rtgh

ಪ್ರಥಮ ಪಿ.ಯು.ಸಿ ಸೂಚ್ಯಾಂಕಗಳು ಅರ್ಥಶಾಸ್ತ್ರ ನೋಟ್ಸ್‌ | 1st Puc Economics Chapter 18 Notes

ಪ್ರಥಮ ಪಿ.ಯು.ಸಿ ಸೂಚ್ಯಾಂಕಗಳು ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 1st Puc Economics Chapter 18 Notes Question Answer Mcq Pdsf Download in Kannada Medium Kseeb Solutions For Class 11 Economics Chaapter 18 Notes Index Numbers in Kannada 1st Puc Economics Suchyankagalu Notes 2023

 

1st Puc Economics Chapter 18 Notes

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಸೂಚ್ಯಾಂಕದ ಅವಶ್ಯಕತೆ ನಮಗೆ ಏಕೆ ಬೇಕು?

ಕಾಲಕ್ಕೆ ತಕ್ಕಂತೆ ಚಲಕಗಳಲ್ಲಾಗುವ ಬದಲಾವಣೆಯನ್ನು ಮಾಪನ ಮಾಡಲು ಸೂಚ್ಯಾಂಕದ ಅವಶ್ಯಕತೆ ಇದೆ.

2. ಆಧಾರ ಅವಧಿಯ ಆಪೇಕ್ಷಣೀಯ ಗುಣಲಕ್ಷಣಗಳು ಯಾವುವು?

ಆಧಾರ ಅವಧಿಯ ಅಪೇಕ್ಷಣೀಯ ಗುಣಲಕ್ಷಣಗಳೆಂದರೆ :

1) ಎಷ್ಟು ಸಾಧ್ಯವೋ ಅಷ್ಟು, ಆಧಾರ ವರ್ಷವು ಸಾಮಾನ್ಯ ವರ್ಷವಾಗಿರಬೇಕು.

2) ಅಂತಿಮ ಮೌಲ್ಯಗಳನ್ನು ಆಧಾರ ಅವಧಿ ಎಂದು ಆಯ್ಕೆ ಮಾಡುವಂತಿಲ್ಲ.

3) ಅವಧಿಯು ತುಂಬಾ ಹಿಂದಿನ ಅವಧಿಯನ್ನು ಒಳಗೊಳ್ಳಬಾರದು.

3. ವಿವಿಧ ವರ್ಗಗಳ ಗ್ರಾಹಕರಿಗೆ ವಿವಿಧ CPI ಗಳನ್ನು ರಚಿಸುವ ಅವಶ್ಯಕತೆ ಏಕೆ?

ಏಕೆಂದರೆ, ಕೂಲಿ ಮಾತುಕತೆ ನಡೆಸಲು, ಆದಾಯ ನೀತಿ, ಬೆಲೆ ನೀತಿ, ಬಾಡಿಗೆ ನಿಯಂತ್ರಣ, ತೆರಿಗೆ ಮತ್ತು ಸಾಮಾನ್ಯ ಆರ್ಥಿಕ ನೀತಿಗಳ ರಚನೆಯಲ್ಲಿ ಸಹಾಯಕವಾಗಿದೆ. ಇದು ನೈಜ ಜೀವನ ಮಟ್ಟದ ವೆಚ್ಚವನ್ನು ಅಳೆಯುತ್ತದೆ. ಆದ್ದರಿಂದ ಇದನ್ನು ಜೀವನ ವೆಚ್ಚದ ಸೂಚ್ಯಾಂಕ” ಎಂದು ಕರೆಯುತ್ತಾರೆ..

4. ಕೈಗಾರಿಕಾ ಕಾರ್ಮಿಕರ ಗ್ರಾಹಕರ ಬೆಲೆ ಸೂಚ್ಯಾಂಕ ಏನನ್ನು ಮಾಪನ ಮಾಡುತ್ತದೆ?

ಕೈಗಾರಿಕಾ ಕಾರ್ಮಿಕರ ಗ್ರಾಹಕರ ಬೆಲೆ ಸೂಚ್ಯಾಂಕ ಸಾಮಾನ್ಯ ಹಣದುಬ್ಬರ ದರವನ್ನು ಮಾಪನ ಮಾಡುತ್ತದೆ.

ಬೆಲೆ ಸೂಚಿ ಮತ್ತು ಪ್ರಮಾಣ ಸೂಚಿಗಳ ನಡುವೆ ಇರುವ ವ್ಯತ್ಯಾಸವೇನು? ಬೆಲೆ ಸೂಚ್ಯಾಂಕವು ನಿರ್ದಿಷ್ಟ ಸರಕುಗಳ ಬೆಲೆಗಳ ಬದಲಾವಣೆಯನ್ನು ಅಳೆಯುವುದಲ್ಲದೆ ಅವುಗಳ ಹೋಲಿಕೆ ಮಾಡಲು ಅವಕಾಶ ನೀಡುತ್ತದೆ.

ಪ್ರಮಾಣ ಸೂಚ್ಯಾಂಕವು ಉತ್ಪಾದನೆಯ ಭೌತಿಕ ಪ್ರಮಾಣ, ನಿರ್ಮಾಣ ಅಥವಾ ಉದ್ಯೋಗಗಳಲ್ಲಿನ ಬದಲಾವಣೆಯನ್ನು ಅಳೆಯುತ್ತದೆ.

5. ಯಾವುದೇ ಬೆಲೆ ಬದಲಾವಣೆಯು ಬೆಲೆ ಸೂಚ್ಯಾಂಕದಲ್ಲಿ ಪ್ರತಿಬಿಂಬಿತವಾಗುತ್ತದೆಯೆ?

ಬೆಲೆ ಬದಲಾವಣೆಯು ಬೆಲೆ ಸೂಚ್ಯಾಂಕದಲ್ಲಿ ಪ್ರತಿಬಿಂಬಿತವಾಗುವುದಿಲ್ಲ. ಬೆಲೆ ಸೂಚ್ಯಾಂಕವು ನಿರ್ದಿಷ್ಟ ಸರಕುಗಳ ಬೆಲೆಗಳ ಬದಲಾವಣೆಯನ್ನು ಅಳೆಯುವುದಲ್ಲದೆ ಅವಕಾಶ ಹೋಲಿಕೆ ಮಾಡುತ್ತದೆ.

6. ಭಾರತದ ರಾಷ್ಟ್ರಪತಿಯವರ ಜೀವನ ವೆಚ್ಚದ ಬದಲಾವಣೆಗಳನ್ನು ನಗರದ ಕೈಕೆಲಸರಹಿತ ಕಾರ್ಮಿಕರ CPI ಸಂಖ್ಯೆ ಪ್ರತಿನಿಧಿಸಬಹುದೇ?

ಹೌದು, ಭಾರತದ ರಾಷ್ಟ್ರಪತಿಯವರ ಜೀವನ ವೆಚ್ಚದ ಬದಲಾವಣೆಗಳನ್ನು ನಗರದ ಕೈ ಕೆಲಸಹಿತ ಕಾರ್ಮಿಕರ CPI ಸಂಖ್ಯೆ ಪ್ರತಿನಿಧಿಸಬಹುದು. ಏಕೆಂದರೆ, ಅವರು ಸಹ ಕೈ – ಕೆಲಸಹಿತ ಕಾರ್ಮಿಕ 1980 ಮತ್ತು 2005ರ ಅವಧಿಯಲ್ಲಿ ಕೈಗಾರಿಕಾ ಕೇಂದ್ರವೊಂದರ ಕಾರ್ಮಿಕರು ಈ ಕೆಳಗಿನ ವಸ್ತುಗಳ ಮೇಲೆ ಮಾಡಿದ ಮಾಸಿಕ ತಲಾ ಆದಾಯದ ಖರ್ಚುಗಳನ್ನು ನೀಡಲಾಗಿದೆ. ಈ ವಸ್ತುಗಳ ತೂಕವು ಕ್ರಮವಾಗಿ 75, 10, 5, 6 ಮತ್ತು 4 ಆಗಿದೆ. 1980 ನೇ ವರ್ಷವನ್ನು ಆಧಾರವನ್ನಾಗಿಸಿಕೊಂಡು 2005ರ ಜೀವನ ವೆಚ್ಚವನ್ನು ತೂಕಿತ ಸೂಚ್ಯಾಂಕದ ಮೂಲಕ ಕಂಡುಹಿಡಿಯಿರಿ.

7. ನಿಮ್ಮ ಕುಟುಂಬವು ಎರಡು ವಾರಗಳಲ್ಲಿ ಮಾಡಿದ ದಿನನಿತ್ಯದ ಖರ್ಚುಗಳನ್ನು, ಕೊಂಡುಕೊಂಡ ಸರಕುಗಳ ಪ್ರಮಾಣವನ್ನು ಮತ್ತು ದಿನನಿತ್ಯ ಕೊಂಡುಕೊಂಡ ಪ್ರತಿ ಘಟಕದ ಸರಕುಗಳಿಗೆ ಪಾವತಿಸಿದ ಬೆಲೆಯನ್ನು ದಾಖಸಿಲಿ ಬೆಲೆ ಬದಲಾವಣೆಯು ನಿಮ್ಮ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವಿದ್ಯಾರ್ಥಿಗಳಿಗೆ ಅವರ ಪೋಷಕರ ದೈನಂದಿನ ವೆಚ್ಚವನ್ನು ವಿಚಾರಿಸಬೇಕು ಎಂದು ಸಲಹೆ ನೀಡಬೇಕು. ಕುಟುಂಬವು ಎರಡು ವಾರಗಳಲ್ಲಿ ಮಾಡಿದ ದಿನನಿತ್ಯದ ಖರ್ಚುಗಳನ್ನು ಕೊಂಡುಕೊಂಡ ಸರಕುಗಳ ಪ್ರಮಾಣವನ್ನು ಮತ್ತು ದಿನನಿತ್ಯ ಕೊಂಡುಕೊಂಡ ಪ್ರತಿ ಘಟಕದ ಸರಕುಗಳಿಗೆ ಪಾವತಿಸಿದ ಬೆಲೆಯನ್ನು ವಿಚಾರಿಸುವಂತೆ ತಿಳಿಸಬೇಕು. ನಂತರ ಏರಿಕೆಯಾದ ಬೆಲೆಗಳು ಕುಟುಂಬದ ಮೇಲೆ ಬೀರಿದ ಪರಿಣಾಮವು ತಿಳಿದು ಬರುತ್ತದೆ.

8. ಸೂಚ್ಯಾಂಕವೆಂದರೇನು?

ಕಾಲಕ್ಕೆ ತಕ್ಕಂತೆ ಚಲಕಗಳಲ್ಲಾಗುವ ಬದಲಾವಣೆಗಳನ್ನು ಮಾಪನ ಮಾಡಲು ರೂಪಿಸಿರುವ ವಿಶೇಷ ಸರಾಸರಿ ಸಂಖ್ಯೆಗೆ ಸೂಚ್ಯಂಕ ಎನ್ನುತ್ತೇವೆ.

9. ಆಧಾರ ಕಾಲ ಎಂದರೇನು?

ಯಾವ ವರ್ಷದೊಂದಿಗೆ ಚಾಲ್ತಿವರ್ಷವನ್ನು ಹೋಲಿಕೆ ಮಾಡಲಾಗುತ್ತದೆಯೋ ಆ ವರ್ಷದಲ್ಲಿ ಆಧಾರ ಕಾಲವೆಂದು ಕರೆಯಲಾಗುತ್ತದೆ. ಆಧಾರ ಕಾಲದಲ್ಲಿ ಸೂಚ್ಯಾಂಕದ ಮೌಲ್ಯವನ್ನು ಯಾವಾಗಲೂ 100 ಎಂದು ನೀಡಲಾಗಿರುತ್ತದೆ.

10. ಬೆಲೆ ಸೂಚ್ಯಾಂಕದ ಅರ್ಥವೇನು?

ಬೆಲೆ ಸೂಚ್ಯಾಂಕವು ನಿರ್ದಿಷ್ಟ ಸರಕುಗಳ ಬೆಲೆಗಳ ಬದಲಾವಣೆಯನ್ನು ಅಳೆಯುವುದಲ್ಲದೆ ಅವುಗಳ ಹೋಲಿಕೆ ಮಾಡಲು ಅವಕಾಶ ನೀಡುತ್ತದೆ.

11. ಪ್ರಮಾಣ ಸೂಚ್ಯಾಂಕದ ಅರ್ಥ ಕೊಡಿ.

ಉತ್ಪಾದನೆಯ ಭೌತಿಕ ಪ್ರಮಾಣ, ನಿರ್ಮಾಣ ಅಥವಾ ಉದ್ಯೋಗಗಳಲ್ಲಿನ ಬದಲಾವಣೆಯನ್ನು ಅಳೆಯುವ ವಿಧಾನಕ್ಕೆ ಪ್ರಮಾಣ ಸೂಚ್ಯಾಂಕ ಎಂದರ್ಥ.

12. ಸೂಚ್ಯಾಂಕ ರಚನೆಯ ವಿಧಾನಗಳಾವುವು?

ಸೂಚ್ಯಾಂಕ ರಚನೆಯಲ್ಲಿ 2 ವಿಧಾನಗಳಿವೆ.

1) ಸಮಗ್ರ ವಿಧಾನ

2) ಸರಾಸರಿ ಸಾಪೇಕ್ಷ ವಿಧಾನ

13. ಬೆಲೆ ಸಾಪೇಕ್ಷ ಎಂದರೇನು?

ಚಾಲ್ತಿ ಬೆಲೆಯ ಪ್ರತಿಶತವನ್ನು ಆಧಾರದ ವರ್ಷದ ಪ್ರತಿಶತ ಬೆಲೆಗೆ ಹೋಲಿಕೆ ಮಾಡುವುದಕ್ಕೆ ಬೆಲೆ ಸಾಪೇಕ್ಷ ಎನ್ನುವರು.

14. ಲಾಸ್ಟೆಯರ್ಸ್ ಬೆಲೆ ಸೂಚ್ಯಾಂಕ ಎಂದರೇನು?

ತೂಕಿತ ಸಮಗ್ರ ಬೆಲೆ ಸೂಚ್ಯಾಂಕವೊಂದರ ಆಧಾರದ ಕಾಲದ ಪ್ರಮಾಣಗಳನ್ನು ತೂಕಗಳನ್ನಾಗಿ ಉಪಯೋಗಿಸಿದರೆ ಅದನ್ನು ಲಾಸ್ಟೆಯರ್ಸ್ ಬೆಲೆ ಸೂಚ್ಯಾಂಕ ಎನ್ನುವರು.

ಈ ವಿಧಾನವು ಆಧಾರ ಕಾಲದ ಪ್ರಮಾಣಗಳನ್ನು ತೂಕಗಳನ್ನಾಗಿ ಉಪಯೋಗಿಸುತ್ತದೆ.

15. ಪಾಶ್ಚೆ ಬೆಲೆ ಸೂಚ್ಯಾಂಕ ಎಂದರೇನು?

ತೂಕಿತ ಸಮಗ್ರ ಬೆಲೆ ಸೂಚ್ಯಾಂಕವೊಂದು ಚಾಲ್ತಿ ವರ್ಷದ ಪ್ರಮಾಣಗಳನ್ನು ತೂಕಗಳನ್ನಾಗಿ ಉಪಯೋಗಿಸಿದರೆ ಇದನ್ನು ಪಾಶ್ಚೆ ಬೆಲೆ ಸೂಚ್ಯಾಂಕ ಎನ್ನುವರು. ಇದು ಚಾಲ್ತಿ ವರ್ಷದ ಪ್ರಮಾಣಗಳನ್ನು ತೂಕಗಳನ್ನಾಗಿಸಿ ಉಪಯೋಗಿಸುತ್ತದೆ.

16. ಅನುಭೋಗಿ ಬೆಲೆ ಸೂಚ್ಯಾಂಕ ಎಂದರೇನು? ಅದರ ಸೂತ್ರ ಬರೆಯಿರಿ.

ಅನುಭೋಗಿ ಬೆಲೆ ಸೂಚ್ಯಾಂಕವು ಸಮಯ ಬದಲಾವಣೆಯಾದಂತೆ, ಒಂದು ನಿರ್ದಿಷ್ಟ ಗುಂಪಿನ ಗ್ರಾಹಕರು, ನಿರ್ದಿಷ್ಟ ಪ್ರಕಾರದ ಸರಕು ಮತ್ತು ಸೇವೆಗಳ ಮೇಲೆ ಮಾಡಿದ ವೆಚ್ಚಲ್ಲಾದ ಬದಲಾವಣೆಯನ್ನು ಅಳತೆ ಮಾಡಲು ರೂಪಿಸಿದ ಒಂದು ಸಮಗ್ರ ಆರ್ಥಿಕ ಸೂಚ್ಯಾಂಕವಾಗಿದೆ.

17. ಸೆನ್ಸೆಕ್ಸ್ (Sensex) ಅಥವಾ ಸಂವೇದಿ ಸೂಚ್ಯಾಂಕದ ಅರ್ಥ ನೀಡಿ,

Sensex ಎಂಬುದು “Sensitive Index’ ದ ವಿಸ್ತ್ರತ ರೂಪವಾಗಿದೆ. ಸೆನ್ಸೆಕ್ಸ್‌ವು (ಮುಂಬೈ ಷೇರು ವಿನಿಮಯ ಕೇಂದ್ರ) ಶೇರುಪೇಟೆಯ ಪ್ರಮುಖ 30 ಕಂಪನಿಗಳ “ಮುಕ್ತವಾಗಿ ತೇಲಾಡುವ ಮಾರುಕಟ್ಟೆ ಬಂಡವಾಳೀಕರಣದ ಸೂಚ್ಯಾಂಕವಾಗಿದೆ.”

18. ಸೆನ್ಸೆಕ್ಸ್ ಏಕೆ ಭಾರತದ ಶೇರು ಮಾರುಕಟ್ಟೆಯ ನಾಡಿಮಿಡಿತವಾಗಿದೆ?

ಸೆನ್ಸೆಕ್ಸ್ ಷೇರು ಬೆಲೆಗಳಲ್ಲಾಗುವ ಬದಲಾವಣೆ ಮತ್ತು ಷೇರುದಾರರ ಸಂಪತ್ತಿನ ಮೌಲ್ಯವನ್ನು ಸೂಚಿಸುತ್ತದೆ. ಸೆನ್ಸೆಕ್ಸ್ ಏರಿಕೆಯು, ಷೇರು ಬೆಲೆಗಳ ಏರಿಕೆ ಹಾಗೂ ಷೇರುದಾರರ ಸಂಪತ್ತಿನ ಮೌಲ್ಯದ ಏರಿಕೆಯನ್ನು ಸೂಚಿಸುತ್ತದೆ. ಹಾಗೆಯೇ ಸೆನ್ಸೆಕ್ಸ್‌ನಲ್ಲಿನ ಇಳಿಕೆಯು ಷೇರುಬೆಲೆಗಳ ಇಳಿಕೆಯನ್ನು ಮತ್ತು ಷೇರುದಾರರ ಸಂಪತ್ತಿನ ಮೌಲ್ಯದ ಇಳಿಕೆಯನ್ನು ಸೂಚಿಸುತ್ತದೆ.

19. ಸಗಟು ಬೆಲೆ ಸೂಚ್ಯಾಂಕದಲ್ಲಿ ಸರಕುಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಲಾಗಿದೆ. ಅವು ಯಾವುವು?

ಸಗಟು ಬೆಲೆ ಸೂಚ್ಯಾಂಕದಲ್ಲಿ ಸರಕುಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ :

1) ಪ್ರಾಥಮಿಕ ಸರಕುಗಳು

2) ಇಂಧನ, ಶಕ್ತಿ ವಿದ್ಯುಚ್ಛಕ್ತಿ ಮತ್ತು ತೈಲಗಳು

3) ತಯಾರಿಕಾ ಸರಕುಗಳು

20. ಹಣದುಬ್ಬರ ಎಂದರೇನು?

ಸಾಮಾನ್ಯ ಬೆಲೆಗಳಲ್ಲಿನ ನಿರಂತರ ಹೆಚ್ಚಳವನ್ನು ಹಣದುಬ್ಬರ ಎನ್ನುವರು,

21, ಸೂಚ್ಯಾಂಕಗಳ ಮಾಹಿತಿಯು ಎಲ್ಲಿಂದ ಲಭ್ಯವಾಗುತ್ತದೆ?

ಸೂಚ್ಯಾಂಕಗಳ ಮಾಹಿತಿಯು ಆರ್ಥಿಕ ಸಮೀಕ್ಷೆಯಿಂದ ಲಭ್ಯವಾಗುತ್ತದೆ.

22. ನಿಮ್ಮ ಕುಟುಂಬದ ಪ್ರಮುಖ ಅನುಭೋಗದ ವಸ್ತುಗಳನ್ನು ಪಟ್ಟಿ ಮಾಡಿ.

1st Puc Economics Chapter 18 Notes

ಅಕ್ಕಿ, ಗೋಧಿ, ಟೂಥ್‌ಪೇಸ್ಟ್, ಬೇಳೆಕಾಳುಗಳು, ಬಟ್ಟೆ, ಪೆಟ್ರೋಲ್, ವಸತಿ, ಹಾಲು ಮತ್ತು ತರಕಾರಿಗಳು ಇತ್ಯಾದಿ.

23. ಸೆನ್ಸೆಕ್ಸ್ ಲೆಕ್ಕಾಚಾರದಲ್ಲಿ ಎಷ್ಟು ಕಂಪನಿಗಳ ಷೇರುಗಳು ಒಳಗೊಂಡಿದೆ.

30.

24. ಅನುಭೋಗಿ ಬೆಲೆ ಸೂಚ್ಯಾಂಕದ ಮತ್ತೊಂದು ಹೆಸರೇನು?

ಜೀವನ ವೆಚ್ಚದ ಸೂಚ್ಯಾಂಕ

25. ಸೂಚ್ಯಾಂಕದ ಮಹತ್ವನ್ನು ವಿವರಿಸಿರಿ.

1) ಆರ್ಥಿಕ ಸೂಚ್ಯಾಂಕಗಳು ವಿವಿಧ ದೃಷ್ಟಿ ಕೋನಗಳಿಂದ ದೇಶದ ಆರ್ತಿಕ ಆರೋಗ್ಯವನ್ನು ವ್ಯಕ್ತಪಡಿಸುತ್ತದೆ. ಅವುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆರ್ಥಿಕ ಪರಿಸರವನ್ನು ಸೂಚಿಸುತ್ತದೆ.

2) ಸೂಚ್ಯಾಂಕಗಳು ಸಮಯದಿಂದ ಸಮಯಕ್ಕೆ, ಸ್ಥಳದಿಂದ ಸ್ಥಳಕ್ಕೆ, ಆದ ಬದಲಾವಣೆಗಳ ಹೋಲಿಕೆಯನ್ನು ಸೂಚಿಸುತ್ತದೆ.

3) ಭವಿಷ್ಯದಲ್ಲಾಗುವ ಆರ್ಥಿಕ ಬದಲಾವಣೆಗಳನ್ನು ಮತ್ತು ಅಸ್ಥಿರತೆಗಳನ್ನು ಸೂಚಿಸುತ್ತದೆ.

4) ಅವುಗಳು ಆರ್ಥಿಕ ನೀತಿಗಳನ್ನು ರೂಪಿಸಲು ಹಾಗೂ ವಿಶ್ಲೇಷಿಸಲು ಸಹಾಯಕಾರಿಯಾಗಿವೆ.

26. ಅನುಭೋಗಿ ಬೆಲೆ ಸೂಚ್ಯಾಂಕ ಎಂದರೇನು? ಅದರ ಉಪಯೋಗವನ್ನು ವಿವರಿಸಿರಿ.

ಅನುಭೋಗಿ ಬೆಲೆ ಸೂಚ್ಯಾಂಕವು ಸಮಯ ಬದಲಾವಣೆಯಾದಂತೆ, ಒಂದು ನಿರ್ದಿಷ್ಟ ಗುಂಪಿನ ಗ್ರಾಹಕರು, ನಿರ್ದಿಷ್ಟ ಪ್ರಕಾರದ ಸರಕು ಮತ್ತು ಸೇವೆಗಳ ಮೇಲೆ ಮಾಡಿದ ವೆಚ್ಚದಲ್ಲಾದ ಬದಲಾವಣೆಯನ್ನು ಅಳತೆ ಮಾಡಲು ರೂಪಿಸದ, ಒಂದು ಸಮಗ್ರ ಆರ್ಥಿಕ ಸೂಚ್ಯಾಂಕವಾಗಿದೆ. ಇದು ನೈಜ ಜೀವನ ಮಟ್ಟದ ವೆಚ್ಚವನ್ನು ಅಳೆಯುತ್ತದೆ. ಆದ್ದರಿಂದ, ಇದನ್ನು ‘ಜೀವನ ವೆಚ್ಚದ ಸೂಚ್ಯಾಂಕ’ ಎಂದು ಕರೆಯುತ್ತಾರೆ. ಇದು ಗ್ರಾಹಕರು ಬಳಸುವ, ನಿರ್ದಿಷ್ಟ ಪ್ರಕಾರದ ಹಾಗೂ ನಿರ್ದಿಷ್ಟ ಪ್ರಮಾಣದ ಸರಕುಗಳನ್ನು ಮಾತ್ರ ಒಳಗೊಂಡಿದೆ. ಇದು ಚಿಲ್ಲರೆ ಮಟ್ಟದಲ್ಲಿ ಸರಕುಗಳ ಪ್ರಮಾಣವನ್ನು ಅಂತಿಮ ಬೆಲೆಗಳಲ್ಲಿ ಅಳತೆ ಮಾಡುತ್ತದೆ, ಇದನ್ನು ಚಿಲ್ಲರೆ ಮಟ್ಟದಲ್ಲಿ ಸರಕುಗಳ ಪ್ರಮಾಣವನ್ನು ಅಂತಿಮ ಬೆಲೆಗಳಲ್ಲಿ ಅಳತೆ ಮಾಡುತ್ತದೆ, ಇದನ್ನು ಕಾರ್ಮಿಕರ ವೇತನವನ್ನು ಹಣದುಬ್ಬರದ ಪರಿಣಾಮಗಳಿಗೆ ಸರಿದೂಗಿಸಲು ಉಪಯೋಗಿಸಲಾಗುತ್ತದೆ.

20. ದತ್ತಾಂಶಗಳನ್ನು ಈ ರೀತಿಯಾಗಿ ನೀಡಲಾಗಿದೆ.

FAQ

1. ಸೂಚ್ಯಾಂಕವೆಂದರೇನು?

ಕಾಲಕ್ಕೆ ತಕ್ಕಂತೆ ಚಲಕಗಳಲ್ಲಾಗುವ ಬದಲಾವಣೆಗಳನ್ನು ಮಾಪನ ಮಾಡಲು ರೂಪಿಸಿರುವ ವಿಶೇಷ ಸರಾಸರಿ ಸಂಖ್ಯೆಗೆ ಸೂಚ್ಯಂಕ ಎನ್ನುತ್ತೇವೆ.

2. ಹಣದುಬ್ಬರ ಎಂದರೇನು?

ಸಾಮಾನ್ಯ ಬೆಲೆಗಳಲ್ಲಿನ ನಿರಂತರ ಹೆಚ್ಚಳವನ್ನು ಹಣದುಬ್ಬರ ಎನ್ನುವರು,

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *