ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಅಧ್ಯಾಯ – 2 ಭಾರತದ ಆರ್ಥಿಕತೆ ನೋಟ್ಸ್ ಪ್ರಶ್ನೋತ್ತರಗಳು, 1st Puc Economics Chapter 2 Notes Question Answer Pdf in Kannada Medium Kseeb Solutions For Class 11 Economics Chapter 2 Notes in Kannada 1st Puc Economic 2nd Chapter Notes First Puc Economic 2nd Lesson Notes Pdf Download 1st PUC Economics Question Bank Chapter 2 Indian Economy 1950-1990 in Kannada
1st Puc Bharatada Arthikate Notes in Kannada
1. ಯೋಜನೆಯನ್ನು ವ್ಯಾಖ್ಯಾನಿಸಿ.
ಒಂದು ಯೋಜನೆಯು ರಾಷ್ಟ್ರದ ಸಂಪನ್ಮೂಲಗಳನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ಹೇಳುತ್ತದೆ. ಅದು ಒಂದು ನಿರ್ದಿಷ್ಟ ಸಮಯದೊಳಗೆ ಸಾಧಿಸಬೇಕಾದ ಕೆಲವು ಸಾಮಾನ್ಯ ಗುರಿಗಳು, ಹಾಗೆಯೇ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರಲೇಬೇಕು. ಭಾರತದಲ್ಲಿ ಯೋಜನೆಗಳು ಐದು ವರ್ಷಗಳ ಕಾಲಾವಧಿ ಹೊಂದಿವೆ ಮತ್ತು ಅವುಗಳನ್ನು ‘ಪಂಚವಾರ್ಷಿಕ ಯೋಜನೆಗಳು’ ಎನ್ನುತ್ತೇವೆ. ನಮ್ಮ ಯೋಜನೆಯ ಕಡತಗಳು, ಐದು ವರ್ಷಗಳ ಒಂದು ಯೋಜನೆಯಲ್ಲಿ ಸಾಧಿಸಬೇಕಿರುವ ನಿರ್ದಿಷ್ಟ ಉದ್ದೇಶಗಳನ್ನಷ್ಟೇ ಹೊಂದಿರದೇ, ಮುಂದಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಏನನ್ನು ಸಾಧಿಸಬೇಕು? ಎಂಬುದನ್ನು ಒಳಗೊಂಡಿದೆ. ಈ ದೀರ್ಘಾವಧಿ ಯೋಜನೆಯನ್ನು “ದೂರದೃಷ್ಟಿ ಯೋಜನೆ” ಎನ್ನಲಾಗುತ್ತದೆ.
2.ಭಾರತ ಏಕೆ ಯೋಜನಾ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿತು?
ಏಕೆಂದರೆ, ಮಿತವಾದ ಸಂಪನ್ಮೂಲಗಳಿಂದಾಗಿ ಪ್ರತಿಯೊಂದು ಯೋಜನೆಯಲ್ಲಿ ಯಾವ ಗುರಿಗಳಿಗೆ ಪ್ರಥಮ ಆಧ್ಯತೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳಲು ಯೋಜನಾ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿತು.
3. ಯೋಜನೆಗಳನ್ನು ಗುರಿಗಳನ್ನು ಏಕೆ ಹೊಂದಿರಬೇಕು?
ಯೋಜನೆಗಳನ್ನು ಗುರಿಗಳನ್ನು ಹೊಂದಿರಬೇಕು. ಏಕೆಂದರೆ ಮಿತವಾದ ಸಂಪನ್ಮೂಲಗಳಿಂದಾಗಿ ಪ್ರತಿಯೊಂದು ಯೋಜನೆಯಲ್ಲಿ ಯಾವ ಗುರಿಗಳಿಗೆ ಆದ್ಯತೆ ನೀಡಬೇಕೆಂದು ತಿಳಿದುಕೊಳ್ಳುವುದಾಗಿದೆ.
4. ಅಧಿಕ ಇಳುವರಿ ಬಿತ್ತನೆ ಬೀಜಗಳು (INDIGO) ಎಂದರೇನು?
ಬೀಜಗಳಿಗೆ ಬದಲಾಗಿ ಹೊಸ ತಳಿ ಬಿತ್ತನೆ ಬೀಜಗಳನ್ನು ಬಳಸುವುದರಿಂದ ಉತ್ಪನ್ನವನ್ನು ಹೆಚ್ಚಿಸಬಹುದು ಎಂದರ್ಥ. ಈ ಜೀಜಗಳನ್ನು ಉಪಯೋಗಿಸುವಾದ ಸರಿಯಾದ ಮಟ್ಟದಲ್ಲಿ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಹಾಕುವುದು ಮತ್ತು ನೀರಿನ ಪೂರೈಕೆ ಇರುವಂತೆ ನೋಡಿಕೊಳ್ಳುವುದು.
5. ಮಾರಾಟ ಮಾಡಲ್ಪಟ್ಟ ಮಿಗುತೆ ಎಂದರೇನು?
ರೈತರಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲ್ಪಟ್ಟ ಕೃಷಿ ಉತ್ಪನ್ನದ ಭಾಗವನ್ನು ಮಾರಾಟ ಮಾಡಲ್ಪಟ್ಟ ಮಿಗುತೆ ಎನ್ನುವರು.
6. ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡಿರುವ ಭೂ ಸುಧಾರಣೆ ಅಗತ್ಯ ಮತ್ತು ವಿಧಗಳನ್ನು ವಿವರಿಸಿ.
ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡಿರುವ ಭೂಸುಧಾರಣೆ ಅಗತ್ಯಗಳೆಂದರೆ :
- ಭೂ ಹಿಡುವಳಿಗಳ ಒಡೆತನದ ಬದಲಾವಣೆಗಳಿಗೆ ಸಂಬಂಧಿಸಿದ್ದಾಗಿದೆ.
- ಮಧ್ಯವರ್ತಿಗಳನ್ನು ರದ್ದುಪಡಿಸಿ ಮತ್ತು ಉಳುವವನನ್ನೇ ಭೂ ಒಡೆಯನ್ನಾಗಿ ಮಾಡಲು ಕ್ರಮ ತೆಗೆದುಕೊಳ್ಳಲಾಯಿತು.
- ಭೂ ಒಡೆತನವು ವ್ಯವಸಾಯದಲ್ಲಿ ಸುಧಾರಣೆ ತರುವಂತಹ ಹೂಡಿಕೆ ಮಾಡಲು ಸಾಗುವಳಿದಾರರನ್ನು ಉತ್ತೇಜಿಸುತ್ತದೆ.
- ಭೂ ಒಡೆತನದ ಗರಿಷ್ಟ ಮಿತಿಯು ಕೃಷಿ ವಲಯದಲ್ಲಿ ಸಮಾನತೆ ತುರವ ಮತ್ತೊಂದು ನೀತಿಯಾಗಿತ್ತು.
ಭೂ ಸುಧಾರಣೆಯ ವಿಧಗಳೆಂದರೆ :
1. ಹಿಡುವಳಿ ಸುಧಾರಣೆ : ಸುಧಾರಣೆಗಳೆಂದರೆ ಎ. ಗೇಣಿ ನಿಬಂಧಗಳು, ಬಿ. ಭದ್ರತೆಯ ಅವಧಿ ಮತ್ತು ಸಿ. ಭೂ ಸಾಗುವಳಿದಾರರಿಗೆ ಭೂಮಿಯ ಮಾಲೀಕತ್ವ
2. ಕೃಷಿಯ ಮರುಸಂಘಟನೆ :- ಇದು ಭೂಮಿಯ ಮರು ವಿತರಣೆ ಭೂ ಒಡೆತನ ಮತ್ತು ಸಹಕಾರಿ ಕೃಷಿಯನ್ನು ಒಳಗೊಂಡಿದೆ.
7. ಹಸಿರು ಕ್ರಾಂತಿ ಎಂದರೇನು? ಏಕೆ ಇದನ್ನು ಅಳವಡಿಸಿಕೊಳ್ಳಲಾಯಿತು ಮತ್ತು ರೈತರಿಗೆ ಇದು ಹೇಗೆ ಲಾಭದಾಯಕವಾಗಿದೆ? ಸಂಕ್ಷಿಪ್ತವಾಗಿ ವಿವರಿಸಿ
ಆಹಾರ ಧಾನ್ಯಗಳ ಉತ್ಪಾದನೆಯಲ್ಲಾದ ಗಮನಾರ್ಹ ಹೆಚ್ಚಳವೇ ಹಸಿರುಕ್ರಾಂತಿ,
ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶದಲ್ಲಿನ ಶೇ. 75 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದರು. ಕೃಷಿ ವಲಯದ ಉತ್ಪಾದಕತೆ ತುಂಬಾ ಕಡಿಮೆಯಿತ್ತು. ಏಕೆಂದರೆ ಹಳೆಯ ತಂತ್ರಜ್ಞಾನದ ಬಳಕೆ ಮತ್ತು ಹೆಚ್ಚಿನ ರೈತರಿಗೆ ಅವಶ್ಯವಾಗಿದ್ದ ಮೂಲಭೂತ ಸೌಕರ್ಯಗಳ ಕೊರತೆಯಿತ್ತು. ಭಾರತದ ಕೃಷಿಯು ಮುಖ್ಯವಾಗಿ ಮಾನ್ಸೂನ್ ಮಾರುತಗಳನ್ನು ಅವಲಂಬಿಸಿದೆ. ಮಾನ್ಸೂನ್ ಮಳೆ ಕೊರತೆಯಾದಾಗ ನೀರಾವರಿ ಸೌಲಭ್ಯಗಳನ್ನು ಪಡೆದ ಕೆಲವರನ್ನು ಹೊರತುಪಡಿಸಿದರೆ ಹೆಚ್ಚಿನ ರೈತರು ತೊಂದರೆಗೆ ಒಳಗಾಗುತ್ತಿದ್ದರು.
ಹಸಿರುಕ್ರಾಂತಿಯ ತಂತ್ರಜ್ಞಾನದ ಬಳಕೆ ವಿಸ್ತಾರಗೊಂಡಂತೆ ಭಾರತ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು. ಇದು ರೈತರ ಜೀವನ ಮಟ್ಟವನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಯಿತು. ರೈತರು ಹಸಿರು ಕ್ರಾಂತಿಯ ಸಮಯದಲ್ಲಿ ಉತ್ಪಾದಿಸಿದ ಹೆಚ್ಚಿನ ಪ್ರಮಾಣದ ಭತ್ತ ಮತ್ತು ಗೋಧಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು.
8. ಯೋಜನೆಗಳ ಉದ್ದೇಶವಾಗಿ ‘ಸಮಾನತೆಯೊಂದಿಗೆ ಬೆಳವಣಿಗೆ’ಯನ್ನು ವಿವರಿಸಿ.
ಆರ್ಥಿಕ ಬೆಳವಣಿಗೆ ಎಂದರೆ :- ಒಟ್ಟು ದೇಶೀಯ ಉತ್ಪನ್ನ GDPವು ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯವಾಗಿದೆ.
ಪ್ರತಿಯೊಬ್ಬ ಭಾರತೀಯ ಅವನ ಮತ್ತು ಅವಳ ಮೂಲಭೂಲ ಅವಶ್ಯಕತೆಗಳಾದ ಆಹಾರ, ಉತ್ತಮ ವಸತಿ, ಶಿಕ್ಷಣ, ಆರೋಗ್ಯ ಸೌಕರ್ಯ ಹೊಂದಲು ಸಮರ್ಥರಾಗಬೇಕು ಮತ್ತು ಸಂಪತ್ತಿನ ಅಸಮಾನ ಹಂಚಿಕೆಯು ಕಡಿಮೆಯಾಗಬೇಕು. ಆದ್ದರಿಂದ “ಸಮಾನತೆಯೊಂದಿಗೆ ಬೆಳವಣಿಗೆ” ಅವಕಾಶಗಳು ಪ್ರತಿಯೊಬ್ಬರನ್ನು ತಲುಪುವುದಾಗಿದೆ.
9. ಯೋಜನೆಗಳ ಉದ್ದೇಶವಾಗಿ ಆಧುನೀಕರಣವು ಉದ್ಯೋಗ ಸೃಷ್ಟಿಸುವಲ್ಲಿ ತದ್ವಿರುದ್ಧ ಪರಿಣಾಮ ಬೀರಿದೆಯೆ? ವಿವರಿಸಿ,
ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಹೆಚ್ಚಿಸಲು ಉತ್ಪಾದಕರು ಹೊಸ ತಂತ್ರಜ್ಞಾನದ ಅಳವಡಿಕೆಯನ್ನು ಆಧುನೀಕರಣ ಎನ್ನುವರು. ಆಧುನೀಕರಣ ಕೇವಲ ಹೊಸ ತಂತ್ರಜ್ಞಾನದ ಬಳಕೆಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ದೃಷ್ಟಿಕೋನದ ಬದಲಾವಣೆಗೂ ಅನ್ವಯಿಸುತ್ತದೆ.
ಸಾಂಪ್ರದಾಯಿಕ ಸಮಾಜದಲ್ಲಿ ಪುರುಷರು ಕೆಲಸಗಳಲ್ಲಿ ತೊಡಗಿದ್ದರೆ, ಮಹಿಳೆಯ ಕಾರ್ಯ ಕ್ಷೇತ್ರ ಮನೆಗೆ ಸೀಮಿತವಾಗಿರುತ್ತದೆ. ಆಧುನಿಕ ಸಮಾಜವು ಬ್ಯಾಂಕ್, ಕೈಗಾರಿಕೆ, ಶಾಲೆ ಮುಂತಾದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಪ್ರತಿಭೆಯನ್ನು ಬಳಸಿಕೊಳ್ಳುತ್ತದೆ. ಮತ್ತು ಇಂತಹ ಸಮಾಜವು ಸರ್ವೇ ಸಾಮಾನ್ಯವಾಗಿ ಸಮೃದ್ಧಿ ಸಮೃದ್ಧವಾಗಿರುತ್ತದೆ.
10. ಭಾರತದಾದ್ಯಂತ ಅಭಿವೃದ್ಧಿ ಶೀಲ ರಾಷ್ಟ್ರ ಸ್ವಾವಲಂಬನೆಯನ್ನು ಯೋಜನೆಗಳ ಉದ್ದೇಶವಾಗಿ ಅನುಸರಿಸುವುದು ಏಕೆ ಅವಶ್ಯಕವಾಗಿತ್ತು?
ಒಂದು ದೇಶ ತನ್ನದೇ ಸಂಪನ್ಮೂಲಗಳನ್ನು ಬಳಸಿಕೊಂಡು ಅಥವಾ ಇತರ ದೇಶಗಳಿಂದ ಸಂಪನ್ಮೂಲಗಳನ್ನು ಆಮದು ಮಾಡಿಕೊಂಡು ಆರ್ಥಿಕ ಬೆಳವಣಿಗೆ ಮತ್ತು ಆಧುನೀಕರಣವನ್ನು ಉತ್ತೇಜಿಸಬಹುದು. ಮೊದಲ ಏಳು ಪಂಚವಾರ್ಷಿಕ ಯೋಜನೆಗಳು ಸ್ವಾವಲಂಬನೆಗೆ ಮಹತ್ವ ನೀಡಿದವು.
11. ಒಂದು ಅರ್ಥವ್ಯವಸ್ಥೆಯ ವಲಯವಾರು ಸಂಯೋಜನೆ ಎಂದರೇನು? ಒಂದು ಅರ್ಥವ್ಯವಸ್ಥೆಯಲ್ಲಿ ಸೇವಾ ವಲಯವು ಜಿಡಿಪಿಗೆ ಗರಿಷ್ಠ ಕೊಡುಗೆ ನೀಡಲೇಬೇಕಾದ ಅವಶ್ಯಕತೆ ಇದೆಯೇ ಚರ್ಚಿಸಿ.
ಒಂದು ದೇಶದ ಜಿ.ಡಿ.ಪಿ.ಯು ಆರ್ಥಿಕತೆಯ ವಿವಿಧ ವಲಯಗಳಿಂದ ಅಂದರೆ ಕೃಷಿ ವಲಯ, ಕೈಗಾರಿಕಾ ವಲಯ ಮತ್ತು ಸೇವಾ ವಲಯದ ಉತ್ಪತ್ತಿಯಾಗುತ್ತದೆ. ಪ್ರತಿಯೊಂದು ವಲಯದ ಕೊಡುಗೆಯು ಅರ್ಥ ವ್ಯವಸ್ಥೆಯ ‘ರಚನಾತ್ಮಕ ಸಂಯೋಜನೆ’ ಎನ್ನುವರು. ಹೌದು, ಒಂದು ಅರ್ಥವ್ಯವಸ್ಥೆಯಲ್ಲಿ ಸೇವಾ ವಲಯವು ಜಿಡಿಪಿಗೆ ಗರಿಷ್ಠ ಕೊಡುಗೆ ನೀಡಬೇಕಾಗಿರುವ ಅವಶ್ಯಕತೆ ಇದೆ.
ಒಂದು ದೇಶ ಅಭಿವೃದ್ಧಿಗೊಂಡಂತೆ ರಚನಾತ್ಮಕ ಬದಲಾವಣೆಗಳು ಆಗುತ್ತವೆ. ಅಭಿವೃದ್ಧಿಯಾದಂತೆ ಕೈಗಾರಿಕಾ ವಲಯದ ಪಾಲು ಹೆಚ್ಚಾಗುತ್ತದೆ. ಕಋಷಿ ವಲಯದ ಪಾಲು ಕಡಿಮೆಯಾಗುತ್ತದೆ. ಉನ್ನತ ಮಟ್ಟದ ಅಭಿವೃದ್ಧಿಯಾದಾಗ, ಸೇವಾ ವಲಯವು ಜಿಡಿಪಿಗೆ ಉಳಿದೆರಡು ವಲಯಗಳಿಗಿಂತಲೂ ಹೆಚ್ಚಿನ ಕೊಡುಗೆ ನೀಡುತ್ತದೆ. ಭಾರತದಲ್ಲಿ ಕೃಷಿ ಕ್ಷೇತ್ರದ ಪಾಲು ಜಿಡಿಪಿಗೆ ಶೇ. 50ಕ್ಕಿಂತ ಹೆಚ್ಚಾಗಿತ್ತು. ಒಂದು ಬಡರಾಷ್ಟ್ರದಲ್ಲಿ ನಿರೀಕ್ಷಿಸುವಂತೆ. ಆದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇರುವಂತೆ, 1990 ರಲ್ಲಿ 18 ಕೈಗಾರಿಕೆ ಅಥವಾ ಕೃಷಿಗಿಂತಲೂ ಸೇವಾ ವಲಯದ ಪಾಲು ಶೇ. 40.59 ಆಗಿರುತ್ತದೆ. ಈ ಚಮತ್ಕಾರದ ಬೆಳವಣಿಗೆಯಿಂದ ಸೇವಾವಲಯ 1991 ರ ನಂತರ ತನ್ನ ಬೆಳವಣಿಗೆಯ ವೇಗದ ತೀವ್ರತೆಯನ್ನು ಹೆಚ್ಚಿಸಿಕೊಂಡಿದೆ.
1st Puc Economics Chapter 2 Notes in Kannada
12. ಯೋಜನಾ ಅವಧಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾರ್ವಜನಿಕ ವಲಯಕ್ಕೆ ಮುಖ್ಯ ಪಾತ್ರ ನೀಡಲಾಯಿತು? ಏಕೆ?
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಆರ್ಥಿಕತೆ ಅಸಮತೋಲನದಲ್ಲಿತ್ತು. ಸಮಾಜಕ್ಕೆ ಆಹಾರ, ವಸತಿ ಮತ್ತು ಬಟ್ಟೆಯನ್ನು ಪೂರೈಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿತ್ತು. ಅದಲ್ಲದೆ, ಕೈಗಾರಿಕಾ ಬೆಳವಣಿಗೆಯು ಅದರ ಯೋಜನೆಯಾಗಿತ್ತು. ಇವೆರಡನ್ನೂ ಒಟ್ಟಿಗೆ ಸಾಧಿಸಬೇಕೆಂದರೆ, ಸಾರ್ವಜನಿಕ ವಲಯದಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿ, ರೈಲುಗಳು, ರಕ್ಷಣೆ ಮತ್ತು ಟೆಲಿ ಸಂಪರ್ಕವನ್ನು ಅಭಿವೃದ್ಧಿ ಪಡಿಸಬೇಕಾಗುತ್ತದೆ. ಈ ಎಲ್ಲಾ ಉದ್ದೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನಾ ಅವಧಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾರ್ವಜನಿಕ ವಲಯವು ಈ ಕೆಳಗಿನ ಕಾರಣಗಳು ಪ್ರಮುಖವಾಗಿದೆ.
- ಇದು ಸಮತೋಲನ ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.
- ಇದು ಯಾವಾಗಲೂ ಏಕಸ್ವಾಮ್ಯ ಮಾರುಕಟ್ಟಯ ಬೆಳವಣಿಗೆಯ ಮೇಲೆ ಗಮನಹರಿಸುತ್ತದೆ.
- ಇದು ಉದ್ಯೋಗದ ಪ್ರಮುಖ ಮೂಲವಾಗಿದೆ.
- ದೇಶದ ಭದ್ರತೆಗೆ ಪ್ರಮುಖ ಕಾರಣವಾಗಿದೆ.
- ಇದು ಪ್ರಬಲ ಮೂಲಸೌಕರ್ಯದ ಆರ್ಥಿಕತೆಗೆ ಆಧಾರವಾಗಿದೆ.
- ಇದು ಸಾಮಾಜಿಕ – ಆರ್ಥಿಕತೆಗೆ ಸೃಷ್ಟಿಯಾಗಿದೆ.
- ಇದು ಬಡವರ ಜೀವನಮಟ್ಟದ ಸುಧಾರಣೆಗೆ ಸಹಾಕಾರಿಯಾಗಿದೆ.
13. ಹಸಿರು ಕ್ರಾಂತಿಯಿಂದ ಸರ್ಕಾರವು ಆಹಾರ ಧಾನ್ಯಗಳನ್ನು ಸಾಕಷ್ಟು ಉತ್ಪಾದಿಸಿ ದಾಸ್ತಾನು ಮಾಡಿ ಕೊರತೆಯಾದ ಸಂದರ್ಭದಲ್ಲಿ ಬಳಕೆ ಮಾಡಲು ಶಕ್ತವಾಗಿದೆ. ಈ ಹೇಳಿಕೆಯನ್ನು ವಿವರಿಸಿ.
ಹಸಿರು ಕ್ರಾಂತಿಯಿಂದ ಸರ್ಕಾರವು ಆಹಾರ ಧಾನ್ಯಗಳನ್ನು ಸಾಕಷ್ಟು ಉತ್ಪಾದಿಸಿ ದಾಸ್ತಾನು ಮಾಡಿ ಕೊರತೆಯಾದ ಸಂದರ್ಭದಲ್ಲಿ ಬಳಕೆ ಮಾಡಲು ಶಕ್ತವಾಗಿದೆ. ಈ ಹೇಳಿಕೆ ಸರಿಯಾಗಿದೆ. ಕಾರಣವೇನೆಂದರೆ ಆಹಾರ ಧಾನ್ಯಗಳನ್ನು ಶೇಖರಿಸಿ ತುರ್ತು ಕೈಗಾರಿಕೆ ಅಥವಾ ಕೃಷಿಗಿಂತಲೂ ಸೇವಾ ವಲಯದ ಪಾಲು ಶೇ. 40.59 ಆಗಿರುತ್ತದೆ. ಈ ಚಮತ್ಕಾರದ ಬೆಳವಣಿಗೆಯಿಂದ ಸೇವಾವಲಯ 1991 ರ ನಂತರ ತನ್ನ ಬೆಳವಣಿಗೆಯ ವೇಗದ ತೀವ್ರತೆಯನ್ನು ಹೆಚ್ಚಿಸಿಕೊಂಡಿದೆ.
14. ಯೋಜನಾ ಅವಧಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾರ್ವಜನಿಕ ವಲಯಕ್ಕೆ ಮುಖ್ಯ ಪಾತ್ರ ನೀಡಲಾಯಿತು? ಏಕೆ?
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಆರ್ಥಿಕತೆ ಅಸಮತೋಲನದಲ್ಲಿತ್ತು. ಸಮಾಜಕ್ಕೆ ಆಹಾರ, ವಸತಿ ಮತ್ತು ಬಟ್ಟೆಯನ್ನು ಪೂರೈಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿತ್ತು. ಅದಲ್ಲದೆ, ಕೈಗಾರಿಕಾ ಬೆಳವಣಿಗೆಯು ಅದರ ಯೋಜನೆಯಾಗಿತ್ತು. ಇವೆರಡನ್ನೂ ಒಟ್ಟಿಗೆ ಸಾಧಿಸಬೇಕೆಂದರೆ, ಸಾರ್ವಜನಿಕ ವಲಯದಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿ, ರೈಲುಗಳು, ರಕ್ಷಣೆ ಮತ್ತು ಟೆಲಿ ಸಂಪರ್ಕವನ್ನು ಅಭಿವೃದ್ಧಿ ಪಡಿಸಬೇಕಾಗುತ್ತದೆ. ಈ ಎಲ್ಲಾ ಉದ್ದೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನಾ ಅವಧಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾರ್ವಜನಿಕ ವಲಯವು ಈ ಕೆಳಗಿನ ಕಾರಣಗಳು ಪ್ರಮುಖವಾಗಿದೆ.
- ಇದು ಸಮತೋಲನ ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.
- ಇದು ಯಾವಾಗಲೂ ಏಕಸ್ವಾಮ್ಯ ಮಾರುಕಟ್ಟಯ ಬೆಳವಣಿಗೆಯ ಮೇಲೆ ಗಮನಹರಿಸುತ್ತದೆ.
- ಇದು ಉದ್ಯೋಗದ ಪ್ರಮುಖ ಮೂಲವಾಗಿದೆ.
- ದೇಶದ ಭದ್ರತೆಗೆ ಪ್ರಮುಖ ಕಾರಣವಾಗಿದೆ.
- ಇದು ಪ್ರಬಲ ಮೂಲಸೌಕರ್ಯದ ಆರ್ಥಿಕತೆಗೆ ಆಧಾರವಾಗಿದೆ.
- ಇದು ಸಾಮಾಜಿಕ – ಆರ್ಥಿಕತೆಗೆ ಸೃಷ್ಟಿಯಾಗಿದೆ.
- ಇದು ಬಡವರ ಜೀವನಮಟ್ಟದ ಸುಧಾರಣೆಗೆ ಸಹಾಕಾರಿಯಾಗಿದೆ.
15. ಹಸಿರು ಕ್ರಾಂತಿಯಿಂದ ಸರ್ಕಾರವು ಆಹಾರ ಧಾನ್ಯಗಳನ್ನು ಸಾಕಷ್ಟು ಉತ್ಪಾದಿಸಿ ದಾಸ್ತಾನು ಮಾಡಿ ಕೊರತೆಯಾದ ಸಂದರ್ಭದಲ್ಲಿ ಬಳಕೆ ಮಾಡಲು ಶಕ್ತವಾಗಿದೆ. ಈ ಹೇಳಿಕೆಯನ್ನು ವಿವರಿಸಿ.
ಹಸಿರು ಕ್ರಾಂತಿಯಿಂದ ಸರ್ಕಾರವು ಆಹಾರ ಧಾನ್ಯಗಳನ್ನು ಸಾಕಷ್ಟು ಉತ್ಪಾದಿಸಿ ದಾಸ್ತಾನು ಮಾಡಿ ಕೊರತೆಯಾದ ಸಂದರ್ಭದಲ್ಲಿ ಬಳಕೆ ಮಾಡಲು ಶಕ್ತವಾಗಿದೆ. ಈ ಹೇಳಿಕೆ ಸರಿಯಾಗಿದೆ. ಕಾರಣವೇನೆಂದರೆ ಆಹಾರ ಧಾನ್ಯಗಳನ್ನು ಶೇಖರಿಸಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಸಿಕೊಳ್ಳುವುದಾಗಿ “ಹಸಿರು ಕ್ರಾಂತಿಯ” ಯಶಸ್ವಿ ಅಳವಡಿಕೆಯ ಫಲಿತಾಂಶವಾಗಿದೆ.
ಹಸಿರುಕ್ರಾಂತಿಯು ಕೃಷಿ ಆಹಾರ ಧಾನ್ಯಗಳ ಉತ್ಪಾದನೆ ಮಾಡುವುದಲ್ಲದೆ ಮತ್ತು ಕೃಷಿ ಉತ್ಪನ್ನದ ಭಾಗವನ್ನು ಮಾರುಕಟ್ಟೆ ಮಾಡಲ್ಪಟ್ಟ ಅಧಿಕ್ಯ ಎನ್ನುವರು. ಸರ್ಕಾರವು ನೇರವಾಗಿ ರೈತರಿಂದ ಮತ್ತು ಮಾರುಕಟ್ಟೆಯಿಂದ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲು ಶಕ್ತವಾಯಿತು. ನಾವು ಇನ್ನು ಮುಂದೆ ಆಹಾರ ಧಾನ್ಯಗಳ ಪೂರೈಕೆಗೆ ಅಮೇರಿಕಾ ಮತ್ತು ಇತರೆ ರಾಷ್ಟ್ರಗಳ ಮೇಲೆ ಅವಲಂಬಿಸಬೇಕಾಗಿಲ್ಲ. ಆಹಾರ ಧಾನ್ಯಗಳ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾಲಂಬಿಯಾಗಿರುವುದರೊಂದಿಗೆ ನಮ್ಮ ಅನುಭೋಗಕ್ಕೆ ಆಹಾರ ಧಾನ್ಯಗಳ ದಾಸ್ತಾನು ಮಾಡುವುದರ ಜೊತೆಗೆ ಅಭಿವೃದ್ಧಿ ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದೆ.
16. ಸಹಾಯಧನಗಳು ರೈತರನ್ನು ಹೊಸ ತಂತ್ರಜ್ಞಾನದ ಬಳಕೆಗೆ ಪ್ರೋತ್ಸಾಹ ನೀಡಿವೆ. ಆದರೆ ಅವುಗಳು ಸರ್ಕಾರದ ಹಣಕಾಸಿನ ಮೇಲೆ ದೊಡ್ಡ ಹೊರೆಯಾಗಿವೆ. ಈ ಹೇಳಿಕೆಯೊಂದಿಗೆ ಸಹಾಯಧನಗಳ ಉಪಯೋಗಗಳನ್ನು ಚರ್ಚಿಸಿ.
ಕೃಷಿಯಲ್ಲಿ ರೈತರು ಹೊಸ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಉತ್ತೇಜಿಸುವುದಕ್ಕೆ ನೀಡುವ ಹಣವನ್ನು ಸಹಾಯ ಧನ ಎನ್ನುವರು.
ಉದಾ : ರಸಗೊಬ್ಬರಕ್ಕೆ ನೀಡುವ ಸಹಾಯಧನ, ಅಧಿಕ ಇಳುವರಿ ಬೀಜಗಳಿಗೆ ನೀಡುವ ಸಹಾಯಧನ.
ಸಹಾಯಧನಗಳ ವಿರೋಧ ವಾದಗಳೆಂದರೆ :
- ಕೃಷಿಯಲ್ಲಿ ರೈತರು ಹೊಸ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಉತ್ತೇಜಿಸುವುದಕ್ಕಾಗಿ ಸಹಾಯಧನ ಅಗತ್ಯವಾಗಿದೆ. ಆದರೆ ಈಗ ಹೊಸ ತಂತ್ರಜ್ಞಾನವನ್ನು ಎಲ್ಲೆಲ್ಲಿಯೂ ಅಳವಡಿಸಿಕೊಂಡಿರುವುದರಿಂದ ಸಹಾಯಧನವನ್ನು ನಿಲ್ಲಿಸಬಹುದಾಗಿದೆ.
- ರಸಗೊಬ್ಬರಕ್ಕೆ ನೀಡುವ ಸಹಾಯ ಧನದಿಂದ ರಸಗೊಬ್ಬರದ ಕೈಗಾರಿಕೆಗಳು ಗಣನೀಯ ಪ್ರಮಾಣದ ಲಾಭ ಪಡೆಯುತ್ತಿವೆ. ಆದ್ದರಿಂದ ಉದ್ದೇಶಿತ ವರ್ಗಕ್ಕೆ ಲಾಭದಾಯಕವಲ್ಲದ ಸರ್ಕಾರದ ಹಣಕಾಸಿನ ಹೊರೆಯನ್ನು ಹೆಚ್ಚಿಸುವಂತಹ ರಸಗೊಬ್ಬರದ ಮೇಲಿನ ಸಹಾಯಧನವನ್ನು ನಿಲ್ಲಿಸಬೇಕಾಗಿದೆ.
- ಶ್ರೀಮಂತ ರೈತರು ಸಹಾಯಧನದ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ.
- ಸಹಾಯ ಧನವು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿದೆ.
- ಮಿತಿಯ ನಂತರ, ಸಹಾಯ ಧನವು ವ್ಯರ್ಥ ಸಂಪನ್ಮೂಲಗಳ ಉಪಯೋಗಕ್ಕೆ ಉತ್ತೇಜಕಗಳನ್ನು ನೀಡುತ್ತವೆ.
17. ಹಸಿರು ಕ್ರಾಂತಿಯ ಅನುಷ್ಟಾನದ ಹೊರತಾಗಿಯೂ 1990 ರ ವರೆಗೆ ನಮ್ಮ ದೇಶದ ಜನಸಂಖ್ಯೆಯ ಶೇ. 65 ರಷ್ಟು ಜನರು ಕೃಷಿ ವಲಯದ ಮೇಲೆ ಅವಲಂಬಿತ ರಾಗಿದ್ದಾರೆ ಏಕೆ?
ಆರ್ಥಿಕತೆ ಬೆಳೆದಂತೆಲ್ಲಾ, ಕೃಷಿ ವಲಯದಿಂದ ಕೈಗಾರಿಕಾ ವಲಯ ಮತ್ತು ಸೇವಾ ವಲಯಕ್ಕೆ ರಚನಾತ್ಮಕ ಸಂಯೋಜನೆಗೆ ಬದಲಾಗುತ್ತದೆ. ಹಸಿರು ಕ್ರಾಂತಿಯನ್ನು ಅಳವಡಿಸಿಕೊಂಡ ನಂತರ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಅದ್ಭುತವಾಗಿ ಏರಿಕೆಯಾಯಿತು. ಆದರೆ ಅದು ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮತ್ತು ಗೋಧಿ ಉತ್ಪಾದನೆಗಷ್ಟೇ ಮೀಸಲಾಯಿತು. ಕೃಷಿಯಲ್ಲಿ ವಿಶೇಷವಾಗಿ ಭತ್ತ ಮತ್ತು ಗೋಧಿಯ ಉತ್ಪಾದನೆಯಲ್ಲಿ ಅಧಿಕ ಇಳುವರಿ ಬೀಜಗಳ ಬಳಕೆಯಿಂದ ಸಾಧ್ಯವಾಯಿತು. ಆದರೆ ಉಳಿದ ಎಲ್ಲಾ ರಾಜ್ಯಗಳ ರೈತರುಗಳಿಗೆ ಪ್ರಯೋಜನಕಾರಿಯಾಗಲಿಲ್ಲ.
ಆದ್ದರಿಂದ, ರೈತರು ಇತರೆ ಕ್ಷೇತ್ರಗಳಾದ ಕೈಗಾರಿಕಾ ವಲಯ ಸೇವಾ ವಲಯದಲ್ಲಿ ಕೆಲಸ ಹುಡುಕಲು ಪ್ರಾರಂಭಿಸಿದರು. ಕಾರಣಾಂತರಗಳಿಂದ 1991 ರವರೆಗೆ ಈ ಎರಡು ವಲಯಗಳು ಬೃಹತ್ ಸಮುದಾಯವನ್ನು ಆಕ್ರಮಿಸಿಕೊಳ್ಳುವುದರಲ್ಲಿ ವಿಫಲವಾದವು. ಆದ್ದರಿಂದ, ಶೇ. 65 ರಷ್ಟು ಜನರು ಕೃಷಿ ವಲಯದ ಮೇಲೆ ಅವಲ೦ಬಿತರಾಗಲೂ ಕಾರಣವಾಯಿತು. ಜಿಡಿಪಿಗೆ ಕೃಷಿಯ ಕೊಡುಗೆ ಕಡಿಮೆಯಾದರೂ 1990ರ ವರೆಗೆ ಕೃಷಿ ಮೇಲಿನ ಅವಲಂಬಿತರ ಸಂಖ್ಯೆ ಏರಿಕೆಯಾಗುತ್ತಾ ಹೋಯಿತು.
18. ಕೈಗಾರಿಕೆಗಳಿಗೆ ಸಾರ್ವಜನಿಕ ವಲಯ ತುಂಬಾ ಅವಶ್ಯಕವಿದ್ದಾಗಲೂ ಕೆಲವು ಸಾರ್ವಜನಿಕ ವಲಯದ ಉದ್ಯಮಗಳು ದೊಡ್ಡ ಪ್ರಮಾಣದ ನಷ್ಟ ಅನುಭವಿಸುತ್ತಿವೆ ಮತ್ತು ದೇಶದ ಸಂಪನ್ಮೂಲಗಳಿಗೆ ಹೊರೆಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಉಪಯೋಗಗಳ ಬಗ್ಗೆ ಚರ್ಚಿಸಿ.
ದೇಶದ ಮಿತವಾದ ಸಂಪನ್ಮೂಲಗಳನ್ನು ಬರಿದು ಮಾಡುತ್ತಿದ್ದರೂ ಸರ್ಕಾರಿ ಉದ್ದಿಮೆಗಳನ್ನು ಮುಚ್ಚುವುದು ಕಷ್ಟದಾಯಕವಾಗಿರುವುದರಿಂದ ಸಾರ್ವಜನಿಕ ವಲಯದ ಹಲವಾರು ಉದ್ಯಮಗಳು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಿದ್ದರೂ ಅವುಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.
- ಸಾರ್ವಜನಿಕ ಉದ್ಯಮಗಳು ಕೈಗಾರಿಕೆಗಳಿಗೆ ಗಟ್ಟಿ ಆಧಾರವನ್ನು ಸೃಷ್ಟಿಸುತ್ತವೆ.
- ಆರ್ಥಿಕ ಶಕ್ತಿಗಳು ಕೇಂದ್ರೀಕೃತವಾಗಿರುವುದನ್ನು ನಿರ್ಬಂಧಿಸುತ್ತದೆ.
- ಹಿಂದುಗಳಿ ಪ್ರದೇಶಗಳ ಅಭಿವೃದ್ಧಿಗೆ ಸಹಾಯಮಾಡುತ್ತದೆ.
- ಸಾರ್ವಜನಿಕ ವಲಯ ಉದ್ಯೋಗವನ್ನು ಒದಗಿಸುತ್ತದೆ.
- ಆಮದು ಉತ್ತೇಜಕವನ್ನು ಪ್ರತ್ಸಾಹಿಸುತ್ತದೆ.
- ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಬಯಸುತ್ತವೆ.
- ಸಾರ್ವಜನಿಕ ವಲಯವು ಆದಾಯ & ಸಂಪತ್ತಿನ ಸಮಾನ ಹಂಚಿಕೆಯನ್ನು ಉತ್ತೇಜಿಸುತ್ತದೆ.
- ಪ್ರಾದೇಶಿಕ ಅಸಮತೋಲನದ ಬೆಳವಣಿಗೆಯನ್ನು ತೊಲಗಿಸುವುದು.
19. ಆಮದು ಬದಲೀಕರಣವು ದೇಶೀಯ ಕೈಗಾರಿಕೆಯನ್ನು ಹೇಗೆ ರಕ್ಷಣೆ ಮಾಡಿದೆ. ವಿವರಿಸಿ.
ಆಮದು ಮಾಡಿಕೊಳ್ಳುವ ವಸ್ತುವನ್ನು ದೇಶದಲ್ಲಿಯೇ ಉತ್ಪಾದಿಸುವ ದೇಶದ ಆರ್ಥಿಕಾಭಿವೃದ್ಧಿಯ ಒಂದು ನೀತಿ. ಈ ನೀತಿಯು ಸ್ವಾವಲಂಬನೆ ಸಾಧಿಸಲು ಮತ್ತು ಸ್ವದೇಶಿಯರಿಗೆ ಉದ್ಯೋಗ ನೀಡಲು ದೇಶೀಯ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಅಭಿವೃದ್ಧಿಶೀಲ ದೇಶವಾದ ಭಾರತ ಆರ್ಥಿಕ ಅಭಿವೃದ್ಧಿಯ ಪಥದಲ್ಲಿ 2 ಪ್ರಮುಖ ಅಂಶಗಳನ್ನು ಹೊಂದಿದೆ. ಅವುಗಳೆಂದರೆ : ಎ. ರಫ್ತು ಉತ್ತೇಜನ ಬಿ. ಆಮದು ಬದಲೀಕರಣ
ಆಮದು ಬದಲೀಕರಣವು ದೇಶೀಯ ಕೈಗಾರಿಕೆ ಮತ್ತು ಸಣ್ಣ ದೇಶೀಯ ಉತ್ಪಾದಕರನ್ನು ಯಾವಾಗಲೂ ಸ್ವಾಗತಿಸುತ್ತದೆ. ಆಮದಿಗೆ ಬದಲೀ ಇಲ್ಲವಾದರೆ, ಕೆಲವೊಮ್ಮೆ ಉತ್ಪಾದನೆಯ ಬೆಲೆಯೂ ಹೆಚ್ಚಾಗುತ್ತದೆ.
20. ಐ.ಪಿ.ಆರ್. 1956 ರ ಪ್ರಕಾರ ಖಾಸಗಿ ವಲಯ ಏಕೆ ಮತ್ತು ಹೇಗೆ ನಿಯಂತ್ರಿಸಲ್ಪಟ್ಟಿದೆ?
1956ರ ಕೈಗಾರಿಕಾ ನೀತಿ ಗೊತ್ತುವಳಿಗಳ ಪ್ರಕಾರ ಖಾಸಗಿ ವಲಯ ನಿಯಂತ್ರಿಸಲ್ಪಟ್ಟಿದೆ ಏಕೆಂದರೆ :
- ಪ್ರಾದೇಶಿಕ ಸಮತೋಲನವನ್ನು ಸಾಧಿಸುವುದು.
- ಹಿಂದುಗಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು.
- ಐ.ಪಿ.ಆರ್. 1956ರ ಪ್ರಕಾರ ಖಾಸಗಿ ವಲಯ ನಿಯಂತ್ರಿಸಲ್ಪಟ್ಟಿದೆ. ಹೇಗೆಂದರೆ ಕೈಗಾರಿಕೆಗಳು ಉತ್ಪಾದನೆ ವಿಸ್ತರಿಸಲು ಪರವಾನಿಗಿ ಪಡೆಯಬೇಕಾಗಿತ್ತು.
21. ಯೋಜನಾ ಆಯೋಗದ ಅರ್ಥ ನೀಡಿ.
ಭಾರತ ಸರ್ಕಾರ ಸ್ಥಾಪಿಸಿದ ಸಂಸ್ಥೆ. ಇದು ದೇಶದಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಅಂದಾಜು ಮಾಡುವ, ಆದ್ಯತೆಗಳನ್ನು ನಿರ್ಧಾರ ಮಾಡುವ ಮತ್ತು ಕೊರತೆಯಲ್ಲಿರುವ ಸಂಪನ್ಮೂಲಗಳನ್ನು ವೃದ್ಧಿಗೊಳಿಸುವ ಮತ್ತು ರಾಷ್ಟ್ರದಲ್ಲಿನ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮತೋಲನವಾಗಿ ಬಳಸಿಕೊಳ್ಳಲು ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿವೆ.
22. ಪಂಚವಾರ್ಷಿಕ ಯೋಜನೆಗಳು ಎಂದರೇನು?
ಒಂದು ನಿರ್ದಿಷ್ಟ ಸಮಯದೊಳಗೆ ಸಾಧಿಸಬೇಕಾದ ಕೆಲವು ಸಾಮಾನ್ಯ ಗುರಿಗಳು, ಹಾಗೆಯೇ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರಲೇಬೇಕು. ಭಾರತದಲ್ಲಿ ಯೋಜನೆಗಳು ಐದು ವರ್ಷಗಳ ಕಾಲಾವಧಿ ಹೊಂದಿವೆ. ಮತ್ತು ಅವುಗಳನ್ನು ‘ಪಂಚವಾರ್ಷಿಕ ಯೋಜನೆಗಳು’ ಎನ್ನುತ್ತೇವೆ.
23. ಪಂಚವಾರ್ಷಿಕ ಯೋಜನೆಗಳ ಪ್ರಮುಖ ಗುರಿಗಳಾವುವು?
ಪಂಚವಾರ್ಷಿಕ ಯೋಜನೆಗಳ ಪ್ರಮುಖ ಗುರಿಗಳೆಂದರೆ :- ಬೆಳವಣಿಗೆ, ಆಧುನೀಕರಣ, ಸ್ವಾವಲಂಬನೆ ಮತ್ತು ಸಮಾನತೆಗಳಾಗಿವೆ.
24. ಆರ್ಥಿಕ ಬೆಳವಣಿಗೆ ಎಂದರೇನು?
ಆರ್ಥಿಕ ಬೆಳವಣಿಗೆಯು ದೇಶದೊಳಗೆ ಸರಕು ಮತ್ತು ಸೇವೆಗಳ ಉತ್ಪಾದನೆ ಮಾಡುವ ಸಾಮಥ್ಯವನ್ನು ಹೆಚ್ಚಿಸುವುದು ಎಂದರ್ಥ.
25. ಭಾರತದಲ್ಲಿ ಯಾರು ಯೋಜನಾ ಆಯೋಗದ ಮುಖ್ಯ ಅಧ್ಯಕ್ಷರಾಗಿರುತ್ತಾರೆ?
ಭಾರತದ ಪ್ರಧಾನಮಂತ್ರಿ ಯೋಜನಾ ಆಯೋಗದ ಮುಖ್ಯ ಅಧ್ಯಕ್ಷರಾಗಿರುತ್ತಾರೆ.
26. ಒಂದು ದೇಶದ ಜಿ.ಡಿ.ಪಿಯ ಆರ್ಥಿಕತೆಯ ವಿವಿಧ ವಲಯಗಳನ್ನು ತಿಳಿಸಿ.
ಕೃಷಿ ವಲಯ, ಕೈಗಾರಿಕಾ ವಲಯ ಮತ್ತು ಸೇವಾ ವಲಯಗಳಾಗಿದೆ.
27. ಆಧುನೀಕರಣ ಎಂದರೇನು?
ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಹೆಚ್ಚಿಸಲು ಉತ್ಪಾದಕರ ಹೊಸ ತಂತ್ರಜ್ಞಾನದ ಅಳವಡಿಕೆಯನ್ನು ಆಧುನೀಕರಣ ಎನ್ನುತ್ತೇವೆ.
28. ಸ್ವಾವಲಂಬನೆ ಎಂದರೇನು?
ಒಂದು ದೇಶ ತನ್ನದೇ ಸಂಪನ್ಮೂಲಗಳನ್ನು ಬಳಸಿಕೊಂಡು ಅಥವಾ ಇತರ ದೇಶಗಳಿಂದ ಸಂಪನ್ಮೂಲಗಳನ್ನು ಆಮದು ಮಾಡಿಕೊಂಡು ಆರ್ಥಿಕ ಬೆಳವಣಿಗೆ ಮತ್ತು ಆಧುನೀಕರಣವನ್ನು ಉತ್ತೇಜಿಸುವುದಾಗಿದೆ.
29. ಸಮಾನತೆ ಮೂಲ ಉದ್ದೇಶವೇನು?
ಪ್ರತಿಯೊಬ್ಬ ಭಾರತೀಯ ಅವನ ಅಥವಾ ಅವಳ ಮೂಲಭೂತ ಅವಶ್ಯಕತೆಗಳಾದ ಆಹಾರ, ಉತ್ತಮ ವಸತಿ, ಶಿಕ್ಷಣ, ಆರೋಗ್ಯ ಸೌಕರ್ಯ ಹೊಂದಲು ಸಮರ್ಥರಾಗಬೇಕು ಮತ್ತು ಸಂಪತ್ತಿನ ಅಸಮಾನ ಹಂಚಿಕೆಯು ಕಡಿಮೆಯಾಗಬೇಕು.
30. ಭೂ ಸುಧಾರಣೆಗಳು ಎಂದರೇನು?
ಉತ್ಪಾದಕತೆ ಹೆಚ್ಚಿಸಲು ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸುವುದಕ್ಕೆ ಭೂ ಸುಧಾರಣೆಗಳು ಎನ್ನುವರು.
31. ಭೂಮಿಯ ಗರಿಷ್ಠ ಮಿತಿ ನಿರ್ಧಾರದ ಉದ್ದೇಶವೇನು?
ಇದು ಒಬ್ಬ ವ್ಯಕ್ತಿ ಹೊಂದಬಹುದಾದ ಭೂಮಿಯ ಗರಿಷ್ಟ ಮಿತಿಯನ್ನು ನಿರ್ಧರಿಸುತ್ತದೆ. ಭೂ ಒಡೆತನ ಕೆಲವರ ಕೈಯಲ್ಲಿ ಕೇಂದ್ರೀಕೃತವಾಗುವುದನ್ನು ಕಡಿಮೆ ಮಾಡುವುದಾಗಿದೆ.
32. ಭೂ ಸುಧಾರಣಾ ಕ್ರಮಗಳು ಯಾವ ರಾಜ್ಯಗಳಲ್ಲಿ ಯಶಸ್ವಿಯಾದವು?
ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಯಶಸ್ವಿಯಾದವು.
33. ಹಸಿರು ಕ್ರಾಂತಿ ಎಂದರೇನು?
ಆಹಾರ ಧಾನ್ಯಗಳ ಉತ್ಪಾದನೆಯಲ್ಲಾದ ಗಮನಾರ್ಹ ಹೆಚ್ಚಳಕ್ಕೆ ಹಸಿರು ಕ್ರಾಂತಿ ಎನ್ನುತ್ತಾರೆ.
34. ಹಸಿರುಕ್ರಾಂತಿಯಿಂದ ಉಂಟಾಗುವ ಒಂದು ನ್ಯೂನತೆಯನ್ನು ತಿಳಿಸಿ.
ಹಸಿರುಕ್ರಾಂತಿ ಉಂಟಾದ ಒಂದು ನ್ಯೂನತೆಯೆಂದರೆ : ಹೆಚ್ಚಾದ ಕೃಷಿ ಉತ್ಪನ್ನದ ಬಹುಭಾಗವನ್ನು ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಬದಲಿಗೆ ಅವರು ಸ್ವಂತ ಅನುಭೋಗಕ್ಕೆ ಬಳಸಿದರೆ ಅಧಿಕ ಉತ್ಪಾದನೆಯು ಸಮಗ್ರ ಆರ್ಥಿಕತೆಯಲ್ಲಿ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ.
35. ಸಹಾಯಧನದ ಅರ್ಥ ನೀಡಿ.
ಕೃಷಿಯಲ್ಲಿ ರೈತರು ಹೊಸ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಉತ್ತೇಜಿಸುವುದಕ್ಕೆ ನೀಡುವ ಹಣವನ್ನು ಸಹಾಯಧನ ಎನ್ನುವರು.
ಉದಾ : ರಸಗೊಬ್ಬರಕ್ಕೆ ನೀಡುವ ಸಹಾಯಧನ, ಅಧಿಕ ಇಳುವರಿ ನೀಡುವ ಬಿತ್ತನೆ ಬೀಜಗಳಿಗೆ ನೀಡುವ ಸಹಾಯಧನ ಮುಂತಾದವು.
36. ಕೈಗಾರಿಕೆ ಎಂದರೇನು?
ಒಂದು ನಿರ್ದಿಷ್ಟ ವ್ಯವಹಾರವನ್ನು ನಡೆಸುವ ಉದ್ಯಮ ಘಟಕಗಳ ಸಮೂಹವೆ ಕೈಗಾರಿಕೆ.
37. ವ್ಯಾಪಾರ ಎಂದರೇನು?
ಸರಕು ಮತ್ತು ಸೇವೆಗಳನ್ನು ಆಮದು ಮತ್ತು ರಫ್ತು ಮಾಡುವ ನೀತಿಗೆ ವ್ಯಾಪಾರ ಎನ್ನುತ್ತಾರೆ.
38. ಭಾರತ ಸ್ವಾತಂತ್ರ್ಯ ಪಡೆದ ಕಾಲದಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ಎರಡು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಎಲ್ಲಿ ಅಸ್ತಿತ್ವದ್ದಲಿದ್ದವು.
ಎರಡು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಕಲ್ಕತ್ತ ಮತ್ತು ಜಮ್ಷಡ್ ಪುರದಲ್ಲಿ ಅಸ್ತಿತ್ವದಲ್ಲಿದ್ದವು.
39. ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಎಂದರೇನು?
ಸರ್ಕಾರದ ಒಡೆತನದಲ್ಲಿದ್ದು ಸರ್ಕಾರದಿಂದ ನಡೆಸಲ್ಪಡುವ ಎಲ್ಲಾ ಉದ್ದಿಮೆಗಳು ಅವುಗಳು ಸ್ಥಳೀಯ ಸರ್ಕಾರ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸ್ವತಂತ್ರವಾಗಿ ಅಥವಾ ಜಂಟಿಯಾಗಿ ನಡೆಸಲ್ಪಡಬಹುದು.
40. ಖಾಸಗಿ ಕ್ಷೇತ್ರದ ಉದ್ಯಮಗಳು ಎಂದರೇನು?
ಖಾಸಗಿ ಜನರ ಅಥವಾ ಸಮೂಹದ ಒಡೆತನದಲ್ಲಿರುವ ಮತ್ತು ಅವರಿಂದ ನಡೆಸಲ್ಪಡುವ ಉದ್ದಿಮೆಗಳು,
41. 1956ರ ಕೈಗಾರಿಕಾ ನೀತಿ ಗೊತ್ತುವಳಿಯಲ್ಲಿ ಕೈಗಾರಿಕೆಗಳನ್ನು ಎಷ್ಟು ವರ್ಗಗಳಾಗಿ ವಿಂಗಡಿಸಲಾಯಿತು? ಯಾವುವು?
ಕೈಗಾರಿಕೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿತು. ಅವುಗಳೆಂದರೆ :
- ಸಂಪೂರ್ಣ ಸರ್ಕಾರಿ ಒಡೆತನದ ಉದ್ಯಮಗಳು.
- ಖಾಸಗಿ ವಲಯ ಮತ್ತು ಸಾರ್ವಜನಿಕ ವಲಯಕ್ಕೆ ಪೂರಕವಾಗಿರುವ ಖಾಸಗಿ ಕೈಗಾರಿಕೆಗಳು, ಇವುಗಳನ್ನು ಸ್ಥಾಪಿಸುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ.
- ಉಳಿದ ಎಲ್ಲಾ ಕೈಗಾರಿಕೆಗಳು ಸೇರಿದ್ದು, ಅವು ಖಾಸಗಿ ವಲಯದಲ್ಲಿವೆ.
42. ಪ್ರಾದೇಶಿಕ ಸಮತೋಲನ ಎಂದರೇನು?
ಪ್ರಾದೇಶಿಕ ಸಮತೋಲನ ಎಂದರೆ ಒಂದು ದೇಶದ ಮೃದು ಮತ್ತು ಸಾಮರಸ್ಯದ ಸ್ಥಿತಿಯಾಗಿದ್ದು, ದೇಶದ ಎಲ್ಲಾ ಪ್ರದೇಶಗಳಲ್ಲೂ ಸಮಾನಾಂತರ ಅಭಿವೃದ್ಧಿಯನ್ನು ಸೂಚಿಸುವುದಿಲ್ಲ.
43. ಯಾವಾಗ ಆರ್ಥಿಕತೆಯ ಶಕ್ತಿ ಕೇಂದ್ರಗಳ ಮೇಲಿನ ಸರ್ಕಾರಿ ನಿಯಂತ್ರಣ ಮತ್ತು ಅಧಿಪತ್ಯದ ಗುರಿಗೆ ಕೈಗಾರಿಕಾ ನೀತಿ ಗೊತ್ತುವಳಿಯನ್ನು ಅಳವಡಿಸಿಕೊಳ್ಳಲಾಯಿತು.
1956ರಲ್ಲಿ ಕೈಗಾರಿಕಾ ನೀತಿ ಗೊತ್ತುವಳಿಯನ್ನು ಅಳವವಡಿಸಿಕೊಳ್ಳಲಾಯಿತು.
44. ಸರ್ಕಾರವು ಏಕೆ ಪರವಾನಗಿ ಹಕ್ಕನ್ನು ಕೈಗಾರಿಕೆಗಳಿಗೆ ಪರಿಚಯಿಸಿತು.
ಅಸ್ತಿತ್ವದಲ್ಲಿದ್ದ ಕೈಗಾರಿಕೆಗಳು ಉತ್ಪಾದನೆ ವಿಸ್ಕರಿಸಲು ಪರವಾನಗೆ ಪಡೆಯಬೇಕಾಗಿತ್ತು. ಇದರ ಅರ್ಥ ಆರ್ಥಿಕತೆಯಲ್ಲಿ ಉತ್ಪಾದಿಸುವ ಉತ್ಪನ್ನದ ಪ್ರಮಾಣ: ಆರ್ಥಿಕತೆಯ ಅಗತ್ಯಕ್ಕಿಂತಲೂ ಹೆಚ್ಚಾಗಬಾರದು ಎಂಬುದಾಗಿತು.
45, ಯೋಜಿತ ಅರ್ಥವ್ಯವಸ್ಥೆ ಎಂದರೇನು?
ಆರ್ಥಿಕ ಚಟುವಟಿಕೆಗಳ ಪ್ರಕ್ರಿಯೆಯಲ್ಲಿ ಖಾಸಗಿ ವಲಯದ ಬದಲಾಗಿ ಕೇಂದ್ರ ಸರ್ಕಾರ ನಿಯಂತ್ರಿಸುವುದಕ್ಕೆ ಯೋಜಿತ ಅರ್ಥವ್ಯವಸ್ಥೆ ಎನ್ನುವರು,
46. ಮಾರುಕಟ್ಟೆ ಅರ್ಥವ್ಯವಸ್ಥೆ ಎಂದರೇನು?
ಆರ್ಥಿಕ ಚಟುವಟಿಕೆಯಲ್ಲಿ ಸರ್ಕಾರದ ಬದಲಾಗಿ ಖಾಸಗಿಯವರು ನಿಯಂತ್ರಿಸುವುದನ್ನು ಮಾರುಕಟ್ಟೆ ಅರ್ಥವ್ಯವಸ್ಥೆ ಎನ್ನುವರು.
47. ಮಿಶ್ರ ಅರ್ಥವ್ಯವಸ್ಥೆ ಎಂದರೇನು?
ಒಂದು ಅರ್ಥ ವ್ಯವಸ್ಥೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ರಂಗಗಳೆರಡು ಏಕಕಾಲದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥೆಯಾಗಿದೆ.
48. ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ವ್ಯಾಖ್ಯಾನಿಸಿ.
ಯಾವ ಕೈಗಾರಿಕೆಯ ಗರಿಷ್ಟ ಹೂಡಿಕೆಯು ಒಂದು ಕೋಟಿಯಷ್ಟಿರುತ್ತದೋ, ಅಂತಹ ಕೈಗಾರಿಕೆಗಳನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳೆನ್ನುತ್ತಾರೆ.
49. ಮೊದಲ ಏಳು ಪಂಚವಾರ್ಷಿಕ ಯೋಜನೆಗಳಲ್ಲಿ ವ್ಯಾಪಾರದ ಲಕ್ಷಣ ಯಾವುದಾಗಿತ್ತು?
ಒಳಮುಖಿ ವ್ಯಾಪಾರ ತಂತ್ರ.
50. ಆಮದು ಬದಲೀಕರಣ ಎಂದರೇನು?
ಆಮದು ಮಾಡಿಕೊಳ್ಳುವ ವಸ್ತುವನ್ನು ದೇಶದಲ್ಲಿಯೇ ಉತ್ಪಾದಿಸುವ ದೇಶದ ಆರ್ಥಿಕಾಭಿವೃದ್ಧಿಯ ಒಂದು ನೀತಿ,
51. ಆಮದು ಬದಲೀಕರಣ ನೀತಿಯು ಹೇಗೆ ವಿದೇಶಿ ಪೈಪೋಟಿಯಿಂದ ದೇಶೀಯ ಕೈಗಾರಿಕೆಗಳನ್ನು ರಕ್ಷಿಸಿದೆ.
ರಕ್ಷಿಸಲು ಎರಡು ಮಾರ್ಗಗಳಿಗೆ : 1. ಸುಂಕಗಳು, 2, ಕೋಟಾಗಳು.
52. ಸುಂಕಗಳು ಎಂದರೇನು?
ಸುಂಕಗಳು ಎಂದರೆ ಆಮದು ವಸ್ತುಗಳ ಮೇಲೆ ಎಧಿಸುವ ತೆರಿಗೆ ಇದನ್ನು ವಿಧಿಸುವುದರಿಂದ ಆಮದು ವಸ್ತುಗಳ ಬೆಲೆ ದುಬಾರಿಯಾಗುತ್ತವೆ. ಅವುಗಳ ಬಳಕೆಯನ್ನು ಅನುತ್ತೇಜಗೊಳಿಸುತ್ತದೆ.
53. ಕೋಟಾಗಳ ಅರ್ಥ ನೀಡಿ?
ಆಮದಾಗುವ ವಸ್ತುಗಳ ಪ್ರಮಾಣವನ್ನು ನಿಗದಿಪಡಿಸುವುದಾಗಿದೆ.
54. “ರಕ್ಷಣಾತ್ಮಕ ವ್ಯಾಪಾರ ನೀತಿಯು” ಯಾವ ಭಾವನೆಯ ಮೇಲೆ ಆಧಾರಿತವಾಗಿದೆ.
“ರಕ್ಷಣಾತ್ಮಕ, ವ್ಯಾಪಾರ ನೀತಿಯು ಅಭಿವೃದ್ಧಿ ರಾಷ್ಟ್ರಗಳ ಕೈಗಾರಿಕೆಗಳು, ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕೈಗಾರಿಕೆಗಳ ಪೈಪೋಟಿಯನ್ನು ಎದುರಿಸಲು ಸಾಧ್ಯವಿಲ್ಲ ಎಂಬ ಭಾವನೆಯ ಮೇಲೆ ಆಧಾರಿತವಾತಿದೆ.
55. ಪರ್ಮಿಟ್’ ಲೈಸನ್ಸ್ ರಾಜ್ (Permit License Raj) ಎಂದರೇನು?
ಭಾರತದಲ್ಲಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವ ಉದ್ದಿಮೆಗಳನ್ನು ಪ್ರಾರಂಭಿಸಲು, ನಡೆಸಲು ಸರ್ಕಾರ ರಚಿಸಿರುವ ನಿಯಮ ಮತ್ತು ನೀತಿಗಳನ್ನು ಸೂಚಿಸಲು ಬಳಸಲಾಗುತ್ತದೆ.
56. ಆಮದು ಪರವಾನಗಿ ಎಂದರೇನು?
ಒಂದು ದೇಶಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದಿಂದ ಪಡೆಯಬೇಕಾದ ಪರವಾನಗಿ,
57. ಯಾವಾಗ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತರಲಾಯಿತು?
1991 ರಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತರಲಾಯಿತು.
58. 1956ರ ಕೈಗಾರಿಕಾ ನೀತಿ ಗೊತ್ತುವಳಿಗಳ ಮುಖ್ಯ ಉದ್ದೇಶಗಳನ್ನು ತಿಳಿಸಿ.
- ಕೈಗಾರಿಕಾ ಅಭಿವೃದ್ಧಿ
- ಸಣ್ಣ ಮತ್ತು ಆಧಾರಿತ ಕೈಗಾರಿಕೆಗಳ ಅಭಿವೃದ್ಧಿ
- ಸಾರ್ವಜನಿಕ ವಲಯದ ಬೆಳವಣಿಗೆ
- ಆದಾಯ ಮತ್ತು ಸಂಪತ್ತಿನ ಅಸಮಾನತೆಯನ್ನು ಕಡಿಮೆ ಮಾಡುವುದು.
FAQ :
ಒಂದು ನಿರ್ದಿಷ್ಟ ಸಮಯದೊಳಗೆ ಸಾಧಿಸಬೇಕಾದ ಕೆಲವು ಸಾಮಾನ್ಯ ಗುರಿಗಳು, ಹಾಗೆಯೇ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರಲೇಬೇಕು. ಭಾರತದಲ್ಲಿ ಯೋಜನೆಗಳು ಐದು ವರ್ಷಗಳ ಕಾಲಾವಧಿ ಹೊಂದಿವೆ. ಮತ್ತು ಅವುಗಳನ್ನು ‘ಪಂಚವಾರ್ಷಿಕ ಯೋಜನೆಗಳು’ ಎನ್ನುತ್ತೇವೆ.
ಆರ್ಥಿಕ ಬೆಳವಣಿಗೆಯು ದೇಶದೊಳಗೆ ಸರಕು ಮತ್ತು ಸೇವೆಗಳ ಉತ್ಪಾದನೆ ಮಾಡುವ ಸಾಮಥ್ಯವನ್ನು ಹೆಚ್ಚಿಸುವುದು ಎಂದರ್ಥ.
ಒಂದು ಅರ್ಥ ವ್ಯವಸ್ಥೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ರಂಗಗಳೆರಡು ಏಕಕಾಲದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥೆಯಾಗಿದೆ.
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.