸಲುಗಳನ್ನು ಸಹ ಇರುವುದಿಲ್ಲ. ಅವರು ದಿನದ ಎರಡು ಹೊತ್ತಿನ ಊಟವನ್ನು ಪಡೆಯಲಾಗುತ್ತಿಲ್ಲ. ಹಸಿವು ಮತ್ತು ದಾರಿದ್ರ ಮೂಲ ಸಾಕ್ಷರತೆ ಮತ್ತು ಕೌಶಲ್ಯಗಳ ಕೊರತೆಗಳು ಕಡುಬಡ ಕುಟುಂಬಗಳ ಪ್ರಮುಖ ಲಕ್ಷಣಗಳಾಗಿವೆ.

28. ಬಡವರ ವರ್ಗೀಕರಣಗಳನ್ನು ಹೆಸರಿಸಿ.

ದೀರ್ಘಕಾಲದ (ಶಾಶ್ವತ) ಬಡವರು : ಇವರು ಕೆಲವೊಮ್ಮೆ ಅತ್ಯಲ್ಪ ಹಣ ಹೊಂದಿರುವವರಾಗಿರುತ್ತಾರೆ.

ಉದಾ : ದಿನಗೂಲಿ / ಸಾಂದರ್ಭಿಕ ಕೆಲಸಗಾರರು

ಕ್ಷಣಿಕ ಬಡವರು : ಇವರು ಕಡೆಯುವ ಬಡವರು. ನಿರಂತರವಾಗಿ ಬಡತನ ರೇಖೆಯ ಕೆಳಗೆ ಮತ್ತು ಮೇಲೆ ಚಲಿಸುತ್ತಿರುತ್ತಾರೆ.

ಉದಾ : ಸಣ್ಣ ರೈತರು ಮತ್ತು ಋತು ಸಂಬಂಧಿ ಕೆಲಸಗಾರರು.

ಎಂದಿಗೂ ಬಡವರಲ್ಲದವರು : ಇವರು ಬಡವರಲ್ಲದವರಾಗಿರುತ್ತಾರೆ. ಇವರು ಬಡತನ ರೇಖೆಯ ಮೇಲೆಯೇ ಇರುತ್ತಾರೆ.

29. ಬಡತನದ ವಿಧಗಳಾವುವು? ವಿವರಿಸಿ.

ಬಡತನದಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವುಗಳೆಂದರೆ :

ನಿರಪೇಕ್ಷ ಬಡತನ : ರಾಷ್ಟ್ರೀಯ ಮಟ್ಟಕ್ಕನುಗುಣವಾಗಿ ವ್ಯಕ್ತಿಯ ಅನುಭೋಗದ ವೆಚ್ಚವು ಕನಿಷ್ಟ ಯೋಗ್ಯತಾ ಜೀವನ ಮಟ್ಟವನ್ನು ನಿರ್ವಹಿಸಲು ಸಾಕಾಗದಿರುವ ಸ್ಥಿತಿಯಾಗಿದ್ದು ಅದನ್ನು ಧಾನ್ಯಗಳು, ಬೇಳೆಕಾಳುಗಳು, ಹಾಲು ಮುಂತಾದವುಗಳ ಬಳಕೆಯ ಭೌತಿಕ ಪ್ರಮಾಣದ ಆಧಾರದ ಮೇಲೆ ವ್ಯಕ್ತಪಡಿಸುವುದನ್ನು ನಿರಪೇಕ್ಷ ಬಡತನ ಎನ್ನುವರು.

ಸಾಪೇಕ್ಷ ಬಡತನ : ಇದು ಆದಾಯದ ಮಟ್ಟಗಳಿಗೆ ಸಂಬಂಧಿಸಿದ ಬಡತನವಾಗಿದೆ. ಉನ್ನತ ಜೀವನೋಪಾಯ ಮಟ್ಟವನ್ನು ಹೊಂದಿರುವ ಯಾವುದೇ ಜನರನ್ನು ಕಡಿಮೆ ಮಟ್ಟದ ಜೀವನೋಪಾಯವನ್ನು ಹೊಂದಿರುವ ಜನರಿಗೆ ಹೋಲಿಸಲಾಗುವುದು.

30. ಬಡತನ ರೇಖೆಯನ್ನು ಅಭಿವೃದ್ಧಿಪಡಿಸಲು ಆದಾಯ ಮತ್ತು ಆಸ್ತಿಗಳ ಜೊತೆಗೆ ಇತರ ಯಾವ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ?

ಮೂಲಶಿಕ್ಷಣ, ಆರೋಗ್ಯ ಸುರಕ್ಷೆ, ಕುಡಿಯುವ ನೀರು ಮತ್ತು ನೈರ್ಮಲ್ಯ

31. ಬೆಳವಣಿಗೆ ಆಧಾರಿತ ಮಾರ್ಗವು ಬಡತನವನ್ನು ತಗ್ಗಿಸುವಲ್ಲಿ ಏಕೆ ಯಶಸ್ವಿಯಾಗಿಲ್ಲ?

1950 ಮತ್ತು 1960ರ ದಶಕದ ಪ್ರಾರಂಭದಲ್ಲಿನ ಯೋಜನಾವಧಿಯ ಉದ್ದೇಶವು ಆರ್ಥಿಕ ಬೆಳವಣಿಗೆಯನ್ನು ಆಧರಿಸಿತ್ತು. ಅದು ಒಟ್ಟು ದೇಶೀಯ ಉತ್ಪನ್ನ ಮತ್ತು ತಲಾದಾಯವು ಹೆಚ್ಚಳದ ಮೂಲಕ ಬಡತನವನ್ನು ಕಡಿಮೆಗೊಳಿಸುವುದಾಗಿತ್ತು. ತೀವ್ರ ಕೈಗಾರಿಕೀಕರಣ ಮತ್ತು ಹಸಿರುಕ್ರಾಂತಿಯಿಂದ ಹಿಂದುಳಿದ ಪ್ರದೇಶಗಳು ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಹೆಚ್ಚು ಅನುಕೂಲಗಳಾಗಿವೆ ಎಂದು ಭಾವಿಸಲಾಗಿತ್ತು. ಆದರೆ ಜನಸಂಖ್ಯಾ ಬೆಳವಣಿಗೆ ದರದ ತೀವ್ರ ಹೆಚ್ಚಳ ಮತ್ತು ಭೂಸುಧಾರಣೆಗಳ ಅಸಮರ್ಪಕ ಅನುಷ್ಟಾನದಿಂದಾಗಿ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಇದು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸಿತು.

32. ಬಡಜನರನ್ನು ಗುರ್ತಿಸುವುದರ ಬಗ್ಗೆ ಟಿಪ್ಪಣಿ ಬರೆಯಿರಿ.

ರಾಷ್ಟ್ರೀಯ ಮಾದರಿ ಸಮೀಕ್ಷಾ ಮಾದರಿ (NSSO)ಯ ದತ್ತಾಂಶಗಳನ್ನು ಬಳಸಿಕೊಂಡು ಭಾರತದ ಬಡಜರನ್ನು ಗುರ್ತಿಸಲು ಅರ್ಥಶಾಸ್ತ್ರಜ್ಞರು ಪ್ರಯತ್ನಿಸಿದ್ದಾರೆ. ಬಡವರು ಕೆಲವೇ ಆಸ್ತಿಗಳನ್ನು ಹೊಂದಿದ್ದು ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಆದರೆ ಕಡಬಡವರು ಅಂತಹ ಗುಡಿಸಲುಗಳನ್ನು ಹೊಂದಿರುವುದಿಲ್ಲ. 2 ಹೊತ್ತಿನ ಊಟಕ್ಕೂ ಪರದಾಡುತ್ತಾರೆ.

ಅಪೌಷ್ಟಿಕತೆ, ಅನಾರೋಗ್ಯ ಮತ್ತು ಆಶಕ್ತತೆಗಳು ಬಡವರನ್ನು ದೈಹಿಕವಾಗಿ ದುರ್ಬರನ್ನಾಗಿಸಿರುತ್ತದೆ. ಹೆಚ್ಚಿನ ಬಡಕುಟುಂಬಗಳಿಗೆ ವಿದ್ಯುಚ್ಛಕ್ತಿಯ ಸೌಲಭ್ಯಗಳು, ಲಾಭದಾಯ, ಉದ್ಯೋಗ ಪಡೆಯುವಲ್ಲಿ, ಶಿಕ್ಷಣ ಪಡೆಯುವಲ್ಲಿ ತುಂಬಾ ಹಿಂದುಳಿಯುತ್ತಾರೆ.

ನಗರ ಪ್ರದೇಶಗಳಿಗೆ ಗ್ರಾಮೀಣ ಪ್ರದೇಶದ ಬಡಜನರಿಂದ ಹೊರ ಚೆಲ್ಲಲ್ಪಟ್ಟವರೇ ನಗರ ಪ್ರದೇಶ ಬಡವರು. ಇವರಲ್ಲಿ ಅನೇಕರು ಪರ್ಯಾಯ ಉದ್ಯೋಗಗಳನ್ನು ಅರಸಿ ನಗರಕ್ಕೆ ಬಂದವರಾಗಿರುತ್ತಾರೆ.

33. ಭಾರತದಲ್ಲಿ ಬಡತನದ ಪ್ರವೃತ್ತಿಯನ್ನು ವಿವರಿಸಿ.

ಬಡತನ ರೇಖೆಗಿಂತ ಕೆಳಗಿರುವ ಜನರ ಪ್ರಮಾಣದ ಆಧಾರದ ಮೇಲೆ ಬಡವರ ಸಂಖ್ಯೆಯನ್ನು ಅಂದಾಜಿಸುವುದನ್ನು “ತಲೆ ಎಣಿಕೆ ಅನುಪಾತ” ಎನ್ನುತ್ತೇವೆ.

ಬಡತನದ ಅಧಿಕೃತ ಅಂಕಿ ಅಂಶಗಳನ್ನು “ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ” (NSSO) ಯು ಸಂಗ್ರಹಿಸುವ ಅನುಭೋಗ ವೆಚ್ಚದ ಅಂಕಿ ಅಂಶಗಳ ಆಧಾರದ ಮೇಲೆ ಅಂದಾಜಿಸಲಾಗುತ್ತದೆ. 1973 – 74 ರಲ್ಲಿ 320 ದಶಲಕ್ಷಗಳಿಗಿಂತ ಅಧಿಕ ಜನರು ಬಡತನದ ರೇಖೆಗಿಂತ ಕೆಳಗಿದ್ದರು 2011 12ರಲ್ಲಿ ಈ ಸಂಖ್ಯೆ ಸುಮಾರು 270 ದಶಲಕ್ಷಗಳಿಗೆ ಇಳಿದಿದೆ. ಅಂದರೆ ಶೇಕಡ 55 ರಿಂದ 22ಕ್ಕೆ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳು ಬಡತನದ ಮಟ್ಟವನ್ನು ಇತರೆ ರಾಜ್ಯಗಳಿಗಿಂತ ಪರಿಣಮಕಾರಿಯಾಗಿ ಕಡಿಮೆ ಮಾಡಿವೆ.

34, ಬಡತನದ ಕಾರಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

ಬಡತನದ ಕಾರಣಗಳು ದೇಶವೊಂದರ ಸಾಂಸ್ಥಿಕ ಮತ್ತು ಸಾಮಾಜಿಕ ಅಂಶಗಳಿಗೆ ಸಂಬಂಧಿಸಿದ್ದವುಗಳಾಗಿರುತ್ತವೆ. ಬಡತನಕ್ಕೆ ಮುಖ್ಯ ಕಾರಣಗಳೆಂದರೆ

ಬ್ರಿಟಿಷರ ಆಡಳಿತದ ಅವಧಿಯಲ್ಲಿನ ಶೋಷಣೆ : ಬ್ರಿಟಿಷರ ಆಡಳಿತದಲ್ಲಿ ಅವರು ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿದರು. ಅನೇಕ ಆಧುನಿಕ ಕೈಗಾರಿಕೆಗಳನ್ನು ಸ್ಥಾಪಿಸಿ ನಮ್ಮ ಪರಂಪರೆಯ ಸಣ್ಣ ಪ್ರಮಾಣದ ಕೈಗಾರಿಕೆಗಳ ಹಾಗೂ ಗೃಹ ಕೈಗಾರಿಕೆಗಳನ್ನು ನಾಶಗೊಳಿಸಿದವರು. ನಮ್ಮ ವಿಫುಲ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದರು. ಆದ್ದರಿಂದ ಇಂದಿಗೂ ಸಹ ಭಾರತವು ಅವರು ಮಾಡಿದ ನಷ್ಟದಿಂದ ಹೊರಬಂದು ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಆರ್ಥಿಕ ಅಸಮಾನತೆಗಳು : ಕೆಲವೇ ಜನರ ಕೈಯಲ್ಲಿ ಆದಾಯ ಮತ್ತು ಸಂಪತ್ತಿನ ಕೇಂದ್ರೀಕರಣವಾಗಿರುವ ಕಾರಣದಿಂದಾಗಿ ಬಹುಜನರು ಬಡತನದ ರೇಖೆಯ ಕೆಳಗೆ ಇರಬೇಕಾದ ಒತ್ತಡವಿದೆ.

ಕಡಿಮೆ ಸಂಪನ್ಮೂಲದ ಮೂಲ : ರೈತರ ಭೂಮಿಗಳು ವಿಭಜನೆ ಕಾರಣದಿಂದ ಭೂಮಿಯ ಒಡೆತನ ಕಡಿಮೆಯಾಗಿ ಅದರಿಂದ ಬರುವ ಆದಾಯ ಅವನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ನಿರುದ್ಯೋಗ : ಭಾರತದಲ್ಲಿ ನಿರುದ್ಯೋಗ ಮತ್ತು ಅರೆ ಉದ್ಯೋಗವು ಅಧಿಕವಾಗಿರುವುದರಿಂದ ತಮ್ಮ ಕುಟುಂಬದ ಸದಸ್ಯರಿಗೆ ಬೇಕಾದ ಮೂಲ ಕೊಳ್ಳಲು ಸಾಕಾಗುವಷ್ಟು ಆದಾಯವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ. ಅಗತ್ಯಗಳನ್ನು

ತೀವ್ರ ಜನಸಂಖ್ಯಾ ಬೆಳವಣಿಗೆ : ಭಾರತದ ಬಡತನಕ್ಕೆ ಪ್ರಧಾನ ಕಾರಣವೆಂದರೆ ತೀವ್ರ ಜನಸಂಖ್ಯಾ ಬೆಳವಣಿಗೆ ಇದು ಕೆಳಮಟ್ಟದ ತಲಾದಾಯ ಮತ್ತು ಅನುಬೋಗಕ್ಕೆ ಕಾರಣವಾಗಿದೆ.

ಬೆಲೆ ಏರಿಕೆಯ ಒತ್ತಡ : ಹಣದುಬ್ಬರದಿಂದಾಗಿ ಆಹಾರ ಧಾನ್ಯಗಳು ಮತ್ತು

ಅಗತ್ಯ ಸರಕುಗಳ ಏರುತ್ತಿರುವ ಬೆಲೆಗಳು ಬಡತನದ ಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿವೆ.

ಬಡತನದ ವಿಷ ವೃತ್ತ : ಇಲ್ಲಿ ಬಡತನವು ಕಾರಣ ಮತ್ತು ಪರಿಣಾಮ ಎರಡೂ ಆಗಿದೆ.

ಸಾಮಾಜಿಕ ಅಂಶಗಳು : ಅನಕ್ಷರತೆ, ಅಜ್ಞಾನ, ಹಿಂದುಳಿದಿರುವಿಕೆ, ಸಾಮಾಜಿಕ ರಚನೆಯ ಅಸಮರ್ಪಕತೆ, ಮುಂತಾದವುಗಳು ಜನರ ಜೀವದ ಗುಣಮಟ್ಟದ ಮೇಲೆ ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರಿವೆ.

35, ಬಡತನವನ್ನು ಕಡಿಮೆ ಮಾಡುವ ನೀತಿಗಳು ಮತ್ತು ಕಾರ್ಯಕ್ರಮವನ್ನು ವಿವರಿಸಿ.

ಬಡತನವನ್ನು ಕಡಿಮೆಗೊಳಿಸುವ ಸರ್ಕಾರದ ನೀತಿಯು ಮೂರು ಆಯಾಮಗಳನ್ನು ಹೊಂದಿದೆ.

1. ಬೆಳವಣಿಗೆ ಆಧಾರಿತ ಮಾರ್ಗ : ಇದು ಆರ್ಥಿಕ ಬೆಳವಣಿಗೆಯ ದೇಶೀಯ ಉತ್ಪನ್ನ ಮತ್ತು ತಲಾದಾಯಗಳಲ್ಲಿ ಹೆಚ್ಚಳವಾಗಿಸುವುದು. ಒಟ್ಟು ತೀವ್ರ ಕೈಗಾರಿಕೀಕರಣ ಮತ್ತು ಹಸಿರು ಕ್ರಾಂತಿಯಿಂದ ಹಿಂದುಳಿದ ವರ್ಗಗಳಿಗೆ ಅನುಕೂಲವಾಗಿದೆ. ಆದರೆ ಜನಸಂಖ್ಯಾ ಬೆಳವಣಿಗೆ ದರದ ತೀವ್ರ ಹೆಚ್ಚಳ ಮತ್ತು ಭೂ ಸುಧಾರಣೆಗಳ ಅಸಮರ್ಪಕ ಅನುಷ್ಠಾನಗಳ ಈ ಪ್ರಯತ್ನ ಯಶಸ್ವಿಯಾಗಲಿಲ್ಲ.

2. ಆದಾಯ ಮತ್ತು ಉದ್ಯೋಗ ಸೃಷ್ಟಿಯ ಮಾರ್ಗ: ಈ ಮಾರ್ಗವನ್ನು 1961 66ರಲ್ಲಿ ಪ್ರಾರಂಭಿಸಲಾಯಿತು. ಬಡವರ ಆದಾಯ ಮತ್ತು ಉದ್ಯೋಗಗಳನ್ನು ಹೆಚ್ಚಿಸಬಹುದಾಗಿದೆ. ಕೆಲವು ಕಾರ್ಯಕ್ರಮಗಳೆಂದರೆ

ಎ. ಸ್ವಯಂ ಉದ್ಯೋಗ ಕಾರ್ಯಕ್ರಮ : ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾ‌ ಯೋಜನೆ (SGRY) ಸ್ವರ್ಣಜಯಂತಿ ಷಹರಿ ರೋಜಗಾರ ಯೋಜನೆ (SJSRY) ಪ್ರಧಾನಮಂತ್ರಿ ರೋಜಗಾರ್ ಯೋಜನೆ(PMRY)ಗಳ ಮೂಲಕ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕುಗಳ ಮೂಲಕ ಸಾಲದ ರೂಪದಲ್ಲಿ ಹಣಕಾಸು ನೆರವು ನೀಡಲಾಗುತ್ತಿದೆ.

ಬಿ. ಕೂಲಿ ಉದ್ಯೋಗ ಕಾರ್ಯಕ್ರಮಗಳು : ರಾಷ್ಟ್ರೀಯ ಕೂಲಿಗಾಗಿ ಕಾಳು. ಕಾಠ್ಯಕ್ರಮ (NFWP) ಸಂಪೂರ್ಣ ಗ್ರಾಮೀಣ ರೋಜಗಾರ್‌ ಯೋಜನೆ (SGRY) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ (MGNREGP)

3. ಜನರಿಗೆ ಕನಿಷ್ಟ ಮೂಲಸೌಕರ್ಯಗಳನ್ನು ಒದಗಿಸುವುದು : ಜನರಿಗೆ ಕನಿಷ್ಟ ಮೂಲಸೌಕರ್ಯಗಳನ್ನು ಒದಗಿಸಿ, ಬಡತನವನ್ನು ನಿವಾರಿಸುವುದಾಗಿದೆ. ಅಂತಹ ಕಾರ್ಯಕ್ರಮಗಳೆಂದರೆ

ಎ. ಬಡವರಿಗೆ ಆಹಾರ & ಪೌಷ್ಠಿಕತೆಯ ಮಟ್ಟವನ್ನು ಸುಧಾರಿಸುವ ಉದ್ದೇಶ : ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) nous ones (Mid-day Meal Scheme)

ಬಿ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವುದು : ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (PMGSY) ಪ್ರಧಾನಮಂತ್ರಿ ಗ್ರಾಮೋದಯ ಯೋಜನೆ (PMGY)

ಸಿ. ಬಡವರಿಗೆ ವಸತಿ ಸೌಲಭ್ಯ : ಇಂದಿರಾ ಆವಾಸ್‌ ಯೋಜನೆ (JAY) ವಾಲ್ಮೀಕಿ – ಅಂಬೇಡ್ಕರ್್ರ ಆವಾಸ್‌ ಯೋಜನೆ (VAMBAY)

ಡಿ. ಸಾಮಾಜಿಕ ಭದ್ರತಾ ಕಾಠ್ಯಕ್ರಮಗಳು : ರಾಷ್ಟ್ರೀಯ ಸಾಮಾಜಿಕ ನೆರವು ಕಾಠ್ಯಕ್ರಮ, ಆಮ್ ಆದ್ವಿ ಭೀಮಾ ಯೋಜನೆ ಯಶಸ್ವಿನಿ ಯೋಜನೆ & ಭಾಗ್ಯಲಕ್ಷ್ಮೀ ಯೋಜನೆ, ಸರ್ಕಾರದ ಬಡತನ ತಗ್ಗಿಸುವ ಕಾರ್ಯಕ್ರಮಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.

ಸ್ವಾತಂತ್ರ್ಯ ಪಡೆದಂದಿನಿಂದ ಬಡತನವನ್ನು ಕಡಿಮೆ ಮಾಡುವ ಪ್ರಯತ್ನಗಳು ಕೇವಲ ಅಲ್ಪ ಪ್ರಮಾಣದಲ್ಲಿ ಯಶಸ್ವಿಯಾಗಿವೆ. ಬಡತನವನ್ನು ಕಡಿಮೆ ಮಾಡುವ ವಿವಿಧ ಕಾರಕ್ರಮಗಳನ್ನು ಹಮ್ಮಿಕೊಂಡಿದ್ದಾಗ್ಯೂ ಹಸಿವು, ಅಪೌಷ್ಠಿಕತೆ, ಅನಕ್ಷರತೆ ಮತ್ತು ಮೂಲ ಅವಶ್ಯಕತೆಗಳ ಕೊರತೆಗಳು ದೇಶದ ಅನೇಕ ಭಾಗಗಳಲ್ಲಿ ಮುಂದುವರೆದಿದೆ.

ಈ ಕಾರ್ಯಕ್ರಮಗಳು ಬಡವರಿಗೆ ಆಸ್ತಿಯ ಒಡೆತನ, ಉತ್ಪಾದನಾ ಪ್ರಕ್ರಿಯೆ & ಮೂಲ ಅವಶ್ಯಕತೆಗಳ ಹೆಚ್ಚಳದಲ್ಲಿನ ಬದಲಾವಣೆಗಳನ್ನು ತರುವಲ್ಲಿ ಅಷ್ಟಾಗಿ ಯಶಸ್ವಿಯಾಗಿಲ್ಲ.

ಕೆಲವು ಅರ್ಥಶಾಸ್ತ್ರಜ್ಞರು ಬಡತನ ಕಡಿಮೆ ಮಾಡುವ ಕಾರ್ಯಕ್ರಮಗಣ ಯಶಸ್ವಿ ಅನುಷ್ಠಾನಕ್ಕೆ ತಡೆಯುಂಟು ಮಾಡಿರುವ ಕಾರಣಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ

  • ಭೂಮಿ ಮತ್ತು ಇತರೆ ಆಸ್ತಿಗಳ ಅಸಮಾನ ಹಂಚಿಕೆ.
  • ಬಡತನ ಕಡಿಮೆಗೊಳಿಸುವ ಕಾರ್ಯಕ್ರಮಗಳ ಪ್ರಯೋಜನಗಳನ್ನು ಬಡವರಲ್ಲದವರು ಪಡೆಯುತ್ತಿರುವುದು.
  • ಈ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿರುವ ಹಣದ ಸಂಪನ್ಮೂಲ ಸಾಕಷ್ಟಿಲ್ಲದಿರುವುದು.
  • ಬಡತನ ನಿವಾರಣಾ ಕಾರ್ಯಕ್ರಮಗಳ ಅನುಷ್ಟಾನದ ಜವಾಬ್ದಾರಿ ಹೊಂದಿರುವ ಸರ್ಕಾರದ ಮತ್ತು ಬ್ಯಾಂಕ್‌ ನೌಕರರು ಪ್ರೇರಣಾ ರಹಿತರು, ಅಸಮರ್ಪಕ ತರಬೇತಿ ಹೊಂದಿರುವವರು ಮತ್ತು ಭ್ರಷ್ಟಾಚಾರ ಪೀಡಿತರಾಗಿರುವುದು.
  • ಈ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಸ್ಥಳೀಯ ಮಟ್ಟದ ಸಂಸ್ಥೆಗಳು ಭಾಗವಹಿಸದಿರುವುದು.
  • ಬಡವರು ಸಕ್ರಿಯವಾಗಿ ಭಾಗವಹಿಸದಿರುವುದು.

FAQ

1. ಬಡತನ ಎಂದರೇನು?

ಒಂದು ದೇಶದಲ್ಲಿ ಜನತೆಯ ಒಂದು ವರ್ಗವು ಕನಿಷ್ಟ ಮೂಲ ಅಗತ್ಯಗಳನ್ನು ಪಡೆಯುವ ಸಾಮರ್ಥ್ಯವಿಲ್ಲದ ಸ್ಥಿತಿಯೇ ಬಡತನ.

2. ಒಟ್ಟು ದೇಶೀಯ ಉತ್ಪನ್ನ ಎಂದರೇನು?

ಒಂದು ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಎಲ್ಲಾ ಅಂತಿಮ ಸರಕು ಮತ್ತು ಸೇವೆಗಳ ಹಣರೂಪದ ಮೌಲ್ಯವಾಗಿದೆ.

3. MGNREGA ಅನ್ನು ವಿಸ್ತರಿಸಿ.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ

Leave a Reply

Your email address will not be published. Required fields are marked *