ಪ್ರಥಮ ಪಿ.ಯು.ಸಿ ಸಂಖ್ಯಾತ್ಮಕ ಸಾಧನಗಳ ಉಪಯೋಗ ಅರ್ಥಶಾಸ್ತ್ರ ನೋಟ್ಸ್‌ | 1st Puc Economics Chapter 19 Notes

ಪ್ರಥಮ ಪಿ.ಯು.ಸಿ ಸಂಖ್ಯಾತ್ಮಕ ಸಾಧನಗಳ ಉಪಯೋಗ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 1st Puc Economics Chapter 19 Notes Question Answer Pdf in Kannada Medium Kseeb Solutions For Class 11 Ecoņomics Chapter 19 Notes Use of Statistical Tools Class 11 Notes Sankhyatmaka Sadhanagala Upayoga Notes

 

1st Puc Economics Chapter 19 Notes

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1.ಯಾವುದಾದರೂ ಮೂರು ಆರ್ಥಿಕ ಚಟುವಟಿಕೆಗಳನ್ನು ತಿಳಿಸಿ.

1) ಬ್ಯಾಂಕಿಂಗ್ 2) ಜೀವವಿಮೆ 3) ವ್ಯಾಪಾರ

2. ಯೋಜನಾ ತಯಾರಿಕೆಯ ಮೊದಲ ಹಂತ ಯಾವುದು?

ಸಮಸ್ಯೆ ಅಥವಾ ಅಧ್ಯಯನ ಪ್ರದೇಶವನ್ನು ಗುರುತಿಸುವುದು.

3. ನೀವು ಯಾವ ಕ್ಷೇತ್ರಗಳಲ್ಲಿ ಆಸಕ್ತಿದಾಯಕರಾಗಿದ್ದೀರಿ? ಯಾವುದಾದರೂ 3 ಬರೆಯಿರಿ.

ಕಾರು ಮಾರಾಟ, ಮೊಬೈಲ್ ಫೋನ್‌ ಮಾರಾಟ, ಶೂ ಪಾಲಿಷ್, ಸ್ನಾನದ ಸಾಬೂನು ಅಥವಾ ಬಟ್ಟೆ ಸಾಬೂನಗಳ ಉತ್ಪಾದನೆ.

4. ಪ್ರಶ್ನಾವಳಿಯನ್ನು ರೂಪಿಸುವಾಗ ಇರಬೇಕಾದ ಪ್ರಮುಖ ಅಂಶವೇನು?

ಉದ್ದೇಶಿತ ಗುಂಪನ್ನು ಆಯ್ಕೆ ಮಾಡಿಕೊಳ್ಳುವುದು ಪ್ರಶ್ನಾವಳಿಯಲ್ಲಿ ಸೂಕ್ತ ಪ್ರಶ್ನೆಯನ್ನು ರಚಿಸಲು ಮುಖ್ಯವಾದುದಾಗಿದೆ.

5. ಕಾರುಗಳಿಗೆ ಸಂಬಂಧಿಸಿದಂತೆ ನಿಮ್ಮ ಯೋಜನೆಯ ಉದ್ದೇಶಿತ ಗುಂಪು ಯಾವುದು?

ಮಧ್ಯಮ ಆದಾಯ ಮತ್ತು ಹೆಚ್ಚು ಆದಾಯವುಳ್ಳ ಗುಂಪಿನವರು ನಮ್ಮ ಯೋಜನೆಯ ಉದ್ದೇಶಿತ ಗುಂಪಾಗಿರುತ್ತಾರೆ.

6. ಪ್ರಾಥಮಿಕ ದತ್ತಾಂಶ ಎಂದರೇನು?

ಶೋಧಕನು ದತ್ತಾಂಶವನ್ನು ವಿಚಾರಣೆ ಮತ್ತು ತನಿಖೆ ಮಾಡುವುದರ ಮೂಲಕ ಸಂಗ್ರಹಿಸಬಹುದಾಗಿದೆ. ಇಂತಹ ದತ್ತಾಂಶವನ್ನು ಪ್ರಾಥಮಿಕ ದತ್ತಾಂಶವೆಂದು ಕರೆಯುತ್ತೇವೆ.

7. ಪ್ರಾಥಮಿಕ ದತ್ತಾಂಶಗಳನ್ನು ಸಂಗ್ರಹಿಸುವ ಮಾರ್ಗಗಳಾವುವು?

1) ವೈಯಕ್ತಿಕ ಸಂದರ್ಶನಗಳು

2) ಪ್ರಶ್ನಾವಳಿಯನ್ನು ಅಂಚೆ ಮೂಲಕ ರವಾನಿಸುವುದು.

3) ದೂರವಾಣಿ ಸಂದರ್ಶನಗಳು

1st Puc Economics Chapter 19 Notes

8. ಉತ್ತಮ ಪ್ರಶ್ನಾವಳಿಯ ಯಾವುದಾದರೂ 3 ಲಕ್ಷಣಗಳನ್ನು ತಿಳಿಸಿ.

1) ಪ್ರಶ್ನಾವಳಿಯು ಹೆಚ್ಚು ಉದ್ದವಾಗಿರಬಾರದು.

2) ಪ್ರಶ್ನೆಗಳು ಖಚಿತವಾಗಿ ಮತ್ತು ಸ್ಪಷ್ಟವಾಗಿರಬೇಕು.

3) ಪ್ರಶ್ನೆಗಳು ಪಠ್ಯಾಯ ಉತ್ತರಗಳನ್ನು ಸೂಚಿಸಬಾರದು.

9. ಮಾಧ್ಯಮಿಕ ದತ್ತಾಂಶ ಎಂದರೇನು?

ಇತರರು ಈಗಾಗಲೇ ಸಂಗ್ರಹಿಸಿಟ್ಟಿರುವ ದತ್ತಾಂಶಗಳನ್ನು ಮಾಧ್ಯಮಿಕ ದತ್ತಾಂಶಗಳೆನ್ನುತ್ತೇವೆ.

10. ಮಾಧ್ಯಮಿಕ ದತ್ತಾಂಶಗಳನ್ನು ಸಂಗ್ರಹಿಸುವ ವಿಧಾನಗಳಾವುವು?

1) ಪ್ರಕಟಿತ ಮೂಲಗಳು : ಅಂತರರಾಷ್ಟ್ರೀಯ ಪ್ರಕಟಣೆಗಳು, ಸರ್ಕಾರಿ ಪ್ರಕಟಣೆಗಳು, ದಿನಪತ್ರಿಕೆ : ನಿಯತಕಾಲಿಕೆಗಳು ಇತ್ಯಾದಿ.

2) ಅಪಕಟಿತ ಮೂಲಗಳು : ಪ್ರಬಂಧಗಳು, ವಯಕ್ತಿಗಳ ದಿನಚರಿ ಪುಸ್ತಕಗಳು,

11. ಮಾಧ್ಯಮಿಕ ದತ್ತಾಂಶಗಳನ್ನು ಉಪಯೋಗಿಸುವಾಗ ಇರಬೇಕಾದ ಎಚ್ಚರಿಕೆಗಳಾವುವು?

ಶೋಧಕನು ಮಾಹಿತಿಯು ವಿಶ್ವಾಸಾರ್ಹತೆ, ಸಮರ್ಪಣೆ ಮತ್ತು ಹೊಂದಾಣಿಕೆಯಾಗುತ್ತದೆ ಎಂಬುದನ್ನು ತಿಳಿದಿರಬೇಕು.

12. ಸಂಖ್ಯಾತ್ಮಕ ಸಾಧನಗಳನ್ನು ಹೆಸರಿಸಿ.

1) ಅಂಕಗಣಿತ ಸರಾಸರಿ

2) ಸರಾಸರಿ ವಿಚಲನೆ

3) ಮಾನಕ ವಿಚಲನೆ

13. ಯೋಜನಾ ತಯಾರಿಕೆಯ ಹಂತಗಳನ್ನು ಚರ್ಚಿಸಿ.

1) ಸಮಸ್ಯೆ ಮತ್ತು ಅಧ್ಯಯನ ಪ್ರದೇಶವನ್ನು ಗುರುತಿಸುವುದು : ಮೊಟ್ಟ ಮೊದಲಿಗೆ ನೀವು ಏನನ್ನು ಅಧ್ಯಯನ ಮಾಡಬೇಕೆಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ನೀವು ಉದ್ದೇಶಗಳ ಆಧಾರದ ಮೇರೆಗೆ ದತ್ತಾಂಶಗಳ ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ನೀವು ಮುಂದುವರೆಸಬೇಕು.

ಉದಾ : ಕಾರು, ಮೊಬೈಲ್, ಶೂ ಪಾಲಿಷ್ ಉತ್ಪಾದನೆ ಅಥವಾ ಮಾರಾಟ ಹೀಗೆ ಯಾವುದಾದರೂ ವಿಷಯದ ಬಗ್ಗೆ ನಿಮಗೆ ಆಸಕ್ತಿಯಿರಬಹುದು.

2) ಉದ್ದೇಶಿತ ಗುಂಪಿನ ಆಯ್ಕೆ : ಉದ್ದೇಶಿತ ಗುಂಪಿನ ಆಯ್ಕೆ ಮಾಡಿಕೊಳ್ಳುವುದು ಪ್ರಶ್ನಾವಳಿಯಲ್ಲಿ ಸೂಕ್ತ ಪ್ರಶ್ನೆಯನ್ನು ರಚಿಸಲು ಮುಖ್ಯವಾದುದಾಗಿದೆ.

3) ದತ್ತಾಂಶಗಳ ಸಂಗ್ರಹ : ಸಮೀಕ್ಷೆಯ ಉದ್ದೇಶ ದತ್ತಾಂಶಗಳನ್ನು ಪ್ರಾಥಮಿಕ ವಿಧಾನ, ಮಾಧ್ಯಮಿಕ ವಿಧಾನ ಅಥವಾ ಎರಡೂ ವಿಧಾನಗಳಿಂದ ಸಂಗ್ರಹಿಸಬೇಕೇ ಎಂಬುದನ್ನು ನಿರ್ಧರಿಸಲು ಸಹಾಯಕವಾಗುತ್ತದೆ.

4) ದತ್ತಾಂಶಗಳ ಸಂಘಟನೆ ಮತ್ತು ನಿರೂಪಣೆ: ದತ್ತಾಂಶಗಳ ಸಂಗ್ರಹಿಸಿದ ನಂತರ ಸ್ವೀಕರಿಸಿದ ಮಾಹಿತಿಯನ್ನು ಕೋಷ್ಟಕ ರೂಪೀಕರಣ ಮತ್ತು ಸೂಕ್ತ ಚಿತ್ರಗಳ ಮೂಲಕ ಸಂಘಟನೆ ಮತ್ತು ನಿರೂಪಣೆಗಳ ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ. ಉದಾ : ಸ್ತಂಭರೇಖಾ ಚಿತ್ರ, ಪೈನಕ್ಷೆ ಇತ್ಯಾದಿ

5) ವಿಶ್ಲೇಷಣೆ ಮತ್ತು ವ್ಯಾಖ್ಯಾನ : ಕೇಂದ್ರೀಯ ಪ್ರವೃತ್ತಿ ಮಾಪನಗಳು ಮತ್ತು ಹರಿವಿನ ಮಾಪನಗಳು ಮತ್ತು ಸಹಸಂಬಂಧ ಇವುಗಳು ಸರಾಸರಿ, ಚಲಕಗಳ ನಡುವಿನ ಏರಿಳಿತಗಳು ಮತ್ತು ಸಂಬಂಧಗಳಿದ್ದರೆ ಅವುಗಳನ್ನು ಲೆಕ್ಕಾಚಾರ ಮಾಡಲು ಶಕ್ತಗೊಳಿಸುತ್ತವೆ.

ಉಪಸಂಹಾರ : ಇದು ಕೊನೆಯ ಹಂತವಾಗಿದ್ದು, ಫಲಿತಾಂಶವನ್ನು ವಿಶ್ಲೇಷಣೆ ಮತ್ತು ವ್ಯಾಖ್ಯಾನಿಸಿದ ನಂತರ ಅರ್ಥಪೂರ್ಣ ನಿರ್ಣಯಗಳನ್ನು ಕೈಗೊಳ್ಳುವುದಾಗಿದೆ.

ಗ್ರಂಥಸೂಚಿ : ಈ ವಿಭಾಗದಲ್ಲಿ, ಯೋಜನೆಯನ್ನು ಅಭಿವೃದ್ಧಿಸಲು ಬಳಸಿದಂತಹ ಮಾಧ್ಯಮಿಕ ‘ಮೂಲಗಳಾದ ಪತ್ರಿಕೆಗಳು, ವೃತ್ತಪತ್ರಿಕೆ, ಸಂಶೋಧನಾ ವರದಿಗಳ ಎಲ್ಲಾ ವಿವರಗಳನ್ನು ನೀವು ನಮೂದಿಸುವುದು ಅವಶ್ಯಕವಾಗಿರುತ್ತದೆ.

FAQ

1. ಪ್ರಾಥಮಿಕ ದತ್ತಾಂಶ ಎಂದರೇನು?

ಶೋಧಕನು ದತ್ತಾಂಶವನ್ನು ವಿಚಾರಣೆ ಮತ್ತು ತನಿಖೆ ಮಾಡುವುದರ ಮೂಲಕ ಸಂಗ್ರಹಿಸಬಹುದಾಗಿದೆ. ಇಂತಹ ದತ್ತಾಂಶವನ್ನು ಪ್ರಾಥಮಿಕ ದತ್ತಾಂಶವೆಂದು ಕರೆಯುತ್ತೇವೆ.

2. ಮಾಧ್ಯಮಿಕ ದತ್ತಾಂಶ ಎಂದರೇನು?

ಇತರರು ಈಗಾಗಲೇ ಸಂಗ್ರಹಿಸಿಟ್ಟಿರುವ ದತ್ತಾಂಶಗಳನ್ನು ಮಾಧ್ಯಮಿಕ ದತ್ತಾಂಶಗಳೆನ್ನುತ್ತೇವೆ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh