ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಅಧ್ಯಾಯ – 1 ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ನೋಟ್ಸ್ | 1st Puc Economics Chapter 1 Notes

ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಅಧ್ಯಾಯ – 1 ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ನೋಟ್ಸ್‌ ಪ್ರಶ್ನೋತ್ತರಗಳು,1st Puc Economics Chapter 1 Notes Question Answer Extract Mcq Pdf Download in Kannada Medium 2023 Kseeb Solutions For Class 11 Economics Chapter 1 Notes 1st Puc Economics 1st Lesson Notes 1st Puc Indian Economy On the Eve of Independence Notes Swatantra Poorvadalli Bharatada Arthika Vyavasthe Notes

 

1st Puc Economics 1st Chapter Notes in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ವಸಾಹತುಶಾಹಿ ಸರ್ಕಾರವು ಭಾರತದಲ್ಲಿ ಅನುಸರಿಸಿದ ಆರ್ಥಿಕ ನೀತಿಗಳ ಉದ್ದೇಶ ವೇನು? ಈ ಆರ್ಥಿಕ ನೀತಿಗಳ ಪರಿಣಾಮಗಳಾವುವು?

ವಸಾಹತುಶಾಹಿ ಸರ್ಕಾರದ ಆರ್ಥಿಕ ನೀತಿಗಳು ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಆದ್ಯತೆ ನೀಡದೆ, ತನ್ನ ಮಾತೃ ದೇಶವಾದ ಇಂಗ್ಲೆಂಡಿನ ಆರ್ಥಿಕತೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹಂಬಲಿಸುತ್ತಿದ್ದವು. ಇಂತಹ ಆರ್ಥಿಕ ನೀತಿಗಳು ಭಾರತದ ಆರ್ಥಿಕತೆಯ ಮೂಲ ರಚನೆಯನ್ನು ಇಂಗ್ಲೆಂಡಿಗೆ ಕಚ್ಚಾ ಸಂಪನ್ಮೂಲಗಳನ್ನು ಪೂರೈಕೆ ಮಾಡುವ ಮತ್ತು ಬ್ರಿಟನ್ನಿನಲ್ಲಿ ಉತ್ಪಾದಿಸುವ ಕೈಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಿದವು.

ಆರ್ಥಿಕ ನೀತಿಗಳ ಪರಿಣಾಮಗಳೆಂದರೆ :

  1. ಬ್ರಿಟನ್‌ನಲ್ಲಿ ಉತ್ಪಾದಿಸಿದ ಸರಕುಗಳಿಗೆ ಕಚ್ಚಾ ಪದಾರ್ಥಗಳನ್ನು ಪೂರೈಕೆ ಮಾಡುವ ದೇಶವಾಯಿತು.
  2. ಬ್ರಿಟಿಷರ ಆಡಳಿತದಲ್ಲಿ ಕೃಷಿವಲಯವು ನಿರಂತರವಾಗಿ ಸ್ಥಗಿತವಾಯಿತು ಮತ್ತು ಅನಿಶ್ಚಿತವಾಗಿ ಕ್ಷೀಣಿಸಿತು.
  3. ಭಾರತದಲ್ಲಿನ ಜನರು ಶೋಚನೀಯ ಸ್ಥಿತಿಯನ್ನು ಅನುಭವಿಸಬೇಕಾಯಿತು.
  4. ಬ್ರಿಟಿಷರ ಕಾಲದಲ್ಲಿ ಹತ್ತಿ ಮತ್ತು ಸಣ್ಣ ಕೈಗಾರಿಕೆಗಳು ಕುಸಿಯಲಾರಂಭಿಸಿದವು.
  5. ಅರ್ಧಕ್ಕಿಂತ ಹೆಚ್ಚು ಭಾರತದ ವಿದೇಶಿ ವ್ಯಾಪಾರವನ್ನು ಬ್ರಿಟನ್ ನಿರ್ಬಂಧಿಸಿತು.
  6. ಭಾರತದಲ್ಲಿ ಇನ್ನಿತರ ಬಂಡವಾಳ ಸರಕಗಳ ಕೈಗಾರಿಕೆಗಳ ಕೈಗಾರೀಕರಣವನ್ನು ಅದು ಉತ್ತೇಜಿಸಲಿಲ್ಲ.
  7. ಹೊಸ ಕೈಗಾರಿಕಾ ವಲಯದ ಬೆಳವಣಿಗೆ ದರ ಮತ್ತು ಒಟ್ಟು ದೇಶಿಯ ಉತ್ಪನ್ನಕ್ಕೆ ಕೈಗಾರಿಕಾ ವಲಯದ ಕೊಡುಗೆ ಅತ್ಯಲ್ಪ ಪ್ರಮಾಣದಲ್ಲಿಯೇ ಉಳಿಯಿತು.
  8. ಆಧುನೀಕರಣ ಮತ್ತು ವಿಭಾಗೀಕರಣದಿಂದ ಕೈಗಾರಿಕಾ ವಲಯ ಆಳಲಾರಂಭಿಸಿತು.
  9. ಬಡತನ ಮತ್ತು ನಿರುದ್ಯೋಗವು ಏರಲಾರಂಭಿಸಿತು.
  10. 20ನೇ ಶತಮಾನಕ್ಕಿಂತ ಮುಂಚೆ ಒಟ್ಟು ನೈಜ ಉತ್ಪನ್ನ ತುಂಬಾ ಕಡಿಮೆಯಿತ್ತು.

2. ವಸಾಹಸುಶಾಹಿ ಆಳ್ವಿಕೆಯ ಅವಧಿಯಲ್ಲಿ ಭಾರತದ ತಲಾವರಮಾನವನ್ನು ಅಂದಾಜು ಮಾಡಿದ ಪ್ರಮುಖ ಅರ್ಥಶಾಸ್ತ್ರಜ್ಞರನ್ನು ಹೆಸರಿಸಿ.

ದಾದಾಬಾಯಿ ನವರೋಜಿ, ವಿಲಿಯಂ ದಿಗ್ಬಿ, ಫಿಂಡ್ಲೆ ಶಿರಾಸ್, ಪಿ.ಕೆ. ಆರ್.ವಿ. ರಾವ್ ಮತ್ತು ಆರ್. ಸಿ. ದೇಸಾಯಿಯವರು ಭಾರತದ ತಲಾವರಮಾನವನ್ನು ಅಂದಾಜು ಮಾಡಿದ್ದಾರೆ.

3. ವಸಾಹತುಶಾಹಿ ಅವಧಿಯಲ್ಲಿ ಭಾರತದ ಕೃಷಿವಲಯದ ಸ್ಥಗಿತತೆಗೆ ಪ್ರಮುಖ ಕಾರಣಗಳೇನು?

ವಸಾಹತುಶಾಹಿ ಅವಧಿಯಲ್ಲಿ ಭಾರತದ ಕೃಷಿವಲಯದ ಸ್ಥಗಿತತೆಗೆ ಪ್ರಮುಖ ಕಾರಣಗಳೆಂದರೆ

ಭೂ ಮಾಲೀಕತ್ವ ಪದ್ಧತಿ :

ಭೂ ಮಾಲೀಕತ್ವ ಪದ್ಧತಿಯಿಂದಾಗಿ ಕೃಷಿ ವಲಯದ ಸ್ಥಗಿತತೆಗೆ ಕಾರಣವಾಯಿತು. ಕೃಷಿ ವಲಯದ ಲಾಭವು ಸಾಗುವಳಿದಾರರ ಬದಲಿಗೆ ಜಮೀನುದಾರರ ಪಾಲಾಯಿತು. ವಸಾಹತುಶಾಹಿ ಸರ್ಕಾರವಲ್ಲದೆ, ಜಮೀನುದಾರರೂ ಕೂಡ ಕೃಷಿ ಅಭಿವೃದ್ಧಿಗೆ ಸರಿಯಾದ ಕ್ರಮವನ್ನು ಕೈಗೊಳ್ಳಲಿಲ್ಲ. ಸಾಗುವಳಿದಾರರ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದ ಜಮೀನುದಾರರು ನಿರ್ದಾಕ್ಷಿಣ್ಯವಾಗಿ ಗೇಣಿ ಸಂಗ್ರಹಿಸುತ್ತಿದ್ದರು ಪರಿಣಾಮವಾ ಸಾಗುವಳಿದಾರರು ವ್ಯಾಪಕ ಶೋಷಣೆ ಮತ್ತು ಸಾಮಾಜಿಕ ತಲ್ಲಣಗಳಿಗೆ ಒಳಗಾಗಿ ರೈತರ ಸ್ಥಿತಿಗತಿ ಶೋಷನೀಯವಾಯಿತು.

ಹಿಂದುಳಿದ ತಂತ್ರಜ್ಞಾನ ಇತ್ಯಾದಿ :

ಹಿಂದುಳಿದ ತಂತ್ರಜ್ಞಾನ, ನೀರಾವರಿ ಸೌಲಭ್ಯದ ಕೊರತೆ, ರಸಗೊಬ್ಬರಗಳ ಅಸಮರ್ಪಕ ಬಳಕೆ ಕೃಷಿ ಉತ್ಪಾದಕತೆಯ ಮಟ್ಟವನ್ನು ಹದಗೆಡಸಿ, ರೈತರ ಸಮಸ್ಯೆಯನ್ನು ಉಲ್ಬಣಗೊಳಿಸಿ ಭೀಕರ ದುರವಸ್ಥೆಗೆ ಕಾರಣವಾದುವು,

ಕೃಷಿ ವಲಯದ ವಾಣಿಜ್ಯೀಕರಣ :

ಕೃಷಿ ವಾಣಿಜ್ಯಕರಣದಿಂದಾಗಿ ಕೆಲವು ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಇಳುವರಿ ಸಾಪೇಕ್ಷವಾಗಿ ಅಧಿಕಗೊಂಡ ನಿದರ್ಶನಗಳಿವೆ. ಆದರೆ ಈ ವಾಣಿಜ್ಯ ಬೆಳೆಗಳನ್ನು ಅಂತಿಮವಾಗಿ ಬ್ರಿಟಿಷ್ ಕೈಗಾರಿಕೆಗಳು ತಾಯಿ ನಾಡಿನಲ್ಲಿ ಬಳಸುತ್ತಿದ್ದರಿಂದ ಭಾರತದ ರೈತರ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗೆ ಸಹಾಯಕವಾಗಲಿಲ್ಲ.

ಭಾರತದ ಇಬ್ಬಾಗ :

1947ರ ಭಾರತದ ಇಬ್ಬಾಗವು ಕೃಷಿ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿತು. ಪೂರ್ವ ಪಂಜಾಬ್ ಮತ್ತು ಸಿಂದ್ ಪ್ರಾಂತ್ಯಗಳು ಪಾಕಿಸ್ತಾನಕ್ಕೆ ಹೋದವು. ಇದು ಭಾರತದಲ್ಲಿನ ಆಹಾರದ ಕೊರತೆಗೆ ಕಾರಣವಾಯಿತು.

4. ನಮ್ಮ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲವು ಆಧುನಿಕ ಕೈಗಾರಿಕೆಗಳನ್ನು ಹೆಸರಿಸಿ.

19ನೇ ಶತಮಾನದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಆಧುನಿಕ ಕೈಗಾರಿಕೆಗಳು ಬೇರು ಬಿಡಲು ಪ್ರಾರಂಭಿಸಿದವು. ಆರಂಭದಲ್ಲಿ ಕೈಗಾರಿಕಾಭಿವೃದ್ಧಿ ಹತ್ತಿ ಬಟ್ಟೆ ಮತ್ತು ಸೆಣಬಿನ ಕೈಗಾರಿಕೆಗಳಿಗೆ ಸ್ಥಾಪನೆಗೆ ಮಾತ್ರ ಸೀಮಿತವಾಗಿತ್ತು. ಹತ್ತಿ ಬಟ್ಟೆ ಕೈಗಾರಿಕೆಗಳು ದೇಶದ ಪಶ್ಚಿಮ ಭಾಗದಲ್ಲಿ ಅಂದರೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದ್ದು ಭಾರತೀಯರ ಪ್ರಾಬಲ್ಯಕ್ಕೊಳಪಟ್ಟವು. ಕ್ರಮೇಣ 20ನೇ ಶತಮಾನದ ಆರಂಭದಲ್ಲಿ ಕಬ್ಬಿಣ ಮತ್ತು ಉಕ್ಕು ಕಂಪನಿ (TISCO) 1907ರಲ್ಲಿ ಸ್ಥಾಪನೆಯಾಯಿತು. ದ್ವಿತೀಯ ಮಹಾಯುದ್ಧದ ನಂತರ ಸಕ್ಕರೆ, ಸಿಮೆಂಟ್, ಕಾಗದ ಮುಂತಾದ ಕೆಲವು ಕೈಗಾರಿಕೆಗಳು ಸ್ಥಾಪನೆಯಾದವು.

5. ಸ್ವಾತಂತ್ರ ಪೂರ್ವ ಭಾರತದಲ್ಲಿ ಬ್ರಿಟಿಷರು ವ್ಯವಸ್ಥಿತವಾಗಿ ಕೈಗಾರಿಕೆಗಳನ್ನು ನಾಶಗೊಳಿ ಸಿದ್ದರ ಹಿಂದಿದ್ದ ಪ್ರಮುಖ ಉದ್ದೇಶವೇನು?

ವಸಾಹತುಶಾಹಿ ಆಳ್ವಿಕೆಯಲ್ಲಿ ಕೃಷಿಯಂತೆಯೇ ಕೈಗಾರಿಕಾ ವಲಯದ ಅಡಿಪಾಯ ಸದೃಢ ಅಭಿವೃದ್ಧಿಯನ್ನು ಕಾಣಲಿಲ್ಲ. ರಾಷ್ಟ್ರದ ಜಗತ್‌ ಪ್ರಸಿದ್ದ ಕರಕುಶಲ ಉದ್ದಿಮೆ ವಲಯದ ಬೆಳವಣಿಗೆ ಕ್ಷೀಣಿಸಿದರೂ ಅದಕ್ಕೆ ಪ್ರತಿಯಾಗಿ ಆಧುನಿಕ ಕೈಗಾರಿಕಾ ನೆಲೆಯ ಪರಂಪರೆಯನ್ನು ಉಳಿಸುವಂತಹ ಅಭಿವೃದ್ಧಿ ಸಾಧಿಸಲು ಅವಕಾಶ ನೀಡಲಿಲ್ಲ. ಭಾರತದ ಕೈಗಾರಿಕೆಗಳನ್ನು ವ್ಯವಸ್ಥಿತವಾಗಿ ನಾಶಪಡಿಸುವ ವಸಾಹತುಶಾಹಿ ಸರ್ಕಾರದ ನೀತಿಯ ಎರಡು ಮೂಲ ಉದ್ದೇಶಗಳೆಂದರೆ

1. ಬ್ರಿಟನ್ನಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕೈಗಾರಿಕೆಗಳಿಗೆ ಪ್ರಮುಖ ಕಚ್ಚಾ ಸಂಪನ್ಮೂಲಗಳನ್ನು ಒದಗಿಸುವ ರಫ್ತು ರಾಷ್ಟ್ರವಾಗಿ ಭಾರತದ ಪಾತ್ರವನ್ನು ಸೀಮಿತಗೊಳಿಸುವುದು.

2. ಮಾತೃ ರಾಷ್ಟ್ರವಾದ ಬ್ರಿಟನ್ನಿನ ಗರಿಷ್ಠ ಅನುಕೂಲತೆಗಾಗಿ ಆ ಕೈಗಾರಿಕೆಗಳ ಸಿದ್ಧ ವಸ್ತುಗಳ ವಿಸ್ತ್ರತ ಮಾರುಕಟ್ಟೆಯಾಗಿ ಭಾರತವನ್ನು ಪರಿವರ್ತಿಸುವುದು.

6. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಸಾಂಪ್ರದಾಯಿಕ ಕರಕುಶಲ ಕೈಗಾರಿಕೆಗಳು ನಾಶವಾದುವು ಎಂಬುದನ್ನು ನೀವು ಒಪ್ಪುವಿರಾ? ಕಾರಣಗಳೊಂದಿಗೆ ಸಮರ್ಥಿಸಿ.

ಬದಲಾದ ಆರ್ಥಿಕ ಸನ್ನಿವೇಶದಲ್ಲಿ ಭಾರತದ ದೇಶೀಯ ಕರಕುಶಲ ಕೈಗಾರಿಕೆಗಳು ಕ್ಷೀಣಿಸಿ, ವ್ಯಾಪಕ ನಿರುದ್ಯೋಗವನ್ನು ಸೃಷ್ಟಿಸಿದಲ್ಲದೆ, ಭಾರತೀಯ ಗ್ರಾಹಕ ಮಾರುಕಟ್ಟೆಯಲ್ಲಿ ಬ್ರಿಟನ್ನಿನ ಕೈಗಾರಿಕಾ ಉತ್ಪನ್ನಗಳಿಗೆ ಹೊಸ ಬೇಡಿಕೆ ಸೃಷ್ಟಿಸಿತ್ತು. ಇದು ಸ್ಥಳೀಯ ಸರಕುಗಳ ಪೂರೈಕೆಗೆ ಮಾರುಕಟ್ಟೆ ಇಲ್ಲದಂತೆ ಮಾಡಿತು. ಹೊಸ ಬೇಡಿಕೆಯನ್ನು ಪೂರೈಸಲು ಬ್ರಿಟನ್ನಿನಿಂದ ಅಗ್ಗದ ತಯಾರಿಕಾ ಸರಕುಗಳನ್ನು ಆಮದು ಮಾಡಿಕೊಂಡು ದೇಶೀಯವಾಗಿ ಉತ್ಪಾದಿಸಿದ ಸರಕುಗಳ ಮಾರುಕಟ್ಟೆಯನ್ನು ಕಸಿದುಕೊಂಡಿತು.

7. ಭಾರತದ ಮೂಲಸೌಕರ್ಯದ ಅಭಿವೃದ್ಧಿ ನೀತಿಯ ಮೂಲಕ ಬ್ರಿಟಿಷರು ಸಾಧಿಸ ಬೇಕೆಂದು ಕೊಂಡ ಉದ್ದೇಶಗಳಾವುವು?

ವಸಾಹತುಶಾಹಿ ಅವಧಿಯಲ್ಲಿ ಮೂಲ ಸೌಕರ್ಯಗಳಾದ ರೈಲುಸಾರಿಗೆ, ಜಲಸಾರಿಗೆ, ಬಂದರು. ಅಂಚೆ ಮತ್ತು ತಂತಿ ಸೌಕರ್ಯಗಳು ಅಭಿವೃದ್ಧಿಯಾದವು.

1. ಆಧುನಿಕ ರಸ್ತೆಗಳ ನಿರ್ಮಾಣ:

ರಸ್ತೆಗಳನ್ನು ಪ್ರಮುಖವಾಗಿ ಭಾರತದೊಳಗೆ ಸೈನ್ಯವನ್ನು ಸಜ್ಜುಗೊಳಿಸಲು ಹಾಗೂ ಕಚ್ಚಾ ಸಂಪನ್ಮೂಲಗಳನ್ನು ವರ್ಗಾಯಿಸಿ ಇಂಗ್ಲೆಂಡ್ ಆದಾಯ ನೀಡುವ ಲಾಭದಾಯಕ ಇತರ ದೇಶಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ರಚಿಸಲಾಗಿತ್ತು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ವಋತು ರಸ್ತೆಗಳ ತೀವ್ರ ಕೊರತೆ ಇತ್ತು.

2. ರೈಲುಸಾರಿಗೆಯನ್ನು ಪರಿಚಯಿಸಿದರು :

ಇದರಿಂದ ಜನರು ದೂರದ ಪ್ರಯಾಣ ಕೈಗೊಳ್ಳಲು ಮತ್ತು ಭಾರತದ ಕೃಷಿಯ ವಾಣಿಜ್ಯಕರಣವನ್ನು ಉತ್ತೇಜಿಸುವುದಾಗಿತ್ತು. ರೈಲುಸಾರಿಗೆ ಅಭಿವೃದ್ಧಿಯಿಂದ ಭಾರತೀಯರಿಗೆ ದೊರಕಿದ ಸಾಮಾಜಿಕ ಅನುಕೂಲಗಳಿಗಿಂತ ಆರ್ಥಿಕ ನಷ್ಟಗಳು ಅಧಿಕವಾಗಿದ್ದವು.

3. ದೇಶೀಯ ವ್ಯಾಪಾರ ಮತ್ತು ಸಮುದ್ರ ಮಾರ್ಗಗಳ ಅಭಿವೃದ್ಧಿ :

ಸರ್ಕಾರ ಅತ್ಯಧಿಕ ವೆಚ್ಚದಲ್ಲಿ ನಿರ್ಮಿಸಿದ್ದರೂ, ಕಾಲುವೆ ಮತ್ತು ರೈಲು ಸಾರಿಗೆಗಳು ಒಂದೇ ಮಾರ್ಗದಲ್ಲಿ ಸಮಾನಾಂತರವಾಗಿ ಚಲಿಸುತ್ತಿದ್ದರಿಂದ ರೈಲು ಸಾರಿಗೆಯೊಂದಿಗೆ ಪೈಪೋಟಿ ನಡೆಸಲು ವಿಫಲವಾಯಿತು.

4. ಲಾಭ ಗಳಿಕೆ :

ಲಾಭ ಗಳಿಸುವುದಕ್ಕೋಸ್ಕರ ರೈಲು ವ್ಯವಸ್ಥೆಯನ್ನು ಪ್ರಮುಖ ಬಂದರುಗಳು ಮತ್ತು ಮಾರುಕಟ್ಟೆ ಕೇಂದ್ರಗಳಿಗೆ ಸೇರಿಸಲಾಯಿತು.

5. ಪರಿಣಾಮಕಾರಿ ಆಡಳಿತದ ಮೇಲೆ ನಿಯಂತ್ರಣ :

ಆಡಳಿತದ ಮತ್ತು ಮಿಲಿಟರಿ ಕೇಂದ್ರಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಕ್ಕೋಸ್ಕರ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರು.

Karnataka 1st PUC Economics Chapter 1 Indian Economy on the Eve of Independence in Kannada Notes

8. ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಅನುಸರಿಸಿದ ಕೈಗಾರಿಕಾ ನೀತಿಯ ನ್ಯೂನತೆ ಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ.

ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಅನುಸರಿಸಿದ ಕೈಗಾರಿಕಾ ನೀತಿಯ ನ್ಯೂನತೆಗಳನ್ನು ಈ ಕೆಳಗಿನಂತಿವೆ.

1. ಕೈಗಾರಿಕೀಕರಣ : ವಸಾಹತುಶಾಹಿ ಆಳ್ವಿಕೆಯಲ್ಲಿ ಕೃಷಿಯಂತೆಯೇ ಕೈಗಾರಿಕಾ ವಲಯದ ಅಡಿಪಾಯ ಸದೃಢ ಅಭಿವೃದ್ಧಿಯನ್ನು ಕಾಣಲಿಲ್ಲ. ರಾಷ್ಟ್ರದ ಜಗತ್‌ ಪ್ರಸಿದ್ದ ಕರಕುಶಲ ಉದ್ದಿಮೆ ವಲಯದ ಬೆಳವಣಿಗೆ ಕ್ಷೀಣಿಸಿದರೂ ಅದಕ್ಕೆ ಪ್ರತಿಯಾಗಿ ಆಧುನಿಕ ಕೈಗಾರಿಕಾ ನೆಲೆಯ ಪರಂಪರೆಯನ್ನು ಉಳಿಸುವಂತಹ ಅಭಿವೃದ್ಧಿ ಸಾಧಿಸಲು ಅವಕಾಶ ನೀಡಲಿಲ್ಲ.

2. ಕಡಿಮೆ ಗುಣಮಟ್ಟದ ಆಧುನಿಕ ಕೈಗಾರಿಕೆಗಳ ರಚನೆ : ಬ್ರಿಟಿಷರು ಕೈಗಾರಿಕೆಗಳ ಆಧುನೀಕರಣಕ್ಕೆ ಸಮ್ಮತಿಸದೇ ಹೆಚ್ಚು – ಹೆಚ್ಚು ಕೈಗಾರಿಕೆಗಳ ಬೆಳವಣಿಗೆಗೆ ಪ್ರೋತ್ಸಾಹಿಸಿದರು.

3. ಬಂಡವಾಳ ಸರಕು ಕೈಗಾರಿಕೆಗಳ ಕೊರತೆ : ಭಾರತದಲ್ಲಿನ ಸಾಂಪ್ರದಾಯಿಕ ಕರಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿತು. ಇದರಿಂದ ಬಂಡವಾಳ ಸರಕು ಕೈಗಾರಿಕೆಗಳು ಪರಿಣಾಮಕಾರಿಯಾಗಿ ಕಚ್ಚಾ ಪದಾರ್ಥಗಳನ್ನು ಉಪಯೋಗಿಸಿಕೊಳ್ಳದೆ ಕೇವಲ ಉತ್ಪಾದಿಸುವುದರಲ್ಲಿ ಗಮನ ಹರಿಸ ತೊಡಗಿತು.

4. ಸಾರ್ವಜನಿಕ ವಲಯದ ಕಾರ್ಯ ವ್ಯಾಪ್ತಿಯ ಪರಿಮಿತ : ಸಾರ್ವಜನಿಕ ವಲಯದ ಕಾರ್ಯ ವ್ಯಾಪ್ತಿಯ ಪರಿಮಿತಿಯಲ್ಲಿ ಮತ್ತೊಂದು ನ್ಯೂನತೆಯೆಂದರೆ ಹೊಸ ಕೈಗಾರಿಕಾ ವಲಯದ ಪ್ರಾಮುಖ್ಯತೆಯಾಗಿದೆ. ಈ ವಲಯವು ಕೇವಲ ರೈಲು ಸಾರಿಗೆ, ವಿದ್ಯುತ್‌ ಉತ್ಪಾದನೆ, ಸಂಪರ್ಕ, ಬಂದರುಗಳು ಮತ್ತು ಇನ್ನಿತರ ವಿಭಾಗಗಳನ್ನು ಮಾತ್ರ ಹೊಂದುವುದಾಗಿದೆ.

9. ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತದ ಸಂಪತ್ತು ಬಸಿದು ಹೋಯಿತು ಎಂಬು ದನ್ನು ಏನೆಂದು ಅರ್ಥೈಸುವಿರಿ.

ವಸಾಹತುಶಾಹಿ ಸರ್ಕಾರ ಬ್ರಿಟನ್‌ನಲ್ಲಿ ಸ್ಥಾಪಿಸಿದ ಕಛೇರಿ ಖರ್ಚು ವೆಚ್ಚಗಳು, ಬ್ರಿಟಿಷ್ ಸರ್ಕಾರದ ಯುದ್ಧದ ವೆಚ್ಚ ಮತ್ತು ಭಾರತ ಮಾಡಿಕೊಂಡ ಸೇವೆಗಳು ಆಮದು ಮೌಲ್ಯ ಪಾವತಿಗಾಗಿ ರಫ್ತು ಮಿಗುತೆಗಾಗಿ ಬಳಸಿಕೊಳ್ಳಲಾಯಿತು. ಪರಿಣಾಮವಾಗಿ ಭಾರತದ ಸಂಪತ್ತು ವಿದೇಶಗಳಿಗೆ ಬಸಿದು ಹೋಯಿತು.

10. ಭಾರತದ ಜನಸಂಖ್ಯಾ ಸ್ಥಿತ್ಯಂತರದ ಪ್ರಥಮ ಮತ್ತು ದ್ವಿತೀಯ ಹಂತದ ವಿಭಜನೆಯನ್ನು ನಿರ್ಣಯಿಸುವ ವರ್ಷ ಯಾವುದು?

ಭಾರತದ ಜನಸಂಖ್ಯಾ ಸ್ಥಿತ್ಯಂತರದ ಪ್ರಥಮ ಮತ್ತು ದ್ವಿತೀಯ ಹಂತದ ವಿಭಜನೆಯನ್ನು ನಿರ್ಣಯಿಸುವ ವರ್ಷ 1927.

11. ವಸಾಹತುಶಾಹಿ ಅವಧಿಯಲ್ಲಿ ಭಾರತದ ಜನಸಂಖ್ಯಾ ಸ್ವರೂಪವನ್ನು ಪರಿಮಾಣಾತ್ಮಕವಾಗಿ ವಿಮರ್ಶಿಸಿ

ವಸಾಹತುಶಾಹಿ ಅವಧಿಯಲ್ಲಿ ಭಾರತದಲ್ಲಿ ಭಾರತದ ಜನಸಂಖ್ಯಾ ಸ್ವರೂಪದ ಪರಿಮಾಣಾತ್ಮಕ ಕ್ರಮಗಳೆಂದರೆ :

  1. ಸರಾಸರಿ ಜನನ ದರ : ಜನನ ದರವು ತುಂಬಾ ಗರಿಷ್ಠ ಮಟ್ಟದಲ್ಲಿತ್ತು. ಅದು ಪ್ರತಿ ಸಾವಿರಕ್ಕೆ 48 ರಷ್ಟಿದೆ.
  2. ಸರಾಸರಿ ಮರಣ ದರ : ಸರಾಸರಿ ಮರಣದ ದರ ಗರಿಷ್ಟ ಮಟ್ಟದ್ದಲಿತ್ತು. ಅದು ಪ್ರತಿ ಸಾವಿರಕ್ಕೆ 40 ರಷ್ಟಿದೆ.
  3. ಶಿಶು ಮರಣ ದರ : ಶಿಶು ಮರಣ ದರ ಎಂದರೆ ಒಂದು ವರ್ಷಕ್ಕಿಂತ ಮುಂಚಿತವಾಗಿ ಮರಣವನ್ನಪ್ಪುವ ಮಕ್ಕಳ ದರವಾಗಿದೆ. ಪ್ರತಿ ಸಾವಿರಕ್ಕೆ 218 ರಷ್ಟಿತ್ತು.
  4. ನಿರೀಕ್ಷಿತ ಜೀವತಾವಧಿ : ನಿರೀಕ್ಷಿತ ಜೀವಿತಾವಧಿಯು ಕನಿಷ್ಟ ಅಂದರೆ 32 ವರ್ಷಗಳಷ್ಟಿತ್ತು.
  5. ಸಾಕ್ಷರತಾ ದರ : ಸಾಕ್ಷರತಾ ದರವು ಕೇವಲ 17% ರಷ್ಟಿತ್ತು. ಅಂದರೆ ಉಳಿದ ಶೇ. 83 ರಷ್ಟು ಜನ ಅನಕ್ಷರಸ್ಥರಾಗಿದ್ದರು.

12. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಉದ್ಯೋಗ ರಚನೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿ.

ವಸಾಹತುಶಾಹಿ ಅವಧಿಯಲ್ಲಿ ಭಾರತದ ಉದ್ಯೋಗ ರಚನೆ ಅಂದರೆ, ವಿವಿಧ ಕೈಗಾರಿಕೆಗಳಲ್ಲಿ ಮತ್ತು ವಲಯಗಳಲ್ಲಿ ಭಾರತದ ದುಡಿಯುವ ಜನರ ಹಂಚಿಕೆಯಲ್ಲಿ ಪರಿವರ್ತನೆಯನ್ನು ಈ ಕೆಳಗಿನಂತೆ ಸೂಚಿಸಲಾಗಿದೆ.

1. ಕೃಷಿ ವಲಯದ ಪ್ರಾಬಲ್ಯತೆ :

ದೇಶದ ಅತಿ ಹೆಚ್ಚು ಕಾರ್ಮಿಕ ಶಕ್ತಿ ಅಂದರೆ ಶೇ. 70 – 75 ರಷ್ಟು ಕೃಷಿ ವಲಯದಲ್ಲಿ ಕೇಂದ್ರೀಕೃತವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ ಜೀವನೋಪಾಯಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿದ್ದರು.

2. ಪ್ರಾದೇಶಿಕ ಅಸಮಾನತೆ :

ಹೆಚ್ಚುತ್ತಿರುವ ಪ್ರಾದೇಶಿಕ ಅಸನಮಾನತೆ ಮತ್ತು ಎದ್ದು ಕಾಣುವ ವಿಷಯವಾಗಿತ್ತು. ಹತ್ತಿ ಬಟ್ಟೆ ಕೈಗಾರಿಕೆಗಳು ದೇಶದ ಪಶ್ಚಿಮ ಭಾಗಗಳಲ್ಲಿದ್ದು ಭಾರತೀಯರ ಪ್ರಾಬಲ್ಯಗೊಳಪಟ್ಟಿದ್ದವು. ಸೆಣಬಿನ ಕೈಗಾರಿಕೆಗಳು ದೇಶದ ಪೂರ್ವ ಭಾಗದಲ್ಲಿದ್ದು ಬಂಗಾಳದಲ್ಲಿ ಕೇಂದ್ರೀಕೃತವಾಗಿದ್ದು ವಿದೇಶಿಯರ ಪ್ರಾಬಲ್ಯಕ್ಕೆ ಒಳಪಟ್ಟಿದ್ದವು. ತಯಾರಿಕಾ ವಲಯದಲ್ಲಿ ಶೇ. 10 ರಷ್ಟು ಜನ ಉದ್ಯೋಗ ನಿರತರಾಗಿದ್ದರು.

3. ಬೆಳವಣಿಗೆಯ ಅಸಮಾನತೆ :

ಹೊಸ ಕೈಗಾರಿಕಾ ವಲಯದ ಬೆಳವಣಿಗೆ ದರ ಮತ್ತು ಒಟ್ಟು ದೇಶಿಯ ಉತ್ಪನ್ನಕ್ಕೆ GDP ಕೈಗಾರಿಕಾ ವಲಯದ ಕೊಡುಗೆ ಅತ್ಯಲ್ಪ ಪ್ರಮಾಣದಲ್ಲಿಯೇ ಉಳಿಯಿತು. ಹೊಸ ಕೈಗಾರಿಕಾ ವಲಯದ ಮತ್ತೊಂದು ನ್ಯೂನತೆ ಎಂದರೆ ಸಾರ್ವಜನಿಕ ವಲಯದ ಕಾರ್ಯ ವ್ಯಾಪ್ತಿ ಬಹಳ ಪರಿಮಿತವಾಗಿತ್ತು.

13. ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತವು ಎದುರಿಸಿದ ಪ್ರಮುಲಕ ಆರ್ಥಿಕ ಸವಾಲುಗಳನ್ನು ಗುರುತಿಸಿ.

ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತವು ಎದುರಿಸಿದ ಪ್ರಮುಖ ಆರ್ಥಿಕ ಸವಾಲುಗಳೆಂದರೆ : –

  1. ಕೈಗಾರಿಕಾಭಿವೃದ್ಧಿಯ ಪಥ ತಲುಪುವುದು.
  2. ಮೂಲ ಸೌಕರ್ಯ ಸೇವೆಗಳ ಬೆಳವಣಿಗೆ
  3. ಬಡತನ ಮತ್ತು ನಿರುದ್ಯೋಗದ ನಿರ್ಮೂಲನೆ
  4. ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಅಭಿವೃದ್ಧಿ ಪಡಿಸುವುದು.
  5. ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ಧಿ
  6. ಸ್ವ – ಹಿತಾಶಕ್ತಿ ಬೆಳೆಸುವುದು.

14. ಭಾರತದ ಮೊಟ್ಟ ಮೊದಲಿಗೆ ಯಾವಾಗ ಅಧಿಕೃತವಾಗಿ ಜನಗಣತಿ ನಡೆಸಲಾಯಿತು?

ಭಾರತದಲ್ಲಿ ಮೊಟ್ಟ ಮೊದಲಿಗೆ 1881ರಲ್ಲಿ ಅಧಿಕೃತವಾಗಿ ಜನಗಣತಿ ನಡೆಸಲಾಯಿತು.

1st Puc Economics Chapter 1 Notes

15. ಸ್ವಾತಂತ್ರ್ಯದ ಅವಧಿಯಲ್ಲಿ ಭಾರತದ ವಿದೇಶಿ ವ್ಯಾಪಾರದ ಪ್ರಮಾಣ ಮತ್ತು ದಿಕ್ಕನ್ನು ಸೂಚಿಸಿ

ಪ್ರಾಚೀನ ಕಾಲದಿಂದಲೂ ಭಾರತವು ವ್ಯಾಪಾರದ ಒಂದು ಪ್ರಮುಖ ದೇಶವಾಗಿತ್ತು. ಆದರೆ ವಸಾಹತುಶಾಹಿ ಸರ್ಕಾರ ಸರಕುಗಳ ಉತ್ಪಾದನೆ, ವ್ಯಾಪಾರ ಮತ್ತು ಸುಂಕದ ನಿರ್ಬಂಧಿತ ನೀತಿಯನ್ನು ಅನುಸರಿಸಿದ್ದರಿಂದ ಭಾರತದ ವಿದೇಶಿ ವ್ಯಾಪಾರದ ರಚನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಭಾರತವು ಕಚ್ಚಾ ರೇಷ್ಮೆ, ಹತ್ತಿ, ಉಣ್ಣೆ, ಸೆಣಬು, ಶ್ರೀಫಲ (INDIGO) ಸಕ್ಕರೆ ಮುಂತಾದ ಪ್ರಾಥಮಿಕ ಸರಕುಗಳ ರಫ್ತು ರಾಷ್ಟ್ರವಾಗಿ ಪರಿವರ್ತನೆಯಾಯಿತು. ಬ್ರಿಟನ್ನನ್ನು ಹೊರತು ಪಡಿಸಿದರೆ ಚೀನಾ, ಶ್ರೀಲಂಕ, ಇರಾನ್‌ನೊಂದಿಗೆ ವ್ಯಾಪಾರ ಚಟುವಟಿಕೆ ನಡೆಯುತ್ತಿತ್ತು. ಸೂಯೆಜ್ ಕಾಲುವೆಯ ಆರಂಭದಿಂದಾಗಿ ಭಾರತದ ವಿದೇಶಿ ವ್ಯಾಪಾರದ ಮೇಲೆ ಬ್ರಿಟನ್ ಮತ್ತಷ್ಟು ಪ್ರಭುತ್ವ ಸಾಧಿಸಿತು.

16. ಬ್ರಿಟಿಷರು, ಭಾರತಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡಿದ್ದಾರೆಯೇ? ಚರ್ಚಿಸಿ

ಬ್ರಿಟಿಷರು, ಭಾರತಕ್ಕೆ ನೀಡಿದ ಸಕಾರಾತ್ಮಕ ಕೊಡುಗೆಗಳೆಂದರೆ

  • ಸಾರಿಗೆ, ರೈಲುಗಳು ಮತ್ತು ಸಂಪರ್ಕದ ಅಭಿವೃದ್ಧಿ
  • ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕತೆಯ ಏಕೀಕರಣ.
  • ಬ್ಯಾಂಕಿಂಗ್ ಮತ್ತು ಹಣಕಾಸಿನ ವ್ಯವಸ್ಥೆಯ ಉದಯ.
  • ಉತ್ಪಾದನೆ ಮತ್ತು ಆಡಳಿತಕ್ಕೆ ಆಧುನಿಕ ತಂತ್ರಜ್ಞಾನಗಳ ಪರಿಚಯ.
  • ಪ್ರಗತಿಪರ ಯೋಜನೆಗಳ ಆಧಾರದ ಮೇಲೆ ಹೊಸ ಸಾಮಾಜಿಕ ಕ್ರಮಗಳ
  • ಸ್ಥಿರತೆ, ಶಾಂತಿ ಮತ್ತು ಶ್ರಮ
  • ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳ ಸಂಸ್ಥೆಗಳ ಉದಯ.
  • ಹೊಸ ಶಿಕ್ಷಣ ವ್ಯವಸ್ಥೆಯ ಪರಿಚಯ.
  • ನಾಗರೀಕ ಶಿಸ್ತು ಕ್ರಮಗಳ ವಿಸ್ತರಣೆ

17. ಭಾರತವು ಯಾವ – ಯಾವ ವಸ್ತುಗಳನ್ನು ರಫ್ತು ಮಾಡುವುದರಲ್ಲಿ ಜನಪ್ರಿಯ ವಾಗಿತ್ತು?

ಭಾರತವು ಹತ್ತಿ ಬಟ್ಟೆ ಮತ್ತು ರೇಷ್ಮೆ ಬಟ್ಟೆ, ಲೋಹ ಮತ್ತು ಅಮೂಲ್ಯ ಹರಳುಗಳು ಮುಂತಾದ ಕರಕುಶಲ ಕೈಗಾರಿಕಾ ವಸ್ತುಗಳಿಗೆ ಜನಪ್ರಿಯವಾಗಿತ್ತು.

18. ಯಾಕೆ ಭಾರತದ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿದ್ದವು?

ಭಾರತದ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿದ್ದವು. ಏಕೆಂದರೆ, ಈ ಉತ್ಪನ್ನಗಳು ಅವುಗಳ ಉತ್ಕೃಷ್ಟ ಗುಣಮಟ್ಟ ಮತ್ತು ಹಸ್ತಕೌಶಲ್ಯ.

19. ವಸಾಹತುಶಾಹಿ ಪದ್ಧತಿ ಎಂದರೇನು?

ವಸಾಹತುಗಳನ್ನು ಗೆಲ್ಲುವ ಅಥವಾ ಇತರ ವಿಧಾನಗಳಿಂದ ಅವುಗಳನ್ನು ಗಳಿಸುವ ಮತ್ತು ಅವುಗಳನ್ನು ಅವಲಂಬಿಗಳನ್ನಾಗಿ ಮಾಡುವ ವಿಧಾನ. ಅಲ್ಲದೆ ಗಡಿಯಾಚೆಯ ಪ್ರದೇಶಗಳ ರಾಜಕೀಯ ಮತ್ತು ಆರ್ಥಿಕ ಜೀವನದಲ್ಲಿ ತನ್ನ ಸಾಮರ್ಥ್ಯ, ನಿಯಂತ್ರಣವನ್ನು ಹೇರುವುದಾಗಿದೆ. ಶೋಷಣೆ ವಸಾಹತುವಿನ ಪ್ರಮುಖ ಲಕ್ಷಣವಾಗಿದೆ.

20. ಜಮೀನುದಾರಿ ಪದ್ಧತಿ ಮೊದಲು ಎಲ್ಲಿ ಪ್ರಾರಂಭಿಸಲಾಯಿತು?

ಬಂಗಾಳ ಪ್ರಾಂತ್ಯದಲ್ಲಿ ಮೊದಲು ಜಮೀನುದಾರಿ ಪದ್ಧತಿಯನ್ನು ಜಾರಿಗೊಳಿಸಿತು

21. ಕೃಷಿಯ ವಾಣಿಜ್ಯೀಕರಣದ ಅರ್ಥ ಕೊಡಿ.

ಇದು ಸ್ವ – ಅನುಭೋಗಕ್ಕೆ ಬದಲಾಗಿ ಮಾರಾಟ ಮಾಡುವುದಕ್ಕಾಗಿಯೇ ಬೆಳೆಗಳನ್ನು ಬೆಳೆಯುವುದಾಗಿದೆ. ಬ್ರಿಟಿಷರ ಆಡಳಿತದಲ್ಲಿ ಕೃಷಿಯ ವಾಣಿಜ್ಯಕರಣ ಎಂದರೆ ರೈತರಿಗೆ ಆಹಾರ ಬೆಳೆಗಳಿಗಿಂತ, ವಾಣಿಜ್ಯ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ಬೆಲೆಯನ್ನು ನೀಡುವುದಾಗಿದೆ.

22. ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ (TISCO) ಯಾವಾಗ ಸ್ಥಾಪನೆಯಾಯಿತು?

1907ರಲ್ಲಿ

23. ಬಂಡವಾಳ ಸರಕು ಕೈಗಾರಿಕೆಗಳೆಂದರೇನು?

ಬಂಡವಾಳ ಸರಕು ಕೈಗಾರಿಕೆಗಳೆಂದರೆ ಪ್ರಸ್ತುತ ಅನುಭೋಗಕ್ಕಾಗಿ ಸರಕುಗಳ ಉತ್ಪಾದನೆಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಉತ್ಪಾದಿಸುವ ಕೈಗಾರಿಕೆಗಳು ಎಂದರ್ಥ.

24.ವಿದೇಶಿ ವ್ಯಾಪಾರ ಎಂದರೇನು?

ದೇಶ – ದೇಶಗಳ ನಡುವಿನ ಆಮದು ಮತ್ತು ರಫ್ತು ವ್ಯಾಪಾರವನ್ನು ವಿದೇಶಿ ವ್ಯಾಪಾರ ಎನ್ನುವರು.

25. ಪ್ರಾಥಮಿಕ ರಫ್ತು ಸರಕುಗಳಾವುವು?

ಕಚ್ಚಾ ರೇಷ್ಮೆ, ಹತ್ತಿ, ಉಣ್ಣೆ, ಸೆಣಬು, ಶ್ರೀಫಲ & ಸಕ್ಕರೆ (INDIGO)

22. ಕೆಲವು ಗ್ರಾಹಕ ವಸ್ತುಗಳನ್ನು ಹೆಸರಿಸಿ.

ಹತ್ತಿ ಬಟ್ಟೆ, ರೇಷ್ಮೆ ಬಟ್ಟೆ, ಉಣ್ಣೆ ಬಟ್ಟೆ ಇತ್ಯಾದಿ.

23. ಬ್ರಿಟನ್ ಹೊರತುಪಡಿಸಿದರೆ ಭಾರತವು ಯಾವ ರಾಷ್ಟ್ರಗಳೊಂದಿಗೆ ವ್ಯಾಪಾರ ಚಟುವಟಿಕೆಯನ್ನು ಹೊಂದಿತ್ತು.

ಚೀನಾ, ಶ್ರೀಲಂಕಾ (ಸಿಲೋನ್‌), ಇರಾನ್‌ (ಪರ್ಷಿಯಾ)

24. ಜನಸಂಖ್ಯೆಯ ಪರಿವರ್ತನೆ (ಸ್ಥಿತ್ಯಂತರ)ದ ಅರ್ಥ ನೀಡಿ.

ಈ ಪರಿಭಾವನೆಯನ್ನು ಜನಸಂಖ್ಯಾ ತಜ್ಞರಾದ ಫ್ರಾಂಕ್‌ ನೋಟೀಸ್ಟಿನ್‌ನಿಂದ 1948ರಲ್ಲಿ ಆರ್ಥಿಕ ಅಭಿವೃದ್ಧಿಯ ಪರಿಣಾಮವಾಗಿ ಉತ್ತಮ ಜೀವನದ ಪರಿಸ್ಥಿತಿಯ ಫಲವಾಗಿ ಇಳಿಮುಖವಾಗುತ್ತಿದ್ದ ಜನನ ಮತ್ತು ಮರಣ ದರದ ವಿಶಿಷ್ಟ ನಮೂನೆಯನ್ನು ವಿವರಿಸಲು ಅಭಿವೃದ್ಧಿಗೊಳಿಸಿದ್ದಾಗಿತ್ತು.

25. ಭಾರತದ ಜನಸಂಖ್ಯಾ ಸ್ಥಿತ್ಯಂತರದ ಪ್ರಥಮ ಮತ್ತು ದ್ವಿತೀಯ ಹಂತದ ವಿಭಜನೆ ಯನ್ನು ನಿರ್ಣಯಿಸುವ ವರ್ಷ ಯಾವುದು?

1921ರ ಪೂರ್ವದಲ್ಲಿ ಭಾರತವು ಜನಸಂಖ್ಯಾ ಸ್ಥಿತ್ಯಂತರದ ಮೊದಲನೇ ಹಂತದಲ್ಲಿತ್ತು. 1921ರ ನಂತರ ಭಾರತದಲ್ಲಿ ಜನಸಂಖ್ಯಾ ಸ್ಥಿತ್ಯಂತರದ ಎರಡನೇ ಹಂತ ಪ್ರಾರಂಭವಾಯಿತು.

26. ಉದ್ಯೋಗ ರಚನೆ ಎಂದರೇನು?

ವಿವಿಧ ಕೈಗಾರಿಕೆಗಳಲ್ಲಿ ಮತ್ತು ವಲಯಗಳಲ್ಲಿ ಭಾರತದ ದುಡಿಯುವ ಜನರ ಹಂಚಿಕೆಯನ್ನು ಉದ್ಯೋಗ ರಚನೆ ಎನ್ನುವರು.

27. ಬ್ರಿಟಿಷರು ಭಾರತದಲ್ಲಿ ಯಾವಾಗ ರೈಲು ಸಾರಿಗೆಯನ್ನು ಪರಿಚಯಿಸಿದರು?

1850ರಲ್ಲಿ ಬ್ರಿಟಿಷರು ಭಾರತದಲ್ಲಿ ರೈಲು ಸಾರಿಗೆಯನ್ನು ಪರಿಚಯಿಸಿದರು.

28. ಮೂಲಸೌಕರ್ಯ ಎಂದರೇನು?

ಆರ್ಥಿಕತೆಯ ಕಾರ್ಯಾಚರಣೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಸೌಲಭ್ಯಗಳು ಚಟುವಟಿಕೆಗಳು ಮತ್ತು ಸೇವೆಗಳನ್ನು ಮೂಲಸೌಕರ್ಯ ಎನ್ನುವರು.

29. ಜಮೀನ್ದಾರರ ಪ್ರಮುಖ ಗುರಿ ಏನಾಗಿತ್ತು?

ಜಮೀನುದಾರರು ನಿರ್ದಾಕ್ಷಿಣ್ಯವಾಗಿ ಗೇಣಿ ಸಂಗ್ರಹಿಸುತ್ತಿದ್ದರು. ಪರಿಣಾಮವಾಗಿ, ಸಾಗುವಳಿದಾರರು ವ್ಯಾಪಕ ಸೋಷಣೆ ಮತ್ತು ಸಾಮಾಜಿಕ ತಲ್ಲಣಗಳಿಗೆ ಒಳಗಾಗಿ ರೈತರ ಸ್ಥಿತಿಗತಿ ಶೋಚನೀಯವಾಯಿತು.

30. ಭಾರತದಲ್ಲಿ ಕೈಗಾರಿಕಾ ಬೆಳವಣಿಗೆಯ ಸಂದರ್ಭದಲ್ಲಿ ಬ್ರಿಟಿಷರುಗಳ ಮುಖ್ಯ ಉದ್ದೇಶ ಏನಾಗಿತ್ತು?

ಭಾರತದ ಕಚ್ಚಾ ಸಂಪನ್ಮೂಲಗಳ ರಫ್ತನ್ನು ಸೀಮಿತಗೊಳಿಸುವದನ್ನು ಮತ್ತು ಮಾತೃ ರಾಷ್ಟ್ರವಾದ ಬ್ರಿಟನ್ನಿನ ಗರಿಷ್ಠ ಅನುಕೂಲತೆಗಾಗಿ ಆ ಕೈಗಾರಿಕೆಗಳ ಸಿದ್ದ ವಸ್ತುಗಳ ವಿಸ್ತ್ರತ ಮಾರುಕಟ್ಟೆಯಾಗಿ ಭಾರತವನ್ನು ಪರಿವರ್ತಿಸುವುದು.

31, 19ನೇ ಶತಮಾನದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಯಾವ ಆಧುನಿಕ ಕೈಗಾರಿಕೆಗಳನ್ನು ಪ್ರಾರಂಭಿಸಲಾಯಿತು.

ಹತ್ತಿ ಬಟ್ಟೆ ಮತ್ತು ಸೊಣುನ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಹತ್ತಿ ಬಟ್ಟೆ ಕೈಗಾರಿಕೆಗಳು ದೇಶದ ಪಶ್ಚಿಮ ಭಾಗದಲ್ಲಿ ಅಂದರೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದ್ದು ಭಾರತೀಯರ ಪ್ರಾಬಲ್ಯಕ್ಕೊಳಪಟ್ಟವು.

32. ದ್ವಿತೀಯ ಮಹಾಯುದ್ಧದ ನಂತರ ಪ್ರಾರಂಭವಾದ ಕೈಗಾರಿಕೆಗಳಾವುವು?

ಸಕ್ಕರೆ, ಸಿಮೆಂಟ್, ಕಾಗದದ ಕೈಗಾರಿಕೆಗಳು ಸ್ಥಾಪನೆಯಾದವು.

33. ಭಾರತದ ವಿದೇಶಿ ವ್ಯಾಪಾರದ ತಡೆಗೆ ಕಾರಣವಾಗಿರುವ ಅಂಶಗಳಾವುವು?

ವಸಾಹತುಶಾಹಿ ಸರ್ಕಾರ ಸರಕುಗಳ ಉತ್ಪಾದನೆ, ವ್ಯಾಪಾರ ಮತ್ತು ಸುಂಕದ ನಿರ್ಬಂಧಿತ ನೀತಿಯನ್ನು ಅನುಸರಿಸಿದ್ದರಿಂದ ಭಾರತದ ವಿದೇಶಿ ವ್ಯಾಪಾರದ ರಚನೆ, ಸಂಯೋಜನೆ ಮತ್ತು ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

34. 1921 ಕ್ಕಿಂತ ಮುಂಚೆ ಜನಸಂಖ್ಯಾ ಬೆಳವಣಿಗೆ ದರ ಏಕೆ ಹೆಚ್ಚಾಗಿರಲಿಲ್ಲ?

ಬಡತನ, ಅಪೌಷ್ಠಿಕತೆ ಮತ್ತು ಬಡ – ಆರೋಗ್ಯ ಸೌಲಭ್ಯಗಳ ಕಾರಣದಿಂದಾಗಿ ಜನಸಂಖ್ಯಾ ಬೆಳವಣಿಗೆ ದರ ಕಡಿಮೆಯಿತ್ತು.

35. ರೈಲು ಸಾರಿಗೆಯು ಭಾರತದ ಆರ್ಥಿಕತೆಯ ರಚನೆಯ ಮೇಲೆ ಹೇಗೆ ಪರಿಣಾಮ ಬೀರಿದೆ ?

1. ಒಂದು ಕಡೆ ಜನರು ದೂರದ ಪ್ರಯಾಣ ಕೈಗೊಳ್ಳಲು ಸಾಧ್ಯವಾಗಿದ್ದರಿಂದ ಭೌಗೋಳಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಲು ಅವಕಾಶವಾಯಿತು.

2. ಭಾರತದ ಕೃಷಿಯ ವಾಣಿಜ್ಯಕರಣ.

1st Puc Economics Chapter 1 Notes Question Answer in Kannada

36. ವಿದೇಶಿ ವ್ಯಾಪಾರದ ಪ್ರಮುಖ ಲಕ್ಷಣ ಯಾವುದು?

ವಿದೇಶಿ ವ್ಯಾಪಾರದ ಪ್ರಮುಖ ಲಕ್ಷಣಗಳೆಂದರೆ :- ಅತ್ಯಧಿಕ ಪ್ರಮಾಣದ ರಫ್ತು ಮೀಸಲತೆ ಸೃಷ್ಟಿಸುವುದು.

37. ವಸಾಹತುಶಾಹಿ ಸಂದರ್ಭದಲ್ಲಿ ರೈತರ ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣಗಳೇನು?

  • ಹಿಂದುಳಿದ ತಂತ್ರಜ್ಞಾನ
  • ನೀರಾವರಿ ಸೌಲಭ್ಯದ ಕೊರತೆ
  • ರಸಗೊಬ್ಬರಗಳ ಅಸಮರ್ಪಕ ಬಳಕೆ
  • ಕಂದಾಯ ಪಾವತಿಸದಿರುವುದು.

38. ವಸಾಹತುಶಾಹಿ ಅವಧಿಯಲ್ಲಿ ಭಾರತದ ಕೃಷಿವಲಯ ಸ್ಥಗಿತತೆಗೆ ಪ್ರಮುಖ ಕಾರಣಗಳೇನು?

ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತದ ಆರ್ಥಿಕತೆಯು ಕೃಷಿ ಪ್ರಧಾನವಾಗಿಯೇ ಉಳಿದಿತ್ತು. ದೇಶದ ಜನಸಂಖ್ಯೆಯ ಸುಮಾರು ಶೇ. 85 ರಷ್ಟು ದೇಶದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದರು. ಒಟ್ಟು ಸಾಗುವಳಿ ಭೂಮಿಯ ವಿಸ್ತರಣೆಯಿಂದಾಗಿ ಉತ್ಪಾದನೆ ಅಲ್ಪ ಪ್ರಮಾಣದಲ್ಲಿ ಹೆಚ್ಚಿದರೂ ಕೃಷಿ ಉತ್ಪಾದಕತೆ ಇಳಿಮುಖವಾಯಿತು.

ಕೆಲವು ಕಾರಣಗಳೆಂದರೆ :

  1. ಬ್ರಿಟಿಷ್ ವಸಾಹತುಸಾಹಿ ಸರ್ಕಾರ ಜಾರಿಗೊಳಿಸಿದ ವಿವಿಧ ಭೂ ಮಾಲೀಕತ್ವ ಪದ್ಧತಿಗಳು, ಪ್ರಮುಖವಾಗಿ ‘ಜಮೀನುದಾರಿ ಪದ್ಧತಿ’ಯಿಂದ ಕೃಷಿ ವಲಯದ ಸ್ಥಗಿತತೆಗೆ ಕಾರಣವಾಯಿತು.
  2. ಜಮೀನುದಾರಿ ಪದ್ಧತಿಯಿಂದಾಗಿ ಕೃಷಿ ವಲಯದ ಲಾಭವು ಸಾಗುವಳಿದಾರರ ಬದಲಿಗೆ ಜಮೀನುದಾರರ ಪಾಲಾಯಿತು.
  3. ವಸಾಹತುಶಾಹಿ ಸರ್ಕಾರವು ಕೃಷಿ ಅಭಿವೃದ್ಧಿಗೆ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ.
  4. ಸಾಗುವಳಿದಾರರು ವ್ಯಾಪಕ ಶೋಷಣೆ ಮತ್ತು ಸಾಮಾಜಿಕ ತಲ್ಲಣಗಳಿಗೆ ಒಳಗಾಗಿ ರೈತರ ಸ್ಥಿತಿಗತಿ ಶೋಚನೀಯವಾಯಿತು.

39. ಜಮೀನುದಾರಿ ಪದ್ಧತಿ ಎಂದರೇನು?

ಜಮೀನುದಾರಿ ಪದ್ಧತಿ ಎಂದರೆ ತೆರಿಗೆಗಳನ್ನು ಸಂಗ್ರಹಿಸುವ ವ್ಯವಸ್ಥೆ ಎಂದರ್ಥ. ಭೂಮಿಯ ಆದಾಯ, ಜಿಲ್ಲೆಗಳ ಆಧಾರದ ಮೇಲೆ ಹಣವನ್ನು ನಿಗದಿಪಡಿಸುವ ವ್ಯವಸ್ಥೆಯಾಗಿದೆ.

FAQ

1. ಮೂಲಸೌಕರ್ಯ ಎಂದರೇನು?

ಆರ್ಥಿಕತೆಯ ಕಾರ್ಯಾಚರಣೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಸೌಲಭ್ಯಗಳು ಚಟುವಟಿಕೆಗಳು ಮತ್ತು ಸೇವೆಗಳನ್ನು ಮೂಲಸೌಕರ್ಯ ಎನ್ನುವರು.

2ವಿದೇಶಿ ವ್ಯಾಪಾರ ಎಂದರೇನು?

ದೇಶ – ದೇಶಗಳ ನಡುವಿನ ಆಮದು ಮತ್ತು ರಫ್ತು ವ್ಯಾಪಾರವನ್ನು ವಿದೇಶಿ ವ್ಯಾಪಾರ ಎನ್ನುವರು.

3. ವಸಾಹತುಶಾಹಿ ಪದ್ಧತಿ ಎಂದರೇನು?

ವಸಾಹತುಗಳನ್ನು ಗೆಲ್ಲುವ ಅಥವಾ ಇತರ ವಿಧಾನಗಳಿಂದ ಅವುಗಳನ್ನು ಗಳಿಸುವ ಮತ್ತು ಅವುಗಳನ್ನು ಅವಲಂಬಿಗಳನ್ನಾಗಿ ಮಾಡುವ ವಿಧಾನ. ಅಲ್ಲದೆ ಗಡಿಯಾಚೆಯ ಪ್ರದೇಶಗಳ ರಾಜಕೀಯ ಮತ್ತು ಆರ್ಥಿಕ ಜೀವನದಲ್ಲಿ ತನ್ನ ಸಾಮರ್ಥ್ಯ, ನಿಯಂತ್ರಣವನ್ನು ಹೇರುವುದಾಗಿದೆ. ಶೋಷಣೆ ವಸಾಹತುವಿನ ಪ್ರಮುಖ ಲಕ್ಷಣವಾಗಿದೆ.

4. ಉದ್ಯೋಗ ರಚನೆ ಎಂದರೇನು?

ವಿವಿಧ ಕೈಗಾರಿಕೆಗಳಲ್ಲಿ ಮತ್ತು ವಲಯಗಳಲ್ಲಿ ಭಾರತದ ದುಡಿಯುವ ಜನರ ಹಂಚಿಕೆಯನ್ನು ಉದ್ಯೋಗ ರಚನೆ ಎನ್ನುವರು.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh