ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಭಾರತದಲ್ಲಿ ಮಾನವ ಬಂಡವಾಳ ನಿರ್ಮಾಣ ನೋಟ್ಸ್, 1st Puc Economics Chapter 5 Notes Question Answer Mcq Pdf in Kannada Medium 2023 Kseeb Solutions For Class 11 Economics Chapter 5 Notes in Kannada 1st Puc Economics 5th Lesson Notes 1st PUC Economics Chapter 5 Human Capital Formation in India in Kannada Bharatadalli Manava Bandavala Nirmana Notes 1st Puc Economics Notes in Kannada Pdf Chapter 5 1st Puc Economics 5th Chapter Notes in Kannada
1st Puc Economics Chapter 5 Notes in Kannada
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಒಂದು ದೇಶದ ಮಾನವ ಬಂಡವಾಳದ ಎರಡು ಪ್ರಮುಖ ಮೂಲಗಳು ಯಾವುವು?
ಪೌಷ್ಠಿಕಾಂಶವುಳ್ಳ ಸರಕುಗಳು ಪ್ರತಿಯೊಬ್ಬರ ಜೀವನ ಮಟ್ಟವನ್ನು ಉತ್ತಮಪಡಿಸುವುದು ಅನುಮಾನಸ್ಪಾದವಾಗಿರುವುದರಿಂದ ಪೌಷ್ಠಿಕಾಂಶ ಆಧಾರಿತ ವಿಧಾನವು ಬಡವರನ್ನು ಗುರುತಿಸುವಲ್ಲಿ ಸಮರ್ಪಕವಾಗಿಲ್ಲ.
2. ಒಂದು ದೇಶದ ಶೈಕ್ಷಣಿಕ ಸಾಧನೆಯ ಸೂಚಕಗಳು ಯಾವುವು?
ಒಂದು ದೇಶದ ಶೈಕ್ಷಣಿಕ ಸಾಧನೆಯ ಸೂಚಕಗಳು ಯಾವುವೆಂದರೆ :
ವಯಸ್ಕರ ಸಾಕ್ಷರತಾ ದರ
ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ದರ
ಯುವ ಸಾಕ್ಷರತಾ ದರ
3. ಭಾರತದಲ್ಲಿ ಶೈಕ್ಷಣಿಕ ಸಾಧನೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಕಾಣುತ್ತೇವೆ, ಏಕೆ?
ಸರ್ಕಾರದ ಒಟ್ಟು ವೆಚ್ಚದ ಶೇಕಡಾವಾರು ಶಿಕ್ಷಣ ವೆಚ್ಚವು ಸರ್ಕಾರದ ಮುಂದಿರುವ ಯೋಜನೆಗಳಲ್ಲಿ ಶಿಕ್ಷಣದ ಮಹತ್ವವನ್ನು ಸೂಚಿಸುತ್ತದೆ. ಒಟ್ಟು ಶಿಕ್ಷಣ ವೆಚ್ಚದ ಬಹುಪಾಲನ್ನು ಪ್ರಾಥಮಿಕ ಶಿಕ್ಷಣವು ಪಡೆಯುತ್ತಿದೆ ಮತ್ತು ಉನ್ನತ ಶಿಕ್ಷಣದ ಪ್ರಾ ಅತ್ಯಂತ ಕಡಿಮೆ ಇದೆ, 2011 – 12 ರಲ್ಲಿ ಪ್ರಾಥಮಿಕ ಶಿಕ್ಷಣದ ತಲಾ ಶಿಕ್ಷಣ ವೆಚ್ಚದಲ್ಲಿ ರಾಜ್ಯ ರಾಜ್ಯಗಳ ನಡುವೆ ಬಹಳ ವ್ಯತ್ಯಾಸವಿದೆ. ಅದು ಹಿಮಾಚಲ ಪ್ರದೇಶದಲ್ಲಿ ಆ ಹೆಚ್ಚು ಅಂದರೆ ರೂಪಾಯಿ 17,000 ರಿಂದ ಹಿಡಿದು ಬಿಹಾರದಲ್ಲಿ ಅತಿ ಕಡಿಮೆ ಅಂದರೆ ರೂ. 3,600ರ ವರೆಗೂ ಇದೆ ಇದು ರಾಜ್ಯಗಳ ನಡುವೆ ಶೈಕ್ಷಣಿಕ ಅವಕಾಶಗಳು ಮತ್ತು ಸಾಧನೆಗಳಲ್ಲಿನ ವ್ಯತ್ಯಾಸಗಳಿಗೆ ದಾರಿ ಮಾಡಿಕೊಡುತ್ತಿದೆ.
4. ಮಾನವ ಬಂಡವಾಳ ಮತ್ತು ಮಾನವ ಅಭಿವೃದ್ಧಿ ನಡುವಿನ ವ್ಯತ್ಯಾಸಗಳನ್ನು ಗುರುತಿಸಿ.
ಮಾನವ ಬಂಡವಾಳ ಮತ್ತು ಮಾನವ ಅಭಿವೃದ್ಧಿ ನಡುವಿನ ವ್ಯತ್ಯಾಸಗಳೆಂದರೆ : ಮಾನವ ಬಂಡವಾಳ : ಒಂದು ಸಂಸ್ಥೆ ಅಥವಾ ದೇಶಕ್ಕೆ ಮೌಲ್ಯ ಅಥವಾ ಬೆಲೆಯಾಗಬಲ್ಲ ಒಬ್ಬ ವ್ಯಕ್ತಿ ಕೌಶಲ್ಯಗಳು, ಜ್ಞಾನ ಮತ್ತು ಅನುಭವವಾಗಿದೆ. ಮಾನವ ಬಂಡವಾಳವು ಮಾನವರ ಶ್ರಮ ನಿರ್ವಹಣೆ ಮತ್ತು ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಸಾಮರ್ಥ್ಯಗಳಲ್ಲಿರುವ ಜ್ಞಾನ ಮತ್ತು ಕೌಶಲ್ಯಗಳ ಸಂಗ್ರಹವಾಗಿದೆ. ಶಿಕ್ಷಣದ ಮೇಲಿನ ಹೂಡಿಕೆಯ ಮಾನವನನ್ನು ಮಾನವ ಬಂಡವಾಳವಾಗಿ ಮಾರ್ಪಡಿಸುತ್ತದೆ. ಮಾನವ ಬಂಡವಾಳವು ಕಾರ್ಮಿಕರ ಉತ್ಪಾದಕತೆಯನ್ನು ಹೆಚ್ಚಿಸಿ ಭವಿಷ್ಯದ ಆದಾಯದ ಮೂಲಗಳಾಗಿವೆ.
ಮಾನವ ಅಭಿವೃದ್ಧಿಯು ಮಾನವನ ಯೋಗಕ್ಷೇಮಕ್ಕೆ ಶಿಕ್ಷಣ ಮತ್ತು ಆರೋಗ್ಯದ ಎರಡೂ ವಿಚಾರದ ಮೇಲೆ ಆಧಾರಿತವಾಗಿದೆ. ಏಕೆಂದರೆ ಜನರು ಓದುವ ಮತ್ತು ಬರೆಯುವ ಸಾಮರ್ಥ್ಯ ದೀರ್ಘಾವಧಿ ಮತ್ತು ಆರೋಗ್ಯಯುತ ಜೀವನವನ್ನು ನಡೆಸಿರುತ್ತಾರೋ ಆಗ ಮಾತ್ರ ಅವರ ಇತರೇ ಮೌಲ್ಯಯುತ ಆಯ್ಕೆಗಳನ್ನು ಮಾಡಲು ಸಮರ್ಥರಾಗಿರುತ್ತಾರೆ.
5. “ಮಾನವ ಬಂಡವಾಳಕ್ಕೆ ಹೋಲಿಸಿದರೆ ಮಾನವ ಅಭಿವೃದ್ಧಿಯು ವಿಶಾಲವಾದ ಪರಿಭಾವನೆಯಾಗಿದೆ” ಹೇಗೆ?
ಮಾನವ ಬಂಡವಾಳಕ್ಕೆ ಹೋಲಿಸಿದರೆ ಮಾನವ ಅಭಿವೃದ್ಧಿಯು ವಿಶಾಲವಾದ, ಪರಿಭಾವನೆಯಾಗಿದೆ. ಮಾನವ ಬಂಡವಾಳದ ಅಧಿಕಗೊಂಡ ಉತ್ಪಾದಕತೆಯು ಕೇವಲ ಶ್ರಮದ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಣನೀಯ ಕೊಡುಗೆಯನ್ನು ನೀಡುವುದಲ್ಲದೇ ಅದು ಆವಿಷ್ಕಾರಗಳನ್ನು ಪ್ರಚೋದಿಸುತ್ತದೆ ಮತ್ತು ನವೀನ ತಂತ್ರಜ್ಞಾನವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ.
ಮಾನವ ಬಂಡವಾಳವು ಮತ್ತು ವಿಶಾಲವಾದ ಪರಿಭಾವನೆಯಾಗಿದೆ. ಇದು ಶಿಕ್ಷಣ ಮತ್ತು ಆರೋಗ್ಯದಿಂದ ಮೇಲೆ ಹೂಡಿಕೆಯನ್ನು ಮಾಡಲೇಬೇಕಿದೆ. ಆದುದರಿಂದ ಮೂಲ ಶಿಕ್ಷಕ ಮತ್ತು ಮೂಲ ಆರೋಗ ಶಮದ ಉತ್ಪಾದಕತೆಗೆ ಅವುಗಳ ಕೊಡುಗೆಯ ಹೊರತಾಗಿಯೂ, ತಮ್ಮದೇ ಪ್ರಾಮುಖ್ಯತೆಯನ್ನು ಪಡೆದಿವೆ,
6. ಮಾನವ ಬಂಡವಾಳ ನಿರ್ಮಾಣಕ್ಕೆ ಕೊಡುಗೆ ನೀಡುವ ಅಂಶಗಳಾವುವು?
ಮಾನವ ಬಂಡವಾಳದ ಪ್ರಮುಖ ಮೂಲಗಳೆಂದರೆ :
ಶಿಕ್ಷಣದ ಮೇಲಿನ ಹೂಡಿಕೆ
ಆರೋಗ್ಯ ವೆಚ್ಚ
ವೃತ್ತಿ ನಿರತ ತರಭೇತಿ ನಿರತ ವೆಚ್ಚ
ವಲಸೆ ಮೇಲಿನ ವೆಚ್ಚ
ಮಾಹಿತಿ ಮೇಲಿನ ವೆಚ್ಚ
7. ಭಾರತದಲ್ಲಿ ಶಾಲೆಗಳ ಮತ್ತು ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಸರ್ಕಾರಿ ಸಂಘಟನೆಗಳು ಹೇಗೆ ಸಹಾಯಕವಾಗಿವೆ?
ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮಾರುಕಟ್ಟೆಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳೆರಡೂ ಅಸ್ತಿತ್ವದಲ್ಲಿವೆ. ಶಿಕ್ಷಣ ಮತ್ತು ಆರೋಗ್ಯದ ಮೇಲಿನ ವೆಚ್ಚಗಳು ಗಣ ನೀಯವಾದ ದೀರ್ಘಾವಧಿ ಪರಿಣಾಮ ಉಂಟುಮಾಡುತ್ತವೆ ಮತ್ತು ಅವುಗಳನ್ನು ಸುಲಭವಾಗಿ ಹಿಂಪಡೆಯಲಾಗದು. ಆದುದರಿಂದ ಸರ್ಕಾರದ ಮಧ್ಯಪ್ರವೇಶ ಅವಶ್ಯಕವಾಗಿದೆ. ಶೈಕ್ಷಣಿಕ ಮತ್ತು ಆರೋಗ್ಯ ಸೇವೆಗಳನ್ನು ಪಡೆಯುವವರು ಉತ್ತಮ ಗುಣಮಟ್ಟ ಮತ್ತು ಕಡಿಮೆ ವೆಚ್ಚ ಮಾಡಲು ಇಚ್ಚಿಸುತ್ತಾರೆ. ಆದ್ದರಿಂದ ಸೂಕ್ತ ಬೆಲೆ ವಿಧಿಸುವುದಕ್ಕೆ ಬದ್ಧರಾಗಿರುತ್ತಾರೆಂದು ಸರ್ಕಾರವು ಭರವಸೆ ಕೊಡಬೇಕಾಗುತ್ತದೆ.
1st Puc Economics Chapter 5 Notes in Kannada
8. ಒಂದು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣವನ್ನು ಒಂದು ಮುಖ್ಯ ಸಾಧನವಾಗಿ ಪರಿಗಣಿಸಲಾಗಿದೆ, ಹೇಗೆ?
ಶಿಕ್ಷಣವು ಸಾಮಾಜಿಕವಾಗಿ ಉತ್ತಮ ಸ್ಥಾನ ಮತ್ತು ಗೌರವವನ್ನು ತಂದುಕೊಡುತ್ತದೆ. ಇದು ಸಮಾಜದಲ್ಲಾಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವ ಜ್ಞಾನವನ್ನು ಒದಗಿಸುತ್ತದೆ. ಇದು ಆವಿಷ್ಕಾರಗಳನ್ನು ಕೂಡ ಪ್ರೇರೇಪಿಸುತ್ತದೆ. ಮೇಲಾಗಿ ವಿದ್ಯಾವಂತ ಶ್ರಮಶಕ್ತಿಯ ಲಭ್ಯತೆಯು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ. ಆರ್ಥರಾರು ದೇಶದಲ್ಲಿ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸುವ ಆಗತ್ಯತೆಗಳನ್ನು ಒತ್ತಿ ಹೇಳುತ್ತಾರೆ. ಏಕೆಂದರೆ ಅದು ಅಭಿವೃದ್ಧಿ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತದೆ.
9. ಮಾನವ ಬಂಡವಾಳ ನಿರ್ಮಾಣದ ಮೂಲಗಳಾಗಿ ಕೆಳಗಿನವುಗಳನ್ನು ಚರ್ಚಿಸಿ
[1] ಆರೋಗ್ಯ ಮೂಲ ಸೌಕರ್ಯ [2] ವಲಸೆ ಮೇಲಿನ ವೆಚ್ಚ[I] ಆರೋಗ್ಯ ಮೂಲ ಸೌಕರ್ಯ : ಪ್ರತಿಬಂಧಕ ಔಷಧಿ, ನಿವಾರಕ ಔಷಧಿ ಸಾಮಾಜಿಕ ಔಷಧಿ ಹಾಗೂ ಶುದ್ಧ ಕುಡಿಯುವ ನೀರು ಮತ್ತು ಉತ್ತಮ ವ್ಯವಸ್ಥೆಯನ್ನು ಒದಗಿಸುವುದು ಮುಂತಾದವು ಆರೋಗ್ಯ ವೆಚ್ಚಗಳ ಹಲವು ರೂಪಗಳಾಗಿವೆ. ಆರೋಗ್ಯ ವೆಚ್ಚವು ನೇರವಾಗಿ ಆರೋಗ್ಯಯುತ ಶ್ರಮಶಕ್ತಿಯ ಪೂರೈಕೆಯನ್ನು ಹೆಚ್ಚಿಸುತ್ತದೆ.
[2] ವಲಸೆ ಮೇಲಿನ ವೆಚ್ಚ : ಜನರು ಉದ್ಯೋಗ ಮತ್ತು ಹೆಚ್ಚಿನ ವೇತನಗಳನ್ನು ಅರಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾರೆ. ಹೆಚ್ಚಿನ ವೇತನ ಪಡೆಯುವುದಕ್ಕಾಗಿ ಇತರೆ ದೇಶಗಳಿಗೆ ವಲಸೆ ಹೋಗುತ್ತಾರೆ.
10. ಮಾನವ ಸಂಪನ್ಮೂಲದ ಪರಿಣಾಮಕಾರಿ ಬಳಕೆಗಾಗಿ ಆರೋಗ್ಯ ಮತ್ತು ಶಿಕ್ಷಣದ ಮೇಲಿನ ವೆಚ್ಚಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯುವ ಅಗತ್ಯತೆಯನ್ನು ಪ್ರತಿಪಾದಿಸಿ.
ಸರ್ಕಾರದ ಈ ವೆಚ್ಚವನ್ನು ಎರಡು ರೀತಿಯಲ್ಲಿ ವ್ಯಕ್ತಪಡಿಸಬಹುದು. 1. ಸರ್ಕಾರದ ಒಟ್ಟು ವೆಚ್ಚದ ಶೇಕಡಾವಾರು ರೂಪದಲ್ಲಿ 2. ಒಟ್ಟು ದೇಶೀಯ ಉತ್ಪನ್ನದ GDP ಶೇಕಡಾವಾರು ರೂಪದಲ್ಲಿ. ವರ್ಷಗಳು ಕಳೆದಂತೆ ಶಿಕ್ಷಣದ ಮೇಲಿನ ಸರ್ಕಾರದ ವೆಚ್ಚವು ಹೆಚ್ಚಳವಾಗುತ್ತಿದೆ.
1952 ರಿಂದ 2012ರ ಅವಧಿಯಲ್ಲಿ ಸರ್ಕಾರದ ಒಟ್ಟು ವೆಚ್ಚದಲ್ಲಿ ಶಿಕ್ಷಣದ ವೆಚ್ಚದ ಶೇಕಡಾವಾರು ಪ್ರಮಾಣವು 7.92 ರಿಂದ 11.7ಕ್ಕೆ ಹೆಚ್ಚಳವಾಗಿದೆ. ಮತ್ತು ಜಿಡಿಪಿಯ ಶೇಕಡಾವಾರು ಪ್ರಮಾಣವು 0.64 ರಿಂದ 3.31ಕ್ಕೆ ಹೆಚ್ಚಳವಾಗಿದೆ. ಶಿಕ್ಷಣದ ಮೇಲಿನ ಸರ್ಕಾರದ ವೆಚ್ಚವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಇದು ರಾಜ್ಯಗಳ ನಡುವೆ ಶೈಕ್ಷಣಿಕ ಅವಕಾಶಗಳು ಮತ್ತು ಸಾಧನೆಗಳಲ್ಲಿನ ವ್ಯತ್ಯಾಸಗಳಿಗೆ ದಾರಿ ಮಾಡಿಕೊಡುತ್ತಿದೆ.
ಶಿಕ್ಷಣ ವಲಯದಲ್ಲಿನ ವೆಚ್ಚವು ವಿವಿಧ ಆಯೋಗಗಳು ಶಿಫಾರಸ್ಸು ಮಾಡಲಾದ ಶಿಕ್ಷಣ ವೆಚ್ಚದ ಅಪೇಕ್ಷಿತ ಮಟ್ಟಕ್ಕಿಂತ ಬಹಳ ಕಡಿಮೆಯಿದೆ. ಶಿಕ್ಷಣ ಆಯೋಗ (1964-66)ವು ಶಿಫಾರಸ್ಸು ಮಾಡಿರುವುದೇನೆಂದರೆ, ಶಿಕ್ಷಣದ ಮೇಲೆ ಕೊನೇ ಪಕ GDPಯ ಶೇ. 6 ರಷ್ಟು ಹಣವನ್ನಾದರೂ ವೆಚ್ಚ ಮಾಡಬೇಕು. 2002ರ ಡಿಸೆಂಬರ್‌ನಲ್ಲಿ ಭಾರತ ಸರ್ಕಾರವು 6-14 ವರ್ಷಗಳ ವಯೋಗುಂಪಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಸರ್ಕಾರವು 6-14 ವರ್ಷಗಳ ವಯೋಗುಂಪಿನ ಎಲ್ಲಾ ಮಕ್ಕಳಿಗೆ ಉಚಿನ ಮತ್ತು ಕಡ್ಡಾಯ ಶಿಕ್ಷಣವನ್ನು ಒಂದು ಮೂಲಭೂಲ ಹಕ್ಕನ್ನಾಗಿ ಮಾಡಿದೆ. “ತಪಾಸ್ ಮುಂಜುಂದಾರ್ ಸಮಿತಿ” (1998)ಯು 10 ವರ್ಷಗಳ ಅವಧಿಯಲ್ಲಿ 6 – 14 ವರ್ಷಗಳ ವಯೋಗುಂಪಿನ ಎಲ್ಲಾ ಭಾರತೀಯ ಮಕ್ಕಳನ್ನು ಶಾಲಾ ಶಿಕ್ಷಣದ ವ್ಯಾಪ್ತಿಯೊಳಗೆ ತರಲು ಸುಮಾರು ರೂ. 1.37 ಲಕ್ಷ ಕೋಟಿಗಳನ್ನು ವೆಚ್ಚ ಮಾಡಬೇಕೆಂದು ಅಂದಾಜು ಮಾಡಿದೆ. ಭಾರತ ಸರ್ಕಾರವು ಎಲ್ಲಾ ಕೇಂದ್ರ ತೆರಿಗೆಗಳ ಮೇಲೆ ಶೇ. 2ರಷ್ಟು ‘ಶಿಕ್ಷಣ ಮೇಲು ತೆರಿಗೆ’ಯನ್ನು ವಿಧಿಸಲು ಪ್ರಾರಂಭಿಸಿದೆ. ಶಿಕ್ಷಣ ಮೇಲು ತೆರಿಗೆಯಿಂದ ಬರುವ ಆದಾಯವನ್ನು ಪ್ರಾಥಮಿಕ ಶಿಕ್ಷಣದ ಮೇಲೆ ವೆಚ್ಚ ಮಾಡುತ್ತಿದೆ. ಸರ್ಕಾರವು ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ಹಣವನ್ನು ಮಂಜೂರು ಮಾಡುತ್ತಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸುವುದಕ್ಕಾಗಿ ಹೊಸ ಸಾಲ ಯೋಜನೆಗಳನ್ನು ಜಾರಿಗೆ ತಂದಿದೆ.
11. ಮಾನವ ಬಂಡವಾಳದ ಹೂಡಿಕೆಯು ಬೆಳವಣಿಗೆಗೆ ಹೇಗೆ ಕೊಡುಗೆ ಸಲ್ಲಿಸುತ್ತದೆ?
ಮಾನವ ಬಂಡವಾಳದ ಹೂಡಿಕೆಯು ಆರ್ಥಿಕ ಬೆಳವಣಿಗೆಗೆ ಕೊಡುಗೆ ಸಲ್ಲಿಸುತ್ತದೆ.
ಒಬ್ಬ ವಿದ್ಯಾವಂತ ವ್ಯಕ್ತಿಯ ಶ್ರಮ ಕೌಶಲ್ಯವು ಒಬ್ಬ ಅವಿದ್ಯಾವಂತ ವ್ಯಕ್ತಿಗಿಂತ ಹೆಚ್ಚಾಗಿರುತ್ತವೆ ಮತ್ತು ವಿದ್ಯಾವಂತ, ಅವಿದ್ಯಾವಂತನಿಗಿಂತ ಅಧಿಕ ಆದಾಯವನ್ನು ಉತ್ಪಾದಿಸುತ್ತಾನೆ. ಆರ್ಥಿಕ ಬೆಳವಣಿಗೆಯ ಅರ್ಥವೆಂದರೆ, ಒಂದು ದೇಶದ ನೈಜ ರಾಷ್ಟ್ರೀಯ ಆದಾಯದಲ್ಲಿನ ಹೆಚ್ಚಳವಾಗಿದೆ. ಸಹಜವಾಗಿ, ಆರ್ಥಿಕ ಬೆಳವಣಿಗೆಗೆ ವಿದ್ಯಾವಂತ ವ್ಯಕ್ತಿಯ ಕೊಡುಗೆಯು ಅನಕ್ಷರಸ್ಥ ವ್ಯಕ್ತಿಗಿಂತ ಹೆಚ್ಚಾಗಿರುತ್ತದೆ.
ಒಬ್ಬ ಆರೋಗ್ಯವಂತ ವ್ಯಕ್ತಿಯು ದೀರ್ಘಾವಧಿಯಲ್ಲಿ ತಡೆರಹಿತ ಶ್ರಮದ ಪೂರೈಕೆಯನ್ನು ಒದಗಿಸುವುದಾದರೆ ಆಗ ಆರೋಗ್ಯವೂ ಸಹ ಆರ್ಥಿಕಾಭಿವೃದ್ಧಿಯ ಒಂದು ಪ್ರಮುಖ ಅಂಶವಾಗಿರುತ್ತದೆ. ಆದುದರಿಂದ ಶಿಕ್ಷಣ ಮತ್ತು ಆರೋಗ್ಯ, ಈ ಎರಡರ ಜೊತೆಗೆ ವೃತ್ತಿ ನಿರತ ತರಬೇತಿ, ಉದ್ಯೋಗ ಮಾರುಕಟ್ಟೆ ಮಾಹಿತಿ ಮತ್ತು ವಲಸೆಯಂತಹ ಇತರ ಅಂಶಗಳು ಒಬ್ಬ ವ್ಯಕ್ತಿಯ ಆದಾಯ ಮತ್ತು ಉತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಭಾರತವು ಬಹಳ ಹಿಂದೆಯೇ ಆರ್ಥಿಕ ಬೆಳವಣಿಗೆಯಲ್ಲಿ ಬಂಡವಾಳದ ಮಹತ್ವನ್ನು ಗುರುತಿಸಿದೆ. ಏಳನೆಯ ಪಂಚವಾರ್ಷಿಕ ಯೋಜನೆಯು ಹೇಳಿರುವಂತೆ, “ವಿಶೇಷವಾಗಿ ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯು ಯಾವುದೇ ಅಭಿವೃದ್ಧಿ ಕಾರತಂತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆರ್ಥಿಕ ಬೆಳವಣಿಗೆಯ ವೇಗವನ್ನು ತ್ವರಿತಗೊಳಿಸುವಲ್ಲಿ ಮತ್ತು ಅಪೇಕ್ಷಿತ ದಿಕ್ಕಿನಲ್ಲಿ ಸಾಮಾಜಿಕ ಬದಲಾವಣೆಯ ಭರವಸೆ ನೀಡುವಲ್ಲಿ ವಿದ್ಯಾವಂತ ಮತ್ತು ತರಬೇತಿ ಹೊಂದಿದ ಅಧಿಕ ಜನಸಂಖ್ಯೆಯು ಒಂದು ಆಸ್ತಿಯಾಗಬಲ್ಲದು.
12. `ಸರಾಸರಿ ಶಿಕ್ಷಣಮಟ್ಟ ಹೆಚ್ಚಾದಂತೆ ವಿಶ್ವದಾದ್ಯಂತ ಅಸಮಾನತೆಯ ಪ್ರಮಾಣ ಇಳಿಮುಖವಾಗುತ್ತದೆ” ಎಂಬ ಅಂಶವನ್ನು ವಿಮರ್ಶಿಸಿ,
“ಸರಾಸರಿ ಶಿಕ್ಷಣಮಟ್ಟ ಹೆಚ್ಚಾದಂತೆ ವಿಶ್ವದಾದ್ಯಂತ ಅಸಮಾನತೆಯ ಪ್ರಮಾಣ ಇಳಿಮುಖವಾಗುತ್ತದೆ.” ಹೇಗೆಂದರೆ, ಶಿಕ್ಷಣವು ಯಾವುದೇ ಕೆಲಸವನ್ನು ಮಾಡಲು ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ಕಾರ್ಮಿಕರಲ್ಲಿನ ಮೌಲ್ಯಗಳನ್ನು ಮತ್ತು ಉತ್ಪಾದಕತೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ಆರ್ಥಿಕ ಅಭಿವೃದ್ಧಿಗೆ ಬೇಕಾಗುವಂತಹ ಉತ್ತಮ ಮತ್ತು ಒಳ್ಳೆಯ ವ್ಯಕ್ತಿಗಳನ್ನು ಕೊಡುವುದಕ್ಕೆ ಸಹಕರಿಸುತ್ತದೆ. ಶಿಕ್ಷಣವು ಜನರ ಜೀವನ ಮಟ್ಟವನ್ನು ಹೆಚ್ಚಿಸುವುದಲ್ಲದೆ ತಲಾದಾಯವನ್ನು ಹೆಚ್ಚಿಸಲು ಸಹಕರಿಸುತ್ತದೆ.
13, ಒಂದು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರವನ್ನು ಪರಿಶೀಲಿಸಿ.
ಶಿಕ್ಷಣ ಕ್ಷೇತ್ರವು ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಕಂಡುಬರುತ್ತದೆ. ಶಿಕ್ಷಣದ ಮೇಲಿನ ವೆಚ್ಚಗಳು ಒಂದು ದೇಶದಲ್ಲಿನ ಜನರ ಜೀವನದ ಗುಣಮಟ್ಟದ ಮೇಲೆ ದೀರ್ಘಾವಧಿ ಪರಿಣಾಮವನ್ನು ಉಂಟು ಮಾಡುತ್ತವೆ. ಆದುದರಿಂದ ಈ ವಲಯದಲ್ಲಿ ಸರ್ಕಾರದ ಸಕ್ರಿಯ ಭಾಗವಹಿಸುವಿಕೆ ಬಹು ಅವಶ್ಯಕವಾಗಿದೆ. ಶಿಕ್ಷಣ ಸೇವೆಗಳ ಖಾಸಗೀ ಪೂರೈಕೆದಾರರು ಏಕಸಾಮ್ಯ ಶಕ್ತಿಯನ್ನು ಪಡೆದುಕೊಳ್ಳುವರು ಮತ್ತು ಶೋಷಣೆಯಲ್ಲಿ ತೊಡಗುವರು. ಇದವನ್ನು ಅರಿತ ಸರ್ಕಾರವು ಸಾರ್ವಜನಿಕ ಶಿಕ್ಷಣ ವಲಯದ ಮೇಲೆ ಹೆಚ್ಚು ಹಣವನ್ನು ವ್ಯಯ ಮಾಡುತ್ತದೆ.
ಇದರಿಂದ ದೇಶದಲ್ಲಿ ಅನಕ್ಷರತೆ ಪ್ರಮಾಣ ಕಡಿಮೆಯಾಗುತ್ತದೆ. ಶಿಕ್ಷಣದಿಂದ ಜನರ ಆರ್ಥಿಕ ಸ್ವಾವಲಂಬನೆ ಮತ್ತು ಸಮಾಜದ ಸ್ಥಿತಿ ಉತ್ತಮಗೊಳ್ಳುತ್ತದೆ. ಇದರಿಂದ ಅವರ ಜೀವನವು ಬಹಳಷ್ಟು ಸುಧಾರಿಸುತ್ತದೆ ಹಾಗೂ ಅವರ ಆದಾಯದ ಹೆಚ್ಚಿಸಿ ಅವರಲ್ಲಿ ಸಂಗ್ರಹಣೆಯು ಜಾಸ್ತಿ ಆಗುವುದನ್ನು ಕಾಣಬಹುದು.
ಉದಾ : ಸ್ವಾತಂತ್ರ್ಯ ನಂತರ ಭಾರತದಲ್ಲಿ 1947 – 1980 ಮತ್ತು 1980 – 2010 ರ ವರೆಗಿನ ಶೈಕ್ಷಣಿಕ ಅಭಿವೃದ್ಧಿ ಹಾಗೂ ಅವುಗಳಿಂದ ಜನರಿಗೆ ದೊರೆತ ಉದ್ಯೋಗಾವಕಾಶಗಳು, ವೇತನ. ಅವರ ಜೀವನ ಮಟ್ಟಗಳನ್ನು ಅವಲೋಕಿಸಿದಾಗ ಶಿಕ್ಷಣದಿಂದ ನಮ್ಮ ಆರ್ಥಿಕ ಚಟುವಟಿಕೆಗಳು ಚುರುಕಾಗಿರುವುದನ್ನು ಗಮನಿಸಬಹುದು. ಆದ್ದರಿಂದ ಮಾನವನಿಗೆ ಶಿಕ್ಷಣವು, ತನ್ನ ಆದಾಯ ಹಾಗೂ ಸ್ಥಿತಿಗತಿ ವೃದ್ಧಿಗೊಳ್ಳುವ ಒಂದು ಮೂಲವೆಂದು ಪರಿಗಣಿಸಬೇಕು. ಮುಂದುವರೆದ ರಾಷ್ಟ್ರಗಳನ್ನು ನಮ್ಮ ದೇಶಕ್ಕೆ ಹೋಲಿಕೆ ಮಾಡಿಕೊಂಡಾಗ, ಆ ದೇಶದ ಅಕ್ಷರಸ್ಥರ ಸಂಖ್ಯೆ ಜಾಸ್ತಿ ಇರುವುದು ನಮ್ಮ ಗಮನಕ್ಕೆ ಬರುತ್ತದೆ.
14. ಶಿಕ್ಷಣದ ಮೇಲಿನ ಹೂಡಿಕೆಯು ಆರ್ಥಿಕ ಬೆಳವಣಿಗೆಯನ್ನು ಹೇಗೆ ಉತ್ತೇಜಿಸುತ್ತದೆ ಎನ್ನುವುದನ್ನು ವಿವರಿಸಿ.
ಶಿಕ್ಷಣವು ಮೌಲ್ಯಗಳು, ಶೀರ್ಷಿಕೆಗಳು, ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಜನರನ್ನು ಬದಲಾಗುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಸಿದ್ಧಗೊಳಿಸುತ್ತದೆ. ಇದು ಜನರಿಗೆ ನಮ್ಯತೆ ಮತ್ತು ಸಾಮರ್ಥ್ಯವನ್ನು ಒದಗಿಸುತ್ತದೆ ಮತ್ತು ಅವರು ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವಂತೆ ಪ್ರಯತ್ನಿಸುತ್ತದೆ. ಸಾಮಾನ್ಯ ಶಿಕ್ಷಣವು ಜನರು ಅರ್ಥಮಾಡಿಕೊಳ್ಳುವ ಹಂತವನ್ನು ಹೆಚ್ಚಿಸುತ್ತದೆ ಮತ್ತು ತಾಂತ್ರಿಕ ಶಿಕ್ಷಣವು ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸುವುದರಿಂದ ಪರಿಣತಿ ಮತ್ತು ಉತ್ಪಾದಕತೆ ಹೆಚ್ಚಿಸುವುದಕ್ಕೆ ಕೊಡುಗೆ ನೀಡುತ್ತದೆ. ವೈಜ್ಞಾನಿಕ ಶಿಕ್ಷಣವು ಜನರ ಆರೋಗ್ಯವನ್ನು ಸುಧಾರಿಸುತ್ತದೆ. ಮಾನವ ಬಂಡವಾಳವು ಮಾನವರ ಶ್ರಮ ನಿರ್ವಹಣೆ ಮತ್ತು ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಸಾಮರ್ಥ್ಯಗಳಲ್ಲಿರುವ ಜ್ಞಾನ ಮತ್ತು ಕೌಶಲ್ಯಗಳ ಸಂಗ್ರಹವಾಗಿದೆ. ಶಿಕ್ಷಣದ ಮೇಲಿನ ಹೂಡಿಕೆಯು ಮಾನವನನ್ನು ಮಾನವ ಬಂಡವಾಳವಾಗಿ ಮಾರ್ಪಡಿಸುತ್ತದೆ. ಮಾನವ ಬಂಡವಾಳವು ಕಾರ್ಮಿಕರ ಉತ್ಪಾದಕತೆಯನ್ನು ಹೆಚ್ಚಿಸಿ ಭವಿಷ್ಯದ ಆದಾಯದ ಮೂಲಗಳಾಗಿವೆ.
15. ಒಬ್ಬ ವ್ಯಕ್ತಿಗೆ ವೃತ್ತಿ ನಿರತ ತರಬೇತಿಯ ಅಗತ್ಯತೆಯನ್ನು ತಿಳಿಸಿ.
ಉದ್ಯಮ ಘಟಕಗಳು ತಮ್ಮ ಕೆಲಸಗಾರರಿಗೆ ವೃತ್ತಿ ನಿರತ ತರಬೇತಿ ನೀಡಲು ವೆಚ್ಚ ಮಾಡುತ್ತವೆ.
1. ಕೆಲಸಗಾರರಿಗೆ ತಮ್ಮ ಉದ್ಯಮ ಘಟಕದಲ್ಲಿಯೇ ಪರಿಣತ ಕೆಲಸಗಾರರ ಮೇಲ್ವಿಚಾರಣೆಯ ಅಡಿಯಲ್ಲಿ ತರಬೇತಿ ನೀಡಬಹುದು.
2. ಕೆಲಸಗಾರರನ್ನು ಕ್ಯಾಂಪಸ್ ಹೊರಗಡೆ ಕಳುಹಿಸಿ ತರಬೇತಿ ಕೊಡಿಸಬಹುದು. ಇದು ಕೆಲಸಗಾರರಿಗೆ ಕೆಲಸದ ಅನುಭವವನ್ನು ನೀಡುತ್ತದೆ. ಉದ್ಯಮ ಘಟಕಕ್ಕೆ ಅಧಿಕಗೊಂಡ ಉತ್ಪಾದಕತೆಯ ಲಾಭವನ್ನು ನೀಡುತ್ತದೆ.
16. ಮಾನವ ಬಂಡವಾಳ ಮತ್ತು ಆರ್ಥಿಕ ಬೆಳವಣಿಗೆ ನಡುವಿನ ಸಂಬಂಧವನ್ನು ಗುರುತಿಸಿ.
ಆರ್ಥಿಕ ಬೆಳವಣಿಗೆ ಎಂದರೆ ಒಂದು ದೇಶದಲ್ಲಿನ ನೈಜ ರಾಷ್ಟ್ರೀಯ ವರಮಾನದ ಹೆಚ್ಚಳವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಆರ್ಥಿಕ ಬೆಳವಣಿಗೆಗೆ ಅತಿ ಮಹತ್ವದ ಅಂಶಗಳಾಗಿವೆ. ಅವು ವ್ಯಕ್ತಿಗಳ ಶ್ರಮ ಕೌಶಲ್ಯ ಮತ್ತು ಆದಾಯ ಉತ್ಪತ್ತಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದು ಅವಿಷ್ಕಾರಗಳ, ವ್ಯಕ್ತಿಗಳ ಅಧಿಕಗೊಂಡ ಉತ್ಪಾದಕತೆಯು ಶ್ರಮದ ಉತ್ಪಾದಕತೆಯನ್ನು ಹೆಚ್ಚಿ ನಿಟ್ಟಿನಲ್ಲಿ ಗಣನೀಯ ಕೊಡುಗೆಯನ್ನು ನೀಡುತ್ತದೆ. ಪಚೋದಿಸುತ್ತದೆ ಮತ್ತು ನವೀನ ತಂತ್ರಜ್ಞಾನಗಳನ್ನು ಅರಗಿಸಿಕೊಳ್ಳುವ ಸಾಮಥ್ಯವನ್ನು ಮೂಡಿಸುತ್ತದೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾನವ ಬಂಡವಾಳದ ಬೆಳವಣಿಗೆಗಳು ನೈಜ ತಲಾವರಮಾನದ ಬೆಳವಣಿಗೆಗಿಂತ ವೇಗವಾಗಿದೆ. ಇವೆರಡರ ನಡುವೆ ಸಂಬಂಧವಿದೆ. ಹೆಚ್ಚಿನ ಆದಾಯದ ಕಾರಣದಿಂದ ಉನ್ನತ ಮಟ್ಟದ ಮಾ ಬಂಡವಾಳ ನಿರ್ಮಾಣವಾಗುತ್ತದೆ. ಉನ್ನತ ಮಟ್ಟದ ಮಾನವ ಬಂಡವಾಳ ಆದಾಯದ ಬೆಳವಣಿಗೆಗೆ ಕಾರಣವಾಗಿದೆ.
1. ಡೂಸ್ಟೇ ಬ್ಯಾಂಕು (ದಿ. 1-7-2005)ರಲ್ಲಿ ಪ್ರಕಟಿಸಿದ ಜಾಗತಿಕ ಬೆಳವಣಿಗೆ ಕೇಂದ್ರಗಳು ಎಂಬ ತನ್ನ ವರದಿಯಲ್ಲಿ ಭಾರತವು 2020ರ ವೇಳೆಗೆ ಪ್ರಪಂಚದಲ್ಲಿನ ನಾಲ್ಕು ಬೆಳವಣಿಗೆ ಕೇಂದ್ರಗಳಲ್ಲಿ ಒಂದಾಗಿ ಕಾಣಿಸಿಕೊಳ್ಳಲಿದೆ ಎಂದು ಗುರುತಿಸಿದೆ.
2. ವಿಶ್ವಬ್ಯಾಂಕು ತನ್ನ ಇತ್ತೀಚಿನ “ಭಾರತ ಮತ್ತು ಜ್ಞಾನ ಅರ್ಥವ್ಯವಸ್ಥೆ – ಸನ್ನೆಯ ಬಲಗಳು ಮತ್ತು ಅವಕಾಶಗಳು” ಎಂಬ ವರದಿಯಲ್ಲಿ ತಿಳಿಸುವುದೇನೆಂದರೆ, ಭಾರತವು ಜ್ಞಾನ ಅರ್ಥವ್ಯವಸ್ಥೆಯಾಗಿ ಬದಲಾವಣೆಗೊಳ್ಳಬೇಕು. ಆದರೆ, ಭಾರತದ ತಲಾ ಆದಾಯವು 2002ರಲ್ಲಿನ 1,000 ಅಮೇರಿಕನ್ ಡಾಲರ್‌ಗಳಿಂದ 2020ರ ವೇಳೆಗೆ 3000 ಅಮೆರಿಕನ್ ಡಾಲರ್‌ಗಳಿಗೆ ಹೆಚ್ಚಲಿದೆ. ಭಾರತದಲ್ಲಿ ಮತ್ತಷ್ಟು ಹೆಚ್ಚಿನ ಮಾನವ ಬಂಡವಾಳದ ನಿರ್ಮಾಣವು, ಅದರ ಅರ್ಥವ್ಯವಸ್ಥೆಯನ್ನು, ಉನ್ನತ ಬೆಳವಣಿಗೆ ಪಥದಲ್ಲಿ ಮುನ್ನಡೆಯುವಂತೆ ಮಾಡಿದೆ.
17. ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ಅಗತ್ಯತೆಯನ್ನು ಚರ್ಚಿಸಿ.
ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸ್ಥಿತಿಗಳನ್ನು ಸುಧಾರಿಸಲು ಮಹಿಳಾ ಶಿಕ್ಷಣವನ್ನು ಉತ್ತೇಜಿಸಬೇಕಾಗಿದೆ. ಮಹಿಳೆಯರಲ್ಲಿರುವ ಕೌಶಲ್ಯತೆಯು, ಜ್ಞಾನಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗುತ್ತವೆ.
18. ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ವಿವಿಧ ಪ್ರಕಾರದ ಸರ್ಕಾರಗಳ ಮಧ್ಯಪ್ರವೇಶದ ಅವಶ್ಯಕತೆಯನ್ನು ಸಮರ್ಥಿಸಿ.
ಶಿಕ್ಷಣ ಮತ್ತು ಆರೋಗ್ಯದ ಮೇಲಿನ ಸರ್ಕಾರದ ವೆಚ್ಚಗಳನ್ನು ಮೂರು ಹಂತಗಳ ಮೂಲಕ ಏಕಕಾಲಕ್ಕೆ ಕಾರ್ಯರೂಪಕ್ಕೆ ತರಲಾಗುತ್ತದೆ. ಅವುಗಳೆಂದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳು,
ಶಿಕ್ಷಣ ಮತ್ತು ಆರೋಗ್ಯ ಸುರಕ್ಷತಾ ಸೇವೆಗಳು ಖಾಸಗಿ ಮತ್ತು ಸಾಮಾಜಿಕ ಸೌಲಭ್ಯಗಳೆರಡನ್ನೂ ಸೃಷ್ಟಿಸುತ್ತವೆ. ಶಿಕ್ಷಣದ ಮತ್ತು ಆರೋಗ್ಯದ ಮೇಲಿನ ವೆಚ್ಚಗಳು ಒಂದು ದೇಶದಲ್ಲಿನ ಜನರ ಜೀನದ ಗುಣಮಟ್ಟದ ಮೇಲೆ ದೀರ್ಘಾವಧಿ ಪರಿಣಾಮವನ್ನು ಉಂಟು ಮಾಡುತ್ತವೆ. ಸರ್ಕಾರದ ಸಕ್ತಿಯ ಭಾವಹಿಸುವಿಕೆ ಬಹು ಅವಶ್ಯವಾಗಿದೆ.
ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯಮಟ್ಟದ ಶಿಕ್ಷಣ ಸಚಿವಾಲಯಗಳು ಶಿಕ್ಷಣ ಇಲಾಖೆಗಳು ಮತ್ತು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (NCERT), ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (DSERT) ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE). ಇವು ಜನಸಾಮಾನ್ಯರಿಗೆ ಶಿಕ್ಷಣವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.
ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಆರೋಗ್ಯ ಸಚಿವಾಲಯಗಳು, ಆರೋಗ್ಯ ಇಲಾಖೆಗಳು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) – ಯಂತಹ ಹಲವು ಸಂಘಟನೆಗಳು, ಸಹಾಯಕ ಸಂಸ್ಥೆಗಳು ಆರೋಗ್ಯ ವಲಯದ ವ್ಯಾಪ್ತಿಯಲ್ಲಿ ಬರುತ್ತವೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ, ಜನಸಂಖ್ಯೆಯ ಹೆಚ್ಚು ಭಾಗ ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ. ಬಹುತೇಕ ಜನರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮತ್ತು ಉನ್ನತ ಶಿಕ್ಷಣ ಕೇಂದ್ರಗಳನ್ನು ತಲುಪಲೂ ಸಾಧ್ಯವಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲಿನ ವೆಚ್ಚಗಳನ್ನು ಹೆಚ್ಚಿಸುತ್ತಿದೆ.
19. ಭಾರತದಲ್ಲಿ ಮಾನವ ಬಂಡವಾಳ ನಿರ್ಮಾಣದ ಪ್ರಮುಖ ಸಮಸ್ಯೆಗಳಾವುವು ?
ಭಾರತದಲ್ಲಿ ಮಾನವ ಬಂಡವಾಳ ನಿರ್ಮಾಣದ ಪ್ರಮುಖ ಸಮಸ್ಯೆಗಳೆಂದರೆ
ಸಂಪನ್ಮೂಲಗಳ ಕೊರತೆ : ಭಾರತದಲ್ಲಿ ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳ ಮಾನವ ಬಂಡವಾಳ ಮೂಲಗಳಾದ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಾಲದಾಗಿದೆ ಸರ್ಕಾರವು ಪ್ರತಿವರ್ಷ ಶಿಕ್ಷಣ ಮತ್ತು ಆರೋಗ್ಯ ಉದ್ಯಮದ ವೆಚ್ಚವನ್ನು ಏರಿ ಮಾಡಿದರೂ ಸಹ ಹೆಚ್ಚುತ್ತಿರುವ ಬೇಡಿಕೆಯನ್ನು ಸಂಧಿಸಲು ಸಾಧ್ಯವಾಗುತ್ತಿಲ್ಲ.
ಕಾರ್ಯಕ್ರಮಗಳ ಅನುಷ್ಟಾನದ ಕೊರತೆ : ಮಾನವ ಬಂಡವಾಳ ನಿರ್ಮಾಣಕ್ಕೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳೆಂದರೆ ಸರ್ವ ಶಿಕ್ಷಣಾ ಅಭಿಯಾನ ಮತ್ತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನೀತಿ, ಆದರೆ ಭ್ರಷ್ಟಾಚಾರ ಮತ್ತು ತಪ್ಪು ಅನುಷ್ಟಾನದಿಂದ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ.
ಗುಣಮಟ್ಟದ ವಿಚಾರಗಳು : ಮಾನವ ಬಂಡವಾಳವು ಗುಣಮಟ್ಟದ ವಿಚಾರದಲ್ಲಿ ತೃಪ್ತಿದಾಯಕವಾಗಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಆರೋಗ್ಯ ಸೌಲಭ್ಯಗಳು ಸರಿಯಾಗಿಲ್ಲ ಮತ್ತು ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯ ನಿರುಗದ್ಯೋಗ ಶಿಕ್ಷಿತ ಯುವಕರನ್ನು ಉತ್ಪತ್ತಿ ಮಾಡುತ್ತಿದೆ.
ದೊಡ್ಡ ಪ್ರಮಾಣದ ಜನಸಂಖ್ಯೆ : ಜನಸಂಖ್ಯಾ ಹೆಚ್ಚಳದಿಂದ ಸರ್ಕಾರದ ಹಲವಾರು ಸೌಲಭ್ಯಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಅನುಷ್ಟಾನ ಗೊಳಿಸಲು ಸಾಧ್ಯವಾಗುತ್ತಿಲ್ಲ.
ಸರಿಯಾದ ಯೋಜನಾ ಕೊರತೆ : ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ಮಾನವ ಶಕ್ತಿಯ ಕೊರತೆ ಇರುವುದರಿಂದ ಮಾನವ ಬಂಡವಾಳ ನಿರ್ಮಾಣ ಯೋಜನೆಯೂ ಸರಿಯಾಗಿಲ್ಲ. ಅವುಗಳೆಂದರೆ ಶಾಲೆಗಳಿವೆ ಆದರೆ ಶಿಕ್ಷಕರಿಲ್ಲ ಮತ್ತು ಆರೋಗ್ಯ ಕೇಂದ್ರಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯರುಗಳಿಲ್ಲ,
20. ನಿಮ್ಮ ದೃಷ್ಟಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ಶುಲ್ಕ ಸಂರಚನೆಯನ್ನು ಸರ್ಕಾರ ನಿಯಂತ್ರಿಸುವ ಅಗತ್ಯತೆ ಇದೆಯೇ? ಹಾಗಿದ್ದರೆ ಏಕೆ?
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಜನಸಂಖ್ಯೆಯ ಹೆಚ್ಚು ಭಾಗ ಬಡತನ ರೇಖೆಯ ಕೆಳಗಡೆ ವಾಸಿಸುತ್ತಿದ್ದು, ನಿಮ್ಮಲ್ಲಿ ಬಹಳಷ್ಟು ಜನರು ಮೂಲ ಶಿಕ್ಷಣ ಮತ್ತು ಆರೋಗ್ಯ ಸಂರಕ್ಷತಾ ಸೌಲಭ್ಯಗಳನ್ನು ಪಡೆಯಲು ಶಕ್ತರಾಗಿಲ್ಲ. ಯಾವಾಗ ಶಿಕ್ಷಣ ಮತ್ತು ಆರೋಗ್ಯ ಸುರಕ್ಷತೆಯನ್ನು ನಾಗರೀಕರ ಹಕ್ಕು ಎಂದು ಪರಿಗಣಿಸಲಾಗುತ್ತದೆಯೋ, ಆಗ ಸರ್ಕಾರವು, ಅರ್ಹ ನಾಗರೀಕರಿಗೆ ಮತ್ತು ಸಾಮಾಜಿಕವಾಗಿ ತುಳಿತಕ್ಕೊಳಗಾದ ವರ್ಗಗಳ ಜನರಿಗೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಉಚಿತವಾಗಿ ಪೂರೈಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪ್ರತಿಶತ 100ರಷ್ಟು ಸಾಕ್ಷರತೆಯನ್ನು ಸಾಧಿಸುವ ಉದ್ದೇಶದ ಈಡೇರಿಕೆಗಾಗಿ ಮತ್ತು ಭಾರತೀಯರ ಸರಾಸರಿ ಶೈಕ್ಷಣಿಕ ಸಾಧನೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಾನುಕ್ರಮದಲ್ಲಿ ಶಿಕ್ಷಣದ ಮೇಲಿನ ವೆಚ್ಚವನ್ನು ಹೆಚ್ಚಿಸಬೇಕಿದೆ.
ಹೆಚ್ಚುವರಿ ಪ್ರಶೋತ್ತರಗಳು
1st Puc Economics Chapter 5 Notes in Kannada
1. ಮಾನವ ಬಂಡವಾಳ ಎಂಬ ಪರಿಕಲ್ಪನೆಯನ್ನು ಯಾವಾಗ ಪ್ರಾರಂಭವಾಯಿತು?
1954ರ ನಂತರ ಮಾನವ ಬಂಡವಾಳ ಎಂಬ ಪರಿಕಲ್ಪನೆ ಪ್ರಾರಂಭವಾಯಿತು.
2. ಎ.ಡಬ್ಲ್ಯೂ ಲೆವಿಸ್ ಅರ್ಥಶಾಸ್ತ್ರದ ಗ್ರಂಥದ ಹೆಸರೇನು?
ಶ್ರಮದ ಅನಿಯಮಿತ ಪೂರೈಕೆಯೊಂದಿಗೆ ಆರ್ಥಿಕ ಅಭಿವೃದ್ಧಿ.
3. ಮಾನವ ಬಂಡವಾಳ ಎಂದರೇನು?
ಮಾನವ ಬ೦ಡವಾಳವೆಂದರೆ ಮಾನವರು ಶ್ರಮ ನಿರ್ವಹಣೆ ಮತ್ತು ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಸಾಮರ್ಥ್ಯಗಳಲ್ಲಿರುವ ಜ್ಞಾನ ಮತ್ತು ಕೌಶಲ್ಯಗಳ ಸಂಗ್ರಹವಾಗಿದೆ.
4. ಮಾನವ ಬಂಡವಾಳ ನಿರ್ಮಾಣದ ಅರ್ಥ ಕೊಡಿರಿ.
ಮಾನವ ಬಂಡವಾಳ ನಿರ್ಮಾಣವೆಂದರೆ ದೇಶವೊಂದರ ಆರ್ಥಿಕ ಅಭಿವೃದ್ಧಿಗೆ ಅಗತ್ಯವಿರುವ ಕೌಶಲ್ಯಗಳು, ಶಿಕ್ಷಣ ಮತ್ತು ಅನುಭವಗಳಿರುವ ವ್ಯಕ್ತಿಗಳ ಸಂಖ್ಯೆಯನ್ನು ಗಳಿಸುವ ಮತ್ತು ಹೆಚ್ಚಿಸುವ ಪ್ರಕ್ರಿಯೆಯಾಗಿರುತ್ತದೆ.
5. ದೇಶದಲ್ಲಿ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸುವ ಅಗತ್ಯತೆ ಏನಿದೆ?
ಅರ್ಥಶಾಸ್ತ್ರಜ್ಞರ ಪ್ರಕಾರ ಅದು ಅಭಿವೃದ್ಧಿ ಪ್ರಕ್ರಿಯೆಯನ್ನು ತೀವ್ರಗೊಳಿಸುವದರಿಂದ ಶೈಕ್ಷಣಿಕ ಅವಕಾಶಗಳು ವಿಸ್ತರಿಸುವ ಅಗತ್ಯತೆ ಇದೆ ಎಂದಿದ್ದಾರೆ.
6. ವೃತ್ತಿನಿರತ ತರಬೇತಿ ಎಂದರೇನು?
ವೃತ್ತಿನಿರತ ತರಬೇತಿಯು ಉದ್ಯೋಗಿಗಳು ಕೆಲಸ ಮಾಡುತ್ತಲೇ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಒಂದು ವ್ಯವಸ್ಥೆಯಾಗಿದೆ.
7. ಔದ್ಯೋಗಿಕ ತರಬೇತಿ ಕುರಿತ ವೆಚ್ಚವು ಹೇಗೆ ಮಾನವ ಬಂಡವಾಳದ ನಿರ್ಮಾಣಕ್ಕೆ ಒಂದು ಮೂಲವಾಗಿದೆ?
ಏಕೆಂದರೆ, ಈ ವೆಚ್ಚವನ್ನು ಅಧಿಕಗೊಂಡ ಶ್ರಮದ ಉತ್ಪಾದಕತೆಯ ರೂಪದಲ್ಲಿ ಮರಳಿ ಪಡೆಯಲಾಗುತ್ತದೆ. ಇದು ವೆಚ್ಚಕ್ಕಿಂತ ಅಧಿಕವಾಗಿರುತ್ತದೆ.
8. ಆರ್ಥಿಕ ಬೆಳವಣಿಗೆಯ ಅರ್ಥ ನೀಡಿ,
ಆರ್ಥಿಕ ಬೆಳವಣಿಗೆ ಎಂದರೆ, ಒಂದು ದೇಶದ ನೈಜ ರಾಷ್ಟ್ರೀಯ ಆದಾಯದಲ್ಲಿನ ಹೆಚ್ಚಳವಾಗಿದೆ.
9. ‘ಜಾಗತಿಕ ಬೆಳವಣಿಗೆ ಕೇಂದ್ರಗಳು ತನ್ನ ವರದಿಯಲ್ಲಿ ಜರ್ಮನಿಯ ಡ್ಯೂಸ್ಟೇ ಬ್ಯಾಂಕು ಏನೆಂದು ಪ್ರಕಟಿಸಿದೆ. (ಪ್ರಕಟ 1.7.05)
‘ಜಾಗತಿಕ ಬೆಳವಣಿಗೆ ಕೇಂದ್ರಗಳು’ ಎಂಬ ತನ್ನ ವರದಿಯಲ್ಲಿ, ಭಾರವು 2020ರ ವೇಳೆಗೆ ಪ್ರಪಂಚದಲ್ಲಿನ ನಾಲ್ಕು ಬೆಳವಣಿಗೆ ಕೇಂದ್ರಗಳಲ್ಲಿ ಒಂದಾಗಿ ಕಾಣಿಸಿಕೊಳ್ಳಲಿದೆ ಎಂದು ಗುರುತಿಸಿದೆ.
10. NCERT ಅನ್ನು ವಿಸ್ತರಿಸಿ.
ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ,
11. ಜನರು ಏಕೆ ವಲಸೆ ಹೋಗುತ್ತಾರೆ?
ಜನರು ಉದ್ಯೋಗ ಮತ್ತು ಹೆಚ್ಚಿನ ವೇತನಗಳನ್ನು ಅರಸಿ ವಲಸೆ ಹೋಗುತ್ತಾರೆ.
12. UGC ಅನ್ನು ವಿಸ್ತರಿಸಿ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ.
13. 2011ರ ಜನಗಣತಿ ಪ್ರಕಾರ ಭಾರತದ ಸಾಕ್ಷರತಾ ದರ ಎಷ್ಟು?
2011ರ ಜನಗಣತಿ ಪ್ರಕಾರ ಭಾರತದ ಸಾಕ್ಷರತಾ ದರ 74%.
14. ಭಾರತ ಸರ್ಕಾರವು ಯಾವಾಗ ಶಿಕ್ಷಣದ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ?
2002ರ ಡಿಸೆಂಬರ್‌ನಲ್ಲಿ ಭಾರತ ಸರ್ಕಾರವು 6-14 ವರ್ಷಗಳ ವಯೋಗುಂಪಿನ ಎಲ್ಲಾ ಗುಂಪಿನ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒಂದು ಮೂಲಭೂಲ ಹಕ್ಕನ್ನಾಗಿ ಮಾಡಿದೆ.
15. ಬಂಡವಾಳದ ರೂಪಗಳಾವುವು?
ಬಂಡವಾಳದ ಎರಡು ರೂಪಗಳೆಂದರೆ :
- ಭೌತಿಕ ಬಂಡವಾಳ
- ಮಾನವ ಬಂಡವಾಳ
16. ಭೌತಿಕ ಬಂಡವಾಳ ಎಂದರೇನು?
ಹೂಡಿಕೆ ಸಂಬಂಧದ ನಿರ್ಧಾರವನ್ನು ಇದಕ್ಕೆ ಸಂಬಂಧಿಸಿದ ಜ್ಞಾನದ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು.
17. ಸಾಕ್ಷರತೆ ಎಂದರೇನು?
ಸಾಕ್ಷರತೆ ಎಂದರೆ ಓದಲು ಮತ್ತು ಬರೆಯಲು ಸಾಮರ್ಥ್ಯ ಎಂದರ್ಥ.
18. ಭಾರತದಲ್ಲಿನ ಕೇಂದ್ರ ಮತ್ತು ರಾಜ್ಯಮಟ್ಟದ ಶಿಕ್ಷಣ ಸಚಿವಾಲಯಗಳನ್ನು ಹೆಸರಿಸಿ.
- ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (NCERT)
- ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (DSERT)
- ವಿಶ್ವ ವಿದ್ಯಾಲಯ ಧನಸಹಾಯ ಆಯೋಗ (UGC)
- ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)
19. ಮಾನವ ಬಂಡವಾಳದ ಮೇಲಿನ ಹೂಡಿಕೆಯು ನಮಗೆ ಏಕೆ ಅವಶ್ಯಕವಿದೆ?
ಒಂದು ದೇಶದಲ್ಲಿ, ಭೂಮಿಯಂತಹ ಭೌತಿಕ ಸಂಪನ್ಮೂಲಗಳನ್ನು ಕಾರ್ಖಾನೆ. ನಿವೇಶನಗಳು ಮುಂತಾದ ಭೌತಿಕ ಬಂಡವಾಳವನ್ನಾಗಿ ಮಾರ್ಪಡಿಸಲಾಗುತ್ತದೆ. ಅದೇ ರೀತಿ, ಮಾನವ ಸಂಪನ್ಮೂಲದಿಂದ ಹೆಚ್ಚು ಮಾನವ ಬಂಡವಾಳವನ್ನು ಉತ್ಪಾದಿಸಲು ನಾವು ಮಾನವ ಬಂಡವಾಳದ ಮೇಲೆ ಹೂಡಿಕೆ ಮಾಡುವುದು ಅಗತ್ಯವಿದೆ.
20. ಭೌತಿಕ ಬಂಡವಾಳ ಎಂದರೇನು?
ಹೂಡಿಕೆ ಸಂಬಂಧದ ನಿರ್ಧಾರವನ್ನು ಇದಕ್ಕೆ ಸಂಬಂಧಿಸಿದ ಜ್ಞಾನದ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು.
21. ಜನರು ಏಕೆ ಮಾಹಿತಿಯನ್ನು ಪಡೆಯಲು ಹಣ ವೆಚ್ಚಮಾಡುತ್ತಾರೆ?
ಜನರು ಶ್ರಮದ ಮಾರುಕಟ್ಟೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಲು ಹಣವನ್ನು ವೆಚ್ಚ ಮಾಡುತ್ತಾರೆ.
ಅ. ಜನರು ವಿವಿಧ ಉದ್ಯೋಗಗಳ ಪ್ರಸ್ತಾಪಿ ವೇತನಗಳನ್ನು ತಿಳಿಯಲು ಹಣ ವೆಚ್ಚ ಮಾಡುತ್ತಾರೆ.
ಆ. ಅವರು ಶೈಕ್ಷಣಿಕ ಸಂಸ್ಥೆಗಳು ಉದ್ಯೋಗಕ್ಕೆ ಸೂಕ್ತವಾದ ಕೌಶಲ್ಯಗಳನ್ನು ಒದಗಿಸುತ್ತವೆಯೇ ಮತ್ತು ಯಾವ ಬೆಲೆಯಲ್ಲಿ ಒದಗಿಸುತ್ತವೆ? ಈ ಮಾಹಿತಿಯು ಮಾನವ ಬಂಡವಾಳದಲ್ಲಿ ಹೂಡಿಕೆ ಮಾಡುವ ಸಂಬಂಧದ ನಿರ್ಧಾರಗಳನ್ನು ಕೈಗೊಳ್ಳಲು ಅಗತ್ಯವಾಗಿದೆ.
22. ವ್ಯಕ್ತಿಗಳು ಏಕೆ ಶಿಕ್ಷಣದಲ್ಲಿ ಹೂಡಿಕೆ ಮಾಡುತ್ತಾರೆ?
ಜನರು ಭವಿಷ್ಯದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಶಿಕ್ಷಣದಲ್ಲಿ ಹೂಡಿಕೆ ಮಾಡುತ್ತಾರೆ. ಶಿಕ್ಷಣದಿಂದ ಜ್ಞಾನ ಮತ್ತು ಕೌಶಲ್ಯಗಳು ಹೆಚ್ಚುವುದರಿಂದ ಜನರಿಗೆ ವ್ಯಾಪಕವಾದ ಉದ್ಯೋಗ ಅವಕಾಶಗಳು ಲಭಿಸುತ್ತವೆ. ಇದರಿಂದ ಅವರ ಆರ್ಥಿಕ ಆದಾಯವು ಹೆಚ್ಚುತ್ತದೆ ಮತ್ತು ಅವರ ಜೀವನ ಮಟ್ಟ ಸಂಪೂರ್ಣವಾಗಿ ಸುಧಾರಿಸುತ್ತದೆ.
23, ಏತಕ್ಕಾಗಿ ಮಾನವ ಬಂಡವಾಳದ ಮುಕ್ತ ಚಲನೆಯ ಕೊರತೆಯಿದೆ?
ಜನರು ಉದ್ಯೋಗ ಮತ್ತು ಹೆಚ್ಚಿನ ವೇತನಗಳನ್ನು ಅರಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾರೆ. ಆಂತರಿಕ ಮತ್ತು ಬಾಹ್ಯ ವಲಸೆಗಳೆರಡೂ ಸಾರಿಗೆ ವೆಚ್ಚ, ವಲಸೆ ಹೋದ ಪ್ರದೇಶಗಳಲ್ಲಿನ ಅಧಿಕ ಜೀವನ ವೆಚ್ಚ ಮತ್ತು ಅಪರಿಚಿತ `ಸಾಮಾಜಿಕ – ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ಬದುಕುವ ಮಾನಸಿಕ ವೆಚ್ಚಗಳನ್ನು ಒಳಗೊಂಡಿದೆ. ಹೊಸ ಸ್ಥಳಗಳಲ್ಲಿನ ಅಧಿಕಗೊಂಡ ಗಳಿಕೆಯು ವಲಸೆಯ ವೆಚ್ಚಗಳಿಗಿಂತ ಹೆಚ್ಚಾಗಿರುತ್ತದೆ. ಆದುದರಿಂದ ವಲಸೆ ಮೇಲಿನ ವೆಚ್ಚವೂ ಮಾನವ ಬಂಡವಾಳ ನಿರ್ಮಾಣದ ಮೂಲವಾಗಿದೆ.
24. ಆರೋಗ್ಯ ವೆಚ್ಚಗಳ ವಿವಿಧ ರೂಪಗಳಾವುವು?
ಪ್ರತಿಬಂಧಕ ಔಷಧಿ, ನಿವಾರಕ ಔಷಧಿ, ಸಮಾಜಿಕ ಔಷಧಿ ಶುದ್ಧ ಕುಡಿಯುವ ನೀರು ಮತ್ತು ಉತ್ತಮ ಶೌಚಾಲಯ ವ್ಯವಸ್ಥೆಯನ್ನು ಒದಗಿಸುವುದು ಮುಂತಾದವು ಆರೋಗ್ಯ ವೆಚ್ಚಗಳ ಹಲವು ರೂಪಗಳಾಗಿವೆ.
25. ಮಾನವ ಬಂಡವಾಳ ಮತ್ತು ಮಾನವ ಅಭಿವೃದ್ಧಿ ನಡುವಿನ ವ್ಯತ್ಯಾಸಗಳನ್ನು ತಿಳಿಸಿ
ಮಾನವ ಬಂಡವಾಳ | ಮಾನವ ಅಭಿವೃದ್ಧಿ |
---|---|
ಮಾನವ ಬಂಡವಾಳ ಶಿಕ್ಷಣ ಆರೋಗ್ಯ ಮತ್ತು ಶ್ರಮದ ಉತ್ಪಾದಕತೆಯನ್ನು ಹೆಚ್ಚಿಸುವ ಒಂದು ಸಾಧನವೆಂದು ಪರಿಗಣಿಸುತ್ತದೆ. | ಮಾನವ ಅಭಿವೃದ್ಧಿಯು, ಮಾನವ ಯೋಗಕ್ಷೇಮಕ್ಕೆ, ಶಿಕ್ಷಣ ಮತ್ತು ಆರೋಗ್ಯ ಎರಡೂ ಅವಿಭಾಜ್ಯ ಎಂಬ ವಿಚಾರದ ಮೇಲೆ ಆಧಾರಿತವಾಗಿದೆ. |
ಮಾನವ ಬಂಡವಾಳವು ಮಾನವನನ್ನು ಗುರಿಯೊಂದರ ಸಾಧನವಾಗಿ ನೋಡುತ್ತದೆ. | ಮಾನವ ಅಭಿವೃದ್ಧಿಯು ಮಾನವರು ತಮಗೆ ತಾವೇ ಅಂತಿಮ ಗುರಿಯಾಗಿ ಬಿಡುತ್ತಾರೆ. |
26. ಮಾನವ ಬಂಡವಾಳ ನಿರ್ಮಾಣದ ವಿವಿಧ ಮೂಲಗಳನ್ನು ವಿವರಿಸಿ.
ಮಾನವ ಬಂಡವಾಳದ ಪ್ರಮುಖ ಮೂಲಗಳೆಂದರೆ ಶಿಕ್ಷಣದ ಮೇಲಿನ ಹೂಡಿಕೆ ಅರೋಗ್ಯ ವೆಚ್ಚ, ವೃತ್ತಿ ನಿರತ ತರಬೇತಿ, ವಲಸೆ ಮತ್ತು ಮಾಹಿತಿ.
ಶಿಕ್ಷಣದ ಮೇಲಿನ ಹೂಡಿಕೆ : ವ್ಯಕ್ತಿಗಳು ಶಿಕ್ಷಣದ ಮೇಲೆ ವೆಚ್ಚ ಮಾಡುತ್ತಾರೆ. ಅವರು ಭವಿಷ್ಯದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಶಿಕ್ಷಣದಲ್ಲಿ ಹೂಡಿಕೆ ಮಾಡುತ್ತಾರೆ. ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಹೆಚ್ಚಿನ ಉತ್ಪಾದಕ ಶಕ್ತಿಯನ್ನು ಸೃಷ್ಟಿ ಮಾಡಲು ಸಹಕರಿಸುತ್ತದೆ ಹಾಗೂ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸುವುದರೊಂದಿಗೆ ಸಂಪನ್ನಯುಕ್ತರನ್ನಾಗಿಸುತ್ತದೆ.
ಆರೋಗ್ಯ ವೆಚ್ಚ : ಪ್ರತಿಬಂಧಕ ಔಷಧಿ, ನಿವಾರಕ ಔಷಧಿ, ಸಾಮಾಜಿಕ ಔಷಧಿ, ಶುದ್ಧ ಕುಡಿಯುವ ನೀರು ಮತ್ತು ಉತ್ತಮ ಶೌಚಾಲಯ ವ್ಯವಸ್ಥೆಯನ್ನು ಒದಗಿಸುವುದು ಮುಂತಾದುವು ಆರೋಗ್ಯ ವೆಚ್ಚಗಳ ಹಲವು ರೂಪಗಳಾಗಿವೆ.
ವೃತ್ತಿನಿರತ ತರಬೇತಿ ಕುರಿತ ವೆಚ್ಚ : ವೃತ್ತಿನಿರತ ತರಬೇತಿಯು ಉದ್ಯೋಗಿಗಳು ಕೆಲಸ ಮಾಡುತ್ತಲೇ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಒಂದು ವ್ಯವಸ್ಥೆಯಾಗಿದೆ. ಇದು ಉದ್ಯೋಗಿಗಳಿಗೆ ಮತ್ತು ಸಂಘಟನೆಗೆ ಲಾಭಕರವಾಗಿದೆ. ಇದು ಸಂಘಟನೆಗೆ ಪ್ರತ್ಯೇಕ ತರಬೇತಿ ವೆಚ್ಚಗಳನ್ನು ಉಳಿಸುತ್ತದೆ ಮತ್ತು ತರಬೇತಿ ಪಡೆಯುವವರಿಗೆ ಕೆಲಸದ ಅನುಭವವನ್ನು ನೀಡುತ್ತದೆ.
ವಲಸೆ ಮೇಲಿನ ವೆಚ್ಚ : ಜನರು ಉದ್ಯೋಗ ಮತ್ತು ಹೆಚ್ಚಿನ ವೇತನಗಳನ್ನು ಅರಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾರೆ. ಎಂಜಿನಿಯರರು, ವೈದ್ಯರು, ವ್ಯವಸ್ಥಾಪಕರಂತಹ ತಾಂತ್ರಿಕ ಅರ್ಹತೆಯುಳ್ಳ ವ್ಯಕ್ತಿಗಳು ಹೆಚ್ಚಿನ ವೇತನ ಪಡೆಯುವುದಕ್ಕಾಗಿ ಇತರೆ ದೇಶಗಳಿಗೆ ವಲಸೆ ಹೋಗುತ್ತಾರೆ.
ಮಾಹಿತಿ ಮೇಲಿನ ವೆಚ್ಚ : ಜನರ ಶ್ರಮದ ಮಾರುಕಟ್ಟೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುಕೊಳ್ಳಲು ಹಣವನ್ನು ವೆಚ್ಚ ಮಾಡುತ್ತಾರೆ.
FAQ
ಮಾನವ ಬ೦ಡವಾಳವೆಂದರೆ ಮಾನವರು ಶ್ರಮ ನಿರ್ವಹಣೆ ಮತ್ತು ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಸಾಮರ್ಥ್ಯಗಳಲ್ಲಿರುವ ಜ್ಞಾನ ಮತ್ತು ಕೌಶಲ್ಯಗಳ ಸಂಗ್ರಹವಾಗಿದೆ.
ವೃತ್ತಿನಿರತ ತರಬೇತಿಯು ಉದ್ಯೋಗಿಗಳು ಕೆಲಸ ಮಾಡುತ್ತಲೇ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಒಂದು ವ್ಯವಸ್ಥೆಯಾಗಿದೆ.
ಹೂಡಿಕೆ ಸಂಬಂಧದ ನಿರ್ಧಾರವನ್ನು ಇದಕ್ಕೆ ಸಂಬಂಧಿಸಿದ ಜ್ಞಾನದ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು.
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.