ಪ್ರಥಮ ಪಿ.ಯು.ಸಿ ಅಧ್ಯಾಯ – 3 ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಒಂದು ಮೌಲ್ಯಮಾಪನ ಅರ್ಥಶಾಸ್ತ್ರ ನೋಟ್ಸ್

ಪ್ರಥಮ ಪಿ.ಯು.ಸಿ ಅಧ್ಯಾಯ – 3 ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಒಂದು ಮೌಲ್ಯಮಾಪನ ಅರ್ಥಶಾಸ್ತ್ರ ನೋಟ್ಸ್,1st Puc Economics Chapter 3 Notes in Kannada Pdf Download Karnataka State Syllabus Kseeb solutions For Class 11 Economics Chapter 3 Notes First Puc Economics 3rd Chapter notes Question Answer Mcq Pdf in Kannada 1st PUC Economics Chapter 3 Liberalisation, Privatisation and Globalisation – An Appraisal in Kannada

 

1st Puc Economics Chapter 3 Notes

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಭಾರತದಲ್ಲಿ ಸುಧಾರಣೆಗಳು ಏಕೆ ಜಾರಿಯಾದವು?

ಸ್ವಾತಂತ್ರ್ಯಾ ನಂತರ, ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಜಾರಿಗೆ ತಂದಿತು. ಸರ್ಕಾರವು ಮಿಶ್ರ ಅರ್ಥ ವ್ಯವಸ್ಥೆಯ ಚೌಕಟ್ಟಿನ ಅಡಿಯಲ್ಲಿ ನೀತಿಗಳು ಅರ್ಥವ್ಯವಸ್ಥೆಯನ್ನು ನಿಯಂತ್ರಿಸುವುದು ಮತ್ತು ನಿರ್ಬಂಧಿಸುವುದಕ್ಕಾಗಿ ವಿವಿಧ ರೀತಿಯ ಕಾನೂನುಗಳು ಮತ್ತು ನಿಯಮಗಳುನ್ನು ಜಾರಿಗೊಳಿಸಲು ದಾರಿ ಮಾಡಿಕೊಟ್ಟವು. ವರ್ಷಗಳು ಕಳೆದಂತೆ ಈ ಕಾನೂನುಗಳು ಮತ್ತು ನಿಯಮಗಳು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಬಿಕ್ಕಟ್ಟು ಅಡೆತಡೆಗಳಾಗಿ ಮಾರ್ಪಟ್ಟವು. 1980ರ ದಶಕದ ಕೊನೆಯಲ್ಲಿ ಸರ್ಕಾರದ ವೆಚ್ಚವು ಅದರ ಆದಾಯವನ್ನು ಮೀರಿ ಎಷ್ಟು ಬೆಳೆಯಿತೆಂದರೆ ಸಾಲಗಳ ಮೂಲಕ ವೆಚ್ಚವನ್ನು ಭರಿಸುವುದು ಸಾಧ್ಯವಾಗಲಿಲ್ಲ. ಅಗತ್ಯ ಸರಕುಗಳ ಬೆಲೆಗಳಲ್ಲಿ ತೀವ್ರ ಹೆಚ್ಚಳ, ಆಮದುಗಳ ಅತಿಯಾದ ಹೆಚ್ಚಳ, ವಿದೇಶಿ ವಿನಿಮಯ ಸಂಗ್ರಹದಲ್ಲಿ ತೀವ್ರ, ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯಲ್ಲಿನ ನಷ್ಟ ಮುಂತಾದವು ಇತರೆ ಪ್ರಮುಖ ಸಮಸೆಗಳು ಭಾರತದಲ್ಲಿ ಸುಧಾರಣೆ ಜಾರಿಯಾಗಲು ಕಾರಣವಾದವು.

2. WTOದ ಸದಸ್ಯನಾಗುವ ಅಗತ್ಯವೇಕಿದೆ?

1995ರಲ್ಲಿ WTO ವ್ಯಾಪಾರ ಮತ್ತು ಸುಂಕಗಳ ಮೇಲಿನ ಸಾಮಾನ್ಯ ಒಪ್ಪಂದ ದ ಉತ್ತರಾಧಿಕಾರಿಯಾಗಿ ಸ್ಥಾಪಿತವಾಯಿತು. ಎಲ್ಲಾ ಸದಸ್ಯ ದೇಶಗಳಿಗೆ ಸುಂಕಮತ್ತು ಸುಂಕರಹಿತ ಅಡೆತಡೆಗಳನ್ನು ನಿವಾರಿಸಲು ಮತ್ತು ಉತ್ತಮ ಅವಕಾಶಗಳನ್ನು ಕಲಿಸುತ್ತದೆ.

3. ಭಾರತದಲ್ಲಿ RBI ತನ್ನ ಪಾತ್ರವನ್ನು ಹಣಕಾಸು ವಲಯದ ನಿಯಂತ್ರಕನಿಂದ ಸಹಾಯಕನಾಗಿ ಏಕೆ ಬದಲಿಸಬೇಕಾಯಿತು?

ಹಣಕಾಸು ವಲಯವು ವಾಣಿಜ್ಯ ಬ್ಯಾಂಕುಗಳು, ಹೂಡಿಕೆ ಬ್ಯಾಂಕುಗಳು ಷೇರು ಮಾರುಕಟ್ಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳನ್ನು ಒಳಗೊಂಡಿದೆ. ಈ ವಲಯವನ್ನು RBI ನ ನಿಯಮಗಳು ನಿಯಂತ್ರಿಸಲ್ಪಡುತ್ತಿದೆ. ಹಣಕಾಸು ವಲಯದ ಗುರಿಯೆಂದರೆ RBIನ ಪಾತ್ರವನ್ನು ಕಡಿತಗೊಳಿಸಿ, ಹಣಕಾಸು ವಲಯವು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವುದು, ಬ್ಯಾಂಕುಗಳು ಬಡ್ಡಿ ದರಗಳನ್ನು ನಿಗದಿಪಡಿಸಿಕೊಳ್ಳುವುದು ವಿದೇಶಿ ಬ್ಯಾಂಕುಗಳು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

4. RBI ವಾಣಿಜ್ಯ ಬ್ಯಾಂಕುಗಳನ್ನು ಹೇಗೆ ನಿಯಂತ್ರಿಸುತ್ತದೆ?

ಭಾರತದಲ್ಲಿನ ಎಲ್ಲಾ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳನ್ನು RBI ತನ್ನ ನಿಯಮ ಮತ್ತು ನಿರ್ಬಂಧಗಳ ಮೂಲಕ ನಿಯಂತ್ರಿಸುತ್ತದೆ. ಬ್ಯಾಂಕುಗಳು ತಮ್ಮ ಬಳಿ ಇಟ್ಟುಕೊಳ್ಳಬೇಕಾದ ಹಣದ ಮೊತ್ತವನ್ನು ನಿಗದಿಪಡಿಸುವ ಬಡ್ಡಿದರಗಳು, ವಿವಿಧ ವಲಯಗಳಿಗೆ ನೀಡುವ ಸಾಲದ ಸ್ವರೂಪ ಮುಂತಾದವುಗಳನ್ನು RBI ನಿರ್ಧರಿಸುತ್ತದೆ.

5. ರೂಪಾಯಿಯ ಅಪಮೌಲೀಕರಣವನ್ನು ನೀವು ಹೇಗೆ ಅರ್ಥೈಸುತ್ತೀರಿ?

ವಿದೇಶಿ ಹಣಗಳ ಎದುರು ರೂಪಾಯಿಯ ಮೌಲ್ಯವನ್ನು ಉದ್ದೇಶ ಪೂರ್ವಕವಾಗಿ ಕಡಿತಗೊಳಿಸುವುದಕ್ಕೆ ರೂಪಾಯಿಯ ಅಪಮೌಲ್ಯ ಎನ್ನುತ್ತಾರೆ.

1st Puc Economics Chapter 3

6. ಈ ಕೆಳಗಿನವುಗಳ ವ್ಯತ್ಯಾಸಗಳನ್ನು ಬರೆಯಿರಿ.

ಎ. ತಂತ್ರ ಮತ್ತು ಅಲ್ಪಸಂಖ್ಯಾತ ಮಾರಾಟ

ತಂತ್ರ ಮಾರಾಟ : ಸಾರ್ವಜನಿಕ ವಲಯದ ಉದ್ದಿಮೆ ಸಂಸ್ಥೆಗಳ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವುದಕ್ಕೆ ತಂತ್ರ ಮಾರಾಟ ಎನ್ನುವರು.

ಅಲ್ಪಸಂಖ್ಯಾತ ಮಾರಾಟ : ಸಾರ್ವಜನಿಕ ವಲಯದ ಉದ್ದಿಮೆ ಸಂಸ್ಥೆಗಳ ಸಾಮಾನ್ಯ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವುದಕ್ಕೆ ಅಲ್ಪಸಂಖ್ಯಾತ ಮಾರಾಟ ಎನ್ನುತ್ತಾರೆ. ಈ ರೀತಿಯ ಮಾರಾಟದಲ್ಲಿ ಕೆಲವೊಂದು ನಿಯಂತ್ರಣವನ್ನು ಸರ್ಕಾರ ತನ್ನಲ್ಲಿಯೇ ಇಟ್ಟುಕೊಂಡಿರುತ್ತದೆ.

ಬಿ. ಸುಂಕ ಮತ್ತು ಸುಂಕರಹಿತ ಅಡೆತಡೆಗಳು

ಸುಂಕಗಳು : ಆಮದುಗಳ ಮೇಲೆ ವಿಧಿಸುವ ತೆರಿಗೆಯಾಗಿದ್ದು ಭೌತಿಕ ಸರಕುಗಳ ಮೇಲೆ ಅಥವಾ ಅದರ ಮೌಲ್ಯದ ಮೇಲೆ ವಿಧಿಸಲಾಗುತ್ತದೆ. ಒಂದು ಸರ್ಕಾರವ ತೆರಿಗೆ ರೂಪದಲ್ಲಿ ಆಮದಿನ ಮೇಲೆ ವಿಧಿಸುವ ಎಲ್ಲಾ ನಿರ್ಬಂಧಗಳು,

ಸುಂಕರಹಿತ ಅಡೆತಡೆಗಳೆಂದರೆ : ಆಮದಾಗುವ ಸರಕುಗಳ ಮೇಲೆ ತೆರಿಗೆ ವಿಧಿಸದೇ ಇರುವ ಪ್ರಕ್ರಿಯೆಯಾಗಿದೆ.

ಸಿ. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವ್ಯಾಪಾರ ಎರಡು ದೇಶಗಳ ನಡುವಣ ವ್ಯಾಪಾರವನ್ನು ದ್ವಿಪಕ್ಷೀಯ ವ್ಯಾಪಾರವನ್ನುವರು. ಉದಾ : ಭಾರತ ಮತ್ತು ಶ್ರೀಲಂಕಾ ಎರಡಕ್ಕಿಂತ ಹೆಚ್ಚು ದೇಶಗಳ ನಡುವೆ ನಡೆಯುವ ವ್ಯಾಪಾರವನ್ನೇ ಬಹುಪಕ್ಷೀಯ ವ್ಯಾಪಾರ ಎನ್ನುತ್ತಾರೆ.

ಉದಾ : ದೋಹಾ ಜೊತೆಗಿನ ಒಪ್ಪಂದ 149 ದೇಶಗಳು,

7. ಸುಂಕಗಳನ್ನು ಏಕೆ ವಿಧಿಸಲಾಯಿತು?

ಸರ್ಕಾರವು ವಿದೇಶಿ ವ್ಯಾಪಾರವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ವ್ಯಾಪಾರ ಪ್ರತಿಬಂಧಕಗಳನ್ನು ಬಳಸಬಹುದು. ಸ್ವಾತಂತ್ರಾನಂತರ ಭಾರತ ಸರ್ಕಾರವು ವಿದೇಶಿ ವ್ಯಾಪಾರ ಮತ್ತು ವಿದೇಶಿ ಹೂಡಿಕೆಗಳ ಮೇಲೆ ಪ್ರತಿಬಂಧಕಗಳನ್ನು ವಿಧಿಸಿತ್ತು. ಇದು ನಮ್ಮ ಉತ್ಪಾದಕರನ್ನು ವಿದೇಶಿ ಸ್ಪರ್ಧೆಯಿಂದ ರಕ್ಷಿಸುವುದಕ್ಕೆ ಅವಶ್ಯಕ ಎಂದು ನಿರ್ಧರಿಸಲಾಗಿತ್ತು.

8. ಪರಿಮಾಣಾತ್ಮಕ ನಿರ್ಬಂಧಗಳ ಅರ್ಥವೇನು?

ಇತರೆ ದೇಶಗಳಿಂದ ಕೊಂಡುಕೊಳ್ಳುವ ಸರಕುಗಳ ಪ್ರಮಾಣದ ಮೇಲೆ ವಿಧಿಸುವ ನಿರ್ಬಂಧವನ್ನು ಪರಿಮಾಣಾತ್ಮಕ ನಿರ್ಬಂಧ ಎನ್ನುವರು.

ಉದಾ : ಭಾರತದಲ್ಲಿ ಟೆಕ್ಸ್‌ಟೈಲ್ಸ್ ಮತ್ತು ಬಟ್ಟೆ ರತ್ತಿನ ಮೇಲಿನ ಎಲ್ಲಾ ಕೋಟಾ ನಿರ್ಬಂಧಗಳನ್ನು ತೆಗೆಯಲಾಗಿದ್ದರೂ, USAದ ಮಾತ್ರ ಭಾರತ ಮತ್ತು ಟೆಕ್ಸ್‌ಟೈಲ್‌ನ ಮೇಲಿನ ಕೋಟಾ ನಿರ್ಬಂಧವನ್ನು ತೆಗೆದು ಹಾಕಿಲ್ಲ.

9. ಲಾಭ ಮಾಡುತ್ತಿರುವ ಸಾರ್ವಜನಿಕ ಅಧೀನ ವಲಯಗಳನ್ನು ಖಾಸಗೀಕರಣ ಗೊಳಿಸಬೇಕು ಈ ಅಭಿಪ್ರಾಯವನ್ನು ನೀವು ಒಪ್ಪುವಿರಾ? ಏಕೆ?

ಹೊಸ ಪಿ೯ಕ ನೀತಿಯು ಸಾರ್ವಜನಿಕ ಉದ್ದಿಮೆಗಳಿಗೆ ಹೊಸ ಆಯಾಮವನ್ನು ಮೀಸಲು ನೀಡಿತು. ನೀತಿಯ ಕೆಳಗೆ, ಸಾರ್ವಜನಿಕ ವಲಯಕ್ಕೆ ಕೆಲವೇ ಕೈಗಾರಿಕೆಗಳನ್ನು

10, ಹೊರಗುತ್ತಿಗೆಯು ಭಾರತಕ್ಕೆ ಒಳ್ಳೆಯದೆಂದು ನೀವು ಭಾವಿಸುವಿರಾ? ಅಭಿವೃದ್ಧಿ ಹೊಂದಿದ ದೇಶಗಳು ಇದನ್ನು ಏಕೆ ವಿರೋಧಿಸುತ್ತಿವೆ?

ಹೊರಗುತ್ತಿಗೆಯು ಒಂದು ಆರ್ಥಿಕ ಚಟುವಟಿಕೆಯಾಗಿ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ. ಅನೇಕ ಸೇವೆಗಳಾದ ಧ್ವನಿ ಆಧಾರಿತ ವ್ಯವಹಾರ ಪ್ರಕ್ರಿಯೆಗಳು, ದಾಖಲೆ ರಕ್ಷಣೆ, ಲೆಕ್ಕ, ಬ್ಯಾಂಕಿಂಗ್ ಸೇವೆಗಳು, ಸಂಗೀತ ರೆಕಾರ್ಡ್‌ ಮಾಡುವುದು, ಸಿನಿಮಾ ಸಂಕಲನ, ಪುಸ್ತಕ ನಕಲು, ವೈದ್ಯಕೀಯ ಸಲಹೆ ಮತ್ತು ಬೋಧನೆಯನ್ನು ಸಹ ಮುಂದುವರೆದ ದೇಶಗಳಲ್ಲಿನ ಕಂಪನಿಗಳು ಭಾರತಕ್ಕೆ ಹೊರಗುತ್ತಿಗೆ ನೀಡುತ್ತಿವೆ. ಅಂತರ್ಜಾಲ ಆಧುನಿಕ ದೂರ ಸಂಪರ್ಕ ವ್ಯವಸ್ಥೆಯ ಸಹಾಯದಿಂದ ಪಠ್ಯ ಧ್ವನಿ, ದೃಶ್ಯ ದತ್ತಾಂಶಗಳನ್ನು ಒಳಗೊಂಡಂತೆ ಈ ಸೇವೆಗಳನ್ನು ಡಿಜಿಟೀಕರಣ ಮಾಡಿ ಖಂಡಗಳ ಮತ್ತು ದೇಶ ಎಲ್ಲೆಯಾಚೆ ಪ್ರಸಾರಮಾಡುತ್ತದೆ.

ಅಭಿವೃದ್ಧಿ ಹೊಂದಿದ ದೇಶಗಳು ಇದನ್ನು ವಿರೋಧಿಸುತ್ತವೆ ಏಕೆಂದರೆ ಕೂಲಿ ಅಧಿಕವಾಗಿರುವ ದೇಶಗಳಲ್ಲಿ ಹೊರಗುತ್ತಿಗೆಯಿಂದ ನಿರುದ್ಯೋಗವು ಏರಿಕೆಯಾಗುತ್ತಿದೆ. ಭಾರತ ಇದರಿಂದ ಲಾಭ ಮಾಡುತ್ತಿದೆ. ಧ್ವನಿ ಆಧಾರಿತ ವ್ಯವಹಾರ ಪ್ರಕ್ರಿಯೆಯಿಂದ ಹಲವಾರು ಯುವ ಜನತೆಗೆ ಉದ್ಯೋಗ ದೊರೆಯುತ್ತಿದೆ.

11. ಭಾರತ ಒಂದು ಹೊರಗುತ್ತಿಗೆಯ ನಿರ್ಧಿಷ್ಟ ಆಪ್ತ ಸ್ಥಳವಾಗಿ ಕೆಲವು ಅನುಕೂಲ ಗಳನ್ನು ಹೊಂದಿದೆ. ಅಂತಹ ಅನುಕೂಲಗಳಾವುವು?

ಭಾರತ ಒಂದು ಹೊರಗುತ್ತಿಗೆಯ ನಿರ್ದಿಷ್ಟ ಆಪ್ತ ಸ್ಥಳವಾಗಿ ಕೆಲವು ಅನುಕೂಲಗಳನ್ನು ಹೊಂದಿದೆ. ಅಂತಹ ಅನುಕೂಲಗಳೆಂದರೆ : ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸರ್ಕಾರಿ ಕಂಪನಿಗಳೂ ಸಕಾರಣವಾದ ಕೌಶಲ್ಯತೆ ಮತ್ತು ಕಡಿಮೆ ವೆಚ್ಚದಲ್ಲಿ ಭಾರತದಿಂದ ಕೊಳ್ಳಲು ಸಾಧ್ಯವಿರುವುದರಿಂದ ತಮ್ಮ ಸೇವೆಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡುತ್ತಿವೆ. ಕಡಿಮೆ ಕೂಲಿ ದರಗಳು ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ಲಭ್ಯತೆಯು ಸುಧಾರಣಾ ನಂತರದ ಅವಧಿಯಲ್ಲಿ ಭಾರತವನ್ನು ಜಾಗತಿಕ ಹೊರಗುತ್ತಿಗೆಗೆ ಗಮ್ಯಸ್ಥಾನವನ್ನಾಗಿಸಿವೆ.

12. ಭಾರತದಲ್ಲಿ ಸರ್ಕಾರದ ನವರತ್ನ ನೀತಿಯು ಸಾರ್ವಜನಿಕ ವಲಯದ ಕಾರ್ಯ ವೈಖರಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನೀವು ಭಾವಿಸುವಿರಾ? ಹೇಗೆ?

1996ರಲ್ಲಿ ಸರ್ಕಾರವು PSOಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ವೃತ್ತಿಪರತೆ ಮೂಡಿಸಲು ಮತ್ತು ಮುಕ್ತಗೊಂಡ ಜಾಗತಿಕ ಸನ್ನಿವೇಶದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಒಂಭತ್ತು ಪ್ರಮುಖರುಗಳನ್ನು ಮಹಾರತ್ನ, ನವರತ್ನ ಮತ್ತು ಮಿನಿರತ್ನಗಳೆಂದು ಘೋಷಿಸಿತು. ಸಮರ್ಥ ಕಾರ್ಯ ನಿರ್ವಹಣೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಅಗ್ಯವಿರುವ ವಿವಿಧ ನಿರ್ಧಾರಗಳನ್ನು ಕೈಗೊಳ್ಳಲು ಈ ಉದ್ಯಮಗಳಿಗೆ ಹೆಚ್ಚಿನ ಆಡಳಿತಾತ್ಮಕ ಮತ್ತು ಕಾರ್ಯನಿರ್ವಹಣಾ ಸ್ವಾಯತ್ತತೆಯನ್ನು ನೀಡಲಾಗಿದೆ. ಈ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತಿವೆ. ಸಾರ್ವಜನಿಕ ಉದ್ದಿಮೆಗಳ ವಿಸ್ತರಣೆಗೆ ಸಹಾಯಕವಾಗಿ ಅವುಗಳನ್ನು ವಿಶ್ವದರ್ಜೆಗೇರಿಸುವ ಬದಲು ಸರ್ಕಾರವು ಹೂಡಿಕೆ ಹಿಂತೆಗೆಯುವ ಮೂಲಕ ಅವುಗಳನ್ನು ಭಾಗಶ: ಖಾಸಗೀಕರಣಗೊಳಿಸುತ್ತಿದೆಯೆಂದು ಕೆಲವು ವಿದ್ವಾಂಸರು ಆಪಾದಿಸುತ್ತಾರೆ. ಇತ್ತೀಚೆಗೆ ಅವುಗಳನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಿಕೊಂಡು ವಿಶ್ವ ಮಾರುಕಟ್ಟೆಯಲ್ಲಿ ವಿಸ್ತರಣೆಗೊಳ್ಳಲು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಸ್ವ – ಸಾಮರ್ಥ್ಯದಿಂದ ಸಂಪನ್ಮೂಲಗಳನ್ನು ಸಂಗ್ರಹಿಸುವ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.

13. ಸೇವಾ ವಲಯದ ಅಧಿಕ ಬೆಳವಣಿಗೆಗೆ ಯಾವ ಪ್ರಧಾನ ಸಂಗತಿಗಳು ಕಾರಣಗಳಾಗಿವೆ?

ಒಂದು ಆರ್ಥಿಕತೆಯ ಬೆಳವಣಿಗೆಯನ್ನು ಒಟ್ಟು ದೇಶೀಯ ಉತ್ಪನ್ನ GDP ಯಿಂದ ಅಳೆಯುತ್ತೇವೆ. ಜಿ.ಡಿ.ಪಿ. ಬೆಳವಣಿಗೆಯು 19880 81 8. 5.6 ರಷ್ಟಿದ್ದುದು 2007 – 12ರಲ್ಲಿ ಶೇ. 8.2ಕ್ಕೆ ಹೆಚ್ಚಾಗಿದೆ. ಸುಧಾರಣೆ ಕಾಲದಲ್ಲಿ ಕೃಷಿ ವಲಯದ ಬೆಳವಣಿಗೆಯು ಇಳಿಕೆಯನ್ನು ಕಂಡಿದೆ. ಕೈಗಾರಿಕಾ ವಲಯವು ಏರಿಳಿತಗಳನ್ನು ಕಂಡಿದೆ. ಸೇವಾ ವಲಯದ ಬೆಳವಣಿಗೆಯು ಏರಿಕೆಯಾಗಿದೆ. ಬೆಳವಣಿಗೆಯ ಮುಖ್ಯವಾಗಿ ಸೇವಾವಲಯದ ಬೆಳವಣಿಗೆಯಲ್ಲಿ ಕಂಡು ಬರುತ್ತದೆ. 12ನೇ ಪಂಚವಾರ್ಷಿಕ ಯೋಜನೆ (2001-17) GDPಯು ಬೆಳವಣಿಗೆ ದರವನ್ನು 9.5 ರಷ್ಟು ಸಾಧಿಸಬೇಕಾದ ಗುರಿ ಹೊಂದಿದೆ. ಇದನ್ನು ಕೃಷಿ ಕೈಗಾರಿಕೆ & ಸೇವಾ ವಲಯಗಳ ಬೆಳವಣಿಗೆ ದರವು ಕ್ರಮವಾಗಿ ಶೇ. 4 ರಿಂದ 4.2 ಶೇ. 9.6 ರಿಂದ 10.9 ಮತ್ತು ಶೇ. 10 ರಷ್ಟಕ್ಕೆ ಹೆಚ್ಚಿಗೆ ಬೇಕಾಗಿದೆ. ಇಂತಹ ಅಧಿಕ ಬೆಳವಣಿಗೆ ದರದ ಹಂಚಿಕೆಯು ಅಸ್ಥಿರವಾದುದಾಗಿದೆ.

14. ಕೃಷಿ ವಲಯವು ಸುಧಾರಣಾ ಪ್ರಕ್ರಿಯೆಯಿಂದ ಅಡ್ಡ ಪರಿಣಾಮಗಳಿಗೊಳಗಾಗಿದೆ ಎಂದು ಕಂಡುಬರುತ್ತದೆ. ಏಕೆ?

ಸುಧಾರಣೆಗಳು ಕೃಷಿಗೆ ಲಾಭದಾಯಕವಾಗಿರಲಿಲ್ಲ. ಇದರಲ್ಲಿ ಬೆಳವಣಿಗೆ ವರವು ಕುಸಿಯುತ್ತಿದೆ. ಸುಧಾರಣಾ ಕಾಲದಲ್ಲಿ ಕೃಷಿವಲಯದ ಮೇಲಿನ ಸಾರ್ವಜನಿಕ ಹೂಡಿಕೆಯು ಇಳಿಮುಖವಾಯಿತು. ವಿಶೇಷವಾಗಿ ನೀರಾವರಿ, ಶಕ್ತಿ ಸಂಪನ್ಮೂಲ, ರಸ್ತೆಗಳು, ಮಾರುಕಟ್ಟೆ ಕೊಂಡಿಗಳು ಮತ್ತು ಸಂಶೋಧನೆ ಮತ್ತು ವಿಸ್ತರಣೆಗಳು ಇದು ಹಲವು ಸಣ್ಣ ಮತ್ತು ಇಳಿಮುಖವಾದವು. ಅಲ್ಲದೆ ರಸಗೊಬ್ಬರದ ಮೇಲಿನ ಸಹಾಯ ಧನವು ತೆರವ ಉತ್ಪಾದನಾ ವೆಚ್ಚದ ಹೆಚ್ಚಳಕ್ಕೆ ಕಾರಣವಾಯಿತು. ಶ್ರೀಮಂತ ರೈತರನ್ನು ತೊಂದರೆಗೀಡು ಮಾಡಿತು. ಈ ವಲಯವು ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕಗಳ ಕಡಿತ, ಕನಿಷ್ಠ ಬೆಂಬಲ ಬೆಲೆಗಳು ತೆರವು ಮತ್ತು ಉತ್ಪನ್ನಕ್ಕಾಗಿ ಮೇಲಿನ ಪರಿಮಾಣಾತ್ಮಕ ನಿರ್ಬಂಧಗಳನ್ನು ತೆಗೆದು ಹಾಕುವುದು ಮುಂತಾದ ಹಲವು ನೀತಿಗಳ ಬದಲಾವಣೆಗಳನ್ನು ಅನುಭವಿಸಿದೆ. ಈ ಎಲ್ಲಾ ಅಂಶಗಳು ಭಾರತೀಯ ರೈತರ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡಿವೆ | ಮತ್ತು ರೈತರು ಅಂತರರಾಷ್ಟ್ರೀಯ ತೀವ್ರ ಪೈಪೋಟಿಯನ್ನು ಎದುರಿಸಬೇಕಾಗಿದೆ.

ಆದಾಗ್ಯೂ ಕೃಷಿಯಲ್ಲಿನ ರಫ್ತು ಆಧಾರಿತ ನೀತಿಗಳ ತಂತ್ರದ ಕಾರಣದಿಂದಾಗಿ ದೇಶೀಯ ಮಾರುಕಟ್ಟೆಗಾಗಿ ಉತ್ಪನ್ನ ಮಾಡುತ್ತಿದ್ದ ಆಹಾರ ಧಾನ್ಯಗಳ ಬದಲಾಗಿ ವಾಣಿಜ್ಯ ಬೆಳಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ರಫ್ತು ಆಧಾರಿತ ಮಾರುಕಟ್ಟೆಗಳತ್ತ ಪಲ್ಲಟ ಮಾಡಲಾಗಿದೆ. ಇದು ಆಹಾರ ಧಾನ್ಯಗಳ ಬೆಳೆಗಳ ಮೇಲೆ ಒತ್ತಡಗಳನ್ನು ತರುತ್ತದೆ.

15, ಸುಧಾರಣಾ ಅವಧಿಯಲ್ಲಿ ಕೈಗಾರಿಕಾ ವಲಯವು ಕಳಪೆ ಕಾರ್ಯವೈಖರಿಯನ್ನು ತೋರಿಸಿದೆ. ಏಕೆ?

ಕೈಗಾರಿಕಾ ಬೆಳವಣಿಗೆಯು ಸಹ ಕುಂಟಿತವಾಗಿರುವುದೂ ದಾಖಲಾಗಿದೆ. ಏಕೆಂದರೆ:

 1. ಅಗ್ಗದ ಆಮದು, ಮೂಲ ಸೌಕರ್ಯದಲ್ಲಿ ಹೂಡಿಕೆಯ ಕೊರತೆಯಂತಹ ಹಲವು ಕಾರಣಗಳಿಂದಾಗಿ ಕೈಗಾರಿಕಾ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ.
 2. ಜಾಗತಿಕ ಪ್ರಪಂಚದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಒತ್ತಾಯ ಪೂರ್ವಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಸರಕು ಮತ್ತು ಬಂಡವಾಳದ ಹರಿವಿಗೆ ತಮ್ಮ ಆರ್ಥಿಕತೆಯನ್ನು ತೆರೆದಿರಬೇಕಾಗುತ್ತದೆ.
 3. ಅಗ್ಗದ ಆಮದುಗಳು ದೇಶೀಯ ಸರಕುಗಳ ಬೇಡಿಕೆಯನ್ನು ಕಿತ್ತುಕೊಂಡವು.
 4. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸ್ಥಳೀಯ ಕೈಗಾರಿಕೆಗಳು ಮತ್ತು ದ್ಯೋಗವಕಾಶಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
 5. ದೇಶೀಯ ತಯಾರಕರು ಆಮದುಗಳಿಂದ ಪೈಪೋಟಿಯನ್ನು ದುರಿಸುತ್ತಿದ್ದಾರೆ.

ಆದಾಗ್ಯೂ ಅಭಿವೃದ್ಧಿ ಶೀಲ ದೇಶವಾದ ಭಾರತವು ಅಧಿಕ ಸಾಂಕೇತರ ಅಡೆತಡೆಗಳ ಕಾರಣದಿಂದಾಗಿ ಅಭಿವೃದ್ಧಿ ಹೊಂದಿದ ದೇಶದ ಮಾರುಕಟ್ಟೆಗಳಿಗೆ ಪ್ರವೇಶಿಸುವ ಮಾರ್ಗವನ್ನು ರಫ್ತು ಮೂಲಕ ಪಡೆಯಲಾಗುತ್ತಿಲ್ಲ.

ಉದಾ : ಭಾರತದಲ್ಲಿ ಟೆಕ್ಸ್‌ಟೈಲ್ಸ್ ಮತ್ತು ಬಟ್ಟೆ ರತ್ತಿನ ಮೇಲಿನ ಎಲ್ಲಾ ಕೋಟಾ ನಿರ್ಬಂಧಗಳನ್ನು ತೆಗೆಯಲಾಗಿದ್ದರೂ, USA ಮಾತ್ರ ಭಾರತ ಮತ್ತು ಚೈನಾದಿಂದ ಆಮದಾಗುತ್ತಿದ್ದ ಟೆಕ್ಸ್‌ಟೈಲ್ಸ್‌ನ ಮೇಲಿನ ಕೋಟಾ ನಿರ್ಬಂಧವನ್ನು

16. ಸಾಮಾಜಿಕ ನ್ಯಾಯ ಮತ್ತು ಕಲ್ಯಾಣದ ಬೆಳಕಿನಲ್ಲಿ ಭಾರತದಲ್ಲಿ ಆರ್ಥಿಕ ಸುಧಾರಣೆಗಳನ್ನು ಚರ್ಚಿಸಿ.

ಸುಧಾರಣೆ: ನ್ಯಾಯ ಮತ್ತು ಕಲ್ಯಾಣದ ಬೆಳಕಿನಲ್ಲಿ ಭಾರತದಲ್ಲಿ ಆರ್ಥಿಕ ಸುಧಾರಣೆಯಿಂದ 10ನೇ ಪಂಚವಾರ್ಷಿಕ ಯೋಜನೆಯಲ್ಲಿ GDP ಬೆಳವಣಿಗೆಯು ಶೇ. 6.1 ರಿಂದ ಶೇ. 8ಕ್ಕೆ ಹೆಚ್ಚಾಗಿದೆ. ಇದು ಸಣ್ಣ ಕೈಗಾರಿಕೆಗಳಿಗಳ ಬೆಳವಣಿಗೆಗೂ ಕಾರಣವಾಯಿತು. ಭಾರತವು ಇಂಜಿನಿಯರಿಂಗ್‌ ಸರಕುಗಳು ಟೆಲಿ – ಸಂಪರ್ಕ, ಉಡುಪಗಳು, ಇತ್ಯಾದಿ ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆಯುತ್ತಿದೆ ಮತ್ತು ಹಣದುಬ್ಬರವು ನಿಯಂತ್ರಣಕ್ಕೆ ಬಂದಿದೆ.

ಆದಾಗ್ಯು ಆರ್ಥಿಕ ಸುಧಾರಣೆಗಳು ಕೃಷಿ ವಲಯದ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದೆ. ಇದು ಜನರ ಅಥವಾ ರಾಜ್ಯಗಳ ನಡುವೆ ಅಸಮಾನತೆ ಹೆಚ್ಚಾಗಲು ಕಾರಣವಾಗಿದೆ. ಇದು ಕೇವಲ ಅಧಿಕ ಆದಾಯ ಗುಂಪುಗಳಿಗೆ ಮಾತ್ರ ಆದಾಯ ಮತ್ತು ಗುಣಮಟ್ಟದ ಅನುಭೋಗವನ್ನು ಹೆಚ್ಚು ಮಾಡಿತು ಮತ್ತು ಕೇವಲ ಟೆಲಿ – ಸಂಪರ್ಕ, ಮಾಹಿತಿ ತಂತ್ರಜ್ಞಾನ ಹಣಕಾಸು, ಮನರಂಜನೆ, ವಸತಿ ಸೇವೆಗಳ ಬೆಳವಣಿಗೆಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ. ಇದೆಲ್ಲವನ್ನು ಹೊರತು ಪಡಿಸಿ ದೇಶದ ಕೋಟಿ ಜನರಿಗೆ ಉದ್ಯೋಗ ಮತ್ತು ಜೀವನಾದಾರವನ್ನು ಕೃಷಿ ಮತ್ತು ಕೈಗಾರಿಕಾ ವಲಯ ದೊರಕಿಸಿಕೊಟ್ಟಿದೆ.

ಹೆಚ್ಚುವರಿ ಪ್ರಶೋತ್ತರಗಳು

Udarikaran Kasagi Karana Mattu Jagatikarana Ondu Moulyamapana Notes

1. ಮಿಶ್ರ ಅರ್ಥವ್ಯವಸ್ಥೆ ಎಂದರೇನು?

ಒಂದು ಅರ್ಥವ್ಯವಸ್ಥೆಯಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಸಮಾಜವಾದಿ ಅರ್ಥವ್ಯವಸ್ಥೆಗಳೆರಡು ಏಕಕಾಲದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಮಿಶ್ರ ಅರ್ಥವ್ಯವಸ್ಥೆ ಎನ್ನುವರು.

2. ಆರ್ಥಿಕ ಸುಧಾರಣೆ ಎಂದರೇನು?

ಆರ್ಥಿಕ ಸುಧಾರಣೆಗಳು ಅಥವಾ ಹೊಸ ಆರ್ಥಿಕ ನೀತಿ NEP ಎಂದು ಕರೆಯಲಾಗಿದೆ.

3. IMF ಅನ್ನು ವಿಸ್ತರಿಸಿ.

ಅಂತರರಾಷ್ಟ್ರೀಯ ಹಣಕಾಸು ನಿಧಿ IMF.

4. IBRD ಅನ್ನು ವಿಸ್ತರಿಸಿ.

ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕು (IBRD)

5. ಹೊಸ ಆರ್ಥಿಕ ನೀತಿಯ ಗುಂಪುಗಳಾವುವು? .

ಹೊಸ ಆರ್ಥಿಕ ನೀತಿಯ 2 ಗುಂಪುಗಳನ್ನಾಗಿ ವರ್ಗೀಕರಿಸಬಹುದು. ಅವುಗಳೆಂದರೆ 1. ಸ್ಥಿರಾತ್ಮಕ ಕ್ರಮಗಳು, 2. ರಚನಾತ್ಮಕ ಸುಧಾರಣಾ ಕ್ರಮಗಳು.

6. ಸ್ಥಿರಾತ್ಮಕ ಕ್ರಮಗಳು ಎಂದರೇನು?

ಸ್ಥಿರಾತ್ಮಕ ಕ್ರಮಗಳು ಅಲ್ಪಾವಧಿ ಕ್ರಮಗಳಾಗಿದ್ದು ಪಾವತಿ ಶಿಲ್ಕಿನಲ್ಲಿ ಉಂಟಾದ ದೌರ್ಬಲ್ಯಗಳನ್ನು ಸರಿಪಡಿಸುವುದು ಮತ್ತು ಹಣದುಬ್ಬರವನ್ನು ನಿಯಂತ್ರಿಸುವುದಾಗಿದೆ.

7. ರಚನಾತ್ಮಕ ಸುಧಾರಣಾ ಕ್ರಮಗಳೆಂದರೇನು?

ರಚನಾತ್ಮಕ ಸುಧಾರಣಾ ನೀತಿಗಳು ದೀರ್ಘಾವಧಿ ಕ್ರಮಗಳಾಗಿದ್ದು, ಭಾರತದ ಆರ್ಥಿಕತೆಯ ಹಲವು ಭಾಗಗಳಲ್ಲಿರುವ ಕೌಠಿಣ್ಯತೆಗಳನ್ನು ತೆಗೆದು ಹಾಕುವ ಮೂಲಕ ಆರ್ಥಿಕತೆಯ ದಕ್ಷತೆಯನ್ನು ಸುಧಾರಿಸುವುದು & ಅದರ ಅಂ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

8. ಹೊಸ ಆರ್ಥಿಕ ನೀತಿಯ ಪ್ರಮುಖ ಲಕ್ಷಣಗಳಾವುವು?

ಹೊಸ ಆರ್ಥಿಕ ನೀತಿಯ ಪ್ರಮುಖ ಲಕ್ಷಣಗಳೆಂದರೆ 1. ಉದಾರೀಕರಣ 2. ಖಾಸಗೀಕರಣ ಮತ್ತು 3. ಜಾಗತೀಕರಣ.

9. ಉದಾರೀಕರಣ ಎಂದರೇನು?

ಉದಾರೀಕರಣವು ಆರ್ಥಿಕ ಚಟುವಟಿಕೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ನಿರ್ಬಂಧಗಳನ್ನು ತೆಗೆದು ಹಾಕುವ ಪ್ರಕ್ರಿಯೆಯಾಗಿದೆ.

10. WTO ಅನ್ನು ವಿಸ್ತರಿಸಿ.

ವಿಶ್ವ ವ್ಯಾಪಾರ ಸಂಘಟನೆ (WTO)

1st Puc Economics Chapter 3

11. ಪ್ರಸ್ತುತ ಯಾವ – ಯಾವ ಕೈಗಾರಿಕೆಗಳನ್ನು ಸಾರ್ವಜನಿಕ ವಲಯಕ್ಕೆ ಮೀಸಲಿರಿಸಿದೆ ?

ರಕ್ಷಣಾ ಉಪಕರಣಗಳು, ಅಶಕ್ತಿ ಉತ್ಪಾದನೆ ಮತ್ತು ರೈಲು ಸಾರಿಗೆ.

12. ಹಣಕಾಸು ವಲಯದ ನಿಯಂತ್ರಕ ಯಾರು?

ರಕ್ಷಣಾ ಉಪಕರಣಗಳು, ಅಣುಶಕ್ತಿ ಉತ್ಪಾದನೆ ಮತ್ತು ರೈಲು ಸಾರಿಗೆ

13, ವಿದೇಶಿ ಸಾಂಸ್ಥಿಕ ಹೂಡಿಕೆ FII ಎಂದರೇನು?

ಬ್ಲಾಕ್, ಬಾಂಡ್ ಮತ್ತು ಹಣಕಾಸಿನ ಆಸ್ತಿಯ ರೂಪದಲ್ಲಿರುವ ಹೂಡಿಕೆಯಾಗಿದೆ. ಈ ರೀತಿಯ ಹೂಡಿಕೆ ದೇಶದ ಉದ್ದಿಮೆ ಮತ್ತು ಹೂಡಿಕೆದಾರರ ಮೇಲೆ ಯಾವುದೇ ರೀತಿಯ ನಿಯಂರ್ತಣ ಹೊಂದಿರುವುದಿಲ್ಲ.

14. ಕೋಶೀಯ ನೀತಿ ಎಂದರೇನು?

ತೆರಿಗೆ ಸುಧಾರಣೆಗಳು ಸರ್ಕಾರದ ತೆರಿಗೆ ನೀತಿ ಮತ್ತು ಸಾರ್ವಜನಿಕ ವೆಚ್ಚಗಳಿಗೆ ಸಂಬಂಧಿಸಿದ ಸುಧಾರಣೆಗಳಾಗಿದ್ದು ಇವುಗಳನ್ನು ಒಟ್ಟಾರೆ ಕೋಶೀಯ ನೀತಿ ಎಂದು ಕರೆಯಲಾಗುತ್ತದೆ.

15. ತೆರಿಗೆಯ ಎರಡು ವಿಧಗಳಾವುವು? ಉದಾಹರಣೆ ಸಹಿತ ತಿಳಿಸಿ.

ಪ್ರತ್ಯಕ್ಷ ತೆರಿಗೆ :- ವ್ಯಕ್ತಿಗಳು ಮತ್ತು ಉದ್ಯಮ ಸಂಸ್ಥೆಗಳ ಆದಾಯ ಮತ್ತು ಆಸ್ತಿಗಳ ಮೇಲೆ ವಿಧಿಸುವ ತೆರಿಗೆಗಳನ್ನು ಒಳಗೊಂಡಿದೆ.

ಉದಾ : ಆದಾಯ ತೆರಿಗೆ, ಕಂಪನಿ ತೆರಿಗೆ ಇತ್ಯಾದಿ.

ಪರೋಕ್ಷ ತೆರಿಗೆ :- ತೆರಿಗೆ ಹೊರೆಯನ್ನು ಇತರರ ಮೇಲೆ ವರ್ಗಾಯಿಸಬಹುದಾದ ತೆರಿಗೆಗೆ ಪರೋಕ್ಷ ತೆರಿಗೆಗಳು ಎನ್ನುವರು.

ಉದಾ : ಸರಕು ಮತ್ತು ಸೇವೆ ತೆರಿಗೆ

16. ಮಾರುಕಟ್ಟೆಯ ವಿನಿಮಯ ದರವು ಯಾವ ಅಂಶಗಳನ್ನು ಅವಲಂಬಿಸಿದೆ?

ಮಾರುಕಟ್ಟೆಯ ವಿನಿಮಯ ದರವು ವಿನಿಮಯದ ಬೇಡಿಕೆ ಮತ್ತು ಪೂರೈಕೆಗಳನ್ನು ಅವಲಂಬಿಸಿದೆ.

17. ವಿದೇಶಿ ವಿನಿಮಯದರ ಎಂದರೇನು?

ಒಂದು ದೇಶ ತನ್ನ ಹಣವನ್ನು ಇನ್ನೊಂದು ದೇಶದ ಹಣಕ್ಕೆ ಯಾವ ದರದಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತದೆಯೋ ಆ ದರವನ್ನು ವಿನಿಮಯ ದರ ಎನ್ನುವರು.

18. ವ್ಯಾಪಾರ ನೀತಿಯ ಸುಧಾರಣೆಗಳಾವುವು?

 • ವ್ಯಾಪಾರ ನೀತಿಯ ಸುಧಾರಣೆಯ ಗುರಿಗಳೆಂದರೆ
 • ಆಮದು ಮತ್ತು ರಫ್ತುಗಳ ಮೇಲಿನ ಪರಿಮಾಣಾತ್ಮಕ ನಿರ್ಬಂಧಗಳನ್ನು ತೆಗೆದು ಹಾಕುವುದು,
 • ಸುರಿಕ ವರಗಳನ್ನು ಕಡಿಮೆ ಮಾಡುವುದು.
 • ಉತ್ಪಾದಕರು ಮಾಡಿಕೊಳ್ಳುತ್ತಿದ್ದ ಆಮದು ಮೇಲಿನ ಪರವಾನಗಿಯನ್ನು ತೆಗೆದು ಹಾಕುವುದು

19. ಯಾವಾಗ ತಯಾರಿಕಾ ಅನುಭೋಗಿ ಸರಕುಗಳು ಮತ್ತು ಕೃಷಿ ಉತ್ಪನ್ನಗಳ ಆಮದು ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಯಿತು.

ಏಪ್ರಿಲ್ 2001 ರಿಂದ

20. ಖಾಸಗೀಕರಣ ಎಂದರೇನು?

ಸರ್ಕಾರಿ ಒಡೆತನದ ಉದ್ಯಮ ಸಂಸ್ಥೆಗಳ ಒಡೆತನ ನಿರ್ವಹಣೆಯನ್ನು ಖಾಸಗೀ ವ್ಯಕ್ತಿಗಳಿಗೆ ಬಿಟ್ಟುಕೊಡುವುದಕ್ಕೆ ಖಾಸಗೀಕರಣ ಎನ್ನುವರು.

21. ಯಾವ ಎರಡು ರೀತಿಯಲ್ಲಿ ಸರ್ಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳಾಗಿ ಪರಿವರ್ತಿತವಾಗುತ್ತವೆ.

 1. ಸಾರ್ವಜನಿಕ ವಲಯದ ಕಂಪನಿಗಳ ಒಡೆತನ ಮತ್ತು ನಿರ್ವಹಣೆಯಿಂದ ಸರ್ಕಾರ ಹೊರ ಹೋಗುವುದು.
 2. ಮಾಡುವುದು. ಸಾರ್ವಜನಿಕ ವಲಯದ ಕಂಪನಿಗಳನ್ನು ಸಾರಾಸಗಟು ಮಾರಾಟ

22, ಹೂಡಿಕೆ ಹಿಂತೆಗೆತ ಎಂದರೇನು?

ಸಾರ್ವಜನಿಕ ವಲಯದ ಉದ್ದಿಮೆ ಸಂಸ್ಥೆಗಳ ಈಕ್ವಿಟಿ ಷೇರಿನ ಒಂದು ಭಾಗವನ್ನು ಸಾರ್ವಜನಿಕರಿಗೆ ಮಾರಾಟ ಮಾಡುವುದಕ್ಕೆ ಹೂಡಿಕೆ ಹಿಂತೆಗೆತ ಎನ್ನುವರು.

23. ವಿದೇಶಿ ನೇರ ಹೂಡಿಕೆಯ ಅರ್ಥ ನೀಡಿ.

ವಿದೇಶಿ ಸಂಪತ್ತನ್ನು ದೇಶಿಯ ರಚನೆ, ಸರಕು ಮತ್ತು ಸರಕುಗಳಲ್ಲಿ ಹೂಡಿಕೆ ಮಾಡುವುದಕ್ಕೆ ವಿದೇಶಿ ನೇರ ಹೂಡಿಕೆ ಎನ್ನುತ್ತಾರೆ.

24. ಜಾಗತೀಕರಣ ಎಂದರೇನು?

ದೇಶದ ಅರ್ಥವ್ಯವಸ್ಥೆಯನ್ನು ವಿಶ್ವ ಮಾರುಕಟ್ಟೆಗೆ ತೆರೆದಿಡುವುದನ್ನು ಜಾಗತೀಕರಣ ಎನ್ನುತ್ತಾರೆ. ಉತ್ತಾದನೆಯ ಒಗ್ಗೂಡಿಕೆ ಮತ್ತು ಮಾರುಕಟ್ಟೆಗಳ ಒಗ್ಗೂಡಿಕೆಯ ಪ್ರಕ್ರಿಯೆಯಾಗಿದೆ.

25. ಹೊರಗುತ್ತಿಗೆ ಎಂದರೇನು?

ಇದು ಜಾಗತೀಕರಣ ಪ್ರಕ್ರಿಯೆಯ ಒಂದು ಪ್ರತಿಫಲವಾಗಿ ಹೊರ ಹೊಮ್ಮಿದೆ. ಹೊರಗುತ್ತಿಗೆಯಲ್ಲಿ ಒಂದು ಕಂಪನಿಯ ಕೆಲವು ಸೇವೆಗಳನ್ನು ನಿಯಮಿತವಾಗಿ ಬಾಹ್ಯ ಮೂಲಗಳಿಂದ ಎರವಲು ಪಡೆಯುತ್ತಿದೆ.

26, ವಿದೇಶಿ ವಿನಿಮಯ ಮಾರುಕಟ್ಟೆ ಎಂದರೇನು?

ಪ್ರಸ್ತುತ ನಿಗದಿಪಡಿಸಿರುವ ವಿನಿಮಯ ದರದಲ್ಲಿ ವಿದೇಶಿ ಹಣವನ್ನು ಪಡೆಯುವ ಮತ್ತು ಮಾರಾಟ ಮಾಡುವ ಮಾರುಕಟ್ಟೆಯಾಗಿದೆ.

27. ಸುಂಕಗಳನ್ನು ಏಕೆ ವಿಧಿಸಲಾಗುತ್ತದೆ?

ಸುಂಕಗಳು ಸರ್ಕಾರ ನಿರ್ವಹಣೆ, ಅಭಿವೃದ್ಧಿ ಯೋಜನೆಗಳಿಗೆ ಹಣ ಸಂಗ್ರಹಿಸುವ ಸಲುವಾಗಿ, ವಿವಿಧ ರೂಪಗಳಲ್ಲಿ ದೇಶದ ಪ್ರಜೆಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳನ್ನು ಹಾಕಲಾಗುತ್ತದೆ.

28, ಆರ್ಥಿಕ ಸುಧಾರಣಾ ನೀತಿಗಳನ್ನು ರೂಪಿಸಿದವರಾರು?

ಅಂದಿನ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್‌ ಮತ್ತು ಹಣಕಾಸು ಮಂತ್ರಿ ಡಾ. ಮನಮೋಹನ್‌ ಸಿಂಗ್‌ರವರು 1991ರ ಆರ್ಥಿಕ ಸುಧಾರಣಾ ನೀತಿ ರೂಪಿಸಿದರು.

29. ಭಾರತದ ನಿಯಂತ್ರಣ ತಂತ್ರಗಳನ್ನು ತಿಳಿಸಿ.

 • ಕೈಗಾರಿಕಾ ಪರವಾನಗಿ ಅಡಿಯಲ್ಲಿ ಪ್ರತಿಯೊಬ್ಬ ಉದ್ಯಮಿಯು ಒಂದು ಘಟಕವನ್ನು ಸ್ಥಾಪಿಸಲು ಅಥವಾ ಮುಚ್ಚಲು ಸರ್ಕಾರದ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿತ್ತು.
 • ಹಲವು ಕೈಗಾರಿಕೆಗಳ ಸ್ಥಾಪನೆಯಲ್ಲಿ ಖಾಸಗಿ ವಲಯಕ್ಕೆ ಅವಕಾಶವಿರಲಿಲ್ಲ.
 • ಕೆಲವು ಸರಕುಗಳನ್ನು ಕೇವಲ ಸಣ್ಣ ಕೈಗಾರಿಕೆಗಳಲ್ಲಿ ಉತ್ಪಾದಿಸಬೇಕಾಗಿತ್ತು.
 • ಕೆಲವು ಆಯ್ದ ಕೈಗಾರಿಕಾ ಉತ್ಪನ್ನಗಳ ಬೆಲೆ ನಿರ್ಧಾರ ಮತ್ತು ವಿತರಣೆಯ ಮೇಲೆ ನಿಯಂತ್ರಣವಿತ್ತು.

30. ಉದಾರೀಕರಣ ಕ್ರಮಗಳನ್ನು ಜಾರಿಗೊಳಿಸಲಾದ ಪ್ರಮುಖ ವಲಯಗಳನ್ನು ಹೆಸರಿಸಿ

 • ಕೈಗಾರಿಕಾ ವಲಯದ ನಿಯಂತ್ರಣ ಮುಕ್ತತೆ.
 • ಹಣಕಾಸು ವಲಯದ ಸುಧಾರಣೆಗಳು
 • ತೆರಿಗೆ ಸುಧಾರಣೆಗಳು
 • ವಿದೇಶಿ ವಿನಿಮಯದ ಸುಧಾರಣೆಗಳು
 • ವ್ಯಾಪಾರ ಮತ್ತು ಹೂಡಿಕೆಯಲ್ಲಿನ ಸುಧಾರಣೆಗಳು

31. ಸಾರ್ವಜನಿಕ ವಲಯದಲ್ಲಿ ಮಹಾರತ್ನ ಸ್ಥಾನಗಳನ್ನು ಪಡೆದಿರುವ ಉದ್ಯಮಗಳನ್ನು ಹೆಸರಿಸಿ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)

ರಾಷ್ಟ್ರೀಯ ಢಮಕಲ್‌ ವಿದ್ಯುತ್‌ ನಿಗಮ (NTPC)

ಭಾರತದ ಉಕ್ಕು ಪ್ರಾಧಿಕಾರ ನಿಯಮಿತ (SAIL)

ಭಾರತೀಯ ತೈಲ ನಿಗಮ (IOC)

ಕೋಲ್ ಇಂಡಿಯಾ ಲಿಮಿಟೆಡ್ (CIL)

32. ಹಣಕಾಸು ವಲಯದ ಪ್ರಮುಖ ಸುಧಾರಣೆಗಳಾವುವು?

ಹಣಕಾಸು ವಲಯದ ನಿಯಂತ್ರಕನಾಗಿದ್ದ RBIನ ಪಾತ್ರವನ್ನು ಕಡಿತಗೊಳಿಸಿ ಅದನ್ನು ಸಹಾಯಕನಾಗಿ ಮಾರ್ಪಡಿಲಾಯಿತು. ಹಣಕಾಸು ವಲಯವು ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ದೊರಕಿದೆ.

ಬ್ಯಾಂಕುಗಳು ಬಡ್ಡಿ ದರವನ್ನು ನಿಗದಿ ಪಡಿಸುವ ಸ್ವಾತಂತ್ರ್ಯ ಕೊಡಲಾಗಿದೆ. ಹಣಕಾಸು ವಲಯದ ಸುಧಾರಣೆ ನೀತಿಗಳು ಹೊಸ ಖಾಸಗಿ ವಲಯದ ಬ್ಯಾಂಕುಗಳು ಸಹ ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ವಿದೇಶಿ ಹೂಡಿಕೆದಾರರಿಗೆ ಅವಕಾಶ ನೀಡಲಾಗಿದೆ.

33. ಏಕೆ ಸರ್ಕಾರವು ವ್ಯಾಪಾರಿ ಪ್ರತಿಬಂಧಕಗಳನ್ನು ತೆಗೆದು ಹಾಕಿದೆ?

1991ರ ನಂತರ ಸರ್ಕಾರವು ಉತ್ಪಾದಕರ ಜೊತೆಗೆ ಸ್ಪರ್ಧಿಸುವ ಸಲುವಾಗಿ ತಾನು ಹಾಕಿದ್ದ ವ್ಯಾಪಾರ ಪ್ರತಿಬಂಧಕಗಳನ್ನು ತೆಗೆದು ಹಾಕಿತು. ಇದರಿಂದ ದೇಶದಲ್ಲಿ ಉತ್ಪಾದಕರ ಗುಣಮಟ್ಟ ಮತ್ತು ಕಾವ್ಯ ನಿರ್ವಹಣೆಯಲ್ಲಿ ಸುಧಾರಣೆಯಾಗಬಲ್ಲದು ಎಂದು ಭಾವಿಸಿದೆ. ವಿದೇಶಿ ವ್ಯಾಪಾರ ಮತ್ತು ಹೂಡಿಕೆಯನ್ನು ಉದಾರೀಕರಿಸುವ ಉದ್ದೇಶದಿಂದ ಹಲವು ಸುಧಾರಣೆಗಳನ್ನು ಜಾರಿ ಮಾಡಿದೆ.

34. ಭಾರತಕ್ಕೆ FDI ಅಗತ್ಯವಿದೆಯೆಂದು ನೀವು ಭಾವಿಸುವಿರಾ? ಏಕೆ?

ಹೌದು, ಭಾರತಕ್ಕೆ ಅವಶ್ಯಕತೆ ಇದೆ. ಭಾರತವು ವಿಫಲವಾದ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಒಳಗೊಂಡಿದೆ. ಇದರ ಸಮರ್ಪಕ ಉಪಯೋಗಕ್ಕೆ ಸಾಕಷ್ಟು ಬಂಡವಾಳದ ಅಗತ್ಯವಿದೆ. ಅಲ್ಲದೆ ಭಾರತವು ಮುಂದುವರೆಯುತ್ತಿರವ ರಾಷ್ಟ್ರಗಳಲ್ಲಿ ಒಂದಾಗಿದ್ದು, ತೀವ್ರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಬೇಕಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಹೊಸ ಉದ್ಯೋಗಾವಕಾಶವನ್ನು ಕಲ್ಪಿಸಬೇಕು. ಜನರ ಜೀವನಮಟ್ಟ ಸುಧಾರಿಸಲು, ಉತ್ಪಾದನೆಗೆ ಹೆಚ್ಚು ಗಮನ ಕೊಡಬೇಕಾಗಿರುವುದರಿಂದ FDI ನ ಅವಶ್ಯಕತೆ ಇದೆ.

35. ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು ಎಂದರೇನು? ಅವುಗಳಲ್ಲಿ ಯಾವು ದಾದರೂ ಎರಡನ್ನು ಹೆಸರಿಸಿ.

ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು ಅರ್ಥವ್ಯವಸ್ಥೆಯಲ್ಲಿ ತೀವ್ರ ಎದಲಾವಣೆಯನ್ನು ತರುವ ಹಾಗೂ ಅವುಗಳ ಉತ್ಪಾದನೆಯನ್ನು ಹೆಚ್ಚಿಸುವುದಾಗಿದೆ. ಅವುಗಳೆಂದರೆ

 1. ಕೈಗಾರಿಕಾ ವಲಯದ ಸುಧಾರಣೆಗಳು.
 2. ವ್ಯಾಪಾರ ಮತ್ತು ವಾಣಿಜ್ಯ ವಲಯದ ಸುಧಾರಣೆಗಳು,
 3. ಸಾರ್ವನಿಕ ವಯದ ಸುಧಾರಣೆಗಳು,

36 ಸುಧಾರಣೆ ಪ್ರಕ್ರಿಯೆಯಿಂದಾಗಿ ಕೃಷಿ ವಲಯವು ದುಷ್ಪರಿಣಾಮಗಳಿಗೆ ತುತ್ತಾಗಿದೆ ಏಕೆ?

ಆರ್ಥಿಕ ಸುಧಾರಣೆಗಳು ಕೃಷಿಗೆ ಹೆಚ್ಚಿನ ಧನಾತ್ಮಕ ಪರಿಣಾಮಗಳನ್ನು ಉಂಟುಮಾಡಲಿಲ್ಲ. ಸುಧಾಂಣೆಯ ಅವಧಿಯಲ್ಲಿ, ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಒಂಡವಾಳ ಹೂಡಿಕೆಯನ್ನು ಕಡಿಮೆ ಮಾಡಲಾಗಿದೆ. ರಸಗೊಬ್ಬರದ ಮೇಲಿನ ಸಹಾಯ ಧನ ತಗೆಯುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅತಿಯಾದ ದುಷ್ಪಪರಿಣಾಮಗಳನ್ನು ಉಂಟು ಮಾಡಿದೆ.

ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕಗಳ ಕಡಿತ ಹಾಗೂ ಉತ್ಪನ್ನಗಳ ಮೇಲಿನ ನಿರ್ಬಧಗಳನ್ನು ತೆಗೆದು ಹಾಕಿರುವುದರಿಂದ ಭಾರತೀಯ ಕೃಷಿಕರಿಗೆ ಹೆಚ್ಚಿನ ಆನಾನುಕೂಲಗಳು ಉಂಟಾಗುತ್ತವೆ.

37. 1991 ರಿದೀಚೆಗೆ ಭಾರತದಲ್ಲಿ ಸಣ್ಣ ಕೈಗಾರಿಕೆಗಳು ಅತಿಯಾದ ಸಮಸ್ಯೆಗಳನ್ನು ಎದುರಿಸುತ್ತಿವೆ. ಏಕೆ?

ಕೈಗಾರಿಕಾ ಬೆಳವಣಿಗೆಯು ನಿಧಾನಗತಿಯಲ್ಲಿದೆ. ಅಗ್ಗದ ಆಮದುಗಳ ಕಾರಣದಿಂದಾಗಿ ದೇಶೀಯ ಕೈಗಾರಿಕಾ ಉತ್ಪನ್ನಗಳ ಬೇಡಿಕೆಯು ಕಡಿಮೆಯಾಗಿದೆ. ಕೈಗಾ ಕೆಗಳು ವಿದೇಶಿ ಸ್ಪರ್ಧೆಯನ್ನು ಎದುರಿಸುತ್ತಿವೆ. ಜಾಗತೀಕರಣವು ದೇಶೀಯ ಕೈಗಾಕೆಗಳು ಮತ್ತು ಉದ್ಯೋಗವಕಾಶಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಸಣ್ಣ *ಗಾರಿಕೆಗಳು ಕೆಟ್ಟ ಹೊಡೆತಕ್ಕೆ ಸಿಲುಕಿವೆ. ದೇಶದಾದ್ಯಂತ ನೂರಾರು ಸಣ್ಣ ಕೈಗಾ ಕೆಗಳು ಮುಚ್ಚಲ್ಪಟ್ಟಿವೆ. ಸಾವಿರಾರು ಕೆಲಸಗಾರರು ಬೀದಿಗೆ ಬಿದ್ದಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾರಣೆಯೆಂದರೆ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಮುಂಬಯಿಯ ಧಾಣೆ ಕೈಗಾರಿಕಾ ಪ್ರದೇಶ,

1st Puc Economics Chapter 3 Question Answer

38. ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಹಿನ್ನೆಲೆಯನ್ನು ವಿವರಿಸಿ.

ಭಾರತದ ಹಣಕಾಸು ಬಿಕ್ಕಟ್ಟು 1980ರ ದಶಕದ ಪ್ರಾರಂಭದಲ್ಲೇ ಉಂಟಾಯಿತು. ಸಕ -ರದ ವೆಚ್ಚವು ಅಧಿಕವಾಗಿ ವರಮಾನ ಕಡಿಮೆಯಾಗಿ ಸರ್ಕಾರ ಇತರ ಮೂಲಗಳಿಂದ ಅಂದರೆ ವಿಶ್ವಬ್ಯಾಂಕು ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಪಡೆಯಲು ಮುಂದಾಯಿತು. ಅಂತೆಯೇ ದೇಶದಲ್ಲಿ ಆತಂಕವಾಗಿ ಹಲವು ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದಾಯದ ಬಹುಪಾಲು ಹಣವನ್ನು ಇವುಗಳಿಗೆ ವೆಚ್ಚ ಪರ್ಯಾಯವಾದ ರಫ್ತನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ. ಇದರಿಂದ ಎದೆ ತ ವಿನಿಮಯದಲ್ಲಿ ತೀವವಾದ ಕುಸಿತ ಉಂಟಾಯಿತು. GDPಯ ಶೇ. 8.5 ರಷ್ಟು ಹೆಚ್ಚಳವಾಯಿತು. ಉತ್ಪತ್ತಿಯ ಕೊರತೆಯು

ಇಂತಹ ಸಂದರ್ಭದಲ್ಲಿ ಬೇರೆ ದಾರಿಯಿಲ್ಲದೆ ಸಾಲಕ್ಕಾಗಿ ವಿಶ್ವಬ್ಯಾಂಕು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕದ ತಟ್ಟಿತು. ಆದರೆ ಈ ಅಂತರರಾಷ್ಟ್ರೀಯ ಸಂಸ್ಥೆಗಳು ಷರತ್ತಿನ ಮೇಲೆ ಸಾಲ ನೀಡಿದವು. ಭಾರತದ ಅರ್ಥವ್ಯವಸ್ಥೆಯ ಉದಾರೀಕರಿಸಲು & ನಿರ್ಬಂಧಗಳನ್ನು ತೆಗೆದು ಹಾಕಲು ಹೇಳಿತು. ಅಲ್ಲದೆ ಖಾಸಗಿ ವಲಯದಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡದಿರಲು ಸೂಚಿಸಿದವು. ಎದೆ ಶಿ ವ್ಯಾಪಾರದ ಮೇಲಿನ ನಿಯಂತ್ರಳಗಳನ್ನು ತೆಗೆಯಲು ಒತ್ತಡ ಹೇರಿದವು.

ಈ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡ ಸರ್ಕಾರ ಅಂದಿನ ಪ್ರಧಾನಿ ಶ್ರೀ. ಪಿ.ಎ. ನರಸಿಂಹರಾವ್‌ ಮತ್ತು ಹಣಕಾಸು ಮಂತ್ರಿ ಡಾ. ಮನ್‌ಮೋಹನ್‌ ಸಿಂಗ್‌ರವರು 1991ರ ಜುಲೈನಲ್ಲಿ ಹೊಸ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿತು.

ಸುಧಾರಣಾ ಅವಧಿಯಲ್ಲಿ ಅರ್ಥವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸಿ ಭಾರತದಲ್ಲಿ ಸುಧಾರಣಾ ಪ್ರಕ್ರಿಯೆಯು ಎರಡು ದಶಕಗಳನ್ನು ಮುಕ್ತಾಯಗೊಳಿಸಿದೆ. ಈ ಎರಡು ದಶಕಗಳ ಅವಧಿಯಲ್ಲಿ ಭಾರತದ ಅರ್ಥ ವ್ಯವಸ್ಥೆಯ ಕಾರ್ಯನಿರ್ವಹಣೆ ಯನ್ನು ತಿಳಿಯೋಣ.

1991 – 2001 ರ ಅವಧಿಯಲ್ಲಿ ಶೇ. 6.4 ಕ್ಕೆ GDP ಹೆಚ್ಚಳವಾಗಿದೆ. ಅದೇ 2012 – 2017ರ ವೇಳೆಗೆ ಶೇ. 9.0 ಹೆಚ್ಚಳವಾಗಿದೆ. ಒಟ್ಟಾರೆ GDPಯಲ್ಲಿ ಹೆಚ್ಚಳವಾಗಿರುವುದು ಕಂಡು ಬರುತ್ತದೆ. ಸುಧಾರಣೆ ಕಾಲದಲ್ಲಿ ಕೃಷಿ ವಲಯದ ಬೆಳವಣಿಗೆಯು ಇಳಿಕೆಯನ್ನು ಕಂಡಿದೆ. ಕೈಗಾರಿಕಾ ವಲಯವು ಏರಿಳಿತಳನ್ನು ಕಂಡಿದೆ. ಸೇವಾ ವಲಯವು ಬೆಳವಣಿಗೆಯು ಏರಿಕೆಯಾಗಿದೆ.ಆರ್ಥಿಕತೆಯು ಮುಕ್ತತೆಯಿಂದಾಗಿ ವಿದೇಶಿ ನೇರ ಹೂಡಿಕೆ ಮತ್ತು ವಿನಿಮಯ ಮೀಸಲುಗಳಲ್ಲೂ ಗಣನೀಯ ಹೆಚ್ಚಳವಾಗಿದೆ.

ಸುಧಾರಣಾ ಅವಧಿಯಲ್ಲಿ ಭಾರತವು ಆಟೋ ಭಾಗಗಳು, ಇಂಜಿನಿಯರಿಂಗ್, ಸರಕುಗಳು, ಸಾಫ್ಟ್‌ವೇರ್ ಮತ್ತು ಟೆಕ್ಸ್‌ಟೈಲ್ಸ್ ಉತ್ಪನ್ನಗಳ ಯಶಸ್ವಿ ರಫ್ತುದಾರನಾಗಿ ಹೊರ ಹೊಮ್ಮಿದೆ. ಹೆಚ್ಚುತ್ತಿರುವ ಬೆಲೆಗಳೂ ಸಹ ನಿಯಂತ್ರಣಕ್ಕೊಳಪಟ್ಟವು.

39. ಹೊಸ ಆರ್ಥಿಕ ನೀತಿಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

ಹೊಸ ಆರ್ಥಿಕ ನೀತಿಯ ಲಕ್ಷಣಗಳೆಂದರೆ : I. ಉದಾರೀಕರಣ, 2, ಖಾಸಗೀಕರಣ, 3, ಜಾಗತೀಕರಣ

 1. ಉದಾರೀಕರಣ : ಉದಾರೀಕರಣವು ಆರ್ಥಿಕ ಚಟುವಟಿಕೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ನಿರ್ಬಂಧಗಳನ್ನು ತೆಗೆದು ಹಾಕುವ ಪ್ರಕ್ರಿಯೆಯಾಗಿದೆ. 1991 ರಲ್ಲಿ ಮತ್ತು ನಂತರದಲ್ಲಿ ಉದಾರೀಕರಣ ಕ್ರಮಗಳನ್ನು ಜಾರಿಗೊಳಿಸಲಾದ ಪ್ರಮುಖ ವಲಯಗಳು ಈ ಕೆಳಗಿನಂತಿದೆ.

ಎ. ಕೈಗಾರಿಕಾ ವಲಯದ ನಿಯಂತ್ರಣ ಮುಕ್ತತೆ : ಸುಧಾರಣಾ ನೀತಿಗಳು ಈ ವಲಯದಲ್ಲಿ ಇದ್ದಂತಹ ಹಲವಾರು ನಿಯಂತ್ರಣಗಳನ್ನು ತೆಗೆದು ಹಾಕಿವೆ. ಸಾರ್ವಜನಿಕ ವಲಯಕ್ಕೆ ಮೀಸಲಾತಿ ಕೈಗಾರಿಕೆಗಳ ಸಂಖ್ಯೆಯನ್ನು 17ರಿಂದ 2ಕ್ಕೆ ಕಡಿಮೆಗೊಳಿಸಲಾಗಿದೆ. ಸರ್ಕಾರವು ಉಳಿದೆಲ್ಲ ಕೈಗಾರಿಕೆಗಳನ್ನು ಖಾಸಗೀ ವಲಯಕ್ಕೆ ತೆರೆದಿಟ್ಟಿದೆ.

ಬಿ. ಹಣಕಾಸು ವಲಯದ ಸುಧಾರಣೆಗಳು : RBIನ ನಿಯಮಗಳು ಮತ್ತು ಕಾನೂನುಗಳ ಮೂಲಕ ಈ ವಲಯವನ್ನು ನಿಯಂತ್ರಿಸಲ್ಪಡುತ್ತಿದೆ. ಆದರೆ ಸುಧಾರಣೆಯ ನಂತರ RBIನ ಪಾತ್ರವನ್ನು ಕಡಿತಗೊಳಿಸಿ ಸಹಾಯಕನನ್ನಾಗಿ ಮಾರ್ಪಡಿಸುವುದಾಗಿದೆ. ಇದರಿಂದ ಪ್ರಸ್ತುತ ವಿದೇಶಿ ಸಾಂಸ್ಥಿಕ ಹೂಡಿಕೆದಾರರಾದ ವರ್ತಕ ಬ್ಯಾಂಕರರು. ಪಿಂಚಣಿ ನಿಧಿಗಳಿಗೆ ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ.

ಸಿ. ತೆರಿಗೆ ಸುಧಾರಣೆಗಳು : ಸರ್ಕಾರದ ತೆರಿಗೆ ನೀತಿ ಮತ್ತು ಸಾರ್ವಜನಿಕ ವೆಚ್ಚ ನೀತಿಗಳ ಸುಧಾರಣೆಗಳಿಗೆ ಸಂಬಂಧಿಸಿದೆ. 1991ರ ನಂತರ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ನಿರಂತರವಾಗಿ ಕಡಿಮೆಗೊಳಿಸಲಾಗಿದೆ. ಇದು ಉಳಿತಾಯಕ್ಕೆ ಮತ್ತು ಸ್ವಯಂ ಪ್ರೇರಿತ ಆದಾಯ ಘೋಷಣೆ ಮಾಡುವುದಕ್ಕೆ ಉತ್ತೇಜಕವಾಗಿದೆ. ಕಂಪನಿ ತೆರಿಗೆ ದರಗಳನ್ನು ಕ್ರಮೇಣ ಇಳಿಸಲಾಗಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ವಿಧಿಸಲಾಗುತ್ತದೆ.

ವಿದೇಶಿ ವಿನಿಮಯ ಸುಧಾರಣೆಗಳು : ವಿದೇಶಿ ಹಣಗಳ ರೂಪಾಯಿಯ ಮೌಲ್ಯವನ್ನು ಉದ್ದೇಶ ಪೂರ್ವಕವಾಗಿ ಕಡಿತಗೊಳಿಸುವುದಕ್ಕೆ ರೂಪಾಯಿ ಅಪಮೌಲ್ಯ ಮಾಡಲಾಯಿತು. ಇದು ರಫ್ತು ಹೆಚ್ಚಳಕ್ಕೆ ವಿದೇಶಿ ವಿನಿಮಯದ ಒಳಹರಿವಿಗೆ ದಾರಿ ಮಾಡಿಕೊಟ್ಟಿತು.

ಇ. ವ್ಯಾಪಾರ ಮತ್ತು ಹೂಡಿಕೆಯಲ್ಲಿನ ಸುಧಾರಣೆಗಳು : ಭಾರತ ಸರ್ಕಾರವು ವಿದೇಶಿ ವ್ಯಾಪಾರ ಮತ್ತು ವಿದೇಶಿ ಹೂಡಿಕೆಗಳ ಮೇಲೆ ಪ್ರತಿಬಂಧಕಗಳನ್ನು ವಿಧಿಸಿತ್ತು. ಇದು ನಮ್ಮ ಉತ್ಪಾದಕರನ್ನು ವಿದೇಶಿ ಸ್ಪರ್ಧೆಯಿಂದ ರಕ್ಷಿಸುವುದಕ್ಕೆ ಅವಶ್ಯಕ ಎಂದು ನಿರ್ಧರಿಸಲಾಗಿತ್ತು.

ಖಾಸಗೀಕರಣ : ಖಾಸಗೀಕರಣವು ಸಾರ್ವಜನಿಕ ಉದ್ಯಮಗಳ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸುವುದನ್ನು ಸೂಚಿಸುತ್ತದೆ. ಉದ್ಯಮಗಳ ಹಣಕಾಸಿನ ಶಿಸ್ತು ಹಾಗೂ ಉತ್ಪಾದನಾ ಸಮರ್ಥ್ಯವನ್ನು ಹೆಚ್ಚಿಸುವುದು, ಆಧುನಿಕತೆಗೆ ಅವಕಾಶ ಕಲ್ಪಿಸುವುದು ಮತ್ತು PSU ಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದಕ್ಕಾಗಿ ಖಾಸಗೀಕರಣವನ್ನು ಜಾರಿಗೊಳಿಸಲಾಗಿದೆ.

ಜಾಗತೀಕರಣ : ದೇಶ ಅರ್ಥ ವ್ಯವಸ್ಥೆಯನ್ನು ವಿಶ್ವ ಮಾರುಕಟ್ಟೆಗೆ ತೆರೆದಿಡುವುದನ್ನು ಜಾಗತೀಕರಣ ಎನ್ನುತ್ತಾರೆ. MNCಗಳು ಜಾಗತೀಕರಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಜಾಗತೀಕರಣವು ವಿದೇಶಿ ನೇರ ಹೂಡಿಕೆಯ ಆಕರ್ಷಣೆಗೆ ಅಗತ್ಯ ಸನ್ನಿವೇಶವನ್ನು ಸೃಷ್ಟಿಸುತ್ತದೆ.

FAQ :

1. ಜಾಗತೀಕರಣ ಎಂದರೇನು?

ದೇಶದ ಅರ್ಥ ವ್ಯವಸ್ಥೆಯನ್ನು ವಿಶ್ವ ಮಾರುಕಟ್ಟೆಗೆ ತೆರೆದಿಡುವುದನ್ನು ಜಾಗತೀಕರಣ ಎನ್ನುತ್ತಾರೆ. ಉತ್ಪಾದನೆಯ ಒಗ್ಗೂಡಿಕೆ ಮತ್ತು ಮಾರುಕಟ್ಟೆಗಳ ಡಿಕೆಯ ಪ್ರಕ್ರಿಯೆಯಾಗಿದೆ.

2. RBI ವಾಣಿಜ್ಯ ಬ್ಯಾಂಕುಗಳನ್ನು ಹೇಗೆ ನಿಯಂತ್ರಿಸುತ್ತದೆ?

ಭಾರತದಲ್ಲಿನ ಎಲ್ಲಾ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳನ್ನು RBI ತನ್ನ ನಿಯಮ ಮತ್ತು ನಿರ್ಬಂಧಗಳ ಮೂಲಕ ನಿಯಂತ್ರಿಸುತ್ತದೆ. ಬ್ಯಾಂಕುಗಳು ತಮ್ಮ ಬಳಿ ಇಟ್ಟುಕೊಳ್ಳಬೇಕಾದ ಹಣದ ಮೊತ್ತವನ್ನು ನಿಗದಿಪಡಿಸುವ ಬಡ್ಡಿದರಗಳು, ವಿವಿಧ ವಲಯಗಳಿಗೆ ನೀಡುವ ಸಾಲದ ಸ್ವರೂಪ ಮುಂತಾದವುಗಳನ್ನು RBI ನಿರ್ಧರಿಸುತ್ತದೆ.

3. ಕೋಶೀಯ ನೀತಿ ಎಂದರೇನು?

ತೆರಿಗೆ ಸುಧಾರಣೆಗಳು ಸರ್ಕಾರದ ತೆರಿಗೆ ನೀತಿ ಮತ್ತು ಸಾರ್ವಜನಿಕ ವೆಚ್ಚಗಳಿಗೆ ಸಂಬಂಧಿಸಿದ ಸುಧಾರಣೆಗಳಾಗಿದ್ದು ಇವುಗಳನ್ನು ಒಟ್ಟಾರೆ ಕೋಶೀಯ ನೀತಿ ಎಂದು ಕರೆಯಲಾಗುತ್ತದೆ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh